WhatsApp Group Join Now
Telegram Group Join Now

kpsc food & civil supplies general paper-1 question paper 11.04.2016

KPSC GROUP ‘C’ (Food & Civil Supplies Corporation Ltd.) ಸಾಮಾನ್ಯ ಪತ್ರಿಕೆ-1 ಪ್ರಶ್ನೆಪತ್ರಿಕೆ

1.ಅಮೃತ ಬಜಾರ್ ಪತ್ರಿಕೆಯು _________ ರವರಿಂದ ಸಂಪಾದಿಸಲ್ಪಟ್ಟಿದೆ.
 (1)ಜಿ. ಸುಬ್ರಹ್ಮಣ್ಯ ಅಯ್ಯರ್
 (2)ಬಿ.ಜಿ. ತಿಲಕ್
 (3)ಸಿಸಿರ್ ಕುಮಾರ್ ಗೋಷ್
 (4)ಅರಬಿಂದೊ ಗೋಷ್
CORRECT ANSWER

(3) ಸಿಸಿರ್ ಕುಮಾರ್ ಗೋಷ್


2.ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಒಪ್ಪಂದಕ್ಕೆ ಕಾರಣವಾದ ಪ್ಯಾಕ್ಟ್
 (1)ಪೂನಾ ಪ್ಯಾಕ್ಟ್
 (2)ಸಿಮ್ಲಾ ಪ್ಯಾಕ್ಟ್
 (3)ಇರ್ವಿನ್ ಪ್ಯಾಕ್ಟ್
 (4)ಲಕ್ನೋ ಪ್ಯಾಕ್ಟ್
CORRECT ANSWER

(4) ಲಕ್ನೋ ಪ್ಯಾಕ್ಟ್


3.ಉಗ್ರ ರಾಷ್ಟ್ರೀಯವಾದವು ____________ಘಟನೆಯಿಂದ ಉತ್ತೇಜಿಸಲ್ಪಟ್ಟಿತು.
 (1)ಚೌರಿ ಚೌರಾ ಘಟನೆ
 (2)ಜಲಿಯನ್ ವಾಲಾಬಾಗ್ ದುರಂತ
 (3)ಬಂಗಾಳ ವಿಭಜನೆ
 (4)ಖಿಲಾತ್ ಚಳುವಳಿ
CORRECT ANSWER

(3) ಬಂಗಾಳ ವಿಭಜನೆ


4.1928 ರ ಲಾಹೋರ್ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷರಾಗಿದ್ದವರು
 (1)ಮೋತಿಲಾಲ್ ನೆಹರು
 (2)ಜವಹರ್ ಲಾಲ್ ನೆಹರು
 (3)ಸುಭಾಷ್ ಚಂದ್ರ ಬೋಸ್
 (4)ಬಿ.ಸಿ. ಪಾಲ್
CORRECT ANSWER

(2) ಜವಹರ್ ಲಾಲ್ ನೆಹರು


5.1953 ರಲ್ಲಿ ರಚಿತವಾದ ಭಾಷಾವಾರು ಪ್ರಾಂತ್ಯ ಗಳ ರಚನಾ ಆಯೋಗ (ಎಸ್.ಆರ್.ಸಿ) ದ ಸದಸ್ಯರಾಗಿದ್ದವರಾರು ?
 (1)ಎಚ್. ಎನ್. ಕುಂಜ್ರು
 (2)ಪಟ್ಟಾಭಿ ಸೀತಾರಾಮಯ್ಯ
 (3)ಡಿ.ಪಿ. ಧರ್
 (4)ಆಚಾರ್ಯ ಕೃಪಲಾನಿ
CORRECT ANSWER

(1) ಎಚ್. ಎನ್. ಕುಂಜ್ರು


6.ವಿದುರಾಶ್ವತ್ಥ ಘಟನೆಯ ಕುರಿತು ನೇಮಕವಾದ ತನಿಖಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು
 (1)ಸರ್. ವೇಪಾ ರಮೇಶನ್
 (2)ಸರ್. ರಾಮಸ್ವಾಮಿ ಮುದಲಿಯಾರ್
 (3)ಸರ್. ಎಂ. ವಿಶ್ವೇಶ್ವರಯ್ಯ
 (4)ಸರ್. ಮಿರ್ಜಾ ಇಸ್ಮಾಯಿಲ್
CORRECT ANSWER

(1) ಸರ್. ವೇಪಾ ರಮೇಶನ್


7.ಉತ್ತರ ಕರ್ನಾಟಕದ ಮೊದಲ ಕಾಲೇಜು ಎಲ್ಲಿ ಅಸ್ತಿತ್ವಕ್ಕೆ ಬಂದಿತ್ತು?
 (1)ಧಾರವಾಡ
 (2)ಬೆಳಗಾಂ
 (3)ಹುಬ್ಬಳ್ಳಿ
 (4)ವಿಜಾಪುರ
CORRECT ANSWER

(1) ಧಾರವಾಡ


8.ಭಾರತವನ್ನು ಆಕ್ರಮಣ ಮಾಡಿದ ಟರ್ಕಿಯ ಯಮಿನಿ ವಂಶಾವಳಿಯ ಪ್ರಚಲಿತ ಹೆಸರು
 (1)ಘಜಿನೀ ವಂಶಾವಳಿ
 (2)ಘೋರೀ ವಂಶಾವಳಿ
 (3)ಗುಲಾಮಿ ವಂಶಾವಳಿ
 (4)ಖಿಲ್ಜಿ ವಂಶಾವಳಿ
CORRECT ANSWER

(1) ಘಜಿನೀ ವಂಶಾವಳಿ


9.ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟು ವಿದೇಶಿ ಪ್ರವಾಸಿಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿರಿ.
 a.ಬರಡಾಸ್
 b.ಲಿನ್ಸ್ ಚೊಟೆನ್
 c.ಬಾರ್ ಬೋಸಾ
 d.ನ್ಯೂನಿಜ್
 ಕೆಳಗಿನ ಆಯ್ಕೆಗಳಿಂದ ಸರಿಯುತ್ತರವನ್ನು ಆರಿಸಿ.
 (1)d, c, a, b
 (2)a, b, c, d
 (3)b, d, a, c
 (4)c, d, b, a
CORRECT ANSWER

(4) c, d, b, a


10.ಸನ್ನತಿಯು ಈ ಕೆಳಗಿನ ಯಾವ ನದಿಯ ದಂಡೆಯ ಮೇಲೆ ಇದೆ ?
 (1)ಕೃಷ್ಣಾ
 (2)ಭೀಮಾ
 (3)ಮಾಂಜರಾ
 (4)ಪಾಪನಾಸಿನಿ
CORRECT ANSWER

(2) ಭೀಮಾ


11.ಬೆಳಗಾವಿ ಜಿಲ್ಲೆಯ ಯಾವ ಗ್ರಾಮದಲ್ಲಿ ಎರಡು ಪದ್ಮಟಂಕ ನಾಣ್ಯಗಳನ್ನು ಶೋಧಿಸಲಾಯಿತು?
 (1)ಸೌವದತ್ತಿ
 (2)ವಡಗಾವ-ಮಾಧವಪುರ
 (3)ರಾಮದುರ್ಗ
 (4)ಹಲಸಿ
CORRECT ANSWER

(3) ರಾಮದುರ್ಗ


12.ಆಜೀವಿಕ ಪಂಥದ ಪ್ರವರ್ತಕ ಯಾರು ?
 (1)ಅಜಿತ ಕೇಶಕಂಬಲಿನ
 (2)ಋಷಭದೇವ
 (3)ತುವರ್ಸ
 (4)ಮಖ್ಖಲಿ ಗೋಸಾಲ
CORRECT ANSWER

(4) ಮಖ್ಖಲಿ ಗೋಸಾಲ


13.ರಾಷ್ಟ್ರಕೂಟರ ಆಳ್ವಿಕೆಯ ಕೊನೆಯ ಅರಸನಾರು?
 (1)ನಾಲ್ಕನೆಯ ಕೃಷ್ಣ
 (2)ಎರಡನೆಯ ಕರ್ಕ
 (3)ಮೂರನೆಯ ಅಮೋಘವರ್ಷ
 (4)ಖೊಟ್ಟಿಗ
CORRECT ANSWER

(2) ಎರಡನೆಯ ಕರ್ಕ


14.ಈ ಕೆಳಗಿನ ಯಾವ ಜೋಡಿಯು ಸರಿಯಾದ ಹೊಂದಾಣಿಕೆಯಾಗಿಲ್ಲ
 (1)ಅಲ್ಲಮ ಪ್ರಭು- ಗುಹೇಶ್ವರ
 (2)ಹಾವಿನಾಳ ಕಲ್ಲಯ್ಯ – ಮಹಾಲಿಂಗ ಕಲ್ಲೇಶ್ವರ
 (3)ಮೌನೇಶ್ವರ – ಬಸವಣ್ಣ
 (4)ಬಾಚಿ ಕಾಯಕದ ಬಸವಯ್ಯ – ಕರ್ಮಹರ ಕಾಳೇಶ್ವರ
CORRECT ANSWER

(4) ಬಾಚಿ ಕಾಯಕದ ಬಸವಯ್ಯ – ಕರ್ಮಹರ ಕಾಳೇಶ್ವರ


15.ಸಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ ಗ್ರಂಥದ ಕರ್ತ ಯಾರು
 (1)ಮಹಾಲಿಂಗಂ ಎಂ.
 (2)ಚಿದಾನಂದಮೂರ್ತಿ ಎಂ.
 (3)ಎಸ್. ಶೆಟ್ಟರ್
 (4)ಕಲಬುರ್ಗಿ ಎಂ.ಎಂ.
CORRECT ANSWER

(3) ಎಸ್. ಶೆಟ್ಟರ್


16.ಟೀ ಸಾಗುವಳಿಗೆ ಅನುಕೂಲಕರವಾದ ಹವಾಗುಣ ಯಾವುವು ?
 a.ಉಷ್ಣ ಹವಾಮಾನ
 b.ಗರಿಷ್ಠ ಮಳೆ
 c.ಎತ್ತರದ ಪ್ರದೇಶ
 d.ಇಳಿಜಾರು ಪ್ರದೇಶ
 (1)a, b ಮತ್ತು c
 (2)b, c ಮತ್ತು d
 (3)a, b ಮತ್ತು d
 (4)ಎಲ್ಲಾ ನಾಲ್ಕು
CORRECT ANSWER

(3) a, b ಮತ್ತು d


17.ಪಟ್ಟಿ-I ಮತ್ತು ಪಟ್ಟಿ-II ನ್ನು ಹೊಂದಿಸಿ ಬರೆಯಿರಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರ ಆಯ್ಕೆ ಮಾಡಿ.
  ಪಟ್ಟಿ-I ಪಟ್ಟಿ-II
  (ನದಿಗಳು) (ಅವುಗಳ ಉಪನದಿಗಳು)
 a.ಕೃಷ್ಣ 1.ಚಂಬಲ್
 b.ಬ್ರಹ್ಮಪುತ್ರ2.ಇಂದ್ರಾವತಿ
 c.ಗೋದಾವರಿ3.ತೀಸ್ತಾ
 dಯಮುನಾ4.ಭೀಮ
  abcc
 (1)4321
 (2)3412
 (3)1234
 (4)2143
CORRECT ANSWER

(1) 4, 3, 2, 1


18.ಚಿಲ್ಕಾ ಹೊರತಾಗಿ, ಈ ಮುಂದಿನವುಗಳಲ್ಲಿ ಯಾವುದು ಒಂದು ಖಾರಿ ಸರೋವರವಾಗಿದೆ
 (1)ಸಾಂಬಾರ್
 (2)ದೀಡವನ
 (3)ಪುಲಿಕಟ್
 (4)ಸುಖ್ನಾ
CORRECT ANSWER

(3) ಪುಲಿಕಟ್


19.ಪ್ರತಿಪಾದನೆ (A) : ಭಾರತದ ಉತ್ತರ ಬಯಲು ಸೀಮೆಗಳಲ್ಲಿ ಚಳಿಗಾಲದಲ್ಲಿ ಸ್ವಲ್ಪ ಮಟ್ಟಿನ ಘನಹಿಮಪಾತ (Precipitation) ವಾಗುತ್ತದೆ
ಕಾರಣ (R) : ಚಳಿಗಾಲದಲ್ಲಿ ಈಶಾನ್ಯ ಮುಂಗಾರು ಚುರುಕಾಗಿರುತ್ತದೆ
 (1)(A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಾಗಿದೆ
 (2)(A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಲ್ಲ
 (3)(A) ಸರಿ, ಆದರೆ (R) ತಪ್ಪು
 (4)(A) ತಪ್ಪು, ಆದರೆ (R) ಸರಿ
CORRECT ANSWER

(3) (A) ಸರಿ, ಆದರೆ (R) ತಪ್ಪು


20.ಪಟ್ಟಿ-I ಮತ್ತು ಪಟ್ಟಿ-II ನ್ನು ಹೊಂದಿಸಿ ಬರೆಯಿರಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರ ಆಯ್ಕೆ ಮಾಡಿ.
  ಪಟ್ಟಿ-I ಪಟ್ಟಿ-II
  (ರಾಜ್ಯಗಳು) (ರಾಷ್ಟ್ರೀಯಉದ್ಯಾನ ವನಗಳು)
 a.ಉತ್ತರಪ್ರದೇಶ1.ಬಂಡೀಪುರ
 b.ಅಸ್ಸಾಂ2.ರಾಜಾಜಿ ರಾಷ್ಟ್ರೀಯ ಉದ್ಯಾನವನಗಳು
 c.ಒರಿಸ್ಸಾ3.ಸಿಮಿಲಿಪಾಲ್
 dಕರ್ನಾಟಕ4.ಮಾನರ್
  abcc
 (1)1234
 (2)2431
 (3)4321
 (4)2314
CORRECT ANSWER

(2) 2, 4, 3, 1


21.ಭಾರತೀಯ ನಿರ್ದಿಷ್ಟಮಾನ ಸಮಯ ಮತ್ತು ಗ್ರೀನಿಚ್ ನಿರ್ಧಿಷ್ಟಮಾನ ಸಮಯಗಳ ನಡುವಿನ ವ್ಯತ್ಯಾಸ ಎಷ್ಟು ?
 (1)-4 ಗಂಟೆ ಮತ್ತು 30 ನಿಮಿಷಗಳು
 (2)-5 ಗಂಟೆಗಳು
 (3)+5 ಗಂಟೆ ಮತ್ತು 30 ನಿಮಿಷಗಳು
 (4)+6ಗಂಟೆ ಮತ್ತು 30 ನಿಮಿಷಗಳು
CORRECT ANSWER

(3) +5 ಗಂಟೆ ಮತ್ತು 30 ನಿಮಿಷಗಳು


22.ಪ್ರತಿಪಾದನೆ (A) : ಮಹಾರಾಷ್ಟ್ರದ ಕೊಯ್ನ ವಲಯವು ನಿಕಟ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಭೂಕಂಪನ ಪೀಡಿತವಾಗುವ ಸಂಭವವಿದೆ.
ಕಾರಣ (R) : ಕೊಯ್ನ ಅಣೆಕಟ್ಟಯು ಒಂದು ಹಳೆಯ ಬಿರುಕುಳ್ಳ ಸಮತಲದ ಮೇಲೆ ನಿಂತಿದ್ದು ಇದು ಕೊಯ್ನ ಜಲಾಶಯದಲ್ಲಿರುವ ನೀರಿನ ಮಟ್ಟದಲ್ಲಿನ ಬದಲಾವಣೆ ಗಳೊಂದಿಗೆ ಇನ್ನೂ ಹೆಚ್ಚುಸಲ ಸಕ್ರಿಯಗೊಳ್ಳುವ ಸಾಧ್ಯತೆಯಿದೆ.
 (1)(A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಾಗಿದೆ
 (2)(A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಲ್ಲ
 (3)(A) ಸರಿ, ಆದರೆ (R) ತಪ್ಪು
 (4)(A) ತಪ್ಪು, ಆದರೆ (R) ಸರಿ
CORRECT ANSWER

(1) (A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಾಗಿದೆ


23.ಬಾರ್ಖನ್ (Barchan) ಮರಳು ದಿಣ್ಣೆಗಳು
 (1)ನೀಳವಾದ ಮರಳುದಿಣ್ಣೆಗಳು. ಇವುಗಳು ಉದ್ದವಾಗಿದ್ದು, ನೇರವಾಗಿದ್ದು ಕಡಿದಾದ ಇಳಿಜಾರನ್ನು ಹೊಂದಿರುತ್ತವೆ.
 (2)ಅಡ್ಡಮರಳುದಿಣ್ಣೆಗಳು, ಇವು ಗಾಳಿ ಬೀಸುವ ದಿಕ್ಕಿಗೆ ವಿರುದ್ಧವಾಗಿ ಅಡ್ಡಲಾಗಿರುತ್ತವೆ.
 (3)ಅರ್ಧಚಂದ್ರಾಕೃತಿಯ ಮರಳು ದಿಣ್ಣೆಗಳು. ಗಾಳಿಬೀಸುವ ದಿಕ್ಕಿನ ಕಡೆ ಹೊರಬಾಗಿದ ಇಳಿಜಾರು ಹಾಗೂ ಗಾಳಿಗೆ ಮರೆಯಾಗಿರುವ ಕಡೆ ಒಳಬಾಗಿದ ಇಳಿಜಾರನ್ನು ಹೊಂದಿರುತ್ತವೆ.
 (4)ನಕ್ಷತ್ರಾಕೃತಿಯ ಮರಳುದಿಣ್ಣೆಗಳು ವಿವಿಧ ದಿಕ್ಕಿನಿಂದ ಬೀಸುವ ಮಾರುತಗಳಿಂದ ನಿರ್ಮಿತವಾಗಿರುತ್ತವೆ.
CORRECT ANSWER

(3) ಅರ್ಧಚಂದ್ರಾಕೃತಿಯ ಮರಳು ದಿಣ್ಣೆಗಳು. ಗಾಳಿಬೀಸುವ ದಿಕ್ಕಿನ ಕಡೆ ಹೊರಬಾಗಿದ ಇಳಿಜಾರು ಹಾಗೂ ಗಾಳಿಗೆ ಮರೆಯಾಗಿರುವ ಕಡೆ ಒಳಬಾಗಿದ ಇಳಿಜಾರನ್ನು ಹೊಂದಿರುತ್ತವೆ.


24.ಪರಿವರ್ತನಾ ಮಂಡಲದಲ್ಲಿ ಎತ್ತರಕ್ಕೆ ಹೊದಂತೆ ಪ್ರತಿ 1000 ಮೀಟರ್ ಗಳಿಗೆ 6.5 °C ಉಷ್ಣಾಂಶವು ಕಡಿಮೆಯಾಗುವುದು ಇದೇ
 (1)ಸಾಮಾನ್ಯ ಉಷ್ಣಾಂಶದ ಇಳಿಕೆ ದರ
 (2)ಸ್ಥಿರೋಷ್ಣಕ ಉಷ್ಣಾಂಶದ ಇಳಿಕೆ ದರ
 (3)ಉಷ್ಣಾಂಶದ ವಿಪರ್ಯಯ
 (4)ಉಷ್ಣಾಂಶದ ಪ್ರಕ್ರಿಯೆ
CORRECT ANSWER

(1) ಸಾಮಾನ್ಯ ಉಷ್ಣಾಂಶದ ಇಳಿಕೆ ದರ


25.ಭೂಮಿಯನ್ನು ರಕ್ಷಿಸುತ್ತಿರುವ ಓಜೋನ್ ಪದರ ಇರುವುದು
 (1)ಪರಿವರ್ತನಾ ಮಂಡಲ (ಟೊಪೋಸ್ಪಿಯರ್)
 (2)ಸಮೋಷ್ಠ ಮಂಡಲ (ಸ್ಟ್ರಾಟೋಸ್ಪಿಯರ್)
 (3)ಮಧ್ಯಾಂತರ ಮಂಡಲ (ಮಿಸೋಸ್ಪಿಯರ್)
 (4)ಆಯಾನ ಮಂಡಲ (ಅಯನೋಸ್ಪಿಯರ್)
CORRECT ANSWER

(2) ಸಮೋಷ್ಠ ಮಂಡಲ (ಸ್ಟ್ರಾಟೋಸ್ಪಿಯರ್)


26.ಈ ಕೆಳಗೆ ವಿವಿಧ ನಗ್ನೀಕರಣ ಕತಗಳಿಂದ ನಿರ್ಮಿತವಾಗುವ ಭೂ ಸ್ವರೂಪಗಳು ಮಿಶ್ರಣವಾಗಿವೆ. ಇವುಗಳಲ್ಲಿ ಹಿಮನದಿಯ ಕಾರ್ಯಾಚರಣೆಯಿಂದ ನಿರ್ಮಿತವಾಗುವ ಭೂ ಸ್ವರೂಪಗಳ ಗುಂಪು
 (1)ಗಿರಿಶೃಂಗ, U ಆಕಾರದ ಕಣಿವೆ, ಕಡಿದಾದ ಇಳಿಜಾರು, ಮುಖಜಭೂಮಿ
 (2)ಗಿರಿಶೃಂಗ, ಪರ್ವತಕಟಕ, ಹಿಮಾಗಾರ, U ಆಕಾರದ ಕಣಿವೆ
 (3)ಇನ್ಸೆಲ್ ಬರ್ಗ್, ಯಾರ್ಡಂಗ್, ಕುಂಬಕುಳಿ (Pothole), ಮರಳುದಿಣ್ಣೆ
 (4)V ಆಕಾರದ ಕಣಿವೆ, ಶಿಲಾನಿಚಯಗಳು, ಮೆಕ್ಕಲು ಬೀಸಣಿಗೆ, ತೂಗುಕಣಿವೆ
CORRECT ANSWER

(2) ಗಿರಿಶೃಂಗ, ಪರ್ವತಕಟಕ, ಹಿಮಾಗಾರ, U ಆಕಾರದ ಕಣಿವೆ


27.ಗುಹೆ, ಬಿರುಸು ಕಿಂಡಿ, ಜಿಯೋ ಈ ಭೂಸ್ವರೂಪಗಳು ಯಾವುದಕ್ಕೆ ಸಂಬಂಧಿಸಿವೆಯೆಂದರೆ
 (1)ನದಿ
 (2)ಅಲೆ
 (3)ಹಿಮನದಿ
 (4)ಅಂತರ್ಜಲ
CORRECT ANSWER

(2) ಅಲೆ


28.ಈ ಕೆಳಗೆ ಎರಡು ವಾಕ್ಯಗಳನ್ನು ನೀಡಲಾಗಿದೆ. ಇದರಲ್ಲಿ ಮೊದಲ ವಾಕ್ಯ ಪ್ರತಿಪಾದನೆ (A) ಹಾಗೂ ಮತ್ತೊೊಂದು ಅದರ ಕಾರಣ (R) ಎಂದು ಹೆಸರಿಸಲಾಗಿದೆ.
ಪ್ರತಿಪಾದನೆ (A) : ಸಮಭಾಜಕ ವತ್ತ ವಲಯದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಉಗಮಿಸುವುದಿಲ್ಲ.
ಕಾರಣ (R) : ಮಾರುತಗಳನ್ನು ವಿಚಲಿತ ಗೊಳಿಸುವ ಭೂಮಿಯ ಕೊರಿಯಾಲಿಸ್ ಶಕ್ತಿ ಸಮಭಾಜಕ ವೃತ್ತದಲ್ಲಿ ಕನಿಷ್ಠವಾಗಿದ್ದು, ಧ್ರುವಗಳ ಕಡೆಗೆ ಹೋದಂತೆ ಅಧಿಕವಾಗುವುದು.
 (1)(A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಾಗಿದೆ
 (2)(A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಲ್ಲ
 (3)(A) ಸರಿ, ಆದರೆ (R) ತಪ್ಪು
 (4)(A) ತಪ್ಪು, ಆದರೆ (R) ಸರಿ
CORRECT ANSWER

(1) (A) ಮತ್ತು (R) ಎರಡೂ ಸರಿ ಮತ್ತು (R) (A)ಯ ಸರಿಯಾದ ವಿವರಣೆಯಾಗಿದೆ


29.ಕೆಳಗಿನ ವಿವರಣೆಗಳಲ್ಲಿ ತಪ್ಪಾಗಿರುವ ವಾಕ್ಯ/ವಾಕ್ಯಗಳು ಯಾವುವು
 a.ಎಲ್ನಿನೊ ದಕ್ಷಿಣ ಅಮೇರಿಕಾದ ಪಶ್ಚಿಮ ತೀರದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಶೀತೋದಕ ಸಾಗರೀಕ ಪ್ರವಾಹ.
 a.ಎಲ್ನಿನೊ ದಕ್ಷಿಣ ಅಮೇರಿಕಾದ ಪಶ್ಚಿಮ ತೀರದಲ್ಲಿ ಮೇಲಿಂದ ಮೇಲೆ ಕಾಣಿಸಿಕೊಳ್ಳುವ ಶೀತೋದಕ ಸಾಗರೀಕ ಪ್ರವಾಹ.
 b.ಎಲ್ನಿನೊ ಅಪರೂಪವಾಗಿ ದಕ್ಷಿಣ ಅಮೇರಿಕಾದ ಪಶ್ಚಿಮ ತೀರದಲ್ಲಿ ಕಾಣಿಸಿಕೊಳ್ಳುವ ಉಷ್ಣೋದಕ ಪ್ರವಾಹ. ಇದು ಉತ್ತರದಿಂದ ದಕ್ಷಿಣದ ಕಡೆಗೆ ಹರಿದು ಹಂಬೋಲ್ಟ್ ಶೀತೋದಕ ಪ್ರವಾಹವನ್ನು ಸ್ಥಳಾಂತರಿಸುವುದು.
 c.ಎಲ್ನಿನೊ ಕಂಡುಬರುವ ವರ್ಷಗಳಲ್ಲಿ ಪೆರುದೇಶವು ಬರಗಾಲವನ್ನು ಹೊಂದಿರುವುದು.
 d.ಎಲ್ನಿನೊ ಕಂಡುಬರುವ ವರ್ಷಗಳಲ್ಲಿ ಪೆರುದೇಶದ ತೀರದಲ್ಲಿ ಹೆಚ್ಚು ಮಳೆ ಬೀಳುವುದು.
 ಉತ್ತರ.
 (1)a ಮತ್ತು c
 (2)b ಮತ್ತು d
 (3)c ಮತ್ತು d
 (4)a ಮತ್ತು d
CORRECT ANSWER

(1) a ಮತ್ತು c


30.ಈ ಕೆಳಗಿನವುಗಳಲ್ಲಿ ತಪ್ಪಾಗಿರುವ ಹೇಳಿಕೆ / ಹೇಳಿಕೆಗಳು.
 (1)ಒಂದು ನಿಗದಿತ ಸ್ಥಳ ಹಾಗೂ ವೇಳೆಯಲ್ಲಿರುವ ಒಟ್ಟು ಗಾಳಿಯ ತೂಕವೇ ಆರ್ದ್ರತೆ
 (2)ಒಂದು ನಿಗದಿತ ಮಟ್ಟದ ಉಷ್ಣಾಂಶದಲ್ಲಿ ಗಾಳಿಯು ಹಿಡಿದಿರಿಸಿಕೊಳ್ಳುವ ಗರಿಷ್ಠ ಪ್ರಮಾಣದ ನೀರಾವಿಯೇ ಸಾಪೇಕ್ಷ ಆರ್ದ್ರತೆ
 (3)ಗಾಳಿಯಲ್ಲಿ ಕಂಡುಬರುವ ನೀರಾವಿಯ ಮೊತ್ತವೇ ಸಮಗ್ರ ಆರ್ದ್ರತೆ
 (4)ನಿಗದಿತ ತೂಕದ ಗಾಳಿಯಲ್ಲಿರುವ ತೇವಾಂಶದ ತೂಕವೇ ನಿರ್ದಿಷ್ಟ ಆರ್ದ್ರತೆ
CORRECT ANSWER

(1) ಒಂದು ನಿಗದಿತ ಸ್ಥಳ ಹಾಗೂ ವೇಳೆಯಲ್ಲಿರುವ ಒಟ್ಟು ಗಾಳಿಯ ತೂಕವೇ ಆರ್ದ್ರತೆ


31.ರಾಷ್ಟ್ರಪತಿಯವರ ಮಹಾಭಿಯೋಗಕ್ಕೆ ಸಂವಿಧಾನ ನಿಗದಿಪಡಿಸಿರುವುದು
 (1)ಸಭೆಯ ಒಟ್ಟು ಸದಸ್ಯರ ಮೂರನೆಯ ಎರಡರಷ್ಟು ಸದಸ್ಯರು ಸಹಿ ಮಾಡಿದ ಪ್ರಸ್ತಾವ ಮತ್ತು 1 ತಿಂಗಳ ಸೂಚನಾಪತ್ರ.
 (2)ನಾಲ್ಕನೆಯ ಒಂದರಷ್ಟು ಸಭೆಯ ಸದಸ್ಯರು ಸಹಿ ಮಾಡಿದ ಪ್ರಸ್ತಾವ ಮತ್ತು 15 ದಿನಗಳ ಸೂಚನಾ ಪತ್ರ
 (3)ಸಭೆಯ ಒಟ್ಟು ಸದಸ್ಯರ ಮೂರನೆಯ ಎರಡರಷ್ಟು ಸದಸ್ಯರು ಸಹಿ ಮಾಡಿದ ಪ್ರಸ್ತಾವ ಹಾಗೂ 14 ದಿನಗಳ ಸೂಚನಾಪತ್ರ
 (4)ನಿರ್ದಿಷ್ಟ ಸಭೆಯ ನಾಲ್ಕನೆಯ ಒಂದರಷ್ಟು ಸದಸ್ಯರು ಸಹಿಮಾಡಿದ ಪ್ರಸ್ತಾವ ಹಾಗೂ 14 ದಿನಗಳ ಸೂಚನಾಪತ್ರ
CORRECT ANSWER

(4) ನಿರ್ದಿಷ್ಟ ಸಭೆಯ ನಾಲ್ಕನೆಯ ಒಂದರಷ್ಟು ಸದಸ್ಯರು ಸಹಿಮಾಡಿದ ಪ್ರಸ್ತಾವ ಹಾಗೂ 14 ದಿನಗಳ ಸೂಚನಾಪತ್ರ


32.ಇಂದ್ರಾ ಸಾಹನಿ ಮತ್ತು ಇತರರು Vs ಭಾರತ ಒಕ್ಕೂಟ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪರಿಗಣಿಸಿರಿ.
 a.ಹಿಂದುಳಿದ ವರ್ಗಗಳ ಪೌರರನ್ನು ಕೇವಲ ಆರ್ಥಿಕ ಮಾನದಂಡದ ಮೇಲೆ ಗುರುತಿಸಬಹುದು.
 b.ಹಿಂದುಳಿದ ವರ್ಗಗಳಿಂದ ಕೆನೆಪದರವನ್ನು ತೆಗೆದು ಹಾಕಬೇಕು
 c.ಮೀಸಲಾತಿಯು 50% ಮೀರಬಾರದು
 d.ಹೊಸ ಮಾನದಂಡಗಳಿಗೆ ಸಂಬಂಧಿಸಿದ ವಿವಾದಗಳನ್ನು ಕೇವಲ ಸರ್ವೋಚ್ಚ ನ್ಯಾಯಾಲಯದಲ್ಲಿ ಮಾತ್ರ ಎತ್ತಬಹುದು.
 ಮೇಲಿನ ಯಾವ ಹೇಳಿಕೆಗಳು ಸರಿಯಾಗಿಲ್ಲ ?
 (1)a ಮಾತ್ರ
 (2)b ಮತ್ತು c
 (3)a ಮತ್ತು c
 (4)b, c ಮತ್ತು d
CORRECT ANSWER

(1) a ಮಾತ್ರ


33.ಕೆಳಗಿನವುಗಳಲ್ಲಿ ಸಂವಿಧಾನದ ಯಾವ ವಿಧಿಗಳಿಗೆ ತಿದ್ದುಪಡಿ ತರಲು ಸಂಸತ್ತಿನ ಎರಡೂ ಸಭೆಗಳಲ್ಲಿ ಮೂರನೆಯ ಎರಡರಷ್ಟು ಬಹುಮತ ಹಾಗೂ ಅರ್ಧದಷ್ಟು ರಾಜ್ಯಗಳ ಸಮ್ಮತಿಯ ಅಗತ್ಯವಿದೆ
 (1)ಭಾರತದ ಪೌರತ್ವಕ್ಕೆ ಸಂಬಂಧಿಸಿದ ವಿಧಿ 1
 (2)ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳಲ್ಲಿ ಬಳಸುವ ಭಾಷೆಗೆ ಸಂಬಂಧಿಸಿದ ವಿಧಿ 348(1)
 (3)ವಿಧಾನ ಪರಿಷತ್ತಿನ ರಚನೆಗೆ ಸಂಬಂಧಿಸಿದ ವಿಧಿ 172(2)
 (4)ಉಚ್ಛ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಧಿಗಳು 214-231.
CORRECT ANSWER

(4) ಉಚ್ಛ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಧಿಗಳು 214-231.


34.ಸಂವಿಧಾನದ X ನೇ ಪರಿಶಿಷ್ಟದ ಮೇರೆಗೆ ಅನುಚ್ಛೇದ 102 (2) ಹಾಗೂ 191(2) ಕ್ಕೆ ಸಂಬಂಧಿಸಿದಂತೆ ಅನರ್ಹಗೊಳಿಸುವುದಕ್ಕೆ ಕಾರಣ/ಆಧಾರಗಳು ಯಾವುವು ?
 (1)ಚುನಾಯಿತ ಸದಸ್ಯನು ತಾನು ಯಾವ ರಾಜಕೀಯ ಪಕ್ಷಕ್ಕೆ ಸೇರಿರುವನೋ ಆ ಪಕ್ಷದ ಸದಸ್ಯತ್ವವನ್ನು ಸ್ವಯಿಚ್ಛೆಯಿಂದ ತ್ಯಜಿಸಿದರೆ
 (2)ಪೂರ್ವಾನುಮತಿಯನ್ನು ಪಡೆಯದೆ, ತನ್ನ ರಾಜಕೀಯ ಪಕ್ಷ ಅಥವಾ ಅಧಿಕೃತ ಯಾರೇ ವ್ಯಕ್ತಿಯಿಂದ ಹಾಗೆ ಮಾಡುವುದಕ್ಕೆ ಹೊರಡಿಸಿದ ನಿರ್ದೇಶನದ ಅನುಸಾರವಾಗಿ ಆತನು ಮತ ಚಲಾಯಿಸಿದರೆ ಅಥವಾ ಮತ ಚಲಾಯಿಸುವುದರಿಂದ ಹಿಂದೆ ಸರಿದರೆ
 (3)ಚುನಾವಣೆಗೆ ಮೊದಲು ತನ್ನ ರಾಜಕೀಯ ಪಕ್ಷವಲ್ಲದೆ ಮತ್ತೊೊಂದು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾದರೆ
 (4)ಸಂವಿಧಾನದ ಪರಿಶಿಷ್ಟದಲ್ಲಿ ಅಂತಹ ಯಾವುದೇ ಉಪಬಂಧಗಳನ್ನು ನೀಡಲಾಗಿಲ್ಲ
CORRECT ANSWER

(1) ಚುನಾಯಿತ ಸದಸ್ಯನು ತಾನು ಯಾವ ರಾಜಕೀಯ ಪಕ್ಷಕ್ಕೆ ಸೇರಿರುವನೋ ಆ ಪಕ್ಷದ ಸದಸ್ಯತ್ವವನ್ನು ಸ್ವಯಿಚ್ಛೆಯಿಂದ ತ್ಯಜಿಸಿದರೆ


35.ಈ ಮುಂದಿನ ಯಾವ ತುರ್ತು ಪರಿಸ್ಥಿತಿ ನಮ್ಮ ಸಂವಿಧಾನದಲ್ಲಿ ಮಾನ್ಯ ಮಾಡಲಾದ ರೂಪವಾಗಿಲ್ಲ ?
 (1)ಯುದ್ಧ, ಬಾಹ್ಯ ಆಕ್ರಮಣ ಅಥವಾ ಶಸ್ತ್ರ ದಂಗೆಯ ಕಾರಣಕ್ಕಾಗಿ ತುರ್ತುಪರಿಸ್ಥಿತಿ
 (2)ರಾಜ್ಯಗಳಲ್ಲಿ ಸಾಂವಿಧಾನಿಕ ಕಾರ್ಯತಂತ್ರದ ವಿಫಲತೆಯ ಕಾರಣಕ್ಕಾಗಿ ತುರ್ತುಪರಿಸ್ಥಿತಿ
 (3)ನೈಸರ್ಗಿಕ ಅವಘಡದ ಕಾರಣಕ್ಕಾಗಿ ತುರ್ತುಪರಿಸ್ಥಿತಿ
 (4)ಹಣಕಾಸಿನ ತುರ್ತುಪರಿಸ್ಥಿತಿ
CORRECT ANSWER

(3) ನೈಸರ್ಗಿಕ ಅವಘಡದ ಕಾರಣಕ್ಕಾಗಿ ತುರ್ತುಪರಿಸ್ಥಿತಿ


36.ಹಣಕಾಸು ಆಯೋಗದ ಸಂಬಂಧದಲ್ಲಿ ಈ ಮುಂದಿನ ಹೇಳಿಕೆಯನ್ನು ಪರ್ಯಾಲೋಚಿಸಿ.
 a.ಆಯೋಗದ ಶಿಫಾರಸುಗಳು, ಭಾರತದ ವಿತ್ತೀಯ ಸಂಯುಕ್ತ ವ್ಯವಸ್ಥೆಯ ಸುಸ್ಥಿತಿಗೆ ಬಹುಮುಖ್ಯವಾದುವು.
 b.ಆಯೋಗಕ್ಕೆ ನೆರವಾಗಲು ಹಣಕಾಸು ಸಚಿವಾಲಯದಲ್ಲಿ ಸಣ್ಣ ಸಂಶೋಧನಾ ಘಟಕವನ್ನು ಸೃಜಿಸಲಾಗಿದೆ.
 c.ಪ್ರತಿ ಆಯೋಗವು ಹೊಸದಾಗಿ ಪ್ರಾರಂಭಗೊಳ್ಳುತ್ತದೆ ಮತ್ತು ಅದು ವಿಶ್ಲೇಷಣೆ ಕೈಗೊಳ್ಳುವುದಕ್ಕೆ ಅದಕ್ಕೆ ನಿಗದಿತ ಕಾಲ ಮಿತಿಯನ್ನು ಕೊಡಲಾಗುತ್ತದೆ.
 d.ಆಯೋಗವು ಸ್ಥಾಪನೆಗೊಂಡಾಗ ಪರಿಶೀಲನಾಂಶಗಳನ್ನು ಸರ್ಕಾರವು ತೀರ್ಮಾನಿಸುತ್ತದೆ.
 ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ
 (1)a, b ಮತ್ತು d
 (2)c ಮಾತ್ರ
 (3)b, c ಮತ್ತು d
 (4)ಮೇಲಿನ ಎಲ್ಲವೂ
CORRECT ANSWER

(2) c ಮಾತ್ರ


37.ಭಾರತ ಸಂವಿಧಾನದಲ್ಲಿ ಅಲ್ಪಸಂಖ್ಯಾತ ಗುಂಪಿನ ಸವಲತ್ತುಗಳಿಗೆ ಸಂಬಂಧಿಸಿದ ವಿಧಿಗಳು
 (1)29 ರಿಂದ 30 ನೇ ವಿಧಿ
 (2)25 ರಿಂದ 28 ನೇ ವಿಧಿ
 (3)350A ಯಿಂದ 351 ನೇ ವಿಧಿ
 (4)371 ರಿಂದ 371 F ವಿಧಿ
CORRECT ANSWER

(1) 29 ರಿಂದ 30 ನೇ ವಿಧಿ


38.ಸಂಸತ್ತಿನ ನಾಮನಿರ್ದೇಶಿತ ಸದಸ್ಯ ಯಾವ ಸಂದರ್ಭದಲ್ಲಿ ಅನರ್ಹನಾಗುತ್ತಾನೆ ?
 (1)6 ತಿಂಗಳ ಅವಧಿಯ ನಂತರ ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಿಕೊಂಡರೆ
 (2)6 ತಿಂಗಳ ಅವಧಿಯ ಮುನ್ನವೆ ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಿಕೊಂಡರೆ
 (3)6 ತಿಂಗಳ ಅವಧಿಯ ಮೊದಲು ಮತ್ತು ನಂತರದಲ್ಲಿ ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಿಕೊಂಡರೆ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(2) 6 ತಿಂಗಳ ಅವಧಿಯ ಮುನ್ನವೆ ಯಾವುದಾದರೂ ರಾಜಕೀಯ ಪಕ್ಷವನ್ನು ಸೇರಿಕೊಂಡರೆ


39.1993 ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು
 (1)ಸಂವಿಧಾನಿಕ ಸಂಸ್ಥೆ
 (2)ಶಾಸನಬದ್ಧ ಸಂಸ್ಥೆ
 (3)ಕಾರ್ಯಾಂಗೀಯ ಸಂಸ್ಥೆ
 (4)ಅಧಿಕ(ವಿಶೇಷ)ಸಂವಿಧಾನಾತ್ಮಕ ಸಂಸ್ಥೆ
CORRECT ANSWER

(2) ಶಾಸನಬದ್ಧ ಸಂಸ್ಥೆ


40.ಈ ಮುಂದಿನ ಯಾವುದು ಆರ್ಥಿಕ ಬೆಳವಣಿಗೆಯ ನಿಜವಾದ ಸೂಚಿಯೆಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ ?
 (1)ಒಂದು ವರ್ಷದ ಅವಧಿಯಲ್ಲಿ ಸ್ಥಿರ ಬೆಲೆಗಳಲ್ಲಿ ರಾಷ್ಟ್ರೀಯ ವರಮಾನದಲ್ಲಿ ಏರಿಕೆ
 (2)ನಿಜವಾದ ತಲಾವಾರು ಆದಾಯದಲ್ಲಿ ಒಂದು ತಾಳಿಕೆಯ ಏರಿಕೆ
 (3)ಪ್ರಚಲಿತ ದರಗಳಲ್ಲಿ ರಾಷ್ಟ್ರೀಯ ವರಮಾನದಲ್ಲಿ ಒಂದು ತಾಳಿಕೆಯ ಏರಿಕೆ
 (4)ಜನಸಂಖ್ಯೆಯ ಏರಿಕೆಯ ಜೊತೆಗೆ ರಾಷ್ಟ್ರೀಯ ವರಮಾನದಲ್ಲಿ ಒಂದು ಏರಿಕೆ
CORRECT ANSWER

(2) ನಿಜವಾದ ತಲಾವಾರು ಆದಾಯದಲ್ಲಿ ಒಂದು ತಾಳಿಕೆಯ ಏರಿಕೆ


41.ಭಾರತದಲ್ಲಿ ರಾಕೇಶ್ ಮೋಹನ್ ಸಮಿತಿಯು ಈ ಮುಂದಿನದಕ್ಕೆ ಸಂಬಂಧಿಸಿದೆ.
 (1)ಮೂಲಭೂತ ಸೌಕರ್ಯಗಳ ಅಭಿವೃದ್ದಿ
 (2)ಹಣಕಾಸು ವಲಯ
 (3)ಪಂಚಾಯತಿ ರಾಜ್
 (4)ಸಾರ್ವಜನಿಕ ವಲಯ ಉದ್ಯಮಗಳು
CORRECT ANSWER

(1) ಮೂಲಭೂತ ಸೌಕರ್ಯಗಳ ಅಭಿವೃದ್ದಿ


42.ಭಾರತದ ಸಂದಾಯ ಶಿಲ್ಕಿನಲ್ಲಿನ ಬಂಡವಾಳ ಲೆಕ್ಕವನ್ನು ಈ ಮುಂದಿನಂತೆ ವರ್ಗೀಕರಿಸಲಾಗಿದೆ
 (1)ಖಾಸಗಿ ಬಂಡವಾಳ, ಬ್ಯಾಂಕಿಂಗ್ ಬಂಡವಾಳ ಮತ್ತು ಅಧಿಕೃತ ಬಂಡವಾಳ
 (2)ಮರ್ಕಂಡೈಸ್ ಮತ್ತು ಇನವಿಸಿಬಲ್ಸ್
 (3)ವರ್ಗಾವಣೆ ಪಾವತಿಗಳು, ವಿಮೆ ಮತ್ತು ವರಮಾನ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಖಾಸಗಿ ಬಂಡವಾಳ, ಬ್ಯಾಂಕಿಂಗ್ ಬಂಡವಾಳ ಮತ್ತು ಅಧಿಕತ ಬಂಡವಾಳ


43.ಹಣಕಾಸು ಆಯೋಗವು ಈ ಮುಂದಿನ ಮೂರು ಬಾಬುಗಳ ಬಗ್ಗೆ ವ್ಯವಹರಿಸುತ್ತದೆ.
 a.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ತೆರಿಗೆಗಳ ಹಂಚಿಕೆ
 b.ಸರ್ಕಾರಿ ಸಹಾಯಾನುದಾನವನ್ನು ನಿಯಂತ್ರಿಸುವ ತತ್ವಗಳು
 c.ಪ್ರತ್ಯಕ್ಷ ತೆರಿಗೆ ದರಗಳು
 d.ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಸಂಪನ್ಮೂಲಗಳನ್ನು ಒದಗಿಸುವುದು
 ಸಂಕೇತಗಳು.
 (1)a, d, b
 (2)c, b, a
 (3)d, c, b
 (4)a, c, d
CORRECT ANSWER

(2) c, b, a


44.NITI ಆಯೋಗದ ಪ್ರಕಾರ್ಯಗಳು ಈ ಮುಂದಿನ ಯಾವುದನ್ನು ಒಳಗೊಳ್ಳುತ್ತವೆ ?
 a.ಸಹಕಾರಿ ಸಂಯುಕ್ತ ವ್ಯವಸ್ಥೆ
 b.ಭಾರತ ಸರ್ಕಾರದ ನೀತಿ ಸೂತ್ರ ನಿರೂಪಣೆಗಾಗಿ ಚಿಂತಕರ ಚಾವಡಿ
 c.ವಿಕೇಂದ್ರೀಕೃತ ಯೋಜನೆ
 d.ಪಂಚವಾರ್ಷಿಕ ಯೋಜನೆಗಳ ವಿನ್ಯಾಸ
 ಸಂಕೇತಗಳು.
 (1)c, b, d
 (2)a, c, b
 (3)d, a, b
 (4)a, c, d
CORRECT ANSWER

(2) a, c, b


45.CSO ದ ಭಾರತೀಯ ಸೇವಾ ವಲಯಗಳ ವರ್ಗೀಕರಣ ಈ ಮುಂದಿನ ಯಾವುದನ್ನು ಒಳಗೊಳ್ಳುತ್ತದೆ.
 a.ವ್ಯಾಪಾರ, ಹೋಟೆಲ್ ಗಳು, ಮತ್ತು ರೆಸ್ಟೋರೆಂಟ್ ಗಳು
 b.ಹಡಗು ಸಾಗಣೆ
 c.ಸಮುದಾಯ, ಸಾಮಾಜಿಕ ಮತ್ತು ವೈಯಕ್ತಿಕ ಸೇವೆಗಳು
 d.ಹಣಕಾಸು, ವಿಮೆ, ರಿಯಲ್ ಎಸ್ಟೇಟ್ ಮತ್ತು ವ್ಯವಹಾರೀ ಸೇವೆಗಳು
 ಸಂಕೇತಗಳು.
 (1)a, c, b
 (2)a, b, d
 (3)d, c, b
 (4)a, c, d
CORRECT ANSWER

(4) a, c, d


46.ಪೂರ್ವದಲ್ಲಿ ಪಂಚವಾರ್ಷಿಕ ಯೋಜನೆಗಳು______ರಿಂದ ಅನುಮೋದನೆಗೊಂಡವು.
 a.ರಾಷ್ಟ್ರೀಯ ಅಭಿವೃದ್ಧಿ ಪರಿಷತ್ತು
 b.ಪಾರ್ಲಿಮೆಂಟ್ (ಸಂಸತ್ತು)
 c.ಭಾರತದ ರಾಷ್ಟ್ರಪತಿ
 d.ಮೇಲಿನ ಯಾರೂ ಅಲ್ಲ
 ಸಂಕೇತಗಳು.
 (1)a ಮಾತ್ರ
 (2)c ಮಾತ್ರ
 (3)d ಮಾತ್ರ
 (4)b ಮಾತ್ರ
CORRECT ANSWER

(1) a ಮಾತ್ರ


47. GDP ಯ ಮೌಲ್ಯವನ್ನು ಅಳೆಯಲು 2 ಮಾರ್ಗಗಳಿವೆ.
 a.ಉತ್ಪಾದನೆಯ ದಷ್ಟಿಕೋನದಿಂದ
 b.ಆದಾಯದ ದಷ್ಟಿಕೋನದಿಂದ
 c.ಉಳಿತಾಯದ ದಷ್ಟಿಕೋನದಿಂದ
 d.ಹೂಡಿಕೆಯ ದಷ್ಟಿಕೋನದಿಂದ
 ಕೆಳಗೆ ನೀಡಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
 (1)a & c
 (2)b & d
 (3)a & b
 (4)c & d
CORRECT ANSWER

(3) a & b


48.MGNREGA ನ ಅನ್ವಯ ಬಡಜನರಿಗೆ ಉದ್ಯೋಗವು ಖಾತರಿಯಾಗಿರುವ ಅವಧಿಯು
 (1)365 ದಿನಗಳು
 (2)30 ದಿನಗಳು
 (3)100 ದಿನಗಳು
 (4)ಮೇಲಿನ ಯಾವುದೂ ಅಲ್ಲ
CORRECT ANSWER

(3) 100 ದಿನಗಳು


49.ಭಾರತದ ಜನಸಂಖ್ಯಾ ಶಾಸ್ತ್ರೀಯವಾದ ಗಣನೀಯ ಅನುಕೂಲವೆಂದರೆ ಈ ಕೆಳಗಿನದನ್ನು ಹೊಂದಿರುವುದು
 (1)ದೊಡ್ಡ ಪ್ರಮಾಣದ ಯುವಜನತೆ
 (2)ಜನಸಂಖ್ಯೆಯ ಅಧಿಕ ಬೆಳವಣಿಗೆಯ ದರ
 (3)ಜನಸಂಖ್ಯೆಯ ಕಡಿಮೆ ಬೆಳವಣಿಗೆಯ ದರ
 (4)ಜನಸಂಖ್ಯೆಯ ಸ್ಥಿರ ಬೆಳವಣಿಗೆಯ ದರ
CORRECT ANSWER

(1) ದೊಡ್ಡ ಪ್ರಮಾಣದ ಯುವಜನತೆ


50.ಕರ್ನಾಟಕ ರಾಜ್ಯ ಸರ್ಕಾರ 2014 ರಲ್ಲಿ ಜಾರಿಗೆ ತಂದ ‘ಪ್ರಿಯದರ್ಶಿನಿ ಯೋಜನೆ’ಯ ಉದ್ದೇಶವೆಂದರೆ
 (1)ಮಕ್ಕಳ ಸಬಲೀಕರಣ
 (2)ಯುವಕರ ಸಬಲೀಕರಣ
 (3)ಮಹಿಳಾ ಸಬಲೀಕರಣ
 (4)ಮೇಲಿನ ಎಲ್ಲವೂ
CORRECT ANSWER

(3) ಮಹಿಳಾ ಸಬಲೀಕರಣ


51.ಭಾರತದಲ್ಲಿ ‘ಕಂದು ಕ್ರಾಂತಿ’ ಸಂಬಂಧಿಸಿರುವುದು
 (1)ಪೀಠೋಪಕರಣ
 (2)ಗೃಹ ವಸತಿ
 (3)ಸಾರಿಗೆ
 (4)ವ್ಯಾಪಾರ
CORRECT ANSWER

(2) ಗೃಹ ವಸತಿ


52.ಈ ಕೆಳಗಿನವುಗಳನ್ನು ಹೊಂದಿಸಿರಿ.
 a.ಅಂಜೆಲಾ ಮರ್ಕೆಲ್1.ಮಿಸ್ ಯುನಿವರ್ಸ್ 2015
 b.ಸುಂದರ್ ಪಿಚೈ2.ನೊಬೆಲ್ ಪ್ರಶಸ್ತಿ ವಿಜೇತ
 c.ತಿಯಾ ಅಲಾಂಜೊ ವರ್ಸ್ಬಾಕ್3.ಜರ್ಮನ್ ಚಾನ್ಸಲರ್
 dಬೆಳೆಯುತ್ತಿರುವ ಅಸಹಿಷ್ಣುತೆ4.ಗೂಗಲ್ ಸಿಇಓ
  abcc
 (1)1234
 (2)4321
 (3)3412
 (4)3142
CORRECT ANSWER

(3) 3, 4, 1, 2


53.ಲೈಟ್ ಇಯರ್ ಎಂಬುದು ಯಾವುದರ ಏಕಮಾನ ?
 (1)ಕಾಲ
 (2)ದೂರ
 (3)ಬೆಳಕು
 (4)ಬೆಳಕಿನ ತೀವ್ರತೆ
CORRECT ANSWER

(2) ದೂರ


54.ಮಳೆಗಾಲದ ದಿನದಂದು, ನೀರಿನ ಮೇಲಿರುವ ಚಿಕ್ಕ ತೈಲ ಪದರಗಳು, ಪ್ರಖರವಾದ ಬಣ್ಣಗಳನ್ನು ತೋರ್ಪಡಿಸುತ್ತವೆ. ಈ ವಿದ್ಯಮಾನ ಯಾವುದು ?
 (1)ಚದುರುವಿಕೆ
 (2)ವ್ಯತೀಕರಣ
 (3)ವಿವರ್ತನ
 (4)ದ್ರುವೀಕರಣ
CORRECT ANSWER

(2) ವ್ಯತೀಕರಣ


55.ಒಂದು ಸೆಮಿಕಂಡಕ್ಟರನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದನ್ನು ಆಧರಿಸಿ ಸೂಕ್ತ ಕಲ್ಮಶಗಳನ್ನು ಅದಕ್ಕೆ ಸೇರಿಸಲಾಗುವುದು. ಹೀಗೆ ಮಾಡುವುದರ ಉದ್ದೇಶವೇನು ?
 (1)ಅದರ ಆಯುಷ್ಯವನ್ನು ಹೆಚ್ಚಿಸಲು
 (2)ಅದು, ಅಧಿಕ ವೋಲ್ಟೇಜುಗಳನ್ನು ತಾಳಿಕೊಳ್ಳುವಂತೆ ಮಾಡಲು
 (3)ಅದರ ವಿದ್ಯುತ್ ವಾಹಕತ್ವವನ್ನು ಹೆಚ್ಚಿಸಲು
 (4)ಅದರ ವಿದ್ಯುತ್ ಪ್ರತಿರೋಧಕತ್ವವನ್ನು ಹೆಚ್ಚಿಸಲು
CORRECT ANSWER

(3) ಅದರ ವಿದ್ಯುತ್ ವಾಹಕತ್ವವನ್ನು ಹೆಚ್ಚಿಸಲು


56.ಜ್ವಾಲಾಮುಖಿಗಳು ಸ್ಫೋಟಗೊಂಡಾಗ ಸಾಮಾನ್ಯವಾಗಿ
 (1)ವಾತಾವರಣವು ತಂಪಾಗುತ್ತದೆ
 (2)ವಾತಾವರಣವು ಬಿಸಿಯಾಗುತ್ತದೆ
 (3)ಬಿಸಿಯಾಗುವುದಾಗಲೀ, ತಂಪಾಗುವುದಾಗಲೀ ಆಗುವುದಿಲ್ಲ
 (4)ಯಾದೃಚ್ಛಿಕ ವರ್ತನೆ (ಹೇಗೆ ಬೇಕಾದರೂ ಆಗಬಹುದು)
CORRECT ANSWER

(1) ವಾತಾವರಣವು ತಂಪಾಗುತ್ತದೆ


57.ಹಸಿರು ಮನೆ ಪರಿಣಾಮದಿಂದ ಯಾವ ರೀತಿಯ ವಿಕಿರಣವು ಭೂಮಿಯ ಮೇಲ್ಮೈಯಲ್ಲಿ ಹಿಡಿದಿಡಲ್ಪಡುತ್ತದೆ ?
 (1)ಯು ವಿ ಕಿರಣಗಳು
 (2)ಕ್ಷ-ಕಿರಣಗಳು
 (3)ಗೋಚರ
 (4)ರಕ್ತ ವರ್ಣಾತೀತ ಕಿರಣಗಳು
CORRECT ANSWER

(4) ರಕ್ತ ವರ್ಣಾತೀತ ಕಿರಣಗಳು


58.ಸೀಸ ಮತ್ತು ಟಿನ್ ಗಳನ್ನು ಸಮಪ್ರಮಾಣದಲ್ಲಿ ಹೊಂದಿರುವ ಮಿಶ್ರಲೋಹವನ್ನು ಹೀಗೆನ್ನುತ್ತಾರೆ
 (1)ಸೋಲ್ಡರ್
 (2)ಗನ್ ಮೆಟಲ್
 (3)ಮ್ಯಾಸ್ ನಾಕ್ಸ್
 (4)ಕಾನ್ ಸ್ಟ್ಯಾಂಟನ್
CORRECT ANSWER

(1) ಸೋಲ್ಡರ್


59. ಬ್ರೀಡರ್ ರಿಯಾಕ್ಟರ್ ನಲ್ಲಿ ಬಳಸಲಾಗುವ ನ್ಯೂಕ್ಲಿಯರ್ ಇಂಧನ
 (1)ಪೊಲೋನಿಯಂ
 (2)ಯುರೇನಿಯಂ
 (3)ಥೋರಿಯಂ
 (4)ರೇಡಿಯಂ
CORRECT ANSWER

(3) ಥೋರಿಯಂ


60.ನಮಗೆ ಗೊತ್ತಿರುವ ಅತ್ಯಂತ ಕಠಿಣವಾದ ವಸ್ತು
 (1)ವಜ್ರ
 (2)ಬೋರಾನ್ ಕಾರ್ಬೈಡ್
 (3)ಅಲ್ಯೂಮಿನಿಯಂ ಕಾರ್ಬೈಡ್
 (4)ಸಿಲಿಕಾನ್ ಕಾರ್ಬೈಡ್
CORRECT ANSWER

(1) ವಜ್ರ


61.ಒಂದು ಲೋಹವನ್ನು ನಿರ್ವಾತದಲ್ಲಿರಿಸಿದಾಗ
 (1)20 ನಿಮಿಷಗಳಲ್ಲಿ ಸಂಕ್ಷಾರಣ ನಡೆಯುತ್ತದೆ
 (2)24 ಗಂಟೆಗಳಲ್ಲಿ ಸಂಕ್ಷಾರಣ ನಡೆಯುತ್ತದೆ
 (3)ಸಂಕ್ಷಾರಣವು ನಡೆಯುವುದಿಲ್ಲ
 (4)1 ವರ್ಷದಲ್ಲಿ ಸಂಕ್ಷಾರಣ ನಡೆಯುತ್ತದೆ
CORRECT ANSWER

(3) ಸಂಕ್ಷಾರಣವು ನಡೆಯುವುದಿಲ್ಲ


62.ಬಾಕ್ಸೈಟ್ ಯಾವುದರ ಅದಿರು ?
 (1)ಬೆಳ್ಳಿ
 (2)ನಿಕಲ್
 (3)ಅಲ್ಯೂಮಿನಿಯಂ
 (4)ಚೆಮಾಲೈಟ್
CORRECT ANSWER

(3) ಅಲ್ಯೂಮಿನಿಯಂ


63.ನಿರ್ಲಿಂಗ ಸಸ್ಯ ಸಂವರ್ಧನೆಗೆ, ಸಸ್ಯದ ಈ ಕೆಳಗಿನ ಭಾಗಗಳನ್ನು ಬಳಸುವುದಿಲ್ಲ.
 a.ಎಲೆ
 b.ಕಾಂಡ
 c.ಬೇರು
 d.ಬೀಜ
 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿ ಉತ್ತರ ತಿಳಿಸಿ.
 (1)a ಮತ್ತು d
 (2)a ಮತ್ತು c
 (3)d ಮಾತ್ರ
 (4)b ಮಾತ್ರ
CORRECT ANSWER

(3) d ಮಾತ್ರ


64.ರಾತ್ರಿಯ ಹೊತ್ತು ಇಂಗಾಲದ ಡೈ ಆಕ್ಸೈಡ್ ನ್ನು ಬಿಡುಗಡೆ ಮಾಡುವ ಸಸ್ಯದ ಮೆಟಬಾಲಿಕ್ ಚಟುವಟಿಕೆಯನ್ನು ಈ ಕೆಳಗಿನ ಪದವು ವಿವರಿಸುತ್ತದೆ .
 a.ಬಾಷ್ಪವಿಸರ್ಜನೆ
 b.ಉಸಿರಾಟ
 c.ದ್ಯುತಿ ಸಂಶ್ಲೇಷಣೆ
 d.ಬಿಂದು ಸ್ರಾವ
 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರ ತಿಳಿಸಿ.
 (1)a ಮಾತ್ರ
 (2)b ಮಾತ್ರ
 (3)c ಮಾತ್ರ
 (4)d ಮಾತ್ರ
CORRECT ANSWER

(2) b ಮಾತ್ರ


65. ಕೆಳಗಿನ ಯಾವ ವಿವರಣೆ ತಪ್ಪಾಗಿದೆ ?
 a.ಎಲ್ಲಾ ಅಣಬೆಗಳೂ ತಿನ್ನಬಹುದಾದಂಥವು
 b.ಎಲ್ಲಾ ಅಣಬೆಗಳೂ ಬೆಳ್ಳಗಿರುತ್ತವೆ
 c.ಅಣಬೆಗಳು ಪೂತಿಜನ್ಯ ಸಸ್ಯಗಳಾಗಿವೆ
 d.ಅಣಬೆಗಳು ಪೌಷ್ಠಿಕಾಂಶಗಳ ಸಮದ್ಧ ಆಕರಗಳಾಗಿವೆ
 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರ ತಿಳಿಸಿ.
 (1)a ಮತ್ತು b
 (2)b ಮತ್ತು c
 (3)c ಮತ್ತು d
 (4)a ಮತ್ತು d
CORRECT ANSWER

(1) a ಮತ್ತು b


66.ಈ ಕೆಳಗಿನ ಯಾವ ಪ್ರಾಣಿ ಉತ್ಪನ್ನವನ್ನು ಆರೋಗ್ಯವನ್ನು ಪ್ರವರ್ಧಿಸುವ ಪ್ರೊಬಯಾಟಿಕ್ ಎಂದು ಪರಿಗಣಿಸಲಾಗಿದೆ
 a.ಹಾಲು
 b.ಮೊಟ್ಟೆ
 c.ಮಾಂಸ
 d.ಮೊಸರು
 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರ ತಿಳಿಸಿ.
 (1)a ಮತ್ತು c
 (2)b ಮತ್ತು c
 (3)a ಮಾತ್ರ
 (4)d ಮಾತ್ರ
CORRECT ANSWER

(4) d ಮಾತ್ರ


67.ಕೆಳಗಿನ ಯಾವ ಪದವು ಮೋಟಾರು ವಾಹನಗಳನ್ನು ಹಾಗೂ ಪಂಪ್ ಸೆಟ್‌ಗಳನ್ನು ನಡೆಸುವುದಕ್ಕಾಗಿ ಬಳಸಲಾಗುವ ಶೈವಲ, ಶಿಲೀಂಧ್ರ ಹಾಗೂ ಉನ್ನತ ವರ್ಗದ ಸಸ್ಯಗಳಂತಹ ಜೈವಿಕ ಜೀವಿಗಳಿಂದ ಉತ್ಪಾದಿತವಾದ ಇಂಧನವನ್ನು ಸಾಮೂಹಿಕವಾಗಿ ವಿವರಿಸುವ ಪದವಾಗಿದೆ
 a.ಬಯೋ ಇಥೆನಾಲ್
 b.ಬಯೋ ಡೀಸೆಲ್
 c.ಜೈವಿಕ ಅನಿಲ
 d.ಜೈವಿಕ ಇಂಧನ
 ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರ ತಿಳಿಸಿ.
 (1)a ಮತ್ತು c
 (2)c ಮಾತ್ರ
 (3)a ಮಾತ್ರ
 (4)d ಮಾತ್ರ
CORRECT ANSWER

(4) d ಮಾತ್ರ


68.1-1-2011 ಶನಿವಾರವಾದರೆ 1-1-2020
 (1)ಭಾನುವಾರ
 (2)ಸೋಮವಾರ
 (3)ಮಂಗಳವಾರ
 (4)ಬುಧವಾರ
CORRECT ANSWER

(4) ಬುಧವಾರ


69.A, B, C, D, E ಗಳ ಎತ್ತರಕ್ಕೆ ಅನುಗುಣವಾಗಿ
 a.E ಎಲ್ಲರಿಗಿಂತಲೂ ಚಿಕ್ಕವನು
 b.F ನು A ಗಿಂತ ದೊಡ್ಡವನು
 c.C ಯು A ಮತ್ತು B ಮಧ್ಯದಲ್ಲಿದ್ದಾನೆ
 ಎಲ್ಲರೂ ಎತ್ತರಕ್ಕನುಗುಣವಾಗಿ ಕುಳಿತರೆ ಮಧ್ಯದಲ್ಲಿ ಬರುವವರು
 (1)A
 (2)B
 (3)C
 (4)D
CORRECT ANSWER

(3) C


70.
 (1)
 (2)
 (3)
 (4)
CORRECT ANSWER

(2)


71.ಕೆಳಗಿನ ಹೇಳಿಕೆಗಳನ್ನು ಗಮನಿಸಿ.
ಎಲ್ಲಾ ಕಂಪ್ಯೂಟರ್‌ಗಳು ಟ್ಯಾಬ್ಲೆಟ್ಸ್ ಎಲ್ಲಾ ಟ್ಯಾಬ್ಲೆಟ್ ಗಳು ಮೊಬೈಲ್‌ಗಳು
ತೀರ್ಮಾನ :
 a.(a) ಎಲ್ಲಾ ಕಂಪ್ಯೂಟರ್ ಗಳು ಮೊಬೈಲ್ ಗಳು
 b.(b) ಕೆಲವು ಮೊಬೈಲ್ ಗಳು ಕಂಪ್ಯೂಟರ್ ಗಳು
 (1)(a) ಮಾತ್ರ ಸರಿ
 (2)(b) ಮಾತ್ರ ಸರಿ
 (3)(a) ಮತ್ತು (b) ಎರಡೂ ಸರಿ
 (4)(a) ಆಗಲೀ ಅಥವಾ (b) ಆಗಲೀ ಸರಿ ಅಲ್ಲ
CORRECT ANSWER

(3) (a) ಮತ್ತು (b) ಎರಡೂ ಸರಿ


72.ನಿಮ್ಮ ಅಧೀನ ಕೆಲಸಗಾರರು ಯಾವುದೇ ಒಂದು ಘಟನೆಯ ಬಗ್ಗೆ ವೈರುಧ್ಯದ ಮಾಹಿತಿ ನೀಡಿದಾಗ ಏನು ಮಾಡುವಿರಿ ?
 (1)ವೈರುಧ್ಯಾಂಶಗಳನ್ನು ಗುರುತಿಸಿ, ನಿಖರವಾದ ಮಾಹಿತಿಗೆ ಹುಡುಕುವುದು
 (2)ಅವರನ್ನು ಪರಿಗಣಿಸದೆ, ನಿಮಗೇನು ಬೇಕೋ ಅದನ್ನು ಮಾಡುವುದು
 (3)ಇತರ ಮೂಲಗಳಿಂದ, ಮಾಹಿತಿಯನ್ನು ಸಂಗ್ರಹಿಸುವುದು
 (4)ಇತರ ಕೆಲಸಗಳಲ್ಲಿ ತೊಡಗುವುದು
CORRECT ANSWER

(1) ವೈರುಧ್ಯಾಂಶಗಳನ್ನು ಗುರುತಿಸಿ, ನಿಖರವಾದ ಮಾಹಿತಿಗೆ ಹುಡುಕುವುದು


73. ಒಬ್ಬ ಟ್ರಾಫಿಕ್ ಇನ್‌ಸ್ಪೆಕ್ಟರ್‌ ತನ್ನ ಎಂದಿನ ತಪಾಸಣೆಯಲ್ಲಿರುವಾಗ, ಬೈಕ್ ಸವಾರನೊಬ್ಬನು ಹೆದ್ದಾರಿಯಲ್ಲಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿರುವುದನ್ನು ಕಾಣುತ್ತಾನೆ. ಮತ್ತು ಆ ಸವಾರನು ಸಿಗ್ನಲ್ಲನ್ನು ನಿರ್ಲಕ್ಷಿಸಿ ಪಲಾಯನ ಮಾಡುತ್ತಿದ್ದಾನೆ. ಈಗ ಇನ್‌ಸ್ಪೆಕ್ಟರನು
 (1)ಆ ಸವಾರನನ್ನು ತೀವ್ರವಾಗಿ ಬೆನ್ನಟ್ಟುವುದು
 (2)ಅವನನ್ನು ಅಡ್ಡಗಟ್ಟುವಂತೆ ಜನರಿಗೆ ಕೂಗಿ ಹೇಳುವುದು ಮತ್ತು ಅವರಿಂದ ಸಹಾಯ ಕೋರುವುದು
 (3)ಬೈಕಿನ ವಿವರಗಳೊಂದಿಗೆ ಮುಂದಿನ ತನಿಖಾ ಕೇಂದ್ರಕ್ಕೆ ಸಂಕೇತ ಕಳಿಸುವುದು
 (4)ಮೇಲಿನ ಎಲ್ಲವೂ
CORRECT ANSWER

(3) ಬೈಕಿನ ವಿವರಗಳೊಂದಿಗೆ ಮುಂದಿನ ತನಿಖಾ ಕೇಂದ್ರಕ್ಕೆ ಸಂಕೇತ ಕಳಿಸುವುದು


74.ನೀವು ಒಬ್ಬ ಆಡಳಿತಾಧಿಕಾರಿಯಾಗಿದ್ದೀರಿ ಹಾಗೂ ಒಂದು ಹಳ್ಳಿ ಕ್ಷೇತ್ರ ಸಂದರ್ಶನ ಕೈಗೊಂಡಿದ್ದೀರಿ. ನಿಮ್ಮ ಅಧೀನ ಅಧಿಕಾರಿಯೊಬ್ಬರು ನಿಮ್ಮ ಹೆಸರಿನಲ್ಲಿ ಆ ಹಳ್ಳಿಯಲ್ಲಿ ಹಣ ಕೀಳುತ್ತಿರುವ ಬಗ್ಗೆ ಅವರು ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಈ ಆಪಾದನೆಗಳಿಂದ ನಿಮಗೆ ಗಂಭೀರವಾಗಿ ಮುಜುಗರವಾಗುತ್ತದೆ. ಆಗ ನೀವು
 (1)ಆ ಉದ್ಯೋಗಿಯನ್ನು ಕರೆದು, ಅವನು ನಿಮ್ಮ ಹೆಸರಿನಲ್ಲಿ ಹಣ ಸಂಗ್ರಹಿಸಿದುದನ್ನು ಒಪ್ಪಿಕೊಂಡರೆ, ಆ ಹಣವನ್ನು ಜನರಿಗೆ ಹಿಂದಿರುಗಿಸುವಂತೆ ಕೇಳುವುದು ಮತ್ತು ಈ ಕೆಲಸವನ್ನು ಭವಿಷ್ಯದಲ್ಲಿ ಪುನರಾವರ್ತಿಸದಂತೆ ಎಚ್ಚರಿಕೆ ನೀಡುವುದು.
 (2)ಸ್ಥಳೀಯ ಪೊಲೀಸ್ ಠಾಣೆಯಲ್ಲಿ, ಭ್ರಷ್ಟಾಚಾರ ತಡೆ ಅಧಿನಿಯಮದಡಿಯಲ್ಲಿ ಆಪರಾಧಿಕ ಪ್ರಕರಣವನ್ನು ದಾಖಲಿಸುವುದು
 (3)ಅವನನ್ನು ಅಮಾನತುಗೊಳಿಸುವುದು ಮತ್ತು ಇಲಾಖಾ ನಡವಳಿಯನ್ನು ಪ್ರಾರಂಭಿಸುವುದಕ್ಕೆ ವಿವರಣೆ ಕೋರುವುದು
 (4)ಸದ್ಯದ ಕರ್ತವ್ಯದಿಂದ ವರ್ಗಾವಣೆ ಮಾಡಿಸುವುದು
CORRECT ANSWER

(1) ಆ ಉದ್ಯೋಗಿಯನ್ನು ಕರೆದು, ಅವನು ನಿಮ್ಮ ಹೆಸರಿನಲ್ಲಿ ಹಣ ಸಂಗ್ರಹಿಸಿದುದನ್ನು ಒಪ್ಪಿಕೊಂಡರೆ, ಆ ಹಣವನ್ನು ಜನರಿಗೆ ಹಿಂದಿರುಗಿಸುವಂತೆ ಕೇಳುವುದು ಮತ್ತು ಈ ಕೆಲಸವನ್ನು ಭವಿಷ್ಯದಲ್ಲಿ ಪುನರಾವರ್ತಿಸದಂತೆ ಎಚ್ಚರಿಕೆ ನೀಡುವುದು.


75.ಒಬ್ಬ ಮಾರಾಟಗಾರನು ತನ್ನ ದಾಸ್ತಾನಿನ 40% ಮಾವಿನ ಹಣ್ಣುಗಳನ್ನು ನಿರ್ದಿಷ್ಟ ದಿನದಂದು ಮಾರಾಟ ಮಾಡಿ ಉಳಿದರಲ್ಲಿ 20% ಅನ್ನು ಎಸೆಯುತ್ತಾನೆ. ಮಾರನೆ ದಿನ ಆತ ಉಳಿದಿದ್ದರಲ್ಲಿನ 50% ರಷ್ಟು ಮಾರಾಟ ಮಾಡಿ ಉಳಿದದ್ದನ್ನು ಎಸೆಯುತ್ತಾನೆ. ಹಾಗಿದ್ದರೆ ಆತನು ಶೇಕಡಾ ಎಷ್ಟು ಹಣ್ಣುಗಳನ್ನು ಎಸೆದ ಎಂಬುದನ್ನು ತಿಳಿಸಿ.
 (1)24
 (2)36
 (3)30
 (4)40
CORRECT ANSWER

(2) 36


76.ಒಂದು ಕಾರನ್ನು ಸರ್ವಿಸ್ ಮಾಡಿಸದಿದ್ದಾಗ ಪ್ರತಿಗಂಟೆಗೆ 50 ಕಿಮೀ ಗಳ ವೇಗ ಕೊಡುತ್ತಿತ್ತು. ಸರ್ವಿಸ್ ಮಾಡಿಸಿದಾಗ ಪ್ರತಿಗಂಟೆಗೆ 60 ಕಿಮೀ ಗಳ ವೇಗ ಕೊಡುತ್ತಿತ್ತು. ಹೀಗೆ ಸರ್ವಿಸ್ ಮಾಡಿಸಿದ ನಂತರ, ಕಾರು ಯಾವುದೋ ಒಂದು ನಿರ್ದಿಷ್ಟ ದೂರವನ್ನು ಆರು ಗಂಟೆಗಳಲ್ಲಿ ಕ್ರಮಿಸಿತು. ಕಾರನ್ನು ಸರ್ವಿಸ್ ಮಾಡಿಸದಿದ್ದಾಗ ಇಷ್ಟೇ ದೂರವನ್ನು ಕ್ರಮಿಸಲು ಅದು ತೆಗೆದುಕೊಳ್ಳುತ್ತಿದ್ದ ಸಮಯ ಎಷ್ಟು ?
 (1)8.2 ಗಂಟೆಗಳು
 (2)6.5 ಗಂಟೆಗಳು
 (3)8 ಗಂಟೆಗಳು
 (4)7.2 ಗಂಟೆಗಳು
CORRECT ANSWER

(4) 7.2 ಗಂಟೆಗಳು


77.ಒಬ್ಬ ವ್ಯಕ್ತಿಯು ತನ್ನ ಬುಟ್ಟಿಯಲ್ಲಿ ಮೊಟ್ಟೆಗಳನ್ನು ಯಾವ ರೀತಿ ತುಂಬಿಸುತ್ತಾನೆಂದರೆ, ಪ್ರತಿ ಮುಂದಿನ ದಿನದಂದು ಆತ ಅದರಲ್ಲಿ ಸೇರಿಸುವ ಮೊಟ್ಟೆಗಳ ಸಂಖ್ಯೆಯು ಈಗಾಗಲೇ ಬುಟ್ಟಿಯಲ್ಲಿ ಎಷ್ಟು ಮೊಟ್ಟೆಗಳಿದ್ದವೊ ಅಷ್ಟೇ ಆಗಿರುತ್ತದೆ. ಈ ರೀತಿಯಾಗಿ ಈ ಬುಟ್ಟಿಯು 24 ದಿನಗಳಲ್ಲಿ ಸಂಪೂರ್ಣ ಭರ್ತಿಯಾಗುತ್ತದೆ. ಹಾಗಿದ್ದರೆ ಎಷ್ಟು ದಿನಗಳ ನಂತರ ಈ ಬುಟ್ಟಿಯು ¼ ರಷ್ಟು ಭರ್ತಿಯಾಗಿತ್ತು ?
 (1)6
 (2)12
 (3)17
 (4)22
CORRECT ANSWER

(4) 22


78.ಅನಿಲ್ ಸುನೀಲ್ ಗಿಂತ ಚಿಕ್ಕವನು ಮತ್ತು ಅವರ ವಯಸ್ಸುಗಳ ಮೊತ್ತ 86 ವರ್ಷ. ಅವರ ನಡುವಿನ ವಯಸ್ಸಿನ ಅಂತರವು 30 ವರ್ಷಕ್ಕಿಂತ ಹೆಚ್ಚಾಗಿದೆ. ಹಾಗಾಗಿ ಅನಿಲ್ ಮತ್ತು ಸುನೀಲ್ ನ ವಯಸ್ಸುಗಳು ಅನುಕ್ರಮವಾಗಿ (ವರ್ಷಗಳಲ್ಲಿ) ಈ ಮುಂದಿನಂತಿವೆ.
 (1)27 ಮತ್ತು 59
 (2)20 ಮತ್ತು 66
 (3)36 ಮತ್ತು 50
 (4)ಅವರ ವಯಸ್ಸುಗಳನ್ನು ನಿರ್ಧರಿಸಲು ಅಂಕಿ-ಅಂಶಗಳು ಸಾಲದು.
CORRECT ANSWER

(4) ಅವರ ವಯಸ್ಸುಗಳನ್ನು ನಿರ್ಧರಿಸಲು ಅಂಕಿ-ಅಂಶಗಳು ಸಾಲದು.


79.ಈ ಮುಂದಿನದು, ಮತ್ತೊಂದು ಅಸ್ಥಿರ ಸಂಖ್ಯೆ (variable) (X) ನ ವಿವಿಧ ಮೌಲ್ಯಗಳಿಗೆ ಸಂವಾದಿಯಾಗಿ ಒಂದು ಅಸ್ಥಿರ ಸಂಖ್ಯೆ (variable) (Y) ನ ಪ್ರತಿಕ್ರಿಯೆಯ ಅಳತೆಯ ಮೇಲಿನ ಅಂಕಿ ಅಂಶವಾಗಿದೆ.
ಹಾಗಿರುವಾಗ, ಸರಿಯಾದ ಹೇಳಿಕೆ ಯಾವುದು
 (1)X ಮತ್ತು Y ಗಳು ಧನಾತ್ಮಕವಾಗಿ ಸಹಸಂಬಂಧಿಸಿದೆ.
 (2)X ನಲ್ಲಿನ ಬದಲಾವಣೆಗಳಿಗೂ, Y ನಲ್ಲಿನ ಬದಲಾವಣೆಗಳಿಗೂ ಸಂಬಂಧವಿಲ್ಲ
 (3)X ಮತ್ತು Y ಗಳ ಋಣಾತ್ಮಕವಾಗಿ ಸಹಸಂಬಂಧಿಸಿದೆ.
 (4)X ಮತ್ತು Y ಗಳನ್ನು ತಾಳೆ ಮಾಡಲು ಅಂಕಿ-ಅಂಶಗಳು ಸಾಲದು.
CORRECT ANSWER

(3) X ಮತ್ತು Y ಗಳ ಋಣಾತ್ಮಕವಾಗಿ ಸಹಸಂಬಂಧಿಸಿದೆ.


80.ದುಬಾರಿ ವೆಚ್ಚದ ವಿದ್ಯುತ್ ಯಾವುದು
 (1)ಜಲ ವಿದ್ಯುತ್
 (2)ಶಾಖೋತ್ಪನ್ನ ವಿದ್ಯುತ್
 (3)ಸೌರ ವಿದ್ಯುತ್
 (4)ಪವನ ವಿದ್ಯುತ್
CORRECT ANSWER

(3) ಸೌರ ವಿದ್ಯುತ್


81. ಗಂಗಾ ಕಲ್ಯಾಣ ಯೋಜನೆಯ ದೈಯೋದ್ದೇಶ
 (1)ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಒದಗಿಸುವುದು
 (2)ಹಿಂದುಳಿದ ವರ್ಗದವರಿಗೆ ಕೊಳವೆ ಬಾವಿ ಒದಗಿಸುವುದು
 (3)ಗಂಗಾ ನದಿಯನ್ನು ಕಾವೇರಿ ನದಿಯೊಂದಿಗೆ ಜೋಡಣೆ ಮಾಡುವುದು
 (4)ಸಾಮೂಹಿಕ ವಿವಾಹ ಕೈಗೊಳ್ಳುವುದು
CORRECT ANSWER

(2) ಹಿಂದುಳಿದ ವರ್ಗದವರಿಗೆ ಕೊಳವೆ ಬಾವಿ ಒದಗಿಸುವುದು


82. ಮುಂದಿನ ಯಾವ ಪ್ರದೇಶವು ಭಾರತದ ಜೀವ ವೈವಿಧ್ಯ ಕೇಂದ್ರೀಕೃತ ಪ್ರದೇಶ (ಹಾಟ್ ಸ್ಪಾಟ್) ವಾಗಿದೆ ?
 (1)ಪಶ್ಚಿಮ ಘಟ್ಟಗಳು
 (2)ಪೂರ್ವ ಬಯಲುಗಳು
 (3)ಅರಾವಳಿ ಶ್ರೇಣಿ
 (4)ಸಾತ್ಪುರ ಪರ್ವತ ಶ್ರೇಣಿ
CORRECT ANSWER

(1) ಪಶ್ಚಿಮ ಘಟ್ಟಗಳು


83. ವಿಶ್ವ ಭೂಮಿ ದಿನವನ್ನು ಪ್ರತಿವರ್ಷ ಆಚರಿಸುವ ದಿನ
 (1)21 ನೇ ಮಾರ್ಚ್
 (2)22 ನೇ ಏಪ್ರಿಲ್
 (3)5 ನೇ ಜೂನ್
 (4)2 ನೇ ಅಕ್ಟೋಬರ್
CORRECT ANSWER

(2) 22 ನೇ ಏಪ್ರಿಲ್


84.‘ಆನೆ ಯೋಜನೆ’ ಯೋಜನೆಯು ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳಲ್ಲಿ ಆನೆ ಆವಾಸಸ್ಥಾನಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಗಮನ ಹರಿಸುತ್ತದೆ. ಈ ಯೋಜನೆಯಡಿಯಲ್ಲಿ ಕೈಗೊಳ್ಳಲಾಗುವ ಕಾರ್ಯವು ಮುಂದಿನ ಯಾವುದನ್ನು ಒಳಗೊಳ್ಳುವುದಿಲ್ಲ ?
 (1)ಮೀಸಲು ಪ್ರದೇಶಗಳ ಎಲ್ಲೆಗಳಲ್ಲಿನ ಜಾನುವಾರುಗಳನ್ನು ಪ್ರತಿರಕ್ಷಿಸುವುದು
 (2)ಪಳಗಿಸಿದ ಆನೆಗಳ ಮೋಜಣಿ ಮಾಡುವುದು ಮತ್ತು ನೋಂದಾಯಿಸುವುದು
 (3)ಶಾಮಕ (ಶಮನಕಾರಕ) ಪರಿಕರಗಳು ಹಾಗು ಮದ್ದುಗಳನ್ನು ಸಂಗ್ರಹಿಸುವುದು
 (4)ಎಕ್ಸ್-ಸೀಟು ಸಂರಕ್ಷಣೆಗಾಗಿ ಮೃಗಾಲಯಗಳು ಹಾಗೂ ಸಾಫಾರಿಗಳನ್ನು ಸ್ಥಾಪಿಸುವುದು
CORRECT ANSWER

(4) ಎಕ್ಸ್-ಸೀಟು ಸಂರಕ್ಷಣೆಗಾಗಿ ಮಗಾಲಯಗಳು ಹಾಗೂ ಸಾರಿಗಳನ್ನು ಸ್ಥಾಪಿಸುವುದು


85. ಯಾವುದೇ ಸ್ಥಳದ ಅಕ್ಷಾಂಶ, ರೇಖಾಂಶ ಮತ್ತು ಲಂಬೋನ್ನತಿಯ ಬಗೆಗಿನ ಮಾಹಿತಿಯನ್ನು ಒದಗಿಸಬಲ್ಲಂತಹ ಸಾಧನ ಮುಂದಿನವುಗಳಲ್ಲಿ ಯಾವುದು ?
 (1)ದಿಕ್ಸೂಚಕ (ಅಲಿಡೇಡ್)
 (2)ಕೋನ ಮಾಪಕ (ಥಿಯಾಡಲೈಟ್)
 (3)ಜಾಗತಿಕ ಸ್ಥಾನನಿರ್ಧರಣ ವ್ಯವಸ್ಥೆ (ಜಿಪಿಎಸ್)
 (4)ಒಟ್ಟು ಸ್ಥಾನ ಮೋಜಣಿ ಸಾಧನ
CORRECT ANSWER

(3) ಜಾಗತಿಕ ಸ್ಥಾನನಿರ್ಧರಣ ವ್ಯವಸ್ಥೆ (ಜಿಪಿಎಸ್)


86.ಬಾಲ್ಯ ವಿವಾಹ ನಿಷೇಧ ಕಾನೂನು 2006 ಹಾಗೂ ನಿಯಮಗಳ 2008 ಪ್ರಕಾರ ವಧು ಮತ್ತು ವರರಿಗೆ ಕ್ರಮವಾಗಿ ಕನಿಷ್ಠ ಮದುವೆ ವಯಸ್ಸು _________ ಇರಬೇಕು.
 (1)ವಧುವಿಗೆ 15 ವರ್ಷ ಹಾಗೂ ವರನಿಗೆ 18 ವರ್ಷ
 (2)ವಧುವಿಗೆ 16 ವರ್ಷ ಹಾಗೂ ವರನಿಗೆ 18 ವರ್ಷ
 (3)ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ
 (4)ವಧುವಿಗೆ 21 ವರ್ಷ ಹಾಗೂ ವರನಿಗೆ 24 ವರ್ಷ
CORRECT ANSWER

(3) ವಧುವಿಗೆ 18 ವರ್ಷ ಹಾಗೂ ವರನಿಗೆ 21 ವರ್ಷ


87.‘ಶಿಶು ಮರಣ ದರ’ ವನ್ನು ಈ ಕೆಳಗಿನ ಫಾರ್ಮುಲಾ ಉಪಯೋಗಿಸಿ ಕಂಡು ಹಿಡಿಯಲಾಗುತ್ತದೆ.
 (1)
 (2)
 (3)
 (4)ಮೇಲಿನವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1)


88.ಅಟಲ ಪಿಂಚಣಿ ಯೋಜನೆಯನ್ನು ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.
 a.ಚಂದಾದಾರರಿಗೆ ರೂ. 1,000 ದಿಂದ ರೂ. 5,000 ದವರೆಗಿನ ನಿರ್ದಿಷ್ಟ ಪಿಂಚಣಿ.
 b.ಪಿಂಚಣಿಗೆ ಸೇರಲು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳ ವಯಸ್ಸು
 c.ಚಂದಾದಾರರು ಕನಿಷ್ಠ 20 ವರ್ಷಗಳ ಅವಧಿಗೆ ಠೇವಣಿ ನೀಡಬೇಕಾಗುತ್ತೆ.
 d.ಇದು ಮೂಲತಃ ಸಂಘಟಿತ ವಲಯದ ಕಾರ್ಮಿಕರನ್ನು ಗುರಿಯಾಗಿಸಿಕೊಂಡಿ.
 ಈ ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾದುದು ಎಂಬುದನ್ನು ಈ ಕೆಳಗೆ ನೀಡಿದ ಸಂಕೇತಗಳಿಂದ ಹೇಳಿರಿ.
 (1)a, b, c, d
 (2)b, c, d
 (3)a, b, c
 (4)c, d
CORRECT ANSWER

(3) a, b, c


89.ಯಾರ ಅಧ್ಯಕ್ಷತೆಯಲ್ಲಿ ಆಟೊ ಇಂಧನ ದಷ್ಟಿ ಮತ್ತು ನೀತಿ 2025 ಸಮಿತಿಯನ್ನು ರಚಿಸಲಾಯಿತು ?
 (1)ಡಾ. ಸಿ. ರಂಗರಾಜ್
 (2)ಶ್ರೀ. ಸುಮಿತ್ರಾ ಚೌಧುರಿ
 (3)ಡಾ. ಆರ್.ಎ. ಮಶೆಲ್ ಕರ್‌
 (4)ಡಾ. ಆರ್. ಚಡ್ಡಾ
CORRECT ANSWER

(2) ಶ್ರೀ. ಸುಮಿತ್ರಾ ಚೌಧುರಿ


90.ಈ ಕೆಳಗಿನ ಯಾವ ರಾಜ್ಯದಲ್ಲಿ ಮ್ಯಾನ್‌ಗ್ರೋವ್‌ ಅರಣ್ಯ ಇರುವುದಿಲ್ಲ ?
 (1)ಪಶ್ಚಿಮ ಬಂಗಾಲ
 (2)ಉತ್ತರಾಖಂಡ
 (3)ಗುಜರಾತ್‌
 (4)ಒರಿಸ್ಸಾ
CORRECT ANSWER

(2) ಉತ್ತರಾಖಂಡ


91.IAEA ವರದಿ ಪ್ರಕಾರ ಭಾರತವು ಅಣುಶಕ್ತಿ ಮೂಲದ ಉತ್ಪಾದನೆಯಲ್ಲಿ ಎಷ್ಟನೆಯ ಸ್ಥಾನವನ್ನು ಹೊಂದಿದೆ
 (1)14
 (2)12
 (3)8
 (4)10
CORRECT ANSWER

(2) 12


92.ಸೊಳ್ಳೆಗಳಿಂದ ಹರಡುವ ಜೀಕಾ ವೈರಸ್ಸು ?
 a.ಜೀಕಾ ವೈರಸು ಏಡಿಸ್ ಏಜಿಪ್ತಿ ಸೊಳ್ಳೆಯಿಂದ ಸಾಗಿಸಲ್ಪಡುವ ವೈರಸ್
 b.ಈ ವೈರಸ್ಸನ್ನು ಮೊಟ್ಟ ಮೊದಲ ಬಾರಿಗೆ 1947 ರಲ್ಲಿ ಯುಗಾಂಡಾ ದೇಶದಲ್ಲಿ ಗುರುತಿಸಲಾಯಿತು ಮತ್ತು ಇದರ ಹೆಸರು ಜೀಕಾ ಅರಣ್ಯ ಪ್ರದೇಶದಿಂದ ಬಂದಿದೆ.
 c.ಇದು ಕಿರಿಯ ತಲೆಯ ರೋಗಕ್ಕೆ ಕಾರಣವಾಗುತ್ತದೆ, ಹುಟ್ಟುವ ಮಕ್ಕಳ ತಲೆಯು ಗಣನಿಯವಾಗಿ ಚಿಕ್ಕದಾಗಿದ್ದು ಮತ್ತು ಮೆದುಳು ಹಾನಿಗೆ ಕಾರಣವಾಗುತ್ತದೆ
 d.ಪ್ರಸ್ತುತ ಈ ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಾಗಲೀ ಅಥವಾ ಲಸಿಕೆಯಾಗಲಿ ಲಭ್ಯವಿಲ್ಲ
 ಈ ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾದುದು ಎಂಬುದನ್ನು ಈ ಕೆಳಗೆ ನೀಡಿದ ಸಂಕೇತಗಳಿಂದ ಹೇಳಿರಿ.
 (1)a, b
 (2)a, b, c
 (3)a, b, c, d
 (4)b, c, d
CORRECT ANSWER

(3) a, b, c, d


93.ಕಚ್ಚಾತೈಲ ರಫ್ತಿನ 40 ವರ್ಷಗಳ ನಿಷೇಧವನ್ನು ಯಾವ ದೇಶ ಮೊಟಕುಗೊಳಿಸಿದೆ
 (1)ಇರಾಕ್‌
 (2)ಕುವೈತ್‌
 (3)ಫ್ರಾನ್ಸ್‌
 (4)ಅಮೇರಿಕಾ
CORRECT ANSWER

(4) ಅಮೇರಿಕಾ


94.2015 ರ ಜ್ಞಾನ ಪೀಠ ಪ್ರಶಸ್ತಿ ಯಾರಿಗೆ ನೀಡಲಾಗಿದೆ ?
 (1)ರಘುವೀರ ಚೌಧರಿ
 (2)ಡಾ. ಎಮ್. ಎಮ್. ಕಲಬುರಗಿ
 (3)ರಾಜೇಂದ್ರ
 (4)ಉಮಾ ಶಂಕರ ಜೋಷಿ
CORRECT ANSWER

(1) ರಘುವೀರ ಚೌಧರಿ


95. ಕರ್ನಾಟಕದಲ್ಲಿ ನಿರಾಮಯ ಕಾರ್ಯಕ್ರಮವೆಂದೆ
 (1)ಆರೋಗ್ಯ ವಿಮಾ ಯೋಜನೆ
 (2)ಕೃಷಿ ವಿಮಾ ಯೋಜನೆ
 (3)ಜೀವ ವಿಮಾ ಯೋಜನೆ
 (4)ಕಾರ್ಮಿಕರ ವಿಮಾ ಯೋಜನೆ
CORRECT ANSWER

(1) ಆರೋಗ್ಯ ವಿಮಾ ಯೋಜನೆ


96.ವಜ್ರ ಚತುಷ್ಕೋನ ರೈಲ್ವೆ ಜಾಲದ ಮೂಲಕ ಈ ಕೆಳಕಂಡ ನಗರಗಳನ್ನು ಸಂಪರ್ಕಿಸಬಹುದು
 (1)ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ
 (2)ಪಶ್ಚಿಮ ಬಂಗಾಳ, ರಾಜಸ್ತಾನ, ಕೋಲ್ಕತ್ತಾ, ಚೆನ್ನೈ
 (3)ದೆಹಲಿ, ರಾಜಸ್ತಾನ, ಚೆನ್ನೈ, ಕೋಲ್ಕತ್ತಾ
 (4)ಮುಂಬೈ, ರಾಜಸ್ತಾನ, ಚೆನ್ನೈ, ಕೋಲ್ಕತ್ತಾ
CORRECT ANSWER

(1) ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ


97.ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಅನುಷ್ಟಾನ ಗೊಳಿಸುತ್ತಿರುವ ಇಲಾಖೆ _____
 (1)ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆ
 (2)ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ
 (3)ಕೈಗಾರಿಕಾ ಮತ್ತು ವಾಣಿಜ್ಯ ಆಯುಕ್ತಾಲಯ
 (4)ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ
CORRECT ANSWER

(1) ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆ


98.ಕರ್ನಾಟಕದಲ್ಲಿ ಗೋಕುಲ ಗ್ರಾಮ ಎಂಬ ಹೊಸ ಯೋಜನೆಯನ್ನು ಈ ಕೆಳಗಿನವುಗಳಲ್ಲಿ ಯಾವ ಇಲಾಖೆ ಅನುಷ್ಠಾನಗೊಳಿಸಲಾಗುತ್ತಿದೆ ?
 (1)ಕೃಷಿ ಇಲಾಖೆ
 (2)ಕಂದಾಯ ಇಲಾಖೆ
 (3)ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ
 (4)ಪಶುವೈದ್ಯ ಸೇವಾ ಇಲಾಖೆ
CORRECT ANSWER

(3) ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ


99.2011 ರ ಜನಗಣತಿ ಪ್ರಕಾರ ಭಾರತದ ಸಾಕ್ಷರತಾ ಪ್ರಮಾಣ
 (1)75.65%
 (2)73.00%
 (3)75.20%
 (4)65.25%
CORRECT ANSWER

(2) 73.00%


100.ಕೇಂದ್ರೀಯ ಅಂಕಿ ಅಂಶಗಳ ಕಛೇರಿ (ಸಿ.ಎಸ್.ಓ), ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ, ಇದು ರಾಷ್ಟ್ರೀಯ ಆದಾಯದ ಗಣನೆಗಾಗಿ ತನ್ನ ಮೂಲ/ತಳ ವರ್ಷವನ್ನು ______________ಎಂದು ಪರಿಷ್ಕರಿಸಿದೆ.
 (1)2008-09
 (2)2010-11
 (3)2011-12
 (4)2012-13
CORRECT ANSWER

(3) 2011-12


   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment