Welcome to ALL IN ONE Education portal

Join us on Telegram

Join Now

Join us on Whatsapp

Join Now

KPSC GROUP C -2016 Paper-1 General Knowledge Question Paper

KPSC : GROUP C 11-09-2016 Paper-1 General Knowledge Questions with answers

KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ: ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 11-09-2016 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

1.    ಪರ್ಶಿಯನ್ ಗ್ರಂಥವಾದ ‘ತಾರೀಖ್-ಇ-ಫಿರೋಝ್‘ಷಾಹಿ’ ಗ್ರಂಥದ ಕರ್ತೃ

(1)    ಜಿಯಾವುದ್ದೀನ್ ಬರಾನಿ
(2)    ಶಂಶುಲ್ ಸಿರಾಜಿ
(3)    ಬದೌನಿ
(4)    ಹಸನ್ ನಿಜಾಮಿ

ಸರಿ ಉತ್ತರ

(1) ಜಿಯಾವುದ್ದೀನ್ ಬರಾನಿ


2.    ‘ದಾರುಲ್-ಹರಬ್’ ಎಂಬ ಪದದ ಅರ್ಥ

(1)    ವಿಗ್ರಹ ಆರಾಧಕರ ಭೂಮಿ
(2)    ನಾಸ್ತಿಕರ ಭೂಮಿ
(3)    ಹಿಂದೂಗಳ ಭೂಮಿ
(4)    ನಂಬಿಕಸ್ತರ ಭೂಮಿ

ಸರಿ ಉತ್ತರ

(2) ನಾಸ್ತಿಕರ ಭೂಮಿ


3.    ‘ಚಚನಾಮ’ ಗ್ರಂಥದ ಲೇಖಕರು


(1)    ಅಬು ರೈಹಾನ್ ಆಲ್ ಬೆರೂನಿ
(2)    ಅಲ್-ಖುಜ್ವಾನಿ
(3)    ಅಬು ನಾಸಿರ್ ಉಲ್ ಜಬ್ಬಾರ್ ಉಲ್ ಉತ್ ಬಿ
(4)    ಲೇಖಕರು ಯಾರೆಂದು ತಿಳಿದಿಲ್ಲ

ಸರಿ ಉತ್ತರ

(4) ಲೇಖಕರು ಯಾರೆಂದು ತಿಳಿದಿಲ್ಲ


4.    ಈ ಕೆಳಗಿನ ಯಾವ ಅರಸನು ತನ್ನ ರಾಜಧಾನಿಯನ್ನು ಮಂಗಳವಾಡದಿಂದ ಕಲ್ಯಾಣಕ್ಕೆ ಬದಲಾಯಿಸಿದನು?

(1)    ಬಿಜ್ಜಳ
(2)    ಒಂದನೇ ಸೋಮೇಶ್ವರ
(3)    ಸೋವಿದೇವ
(4)    ಆರನೇ ವಿಕ್ರಮಾದಿತ್ಯ

ಸರಿ ಉತ್ತರ

(1) ಬಿಜ್ಜಳ


5.    ಅಲ್ಲಾವುದ್ದೀನ್ ಖಿಲ್ಜಿಯ ಮೂಲ ಹೆಸರು

(1)    ಶಹಬುದ್ದೀನ್ ವೌದ್
(2)    ಅಲ್ಮಾಸ್ ಬೇಗ್
(3)    ಅಲೀ ಗುರಶಪ್
(4)    ಅಹಮದ್ ಚಾಪ್

ಸರಿ ಉತ್ತರ

(3) ಅಲೀ ಗುರಶಪ್


6.    ಭಾರತದ ಬ್ರಹ್ಮಪುತ್ರ ನದಿಯನ್ನು ಹೀಗೂ ಕರೆಯಲಾಗುತ್ತದೆ.

(1)    ಯರ್ಲಂಗ್ ಝಾಂಗ್ ಬೊ
(2)    ಹರಂಗೊ
(3)    ಸಿಂಗ್ ಬೊ
(4)    ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(4) ಇವುಗಳಲ್ಲಿ ಯಾವುದೂ ಅಲ್ಲ


7.    ಈ ಕೆಳಗಿನ ಸನ್ನಿವೇಶಗಳಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು?

i.    10°C ಯಿಂದ 35°C ವರೆಗಿನ ತಾಪಮಾನ
ii.    ವಾರ್ಷಿಕ 150 ರಿಂದ 250cms ವರೆಗಿನ ಮಳೆ
iii.    ಪರ್ಯಾಯ ತಂಪು ಹಾಗೂ ಬೆಚ್ಚನೆಯ ಅಲೆಗಳು
iv.    ಅತಿ ಹೆಚ್ಚು ಆರ್ದ್ರತೆಯೊಂದಿಗೆ ಅಲ್ಪಾವಧಿಯ ಶುಷ್ಕತೆ
    ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ.

(1)    ಕಬ್ಬು
(2)    ಭತ್ತ
(3)    ಚಹಾ
(4)    ಗೋಧಿ

ಸರಿ ಉತ್ತರ

(3) ಚಹಾ


8.    ಮೊಹಮದ್ ಘೋರಿಯು ಮೊದಲನೇ ಮತ್ತು ಎರಡನೇ ತರೈನ್ ಯುದ್ಧಗಳನ್ನು ಯಾರೊಡನೆ ಮಾಡಿದ?

(1)    ಮೂರನೇ ಪೃಥ್ವಿರಾಜ ಚೌಹಾಣ್
(2)    ನಾಲ್ಕನೇ ಪೃಥ್ವಿರಾಜ ಚೌಹಾಣ್
(3)    ಎರಡನೇ ಪೃಥ್ವಿರಾಜ ಚೌಹಾಣ್
(4)    ಮೊದಲನೇ ಪೃಥ್ವಿರಾಜ ಚೌಹಾಣ್

ಸರಿ ಉತ್ತರ

(1) ಮೂರನೇ ಪೃಥ್ವಿರಾಜ ಚೌಹಾಣ್


9.    ನೈಋತ್ಯ ಮಾರುತವು ಭಾರತದ ಬಹುತೇಕ ಭಾಗಗಳು ಮತ್ತು ಸಾಗರಗಳ ಮೇಲೆ ಬೀಸುವುದರಿಂದ ಭಾರತದಲ್ಲಿ _________ ತಿಂಗಳಿಂದ _________ ತಿಂಗಳವರೆಗೆ ನೈಋತ್ಯ ಮಾನ್ಸೂನಿಗೆ ಆಸ್ಪದವಾಗುತ್ತದೆ.

(1)    ಮೇ ಯಿಂದ ಆಗಸ್ಟ್
(2)    ಜೂನ್ ನಿಂದ ಸೆಪ್ಟೆಂಬರ್
(3)    ಜುಲೈನಿಂದ ಸೆಪ್ಟೆಂಬರ್
(4)    ಆಗಸ್ಟ್ ನಿಂದ ಅಕ್ಟೋಬರ್

ಸರಿ ಉತ್ತರ

(2) ಜೂನ್ ನಿಂದ ಸೆಪ್ಟೆಂಬರ್


10.    ಕರ್ನಾಟಕದ ಕೃಷಿ ಇಲಾಖೆಯು ಕರ್ನಾಟಕವನ್ನು _________ ಕೃಷಿ ವಾಯುಗುಣಾತ್ಮಕ ಪ್ರದೇಶಗಳನ್ನಾಗಿ ವಿಭಜಿಸಿದೆ?

(1)    13
(2)    10
(3)    11
(4)    12

ಸರಿ ಉತ್ತರ

(2) 10


11.    ಈ ಕೆಳಗಿನ ಯಾವ ಜಲಾಶಯವನ್ನು ಬಸವ ಸಾಗರ ಜಲಾಶಯವೆಂದು ಕರೆಯಲ್ಪಟ್ಟಿದೆ?

(1)    ನಾರಾಯಣಪುರ ಅಣೆಕಟ್ಟೆ
(2)    ಘಟಪ್ರಭಾ ಅಣೆಕಟ್ಟೆ
(3)    ಕೆ.ಆರ್.ಎಸ್. (ಕೃಷ್ಣರಾಜ ಸಾಗರ) ಅಣೆಕಟ್ಟೆ
(4)    ಆಲಮಟ್ಟಿ ಅಣೆಕಟ್ಟೆ

ಸರಿ ಉತ್ತರ

(1) ನಾರಾಯಣಪುರ ಅಣೆಕಟ್ಟೆ


12.    ಯಾವ ಕಾರ್ಯಕ್ರಮದಡಿಯಲ್ಲಿ ಹಸಿರು ಕ್ರಾಂತಿಯನ್ನು ಸಾಧಿಸಲಾಯಿತು?

(1)    ತೀವ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ
(2)    ತೀವ್ರ ಭೂ ಬಳಕೆ ಕಾರ್ಯಕ್ರಮ
(3)    ತೀವ್ರ ನೀರಾವರಿ ಕಾರ್ಯಕ್ರಮ
(4)    ಅಧಿಕ ಇಳುವರಿಯ ವಿವಿಧ ಬೀಜಗಳ ಕಾರ್ಯಕ್ರಮ

ಸರಿ ಉತ್ತರ

(4) ಅಧಿಕ ಇಳುವರಿಯ ವಿವಿಧ ಬೀಜಗಳ ಕಾರ್ಯಕ್ರಮ


13.    ಪ್ರಸಿದ್ಧವಾದ ಮಾಗೋಡು ಜಲಪಾತವು ಈ ನದಿಯಲ್ಲಿದೆ?

(1)    ಶರಾವತಿ
(2)    ನೇತ್ರಾವತಿ
(3)    ಕಾವೇರಿ
(4)    ಬೇಡ್ತಿ

ಸರಿ ಉತ್ತರ

(4) ಬೇಡ್ತಿ


14.    ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಗುಡವಿ ಪಕ್ಷಿಧಾಮವು ಇದೆ?

(1)    ಶಿವಮೊಗ್ಗ
(2)    ಮಂಡ್ಯ
(3)    ಹಾವೇರಿ
(4)    ಚಿಕ್ಕಮಗಳೂರು

ಸರಿ ಉತ್ತರ

(1) ಶಿವಮೊಗ್ಗ


15.    ಸಂವಿಧಾನದ ಪೀಠಿಕೆಯು ಭಾರತವನ್ನು ಹೀಗೆಂದು ಘೋಷಿಸಿದೆ:

(1)    ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯ
(2)    ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ
(3)    ಸಾರ್ವಭೌಮ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯ
(4)    ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯ

ಸರಿ ಉತ್ತರ

(2) ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ


16.    ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು?

(1)    ಮುಳ್ಳಯ್ಯನ ಗಿರಿ
(2)    ಕುದುರೆ ಮುಖ
(3)    ಪುಷ್ಪಗಿರಿ
(4)    ಕಪ್ಪತ ಗುಡ್ಡ

ಸರಿ ಉತ್ತರ

(1) ಮುಳ್ಳಯ್ಯನ ಗಿರಿ


17.    ರಾಷ್ಟ್ರಪತಿಯವರು ಮರಣವಾದಲ್ಲಿ, ಅವರ ರಾಜೀನಾಮೆಯ ಅಥವಾ ಅವರ ರದ್ದತಿಯ ಕಾರಣದಿಂದ ತೆರವಾದ ಸ್ಥಾನವನ್ನು ಭರ್ತಿ ಮಾಡಲು ಈ ಕೆಳಗಿನ ಯಾವ ಸಂದರ್ಭದಲ್ಲಿ ಚುನಾವಣೆಯನ್ನು ನಡೆಸಬೇಕಾಗುವುದು?

(1)    ಸಾಧ್ಯವಾದಷ್ಟು ಬೇಗನೆ
(2)    ಒಂದು ವರ್ಷಕ್ಕಿಂತ ಹೆಚ್ಚಾಗದ ಅವಧಿಯಲ್ಲಿ
(3)    ಆರು ತಿಂಗಳ ಒಳಗಾಗಿ/ಅದಕ್ಕಿಂತ ಹೆಚ್ಚಾಗದ ಅವಧಿಯಲ್ಲಿ
(4)    9 ತಿಂಗಳುಗಳಿಗಿಂತ ಹೆಚ್ಚಾಗದ ಅವಧಿಯಲ್ಲಿ

ಸರಿ ಉತ್ತರ

(3) ಆರು ತಿಂಗಳ ಒಳಗಾಗಿ/ಅದಕ್ಕಿಂತ ಹೆಚ್ಚಾಗದ ಅವಧಿಯಲ್ಲಿ


18.    ಸಂಸತ್ ನಿಂದ ಒಂದು ನಿಧಿಯನ್ನು ಸ್ಥಾಪಿಸಿದ್ದು, ಅದನ್ನು ಸಭೆಯ ಅನಿರೀಕ್ಷಿತ ವೆಚ್ಚದ ಉದ್ದೇಶಕ್ಕಾಗಿ ಬಳಸಿಕೊಳ್ಳಲು ರಾಷ್ಟ್ರಪತಿಗಳ ಅಂತಿಮ ತೀರ್ಮಾನಕ್ಕಾಗಿ ಮಂಡಿಸಬೇಕಾಗಿದ್ದು ಅದು _________.

(1)    ಹಣಕಾಸು ಆಯೋಗ
(2)    ಭಾರತದ ಸಂಚಿತ ನಿಧಿ
(3)    ರಾಜ್ಯದ ಸಾದಿಲ್ವಾರು ನಿಧಿ
(4)    ಭಾರತದ ಸಾದಿಲ್ವಾರು ನಿಧಿ

ಸರಿ ಉತ್ತರ

(4) ಭಾರತದ ಸಾದಿಲ್ವಾರು ನಿಧಿ


19.    ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಇಲ್ಲಿ ಸವಿಸ್ತಾರ ಗೊಳಿಸಲಾಗಿದೆ.

(1)    ಮೂಲಭೂತ ಹಕ್ಕುಗಳು
(2)    ಮೂಲಭೂತ ಕರ್ತವ್ಯಗಳು
(3)    ರಾಜ್ಯ ನೀತಿ ನಿರ್ದೇಶಾತ್ಮಕ ತತ್ವಗಳು
(4)    ಇವುಗಳಲ್ಲಿ ಯಾವುವೂ ಅಲ್ಲ

ಸರಿ ಉತ್ತರ

(3) ರಾಜ್ಯ ನೀತಿ ನಿರ್ದೇಶಾತ್ಮಕ ತತ್ವಗಳು


20.    ರಾಜ್ಯ ಲೋಕಸೇವಾ ಆಯೋಗದ ಬಗ್ಗೆ ಯಾವುದು ಸರಿಯಲ್ಲ?

a.    ರಾಜ್ಯ ಸೇವೆಗಳಿಗೆ ಅಭ್ಯರ್ಥಿಗಳ ನೇಮಕಾತಿ ಮಾಡುವುದು.
b.    ಇದರ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ರಾಷ್ಟ್ರಾಧ್ಯಕ್ಷರು ನೇಮಕ ಮಾಡುತ್ತಾರೆ.
c.    ಅಖಿಲ ಭಾರತ ಸೇವೆಯ ಅಧಿಕಾರಿಗಳ ಶಿಸ್ತು ಪ್ರಕರಣಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ.
d.    ರಾಜ್ಯ ಸೇವೆಗಳ ನೇಮಕಾತಿ ವಿಧಾನದಲ್ಲಿ ರಾಜ್ಯಗಳಿಗೆ ಸಲಹೆಗಳನ್ನು ನೀಡುತ್ತದೆ.
    ಸಂಕೇತಗಳ ಸಹಯದಿಂದ ಸರಿಯಾದ ಉತ್ತರಗಳನ್ನು ಆರಿಸಿ.

(1)    a & b
(2)    b & c
(3)    c & d
(4)    a & d

ಸರಿ ಉತ್ತರ

(2) b & c


21.    ಕೆಳಗಿನ ಯಾವ ಸನ್ನಿವೇಶಗಳಲ್ಲಿ ರಾಜ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು?

A.    ರಾಜ್ಯ ಸರ್ಕಾರಗಳು ಚುನಾವಣಾ ಸಮಯದಲ್ಲಿ ನೀಡಿದ ಆಶ್ವಾಸನೆಗಳನ್ನು ನಡೆಸುವಲ್ಲಿ ವಿಫಲರಾದಾಗ
B.    ರಾಜ್ಯ ಸರ್ಕಾರಗಳು ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸದಿದ್ದಾಗ
C.    ರಾಜ್ಯ ಸರ್ಕಾರಗಳು ಕೇಂದ್ರದ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾದಾಗ
D.    ರಾಜ್ಯ ಸರ್ಕಾರಗಳು ನೈಸರ್ಗಿಕ ವಿಕೋಪಗಳ ಪರಿಸ್ಥಿತಿಗಳಲ್ಲಿ ತಮ್ಮ
ಸಹಾಯ ಹಸ್ತವನ್ನು ನೀಡುವಲ್ಲಿ ವಿಫಲವಾದಾಗ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ.

(1)    B & C
(2)    A & B
(3)    C & D
(4)    ಇವುಗಳಲ್ಲಿ ಎಲ್ಲವೂ

ಸರಿ ಉತ್ತರ

(1) B & C


22.    ಕರ್ನಾಟಕದಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ನೋಡಲ್ (ಸಂಧಿ) ಸಂಸ್ಥೆ ಯಾವುದು?

(1)    ಮಹಾತ್ಮ ಗಾಂಧಿ ಗ್ರಾಮೀಣ ವಸತಿ ನಿಗಮ
(2)    ಇಂದಿರಾ ಗಾಂಧಿ ಗ್ರಾಮೀಣ ವಸತಿ ನಿಗಮ
(3)    ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ
(4)    ಕರ್ನಾಟಕ ಗೃಹ (ವಸತಿ) ಮಂಡಳಿ

ಸರಿ ಉತ್ತರ

(3) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ


23.    2014-15ನೇ ಸಾಲಿನಲ್ಲಿ ಕರ್ನಾಟಕದ ಬೆಳೆ (Cropping) ಬಿತ್ತನೆ ತೀವ್ರತೆಯು,

(1)    ಶೇ.90
(2)    ಶೇ.100
(3)    ಶೇ.110
(4)    ಶೇ.120

ಸರಿ ಉತ್ತರ

(4) ಶೇ.120


24.    ನಿರ್ಮಲ್ ಗ್ರಾಮ ಪುರಸ್ಕಾರ್ ಇದಕ್ಕೆ ಸಂಬಂಧಿಸಿದೆ.

(1)    ಗ್ರಾಮೀಣ ಕುಡಿಯುವ ನೀರು
(2)    ಒಟ್ಟಾರೆ ನೈರ್ಮಲ್ಯ ಚಳುವಳಿ
(3)    ಜಲ ಸಂರಕ್ಷಣೆ
(4)    ಸಾಮಾಜಿಕ ಅರಣ್ಯ

ಸರಿ ಉತ್ತರ

(2) ಒಟ್ಟಾರೆ ನೈರ್ಮಲ್ಯ ಚಳುವಳಿ


25.    14ನೇ ಹಣಕಾಸು ಆಯೋಗವು ಕೇಂದ್ರದ ನಿವ್ವಳ ತೆರಿಗೆ ಹುಟ್ಟುವಳಿಯಲ್ಲಿ ರಾಜ್ಯದ ಪಾಲನ್ನು ಈ ರೀತಿ ಹೆಚ್ಚಿಸಲು ಶಿಫಾರಸ್ಸು ಮಾಡಿದೆ.

(1)    ಶೇ.32 ರಿಂದ ಶೇ.42
(2)    ಶೇ.32 ರಿಂದ ಶೇ.34
(3)    ಶೇ.34 ರಿಂದ ಶೇ.42
(4)    ಶೇ.28 ರಿಂದ ಶೇ.36

ಸರಿ ಉತ್ತರ

(1) ಶೇ.32 ರಿಂದ ಶೇ.42


26.    ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯು ಮಾನವ ಅಭಿವೃದ್ಧಿಯನ್ನು ಎಲ್ಲಾ ಅಭಿವೃದ್ಧಿ ಪ್ರಯತ್ನಗಳಿಗೆ ಮುಖ್ಯವೆಂದು ಗುರ್ತಿಸಿತು?

(1)    6ನೇ ಪಂಚವಾರ್ಷಿಕ ಯೋಜನೆ
(2)    7ನೇ ಪಂಚವಾರ್ಷಿಕ ಯೋಜನೆ
(3)    8ನೇ ಪಂಚವಾರ್ಷಿಕ ಯೋಜನೆ
(4)    9ನೇ ಪಂಚವಾರ್ಷಿಕ ಯೋಜನೆ

ಸರಿ ಉತ್ತರ

(3) 8ನೇ ಪಂಚವಾರ್ಷಿಕ ಯೋಜನೆ


27.    ಪ್ರಸ್ತುತ ಕರ್ನಾಟಕದಲ್ಲಿ ಎಷ್ಟು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಕಾರ್ಯಾಚರಣೆಯಲ್ಲಿವೆ?

(1)    16
(2)    12
(3)    8
(4)    4

ಸರಿ ಉತ್ತರ

(4) 4


28.    ಈ ಕೆಳಗಿನ ಯಾವುದು ಜಲಜನಕದ ಸ್ಥಿರ ಸಮಸ್ಥಾನಿಯಾಗಿದೆ?

(1)    ಡ್ಯುಟೇರಿಯಂ
(2)    ಹೈಡ್ರೋನಿಯಂ
(3)    ಟ್ರೀಟಿಯಂ
(4)    ಹೀಲಿಯಂ

ಸರಿ ಉತ್ತರ

(1) ಡ್ಯುಟೇರಿಯಂ


29.    ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಸಂಯುಕ್ತ ವಸ್ತು ಯಾವುದು?

(1)    ಮೀಥೈಲ್ ಐಸೋಸೈನೇಟ್
(2)    ಈಥೈಲ್ ಐಸೋಸೈನೇಟ್
(3)    ಪ್ರೊಹೈಲ್ ಐಸೋಸೈನೇಟ್
(4)    ಬ್ಯುಟೈಲ್ ಐಸೋಸೈನೇಟ್

ಸರಿ ಉತ್ತರ

(1) ಮೀಥೈಲ್ ಐಸೋಸೈನೇಟ್


30.    ಸೂಕ್ಷ್ಮ ಹಣಕಾಸು ಸಂಸ್ಥೆಗಳ ಅತ್ಯಂತ ಜನಪ್ರಿಯವಾದ ಮಾದರಿಗಳೆಂದರೆ,

(1)    ಸಹಕಾರಿ ಬ್ಯಾಂಕುಗಳು
(2)    ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
(3)    ಸ್ವ-ಸಹಾಯ ಗುಂಪುಗಳು
(4)    ವಿಶೇಷ ಉದ್ದೇಶದ ವಾಹನಗಳು

ಸರಿ ಉತ್ತರ

(3) ಸ್ವ-ಸಹಾಯ ಗುಂಪುಗಳು


31.    ಇವುಗಳಲ್ಲಿ ಯಾವುದನ್ನು ಅನ್ಯ (ಸ್ಟ್ರೇಂಜರ್) ಅನಿಲ ಎನ್ನುತ್ತಾರೆ?

(1)    ಕ್ಸೆನಾನ್
(2)    ಕಿಪ್ಟಾನ್
(3)    ಆರ್ಗಾನ್
(4)    ನಿಯಾನ್

ಸರಿ ಉತ್ತರ

(1) ಕ್ಸೆನಾನ್


32.    ಗಣಿಯಿಂದ ತೆಗೆದ ಸಾಮಾನ್ಯ ಉಪ್ಪು

(1)    ಅಯೋಡಿನ್ ನಿಂದ ಸಮೃದ್ಧವಾಗಿರುತ್ತದೆ
(2)    ಅಯೋಡಿನ್ ನ ಕೊರತೆಯಿಂದಿರುತ್ತದೆ
(3)    ಫ್ಲೋರಿನ್ ಸಮೃದ್ಧವಾಗಿರುತ್ತದೆ
(4)    ಫ್ಲೋರಿನ್ನ ಕೊರತೆಯಿಂದಿರುತ್ತದೆ

ಸರಿ ಉತ್ತರ

(2) ಅಯೋಡಿನ್ ನ ಕೊರತೆಯಿಂದಿರುತ್ತದೆ


33.    ಸೂರ್ಯನಲ್ಲಿ ಈ ಕೆಳಗಿನವುಗಳಲ್ಲಿ ಯಾವ ರೀತಿಯ ನ್ಯೂಕ್ಲಿಯರ್ ಪ್ರತಿಕ್ರಿಯೆ ನಡೆಯುತ್ತದೆ?

(1)    ಕ್ಲೋರಿನ್ ನ ನ್ಯೂಕ್ಲಿಯರ್ ಸಮ್ಮಿಳನ (ಫ್ಯೂಶನ್)
(2)    ಸೋಡಿಯಂನ ನ್ಯೂಕ್ಲಿಯರ್ ವಿದಳನ
(3)    ಜಲಜನಕದ ನ್ಯೂಕ್ಲಿಯರ್ ಸಮ್ಮಿಳನ
(4)    ಇಂಗಾಲದ ಡೈ ಆಕ್ಸೈಡ್ ನ ನ್ಯೂಕ್ಲಿಯರ್ ಸಮ್ಮಿಳನ

ಸರಿ ಉತ್ತರ

(3) ಜಲಜನಕದ ನ್ಯೂಕ್ಲಿಯರ್ ಸಮ್ಮಿಳನ


34.    ನ್ಯಾನೋ ಕಣದ ಗಾತ್ರವು ಕೆಳಕಂಡ ವ್ಯಾಪ್ತಿಯಲ್ಲಿರುತ್ತದೆ.

(1)    10⁻⁹ ಮೀಟರ್
(2)    10⁻³ ಮೀಟರ್
(3)    10⁻⁵ ಮೀಟರ್
(4)    10⁻² ಮೀಟರ್

ಸರಿ ಉತ್ತರ

(1) 10⁻⁹ ಮೀಟರ್


35.    ವಾತಾವರಣದ ವಾಯುವಿನಲ್ಲಿರುವ ಪ್ರಧಾನವಾದ ಘಟಕ ಯಾವುದು?

(1)    
(2)    
(3)    CO²
(4)    Ar

ಸರಿ ಉತ್ತರ

(1) N²


36.    ವಾಯಮಂಡಲದಲ್ಲಿ ಹಸಿರು ಮನೆ ಅನಿಲ ಸಾಂದ್ರೀಕರಣವು ಹೆಚ್ಚಾಗಲು ಮುಖ್ಯ ಕಾರಣಗಳೆಂದರೆ

(1)    ಪಳೆಯುಳಿಕೆ ಇಂಧನಗಳ ದಹನ
(2)    ಅರಣ್ಯ ನಿರ್ಮೂಲನ
(3)    ಕಾಡು ಮರುಬೆಳೆಸುವಿಕೆ (ಪುನರ್ ಅರಣ್ಯೀಕರಣ)
(4)    ಪಳೆಯುಳಿಕೆ ಇಂಧನಗಳ ದಹನ ಮತ್ತು ಅರಣ್ಯ ನಿರ್ಮೂಲನ

ಸರಿ ಉತ್ತರ

(4) ಪಳೆಯುಳಿಕೆ ಇಂಧನಗಳ ದಹನ ಮತ್ತು ಅರಣ್ಯ ನಿರ್ಮೂಲನ


37.    ಭತ್ತವನ್ನು _________ ಪದ್ಧತಿಯಿಂದ ಕೃಷಿ ಮಾಡುವುದರಿಂದ ಮೀಥೇನ್ ವಿಸರ್ಜನೆಯನ್ನು ತಡೆಗಟ್ಟಬಹುದು.

(1)    ಅವಾಯುವಿಕೆ (ಆಮ್ಲಜನಕ ರಹಿತ)
(2)    ವಾಯುವಿಕೆ (ಆಮ್ಲಜನಕ ಸಹಿತ)
(3)    ಭತ್ತ ಕೃಷಿಯ ಮುಳುಗಡೆಯ ವಿಧಾನ
(4)    ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(2) ವಾಯುವಿಕೆ (ಆಮ್ಲಜನಕ ಸಹಿತ)


38.    _________ಸ್ವತಂತ್ರ ರಾಡಿಕಲ್ ಗಳಿಂದಾಗಿ ಓಜೋನ್ ಪದರವು ಹಾನಿಯಾಗುತ್ತದೆ.

(1)    ಕ್ಯಾಲ್ಸಿಯಂ
(2)    ಕ್ಲೋರಿನ್
(3)    ತಾಮ್ರ
(4)    ಕ್ಯಾಡ್ಮಿಯಮ್

ಸರಿ ಉತ್ತರ

(2) ಕ್ಲೋರಿನ್


39.    ಕೆಳಕಾಣಿಸಿದ ಯಾವ ಅನಿಲವು ಗಾಳಿಯಲ್ಲಿ ಗರಿಷ್ಠ ಪ್ರತಿಶತವನ್ನುಳ್ಳದ್ದಾಗಿದೆ?

(1)    ಆಮ್ಲಜನಕ
(2)    ಸಾರಜನಕ
(3)    ಮೀಥೇನ್
(4)    ಇಂಗಾಲದ ಡೈಆಕ್ಸೈಡ್

ಸರಿ ಉತ್ತರ

(2) ಸಾರಜನಕ


40.    ಭಾರತೀಯ ತತ್ತ್ವಶಾಸ್ತ್ರದ ಸಾಂಖ್ಯ ಪರಂಪರೆಯ ಮೂಲವು ಇವರಿಗೆ ಸಂಬಂಧಿಸಿದೆ.

(1)    ಕಪಿಲ
(2)    ಅಜಿತ ಕೇಶ ಕಂಬಳಿ
(3)    ರಾಮಾನುಜ
(4)    ಕುಮಾರಿಲ ಭಟ್ಟ

ಸರಿ ಉತ್ತರ

(1) ಕಪಿಲ


41.    ದೆಹಲಿಯನ್ನು ಆಳಿದ ಕೆಳಗಿನ ಸುಲ್ತಾನರನ್ನು ಕಾಲಾನು ಕ್ರಮವಾಗಿ ಜೋಡಿಸಿ.

I.    ಶಂಶುದ್ದೀನ್ ಇಲ್ತಮಿಶ್
II.    ಯಾಸುಸದ್ದೀನ್ ಬಲ್ಬನ್
III.    ರಝಿಯಾ ಸುಲ್ತಾನಾ
IV.     ನಸೀರುದ್ದೀನ್ ಮಹಮದ್
ಕೆಳಗಿನ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ.

(1)    I, III, IV, II
(2)    I, II, III, IV
(3)    II, I, III, IV
(4)    IV, III, II, I

ಸರಿ ಉತ್ತರ

(1) I, III, IV, II


42.    ಒತ್ತಡದ ಎಸ್.ಐ. ಏಕಮಾನವು

(1)    ನ್ಯೂಟನ್
(2)    ಪ್ಯಾಸ್ಕಲ್
(3)    ಜೌಲ್
(4)    ವ್ಯಾಟ್

ಸರಿ ಉತ್ತರ

(2) ಪ್ಯಾಸ್ಕಲ್


43.    ಈ ಕೆಳಗಿನ ಯಾವ ಭಾರತದ ಪೋರ್ಚುಗೀಸ್ ನೆಲೆಗಳನ್ನು ಬ್ರಿಟಿಷರು ಆನಂತರ ವಶಪಡಿಸಿಕೊಂಡಿದ್ದು?

(1)    ಮುಂಬಯಿ
(2)    ಮದರಾಸು
(3)    ಗೋವಾ
(4)    ಕೊಚ್ಚಿನ್

ಸರಿ ಉತ್ತರ

(1) ಮುಂಬಯಿ


44.    ಈಸ್ಟ್ ಇಂಡಿಯಾ ಕಂಪನಿಯು ಇವರ ಆಳ್ವಿಕೆಯ ಅವಧಿಯಲ್ಲಿ ಸ್ಥಾಪನೆಯಾಯಿತು.

(1)    ಅಕ್ಬರ್
(2)    ಜಹಾಂಗೀರ್
(3)    ಷಾಹ ಜಹಾನ್
(4)    ಔರಂಗಜೇಬ್

ಸರಿ ಉತ್ತರ

(2) ಜಹಾಂಗೀರ್


45.    ಚಳಿಗಾಲದಲ್ಲಿ ಗಾಜಿನ ಕಿಟಕಿಗಳ ಹಿಂಬದಿಯಲ್ಲಿ ಕಂಡುಬರುವ ಇಬ್ಬನಿಯ ತೆರೆಗೆ ಕಾರಣವಾದ ಪ್ರಕ್ರಿಯೆ

(1)    ಸಾಂದ್ರೀಕರಣ
(2)    ಭಾಷ್ಪೀಭವನ
(3)    ತಿಳಿ ಪ್ರತ್ಯೇಕನ
(4)    ಉತ್ಪತನ (ಕರ್ಪೂರೀಕರಣ)

ಸರಿ ಉತ್ತರ

(1) ಸಾಂದ್ರೀಕರಣ


46.    ಬೀಬಿ ಕಾ ಮಕಬರಾ ಇಲ್ಲಿದೆ.

(1)    ಗೋಲ್ಕೊಂಡಾ
(2)    ಲಾಹೋರ್
(3)    ಔರಂಗಾಬಾದ್
(4)    ಆಗ್ರಾ

ಸರಿ ಉತ್ತರ

(3) ಔರಂಗಾಬಾದ್


47.    ಯಾವ ಆಲ್ಕೋಹಾಲನ್ನು ‘ವುಡ್ ಸ್ಪಿರಿಟ್’ ಎಂದೂ ಸಹ ಕರೆಯಲಾಗುತ್ತದೆ?

(1)    ಮಿಥನಾಲ್
(2)    ಪ್ರೊಪನಾಲ್
(3)    ಗ್ಲಿಸರಾಲ್
(4)    ಎಥನಾಲ್

ಸರಿ ಉತ್ತರ

(1) ಮಿಥನಾಲ್


48.    ಹೊಂದಿಸಿ ಬರೆಯಿರಿ.

I.    ಟೆಲಿಗ್ರಾಫ್                       1.    ಟಿಮ್ ಬರ್ನರ್ಸ್ ಲೀ
II.    ಫ್ಯಾಕ್ಸ್ ಪ್ರಕರಣ             2.    ಜೆಸಿಆರ್ ಲಿಕ್ಲೈಡರ್
III.    ಅರ್ಪ್ನೆಟ್                      3.    ಅಲೆಕ್ಸಾಂಡರ್ ಬೈನ್
IV.    ವರ್ಲ್ಡ್ ವೈಡ್ ವೆಬ್       4.    ಸರ್ ಚಾರ್ಲ್ಸ್ ವೆಟ್ ಸ್ಟೋನ್
ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಆರಿಸಿ.

        I     II   III   IV
(1)    4    3    2    1
(2)    4    2    3    1
(3)    3    2    4    1
(4)    4    1    2    3

ಸರಿ ಉತ್ತರ

(1) 4    3    2    1


49.    ಅಬಿಸೀನಿಯನ್ ಚಿನ್ನವು ಸುಮಾರಾಗಿ_________ದ ಮಿಶ್ರಲೋಹ.

(1)    90% ತಾಮ್ರ ಮತ್ತು 10% ಚಿನ್ನ
(2)    90% ಬೆಳ್ಳಿ ಮತ್ತು 10% ಚಿನ್ನ
(3)    90% ತಾಮ್ರ ಮತ್ತು 10% ಸತು
(4)    90% ಚಿನ್ನ ಮತ್ತು 10% ಸತು

ಸರಿ ಉತ್ತರ

(3) 90% ತಾಮ್ರ ಮತ್ತು 10% ಸತು


50.    ಪರಿಪೂರ್ಣವಾದ ಸ್ಪರ್ಧಾತ್ಮಕ ಮಾರುಕಟ್ಟೆಯ ಪರಿಕಲ್ಪನೆಯನ್ನು ಅರ್ಥಶಾಸ್ತ್ರದಲ್ಲಿ ವಿವರಿಸುವಾಗ ಇದರಲ್ಲಿ ಕಾಣದ ಕೈಯ ಪ್ರಭಾವವಿರುವ ಕಲ್ಪನೆಯನ್ನು ಮೊದಲಿಗೆ ವಿವರಿಸಿದವರು

(1)    ರಿಚರ್ಡ್ ಕ್ಯಾಂಟಿಲಾನ್
(2)    ಜಾನ್ ಲಾಕ್
(3)    ಆಡಮ್ ಸ್ಮಿತ್
(4)    ಆಲ್ರೆಡ್ ಚಾಂಡ್ಲರ್

ಸರಿ ಉತ್ತರ

(3) ಆಡಮ್ ಸ್ಮಿತ್


51.    ಪ್ರಾಸ್ತಾವಿತ ಸರಕು ಮತ್ತು ಸೇವಾ ತೆರಿಗೆ (GST)ಯು ಭಾರತದಲ್ಲಿ________

(1)    ಮೂಲ ಆಧಾರಿತ ಮೌಲ್ಯವರ್ಧಿತ ತೆರಿಗೆ
(2)    ಗಮ್ಯ ಸ್ಥಳಾಧಾರಿತ ಮೌಲ್ಯವರ್ಧಿತ ತೆರಿಗೆ
(3)    ಸರಕು ಮತ್ತು ಸೇವೆಗಳೆರಡನ್ನೂ ಆಧರಿಸಿದ ಮೂಲಾಧಾರಿತ ತೆರಿಗೆ
(4)    ಗಮ್ಯ ಸ್ಥಳಾಧಾರಿತ ಚಿಲ್ಲರೆ ಮಾರಾಟ ತೆರಿಗೆ

ಸರಿ ಉತ್ತರ

(2) ಗಮ್ಯ ಸ್ಥಳಾಧಾರಿತ ಮೌಲ್ಯವರ್ಧಿತ ತೆರಿಗೆ


52.    ಈ ವಿದ್ಯುತ್ಕಾಂತೀಯ ತರಂಗಗಳನ್ನು ತರಂಗ ದೂರದ ಅವರೋಹಣ ಕ್ರಮದಲ್ಲಿ ಬರೆಯಿರಿ.

I.    ರೇಡಿಯೋ ಅಲೆಗಳು
II.    ಅವಕೆಂಪು
III.    ಸೂಕ್ಷ್ಮ ತರಂಗಗಳು
IV.    ಗಾಮಾ ಕಿರಣಗಳು
V.    X ಕಿರಣಗಳು
ಈ ಕೆಳಗಿನ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರವನ್ನು ಗುರುತಿಸಿ.

(1)    I, II, III, IV, V
(2)    I, III, II, V, IV
(3)    III, II, V, IV, I
(4)    III, V, IV, II, I

ಸರಿ ಉತ್ತರ

(2) I, III, II, V, IV


53.    ಕೆಳಗಿನ ಘಟನೆಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿ.

a.    ಪ್ಲಾಸಿ ಕದನ
b.    ಬಕ್ಸಾರ್ ಕದನ
c.    3ನೇ ಪಾಣಿಪತ್ ಕದನ
d.    ವಾಂಡಿವಾಷ್ ಕದನ
    ಸೂಕ್ತ ಉತ್ತರಗಳನ್ನು ಸಂಕೇತಗಳಿಂದ ಆರಿಸಿ.

(1)    a, b, c, d
(2)    a, d, c, b
(3)    c, d, a, b
(4)    c, b, a, d

ಸರಿ ಉತ್ತರ

(2) a, d, c, b


54.    ಗಾಂಧೀಜಿಯವರ ರಾಜಕೀಯ ತತ್ವ ‘ಸರ್ವೋದಯ’ ಪರಿಕಲ್ಪನೆಯು ಪ್ರಭಾವಿತವಾದದ್ದು ಇದರಿಂದ

(1)    ಲಿಯೋ ಟಾಲ್ ಸ್ಟಾಯ್ ಅವರ, “ದಿ ಕಿಂಗ್ ಡಮ್ ಆಫ್ ಗಾಡ್ ಈಸ್ ವಿಥಿನ್ ಯೂ”
(2)    ಪಿ.ಬಿ.ಶೆಲ್ಲಿಯವರ, “ದಿ ಮಾಸ್ಕ್ ಆಫ್ ಅನಾರ್ಕಿ”
(3)    ಜಾನ್ ರಸ್ಕಿನ್ ರವರ “ಅನ್ ಟು ದಿಸ್ ಲಾಸ್ಟ್”
(4)    ಹೆಚ್.ಡಿ.ಥೋರಿಯಸ್ ಅವರ “ರೆಸಿಸ್ಟೆನ್ಸ್ ಟು ಸಿವಿಲ್ ಗೌರ್ನಮೆಂಟ್”

ಸರಿ ಉತ್ತರ

(3) ಜಾನ್ ರಸ್ಕಿನ್ ರವರ “ಅನ್ ಟು ದಿಸ್ ಲಾಸ್ಟ್”


55.    ಭಾರತ ಸರ್ಕಾರದ ಕಾಯ್ದೆ, 1935ರನ್ವಯ ಈ ಕೆಳಗಿನ ಯಾವುದು ಭಾರತದಿಂದ ಪೂರ್ಣವಾಗಿ ಪ್ರತ್ಯೇಕಗೊಂಡದ್ದು?

(1)    ನೇಪಾಳ
(2)    ಶ್ರೀಲಂಕಾ
(3)    ಬರ್ಮಾ
(4)    ಭೂತಾನ್

ಸರಿ ಉತ್ತರ

(3) ಬರ್ಮಾ


56.    ಗಂಗಾ ನದಿಯ ತಗ್ಗು ಬಯಲು ಆರ್ದ್ರ ವಾಯುಗುಣದ್ದು ಹಾಗೂ ವರ್ಷವಿಡೀ ಅಧಿಕ ತಾಪದ್ದು. ಈ ಕೆಳಗಿನವುಗಳಲ್ಲಿ ಯಾವುದು ಈ ಪ್ರದೇಶಕ್ಕೆ ಹೊಂದಿಕೆ ಆಗುವ ಬೆಳೆ?

(1)    ಗೋಧಿ ಮತ್ತು ಕಬ್ಬು
(2)    ಭತ್ತ ಮತ್ತು ಸೆಣಬು
(3)    ಭತ್ತ ಮತ್ತು ಕಬ್ಬು
(4)    ಗೋಧಿ ಮತ್ತು ಸೆಣಬು

ಸರಿ ಉತ್ತರ

(2) ಭತ್ತ ಮತ್ತು ಸೆಣಬು


57.    ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಿಕೆ ಆಗುವ ಜೋಡಿ ಯಾವುದು?

(1)    ಸುಂದರಿ : ಗುಜರಾತ್
(2)    ಬಿದಿರು : ತ್ರಿಪುರಾ
(3)    ಶ್ರೀಗಂಧ : ಮಧ್ಯ ಪ್ರದೇಶ
(4)    ತೇಗ : ರಾಜಸ್ಥಾನ

ಸರಿ ಉತ್ತರ

(2) ಬಿದಿರು : ತ್ರಿಪುರಾ


58.    ಶೋಂಪೆನ್ ಬುಡಕಟ್ಟು ಜನರು ಸಿಗುವುದು ಇಲ್ಲಿ

(1)    ನಾಗಾಲ್ಯಾಂಡ್
(2)    ಮಿಜೋರಾಮ್
(3)    ನಿಕೋಬಾರ್ ದ್ವೀಪಗಳು
(4)    ನೀಲಗಿರಿ ಬೆಟ್ಟಗಳು

ಸರಿ ಉತ್ತರ

(3) ನಿಕೋಬಾರ್ ದ್ವೀಪಗಳು


59.    ನವೆಂಬರ್ 26ಅನ್ನು ಭಾರತದ ಸಂವಿಧಾನ ದಿನವಾಗಿ ಆಚರಿಸಲು ಕಾರಣ

(1)    ಭಾರತವು ಜನವರಿ 26ಅನ್ನು ಗಣತಂತ್ರ ದಿನವಾಗಿ ಆಚರಿಸಲು 26.11.1949ರಂದು ನಿರ್ಧರಿಸಿತು.
(2)    ಸಂವಿಧಾನ ಸಭೆಯು ದಿನಾಂಕ 26.11.1949ರಂದು ಸಂವಿಧಾನವನ್ನು ಅಂಗೀಕರಿಸಿತು
(3)    ಸಂವಿಧಾನವು 26.11.1949ರಿಂದ ಜಾರಿಗೆ ಬಂದಿತು.
(4)    ಸಂವಿಧಾನ ಸಭೆಯು ಕರಡು ಸಮಿತಿಯನ್ನು ದಿನಾಂಕ 26.11.1949ರಂದು ನೇಮಿಸಿತು.

ಸರಿ ಉತ್ತರ

(2) ಸಂವಿಧಾನ ಸಭೆಯು ದಿನಾಂಕ 26.11.1949ರಂದು ಸಂವಿಧಾನವನ್ನು ಅಂಗೀಕರಿಸಿತು


60.    ಈ ಕೆಳಗಿನ ಯಾವ ಕರ್ನಾಟಕದ ನಗರಗಳನ್ನು 2016ರ ಜನವರಿಯಲ್ಲಿ ಮೊದಲ ಹಂತದ ಸಂಭಾವ್ಯ ನಗರಗಳ ಆಯೋಗಕ್ಕಾಗಿ ಗುರ್ತಿಸಲಾಯಿತು?

(1)    ದಾವಣಗೆರೆ ಮತ್ತು ಬೆಳಗಾವಿ
(2)    ಮಂಗಳೂರು ಮತ್ತು ಬೆಳಗಾವಿ
(3)    ತುಮಕೂರು ಮತ್ತು ದಾವಣಗೆರೆ
(4)    ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ

ಸರಿ ಉತ್ತರ

(1) ದಾವಣಗೆರೆ ಮತ್ತು ಬೆಳಗಾವಿ


61.    ಭಾರತದಲ್ಲಿನ ಹೆಪ್ಪುಗಟ್ಟದ ಸರೋವರ ಯಾವುದು?

(1)    ರೂಪ್ ಕುಂಡ ಸರೋವರ
(2)    ಪಾಂಗಾಂಗ್ ಸರೋವರ
(3)    ಚೊಲಾಮು ಸರೋವರ
(4)    ಲೋನಾರ್ ಸರೋವರ

ಸರಿ ಉತ್ತರ

(4) ಲೋನಾರ್ ಸರೋವರ


62.    ಉತ್ಪನ್ನದ ಅಂತಿಮ ಜೋಡಣೆ ಸಲುವಾಗಿ ಪ್ರತ್ಯೇಕ ಘಟಕಗಳನ್ನು ಉತ್ಪಾದಿಸುವ ಕೈಗಾರಿಕೆಗಳೆಂದರೆ:

(1)    ಪೂರಕ ಕೈಗಾರಿಕೆಗಳು
(2)    ಸಣ್ಣ ಪ್ರಮಾಣದ ಕೈಗಾರಿಕೆಗಳು
(3)    ಅನುಸಂಗಿಕ (ಅಧೀನ) ಕೈಗಾರಿಕೆಗಳು
(4)    ಗೃಹ ಕೈಗಾರಿಕೆಗಳು

ಸರಿ ಉತ್ತರ

(3) ಅನುಸಂಗಿಕ (ಅಧೀನ) ಕೈಗಾರಿಕೆಗಳು


63.    ಈ ಕೆಳಗಿನವುಗಳಲ್ಲಿ ಯಾವ ರಾಷ್ಟ್ರ ಭಾರತದೊಂದಿಗೆ ಅತಿ ಹೆಚ್ಚು ಉದ್ದದ ಗಡಿ ರೇಖೆ ಹೊಂದಿರುವ ದೇಶ?

(1)    ಚೀನಾ
(2)    ಬಾಂಗ್ಲಾದೇಶ
(3)    ನೇಪಾಳ
(4)    ಪಾಕಿಸ್ತಾನ

ಸರಿ ಉತ್ತರ

(2) ಬಾಂಗ್ಲಾದೇಶ


64.    ಗೊಳಗುಮ್ಮಟ ಗೋರಿಯು ಈ ಕೆಳಗಿನ ಅರಸನದಾಗಿದೆ.

(1)    ಮಹ್ಮದ್ ಆದಿಲ್ ಷಾ
(2)    ಆಲಿ ಆದಿಲ್ ಷಾ
(3)    ಎರಡನೇ ಇಬ್ರಾಹಿಂ ಆದಿಲ್ ಷಾ
(4)    ಈ ಮೇಲಿನ ಯಾವುವೂ ಅಲ್ಲ

ಸರಿ ಉತ್ತರ

(1) ಮಹ್ಮದ್ ಆದಿಲ್ ಷಾ


65.    ಭಾರತದಲ್ಲಿ ಯಾವ ಪ್ರದೇಶದಲ್ಲಿ ಮೊದಲ ಪಕ್ಷಿಧಾಮವನ್ನು ಸ್ಥಾಪಿಸಲಾಯಿತು?

(1)    ವೇಡಂತಾಂಗಲ್
(2)    ಕುದುರೆಮುಖ
(3)    ಬನ್ನೇರುಘಟ್ಟ
(4)    ಕಿಯೋಲೇಡಿಯೋ

ಸರಿ ಉತ್ತರ

(1) ವೇಡಂತಾಂಗಲ್


66.    ಈ ಕೆಳಗಿನ ಯಾವ ರಾಜ್ಯಗಳಲ್ಲಿ ಲ್ಯಾಟರೈಟ್ ಮಣ್ಣಿನ ಸಾರವು ಅಧಿಕವಾಗಿ ಇದೆ?

(1)    ಒರಿಸ್ಸಾ
(2)    ಗುಜರಾತ್
(3)    ಜಮ್ಮು ಮತ್ತು ಕಾಶ್ಮೀರ
(4)    ಅರುಣಾಚಲ ಪ್ರದೇಶ

ಸರಿ ಉತ್ತರ

(1) ಒರಿಸ್ಸಾ


67.    ಈ ಕೆಳಗಿನ ಬಂದರುಗಳ ಪೈಕಿ ಯಾವುದು ಲಗೂನ್ ಮರಳು ದಿಬ್ಬಗಳ ಮೇಲೆ ಅಭಿವೃದ್ಧಿಯಾದದ್ದು?

(1)    ಚೆನ್ನೈ
(2)    ಕೊಚ್ಚಿ
(3)    ಮುಂಬಯಿ
(4)    ವಿಶಾಖಪಟ್ಟಣಂ

ಸರಿ ಉತ್ತರ

(2) ಕೊಚ್ಚಿ


68.    2015ರಲ್ಲಿ 19ನೆಯ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರ ಉತ್ಸವ ನಡೆದಿದ್ದು ಇಲ್ಲಿ

(1)    ಹೊಸದೆಹಲಿ
(2)    ಹೈದರಾಬಾದ್
(3)    ಲಕ್ನೋ
(4)    ಪಣಜಿ

ಸರಿ ಉತ್ತರ

(2) ಹೈದರಾಬಾದ್


69.    ‘ಕಾರ್ಗಿಲ್: ಟರ್ನಿಂಗ್ ದ ಟೈಡ್’ ಪುಸ್ತಕದ ಕರ್ತೃ

(1)    ಸುರೇಶ್ ಗೋಯೆಲ್
(2)    ಅಮರ್ತ್ಯ ಪಾಣಿಗ್ರಾಹಿ
(3)    ಮೊಹಿಂದರ್ ಪುರಿ
(4)    ಸುದೀಪ್ ಚೌಹಾನ್

ಸರಿ ಉತ್ತರ

(3) ಮೊಹಿಂದರ್ ಪುರಿ


70.    ಭಾರತ ಸರ್ಕಾರದಿಂದ ಇತ್ತೀಚೆಗೆ ನೀತಿ ಆಯೋಗದ ಪೂರ್ಣಾವಧಿ ಸದಸ್ಯರಾಗಿ ನೇಮಕರಾದವರು ಯಾರು?

(1)    ಪ್ರೊ॥.ರಮೇಶ್ ಚಂದ್
(2)    ಪ್ರೊ॥.ಕೃಷ್ಣಮೂರ್ತಿ
(3)    ಪ್ರೊ॥.ಸುನೀಲ್ ಚೌಹಾನ್
(4)    ಪ್ರೊ॥.ಪ್ರಣಯ್ ಸಾಹು

ಸರಿ ಉತ್ತರ

(1) ಪ್ರೊ॥.ರಮೇಶ್ ಚಂದ್


71.    ಈ ಕೆಳಗಿನವುಗಳ ಪೈಕಿ ಯಾವ ಭಾರತೀಯ ಕ್ಷಿಪಣಿಯು ಅಮೆರಿಕಾದ ‘ಪೇಟ್ರಿಯಟ್ ಕ್ಷಿಪಣಿ’ಯನ್ನು ಹೋಲುತ್ತದೆ?

(1)    ಆಕಾಶ್
(2)    ಅಸ
(3)    ಆದಿತ್ಯ
(4)    ತೇಜಸ್

ಸರಿ ಉತ್ತರ

(1) ಆಕಾಶ್


72.    ಕಲಕದ ಮುಂಡನತುರಾಯಿ ಹುಲಿಗಳ ಕಾಯ್ದಿಟ್ಟ ಪ್ರದೇಶ ಇಲ್ಲಿದೆ?

(1)    ಆಂಧ್ರ ಪ್ರದೇಶ
(2)    ಕೇರಳ
(3)    ತಮಿಳುನಾಡು
(4)    ಕರ್ನಾಟಕ

ಸರಿ ಉತ್ತರ

(3) ತಮಿಳುನಾಡು


73.    ಅಮಿತ್ ಕುಂದು ಸಮಿತಿಯು ಇದಕ್ಕಾಗಿ ರಚಿತವಾಯಿತು?

A.    ಸಾಚಾರ್ ಸಮಿತಿಯ ವರದಿಯ ಕಾರ್ಯರೂಪದ ಅನುಷ್ಠಾನವನ್ನು ಕುರಿತು ಮೌಲ್ಯಮಾಪನ ಮಾಡುವುದು.
B.    ಲಭ್ಯವಿರುವ ಹಣಕಾಸಿನ ಸಂಪನ್ಮೂಲಗಳು ಮತ್ತು ಭೌತಿಕ ಗುರಿಗಳು ಅವಕಾಶ ವಂಚಿತ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಬಹಳ ಕಡಿಮೆ ಪ್ರಮಾಣದಲ್ಲಿವೆ.
C.    ಅಲ್ಪಸಂಖ್ಯಾತರ ಮಹಿಳೆಯರ ನಾಯಕತ್ವ ಅಭಿವೃದ್ಧಿ ಯೋಜನೆಗೆ ಹಂಚಿಕೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬೇಕು.
D.    ಶಿಷ್ಯವೇತನಗಳ ಸಂಖ್ಯೆಯನ್ನು ಬೇಡಿಕೆಯ ಆಧಾರದ ಮೇಲೆ ಹಂಚಿಕೆ ಮಾಡುವ ಅಗತ್ಯವಿದೆ.
ಈ ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ಎಂದು ಈ ಕೆಳಗಿನ ಸಂಕೇತಗಳ ಮೂಲಕ ಆರಿಸಿ ಉತ್ತರಿಸಿ.

(1)    A, B
(2)    A, B, C
(3)    A, B, C, D
(4)    B, C, D

ಸರಿ ಉತ್ತರ

(3) A, B, C, D


74.    ಹುಡ್ ಹುಡ್ ಎಂಬುದು

(1)    ತಮಿಳುನಾಡಿನ ನಗರ
(2)    ಆಂಧ್ರ ಪ್ರದೇಶದ ಒಂದು ಗಿರಿಧಾಮ
(3)    ಒಂದು ಚಂಡಮಾರುತ
(4)    ಕೇರಳದ ಒಂದು ಹಬ್ಬ

ಸರಿ ಉತ್ತರ

(3) ಒಂದು ಚಂಡಮಾರುತ


75.    ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಯಾವ ದೇಶವು ತನ್ನ ಸಂಸತ್ ಭವನದ ಒಂದು ಭಾಗವನ್ನು ಅಟಲ್ ಬ್ಲಾಕ್ ಎಂದು ಹೆಸರಿಸಿದೆ?

(1)    ಶ್ರೀಲಂಕಾ
(2)    ಇರಾನ್
(3)    ಭೂತಾನ್
(4)    ಆಫ್ಘಾನಿಸ್ತಾನ

ಸರಿ ಉತ್ತರ

(4) ಆಫ್ಘಾನಿಸ್ತಾನ


76.    ಈ ಉದ್ದೇಶಕ್ಕಾಗಿ ಡಾ.ಅರವಿಂದ ಸುಬ್ರಮಣ್ಯನ್ ಸಮಿತಿಯನ್ನು ರಚಿಸಲಾಗಿದೆ.

(1)    ಅಸಂಘಟಿತ ವಲಯದ ಕಾರ್ಮಿಕರ ಸುಧಾರಣೆಗಾಗಿ ಸಲಹೆಗಳನ್ನು ನೀಡಲು
(2)    ಸರಕು ಮತ್ತು ಸೇವೆಗಳ ತೆರಿಗೆ(ಜಿ.ಎಸ್.ಟಿ.)ಯ ಪ್ರಮಾಣಿತ ದರಗಳ ಸಲಹೆ ನೀಡಲು
(3)    ಬ್ಯಾಂಕಿಂಗ್ ವಲಯದ ಸುಧಾರಣೆಗಾಗಿ ಸಲಹೆಗಳನ್ನು ನೀಡಲು
(4)    ಸ್ಥಳೀಯ ಸಂಸ್ಥೆಗಳ ಹಣಕಾಸಿನ ಹಂಚಿಕೆಗಾಗಿ ಸಲಹೆಗಳನ್ನು ನೀಡಲು

ಸರಿ ಉತ್ತರ

(2) ಸರಕು ಮತ್ತು ಸೇವೆಗಳ ತೆರಿಗೆ(ಜಿ.ಎಸ್.ಟಿ.)ಯ ಪ್ರಮಾಣಿತ ದರಗಳ ಸಲಹೆ ನೀಡಲು


77.    ಸಿಂಪ್ಲಿಪಾಲ ಜೈವಿಕ ಕಾದಿಟ್ಟ ಅರಣ್ಯವು ಯಾವ ರಾಜ್ಯದಲ್ಲಿದೆ?

(1)    ತಮಿಳುನಾಡು
(2)    ಪಶ್ಚಿಮ ಬಂಗಾಳ
(3)    ಉತ್ತರಾಖಂಡ
(4)    ಒರಿಸ್ಸಾ

ಸರಿ ಉತ್ತರ

(4) ಒರಿಸ್ಸಾ


78.    ನವಿಲು ವನ್ಯ ಜೀವಿ ಅಭಯಾರಣ್ಯ ಇರುವುದು

(1)    ಮಲೈ ಮಹದೇಶ್ವರ
(2)    ಆದಿಚುಂಚನಗಿರಿ
(3)     ರಂಗನತಿಟ್ಟು
(4)    ಬ್ರಹ್ಮಗಿರಿ

ಸರಿ ಉತ್ತರ

(2) ಆದಿಚುಂಚನಗಿರಿ


79.    ಮ್ಯಾಗಿ ತಿನಿಸಿನ ಬಗ್ಗೆ ಈ ಕೆಳಗಿನ ಯಾವ ಉತ್ತರವು ಸರಿ ಅಲ್ಲ?

(1)    ಮ್ಯಾಗಿಯು ನೆಸ್ಲೆ ಕಂಪನಿಯ ಭಾಗವಾಗಿದೆ.
(2)    ಮ್ಯಾಗಿಯು ಫ್ರೆಂಚರ ಜನಪ್ರಿಯ ಆಹಾರ ಉತ್ಪನ್ನವಾಗಿದೆ.
(3)    ಅದು ಅನುಮತಿಸಲಾದ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ಸೀಸವನ್ನು ಹೊಂದಿದೆ ಎಂದು ಇತ್ತೀಚೆಗೆ ನಿಷೇಧಿಸಲ್ಪಟ್ಟಿದೆ.
(4)    ಹೇಗಿದ್ದರೂ ಮ್ಯಾಗಿ ಮತ್ತೆ ನಿಷೇಧದಿಂದ ತೆರವು ಕಂಡಿದೆ.

ಸರಿ ಉತ್ತರ

(2) ಮ್ಯಾಗಿಯು ಫ್ರೆಂಚರ ಜನಪ್ರಿಯ ಆಹಾರ ಉತ್ಪನ್ನವಾಗಿದೆ.


80.    ತೆಂಗಿನಕಾಯಿ ಸಂಸ್ಕರಣೆ ಘಟಕವನ್ನು ಇಲ್ಲಿ ಸ್ಥಾಪಿಸಲಾಗಿದೆ?

(1)    ಹಾಲಹಳ್ಳಿ
(2)    ರಾಮಹಳ್ಳಿ
(3)    ಕೊನೆನಹಳ್ಳಿ
(4)    ಬ್ಯಾಲಹಳ್ಳಿ

ಸರಿ ಉತ್ತರ

(3) ಕೊನೆನಹಳ್ಳಿ


81.    ಈ ಕೆಳಗಿನ ಯಾವುದು ಸರಿಯಲ್ಲ?

(1)    ಅಸ್ತ್ರಾ ಎಂಬುದು ಒಂದು ಕ್ಷಿಪಣಿ
(2)    ಇದು ದೇಶೀಯವಾಗಿ ತಯಾರಾದ ವಿಶ್ವದರ್ಜೆಯ ಕ್ಷಿಪಣಿ
(3)    ಇದನ್ನು 50ಕಿ.ಮೀ. ವ್ಯಾಪ್ತಿಯಷ್ಟು ದೂರ ಎಸೆಯಲು ರೂಪಿಸಿದ್ದಾರೆ
(4)    ಇದು ಅತಿ ವೇಗದಲ್ಲಿ ಚಲಿಸಿ ಕ್ಷಿಪ್ರಗತಿಯಲ್ಲಿ ಬರುವ ವೈಮಾನಿಕ ಯಂತ್ರಗಳನ್ನು ತಡೆದು ನಿಲ್ಲಿಸಬಲ್ಲದು.

ಸರಿ ಉತ್ತರ

(3) ಇದನ್ನು 50ಕಿ.ಮೀ. ವ್ಯಾಪ್ತಿಯಷ್ಟು ದೂರ ಎಸೆಯಲು ರೂಪಿಸಿದ್ದಾರೆ


82.    ‘ನೆವರ್ ಟು ಬಿ ಫರ್ ಗಾಟನ್ ಎಂಪೈರ್’ ಕೃತಿಯನ್ನು ಬರೆದವರು ಯಾರು?

(1)    ಪಿ.ಬಿ.ದೇಸಾಯಿ
(2)    ಬಿ.ಎ.ಸಾಲ್ ತೊರೆ
(3)    ರಾಬರ್ಟ್ ಸ್ಯೂಯೆಲ್
(4)    ಬಿ.ಸೂರ್ಯನಾರಾಯಣ ರಾವ್

ಸರಿ ಉತ್ತರ

(4) ಬಿ.ಸೂರ್ಯನಾರಾಯಣ ರಾವ್


83.    ಈ ಕೆಳಗಿನವುಗಳಲ್ಲಿ ಯಾವುದು ಸರಿ?

(1)    ವೋಕ್ಸವಾಗನ್ – ಇದೊಂದು ಸ್ಟಾರ್ಟ್ಅಪ್ ವರ್ಗ
(2)    ಝಕರಬರ್ಗ್ – ಕಾರ್ ತಯಾರಕರು
(3)    ಯುನಿಕಾರ್ನ್ – ಫೇಸ್ ಬುಕ್ ಸಂಸ್ಥಾಪಕರು
(4)    ವಿವೊ – ಚೀನಾದ ಸ್ಮಾರ್ಟ್ ಫೋನ್ ತಯಾರಕರು

ಸರಿ ಉತ್ತರ

(4) ವಿವೊ – ಚೀನಾದ ಸ್ಮಾರ್ಟ್ ಫೋನ್ ತಯಾರಕರು


84.    ಯಾವ ಶೃಂಗಸಭೆಯಲ್ಲಿ ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಅನ್ನು ಪ್ರಾರಂಭಿಸಲಾಯಿತು?

(1)    ರಷ್ಯಾ
(2)    ಭಾರತ
(3)    ಚೀನಾ
(4)    ಬ್ರೆಜಿಲ್

ಸರಿ ಉತ್ತರ

(4) ಬ್ರೆಜಿಲ್


85.    ಈ ಕೆಳಗಿನ ಯಾವುದರ ಅಭಿವೃದ್ಧಿಗಾಗಿ ರಾಷ್ಟ್ರೀಯ ಗೋಕುಲ್ ಮಿಷನ್ಅನ್ನು ರಚಿಸಲಾಯಿತು?

(1)    ಪಶು ಆಹಾರ
(2)    ಹಸುಗಳ ದೇಶೀಯ ತಳಿ
(3)    ಕುರಿ ಅಭಿವೃದ್ಧಿ
(4)    ಕುಕ್ಕುಟ (ಕೋಳಿ)ದ ದೇಶೀಯ ತಳಿ

ಸರಿ ಉತ್ತರ

(2) ಹಸುಗಳ ದೇಶೀಯ ತಳಿ


86.    ಹಕ್ಕು ಸ್ವಾಮ್ಯದ ಗೌರವಧನಕ್ಕಾಗಿ ಅಮೆರಿಕಾ (USA)ದಲ್ಲಿನ ಸ್ಯಾಮ್ ಸಂಗ್ ಕಂಪನಿ ಈ ಕೆಳಗಿನ ಯಾವ ಕಂಪನಿ ವಿರುದ್ಧ ದಾವೆ ಹೂಡಿದೆ?

(1)    ನೋಕಿಯಾ
(2)    ಆಪಲ್
(3)    ಎಲ್ಜಿ
(4)    ಮೈಕ್ರೋಸಾಫ್ಟ್

ಸರಿ ಉತ್ತರ

(4) ಮೈಕ್ರೋಸಾಫ್ಟ್


87.    ಎರಡನೆಯ ಆಡಳಿತ ಸುಧಾರಣಾ ಆಯೋಗದ ಮುಖ್ಯಸ್ಥರು ಯಾರು?

(1)    ಮಲ್ಲಿಕಾರ್ಜುನ ಖರ್ಗೆ
(2)    ಚಿದಾನಂದಗೌಡ
(3)    ವೀರಪ್ಪ ಮೊಯ್ಲಿ
(4)    ನಂಜುಂಡಪ್ಪ

ಸರಿ ಉತ್ತರ

(3) ವೀರಪ್ಪ ಮೊಯ್ಲಿ


88.    ಕರ್ನಾಟಕದಲ್ಲಿನ ಬಡತನದ ರೇಖೆಗಿಂತ ಮೇಲ್ಪಟ್ಟ (APL) ಕುಟುಂಬಗಳವರಿಗೆ ಈ ಕೆಳಗಿನ ಯಾವ ಕಾರ್ಯಕ್ರಮವು ಆರೋಗ್ಯ ರಕ್ಷಣೆಯನ್ನು ನೀಡುತ್ತದೆ?

(1)    ಯಶಸ್ವಿನಿ ಯೋಜನೆ
(2)    ರಾಜೀವ್ ಆರೋಗ್ಯ ಭಾಗ್ಯ ಯೋಜನೆ
(3)    ಗ್ರಾಮೀಣ ಆರೋಗ್ಯ ಮಿಷನ್
(4)    ಸ್ವಸ್ಥ ಆರೋಗ್ಯ ಯೋಜನೆ

ಸರಿ ಉತ್ತರ

(2) ರಾಜೀವ್ ಆರೋಗ್ಯ ಭಾಗ್ಯ ಯೋಜನೆ


89.    ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮಲವತ್ ಪೂರ್ಣ ಎಂಬ ಅತಿ ಕಿರಿಯ ಮಹಿಳೆಯು ಈ ಕೆಳಗಿನ ಯಾವ ರಾಜ್ಯದವರಾಗಿದ್ದಾರೆ?

(1)    ಕರ್ನಾಟಕ
(2)    ಮಧ್ಯ ಪ್ರದೇಶ
(3)    ಬಿಹಾರ
(4)    ಆಂಧ್ರ ಪ್ರದೇಶ

ಸರಿ ಉತ್ತರ

(4) ಆಂಧ್ರ ಪ್ರದೇಶ


90.    ಈ ಕೆಳಗಿನ ಒಂದು ಸ್ಥಳದಲ್ಲಿ ಸೂರ್ಯ ದೇವಾಲಯವಿಲ್ಲ. ಅದನ್ನು ಗುರುತಿಸಿ.

(1)    ಕೊನಾರ್ಕ್
(2)    ಮಾರ್ತಾಂಡ್
(3)    ಮೊಢೆರಾ
(4)    ಸಿರ್ ಪುರ್

ಸರಿ ಉತ್ತರ

(4) ಸಿರ್ ಪುರ್


91.    2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಜನಸಂಖ್ಯೆಯ ಅತಿಹೆಚ್ಚಿನ ಸಾಂದ್ರತೆಯಿರುವ ಜಿಲ್ಲೆ ಯಾವುದು?

(1)    ಹಾಸನ
(2)    ಗುಲ್ಬರ್ಗಾ
(3)    ಕೊಡಗು
(4)    ಬೆಂಗಳೂರು

ಸರಿ ಉತ್ತರ

(4) ಬೆಂಗಳೂರು


92.    ಕಾಂಗ್ರೆಸ್ ಪಕ್ಷವು_________ ಅಧಿವೇಶನದಲ್ಲಿ ವಿಭಜನೆಗೊಂಡಿತು?

(1)    ಪೂನಾ
(2)    ಸೂರತ್
(3)    ನಾಗ್ಪುರ
(4)    ಕಲ್ಕತ್ತಾ

ಸರಿ ಉತ್ತರ

(2) ಸೂರತ್


93.    ಭಗತ್ ಸಿಂಗ್_________ ಪಕ್ಷಕ್ಕೆ ಸೇರಿದವರು?

(1)    ಭಾರತದ ಕಮ್ಯುನಿಸ್ಟ್ ಪಕ್ಷ
(2)    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ
(3)    ಹಿಂದೂಸ್ತಾನ್ ಸಮಾಜವಾದಿ ಗಣರಾಜ್ಯ ಪಕ್ಷ
(4)    ಜಸ್ಟೀಸ್ ಪಕ್ಷ

ಸರಿ ಉತ್ತರ

(3) ಹಿಂದೂಸ್ತಾನ್ ಸಮಾಜವಾದಿ ಗಣರಾಜ್ಯ ಪಕ್ಷ


94.    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ಸಮಯದಲ್ಲಿ ಭಾರತದ ವೈಸ್ ರಾಯ್ ಆಗಿದ್ದವರು

(1)    ಲಾರ್ಡ್ ವಿಲಿಯಂ ಬೆಂಟಿಂಕ್
(2)    ಲಾರ್ಡ್ ಡಫರಿನ್
(3)    ಲಾರ್ಡ್ ಡಾಲ್ ಹೌಸಿ
(4)    ಲಾರ್ಡ್ ಇರ್ವಿನ್

ಸರಿ ಉತ್ತರ

(2) ಲಾರ್ಡ್ ಡಫರಿನ್


95.    ‘ನೇರ ಕ್ರಿಯಾ ದಿನ’ (ಡೈರೆಕ್ಟ್ ಆಕ್ಷನ್ ಡೇ) ವು ಇವರಿಂದ ಆಚರಿಸಲ್ಪಟ್ಟಿತು.

(1)    ಮೊಹಮ್ಮದ್ ಅಲಿ ಜಿನ್ನಾ
(2)    ಮಹಾತ್ಮ ಗಾಂಧೀಜಿ
(3)    ಸುಭಾಷ್ ಚಂದ್ರ ಬೋಸ್
(4)    ಭಗತ್ ಸಿಂಗ್

ಸರಿ ಉತ್ತರ

(1) ಮೊಹಮ್ಮದ್ ಅಲಿ ಜಿನ್ನಾ


96.    ಮಾತೃಭಾಷಾ ಮುದ್ರಣ ಕಾಯ್ದೆಯು_________ ವರ್ಷದಲ್ಲಿ ಜಾರಿಗೊಳಿಸಲ್ಪಟ್ಟಿತು?

(1)    1885
(2)    1878
(3)    1881
(4)    1905

ಸರಿ ಉತ್ತರ

(2) 1878


97.    ಈ ಕೆಳಗಿನ ಯಾರು ಪಲ್ಲವ ಪೊತವರ್ಮನನ್ನು ಸೋಲಿಸಿ ಕಂಚಿಯನ್ನು ವಶಪಡಿಸಿಕೊಂಡರು?

(1)    ಎರಡನೇ ವಿಕ್ರಮಾದಿತ್ಯ
(2)    ಜಯಸಿಂಹ
(3)    ಒಂದನೇ ನರಸಿಂಹವರ್ಮ
(4)    ಮಹೇಂದ್ರ ವರ್ಮನ್

ಸರಿ ಉತ್ತರ

(1) ಎರಡನೇ ವಿಕ್ರಮಾದಿತ್ಯ


98.    ವಿಜಯಭಟ್ಟಾರಿಕೆಯು ಈ ಕೆಳಗಿನ ಯಾರ ರಾಣಿಯಾಗಿದ್ದಳು?

(1)    ಒಂದನೇ ವಿಕ್ರಮಾದಿತ್ಯ
(2)    ಚಂದ್ರಾದಿತ್ಯ
(3)    ವಿಜಯಾದಿತ್ಯ
(4)    ವಿನಯಾದಿತ್ಯ

ಸರಿ ಉತ್ತರ

(2) ಚಂದ್ರಾದಿತ್ಯ


99.    ರಾಷ್ಟ್ರಕೂಟರ ಲತ್ತಲೂರು ಈ ಕೆಳಗಿನ ಯಾವ ಪ್ರಾಂತ್ಯಕ್ಕೆ ಸೇರಿದೆ?

(1)    ಆಂಧ್ರ ಪ್ರದೇಶ
(2)    ಮಹಾರಾಷ್ಟ್ರ
(3)    ಕರ್ನಾಟಕ
(4)    ಒರಿಸ್ಸಾ

ಸರಿ ಉತ್ತರ

(2) ಮಹಾರಾಷ್ಟ್ರ


100.    ಎರಡನೇ ಪುಲಕೇಶಿಯು ಈ ಕೆಳಗಿನ ಯಾರನ್ನು ವೆಂಗಿಯ ಗೌರ್ನರ್ ಆಗಿ ನೇಮಕ ಮಾಡಿದನು?

(1)    ವಿಷ್ಣುವರ್ಧನ
(2)    ಮಂಗಲರಾಜ
(3)    ನಾಗವರ್ಧನ
(4)    ಧ್ರುವರಾಜ ಇಂದ್ರವರ್ಮನ್

ಸರಿ ಉತ್ತರ

(1) ವಿಷ್ಣುವರ್ಧನ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

Related Posts

kpsc group c GK previous question paper 02.04.2023

kpsc group c paper 2 (kannada, english, computer) question paper 02.04.2023

kpsc group c paper 2 (computer, kannada, english) question paper 19.03.2023

Leave a comment