KPSC GROUP C COMMUNICATION Paper-2 Question Paper 11-06-2017

KPSC GROUP C  COMMUNICATION Paper-2 11-06-2017 Questions with answers

KPSC GROUP C ಪತ್ರಿಕೆ -2 ಸಂವಹನ (Below Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 11-06-2017 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

GENERAL KANNADA / ಸಾಮಾನ್ಯ ಕನ್ನಡ

1.ವೀರನೊಬ್ಬನು ಯುದ್ಧದಲ್ಲಿ ಹೋರಾಡಿ ಜಯಶಾಲಿಯಾಗಿ ಬಂದಾಗ ರಾಜನೇ ಅವನ ರಕ್ತಸಿಕ್ತ ಖಡ್ಗವನ್ನು ಎಲ್ಲರೆದುರಿಗೆ ತೊಳೆದು ಸನ್ಮಾನಿಸಿ ನೀಡುವ ದಾನ:
 (1)ಕಲಗಚ್ಚು
 (2)ಕಾಳ್ಗಿಚ್ಚು
 (3)ಬಾಳ್ಗಚ್ಚು
 (4)ಬೆಲ್ಲದಚ್ಚು
ಸರಿ ಉತ್ತರ

(3) ಬಾಳ್ಗಚ್ಚು


2.ಕೋನಾರ್ಕ್ ನಲ್ಲಿ ಸೂರ್ಯ ದೇವಾಲಯವನ್ನು ಕಟ್ಟಿಸಿದ ದೊರೆ:
 (1)ಗಂಗ ವಂಶದ ನರಸಿಂಹದೇವ
 (2)ಕದಂಬ ವಂಶದ ನರಸಿಂಹದೇವ
 (3)ಚಂದ್ರ ವಂಶದ ನರಸಿಂಹದೇವ
 (4)ಸೂರ್ಯ ವಂಶದ ನರಸಿಂಹದೇವ

ಸರಿ ಉತ್ತರ

(1) ಗಂಗ ವಂಶದ ನರಸಿಂಹದೇವ


3.ಹಂಪಿ ಕನ್ನಡ ವಿಶ್ವವಿದ್ಯಾಲಯ ಯಾವ ತಾಲ್ಲೂಕಿನಲ್ಲಿದೆ? ಇದರ ಸ್ಥಾಪಕ ಕುಲಪತಿ ಯಾರು?
 (1)ಹರಪನಹಳ್ಳಿ ತಾಲ್ಲೂಕು- ಡಾ.ಎಂ.ಎಂ.ಕಲ್ಬುರ್ಗಿ
 (2)ಕೊಪ್ಪಳ ತಾಲ್ಲೂಕು- ಡಾ.ಬಿ.ಎಂ.ವಿವೇಕ ರೈ
 (3)ಹೊಸಪೇಟೆ ತಾಲ್ಲೂಕು- ಡಾ.ಚಂದ್ರಶೇಖರ ಕಂಬಾರ
 (4)ಹೂವಿನ ಹಡಗಲಿ ತಾಲ್ಲೂಕು- ಡಾ.ಮುರಿಗೆಪ್ಪ

ಸರಿ ಉತ್ತರ

(3) ಹೊಸಪೇಟೆ ತಾಲ್ಲೂಕು- ಡಾ.ಚಂದ್ರಶೇಖರ ಕಂಬಾರ


4.ಚಾಮುಂಡಿ ಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿದ ಮೈಸೂರಿನ ಒಡೆಯರು ಯಾರು?
 (1)ನರಸರಾಜ ಒಡೆಯರ್
 (2)ಚಾಮರಾಜ ಒಡೆಯರ್
 (3)ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್
 (4)ದೇವರಾಜ ಒಡೆಯರ್
ಸರಿ ಉತ್ತರ

(4) ದೇವರಾಜ ಒಡೆಯರ್


5.‘‘ಬೇಬಿ, ಸ್ಕೂಲ್ ಗೆ ಲೇಟಾಯ್ತು, ಬೇಗ ರೆಡಿ ಆಗು, ಬ್ಯಾಗ್ ಎಲ್ಲಿ? ಹೋಂವರ್ಕ್ ಆಗಿದ್ಯಾ, ಬಾಸ್ಕೆಟ್ ನಲ್ಲಿ ಟಿನ್ ಬಾಕ್ಸು, ವಾಟರ್ ಬಾಟಲ್ ಇಟ್ಟಿದ್ದೀನಿ. ಚೇಂಜ್ ತಗೋ, ಶೂ ಲೇಸ್ ಸರ್ಯಾಗ್ ಕಟ್ಕೋ, ಟೈಂ ಆಯ್ತು, ಆಟೋ ಅಂಕಲ್ ವೆಯ್ಟ್ ಮಾಡ್ತಿದಾರೆ’’ ಈ ಮಾತುಗಳಲ್ಲಿ ವ್ಯಕ್ತವಾಗುವ ಕನ್ನಡದ ಬಳಕೆಯ ಇಂದಿನ ಸ್ವರೂಪ:
 (1)ಇಂಗ್ಲಿಷ್ ಬಲ್ಲವರು ಮಾತ್ರ ಈ ಬಗೆಯ ಬೆರಕೆ ಕನ್ನಡವನ್ನು ಬಳಸುತ್ತಾರೆ
 (2)ಕನ್ನಡದಲ್ಲಿ ಈ ಇಂಗ್ಲಿಷ್ ಪದಗಳಿಗೆ ಸಮಾನವಾದ ಕನ್ನಡ ಪದಗಳಿಲ್ಲ
 (3)ಇದು ಕೇಳಲು ಸುಂದರವಾಗಿದೆ ಎಂಬ ಭಾವನೆಯಿಂದ
 (4)ಆಡುಭಾಷೆಯಲ್ಲಿ ಅಪಾರವಾದ ಪ್ರಮಾಣದಲ್ಲಿ ಇಂಗ್ಲಿಷ್ ಸೇರಿದೆ/ಸೇರುತ್ತಿದೆ. ಅದು ತಪ್ಪೆಂದು ಪರಿಗಣಿತವಾಗುವುದಿಲ್ಲ
ಸರಿ ಉತ್ತರ

(4) ಆಡುಭಾಷೆಯಲ್ಲಿ ಅಪಾರವಾದ ಪ್ರಮಾಣದಲ್ಲಿ ಇಂಗ್ಲಿಷ್ ಸೇರಿದೆ/ಸೇರುತ್ತಿದೆ. ಅದು ತಪ್ಪೆಂದು ಪರಿಗಣಿತವಾಗುವುದಿಲ್ಲ


6.ಕನ್ನಡದ ‘ದಿಗ್ವಾಚಿ’ ಯಾವುದು?
 (1)ಯಗಣ
 (2)ಮೂಡಣ
 (3)ಗಡಣ
 (4)ನಗಣ
ಸರಿ ಉತ್ತರ

(2) ಮೂಡಣ


7.‘ದಿಕ್ತಟ’ ಎಂಬ ಸಂಸ್ಕೃತ ಶಬ್ದದ ಕನ್ನಡ ರೂಪ ಯಾವುದು?
 (1)ತೆಂಕಣ
 (2)ನದಿದಡ
 (3)ದಿಗುತಟ
 (4)ತಟವಟ
ಸರಿ ಉತ್ತರ

(3) ದಿಗುತಟ


8.‘ನೇಪಥ್ಯ’ ಎಂದರೆ:
 (1)ತೆರೆಯ ಹಿಂಭಾಗ
 (2)ಮಧ್ಯರಂಗ
 (3)ತೆರೆಯ ಮುಂಭಾಗ
 (4)ರಂಗಸ್ಥಳ
ಸರಿ ಉತ್ತರ

(1) ತೆರೆಯ ಹಿಂಭಾಗ


9.ಸ್ವರಗಳ ಮುಂದೆ ಸ್ವರ ಬಂದರೂ ಸಂಧಿಯಾಗದಿರುವುದು:
 (1)ಪ್ರಕೃತಿ ಭಾವ
 (2)ಸಾರಾಂಶ ಭಾವ
 (3)ಲೋಭ ಭಾವ
 (4)ಸ್ವರಾಸ್ವರ ಭಾವ
ಸರಿ ಉತ್ತರ

(1) ಪ್ರಕೃತಿ ಭಾವ


10.‘ಚರಖಾ’ ಎಂಬ ಪದ ‘ಚರಕ’ವಾಗಿ ಪರಿವರ್ತನೆ ಗೊಂಡಿರುವುದು:
 (1)ಬೆಂಗಾಲಿಯಿಂದ
 (2)ಹಿಂದಿಯಿಂದ
 (3)ಉರ್ದುವಿನಿಂದ
 (4)ಮರಾಠಿಯಿಂದ
ಸರಿ ಉತ್ತರ

(4) ಮರಾಠಿಯಿಂದ


11.‘ಅಬ್ಧಿ’ ಬಿಡಿಸಿ ಬರೆದಾಗ:
 (1)ಅಬ್+ ಧಿ
 (2)ಅಪ್- ಧಿ
 (3)ಅಬು+ ಧಿ
 (4)ಅಬಿ- ಧಿ
ಸರಿ ಉತ್ತರ

(2) ಅಪ್- ಧಿ


12.ನಕ್ಷತ್ರಿಕನು ಹರಿಸ್ಚಂದ್ರನಿಗೆ ಎಜ್ಜೆ ಎಜ್ಜೆಗೂ ಪೀಡಿಸುತ್ತಿದ್ದನು. ಈ ಕೆಳಗಿನ ವಾಕ್ಯಗಳಲ್ಲಿ ಕಾಗುಣಿತದ ತಪ್ಪುಗಳಿಲ್ಲದ ವಾಕ್ಯ ಯಾವುದು?
 (1)ನಕ್ಷತ್ರಿಕನು ಹರಿಸ್ಚಂದ್ರನಿಗೆ ಹೆಜೆ ಹೆಜೆಗೂ ಪೀಡಿಸುತ್ತಿದ್ದನು
 (2)ನಕ್ಷತ್ರಿಕನು ಹರಿಶ್ಚಂದ್ರನಿಗೆ ಹೆಜ್ಜೆ ಹೆಜ್ಜೆಗೂ ಪೀಡಿಸುತ್ತಿದ್ದನು
 (3)ನಕ್ಷತ್ರಿಕನು ಅರಿಶ್ಚಂದ್ರನಿಗೆ ಹೆಜ್ಜೆ ಹೆಜ್ಜೆಗೂ ಪೀಡಿಸುತ್ತಿದ್ದನು
 (4)ನಕ್ಷರ್ತಿಕನು ಹರಿಶ್ಚಂದ್ರನಿಗೆ ಹೆಜೇ ಹೆಜೇಗೂ ಪೀಡಿಸುತ್ತಿದ್ದನು
ಸರಿ ಉತ್ತರ

