ನೀವು 10ನೇ ತರಗತಿಯ ಕನ್ನಡ ಲಂಡನ್ ನಗರ ಪಾಠದ ಪ್ರಶ್ನೆ ಉತ್ತರ ಹುಡುಕುತ್ತಿದ್ದೀರಾ? ಹಾಗಿದ್ರೆ ಇಲ್ಲಿ ಕ್ಲಿಕ್ ಮಾಡಿ ಯಾಕಂದ್ರೆ, ಇಲ್ಲಿ 10ನೇ ತರಗತಿಯ ಲಂಡನ್ ನಗರ ಕನ್ನಡ ಪಾಠದ ಪ್ರಶ್ನೆ ಉತ್ತರಗಳು, ಕವಿ ಪರಿಚಯ, ಶಬ್ದಗಳ ಅರ್ಥ, ವ್ಯಾಕರಣ ಇತ್ಯಾದಿ ಒಳಗೊಂಡ ಎಲ್ಲಾ ಸಂಪೂರ್ಣ ಮಾಹಿತಿ ನೀಡಿದ್ದೇವೆ. 10ನೇ ತರಗತಿಯ ವಾರ್ಷಿಕ ಪರೀಕ್ಷೆ ಮತ್ತು ಘಟಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲಿ ಇದು ಸಹಾಯ ಮಾಡುತ್ತದೆ.
10ನೇ ತರಗತಿ ಕನ್ನಡ | |
---|---|
ಗದ್ಯಪಾಠ 2 | ಲಂಡನ್ ನಗರ |
ಕವಿ | ವಿ ಕೃ ಗೋಕಾಕ್ |
ಕವಿ – ಕಾವ್ಯ ಪರಿಚಯ
ವಿ.ಕೃ. ಗೋಕಾಕ್
ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ. ವಿನಾಯಕ ಕೃಷ್ಣ ಗೋಕಾಕ ಇವರು
ಕ್ರಿ.ಶ.೧೯೦೯ ರಲ್ಲಿ ಹಾವೇರಿ ಜಿಲ್ಲೆಯಸವಣೂರು ಎಂಬ ಊರಿನಲ್ಲಿ ಜನಿಸಿದ್ದಾರೆ.
ಇವರುಸಮುದ್ರದಾಚೆಯಿಂದ ,ಸಮುದ್ರಗೀತೆಗಳು , ಪಯಣ, ಉಗಮ, ಇಜ್ಜೋಡು, ಸಮರಸವೇ
ಜೀವನ, ಭಾರತ ಸಿಂಧುರಶ್ಮಿ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ‘ದ್ಯಾವಾ
ಪೃಥಿವೀ’ಕಕೃತಿಗೆ ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಸಮಗ್ರ ಸಾಹಿತ್ಯಕ್ಕಾಗಿ ‘ಜ್ಞಾನಪೀಠ ಪ್ರಶಸ್ತಿ’
ಬಂದಿವೆ. ಭಾರತ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.
London nagara question answers
ಲಂಡನ್ ನಗರ ಅಭ್ಯಾಸ ಪ್ರಶ್ನೋತ್ತರಗಳು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
1. ಲಂಡನ್ನಿನ ರಸ್ತೆಗಳಲ್ಲಿ ಟ್ರಾಮ್ ಬಸ್ಸುಗಳು ಬಹಳ ಹೊತ್ತು ನಡು ನಡುವೆ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?
ಲಂಡನ್ನಿನ ರಸ್ತೆಗಳಲ್ಲಿ ಟ್ರಾಮ್ ಬಸ್ಸುಗಳು ಬಹಳ ಹೊತ್ತು ನಡು ನಡುವೆ ನಿಲ್ಲುವುದನ್ನು ತಪ್ಪಿಸಲು
ಭೂಗರ್ಭದಲ್ಲಿ (ಅಂಡರ್ ಗ್ರೌಂಡ್) ಓಡಾಡಡುವ ವ್ಯವಸ್ಥೆಯನ್ನು ಮಾಡಿದ್ದಾರೆ.
2. ನೆಲ್ಸನ್‌ರವರ ಮೂರ್ತಿಯಿರುವ ಸ್ಥಳದ ಹೆಸರೇನು ?
ನೆಲ್ಸನ್ ಮೂರ್ತಿ ಇರುವ ಸ್ಥಳದ ಹೆಸರು‘ಟ್ರಾ ಫಲ್ಗಾರ್ ಸ್ಕೊಯ್ರ್
3. ‘ವೆಸ್ಟ್ ಮಿನ್‌ಸ್ಟರ್ ಅಬೆ’ ಯಾರ ಸ್ಮಾರಕವಾಗಿದೆ ?
‘ವೆಸ್ಟ್ ಮಿನ್‌ಸ್ಟರ್ ಅಬೆ’ಎಂಬ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ. ಇದು ಸತ್ತಿರುವ ಸಂತರ,
ಸಾರ್ವಭೌಮರ ಹಾಗೂ ಕವಿಪುಂಗವರ ಸ್ಮಾರಕವಾಗಿದೆ.
4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ಯಾವುದು ?
ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ‘ಚೇರಿಂಗ್ ಕ್ರಾಸ್’
ಹೆಚ್ಚುವರಿ ಪ್ರಶ್ನೋತ್ತರಗಳು
london nagara practice question and answer
5. ಸ್ಯಾವ್ಯೊಯ್ ಸಿಂಪಿಗಳ ಒಂದು ಸಾದಾ ಸೂಟು ಹೊಲಿಯಲು ಎಷ್ಟು ರೂಪಾಯಿ ತೆಗೆದುಕೊಳ್ಳುತ್ತಾರೆ ?
ಸ್ಯಾವ್ಯೊಯ್ ಸಿಂಪಿಗಳ ಒಂದು ಸಾದಾ ಸೂಟು ಹೊಲಿಯಲು ಸುಮಾರು ನೂರು ರೂಪಾಯಿ ತೆಗೆದುಕೊಳ್ಳುತ್ತಾರೆ.
6. ಲಂಡನ್ ನಗದಲ್ಲಿ ಇಂಡಿಯಾ ಆಫೀಸು ಯಾವ ಓಣಿಯಲ್ಲಿದೆ ?
ಲಂಡನ್ ನಗರದಲ್ಲಿ ಇಂಡಿಯಾ ಆಫೀಸು ‘ಚೇರಿಂಗ್ ಕ್ರಾಸ್’ ಎಂಬ ಓಣಿಯಲ್ಲಿದೆ.
7. ಆಂಗ್ಲರ ಕೀರ್ತಿಧ್ವಜವನ್ನು ನಿಲ್ಲಿಸಿದರು ಯಾರು ?
ಆಂಗ್ಲರ ಕೀರ್ತಿಧ್ವಜವನ್ನು ನಿಲ್ಲಿಸಿದವರು ಅಲ್ಲಿಯ ಚತುರ ರಾಜಕಾರಣಿಗಳು.
8. ವೆಸ್ಟ್ಮಿನ್‌ಸ್ಟರ್ ಮಂದಿರದಲ್ಲಿರುವ ಕಲ್ಲುಪಾಟಿ ಎಂಬ ಶಿಲೆಯನ್ನೊಳಗೊಂಡ ರಾಜರ ಸಿಂಹಾಸನದ ಮತ್ತೊಂದುಹೆಸರೇನು ?
ವೆಸ್ಟ್ಮಿನ್‌ಸ್ಟರ್ ಮಂದಿರದಲಿ ಕಲ್ಲುಪಾಟಿ ಎಂಬ ಶಿಲೆಯನ್ನೊಳಗೊಂಡ ರಾಜರ ಸಿಂಹಾಸನದ ಮತ್ತೊಂದು
ಹೆಸರು‘ಸ್ಟೋನ್ ಆಫ್ ಸ್ಕೋನ್’
9. ಕಲ್ಲುಪಾಟಿಯನ್ನು ೩ನೇ ಎಡ್ವರ್ಡನು ಯಾವ ಅರಸರಿಂದ ಕಿತ್ತುಕೊಂಡು ಬಂದನು ?
ಕಲ್ಲುಪಾಟಿಯನ್ನು ೩ನೇ ಎಡ್ವರ್ಡನು ಸ್ಕಾಟ್‌ಲೆಂಡಿನ ಅರಸರಿಂದ ಕಿತ್ತುಕೊಂಡು ಬಂದನು.
10. ಟ್ರಾಮ್ ಗಾಡಿಗಳು ಹೇಗೆ ಹೋಗುತ್ತವೆ ?
ಕತ್ತಲ ಗವಿಯಂತಿರುವ ಅಂಡರ್ ಗ್ರೌಂಡ್‌ನಲ್ಲಿ ನಿಮಿಷಕ್ಕೊಂದರಂತೆ ಟ್ರಾಮ್ ಗಾಡಿಗಳು ಧಡಧಡ ಶಬ್ಧ ಮಾಡುತ್ತಾ ಹೋಗುತ್ತಿರುತ್ತವೆ
11. ವೈಜ್ಞಾನಿಕರ ಮೂಲೆಯಲ್ಲಿ ಕಂಡುಬರುವ ದೊಡ್ಡದಾದ ಶಿಲಾಮೂರ್ತಿ ಯಾರದ್ದು ?
ವೈಜ್ಞಾನಿಕರ ಮೂಲೆಯಲ್ಲಿ ಕಂಡುಬರುವ ದೊಡ್ಡದಾದ ಶಿಲಾಮೂರ್ತಿ ಪ್ರಸಿದ್ಧ ವಿಜ್ಞಾನಿ ನ್ಯೂಟನ್‌ರದ್ದಾಗಿದೆ.
12. ಇಂದಿಗೂ ಕಬ್ಬಿದ ಮನೆ ಸ್ಪೂರ್ತಿಯ ಮನೆಯಾಗಿರುವುದು ಯಾವುದು ?
ಇಂದಿಗೂ ಕಬ್ಬಿಗರ ಸ್ಪೂರ್ತಿಯ ತವರು ಮನೆಯಾಗಿರುವುದು ವೆಸ್ಟ್ಮಿನ್‌ಸ್ಟರ್ ಅಬೆ ಎಂಬ ಪ್ರಾರ್ಥನಾ ಮಂದಿra.
London nagara 2-3 sentence question answers
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು?
`ವೂಲವರ್ಥ ’ ಎಂಬುದು‘ಸ್ಟೇಷನರಿ’ ಅಂಗಡಿ. ಇದೊಂದು ಮಹಾಕೋಶದಂತಿದೆ. ಈ ವೂಲವರ್ಥ ಅಂಗಡಿಯಲ್ಲಿ ಬೂಟು , ಕಾಲುಚೀಲ , (ಚಡ್ಡಿ) , ಸಾಬೂನು , ಔಷಧ , ಪುಸ್ತಕ , ಅಡಿಗೆಯ ಪಾತ್ರೆ , ಇಲೆಕ್ಟ್ರಿಕ್ ದೀಪದ ಸಾಮಾನು ,
ಫೊಟೋ , ಅಡವಿಯ ಹೂವು , ಯುದ್ಧಸಾಮಗ್ರಿ ಎಲ್ಲವೂ ದೊರೆಯುತ್ತವೆ.
2. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ?
ಲಂಡನ್ನಿನ ಹೆಣ್ಣು ಮಕ್ಕಳು ಉಪಹಾರಗಳಲ್ಲಿ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಟೈಪಿಸ್ಟ್ ಆಗಿ,
(ಗುಮಾಸ್ತರು), ಹಾಗೂ ಸಿನಿಮಾ ಗೃಹದಲ್ಲಿ ಪ್ರೇಕ್ಷಕರಿಗೆ ಜಾಗವನ್ನು ಹುಡುಕಿಕೊಡುವ ಕೆಲಸದಲ್ಲಿ
ನಿಯುಕ್ತರಾಗಿರುತ್ತಾರೆ.
3. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ ?
ಟೊಪ್ಪಿಗೆಯ ವಿಶೇಷತೆಯನ್ನು ಕುರಿತು “ಒಂದ“ಒಂದು ಟೊಪ್ಪಿಗೆ ಇನ್ನೊಂದಿರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಟಪಕ್ಷ ಬೇರೆಯಾಗಿರುತ್ತದೆ. ಕೋಟ್ಯಾವಧಿ ಟೊಪ್ಪಿಗಳನ್ನು ಬೇಕಾದರೆ ಪರೀಕ್ಷಿಸಿ ಇದನ್ನು ಮನಗಾಣಬಹುದು. ಮನುಷ್ಯನಂತೆ ಟೊಪ್ಪಿ ? ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ” ಎಂದು ಲೇಖಕರು ದಾಖಲಿಸಿದ್ದಾರೆ.
4. ಪೊಯೆಟ್ ಕಾರ್ನರ್‌ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?
ಪೊಯಟ್ಸ್ ಕಾರ್ನರ್‌ನಲ್ಲಿ ಪ್ರಸಿದ್ಧ ಇಂಗ್ಲಿಷ್ ಲೇಖಕರಾದ ಕಿಪ್ಲಿಂಗ್, ಹಾರ್ಡಿ, ಮ್ಯಾಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್, ಪ್ರಸಿದ್ಧ ವಿಮರ್ಶಕನಾದ ಡ್ರಾಯ್‌ಡನ್, ಬ್ರಿಟನ್‌ನ್ನಿನ ರಾಷ್ಟçಕವಿ ವರ್ಡ್ಸ್ವರ್ತ್, ಪ್ರಖ್ಯಾತ ನಾಟಕಕಾರ ಬೆನ್‌ಜಾನ್ಸನ್ ಮೊದಲಾದವುಗಳು ಸಮಾಧಿಗಳಿವೆ.
5. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆಯೇನು ?
ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲುಪಾಟಿಯ ವಿಶೇಷತೆ ಏನೆಂದರೇ ಬ್ರಿಟೀಷ್ ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರೂ ಕೂರುವ ಸಿಂಹಾಸನದ ಮೇಲೆ ಈ ಕಲ್ಲು ಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂ. ಈ ಶಿಲೆಯನ್ನು ೩ನೇ ಎಡ್ವರ್ಡನು ಸ್ಕಾಟ್‌ಲೆಂಡಿನ ಅರಸರಿಂದ ಇದರಲ್ಲಿ ಕಿತ್ತುಕೊಂಡು ಬಂದAತೆ ಕಾಣುತ್ತದೆ. ಅಂದಿನಿAದ ಎಲ್ಲ ಸಾಮ್ರಾಟರ ಅಭಿಷೇಕ ಈ ಕಲ್ಲಿನ ಮೇಲೆಯೇ ಆಗಿದೆ. ಈ ಕಲ್ಲುಪಾಟಿ ಎಂಬ ಶಿಲೆಯನ್ನೊಳಗೊಂಡ ರಾಜರ ಸಿಂಹಾಸನವಿದೆ. ಸ್ಟೋನ್ ಆಫ್ ಸ್ಕೋನ್ ಎಂದು ಇದರ ಹೆಸರು.
6. ಚೇರಿಂಗ್ ಕ್ರಾಸ್ ಓಣಿಯ ವಿಶೇಷತೆಯೇನು ?
ಆಂಗ್ಲ ಸಾಮ್ರಾಜ್ಯದ ಕಂಡು ಬರುವ ಓಣಿ ಚೇರಿಂಗ್ ಕ್ರಾಸ್. ಈ ಓಣಿಯಲ್ಲಿ ಇಂಡಿಯಾ ಆಫೀಸು ಇದೆ. ಈ
ಆಫೀಸಿನ ಹತ್ತಿರ ಆಫ್ರಿಕಾದ ಕಚೇರಿ, ಇನ್ನೊಂದು ವಸಾಹತಿನ , ನೂರೆಂಟು ಬ್ಯಾಂಕ್‌ಗಳು ದೊಡ್ಡ ಕಂಪೆನಿಗಳ
ಕಛೇರಿಗಳು, ಎಲ್ಲವೂ ಇಲ್ಲವೆ. ಒಂದೊಂದು ದೇಶದ ಮೇಲಿನ ಪ್ರಭುತ್ವ ಇಲ್ಲಿಯ ಒಂದೊಂದು ರಿತಿಯಿಂದ ನಡೆಯುತ್ತಿದೆ. ಈ ಚೇರಿಂಗ್ ಕ್ರಾಸ್ ಎಂಬ ದೊಡ್ಡ ಬೀದಿಯು ಆಂಗ್ಲ ಸಾಮ್ರಾಜ್ಯದ ಬೀದಿ ಆಗಿದೆ.
7. ಚೇರಿಂಗ್ ಕ್ರಾಸ್ ಓಣಿಯಲ್ಲಿರುವ ಇಂಡಿಯಾ ಆಫೀಸು ಕುರಿತು ಬರೆಯಿರಿ.
ಆಂಗ್ಲ ಸಾಮ್ರಾಜ್ಯದ ಕಂಡು ಬರುವ ಓಣಿ ‘ಚೇರಿಂಗ್ ಕ್ರಾಸ್ ’ ಓಣಿಯಲ್ಲಿ ಇಂಡಿಯಾ ಆಫೀಸು ಇದೆ. ಅಲ್ಲಿಯ
ವಾಚನಾಲಯದಲ್ಲಿ ಅನೇಕ ಮಹತ್ವದ ಪುಸ್ತಕಳಿವೆ. ಕರ್ನಾಟಕದ ವಿಷಯವಾಗಿ ಎಷ್ಟೋ ಹೊಸ ವಿಷಯಗಳು ಇಲ್ಲಿ ಗೊತ್ತಾಗಬಹುದೆಂದು ಕಾಣುತ್ತದೆ. ಇಲ್ಲಿಯ ವಸ್ತು ಸಂಗ್ರಹಾಲಯದಲ್ಲಿ ಹಿಂದೂಸ್ಥಾನದ ಲಲಿತ ಕಲೆಯ ಹಾಗೂ ಇನ್ನುಳಿದ ಮಾರ್ಗಗಳ ಮಾದರಿಗಳು ನೋಡಲು ದೊರೆಯುತ್ತವೆ. ಎಲ್ಲ ಮುಖ್ಯವಾದ ಇಂಗ್ಲಿಷ್ ವರ್ತಮಾನ ಪತ್ರಿಕೆಯು ಬರುತ್ತವೆ.
8. ರಾಜಮಂದಿರದಲ್ಲರುವ ಮೂರ್ತಿಗಳ ಹೆಸರನ್ನು ತಿಳಿಸಿ
ರಾಜಮಂದಿರದಲ್ಲಿ ಸಿಂಹ ರಿಚರ್ಡ್, ೨ನೆಯ ಎಡ್ವರ್ಡ್, , ರಾಣಿ ಎಲಿಜಬೆತ್, ೧ನೆಯ ಜೇಮ್ಸ್ ಮೊದಲಾದವರ ಮೂರ್ತಿಗಳಿವೆ. ಮುಖ್ಯತಃ ಗೋರಿಯ ಮೇಲೆ ಆ ವ್ಯಕ್ತಿಯು ಮಲಗಿಕೊಂಡAತೆ ಮೂರ್ತಿಗಳು ಕೆತ್ತಿದ್ದಾರೆ. ಮಂದಿರದ ಹಿಂದೆ ಭವ್ಯವಾಗಿ ೭ನೆಯ ಹೆನ್ರಿಯ ಗೋರಿಯು ನಿಂತಿದೆ.
10th kannada chapter 2 London nagara question answers
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು ?
ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಲಂಡನ್ ನಗರ್ದ ವ್ಯಾಪಾರ , ಟ್ರಾಮ್ ಬಸ್ಸುಗಳು
ಗರ್ಭದಲ್ಲಿ ಓಡಾಡುವವ್ಯವಸ್ಥೆ ಮತ್ತು ಹತ್ತಿ ಇಳಿಯಲು ಇರುವ ಎಸ್ಕಲೇರ‍್ಸ್ಸ್ ಕುರಿತು ಗುರುತಿಸಿದ್ದಾರೆ. ನಂತರ ಪೇಟೆಯಲ್ಲಿನ ವೂಲವರ್ಥ ಎಂಬ ಸ್ಟೇಷನರಿ ಅಂಗಡಿ. ಈ ಅಂಗಡಿಯಲ್ಲಿ ಸಿಗುವ ಬೂಟು, ಸಾಬೂನು, ಪುಸ್ತಕ , ಹೂವು , ಯುದ್ಧ ಸಾಮಾಗ್ರಿಗಳು ಮುಂತಾದ ವಸ್ತುಗಳನ್ನು ಹೆಸರಿಸಿದ್ದಾರೆ. ಆನಂತರ ಸೂಟು ಹೊಲಿಯುವ ಸಿಂಪಿಗಳ ಬಗ್ಗೆ ವಿವರಿಸಿದ್ದಾರೆ. ಲಂಡನ್ನಿನ ಹೆಣ್ಣು ಮಕ್ಕಳು ಮಾಣಿ , ಟೈಪಿಸ್ಟ್, ಕಾರಕೂನ ಮುಂತಾದ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ಎಂಬುದನ್ನು ಗುರುತಿಸಿದ್ದಾರೆ. ನಂತರ ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ಚೇರಿಂಗ್ ಕ್ರಾಸ್.. ಈ ಓಣಿಯಲ್ಲಿನ ಇಂಡಿಯಾ ಆಫೀಸು ಮತ್ತು ಅದರ ವಿಶೇಷತೆ ಹಾಗೂ ಚೇರಿಂಗ್ ಕ್ರಾಸ್ ಎಂಬ ದೊಡ್ಡ ಬೀದಿಯು ಆಂಗ್ಲ ಸಾಮ್ರಾಜ್ಯದ ಬೀದಿ ಆಗಿರುವುದರ ವಿಶೇಷಯಗಳನ್ನು ಗುರುತಿಸಿದ್ದಾರೆ.ನಂತರ ಟ್ರಾಫಲ್ಗಾರ್ ಸ್ಕ್ವೆಯರ್ನಲ್ಲಿ ನಲ್ಲಿರುವ ನೆಲ್ಸೆನ್ ಮೂರ್ತಿ ಮತ್ತು ಆತನ ವಿಶೇಷ ಕತೆಯನ್ನು ಹೇಳಿದ್ದಾರೆ.
ಹೆಣ್ಣು ಮಕ್ಕಳವೈವಿಧ್ಯಮಯ ಟೊಪ್ಪಿಗೆಯ ವಿಶೇಷತೆಯನ್ನು ಕುರಿತು ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ. ಸಿ ಕ್ಕಿಸಿದ ಪುಚ್ಚವಾದರೂಕನಿಷ್ಟ ಬೇರೆಯಾಗಿರುತ್ತದೆ ಎಂಬುದನ್ನು ಗುರುತಿಸಿದ್ದಾರೆ. ‘ವೆಸ್ಟ್ ಮಿನ್‌ಸ್ಟರ್ ಅಬೆ’ಎಂಬ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ. ಇದು ಸತ್ತಿರುವ ಸಂತರ, ಸಾರ್ವಭೌಮರ ಹಾಗೂ ಕವಿಪುಂಗವರ ಸ್ಮಾರಕವಾಗಿದೆ. ಕಬ್ಬಿಗರ ಸ್ಪೂರ್ತಿಯ ಮನೆಯಾಗಿರುವುದು. ಪೊಯಟ್ಸ್ ಕಾರ್ನರ್‌ನರ್‌ನಲ್ಲಿ ಪ್ರಸಿದ್ಧ ಇಂಗ್ಲಿಷ್ ಲೇಖಕರಾದ ಕಿಪ್ಲಿಂಗ್, ಹಾರ್ಡಿ, ಮೆಕಾಲೆ, ಮೊದಲಾದವೂರು ಸಮಾಧಿಗಳಿವೆ. ನ್ಯೂಟನ್ ಮೊದಲಾದ ವಿಜ್ಞಾನಿಗಳ ಶಿಲಾ ಮೂರ್ತಿಗಳಿರುವುದು. ರಾಜಮಂದಿರದಲ್ಲಿ ಸಿಂಹ ರಿಚರ್ಡ್, ೨ನೆಯ ಎಡ್ವರ್ಡ್, , ರಾಣಿ ಎಲಿಜಬೆತ್, ಮೊದಲಾದವುಗಳು ಮೂರ್ತಿಗಳಿವೆ. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸದ ಮೇಲಿರುವ ಕಲ್ಲುಪಾಟಿ ಹಾಗೂ ಈ ಕಲ್ಲುಪಾಟಿ ಎಂಬ ಶಿಲೆಯನ್ನೊಳಗೊಂಡ ರಾಜರ ಸಿಂಹಾಸನ ಸ್ಟೋನ್ ಆಫ್ ಸ್ಕೋನ್ ಮುಂತಾದವುಗಳ ವಿಶೇಷತೆಯನ್ನು ಗುರುತಿಸಿದ್ದಾರೆ.
2. ‘ವೆಸ್ಟ್ ಮಿನ್‌ಸ್ಟರ್ ಅಬೆ’ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ.
‘ವೆಸ್ಟ್ ಮಿನ್‌ಸ್ಟರ್ ಅಬೆ’ಎಂಬ ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ. ಇದು ಸತ್ತಿರುವ ಸಂತರ, ಸಾರ್ವಭೌಮರ ಹಾಗೂ ಕವಿಪುಂಗವರ ಸ್ಮಾರಕವಾಗಿದೆ. ಕನಿಷ್ಠ ಒಂದು ಸಾವಿರ ದಷ್ಟು ಪುರಾತನವಾದ ಮಂದಿರ.
ಸ್ಥಾಪಿಸಿದ ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು . ಆದ್ದರಿಂದ ಇದನ್ನು ಸತ್ತವರ ಸ್ಮಾರಕ ಎಂದು ಕರೆಯುತ್ತಾರೆ. ೩೦೦ ವರ್ಷಗಳ ಹಿಂದೆ ಬ್ಯೂಮಾಂಟ್ ಎಂಬ ಕವಿಯು ಈ ಗೋರಿಯನ್ನು ನೋಡಿ ಮರ್ತ್ಯತ್ವವೇ ಎಷ್ಟು ಗೋರಿ ಗುಂಪುಗಳು ಇಲ್ಲಿವೆ ನೋಡಿ ಅಂಜು ಎಂಬ ಹಾಡಗಳನ್ನ ಬರೆದಿದ್ದಾನೆ. ಗೋಲ್ಡ್ಸ್ಮಿತ್ ಹಾಗು ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳನ್ನ ವೆವೆಸ್ಟ್ಮಿನ್‌ಸ್ಟರ್ ಅಬೆಯ ಸಂದರ್ಶನ’ ಎಂಬ ವಿಷಯದ ಮೇಲೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ. ಇಂದಿಗೂ ಇದು ಕಬ್ಬಿಗರ ಸ್ಫೂರ್ತಿಯ ಮನೆಯಾಗಿದೆ. ಈ ಮಂದಿರದಲ್ಲಿ ಆಂಗ್ಲರ ಕೀರ್ತಿ ಧ್ವಜವನ್ನು ನಿಲ್ಲಿಸಿದ ಚತುರರಾಜಕಾರಣಿ ಗ್ಯಾಡ್‌ಸ್ಟನ್, ಮಾಲ್ಫ್ ಡಿಸ್‌ರೇಲಿ ಮೊದಲಾದವರುಗಳು ಶಿಲಾಮೂರ್ತಿಗಳಿವೆ.ಪೊಯಟ್ಸ್ ಕಾರ್ನರ್‌ನಲ್ಲಿ ಪ್ರಸಿದ್ಧ ಇಂಗ್ಲಿಷ್ ಲೇಖಕರಾದ ಕಿಪ್ಲಿಂಗ್, ಹಾರ್ಡಿ, ಮೆಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್ ರಾಷ್ಟ್ರ ಕವಿ ವರ್ಡ್ಸ್ವರ್ತ್, ಪ್ರಖ್ಯಾತ ನಾಟಕಕಾರ ಬೆನ್‌ಜಾನ್ಸನ್ ಮೊದಲಾದ ಸಮಾಧಿಗಳಿವೆ. ವೈಜ್ಞಾನಿಕರ ಮೂಲೆಯಲ್ಲಿ ನ್ಯೂಟನನ ದೊಡ್ಡದಾದ ಶಿಲಾವ
ಶಿಲಾಮೂರ್ತಿಯನ್ನು ನಿಲ್ಲಿಸಿದ್ದಾರೆ. ಡಾರ್ವಿನ್, ಹರ್ಶೆಲ್ಮೊದಲಾದ ಶೀಲಾಮೂರ್ತಿಗಳಿವೆ. ಇದಕ್ಕೆ ಹತ್ತಿರದಲ್ಲಿ ವ್ಯಾಪಾರಿಗವ್ಯಾಪಾರಿಗಳು, ವಾಸ್ತುಶಿಲ್ಪಿಗಳು , ಸರದಾರರು, ಸೇನಾಪತಿಗಳು ಮೊದಲಾದ ಅನೇಕರಿಗೆ ಜಾಗವು ದೊರೆತಿದೆ. ರಾಜಮಂದಿರ ವಿಭಾಇಂಗ್ಲೆಡನ್ನು ಆಳಿದ ರಾಜ-ರಾಣಿ ರಾಜ ರಾಣಿಯರಾದ ಸಿಂಹಯರಿಚರ್ಡ್, ೨ನೆಯ ಎಡ್ವರ್ಡ್, ರಾಣಿ ಎಲಿಜಬೆತ್, ೧ನೆಯ ಜೇಮ್ಸ್ ಮೊದಲಾದವರ ಮೂರ್ತಿಗಳಿವೆ. ಇಲ್ಲಿಯ ಕೆತ್ತನೆಯಕೆಲಸವೆಲ್ಲ ಬಂಗಾರದ ಬಣ್ಣದಲ್ಲಿಯೇ ಆಗಿವೆ. ಮಂದಿರದ ಹಿಂದೆ ¨ ಮುಖ್ಯವಾಗಿ ೭ನೆಯ ಹೆನ್ರಿಯ ಗೋರಿಯು ನಿಂತಿದೆ. ಹೀಗೆಇದೊಂದು ಪ್ರಾರ್ಥನಾ ಮಂದಿರವಾಗಿದ್ದರೂ ಬ್ರಿಟೀಷ್ ಸಾಮ್ರಾಜ್ಯದ ಇತಿಹಾಸ ಇತಿಹಾಸ, ಕಲೆ, ಸಾಹಿತ್ಯ, ವಿಜ್ಞಾನದ ಗುರುತುಗಳನ್ನ ಸ್ಮರಿಸುವ ಒಂದು ವಿಶೇಷ ಸ್ಮಾರರಕವಾಗಿದೆ ಎಂದು ಹೇಳಬಹುದು.
10th standard kannada London nagara chapter
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ್ರ ”
ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ ‘ಸಮುದ್ರದಾಚೆಯಿಂದ’ಎಂಬ ಪ್ರವಾಸ ಕಥನದಿಂದ ಆಯ್ದ ‘ಲಂಡನ್ ನಗರ ’ಎಂಬಪಾಠದಿಂದ ಆರಿಸಲಾಗಿದೆ.
ಸಂದರ್ಭ:- ಲೇಖಕರು ಲಂಡನ್ ನಗರ ಬೀದಿಬೀದಿಯಲ್ಲಿ, ಮೂಲೆಮೂಲೆಯಲ್ಲಿ ನಿಲ್ಲಿಸಿದ ಇತಿಹಾಸ ಪ್ರಸಿದ್ಧ ಪುರುಷರ ಶಿಲಾಪ್ರತಿಮೆಗಳನ್ನು ನೋಡಿದಾಗ ತಮ್ಮ ದೇಶಕ್ಕಾಗಿ ಜೀವನದ ಲೆಕ್ಕಿ ದುಡಿದು ಕೈಯೆತ್ತಿ ನಿಂತ ಆ ಪ್ರತಿಮೆಗ “ನಿಮ್ಮ ದೇಶದ ಗೌರವವನ್ನು ಕಾಯಿರಿ! ಇದು ದೊಡ್ಡದಾದ ರಾಷ್ಟ”ಎಂದ
ಎಂದು ಹೇಳುತ್ತಿರುವಂತೆ ತೋರುತ್ತದೆ ಎಂದು ಹೇಳುವಸಂದ¨ ದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:- ಇಂಗ್ಲೆಂಡ್ ರಾಷ್ಟçಕ್ಕಾಗಿ ದುಡಿದ ನಾಯಕ ತಮ್ಮ ದೊಡ್ಡ ದೇಶದ ಗೌರವನ್ನ
ಹೆಮ್ಮೆಯಿಂದ ಕಾಪಾಡಲುಹೇಳಿದಂತಿರುವುದನ್ನು ಲೇಖಕಕರು ಸ್ವಾರಸ್ಯ ಪೂರ್ಣ ಅಭಿವ್ಯಕ್ತಪಡಿಸಿದ್ದಾರೆ.
2 “ಹೊತ್ತು ! ಹೊತ್ತು ! ಹೊತ್ತೇ ಹಣ.”
ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ ‘ಸಮುದ್ರದಾಚೆಯಿಂದ’ಎಂಬ ಪ್ರವಾಸ ಕಥನದಿಂದ ಆಯ್ದ ‘ಲಂಡನ್ ನಗರ ’ಎಂಬ ಪಾಠದಿಂದ ಆರಿಸಲಾಗಿದೆ
ಸಂದರ್ಭ:-ಲಂಡನ್ ನಗರದ ಬೀದಿಯಲ್ಲಿ ಲಕ್ಷಾನುಲಕ್ಷ ಜನರು ತಿರುಗಾಡುತ್ತಾರೆ. ಅವಸರದಿಂದ ಓಡುತ್ತಾರೆ. ವಿದೇಶಿಯರು ಹಣಗಳಿಸಲು ಅವಸರ ಪಡುತ್ತಾರೆ. ಅವರಿಗೆ ಸಮಯವೇ ಹಣ. “
ಹೊತ್ತು ! ಹೊತ್ತು ! ಹೊತ್ತೇ ಹಣ”( ಇದು ಅಕ್ಷರಶಃ ವಿಲಾಯಿತಿ(ವಿದೇಶ)ಯಲ್ಲಿ ನಿಜವಾಗಿದೆ ಎಂದು ಹೇಳಿದ ಸನರ್ಭದಲ್ಲಿ ದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ:- ವಿದೇಶಗಳ ಜನರು ಹಣಗಳಿಸಲು ಅತಿ ಸಮಯವನ್ನು ನೀಡುತ್ತಾರೆ. ಸಮಯವೇ ಅವರಿಗೆ ಹಣ ಎಂಬ
ಮಾತು ಪೂರ್ಣವಾಗಿ ಅಭಿವ್ಯಕ್ತವಾಗಿದೆ.
3. ಯಾರನ್ನು ತುಳಿದರೇನು! ಎಲ್ಲಿ ಹೆಜ್ಜೆ ಹಾಕಿದರೇನು? ಎಲ್ಲವೂ ಅಷ್ಟೆ ! ಮಣ್ಣ್ಣು ! ಮಣ್ಣು !”
ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ ‘ಸಮುದ್ರದಾಚೆಯಿಂದ’ಎಂಬ ಪ್ರವಾಸ ಕಥನದಿಂದ ಆಯ್ದ ‘ಲಂಡನ್ ನಗರ ’ಎಂಬ ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ:- ಲೇಖಕರು ವೆಸ್ಟ್ ಮಿನ್ ಸ್ಟರ್ ಅಬೆ ಪ್ರಾರ್ಥನಾ ಮಂದಿರದ ಪೊಯೆಟ್ಸ್ ಕಾರ್ನರ್‌ನಲ್ಲಿದ್ದ ಕವಿಗಳ
ಸಮಾಧಿಯನ್ನು ನೋಡುತ್ತಾ ಹೋಗುವಾಗ ನಮ್ಮ ದೇಶದಲ್ಲಿ ಎಲ್ಲರಿಗೂ ಒಂದೊಂದು ಹಿಡಿ ಮಣ್ಣನ್ನು ನಾವುಕೊಡುವಂತೆ ಇಲ್ಲಿನ ಹೇಗೆ ಒಂದೊಂದು ಕಲ್ಲನ್ನು ಕೊಟ್ಟಿದ್ದಾರೆ. ಈ ಕಲ್ಲುಗಳ ಮೇಲೆ ಹಾಯ್ದಾಡುತ್ತಾ , ತುಳಿಯುತ್ತ ಹೋಗುವಾಗ ಇದು ಹೆಜ್ಜೆಯಲ್ಲವೇ ಎಂಬ ಹೆದರಿಕೆಯು ಅವರನ್ನು ಹಿಡಿದು ನಿಲ್ಲಿಸುತ್ತದೆ. ಕಡೆಗೆ ದಿಕ್ಕುತಪ್ಪಿ ಯಾರನ್ನುತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೆ !ಮಣ್ಣು ! ಮಣ್ಣು! ” ಎಂದು ಮನಸ್ಸಿಗೆ ಬಂದಂತೆ ಮನುಷ್ಯನು ನಡೆಯ ಹತ್ತುತ್ತಾನೆ ಎಂಬ ಭಾವನೆ ಮೂಡಿದ ಸಂದರ್ಭವಾಗಿದೆ.
ಸ್ವಾರಸ್ಯ:- ಲೇಖಕರಿಗೆ ಇಂಗ್ಲೆಂಡ್ ಕವಿಗಳ ಮೇಲಿನ ಗೌರವ ಭಾವನೆಗಳಿಂದ ಅವರಿಗೆ ಕೊಟ್ಟಗಳನ್ನು ತುಳಿಯಬಾರದೆಂಬ ಭಾವನೆ ಇದ್ದರೂ ದಿಕ್ಕುತೋಚದಂತಾಗಿ ಎಲ್ಲರೂ ಕೊನೆಗೆ ಮಣ್ಣು ಸೇರಬೇಕಲ್ಲವೇ ಎಂಬ ಭಾವವನ್ನು ಲೇಖಕರು ಪೂರ್ಣವಾಗಿ ಅಭಿವ್ಯಕ್ತಿಸಿದ್ದಾರೆ.
4. “ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ
ಆಯ್ಕೆ :- ಈ ವಾಕ್ಯವನ್ನು ವಿ.ಕೃ.ಗೋಕಾಕ್ ಅವರು ರಚಿಸಿರುವ ‘ಸಮುದ್ರದಾಚೆಯಿಂದ’ಎಂಬ ಪ್ರವಾಸ ಕಥನದಿಂದ ಆಯ್ದ ‘ಲಂಡನ್ ನಗರ ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಲೇಖಕರು ತಮ್ಮ ಪ್ರವಾಸ ಕಥನದ ಕೊನೆಯಲ್ಲಿ ಈ ಪ್ರವಾಸದಿಂದ ನನ್ನ ಮನಸ್ಸು ಎಷ್ಟೊಂದು ವಿಕಾಸ ಹೊಂದಿದೆ. ನನ್ನ ದೃಷ್ಟಿಯು ಎಷ್ಟು ವಿಶಾಲವಾಗಿದೆ. ನನ್ನ ಸಂಸ್ಕೃತಿಯು ಎಂತಹ ಮೇಲೆ ನಿಂತಿದೆ. ಇದನ್ನೆಲ್ಲ ನೆನೆಸಿ ಕೊಂಡಾಗ“ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ” ಎಂದು ಬೇಕನ್ನನು ಹೇಳಿದ ಮಾತು ನೆನಪಾಗುತ್ತದೆ ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ:-““ದೇಶ ಸುತ್ತಿ ನೋಡು : ಕೋಶ ಓದಿ ನೋಡು” ಎಂಬ ಗಾದೆ ಮಾತಿನಂತೆ ಶಿಕ್ಷಣದ ವ್ಯಾಪಕತೆಗೆ ಪ್ರವಾಸವು ಕೂಡ ಒಂದು ಭಾಗವಾಗಿರುತ್ತದೆ ಎಂಬ ಮಹತ್ವವನ್ನು ಈ ವಾಕ್ಯ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಿಸುತ್ತದೆ.
ಉ) ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ.
1. ಲಂಡನ್ ಪಟ್ಟಣವೆಂದರೆ ಒಂದು ಸ್ವತಂತ್ರ ಜಗತ್ತು.
2. ವೂಲವರ್ಥ ಎಂಬುದು ಸ್ಟೇಷನರಿ ಅಂಗಡಿ.
3. ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ.
4. ಅಬೆಯಲ್ಲಿರುವ ಸಿಂಹಾಸನಕ್ಕೆ ಸ್ಟೋನ್ ಆಫ್ ಸ್ಕೋನ್ ಎಂದು ಹೆಸರು.
5. ವೆಸ್ಟ್ಮಿನ್‌ಸ್ಟರ್ ಅಬೆ ಎಂಬುದು ಪ್ರಾರ್ಥನಾ ಮಂದಿರ
ಊ) ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ.
ಒಮ್ಮೊಮ್ಮೆ , ಜಾಗವನ್ನು , ಅತ್ಯಾದರ , ವಾಚನಾಲಯ , ಸಂಗ್ರಹಾಲಯ , ಓಣಿಯಲ್ಲಿ .
ಒಮ್ಮೆ + ಒಮ್ಮೆ = ಒಮ್ಮೊಮ್ಮೆ – ಲೋಪಸಂಧಿ
ಜಾಗ + ಅನ್ನು = ಜಾಗವನ್ನು – ಆಗಮಸಂಧಿ
ಅತಿ + ಆದರ = ಅತ್ಯಾದರ – ಯಣ್ ಸಂಧಿ
ವಾಚನ + ಆಲಯ = ವಾವಚನಾಲಯ – ಸವರ್ಣದೀರ್ಘಸಂಧಿ
ಸಂಗ್ರಹ + ಆಲಯ = ಸಂಗ್ರಹಾಲಯ – ಸವರ್ಣದೀರ್ಘಸಂಧಿ
ಓಣಿ + ಅಲ್ಲಿ = ಓಣಿಯಲ್ಲಿ – ಆಗಮಸಂಧಿ
ಋ) ಈ ಪದಗಳ ಅರ್ಥ ಬರೆದು ಅವುಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಪ್ರಯೋಗಿಸಿ.
ದಂಗುಬಡಿ, ಮನಗಾಣು, ಘನತರ, ನಿಟ್ಟಿಸಿ ನೋಡು, ಮೂಲೆಗೊತ್ತು, ದಿಕ್ಕುತಪ್ಪು,
ದಂಗು ಬಡಿ –ಆಶ್ಚರ್ಯಪಡು | : ಚೇರಿಂಗ್ ಕ್ರಾಸ ಓಣಿಯಲ್ಲಿ ಇಂಡಿಯಾ ಆಫೀಸ್, ಆಫ್ರಿಕನ್ ಕಛೇರಿ,ಇನ್ನೊಂದು ವಸಾಹತಿನ ಕಚೇರಿ, ನೂರೆಂಟು ಬ್ಯಾಂಕ್‌ಗಳು ದೊಡ್ಡ ಕಂಪೆನಿಗಳ ಕಚೇರಿಗಳು , ಎಲ್ಲವೂದಂಗುಬಡಿಸ ನೆರೆದಿವೆ |
ಮನಗಾಣು –ತಿಳಿದುಕೊಳ್ಳು | : ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ. ಸಿಕ್ಕಿಸಿದ ಪುಚ್ಚವಾದರೂ ಕನಿಷ್ಠ ಪಕ್ಷಕ್ಕೆಬೇರೆಯಾಗಿರುತ್ತದೆ. ಕೋಟ್ಯಾವಧಿ ಟೊಪ್ಪಿಗೆಗಳನ್ನುಇದನ್ನು ಬೇಕಾದರೆ ಪರೀಕ್ಷಿಸಿ ಇದನ್ನುಮನಗಾಣಬಹ |
ಅಚ್ಚಳಿ – ಅಂದಗೆಡು ದುರಸ್ತಿ – ಸರಿಪಡಿಸುವಿಕೆ | ಸತ್ತಿರುವ ಸಂತರ, ಸಾರ್ವಭೌಮರ ಹಾಗೂ ಕವಿಪುಂಗವರ ಸ್ಮಾರಕವಾಗಿರುವ‘ವೆಸ್ಟ್ ಮಿನ್‌ಸ್ಟರ್ ಅಬೆ’ಯ ಕೆಲವೊಂದು ಭಾಗಗಳ ದುರಸ್ತಿಯನ್ನು ಬಿಟ್ಟರೆ ಇಂದಿಗೂ ಅಚ್ಚಳಿಯದೆ ಉಳಿದಿದೆ. |
ಘನತರ – ಶ್ರೇಷ್ಠವಾz | ಸಂತ, ಸಾರ್ವಭೌಮರು ಮಲಗಿರುವರು; ಕವಿಪುಂಗವರು ಒರಗಿರುವರು . ಸತ್ತವರ ಸ್ಮಾರಕವೆಂದು ಇದಕ್ಕಿಂತ ಘನತರವಾದ ಮಂದಿರವು ಜಗತ್ತಿನಲ್ಲಿ ಇನ್ನೆಲ್ಲಿಯೂ ಇರಲಾರದು. |
ನಿಟ್ಟಿಸಿ ನೋಡು – ದೃಷ್ಟಿಸಿನೋಡು | : ಸಹಜವಾಗಿ ಮೇಲಕ್ಕೆ ಮೋರೆಯೆತ್ತಿ ನೋಡಲು, ಅಲ್ಲಿ ಅರ್ಲ್ ಆಫ್ ಚ್ಯಾಟ್ಹಾಂನು ನನ್ನ ಕಡೆನೋಡುತ್ತ ನಿಂತಿದ್ದನು. ಹಾಗೇ ಎದುರಿಗೆ ನಿಟ್ಟಿಸಿ ನೋಡಿದೆದೆ ಗ್ಯಾಡ್‌ಸ್ಟನ್ , ಮಾಲ್ಫ ಡಿಸ್‌ರೇಲಿಮೂರ್ತಿಗಳು ಕಣ್ಣಿಗೆ ಬಿದ್ದವು. |
ಮೂಲೆಗೊತ್ತು – ಅಲಕ್ಷಿಸ | : ವರ್ಡ್ಸ್ವತನು ಅಲ್ಲಿ ತಪಶ್ಚರ್ಯಕ್ಕೆ ಕುಳಿತಿದ್ದನು . ವರ್ಡ್ಸ್ವರ್ತ್ನಂಥವರನ್ನೂ ಅವರುಮೂಲೆಗೊತ್ತಿ ಬಿಟ್ಟಿದ್ದಾರೆ. |
ದಿಕ್ಕುತಪ್ಪು–ದಾರಿ ಕಾಣುದಂತಾಗು | ತಪ್ಪು ಹೆಜ್ಜೆ ಹಾಕಬಹುದೆಂಬ ಹೆದರಿಕೆಯು ಹಿಡಿದು ನಿಲ್ಲಿಸುತ್ತದೆ. ಕಡೆಗೆ ದಿಕ್ಕುತಪ್ಪಿದಂತಾಗಿ ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ? ಎಲ್ಲವೂ ಅಷ್ಟೇ ಮಣ್ಣು ಮಣ್ಣು ಎಂದು ಮನಸ್ಸಿಗೆ ಬಂದಂತೆ ಮನುಷ್ಯನು ನಡೆಯಹತ್ತುತ್ತಾನೆ. |
ಭಾಷಾ ಚಟುವಟಿಕೆ
1. ಕೊಟ್ಟಿರುವ ಸೂಚನೆಯಂತೆ ಉತ್ತರಿಸಿ.
1. ವೆಸ್ಟ್ಮಿನ್‌ಸ್ಟರ್ ಅಬೆ ನೋಡಿಕೊಂಡು ಬಂದೆವು . (¨ಭವಿಶ್ಯತ್ ಕಾಲಕ್ಕೆ ಪರಿವರ್ತಿಸಿ)
– ವೆಸ್ಟ್ಮಿನ್‌ಸ್ಟರ್ ಅಬೆ ನೋಡಿಕೊಂಡು ಬರುವೆವು.
2. ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುವರು. (ವರ್ತಮಾನಕಾಲಕ್ಕೆ ಪರಿವರ್ತಿಸಿ )
– ಶೈಕ್ಷಣಿಕ ಅಧ್ಯಯನ ದೃಷ್ಟಿಯಿಂದ ಶೈಕ್ಷಣಿಕ ಪ್ರವಾಸ ಮಾಡುತ್ತಾರೆ.
3. ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆಯುತ್ತವೆ. (¨ಭೂತಕಾಲಕ್ಕೆ ಪರಿವರ್ತಿಸಿ)
– ಹೆಜ್ಜೆ ಹೆಜ್ಜೆಗೆ ಇತಿಹಾಸದ ಅಡಿಗಲ್ಲುಗಳು ದೊರೆತವು.
10th kannada notes
10th standard kannada notes (ಹತ್ತನೇ ಕನ್ನಡ ಗದ್ಯ ಭಾಗ ) | ||
---|---|---|
No. | ಗದ್ಯ ಪಾಠಗಳ ಹೆಸರು | PDF ವೀಕ್ಷಿಸಿ |
1 | ಶಬರಿ | Download |
2 | ಲಂಡನ್ ನಗರ | Download |
3 | ಶುಕನಾಸನ ಉಪದೇಶ | Download |
4 | ಭಾಗ್ಯಶಿಲ್ಪಿಗಳು ( ನಾಲ್ವಡಿ ಕೃಷ್ಣರಾಜ ಒಡೆಯರು. ಸರ್ ಎಂ ವಿಶ್ವೇಶ್ವರಯ್ಯ) | Download |
5 | ನಿಜವಾದ ಆದರ್ಶ ಪುರುಷ ಯಾರಾಗಬೇಕು? | Download |
6 | ಎದೆಗೆ ಬಿದ್ದ ಅಕ್ಷರ | Download |
7 | ಶ್ರೇಷ್ಠ ಭಾರತೀಯ ಚಿಂತನೆಗಳು | Download |
8 | ವೃಕ್ಷಸಾಕ್ಷಿ | Download |