WhatsApp Group Join Now
Telegram Group Join Now

KPSC GROUP C -11-12-2016 Paper-1 Question Paper

KPSC : GROUP C 11-12-2016 Paper-1 General Knowledge Questions with answers


KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ: ವಿವಿಧ ತಾಂತ್ರಿಕ/ ತಾಂತ್ರಿಕೇತರ (Below Degree Standard) ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 11-12-2016 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

1. ಈ ರಾಷ್ಟ್ರೀಯ ನಾಯಕರ ವಿಶಿಷ್ಟ ನೆಲೆಯನ್ನು ನೀಡಲಾಗಿದೆ ಸರಿಯಾದ ಜೋಡಿಯನ್ನು ಆಯ್ಕೆ ಮಾಡಿ.

A.

ಪಿ.ಸಿ.ಜೋಶಿ

ಭಾರತ ಕಮ್ಯೂನಿಸ್ಟ್ ಪಕ್ಷ

B.

ಎನ್.ಎಚ್.ಜೋಶಿ

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಫೆಡರೇಷನ್

C.

ಸೂರ್ಯಸೇನ್

ಇಂಡಿಯನ್ ರಿಪಬ್ಲಿಕನ್ ಆರ್ಮಿ

D.

ಎಸ್.ಸಿ.ಬೋಸ್

ರ್ಯಾಡಿಕಲ್(Radical)
ಪ್ರೆಸಿಡೆಂಟ್ ಆಫ್ ಕಾಂಗ್ರೆಸ್


ಸರಿಉತ್ತರವನ್ನು ಆರಿಸಿ.

    (1)    A, D
    (2)    B, C
    (3)    C, D
    (4)    ಮೇಲಿನ ಎಲ್ಲವೂ

ಸರಿ ಉತ್ತರ

(4) ಮೇಲಿನ ಎಲ್ಲವೂ


2. ಈ ಪೈಕಿ ಯಾವ ಚಳುವಳಿ ಹಿಂದುಗಳು ಮತ್ತು ಮುಸ್ಲಿಮರು ಇಬ್ಬರಿಂದಲೂ ಬೆಂಬಲ ಗಳಿಸಿತು ?


    (1)    ಚಂಪಾರಣ್ ಸತ್ಯಾಗ್ರಹ
    (2)    ಪ್ರತ್ಯೇಕತಾ (ವಿಭಜನಾ) ವಿರೋಧಿ ಚಳುವಳಿ
    (3)    ಖಿಲಾತ್ ಚಳುವಳಿ
    (4)    ಕ್ವಿಟ್ ಇಂಡಿಯಾ ಚಳುವಳಿ

ಸರಿ ಉತ್ತರ

(3) ಖಿಲಾತ್ ಚಳುವಳಿ


3. ವಲ್ಲಭಭಾಯ್ ಪಟೇಲ್ ಅವರಿಗೆ ಸರ್ದಾರ್ ಎಂಬ ಬಿರುದು ನೀಡಿದವರು ಯಾರು?

    (1)    ಸಿ. ರಾಜಗೋಪಾಲಾಚಾರಿ
    (2)    ಎಮ್.ಕೆ. ಗಾಂಧಿ
    (3)    ಜಿ.ಎಲ್.ನೆಹರೂ
    (4)    ಎಮ್.ಎ. ಜಿನ್ನಾ

ಸರಿ ಉತ್ತರ

(2) ಎಮ್.ಕೆ. ಗಾಂಧಿ


4. ಸರಿಯಾದ ಹೊಂದಾಣಿಕೆ ಅಲ್ಲದ್ದು ಯಾವುದು ?

    (1)    ಬಾಲಗಂಗಾಧರ್ ತಿಲಕ್ – ಬಾಂಬೆ ಅಸೋಸಿಯೇಷನ್
    (2)    ಮೇರಿ ಕಾರ್ಪೆಂಟರ್ – ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್
    (3)    ಸುರೇಂದ್ರನಾಥ್ ಬ್ಯಾನರ್ಜಿ – ಇಂಡಿಯನ್ ನ್ಯಾಷನಲ್ ಕಾನ್ಫರೆನ್ಸ್
    (4)    ಆನಂದ್ ಮೋಹನ್ ಬೋಸ್ – ಇಂಡಿಯನ್ ಸೊಸೈಟಿ

ಸರಿ ಉತ್ತರ

(1) ಬಾಲಗಂಗಾಧರ್ ತಿಲಕ್-ಬಾಂಬೆ ಅಸೋಸಿಯೇಷನ್


5. ಅಕ್ಬರ್ ನ ವಿರುದ್ಧ ದಿಟ್ಟವಾಗಿ ಹೋರಾಡಿದ ಪ್ರಸಿದ್ಧ ರಾಣಿ ಚಾಂದ್ ಬೀಬಿ ಈ ಕೆಳಗಿನ ಯಾವ ರಾಜ್ಯದವಳು?

    (1)    ಬೀರಾರ್
    (2)    ಖಾಂದೇಶ್
    (3)    ಅಹ್ಮದ್ ನಗರ್
    (4)    ವಿಜಯಪುರ (ಬಿಜಾಪುರ)

ಸರಿ ಉತ್ತರ

(3) ಅಹ್ಮದ್ ನಗರ್


6. ಬಾಬರ್ ನ ಮೃತದೇಹದ ಗೋರಿಯನ್ನು ಅವನ ಆಕಾಂಕ್ಷೆಯಂತೆ ನಿರ್ಮಿಸಿದ್ದು ಇಲ್ಲಿ

    (1)    ಕಾಬೂಲ್
    (2)    ಪೆಷಾವರ್
    (3)    ದೆಹಲಿ
    (4)    ಆಗ್ರಾ

ಸರಿ ಉತ್ತರ

(1) ಕಾಬೂಲ್


7. ಇವುಗಳನ್ನು ಏರಿಕೆ ಕಾಲಾನುಕ್ರಮದಲ್ಲಿ ಬರೆಯಿರಿ
    A.    ಮೊದಲ ಪಾಣಿಪತ್ ಯುದ್ಧ
    B.    ದ್ವಿತೀಯ ತರೈನ್ ಯುದ್ಧ
    C.    ರಾಜಧಾನಿಯನ್ನು ದೆಹಲಿಯಿಂದ ದೇವಗಿರಿಗೆ ವರ್ಗಾವಣೆ
    D.    ಅಹ್ಮದ್ ಷಾ ಅಬ್ದುಲ್ ನ ಧಾಳಿ

    (1)    A, B, C, D
    (2)    B, A, C, D
    (3)    C, B, A, D
    (4)    B, C, A, D

ಸರಿ ಉತ್ತರ

(4) B, C, A, D


8. ಪ್ರಾಚೀನ ಭಾರತದ ಸಾಹಿತ್ಯ ಇತಿಹಾಸದಲ್ಲಿ ಪಾಣಿನಿ ಮತ್ತು ಪತಂಜಲಿಯರು ಪ್ರಸಿದ್ಧರು. ಅವರು ಪ್ರವರ್ಧಗೊಂಡಿದ್ದು ಈ ರಾಜಮನೆತನದಡಿಯಲ್ಲಿ

    (1)    ಪುಷ್ಯಭಕ್ತಿ
    (2)    ಶುಂಗರು
    (3)    ಕುಶಾನರು
    (4)    ಗುಪ್ತರು

ಸರಿ ಉತ್ತರ

(2) ಶುಂಗರು


9. ಈ ಕಟ್ಟಡಗಳ ನಿರ್ಮಾಣದ ಏರಿಕೆಯನ್ನು ಕಾಲಾನುಕ್ರಮದಲ್ಲಿ ಬರೆಯಿರಿ.
    A.    ಪುರಿ ಜಗನ್ನಾಥ ದೇವಾಲಯ
    B.    ಮೀನಾಕ್ಷಿ ದೇವಾಲಯ
    C.    ಮಾಮಲ್ಲಪುರಂ ದೇವಾಲಯ
    D.    ಕುತುಬ್ ಮಿನಾರ್
ಸರಿಯಾದ ಉತ್ತರಗಳನ್ನು ಆರಿಸಿ

    (1)    A, B, C, D
    (2)    A, C, B, D
    (3)    B, C, A, D
    (4)    C, A, D, B

ಸರಿ ಉತ್ತರ

(4) C, A, D, B


10. ಫಿರೋಜ್ ಷಾ ತುಘಲಕ್ ನ ಕಾಲದಲ್ಲಿ ದೇಶದ ಕಂದಾಯವನ್ನು ಅನೇಕ ವಿಧಾನಗಳಿಂದ ಸಂಗ್ರಹಿಸಲಾಗುತ್ತಿತ್ತು. ಈ ಪೈಕಿ ಅದರಲ್ಲಿ ಇಲ್ಲದ್ದು ಯಾವುದು.

    (1)    ಭೂಮಿ ಫಲವತ್ತತೆ ಹೆಚ್ಚಳ ಮತ್ತು ಉತ್ಕೃಷ್ಟ ಬೆಳೆಗಳ ಕೃಷಿ
    (2)    ನೀರಿನ ಕರಗಳು
    (3)    ತೋಟಗಳು
    (4)    ಭೂ ಕಂದಾಯ ಹೆಚ್ಚಳ

ಸರಿ ಉತ್ತರ

(4) ಭೂ ಕಂದಾಯ ಹೆಚ್ಚಳ


11. ಪಾರ್ಲಿಮೆಂಟು ಲೋಕಸಭೆಯ ಅವಧಿಯನ್ನು ರಾಷ್ಟ್ರೀಯ ತುರ್ತುಪರಿಸ್ಥಿತಿಯ ಅವಧಿಯಲ್ಲಿ ಮೊದಲಬಾರಿಗೆ ಈ ಅವಧಿಗೆ ವಿಸ್ತರಿಸಬಹುದು.

    (1)    ಒಂದು ತಿಂಗಳು
    (2)    ಮೂರು ತಿಂಗಳು
    (3)    ಆರು ತಿಂಗಳು
    (4)    ಒಂದು ವರ್ಷ

ಸರಿ ಉತ್ತರ

(4) ಒಂದು ವರ್ಷ


12. ಎರಡು ಪಾರ್ಲಿಮೆಂಟ್ ಅಧಿವೇಶನಗಳ ನಡುವೆ ಇರುವ ಗರಿಷ್ಠ ಅಂತರದ ಅವಧಿ

    (1)    ಮೂರು ತಿಂಗಳು
    (2)    ನಾಲ್ಕು ತಿಂಗಳು
    (3)    ಆರು ತಿಂಗಳು
    (4)    ಒಂಬತ್ತು ತಿಂಗಳು

ಸರಿ ಉತ್ತರ

(3) ಆರು ತಿಂಗಳು


13. ಧನ ಮಸೂದೆಯ ಪ್ರಾರಂಭವಾಗುವುದು

    (1)    ಪಾರ್ಲಿಮೆಂಟ್ ನ ಯಾವುದೇ ಸದನದಲ್ಲಿ
    (2)    ಲೋಕಸಭೆಯಲ್ಲಿ ಮಾತ್ರ
    (3)    ರಾಜ್ಯಸಭೆಯಲ್ಲಿ ಮಾತ್ರ
    (4)    ಎರಡೂ ಸದನಗಳ ಜಂಟಿಸಭೆಯಲ್ಲಿ ಮಾತ್ರ

ಸರಿ ಉತ್ತರ

(2) ಲೋಕಸಭೆಯಲ್ಲಿ ಮಾತ್ರ


14. ಲೋಕಸಭೆಯ ಮೊಟ್ಟ ಮೊದಲ ಸ್ಪೀಕರ್ ಯಾರು?

    (1)    ಹುಕುಮ್ ಸಿಂಗ್
    (2)    ಜಿ.ಎಸ್. ಧಿಲ್ಲೋನ್
    (3)    ಜಿ.ವಿ.ಮಾವಲಂಕರ್
    (4)    ಅನಂತಸ್ವಾಮಿ ಅಯ್ಯಂಗ್ಜಾರ್

ಸರಿ ಉತ್ತರ

(3) ಜಿ.ವಿ.ಮಾವಲಂಕರ್


15. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಅವಧಿಗೆ ಮುನ್ನವೇ ತಮ್ಮ ಹುದ್ದೆ ತ್ಯಜಿಸಲು ರಾಜೀನಾಮೆ ಪತ್ರವನ್ನು ಇವರಿಗೆ ನೀಡಬೇಕು.

    (1)    ರಾಷ್ಟ್ರಪತಿ
    (2)    ಭಾರತದ ಮುಖ್ಯ ನ್ಯಾಯಾಧೀಶರು
    (3)    ಕೇಂದ್ರ ಕಾನೂನು ಸಚಿವರು
    (4)    ಪ್ರಧಾನ ಮಂತ್ರಿಯವರು

ಸರಿ ಉತ್ತರ

(1) ರಾಷ್ಟ್ರಪತಿ


16. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ತಮ್ಮ ವಾರ್ಷಿಕ ವರದಿಯನ್ನು ಕೇಂದ್ರಕ್ಕೆ ಸಂಬಂಧಿಸಿದಂತೆ ಸಲ್ಲಿಸುವುದು ಇವರಿಗೆ

    (1)    ರಾಷ್ಟ್ರಪತಿ
    (2)    ಪಾರ್ಲಿಮೆಂಟ್
    (3)    ಯೋಜನಾ ಆಯೋಗದ ಅಧ್ಯಕ್ಷರು
    (4)    ಭಾರತದ ಮುಖ್ಯ ನ್ಯಾಯಾಧೀಶರು

ಸರಿ ಉತ್ತರ

(1) ರಾಷ್ಟ್ರಪತಿ


17. ಭಾರತವು ಫೆಡರಲ್ ವ್ಯವಸ್ಥೆಯ ಸರಕಾರವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಅಧಿಕಾರ ಹಂಚಿಕೆ ಮಾಡಿ ರೂಪುಗೊಂಡಿದೆ. ಆದರೂ ಈ ಕೆಳಗಿನ ಯಾವ ಅಧಿಕಾರವು ಅವರ ನಡುವೆ ಹಂಚಿಕೆ ಆಗಿಲ್ಲ?

    (1)    ಕಾರ್ಯಾಂಗೀಯ
    (2)    ಶಾಸನಾತ್ಮಕ
    (3)    ನ್ಯಾಯಾಂಗೀಯ
    (4)    ವಿತ್ತೀಯ

ಸರಿ ಉತ್ತರ

(3) ನ್ಯಾಯಾಂಗೀಯ


18. ಮೊದಲ ಪಟ್ಟಿ (ಘಟನೆಗಳು) ಮತ್ತು ಎರಡನೇ ಪಟ್ಟಿ (ವರ್ಷಗಳು) ಜೋಡಿಸಿ ಸರಿಯುತ್ತರ ಆರಿಸಿ.

i.

ಭಾರತೀಯ ಜನತಾ
ಪಕ್ಷ ರೂಪುಗೊಂಡಿದ್ದು

a.

1990

ii.

ಮಂಡಲ್ ಆಯೋಗ
ವರದಿ ಸ್ವೀಕಾರ

b.

1980

iii.

ಭಾರತದ ರಾಜ್ಯವೊಂದರಲ್ಲಿ
ಮೊದಲ ಕಮ್ಯುನಿಸ್ಟ್ ಸರ್ಕಾರದ ರಚನೆ

c.

1957

iv.

42ನೇ ತಿದ್ದುಪಡಿಯ
ಸಲುವಳಿ

d.

1976

ಸಂಕೇತಗಳ ಸಹಾಯದಿಂದ ಸರಿಯುತ್ತರವನ್ನು ಆರಿಸಿ

    

 

i

ii

iii

iv

(1)

b

a

c

d

(2)

a

b

d

c

(3)

a

b

c

d

(4)

c

d

b

a

ಸರಿ ಉತ್ತರ

(1) b a c d


19. ಭಾರತದ ಸಾರ್ವಜನಿಕ ವೆಚ್ಚಕ್ಕಾಗಿ ಹಣ ಕುರಿತ ಅನುಮೋದನೆ ಮಾಡುವ ಹಕ್ಕು ಇವರಲ್ಲಿ ಇರುವುದು. ಸರಿಯಾದ ಉತ್ತರ ಆಯ್ಕೆ ಮಾಡಿ
    a.    ಲೋಕಸಭೆ
    b.    ರಾಜ್ಯಸಭೆ
    c.    ವಿಧಾನ ಸಭೆ
    d.    ವಿಧಾನ ಮಂಡಲ
ಸಂಕೇತಗಳ ಸಹಾಯದಿಂದ ಸರಿ ಉತ್ತರವನ್ನು ಆರಿಸಿ

    (1)    a ಮತ್ತು b ಮಾತ್ರ
    (2)    a ಮತ್ತು c ಮಾತ್ರ
    (3)    a, b, ಮತ್ತು c ಮಾತ್ರ
    (4)    ಮೇಲಿನ ಎಲ್ಲವೂ

ಸರಿ ಉತ್ತರ

(2) a ಮತ್ತು c ಮಾತ್ರ


20. ಮೆಂಗ್ ಹೊಂಗ್ವೀರವರು ಇಂಟರ್ ರ್ಪೋಲ್ ನ ನೂತರ ಅಧ್ಯಕ್ಷರಾಗಿ ಆಯ್ಕೆಯಾದುದು ಯಾವ ರಾಷ್ಟ್ರದಲ್ಲಿ?

    (1)    ಜಪಾನ್
    (2)    ಥೈಲ್ಯಾಂಡ್
    (3)    ಚೀನಾ
    (4)    ಮಲೇಶಿಯಾ

ಸರಿ ಉತ್ತರ

(3) ಚೀನಾ


21. ಭಾರತದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ.

    (1)    ನವೆಂಬರ್ 8
    (2)    ನವೆಂಬರ್7
    (3)    ನವೆಂಬರ್ 5
    (4)    ನವೆಂಬರ್ 6

ಸರಿ ಉತ್ತರ

(2) ನವೆಂಬರ್7


22. ಕೇಂದ್ರದ ಯಾವ ಸಚಿವರು ‘‘ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ’’ ಯೋಜನೆಯನ್ನು ನವದೆಹಲಿಯಲ್ಲಿ ಪ್ರಾರಂಭಿಸಿದರು?

    (1)    ಮನೇಕಾ ಗಾಂ
    (2)    ಎಂ.ವೆಂಕಯ್ಯ ನಾಯ್ಡು
    (3)    ನರೇಂದ್ರ ಮೋದಿ
    (4)    ಜಗತ್ ಪ್ರಕಾಶ್ ನಡ್ಡಾ

ಸರಿ ಉತ್ತರ

(4) ಜಗತ್ ಪ್ರಕಾಶ್ ನಡ್ಡಾ


23. ಈ ಕೆಳಗಿನವುಗಳಲ್ಲಿ ಕುಕಾ ಚಳುವಳಿ ಪ್ರಾರಂಭವಾದ ಪ್ರದೇಶ ಯಾವುದು?

    (1)    ಯುನೈಟೆಡ್ ಪ್ರಾಂತ್ಯಗಳು
    (2)    ಬಾಂಬೆ
    (3)    ಪಂಜಾಬ್
    (4)    ಬಂಗಾಳ್

ಸರಿ ಉತ್ತರ

(3) ಪಂಜಾಬ್


24. ರಾಷ್ಟ್ರೀಯ ದಿನದರ್ಶಿಕೆಯ ಮೊದಲ ತಿಂಗಳು ಶಕ ವರ್ಷದಲ್ಲಿ

    (1)    ಕಾರ್ತಿಕ
    (2)    ಚೈತ್ರ
    (3)    ಫಾಲ್ಗುಣ
    (4)    ಶ್ರಾವಣ

ಸರಿ ಉತ್ತರ

(2) ಚೈತ್ರ


25. ಶಾಂತಿ ಮತ್ತು ಭದ್ರತೆಯ ನಿರ್ವಹಣೆ ಕುರಿತು ವ್ಯವಹರಿಸುವ ವಿಶ್ವ ಸಂಸ್ಥೆ ಏಜೆನ್ಸಿ

    (1)    ಜನರಲ್ ಅಸೆಂಬ್ಲಿ (ಸಾಮಾನ್ಯ ಸಭೆ)
    (2)    ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಅಂತರರಾಷ್ಟ್ರೀಯ ನ್ಯಾಯಾಲಯ)
    (3)    ಸೆಕ್ರೆಟೇರಿಯಟ್ (ಸಚಿವಾಲಯ)
    (4)    ಸೆಕ್ಯೂರಿಟಿ ಕೌನ್ಸಿಲ್ (ಭದ್ರತಾ ಸಮಿತಿ)

ಸರಿ ಉತ್ತರ

(4) ಸೆಕ್ಯೂರಿಟಿ ಕೌನ್ಸಿಲ್ (ಭದ್ರತಾ ಸಮಿತಿ)


26. ‘ಲೈಫ್ ಆಫ್ ಪೈ’ ಚಲನಚಿತ್ರವು ಇವರ ಕಾದಂಬರಿ ಆಧರಿಸಿದ್ದು

    (1)    ಮಾರ್ಕ್ ಟ್ವೈನ್
    (2)    ಅಲೆಕ್ಸಾಂಡರ್ ಡೂಮಾಸ್
    (3)    ಯಾನ್ ಮಾರ್ಟೆಲ್
    (4)    ಎರಿಕ್ ಕಾಸ್ಟನರ್

ಸರಿ ಉತ್ತರ

(3) ಯಾನ್ ಮಾರ್ಟೆಲ್


27. ಹಡಗುಗಳು ಮತ್ತು ಅವುಗಳ ವರ್ಗ/ಕಾರ್ಯಗಳನ್ನು ಹೊಂದಿಸಿ.

i.

ಐಎನ್ಎಸ್
ಸಾಗರಧ್ವನಿ

A.