(2) ನಕ್ಷತ್ರಿಕನು ಹರಿಶ್ಚಂದ್ರನಿಗೆ ಹೆಜ್ಜೆ ಹೆಜ್ಜೆಗೂ ಪೀಡಿಸುತ್ತಿದ್ದನು


13.‘ಕೃಷಿ’ ಪದದ ಸಮಾನಾರ್ಥಕ ಪದ ಯಾವುದು?
 (1)ಚತಿಪಯ
 (2)ಮತಿಪಯ
 (3)ಧತಿಪಯ
 (4)ಕತಿಪಯ
ಸರಿ ಉತ್ತರ

(4) ಕತಿಪಯ


14.ಆಧುನಿಕ ಕನ್ನಡ ಕಾವ್ಯಕ್ಕೆ ಹೊಸ ಪ್ರೇರಣೆಯನ್ನು ನೀಡಿದ ಕೃತಿ:
 (1)ಗೋವಿಂದ ಪೈಗಳ ಗಿಳಿವಿಂಡು
 (2)ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತೆಗಳು
 (3)ಗೋಪಾಲಕೃಷ್ಣ ಅಡಿಗರ ಚಂಡೆಮದ್ದಳೆ
 (4)ಕುವೆಂಪುರವರ ಪಕ್ಷಿಕಾಶಿ
ಸರಿ ಉತ್ತರ

(2) ಬಿ.ಎಂ.ಶ್ರೀಯವರ ಇಂಗ್ಲಿಷ್ ಗೀತೆಗಳು


15.ಉಭಯ ಪದಗಳ ಅಥವಾ ಸರ್ವ ಪದಗಳ ಅರ್ಥ ಪ್ರಧಾನವಾದ ಸಮಾಸ:
 (1)ದ್ವಂದ್ವ ಸಮಾಸ
 (2)ಕರ್ಮಧಾರಯ ಸಮಾಸ
 (3)ದ್ವಿಗು ಸಮಾಸ
 (4)ತತ್ಪುರುಷ ಸಮಾಸ
ಸರಿ ಉತ್ತರ

(1) ದ್ವಂದ್ವ ಸಮಾಸ


16.‘ನಾನು ಪೊರಕೆಯಿಂದ ಗುಡಿಸುತ್ತೇನೆ’ ಈ ವಾಕ್ಯವನ್ನು ‘ನಾನು ಪೊರಕೆಯಲ್ಲಿ ಗುಡಿಸುತ್ತೇನೆ’ ಎಂದು ಬದಲಿಸಿದರೆ ಆಗ ನಡೆಯುವ ವಿಭಕ್ತಿ ಪಲ್ಲಟವೆಂದರೆ:
 (1)ಚತುರ್ಥೀ ವಿಭಕ್ತಿ, ಷಷ್ಠೀ ವಿಭಕ್ತಿಯಾಗಿದೆ
 (2)ಪ್ರಥಮಾ ವಿಭಕ್ತಿ,ದ್ವಿತೀಯಾ ವಿಭಕ್ತಿಯಾಗಿದೆ
 (3)ದ್ವಿತೀಯಾ ವಿಭಕ್ತಿ, ಚತುರ್ಥೀ ವಿಭಕ್ತಿಯಾಗಿದೆ
 (4)ತೃತೀಯಾ ವಿಭಕ್ತಿ, ಸಪ್ತಮೀ ವಿಭಕ್ತಿಯಾಗಿದೆ
ಸರಿ ಉತ್ತರ

(4) ತೃತೀಯಾ ವಿಭಕ್ತಿ, ಸಪ್ತಮೀ ವಿಭಕ್ತಿಯಾಗಿದೆ


17.ಈ ಕೆಳಗಿನ ಯಾವ ಗುಂಪಿನ ಪದಗಳು ಸಂಸ್ಕೃತ ಮೂಲದಿಂದ ಬಂದಿದ್ದಾಗಿರದೆ ಸಂಪೂರ್ಣ ಕನ್ನಡದವುಗಳಾಗಿವೆ?
 (1)ಸೂಜಿ, ಚಕ್ಕುಲಿ, ದೋಣಿ, ಸಂತೆ
 (2)ಕಡಗ, ಮಜ್ಜನ, ಬತ್ತಿ, ಏಣಿ
 (3)ಸುಣ್ಣ, ಅನ್ನ, ಬೆತ್ತ, ಬಸವ
 (4)ಎಲೆ, ಓಲಗ, ಕತ್ತೆ, ಬದುಕು
ಸರಿ ಉತ್ತರ

(4) ಎಲೆ, ಓಲಗ, ಕತ್ತೆ, ಬದುಕು


18.‘ಆ ಕೀರ್ತಿ ಕಾಮಿನಿ ಕುಣಿವಳೈ ತ್ರೈಜಗದ ಜಿಹ್ವಾರಂಗ ಮಧ್ಯದಲ್ಲಿ’ ಇಲ್ಲಿ ಬಳಕೆಯಾಗಿರುವ ಅಲಂಕಾರ:
 (1)ಉಪಮಾ
 (2)ರೂಪಕ
 (3)ದೀಪಕ
 (4)ಪ್ರತೀಪ
ಸರಿ ಉತ್ತರ

(2) ರೂಪಕ


19.ಸಾನೆಟ್ ಎಂಬುದು ಇಂಗ್ಲಿಷ್ ನ ಕಾವ್ಯ ಪ್ರಕಾರ. ಅದು ಕನ್ನಡಕ್ಕೆ ವಿಶೇಷವಾಗಿ ಬಂದಿದೆ.
ಇದರಲ್ಲಿ _______ ಸಾಲುಗಳಿರುತ್ತವೆ
 (1)20
 (2)14
 (3)16
 (4)ಎಷ್ಟು ಬೇಕಾದರೂ ಇರಬಹುದು
ಸರಿ ಉತ್ತರ

(2) 14


20.ಸಂಸ್ಕೃತ ಭಾಷೆಯ ಪ್ರಭಾವ ಅತಿ ಕಡಿಮೆ ಇರುವ ದ್ರಾವಿಡ ಭಾಷೆ:
 (1)ಮಲಯಾಳಂ
 (2)ತಮಿಳು
 (3)ಕನ್ನಡ
 (4)ತೆಲುಗು
ಸರಿ ಉತ್ತರ

(2) ತಮಿಳು


21.ಮುಂಜೆರಗು ಬಿಡಿಸಿ ಬರೆಯಿರಿ.
 (1)ಮುಂ+ಜೆರಗು
 (2)ಮುನ್+ಸೆರಗು
 (3)ಮುಂದೆ+ಜೆರಗು
 (4)ಮುಂದೆ+ಸೆರಗು
ಸರಿ ಉತ್ತರ

(2) ಮುನ್+ಸೆರಗು


22.ಸರಿಯಾದ ಪದ ಗುರುತಿಸಿ.
 (1)ಪ್ರತಿಸ್ಟಾನ
 (2)ಪ್ರತಿಷ್ಠಾನ
 (3)ಫ್ರತಿಸ್ಟಾನ
 (4)ಪ್ರಥಿಷ್ಟಾನ
ಸರಿ ಉತ್ತರ

(2) ಪ್ರತಿಷ್ಠಾನ


23.‘ಹೋಗಾಚೆ’ ಈ ಪದದಲ್ಲಿರುವ ಸಂಧಿ :
 (1)ವೃದ್ಧಿ ಸಂಧಿ
 (2)ಆದೇಶ ಸಂಧಿ
 (3)ಲೋಪ ಸಂಧಿ
 (4)ಸವರ್ಣದೀರ್ಘ ಸಂಧಿ
ಸರಿ ಉತ್ತರ

(3) ಲೋಪ ಸಂಧಿ


24.‘ಕಲ್ಲುಹಾಸಿಗೆ’ ಈ ಸಮಾಸಕ್ಕೆ ಉದಾಹರಣೆ:
 (1)ತತ್ಪುರುಷ
 (2)ದ್ವಿಗು
 (3)ಕರ್ಮಧಾರಯ
 (4)ದ್ವಂದ್ವ
ಸರಿ ಉತ್ತರ

(1) ತತ್ಪುರುಷ


25.ಇವುಗಳಲ್ಲಿ ಬಹುವ್ರೀಹಿ ಸಮಾಸಕ್ಕೆ ಉದಾಹರಣೆ:
 (1)ಇಬ್ಭಾಗ
 (2)ಚಕ್ರಪಾಣಿ
 (3)ಹೆಬ್ಬಾವು
 (4)ಕೈಮುಗಿ
ಸರಿ ಉತ್ತರ

(2) ಚಕ್ರಪಾಣಿ


26.ಗುಂಪಿಗೆ ಸೇರದ ಪದ ಯಾವುದು?
 (1)ಗಡಗಡನೆ
 (2)ಊರೂರು
 (3)ಸರಸರನೆ
 (4)ಗರಗರ
ಸರಿ ಉತ್ತರ

(2) ಊರೂರು


27.‘ಅವನು ದೇವರ ನಾಮ ಹಾಡುತ್ತಾ ಭಿಕ್ಷೆ ಬೇಡುತ್ತಾನೆ’ ಇದು_______
 (1)ಸಾಪೇಕ್ಷ ಕ್ರಿಯಾಪದ
 (2)ಸಂಯುಕ್ತ ಕ್ರಿಯಾಪದ
 (3)ನಿರಪೇಕ್ಷ ಕ್ರಿಯಾಪದ
 (4)ಕೃದಂತ ಕ್ರಿಯಾಪದ
ಸರಿ ಉತ್ತರ

(1) ಸಾಪೇಕ್ಷ ಕ್ರಿಯಾಪದ


28.ಶ್ರದ್ಧೆಯೇ ಸಲತೆಗೆ ಕಾರಣ ಎಂಬ ವಾಕ್ಯಕ್ಕೆ_______ಅವ್ಯಯ
 (1)ಕೃಂದತಾವ್ಯಯ
 (2)ಸಂಬಂಧಾರ್ಥಕಾವ್ಯಯ
 (3)ಅವಧಾರಣಾರ್ಥ ಅವ್ಯಯ
 (4)ಕ್ರಿಯಾರ್ಥಕಾವ್ಯಯ
ಸರಿ ಉತ್ತರ

(3) ಅವಧಾರಣಾರ್ಥ ಅವ್ಯಯ


29.‘ಥಳಥಳಿಸುತ್ತದೆ’ ಎಂಬುದು_______ಧಾತು
 (1)ಸಾಧಿತ ಧಾತು
 (2)ಅಕರ್ಮಕ ಧಾತು
 (3)ಸಕರ್ಮಕ ಧಾತು
 (4)ಪ್ರತ್ಯಯಾಂತ ಧಾತು
ಸರಿ ಉತ್ತರ

(1) ಸಾಧಿತ ಧಾತು


30.ಕೆಳಗಿನ ಕವಿಗಳು ಮತ್ತು ಅವರ ಕಾವ್ಯನಾಮಗಳನ್ನು ಸರಿಹೊಂದಿಸಿ
  ಕವಿಗಳು ಕಾವ್ಯನಾಮಗಳು
 A.ಸಿದ್ಧಯ್ಯ ಪುರಾಣಿಕi.ಆನಂದ
 B.ದ.ರಾ.ಬೇಂದ್ರೆii.ಮಧುರಚೆನ್ನ
 C.ಅಜ್ಜಂಪುರ ಸೀತಾರಾಮ್iii.ಕಾವ್ಯಾನಂದ
 D.ಚನ್ನಮಲ್ಲಪ್ಪ ಗಲಗಲಿiv.ಅಂಬಿಕಾತನಯದತ್ತ
 ಸರಿ ಉತ್ತರಗಳನ್ನು ಆಯ್ಕೆ ಮಾಡಿ:

  ABCD
 (1)iviiiiii
 (2)iiiiviii
 (3)iiiiiivi
 (4)iiviiiii
ಸರಿ ಉತ್ತರ

(2) iii iv i ii


31.ಕೋಳಿ ಕಳೆದುಕೊಂಡ ಸಾಕವ್ವ, ಗಾಂಭೀರ್ಯದ ಪ್ರತಿರೂಪ ಗೌರಮ್ಮಾಜಿ, ಅಗಾಧ ಪ್ರತಿಭೆಯ ಮಂದಣ್ಣ ಮತ್ತು ಜೀವಚೈತನ್ಯ ಉಕ್ಕಿಸುವ ಚಂದ್ರಿ- ಈ ಪಾತ್ರಗಳು ಹಾಗೂ ಕಾದಂಬರಿಗಳಿಗೆ ಯಾವ ಗುಂಪು ಸರಿ ಹೊಂದುವುದು?
 ಎ- ಗುಂಪು
  ಪಾತ್ರಗಳು ಕಾದಂಬರಿಗಳು
 i.ಸಾಕವ್ವಒಡಲಾಳ
 ii.ಗೌರಮ್ಮಾಜಿಚಿಕವೀರ ರಾಜೇಂದ್ರ
 iii.ಮಂದಣ್ಣಕರ್ವಾಲೊ
 iv.ಚಂದ್ರಿಸಂಸ್ಕಾರ
 ಬಿ- ಗುಂಪು

  ಪಾತ್ರಗಳು ಕಾದಂಬರಿಗಳು
 i.ಸಾಕವ್ವಸಂಸ್ಕಾರ
 ii.ಗೌರಮ್ಮಾಜಿಕರ್ವಾಲೊ
 iii.ಮಂದಣ್ಣಚಿಕವೀರ ರಾಜೇಂದ್ರ
 iv.ಚಂದ್ರಿಒಡಲಾಳ
 ಸಿ- ಗುಂಪು
  ಪಾತ್ರಗಳು ಕಾದಂಬರಿಗಳು
 i.ಸಾಕವ್ವಚಿಕವೀರ ರಾಜೇಂದ್ರ
 ii.ಗೌರಮ್ಮಾಜಿಒಡಲಾಳ
 iii.ಮಂದಣ್ಣಸಂಸ್ಕಾರ
 iv.ಚಂದ್ರಿಕರ್ವಾಲೊ
 ಡಿ- ಗುಂಪು
  ಪಾತ್ರಗಳು ಕಾದಂಬರಿಗಳು
 i.ಸಾಕವ್ವಕರ್ವಾಲೊ
 ii.ಗೌರಮ್ಮಾಜಿಸಂಸ್ಕಾರ
 iii.ಮಂದಣ್ಣಒಡಲಾಳ
 iv.ಚಂದ್ರಿಚಿಕವೀರ ರಾಜೇಂದ್ರ
 ಸರಿಯಾದ ಗುಂಪನ್ನು ಆರಿಸಿರಿ:
 (1)ಎ- ಗುಂಪು
 (2)ಬಿ-ಗುಂಪು
 (3)ಸಿ-ಗುಂಪು
 (4)ಡಿ-ಗುಂಪು
ಸರಿ ಉತ್ತರ

(1) ಎ- ಗುಂಪು


32.ಪ್ರಾಣತ್ಯಾಗ ಮಾಡಿಯಾದರೂ ಅರಸನನ್ನು ರಕ್ಷಿಸಲು ಪ್ರತಿಜ್ಞಾ ಬದ್ಧವಾಗಿದ್ದ ಹೊಯ್ಸಳ ವೀರರ ಗುಂಪಿನಲ್ಲಿ ಸೇರದವರು ಯಾರು?
 (1)ವಾಳವರಿಯರು
 (2)ಗರುಡರು
 (3)ಲೆಂಕಕಾರರು
 (4)ಭಟಾರಿಗಳು
ಸರಿ ಉತ್ತರ

(4) ಭಟಾರಿಗಳು


33.ಕೆಲವು ಪದಗಳು ಸಂಸ್ಕೃತದಲ್ಲಿ ಒಂದು ಅರ್ಥದಲ್ಲಿ ಬಳಕೆಯಾಗುತ್ತವೆ. ಅವೇ ಪದಗಳು ಕನ್ನಡಕ್ಕೆ ಬಂದಾಗ ಬೇರೆಯ ಅರ್ಥದಲ್ಲಿ ಬಳಕೆಯಾಗುತ್ತವೆ. ಕೆಳಗಿನ ಪದಗಳಲ್ಲಿ ಒಂದು ಮಾತು ಆ ರೀತಿಯದಲ್ಲ. ಅದನ್ನು ಗುರುತಿಸಿ.
 (1)ಅವಸರ
 (2)ಅಪರೂಪ
 (3)ವಿಪರೀತ
 (4)ಆರಾಧನ
ಸರಿ ಉತ್ತರ

(4) ಆರಾಧನ


34.‘ಮೆಚ್ಚನೀವರ್’ ಇದರ ಹೊಸಗನ್ನಡ ರೂಪ ಯಾವುದು?
 (1)ಮೆಚ್ಚಿದ್ದನ್ನು ಕೊಡುವರು
 (2)ಮುಚ್ಚಿಟ್ಟುಕೊಳ್ಳುವುದು
 (3)ಮೆಚ್ಚಿದ್ದನ್ನು ಕೊಡದವರು
 (4)ಮೆಚ್ಚಿಗೆ ಪಡೆಯದವರು
ಸರಿ ಉತ್ತರ

(1) ಮೆಚ್ಚಿದ್ದನ್ನು ಕೊಡುವರು


35.‘‘ನೋಡಿ ದಣಿಯನು ನಿಚ್ಚಲುಚಿತವ
ಮಾಡಿ ದಣಿಯನು ಬಿರುದ ಹೊಗಳಿಸಿ
ಹಾಡಿ ದಣಿಯನು…………..’’ ಎಂದು ಯಾರು, ಯಾರಿಗೆ, ಯಾರ ಬಗೆಗೆ ಹೇಳುತ್ತಿದ್ದಾರೆ?
 (1)ಕೃಷ್ಣ- ದುರ್ಯೋಧನನಿಗೆ ಹೇಳುತ್ತಿದ್ದಾನೆ, ಧರ್ಮರಾಯನ ಬಗೆಗೆ
 (2)ಅರ್ಜುನ- ಭೀಮನಿಗೆ ಹೇಳುತ್ತಿದ್ದಾನೆ, ಕೃಷ್ಣನ ಬಗೆಗೆ
 (3)ಸುಭದ್ರೆ- ಅಭಿಮನ್ಯುವಿಗೆ ಹೇಳುತ್ತಿದ್ದಾಳೆ, ಅರ್ಜುನನ ಬಗೆಗೆ
 (4)ಕರ್ಣ- ಕೃಷ್ಣನಿಗೆ ಹೇಳುತ್ತಿದ್ದಾನೆ, ದುರ್ಯೋಧನನ ಬಗೆಗೆ

ಸರಿ ಉತ್ತರ

(4) ಕರ್ಣ- ಕೃಷ್ಣನಿಗೆ ಹೇಳುತ್ತಿದ್ದಾನೆ, ದುರ್ಯೋಧನನ ಬಗೆಗೆ


GENERAL ENGLISH / ಸಾಮಾನ್ಯ ಇಂಗ್ಲಿಷ್

36.Read the following sentence :
“Diamond is the costliest stone.”
When the above sentence is changed to the positive degree it will become
 (1)Diamond is costlier than any other stone.
 (2)No other stone is as costly as diamond.
 (3)Some other stones arc as costly as diamond.
 (4)Diamond is costlier than all other stones.
ಸರಿ ಉತ್ತರ

(2) No other stone is as costly as diamond.


37.Read the following sentence :
“The furnitures in the office were damaged.”
Which of the following sentences is the correct form of the above sentence ?
 (1)The furnitures in the office were damaged.
 (2)The furnitures in the office was damaged.
 (3)The furniture in the office was damaged.
 (4)The furnitures were damaged in the office.
ಸರಿ ಉತ್ತರ

(3) The furniture in the office was damaged.


38.Match the following sentences with the figures of speech used in them :
  Sentences : Figures of speech:
 A.The sun smiled down on her.i.Hyperbole
 B.That teenaged boy ate everything in the house.ii.Personification
 C.My dog is like a tornado; she dashes through the home destroying everything she touches.iii.Alliteration
 D.She sells seashells.v.Metaphor
 Select the code for the correct answer from the options given below :

  ABCDE
 (1)IIIIIIVIV
 (2)IIIIVIIIV
 (3)IIIIVVIII
 (4)IIIVIVIII
ಸರಿ ಉತ್ತರ

(2) II I IV III V


39.The Antonym of ‘Candid’ is
 (1)Bluff
 (2)Devious
 (3)Equal
 (4)Blunt
ಸರಿ ಉತ್ತರ

(2) Devious


40.Pick the group out of the four groups given, which has all four correct pairs of singular and plural nouns and mark the correct option in answer sheet.
 (1)
 (2)
 (3)
 (4)
ಸರಿ ಉತ್ತರ

(2)


41.Out of the four groups given, select the group that consists of abstract nouns formed from adjectives.
 (1)
 (2)
 (3)
 (4)
ಸರಿ ಉತ್ತರ

(1)


42.Out of the four groups given, choose the proper group of feminine gender formed from masculine gender and mark the correct options in your answer sheet.
 (1)
 (2)
 (3)
 (4)

ಸರಿ ಉತ್ತರ

(3)


Directions : For Questions no. 43 and 44, a sentence has been given in Active or Passive voice. Out of the four alternatives suggested, select the one which best expresses the same sentence in Passive (if given sentence is Active) or Active (if given sentence is Passive) voice and shade /
blacken the corresponding circle in your answer sheet.

43.My uncle promised me a present.
 (1)A present was promised by my uncle to me.
 (2)I was promised a present by my uncle.
 (3)I had been promised a present by my uncle.
 (4)I was promised by my uncle a present.
ಸರಿ ಉತ್ತರ

(2) I was promised a present by my uncle.


44.They greet me cheerfully every morning.
 (1)Every morning I was greeted cheerfully.
 (2)I am greeted cheerfully by them every morning.
 (3)I am being greeted cheerfully by them every morning.
 (4)Cheerful greeting is done by them every morning to me.
ಸರಿ ಉತ್ತರ

(2) I am greeted cheerfully by them every morning.


Directions : For Questions no. 45 and 46, in each of the following questions, a sentence has been given in direct /indirect speech. Out of the four alternatives suggested, selcct the one which best expresses the same sentence in indirect (if given sentence is direct) or direct (if given sentence is indirect) speech and shade / blacken the corresponding circle in your answer sheet.

45.She said, “I saw a book here.”
 (1)She said that she saw a book here
 (2)She said that she saw a book there.
 (3)She said that she had seen a book here.
 (4)She said that she had seen a book there.
ಸರಿ ಉತ್ತರ

(4) She said that she had seen a book there.


46.Sarita said to me, “I will do it now or never.”
 (1)Sarita told me that I would do it then or never.
 (2)Sarita told me that she would do it now or never.
 (3)Sarita told me that she will do that now or never.
 (4)Sarita told me that she would do it then or never.
ಸರಿ ಉತ್ತರ

(4) Sarita told me that she would do it then or never.


47.Choose the word which is nearest in meaning to the underlined word in the following sentence:
‘‘The somber speech of the leader did very little to cheer the supporters.”
 (1)Jarring
 (2)Practical
 (3)Gloomy
 (4)Lengthy
ಸರಿ ಉತ್ತರ

(3) Gloomy


48.Choose the word which is opposite in meaning to the underlined word in the fol lowing sentence:
‘‘The archaic buildings that dot the city spack richly about the country’s heritage.”
 (1)Monarch
 (2)Spiritualistic
 (3)Modern
 (4)Fantastic
ಸರಿ ಉತ್ತರ

(3) Modern


49.Choose the correct one word substitution for the following sentence from the choices given below:
“A military structure where arms, ammunition, and other military’ equipment are stored and training is given in their use”
 (1)Cathedral
 (2)Sabbtical
 (3)Arsenal
 (4)Depot
ಸರಿ ಉತ್ತರ

(3) Arsenal


50.Find out the nearest meaning of the given word choosing the right answer from the choices given below :
 “Lucrative”
 (1)Having good music
 (2)Which cannot be compared
 (3)Cannot be conquered
 (4)Producing a sizeable profit
ಸರಿ ಉತ್ತರ

(4) Producing a sizeable profit


Directions : For questions 51 – 53, a passage has been given. In the passage, some of the words have been left out. You have to read the passage and try to understand what it is about. Then fill in the blanks with the help of the options given below it and shade/darken the appropriate circle in your answer sheet.
A belief system is a set of mutually supportive beliefs. Belief systems are the framework upon which cultures and societies function. It is the bond that   51   civilizations together, and it is the small voice inside each of us that urges us to be true to what we have been taught. We cannot   52   our spiritual teachings from our learning nor can we separate our beliefs about who and what we are from our values and our behaviour. We ask that educational systems   53   our right to religious freedom and our right to live in harmony.

51.What is the correct answer for the Blank (51) ? Select from the options given below :
 (1)completes
 (2)holds
 (3)compels
 (4)breaks
ಸರಿ ಉತ್ತರ

(2) holds


52.What is the correct answer for the Blank (52)? Select from the options given below :
 (1)distinguish
 (2)associate
 (3)separate
 (4)modify
ಸರಿ ಉತ್ತರ

(3) separate


53.What is the correct answer for the Blank (53)? Select from the options given below :
 (1)recognize
 (2)infer
 (3)reach
 (4)diminish
ಸರಿ ಉತ್ತರ

(1) recognize


Direction : In Questions no. 54 to 57, there are sentences which are divided and numbered into three parts, and one of the parts may contain an error. Identify the error by (1), (2) or (3) given under the parts of the sentence. If there are no errors, mark (4) No error. Shade/ blacken the corresponding circle in your answer sheet.

Example:
Neither he
(1)
nor his team
(2)
were present that day.
(3)
No error.
(4)
Explanation :
The correct answer in this case is Option (3). It should be “was present that day”. So you must shade/blacken Option (3) for this question in your answer sheet.

54.The manager admired the way the
(1)
employee had accomplished all his work
(2)
and appreciating the methods adopted by him.
(3)
No error.
(4)
ಸರಿ ಉತ್ತರ

(3)


55.They are looking for a Public Relations
(1)
Officer with a dynamic appearance
(2)
who can inspire confidence through his cultivate manner
(3)
No error.
(4)
ಸರಿ ಉತ್ತರ

(3)


56.A strong earthquake with a magnitude
(1)
of 7•5 on the Richter scale shaked all the
(2)
115 islands located along the Pacific coast.
(3)
No error.
(4)
ಸರಿ ಉತ್ತರ

(4)


56.The safety of the nation is paramount
(1)
and the people should realised the same
(2)
by following the rules and regulations laid down by the Government
(3)
No error.
(4)
ಸರಿ ಉತ್ತರ

(2)


Directions : Questions no. 58 and 59 consist of sentences with a blank in each. You have to choose the best answer which can be filled in the blank space and shade /blacken the corresponding circle in your answer sheet.

58.The public attending the rally was ____ by the politician’s rhetorical speech on development and nationalism.
 (1)carried off
 (2)carried away
 (3)carried on
 (4)carried through
ಸರಿ ಉತ್ತರ

(2) carried away


59.The dilapidated building was _______ to make way for a big mall in the heart of the city.
 (1)pulled down
 (2)pulled off
 (3)pulled through
 (4)pulled in
ಸರಿ ಉತ್ತರ

(1) pulled down


Directions : For Questions no. 60 to 63, an idiom or phrase has been used in the sentence. You have to choose the sentence which explains the correct meaning of that and shade/ darken the correct answer in your answer sheet.

Example:
Tejas attends Karate classes once in a blue moon.
 (1)Tejas attends Karate classes regularly.
 (2)Tejas attends Karate classes rarely.
 (3)Tejas attends Karate classes fortnightly.
 (4)Tejas attends Karate frequently but not regularly.

Explanation:
The answer is Option (2) as the underlined part means ‘rare occurrence of something’. So you have to choose Option (2) and shade/darken the corresponding answer in your answer sheet for this example.
60.The project was put on a backburner while the company focused on immediate
 (1)The project was hidden from the company board as the company people wanted other issues to get resolved first.
 (2)The project was considered as a burning issue and was put up for immediate action in front of the competent authorities.
 (3)The project was set for a high priority with other immediate issues
 (4)The project was kept at a lower priority and company focused on other immediate issues.
ಸರಿ ಉತ್ತರ

(4) The project was kept at a lower priority and company focused on other immediate issues.


61.He does not have any axe to grind in this issue of the company.
 (1)He has to work continuously to solve the matter as it is important and urgent.
 (2)He does not have any private motive to serve from this issue of the company.
 (3)He has undertaken a difficult task much higher than his capability.
 (4)He doesn’t have to work sincerely for this issue of the company.
ಸರಿ ಉತ್ತರ

(2) He does not have any private motive to serve from this issue of the company.


62.Cauvery water sharing has proved to be an apple of discord
 (1)Cauvery water sharing issue is becoming very complicated with each passing day.
 (2)Cauvery water sharing issue is causing too much of disturbance.
 (3)Cauvery water sharing issue is leading to a dispute.
 (4)Cauvery water sharing issue is too much in the news these days.
ಸರಿ ಉತ್ತರ

(3) Cauvery water sharing issue is leading to a dispute.


63.The scientists participating in Kishor Vigyanik Protsahan Yojna have old heads on young shoulders.
The scientists participating in Kishor Vigyanik Protsahan Yojna
 (1)are too dependent on senior scientists.
 (2)do not have respect for senior scientists.
 (3)are wiser than their age.
 (4)are not hard-working and rely more on instincts.
ಸರಿ ಉತ್ತರ

(3) are wiser than their age.


Directions : Read the following passage and answer the items that follow (Questions no. 64 to 67). Your answers to these items should be based on the passage only.
Passage
The Festival of Bonalu has become one of the official Hindu festivals of newly formed Telangana State. This is mainly celebrated in the twin cities of Hyderabad, Secunderabad and also in some parts of the State. The Goddess Mahakali and various incarnations of Shakti as Mysamma. Muthyalamma, Pochamma. Yellamma and Peddamma are worshipped in this festival on a great scale. This is observed generally on the Sundays in Ashada Masam, in the months of July or August every year. The name Bonam itself is derived from the word Bojanam that means meal or food offered to the Goddess.
The devotees prepare rice cooked with milk and jaggery in a new brass or earthen pot. It is adorned with neem leaves and lighted lamp on the top of it. They make a procession on the temple by carrying the pots on their heads along with new sari, bangles, turmeric and vermillion to offer Bonalu to the Mother Goddess.
It is believed that the festival is celebrated toward off the distresses and usher in good health, peace and prosperity. The festival is supposed to have begun in 1869 when plague broke out in the twin cities. Then the people wanted to appease Mother Goddess whose anger was considered to be the cause of the epidemic.
This is specially celebrated in Ujjain Mahakali Mandir, Lal Darwaza, Secundernbad for three days with great pomp and gaiety. The festival concludes with the immersion of Ghatam on the third and final day whereas the second day is celebrated as Rangam.

64.Which of the following is not a true statement according to the passage ?
 (1)The festival is celebrated in the Ashada Masam.
 (2)The festival is celebrated in Delhi and Mumbai.
 (3)The festival is associated with food offered to the Goddess.
 (4)Pochamma is an incarnation of Goddess Mahakali.
ಸರಿ ಉತ್ತರ

(2) The festival is celebrated in Delhi and Mumbai.


65.On which particular day is the festival observed?
 (1)Monday
 (2)Tuesday
 (3)Friday
 (4)Sunday
ಸರಿ ಉತ್ತರ

(4) Sunday


66.What do you mean by ‘Bonam’ ?
 (1)Gold ornaments
 (2)Wooden deities
 (3)Meal or Food
 (4)Gathering of Relatives
ಸರಿ ಉತ್ತರ

(3) Meal or Food


67.What do they immerse on the third day of the festival?
 (1)Rangam
 (2)Goddess Mysamma
 (3)Bonam
 (4)Ghatam
ಸರಿ ಉತ್ತರ

(4) Ghatam


Direcitons : In Questions no. 68 to 70, each question contains a paragraph of 6 sentences. The first and the sixth sentences are given in the beginning and end, and numbered 1 and 6 respectively. The four sentences in the middle are jumbled and labelled P. Q, R and S. You must identify the proper order of these four sentences and shade / blacken the option that correctly identifies this sequence.

Explanation : The correct sequence or order in this example is QSPR. So you have to shade/blacken Option (3) in your answer sheet

Example :
1. Once upon a time there lived a king.
 P.One day while hunting he was attacked by a tiger.
 Q.He had three ferocious hunting dogs.
 R.The dogs pounced on the tiger and saved the king’s life.
 S.The king used to take them with him while going out.
 6.He loved them till the end of his life.
 The correct sequence is
 (1)PQSR
 (2)RQSP
 (3)QSPR
 (4)SRQP
68.1. Every year, we see more and more vehicles in the cities.
 P.In other countries, people are trying to reduce the amount of oil and petrol they use.
 Q.As they are aware that it pollutes the atmosphere and causes global warming.
 R.Many of them have very big engines which use a lot of petrol and are a source of pollution.
 S.They do this by driving electric vehicles and by using public transport.
 6.I think it’s time we should start to reduce our fuel consumption and think seriously about our atmosphere.
  The correct sequence is
 (1)PRQS
 (2)QSPR
 (3)RPQS
 (4)QSPR
ಸರಿ ಉತ್ತರ

(3) RPQS


69.1. Our society is built with money for mortar, money is present in every joint of circumstance.
 P.Money gives us food, shelter and privacy.
 Q.It might be named the social atmosphere, since in society, it is by that alone that men continue to live.
 R.It permits us to be clean in person, enables us to help the distresses of others.
 S.Only through that can they reach or affect one another.
 6.And puts us above necessity so that we can choose the best of life.
  The correct sequence is
 (1)PRSQ
 (2)QSPR
 (3)SRPQ
 (4)RQSP
ಸರಿ ಉತ್ತರ

(2) QSPR


70.1. First, I have never met a German shepherd whose intelligence wasn’t above average.
 P.In addition, German shepherds are dedicated to their owners.
 Q.They can learn how to turn door knobs, follow a trail, or identify illegal substances.
 R.My dog Max waits patiently at the end of the driveway every night until I come home.
 S.Not even a juicy bone will tempt him to move.
 6.Finally, he is usually suspicious of all strangers, so he barks or growls when anything or anyone unknown is near his family.
 The correct sequence is
 (1)SQPR
 (2)QPSR
 (3)QSPR
 (4)QPRS
ಸರಿ ಉತ್ತರ

(2) QPSR


COMPUTER KNOWLEDGE/ಕಂಪ್ಯೂಟರ್ ಜ್ಞಾನ

71.ಅಡಿ ಟಿಪ್ಪಣಿ ಪಠ್ಯ ಶೈಲಿಯು ಕ್ಯಾರೆಕ್ಟರ್ ಗಳನ್ನು ಹೀಗೆಂದು ವ್ಯಾಖ್ಯಾನಿಸುತ್ತದೆ.
 (1)12- ಅಂಶ ಟೈಮ್ಸ್ ನ್ಯೂ ರೋಮನ್ ಮತ್ತು ಪ್ಯಾರಾಗ್ರಾಫ್ ಗಳನ್ನು ಸಿಂಗಲ್ ಸ್ಪೇಸ್ಡ್ ಮತ್ತು ರೈಟ್-ಅಲೈನ್ಡ್ ಎಂಬುದಾಗಿ
 (2)10- ಅಂಶ ಟೈಮ್ಸ್ ನ್ಯೂ ರೋಮನ್ ಮತ್ತು ಪ್ಯಾರಾಗ್ರಾಫ್ ಗಳನ್ನು ಸಿಂಗಲ್ ಸ್ಪೇಸ್ಡ್ ಮತ್ತು ರೈಟ್-ಅಲೈನ್ಡ್ ಎಂಬುದಾಗಿ
 (3)12- ಅಂಶ ಟೈಮ್ಸ್ ನ್ಯೂ ರೋಮನ್ ಮತ್ತು ಪ್ಯಾರಾಗ್ರಾಫ್ ಗಳನ್ನು ಡಬಲ್ ಸ್ಪೇಸ್ಡ್ ಮತ್ತು ರೈಟ್-ಅಲೈನ್ಡ್ ಎಂಬುದಾಗಿ
 (4)10- ಅಂಶ ಟೈಮ್ಸ್ ನ್ಯೂ ರೋಮನ್ ಮತ್ತು ಪ್ಯಾರಾಗ್ರಾಫ್ ಗಳನ್ನು ಡಬಲ್ ಸ್ಪೇಸ್ಡ್ ಮತ್ತು ರೈಟ್-ಅಲೈನ್ಡ್ ಎಂಬುದಾಗಿ
ಸರಿ ಉತ್ತರ

(4) 10- ಅಂಶ ಟೈಮ್ಸ್ ನ್ಯೂ ರೋಮನ್ ಮತ್ತು ಪ್ಯಾರಾಗ್ರಾಫ್ ಗಳನ್ನು ಡಬಲ್ ಸ್ಪೇಸ್ಡ್ ಮತ್ತು ರೈಟ್-ಅಲೈನ್ಡ್ ಎಂಬುದಾಗಿ


72.MS Word ವು ಪುನರಾವರ್ತಿತ wordನಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ?
 (1)ಪುನರಾವರ್ತಿತ ವರ್ಡ್ ನ ಕೆಳಗೆ ಒಂದು ಕೆಂಪು ಅಲೆಯ ಗೆರೆಯಾಗಿ
 (2)ಪುನರಾವರ್ತಿತ ವರ್ಡ್ ನ ಕೆಳಗೆ ಒಂದು ಹಸಿರು ಅಲೆಯ ಗೆರೆಯಾಗಿ
 (3)ಪುನರಾವರ್ತಿತ ವರ್ಡ್ ನ ಕೆಳಗೆ ಒಂದು ನೀಲಿ ಅಲೆಯ ಗೆರೆಯಾಗಿ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(1) ಪುನರಾವರ್ತಿತ ವರ್ಡ್ ನ ಕೆಳಗೆ ಒಂದು ಕೆಂಪು ಅಲೆಯ ಗೆರೆಯಾಗಿ


73.ಒಂದು ಪದವನ್ನು ಎರಡು ಬಾರಿ ಅಂಡರ್ಲೈನ್ ಮಾಡಬೇಕಾದಲ್ಲಿ, ಇದನ್ನು ಹೇಗೆ ಮಾಡುವಿರಿ?
 (1)ಫಾರ್ಮಾಟ್ ಮೆನುಗೆ ಹೋಗಿ ಮತ್ತು ನಂತರ ಫಾಂಟ್ ಆಪ್ಷನ್ ಗೆ ಹೋಗಿ. ಅಂಡರ್ಲೈನ್ ಸ್ಟೈಲ್ ನ್ನು ತೆರೆಯಿರಿ ಮತ್ತು ಡಬಲ್ ಅಂಡರ್ಲೈನ್ ನ್ನು ಆಯ್ಕೆ ಮಾಡಿ.
 (2)ಫಾರ್ಮಾಟ್ ಮೆನುವಿನಿಂದ ಫಾಂಟ್ ಆಪ್ಷನ್ ನ್ನು ಆಯ್ಕೆ ಮಾಡಿ ಮತ್ತು ನಂತರ ಫಾಂಟ್ ಟ್ಯಾಬ್ ನಿಂದ ಅಂಡರ್ಲೈನ್ ಸ್ಟೈಲ್ ನ್ನು ತೆರೆಯಿರಿ ಮತ್ತು ಡಬಲ್ ಅಂಡರ್ಲೈನ್ ನ್ನು ಆಯ್ಕೆ ಮಾಡಿ.
 (3)ಟೆಕ್ಸ್ಟ್ (ಪಠ್ಯ) ನ್ನು ಆಯ್ಕೆ ಮಾಡಿ ನಂತರ >> ಫಾಟ್ ಫಾರ್ಮ್ಯಾಟ್ ನ್ನು ಆರಿಸಿ ಮತ್ತು ಫಾಟ್ ಟ್ಯಾಬ್ ಮೇಲೆ ಅಂಡರ್ಲೈನ್ ಸ್ಟೈಲ್ ನ್ನು ತೆರೆಯಿರಿ ಮತ್ತು ಡಬಲ್ ಅಂಡರ್ಲೈನ್ ನ್ನು ಆರಿಸಿ.
 (4)ಫಾರ್ಮ್ಯಾಟಿಂಗ್ ಟೂಲ್ ಬಾರ್ ನ ಮೇಲೆ ಡಬಲ್ ಅಂಡರ್ಲೈನ್ ಟೂಲ್ ನ್ನು ಕ್ಲಿಕ್ ಮಾಡಿ.
ಸರಿ ಉತ್ತರ

(3) ಟೆಕ್ಸ್ಟ್ (ಪಠ್ಯ) ನ್ನು ಆಯ್ಕೆ ಮಾಡಿ ನಂತರ >> ಫಾಟ್ ಫಾರ್ಮ್ಯಾಟ್ ನ್ನು ಆರಿಸಿ ಮತ್ತು ಫಾಟ್ ಟ್ಯಾಬ್ ಮೇಲೆ ಅಂಡರ್ಲೈನ್ ಸ್ಟೈಲ್ ನ್ನು ತೆರೆಯಿರಿ ಮತ್ತು ಡಬಲ್ ಅಂಡರ್ಲೈನ್ ನ್ನು ಆರಿಸಿ.


74.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
 A.ಹಾರ್ಡ್ ರಿಬೂಟ್ ಎಂಬುದು, ಕಂಪ್ಯೂಟರ್ ಗೆ ವಿದ್ಯುತ್ ಪೂರೈಕೆಯಾಗುತ್ತಿರುವುದು. ಇದ್ದಕ್ಕಿದ್ದಂತೆ ನಿಂತು ಹೋದ ನಂತರ ಕಂಪ್ಯೂಟರ್ ನ್ನು ಪುನರಾರಂಭಿಸುವುದು
 B.ಹಾರ್ಡ್ ರಿಬೂಟ್ ನಲ್ಲಿ ಮಾಹಿತಿ ನಷ್ಟ ಅಥವಾ ಕಾರ್ಯಾಚರಣೆ ವ್ಯವಸ್ಥೆಯ ಭ್ರಷ್ಟತೆಯನ್ನು ಅವಲೋಕಿಸಲಾಗುವುದಿಲ್ಲ
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(1) A ಮಾತ್ರ


75.A1, B1, C2 ಮತ್ತು D2 ಕೋಶಗಳಲ್ಲಿರುವ ಕನಿಷ್ಠ ಮೌಲ್ಯವನ್ನು ಕಂಡುಹಿಡಿಯಲು ಕೆಳಗಿನವುಗಳಲ್ಲಿ ಯಾವುದು ಸರಿಯಾದ ಮಾರ್ಗ?
 (1)=MINIMUM (A1, B1, C2, D2)
 (2)=MINIMUM (A1:D2)
 (3)=MIN (A1, B1, C2, D2)
 (4)=MINIMUM (A1: D2)
ಸರಿ ಉತ್ತರ

(3) =MIN (A1, B1, C2, D2)


76.ಬೇಸಿಕ್ (BASIC) ಪ್ರೋಗ್ರಾಮಿಂಗ್ ಲಾಂಗ್ವೇಜ್ ನ್ನು ಯಾರು ಅಭಿವೃದ್ಧಿಪಡಿಸಿದರು?
 (1)ಜಾನ್ ಜಾರ್ಜ್ ಕೆಮ್ನಿ ಮತ್ತು ಥಾಮಸ್ ಯುಗೀನ ಕುರ್ಟ್ಜ್
 (2)ಜಾನ್ ಜಾರ್ಜ್ ಕೆಮ್ನಿ ಮತ್ತು ಡೆನ್ನಿಸ್ ರಿಚೀ
 (3)ಥಾಮಸ್ ಯುಗೀನ್ ಕುರ್ಟ್ಜ್ ಮತ್ತು ಗ್ರೇಸ್ ಹಾಪರ್
 (4)ಗ್ರೇಸ್ ಹಾಪರ್ ಮತ್ತು ಡೆನ್ನಿಸ್ ರಿಚೀ
ಸರಿ ಉತ್ತರ

(1) ಜಾನ್ ಜಾರ್ಜ್ ಕೆಮ್ನಿ ಮತ್ತು ಥಾಮಸ್ ಯುಗೀನ ಕುರ್ಟ್ಜ್


77.MS Word ಪರದೆಯ ಮೇಲೆ ನೀವು ಹಾರಿಜ ಸೀಳು ಬಾರ್ ನ್ನು (ಸ್ಪ್ಲಿಟ್ ಬಾರ್) ಎಲ್ಲಿ ಕಾಣುವಿರಿ?
 (1)ಹಾರಿಜ ಸ್ಟ್ರೋಲ್ ಬಾರ್ ನ ಎಡಭಾಗದ ಮೇಲೆ
 (2)ಹಾರಿಜ ಸ್ಟ್ರೋಲ್ ಬಾರ್ ನ ಬಲಭಾಗದ ಮೇಲೆ
 (3)ಲಂಬ ಸ್ಟ್ರೋಲ್ ಬಾರ್ ನ ಎಡಭಾಗದ ಮೇಲೆ
 (4)ಹಾರಿಜ ಸ್ಟ್ರೋಲ್ ಬಾರ್ ನ ತಳದ ಮೇಲೆ
ಸರಿ ಉತ್ತರ

(3) ಲಂಬ ಸ್ಟ್ರೋಲ್ ಬಾರ್ ನ ಎಡಭಾಗದ ಮೇಲೆ


78.MS Wordನಲ್ಲಿ Endnoteಅನ್ನು (ಇನ್ ಸರ್ಟ್ ಎಂಡ್ ನೋಟ್) ಎಲ್ಲಿ ಕಾಣುವಿರಿ?
 (1)ಫೈಲ್ ಮೆನು
 (2)ರೆಫರೆನ್ಸಸ್ ಮೆನು
 (3)ಮೇಲಿಂಗ್ಸ್ ಮೆನು
 (4)ಡಿಸೈನ್ ಮೆನು
ಸರಿ ಉತ್ತರ

(2) ರೆರೆನ್ಸಸ್ ಮೆನು


79.ವೆಬ್ ಕ್ರೌಲರ್ ಎಂದರೇನು?
 (1)ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು ಇದು ವರ್ಲ್ಡ್ ವೈಡ್ ವೆಬ್ ನ್ನು ಸ್ವಯಂಚಾಲಿತ ರೀತಿಯಲ್ಲಿ ಮತ್ತು ಕ್ರಮಬದ್ಧವಾದ ಮಾದರಿಯಲ್ಲಿ ಬ್ರೌಸ್ ಮಾಡುತ್ತದೆ.
 (2)ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು ಇದು ವಾಸ್ತವಿಕ ಜಗತ್ತಿನಲ್ಲಿ ದೊರೆಯುವ ಮುಕ್ತ ಮೆಮೋರಿಯನ್ನು ಉಪಯೋಗಿಸುವ ವರ್ಲ್ಡ್ ವೈಡ್ ವೆಬ್ ನ್ನು ಬ್ರೌಸ್ ಮಾಡುತ್ತದೆ.
 (3)ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು, ಕ್ವಿಕ್ ಸರ್ಚ್ ಎಂಜಿನ್ ಸ್ಥಾಪಿಸಲು ವರ್ಲ್ಡ್ ವೈಡ್ ವೆಬ್ ಗೆ ಸಹಾಯ ಮಾಡುತ್ತದೆ.
 (4)ವೆಬ್ ಕ್ರೌಲರ್ ಕುರಿತ ಮೇಲಿನ ಯಾವುವೂ ಸರಿಯಲ್ಲ
ಸರಿ ಉತ್ತರ

(1) ಇದು ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದ್ದು ಇದು ವರ್ಲ್ಡ್ ವೈಡ್ ವೆಬ್ ನ್ನು ಸ್ವಯಂಚಾಲಿತ ರೀತಿಯಲ್ಲಿ ಮತ್ತು ಕ್ರಮಬದ್ಧವಾದ ಮಾದರಿಯಲ್ಲಿ ಬ್ರೌಸ್ ಮಾಡುತ್ತದೆ.


80.MS Excelನಲ್ಲಿ ಸೂತ್ರ
=ROUND(2.31,0)+CEILING(1.32,1)ನ ಸರಿಯಾದ ಮೌಲ್ಯವು
 (1)3
 (2)4
 (3)3 .63
 (4)1.32
ಸರಿ ಉತ್ತರ

(2) 4


81.ಪಟ್ಟಿ Iರಲ್ಲಿನ ಇನ್ ಪುಟ್ ವಿಧಾನದೊಂದಿಗೆ ಪಟ್ಟಿ II ರಲ್ಲಿನ ಗುಣಧರ್ಮಗಳನ್ನು ಹೊಂದಿಸಿ:
  ಪಟ್ಟಿ I (ಇನ್ ಪುಟ್ )  ಪಟ್ಟಿII (ಗುಣಧರ್ಮಗಳು)
 A.MICRi.ಶಾಯಿ ಅಥವಾ ಕಪ್ಪು ಲೇಖನಿಯಿಂದ ಗುರುತು ಮಾಡಿದ, ಮೊದಲೇ ಮುದ್ರಿತವಾದ ಕಪ್ಪು (ದಟ್ಟ) ಬಾಕ್ಸ್ ಗಳನ್ನು ಓದುವುದು
 B.OMRii.ಮ್ಯಾಗ್ನೆಟಿಕ್ ಶಾಯಿಯನ್ನು ಬಳಸುವ ಮೂಲಕ ಒಂದು ದಾಖಲೆಯ ಮೇಲೆ ಮುದ್ರಿತವಾದ ಕ್ಯಾರೆಕ್ಟರ್ ನ್ನು ಗುರುತಿಸುವುದು
 C.ಬಾರ್ ಕೋಡಿಂಗ್iii.ಪ್ರತಿಬಿಂಬವನ್ನು (ಇಮೇಜ್) ಓದುವುದು ಮತ್ತು ಅದನ್ನು 0 ಮತ್ತು 1ರ ಗಣವಾಗಿ ಪರಿವರ್ತಿಸುವುದು
 D.OCRiv.ದಪ್ಪ ಮತ್ತು ಅಂತರದಲ್ಲಿ ಭಿನ್ನತೆ ಇರುವ ಚಿಕ್ಕ ಗೆರೆ (ಬಾರ್) ಯನ್ನು ಓದುವುದು.
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:
  ABCD
 (1)IIIIIIIV
 (2)IIIIIIIV
 (3)IIIIVIII
 (4)IIIIVIII
ಸರಿ ಉತ್ತರ

(3) II I IV III


82.ಈ ಕೆಳಗಿನ ಪ್ರೋಗ್ರಾಂನಲ್ಲಿ ಯಾವುದು, ತಾನು ನಿಜವಾಗಿ ಮಾಡುತ್ತಿರುವುದನ್ನು ಇನ್ನೊಂದು ಎಂಬಂತೆ ತೋರಿಸುತ್ತದೆ? ಕಂಪ್ಯೂಟರ್ ವ್ಯವಸ್ಥೆಯಲ್ಲಿ ಹಿಂಬಾಗಿಲನ್ನು ಸಜ್ಜುಗೊಳಿಸಿ ತನ್ಮೂಲಕ ಅಕ್ರಮ ಪ್ರವೇಶ ಮಾಡುವುದರಿಂದ, ನಂತರ ಪ್ರವೇಶವನ್ನು ಪಡೆಯುವಂತೆ ಮಾಡುವುದು?
 (1)ಕೀ ಸ್ಟ್ರೋಕ್ ಲಾಗರ್
 (2)ಕಂಪ್ಯೂಟರ್ ಪಿಶಿಂಗ್
 (3)ಟ್ರೋಜನ್ ಹಾರ್ಸ್
 (4)ಸ್ಪಾಂಪಿಂಗ್
ಸರಿ ಉತ್ತರ

(3) ಟ್ರೋಜನ್ ಹಾರ್ಸ್


83.ಬಳಕೆದಾರನು ಜಾಲತಾಣವನ್ನು ಬ್ರೌಸ್ ಮಾಡುತ್ತಿರುವಾಗ ಬಳಕೆದಾರನ ವೆಬ್ ಬ್ರೌಸರ್ ನಲ್ಲಿ ಶೇಖರಿಸಲ್ಪಟ್ಟ ಮತ್ತು ಒಂದು ಜಾಲತಾಣದಿಂದ ಕಳುಹಿಸಲ್ಪಟ್ಟ ಮಾಹಿತಿಯ ಒಂದು ತುಣುಕಾಗಿದೆ?
 (1)ಥಂಬ್ ನೈಲ್
 (2)ಕಂಪ್ಯೂಟರ್ ವರ್ಮ್
 (3)ಕೂಕಿ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(3) ಕೂಕಿ


84.ದುರುದ್ದೇಶ ತಂತ್ರಾಂಶದ ಗುಣಧರ್ಮಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
 A.ಸ್ಟೀಲ್ ವೇರ್ ಎಂಬ ತಂತ್ರಾಂಶವು ಅಂಗೀಭೂತ ಮಾರ್ಕೆಟಿಂಗ್ ಕೋಡ್ ಗಳನ್ನು ತಿದ್ದುತ್ತದೆ. ಅದರಿಂದ ಉದ್ದೇಶಿತ ಗ್ರಾಹಕನಿಗಿಂತಲೂ ಸೃಷ್ಟಿಕರ್ತ ಬೇಹುಗಾರನಿಗೆ ಆದಾಯವು ರೀಡೈರೆಕ್ಟ್ (ಪುನರ್ನಿರ್ದೇಶ) ಆಗುತ್ತದೆ.
 B.ನಾಗ್ ವೇರ್ ಎಂಬ ತಂತ್ರಾಂಶವು ಬಳಕೆದಾರನು ಪ್ರೋಗ್ರಾಂ ನ್ನು ಬಳಸಲಾರಂಭಿಸಿದಾಗ ಅಪ್ಲಿಕೇಶನ್ ನ್ನು ಬಳಸುತ್ತಿರುವಾಗ ಒಂದು ಸಂದೇಶವನ್ನು ಪಾಪಿಂಗ್ ಅಪ್ ಮಾಡುವುದರಿಂದ ಬಳಕೆದಾರನಿಗೆ (ರಿಮೈಂಡ್) ಜ್ಞಾಪಿಸುತ್ತದೆ.
 C.ಚಾಟರ್ ಬಾಟ್ ಎಂಬ ತಂತ್ರಾಂಶವು ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳು ಶ್ರವಣ/ಪಾಠ್ಯಕ ವಿಧಾನಗಳ ಮೂಲಕ ಬುದ್ಧಿವಂತಿಕೆಯ ಸಂಭಾಷಣೆ ಮಾಡಲು ಉತ್ತೇಜಿಸುತ್ತದೆ.
  ಈ ಮೇಲಿನ ಯಾವ ಹೇಳಿಕೆಗಳಲ್ಲಿ ಯಾವುದು/ವು ಸರಿ?
  ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)C ಮಾತ್ರ
 (2)A ಮತ್ತು B ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


85.ಕೆಳಗಿನ ಸಾಧನಗಳನ್ನು ಪರಿಗಣಿಸಿ:
 A.ಸ್ಕ್ಯಾನರ್
 B.ಕೀಬೋರ್ಡ್
 C.ಪ್ರಿಂಟರ್
 D.ಮೌಸ್
 E.ಮಾನಿಟರ್
 F.ಪ್ಲಾಟರ್
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ.
 (1)A, B, Cಗಳು ಇನ್ ಪುಟ್ ಡಿವೈಸ್ (ಸಾಧನ) ಗಳು ಮತ್ತು D, E, Fಗಳು ಔಟ್ ಪುಟ್ ಡಿವೈಸ್ ಗಳು
 (2)A, B, Dಗಳು ಇನ್ ಪುಟ್ ಡಿವೈಸ್ ಗಳು ಮತ್ತು C, E, Fಗಳು ಔಟ್ ಪುಟ್ ಡಿವೈಸ್ ಗಳು
 (3)A, B, D, F ಗಳು ಇನ್ ಪುಟ್ ಡಿವೈಸ್ ಗಳು ಮತ್ತು C, Eಗಳು ಔಟ್ ಪುಟ್ ಡಿವೈಸ್ ಗಳು
 (4)A, B, Fಗಳು ಇನ್ ಪುಟ್ ಡಿವೈಸ್ ಗಳು ಮತ್ತು C, D,ಮತ್ತು Eಗಳು ಔಟ್ ಪುಟ್ ಡಿವೈಸ್ ಗಳು
ಸರಿ ಉತ್ತರ

(2) A, B, Dಗಳು ಇನ್ ಪುಟ್ ಡಿವೈಸ್ ಗಳು ಮತ್ತು C, E, Fಗಳು ಔಟ್ ಪುಟ್ ಡಿವೈಸ್ ಗಳು


86.COBOL ಭಾಷೆಯನ್ನು ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
 A.COBOL ಎಂಬುದು ಒಂದು ಗುರಿ ಉದ್ದೇಶಿತ ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಭಾಷೆ ಆಗಿದೆ.
 B.COBOL ಅನ್ನು ಸೂಕ್ಷ್ಮ ಕ್ಷೇತ್ರಗಳ ಗಣನೆಯಲ್ಲಿ ಎಂದರೆ ಸಂಖ್ಯಾತ್ಮಕ ಹವಾಮಾನ ಮುನ್ಸೂಚಿ ಮತ್ತು ಸೀಮಿತ ಧಾತು ವಿಶ್ಲೇಷಣೆ ಮತ್ತು ಕಂಪ್ಯುಟೇಷನಲ್ ಫ್ಲೂಯಿಡ್ ಡೈನಮಿಕ್ಸ್ ಗಳಲ್ಲಿ ಬಳಸಲಾಗುತ್ತದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(1) A ಮಾತ್ರ


87.MS ಪವರ್ ಪಾಯಿಂಟ್ ನಲ್ಲಿ ಸ್ಲೈಡ್-ಟೈಟಲ್ ಮಾಸ್ಟರ್ ಜೋಡಿ ಎಂದರೇನು?
 (1)ನಿರ್ದಿಷ್ಟವಾದ ಸ್ಲೈಡ್ ನ ಶೀರ್ಷಿಕೆ ಕ್ಷೇತ್ರ ಮತ್ತು ಪಠ್ಯ ಕ್ಷೇತ್ರ
 (2)ಒಂದು ಸ್ಲೈಡ್ ಮಾಸ್ಟರ್ ಮತ್ತು ಶೀರ್ಷಿಕೆ ಮಾಸ್ಟರ್ ನ್ನು ಒಂದು ಸಿಂಗಲ್ ಸ್ಲೈಡ್ ನಲ್ಲಿ ವಿಲೀನಗೊಳಿಸಿದೆ
 (3)ನಿರ್ದಿಷ್ಟ ವಿನ್ಯಾಸದ ಟೆಂಪ್ಲೇಟ್ ಗಾಗಿ ಒಂದು ಸ್ಲೈಡ್ ಮಾಸ್ಟರ್ ಮತ್ತು ಒಂದು ಶೀರ್ಷಿಕೆ ಮಾಸ್ಟರ್
 (4)ಮೇಲಿನ ಎಲ್ಲವೂ
ಸರಿ ಉತ್ತರ

(3) ನಿರ್ದಿಷ್ಟ ವಿನ್ಯಾಸದ ಟೆಂಪ್ಲೇಟ್ ಗಾಗಿ ಒಂದು ಸ್ಲೈಡ್ ಮಾಸ್ಟರ್ ಮತ್ತು ಒಂದು ಶೀರ್ಷಿಕೆ ಮಾಸ್ಟರ್


88.ಯಾವ ಪವರ್ ಪಾಯಿಂಟ್ ನೋಟವು ಒಂದು ನಿರೂಪಣೆಯ ಪ್ರತಿ ಸ್ಲೈಡ್ ನ್ನು ಥಂಬ್ನೈಲ್ ಆಗಿ ಪ್ರದರ್ಶಿಸುತ್ತದೆ ಮತ್ತು ಸ್ಲೈಡ್ ಗಳ ಪುನರ್ ಜೋಡಣೆಗೆ ಉಪಯುಕ್ತವಾಗಿದೆ?
 (1)ಸ್ಲೈಡ್ ಸಾರ್ಟರ್
 (2)ಸ್ಲೈಡ್ ವ್ಯೂ
 (3)ಸ್ಲೈಡ್ ಶೋ
 (4)ಸ್ಲೈಡ್ ಮಾಸ್ಟರ್
ಸರಿ ಉತ್ತರ

(1) ಸ್ಲೈಡ್ ಸಾರ್ಟರ್


89.MS Excelನಲ್ಲಿನ (ಸಮೀಪದಾರಿ) ಶಾರ್ಟ್ ಕಟ್ ಗಳನ್ನು ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
 A.Excel ಇನ್ಸರ್ಟ್ ಫಕ್ಷನ್ ವಿಂಡೋವನ್ನು ತೆರೆಯಲು Shift+F3 ಯನ್ನು ಬಳಸಲಾಗುತ್ತದೆ.
 B.ಹೊಸ ವರ್ಕ್ ಶೀಟ್ಅನ್ನು ಸೇರಿಸಲು Alt+Shift+F1ಅನ್ನು ಬಳಸಲಾಗುತ್ತದೆ.
 C.ಚಾಲ್ತಿಯ ವರ್ಕ್ ಬುಕ್ ನ್ನು ಮಿನಿಮೈಜ್ ಮಾಡಲು Ctrl+F9ಅನ್ನು ಬಳಸಲಾಗುವುದು
  ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
  ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)A ಮತ್ತು C ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


90.ಒಂದು ಡಿಸ್ಕ್ ಗೆ ಒಂದು ಹೆಸರನ್ನಿಡಲು DOSನಲ್ಲಿ ಬಳಸುವ ಒಂದು ಆಜ್ಞೆ (ಕಮಾಂಡ್) ಯಾವುದು?
 (1)VOL
 (2)LABEL
 (3)CLS
 (4)COPYCON
ಸರಿ ಉತ್ತರ

(2) LABEL


91.ಕೆಳಗಿನ ಸಂಕ್ಷಿಪ್ತಾಕ್ಷರಗಳನ್ನು ಅವುಗಳ ವಿಸ್ತರಣೆಯೊಂದಿಗೆ ಪರಿಗಣಿಸಿ:
 A.BASIC- ಬಿಗಿನರ್ಸ್ ಆಲ್ ಪರ್ಪಸ್ ಸಿಂಬಾಲಿಕ್ ಇನ್ಸ್ಟ್ರಕ್ಷನ್ಸ್ ಕೋಡ್
 B.LIFO- ಲಾಸ್ಟ್ ಇನ್ ಸ್ಟ್ ಔಟ್
 C.SMTP ಸಿಂಪಲ್ ಮ್ಯಾನೇಜ್ಮೆಂಟ್ ಟ್ರಾನ್ಸ್ರ್ ಪ್ರೋಟೋಕಾಲ್
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು B ಮಾತ್ರ
 (4)A, B ಮತ್ತು C
ಸರಿ ಉತ್ತರ

(3) A ಮತ್ತು B ಮಾತ್ರ


92.ಪುಟಗಳು, ಪದಗಳು, ಕ್ಯಾರೆಕ್ಟರ್ ಗಳು, ಪ್ಯಾರಾಗ್ರಾಫ್ ಗಳು ಮತ್ತು ಗೆರೆಗಳ ಸಂಖ್ಯೆಗಳನ್ನೊಳಗೊಳ್ಳುವ MS Word ನಲ್ಲಿಯ ಸಂಖ್ಯಾಶಾಸ್ತ್ರ ದಾಖಲೆಯನ್ನು ಹುಡುಕಲು ಯಾವ ಆಯ್ಕೆಯನ್ನು ಬಳಸಬೇಕಾಗುತ್ತದೆ?
 (1)ಸಂಖ್ಯಾಶಾಸ್ತ್ರ
 (2)ವರ್ಡ್ ಕೌಂಟ್ (ಪದ ಎಣಿಕೆ)
 (3)ಥಿಸಾರಸ್ (ನಿಘಂಟು)
 (4)ಕಾಗುಣಿತ ಪರೀಕ್ಷೆ (ಸ್ಪೆಲ್ಚೆಕ್)
ಸರಿ ಉತ್ತರ

(2) ವರ್ಡ್ಕೌಂಟ್ (ಪದ ಎಣಿಕೆ)


93.ENIAC, EDVAC, EDSAC ಇವುಗಳು ಇದರ ಉದಾಹರಣೆಗಳಾಗಿವೆ.
 (1)ಮೊದಲನೆಯ ತಲೆಮಾರಿನ ಕಂಪ್ಯೂಟರ್ ಗಳು
 (2)ಎರಡನೆಯ ತಲೆಮಾರಿನ ಕಂಪ್ಯೂಟರ್ ಗಳು
 (3)ಮೂರನೆಯ ತಲೆಮಾರಿನ ಕಂಪ್ಯೂಟರ್ ಗಳು
 (4)ನಾಲ್ಕನೆಯ ತಲೆಮಾರಿನ ಕಂಪ್ಯೂಟರ್ ಗಳು
ಸರಿ ಉತ್ತರ

(1) ಮೊದಲನೆಯ ತಲೆಮಾರಿನ ಕಂಪ್ಯೂಟರ್ ಗಳು


94.ಬ್ಲೂಹ್ಯಾಟ್ (ನೀಲಿ ಟೋಪಿ) ಎಂದರೆ ಯಾರು?
 (1)ಪರೋಪಕಾರಿ ಅಥವಾ ದುರುದ್ದೇಶರಹಿತ ಕಾರಣಗಳಿಗಾಗಿ ಸುರಕ್ಷತೆಯನ್ನು ಹ್ಯಾಕರ್ ಛಿದ್ರಿಸುವುದು
 (2)ಸಂದಿಗ್ಧದ ನೀತಿ-ನಿಯಮಗಳು ಅಥವಾ ಕಾನೂನು ಬದ್ಧ ಅಂಚುಗೆರೆಯ ಹ್ಯಾಕರ್, ಸದಾ ನೇರವಾಗಿ ಅಂಗೀಕರಿಸಲ್ಪಡುತ್ತದೆ
 (3)ಕೆಲವು ಬಾಹ್ಯ ಕಂಪ್ಯೂಟರ್ ಸುರಕ್ಷತಾ ಸಮಾಲೋಚಕ ವ್ಯವಹಾರ ಸಂಸ್ಥೆಗಳು ಒಂದು ವ್ಯವಸ್ಥೆಯನ್ನು ಜಾರಿಗೊಳಿಸುವ ಮುನ್ನ ಬಗ್ ಪರೀಕ್ಷೆಯನ್ನು ಮಾಡುತ್ತವೆ. ಶೋಷಣೆಗಾಗಿ ನೋಡುತ್ತಿದ್ದವರ ಸಲುವಾಗಿ ಅವುಗಳನ್ನು ಮುಚ್ಚಲಾಗುವುದು
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(3) ಕೆಲವು ಬಾಹ್ಯ ಕಂಪ್ಯೂಟರ್ ಸುರಕ್ಷತಾ ಸಮಾಲೋಚಕ ವ್ಯವಹಾರ ಸಂಸ್ಥೆಗಳು ಒಂದು ವ್ಯವಸ್ಥೆಯನ್ನು ಜಾರಿಗೊಳಿಸುವ ಮುನ್ನ ಬಗ್ ಪರೀಕ್ಷೆಯನ್ನು ಮಾಡುತ್ತವೆ. ಶೋಷಣೆಗಾಗಿ ನೋಡುತ್ತಿದ್ದವರ ಸಲುವಾಗಿ ಅವುಗಳನ್ನು ಮುಚ್ಚಲಾಗುವುದು


95.ಪಟ್ಟಿ Iರಲ್ಲಿನ ಭಾಷಾ ತಲೆಮಾರುಗಳನ್ನು ಪಟ್ಟಿ II ರಲ್ಲಿ ಅವುಗಳೊಂದಿಗೆ ಸಂಬಂಧಿಸಿರುವ ಭಾಷೆಗಳೊಂದಿಗೆ ಹೊಂದಿಸಿ:
  ಪಟ್ಟಿ I (ಭಾಷಾ ತಲೆಮಾರುಗಳು)  ಪಟ್ಟಿII (ಭಾಷೆಗಳು)
 A.ಮೊದಲನೇಯi.ರಚನೆಯುಳ್ಳ ಪ್ರೋಗ್ರಾಮಿಂಗ್ ಭಾಷೆಗಳು
 B.ಎರಡನೇಯii.ನಿರ್ದಿಷ್ಟ ಭಾಷೆಗಳ ಪ್ರಾಧಾನ್ಯ
 C.ಮೂರನೇಯiii.ಅಸೆಂಬ್ಲಿ ಭಾಷೆಗಳು
 D.ನಾಲ್ಕನೆಯiv.ಯಂತ್ರ ಭಾಷೆಗಳು
  ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:
  ABCD
 (1)IIIVIIII
 (2)IIIIIIVI
 (3)IVIIIIII
 (4)IVIIIIII
ಸರಿ ಉತ್ತರ

(3) IV III I II


96.ಗೂಗಲ್ ನಿಂದ ಬಿಡುಗಡೆಯಾಗುವ ಕೆಳಗಿನ ಆಂಡ್ರಾಯ್ಡ್ ಶ್ರೇಣಿಗಳನ್ನು ಪರಿಗಣಿಸಿ
 A.ಕಿಟ್ ಕ್ಯಾಟ್
 B.ಮಾರ್ಷ್ ಮಾಲ್ಲೋ
 C.ಲಾಲ್ಲಿಪಾಪ್
 D.ಜೆಲ್ಲಿಬೀನ್
 ಇವು ಬಿಡುಗಡೆಯಾದ ಕಾಲಾನುಕ್ರಮದಲ್ಲಿ ಜೋಡಿಸಿರಿ.
 ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರಗಳನ್ನು ಆರಿಸಿ:
 (1)B, A, C, D
 (2)A, B, C, D
 (3)D, A, C, B
 (4)D, C A, B
ಸರಿ ಉತ್ತರ

(3) D, A, C, B


97.ಹೊಂದಿಸಿ ಬರೆಯಿರಿ:
  ಪಟ್ಟಿ I  ಪಟ್ಟಿ II
 A.ವಿಂ:ಡೋಸ್ i.ಅಪ್ಲಿಕೇಷನ್ ಸಾಫ್ಟ್ ವೇರ್
 B.ಆ್ಯಂಟಿವೈರಸ್ii.ಸಿಸ್ಟಮ್ ಸಾಫ್ಟ್ ವೇರ್
 C.ಟ್ಯಾಲಿiii.ಬ್ರೌಜರ್
 D.ಇಂಟರ್ನೆಟ್ ಎಕ್ಸ್ ಪ್ಲೋರರ್iv.ಯುಟಿಲಿಟಿ ಸಾಫ್ಟ್ ವೇರ್
  ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:
  ABCD
 (1)IIIVIIII
 (2)IIIVIIII
 (3)IVIIIIII
 (4)IIIIIIIV
ಸರಿ ಉತ್ತರ

(1) II IV I III


98.ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಬೂಟ್ ಸ್ಟ್ರಾಪ್ ಎಂದರೇನು?
 (1)ಸಿಸ್ಟಮ್ನ ಫೈರ್ವಾಲ್ ಭಂಗವಾದಾಗ ಅಥವಾ ಭದ್ರತಾ ಹೊಂದಾಣಿಕೆಯಾದಾಗ ಸಿಸ್ಟಮ್ ನ್ನು ಆಫ್ ಮಾಡುವ ಒಂದು ಪ್ರೋಗ್ರಾಂ
 (2)ವೈರಸ್ ಮತ್ತು ಸಿಸ್ಟಮ್ ನಲ್ಲಿ ಕಂಡುಬರುವ ದೋಷಗಳನ್ನು ಬೂಟ್ಔಟ್ ಮಾಡುವ ಒಂದು ಪ್ರೋಗ್ರಾಂ
 (3)ಬೂಟ್ ಮಾಡುವ ಸಮಯದ ಆರಂಭದಲ್ಲಿ ಇತರ ದತ್ತಾಂಶ ಮತ್ತು ಕಾರ್ಯಕ್ರಮಗಳನ್ನು ಲೋಡ್ ಮಾಡುವ ಒಂದು ಪ್ರೋಗ್ರಾಂ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(3) ಬೂಟ್ ಮಾಡುವ ಸಮಯದ ಆರಂಭದಲ್ಲಿ ಇತರ ದತ್ತಾಂಶ ಮತ್ತು ಕಾರ್ಯಕ್ರಮಗಳನ್ನು ಲೋಡ್ ಮಾಡುವ ಒಂದು ಪ್ರೋಗ್ರಾಂ


99.ಫ್ಲೋಚಾರ್ಟ್ ವಿನ್ಯಾಸದ ಎರಡು ಚಿಹ್ನೆಗಳನ್ನು ಪರಿಗಣಿಸಿ:
 
 ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
 (1)Aಯು ಸ್ಟಾರ್ಟ್/ಎಂಡ್ ನ್ನು ಪ್ರತಿನಿಧಿಸುತ್ತದೆ. ಮತ್ತು Bಯು ನಿರ್ಣಯ ಮಾಡುವುದನ್ನು (ಡಿಸಿಷನ್ ಮೇಕಿಂಗ್) ಪ್ರತಿನಿಧಿಸುತ್ತದೆ.
 (2)Aಯು ಇನ್ ಪುಟ್ /ಔಟ್ ಪುಟ್ ಗಳನ್ನು ಪ್ರತಿನಿಧಿಸುತ್ತದೆ. ಮತ್ತು Bಯು ಸ್ಟಾರ್ಟ್/ಎಂಡ್ಅನ್ನು ಪ್ರತಿನಿಧಿಸುತ್ತದೆ.
 (3)Aಯು ಪ್ರೋಸೆಸ್ (ಪ್ರಕ್ರಿಯೆ)ಅನ್ನು ಪ್ರತಿನಿಧಿಸುತ್ತದೆ ಮತ್ತು Bಯು ಕನೆಕ್ಟರ್ ನ್ನು ಪ್ರತಿನಿಧಿಸುತ್ತದೆ.
 (4)Aಯು ನಿರ್ಣಯ ಮಾಡುವುದನ್ನು ಪ್ರತಿನಿಧಿಸುತ್ತದೆ ಮತ್ತು Bಯು ಪ್ರೋಸೆಸ್ (ಪ್ರಕ್ರಿಯೆ)ಅನ್ನು ಪ್ರತಿನಿಧಿಸುತ್ತದೆ.
ಸರಿ ಉತ್ತರ

(1) Aಯು ಸ್ಟಾರ್ಟ್/ಎಂಡ್ ನ್ನು ಪ್ರತಿನಿಧಿಸುತ್ತದೆ. ಮತ್ತು Bಯು ನಿರ್ಣಯ ಮಾಡುವುದನ್ನು (ಡಿಸಿಷನ್ ಮೇಕಿಂಗ್) ಪ್ರತಿನಿಧಿಸುತ್ತದೆ.


100.ಹೊಂದಿಸಿ ಬರೆಯಿರಿ:
  ಪಟ್ಟಿ I  ಪಟ್ಟಿII
 A.I.OR ಗೇಟ್
 B.II.AND ಗೇಟ್
 C.III.NOTಗೇಟ್
 D.IV.NAND ಗೇಟ್
 E.V.NOR ಗೇಟ್
  ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:
  ABCDE
 (1)IIIVIVIII
 (2)IIIVVIIII
 (3)IIIVIIIIV
 (4)IIIIVIVII
ಸರಿ ಉತ್ತರ

(2) II IV V I III


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment