Welcome to ALL IN ONE Education portal

Join us on Telegram

Join Now

Join us on Whatsapp

Join Now

FDA-2021 samanya kannada Question Paper

FDA-2021 Paper-2 General KANNADA Questions with answers

ದಿನಾಂಕ 28.02.2021 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಕನ್ನಡ ಪತ್ರಿಕೆ – II (ವಿಷಯ ಸಂಕೇತ: 386) ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

ಈ ಕೆಳಗಿನ ಕೆಲವು ಕನ್ನಡದ ನುಡಿಗಟ್ಟುಗಳನ್ನು (ಪ್ರಶ್ನೆ ಸಂಖ್ಯೆ 1 ರಿಂದ 9 ರವರೆಗೆ) ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ. ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆ ಮಾಡಿ ಗುರುತಿಸಿ.

1. ಹಿತ್ತಾಳೆ ಕಿವಿ
  (1) ಕಿವಿ ಕೇಳಿಸದವ
  (2) ಚುರುಕು ಬುದ್ದಿ
  (3) ಚಾಡಿ ಮಾತು ಕೇಳುವ ಸ್ವಭಾವ
  (4) ಒಂದು ಬಗೆಯ ಕಿವಿಯ ಆಭರಣ
ಸರಿ ಉತ್ತರ

(3) ಚಾಡಿ ಮಾತು ಕೇಳುವ ಸ್ವಭಾವ


2. ಹೊಟ್ಟೆಗೆ ಹಾಕಿಕೊ
  (1) ಕ್ಷಮಿಸು
  (2) ಚೆನ್ನಾಗಿ ತಿನ್ನು
  (3) ಕಾಣದ ಹಾಗೆ ಇಡು
  (4) ಮರೆತು ಬಿಡು
ಸರಿ ಉತ್ತರ

(1) ಕ್ಷಮಿಸು


3. ಎದೆ ತಟ್ಟಿ ಹೇಳು
  (1) ಜಂಭದಿಂದ ಹೇಳು
  (2) ಅಹಂಕಾರದಿಂದ ಹೇಳು
  (3) ವಿನಯದಿಂದ ಹೇಳು
  (4) ಧೈರ್ಯದಿಂದ ಹೇಳು
ಸರಿ ಉತ್ತರ

(3) ವಿನಯದಿಂದ ಹೇಳು


4. ತಿರುಕನ ಕನಸು
  (1) ಭಿಕ್ಷುಕನ ಕನಸು
  (2) ನನಸಾಗದ ಇಚ್ಛೆ
  (3) ಈಡೇರಿದ ಬಯಕೆ
  (4) ಬಡವನ ಬದುಕು
ಸರಿ ಉತ್ತರ

(2) ನನಸಾಗದ ಇಚ್ಛೆ


5. ಗಗನ ಕುಸುಮ
  (1) ಕೈಗೆ ಎಟುಕದ್ದು
  (2) ಸುಂದರವಾದ ಹೂವು
  (3) ಹುಣ್ಣಿಮೆ ಚಂದ್ರ
  (4) ಆಕಾಶದ ನಕ್ಷತ್ರ
ಸರಿ ಉತ್ತರ

(1) ಕೈಗೆ ಎಟುಕದ್ದು


6. ಅಧಿಕ ಪ್ರಸಂಗ ಮಾಡು
  (1) ಹೆಚ್ಚಿಗೆ ಮಾತಾಡು
  (2) ತನಗೆ ಸಂಬಂಧವಿಲ್ಲದ ವಿಷಯದಲ್ಲಿ ಭಾಗವಹಿಸು
  (3) ಅಲ್ಲದ ಕೆಲಸ ಮಾಡು
  (4) ಕೋಪಗೊಳ್ಳು
ಸರಿ ಉತ್ತರ

(2) ತನಗೆ ಸಂಬಂಧವಿಲ್ಲದ ವಿಷಯದಲ್ಲಿ ಭಾಗವಹಿಸು


7. ಮೈ ಬಗ್ಗಿಸು
  (1) ತಲೆಬಾಗಿ ನಡೆ
  (2) ಶರಣಾಗು
  (3) ಶ್ರಮಪಡು
  (4) ಯೋಗಮಾಡು
ಸರಿ ಉತ್ತರ

(3) ಶ್ರಮಪಡು


8. ಕಿವಿ ನೆಟ್ಟಗಾಗು
  (1) ಇನ್ನೊಬ್ಬರ ಮಾತಲ್ಲಿ ಬಾಯಿಹಾಕು
  (2) ಕದ್ದು ಕೇಳು
  (3) ಕಿವಿ ಎತ್ತರಿಸು
  (4) ಕುತೂಹಲ ಹೆಚ್ಚಾಗು
ಸರಿ ಉತ್ತರ

(4) ಕುತೂಹಲ ಹೆಚ್ಚಾಗು


9. ಎಂಜಲು ಕೈಯಲ್ಲಿ ಕಾಗೆ ಓಡಿಸದವ
  (1) ಪಕ್ಷಿಯನ್ನು ಗೌರವಿಸುವನು
  (2) ಸಂಪ್ರದಾಯವಾದಿ
  (3) ಸೂಕ್ಷ್ಮ ಸ್ವಭಾವ
  (4) ಜಿಪುಣ
ಸರಿ ಉತ್ತರ

(4) ಜಿಪುಣ


10. ‘ಪಶ್ಚಿಮ’ಕ್ಕೆ ಕನ್ನಡದಲ್ಲಿ ಏನೆನ್ನುವರು ?
  (1) ಮೂಡಣ
  (2) ಪಡುವಣ
  (3) ತೆಂಕಣ
  (4) ಬಡಗಣ
ಸರಿ ಉತ್ತರ

(2) ಪಡುವಣ


11. ‘ಸದಭಿರುಚಿ’ ಈ ಪದವನ್ನು ಬಿಡಿಸಿದಾಗ
  (1) ಸದ್ + ಅಭಿರುಚಿ
  (2) ಸದ್ಯ + ಅಭಿರುಚಿ
  (3) ಸತ್ + ಅಭಿರುಚಿ
  (4) ಸತ್ + ಅಭಯರುಚಿ
ಸರಿ ಉತ್ತರ

(3) ಸತ್ + ಅಭಿರುಚಿ


12. ‘ಗುಲಾಬಿ’ ಯಾವ ಭಾಷೆಯ ಪದ ?
  (1) ಇಂಗ್ಲಿಷ್
  (2) ಪೋರ್ಚುಗೀಸ್
  (3) ಕನ್ನಡ
  (4) ಉರ್ದು
ಸರಿ ಉತ್ತರ

(4) ಉರ್ದು


ಈ ಕೆಳಗೆ (ಪ್ರಶ್ನೆ ಸಂಖ್ಯೆ 13 ರಿಂದ 17 ರವರೆಗೆ) – P Q R S ಎಂಬ ನಾಲ್ಕು ವಾಕ್ಯಗಳನ್ನು ಕೊಡಲಾಗಿದೆ. ಈ ವಾಕ್ಯಗಳು ಸ್ಥಾನಪಲ್ಲಟವಾಗಿವೆ. ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸುವ ಉತ್ತರವನ್ನು ಗುರುತಿಸಬೇಕು.

13. P. ಇದು ಕನ್ನಡ ವೃತ್ತಗಳ ಗಾಯತ್ರಿ ಎಂದು ಕರೆಯುತ್ತಾರೆ.
  Q. ಕ್ರಿ.ಶ. 700 ರ ಬಾದಾಮಿ ಶಾಸನದ ಮೂರು ಪದ್ಯಗಳಲ್ಲಿ ಪ್ರಥಮ ದರ್ಶನವಾಗುತ್ತದೆ.
  R. ನಾಗವರ್ಮನು ತನ್ನ ಕೃತಿಯಲ್ಲಿ ಉಲ್ಲೇಖಿಸಿರುವ ‘ಏಳೆ’ ತ್ರಿಪದಿಗೆ ಮೂಲವಾಗಿರಬೇಕು.
  S. ತ್ರಿಪದಿ ನಮಗೆ ಉಪಲಬ್ದವಾದ ಅತ್ಯಂತ ಪ್ರಾಚೀನ ಛಂದೋರೂಪ.
  (1) S Q P R
  (2) P S R Q
  (3) Q S R P
  (4) R P Q S
ಸರಿ ಉತ್ತರ

(1) S Q P R


14. P. ಮನುಷ್ಯನು ಮಾತ್ರ ಮಾತನಾಡುವ ಕಲೆ ಬಲ್ಲವನಾಗಿದ್ದಾನೆ.
  Q. ಈ ಜೀವಜಾಲದಲ್ಲಿ ಕೆಲವೇ ಕೆಲವು ಜೀವಿಗಳು ಮಾತ್ರ ಧ್ವನಿ ಉತ್ಪಾದಿಸುವವುಗಳಾಗಿವೆ. ಅವುಗಳಲ್ಲಿ
  R. ಮನುಷ್ಯನ ಮಾತಿಗೆ ಪೂರಕವಾಗಿ ನಗುವೆಂಬ ಅನುಭವದ ಆಭರಣ ವನ್ನು ದೇವನಿತ್ತ ಕೊಡುಗೆ.
  S. ಪ್ರಪಂಚದಲ್ಲಿ ಎಂಭತ್ನಾಲ್ಕು ಲಕ್ಷ ಜೀವರಾಶಿಗಳಿವೆ ಎಂಬ ತರ್ಕವಿದೆ.
  (1) Q P S R
  (2) S P R Q
  (3) R S P Q
  (4) S Q P R
ಸರಿ ಉತ್ತರ

(4) S Q P R


15. P. ಚಂಪುವಿನ ಮೊದಲ ಉಲ್ಲೇಖ 2ನೆಯ ನಾಗವರ್ಮನ ಗ್ರಂಥದಲ್ಲಿ ಬಂದಿದೆ.
  Q. ಆದರೆ ಅವನ್ನು ಚಂಪುವೆಂದು ಕರೆದವರು ವಿರಳ.
  R. ಅವನ ಸಮಕಾಲೀನನಾದ ಉದಯಾದಿತ್ಯನ ಗ್ರಂಥದಲ್ಲಿಯೂ ಬಂದಿದೆ.
  S. ಕನ್ನಡ ಕವಿಗಳಲ್ಲಿ ಕೆಲವರು ಮೊದಲಿನಿಂದಲೇ ಚಂಪುಗಳನ್ನು ಬರೆದಿದ್ದಾರೆ.
  (1) R S Q P
  (2) Q P R S
  (3) S Q P R
  (4) P R S O
ಸರಿ ಉತ್ತರ

(3) S Q P R


16. P. ಹರಿಹರನು ರಾಜನಾಗಿ ತನ್ನ ಸಹೋದರರ ನೆರವನ್ನು ಪಡೆದನು.
  Q. ಇವರು ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿ ಕನ್ನಡ ಸಂಸ್ಕೃತಿಯನ್ನು ಬೆಳೆಸಿದರು.
  R. ರಾಜ್ಯವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಒಬ್ಬೊಬ್ಬರನ್ನು ಒಂದೊಂದು ಭಾಗಕ್ಕೆ ಅಧಿಕಾರಿಯನ್ನಾಗಿ ನೇಮಿಸಿದನು.
  S. ವಿಜಯನಗರ ಸಾಮ್ರಾಜ್ಯ ಸಂಗಮ ಪುತ್ರರಾದ ಹಕ್ಕ-ಬುಕ್ಕರಿಂದ ಸ್ಥಾಪಿತವಾಯಿತು.
  (1) Q R S P
  (2) P Q R S
  (3) S R Q P
  (4) S Q P R
ಸರಿ ಉತ್ತರ

(4) S Q P R


17. P. ಕೆಲವರ ಬದುಕು ಸ್ವಾರಸ್ಯಕರವಾಗಿದ್ದರೂ ಸಾಧಾರಣ ಕೃತಿಗಳನ್ನು ರಚಿಸಿದ್ದಾರೆ.
  Q. ಒಂದು ಭಾಷೆಯನ್ನೇ ಶ್ರೀಮಂತ ಗೊಳಿಸುವಂತಹ ಕೃತಿಗಳನ್ನು ರಚಿಸಿ ಕಣ್ಮರೆಯಾಗಿದ್ದಾರೆ.
  R. ಕೆಲವರು ದೊಡ್ಡ ಲೇಖಕರಾಗಿ ಹೋಗಿದ್ದಾರೆ.
  S. ಆದರೆ ಅಂತಹವರ ಬದುಕು ಸ್ವಾರಸ್ಯಕರವಾಗಿರುವುದಿಲ್ಲ.
  (1) P S R Q
  (2) R Q S P
  (3) S Q P R
  (4) Q R P S
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 18 ರಿಂದ 27) ವಿರುದ್ದಾರ್ಥಕ ಪದಗಳನ್ನು ಗುರುತಿಸಿ.

18. ಪರ್ಣ
  (1) ಅಪರ್ಣ
  (2) ವಿಪರ್ಣ
  (3) ಸುಪರ್ಣ
  (4) ಕುಪರ್ಣ
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


19. ಮುಂಚು
  (1) ಹೆಂಚು
  (2) ಕಂಚು
  (3) ಸಂಚು
  (4) ಹಿಂಚು
ಸರಿ ಉತ್ತರ

(4) ಹಿಂಚು


20. ಕಲಿ
  (1) ವೀರ
  (2) ಧೀರ
  (3) ಶೂರ
  (4) ಹೇಡಿ
ಸರಿ ಉತ್ತರ

(4) ಹೇಡಿ


21. ಇಂಬೆಳಕು
  (1) ಚೆಂಬೆಳಕು
  (2) ಹೊಂಬೆಳಕು
  (3) ನಿಂಬೆಳಕು
  (4) ನಿರ್ಬೆಳಕು
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


22. ಅಂತಿಕ
  (1) ಸಮೀಪ
  (2) ದೂರ
  (3) ಕೊನೆಯ
  (4) ಹತ್ತಿರ
ಸರಿ ಉತ್ತರ

(2) ದೂರ


23. ಭೂಯಿಷ್ಟ
  (1) ಅತಿಶಯವಾದ
  (2) ಹೆಚ್ಚಾದ
  (3) ಅಧಿಕ
  (4) ಕನಿಷ್ಠ
ಸರಿ ಉತ್ತರ

(4) ಕನಿಷ್ಠ


24. ಸೊಲಪು
  (1) ಒನಪು
  (2) ಅರಿಪು
  (3) ಸಬಲ
  (4) ಗಂಭೀರ
ಸರಿ ಉತ್ತರ

(4) ಗಂಭೀರ


25. ಉದಕ
  (1) ಸಾಧಕ
  (2) ಬಾಧಕ
  (3) ಅಧಿಕ
  (4) ಅಗ್ನಿ
ಸರಿ ಉತ್ತರ

(4) ಅಗ್ನಿ


26. ತಿರೆ
  (1) ಕ್ಷೋಣಿ
  (2) ಅವನಿ
  (3) ಭೂಲೋಕ
  (4) ಆಕಾಶ
ಸರಿ ಉತ್ತರ

(4) ಆಕಾಶ


27. ಉಕ್ತ
  (1) ನಿರುಕ್ತ
  (2) ಅನುಕ್ತ
  (3) ಮರುಕ್ತ
  (4) ಸೆರುಕ್ತ
ಸರಿ ಉತ್ತರ

(2) ಅನುಕ್ತ


ಈ ಕೆಳಗೆ ಕೊಟ್ಟ ಶಬ್ದಗಳಲ್ಲಿ (ಪ್ರಶ್ನೆ ಸಂಖ್ಯೆ 28 ರಿಂದ 31 ರವರೆಗೆ) ಒಂದು ಪದ ಉಳಿದ ಗುಂಪಿಗೆ ಸೇರುವುದಿಲ್ಲ. ಅಂತಹ ಪದ ಗುರುತಿಸಿ.

28. (1) ಕುದುರೆ
  (2) ನಾಯಿ
  (3) ಸಿಂಹ
  (4) ಹಾವು
ಸರಿ ಉತ್ತರ

(4) ಹಾವು


29. (1) ಆನೆ
  (2) ಕುದುರೆ
  (3) ರಥ
  (4) ಒಂಟೆ
ಸರಿ ಉತ್ತರ

(3) ರಥ


30. (1) ಕಾರು
  (2) ಲಾರಿ
  (3) ಬಸ್ಸು
  (4) ಸೈಕಲ್
ಸರಿ ಉತ್ತರ

(4) ಸೈಕಲ್


31. (1) ಬುದ್ಧ
  (2) ಬಸವ
  (3) ಅಲ್ಲಮ
  (4) ಜಂಗಮ
ಸರಿ ಉತ್ತರ

(1) ಬುದ್ಧ or (4) ಜಂಗಮ


ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 32 ರಿಂದ 40 ರವರೆಗೆ) ಗೆರೆ ಹಾಕಿ ಸೂಚಿಸಿದ ಭಾಗ ತಪ್ಪಾಗಿದ್ದರೆ ಮುಂದೆ ಕೊಡಲಾದ ಮೂರು ಪರ್ಯಾಯ ರೂಪಗಳಲ್ಲಿ ಸರಿಯಾದ ರೂಪವನ್ನು ಗುರುತಿಸಿ ತಪ್ಪಿಲ್ಲದಿದ್ದರೆ ‘‘ತಪ್ಪಿಲ್ಲ’’ ಎಂದು ಗುರುತಿಸಿ.

32. ಸಭೆ ಹರ್ಷೊದ್ಗಾರದಿಂದ ಮುಗಿಯಿತು.
  (1) ಹರ್ಷೋದ್ಗಾರ
  (2) ಹಷೋದ್ಗರ
  (3) ಹರ್ಷೋದ್ಗಾರಾ
  (4) ತಪ್ಪಿಲ್ಲ
ಸರಿ ಉತ್ತರ

(1) ಹರ್ಷೋದ್ಗಾರ


33. ಅವರು ದೃಡೀಕರಣ ಕೇಳಿದರು.
  (1) ಧೃಡೀಕರಣ
  (2) ದೃಢೀಕರಣ
  (3) ದ್ರುಢೀಕರಣ
  (4) ಧೃಢೀಕರಣ
ಸರಿ ಉತ್ತರ

(2) ದೃಢೀಕರಣ


34. ಕೋಟ್ಯಂತರ ರೂಪಾಯಿ ಹಗರಣವನ್ನು ಬಯಲಿಗೆಳೆದರು.
  (1) ಕೋಟ್ಯಾಂತರ
  (2) ಕೋಟ್ಯಂತಾರ
  (3) ಕೋಟಿಯಂತರ
  (4) ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


35. ಸಾಲಭಾದೆ ಯಿಂದ ನರಳಿದರು.
  (1) ಸಾಲಭಾಧೆ
  (2) ಸಾಲಬಾಧೆ
  (3) ಸಾಲಬಾದೆ
  (4) ತಪ್ಪಿಲ್ಲ
ಸರಿ ಉತ್ತರ

(2) ಸಾಲಬಾಧೆ


36. ಒಳ್ಳೆಯ ಕಾರ್ಯಕ್ಕೆ ಮೀನಾಮೇಷ ಎಣಿಸಬಾರದು.
  (1) ಮೀನಮೇಷ
  (2) ಮೀನಾಮೇಶ
  (3) ಮೀನಮೇಸ
  (4) ತಪ್ಪಿಲ್ಲ
ಸರಿ ಉತ್ತರ

(1) ಮೀನಮೇಷ


37. ಅರ್ಜುನ ಶಿವನಿಂದ ಪಾಶುಪತಾಸ್ತ್ರವನ್ನು ಪಡೆದ.
  (1) ಪಶುಪತಸ್ತ್ರ
  (2) ಪಾಶಪತುಸ್ತ್ರ
  (3) ಪಾಶುಪಾತಾಸ್ತ್ರ
  (4) ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


38. ರಾಮ ಕ್ಷತ್ರಧರ್ಮದಲ್ಲೇ ನಡೆದ.
  (1) ಕ್ಷತಿಧರ್ಮ
  (2) ಕ್ಷಾತ್ರಧರ್ಮ
  (3) ಕ್ಷತ್ರಧಾರ್ಮ
  (4) ತಪ್ಪಿಲ್ಲ
ಸರಿ ಉತ್ತರ

(2) ಕ್ಷಾತ್ರಧರ್ಮ


39. ಪಾಂಡವರು ಕಳುಹಿಸಿದ ಕೃಷ್ಣಸಂಧಾನ ಮುರಿದುಬಿತ್ತು.
  (1) ಕೃಷ್ಣಂ ಸಧಾನ
  (2) ಕೃಷ್ಣಾ ಸಂದಾನ
  (3) ಕೃಷ್ಣಾ ಸಂಧಾನ
  (4) ತಪ್ಪಿಲ್ಲ
ಸರಿ ಉತ್ತರ

(4) ತಪ್ಪಿಲ್ಲ


40. ಬ್ರಾಹ್ಮಣನಿಗೆ ಮಂತ್ರನುಷ್ಠಾನವೇ ಆಧಾರ.
  (1) ಮುಂತಾನುಷ್ಠಾನ
  (2) ಮಂತ್ರಾನಷ್ಠಾನ
  (3) ಮಂತ್ರಾನುಷ್ಠಾನ
  (4) ತಪ್ಪಿಲ್ಲ
ಸರಿ ಉತ್ತರ

(3) ಮಂತ್ರಾನುಷ್ಠಾನ


ಕೆಳಗಿನ ಪದಗಳಿಗೆ (ಪ್ರಶ್ನೆ ಸಂಖ್ಯೆ 41 ರಿಂದ 50 ರವರೆಗೆ ಸರಿಯಾದ ಅರ್ಥವನ್ನು ಗುರುತಿಸಿರಿ.

41. ಉಂಡಲಿಗೆ
  (1) ಉಂಡನಾಲಿಗೆ
  (2) ಎಳ್ಳುಂಡೆ
  (3) ಕಜ್ಜಾಯ
  (4) ಕಡುಬು
ಸರಿ ಉತ್ತರ

(4) ಕಡುಬು


42. ಖೇಡ
  (1) ಇಂದ್ರ
  (2) ಖೇಚರ
  (3) ಭಾನು
  (4) ಹಳ್ಳಿ
ಸರಿ ಉತ್ತರ

(4) ಹಳ್ಳಿ


43. ಅಳಿನಿ
  (1) ಮರಿದುಂಬಿ
  (2) ಹೆಣ್ಣು ದುಂಬಿ
  (3) ಗಂಡು ದುಂಬಿ
  (4) ದೊಡ್ಡ ದುಂಬಿ
ಸರಿ ಉತ್ತರ

(2) ಹೆಣ್ಣು ದುಂಬಿ


44. ಕೂಷ್ಮಾಂಡ
  (1) ಸೋರೆಕಾಯಿ
  (2) ಕುಂಬಳಕಾಯಿ
  (3) ಪಡುವಲಕಾಯಿ
  (4) ಹಿರೇಕಾಯಿ
ಸರಿ ಉತ್ತರ

(2) ಕುಂಬಳಕಾಯಿ


45. ಅರ್ಕ
  (1) ಚಂದ್ರ
  (2) ಸೂರ್ಯ
  (3) ನಕ್ಷತ್ರ
  (4) ಆಕಾಶ
ಸರಿ ಉತ್ತರ

(2) ಸೂರ್ಯ


46. ವಿಬುಧ
  (1) ದಡ್ಡ
  (2) ಸೋಮಾರಿ
  (3) ಪಂಡಿತ
  (4) ದುಷ್ಟ
ಸರಿ ಉತ್ತರ

(3) ಪಂಡಿತ


47. ತೃಣ
  (1) ಅಲ್ಪ
  (2) ಗೀಳು
  (3) ಹೀನ
  (4) ಹುಲ್ಲು
ಸರಿ ಉತ್ತರ

(1) ಅಲ್ಪ or (4) ಹುಲ್ಲು


48. ಪಂಕ
  (1) ಕಮಲ
  (2) ಕೆಸರು
  (3) ತಿಳಿನೀರು
  (4) ಪಣ
ಸರಿ ಉತ್ತರ

(2) ಕೆಸರು


49. ಅಂತರ್ಧಾನ
  (1) ಮಾಯಾಜಾಲ
  (2) ಅರ್ಥೈಸಿಕೋ
  (3) ಮಾಯವಾಗು
  (4) ಜೀರ್ಣಿಸಿಕೊ
ಸರಿ ಉತ್ತರ

(3) ಮಾಯವಾಗು


50. ಅಡಕ
  (1) ಅಡಗಿಸು
  (2) ಲಗತ್ತು
  (3) ದೊಡ್ಡದು ಮಾಡು
  (4) ಅಡಕೆ
ಸರಿ ಉತ್ತರ

(1) ಅಡಗಿಸು or (2) ಲಗತ್ತು


ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 51 ರಿಂದ 56 ರವರೆಗೆ) ಗೆರೆ ಎಳೆದ ಭಾಗದಲ್ಲಿ ಕೊಡಲಾದ ಆಂಗ್ಲ/ಇಂಗ್ಲಿಷ್ ಪದಗಳಿಗೆ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದುದನ್ನು ಗುರುತಿಸಿ.

51. ಪ್ರತಿಯೊಬ್ಬ ಲೇಖಕನಿಗೂ ತನ್ನದೇ ಆದ ಪೊಯೆಟಿಕ್ ಲೈಸೆನ್ಸ್ ಇರುತ್ತದೆ.
  (1) ಕಾವ್ಯ ನಾಮ
  (2) ಕಾವ್ಯ ದರ್ಶನ
  (3) ಕಾವ್ಯ ವಿಡಂಬನೆ
  (4) ಕಾವ್ಯ ಸ್ವಾತಂತ್ರ್ಯ
ಸರಿ ಉತ್ತರ

(4) ಕಾವ್ಯ ಸ್ವಾತಂತ್ರ್ಯ


52. ವಿದೇಶಕ್ಕೆ ಪ್ರಯಾಣಿಸಬೇಕೆಂದರೆ ಪಾಸ್ಪೋರ್ಟ್ ಕಡ್ಡಾಯವಾಗಿರುತ್ತದೆ.
  (1) ಪರವಾನಗಿ ಪತ್ರ
  (2) ರಹದಾರಿ ಪತ್ರ
  (3) ಅನುಜ್ಞಾ ಪತ್ರ
  (4) ರಫ್ತು ಪತ್ರ
ಸರಿ ಉತ್ತರ

(2) ರಹದಾರಿ ಪತ್ರ


53. ದಿನವೂ ಕಮ್ಯುಟ್ ಮಾಡಲಾರದೆ ಕೆಲಸಕ್ಕೆ ರಾಜೀನಾಮೆ ನೀಡಿದರು.
  (1) ಓಡಿಹೋಗು
  (2) ತಡವಾಗಿ ಹೋಗು
  (3) ಹೋಗಿ-ಬರುವ ಪ್ರಯಾಣ
  (4) ಮೆಲ್ಲನೆ ಹೋಗು
ಸರಿ ಉತ್ತರ

(3) ಹೋಗಿ-ಬರುವ ಪ್ರಯಾಣ


54. ಎಲ್ಲಾ ರಾಜ್ಯಗಳೂ ತನ್ನದೇ ಆದ ಸ್ಟೇಟ್ ಎಂಬ್ಲಮ್ ಹೊಂದಿರುತ್ತವೆ.
  (1) ರಾಜ್ಯ ಲಾಂಛನ
  (2) ರಾಜ್ಯ ಚಿಹ್ನೆ
  (3) ರಾಜ್ಯ ಸಂಕೇತ
  (4) ರಾಜ್ಯ ಚಿತ್ರ
ಸರಿ ಉತ್ತರ

(1) ರಾಜ್ಯ ಲಾಂಛನ


55. ಲಿರಿಕ್ ಎನ್ನುವ ಸಾಹಿತ್ಯ ಪ್ರಕಾರವು ಇಂಗ್ಲಿಷ್ ನಿಂದ ಬಂತು.
  (1) ಭಾವಗೀತೆ
  (2) ಕಥನಗೀತೆ
  (3) ಗೀತರೂಪಕ
  (4) ನವ್ಯ ಕವನ
ಸರಿ ಉತ್ತರ

(1) ಭಾವಗೀತೆ


56. ಅವರಿಗೆ ಕನ್ನಡದಲ್ಲಿ ‘ಫ್ಲೂಯೆನ್ಸ್’ ಇದೆ.
  (1) ನಿರರ್ಗಳತೆ
  (2) ಪ್ರಾಸಬದ್ಧತೆ
  (3) ಗೊತ್ತಿಲ್ಲದಿರುವುದು
  (4) ವಿರಳತೆ
ಸರಿ ಉತ್ತರ

(1) ನಿರರ್ಗಳತೆ


57. ‘ಪಡುವಣ’ ಎಂಬುದು ____________ ವಾಚಕ.
  (1) ಪ್ರಕಾರ ವಾಚಕ
  (2) ದಿಗ್ವಾಚಕ
  (3) ಸಂಖ್ಯಾವಾಚಕ
  (4) ಸರ್ವನಾಮ
ಸರಿ ಉತ್ತರ

(2) ದಿಗ್ವಾಚಕ


58. ‘ಹಾಲಿನಿಂದ ತುಪ್ಪವು ತಯಾರಾಗುತ್ತದೆ. ಇಲ್ಲಿ ‘ಹಾಲಿನಿಂದ’ ಎಂಬುದು ________ವಿಭಕ್ತಿ.
  (1) ತೃತೀಯಾ
  (2) ಷಷ್ಠಿ
  (3) ಸಪ್ತಮಿ
  (4) ಪ್ರಥಮ
ಸರಿ ಉತ್ತರ

(1) ತೃತೀಯಾ


59. ‘ಮೆಲ್ಲ ಮೆಲ್ಲಗೆ ನಡೆ’ ಈ ವಾಕ್ಯದಲ್ಲಿ ‘ಮೆಲ್ಲ ಮೆಲ್ಲಗೆ’ ಎಂಬುದು ___________ ಕ್ರಿಯಾ ವಿಶೇಷಣವಾಗಿದೆ.
  (1) ರೀತಿ ವಾಚಕ
  (2) ಅನುಕರಣ ವಾಚಕ
  (3) ಪ್ರಶ್ನೆ ವಾಚಕ
  (4) ಆವೃತ್ತಿ ವಾಚಕ
ಸರಿ ಉತ್ತರ

(2) ಅನುಕರಣ ವಾಚಕ


60. ಸಿರಿತನ ಎಂಬುದು
  (1) ಭಾವನಾಮ
  (2) ಅಂಕಿತನಾಮ
  (3) ಅನ್ವರ್ಥನಾಮ
  (4) ರೂಢನಾಮ
ಸರಿ ಉತ್ತರ

(1) ಭಾವನಾಮ


61. ‘ಸುಲಿದ ಬಾಳೆಯ ಹಣ್ಣಿನಂದದಿ’ ಎಂಬುದು ___________
  (1) ಉಪಮಾಲಂಕಾರ
  (2) ರೂಪಕಾಲಂಕಾರ
  (3) ಉತ್ಪ್ರೇಕ್ಷಾಲಂಕಾರ
  (4) ದೀಪಕಾಲಂಕಾರ
ಸರಿ ಉತ್ತರ

(2) ರೂಪಕಾಲಂಕಾರ


62. ‘ದೇವರೇ ನೀನೇ ಈ ಸಂಕಟದಿಂದ ಪಾರುಮಾಡು’ ಈ ವಾಕ್ಯದಲ್ಲಿ ‘ನೀನೇ’ ಎಂಬುದು ___________ ಅವ್ಯಯ.
  (1) ಕ್ರಿಯಾರ್ಥಕ
  (2) ಅವಧಾರಣಾರ್ಥಕ
  (3) ಭಾವಬೋಧಕ
  (4) ಸಂಬೋಧನವಾಚಕ
ಸರಿ ಉತ್ತರ

(2) ಅವಧಾರಣಾರ್ಥಕ


63. ‘ಪರ್ವತ’ ಎಂಬ ಪದವು ___________ಉದಾಹರಣೆ.
  (1) ಅಂಕಿತನಾಮ
  (2) ಅನ್ವರ್ಥನಾಮ
  (3) ರೂಢನಾಮ
  (4) ಭಾವನಾಮ
ಸರಿ ಉತ್ತರ

(3) ರೂಢನಾಮ


64. ಬಸರಿ ಎಂದರೆ ___________
  (1) ಹೊಟ್ಟೆಯಲ್ಲಿ ಮಗುವನ್ನುಳ್ಳ ಹೆಂಗಸು
  (2) ಬಹಳ ಸರಿಯಾದುದು
  (3) ಒಂದು ಜಾತಿಯ ಮರ
  (4) ಹೊರಕ್ಕೆ ಹಾಕು
ಸರಿ ಉತ್ತರ

(1) ಹೊಟ್ಟೆಯಲ್ಲಿ ಮಗುವನ್ನುಳ್ಳ ಹೆಂಗಸು or (3) ಒಂದು ಜಾತಿಯ ಮರ


65. ಸಂಧಿಕಾರ್ಯವಾಗುವಾಗ ಪೂರ್ವಪದದ ಒಂದು ಅಕ್ಷರವು ಸಂಧಿಯಾದ ಪದದಲ್ಲಿ ಇಲ್ಲದಿದ್ದರೆ ಅಂಥ ಸಂಧಿಯನ್ನು ___________ ಸಂಧಿ ಎನ್ನುತ್ತೇವೆ.
  (1) ಆಗಮ ಸಂಧಿ
  (2) ಆದೇಶ ಸಂಧಿ
  (3) ಲೋಪ ಸಂಧಿ
  (4) ಯಕಾರಾಗಮ ಸಂಧಿ
ಸರಿ ಉತ್ತರ

(3) ಲೋಪ ಸಂಧಿ


ಈ ಕೆಳಗಿನ ಪ್ರಶ್ನೆಗಳಲ್ಲಿ (ಪ್ರಶ್ನೆ ಸಂಖ್ಯೆ 66 ಮತ್ತು 67) ಕನ್ನಡ ಮೂಲದ್ದು ಅಲ್ಲದ (ಅನ್ಯ ಭಾಷೆಯಿಂದ ಸ್ವೀಕೃತವಾದ) ಶಬ್ದವನ್ನು ಗುರುತಿಸಿ.

66. (1) ಕದ
  (2) ಮರ
  (3) ರಜಾ
  (4) ಕರಿದು
ಸರಿ ಉತ್ತರ

(3) ರಜಾ


67. (1) ಭೂಮಿ
  (2) ನೀರು
  (3) ಬಾನು
  (4) ಮೀನು
ಸರಿ ಉತ್ತರ

(1) ಭೂಮಿ


ಕೆಳಗೆ ಕೊಟ್ಟಿರುವ ಪದಗಳಿಗೆ (ಪ್ರಶ್ನೆ ಸಂಖ್ಯೆ 68 ರಿಂದ 72 ರವರೆಗೆ) ತದ್ಭವ ಪದಗಳನ್ನು ಬರೆಯಿರಿ./p>

68. ಭಾಷಾ
  (1) ಭಾಸೆ
  (2) ಭಾಷೆ
  (3) ಭಾಸಾ
  (4) ಬಾಶಾ
ಸರಿ ಉತ್ತರ

(2) ಭಾಷೆ


69. ಯಜ್ಞ
  (1) ಯಾಗ
  (2) ಹವನ
  (3) ಜನ್ನ
  (4) ಹೋಮ
ಸರಿ ಉತ್ತರ

(3) ಜನ್ನ


70. ಕಪಟ
  (1) ಗಪಟ
  (2) ವಂಚಕ
  (3) ಕವಲು
  (4) ಕವಡು
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


71. ಯುಗ್ಮ
  (1) ಜುಗ್ಗ
  (2) ಯುಗ
  (3) ಜುಗ
  (4) ಜನಿವಾರ
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


72. ಪತಿವ್ರತೆ
  (1) ಹದಿಬದೆ
  (2) ಗೃಹಿಣಿ
  (3) ಸಾವಿತ್ರಿ
  (4) ಹೆಂಗಸು
ಸರಿ ಉತ್ತರ

(1) ಹದಿಬದೆ


73. ಇದು ಕರ್ಮಧಾರಯ ಸಮಾಸಕ್ಕೆ ಒಂದು ಉದಾಹರಣೆ.
  (1) ಬೆಳ್ಗೊಡೆ
  (2) ಅರಮನೆ
  (3) ಅಂಗೈ
  (4) ಆ ಮನೆ
ಸರಿ ಉತ್ತರ

(1) ಬೆಳ್ಗೊಡೆ


74. ಕನ್ನಡದ ಮೊಟ್ಟ ಮೊದಲು ಉಪಲಬ್ದವಾದ ಗ್ರಂಥ.
  (1) ಕವಿರಾಜಮಾರ್ಗ
  (2) ವಡ್ಡಾರಾಧನೆ
  (3) ವಿಕ್ರಮಾರ್ಜುನ ವಿಜಯಂ
  (4) ಧರ್ಮ ಪರೀಕ್ಷೆ
ಸರಿ ಉತ್ತರ

(1) ಕವಿರಾಜಮಾರ್ಗ


75. ಇದು ಪಂಪನ ಬಿರುದುಗಳಲ್ಲೊಂದು.
  (1) ಅಮ್ಮನ ಗಂಧವಾರಣ
  (2) ಸರ್ವಜ್ಞ
  (3) ನಾಡೋಜ
  (4) ಕವಿವರ ಕಾಮಧೇನು
ಸರಿ ಉತ್ತರ

(3) ನಾಡೋಜ


76. ಸ್ವರಕ್ಕೆ ಸ್ವರ ಪರವಾದಾಗ ಕೆಲವು ವೇಳೆ ಸಂಧಿಯಾಗುವುದಿಲ್ಲ. ಇದನ್ನು ವ್ಯಾಕರಣದಲ್ಲಿ ಹೀಗೆ ಹೇಳುತ್ತಾರೆ.
  (1) ಪ್ರಕೃತಿ ಭಾವ
  (2) ಸಂಧಿ ವಿಕಲ್ಯ
  (3) ಕೃದಂತ
  (4) ವಿಶೇಷಣ
ಸರಿ ಉತ್ತರ

(1) ಪ್ರಕೃತಿ ಭಾವ


77. ಕೆ.ಎಸ್. ನರಸಿಂಹಸ್ವಾಮಿಯವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ ?
  (1) ತೆರೆದ ಬಾಗಿಲು
  (2) ಮೈಸೂರು ಮಲ್ಲಿಗೆ
  (3) ದೀಪದ ಮಲ್ಲಿ
  (4) ದುಂಡು ಮಲ್ಲಿಗೆ
ಸರಿ ಉತ್ತರ

(4) ದುಂಡು ಮಲ್ಲಿಗೆ


78. ‘ಅಭಿನವ ಪಂಪ’ ಎಂದು ತನ್ನನ್ನು ಕರೆದುಕೊಂಡ ಕವಿ.
  (1) ಪೊನ್ನ
  (2) ರನ್ನ
  (3) ಜನ್ನ
  (4) ನಾಗಚಂದ್ರ
ಸರಿ ಉತ್ತರ

(4) ನಾಗಚಂದ್ರ


79. ಹಂಪೆಯ ಹರೀಶ್ವರನ ವರಸುತನೆಂದು ತನ್ನನ್ನು ಗುರುತಿಸಿಕೊಂಡ ಕವಿ.
  (1) ಹರಿಹರ
  (2) ರಾಘವಾಂಕ
  (3) ಕುಮಾರವ್ಯಾಸ
  (4) ಮುದ್ದಣ
ಸರಿ ಉತ್ತರ

(2) ರಾಘವಾಂಕ


80. ಅರ್ಥವನ್ನು ವಿಭಜಿಸುವುದು ಎನ್ನುವುದಕ್ಕೆ ಹೀಗೆ ಹೇಳುತ್ತಾರೆ.
  (1) ಸಮಾಸ
  (2) ಸಂಧಿ
  (3) ವಿಭಕ್ತಿ
  (4) ಕೃದಂತ
ಸರಿ ಉತ್ತರ

(3) ವಿಭಕ್ತಿ


81. ‘ಕನ್ನಡದ ಆದಿಕವಿ’ ಎಂದು ಗುರುತಿಸುವ ಕವಿ.
  (1) ಕುಮಾರವ್ಯಾಸ
  (2) ಪಂಪ
  (3) ಜನ್ನ
  (4) ರನ್ನ
ಸರಿ ಉತ್ತರ

(2) ಪಂಪ


82. ‘ಅಶ್ವತ್ಥಾಮನ್’ ಇದು ___________ ನಾಟಕ.
  (1) ಸಾಮಾಜಿಕ
  (2) ಚಾರಿತ್ರಿಕ
  (3) ಸುಖಾಂತ
  (4) ದುರಂತ
ಸರಿ ಉತ್ತರ

(4) ದುರಂತ


83. ಕನ್ನಡದಲ್ಲಿ ಒಟ್ಟು ___________ ವಿಭಕ್ತಿ ಪ್ರತ್ಯಯಗಳಿವೆ.
  (1) 6
  (2) 7
  (3) 8
  (4) 9
ಸರಿ ಉತ್ತರ

(3) 8


84. ದಾಖಲೆ ಇರುವ ಕನ್ನಡದ ಅತ್ಯಂತ ಪ್ರಾಚೀನ ಪದ
  (1) ಅಸಗ
  (2) ಅಗಸ
  (3) ಇಸಿಲ
  (4) ಕಣ್ಣಿಲ
ಸರಿ ಉತ್ತರ

(3) ಇಸಿಲ


85. ಇದು ಅಚ್ಚಗನ್ನಡದ ಒಂದು ಪದ
  (1) ಗ್ರಾಮ
  (2) ರಾಜ್ಯ
  (3) ಊರು
  (4) ಭಾಷೆ
ಸರಿ ಉತ್ತರ

(3) ಊರು


86. ಕನ್ನಡ ವರ್ಣಮಾಲೆಯ ವಿವರ ಇರುವ ಕನ್ನಡದ ಒಂದು ಶಾಸನ.
  (1) ಹಲ್ಮಿಡಿ ಶಾಸನ
  (2) ಜಿನವಲ್ಲಭನ ಶಾಸನ
  (3) ಕೆರೆಸಂತೆ ಶಾಸನ
  (4) ತಳಂಗೆರೆ ಶಾಸನ
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


ಕೆಳಗಿನ ಕ್ರಿಯಾಪದವನ್ನು (ಪ್ರಶ್ನೆ ಸಂಖ್ಯೆ 87 ಮತ್ತು 88) ನಿಷೇದಾರ್ಥಕದಲ್ಲಿ ಬರೆಯಿರಿ.

87. ಬಂದನು
  (1) ಬರುವುದಿಲ್ಲ
  (2) ಬರನು
  (3) ಬಾರನು
  (4) ಬರಲಾರನು
ಸರಿ ಉತ್ತರ

(2) ಬರನು or (3) ಬಾರನು


88. ತಿನ್ನು
  (1) ತಿನ್ನನು
  (2) ತಿನ್ನುವುದಿಲ್ಲ
  (3) ತಿನ್ನರು
  (4) ತಿನ್ನೆನು
ಸರಿ ಉತ್ತರ

(1) ತಿನ್ನನು or (4) ತಿನ್ನೆನು


89. ‘ಭಕ್ತಿ ಭಂಡಾರಿ’ – ಎಂದು ಪ್ರಸಿದ್ದರಾದ ವಚನಕಾರರು ಯಾರು ?
  (1) ಅಲ್ಲಮಪ್ರಭು
  (2) ಬಸವಣ್ಣ
  (3) ಅಂಬಿಗರ ಚೌಡಯ್ಯ
  (4) ಸಿದ್ದರಾಮ
ಸರಿ ಉತ್ತರ

(2) ಬಸವಣ್ಣ


90. ಕುಮಾರವ್ಯಾಸನ ಕೃತಿ ಯಾವುದು ?
  (1) ಜೈಮಿನಿ ಭಾರತ
  (2) ತೊರವೆ ರಾಮಾಯಣ
  (3) ಕರ್ನಾಟಕ ಭಾರತ ಕಥಾಮಂಜರಿ
  (4) ಶ್ರೀ ರಾಮಾಯಣ ದರ್ಶನಂ
ಸರಿ ಉತ್ತರ

(3) ಕರ್ನಾಟಕ ಭಾರತ ಕಥಾಮಂಜರಿ


91. ಕರಕರಿಸು ಪದದ ಸಮಾನಾರ್ಥಕ ಪದ ___________
  (1) ಕಳವಳ
  (2) ಮಿತಿ ಮೀರಿ
  (3) ಊರುಗೋಲು
  (4) ಚಿಂತಿಸು
ಸರಿ ಉತ್ತರ

(4) ಚಿಂತಿಸು


92. ‘ನಜಭಜಜಂಜರಂ’ – ಇದು ಯಾವ ವೃತ್ತದ ಲಕ್ಷಣ ?
  (1) ಚಂಪಕಮಾಲೆ
  (2) ಮಹಾ ಸ್ರಗ್ಧರೆ
  (3) ಉತ್ಪಲ ಮಾಲೆ
  (4) ಶಾರ್ದೂಲವಿಕ್ರೀಡಿತ
ಸರಿ ಉತ್ತರ

(1) ಚಂಪಕಮಾಲೆ


93. ‘ಇವನೊಬ್ಬ’ – ಈ ಪದದಲ್ಲಿರುವ ಸಂಧಿ ಯಾವುದು ?
  (1) ಆಗಮ ಸಂಧಿ
  (2) ಲೋಪ ಸಂಧಿ
  (3) ಆದೇಶ ಸಂಧಿ
  (4) ಸವರ್ಣದೀರ್ಘ ಸಂಧಿ
ಸರಿ ಉತ್ತರ

(2) ಲೋಪ ಸಂಧಿ


94. ಉಣ್ಮು ಎಂದರೆ
  (1) ಹೊರಹೊಮ್ಮು
  (2) ಉಬ್ಬಿರುವ
  (3) ಉಂಟು
  (4) ಉಡು
ಸರಿ ಉತ್ತರ

(1) ಹೊರಹೊಮ್ಮು


95. ವಾರ್ಧಕ ಷಟ್ಪದಿಯ 3 ಮತ್ತು 6 ನೇ ಸಾಲಿನಲ್ಲಿರುವ ಮಾತ್ರೆಗಳ ಒಟ್ಟು ಸಂಖ್ಯೆ ಎಷ್ಟು ?
  (1) 28
  (2) 30
  (3) 32
  (4) 34
ಸರಿ ಉತ್ತರ

(3) 32


96. ‘ಬದುಕು’ ಬದಲಿಸಬಹುದು – ಇದು ಯಾರ ಕೃತಿ ?
  (1) ವೈದೇಹಿ
  (2) ನೇಮಿಚಂದ್ರ
  (3) ಮಾಲತಿ ಪಟ್ಟಣಶೆಟ್ಟಿ
  (4) ಜಿ.ಎಸ್. ಶಿವರುದ್ರಪ್ಪ
ಸರಿ ಉತ್ತರ

(2) ನೇಮಿಚಂದ್ರ


97. ‘ಮಾಡುವುದಕ್ಕೆ ದೃಢಮನಸ್ಸು ಬೇಕು ಚಾರಣ ಸಂಕಲ್ಪಶಕ್ತಿ’
 
A
B
C
D
E
  – ಈ ವಾಕ್ಯದ ಸರಿಯಾದ ರೂಪ.
  (1) ABCDE
  (2) BDEAC
  (3) DABEC
  (4) EABDC
ಸರಿ ಉತ್ತರ

(3) DABEC


98. ಮಗು ಹುಟ್ಟಿತು ಇದು
  (1) ಸಕರ್ಮಕ ಕ್ರಿಯಾಪದ
  (2) ಅಕರ್ಮಕ ಕ್ರಿಯಾಪದ
  (3) ಪೂರ್ಣ ಕ್ರಿಯಾಪದ
  (4) ಸಾಪೇಕ್ಷ ಕ್ರಿಯಾಪದ
ಸರಿ ಉತ್ತರ

(2) ಅಕರ್ಮಕ ಕ್ರಿಯಾಪದ


99. ಬಟ್ಟೆ – ಈ ಪದದ ನಾನಾರ್ಥಗಳು ಯಾವುವು ?
  (1) ವಸ್ತ್ರ ಮತ್ತು ಭೂಮಿ
  (2) ವಸ್ತ್ರ ಮತ್ತು ಸೂರ್ಯ
  (3) ವಸ್ತ್ರ ಮತ್ತು ಮರ
  (4) ವಸ್ತ್ರ ಮತ್ತು ದಾರಿ
ಸರಿ ಉತ್ತರ

(4) ವಸ್ತ್ರ ಮತ್ತು ದಾರಿ


100. ಕೆಳಗಿನವುಗಳಲ್ಲಿರುವ ಅನುಕರಣವಾಚಿ ಪದವನ್ನು ಗುರುತಿಸಿ.
  (1) ಊರೂರು
  (2) ಅಲ್ಲಲ್ಲಿ
  (3) ಸರಸರ
  (4) ಮರಗಿಡ
ಸರಿ ಉತ್ತರ

(3) ಸರಸರ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

Related Posts

FDA-2021 samanya kannada Question Paper

FDA-2019 samanya kannada Question Paper

FDA General Knowledge Question Paper-2021

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.