FDA-2019 Paper-2 General KANNADA Questions with answers
ದಿನಾಂಕ 09.06.2019 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಕನ್ನಡ ಪತ್ರಿಕೆ – II (ವಿಷಯ ಸಂಕೇತ: 367)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.
ಸೂಚನೆಗಳು : ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 1 – 9) ಅವುಗಳ ಮುಂದೆ ಸೂಚಿಸಿದ ಪರ್ಯಾಯ ರೂಪಗಳಲ್ಲಿ ಸಮಾನಾರ್ಥಕವಾದ ಅಥವಾ ಅತಿ ಸಮೀಪದ ಅರ್ಥವುಳ್ಳ ರೂಪವನ್ನು ಗುರ್ತಿಸಿ.
|
| ಉದಾಹರಣೆ: |
| ಮೀನ್ ಎಂದರೆ |
|
| (1) | ಹೊಳೆಯುವ |
| (2) | ಮೀಯು |
| (3) | ಮೇಯು |
| (4) | ಆಕಾಶ |
| ಇಲ್ಲಿ ‘‘ಹೊಳೆಯುವ’’ ಎಂಬುದು ‘‘ಮೀನ್’ನ ಅರ್ಥವನ್ನು ಹೇಳುವ ಪದ ಆದುದರಿಂದ (1) ನ್ನು ಗುರುತಿಸಬೇಕು. |
|
1. | ತಸ್ಕರ ಎಂದರೆ |
|
| (1) | ಭಾಸ್ಕರ |
| (2) | ಕಳ್ಳ |
| (3) | ದಿವಾಕರ |
| (4) | ತಕಲಿ |
ಸರಿ ಉತ್ತರ
(2) ಕಳ್ಳ
|
2. | ಹಳು ಎಂದರೆ |
|
| (1) | ಅಳು |
| (2) | ರೋದಿಸು |
| (3) | ಕಾಡು |
| (4) | ಆಲಾಪ |
ಸರಿ ಉತ್ತರ
(3) ಕಾಡು
|
3. | ಕೋಮಣ, ಇದರ ಸಮಾನಾರ್ಥಕ ಪದಗಳು |
|
| (1) | ತೋರಣ, ಕಲ್ಯಾಣ |
| (2) | ಲಂಗೋಟಿ, ಕೌಪೀನ |
| (3) | ಕೌಪೀನ, ತೋರಣ |
| (4) | ಕಲ್ಯಾಣ, ಲಂಗೋಟಿ |
ಸರಿ ಉತ್ತರ
(2) ಲಂಗೋಟಿ, ಕೌಪೀನ
|
4. | ದೂರ್ವೆ ಇದರ ಸಮಾನಾರ್ಥಕ ಪದ |
|
| (1) | ಹರಟೆ |
| (2) | ಭಯ |
| (3) | ಹಸು |
| (4) | ಗರಿಕೆ |
ಸರಿ ಉತ್ತರ
(4) ಗರಿಕೆ
|
5. | ದ್ವಿರದ ಎಂದರೆ |
|
| (1) | ಆನೆ |
| (2) | ಕರಡಿ |
| (3) | ನರಿ |
| (4) | ಜಿಂಕೆ |
ಸರಿ ಉತ್ತರ
(1) ಆನೆ
|
6. | ಪಂಜ ಎಂದರೆ |
|
| (1) | ಪಂಜು |
| (2) | ಪಂಚೆ |
| (3) | ಹುಲಿಯ ಅಂಗಾಲು |
| (4) | ಪಂದ್ಯ |
ಸರಿ ಉತ್ತರ
(3) ಹುಲಿಯ ಅಂಗಾಲು
|
7. | ಪಲ್ವಲ ಎಂದರೆ |
|
| (1) | ಪಲ್ಲವ |
| (2) | ಪಲ್ಲಟ |
| (3) | ಕೊಳ |
| (4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(3) ಕೊಳ
|
8. | ಗೋಸಾಯಿ ಇದರ ಸಮಾನಾರ್ಥಕ ಪದ |
|
| (1) | ಗೋಶಾಲೆ |
| (2) | ಸನ್ಯಾಸಿ |
| (3) | ಗೋರಕ್ಷಕ |
| (4) | ಸೇವಕಿ |
ಸರಿ ಉತ್ತರ
(2) ಸನ್ಯಾಸಿ
|
9. | ಪಾಷಾಣ ಎಂಬುದರ ಸಮಾನಾರ್ಥ |
|
| (1) | ಹಗ್ಗ |
| (2) | ಪಾಯಸ |
| (3) | ಹರಿಶಿಣ |
| (4) | ಕಲ್ಲು |
ಸರಿ ಉತ್ತರ
(4) ಕಲ್ಲು
ಸೂಚನೆಗಳು : ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 10 – 17) ವಿರುದ್ಧಾರ್ಥಕ ಪದಗಳನ್ನು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಿಂದ ಗುರ್ತಿಸಿ.
|
| ಉದಾಹರಣೆ : |
| ತೆಂಕಣ |
|
| (1) | ಮೂಡಣ |
| (2) | ಬಡಗಣ |
| (3) | ಪಡುವಣ |
| (4) | ತೆಗಣ |
| ಇಲ್ಲಿ ‘‘ತೆಂಕಣ’’ ಪದಕ್ಕೆ ವಿರುದ್ಧಾರ್ಥಕ ರೂಪ ‘‘ಬಡಗಣ’’ ಎಂಬುದು (2) ನ್ನು ಗುರುತಿಸಬಹುದು. |
|
10. | ಸುವಿಖ್ಯಾತಿ |
|
| (1) | ಸುಪ್ರಸಿದ್ದ |
| (2) | ಕುವಿಖ್ಯಾತಿ |
| (3) | ಅಪ್ರಸಿದ್ಧ |
| (4) | ಪ್ರಸಿದ್ಧ |
ಸರಿ ಉತ್ತರ
(2) ಕುವಿಖ್ಯಾತಿ
|
11. | ಆಸ್ತಿಕ |
|
| (1) | ನಾಸ್ತಿಕ |
| (2) | ನಾಸಿಕ |
| (3) | ಧಾರ್ಮಿಕ |
| (4) | ಸಿರಿವಂತ |
ಸರಿ ಉತ್ತರ
(1) ನಾಸ್ತಿಕ
|
12. | ಜಾತ |
|
| (1) | ವಿಜಾತ |
| (2) | ಹುಟ್ಟು |
| (3) | ಅಜಾತ |
| (4) | ಸಾವು |
ಸರಿ ಉತ್ತರ
(3) ಅಜಾತ
|
13. | ಮತ್ಸರ |
|
| (1) | ಹೊಟ್ಟೆಕಿಚ್ಚು |
| (2) | ಅಮತ್ಸರ |
| (3) | ದುರ್ಮತ್ಸರ |
| (4) | ನಿರ್ಮತ್ಸರ |
ಸರಿ ಉತ್ತರ
(4) ನಿರ್ಮತ್ಸರ
|
14. | ಸಂಧ್ಯಾಕಾಲ |
|
| (1) | ಮಧ್ಯಾಹ್ನ |
| (2) | ಪ್ರಾತಃಕಾಲ |
| (3) | ರಾತ್ರಿಕಾಲ |
| (4) | ಒಳ್ಳೆಯ ಕಾಲ |
ಸರಿ ಉತ್ತರ
(2) ಪ್ರಾತಃಕಾಲ
|
15. | ಕೃತಜ್ಞ |
|
| (1) | ಅಕೃತಜ್ಞ |
| (2) | ಸರ್ವಜ್ಞ |
| (3) | ಕೃತಘ್ನ |
| (4) | ಉಪಕಾರಿ |
ಸರಿ ಉತ್ತರ
(3) ಕೃತಘ್ನ
|
16. | ದುರ್ಬಲ |
|
| (1) | ಸಬಲ |
| (2) | ಅಬಲ |
| (3) | ಬಲ |
| (4) | ನಿರ್ಬಲ |
ಸರಿ ಉತ್ತರ
(1) ಸಬಲ
|
17. | ಮಾನವ |
|
| (1) | ನರ |
| (2) | ಅಮಾನವ |
| (3) | ಕ್ರೂರಿ |
| (4) | ದಾನವ |
ಸರಿ ಉತ್ತರ
(4) ದಾನವ
ಸೂಚನೆಗಳು : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 18 – 22) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.
|
| ಉದಾಹರಣೆ : |
| ‘‘ಬೆಣ್ಣೆ ಹಚ್ಚು’’ |
|
| (1) | ರೊಟ್ಟಿಗೆ ಬೆಣ್ಣೆ ಹಚ್ಚು |
| (2) | ಮೈಯುಜ್ಜುವುದು |
| (3) | ಹೊಗಳುವುದು |
| (4) | ಸೇವೆ ಮಾಡುವುದು |
| ಇಲ್ಲಿ ‘‘ಹೊಗಳುವುದು’’. ಸರಿಯಾದ ಅರ್ಥ ಆದುದರಿಂದ (3) ನ್ನು ಗುರುತಿಸಬೇಕು. |
|
18. | ‘ಗಾಳಿಗೆ ತೂರು’ |
|
| (1) | ರಾಶಿ ಮಾಡು |
| (2) | ಕೈ ಬಿಡು |
| (3) | ತಿರಸ್ಕರಿಸು |
| (4) | ಹೊರಹಾಕು |
ಸರಿ ಉತ್ತರ
(3) ತಿರಸ್ಕರಿಸು
|
19. | ‘ಕೆಂಡಕಾರು’ |
|
| (1) | ಮೋಸ ಮಾಡು |
| (2) | ಹೊಟ್ಟೆಕಿಚ್ಚು ಪಡು |
| (3) | ಬೆಂಕಿಗೆ ಹಾಕು |
| (4) | ಸಿಟ್ಟಾಗು |
ಸರಿ ಉತ್ತರ
(4) ಸಿಟ್ಟಾಗು
|
20. | ಮೂಗು ದಾರ ತೊಡಿಸು |
|
| (1) | ವಿರೂಪಗೊಳಿಸು |
| (2) | ಮುದ್ದುಮಾಡು |
| (3) | ಹತೋಟಿಯಲ್ಲಿ ಇಡು |
| (4) | ಮತ್ತೊಬ್ಬರ ರಕ್ಷಣೆಯಲ್ಲಿರು |
ಸರಿ ಉತ್ತರ
(3) ಹತೋಟಿಯಲ್ಲಿ ಇಡು
|
21. | ‘‘ಏತಿ ಎಂದರೆ ಪ್ರೇತಿಯನ್ನು’’ ನುಡಿಗಟ್ಟಿನ ಅರ್ಥ |
|
| (1) | ಹೇಳಿದ್ದಕ್ಕೆ ವಿರುದ್ಧವಾಗಿ ಹೇಳು |
| (2) | ಕೈಬಿಡು |
| (3) | ನೆಪ ಮಾತ್ರಕ್ಕೆ ಊಟ ಮಾಡು |
| (4) | ಪ್ರಸಿದ್ದವಾಗಿರುವ |
ಸರಿ ಉತ್ತರ
(1) ಹೇಳಿದ್ದಕ್ಕೆ ವಿರುದ್ಧವಾಗಿ ಹೇಳು
|
22. | ಸೆರಗಿನಲ್ಲಿ ಗಂಟು ಹಾಕಿಕೊಳ್ಳು – ನುಡಿಗಟ್ಟಿನ ಅರ್ಥ |
|
| (1) | ಜ್ಞಾಪಕದಲ್ಲಿಟ್ಟುಕೊಳ್ಳುವ |
| (2) | ಪ್ರೀತಿಯಿಂದ ಇರು |
| (3) | ಯಜಮಾನಿಕೆ ನಡೆಸು |
| (4) | ಸ್ವಾವಲಂಬಿಯಾಗುವಂತೆ |
ಸರಿ ಉತ್ತರ
(1) ಜ್ಞಾಪಕದಲ್ಲಿಟ್ಟುಕೊಳ್ಳುವ
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 23 – 27) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಇಂಗ್ಲೀಷ್ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ.
|
| ಉದಾಹರಣೆ: |
| ಹೆದ್ದಾರಿಯಲ್ಲಿ ಕಾರೊಂದು ಆಕ್ಸಿಡೆಂಟ್ ಗೊಳಗಾಯಿತು. |
|
| (1) | ಪ್ರಮಾದ |
| (2) | ಅಪಘಾತ |
| (3) | ವಿಪತ್ತು |
| (4) | ಅಕಸ್ಮಾತ್ |
| ಇಲ್ಲಿ ‘‘ಅಪಘಾತ’’ ಎಂಬುದು ಸೂಕ್ತ ರೂಪವಾದುದರಿಂದ (2) ನ್ನು ಗುರುತಿಸಬೇಕು. |
|
23. | ಇತ್ತಿತ್ತಲಾಗಿ ಸೋಷಿಯಲ್ ಮೀಡಿಯಾಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲಿವೆ. |
|
| (1) | ಸಾಮಾಜಿಕ ಮಾಧ್ಯಮಗಳು |
| (2) | ಸಮಾಜ ಸೇವಾ ಸಂಸ್ಥೆಗಳು |
| (3) | ಸಾಮಾಜಿಕ ಪತ್ರಿಕೆಗಳು |
| (4) | ಸಾಮಾಜಿಕ ಸಂಘಟನೆಗಳು |
ಸರಿ ಉತ್ತರ
(1) ಸಾಮಾಜಿಕ ಮಾಧ್ಯಮಗಳು
|
24. | ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಗೆ ಆಗಮಿಸಿದ ಅತಿಥಿಗಳು ತುಂಬ ‘ಅಥೆಂಟಿಕ್’ ಆಗಿ ಮಾತನಾಡಿದರು. |
|
| (1) | ಅಧಿಕೃತವಾಗಿ |
| (2) | ಸರಳವಾಗಿ |
| (3) | ಸುಲಲಿತವಾಗಿ |
| (4) | ಚೆನ್ನಾಗಿ |
ಸರಿ ಉತ್ತರ
(1) ಅಧಿಕೃತವಾ
|
25. | ಮುಖ್ಯಮಂತ್ರಿಗಳು ಬರಗಾಲ ಕಾಮಗಾರಿಯನ್ನು ಕುರಿತು ಸೆಕ್ರೆಟರಿಯೆಟ್ ಸ್ಟಾಫ್ ನ್ನು ಉದ್ದೇಶಿಸಿ ಮಾತನಾಡಿದರು. |
|
| (1) | ರಹಸ್ಯ ಕಾರ್ಯದರ್ಶಿ ಸಿಬ್ಬಂದಿ |
| (2) | ಸಚಿವಾಲಯದ ಸಿಬ್ಬಂದಿ |
| (3) | ಆಪ್ತ ಸಿಬ್ಬಂದಿ |
| (4) | ಕಾರ್ಯಕ್ರಮ ಕಾರ್ಯದರ್ಶಿ ಸಿಬ್ಬಂದಿ |
ಸರಿ ಉತ್ತರ
(2) ಸಚಿವಾಲಯದ ಸಿಬ್ಬಂದಿ
|
26. | ಹೊಸದಾದ ಕನ್ನಡ ಚಿತ್ರದ ರಿವ್ಯೂ ನೋಡಿದೆ ಚೆನ್ನಾಗಿದೆ. |
|
| (1) | ಅನಿಸಿಕೆ |
| (2) | ವಿಮರ್ಶೆ |
| (3) | ಟೀಕೆ |
| (4) | ಹೊರನೋಟ |
ಸರಿ ಉತ್ತರ
(2) ವಿಮರ್ಶೆ
|
27. | ವಿಷಯ ತಜ್ಞರ ಸಮಿತಿ ಸೇರಿ ಟೆಕ್ಸ್ಟ್ ಬುಕ್ ಸಿದ್ದಪಡಿಸಿದೆ. |
|
| (1) | ಪರೀಕ್ಷಾ ಪುಸ್ತಕ |
| (2) | ಪಠ್ಯ ಪುಸ್ತಕ |
| (3) | ಪರಿಚಯ ಪುಸ್ತಕ |
| (4) | ಪಠ್ಯ ಕ್ರಮ |
ಸರಿ ಉತ್ತರ
(2) ಪಠ್ಯ ಪುಸ್ತಕ
ಸೂಚನೆಗಳು: ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28 – 32) ಒಂದು ಪದ ಉಳಿದವುಗಳ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ.
|
| ಉದಾಹರಣೆ : |
|
| (1) | ಹುಡುಗಿ |
| (2) | ನವಿಲು |
| (3) | ಗಿಳಿ |
| (4) | ಕಿತ್ತಳೆ |
| ಇಲ್ಲಿ ‘‘ಕಿತ್ತಳೆ’’ ಇತರ ಪದಗಳ ಜಾತಿಗೆ ಸೇರುವುದಿಲ್ಲ ಆದುದರಿಂದ (4) ನ್ನು ಗುರುತಿಸಬೇಕು. |
|
28. | (1) | ಸೂರ್ಯ |
| (2) | ಶಶಿ |
| (3) | ಇನ |
| (4) | ಭಾಸ್ಕರ |
ಸರಿ ಉತ್ತರ
(2) ಶಶಿ
|
29. | (1) | ಶ್ರೀರಾಮಾಯಣ ದರ್ಶನಂ |
| (2) | ಮೂಕಜ್ಜಿಯ ಕನಸುಗಳು |
| (3) | ಭಾರತ ಸಿಂಧುರಶ್ಮಿ |
| (4) | ಕವಿರಾಜಮಾರ್ಗ |
ಸರಿ ಉತ್ತರ
(4) ಕವಿರಾಜಮಾರ್ಗ
|
30. | (1) | ಗೊಟ್ಟಿ |
| (2) | ಸನ್ನೆ |
| (3) | ಬೇಸಿಗೆ |
| (4) | ಕುಠಾರ |
ಸರಿ ಉತ್ತರ
(4) ಕುಠಾರ
|
31. | (1) | ನಾನು |
| (2) | ನೀನು |
| (3) | ಅವನು |
| (4) | ಯಾರು |
ಸರಿ ಉತ್ತರ
(4) ಯಾರು
|
32. | (1) | ಕಿಲಕಿಲ |
| (2) | ಜುಳುಜುಳು |
| (3) | ಅಬ್ಬಬ್ಬಾ |
| (4) | ರಪರಪ |
ಸರಿ ಉತ್ತರ
(3) ಅಬ್ಬಬ್ಬಾ
ಸೂಚನೆಗಳು: ಕೆಳಗಿನ ವಾಕ್ಯಗಳಲ್ಲಿ ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ. ತಪಿಲ್ಲದಿದ್ದರೆ ‘‘ಸುಧಾರಣೆ ಬೇಕಿಲ್ಲ’’ ಎಂಬ (4) ನ್ನು ಗುರುತಿಸಿ (ಪ್ರಶ್ನೆ ಸಂಖ್ಯೆ 33 – 38).
|
| ಉದಾಹರಣೆ : |
| ಲೋಕಾಯುಕ್ತ ಲಂಚ ಹಗುರಣಕ್ಕೆ ಸಂಬಂಧಿಸಿ ಎಂಟು ಜನರ ಬಂಧನ |
|
| (1) | ಹಾಗರಣ |
| (2) | ಹಗರಣ |
| (3) | ಹಗರನ |
| (4) | ತಪ್ಪಿಲ್ಲ |
| ಇಲ್ಲಿ ಗೆರೆ ಎಳೆದ ‘‘ಹಗುರಣ’’ ತಪ್ಪಾಗಿದ್ದು ಅದರ ಸರಿಯಾದ ರೂಪವು ‘‘ಹಗರಣ’’ ಎಂದಾಗಿದೆ ಅದರಿಂದ (2) ನ್ನು ಗುರುತಿಸಬೇಕು. |
|
33. | ನವೆಂಬರ್ ಒಂದರಂದು ಕರ್ನಾಟಕ ರಾಜೊಸ್ತವ ಕಾರ್ಯಕ್ರಮ ನಡೆಯುತ್ತದೆ. |
|
| (1) | ರಾಜ್ಯೋತ್ಸವ |
| (2) | ರಾಜೋತ್ಸವ |
| (3) | ರಾಜ್ಯೋಸ್ತವ |
| (4) | ತಪ್ಪಿಲ್ಲ |
ಸರಿ ಉತ್ತರ
(1) ರಾಜ್ಯೋತ್ಸವ
|
34. | ಶ್ರೀಯವರಿಗೆ ಗ್ರೀಕ್ ದುರಂತ ನಾಟಕಗಳ ಛಾಯೆ ಎದ್ದು ಕಂಡಿದೆ. |
|
| (1) | ದುರಂಥ |
| (2) | ದುರಂತಾ |
| (3) | ಧುರಂತ |
| (4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
|
35. | ಬಾದಾಮಿ ಚಾಲುಕ್ಯರ ಏಳಿಗೆಯಿಂದ ಕರ್ನಾಟಕ ಇತಿಹಾಸಕ್ಕೆ ಒಂದು ನಿರ್ದಿಷ್ಟ ಸ್ವರೂಪ ಬಂದಿದೆ. |
|
| (1) | ಏಳೀಗೆ |
| (2) | ಹೇಳಿಗೆ |
| (3) | ಹೆಳಿಗೆ |
| (4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
|
36. | ವಿಧ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸಲು ನಿರ್ಧರಿಸಲಾಗಿದೆ. |
|
| (1) | ವಿದ್ಯಾರ್ಥಿ ಸಂಘ |
| (2) | ವಿದ್ಯರ್ಥಿ ಸಂಘ |
| (3) | ವಿದ್ಯಾರ್ತಿ ಸಂಘ |
| (4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
|
37. | ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಸುವಂತಹ ಆಡಳಿತ ಪ್ರಜಾಪ್ರಭುತ್ವ. |
|
| (1) | ಪ್ರಜೆಪ್ರಭುತ್ವ |
| (2) | ಪ್ರಜಪ್ರಭುತ್ವ |
| (3) | ಪ್ರಜಾಪ್ರಭತ್ವ |
| (4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
|
38. | ಬುದ್ಧನ ಅನುಯಾಯಿಗಳು ಬೌದ್ಧ ಧರ್ಮವನ್ನು ಪ್ರಸಾರ ಮಾಡಿದರು. |
|
| (1) | ಅನುಯಾಹಿಗಳು |
| (2) | ಅನುಹಾಯಿಗಳು |
| (3) | ಅನುವಾಯಿಗಳು |
| (4) | ತಪ್ಪಿಲ್ಲ |
ಸರಿ ಉತ್ತರ
(4) ತಪ್ಪಿಲ್ಲ
ಸೂಚನೆಗಳು: ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರ ಗುರುತಿಸಿ ಅಥವಾ ಪ್ರಶ್ನೆಗೆ ಸರಿಯಾದ ಉತ್ತರ ಆಯ್ಕೆ ಮಾಡಿ. (ಪ್ರಶ್ನೆ ಸಂಖ್ಯೆ 39 – 65)
|
| ಉದಾಹರಣೆ : |
| ನಡೆಯುತ್ತಿದೆ ಎಂಬುದು ………….. ದ ಪದ. |
|
| (1) | ಭೂತಕಾಲ |
| (2) | ವರ್ತಮಾನ ಕಾಲ |
| (3) | ಭವಿಷ್ಯತ್ ಕಾಲ |
| (4) | ಹಿಂದಿನ ಕಾಲ |
| ಇಲ್ಲಿ ‘‘ವರ್ತಮಾನ ಕಾಲ’’ ಎಂಬುದು ಸರಿಯಾದ ಉತ್ತರ ಅದುದರಿಂದ (2) ನ್ನು ಗುರುತಿಸಬೇಕು. |
|
39. | ‘ಜ್’ ಈ ಅಕ್ಷರದ ಉತ್ಪತ್ತಿ ಸ್ಥಾನ ಇದಾಗಿದೆ. |
|
| (1) | ಕಂಠ್ಯ |
| (2) | ತಾಲವ್ಯ |
| (3) | ಮೂರ್ದನ್ಯ |
| (4) | ಅನುನಾಸಿಕ |
ಸರಿ ಉತ್ತರ
(2) ತಾಲವ್ಯ
|
40. | ‘ರಾಷ್ಟ್ರ’ ಈ ಪದದಲ್ಲಿ ಯಾವ ಜಾತಿಯ ಸಂಯುಕ್ತಾಕ್ಷರಗಳಿವೆ? |
|
| (1) | ಪರಜಾತೀಯ |
| (2) | ಸಜಾತೀಯ |
| (3) | ವಿಜಾತೀಯ |
| (4) | ಸ್ವಜಾತೀಯ |
ಸರಿ ಉತ್ತರ
(3) ವಿಜಾತೀಯ
|
41. | ದೇವರು ಒಳ್ಳೆಯದನ್ನು ಮಾಡಲಿ ಎನ್ನುವದು ………….. ವಾಕ್ಯ. |
|
| (1) | ಸಂಭಾವನಾರ್ಥಕ |
| (2) | ಕ್ರಿಯಾರ್ಥಕ |
| (3) | ವಿಧ್ಯರ್ಥಕ |
| (4) | ನಿಷೇಧಾರ್ಥಕ |
ಸರಿ ಉತ್ತರ
(3) ವಿಧ್ಯರ್ಥಕ
|
42. | ‘ಕನ್ನಡಿಗ’ ಎಂಬುದು …………..ದ ಉದಾಹರಣೆ. |
|
| (1) | ಕೃದಂತಾವ್ಯಯ |
| (2) | ತದ್ಧಿತನಾಮ |
| (3) | ಭಾವಕೃದಂತ |
| (4) | ಭೂತಕೃದಂತ |
ಸರಿ ಉತ್ತರ
(2) ತದ್ಧಿತನಾಮ
|
43. | ವಾಚಿಸು ಎಂದರೆ |
|
| (1) | ಮಾತನಾಡು |
| (2) | ಓದು |
| (3) | ಅಧ್ಯಯನ ಮಾಡು |
| (4) | ಪಿಸುಗುಟ್ಟು |
ಸರಿ ಉತ್ತರ
(2) ಓದು
|
44. | ‘ಪಂಡಿತ’ ಎಂಬುದು ಈ ಕೆಳಗಿನ ಯಾವ ನಾಮಪದಕ್ಕೆ ಉದಾಹರಣೆಯಾಗಿದೆ ? |
|
| (1) | ರೂಢನಾಮ |
| (2) | ಅಂಕಿತನಾಮ |
| (3) | ಸರ್ವನಾಮ |
| (4) | ಅನ್ವರ್ಥಕನಾಮ |
ಸರಿ ಉತ್ತರ
(4) ಅನ್ವರ್ಥಕನಾಮ
|
45. | ಹಣದಾಸೆಗೆ ಎಂಬುದು ಯಾವ ಸಂಧಿ ? |
|
| (1) | ಸವರ್ಣದೀರ್ಘ ಸಂಧಿ |
| (2) | ಆದೇಶ ಸಂಧಿ |
| (3) | ಲೋಪ ಸಂಧಿ |
| (4) | ಜಸ್ತ ್ವ ಸಂಧಿ |
ಸರಿ ಉತ್ತರ
(3) ಲೋಪ ಸಂಧಿ
|
46. | ಸಜ್ಜನ ಎಂಬುದು ಯಾವ ಲಿಂಗ ? |
|
| (1) | ನಪುಂಸಕ ಲಿಂಗ |
| (2) | ಪುಲ್ಲಿಂಗ |
| (3) | ನಿತ್ಯ ನಪುಂಸಕ ಲಿಂಗ |
| (4) | ಸಾಮಾನ್ಯ ಲಿಂಗ |
ಸರಿ ಉತ್ತರ
(2) ಪುಲ್ಲಿಂಗ
|
47. | ಕನ್ನಡ ವ್ಯಾಕರಣವನ್ನು ಸಂಸ್ಕೃತದಲ್ಲಿ ಬರೆದ ಪಂಡಿತರು ಯಾರು? |
|
| (1) | ಒಂದನೆಯ ನಾಗವರ್ಮ |
| (2) | ಎರಡನೇ ನಾಗವರ್ಮ |
| (3) | ಕೇಶಿರಾಜ |
| (4) | ಒಂದನೇ ಗುಣವರ್ಮ |
ಸರಿ ಉತ್ತರ
(2) ಎರಡನೇ ನಾಗವರ್ಮ
|
48. | ಪ್ರಶ್ನಾರ್ಥಕ ಮತ್ತು ಆತ್ಮಾರ್ಥಕ ಸರ್ವನಾಮಗಳು ಯಾವುವು ? |
|
| (1) | ತಾನ್, ಯಾ |
| (2) | ಯಾ, ತಾನ್ |
| (3) | ಆನ್ ಏನ್ |
| (4) | ಏನ್ ಆನ್ |
ಸರಿ ಉತ್ತರ
(2) ಯಾ, ತಾನ್
|
49. | ಕನ್ನಡದ ಯಾವ ಶಬ್ದಗಳಲ್ಲಿ ಪ್ರತ್ಯಯಗಳು ಲಿಂಗ ವಿವಕ್ಷೆ ಮಾಡುತ್ತವೆ? |
|
| (1) | ಮಹತ್ |
| (2) | ಆ ಮಹತ್ |
| (3) | ಮೇಲಿನ ಎರಡು |
| (4) | ಯಾವುದು ಅಲ್ಲ |
ಸರಿ ಉತ್ತರ
(3) ಮೇಲಿನ ಎರಡು
|
50. | ಬಾಳುವವನಿಗೆ ಒಂದು ಮಾತು . |
|
| (1) | ಮಡಿಕೆಗೆ ಒಂದು ಹೊಡೆತ |
| (2) | ದೊಣ್ಣೆಗೆ ಒಂದು ನಿಮಿಷ |
| (3) | ಬಾಳೆ ಗಿಡಕ್ಕೆ ಒಂದು ಗೊನೆ |
| (4) | ಯಾವುದು ಅಲ್ಲ |
ಸರಿ ಉತ್ತರ
(3) ಬಾಳೆ ಗಿಡಕ್ಕೆ ಒಂದು ಗೊನೆ
|
51. | ದೇಶ್ಯ ಪದವನ್ನು ಗುರುತಿಸಿ |
|
| (1) | ನಕಲಿ |
| (2) | ಕಾಗದ |
| (3) | ಮಹತ್ |
| (4) | ನೇಸರ |
ಸರಿ ಉತ್ತರ
(4) ನೇಸರ
|
52. | ಕೂಸು ಮಲಗಿತು ಎಂಬುದು ………….. |
|
| (1) | ಅಕರ್ಮಕ ಕ್ರಿಯಾಪದ |
| (2) | ಸಕರ್ಮಕ ಕ್ರಿಯಾಪದ |
| (3) | ಕಾಲಸೂಚಕ ಪ್ರತ್ಯಯ |
| (4) | ಅಖ್ಯಾತ ಪ್ರತ್ಯಯ |
ಸರಿ ಉತ್ತರ
(1) ಅಕರ್ಮಕ ಕ್ರಿಯಾಪದ
|
53. | ತಾರನು ಎನ್ನುವುದು ………….. |
|
| (1) | ವರ್ತಮಾನ ಕಾಲದ ಕ್ರಿಯಾಪದ |
| (2) | ಸಂಭಾವಾರ್ಥಕ ಕ್ರಿಯಾಪದ |
| (3) | ನಿಷೇಧಾರ್ಥಕ ಕ್ರಿಯಾಪದ |
| (4) | ಭವಿಷತ್ ಕಾಲದ ಕ್ರಿಯಾಪದ |
ಸರಿ ಉತ್ತರ
(3) ನಿಷೇಧಾರ್ಥಕ ಕ್ರಿಯಾಪದ
|
54. | ಕರ್ಮಿಣಿ ಪ್ರಯೋಗದಲ್ಲಿ ಕರ್ತೃ ಪದವು ಪಡೆದುಕೊಳ್ಳುವ ವಿಭಕ್ತಿ ಪ್ರತ್ಯಯ |
|
| (1) | ಪ್ರಥಮಾ |
| (2) | ದ್ವಿತೀಯಾ |
| (3) | ತೃತೀಯಾ |
| (4) | ಸಪ್ತಮೀ |
ಸರಿ ಉತ್ತರ
(3) ತೃತೀಯಾ
|
55. | ಕೊಳಕು ಪದದ ವಿರುದ್ಧ ರೂಪ |
|
| (1) | ಸ್ವಚ್ಛ |
| (2) | ಕ್ಲೀನು |
| (3) | ಮಡಿ |
| (4) | ಶುದ್ಧ |
ಸರಿ ಉತ್ತರ
(1) ಸ್ವಚ್ಛ
|
56. | ನೀಲಗಾರರು ಈ ಪರಂಪರೆಗೆ ಸೇರಿದವರು |
|
| (1) | ಜಾನಪದ |
| (2) | ಶರಣ ಪರಂಪರೆ |
| (3) | ಮಂಟೇಸ್ವಾಮಿ |
| (4) | ಯಕ್ಷಗಾನ |
ಸರಿ ಉತ್ತರ
(3) ಮಂಟೇಸ್ವಾಮಿ
|
57. | ಕೆರೆಗೆ ಹಾರ – ಇದು |
|
| (1) | ಜನಪದ ಕಥನಗೀತೆ |
| (2) | ಜನಪದ ಗೀತೆ |
| (3) | ಜನಪದ ಮಹಾಕಾವ್ಯ |
| (4) | ಜನಪದ |
ಸರಿ ಉತ್ತರ
(1) ಜನಪದ ಕಥನಗೀತೆ
|
58. | ಪಡೆದೀಯೈದು ಪದವನ್ನು ಬಿಡಿಸಿದಾಗ |
|
| (1) | ಪಡೆದು + ಈಯೈದು |
| (2) | ಪಡೆದೀ + ಐದು |
| (3) | ಪಡೆದು + ಈ + ಐದು |
| (4) | ಪಡೆದು + ಇ + ಐದು |
ಸರಿ ಉತ್ತರ
(3) ಪಡೆದು + ಈ + ಐದು
|
59. | ‘ಭಾಷಾ ವಿಜ್ಞಾನದ ಮೂಲ ತತ್ವಗಳು’ ಕೃತಿಯನ್ನು ರಚಿಸಿದವರು ………….. |
|
| (1) | ಕುಶಾಲಪ್ಪಗೌಡ |
| (2) | ರಾಜೇಶ್ವರಿ. ಎಂ. |
| (3) | ಡಾ. ಸೌದತ್ತಿ ಮಠ |
| (4) | ಚಿದಾನಂದ ಮೂರ್ತಿ |
ಸರಿ ಉತ್ತರ
(4) ಚಿದಾನಂದ ಮೂರ್ತಿ
|
60. | ‘ಹೊಸಅಂಗಿ’ – ಈ ಸಂಧಿಯ ಉದಾಹರಣೆ |
|
| (1) | ಆಗಮ |
| (2) | ಲೋಪ |
| (3) | ಪ್ರಕೃತಿಭಾವ |
| (4) | ಆದೇಶ |
ಸರಿ ಉತ್ತರ
(3) ಪ್ರಕೃತಿಭಾವ
|
61. | ‘ಬಸವ’ – ಈ ಪದದ ತತ್ಸಮ |
|
| (1) | ಋಷಭ |
| (2) | ೠಷಭಾ |
| (3) | ವಸವ |
| (4) | ವೃಷಭ |
ಸರಿ ಉತ್ತರ
(4) ವೃಷಭ
|
62. | ಅರಿಸಮಾಸ ಪದ |
|
| (1) | ರಣಶೂರ |
| (2) | ಮಂಗಳಾರತಿ |
| (3) | ಹೊಸಗನ್ನಡ |
| (4) | ಮೂಲೋಕ |
ಸರಿ ಉತ್ತರ
(2) ಮಂಗಳಾರತಿ
|
63. | ………….. ಎಂಬುದು ಭಾವಸೂಚಕಾವ್ಯಯ. |
|
| (1) | ಭಲಿ |
| (2) | ಬಾಲ |
| (3) | ಭಾಳು |
| (4) | ಭಲಾ |
ಸರಿ ಉತ್ತರ
(4) ಭಲಾ
|
64. | ಸುಲಿದ ಬಾಳೆ ಹಣ್ಣಿನಂದದಿ ಕನ್ನಡ ನುಡಿ ಎಂಬುದು ………….. |
|
| (1) | ಉಪಮಾ ಅಲಂಕಾರ |
| (2) | ರೂಪಕ ಅಲಂಕಾರ |
| (3) | ದೀಪಕ ಅಲಂಕಾರ |
| (4) | ಉತ್ಪ್ರೇಕ್ಷಾಲಂಕಾರ |
ಸರಿ ಉತ್ತರ
(1) ಉಪಮಾ ಅಲಂಕಾರ
|
65. | ಸ್ವತಂತ್ರವಾಗಿ ಉಚ್ಚಾರವಾಗದ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ |
|
| (1) | ಯೋಗವಾಹ |
| (2) | ಪ್ಲುುತ |
| (3) | ಸ್ವರ |
| (4) | ವ್ಯಂಜನ |
ಸರಿ ಉತ್ತರ
(4) ವ್ಯಂಜನ
ಸೂಚನೆಗಳು : ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66 – 69) ಕನ್ನಡ ಮೂಲದ್ದು ಅಲ್ಲದ (ಅನ್ಯಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.
|
| ಉದಾಹರಣೆ : |
|
| (1) | ದಾರಿ |
| (2) | ಹಾದಿ |
| (3) | ರಸ್ತೆ |
| (4) | ಕಾಡು |
| ಈ ನಾಲ್ಕು ಪದಗಳಲ್ಲಿ ‘‘ರಸ್ತೆ’’ ಮಾತ್ರ ಅನ್ಯಭಾಷೆಯಿಂದ ಸ್ವೀಕೃತವಾದ ಪದವಾಗಿದೆ. ಆದುದರಿಂದ ಇಲ್ಲಿ (3) ನ್ನು ಗುರುತಿಸಬೇಕು. |
|
66. | (1) | ದಿವಾನ |
| (2) | ಅರಸು |
| (3) | ಆಳು |
| (4) | ಅಂಬಿಗ |
ಸರಿ ಉತ್ತರ
(1) ದಿವಾನ
|
67. | (1) | ಜೀವನ |
| (2) | ಹಾಲು |
| (3) | ಗದ್ದೆ |
| (4) | ಗುಲಾಮ |
ಸರಿ ಉತ್ತರ
(4) ಗುಲಾಮ
|
68. | (1) | ಇನಾಮು |
| (2) | ಬಹುಮಾನ |
| (3) | ಉಡುಗೆ |
| (4) | ಗಮನ |
ಸರಿ ಉತ್ತರ
(1) ಇನಾಮು
|
69. | (1) | ಮನೆ |
| (2) | ಜವಾನ |
| (3) | ಮೋಡ |
| (4) | ಸಾಹಸ |
ಸರಿ ಉತ್ತರ
(2) ಜವಾನ
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 70 – 72) ದೋಷವಿದ್ದರೆ ಅದನ್ನು ಸರಿಪಡಿಸಲು ಮುಂದೆ ಕೊಟ್ಟಿರುವ ಪರ್ಯಾಯ ರೂಪಗಳಲ್ಲಿ ಸೂಕ್ತವಾದುದನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ಸುಧಾರಣೆ ಬೇಕಿಲ್ಲ ಆಗ (4) ನ್ನು ಗುರುತಿಸಿ.
|
| ಉದಾಹರಣೆ : |
| ಮಕ್ಕಳು ಸಂಗೀತವನ್ನು ಸುಶ್ರಾವ್ಯವಾಗಿ ಆಡಿದರು. |
|
| (1) | ಹಾಡಿದರು |
| (2) | ಆಲಿಸಿದರು |
| (3) | ಮಾಡಿಸಿದರು |
| (4) | ಸುಧಾರಣೆ ಬೇಕಿಲ್ಲ |
| ಇಲ್ಲಿ ‘‘ಆಡಿದರು’’ ಎಂಬುದು ದೋಷವಾಗಿದ್ದು ‘‘ಹಾಡಿದರು’’ ಎಂದಿರಬೇಕು ಆದುದರಿಂದ (1) ನ್ನು ಗುರುತಿಸಬೇಕು. |
|
70. | ರಸ್ತೆಯ ದುರಸ್ತಿ ಕಾರ್ಯದಿಂದ ಸಂಚಾರಕ್ಕೆ ಅನಾನುಕೂಲವಾಗಿದೆ. |
|
| (1) | ಅನನುಕೂಲ |
| (2) | ಅನಾನೂಕುಲ |
| (3) | ಅನಾನೂಕೂಲ |
| (4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(1) ಅನನುಕೂಲ
|
71. | ಗಂಧೋದಕದ ಸ್ನಾನ ಮಾಡುವುದು ಒಳ್ಳೆಯದು |
|
| (1) | ಗಂದೊಧಕ |
| (2) | ಘಂದೊದಕ |
| (3) | ಘಂಧೋದಕ |
| (4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(4) ಸುಧಾರಣೆ ಬೇಕಿಲ್ಲ
|
72. | ಚುನಾವಣೆಯ ಸಭೆಯಲ್ಲಿ ಬಹಳ ಜನ ಸೇರಿದ್ದರು. |
|
| (1) | ಚುಣಾವಣೆ |
| (2) | ಛುನಾವಣೆ |
| (3) | ಚುಣಾವನೆ |
| (4) | ಸುಧಾರಣೆ ಬೇಕಿಲ್ಲ |
ಸರಿ ಉತ್ತರ
(4) ಸುಧಾರಣೆ ಬೇಕಿಲ್ಲ
ಸೂಚನೆಗಳು: ಕೆಳಗಿನವುಗಳಲ್ಲಿ (ಪ್ರಶ್ನೆ ಸಂಖ್ಯೆ 73 – 77) ಗೆರೆಹಾಕಿದ ಭಾಗಗಳು ತಪ್ಪಾಗಿವೆ. ಅವುಗಳ ಮುಂದೆ ಕೊಟ್ಟ ನಾಲ್ಕು ಪರ್ಯಾಯ ರೂಪಗಳಿಂದ ಸರಿಯಾದ ಉತ್ತರವನ್ನು ಗುರುತಿಸಿ.
|
| ಉದಾಹರಣೆ : |
| ಕುವೆಂಪು ಚೋಮನದುಡಿ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. |
|
| (1) | ಬೆಟ್ಟದ ಜೀವ |
| (2) | ಕಾನೂರ ಹೆಗ್ಗಡತಿ |
| (3) | ಚಿಕ್ಕವೀರ ರಾಜೇಂದ್ರ |
| (4) | ದುರ್ಗಾಸ್ತಮಾನ |
| ಇಲ್ಲಿ ‘‘ಕಾನೂರ ಹೆಗ್ಗಡತಿ’’ ಸರಿಯಾದ ಉತ್ತರ ಆದುದರಿಂದ (2) ನ್ನು ಗುರುತಿಸಬೇಕು. |
|
73. | ಕನಕದಾಸರ ಪೂರ್ವಾಶ್ರಮದ ಹೆಸರು ಶ್ರೀನಿವಾಸ ನಾಯಕ |
|
| (1) | ಶ್ರೀಪಾದರು |
| (2) | ಪುರಂದರ ದಾಸ |
| (3) | ಗೋಪಾಲದಾಸ |
| (4) | ವಿಜಯದಾಸ |
ಸರಿ ಉತ್ತರ
(2) ಪುರಂದರ ದಾಸ
|
74. | ಜೈಮಿನಿ ಭಾರತವು ಭಾಮಿನಿ ಷಟ್ಪದಿಯಲ್ಲಿದೆ. |
|
| (1) | ವಾರ್ಧಕ ಷಟ್ಪದಿ |
| (2) | ಕುಸುಮ ಷಟ್ಪದಿ |
| (3) | ಪರಿರ್ವಧಿನಿ ಷಟ್ಪದಿ |
| (4) | ಶರ ಷಟ್ಪದಿ |
ಸರಿ ಉತ್ತರ
(1) ವಾರ್ಧಕ ಷಟ್ಪದಿ
|
75. | ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ನಾಡು ಕನ್ನಡ ನಾಡು ಎಂಬುದಾಗಿ ಹರಿಶ್ಚಂದ್ರ ಕಾವ್ಯದಲ್ಲಿ ಹೇಳಲಾಗಿದೆ. |
|
| (1) | ವಿಕ್ರಮಾರ್ಜುನ ವಿಜಯ |
| (2) | ಸಾರ್ವ ಭೀಮ ವಿಜಯ |
| (3) | ಕವಿರಾಜ ಮಾರ್ಗ |
| (4) | ವಡ್ಡಾರಾಧನೆ |
ಸರಿ ಉತ್ತರ
(3) ಕವಿರಾಜ ಮಾರ್ಗ
|
76. | ನಂಜುಂಡಕವಿ ಮಿತ್ರಾವಿಂದಗೋವಿಂದ ನಾಟಕ ಬರೆದಿದ್ದಾನೆ. |
|
| (1) | ತಿರುಮಲಾರ್ಯ |
| (2) | ಸಿಂಗರಾರ್ಯ |
| (3) | ಸಿಂಗಿರಾಜ |
| (4) | ಚಾಮರಸ |
ಸರಿ ಉತ್ತರ
(2) ಸಿಂಗರಾರ್ಯ
|
77. | ನಯಸೇನನು ‘ಕರ್ಣಟಕ ಕಾದಂಬರಿ’ ಕೃತಿಯನ್ನು ಬರೆದನು |
|
| (1) | ಒಂದನೇ ನಾಗವರ್ಮ |
| (2) | ನಾಗವರ್ಮಾಚಾರ್ಯ |
| (3) | ಎರಡನೇ ನಾಗವರ್ಮ |
| (4) | ನಾಗಚಂದ್ರ |
ಸರಿ ಉತ್ತರ
(1) ಒಂದನೇ ನಾಗವರ್ಮ
ಸೂಚನೆಗಳು: ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 78 – 82) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆಹಾಕಿ ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿ.
|
| ಉದಾಹರಣೆ : |
77. | ವಿದ್ಯಾರ್ಥಿಗಳು |
| P |
| ಜಾಸ್ತಿಯಾಗಿದೆ |
| Q |
| ಆಕರ್ಷಿತರಾಗುತ್ತಿರುವುದು |
| R |
| ದುರಭ್ಯಾಸಗಳ ಕಡೆಗೆ |
| S |
|
| (1) | P S R Q |
| (2) | Q R S P |
| (3) | S Q R P |
| (4) | Q S R P |
|
| ಇಲ್ಲಿ P S R Q ಎಂಬುದು ಸರಿಯಾದ ಜೋಡಣೆಯ ಕ್ರಮ. ಅದುದರಿಂದ ಇಲ್ಲಿ (1) ನ್ನು ಗುರುತಿಸಬೇಕು. |
|
78. | ಕರುಳಿಲ್ಲ |
| P |
| ತಲೆಯಾತಂಗೆ |
| Q |
| ತಲೆಯಿಲ್ಲ |
| R |
| ಒಡಲು ನೋಡಾ |
| S |
|
| (1) | P Q R S |
| (2) | S Q R P |
| (3) | R Q P S |
| (4) | R P Q S |
ಸರಿ ಉತ್ತರ
(3) R Q P S
|
79. | ಪ್ರಶ್ನೆ |
| P |
| ವಿಜ್ಞಾನದ |
| Q |
| ಕೇಳುವುದು |
| R |
| ಅಡಿಪಾಯವೇ |
| S |
|
| (1) | Q R S P |
| (2) | Q S P R |
| (3) | R S P Q |
| (4) | P R Q S |
ಸರಿ ಉತ್ತರ
(2) Q S P R
|
80. | ಮರಸೊಬಗು |
| P |
| ಹೊಸಚಿಗುರು |
| Q |
| ಹಳೆಬೇರು |
| R |
| ಕೂಡಿರಲು |
| S |
|
| (1) | R Q S P |
| (2) | Q R P S |
| (3) | S P Q R |
| (4) | S P R Q |
ಸರಿ ಉತ್ತರ
(1) R Q S P
|
81. | ದೈಯಿಕ ವ್ಯಾಯಾಮ ಮಾಡುವುದು |
| P |
| ಶರೀರಕ್ಕೆ |
| Q |
| ಪ್ರತಿದಿನವೂ |
| R |
| ತುಂಬಾ ಒಳ್ಳೆಯದು |
| S |
|
| (1) | Q R S P |
| (2) | R P Q S |
| (3) | P R Q S |
| (4) | Q R P S |
ಸರಿ ಉತ್ತರ
(2) R P Q S
|
82. | ವರ್ಗಕ್ಕೆ |
| P |
| ದ್ರಾವಿಡ ಭಾಷಾ |
| Q |
| ಸೇರಿದೆ |
| R |
| ಕನ್ನಡ ಭಾಷೆಯು |
| S |
|
| (1) | R S P Q |
| (2) | P R S Q |
| (3) | S R Q P |
| (4) | S Q P R |
ಸರಿ ಉತ್ತರ
(4) S Q P R
|
83. | ಎಸ್.ಎಲ್. ಭೈರಪ್ಪರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ |
|
| (1) | ಮಂದ್ರ |
| (2) | ದಾಟು |
| (3) | ಪರ್ವ |
| (4) | ವಂಶವೃಕ್ಷ |
ಸರಿ ಉತ್ತರ
(2) ದಾಟು
|
84. | ‘ಇಗೋ ಕನ್ನಡ’ ಎಂಬ ಹೆಸರಿನ ಅಂಕಣ ಬರೆಯುತ್ತಿದ್ದವರು |
|
| (1) | ಪಾ.ವೆಂ. ಆಚಾರ್ಯ |
| (2) | ಅಮೃತ ಸೋಮೇಶ್ವರ |
| (3) | ಕೆ.ವಿ. ನಾರಾಯಣ |
| (4) | ಜಿ. ವೆಂಕಟಸುಬ್ಬಯ್ಯ |
ಸರಿ ಉತ್ತರ
(4) ಜಿ. ವೆಂಕಟಸುಬ್ಬಯ್ಯ
|
85. | ಪಟ್ಟಿ I ಮತ್ತು ಪಟ್ಟಿ II ನ್ನು ಹೋಲಿಸಿ ಕೆಳಗೆ ನೀಡಿರುವ ಉತ್ತರಗಳ ಗುಂಪಿನಲ್ಲಿ ಸರಿಹೊಂದುವುದನ್ನು ಗುರುತಿಸಿ : |
| | ಪಟ್ಟಿ I | | ಪಟ್ಟಿ II |
| A. | ಹರಿಶ್ಚಂದ್ರ ಕಾವ್ಯ | I. | ಸಾಂಗತ್ಯ |
| B. | ಆದಿ ಪುರಾಣ | II. | ಷಟ್ಟದಿ |
| C. | ಭರತೇಶ ವೈಭವ | III. | ಕಂದ |
| D. | ಅಜಿತ ತೀರ್ಥಂಕರ ಪುರಾಣ | IV. | ಚಂಪೂ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | I | III | IV | II |
| (2) | II | IV | I | III |
| (3) | II | I | III | IV |
| (4) | III | II | IV | I |
ಸರಿ ಉತ್ತರ
(2) II IV I III
|
86. | ‘ಸಂಜೆಗಣ್ಣಿನ ಹಿನ್ನೋಟ’ ಇದು ಯಾರ ಆತ್ಮಕಥನ ? |
|
| (1) | ಎಂ. ಗೋಪಾಲ ಕೃಷ್ಣ ಅಡಿಗ |
| (2) | ಎಚ್.ಎಲ್. ನಾಗೇಗೌಡ |
| (3) | ರಾವ್ ಬಹಾದ್ದೂರ್ |
| (4) | ಎ.ಎನ್. ಮೂರ್ತಿರಾವ್ |
ಸರಿ ಉತ್ತರ
(4) ಎ.ಎನ್. ಮೂರ್ತಿರಾವ್
ಸೂಚನೆಗಳು : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 87 – 92) (1) (2) (3) ಎಂಬ ಗೆರೆ ಎಳೆದ ಭಾಗಗಳಿವೆ. ಈ ಯಾವುದೇ ಭಾಗದಲ್ಲಿ ವ್ಯಾಕರಣ, ಕಾಗುಣಿತ ಅಥವಾ ಚಿಹ್ನೆಗಳಿಗೆ ಸಂಬಂಧಿಸಿದ ದೋಷವಿದ್ದರೆ ಆ ಭಾಗವನ್ನು ಗುರ್ತಿಸಿ. ದೋಷವಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂಬ ನಾಲ್ಕನೆ (4) ಭಾಗವನ್ನು ಗುರುತಿಸಿ.
|
| ಉದಾಹರಣೆ : |
| ವಿದ್ಯಾರ್ಥಿಗಳು |
| (1) |
| ಶಾಲೆಗೆ |
| (2) |
| ಮುಗಿಸಿಕೊಂಡು ಬಂದರು |
| (3) |
| ತಪ್ಪಿಲ್ಲ |
| (4) |
| ಇಲ್ಲಿ ಭಾಗ (2) ರಲ್ಲಿ ‘‘ಶಾಲೆಯನ್ನು’’ ಎಂದಿರ ಬೇಕಾಗಿತ್ತು. ಈ ಭಾಗದಲ್ಲಿ ದೋಷವಿರುವುದರಿಂದ ಇಲ್ಲಿ (2) ನ್ನು ಗುರುತಿಸಬೇಕು. |
|
87. | ರಾಘವಾಂಕನನ್ನು |
| (1) |
| ಶಟ್ಪದಿಯ ಬ್ರಹ್ಮ |
| (2) |
| ಎಂದು ಕರೆಯಲಾಗಿ |
| (3) |
| ತಪ್ಪಿಲ್ಲ |
| (4) |
ಸರಿ ಉತ್ತರ
(2)
|
88. | ನಾನು |
| (1) |
| ನಮ್ಮ ಗುರುಗಳಿಗೆ |
| (2) |
| ಹಲವು ವಿಚಾರಗಳನ್ನು ಕಲಿತೆನು |
| (3) |
| ತಪ್ಪಿಲ್ಲ |
| (4) |
ಸರಿ ಉತ್ತರ
(2)
|
89. | ಮತಧಾನವು |
| (1) |
| ನಮ್ಮ ಪವಿತ್ರ |
| (2) |
| ಕರ್ತವ್ಯವಾಗಿ. |
| (3) |
| ತಪ್ಪಿಲ್ಲ |
| (4) |
ಸರಿ ಉತ್ತರ
(1)
|
90. | ಬುದ್ಧಿವಂತನಾದ ಅವನು |
| (1) |
| ಪಾಠವನ್ನು |
| (2) |
| ಚೆನ್ನಾಗಿ ಓದಿದರು |
| (3) |
| ತಪ್ಪಿಲ್ಲ |
| (4) |
ಸರಿ ಉತ್ತರ
(3)
|
91. | ನಮ್ಮ ಪರೀಕ್ಷೆ |
| (1) |
| ಮುಗಿಯಿತು. |
| (2) |
| ತಂದೆಗೆ ಮಗನು ತಿಳಿಸಿದನು |
| (3) |
| ತಪ್ಪಿಲ್ಲ |
| (4) |
ಸರಿ ಉತ್ತರ
(2)
|
92. | ದೇವರು |
| (1) |
| ಸಮಸ್ತಲೋಕಗಳನ್ನು |
| (2) |
| ಪ್ರೀತಿಯಿಂದ ಕಾಪಾಡುವನು |
| (3) |
| ತಪ್ಪಿಲ್ಲ |
| (4) |
ಸರಿ ಉತ್ತರ
(4)
|
93. | ಕೆಳಗಿನವರಲ್ಲಿ ಪಂಪ ಪ್ರಶಸ್ತಿ ವಿಜೇತ ಕವಿ |
|
| (1) | ಬಿ.ಎಂ. ಶ್ರೀ |
| (2) | ತಿ.ನಂ. ಶ್ರೀ |
| (3) | ದ.ರಾ. ಬೇಂದ್ರೆ |
| (4) | ಅ.ನ. ಕೃ. |
ಸರಿ ಉತ್ತರ
(2) ತಿ.ನಂ. ಶ್ರೀ
|
94. | ‘‘ನೀರೊಳಗಿರ್ದುಂ ಬೆಮರ್ತನುರಗ ಪತಾಕಂ’’ ಈ ಮಾತುಗಳು ಯಾವ ಕೃತಿಯಲ್ಲಿ ಬಂದಿವೆ? |
|
| (1) | ಗದಾಯುದ್ಧ |
| (2) | ರಾಮಚಂದ್ರ ಚರಿತ ಪುರಾಣ |
| (3) | ಕರ್ಣಾಟ ಭಾರತ ಕಥಾ ಮಂಜರಿ |
| (4) | ಪಂಪ ಭಾರತ |
ಸರಿ ಉತ್ತರ
(1) ಗದಾಯುದ್ಧ
|
95. | ವೈದೇಹಿ ಇದು ಯಾರ ಕಾವ್ಯ ನಾಮ ? |
|
| (1) | ತಿರುಮಲೆ ರಾಜಮ್ಮ |
| (2) | ಜಾನಕಿ ಎಸ್. ಮೂರ್ತಿ |
| (3) | ಬಿ.ಎನ್. ಸುಬ್ಬಮ್ಮ |
| (4) | ವೆಂಕಟಲಕ್ಷ್ಮಿ |
ಸರಿ ಉತ್ತರ
(2) ಜಾನಕಿ ಎಸ್. ಮೂರ್ತಿ
|
96. | ಅಜಗಣ್ಣ ಇದು ಯಾರ ವಚನಗಳ ಅಂಕಿತ ? |
|
| (1) | ಅಕ್ಕಮಹಾದೇವಿ |
| (2) | ಗಂಗಾಂಬಿಕೆ |
| (3) | ನೀಲಾಂಬಿಕೆ |
| (4) | ಮುಕ್ತಾಯಕ್ಕ |
ಸರಿ ಉತ್ತರ
(4) ಮುಕ್ತಾಯಕ್ಕ
ಸೂಚನೆಗಳು : ಈ ಕೆಳಗೆ (ಪ್ರಶ್ನೆ ಸಂಖ್ಯೆ 97- 100) P Q R S ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.
|
| ಉದಾಹರಣೆ : |
| P. | ಪುಲಿಗೆರೆ, ಕಿಸುವೊಳಲ್, ಕೊಪ್ಪಳ ಮತ್ತು ಒಕ್ಕುಂದ ಇವೇ ಆ ನಾಲ್ಕು ನಗರಗಳು. |
| Q. | ಒಂಭತ್ತನೆಯ ಶತಮಾನದಲ್ಲಿ ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು. |
| R. | ಆ ನಾಡಿನಲ್ಲಿನ ನಾಲ್ಕು ನಗರಗಳ ಮಧ್ಯದ ಕನ್ನಡವೇ ಕನ್ನಡದ ತಿರುಳೆಂದು ಕವಿ ಹೇಳಿದ್ದಾನೆ. |
| S. | ಆ ನಾಡಿನಲ್ಲಿ ವಾಸವಾಗಿದ್ದ ಜನತೆಯ ಉನ್ನತ ಸಂಸ್ಕೃತಿಯಿಂದಾಗಿ ಇಡೀ ವಿಶ್ವದಲ್ಲಿ ಕನ್ನಡ ನಾಡು ಒಂದು ವಿಶೇಷ ಸ್ಥಾನವನ್ನು ಪಡೆದಿತ್ತು. |
|
| (1) | Q S R P |
| (2) | S R Q P |
| (3) | P Q R S |
| (4) | R P Q S |
| ಇಲ್ಲಿ ಸರಿಯಾದ ಉತ್ತರ Q S R P ಆದುದರಿಂದ (1) ನ್ನು ಗುರುತಿಸಬೇಕು. |
|
97. | ಭಾರತರತ್ನ ಅಂಬೇಡ್ಕರರ ಬದುಕಿನ ಒಂದು ಘಟನೆ |
| P. | ದುಃಖದಿಂದ ಅಂಬೇಡ್ಕರ್ ಮನೆಗೆ ಬಂದರು |
| Q. | ಬಾಲಕ ಅಂಬೇಡ್ಕರ ಕ್ಷೌರಿಕನ ಬಳಿಗೆ ಹೋದರು |
| R. | ಅವರನ್ನು ಅಕ್ಕಂದಿರು ಸಮಾಧಾನ ಮಾಡಿ ಕೂದಲನ್ನು ತಾವೇ ಕತ್ತರಿಸಿದರು |
| S. | ಕ್ಷೌರಿಕನು ಕ್ಷೌರ ಮಾಡಲು ನಿರಾಕರಿಸಿದ. ನಾಯಿ ನರಿಗಳನ್ನು ಮುಟ್ಟುವ ಜನರು ನನ್ನನ್ನೇಕೆ ಮುಟ್ಟುವುದಿಲ್ಲ ನಾನು ಅಷ್ಟೇ ಕೀಳೆ? ಎಂದು ಚಿಂತಿಸಿದರು |
|
| (1) | P R S Q |
| (2) | Q S P R |
| (3) | Q P R S |
| (4) | R S Q P |
ಸರಿ ಉತ್ತರ
(2) Q S P R
|
98. | P. | ಅವನತಿಯ ಅಂಚಿನಲ್ಲಿರುವವನು ಉನ್ನತಿಗೇರಬಲ್ಲ |
| Q. | ಮಾನವತೆ ಮತ್ತು ದಾನವತೆಗಳೆರಡಕ್ಕೂ ಮನುಷ್ಯನ ಅಂತರ್ಯದಲ್ಲಿ ಜಾಗವಿದೆ |
| R. | ಉನ್ನತಿಯ ಶಿಖರದಲ್ಲಿರುವನು ಅವನತಿಯಂಚಿಗೆ ಸರಿದು ಬಿಡಬಲ್ಲ |
| S. | ಅವನತಿ ಮತ್ತು ಉನ್ನತಿಗಳೆರಡೂ ವ್ಯಕ್ತಿಯ ನಡೆಯನ್ನೇ ಅವಲಂಬಿಸಿರುತ್ತವೆ. |
|
| (1) | P Q R S |
| (2) | Q S R P |
| (3) | R S Q P |
| (4) | S R Q P |
ಸರಿ ಉತ್ತರ
(2) Q S R P
|
99. | P. | 2500 ವರ್ಷಗಳ ಹಿಂದೆ ಸಂಸ್ಕೃತದಲ್ಲಿ ಬರೆದ ‘‘ಮಹಾಕಾವ್ಯವೇ’ ‘ಮಹಾಭಾರತ’ ಇದರಲ್ಲಿ 18 ಪರ್ವಗಳಿವೆ |
| Q. | ಈ ಗೀತೆ ಕೂಡಾ ಮಹಾಭಾರತದ 6 ನೇ ಪರ್ವದಲ್ಲಿದ್ದು ಇದರಲ್ಲಿಯೂ 18 ಅಧ್ಯಾಯಗಳಿರುತ್ತವೆ |
| R. | ಕೃಷ್ಣಾರ್ಜುನರ ನಡುವೆ ನಡೆದ ಸಂಭಾಷಣೆ ಇದಾಗಿದ್ದು, |
| S. | ಇದನ್ನು ಹಿಂದೂಗಳ ಪವಿತ್ರ ಗ್ರಂಥ’ ಎನ್ನುತ್ತಾರೆ ಪದಶಃ ಅರ್ಥ ‘‘ಭಗವಂತ ಹಾಡಿದ ಗೀತೆ’’ ಯೇ ‘‘ಭಗವದ್ಗೀತೆ’’ – ಯಾಗಿದೆ. |
|
| (1) | R P S Q |
| (2) | S R Q P |
| (3) | S P R Q |
| (4) | P R S Q |
ಸರಿ ಉತ್ತರ
(4) P R S Q
|
100. | ಗುರುವಿನ ಬಳಿ ಒಬ್ಬ ಕೇಳುತ್ತಾನೆ ‘ಗುರುವೇ ದಾರಿಯಾವುದು….’ |
| P. | ನೀನು ದಾರಿಯ ಬಗ್ಗೆ ಯೋಚಿಸುತ್ತಿಲ್ಲ ನಿನ್ನ ಬಗ್ಗೆ ಚಿಂತಿಸುತ್ತಿದ್ದೆ ಅದಕ್ಕೆ |
| Q. | ಹಾಗಿದ್ದಲ್ಲಿ ನನಗೇಕೆ ಅದು ಕಾಣಿಸುತ್ತಿಲ್ಲ? |
| R. | ಅಯ್ಯಾ ಅದು ನಿನ್ನ ಕಣ್ಣ ಎದುರಲ್ಲೇ ಇದೆ ಎನ್ನುತ್ತಾನೆ ಗುರು |
| S. | ಹಾಗಿದ್ದಲ್ಲಿ ಅದು ನಿಮಗೆ ಕಾಣಿಸುತ್ತದೋ ? ಎಲ್ಲಿಯವರೆಗೆ ನನಗೆ ಕಾಣಿಸುವುದಿಲ್ಲ ನಿನಗೆ ಕಾಣಿಸುತ್ತದೆ ಎಂಬಂತೆ ಯೋಚಿಸುತ್ತೀಯೋ ಅಲ್ಲಿಯವರೆಗೆ ನಿನ್ನ ಕಣ್ಣುಗಳಿಗೆ ಮಂಜು ಮುಸುಕಿರುತ್ತದೆ. |
|
| (1) | P R Q S |
| (2) | R Q P S |
| (3) | Q R S P |
| (4) | R P S Q |
ಸರಿ ಉತ್ತರ
(2) R Q P S
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ
Basavaraj Sutar
Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.