ಜಲಾಂತರ್ಗಾಮಿ
ಪ್ರತಿ ಕಾರ್ವೆಟ್

ii.

ಐಎನ್ಎಸ್
ಅರಿಹಂತ್

B.

ನ್ಯೂಕ್ಲಿಯರ್
ಪವರ್ ನ್ಯೂಕ್ಲಿಯರ್ ಧಾಳಿ ಜಲಾಂತರ್ಗಾಮಿ

iii.

ಐಎನ್ಎಸ್
ತಿರ್

C.

ಸಾಗರದಾಳ
ಪ್ರಯೋಗ ಮತ್ತು ಸಂಶೋಧನಾ ಹಡಗು

iv.

ಐಎನ್ಎಸ್
ಕದ್ಮತ್

D.

ಟಾರ್ಪೆಡೋ
ಮರು ಪಡೆಯುವಿಕೆ ಹಡಗು

 

 

E.

ತರಬೇತಿ
ಹಡಗು

 ಸಂಕೇತಗಳ ಸಹಾಯದಿಂದ ಸರಿಯುತ್ತರವನ್ನು ಆರಿಸಿ

 

i

ii

iii

iv

(1)

E

A

D

E

(2)

B

D

E

A

(3)

C

E

A

B

(4)

C

B

E

A

ಸರಿ ಉತ್ತರ

(4) C B E A


28. ಕೇಂದ್ರ ಸಂಶೋಧನಾ ಸಂಸ್ಥೆಗಳಲ್ಲಿರುವ ಸ್ಥಳವನ್ನು ಪತ್ತೆಮಾಡಿ.

i.

ಡೆಹ್ರಾಡೂನ್

A.

ಸೆಂಟ್ರಲ್
ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್

ii.

ಬೆಂಗಳೂರು

B.

ಇಂಡಿಯನ್
ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಮ್

iii.

ಜಂಷೆಡ್
ಪುರ

C.

ನ್ಯಾಷನಲ್
ಫಿಸಿಕಲ್ ಲ್ಯಾಬೊರೇಟರಿ

iv.

ಲಕ್ನೋ

D.

ನ್ಯಾಷನಲ್
ಏರೋಸ್ಪೇಸ್ ಲ್ಯಾಬೊರೇಟರಿಗಳು

 

 

E.

ಇಂಡಿಯನ್
ಮೆಟಲರ್ಜಿಕಲ್ ಲ್ಯಾಬೊರೇಟರಿ

ಸಂಕೇತಗಳ
ಸಹಾಯದಿಂದ ಸರಿಯುತ್ತರವನ್ನು ಆರಿಸಿ.

 

i

ii

iii

iv

(1)

B

D

A

E

(2)

E

C

D

B

(3)

C

E

B

A

(4)

B

D

E

A

ಸರಿ ಉತ್ತರ

(4) B D E A


29. ವಿಕಿಲೀಕ್ಸ್ ನ ಸ್ಥಾಪಕ ಜೂಲಿಯನ್ ಅಸಾಂಜ್ ಸ್ವೀಡನ್ ಗೆ ಉಚ್ಛಾಟನೆ ತಪ್ಪಿಸಿಕೊಳ್ಳಲು ಆಸರೆ ಪಡೆದಿದ್ದು ಇಲ್ಲಿ?

    (1)    ಬ್ರೆಜಿಲ್ ರಾಯಭಾರ ಕಚೇರಿ
    (2)    ಕ್ಯೂಬಾ ರಾಯಭಾರ ಕಚೇರಿ
    (3)    ಇಕ್ವೆಡೊರ್ ರಾಯಭಾರ ಕಚೇರಿ
    (4)    ಪರಾಗ್ವೆ ರಾಯಭಾರ ಕಚೇರಿ

ಸರಿ ಉತ್ತರ

(3) ಇಕ್ವೆಡೊರ್ ರಾಯಭಾರ ಕಚೇರಿ


30. ಭಾರತದ ಕೃಷಿ ವಲಯಕ್ಕೆ ಸಂಬಂಧಿಸಿದ ಬಾಬ್ತುಗಳನ್ನು ಹೊಂದಿಸಿ ಬರೆಯಿರಿ.

i.

ರೌಂಡ್
ಕ್ರಾಂತಿ

A.

ತೈಲ
ಬೀಜಗಳು

ii.

ಬೂದು
ಕ್ರಾಂತಿ

B.

ಮೀನು

iii.

ಪಿಂಗ್
ಕ್ರಾಂತಿ

C.

ಆಲೂಗೆಡ್ಡೆ

iv.

ಹಳದಿ
ಕ್ರಾಂತಿ

D.

ಸೀಗಡಿ

 

 

E.

ಫಲವತ್ಕಾರಕ

 ಸಂಕೇತಗಳ ಸಹಾಯದಿಂದ ಸರಿಯುತ್ತರವನ್ನು ಆರಿಸಿ.

 

i

ii

iii

iv

(1)

C

E

D

A

(2)

D

A

C

B

(3)

E

C

B

D

(4)

B

D

E

C

ಸರಿ ಉತ್ತರ

(1) C E D A


31. ಸಾಳುವ ನರಸಿಂಹ ಸಂಗಮ ವಂಶವನ್ನು ಮುಕ್ತಾಯ ಮಾಡಿ ವಿಜಯನಗರ ವಂಶ ಆಳ್ವಿಕೆ ಪ್ರಾರಂಭಿಸಿದ್ದು ಈ ರಾಜರ ಆಳ್ವಿಕೆಯ ಕಾಲದಲ್ಲಿ

    (1)    ವಿರೂಪಾಕ್ಷ III
    (2)    ಮಲ್ಲಿಕಾರ್ಜುನ
    (3)    ಪ್ರೌಢರಾಯ
    (4)    ದೇವರಾಯ II

ಸರಿ ಉತ್ತರ

(3) ಪ್ರೌಢರಾಯ


32. ಕೆಳದಿಯ ನಾಯಕರು ಪಾಳೆಯಗಾರರಾಗಿದ್ದುದು ಇವರಿಗೆ

    (1)    ಮೈಸೂರರಸರು
    (2)    ವಿಜಯನಗರ ಅರಸರು
    (3)    ಆದಿಲ್ ಷಾಹಿ ಅರಸರು
    (4)    ಮೇಲಿನ ಯಾವುವೂ ಅಲ್ಲ

ಸರಿ ಉತ್ತರ

(2) ವಿಜಯನಗರ ಅರಸರು


33. ಇಸಾಮಿ ಆಸ್ಥಾನ ಕವಿ ಆಗಿದ್ದುದು ಇವರ ಆಸ್ಥಾನದಲ್ಲಿ

    (1)    ಅಲ್ಲಾ ಉದ್ದೀನ್ ಹಸನ್
    (2)    ಮಹಮದ ಷಾ I
    (3)    ಫಿರೋಜ್ ಷಾ
    (4)    ಅಹ್ಮದ್ ಷಾ

ಸರಿ ಉತ್ತರ

(1) ಅಲ್ಲಾ ಉದ್ದೀನ್ ಹಸನ್


34. ಭಾರತದಲ್ಲಿ ಬೆಳೆ ಇಳುವರಿ ತಗ್ಗಿಕೆಗೆ ಕಾರಣ
    1.     ಸಣ್ಣ ಗಾತ್ರದ ಹಿಡುವಳಿಗಳು
    2.    ಸಾಂಪ್ರದಾಯಿಕ ಕೃಷಿ ವಿಧಾನ
    3.    ರೈತರ ಸಮೂಹ ಅನಕ್ಷರತೆ
    4.    ಕೃಷಿ ಯಾಂತ್ರಕತೆಯ ಕೀಳುಮಟ್ಟ
ಸಂಕೇತಗಳ ಸಹಾಯದಿಂದ ಸರಿಯುತ್ತರವನ್ನು ಆರಿಸಿ.

    (1)    1, 2, ಮತ್ತು 3
    (2)    1, 2, ಮತ್ತು 4
    (3)    2, 3, ಮತ್ತು 4
    (4)    1, 3, ಮತ್ತು 4

ಸರಿ ಉತ್ತರ

(2) 1, 2, ಮತ್ತು 4


35. ಪಟ್ಟಿ I ಮತ್ತು ಪಟ್ಟಿ II ಗಳನ್ನು ಹೊಂದಿಸಿ ಮತ್ತು ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿ ಉತ್ತರವನ್ನು ಆರಿಸಿ.

 

ಪಟ್ಟಿ-I
(ಪಂಗಡಗಳು)

 

ಪಟ್ಟಿ-II
(ನೆಲೆಸಿರುವ ಪ್ರದೇಶ)

A.

ಆದಿವಾಸಿಗಳು

I.

ಕೇರಳ

B.

ಮೊಪ್ಲಾಗಳು

II.

ನೀಲಗಿರಿ
ಬೆಟ್ಟಗಳು

C.

ತೋಡ

III.

ಮಣಿಪುರ

D.

ಅಂಗಾಮಿಗಳು

IV.

ಮಧ್ಯಪ್ರದೇಶ

ಸಂಕೇತಗಳು

 

A

B

C

D

(1)

IV

II

I

III

(2)

IV

I

II

III

(3)

IV

I

III

II

(4)

IV

III

II

I

ಸರಿ ಉತ್ತರ

(2) IV I II III


36. ಯಾವುದೇ ಮಿಲಿಯನ್ ಜನಸಂಖ್ಯಾ ನಗರವನ್ನು ಹೊಂದಿಲ್ಲದ ರಾಜ್ಯ ಯಾವುದು
    1.    ಚತ್ತೀಸ್ ಘಡ್
    2.    ಜಾರ್ ಖಂಡ್
    3.    ಒಡಿಶಾ
    4.    ಕೇರಳ
ಸಂಕೇತಗಳ ಸಹಾಯದಿಂದ ಸರಿಯುತ್ತರವನ್ನು ಆರಿಸಿ

    (1)    1 ಮತ್ತು 3
    (2)    1, 2 ಮತ್ತು 3
    (3)    1, 4 ಮತ್ತು 3
    (4)    2, 3 ಮತ್ತು 4

ಸರಿ ಉತ್ತರ

(1) 1 ಮತ್ತು 3


37. ಈ ಹೇಳಿಕೆಗಳನ್ನು ಗಮನಿಸಿ ಸಂಕೇತವನ್ನಾಧರಿಸಿ ಸರಿಯುತ್ತರವನ್ನು ಹುಡುಕಿ
    A.    ಭಾರತದ ಸಾಗರಾವೃತ ಗಡಿಯು ಪ್ರಧಾನ ಭೂಮಿ ಸೇರಿದಂತೆ 6100 ಕಿ.ಮೀ.
    B.    ಭಾರತ (ಪಾಕಿಸ್ತಾನ) ಆಫ್ಘಾನಿಸ್ತಾನ ಗಡಿಯನ್ನು ಡ್ಯುರಾಂಡ್ ರೇಖೆ ಎನ್ನಲಾಗುವುದು
    C.    ಭಾರತದ ಸಾಗರಾವೃತ್ತ ಗಡಿಯು ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪ ಸೆರಿದಂತೆ 7516 ಕಿ.ಮೀ.
    D.    ಪಾಕಿಸ್ತಾನದೊಂದಿಗೆ ಗಡಿ ಅಂತಿಮಗೊಳಿಸಿದ್ದು ರ್ಯಾಡ್ ಕ್ಲಿಫ್ಅವಾರ್ಡ್ ನೊಂದಿಗೆ
ಸಂಕೇತಗಳು

    (1)    A, B, ಮತ್ತು C ಸರಿ
    (2)    A, B, ಮತ್ತು D ಸರಿ
    (3)    A, C, D ಸರಿ
    (4)    ಮೇಲಿನ ಎಲ್ಲವೂ

ಸರಿ ಉತ್ತರ

(4) ಮೇಲಿನ ಎಲ್ಲವೂ


38. ವಿಸ್ತೀರ್ಣಾಧಾರಿತವಾಗಿ ವಿಶ್ವದಲ್ಲಿ ಭಾರತದ ಸ್ಥಾನ

    (1)    ಐದನೆಯದು
    (2)    ಏಳನೆಯದು
    (3)    ಆರನೆಯದು
    (4)    ಎಂಟನೆಯದು

ಸರಿ ಉತ್ತರ

(2) ಏಳನೆಯದು


39. ಭಾರತೀಯ ಭೂಗರ್ಭೀಯ ಕಾಲಮಾಪಕದಲ್ಲಿ ಸರಿಯಾದ ಕಾಲನುಕ್ರಮಣಿಕೆ ಶ್ರೇಣಿ

    (1)    ಆರ್ಕಿಯನ್, ಪುರಾಣ, ದ್ರಾವಿಡ, ಆರ್ಯನ್
    (2)    ಆರ್ಕಿಯನ್, ಆರ್ಯನ್ , ಪುರಾಣ ದ್ರಾವಿಡ,
    (3)    ಪುರಾಣ, ದ್ರಾವಿಡ, ಆರ್ಕಿಯನ್, ಆರ್ಯನ್
    (4)    ಪುರಾಣ, ಆರ್ಕಿಯನ್, ದ್ರಾವಿಡ, ಆರ್ಯನ್

ಸರಿ ಉತ್ತರ

(1) ಆರ್ಕಿಯನ್, ಪುರಾಣ, ದ್ರಾವಿಡ, ಆರ್ಯನ್


40. ಓಣಮ್ ಈ ರಾಜ್ಯದ ಪ್ರಮುಖ ಹಬ್ಬ

    (1)    ತಮಿಳುನಾಡು
    (2)    ಕೇರಳ
    (3)    ಆಂಧ್ರ ಪ್ರದೇಶ
    (4)    ಕರ್ನಾಟಕ

ಸರಿ ಉತ್ತರ

(2) ಕೇರಳ


41. ಸಂವಿಧಾನದ 371J ಪರಿಚ್ಛೇದದ ಅನ್ವಯ ಹೈದರಾಬಾದ್ ಕರ್ನಾಟಕ ಪ್ರದೇಶದ ಆರು ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡಿರುವುದು

    (1)    ಪ್ರತ್ಯೇಕ ಅಭಿವೃದ್ಧಿ ಮಂಡಳಿ ನಿರ್ಮಿಸಲು
    (2)    ಆ ಪ್ರದೇಶದಲ್ಲಿನ ಪ.ಜಾ./ಪ.ಪಂ. ಕುಟುಂಬಗಳಿಗೆ ಎಲ್ಲಾ ಸವಲತ್ತು ಒದಗಿಸಿ ಅಭಿವೃದ್ಧಿ ಪಡಿಸಲು
    (3)    ಪ್ರದೇಶವನ್ನು ರಾಜಕೀಯವಾಗಿ ಮೇಲೆತ್ತಲು
    (4)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(1) ಪ್ರತ್ಯೇಕ ಅಭಿವೃದ್ಧಿ ಮಂಡಳಿ ನಿರ್ಮಿಸಲು


42. ಈ ಕೆಳಗಿನವುಗಳಲ್ಲಿ ಭಾರತದ ಮೊದಲನೆಯ ಜೈವಿಕ ವನ್ಯಧಾಮವು ಯಾವುದು?

    (1)    ಬ್ರಹ್ಮಗಿರಿ
    (2)    ನೀಲಗಿರಿ
    (3)    ಪಚಮರಶಿ
    (4)    ಸುಂದರಬನ

ಸರಿ ಉತ್ತರ

(2) ನೀಲಗಿರಿ


43. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಅಧ್ಯಕ್ಷನಾಗಲು ಚುನಾವಣೆಗೆ ಅಗತ್ಯವಾದ ಅರ್ಹತೆಯಾಗಿಲ್ಲ?

    (1)    ಅವನು/ಳು ಭಾರತದ ಪೌರರಾಗಿರಬೇಕು
    (2)    ಅವನು/ಳು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
    (3)    ಅವನ/ಳ ವಯಸ್ಸು 35 ವರ್ಷಗಳಿಗಿಂತ ಕಡಿಮೆ ಇರಬಾರದು
    (4)    ಅವನು/ಳು ಭಾರತ ಸರ್ಕಾರದಡಿ ಲಾಭದಾಯಕವಾದ ಯಾವುದೇ ಹುದ್ದೆಯನ್ನು ಧಾರಣ ಮಾಡಿರಬಾರದು

ಸರಿ ಉತ್ತರ

(2) ಅವನು/ಳು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.


44. ಭಾರತ ಬೃಹತ್ ಆರ್ಥಿಕ ನೀತಿಗಳು ಈ ಕೆಳಗಿನವುಗಳಲ್ಲಿ ಯಾವುದನ್ನು ಹಿಂಬಾಲಿಸುತ್ತವೆ?
    a.    ಭಾರತ ಸರ್ಕಾರ
    b.    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
    c.    ವಿತ್ತೀಯ ಮಂತ್ರಿಮಂಡಲ
    d.    ಹಣಕಾಸು ಆಯೋಗ

ಕೆಳಗೆ ಕೊಟ್ಟಿರುವ ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ

    (1)    a ಮತ್ತು b
    (2)    b ಮತ್ತು c
    (3)    c ಮತ್ತು d
    (4)    a ಮತ್ತು c

ಸರಿ ಉತ್ತರ

(1) a ಮತ್ತು b


45. ‘ನರೇಗಾ’ ವು ಇದಕ್ಕೆ ಉದಾಹರಣೆ
    a.    ಗ್ರಾಮೀಣ ಹಣಕಾಸು
    b.    ಗ್ರಾಮೀಣ ಕೈಗಾರಿಕೀಕರಣ
    c.    ಸಾರ್ವಜನಿಕ ಸ್ವತ್ತಿನ ಸೃಷ್ಟಿ
    d.    ಜೀವನೋಪಾಯ ಭದ್ರತೆ
ಕೆಳಗೆ ಕೊಟ್ಟಿರುವ ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆಯ್ಕೆ ಮಾಡಿ

    (1)    a ಮತ್ತು b ಮಾತ್ರ
    (2)    a, c ಮತ್ತು d ಮಾತ್ರ
    (3)    a ಮತ್ತು d ಮಾತ್ರ
    (4)    c ಮತ್ತು d ಮಾತ್ರ

ಸರಿ ಉತ್ತರ

(4) c ಮತ್ತು d ಮಾತ್ರ


46. ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ನಿಯೋಗದ ಎರಡು ಘಟಕಗಳೆಂದರೆ
    a.    ನಗರ ಸೇವೆಗಳ ಮಾನದಂಡ (ಬೆಂಚ್ ಮಾರ್ಕಿಂಗ್)
    b.    ನಗರ ಮೂಲಭೂತ ಸೌಕರ್ಯಗಳು ಮತ್ತು ಆಳ್ವಿಕೆ
    c.    ನಗರ ಸ್ಥಳೀಯ ಹಣಕಾಸಿನ ಮೌಲ್ಯಮಾಪನ
    d.    ನಗರದ ಬಡವರಿಗೆ ಮೂಲ ಸೌಕರ್ಯಗಳು
ಕೆಳಗೆ ಕೊಟ್ಟಿರುವ ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ

    (1)    a, b ಮತ್ತು c
    (2)    a, b ಮತ್ತು d
    (3)    b ಮತ್ತು d
    (4)    c ಮತ್ತು d

ಸರಿ ಉತ್ತರ

(3) b ಮತ್ತು d


47. ಕರ್ನಾಟಕದಲ್ಲಿನ ‘ವಾತ್ಸಲ್ಯ ವಾಣಿ’ ಕಾರ್ಯಕ್ರಮವು ಇದಕ್ಕೆ ಸಂಬಂಧಿಸಿದೆ.
    a.    IMR ಮತ್ತು MMR ಗಳನ್ನು ಕುಗ್ಗಿಸುವುದು
    b.    ಸಾಂಸ್ಥಿಕ ಪ್ರಸವಗಳ ಹೆಚ್ಚಳ
    c.    ನಿರಾಧಾರ ಮಹಿಳೆಯರಿಗೆ ಸಮಾಲೋಚನೆಗಳನ್ನೊದಗಿಸುವುದು
    d.    ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರಿಗೆ ಪುನರ್ ವಸತಿ
ಕೆಳಗೆ ಕೊಟ್ಟಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ.

    (1)    a ಮತ್ತು b ಮಾತ್ರ
    (2)    b, ಮತ್ತು c ಮಾತ್ರ
    (3)    b, c ಮತ್ತು d ಮಾತ್ರ
    (4)    ಮೇಲಿನ ಎಲ್ಲವೂ

ಸರಿ ಉತ್ತರ

(1) a ಮತ್ತು b ಮಾತ್ರ


48. ಅಲಿಪ್ತ ಚಳುವಳಿಯ ಮೂಲತತ್ವಗಳಡಿ ಈ ಕೆಳಗಿನ ಯಾವುದು ಬರುವುದಿಲ್ಲ?

    (1)    ಪರಸ್ಪರ ಆಕ್ರಮಣ ಪ್ರವೃತ್ತಿ ರಹಿತತೆ
    (2)    ಸಮಾನತೆ ಮತ್ತು ಪರಸ್ಪರ ಲಾಭ
    (3)    ಶಾಂತಿಯುತ ಸಹ ಅಸ್ತಿತ್ವ
    (4)    ಮಾರುಕಟ್ಟೆ ಬಲಗಳ ಭೇದಿಸುವಿಕೆ

ಸರಿ ಉತ್ತರ

(4) ಮಾರುಕಟ್ಟೆ ಬಲಗಳ ಭೇದಿಸುವಿಕೆ


49. ಈ ಕೆಳಗಿನವುಗಳಲ್ಲಿ ಪ್ರಾದೇಶಿಕ ಸಹಕಾರದ ದಕ್ಷಿಣ ಏಷಿಯನ್ ಸಭೆಯಲ್ಲಿ ಸದಸ್ಯನಾಗಿಲ್ಲದ ರಾಷ್ಟ್ರವನ್ನು ಒಳಗೊಂಡ ಗುಂಪು ಯಾವುದು?

    (1)    ಭಾರತ, ಶ್ರೀಲಂಕಾ, ಮಾಲ್ಡೀವ್ಸ್
    (2)    ಮಾಲ್ಡೀವ್ಸ್, ಭೂತಾನ್, ಬಾಂಗ್ಲಾದೇಶ್
    (3)    ಪಾಕಿಸ್ತಾನ, ಮಾಲ್ಡೀವ್ಸ್, ಬಾಂಗ್ಲಾದೇಶ್
    (4)    ಪಾಕಿಸ್ತಾನ, ಚೀನಾ, ಭೂತಾನ್

ಸರಿ ಉತ್ತರ

(4) ಪಾಕಿಸ್ತಾನ, ಚೀನಾ, ಭೂತಾನ್


50. ಭಾರತದಲ್ಲಿ ಸಾರ್ವಜನಿಕ ವಲಯ ಉಕ್ಕಿನ ಸ್ಥಾವರಗಳಿರುವ ಸ್ಥಳ ಹೊಂದಿಸಿ ಬರೆಯಿರಿ

A.

ರೂರ್ಕೆಲಾ
(ಒಡಿಶಾ)

I.

ರಷ್ಯಾ
ಸರ್ಕಾರ

B.

ಭಿಲಾಯ್
(ಮಧ್ಯಪ್ರದೇಶ್)

II.

ಜರ್ಮನಿ

C.

ದುರ್ಗಾಪುರ್
(ಪಶ್ಚಿಮ ಬಂಗಾಳ)

III.

ಬ್ರಿಟಿಷ್
ಸರ್ಕಾರ

ಕೆಳಗೆ
ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ

 

A

B

C

(1)

III

II

I

(2)

I

II

III

(3)

II

I

III

(4)

II

III

I

ಸರಿ ಉತ್ತರ

(3) II I III


51. ಭಾರತದಲ್ಲಿ ವಿವಿಧ ರಾಜ್ಯಗಳ ನಡುವೆ ಸಂಪನ್ಮೂಲಗಳ ಹಂಚಿಕೆಯನ್ನು ಇವರ ಶಿಫಾರಸ್ಸಿನ ಮೇರೆಗೆ ಮಾಡಲಾಗುತ್ತದೆ?

    (1)    ಹಣಕಾಸು ಆಯೋಗ
    (2)    ಯೋಜನಾ ಆಯೋಗ
    (3)    ಪ್ರಧಾನ ಮಂತ್ರಿಗಳ ಕಚೇರಿ
    (4)    ರಾಷ್ಟ್ರೀಯ ಅಭಿವೃದ್ಧಿ ಮಂಡಳಿ

ಸರಿ ಉತ್ತರ

(1) ಹಣಕಾಸು ಆಯೋಗ


52. ಭಾರತದ ಆರ್ಥಿಕ ಸಮೀಕ್ಷೆ ಯನ್ನು ಪ್ರಕಟಿಸಿರುವುದು

    (1)    ಹಣಕಾಸಿನ ಮಂತ್ರಿಮಂಡಲ
    (2)    ಹಣಕಾಸು ಆಯೋಗ
    (3)    ಯೋಜನಾ ಆಯೋಗ
    (4)    ಭಾರತೀಯ ರಿಸರ್ವ್ ಬ್ಯಾಂಕ್

ಸರಿ ಉತ್ತರ

(1) ಹಣಕಾಸಿನ ಮಂತ್ರಿಮಂಡಲ


53. ಹಣದ ಅಪಮೌಲ್ಯೀಕರಣವು ಇದಕ್ಕೆ ದಾರಿ ಮಾಡುತ್ತದೆ.

    (1)    ದೇಶೀಯ ಬೆಲೆಗಳಲ್ಲಿ ಕುಸಿತ
    (2)    ದೇಶೀಯ ಬೆಲೆಗಳಲ್ಲಿ ಹೆಚ್ಚಳ
    (3)    ದೇಶೀಯ ಬೆಲೆಗಳಲ್ಲಿ ಏರಿಳಿತ
    (4)    ದೇಶೀಯ ಬೆಲೆಗಳ ಮೇಲೆ ಯಾವುದೇ ಪ್ರಭಾವವಿಲ್ಲ

ಸರಿ ಉತ್ತರ

(1) ದೇಶೀಯ ಬೆಲೆಗಳಲ್ಲಿ ಕುಸಿತ


54. ಆರ್ ಬಿ ಐ ನಗದು ಮೀಸಲು ಅನುಪಾತವನ್ನು ಕೆಳಗಿಳಿಸಿದಲ್ಲಿ ಅದು ಸಾಲ ಸೃಷ್ಟಿಯ ಮೇಲೆ ಬೀರುವ ಪ್ರಭಾವವೆಂದರೆ

    (1)    ಅದನ್ನು ಹೆಚ್ಚಿಸುತ್ತದೆ
    (2)    ಅದನ್ನು ಕುಗ್ಗಿಸುತ್ತದೆ
    (3)    ಅದನ್ನು ತೆಗೆದು ಹಾಕುತ್ತದೆ
    (4)    ಅದನ್ನು ಅಸ್ಥಿರಗೊಳಿಸುತ್ತದೆ.

ಸರಿ ಉತ್ತರ

(1) ಅದನ್ನು ಹೆಚ್ಚಿಸುತ್ತದೆ


55. ನಬಾರ್ಡ್ ನ್ನು ಇದರ ಶಿಫಾರಸ್ಸಿನ ಮೇರೆಗೆ ಸ್ಥಾಪಿಸಲಾಯಿತು

    (1)    ಸಾರ್ವಜನಿಕ ಲೆಕ್ಕ ಸಮಿತಿ
    (2)    ಹಣಕಾಸಿನ ಸುಧಾರಣಾ ಸಮಿತಿ
    (3)    ರಂಗರಾಜನ್ ಸಮಿತಿ
    (4)    ಶಿವರಾಮನ್ ಸಮಿತಿ

ಸರಿ ಉತ್ತರ

(4) ಶಿವರಾಮನ್ ಸಮಿತಿ


56. 10 ನೆಯ WTO ನ _______________ ಸಮ್ಮೇಳನವು 2015ರ ಡಿಸೆಂಬರ್ 15-18ರ ನಡುವೆ ನಡೆದಿದ್ದು ಇಲ್ಲಿ

    (1)    ನೈರೋಬಿ
    (2)    ಸಿಂಗಾಪುರ
    (3)    ಬಾಲಿ
    (4)    ದೋಹಾ

ಸರಿ ಉತ್ತರ

(1) ನೈರೋಬಿ


57. 2011ರ ಜನಗಣತಿಯ ಮೇರೆಗೆ ಈ ಕೆಳಗಿನ ಯಾವ ರಾಜ್ಯಗಳು ಕೇರಳ ಮತ್ತು ಲಕ್ಷದ್ವೀಪದ ನಂತರ 3ನೇ ಸ್ಥಾನವನ್ನು ಮಹಿಳಾ ಸಾಕ್ಷರತೆಯಲ್ಲಿ ಗಳಿಸಿದೆ?

    (1)    ಗೋವಾ
    (2)    ಮೇಘಾಲಯ
    (3)    ಮಿಜೋರಾಂ
    (4)    ತ್ರಿಪುರ

ಸರಿ ಉತ್ತರ

(3) ಮಿಜೋರಾಂ


58. ಕೇಂದ್ರಸರ್ಕಾರದ ಪಹಲ್ ಯೋಜನೆಯು ಇದಕ್ಕೆ ಸಂಬಂಧಿಸಿದೆ

    (1)    ಗ್ರಾಹಕರಿಗೆ ಎಲ್ಪಿಜಿ ಸಬ್ಸಿಡಿಯ ವರ್ಗಾವಣೆ
    (2)    ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ
    (3)    ಹೆಣ್ಣುಮಕ್ಕಳ ಶಿಕ್ಷಣವನ್ನು ವೃದ್ಧಿಸುವುದು
    (4)    ಹಿರಿಯ ನಾಗರಿಕರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು

ಸರಿ ಉತ್ತರ

(1) ಗ್ರಾಹಕರಿಗೆ ಎಲ್ಪಿಜಿ ಸಬ್ಸಿಡಿಯ ವರ್ಗಾವಣೆ


59. ವಾಯುಗೋಳ (ಸ್ಟ್ರಾಟೋಸ್ಪಿಯರ್) ದಲ್ಲಿ ಲಭ್ಯವಿರುವ ಅನಿಲವು ಸೂರ್ಯನ ಬೆಳಕಿನಿಂದ ನೇರಳಾತೀತ ವಲಯವನ್ನು ಶೋಧಿಸುತ್ತದೆ ಮತ್ತು ಜೀವಿಗಳ ಮೇಲೆ ಉಂಟುಮಾಡುವ ವಿಕಿರಣದ ಹಾನಿಯ ವಿರುದ್ಧವಾಗಿ ಪರಿಣಾಮಕಾರಿ ಕವಚವನ್ನು ಒದಗಿಸುತ್ತದೆ ಇದು

    (1)    ಹೀಲಿಯಂ
    (2)    ಓರೆನ್
    (3)    ಆಮ್ಲಜನಕ
    (4)    ಮೀಥೇನ್

ಸರಿ ಉತ್ತರ

(2) ಓರೆನ್


60. ಪಂಚಾಯತಿ ರಾಜ್ ಸಂಸ್ಥೆಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸುವುದು ಮತ್ತು ಮೇಲ್ವಿಚಾರಣೆಯನ್ನು ನಡೆಸುವದು

    (1)    ಭಾರತದ ಚುನಾವಣಾ ಆಯೋಗ
    (2)    ರಾಜ್ಯ ಚುನಾವಣಾ ಆಯೋಗ
    (3)    ಜಿಲ್ಲಾ ಚುನಾವಣಾ ಅಧಿಕಾರಿ
    (4)    ಸಂಬಂಧಿತ ರಿಟರ್ನಿಗ್ ಅಧಿಕಾರಿ

ಸರಿ ಉತ್ತರ

(2) ರಾಜ್ಯ ಚುನಾವಣಾ ಆಯೋಗ-


61. ಸಂಕೇತಗಳನ್ನು ಉಪಯೋಗಿಸಿ ಪಟ್ಟಿ I ನ್ನು ಪಟ್ಟಿ II ರೊಂದಿಗೆ ಹೊಂದಿಸಿ.

 

List – I

 

List – II

a.

ಸಾಂತ್ವನ

i.

ಗ್ರಾಮೀಣ
ಮೂಲಭೂತ ಸೌಕರ್ಯಗಳ ಅಭಿವೃದ್ಧಿ

b.

ಭಾಗ್ಯಲಕ್ಷ್ಮಿ

ii.

ಗ್ರಾಮೀಣ
ಜೀವನೋಪಾಯ ಭದ್ರತೆ

c.

ಭಾರತ್
ನಿರ್ಮಾಣ್

iii.

ಲಿಂಗಾನುಪಾತದ
ಸುಧಾರಣೆ

d.

ಅಜೀವಿಕಾ

iv.

ನೊಂದ
ಮಹಿಳೆಯರ ಪುನರ್ ವಸತಿ

ಸಂಕೇತಗಳು

 

a

b

c

d

(1)

iv

iii

ii

i

(2)

iii

i

ii

iv

(3)

iv

iii

i

ii

(4)

i

ii

iii

iv

ಸರಿ ಉತ್ತರ

(3) iv iii i ii


62. ಪ್ರಧಾನಮಂತ್ರಿ ಉಜ್ವಲ ಯೋಜನೆಯು ಇದನ್ನು ಒದಗಿಸುವ ಗುರಿಯನ್ನು ಹೊಂದಿರುವುದು
    i.    ಎಲ್ಲಾ ಶಾಲಾ ಮಕ್ಕಳಿಗೆ ದೀಪಗಳನ್ನೊದಗಿಸುವುದು
    ii.    ಎಲ್ಲಾ ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಗಳನ್ನೊದಗಿಸುವುದು
    iii.    ಎಲ್ಲಾ ಗ್ರಾಮೀಣ ಶಾಲಾ ಮಕ್ಕಳಿಗೆ ಶಿಕ್ಷಣವನ್ನೊದಗಿಸುವುದು
    iv.    5ಕೋಟಿ ಮಂದಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗೆ ರಿಯಾಯಿತಿಯಲ್ಲಿ LPG (ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್) ಸಂಪರ್ಕಗಳನ್ನು ನೀಡುವುದು.
ಕೆಳಗೆ ನೀಡಿರುವ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ

    (1)    i ಮತ್ತು ii
    (2)    ii ಮತ್ತು iii
    (3)    i ಮತ್ತು iv
    (4)    iii ಮಾತ್ರ

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


63. ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ ಮೊದಲ ಮಹಿಳಾ ಜಿಮ್ನಾಸ್ಟ್ ಮತ್ತು ರಿಯೋ ಒಲಿಂಪಿಕ್ಸ್ ನಲ್ಲಿ ವಾಲ್ಟ್ ಘಟನೆಯಲ್ಲಿ ನಾಲ್ಕನ್ನು ಪೂರ್ಣಗೊಳಿಸಿದ ಮಹಿಳೆ ಯಾರು?

    (1)    ದೀಪಾ ಕರಮ್ ಕರ್
    (2)    ಜಾನೆಟ್ ಜಾಕ್ಸನ್
    (3)    ಪಿ.ವಿ.ಸಿಂಧು
    (4)    ಶಶಿ ಮಲಿಕ್

ಸರಿ ಉತ್ತರ

(1) ದೀಪಾ ಕರಮ್ ಕರ್


64. ಐರಮ್ ಚಾನು ಶರ್ಮಿಳಾ ರವರು 9ನೇ ಆಗಸ್ಟ್ 2016ರಂದು ಹದಿನಾರು ವರ್ಷಗಳ ದೀರ್ಘ ಉಪವಾಸದ ನಂತರ ಉಪವಾಸ ಮುಷ್ಕರವನ್ನು ನಿಲ್ಲಿಸಿದರು. ಅವರು ಯಾವ ರಾಜ್ಯಕೆ ಸಂಬಂಧಿಸಿದ್ದಾರೆ?

    (1)    ಮಹಾರಾಷ್ಟ್ರ
    (2)    ಮಧ್ಯಪ್ರದೇಶ
    (3)    ಮಣಿಪುರ
    (4)    ಮೇಘಾಲಯ

ಸರಿ ಉತ್ತರ

(3) ಮಣಿಪುರ


65. ಆಗಸ್ಟ್ 2016 ರ ಆರಂಭದಲ್ಲಿ ಸುಮಾರು 7700 ಭಾರತೀಯ ಕೆಲಸಗಾರರು ಶಿಬಿರಗಳಲ್ಲಿ ಆಹಾರವಿಲ್ಲದೆ ದುಃಸ್ಥಿತಿಯಲ್ಲಿ ಉಪವಾಸವಿದ್ದರು. ಅದು ಯಾವ ದೇಶದಲ್ಲಿ?

    (1)    ಜಪಾನ್
    (2)    ಸೌದಿ ಅರೇಬಿಯಾ
    (3)    ಸಿಂಗಾಪುರ
    (4)    ಶ್ರೀಲಂಕಾ

ಸರಿ ಉತ್ತರ

(2) ಸೌದಿ ಅರೇಬಿಯಾ


66. ಕಾಲಾನುಕ್ರಮದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಗಳ ಸರಿಯಾದ ಕ್ರಮ ಕೆಳಗಿನ ಸರಣಿಯಲ್ಲಿ ಯಾವುದು

    (1)    ಬಿಮಲ್ ಜಲನ್, ವೈ.ವಿ.ರೆಡ್ಡಿ, ಸುಬ್ಬರಾವ್, ರಘುರಾಮ್ ರಾಜನ್
    (2)    ವೈ.ವಿ.ರೆಡ್ಡಿ, ರಘುರಾಮ್ ರಾಜನ್, ಸುಬ್ಬರಾವ್, ಬಿಮಲ್ ಜಲನ್
    (3)    ಸುಬ್ಬರಾವ್, ಬಿಮಲ್ ಜಲನ್, ವೈ.ವಿ.ರೆಡ್ಡಿ, ರಘುರಾಮ್ ರಾಜನ್
    (4)    ರಘುರಾಮ್ ರಾಜನ್, ಬಿಮಲ್ ಜಲನ್, ವೈ.ವಿ.ರೆಡ್ಡಿ, ಸುಬ್ಬರಾವ್

ಸರಿ ಉತ್ತರ

(1) ಬಿಮಲ್ ಜಲನ್, ವೈ.ವಿ.ರೆಡ್ಡಿ, ಸುಬ್ಬರಾವ್, ರಘುರಾಮ್ ರಾಜನ್


67. ತೆಲಂಗಾಣವು ಭಾರತದ ________ ನೇ ರಾಜ್ಯವಾಗಿದೆ.

    (1)    27
    (2)    28
    (3)    29
    (4)    30

ಸರಿ ಉತ್ತರ

(3) 29


68. ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ (NITI) ಆಯೋಗವನ್ನು ಯಾವ ವರ್ಷದ ಜನವರಿ 1ನೇ ತಾರೀಖು ಸ್ಥಾಪಿಸಲಾಯಿತು?

    (1)    2013
    (2)    2014
    (3)    2015
    (4)    2016

ಸರಿ ಉತ್ತರ

(3) 2015


69. ಭಾರತದ ಹದಿನಾಲ್ಕನೇ ಹಣಕಾಸು ಆಯೋಗವು ರಾಜ್ಯಗಳ ತೆರಿಗೆಗಳ ಹಸ್ತಾಂತರಣದಲ್ಲಿ ಹೆಚ್ಚಳವನ್ನು ಶಿಫಾರಸ್ಸು ಮಾಡಿದ್ದು ತೆರಿಗೆಗಳ ಭಾಜ್ಯ ಪಾಲಿನಲ್ಲಿ ________ ಶೇಕಡಾವಾರು ಅಂಶಗಳಷ್ಟು

    (1)    5
    (2)    10
    (3)    15
    (4)    20

ಸರಿ ಉತ್ತರ

(2) 10


70. ಯಾವ ನಗರದ 100 ಕಿ.ಮೀ. ಉತ್ತರದಲ್ಲಿ ಸತೀಶ್ ಧಾವನ್ ಅಂತರಿಕ್ಷ ಕೇಂದ್ರವಿದೆ?

    (1)    ಚೆನ್ನೈ
    (2)    ದೆಹಲಿ
    (3)    ಕೊಚ್ಚಿ
    (4)    ಹೈದರಾಬಾದ್

ಸರಿ ಉತ್ತರ

(1) ಚೆನ್ನೈ


71. ಭಾರತದ ಯಾವ ರಾಜ್ಯವು ಅತಿಹೆಚ್ಚಿನ ರಾಜ್ಯಗಳ ಜೊತೆ ಗಡಿಯನ್ನು ಹಂಚಿಕೊಂಡಿದೆ?

    (1)    ಮಧ್ಯಪ್ರದೇಶ
    (2)    ಉತ್ತರಪ್ರದೇಶ
    (3)    ಅಸ್ಸಾಮ್
    (4)    ಕರ್ನಾಟಕ

ಸರಿ ಉತ್ತರ

(2) ಉತ್ತರಪ್ರದೇಶ


72. ಇತ್ತೀಚಿನ ಎಫ್ ಆರ್ ಸಿ ಮತ್ತು ಕೊಲಂಬಿಯಾ ಸರ್ಕಾರದ ನಡುವಿನ ಶಾಂತಿ ಮಾತುಕತೆಗಾಗಿ ಯಾವ ವ್ಯಕ್ತಿಗೆ/ಸಂಸ್ಥೆಗೆ 2016ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಯು ದೊರಕಿತು?

    (1)    ಆಂಟೋನಿಯೋ ಗ್ವಟರೆಸ್
    (2)    ಬಾನ್ ಕಿ ಮೂನ್
    (3)    ಟಿಮೋಚೆಂಕೋ
    (4)    ಜುವಾನ್ ಮಾನ್ಯುಯಲ್ ಸಂಟೋಸ್

ಸರಿ ಉತ್ತರ

(4) ಜುವಾನ್ ಮಾನ್ಯುಯಲ್ ಸಂಟೋಸ್


73. TRIPS (ಟ್ರೇಡ್ ರಿಲೇಟೆಡ್ ಆಸ್ಪೆಕ್ಟ್ಸ್ ಆಫ್ ಇಂಟೆಲೆಕ್ಚ್ಯುಯಲ್ ಪ್ರಾಪರ್ಟಿ ರೈಟ್ಸ್) ಯಾವ ಬಹುರಾಷ್ಟ್ರೀಯ ಸಂಸ್ಥೆಗೆ ಸಂಬಂಧಿಸಿದ್ಧಾಗಿದೆ?

    (1)    NAFTA
    (2)    UN
    (3)    WTO
    (4)    ASEAN

ಸರಿ ಉತ್ತರ

(3) WTO


74. ಕೆಳಗಿನ ವಾಕ್ಯಗಳನ್ನು ಪರಿಗಣಿಸಿ.
    A.    ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ಚೀನಾ ದೇಶವನ್ನು PCA ಗೆ (ಪರ್ಮನೆಂಟ್ ಕೋರ್ಟ್ ಆಫ್ ಆರ್ಬಿಟ್ರೇಷನ್) ಎಳೆದದ್ದು ಫಿಲಿಪ್ಪೀನ್ಸ್ ದೇಶ
    B.    PCA ಅಮೆರಿಕಾದ ನ್ಯೂಯಾರ್ಕ್ ನಲ್ಲಿದೆ.

    (1)    A ಸತ್ಯವಾದದ್ದು
    (2)    B ಸತ್ಯವಾದದ್ದು
    (3)    A ಮತ್ತು B ಸತ್ಯವಾದವುಗಳು
    (4)    A ಮತ್ತು B ತಪ್ಪಾದವುಗಳು

ಸರಿ ಉತ್ತರ

(1) A ಸತ್ಯವಾದದ್ದು


75. ಮಸಾಲ ಬಾಂಡ್ ಗಳೆಂದರೇನು?

    (1)    ವಿದೇಶಗಳ ಹಣಮೌಲ್ಯದೊಂದಿಗೆ ಭಾರತದಲ್ಲಿ ಬಿಡುಗಡೆಯಾದ ಬಾಂಡ್ ಗಳು.
    (2)    ಭಾರತದ ಹಣಮೌಲ್ಯದೊಂದಿಗೆ ವಿದೇಶಗಳಲ್ಲಿ ಬಿಡುಗಡೆಯಾದ ಬಾಂಡ್ ಗಳು.
    (3)    ಪಾಕವಿಧ್ಯೆಯ ಅಭಿವೃದ್ಧಿಗಾಗಿ ಬಂಡವಾಳ ಶೇಖರಣೆಗಾಗಿ ಸರ್ಕಾರವು ಬಿಡುಗಡೆ ಮಾಡಿದ ಬಾಂಡ್ ಗಳು
    (4)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(2) ಭಾರತದ ಹಣಮೌಲ್ಯದೊಂದಿಗೆ ವಿದೇಶಗಳಲ್ಲಿ ಬಿಡುಗಡೆಯಾದ ಬಾಂಡ್ ಗಳು.


76. ಇತ್ತೀಚೆಗೆ ಸಾರ್ವಜನಿಕ ವಲಯದ ಯಾವ ಬ್ಯಾಂಕ್ ನ್ನು ‘ಡೊಮೆಸ್ಟಿಕ್ ಸಿಸ್ಟಮಾಟಿಕಲಿ ಇಂಪಾರ್ಟೆಂಟ್ ಬ್ಯಾಂಕ್’ ಎಂದು ರಿಸರ್ವ್ ಬ್ಯಾಂಕ್ ವರ್ಗೀಕರಿಸಿತು?

    (1)    ಬ್ಯಾಂಕ್ ಆಫ್ ಬರೋಡ
    (2)    ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
    (3)    ಯೂನಿಯನ್ ಬ್ಯಾಕ್ ಆಫ್ ಇಂಡಿಯಾ
    (4)    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸರಿ ಉತ್ತರ

(4) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ


77. ರಿಸರ್ವ್ ಬ್ಯಾಂಕ್ ಗೆ ಯಾವ ಸಮಿತಿಯು ಮಾನಿಟರಿ ಪಾಲಿಸಿ ಕಮಿಟಿಯನ್ನು (MPC) (ಹಣಕಾಸಿನ ನೀತಿ ಸಮತಿಯನ್ನು) ಸಲಹೆ ಮಾಡಿತು?

    (1)    ಮಿಹಿರ್ ಷಾ ಸಮಿತಿ
    (2)    ಊರ್ಜಿತ್ ಪಟೇಲ್ ಸಮಿತಿ
    (3)    ಮುದ್ಗಲ್ ಸಮಿತಿ
    (4)    ಲೋಧಾ ಸಮಿತಿ

ಸರಿ ಉತ್ತರ

(2) ಊರ್ಜಿತ್ ಪಟೇಲ್ ಸಮಿತಿ


78. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ
    A.    GSTಯು ಆದರ್ಶಾತ್ಮಕವಾಗಿ 2 ಭಿನ್ನ ತೆರಿಗೆ ಸ್ಲ್ಯಾಬ್ ಗಳನ್ನು ಸರಕು ಮತ್ತು ಸೇವೆಗಳಿಗೆ ಕ್ರಮವಾಗಿ ಆಲೋಚಿಸಿದೆ.
    B.    ಪ್ರಸ್ತಾವಿತ GST ತೆರಿಗೆಯು ಕೆಲವು ಸರಕುಗಳನ್ನು ನಿಯಮಗಳ ವ್ಯಾಪ್ತಿಯಿಂದ ಹೊರಗೆ ಇಟ್ಟಿದೆ.
ಈ ಕೆಳಗಿನವುಗಳಲ್ಲಿ ಯಾವುದು ಸರಿಯಾದದ್ದು

    (1)    A ಮಾತ್ರ ಸರಿಯಾದದ್ದು
    (2)    B ಮಾತ್ರ ಸರಿಯಾದದ್ದು
    (3)    A ಮತ್ತು B ಗಳು ಸರಿಯಾಗಿವೆ
    (4)    ಎರಡೂ ಸರಿಯಾಗಿಲ್ಲ

ಸರಿ ಉತ್ತರ

(2) ಆ ಮಾತ್ರ ಸರಿಯಾದದ್ದು


79. ಪ್ರಸ್ತುತ ಭಾರತ ಸರ್ಕಾರದ ಕೆಳಕಂಡ ಯಾವ ಕಾರ್ಯಕ್ರಮಗಳು ರೈತರಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ?

    (1)    ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ
    (2)    ಪಶು ಜೆನೋಮಿಕ್ಸ್
    (3)    ಬಯೋಟೆಕ್ ಕಿಸಾನ್
    (4)    ಗ್ರಾಮೀಣ ಭಂಡಾರನ್ ಯೋಜನಾ

ಸರಿ ಉತ್ತರ

(3) ಬಯೋಟೆಕ್ ಕಿಸಾನ್


80. ಇಂಟರ್ನೆಟ್ ಸಂಪರ್ಕದಿಂದ ದೂರದೂರದ ಪ್ರದೇಶಗಳನ್ನು ಸಂಪರ್ಕಿಸುವ ಗುರಿಯಿಂದ ಅಕಿಲಾ ಎಂಬ ದ್ರೋಣ್ ಅನ್ನು ತಯಾರಿಸಿದವರು ಯಾರು?

    (1)    ಫೇಸ್ ಬುಕ್
    (2)    ಗೂಗಲ್
    (3)    ಗೋಪ್ರೊ
    (4)    ಲಾಕ್ ಹೀಡ್ ಮಾರ್ಟಿನ್

ಸರಿ ಉತ್ತರ

(1) ಫೇಸ್ ಬುಕ್


81. ಕೆಳಗಿನವುಗಳನ್ನು ಹೊಂದಾಣಿಸಿರಿ.
ಆರ್ & ಡಿ ಕೇಂದ್ರ ಸ್ಥಳ

 

ಆರ್
& ಡಿ

 

ಕೇಂದ್ರ
ಸ್ಥಳ

a.

ವಿಕ್ರಮ್
ಸಾರಾಭಾಯಿ ಬಾಹ್ಯಾಕಾಶ ಕೇಂದ್ರ

i.

ಕಲ್ಪಾಕಮ್

b.

ಇಂದಿರಾಗಾಂಧಿ
ಸೆಂಟರ್ ಫಾರ್ ಆಟಾಮಿಕ್ ರಿಸರ್ಚ್

ii.

ತಿರುವನಂತಪುರಮ್

c.

ಸತೀಶ್
ಧಾವನ್ ಬಾಹ್ಯಾಕಾಶ ಕೇಂದ್ರ SHAR

iii.

ಮುಂಬಯಿ

d.

ಟಾಟಾ
ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್

iv.

ಶ್ರೀಹರಿ
ಕೋಟಾ

ಸಂಕೇತಗಳ
ಸಹಾಯದಿಂದ ಸರಿಯುತ್ತರವನ್ನು ಆರಿಸಿ.

 

a

b

c

d

(1)

iii

i

ii

iv

(2)

iv

iii

ii

i

(3)

ii

i

iv

iii

(4)

ii

iii

i

iv

   

ಸರಿ ಉತ್ತರ

(3) ii i iv iii


82. ಭಾರತೀಯ ನೌಕೆಯಲ್ಲಿ ನಿರ್ಮಿಸಲಾದ ಪ್ರಥಮ ಸ್ವದೇಶಿ ಜಲಾಂತರ್ಗಾಮಿ

    (1)    INS ಚಕ್ರ
    (2)    INS ಸಿಂಧುಘೋಷ್
    (3)    INS ಕಲ್ವಾರಿ
    (4)    INS ಅರಿಹಂತ್

ಸರಿ ಉತ್ತರ

(4) INS ಅರಿಹಂತ್


83. ಕೆಳಗಿನ ವಾಕ್ಯಗಳನ್ನು ಗಮನಿಸಿ.
    A.    ಎಕ್ಸರ್ ಸೈಜ್ ಮಲಬಾರ್ ಒಂದು ಸಂಯುಕ್ತ ಸೇನಾ ಕಸರತ್ತು
    B.    ಇದರ ಶಾಶ್ವತ ಸದಸ್ಯರುಗಳು ಭಾರತ, ಅಮೆರಿಕಾ ಮತ್ತು ಜಪಾನ್
ಕೆಳಗಿನದರಲ್ಲಿ ಯಾವುದು ಸರಿ?

    (1)    A ಮಾತ್ರ
    (2)    B ಮಾತ್ರ
    (3)    A ಮತ್ತು B
    (4)    A ಮತ್ತು B ಎರಡೂ ಸರಿಯಿಲ್ಲ

ಸರಿ ಉತ್ತರ

(2) B ಮಾತ್ರ


84. ಕೆಳಗಿನವುಗಳಲ್ಲಿ ಯಾವ ಸಮಿತಿಯು ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿವೆ?

    (1)    ಕಸ್ತೂರಿ ರಂಗನ್ ಸಮಿತಿ
    (2)    ಷಾ ಸಮಿತಿ
    (3)    ರಂಗರಾಜನ್ ಸಮಿತಿ
    (4)    ಸಾಚಾರ್ ಸಮಿತಿ

ಸರಿ ಉತ್ತರ

(1) ಕಸ್ತೂರಿ ರಂಗನ್ ಸಮಿತಿ


85. ಬೇತ್ವಾ ಮತ್ತು ಸೋನ್ ನದಿಗಳ ಅಂತರ ಸಂಪರ್ಕ ಯೋಜನೆಯಲ್ಲಿ ಕೆಳಗಿನ ಹುಲಿ ಸಂರಕ್ಷಣಾ ತಾಣಗಳಲ್ಲಿ ಯಾವುದು ಭಾಗಶಃ ಮುಳುಗಡೆಯ ಅಪಾಯದಲ್ಲಿತ್ತು?

    (1)    ಸಾತ್ಪುರ ಹುಲಿ ಸಂರಕ್ಷಣಾ ತಾಣ
    (2)    ಪನ್ನಾ ಹುಲಿ ಸಂರಕ್ಷಣಾ ತಾಣ
    (3)    ರಣಥಂಬೋರ್ ಹುಲಿ ಸಂರಕ್ಷಣಾ ತಾಣ
    (4)    ಸಾರಿಸ್ಕ ಹುಲಿ ಸಂರಕ್ಷಣಾ ತಾಣ

ಸರಿ ಉತ್ತರ

(2) ಪನ್ನಾ ಹುಲಿ ಸಂರಕ್ಷಣಾ ತಾಣ


86. ಹಡಗುಯಾನ ಸಚಿವಾಲಯದ ಇನ್ ಲ್ಯಾಂಡ್ ವಾಟರ್ವೇಸ್ ಅಥಾರಿಟಿ ಆಫ್ ಇಂಡಿಯಾ (IWAI) ದವರು DST ಜರ್ಮನಿಯೊಂದಿಗೆ 1620 ಕಿ.ಮೀ. ಉದ್ದದ ಯಾವ ರಾಷ್ಟ್ರೀಯ ಜಲಮಾರ್ಗಕ್ಕೆ ಸರಿಹೊಂದುವ ಹಡಗುಗಳನ್ನು ನಿರ್ಮಿಸಲು ಒಪ್ಪಂದವನ್ನು ಮಾಡಿಕೊಂಡಿದ್ದಾರೆ?

    (1)    NW – 1
    (2)    NW – 2
    (3)    NW – 3
    (4)    NW – 4

ಸರಿ ಉತ್ತರ

(1) NW – 1


87. ಸಾಮಾನ್ಯ ಅಡುಗೆ ಉಪ್ಪು ಸೋಡಿಯಂ ಕ್ಲೋರೈಡ್. ಬೇಕಿಂಗ್ ಸೋಡಾ ಯಾವುದು?

    (1)    ಪೊಟ್ಯಾಸಿಯಮ್ ಕ್ಲೋರೈಡ್
    (2)    ಪೊಟ್ಯಾಸಿಯಮ್ ಕಾರ್ಬೊನೇಟ್
    (3)    ಪೊಟ್ಯಾಸಿಯಮ್ ಹೈಡ್ರಾಕ್ಸೈಡ್
    (4)    ಸೋಡಿಯಮ್ ಬೈಕಾರ್ಬೊನೇಟ್

ಸರಿ ಉತ್ತರ

(4) ಸೋಡಿಯಮ್ ಬೈಕಾರ್ಬೊನೇಟ್


88. ಕಾಫಿ ಮತ್ತು ಟೀ ಯಲ್ಲಿ ಪ್ರಧಾನ ಸಕ್ರಿಯ ಘಟಕ

    (1)    ನಿಕೋಟಿನ್
    (2)    ಕ್ಲೋರೋಫಿಲ್
    (3)    ಕೆಫಿನ್
    (4)    ಆಸ್ಪಿರಿನ್

ಸರಿ ಉತ್ತರ

(3) ಕೆಫಿನ್


89. ನಮ್ಮ ಚರ್ಮ ಬಿಸಿಲಿಗೆ ಒಡ್ಡಿದಾಗ ಕಡುಬಣ್ಣದ್ದಾಗುತ್ತದೆ. ಇದಕ್ಕೆ ಕಾರಣವಾದ ವರ್ಣದ್ರವ್ಯ

    (1)    ಫ್ಲೆವಾಕ್ಸಾಂತೀನ್
    (2)    ಮೆಲನಿನ್
    (3)    ಕೆರೊಟಿನ್
    (4)    ಕ್ಸಾಂತೋಫಿಲ್

ಸರಿ ಉತ್ತರ

(2) ಮೆಲನಿನ್


90. ಕಾರ್ಬನ್ನಿನ ಅತಿಗಡಸು ರೂಪ ಈ ಪೈಕಿ

    (1)    ಕೋಕ್
    (2)    ಗ್ರಾಫೈಟ್
    (3)    ವಜ್ರ
    (4)    ಇದ್ದಿಲು (ಚಾರ್ಕೋಲ್)

ಸರಿ ಉತ್ತರ

(3) ವಜ್ರ


91. ಯಾವ ವಿಟಮಿನ್ ಕೊರತೆಯು ರಾತ್ರಿ ಕುರುಡಿಗೆ ಕಾರಣವಾಗುತ್ತದೆ?

    (1)    ವಿಟಮಿನ್ A
    (2)    ವಿಟಮಿನ್ B
    (3)    ವಿಟಮಿನ್ C
    (4)    ವಿಟಮಿನ್ D

ಸರಿ ಉತ್ತರ

(1) ವಿಟಮಿನ್ A


92. ಚಳಿಗಾಲದಲ್ಲಿ ಶೀತದೇಶಗಳಲ್ಲಿ ಮಂಜಿನ ರಸ್ತೆಗಳ ಮೇಲಿನ ಮಂಜುಗಡ್ಡೆ ದ್ರವಿಸಲು ಇದನ್ನು ಸೇರಿಸುವರು

    (1)    ಅಡುಗೆ ಉಪ್ಪು
    (2)    ಕ್ಲೋರಿನ್
    (3)    ಕಾರ್ಬನ್ ಡೈಯಾಕ್ಸೈಡ್
    (4)    ನೀರು

ಸರಿ ಉತ್ತರ

(1) ಅಡುಗೆ ಉಪ್ಪು


93. ಕೊಠಡಿ ಉಷ್ಣತೆಯಲ್ಲಿ ಯಾವ ಲೋಹಧಾತುವು ದ್ರವವಾಗಿರುತ್ತದೆ?

    (1)    ಸತು
    (2)    ನಿಕೆಲ್
    (3)    ಸೀಸ
    (4)    ಪಾದರಸ

ಸರಿ ಉತ್ತರ

(4) ಪಾದರಸ


94. ಸೇಬು ಕತ್ತರಿಸಿದಾಗ ಕಂದು ಬಣ್ಣವಾಗಲು ಕಾರಣ

    (1)    ಉತ್ಕರ್ಷಣ
    (2)    ಅಪಕರ್ಷಣ
    (3)    ಕೊಳೆತ
    (4)    ವಿಭಜನೆ

ಸರಿ ಉತ್ತರ

(1) ಉತ್ಕರ್ಷಣ


95. ಈ ಕೆಳಗಿನವುಗಳಲ್ಲಿ ಯಾವುದು ಮಾನವರಲ್ಲಿ ಮೂತ್ರವು ಹಳದಿ ಇರಲು ಕಾರಣವಾದದ್ದು

    (1)    ಕೊಲೆಸ್ಟರಾಲ್
    (2)    ಲಿಂಫ್
    (3)    ಯುರೋಕ್ರೋಮ್
    (4)    ಬೈಲ್ ಲವಣಗಳು

ಸರಿ ಉತ್ತರ

(3) ಯುರೋಕ್ರೋಮ್


96. ರಕ್ತ ಹೆಪ್ಪುಗಟ್ಟುವಿಕೆಗೆ ಕೆಳಗಿನವುಗಳಲ್ಲಿ ಯಾವ ವಿಟಮಿನ್ ಕಾರಣವಾಗುತ್ತದೆ?

    (1)    ವಿಟಮಿನ್ – ಎ
    (2)    ವಿಟಮಿನ್ – ಡಿ
    (3)    ವಿಟಮಿನ್ – ಕೆ
    (4)    ವಿಟಮಿನ್ – ಸಿ

ಸರಿ ಉತ್ತರ

(3) ವಿಟಮಿನ್ – ಕೆ


97. ಈರುಳ್ಳಿ ಕತ್ತರಿಸುವಾಗ ನಿಮಗೂ ಕಣ್ಣೀರು ಬಂದಿರಬೇಕು. ಇದಕ್ಕೆ ಕಾರಣವಾದ ಅಂಶ ಅದರಲ್ಲಿರುವ

    (1)    ಜೀವಕೋಶದಲ್ಲಿನ ಸಲ್ಫರ್
    (2)    ಜೀವಕೋಶದ ಕಾರ್ಬನ್
    (3)    ಜೀವಕೋಶದ ಕೊಬ್ಬು
    (4)    ಜೀವಕೋಶದ ಅಮೈನೋ ಆಮ್ಲ

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


98. ಹಲವು ತರಕಾರಿಗಳು ಮತ್ತು ಹಣ್ಣುಗಳು ವಿಶೇಷವಾಗಿ ವರ್ಣರಂಜಿತವಾಗಿರಲು ಕಾರಣವಾದ ಅವುಗಳಲ್ಲಿರುವ ವಿಶೇಷ ರೀತಿಯ ರಾಸಾಯನಿಕ ಸಂಯುಕ್ತ

    (1)    ಕೆರೋಟಿನಾಯ್ಡ್
    (2)    ಪ್ಲಾಸ್ಮಿಡ್
    (3)    ಪ್ಲಾಸ್ಟಿಡ್
    (4)    ಮೇಲಿನ ಯಾವುವು ಅಲ್ಲ

ಸರಿ ಉತ್ತರ

(1) ಕೆರೋಟಿನಾಯ್ಡ್


99. ಈ ಕೆಳಗಿನವು ರಾಷ್ಟ್ರೀಯವಾದಿಗಳು ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಅನುಸರಿಸಿದ ಪ್ರಮುಖ ಪ್ರಯತ್ನಗಳು:
    A.    ಬಾರ್ಡೋಲಿ ಸತ್ಯಾಗ್ರಹ – ವಲ್ಲಭಭಾಯ್ ಪಟೇಲ್
    B.    ಸ್ವರಾಜ್ಯವಾದಿಗಳು – ಸಿ.ಆರ್.ದಾಸ್
    C.    ಖಿಲಾಫತಿಸ್ಟ್ – ಮೌಲಾನಾ ಎ.ಕೆ. ಆಜಾದ್
    D.    ಖುದಾಯಿ ಖಿದ್ಮತ್ ಗಾರ್- ಅಬ್ದುಲ್ ಗಾರ್ಖಾನ್
ಸಂಕೇತದ ಸಹಾಯದಿಂದ ಸರಿ ಉತ್ತರವನ್ನು ಆರಿಸಿ.

    (1)    A ಮಾತ್ರ
    (2)    B ಮತ್ತು D
    (3)    C ಮತ್ತು D
    (4)    ಮೇಲಿನ ಎಲ್ಲವೂ

ಸರಿ ಉತ್ತರ

(4) ಮೇಲಿನ ಎಲ್ಲವೂ


100. ಎರಡನೆಯ ದುಂಡುಮೇಜು ಪರಿಷತ್ತಿನ ಸಭೆ ವಿಫಲವಾಗಲು ಕಾರಣ ಈ ಪ್ರಶ್ನೆಯಿಂದ

    (1)    ಗಾಂಧಿ ಜಿಯವರ ಆಮರಣಾಂತ ಉಪವಾಸ
    (2)    ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತದಾನ
    (3)    ಗಾಂಧಿ ಜಿಯವರನ್ನು ದೊರೆ ಚಕ್ರವರ್ತಿಗಳ ಪ್ರತಿನಿಧಿಗಳೊಂದಿಗೆ ಸರಿಸಮಾನವಾಗಿ ಪರಿಗಣಿಸದಿರುವುದು
    (4)    ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಲು ಸರ್ಕಾರ ಒಪ್ಪದೇ ಇದ್ದದ್ದು.

ಸರಿ ಉತ್ತರ

(2) ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮತದಾನ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ
   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment