WhatsApp Group Join Now
Telegram Group Join Now

FDA General Knowledge Question Paper-2021

FDA-2021 Paper-III General Knowledge Questions with answers

ದಿನಾಂಕ 28.02.2021 ರಂದು ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಪ್ರಥಮ ದರ್ಜೆ ಸಹಾಯಕ [ಎಫ್.ಡಿ.ಎ.] ಸಾಮಾನ್ಯ ಜ್ಞಾನ ಪತ್ರಿಕೆ – III (ವಿಷಯ ಸಂಕೇತ: 385)ರ ಪ್ರಶ್ನೆಗಳನ್ನು ಉತ್ತರದೊಂದಿಗೆ ಇಲ್ಲಿ ನೀಡಲಾಗಿದೆ.

1.ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ, 2020 ಇದಕ್ಕೆ ಅನ್ವಯಿಸುವುದಿಲ್ಲ?
 (1)ಪ್ರಾಥಮಿಕ ಕೃಷಿ ಸಾಲ ಸಂಘಗಳು
 (2)ಕೃಷಿ ಅಭಿವೃದ್ಧಿಗಾಗಿ ದೀರ್ಘಕಾಲೀನ ಹಣಕಾಸು ನೆರವನ್ನು ಒದಗಿಸುವುದೇ ತಮ್ಮ ಪ್ರಾಥಮಿಕ ಉದ್ದೇಶ ಮತ್ತು ಪ್ರಧಾನ ವ್ಯವಹಾರವಾಗಿ ಮಾಡಿಕೊಂಡಿರುವ ಸಹಕಾರಿ ಸಂಘಗಳು.
 (3)(1) ಮತ್ತು (2) ಎರಡೂ
 (4)ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(3) (1) ಮತ್ತು (2) ಎರಡೂ


2.ಈ ಕೆಳಗಿನವುಗಳಲ್ಲಿ ಯಾವ ಮೂಲ ಧಾತು ನಮ್ಮ ಬ್ರಹ್ಮಾಂಡದಲ್ಲಿ ಅತ್ಯಂತ ಹೇರಳವಾಗಿ ದೊರೆಯುತ್ತದೆ ?
 (1)ಆಮ್ಲಜನಕ
 (2)ಹೈಡ್ರೋಜನ್
 (3)ಸಾರಜನಕ
 (4)ಹೀಲಿಯಂ
ಸರಿ ಉತ್ತರ

(2) ಹೈಡ್ರೋಜನ್


3.ಯಾವ ರಾಜ್ಯವು ‘‘ನಾನೂ ಕೂಡ ಡಿಜಿಟಲ್’’ ಎಂಬ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ವನ್ನು ಇತ್ತೀಚೆಗೆ ಜಾರಿಗೊಳಿಸಿದೆ ?
 (1)ತಮಿಳುನಾಡು
 (2)ಒಡಿಶಾ
 (3)ಕೇರಳ
 (4)ಕರ್ನಾಟಕ
ಸರಿ ಉತ್ತರ

(3) ಕೇರಳ


4.ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘‘ಉತ್ಕರ್ಷ್ 2022’’ ಯಾವುದನ್ನು ಉಲ್ಲೇಖಿಸುತ್ತದೆ ?
 (1)2022ರ ವೇಳೆಗೆ ಹೊಸ ಭಾರತವನ್ನು ನಿರ್ಮಿಸಲು ಎನ್ ಐ ಟಿ ಐ ಆಯೋಗ (NITI Aayog)ದ ಕಾರ್ಯತಂತ್ರ
 (2)2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾರ್ಗಸೂಚಿ
 (3)ದೇಶದಲ್ಲಿ ಸ್ಥೂಲ-ಆರ್ಥಿಕ ವಾತಾವರಣ ವನ್ನು ವಿಕಸಿಸಲು ಆರ್ಬಿಐ ನ ಮಧ್ಯಮ-ಅವಧಿಯ ಕಾರ್ಯತಂತ್ರದ ಚೌಕಟ್ಟು
 (4)ರೈಲ್ವೆ ತನ್ನ ಮೇಲ್/ಎಕ್ಸ್ಪ್ರೆಸ್ ರೈಲುಗಳ ನವೀಕರಣದ ಭಾಗವಾಗಿ ರೇಕ್ ಗಳನ್ನು ಅಭಿವೃದ್ಧಿಪಡಿಸುವ ಯೋಜನೆ
ಸರಿ ಉತ್ತರ

(3) ದೇಶದಲ್ಲಿ ಸ್ಥೂಲ-ಆರ್ಥಿಕ ವಾತಾವರಣ ವನ್ನು ವಿಕಸಿಸಲು ಆರ್ಬಿಐ ನ ಮಧ್ಯಮ-ಅವಧಿಯ ಕಾರ್ಯತಂತ್ರದ ಚೌಕಟ್ಟು


5. ಆಸ್ಪರ್ಟೆನ್ ಸಕ್ಕರೆಗಿಂತ ಸಿಹಿಯಾದುದು. ಇದು _________.
 (1)ಡೈಪೆಪ್ಟೈಡ್
 (2)ಡೈಸ್ಯಾಕರೈಡ್
 (3)ಮೊನೋಸ್ಯಾಕರೈಡ್
 (4)ಅಮೈನೊ ಆಮ್ಲ
ಸರಿ ಉತ್ತರ

(1) ಡೈಪೆಪ್ಟೈಡ್


6.ಭಾರತದ ಅಟಾರ್ನಿ ಜನರಲ್ ಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಸರಿಯಾದ ಹೇಳಿಕೆ ಯಾವುದು ?
 A.ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಮಾತ್ರ ವಾದಿಸುವುದು.
 B.ಭಾರತ ಸರ್ಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಎರಡರಲ್ಲಿಯೂ ವಾದಿಸುವುದು.
 C.ಇವರು ಭಾರತದಾದ್ಯಂತ ಯಾವುದೇ ನ್ಯಾಯಾಲಯದಲ್ಲಿ ಹಾಜರಾಗಬಹುದು.
 D.ಇವರು ಪೂರ್ಣಕಾಲಿಕ ಕಾನೂನು ಸಲಹೆಗಾರರಾಗಿರುತ್ತಾರೆ.
 (1)A, B ಮತ್ತು C ಮಾತ್ರ
 (2)A, B, C ಮತ್ತು D
 (3)B, C ಮತ್ತು D
 (4)A ಮತ್ತು B ಮಾತ್ರ
ಸರಿ ಉತ್ತರ

(1) A, B ಮತ್ತು C ಮಾತ್ರ


7.ಪಟ್ಟಿ-I ನ್ನು ಪಟ್ಟಿ-II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆಯ್ಕೆ ಮಾಡಿ.
  ಪಟ್ಟಿ-I  ಪಟ್ಟಿ-II
 A.ವರ್ಗಾವಣೆ ಬೇಸಾಯi.ಪಿಗ್ಮಿಗಳು
 B.ಪಶುಸಾಕಾಣಿಕೆii.ಎಸ್ಕಿಮೋ
 C.ಬೇಟೆಗಾರರು ಮತ್ತು ಆಹಾರ ಸಂಗ್ರಹಕರುiii.ಕಿರ್ಗೀಜರು
 D.ಬೇಟೆಗಾರರುiv.ರೆಂಗ್ಯಾಸ್
 ಸಂಕೇಗಳು
  ABCD
 (1)iviiiiii
 (2)iiiiiiiv
 (3)iiiiiiiv
 (4)iviiiiii
ಸರಿ ಉತ್ತರ

(1) iv iii i ii


8.ಪಾಲಿಪೆಪ್ಟೈಡ್ ಗಳು _________ ನಿಂದ ಮಾಡಲ್ಪಟ್ಟ ರೇಖೀಯ ಪಾಲಿಮರ್ ಗಳಾಗಿವೆ.
 (1)ನ್ಯೂಕ್ಲಿಯೋಟೈಡ್ ಗಳು
 (2)ಕೊಬ್ಬಿನಾಮ್ಲಗಳು
 (3)ಸಕ್ಕರೆಗಳು
 (4)ಅಮೈನೋ ಆಮ್ಲಗಳು
ಸರಿ ಉತ್ತರ

(4) ಅಮೈನೋ ಆಮ್ಲಗಳು


9.ದ್ಯುತಿಸಂಶ್ಲೇಷಣೆಯ ಉಪ ಉತ್ಪನ್ನಗಳಲ್ಲಿ ಪ್ರಮುಖವಾದ ವಾತಾವರಣದ ಉಪ ಉತ್ಪನ್ನ _________.
 (1)ಆಮ್ಲಜನಕ
 (2)ಸಾರಜನಕ
 (3)ನೀರು
 (4)ಇಂಗಾಲದ ಡೈಆಕ್ಸೆಡ್
ಸರಿ ಉತ್ತರ

(1) ಆಮ್ಲಜನಕ


10.‘ಅಟಲ್ ಸುರಂಗ’ವು ಒಂದು ಹೆದ್ದಾರಿ ಮಾರ್ಗವಾಗಿದ್ದು, ಇದನ್ನು _________ ರಡಿ ನಿರ್ಮಿಸಲಾಗಿದೆ.
 (1)ನಾಥು ಲಾ ಪಾಸ್
 (2)ಖಾರ್ದುಂಗ್ ಲಾ ಪಾಸ್
 (3)ರೋಹ್ತಾಂಗ್ ಲಾ ಪಾಸ್
 (4)ಜೋಜಿ ಲಾ ಪಾಸ್
ಸರಿ ಉತ್ತರ

(3) ರೋಹ್ತಾಂಗ್ ಲಾ ಪಾಸ್


11.ಯಾವ ಪತ್ರಕರ್ತರಿಗೆ 2019-20 ರ ಪೆನ್ ಗೌರಿ ಲಂಕೇಶ್ ಪ್ರಶಸ್ತಿಯನ್ನು ನೀಡಲಾಗಿದೆ?
 (1)ಪ್ರಣಯ್ ರಾಯ್
 (2)ರವೀಶ್ ಕುಮಾರ್
 (3)ಯೂಸುಫ್ ಜಮೀಲ್
 (4)ಎನ್. ರಾಮ್
ಸರಿ ಉತ್ತರ

(3) ಯೂಸುಫ್ ಜಮೀಲ್


12._________ ನ ಕುಂದುಕೊರತೆಗಳನ್ನು ಬಗೆಹರಿಸಲು ಪ್ರಧಾನ ಮಂತ್ರಿಗಳು ‘‘ಚಾಂಪಿಯನ್ಸ್’’ ಪೋರ್ಟಲ್ ನನ್ನು ಪ್ರಾರಂಭಿಸಿದರು.
 (1)ಶಿಕ್ಷಣ ವಲಯ
 (2)ಆರೋಗ್ಯ ಪಾಲನಾ ವಲಯ
 (3)ಕೃಷಿ ವಲಯ
 (4)ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವಲಯ (MSME)
ಸರಿ ಉತ್ತರ

(4) ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವಲಯ (MSME)


13.ಈ ಕೆಳಗಿನವುಗಳಲ್ಲಿ ಭಾರತದ ಅತಿ ಉದ್ದದ ಎಕ್ಸ್ಪ್ರೆಸ್ ದಾರಿ ಯಾವುದು ?
 (1)ದೆಹಲಿ – ಮೀರತ್ ಎಕ್ಸ್ಪ್ರೆಸ್ ದಾರಿ
 (2)ಯಮುನಾ ಎಕ್ಸ್ಪ್ರೆಸ್ ದಾರಿ
 (3)ಆಗ್ರಾ – ಲಕ್ನೋ ಎಕ್ಸ್ಪ್ರೆಸ್ ದಾರಿ
 (4)ಹಿಮಾಲಯನ್ ಎಕ್ಸ್ಪ್ರೆಸ್ ದಾರಿ
ಸರಿ ಉತ್ತರ

(3) ಆಗ್ರಾ – ಲಕ್ನೋ ಎಕ್ಸ್ಪ್ರೆಸ್ ದಾರಿ


14.ಮಾನವ ಶರೀರದಲ್ಲಿ ನೀರಿನ ಮಟ್ಟವನ್ನು ಹಾರ್ಮೋನ್ ನಿಯಂತ್ರಿಸುತ್ತದೆ.
 (1)ಎಪಿನೆಫ್ರಿನ್ (Epinephrine)
 (2)ಎಸಿಟಿಎಚ್ (ACTH)
 (3)ಎಡಿಎಚ್ (ADH)
 (4)ಎಫ್ಎಸ್ಎಚ್ (FSH)
ಸರಿ ಉತ್ತರ

(3) ಎಡಿಎಚ್ (ADH)


15.ಅಕ್ಕಿಗೆ ಹೊಳಪು ಕೊಡುವುದರಿಂದ ಅಥವಾ ಅಕ್ಕಿಯನ್ನು ಪದೇ ಪದೇ ತೊಳೆಯುವುದರಿಂದ _________ ವಿಟಮಿನ್ ಅನ್ನು ಕಳೆದುಕೊಳ್ಳುತ್ತದೆ.
 (1)ಬಯೋಟಿನ್
 (2)ಥೈಯಾಮಿನ್
 (3)ರೈಬೋಫ್ಲೇವಿನ್
 (4)ನಿಯಾಸಿನ್
ಸರಿ ಉತ್ತರ

(2) ಥೈಯಾಮಿನ್


16.ಮಹಮ್ಮದ್ ಬಿನ್ ತುಘಲಕ್ _________ ನನ್ನು ನ್ಯಾಯಾಧೀಶನನ್ನಾಗಿ ನೇಮಿಸಿದ್ದನು.
 (1)ಅಲ್ ಮಸೂದಿ
 (2)ಮಾರ್ಕೊ ಪೋಲೊ
 (3)ಇಬ್ನ್ ಬತುತಾ
 (4)ಅಲ್ ಇಸ್ತಾಕ್ರಿ
ಸರಿ ಉತ್ತರ

(3) ಇಬ್ನ್ ಬತುತಾ


17.ಜರೋಕ – ಇ – ದರ್ಶನ್ ಯಾರ ಚಿಂತನೆಯ ಕೂಸಾಗಿತ್ತು ?
 (1)ಔರಂಗಜೇಬ್
 (2)ಬಾಬರ್
 (3)ಜಹಾಂಗೀರ್
 (4)ಅಕ್ಬರ್
ಸರಿ ಉತ್ತರ

(4) ಅಕ್ಬರ್


18.ಕಬೀರನ ಮರಣದ ತರುವಾಯ ಆತನ ಗೋರಿಯನ್ನು ಎಲ್ಲಿ ಕಟ್ಟಲಾಯಿತು ?
 (1)ಬಸ್ತಿ
 (2)ವಾರಣಾಸಿ
 (3)ಗೋರಖ್ಪುರ
 (4)ಮಘರ್
ಸರಿ ಉತ್ತರ

(4) ಮಘರ್


19.ಭಾರತಕ್ಕೆ ರೋಮನ್ನಿಂದ ರಫ್ತಾಗುತ್ತಿದ್ದ ವಸ್ತುಗಳ ಪಟ್ಟಿಯಲ್ಲಿ ಕೆಳಗಿನ ಯಾವುದು ಒಳಗೊಂಡಿರಲಿಲ್ಲ ?
 (1)ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು
 (2)ದ್ರಾಕ್ಷಾರಸ ಜಾಡಿ
 (3)ಒಣ ಹಣ್ಣುಗಳು
 (4)ಅರ್ರೆಟೈನ್ ಮಡಕೆಗಳು
ಸರಿ ಉತ್ತರ

(3) ಒಣ ಹಣ್ಣುಗಳು


20.ತೈಲಗಳು ಮತ್ತು ಕೊಬ್ಬಿನ ತೀವ್ರತೆಯು _________ ರಿಂದ ಉಂಟಾಗುತ್ತದೆ.
 (1)ಟ್ರೈಗ್ಲಿಸರೈಡ್ ಗಳ ಜಲವಿಚೇದನೆ
 (2)ಅಪರ್ಯಾಪ್ತ ಗ್ಲಿಸರೈಡ್ಗಳ ಆಕ್ಸಿಡೀಕರಣ
 (3)(1) ಮತ್ತು (2) ಎರಡೂ
 (4)ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ

(3) (1) ಮತ್ತು (2) ಎರಡೂ


21.ಬೌದ್ಧ ಧರ್ಮವು _________ ಜೀವನಕ್ಕೆ ಹೆಚ್ಚು ಮಹತ್ವವನ್ನು ನೀಡಿತ್ತು.
 (1)ಅರಣ್ಯ
 (2)ನಗರ
 (3)ಗ್ರಾಮೀಣ
 (4)ಸಮದರ್ಶಿ
ಸರಿ ಉತ್ತರ

(2) ನಗರ or (4) ಸಮದರ್ಶಿ


22.ಬೆನ್ಜೀನ್ ರಿಂಗ್ ಹೊಂದಿರುವ ಅಮೈನೊ ಆಮ್ಲಕ್ಕೆ _________ ಉದಾಹರಣೆಯಾಗಿದೆ.
 (1)ಸೆರೈನ್
 (2)ಟೈರೋಸಿನ್
 (3)ಅಲನೈನ್
 (4)ಲೈಸಿನ್
ಸರಿ ಉತ್ತರ

(2) ಟೈರೋಸಿನ್


23.ನಾಲ್ಕನೆಯ ಆಂಗ್ಲೋ – ಮೈಸೂರು ಯುದ್ಧ ನಡೆದಾಗ ಯಾರು ಬ್ರಿಟೀಷ್ ಗವರ್ನರ್ ಜನರಲ್ ಆಗಿದ್ದರು?
 (1)ಲಾರ್ಡ್ ಡಾಲ್ ಹೌಸಿ
 (2)ಲಾರ್ಡ್ ವಾರೆನ್ ಹೇಸ್ಟಿಂಗ್ಸ್
 (3)ಲಾರ್ಡ್ ಕಾರ್ನ್ವಾಲೀಸ್
 (4)ಲಾರ್ಡ್ ವೆಲ್ಲೆಸ್ಲಿ
ಸರಿ ಉತ್ತರ

(4) ಲಾರ್ಡ್ ವೆಲ್ಲೆಸ್ಲಿ


24.‘ವಿಜಯನಗರ : ದಿ ಒರಿಜಿನ್ ಆಫ್ ದಿ ಸಿಟಿ ಅಂಡ್ ದಿ ಎಂಪೈರ್’ ಪ್ರಖ್ಯಾತ ಕೃತಿಯ ಲೇಖಕರು _________
 (1)ಬರ್ಟನ್ ಸ್ಟೈನ್
 (2)ವೆಂಕಟರಮಣಯ್ಯ ಎನ್.
 (3)ಐಯ್ಯಂಗಾರ್ ಎಸ್.ಕೆ.
 (4)ವೆಂಕಟರತ್ನಂ ಎ.ವಿ.
ಸರಿ ಉತ್ತರ

(2) ವೆಂಕಟರಮಣಯ್ಯ ಎನ್.


25.ಪೂರ್ವ ಭಾರತದಲ್ಲಿ ಬ್ರಿಟಿಷರು ಮೊದಲ ಫ್ಯಾಕ್ಟರಿಯನ್ನು ತೆರೆದಿದ್ದು ಯಾವ ಸ್ಥಳದಲ್ಲಿ?
 (1)ಅಸ್ಸಾಂ
 (2)ಬಂಗಾಳ
 (3)ಬಿಹಾರ
 (4)ಒರಿಸ್ಸಾ
ಸರಿ ಉತ್ತರ

(4) ಒರಿಸ್ಸಾ


26.‘‘ಧರ್ಮ ಇಲ್ಲ, ಜಾತಿ ಇಲ್ಲ ಮತ್ತು ಮಾನವ ಕುಲಕ್ಕೆ ದೇವರಿಲ್ಲ’’ ಎಂಬ ತಮ್ಮ ಉದ್ದೇಶವನ್ನು ಯಾರು ಘೋಷಿಸಿದರು ?
 (1)ಶದರನ್ ಅಯ್ಯಪ್ಪನ್
 (2)ಶ್ರೀ ನಾರಾಯಣ ಗುರು
 (3)ರಾಮಸ್ವಾಮಿ ನಾಯ್ಕರ್
 (4)ಜ್ಯೋತಿಬಾ ಫುಲೆ
ಸರಿ ಉತ್ತರ

(1) ಶದರನ್ ಅಯ್ಯಪ್ಪನ್


27.ಡೆಟಾಲ್ ನ ರಾಸಾಯನಿಕ ಹೆಸರು _________
 (1)ಕ್ಲೋರೊಕ್ಸೈಲಿನಾಲ್
 (2)ಫಿನಾಲ್ ನ ದುರ್ಬಲ ದ್ರಾವಣ
 (3)ಸಲ್ಫಾನಿಲಾಮೈಡ್
 (4)ಆರ್ಥೋ – ಹೈಡ್ರಾಕ್ಸಿ ಬೆನ್ಜೋಯಿಕ್ ಆಮ್ಲ
ಸರಿ ಉತ್ತರ

(1) ಕ್ಲೋರೊಕ್ಸೈಲಿನಾಲ್


28.ಪೋರ್ಚುಗೀಸರು ‘ಕಾಳುಮೆಣಸಿನ ರಾಣಿ’ ಎಂದು ಈ ಕೆಳಗಿನ ಯಾವ ರಾಣಿಯನ್ನು ಕರೆಯುತ್ತಿದ್ದರು ?
 (1)ರಾಣಿ ಚನ್ನಮ್ಮ
 (2)ರಾಣಿ ಅಬ್ಬಕ್ಕ
 (3)ರಾಣಿ ಚನ್ನಭೈರದೇವಿ
 (4)ರಾಣಿ ರುದ್ರಮಾದೇವಿ
ಸರಿ ಉತ್ತರ

(3) ರಾಣಿ ಚನ್ನಭೈರದೇವಿ


29.ಪಟ್ಟಿ-I ನ್ನು ಪಟ್ಟಿ-II ರೊಂದಿಗೆ ಹೊಂದಿಸಿ, ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ :
  ಪಟ್ಟಿ-I ಸಾಗರ  ಪಟ್ಟಿ-II ಆಳವಾದ ಕಂದರ
 A.ಉತ್ತರ ಪೆಸಿಫಿಕ್ ಸಾಗರi.ಟೊಂಗ
 B.ಅಟ್ಲಾಂಟಿಕ್ ಸಾಗರii.ಜಾವಾ ಕಂದರ
 C.ಹಿಂದೂ ಮಹಾಸಾಗರiii.ಮೆರಿಯಾನ ಕಂದರ
 D.ದಕ್ಷಿಣ ಪೆಸಿಫಿಕ್iv.ಪ್ಯುಯೆರ್ಟೊ ರಿಕೊ ಕಂದರ
 ಸಂಕೇಗಳು
  ABCD
 (1)iviiiiii
 (2)iiiiiiiv
 (3)iiiiviii
 (4)iiiiviii
ಸರಿ ಉತ್ತರ

(4) iii iv ii i


30.ಪಟ್ಟಿ-I ನ್ನು ಪಟ್ಟಿ-II ರೊಂದಿಗೆ ಹೊಂದಿಸಿ, ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯುತ್ತರ ಆರಿಸಿ :
  ಪಟ್ಟಿ-I  ಪಟ್ಟಿ-II
 A.ಪ್ರಜಾಪ್ರತಿನಿಧಿ ಸಭೆi.ಸರ್. ಎಂ.ವಿಶ್ವೇಶ್ವರಯ್ಯ
 B.ಮೈಸೂರು ಸಿವಿಲ್ ಸರ್ವಿಸ್ ಪರೀಕ್ಷೆii.ಕೆ. ಶೇಷಾದ್ರಿ ಅಯ್ಯರ್
 C.ಭದ್ರಾಾವತಿಯಲ್ಲಿ ಸಿಮೆಂಟ್ ಮತ್ತು ಕಾಗದ ಕಾರ್ಖಾನೆiii.ರಂಗಾಚಾರ್ಲು
 D.ಬೆಂಗಳೂರಿನ ಸರ್ಕಾರಿ ಸಾಬೂನು ಕಾರ್ಖಾನೆ ಸ್ಥಾಪನೆiv.ಮಿರ್ಜಾ ಇಸ್ಮಾಯಿಲ್
 ಸಂಕೇಗಳು
  ABCD
 (1)iviiiiii
 (2)iiiiiiiv
 (3)iiiiiivi
 (4)iviiiiii
ಸರಿ ಉತ್ತರ

(2) iii ii i iv


31.ಕೆಳಗಿನವರುಗಳಲ್ಲಿ ಯಾರು ಮಂತ್ರಿಮಂಡಲದ ಅಥವಾ ಸಂಸತ್ತಿನ ಸದಸ್ಯರಾಗಿರದಿದ್ದರೂ, ಸಂಸತ್ತಿನಲ್ಲಿ ಅಥವಾ ಸಂಸದೀಯ ಸಮಿತಿಗಳಲ್ಲಿ ಮಾತನಾಡುವ ಹಕ್ಕು ಇದೆ ?
 (1)ಭಾರತದ ಮುಖ್ಯ ನ್ಯಾಯಾಧೀಶರು
 (2)ಆರ್.ಬಿ.ಐ. ನ ಗವರ್ನರ್
 (3)ಯು.ಪಿ.ಎಸ್.ಸಿ. ಯ ಅಧ್ಯಕ್ಷರು
 (4)ಭಾರತದ ಅಟಾರ್ನಿ ಜನರಲ್
ಸರಿ ಉತ್ತರ

(4) ಭಾರತದ ಅಟಾರ್ನಿ ಜನರಲ್


32.ಒಂದನೇ ಚಂದ್ರಗುಪ್ತನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
 (1)ಇವನು ‘ವಿಕ್ರಮಾದಿತ್ಯ’ ಎಂಬ ಬಿರುದು ಪಡೆದಿದ್ದನು.
 (2)ಒಂದನೇ ಚಂದ್ರಗುಪ್ತನು ನೇಪಾಳಕ್ಕೆ ಸೇರಿದ ಲಿಚ್ಛವಿ ರಾಜಕುಮಾರಿಯನ್ನು ಮದುವೆಯಾದನು.
 (3)ಗುಪ್ತರು ವೈಶ್ಯರಾಗಿದ್ದಿರಬಹುದಾದ್ದರಿಂದ ಕ್ಷತ್ರಿಯ ಕುಟುಂಬದೊಂದಿಗೆ ವಿವಾಹ ಬಾಂಧವ್ಯ ಅವರಿಗೆ ಪ್ರತಿಷ್ಠೆಯನ್ನು ನೀಡಿತು.
 (4)ಇವನು ಕ್ರಿ.ಶ. 319-320 ರಲ್ಲಿ ಗುಪ್ತಶಕೆಯನ್ನು ಆರಂಭಿಸಿದನು.
ಸರಿ ಉತ್ತರ

(1) ಇವನು ‘ವಿಕ್ರಮಾದಿತ್ಯ’ ಎಂಬ ಬಿರುದು ಪಡೆದಿದ್ದನು.


33.ಸಹಾಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ದೇಶೀಯ ರಾಜ್ಯಗಳನ್ನು ಕಾಲಾನುಕ್ರಮದಲ್ಲಿ
 A.ಮರಾಠರು
 B.ಹೈದರಾಬಾದ್
 C.ಔದ್ (ಅವದ್)
 D.ಮೈಸೂರು
 (1)A B C D
 (2)D C A B
 (3)B D C A
 (4)B D A C
ಸರಿ ಉತ್ತರ

(3) B D C A


34.ತಂಬಾಕಿನಲ್ಲಿರುವ ನಿಕೋಟಿನ್ ಒಂದು _________
 (1)ಪ್ರೊಟೀನ್
 (2)ಆಲ್ಕಲಾಯ್ಡ್
 (3)ಟೆರ್ಪೀನ್
 (4)ಸ್ಟಿರಾಯ್ಡ್
ಸರಿ ಉತ್ತರ

(2) ಆಲ್ಕಲಾಯ್ಡ್


35.ಕೆಳಗಿನ ಯಾವ ದೇಶದ ಸಂವಿಧಾನದಿಂದ ಭಾರತದ ರಾಷ್ಟ್ರಪತಿಯನ್ನು ಪದಚ್ಯುತಿ ಗೊಳಿಸುವ ವಿಧಾನವನ್ನು ಅಳವಡಿಸಿ ಕೊಳ್ಳಲಾಗಿದೆ ?
 (1)ಕೆನಡಾ
 (2)ಫ್ರಾನ್ಸ್
 (3)ಬ್ರಿಟನ್
 (4)ಯು.ಎಸ್.ಎ. (ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ)
ಸರಿ ಉತ್ತರ

(4) ಯು.ಎಸ್.ಎ. (ಯುನೈಟೆಡ್ ಸ್ಟೇಟ್್ಿ ಆಫ್ ಅಮೇರಿಕಾ)


36.ರಾಯಭಾರಿಗಳು _________ರವರಿಂದ ನೇಮಿಸಲ್ಪಡುತ್ತಾರೆ.
 (1)ಕ್ಯಾಬಿನೆಟ್
 (2)ವಿದೇಶಾಂಗ ಮಂತ್ರಿ
 (3)ಭಾರತದ ರಾಷ್ಟ್ರಪತಿ
 (4)ಪ್ರಧಾನವುಂತ್ರಿ
ಸರಿ ಉತ್ತರ

(3) ಭಾರತದ ರಾಷ್ಟ್ರಪತಿ


37.ಸಂಸದೀಯ ಕಾರ್ಯಾಂಗ ಪದ್ದತಿಯಲ್ಲಿ _________ ಕಾರ್ಯಾಂಗಗಳು ಇರುತ್ತವೆ.
 (1)ಬಹುವ್ಯಕ್ತಿ
 (2)ನಾಮಮಾತ್ರ
 (3)ನಾಮಮಾತ್ರ ಹಾಗೂ ನೈಜಕಾರ್ಯಾಂಗ
 (4)ಏಕವ್ಯಕ್ತಿ
ಸರಿ ಉತ್ತರ

(3) ನಾಮಮಾತ್ರ ಹಾಗೂ ನೈಜಕಾರ್ಯಾಂಗ


38.ರಾಜ್ಯದಲ್ಲಿ ಅಧೀನ ನ್ಯಾಯಾಲಯಗಳ ಮೇಲ್ವಿಚಾರಣೆಯನ್ನು ಯಾರು ಮಾಡುತ್ತಾರೆ ?
 (1)ರಾಜ್ಯಪಾಲ
 (2)ಕಾನೂನು ಮಂತ್ರಿ
 (3)ಸುಪ್ರೀಂ ಕೋರ್ಟ್
 (4)ಹೈಕೋರ್ಟ್
ಸರಿ ಉತ್ತರ

(4) ಹೈಕೋರ್ಟ್


39.ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಚೇರ್ಮನ್ (ಅಧ್ಯಕ್ಷರು) ಯಾರು ?
 (1)ಪ್ರಧಾನಮಂತ್ರಿ
 (2)ರಾಜ್ಯಪಾಲು
 (3)ರಾಷ್ಟ್ರಪತಿ
 (4)ಉಪರಾಷ್ಟ್ರಪತಿ
ಸರಿ ಉತ್ತರ

(1) ಪ್ರಧಾನಮಂತ್ರಿ


40.‘ರಾಜಕೀಯ ಸಮಾನತೆ’ ಎಂದರೆ
 (1)ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕುಗಳನ್ನು ಕೊಡುವುದು.
 (2)ಪ್ರತಿಯೊಬ್ಬ ನಾಗರಿಕನಿಗೆ ರಾಜಕೀಯ ಶಿಕ್ಷಣ ಕೊಡುವುದು.
 (3)ಪ್ರತಿಯೊಬ್ಬ ನಾಗರಿಕನಿಗೆ ಸರದಿಯಲ್ಲಿ ಸರ್ಕಾರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದು.
 (4)ಪ್ರತಿಯೊಬ್ಬನೂ ಯಾವುದಾದರೂ ರಾಜಕೀಯ ಪಕ್ಷದಲ್ಲಿ ಸದಸ್ಯತ್ವ ಹೊಂದುವುದು.
ಸರಿ ಉತ್ತರ

(1) ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕುಗಳನ್ನು ಕೊಡುವುದು.


41.ಸಂವಿಧಾನ ರಚನಾ ಸಮಿತಿಯ ಬೇಡಿಕೆಯನ್ನು ಮೊಟ್ಟಮೊದಲು ವ್ಯಕ್ತಪಡಿಸಿದವರು _________
 (1)1922 ರಲ್ಲಿ ಮಹಾತ್ಮ ಗಾಂಧೀಜಿ
 (2)1938 ರಲ್ಲಿ ಜವಹರಲಾಲ್ ನೆಹರು
 (3)1934 ರಲ್ಲಿ ಎಂ.ಎಫ್. ರಾಯ್
 (4)1936 ರಲ್ಲಿ ಕಾಂಗ್ರೆಸ್ ಪಕ್ಷ
ಸರಿ ಉತ್ತರ

(1) 1922 ರಲ್ಲಿ ಮಹಾತ್ಮ ಗಾಂಧೀಜಿ


42.ಭಾರತದ ಸಂವಿಧಾನ ರಚನೆಗೆ, ಸಂವಿಧಾನ ರಚನಾ ಸಮಿತಿ ತೆಗೆದುಕೊಂಡ ಕಾಲಾವಧಿ ಎಷ್ಟು?
 (1)2 ವರ್ಷಗಳು, 10 ತಿಂಗಳು, 12 ದಿನಗಳು
 (2)3 ವರ್ಷಗಳು, 11 ತಿಂಗಳು, 18 ದಿನಗಳು
 (3)2 ವರ್ಷಗಳು, 11 ತಿಂಗಳು, 18 ದಿನಗಳು
 (4)4 ವರ್ಷಗಳು, 11 ತಿಂಗಳು, 12 ದಿನಗಳು
ಸರಿ ಉತ್ತರ

(3) 2 ವರ್ಷಗಳು, 11 ತಿಂಗಳು, 18 ದಿನಗಳು


43.ಈ ಕೆಳಗಿನ ಜೋಡಿಗಳಲ್ಲಿ ಯಾವುದು ಸರಿಯಾಗಿ ಹೊಂದುತ್ತದೆ ?
 (1)ಡಾರ್ಜಿಲಿಂಗ್ : ಉತ್ತರಾಖಂಡ್
 (2)ಯಾನಮ್ : ಪಾಂಡಿಚೇರಿ
 (3)ಅಮರಾವತಿ : ತೆಲಂಗಾಣ
 (4)ಬಿಕಾನೆರ್ : ಗುಜರಾತ್
ಸರಿ ಉತ್ತರ

(2) ಯಾನಮ್ : ಪಾಂಡಿಚೇರಿ


44.ನರ್ಮದಾ ನದಿ ಪಶ್ಚಿಮಕ್ಕೆ ಹರಿಯುತ್ತದೆ, ಆದರೆ ಹೆಚ್ಚಿನ ದೊಡ್ಡ ಪೆನೆನ್ಸುಲಾರ್ ನದಿಗಳು ಪೂರ್ವದ ಕಡೆ ಹರಿಯುತ್ತವೆ. ಏಕೆ ?
 A.ಇದು ನೀಳವಾದ ಸೀಳು ಕಣಿವೆಯ ಮೂಲಕ ಹರಿಯುತ್ತದೆ.
 B.ಇದು ಸಾತ್ಪುರ ಮತ್ತು ಅಜಂತಾ ನಡುವೆ ಹರಿಯುತ್ತದೆ.
 C.ದಕ್ಷಿಣದ ಕಡೆ ಭೂಮಿಯ, ಇಳಿಜಾರಿನಿಂದಾಗಿ
ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರವನ್ನು ಆರಿಸಿ :
 (1)A ಮಾತ್ರ
 (2)B ಮತ್ತು C
 (3)A ಮತ್ತು C
 (4)ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ

(1) A ಮಾತ್ರ


45.ಹಸನ್ ನಿಜಾಮಿ ಬರೆದ ಕೃತಿಯ ಹೆಸರು _________
 (1)ತಾರೀಕ್ – ಇ – ಫಿರೋಜ್ ಷಾಹಿ
 (2)ತಾಜುಲ್ ಮಾಸಿರ್
 (3)ತಾರೀಕ್ – ಇ- ಬೈಹಾಕಿ
 (4)ತಾರೀಕ್ – ಇ – ಮಸೂದಿ
ಸರಿ ಉತ್ತರ

(2) ತಾಜುಲ್ ಮಾಸಿರ್


46.ಋತುಕಾಲಿಕ ಹಿಮ್ಮುಖವು ಈ ಗಾಳಿಯ ಲಕ್ಷಣವಾಗಿದೆ _________
 (1)ಸಮಭಾಜಕವೃತ್ತ ವಾಯುಗುಣ
 (2)ಮೆಡಿಟರೇನಿಯನ್ ವಾಯುಗುಣ
 (3)ಮಾನ್ಸೂನ್ ವಾಯುಗುಣ
 (4)ಇವುಗಳಲ್ಲಿ ಎಲ್ಲವೂ
ಸರಿ ಉತ್ತರ

(3) ಮಾನ್ಸೂನ್ ವಾಯುಗುಣ


47.ಖಂಡಾವರಣ ಪ್ರದೇಶಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ ?
 (1)ಅವು ಹೆಚ್ಚು ಮೀನುಗಾರಿಕಾ ಪ್ರದೇಶವಾಗಿದೆ.
 (2)ಅವರಣವು ಭೂ ಫಲಕಗಳ ಗಡಿಗಳಿಗೆ ಹತ್ತಿರದಲ್ಲಿ ಇರುವುದಿಲ್ಲ.
 (3)ಅವು ಅಧಿಕವಾದ ಕಣಗಳಿಂದ ಕೂಡಿದೆ.
 (4)ಅವು ಭೂಖಂಡಗಳ ಇಳಿಜಾರಿನ ಕಡೆಗೆ ಬಾಗಿವೆ.
ಸರಿ ಉತ್ತರ

(2) ಅವರಣವು ಭೂ ಫಲಕಗಳ ಗಡಿಗಳಿಗೆ ಹತ್ತಿರದಲ್ಲಿ ಇರುವುದಿಲ್ಲ.


48.ಋತುವಿನಿಂದ ಋತುವಿಗೆ ಹಗಲು ಮತ್ತು ರಾತ್ರಿಯ ಅವಧಿಯಲ್ಲಿನ ವ್ಯತ್ಯಾಸಗಳಿಗೆ ಕಾರಣ _________
 (1)ಭೂ ಅಕ್ಷದ ಓಲುವಿಕೆಯ ಪರಿಭ್ರಮಣೆ (revolution)
 (2)ಭೂಮಿಯ ಅಕ್ಷಭ್ರಮಣ
 (3)ಅಂಡಾಕಾರದ ಪಥದಲ್ಲಿ ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ
 (4)ಒಂದು ಸ್ಥಳದ ಅಕ್ಷಾಂಶಿಕ ಸ್ಥಾನ
ಸರಿ ಉತ್ತರ

(1) ಭೂ ಅಕ್ಷದ ಓಲುವಿಕೆಯ ಪರಿಭ್ರಮಣೆ (revolution)


49.ಇವುಗಳಲ್ಲಿ ಯಾವುದು ಸಾಂಪ್ರದಾಯಕ ಸೀರೆ/ಬಟ್ಟೆಗಳನ್ನು ಉತ್ಪಾದಿಸಲು ಪ್ರಸಿದ್ಧವಾಗಿವೆ?
 A.ರಾಯಪುರ್
 B.ಮೊಳಕಾಲ್ಮೂರು
 C.ಕಂಚಿಪುರಂ
 D.ಅಮರಾವತಿ
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿ ಉತ್ತರ ಆರಿಸಿ.
 (1)A, C ಮತ್ತು D
 (2)A ಮತ್ತು B ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(3) B ಮತ್ತು C ಮಾತ್ರ


50.ಟರ್ಕಿಯು _________ ಗಳ ನಡುವೆ ಸ್ಥಿತವಾಗಿದೆ.
 (1)ಅಕ್ವಬ ಕೊಲ್ಲಿ ಮತ್ತು ಮೃತ ಸಮುದ್ರ
 (2)ಕಪ್ಪು ಸಮುದ್ರ ಮತ್ತು ಕ್ಯಾಸ್ಪಿಯನ್ ಸಮುದ್ರ
 (3)ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ
 (4)ಸುಯೇಜ್ ಕೊಲ್ಲಿ ಮತ್ತು ಮೆಡಿಟರೇನಿಯನ್ ಸಮುದ್ರ
ಸರಿ ಉತ್ತರ

(3) ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ


51.ಪನಾಮಾ ಕಾಲುವೆಯಿಂದ ಈ ಕೆಳಗಿನ ಯಾವ ಎರಡು ಖಂಡಗಳು ಬೇರ್ಪಡುತ್ತವೆ ?
 (1)ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ
 (2)ಏಷ್ಯಾ ಮತ್ತು ಆಸ್ಟ್ರೇಲಿಯ
 (3)ಯುರೋಪ್ ಮತ್ತು ಆಫ್ರಿಕ
 (4)ಏಷ್ಯಾ ಮತ್ತು ಯುರೋಪ್
ಸರಿ ಉತ್ತರ

(1) ಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕ


52.ಈ ಕೆಳಗಿನ ಬಯಲುಗಳಲ್ಲಿ ಯಾವುದು ಸುಣ್ಣದಕಲ್ಲಿನ ಭೂಸ್ವರೂಪದೊಂದಿಗೆ ಸಂಬಂಧ ಹೊಂದಿದೆ ?
 (1)ಪಾದಬೆಟ್ಟ ಮೈದಾನ
 (2)ಬಜಡಾ ಮೈದಾನ
 (3)ಮೆಕ್ಕಲು ಮೈದಾನ
 (4)ಕಾರ್ಸ್ಟ್ ಮೈದಾನ
ಸರಿ ಉತ್ತರ

(4) ಕಾರ್ಸ್ಟ್ ಮೈದಾನ


53.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಹೇಳಿಕೆ I. ಸೂರ್ಯನ ವಿದ್ಯುತ್ ಅಯಸ್ಕಾಂತ ವಿಕಿರಣದಿಂದ ಭೂಮಿ ಎಲ್ಲಾ ಶಕ್ತಿಯನ್ನು ಪಡೆಯುತ್ತದೆ.
ಹೇಳಿಕೆ II. ಭೂ ಗ್ರಹದ ತಾಪ ಅಯವ್ಯಯ ವನ್ನು ಸರಿದೂಗಿಸಲು ಭೂಮಿ ಸೂರ್ಯ ನಿಂದ ಪಡೆದ ಎಲ್ಲಾ ಶಕ್ತಿಯನ್ನು ಭೂ. ವಿಕಿರಣದ ಮೂಲಕ ಬಿಟ್ಟುಕೊಡುತ್ತದೆ.
ಕೊಟ್ಟಿರುವ ಆಯ್ಕೆಗಳಿಂದ ಸರಿಯುತ್ತರವನ್ನು ಆರಿಸಿ.
 (1)Iನೇ ಹೇಳಿಕೆ ತಪ್ಪು ಆದರೆ IIನೇ ಹೇಳಿಕೆ ಸರಿ.
 (2)ಎರಡೂ ಹೇಳಿಕೆಗಳು ವೈಯಕ್ತಿಕವಾಗಿ ಸರಿಯಾಗಿವೆ ಮತ್ತು IIನೇ ಹೇಳಿಕೆಯು Iನೇ ಹೇಳಿಕೆಗೆ ಸರಿಯಾದ ವಿವರಣೆಯಾಗಿದೆ.
 (3)ಎರಡೂ ಹೇಳಿಕೆಗಳು ವೈಯಕ್ತಿಕವಾಗಿ ಸರಿಯಾಗಿವೆ ಮತ್ತು IIನೇ ಹೇಳಿಕೆಯು Iನೇ ಹೇಳಿಕೆಗೆ ಸರಿಯಾದ ವಿವರಣೆಯಾಗಿಲ್ಲ,
 (4)Iನೇ ಹೇಳಿಕೆ ಸರಿ ಆದರೆ IIನೇ ಹೇಳಿಕೆ ತಪ್ಪು.
ಸರಿ ಉತ್ತರ

(3) ಎರಡೂ ಹೇಳಿಕೆಗಳು ವೈಯಕ್ತಿಕವಾಗಿ ಸರಿಯಾಗಿವೆ ಮತ್ತು IIನೇ ಹೇಳಿಕೆಯು Iನೇ ಹೇಳಿಕೆಗೆ ಸರಿಯಾದ ವಿವರಣೆಯಾಗಿಲ್ಲ,


54.ರೆಗೂರ್ ಮಣ್ಣು ಯಾವ ಬೆಳೆಯ ಕೃಷಿಗೆ ಸೂಕ್ತವಾಗಿದೆ ?
 (1)ಕಬ್ಬು
 (2)ಕಡಲೆಕಾಯಿ
 (3)ಹತ್ತಿ
 (4)ತಂಬಾಕು
ಸರಿ ಉತ್ತರ

(3) ಹತ್ತಿ


55. ಹೊಂದಿಸಿ ಬರೆಯಿರಿ :
  ರಾಷ್ಟ್ರೀಯ ಉದ್ಯಾನವನ ಹಾಗೂ ವನ್ಯಜೀವಿ ಧಾಮ ರಾಜ್ಯಗಳು
 A.ಕಾನ್ಹi.ಅಸ್ಸಾಂ
 B.ಕಾಜಿರಂಗii.ಉತ್ತರ ಪ್ರದೇಶ
 C.ನಾಗರಹೊಳೆiii.ಮಧ್ಯ ಪ್ರದೇಶ
 D.ಚಂದ್ರಪ್ರಭiv.ಕರ್ನಾಟಕ
 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯುತ್ತರ ಆರಿಸಿ.
 ಸಂಕೇಗಳು
  ABCD
 (1)iiiiiivi
 (2)iiiiiiiv
 (3)iiiiviii
 (4)iiiiivii
ಸರಿ ಉತ್ತರ

(4) iii i iv ii


56.ಮಳೆಯ ದಿನದಂದು, ನೀರಿನ ಮೇಲಿರುವ ಎಣ್ಣೆಯ ಫಿಲ್ಮ್ ಗಳು (ಬಿಂದುಗಳಲ್ಲಿ ಅದ್ಭುತ ಬಣ್ಣ ತೋರಿಸಲು ಕಾರಣ _________
 (1)ಧೃವೀಕರಣ
 (2)ಪ್ರಸರಣ
 (3)ಹಸ್ತಕ್ಷೇಪ
 (4)ವಿವರ್ತನೆ
ಸರಿ ಉತ್ತರ

(3) ಹಸ್ತಕ್ಷೇಪ


57.ಸರಳ ಲೋಲಕದ ಅವಧಿಯನ್ನು ದ್ವಿಗುಣಗೊಳಿಸುವ ಸಲುವಾಗಿ ದಾರದ ಉದ್ದವು ಹೀಗೆ ಇರಬೇಕು
 (1)ಅರ್ಧ
 (2)ದ್ವಿಗುಣ
 (3)ನಾಲ್ಕು ಪಟ್ಟು
 (4)ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ

(3) ನಾಲ್ಕು ಪಟ್ಟು


58.‘ಪ್ರೊಜೆಕ್ಟ್ ಎಲಿಫೆಂಟ್’ ಯಾವ ವರ್ಷದಲ್ಲಿ ಜಾರಿಗೆ ಬಂದಿತು ?
 (1)1995-96
 (2)1991-92
 (3)1993-94
 (4)1994-95
ಸರಿ ಉತ್ತರ

(2) 1991-92


59.ಈ ಕೆಳಗಿನ ‘ಹುಲಿ ಸಂರಕ್ಷಣಾವಲಯ’ ಮತ್ತು ರಾಜ್ಯಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಯಾಗಿದೆ ?
 (1)ಭದ್ರಾ – ಆಂಧ್ರ ಪ್ರದೇಶ
 (2)ರಣಥಂಬೋರ್ – ಹರಿಯಾಣ
 (3)ಪೆರಿಯಾರ್ – ತಮಿಳುನಾಡು
 (4)ಜಿಮ್ ಕಾರ್ಬೆಟ್ – ಉತ್ತರಾಖಂಡ
ಸರಿ ಉತ್ತರ

(4) ಜಿಮ್ ಕಾರ್ಬೆಟ್ – ಉತ್ತರಾಖಂಡ


60.ಭೂಮಿ ಮತ್ತು ಸೂರ್ಯನ ನಡುವಿನ ಸರಾಸರಿ ಅಂತರವನ್ನು _________ ಎಂದು ಕರೆಯುತ್ತಾರೆ.
 (1)ಆಂಗ್ಸ್ಟ್ರಾಮ್
 (2)ಪಾರ್ಸೆಕ್
 (3)ಆಸ್ಟ್ರೋನೊಮಿಕಲ್ ಯುನಿಟ್
 (4)ಬೆಳಕಿನ ವರ್ಷ
ಸರಿ ಉತ್ತರ

(3) ಆಸ್ಟ್ರೋನೊಮಿಕಲ್ ಯುನಿಟ್


61.ಆಪ್ಟಿಕಲ್ ಫೈಬರ್ (ದ್ಯುತಿ ತಂತಿ) ಸಂವಹನದ ತತ್ವವೇನು ?
 (1)ಡಾಪ್ಲರ್ ಪರಿಣಾಮ
 (2)ಆವರ್ತನ ಮಾಡ್ಯುಲೇಶನ್
 (3)ಜನಸಂಖ್ಯೆಯ ವಿಲೋಮ
 (4)ಒಟ್ಟು ಆಂತರಿಕ ಪ್ರತಿಫಲನ
ಸರಿ ಉತ್ತರ

(4) ಒಟ್ಟು ಆಂತರಿಕ ಪ್ರತಿಫಲನ


62.ಲೋಹಗಳಲ್ಲಿ ವಿದ್ಯುತ್ ಪ್ರವಾಹವು ಈ ಕೆಳಕಂಡ ಕಾರಣಗಳಿಂದ ಉಂಟಾಗುತ್ತದೆ.
 (1)ಲೋಹಗಳಲ್ಲಿನ ಮುಕ್ತ ಎಲೆಕ್ಟ್ರಾನ್ಗಳು
 (2)ನ್ಯೂಕ್ಲಿಯಸ್ಗಳಲ್ಲಿನ ನ್ಯೂಕ್ಲಿಯಾನ್ಗಳಿಂದ
 (3)ಅಣುಗಳ ಕಂಪನದಿಂದ
 (4)ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ

(1) ಲೋಹಗಳಲ್ಲಿನ ಮುಕ್ತ ಎಲೆಕ್ಟ್ರಾನ್ಗಳು


63.ಹಾಲು ಒಂದು
 (1)ಘನ ಸಾಲ್
 (2)ಸಾಲ್
 (3)ಎಮಲ್ಷನ್
 (4)ಜೆಲ್
ಸರಿ ಉತ್ತರ

(3) ಎಮಲ್ಷನ್


64.ಟೈರ್ ಗಳನ್ನು ಸಿದ್ಧಗೊಳಿಸಲು ಈ ಕೆಳಕಂಡ ಯಾವ ವಿಧಾನವನ್ನು ಅನುಸರಿಸಲಾಗುವುದು?
 (1)ವಲ್ಕನೈಸೇಷನ್
 (2)ಎಲೆಕ್ಟ್ರೋಪೊರೆಸಿಸ್
 (3)ಲೀಚಿಂಗ್
 (4)ಡಯಾಲಿಸಿಸ್
ಸರಿ ಉತ್ತರ

(1) ವಲ್ಕನೈಸೇಷನ್


65.ಚಂಡಮಾರುತದಲ್ಲಿ ಚಾವಣಿಗಳು ಹಾರಿ ಹೋಗುವುದಕ್ಕೆ ಕಾರಣ
 (1)ಮೇಲ್ಛಾವಣಿಯ ಮೇಲೆ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಛಾವಣಿಯ ಮೇಲೆ ಬಹಳ ಒತ್ತಡ ಇರುವುದರಿಂದ
 (2)ಮೇಲ್ಛಾವಣಿಯ ಮೇಲಿನ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಛಾವಣಿಯ ಮೇಲೆ ಕಡಿಮೆ ಒತ್ತಡದಿಂದ
 (3)ಮೇಲ್ಛಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಛಾವಣಿಯ ಮೇಲೆ ಕಡಿಮೆ ಒತ್ತಡದಿಂದ
 (4)ಮೇಲ್ಛಾವಣಿಯ ಮೇಲಿನ ಕಡಿಮೆ ವೇಗ ಮತ್ತು ಮೇಲ್ಛಾವಣಿಯ ಮೇಲೆ ಹೆಚ್ಚಿನ ಒತ್ತಡದಿಂದ
ಸರಿ ಉತ್ತರ

(2) ಮೇಲ್ಛಾವಣಿಯ ಮೇಲಿನ ಹೆಚ್ಚಿನ ಗಾಳಿಯ ವೇಗ ಮತ್ತು ಮೇಲ್ಛಾವಣಿಯ ಮೇಲೆ ಕಡಿಮೆ ಒತ್ತಡದಿಂದ


66.ಈ ಕೆಳಗಿನ ಯಾವುದು ಅತಿಯಾದ ಸ್ಥಿತಿಸ್ಥಾಪಕ ವಸ್ತುವಾಗಿದೆ ?
 (1)ಕ್ಲೇ
 (2)ರಬ್ಬರ್
 (3)ಗ್ಲಾಸ್
 (4)ಸ್ಟೀಲ್
ಸರಿ ಉತ್ತರ

(4) ಸ್ಟೀಲ್


67.ಗ್ರಹಗಳ ಚಲನೆಯ ಅವಧಿಯನ್ನು ಯಾವ ನಿಯಮವು ತಿಳಿಸುತ್ತದೆ ?
 (1)ನ್ಯೂಟನ್ ನ ಮೂರನೇ ನಿಯಮ
 (2)ಕೆಪ್ಲರ್ ನ ಎರಡನೇ ನಿಯಮ
 (3)ಕೆಪ್ಲರ್ ನ ಮೂರನೇ ನಿಯಮ
 (4)ಕೆಪ್ಲರ್ ನ ಒಂದನೇ ನಿಯಮ
ಸರಿ ಉತ್ತರ

(2) ಕೆಪ್ಲರ್ ನ ಎರಡನೇ ನಿಯಮ or (3) ಕೆಪ್ಲರ್ ನ ಮೂರನೇ ನಿಯಮ or (4) ಕೆಪ್ಲರ್ ನ ಒಂದನೇ ನಿಯಮ


68.ಎಲ್ಫಿನ್ಸ್ಟೋನ್ _________ ಪ್ರಾಂತ್ಯದ ರಾಜ್ಯಪಾಲರಾಗಿದ್ದರು.
 (1)ಬಂಗಾಳ
 (2)ಬಾಂಬೆ
 (3)ಮದ್ರಾಸ್
 (4)ಪಾಂಡಿಚೇರಿ
ಸರಿ ಉತ್ತರ

(2) ಬಾಂಬೆ


69.ಈ ಕೆಳಗಿನ ಯಾವುದರಲ್ಲಿ ಅಫ್ಲಾಟೋಕ್ಸಿನ್ ಉತ್ಪತ್ತಿ ಆಗುತ್ತದೆ ?
 (1)ದುಂಡು ಜಂತುಹುಳಗಳು
 (2)ವೈರಸ್
 (3)ಬ್ಯಾಕ್ಟೀರಿಯಂ
 (4)ಶಿಲೀಂದ್ರಗಳು
ಸರಿ ಉತ್ತರ

(4) ಶಿಲೀಂದ್ರಗಳು


70.ಈ ಕೆಳಗಿನವುಗಳಲ್ಲಿ ಯಾವುದು ಹಾವಸೆ (Bryophyte) ಆಗಿದೆ ?
 (1)ಬೊಗ್ ಮಾಸ್
 (2)ಕ್ಲಬ್ ಮಾಸ್
 (3)ರೇನ್ಡೀರ್ ಮಾಸ್
 (4)ಐರಿಶ್ ಮಾಸ್
ಸರಿ ಉತ್ತರ

(1) ಬೊಗ್ ಮಾಸ್


71.ಅನಾವೃತ ಬೀಜ ಸಸ್ಯಗಳಲ್ಲಿ ಹಣ್ಣುಗಳು ಇರುವುದಿಲ್ಲ. ಏಕೆಂದರೆ ಅವು ಈ ಕೆಳಗಿನವುಗಳಲ್ಲಿ ಒಂದನ್ನು ಹೊಂದಿರುವುದಿಲ್ಲ?
 (1)ಬೀಜ
 (2)ಅಂಡಕೋಶ
 (3)ಅಂಡಾಶಯ
 (4)ಭ್ರೂಣ
ಸರಿ ಉತ್ತರ

(3) ಅಂಡಾಶಯ


72.ಯಾವ ಪ್ರೊಟೀನ್ ಕಾರ್ಟಿಲೇಜ್ ನಲ್ಲಿ ಇರುತ್ತದೆ ?
 (1)ಕೆರಟಿನ್
 (2)ಹಿಮೋಗ್ಲೋಬಿನ್
 (3)ಮಯೋಸಿನ್
 (4)ಕೊಲ್ಲಾಜೆನ್
ಸರಿ ಉತ್ತರ

(4) ಕೊಲ್ಲಾಜೆನ್


73.ಕೆಳಗಿನವುಗಳಲ್ಲಿ ಯಾವ ರಾಸಾಯನಿಕವನ್ನು ಹೆಚ್ಚಾಗಿ ಭಾರತದಲ್ಲಿ ಮಾವಿನ ಹಣ್ಣುಗಳನ್ನು ಮಾಗಿಸಲು ಬಳಸುತ್ತಾರೆ ?
 (1)ಅಮೋನಿಯಂ ನೈಟ್ರೇಟ್
 (2)ಪೊಟ್ಯಾಶಿಯಂ ಅಯೋಡೈಡ್
 (3)ಸಿಲ್ವರ್ ಅಯೋಡೈಡ್
 (4)ಕ್ಯಾಲ್ಸಿಯಂ ಕಾರ್ಬೈಡ್
ಸರಿ ಉತ್ತರ

(4) ಕ್ಯಾಲ್ಸಿಯಂ ಕಾರ್ಬೈಡ್


74.ಈ ಕೆಳಗಿನ ಯಾವ ಗೊಬ್ಬರವು ಅತಿ ಹೆಚ್ಚಿನ ಶೇಕಡವಾರು ಸಾರಜನಕವನ್ನು ಹೊಂದಿದೆ?
 (1)ಅಮೋನಿಯಂ ಸಲೈಟ್
 (2)ಅಮೋನಿಯಂ ನೈಟ್ರೇಟ್
 (3)ಯೂರಿಯಾ
 (4)ಕ್ಯಾಲ್ಸಿಯಂ ನೈಟ್ರೇಟ್
ಸರಿ ಉತ್ತರ

(3) ಯೂರಿಯಾ


75.ಈ ಕೆಳಗಿನವುಗಳಲ್ಲಿ ಯಾವುದನ್ನು ‘‘ಹೊಂಡ ರೇಷ್ಮೆ’’ (Pond Silk)ಎಂದು ಕರೆಯುವರು?
 (1)ಅನಾಬಿನಾ
 (2)ಉಲೋಥ್ರಿಕ್ಸ್
 (3)ಸ್ರೈರೋಗೈರಾ
 (4)ನೊಸ್ಟೊಕ್
ಸರಿ ಉತ್ತರ

(3) ಸ್ರೈರೋಗೈರಾ


76.ಬರಾಖ ಅಣು ವಿದ್ಯುತ್ ಸ್ಥಾವರ _________ ನಲ್ಲಿ ಇದೆ.
 (1)ಇರಾನ್
 (2)ಜಪಾನ್
 (3)ಯುನೈಟೆಡ್ ಅರಬ್ ಎಮಿರೆಟ್ಸ್
 (4)ಇರಾಕ್
ಸರಿ ಉತ್ತರ

(3) ಯುನೈಟೆಡ್ ಅರಬ್ ಎಮಿರೆಟ್ಸ್


77.ಮಾನವನಲ್ಲಿ ಅಯೋಡಿನ್ ಕೊರತೆಯು ಯಾವ ಕಾಯಿಲೆಯನ್ನು ಉಂಟು ಮಾಡುತ್ತದೆ?
 (1)ಗೊಯ್ಟರ್
 (2)ಅಸ್ತಮ
 (3)ಮೂತ್ರಪಿಂಡದ ಕಲ್ಲು
 (4)ಸಿರೋಸಿಸ್
ಸರಿ ಉತ್ತರ

(1) ಗೊಯ್ಟರ್


78.ಎರಡು ಜೀವಕೋಶಗಳ ಮಧ್ಯ ಸಂಪರ್ಕ ಕಲ್ಪಿಸುವ ಭಾಗ
 (1)ಪ್ಲಾಸ್ಮೋಡೆಸ್ಮಾಟ
 (2)ಪ್ಲಾಸ್ಮಾ ಪದರ
 (3)ಕೋಶ ಗೋಡೆ
 (4)ಡೆಸ್ಮೋಸೋಮ್ಸ್
ಸರಿ ಉತ್ತರ

(4) ಡೆಸ್ಮೋಸೋಮ್ಸ್


79.‘ದಿ ಡೆಕ್ಕನ್ ಸಭಾ’ ದ ಆಯೋಜಕರು ಯಾರು ?
 (1)ಪಟ್ಟಾಭಿ ಸೀತಾರಾಮಯ್ಯ
 (2)ಬಾಲಗಂಗಾಧರ ತಿಲಕ್
 (3)ಪಿ. ರಾಮಸ್ವಾಮಿ
 (4)ಗೋಪಾಲಕೃಷ್ಣ ಗೋಖಲೆ
ಸರಿ ಉತ್ತರ

(4) ಗೋಪಾಲಕೃಷ್ಣ ಗೋಖಲೆ


80.ವೈರಸ್ಮುಕ್ತ ಸಸ್ಯಗಳನ್ನು ಪಡೆಯಲು, ಈ ಕೆಳಗಿನ ಯಾವ ತಂತ್ರಕ್ಕೆ ಪ್ರಾಶಸ್ತ್ಯ ಕೊಡಬೇಕಾಗುತ್ತದೆ ?
 (1)ಗ್ರಾಫ್ಟಿಂಗ್
 (2)ಮೈಕ್ರೋ ಪ್ರಾಪಗೇಶನ್
 (3)ಕಾಂಡದ ತುದಿಯ ಕಲ್ಚರ್
 (4)ಬೇರಿನ ತುದಿಯ ಕಲ್ಚರ್
ಸರಿ ಉತ್ತರ

(3) ಕಾಂಡದ ತುದಿಯ ಕಲ್ಚರ್


81.ಈ ಕೆಳಗಿನ ಯಾವ ಸಕ್ಕರೆಯು ನ್ಯೂಕ್ಲಿಕ್ ಆಮ್ಲದಲ್ಲಿ ಸಿಗುತ್ತದೆ ?
 (1)ಲೆವ್ಯು ಲೋಸ್
 (2)ಡಕ್ಸ್ ಟ್ರೋಸ್
 (3)ಗ್ಲೂಕೋಸ್
 (4)ಡಿಆಕ್ಸಿರೈಬೋಸ್
ಸರಿ ಉತ್ತರ

(4) ಡಿಆಕ್ಸಿರೈಬೋಸ್


82.ಈ ಕೆಳಗಿನವುಗಳಲ್ಲಿ ಹಾಲನ್ನು ಮೊಸರಾಗಿ ಹೊಟ್ಟೆಯಲ್ಲಿ ಪರಿವರ್ತನೆ ಮಾಡುವುದು ಯಾವುದು ?
 (1)ಪೆಪ್ಸಿನ್
 (2)ರೆನಿನ್
 (3)ಎಚ್ಸಿಎಲ್ (HCl)
 (4)ಇವುಗಳಲ್ಲಿ ಎಲ್ಲವೂ
ಸರಿ ಉತ್ತರ

(4) ಇವುಗಳಲ್ಲಿ ಎಲ್ಲವೂ


83.ರಾತ್ರಿಯ ಉಪವಾಸದ ಸಮಯದಲ್ಲಿ, _________ ರಕ್ತದಲ್ಲಿನ ಗ್ಲೂಕೋಸ್ನ ಪ್ರಮುಖ ಮೂಲವಾಗಿದೆ.
 (1)ಸ್ನಾಯು ಗ್ಲೈಕೊಜೆನೊಲಿಸಿಸ್
 (2)ಕರುಳಿನಿಂದ ಆಹಾರದ ಗ್ಲೂಕೋಸ್
 (3)ಹೆಪಾಟಿಕ್ ಗ್ಲೈಕೊಜೆನೊಲಿಸಿಸ್
 (4)ಗ್ಲುಕೋನಿಯೊಜೆನೆಸಿಸ್
ಸರಿ ಉತ್ತರ

(3) ಹೆಪಾಟಿಕ್ ಗ್ಲೈಕೊಜೆನೊಲಿಸಿಸ್


84._________ ಉತ್ಪಾದನೆಯನ್ನು ಕಡಿಮೆ ಮಾಡುವುದರ ಮೂಲಕ ಎಲ್ಲಾ ಪ್ರತಿ ಇನ್ ಫ್ಲಮೇಟರಿ ಏಜೆಂಟ್ ಗಳು ನೋವು ಮತ್ತು ಜ್ವರವನ್ನು ನಿವಾರಿಸುತ್ತವೆ.
 (1)ಪ್ರೋಟಿಯೊಗ್ಲೈಕಾನ್ಸ್
 (2)ಪ್ರೊಸ್ಟಾಗ್ಲಾಂಡಿನ್ಸ್
 (3)ಲ್ಯುಕೋಟಿಯನ್ಸ್
 (4)ಥ್ರೊಂಬೊಕ್ಸೇನ್ಸ್
ಸರಿ ಉತ್ತರ

(2) ಪ್ರೊಸ್ಟಾಗ್ಲಾಂಡಿನ್ಸ್


85.ಫ್ರೆಡರಿಕ್ ಸ್ಯಾಂಗರ್ ಅನುಕ್ರಮಗೊಳಿಸಿದ ಪ್ರೋಟೀನ್ ಯಾವುದು ?
 (1)ಇನ್ಸುಲಿನ್
 (2)ಮಯೊಸಿನ್
 (3)ಮಯೋಗ್ಲೋಬುಲಿನ್
 (4)ಹಿಮೋಗ್ಲೋಬುಲಿನ್
ಸರಿ ಉತ್ತರ

(1) ಇನ್ಸುಲಿನ್


86.ಮನುಷ್ಯರಲ್ಲಿ ಉಂಟಾಗುವ ‘ಅಲ್ಜೀಮರ್’ ಕಾಯಿಲೆಯು ಯಾವುದರ ಕೊರತೆಯಿಂದ ಉಂಟಾಗುತ್ತದೆ ?
 (1)ಗಮ್ಮ ಅಮೈನೋ ಬ್ಯೂಟಿರಿಕ್ ಆಸಿಡ್
 (2)ಅಸಿಟೈಲ್ಕೋಲೈನ್
 (3)ಡೋಪಮೈನ್
 (4)ಗ್ಲುಟಾಮಿಕ್ ಆಸಿಡ್
ಸರಿ ಉತ್ತರ

(2) ಅಸಿಟೈಲ್ಕೋಲೈನ್


87.ಪೆನಿಸಿಲಿನ್, ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ಈ ಕೆಳಗಿನಂತೆ ತಡೆಯುತ್ತದೆ _________
 (1)ಡಿಎನ್ಎ ಗೆ ಹಾನಿ ಮಾಡುವ ಮೂಲಕ
 (2)ಪ್ರೋಟೀನ್ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ.
 (3)ಸೆಲ್ ವಾಲ್ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ.
 (4)ಜೀವಕೋಶ ಪೊರೆಯನ್ನು ಆಕ್ರಮಿಸುವುದು (Attacking).
ಸರಿ ಉತ್ತರ

(3) ಸೆಲ್ ವಾಲ್ ಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತದೆ.


88.ನೀರಿನ ಅಣುವಿನ ಧ್ರುವೀಯತೆಗೆ ಕಾರಣ _________
 (1)ನೀರಿನ ಅಣುವಿನ ಋಣಾತ್ಮಕ ಆವೇಶ.
 (2)ನೀರಿನಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಪರಮಾಣುಗಳ ಎಲೆಕ್ಟ್ರೋನೆಗೆಟಿವಿಟಿಯಲ್ಲಿ ವ್ಯತ್ಯಾಸ.
 (3)ನೀರಿನ ಸುಲಭವಾಗಿ ಆಯಾನೀಕರಿಸುವ ವರ್ತನೆ.
 (4)ನೀರಿನ ಅಣುವಿನ ಧನಾತ್ಮಕ ಆವೇಶ.
ಸರಿ ಉತ್ತರ

(2) ನೀರಿನಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಪರಮಾಣುಗಳ ಎಲೆಕ್ಟ್ರೋನೆಗೆಟಿವಿಟಿಯಲ್ಲಿ ವ್ಯತ್ಯಾಸ.


89.ಮಾನವ ಬಂಡವಾಳವನ್ನು ಪರಿವರ್ತಿಸುವ ಸುಸ್ಥಿರ ಕ್ರಿಯೆ (SATH) ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು _________
 (1)ಎನ್ಐಟಿಐ (NITI) ಆಯೋಗ್
 (2)ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
 (3)ವಿಶ್ವ ಬ್ಯಾಂಕ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
 (4)ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ

(1) ಎನ್ಐಟಿಐ :(NITI) ಆಯೋಗ್


90.ಆಗಾಗ್ಗೆ ಸುದ್ದಿಯಲ್ಲಿ ಕಂಡುಬರುವ ‘‘ಗರಿಷ್ಠ ಅನುಮತಿಸಬಹುದಾದ ಪೂರ್ವ ಉತ್ಪಾದನಾ ವೆಚ್ಚಗಳು’’ (MAPE) ಎಂಬ ಪದವನ್ನು ಯಾವ ಸಂದರ್ಭದಲ್ಲಿ ಬಳಸಲಾಗುತ್ತದೆ ?
 (1)ದತ್ತಾಂಶ ಕೇಂದ್ರಗಳು
 (2)ಕೃಷಿ ಪ್ರಕ್ರಿಯೆ ಕೈಗಾರಿಕೆಗಳು
 (3)ಔಷಧೀಯ ನೀತಿ
 (4)ಆಟೋಮೊಬೈಲ್ ಕೈಗಾರಿಕೆಗಳು
ಸರಿ ಉತ್ತರ

(3) ಔಷಧೀಯ ನೀತಿ


91.ಡಿಎನ್ಎ ಸಂಶ್ಲೇಷಣೆಯನ್ನು ಹೀಗೂ ಕರೆಯುತ್ತಾರೆ
 (1)ಅನುವಾದ
 (2)ನಕಲು
 (3)ಪುನರಾವರ್ತನೆ
 (4)ಪ್ರತಿಲೇಖನ
ಸರಿ ಉತ್ತರ

(3) ಪುನರಾವರ್ತನೆ


92.ಡಿಎನ್ಎ ದ ಕರಗುವ ತಾಪಮಾನದಲ್ಲಿ _________ ಆಗುತ್ತದೆ ?
 (1)ಸ್ಥಳೀಯ ಡಬಲ್ ಹೆಲಿಕಲ್ ಡಿಎನ್ಎ ಡಿನ್ಯಾಚುರ್ ಆಗುತ್ತದೆ
 (2)ಘನ ಡಿಎನ್ಎ ದ್ರವವಾಗುತ್ತದೆ
 (3)ದ್ರವ ಡಿಎನ್ಎ ಆವಿಯಾಗುತ್ತದೆ
 (4)ಡಿಎನ್ಎ ಡಬಲ್ ಹೆಲಿಕ್ಸ್ನಿಂದ ಸೂಪರ್ ಕಾಯಲ್ಡ್ ಡಿಎನ್ಎ ಆಗಿ ಬದಲಾಗುತ್ತದೆ
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


93.ಅರಿಶಿನ ಪುಡಿಯನ್ನು ಕಲಬೆರಕೆ ಮಾಡಲು ಯಾವ ಘಟಕವನ್ನು ಬಳಸಲಾಗುತ್ತದೆ?
 (1)ಸೀಸದ ಫಾಸ್ಫೇಟ್
 (2)ಸೀಸದ ಕ್ರೋಮೇಟ್
 (3)ಕ್ಯಾಲ್ಸಿಯಂ ಫಾಸ್ಫೇಟ್
 (4)ಪೊಟ್ಯಾಶಿಯಂ ಡೈಕ್ರೊಮೇಟ್
ಸರಿ ಉತ್ತರ

(2) ಸೀಸದ ಕ್ರೋಮೇಟ್


94.ಗರ್ಭಧಾರಣೆಯ ಪರೀಕ್ಷೆಗಾಗಿ ಮೂತ್ರದಲ್ಲಿ ಯಾವ ಹಾರ್ಮೋನ್ನನ್ನು ಪತ್ತೆ ಮಾಡಲಾಗುತ್ತದೆ ?
 (1)ಆಕ್ಸಿಟೋಸಿನ್
 (2)ಇನ್ಸುಲಿನ್
 (3)ಟೆಸ್ಟೋಸ್ಟೆರಾನ್
 (4)ಮಾನವ ಕೋರಿಯಾನಿಕ್ ಗೊನಡೋ ಟ್ರೋಪಿನ್
ಸರಿ ಉತ್ತರ

(4) ಮಾನವ ಕೋರಿಯಾನಿಕ್ ಗೊನಡೋ ಟ್ರೋಪಿನ್


95.ಪ್ರಾಜೆಕ್ಟ್ ಕಿರಣಾ (Project Kirana)ದ ಗುರಿ _________
 (1)ಚಿಲ್ಲರೆ ಮಾರಾಟಗಾರರನ್ನು ಬೆಂಬಲಿಸುವುದು.
 (2)ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು.
 (3)ರೈತರನ್ನು ಬೆಂಬಲಿಸುವುದು.
 (4)ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ

(2) ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು.


96.ಹಿರಿಯ ನಾಗರಿಕರಿಗಾಗಿ ‘‘ಪ್ರಧಾನ ಮಂತ್ರಿ ವಯ ವಂದನ ಯೋಜನೆ’’ (PMVVY). ಯನ್ನು _________ ರಿಂದ ನೀಡಲ್ಪಟ್ಟಿದೆ.
 (1)ಭಾರತದ ಜೀವ ವಿಮಾ ನಿಗಮ
 (2)ಸಾಮಾನ್ಯ ವಿಮಾ ಕಂಪನಿ
 (3)ಯುನೈಟೆಡ್ ಇಂಡಿಯಾ ವಿಮಾ ಕಂಪನಿ
 (4)ಬಜಾಜ್ ಅಲಿಯಾನ್ಸ್ ಜೀವ ವಿಮಾ ಕಂಪನಿ
ಸರಿ ಉತ್ತರ

(1) ಭಾರತದ ಜೀವ ವಿಮಾ ನಿಗಮ


97.ಜಾಗತಿಕ ಅಪಾಯಗಳ ವರದಿ 2021 ಅನ್ನು ಬಿಡುಗಡೆಗೊಳಿಸಿದವರು
 (1)ವಿಶ್ವ ಆರ್ಥಿಕ ವೇದಿಕೆ
 (2)ವಿಶ್ವ ಬ್ಯಾಂಕ್
 (3)ಅಂತರರಾಷ್ಟ್ರೀಯ ಹಣಕಾಸು ನಿಧಿ
 (4)ವಿಶ್ವ ವ್ಯಾಪಾರ ಸಂಸ್ಥೆ
ಸರಿ ಉತ್ತರ

(1) ವಿಶ್ವ ಆರ್ಥಿಕ ವೇದಿಕೆ


98.ಭಾರತದಲ್ಲಿ ಅತಿಹೆಚ್ಚು ಎಫ್ಡಿಐ ಇಕ್ವಿಟಿ ಒಳಹರಿವನ್ನು ಆಕರ್ಷಿಸುವ ಕ್ಷೇತ್ರ _________
 (1)ಸೇವೆಗಳು
 (2)ದೂರಸಂಪರ್ಕ
 (3)ಹೋಟೆಲ್ ಮತ್ತು ಪ್ರವಾಸೋದ್ಯಮ
 (4)ಡ್ರಗ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್
ಸರಿ ಉತ್ತರ

(1) ಸೇವೆಗಳು


99.ಹಣಕಾಸು ಸ್ಥಿರತೆ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ………………. ಬಿಡುಗಡೆ ಮಾಡುತ್ತದೆ.
 (1)ಪ್ರತಿ ಮೂರು ತಿಂಗಳಿಗೊಮ್ಮೆ
 (2)ವರ್ಷಕ್ಕೊಮ್ಮೆ
 (3)ವರ್ಷದಲ್ಲಿ ಎರಡು ಬಾರಿ
 (4)ಪ್ರತಿ ತಿಂಗಳಿಗೊಮ್ಮೆ
ಸರಿ ಉತ್ತರ

(3) ವರ್ಷದಲ್ಲಿ ಎರಡು ಬಾರಿ


100.ವಿಶ್ವಸಂಸ್ಥೆಯ ಹೂಡಿಕೆ ಪ್ರಚಾರ (UNIPA) ಪ್ರಶಸ್ತಿ, 2020 ನ್ನು ಯಾರಿಗೆ ನೀಡಲಾಯಿತು?
 (1)ಇನ್ವೆಸ್ಟ್ ಇಂಡಿಯಾ
 (2)ಮೇಕ್ ಇನ್ ಇಂಡಿಯಾ
 (3)ಭಾರತ ವ್ಯಾಪಾರ ಪ್ರಚಾರ ಸಂಸ್ಥೆ
 (4)ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ

(1) ಇನ್ವೆಸ್ಟ್ ಇಂಡಿಯಾ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment