WhatsApp Group Join Now
Telegram Group Join Now

Police Constable Previous Paper 18-01-2015

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ

 

1.‘ಲಿಥೋಸ್ಪಿಯರ್’ ಎಂದರೆ
 (ಎ)ಸಸ್ಯಗಳು ಮತ್ತು ಪ್ರಾಣಿಗಳು
 (ಬಿ)ಭೂಮಿಯ ಹೊರಗಿನ ಮೇಲ್ಮೈ
 (ಸಿ)ಭೂಮಿಯ ಹೊರಪದರ
 (ಡಿ)ಯಾವುದೂ ಅಲ್ಲ

CORRECT ANSWER

(ಸಿ) ಭೂಮಿಯ ಹೊರಪದರ


2.ರಿಕ್ಟರ್ ಮಾಪನವನ್ನು ಈ ಕೆಳಗಿನ ಯಾವುದನ್ನು ಅಳೆಯಲು ಉಪಯೋಗಿಸುತ್ತಾರೆ ?
 (ಎ)ಗಾಳಿಯ ವೇಗ
 (ಬಿ)ಭೂಕಂಪನ
 (ಸಿ)ಆಳ
 (ಡಿ)ಶಾಖ
CORRECT ANSWER

(ಬಿ) ಭೂಕಂಪನ


3.ಸಮುದ್ರದಲ್ಲಿ ಭಾರತದ ಸಾರ್ವಭೌಮತೆಯು ಎಷ್ಟು ದೂರದವರೆಗೆ ಇರುತ್ತದೆ ?
 (ಎ)6 ನಾಟಿಕಲ್ ಮೈಲುಗಳು
 (ಬಿ)15 ನಾಟಿಕಲ್ ಮೈಲುಗಳು
 (ಸಿ)10 ನಾಟಿಕಲ್ ಮೈಲುಗಳು
 (ಡಿ)12 ನಾಟಿಕಲ್ ಮೈಲುಗಳು
CORRECT ANSWER

(ಡಿ) 12 ನಾಟಿಕಲ್ ಮೈಲುಗಳು


4.ಈ ಕೆಳಗಿನವುಗಳಲ್ಲಿ ಯಾವ ಬೆಳೆಯು ನೀರಿನ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತದೆ ?
 (ಎ)ಟೀ
 (ಬಿ)ಕಾಫಿ
 (ಸಿ)ಭತ್ತ
 (ಡಿ)ಸಾಸಿವೆ
CORRECT ANSWER

(ಸಿ) ಭತ್ತ


5.ಈ ಕೆಳಗಿನವುಗಳಲ್ಲಿ ಯಾವ ಗ್ರಹವು ಸೂರ್ಯನಿಗೆ ಸಮೀಪವಾಗಿದೆ?
 (ಎ)ಭೂಮಿ
 (ಬಿ)ಪ್ಲೂಟೋ
 (ಸಿ)ಗುರು
 (ಡಿ)ಬುಧ
CORRECT ANSWER

(ಡಿ) ಬುಧ


6.ಮೂರನೇ ದುಂಡುಮೇಜಿನ ಪರಿಷತ್ತು ನಡೆದ ವರ್ಷ
 (ಎ)1931
 (ಬಿ)1933
 (ಸಿ)1932
 (ಡಿ)1934
CORRECT ANSWER

(ಸಿ) 1932


7.‘ನನಗೆ ರಕ್ತ ಕೊಡಿ; ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ’ ಹೀಗೆ ಹೇಳಿದವರು ಯಾರು ?
 (ಎ)ಮಹಾತ್ಮ ಗಾಂಧೀಜಿ
 (ಬಿ)ಜವಾಹರಲಾಲ್ ನೆಹರೂ
 (ಸಿ)ಆ್ಯನಿಬೆಸೆಂಟ್
 (ಡಿ)ಸುಭಾಷ್‌ಚಂದ್ರ ಬೋಸ್
CORRECT ANSWER

(ಡಿ) ಸುಭಾಷ್‌ಚಂದ್ರ ಬೋಸ್


8.ಕೆಂಪು ಅಂಗಿ ಚಳವಳಿಯನ್ನು ಪ್ರಾರಂಭಿಸಿದವರು
 (ಎ)ಮಹಮ್ಮದ್ ಆಲಿ ಜಿನ್ನಾ
 (ಬಿ)ಖಾನ್ ಅಬ್ದುಲ್ ಗಾಫಾರ್ ಖಾನ್
 (ಸಿ)ಸರ್ ಮಹಮ್ಮದ್ ಇಕ್ಬಾಲ್
 (ಡಿ)ಸರ್ ಮನ್ಸೂರ್ ಅಹಮ್ಮದ್
CORRECT ANSWER

(ಬಿ) ಖಾನ್ ಅಬ್ದುಲ್ ಗಾಫಾರ್ ಖಾನ್


9.ಸರ್ ಸ್ಟಾಫರ್ಡ್ ಕ್ರಿಪ್ಸ್‌ರವರ ಆಯೋಗವು ಭಾರತಕ್ಕೆ ಬಂದ ವರ್ಷ
 (ಎ)1940
 (ಬಿ)1941
 (ಸಿ)1942
 (ಡಿ)1943
CORRECT ANSWER

(ಸಿ) 1942


10.1937ರ ಚುನಾವಣೆಯಲ್ಲಿ ಈ ಕೆಳಗಿನ ಯಾವ ಎರಡು ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ನ ಸರಕಾರವು ಇರಲಿಲ್ಲ ?
 (ಎ)ಬಂಗಾಳ ಮತ್ತು ಪಂಜಾಬ್
 (ಬಿ)ಮಹಾರಾಷ್ಟ್ರ ಮತ್ತು ಕರ್ನಾಟಕ
 (ಸಿ)ಕೇರಳ ಮತ್ತು ಆಂಧ್ರಪ್ರದೇಶ
 (ಡಿ)ಪಂಜಾಬ್ ಮತ್ತು ಹರಿಯಾಣ
CORRECT ANSWER

(ಎ) ಬಂಗಾಳ ಮತ್ತು ಪಂಜಾಬ್


11.ನೀವು ಒಂದರಿಂದ ನೂರರವರೆಗೆ ಎಲ್ಲಾ ಸಂಖ್ಯೆಗಳನ್ನು ಬರೆದರೆ, 3 ಅನ್ನು ಎಷ್ಟು ಸಲ ಬರೆದಿರುತ್ತೀರಾ ?
 (ಎ)11
 (ಬಿ)18
 (ಸಿ)20
 (ಡಿ)21
CORRECT ANSWER

(ಸಿ) 20


12.‘ಎ’ ಯು ‘ಬಿ’ನ ಸಹೋದರಿ, ‘ಸಿ’ಯು ‘ಬಿ’ನ ತಾಯಿ, ‘ಡಿ’ ಯು ‘ಸಿ’ನ ತಂದೆ, ‘ಇ’ಯು ‘ಡಿ’ಯ ತಾಯಿ, ಹಾಗಿದ್ದಲ್ಲಿ ‘ಎ’ಯು ‘ಡಿ’ಗೆ ಏನಾಗಬೇಕು ?
 (ಎ)ಅಜ್ಜ
 (ಬಿ)ಅಜ್ಜಿ
 (ಸಿ)ಮಗಳು
 (ಡಿ)ಮೊಮ್ಮಗಳು
CORRECT ANSWER

(ಡಿ) ಮೊಮ್ಮಗಳು


13.‘ಈ ಹುಡುಗಿಯು, ನನ್ನ ತಾಯಿಯ ಮೊಮ್ಮಗನ ಪತ್ನಿಯಾಗಬೇಕು’ ಎಂದು ಅರುಣ್ ಹೇಳಿದರೆ, ಅರುಣ್ ಹುಡುಗಿಗೆ ಏನಾಗಬೇಕು?
 (ಎ)ತಂದೆ
 (ಬಿ)ಅಜ್ಜ
 (ಸಿ)ಪತಿ
 (ಡಿ)ಮಾವ

CORRECT ANSWER

(ಡಿ) ಮಾವ


14.ಒಂದು ತರಗತಿಯ ಎಲ್ಲಾ ಹುಡುಗರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿದಾಗ, ಒಬ್ಬ ಹುಡುಗನು, ಆ ಸಾಲಿನ ಎರಡೂ ಬದಿಯಿಂದ 19ನೆಯವನಾದರೆ, ಒಟ್ಟು ಆ ತರಗತಿಯಲ್ಲಿ ಎಷ್ಟು ಹುಡುಗರಿದ್ದಾರೆ?
 (ಎ)37
 (ಬಿ)38
 (ಸಿ)39
 (ಡಿ)27
CORRECT ANSWER

(ಎ) 37


15.2003ನೇ ಇಸವಿಯ ಜನವರಿ 30ನೇ ದಿವಸವು ಗುರುವಾರವಾದರೆ, 2003ನೇ ಇಸವಿಯ ಮಾರ್ಚ್ 2ನೇ ದಿವಸವು ಯಾವ ವಾರ ?
 (ಎ)ಭಾನುವಾರ
 (ಬಿ)ಗುರುವಾರ
 (ಸಿ)ಮಂಗಳವಾರ
 (ಡಿ)ಶನಿವಾರ
CORRECT ANSWER

(ಎ) ಭಾನುವಾರ


16.ಜೋಗ್ ಫಾಲ್ಸ್ ಯಾವ ನದಿಯಲ್ಲಿದೆ ?
 (ಎ)ಕೃಷ್ಣಾ
 (ಬಿ)ಕಾವೇರಿ
 (ಸಿ)ಶರಾವತಿ
 (ಡಿ)ಭೀಮಾ
CORRECT ANSWER

(ಸಿ) ಶರಾವತಿ


17.ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು ?
 (ಎ)ನದಿಯ ಡಾಲ್ಫಿನ್
 (ಬಿ)ಮೊಸಳೆ
 (ಸಿ)ಕತಾ ಮೀನು
 (ಡಿ)ಹಸಿರು ಕಪ್ಪೆ
CORRECT ANSWER

(ಎ) ನದಿಯ ಡಾಲ್ಫಿನ್


18.ಪಂಪ, ರನ್ನ, ಪೊನ್ನರೆಂದರೆ
 (ಎ)ಕನ್ನಡ ಭಾಷೆಯ ಕವಿಗಳು
 (ಬಿ)ವಾಸ್ತುಶಿಲ್ಪಿಗಳು
 (ಸಿ)ರಾಜಕಾರಣಿಗಳು
 (ಡಿ)ರಾಜರು
CORRECT ANSWER

(ಎ) ಕನ್ನಡ ಭಾಷೆಯ ಕವಿಗಳು


19.ದ್ವಾರಸಮುದ್ರವೆಂದು ಯಾವ ಸ್ಥಳವನ್ನು ಕರೆಯುತ್ತಾರೆ ?
 (ಎ)ಹಾಸನದ ಹಳೇಬೀಡು
 (ಬಿ)ಕೊಡಗು
 (ಸಿ)ಕಲಬುರ್ಗಿ
 (ಡಿ)ಬೆಂಗಳೂರು
CORRECT ANSWER

(ಎ) ಹಾಸನದ ಹಳೇಬೀಡು


20.‘ಡೆಮೋಗ್ರಫಿ’ ಎಂದರೆ
 (ಎ)ಪ್ರಾಣಿಗಳ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು
 (ಬಿ)ಮಾನವ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು
 (ಸಿ)ಆನೆಗಳ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು
 (ಡಿ)ಇವುಗಳು ಯಾವುವೂ ಅಲ್ಲ
CORRECT ANSWER

(ಬಿ) ಮಾನವ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು


21.ಜಲಿಯನ್ ವಾಲಾಭಾಗ್‌ನ ಸಭೆಯಲ್ಲಿ, ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ ವ್ಯಕ್ತಿ
 (ಎ)ಬೆನ್
 (ಬಿ)ಇರ್ವಿನ್
 (ಸಿ)ಡಯರ್
 (ಡಿ)ಮಾಂಟೆಗ್ಯೂ
CORRECT ANSWER

(ಸಿ) ಡಯರ್


22.ಬಂಗಾಳದ ವಿಭಜನೆಯು ಯಾವ ವರ್ಷದಲ್ಲಿ ನಡೆಯಿತು ?
 (ಎ)1905
 (ಬಿ)1904
 (ಸಿ)1906
 (ಡಿ)1907
CORRECT ANSWER

(ಎ) 1905


23.ಮಹಾತ್ಮಾಗಾಂಧೀಜಿಯವರು 1942ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯನ್ನು ಆರಂಭಿಸಿದರು. ಆಗ ಭಾರತದಲ್ಲಿ ಗವರ್ನರ್ ಜನರಲ್ ಆಗಿದ್ದವರು
 (ಎ)ಲಾರ್ಡ್ ಮೌಂಟ್ ಬ್ಯಾಟನ್
 (ಬಿ)ಲಾರ್ಡ್ ಲಿನ್‌ಲಿಥ್‌ಗೋ
 (ಸಿ)ಲಾರ್ಡ್ ಕಜರ್ನ್
 (ಡಿ)ಲಾರ್ಡ್ ಮೇಯೋ
CORRECT ANSWER

(ಬಿ) ಲಾರ್ಡ್ ಲಿನ್‌ಲಿಥ್‌ಗೋ


24.ಸೈಮನ್ ಆಯೋಗದ ವಿರುದ್ಧದ ಚಳವಳಿಯಲ್ಲಿ ಪೊಲೀಸ್ ಲಾಠಿ ಚಾರ್ಜಿಗೆ ಬಲಿಯಾದ ವ್ಯಕ್ತಿ ಯಾರು ?
 (ಎ)ಗೋಪಾಲ ಕೃಷ್ಣ ಗೋಖಲೆ
 (ಬಿ)ಬಾಲಗಂಗಾಧರ್ ತಿಲಕ್
 (ಸಿ)ಲಾಲಾ ಲಜಪತ್ ರಾಯ್
 (ಡಿ)ಇವರಲ್ಲಿ ಯಾರು ಅಲ್ಲ
CORRECT ANSWER

(ಸಿ) ಲಾಲಾ ಲಜಪತ್ ರಾಯ್


25.ಮಹಾತ್ಮಗಾಂಧೀಜಿಯವರು ದಂಡಿಯಾತ್ರೆಯನ್ನು ಪ್ರಾರಂಭಿಸಿದ ವರ್ಷ
 (ಎ)1929
 (ಬಿ)1930
 (ಸಿ)1931
 (ಡಿ)1932
CORRECT ANSWER

(ಬಿ) 1930


26.ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ, ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ ?
 (ಎ)ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
 (ಬಿ)ರಾಜ್ಯದ ಮುಖ್ಯಮಂತ್ರಿಗಳು
 (ಸಿ)ರಾಷ್ಟ್ರಪತಿಗಳು ನಿಯುಕ್ತಿಗೊಳಿಸುವ ಯಾರಾದರೂ
 (ಡಿ)ನೆರೆಯ ರಾಜ್ಯದ ರಾಜ್ಯಪಾಲರು
CORRECT ANSWER

(ಎ) ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು


27.ಲೋಕಸಭೆಯು ವಿಸರ್ಜನೆಗೊಂಡಾಗ, ಯಾವ ವ್ಯಕ್ತಿಯು, ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನವನ್ನು ತ್ಯಜಿಸುವುದಿಲ್ಲ?
 (ಎ)ಪ್ರಧಾನ ಮಂತ್ರಿ
 (ಬಿ)ಹಣಕಾಸು ಮಂತ್ರಿ
 (ಸಿ)ರಕ್ಷಣಾ ಮಂತ್ರಿ
 (ಡಿ)ಲೋಕಸಭೆಯ ಅಧ್ಯಕ್ಷ
CORRECT ANSWER

(ಡಿ) ಲೋಕಸಭೆಯ ಅಧ್ಯಕ್ಷ


28.ಭಾರತದ ಸಂವಿಧಾನದಲ್ಲಿ ಉಪ -ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೇ ?
 (ಎ)ಹೌದು
 (ಬಿ)ಇಲ್ಲ
 (ಸಿ)ತುರ್ತು ಪರಿಸ್ಥಿತಿಯಲ್ಲಿ ಇದೆ.
 (ಡಿ)ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಇದೆ.
CORRECT ANSWER

(ಬಿ) ಇಲ್ಲ


29.ರಾಷ್ಟ್ರೀಯ ಸಮಗ್ರತಾ ಮಂಡಳಿಯ ಅಧ್ಯಕ್ಷರು
 (ಎ)ಭಾರತದ ರಾಷ್ಟ್ರಪತಿಗಳು
 (ಬಿ)ಭಾರತದ ಉಪ-ರಾಷ್ಟ್ರಪತಿಗಳು
 (ಸಿ)ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
 (ಡಿ)ಭಾರತದ ಪ್ರಧಾನಮಂತ್ರಿಗಳು
CORRECT ANSWER

(ಡಿ) ಭಾರತದ ಪ್ರಧಾನಮಂತ್ರಿಗಳು


30.ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎಷ್ಟು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ ?
 (ಎ)2 ವರ್ಷ
 (ಬಿ)3 ವರ್ಷ
 (ಸಿ)1 ವರ್ಷ
 (ಡಿ)2½ ವರ್ಷ
CORRECT ANSWER

(ಎ) 2 ವರ್ಷ


31.ಭಾರತದ ರಾಷ್ಟ್ರಪತಿಯವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುವವರು
 (ಎ)ಲೋಕಸಭೆಯ ಅಧ್ಯಕ್ಷರು
 (ಬಿ)ಭಾರತದ ಪ್ರಧಾನ ಮಂತ್ರಿಗಳು
 (ಸಿ)ಭಾರತದ ಉಪ-ರಾಷ್ಟ್ರಪತಿಗಳು
 (ಡಿ)ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
CORRECT ANSWER

(ಡಿ) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು


32.ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಚುನಾವಣಾ ಆಯೋಗದ ಕರ್ತವ್ಯ ಅಲ್ಲ ?
 (ಎ)ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು
 (ಬಿ)ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಹಣಕಾಸನ್ನು ನೀಡುವುದು
 (ಸಿ)ಚುನಾವಣೆಗೆ ನಿಯಮಗಳು ಮತ್ತು ನಿರ್ದೇಶನಗಳನ್ನು ನೀಡುವುದು
 (ಡಿ)ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸುವುದು ಮತ್ತು ಮತದಾರರ ಪಟ್ಟಿ ಸಿದ್ಧಪಡಿಸುವುದು.
CORRECT ANSWER

(ಬಿ) ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಹಣಕಾಸನ್ನು ನೀಡುವುದು


33.ಭಾರತದ ಉಪ-ರಾಷ್ಟ್ರಪತಿಗಳು ಒಂದು ಬಾರಿ ಎಷ್ಟು ವರ್ಷದವರೆಗೆ ಅಧಿಕಾರದಲ್ಲಿರುತ್ತಾರೆ?
 (ಎ)3
 (ಬಿ)4
 (ಸಿ)5
 (ಡಿ)6
CORRECT ANSWER

(ಸಿ) 5


34.ಸಂಸತ್ತಿನ ಸದಸ್ಯನಲ್ಲದ ವ್ಯಕ್ತಿಯು, ಮಂತ್ರಿಯಾಗಿ ನೇಮಕವಾದಲ್ಲಿ, ಎಷ್ಟು ಸಮಯದ ಒಳಗೆ ಸಂಸತ್ತಿನ ಯಾವುದಾದರೂ ಸಭೆಗೆ ಸದಸ್ಯನಾಗಿ ಆಯ್ಕೆಯಾಗಬೇಕು ?
 (ಎ)2 ತಿಂಗಳು
 (ಬಿ)6 ತಿಂಗಳು
 (ಸಿ)9 ತಿಂಗಳು
 (ಡಿ)1 ವರ್ಷ
CORRECT ANSWER

(ಬಿ) 6 ತಿಂಗಳು


35.ಭಾರತದ ಯಾವ ಪ್ರಧಾನಮಂತ್ರಿಯು ಸಂಸತ್ತನ್ನು ಎದುರಿಸಲಿಲ್ಲ?
 (ಎ)ಮೊರಾರ್ಜಿ ದೇಸಾಯಿ
 (ಬಿ)ಲಾಲ್‌ಬಹಾದ್ದೂರ್ ಶಾಸ್ತ್ರಿ
 (ಸಿ)ಐ.ಕೆ. ಗುಜ್ರಾಲ್
 (ಡಿ)ಚರಣ್‌ಸಿಂಗ್
CORRECT ANSWER

(ಡಿ) ಚರಣ್‌ಸಿಂಗ್


36.2014ರ ಕಾಮನ್‌ವೆ್ತ್ ಗೇಮ್ಸ್ ನಡೆದ ಸ್ಥಳ
 (ಎ)ಯುನೈಟೆಡ್ ಕಿಂಗ್‌ಡಮ್‌ನ ಗ್ಲಾಸ್ಗೋ
 (ಬಿ)ಆಸ್ಟ್ರೇಲಿಯಾದ ಸಿಡ್ನಿ
 (ಸಿ)ಭಾರತದ ನವದೆಹಲಿ
 (ಡಿ)ಚೀನಾದ ಬೀಜಿಂಗ್
CORRECT ANSWER

(ಎ) ಯುನೈಟೆಡ್ ಕಿಂಗ್‌ಡಮ್‌ನ ಗ್ಲಾಸ್ಗೋ


37.ಕರ್ನಾಟಕದ ಹೆಸರಾಂತ ವ್ಯಕ್ತಿ ಗಿರೀಶ್ ಕಾರ್ನಾಡ್‌ರವರು ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧರು ?
 (ಎ)ರಂಗಭೂಮಿ ಮತ್ತು ಸಾಹಿತ್ಯ
 (ಬಿ)ಕೈಗಾರಿಕೆ
 (ಸಿ)ವೈಮಾನಿಕ
 (ಡಿ)ಆರೋಗ್ಯ ಸೇವೆ
CORRECT ANSWER

(ಎ) ರಂಗಭೂಮಿ ಮತ್ತು ಸಾಹಿತ್ಯ


38.ಹೊಸದಾಗಿ ಜಾರಿಗೆ ಬಂದಿರುವ ‘ಪೋಕ್ಸೊ’ ಕಾಯ್ದೆಯು, ಯಾರ ಹಿತ ಕಾಯುತ್ತದೆ ?
 (ಎ)ಮಹಿಳೆಯರು
 (ಬಿ)ಮಕ್ಕಳು
 (ಸಿ)ಪರಿಸರ
 (ಡಿ)ಪ್ರಾಣಿಗಳ ಕಲ್ಯಾಣ
CORRECT ANSWER

(ಬಿ) ಮಕ್ಕಳು


39.ಜಾಗತಿಕ ಮಾನವ ಹಕ್ಕುಗಳ ದಿನವನ್ನು ಎಂದು ಆಚರಿಸಲಾಗುತ್ತದೆ?
 (ಎ)ಡಿಸೆಂಬರ್ 10
 (ಬಿ)ಅಕ್ಟೋಬರ್ 2
 (ಸಿ)ಜೂನ್ 5
 (ಡಿ)ಜನವರಿ 31
CORRECT ANSWER

(ಎ) ಡಿಸೆಂಬರ್ 10


40.ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ, ಕರ್ನಾಟಕಕ್ಕೆ ಎಷ್ಟು ಸ್ಥಾನಗಳಿವೆ?
 (ಎ)12, 10
 (ಬಿ)28, 12
 (ಸಿ)20, 15
 (ಡಿ)25, 20
CORRECT ANSWER

(ಬಿ) 28, 12


41.‘ವರ್ಲ್ಡ್‌ವೈಡ್‌ ವೆಬ್’ಅನ್ನು ಕಂಡುಹಿಡಿದವರು
 (ಎ)ಟಿಮ್ ಬರ್ನರ್ಸ್ ಲೀ
 (ಬಿ)ಅಲೆಕ್ಸಾಂಡರ್ ಬೆನ್
 (ಸಿ)ಜೆ.ಸಿ.ಆರ್. ಲಿಕ್‌ಲಿಡರ್
 (ಡಿ)ಅಲೆಕ್ಸಾಂಡರ್ ಗ್ರಹಾಂಬೆಲ್
CORRECT ANSWER

(ಎ) ಟಿಮ್ ಬರ್ನರ್ಸ್ ಲೀ


42.ಸೋನಾಲಿಕಾ ಮತ್ತು ಕಲ್ಯಾಣಸೋನೆ ಇವುಗಳು ಯಾವುದರ ತಳಿಗಳು ?
 (ಎ)ಗೋಧಿ
 (ಬಿ)ಭತ್ತ
 (ಸಿ)ನವಣೆ
 (ಡಿ)ಕೋಡುಕಾಯಿ
CORRECT ANSWER

(ಎ) ಗೋಧಿ


43.ಜೀವಶಾಸ್ತ್ರಜ್ಞರಾದ ಡುಯೊ ಜೇಮ್ಸ್ ಡಿ. ವ್ಯಾಟ್‌ಸನ್ (ಅಮೆರಿಕ) ಮತ್ತು ಫ್ರಾನ್ಸಿಸ್ ಕ್ರಿಕ್ (ಯು.ಕೆ.)ರವರು 1953ರಲ್ಲಿ ಏನನ್ನು ಕಂಡುಹಿಡಿದರು?
 (ಎ)ಪೆನ್ಸಿಲಿನ್
 (ಬಿ)ಡಿ.ಎನ್.ಎ. ಸಂರಚನೆ
 (ಸಿ)ಸಿಂಥೆಟಿಕ್ ಆ್ಯಂಟಿಜೆನ್
 (ಡಿ)ಮಲೇರಿಯಾ ಜೆರ್ಮ್ಸ್
CORRECT ANSWER

(ಬಿ) ಡಿ.ಎನ್.ಎ. ಸಂರಚನೆ


44.ಆಪ್ಟಿಕಲ್ ಪೈಬರ್ ಈ ತತ್ವದ ಮೇಲೆ ಕೆಲಸ ಮಾಡುತ್ತದೆ
 (ಎ)ವಕ್ರೀಭವನ
 (ಬಿ)ಒಟ್ಟು ಆಂತರಿಕ ಪ್ರತಿಬಿಂಬ
 (ಸಿ)ಹರಡುವಿಕೆ
 (ಡಿ)ವ್ಯತಿಕರಣ
CORRECT ANSWER

(ಬಿ) ಒಟ್ಟು ಆಂತರಿಕ ಪ್ರತಿಬಿಂಬ


45.ಎಲೆಕ್ಟ್ರಿಕ್ ಬಲ್ಬ್‌ಗಳಲ್ಲಿ ತುಂಬಿಸಿರುವ ಅನಿಲವು
 (ಎ)ನೈಟ್ರೋಜನ್
 (ಬಿ)ಹೈಡ್ರೋಜನ್
 (ಸಿ)ಕಾರ್ಬನ್ ಡೈ ಆಕ್ಸೈಡ್
 (ಡಿ)ಆಕ್ಸಿಜನ್
CORRECT ANSWER

(ಎ) ನೈಟ್ರೋಜನ್


46.ಕ್ಲೋರೋಫಿಲ್‌ನ ಮಧ್ಯದಲ್ಲಿರುವ ಭಾಗ
 (ಎ)ಕಾಪರ್
 (ಬಿ)ಮ್ಯಾಗ್ನೀಷಿಯಂ
 (ಸಿ)ಫಾಸ್ಫರಸ್
 (ಡಿ)ಕ್ಯಾಲ್ಸಿಯಂ
CORRECT ANSWER

(ಬಿ) ಮ್ಯಾಗ್ನೀಷಿಯಂ


47.‘ವಾಷಿಂಗ್ ಸೋಡಾ’ – ಇದು ಯಾವುದರ ಸಾಮಾನ್ಯ ಹೆಸರು ?
 (ಎ)ಸೋಡಿಯಂ ಕಾರ್ಬೋನೇಟ್
 (ಬಿ)ಕ್ಯಾಲ್ಸಿಯಂ ಬೈಕಾರ್ಬೋನೇಟ್
 (ಸಿ)ಸೋಡಿಯಂ ಬೈಕಾರ್ಬೋನೇಟ್
 (ಡಿ)ಕ್ಯಾಲ್ಸಿಯಂ ಕಾರ್ಬೋನೇಟ್
CORRECT ANSWER

(ಎ) ಸೋಡಿಯಂ ಕಾರ್ಬೋನೇಟ್


48.ಪೆನ್ಸಿಲ್‌ನಲ್ಲಿ ಉಪಯೋಗಿಸುವ ವಸ್ತು
 (ಎ)ಗ್ರಾಫೈಟ್
 (ಬಿ)ಸಿಲಿಕಾನ್
 (ಸಿ)ಚಾರ್‌ಕೋಲ್‌
 (ಡಿ)ಫಾಸ್ಪರಸ್
CORRECT ANSWER

(ಎ) ಗ್ರಾಫೈಟ್


49.ಸಿಲಿಕಾನ್ ಕಾರ್ಬೈಡ್ ಅನ್ನು ಈ ಕೆಳಗಿನ ಯಾವುದರಲ್ಲಿ ಉಪಯೋಗಿಸುತ್ತಾರೆ ?
 (ಎ)ಸಿಮೆಂಟ್ ಮತ್ತು ಗ್ಲಾಸ್‌ನ ತಯಾರಿಕೆಯಲ್ಲಿ
 (ಬಿ)ಕೊಳದಲ್ಲಿನ ನೀರಿನ ಶುದ್ಧೀಕರಣದಲ್ಲಿ
 (ಸಿ)ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡುಮಾಡುವಲ್ಲಿ
 (ಡಿ)ವಿಗ್ರಹಗಳ ತಯಾರಿಕೆಯಲ್ಲಿ
CORRECT ANSWER

(ಸಿ) ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡುಮಾಡುವಲ್ಲಿ


50.ಬಲೂನ್‌ಗಳಲ್ಲಿ ಯಾವುದನ್ನು ತುಂಬಿರುತ್ತಾರೆ ?
 (ಎ)ನೈಟ್ರೋಜನ್
 (ಬಿ)ಹೀಲಿಯಂ
 (ಸಿ)ಆಕ್ಸಿಜನ್
 (ಡಿ)ಆರ್ಗಾನ್
CORRECT ANSWER

(ಬಿ) ಹೀಲಿಯಂ


51.‘ಪೆಟ್ರೋಲಿಯಂ’ ಎಂಬ ಪದವು ‘ಪೆಟ್ರಾ’ ಮತ್ತು ‘ಓಲಿಯಂ’ ಎಂಬ ಎರಡು ಪದಗಳಿಂದ ಆಗಿರುವುದಾಗಿದೆ. ಈ ಪದಗಳು
 (ಎ)ಗ್ರೀಕ್ ಪದಗಳು
 (ಬಿ)ಫ್ರೆಂಚ್ ಪದಗಳು
 (ಸಿ)ಲ್ಯಾಟಿನ್ ಪದಗಳು
 (ಡಿ)ರಷ್ಯನ್ ಪದಗಳು
CORRECT ANSWER

(ಸಿ) ಲ್ಯಾಟಿನ್ ಪದಗಳು


52.ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು-ಮೂರು ಬೆಳೆಗಳನ್ನು ಬೆಳೆಯುವುದನ್ನು ಏನೆಂದು ಕರೆಯುತ್ತಾರೆ ?
 (ಎ)ಜೀವನಾಧಾರ ಬೆಳೆಗಾರಿಕೆ
 (ಬಿ)ನೆಲದ ಉಪಯೋಗದ ಬೆಳೆಗಾರಿಕೆ
 (ಸಿ)ವಾಣಿಜ್ಯ ಬೆಳೆಗಾರಿಕೆ
 (ಡಿ)ಪರಿಶ್ರಮಪೂರ್ಣ ಬೆಳೆಗಾರಿಕೆ
CORRECT ANSWER

(ಡಿ) ಪರಿಶ್ರಮಪೂರ್ಣ ಬೆಳೆಗಾರಿಕೆ


53.2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆಯು ಸರಿಸುಮಾರು
 (ಎ)ಸುಮಾರು 125 ಕೋಟಿ
 (ಬಿ)ಸುಮಾರು 121 ಕೋಟಿ
 (ಸಿ)ಸುಮಾರು 124 ಕೋಟಿ
 (ಡಿ)ಸುಮಾರು 126 ಕೋಟಿ
CORRECT ANSWER

(ಬಿ) ಸುಮಾರು 121 ಕೋಟಿ


54.ಈ ಕೆಳಗಿನವುಗಳಲ್ಲಿ ಯಾವುದನ್ನು ವಾಣಿಜ್ಯ ಬೆಳೆ ಎಂದು ಕರೆಯುತ್ತಾರೆ?
 (ಎ)ಗೋಧಿ
 (ಬಿ)ರಾಗಿ
 (ಸಿ)ಜೋಳ
 (ಡಿ)ಕಬ್ಬು
CORRECT ANSWER

(ಡಿ) ಕಬ್ಬು


55.ವಾತಾವರಣದಲ್ಲಿ ‘ಓರೆನ್’ನ ಮಹತ್ವವೇನು ?
 (ಎ)ಭೂಮಿಯ ಮೇಲೆ ಅದು ಹಸಿರು ಮನೆ ಪರಿಣಾಮ ಉಂಟುಮಾಡುತ್ತದೆ.
 (ಬಿ)ನ್ಯೂಕ್ಲಿಯಸ್‌ಗಳನ್ನು ಘನೀಕರಿಸುತ್ತದೆ.
 (ಸಿ)ಅಲ್ಟ್ರಾ ವೈಲೆಟ್ ಕಿರಣಗಳಿಂದ ಅದು ರಕ್ಷಣೆ ನೀಡುತ್ತದೆ.
 (ಡಿ)ನೀಲಿ ಬೆಳಕನ್ನು ಚದುರಿಸಲು ಸಹಾಯ ಮಾಡುತ್ತದೆ.
CORRECT ANSWER

(ಸಿ) ಅಲ್ಟ್ರಾ ವೈಲೆಟ್ ಕಿರಣಗಳಿಂದ ಅದು ರಕ್ಷಣೆ ನೀಡುತ್ತದೆ.


56.2014ರ ನೋಬೆಲ್ ಶಾಂತಿ ಪ್ರಶಸ್ತಿಯು ಯಾರಿಗೆ ದೊರಕಿತು ?
 (ಎ)ಎ.ಪಿ.ಜೆ. ಅಬ್ದುಲ್ ಕಲಾಂ
 (ಬಿ)ಅಟಲ್ ಬಿಹಾರಿ ವಾಜಪೇಯಿ
 (ಸಿ)ಸಿ.ಎನ್.ಆರ್. ರಾವ್
 (ಡಿ)ಕೈಲಾಸ್ ಸತ್ಯಾರ್ಥಿ
CORRECT ANSWER

(ಡಿ) ಕೈಲಾಸ್ ಸತ್ಯಾರ್ಥಿ


57.‘ಸೈಬರ್ ಕ್ರೈಂ’ ಎಂದರೆ, ನೀವು ಏನೆಂದು ಅರ್ಥ ಮಾಡಿಕೊಂಡಿದ್ದೀರಾ?
 (ಎ)ಸೈಬರ್ ಕೆಫೆಯಲ್ಲಿ ಕೊಲೆ
 (ಬಿ)ಕಂಪ್ಯೂೂಟರ್ ಅಥವಾ ಮೊಬೈಲ್ ಮೂಲಕ ಅಪರಾಧ ಮಾಡುವುದು
 (ಸಿ)ಸರಗಳ್ಳತನ
 (ಡಿ)ವಾಹನ ಕಳ್ಳತನ
CORRECT ANSWER

(ಬಿ) ಕಂಪ್ಯೂೂಟರ್ ಅಥವಾ ಮೊಬೈಲ್ ಮೂಲಕ ಅಪರಾಧ ಮಾಡುವುದು


58.ಹುತ್ತರಿ ನೃತ್ಯ ಮತ್ತು ಬೋಲಕ್ ಆಟ ನೃತ್ಯ ಇವುಗಳು ಕರ್ನಾಟಕದ ಯಾವ ಭಾಗದ ಪ್ರಸಿದ್ಧ ನೃತ್ಯಗಳು ?
 (ಎ)ಕೊಡಗು
 (ಬಿ)ಮೈಸೂರು
 (ಸಿ)ಕಲಬುರ್ಗಿ
 (ಡಿ)ಹಾವೇರಿ
CORRECT ANSWER

(ಎ) ಕೊಡಗು


59.ನಾಗಾಲ್ಯಾಂಡ್‌ನ ರಾಜಧಾನಿಯು
 (ಎ)ಕೋಹಿಮಾ
 (ಬಿ)ಅಗರ್ತಲ
 (ಸಿ)ಇಫಾಂಲ
 (ಡಿ)ಡಿಸ್‌ಪುರ
CORRECT ANSWER

(ಎ) ಕೋಹಿಮಾ


60.‘ಕರ್ನಾಟಕ ಪೊಲೀಸ್ ಅಕಾಡೆಮಿ’ಯು ಯಾವ ಊರಿನಲ್ಲಿದೆ ?
 (ಎ)ಮೈಸೂರು
 (ಬಿ)ಬೆಂಗಳೂರು
 (ಸಿ)ಕಲಬುರ್ಗಿ
 (ಡಿ)ಬೆಳಗಾವಿ
CORRECT ANSWER

(ಎ) ಮೈಸೂರು


61.ಈ ಕೆಳಗಿನ ಚಿತ್ರಗಳಲ್ಲಿ ಯಾವುದು ಟೆನ್ನಿಸ್ ಅಭಿಮಾನಿಯ, ಕ್ರಿಕೆಟ್ ಆಟಗಾರರ ಮತ್ತು ವಿದ್ಯಾರ್ಥಿಗಳ ಗುಂಪುಗಳ ಸಂಬಂಧವನ್ನು ಸೂಚಿಸುತ್ತದೆ?
 (ಎ)
 (ಬಿ)
 (ಸಿ)
 (ಡಿ)
CORRECT ANSWER

(ಎ)


62.ಈ ಚಿತ್ರಗಳಲ್ಲಿ ಯಾವುದು ಕ್ಯಾರೆಟ್, ಆಹಾರ ಮತ್ತು ತರಕಾರಿಗಳ ನಡುವಿನ ಸಂಬಂಧವನ್ನು ಸೂಚಿಸುತ್ತದೆ ?
 (ಎ)
 (ಬಿ)
 (ಸಿ)
 (ಡಿ)
CORRECT ANSWER

(ಎ)


63.ಈ ಶೃಂಖಲೆಯಲ್ಲಿ ತಪ್ಪಾಗಿರುವ ಸಂಖ್ಯೆಯನ್ನು ತಿಳಿಸಿರಿ.
2, 5, 10, 50, 500, 5000
 (ಎ)5000
 (ಬಿ)500
 (ಸಿ)10
 (ಡಿ)50
CORRECT ANSWER

(ಎ) 5000


64.ಒಂದು ಚಿನ್ನದ ಬ್ರೇಸ್‌ಲೆಟ್ ಅನ್ನು 14,500 ರೂಪಾಯಿಗಳಿಗೆ ಮಾರಿದಾಗ, ಶೇ.20ರಷ್ಟು ನಷ್ಟ ಉಂಟಾಗುತ್ತದೆ. ಹಾಗಿದ್ದಲ್ಲಿ ಬ್ರೇಸ್‌ಲೆಟ್‌ನ ಮೂಲಬೆಲೆ ಏನು ?
 (ಎ)ರೂ. 18,125
 (ಬಿ)ರೂ. 17,400
 (ಸಿ)ರೂ. 15,225
 (ಡಿ)ರೂ. 16,800
CORRECT ANSWER

(ಎ) ರೂ. 18,125


65.ಸೈನಾ ನೆಹವಾಲ್‌ರವರು ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಹೊಂದಿರುತ್ತಾರೆ?
 (ಎ)ಟೆನ್ನಿಸ್
 (ಬಿ)ಬ್ಯಾಡ್ಮಿಂಟನ್
 (ಸಿ)ಟೇಬಲ್ ಟೆನ್ನಿಸ್
 (ಡಿ)ಸ್ಕ್ವಾಷ್
CORRECT ANSWER

(ಬಿ) ಬ್ಯಾಡ್ಮಿಂಟನ್


66.ಜಾಗತಿಕ ಜನಸಂಖ್ಯಾ ದಿವಸವನ್ನು ಯಾವತ್ತು ಆಚರಿಸುತ್ತಾರೆ ?
 (ಎ)ಪ್ರತಿ ವರ್ಷದ 14ನೇ ಜುಲೈ
 (ಬಿ)ಪ್ರತಿ ವರ್ಷದ 18ನೇ ಜುಲೈ
 (ಸಿ)ಪ್ರತಿ ವರ್ಷದ 11ನೇ ಜುಲೈ
 (ಡಿ)ಪ್ರತಿ ವರ್ಷದ 24ನೇ ಜುಲೈ
CORRECT ANSWER

(ಸಿ) ಪ್ರತಿ ವರ್ಷದ 11ನೇ ಜುಲೈ


67.ಸೆಕ್ಸ್ ರೇಷಿಯೋ (ಲಿಂಗಾನುಪಾತ) ಎಂದರೆ
 (ಎ)ಜಗತ್ತಿನ ಒಟ್ಟು ಜನಸಂಖ್ಯೆ ಮತ್ತು ದೇಶದ ಒಟ್ಟು ಜನಸಂಖ್ಯೆಯ ನಡುವಿನ ಅನುಪಾತ
 (ಬಿ)ದೇಶದ ಒಟ್ಟು ಜನಸಂಖ್ಯೆ ಮತ್ತು ರಾಜ್ಯದ ಒಟ್ಟು ಜನಸಂಖ್ಯೆಯ ನಡುವಿನ ಅನುಪಾತ
 (ಸಿ)ವಯಸ್ಸಾದವರ ಮತ್ತು ಯುವಕರ ನಡುವಿನ ಅನುಪಾತ
 (ಡಿ)ಪುರುಷ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ
CORRECT ANSWER

(ಡಿ) ಪುರುಷ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ


68.‘ಜೀವ ನಿರೀಕ್ಷಿಸುವಿಕೆ’ ಎಂದರೆ
 (ಎ)ಆನೆಯ ಸರಾಸರಿ ಬದುಕುವಿಕೆಯ ಕಾಲ
 (ಬಿ)ಸಿಂಹದ ಸರಾಸರಿ ಬದುಕುವಿಕೆಯ ಕಾಲ
 (ಸಿ)ಮನುಷ್ಯನ ಸರಾಸರಿ ಬದುಕುವಿಕೆಯ ಕಾಲ
 (ಡಿ)ಒಂದು ಉಪಗ್ರಹವು ಕ್ರಿಯಾಶೀಲವಾಗಿರಬಹುದಾದ ಸರಾಸರಿ ಕಾಲ
CORRECT ANSWER

(ಸಿ) ಮನುಷ್ಯನ ಸರಾಸರಿ ಬದುಕುವಿಕೆಯ ಕಾಲ


69.‘ಮೆಗಲೋಪೋಲಿಸ್’ ಎಂಬುದು ಒಂದು ಗ್ರೀಕ್ ಭಾಷೆಯ ಪದ. ಹಾಗೆಂದರೆ
 (ಎ)ಮಹಾನ್ ಪೋಲಿಸ್
 (ಬಿ)ಮಹಾನಗರ
 (ಸಿ)ಮಹಾರಾಜಕಾರಣಿ
 (ಡಿ)ಇವು ಯಾವುದೂ ಅಲ್ಲ
CORRECT ANSWER

(ಬಿ) ಮಹಾನಗರ


70.ಹೆಚ್‌ಡಿಐ (HDI) ಎಂದರೆ
 (ಎ)ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್
 (ಬಿ)ಹ್ಯೂಮನ್ ಡೆವಲಪ್‌ಮೆಂಟ್ ಇನ್ ಇಂಡಿಯಾ
 (ಸಿ)ಹೆಲ್ತ್ ಡೆವಲಪ್‌ಮೆಂಟ್ ಇಂಡೆಕ್ಸ್
 (ಡಿ)ಹೆಲ್ತ್ ಡೆವಲಪ್‌ಮೆಂಟ್ ಇನ್ ಇಂಡಿಯಾ
CORRECT ANSWER

(ಎ) ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್


71.‘ಧರ್ಮ ಚಕ್ರ’ – ಇದು ಯಾರ ಸಂಕೇತವಾಗಿತ್ತು ?
 (ಎ)ಜೈನಧರ್ಮ
 (ಬಿ)ವರ್ಧನರ
 (ಸಿ)ಬೌದ್ಧಧರ್ಮ
 (ಡಿ)ಇವು ಯಾವುವೂ ಅಲ್ಲ
CORRECT ANSWER

(ಸಿ) ಬೌದ್ಧಧರ್ಮ


72.‘ದೇವನಾಂಪ್ರಿಯ’ ಇದು ಯಾರ ಹೆಸರಿಗೆ ಸಂಬಂಧಿಸಿದ್ದು ?
 (ಎ)ಅಶೋಕ
 (ಬಿ)ಚಂದ್ರಗುಪ್ತ ಮೌರ್ಯ
 (ಸಿ)ಬಿಂದುಸಾರ
 (ಡಿ)ಗೌತಮಿಪುತ್ರ
CORRECT ANSWER

(ಎ) ಅಶೋಕ


73.ಚೀನಾ ದೇಶದ ಪ್ರವಾಸಿಗನಾದ ಫಾಹಿಯಾನ್ ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದನು?
 (ಎ)ಸಮುದ್ರಗುಪ್ತ
 (ಬಿ)ಚಂದ್ರಗುಪ್ತ – II
 (ಸಿ)ಶ್ರೀ ಗುಪ್ತ
 (ಡಿ)ಚಂದ್ರಗುಪ್ತ – I
CORRECT ANSWER

(ಬಿ) ಚಂದ್ರಗುಪ್ತ – II


74.ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು ?
 (ಎ)ಮಹಮ್ಮದ್-ಬಿನ್-ತುಘಲಕ್
 (ಬಿ)ಮಲಿಕ್ ಕಾಫರ್
 (ಸಿ)ಜಲಾಲ್-ಉದ್-ದಿನ್-ಖಿಲ್ಜಿ
 (ಡಿ)ಅಲ್ಲಾ-ಉದ್-ದಿನ್-ಖಿಲ್ಜಿ
CORRECT ANSWER

(ಡಿ) ಅಲ್ಲಾ-ಉದ್-ದಿನ್-ಖಿಲ್ಜಿ


75.ರಾಜಾ ತೋದರಮಲ್ಲನು
 (ಎ)ಅಕ್ಬರನ ಹಣಕಾಸಿನ ಮಂತ್ರಿ
 (ಬಿ)ಅಕ್ಬರನ ಕಂದಾಯ ಮಂತ್ರಿ
 (ಸಿ)ಅಕ್ಬರನ ಕಾನೂನು ಮಂತ್ರಿ
 (ಡಿ)ಅಕ್ಬರನ ಅರಣ್ಯ ಮಂತ್ರಿ
CORRECT ANSWER

(ಬಿ) ಅಕ್ಬರನ ಕಂದಾಯ ಮಂತ್ರಿ


76.ಭಾರತ ಎಂಬ ಪದವು ಈ ಕೆಳಗಿನ ಯಾವುದರಿಂದ ರೂಪಿಸಲ್ಪಟ್ಟಿದೆ?
 (ಎ)‘ಇಂಡೋಸ್’ ಎಂಬ ಪರ್ಶಿಯನ್ ಪದ
 (ಬಿ)‘ಇಂಡೋಸ್’ ಎಂಬ ಗ್ರೀಕ್ ಪದ
 (ಸಿ)‘ಇಂಡಿಗೋ’ ಎಂಬ ಸ್ಪಾನಿಷ್ ಪದ
 (ಡಿ)‘ಇಂಡಸ್’ ಎಂಬ ರಷ್ಯನ್ ಪದ
CORRECT ANSWER

(ಎ) ‘ಇಂಡೋಸ್’ ಎಂಬ ಪರ್ಶಿಯನ್ ಪದ


77.‘ಬುದ್ಧಚರಿತ’ವನ್ನು ಬರೆದವರು
 (ಎ)ಬಾಣಭಟ್ಟ
 (ಬಿ)ಚಾಂದ್‌ಬರ್ದಾಯಿ
 (ಸಿ)ಬಿಲ್ಹಣ
 (ಡಿ)ಅಶ್ವಘೋಷ
CORRECT ANSWER

(ಡಿ) ಅಶ್ವಘೋಷ


78.ಪ್ರಾಚೀನ ಶಿಲಾಯುಗದ ಮಾನವ ಬಳಸುತ್ತಿದ್ದ ಕಠಿಣವಾದ ಕಲ್ಲು
 (ಎ)ಗ್ರಾನೈಟ್
 (ಬಿ)ಕ್ವಾರ್ಟ್‌ಜೈಟ್‌
 (ಸಿ)ನೀಸೆಸ್
 (ಡಿ)ಕೆತ್ತಿದ ಕಲ್ಲುಗಳು
CORRECT ANSWER

(ಬಿ) ಕ್ವಾರ್ಟ್‌ಜೈಟ್‌


79.ನಾಲ್ಕು ವೇದಗಳಲ್ಲಿ ಯಾವ ವೇದವು ಮೊದಲು ಬರೆಯಲ್ಪಟ್ಟಿತು?
 (ಎ)ಅಥರ್ವಣವೇದ
 (ಬಿ)ಸಾಮವೇದ
 (ಸಿ)ಋಗ್ವೇದ
 (ಡಿ)ಯಜುರ್ವೇದ
CORRECT ANSWER

(ಸಿ) ಋಗ್ವೇದ


80.ಜೈನರು ಒಟ್ಟು 24 ಜನ ತೀರ್ಥಂಕರರು ಇದ್ದರೆಂದು ನಂಬುತ್ತಾರೆ. 23ನೇ ತೀರ್ಥಂಕರರು ಯಾರು ?
 (ಎ)ವರ್ಧಮಾನ ಮಹಾವೀರ
 (ಬಿ)ರಿಷಭನಾಥ
 (ಸಿ)ಆದಿನಾಥ
 (ಡಿ)ಪಾರ್ಶ್ವನಾಥ
CORRECT ANSWER

(ಡಿ) ಪಾರ್ಶ್ವನಾಥ


81.330 ಸೆಂಟಿಮೀಟರ್ ಉದ್ದವಿರುವ ಹಗ್ಗದಿಂದ, 13.2 ಸೆಂಟಿಮೀಟರ್‌ನ ಉದ್ದದ ಎಷ್ಟು ತುಂಡುಗಳನ್ನು ಕತ್ತರಿಸಬಹುದು?
 (ಎ)25
 (ಬಿ)28
 (ಸಿ)21
 (ಡಿ)35
CORRECT ANSWER

(ಎ) 25


82.ಒಂದು ಬಸ್ಸಿನ ವೇಗವು ಗಂಟೆಗೆ 72 ಕಿ.ಮೀ. ಆದರೆ, ಆ ಬಸ್ಸು 5 ಸೆಕೆಂಡಿನಲ್ಲಿ ಎಷ್ಟು ದೂರ ಕ್ರಮಿಸುತ್ತದೆ ?
 (ಎ)50 ಮೀಟರ್
 (ಬಿ)74.5 ಮೀಟರ್
 (ಸಿ)100 ಮೀಟರ್
 (ಡಿ)60 ಮೀಟರ್
CORRECT ANSWER

(ಸಿ) 100 ಮೀಟರ್


83.ಈ ಸಂಖ್ಯೆಗಳನ್ನು ಗಮನಿಸಿ 7, 10, 8, 11, 9, 12. ಇದರ ಮುಂದಿನ ಸಂಖ್ಯೆ ಯಾವುದು ?
 (ಎ)7
 (ಬಿ)10
 (ಸಿ)12
 (ಡಿ)13
CORRECT ANSWER

(ಬಿ) 10


84.ಈ ಶೃಂಖಲೆಯಲ್ಲಿ ಮುಂದಿನ ಸಂಖ್ಯೆ ಯಾವುದು ?
2, 6, 18, 54, ___
 (ಎ)108
 (ಬಿ)148
 (ಸಿ)162
 (ಡಿ)216
CORRECT ANSWER

(ಸಿ) 162


85.ಈ ದಿನ ವರುಣನ ಹುಟ್ಟಿದ ಹಬ್ಬ. ಇವತ್ತಿನಿಂದ 1 ವರ್ಷದ ನಂತರ, ಈತನ ವಯಸ್ಸು 12 ವರ್ಷದ ಹಿಂದೆ ಎಷ್ಟಿತ್ತೋ, ಅದರ ಎರಡರಷ್ಟು ಆಗುತ್ತದೆ. ಹಾಗಿದ್ದಲ್ಲಿ ಈ ದಿವಸ ವರುಣನ ವಯಸ್ಸು ಎಷ್ಟು ?
 (ಎ)20
 (ಬಿ)22
 (ಸಿ)25
 (ಡಿ)27
CORRECT ANSWER

(ಸಿ) 25


86.ಇಳಕಲ್ ಸೀರೆಗಳಿಗೆ ಪ್ರಸಿದ್ಧಿಯಾಗಿರುವ ಇಳಕಲ್ ಪಟ್ಟಣವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?
 (ಎ)ವಿಜಾಪುರ
 (ಬಿ)ಬಾಗಲಕೋಟೆ
 (ಸಿ)ಕಲಬುರಗಿ
 (ಡಿ)ದಾವಣಗೆರೆ
CORRECT ANSWER

(ಬಿ) ಬಾಗಲಕೋಟೆ


87.ಕರ್ನಾಟಕವು ತನ್ನ ಈಗಿನ ಹೆಸರನ್ನು ಯಾವಾಗಿನಿಂದ ಪಡೆಯಿತು?
 (ಎ)ಜನವರಿ 1, 1951
 (ಬಿ)ಜೂನ್ 15, 1971
 (ಸಿ)ಆಗಸ್ಟ್ 21, 1991
 (ಡಿ)ನವೆಂಬರ್ 1, 1973
CORRECT ANSWER

(ಡಿ) ನವೆಂಬರ್ 1, 1973


88.ಭಾರತದ ರಾಷ್ಟ್ರಗೀತೆಯಾದ ‘ಜನಗಣಮನ’ವನ್ನು ಬರೆದವರು ?
 (ಎ)ರವೀಂದ್ರನಾಥ ಟ್ಯಾಗೋರ್
 (ಬಿ)ಬಂಕಿಮಚಂದ್ರ ಚಟ್ಟೋಪಾಧ್ಯಾಯ
 (ಸಿ)ಇಕ್ಬಾಲ್
 (ಡಿ)ಅರಬಿಂದೋ ದಾಸ್
CORRECT ANSWER

(ಎ) ರವೀಂದ್ರನಾಥ ಟ್ಯಾಗೋರ್


89.ಕೈಗಾ ಅಣುಶಕ್ತಿ ಸ್ಥಾವರವು ಯಾವ ಜಿಲ್ಲೆಯಲ್ಲಿದೆ ?
 (ಎ)ಉತ್ತರ ಕನ್ನಡ ಜಿಲ್ಲೆ
 (ಬಿ)ರಾಯಚೂರು ಜಿಲ್ಲೆ
 (ಸಿ)ಶಿವಮೊಗ್ಗ ಜಿಲ್ಲೆ
 (ಡಿ)ಉಡುಪಿ ಜಿಲ್ಲೆ
CORRECT ANSWER

(ಎ) ಉತ್ತರ ಕನ್ನಡ ಜಿಲ್ಲೆ


90.80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು, 2014ರಲ್ಲಿ ಯಾವ ಜಿಲ್ಲೆಯಲ್ಲಿ ನಡೆಯಿತು ?
 (ಎ)ಕೊಡಗು
 (ಬಿ)ವಿಜಾಪುರ
 (ಸಿ)ಗಂಗಾವತಿ
 (ಡಿ)ಹಾವೇರಿ
CORRECT ANSWER

(ಎ) ಕೊಡಗು


91.ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಹೊಸದಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು
 (ಎ)ಮುರಳಿ ಮನೋಹರ್ ಜೋಷಿ
 (ಬಿ)ದೇವೇಂದ್ರ ಫಡ್ನೀಸ್
 (ಸಿ)ಏಕನಾಥ ಖಡ್ಸೆ
 (ಡಿ)ಶರದ್ ಪವಾರ್
CORRECT ANSWER

(ಬಿ) ದೇವೇಂದ್ರ ಫಡ್ನೀಸ್


92.2014ನೇ ಇಸವಿಯಲ್ಲಿ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಕರಾವಳಿಯನ್ನು ನಾಶಮಾಡಿದ ಚಂಡಮಾರುತ
 (ಎ)ಕತ್ರಿನಾ
 (ಬಿ)ನೀಲೋಫರ್
 (ಸಿ)ಹುಡ್‌ಹುಡ್
 (ಡಿ)ಕೋಮನ್
CORRECT ANSWER

(ಸಿ) ಹುಡ್‌ಹುಡ್


93.ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ‘ಸ್ವಚ್ಛ ಭಾರತ ಅಭಿಯಾನ’ವನ್ನು ಎಂದು ಪ್ರಾರಂಭಿಸಿದರು ?
 (ಎ)ಅಕ್ಟೋಬರ್ 2, 2014
 (ಬಿ)ಅಕ್ಟೋಬರ್ 17, 2014
 (ಸಿ)ಸೆಪ್ಟ್ಟೆಂಬರ್ 5, 2014
 (ಡಿ)ಅಕ್ಟೋಬರ್ 14, 2014
CORRECT ANSWER

(ಎ) ಅಕ್ಟೋಬರ್ 2, 2014


94.ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನ ಸಾಗರ ಜಲಾಶಯವು ಯಾವ ನದಿಗೆ ಕಟ್ಟಲ್ಪಟ್ಟಿದೆ ?
 (ಎ)ಕೃಷ್ಣಾ
 (ಬಿ)ಕಾವೇರಿ
 (ಸಿ)ಮಹಾನದಿ
 (ಡಿ)ಗೋದಾವರಿ
CORRECT ANSWER

(ಎ) ಕೃಷ್ಣಾ


95.ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ ?
 (ಎ)ಅನಿಮೋಮೀಟರ್
 (ಬಿ)ಹೈಗ್ರೋಮೀಟರ್
 (ಸಿ)ಗ್ಯಾಲ್ವನೋಮೀಟರ್
 (ಡಿ)ಸ್ಪೆಕ್ಟ್ರೋಮೀಟರ್
CORRECT ANSWER

(ಎ) ಅನಿಮೋಮೀಟರ್


96.ರೋಗಗ್ರಸ್ಥ ಪ್ರಾಣಿಯು ಮನುಷ್ಯನನ್ನು ಕಚ್ಚುವುದರಿಂದ ಮನುಷ್ಯನಿಗೆ ಬರುವ ರೋಗವನ್ನು ಏನೆಂದು ಕರೆಯುತ್ತಾರೆ ?
 (ಎ)ನ್ಯುಮೋನಿಯಾ
 (ಬಿ)ಮೀಸಲ್ಸ್
 (ಸಿ)ರೇಬೀಸ್
 (ಡಿ)ಅಥೆರೋಸ್ಕ್ಲಿರೋಸಿಸ್
CORRECT ANSWER

(ಸಿ) ರೇಬೀಸ್


97.ಜೀವಕೋಶದಲ್ಲಿ ಪ್ರೊಟೀನ್ ಸಂಯೋಜನೆ ನಡೆಯುವುದು
 (ಎ)ಸ್ರಾವಕ ಕಣಗಳು
 (ಬಿ)ಮೇದಸ್ಸಿನ ಬಿಂದುಗಳು
 (ಸಿ)ರೈಬೋಸೋಮ್
 (ಡಿ)ಮೈಟೋಕಾಂಡ್ರಿಯ
CORRECT ANSWER

(ಸಿ) ರೈಬೋಸೋಮ್


98.ಮಸಿ ಹೀರುವ ಕಾಗದದಲ್ಲಿ, ಮಸಿಯನ್ನು ಹೀರುವ ಕ್ರಿಯೆಯು
 (ಎ)ಮಸಿಯ ಸ್ನಿಗ್ಧತೆಯನ್ನು ಒಳಗೊಂಡಿರುತ್ತದೆ.
 (ಬಿ)ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ.
 (ಸಿ)ಮಸಿಹೀರುವ ಕಾಗದದಲ್ಲಿ ಮಸಿಯ ಹರಡುವಿಕೆಯಿಂದ ಆಗುತ್ತದೆ.
 (ಡಿ)ಸೈಫನ್ ಪೇಪರ್
CORRECT ANSWER

(ಬಿ) ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ.


99.ಕಾಮನಬಿಲ್ಲು ಉಂಟಾಗಲು ಕಾರಣ
 (ಎ)ಪ್ರತಿಬಿಂಬದಿಂದ
 (ಬಿ)ವಕ್ರೀಭವನದಿಂದ
 (ಸಿ)ಹರಡುವಿಕೆಯಿಂದ
 (ಡಿ)ಮೇಲಿನ ಎಲ್ಲದರಿಂದ
CORRECT ANSWER

(ಡಿ) ಮೇಲಿನ ಎಲ್ಲದರಿಂದ


100.ಸೂರ್ಯನ ಕಿರಣಗಳು ಸೂರ್ಯನಿಂದ ಭೂಮಿಯನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ?
 (ಎ)8 ನಿಮಿಷ
 (ಬಿ)2 ನಿಮಿಷ
 (ಸಿ)10 ನಿಮಿಷ
 (ಡಿ)20 ನಿಮಿಷ
CORRECT ANSWER

(ಎ) 8 ನಿಮಿಷ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment