WhatsApp Group Join Now
Telegram Group Join Now

kpsc group c Paper2 Specific Paper previous question paper 13.04.2016

KPSC GROUP ‘C’ (Assistant Manager in the Dept. of Karnataka Food & Civil Supplies Corporation Ltd.) ನಿರ್ದಿಷ್ಟ ಪತ್ರಿಕೆ ಪತ್ರಿಕೆ-2 ಪ್ರಶ್ನೆಪತ್ರಿಕೆ

ಪ್ರಶ್ನೆ ಪುಸ್ತಿಕೆ : ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)

ವಿಷಯ ಸಂಕೇತ: 76

ವರ್ಷನ್‌ ಕೋಡ್‌: A

ಗರಿಷ್ಠ ಸಮಯ : 2ಗಂಟೆಗಳು

ಗರಿಷ್ಠ ಅಂಕಗಳು: 150 (One and half marks for each question)

ಪರೀಕ್ಷೆ ನಡೆದ ದಿನಾಂಕ : 13-04-2016 (2.00 pm to 4.00 pm)

1.ಹೆನ್ರಿ ಫಯೋಲ್ ಸಂಬಂಧಿಸಿರುವುದು ಇದಕ್ಕೆ
 (1)ನಿರ್ವಹಣಾಚರ್ಯೆ ಶಾಲೆ
 (2)ಶಾಸ್ತ್ರೀಯ ನಿರ್ವಹಣಾ ಶಾಲೆ
 (3)ಅನುಭವಿಕ ನಿರ್ವಹಣಾ ಶಾಲೆ
 (4)ನಿರ್ಣಯ ನಿರ್ವಹಣಾ ಶಾಲೆ
CORRECT ANSWER

(2) ಶಾಸ್ತ್ರೀಯ ನಿರ್ವಹಣಾ ಶಾಲೆ


2.ನಿರ್ವಹಣಾ ತತ್ವಗಳಿಗೆ ಇರುವುದು
 (1)ಪರಿಮಿತಿ ಅನ್ವಯ
 (2)ಅಸಂಗತ ಅನ್ವಯ
 (3)ಸಾರ್ವತ್ರಿಕ ಅನ್ವಯ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(3) ಸಾರ್ವತ್ರಿಕ ಅನ್ವಯ


3.ಪ್ರೋಮ್ಸ್ ನ ಪ್ರೇರಣಾ ಸಿದ್ಧಾಂತವನ್ನು ಹೀಗೂ ಸಂಬೋಧಿಸುತ್ತಾರೆ
 (1)ನಿರೀಕ್ಷಣಾ ಸಿದ್ಧಾಂತ
 (2)X ಸಿದ್ಧಾಂತ ಮತ್ತು Y ಸಿದ್ಧಾಂತ
 (3)ಅವಶ್ಯ ಕ್ರಮಾಗತ ಸಿದ್ಧಾಂತ
 (4)ಆರೋಗ್ಯ ವಿಜ್ಞಾನ ಸಿದ್ಧಾಂತ
CORRECT ANSWER

(1) ನಿರೀಕ್ಷಣಾ ಸಿದ್ಧಾಂತ


4.ಕೆಳಗಿನ ಯಾವುದು ಸಮಯಾಧಾರಿತ ಉತ್ತೇಜನ ಯೋಜನೆ ?
 (1)ಗ್ಯಾಂಟ್ಸ್ ನ ಕಾರ್ಯ ಮತ್ತು ಇನಾಮು ಯೋಜನೆ
 (2)ಸಮುದಾಯ ಉತ್ತೇಜಕ ಯೋಜನೆ
 (3)ಲಾಭಾಂಶ ಹಂಚುವಿಕೆ ಯೋಜನೆ
 (4)ಹಾಲ್ಸೆ ಯೋಜನೆ
CORRECT ANSWER

(4) ಹಾಲ್ಸೆ ಯೋಜನೆ


5.ಬಾಡಿಗೆ ರಹಿತ ವಸತಿ ಎನ್ನುವುದು
 (1)ಪರಿಹಾರ
 (2)ಉತ್ತೇಜನ
 (3)ಫ್ರಿಂಜ್ ಲಾಭ
 (4)ವಿಶೇಷ ಸವಲತ್ತು
CORRECT ANSWER

(4) ವಿಶೇಷ ಸವಲತ್ತು


6.ತೆರಿಗೆ ತಪ್ಪಿಸಿಕೊಳ್ಳುವಿಕೆ ಎನ್ನುವುದು
 (1)ಕಾನೂನು ಬಾಹಿರ
 (2)ನೀತಿ ತತ್ವರಹಿತ
 (3)ಕಾನೂನು ಚೌಕಟ್ಟಿನೊಳಗಿನ ಸಂದಾಯ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(3) ಕಾನೂನು ಚೌಕಟ್ಟಿನೊಳಗಿನ ಸಂದಾಯ


7.ಬ್ರೇಕ್ ಈವನ್ ಬಿಂದು ಸೂಚಿಸುವುದು
 (1)ಲಾಭವೂ ಇಲ್ಲ ನಷ್ಟವೂ ಇಲ್ಲ
 (2)ಲಾಭ ಮತ್ತು ನಷ್ಟದ ಏರಿಕೆ
 (3)ಲಾಭ ಮತ್ತು ನಷ್ಟದ ಇಳಿಕೆ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ಲಾಭವೂ ಇಲ್ಲ ನಷ್ಟವೂ ಇಲ್ಲ


8.ಹ್ಯಾಲೋ ಎರರ್ ಪ್ರವೃತ್ತಿಯು, ವ್ಯಕ್ತಿಯ ನಿರ್ವಹಣಾ ಸಾಮರ್ಥ್ಯವನ್ನು ಅಳೆಯುವುದು ಇದರ ಆಧಾರದ ಮೇಲೆ
 (1)ಗುಣಲಕ್ಷಣಗಳಲ್ಲಿನ ಒಂದು ವಿಶೇಷ ಲಕ್ಷಣ
 (2)ತಪ್ಪು ಕಲ್ಪನೆಗಳು
 (3)ಸಾದೃಶ ತಪ್ಪುಗಳು
 (4)ಮನೋವೈಜ್ಞಾನಿಕ ಪ್ರತಿಬಂಧಕಗಳು
CORRECT ANSWER

(1) ಗುಣಲಕ್ಷಣಗಳಲ್ಲಿನ ಒಂದು ವಿಶೇಷ ಲಕ್ಷಣ


9.ಸಂಸ್ಥೆಯ ನಡವಳಿಕೆಯನ್ನು ಪ್ರಭಾವಿಸುವ ಅಂಶಗಳು
 (1)ಜನ ಸಮುದಾಯ
 (2)ಪರಿಸರ
 (3)ತಂತ್ರಜ್ಞಾನ
 (4)ಇವುಗಳಲ್ಲಿ ಎಲ್ಲವೂ
CORRECT ANSWER

(4) ಇವುಗಳಲ್ಲಿ ಎಲ್ಲವೂ


10.‘Might is Right’ ಉದ್ದೇಶವು
 (1)ಆಟೊಕ್ರಾಟಿಕ್ ಮಾದರಿ
 (2)ಕಸ್ಟೋಡಿಯಲ್ ಮಾದರಿ
 (3)ಸಪೋರ್ಟಿವ್ ಮಾದರಿ
 (4)ಕಾಲೇಜಿಯಲ್ ಮಾದರಿ
CORRECT ANSWER

(1) ಆಟೊಕ್ರಾಟಿಕ್ ಮಾದರಿ


11.ಈ ವಿಧಾನವನ್ನು ವಸ್ತುಗಳ ಅಲ್ಪಾವಧಿ ಮಾರಾಟವನ್ನು ಹೆಚ್ಚಿಸಲು ಬಳಸುತ್ತಾರೆ
 (1)ಜಾಹೀರಾತು
 (2)ಮಾರಾಟ ಉನ್ನತಿ
 (3)ಪ್ರಚಾರ
 (4)ಸಾರ್ವಜನಿಕ ಸಂಪರ್ಕ
CORRECT ANSWER

(2) ಮಾರಾಟ ಉನ್ನತಿ


12.ಲೇಬಲಿಂಗ್ ಮತ್ತು ಪ್ಯಾಕೇಜಿಂಗ್ ಸಂಯೋಜನೆಗೊಂಡಿರುವುದು
 (1)ಬೆಲೆ ಸಂಯೋಜನೆ
 (2)ಉತ್ಪನ್ನ ಸಂಯೋಜನೆ
 (3)ಉನ್ನತಿ ಸಂಯೋಜನೆ
 (4)ಸ್ಥಳ ಸಂಯೋಜನೆ
CORRECT ANSWER

(2) ಉತ್ಪನ್ನ ಸಂಯೋಜನೆ


13.ಬಫರ್ ದಾಸ್ತಾನು (ಸ್ಟಾಕ್) ಎನ್ನುವುದು
 (1)ಪ್ರತ್ಯಕ್ಷ ದಾಸ್ತಾನಿನ ಅರ್ಧಭಾಗ
 (2)ಕ್ರಮಬದ್ಧ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿರುವುದು
 (3)ಕನಿಷ್ಠ ದಾಸ್ತಾನು ಮಟ್ಟಕ್ಕೆ ನಿರ್ದಿಷ್ಟ ದಾಸ್ತಾನು ಮಟ್ಟವು ಇಳಿಯದಂತೆ
 (4)ದಾಸ್ತಾನಿನಲ್ಲಿರುವ ಗರಿಷ್ಠ ಮೊತ್ತ
CORRECT ANSWER

(3) ಕನಿಷ್ಠ ದಾಸ್ತಾನು ಮಟ್ಟಕ್ಕೆ ನಿರ್ದಿಷ್ಟ ದಾಸ್ತಾನು ಮಟ್ಟವು ಇಳಿಯದಂತೆ


14.ದಾಸ್ತಾನು ಸ್ವೀಕರಿಸುವ ಮತ್ತು ಆದೇಶ ನೀಡುವ ಅಂತರವು
 (1)ನಿರ್ದೇಶ ವೇಳೆ
 (2)ಸಾಗಿಸುವ ವೇಳೆ
 (3)ಕೊರತೆ ವೇಳೆ
 (4)ಹೆಚ್ಚುವರಿ ವೇಳೆ
CORRECT ANSWER

(1) ನಿರ್ದೇಶ ವೇಳೆ


15.ಕೆಳಗಿನ ಯಾವುದು ದಾಸ್ತಾನು(ಇನ್ವೆಂಟರಿ)ಅಲ್ಲ?
 (1)ಉಪಕರಣ
 (2)ಕಚ್ಚಾ ವಸ್ತು
 (3)ಅಂತಿಮ ಉತ್ಪನ್ನಗಳು
 (4)ಬಳಕೆಗೆ ಯೋಗ್ಯವಾದ ಸಂಗ್ರಹ
CORRECT ANSWER

(1) ಉಪಕರಣ


16.ವಾಣಿಜ್ಯ ಬ್ಯಾಂಕ್ ಗಳಿಗೆ ಆರ್.ಬಿ.ಐ. ಕೊಡುವ ಹಣದ ಮೇಲಿನ ದರವು
 (1)ತಿರುಗಿಸಿದ (ರಿವರ್ಸ್) ರೆಪೊ ದರ
 (2)ರೆಪೊ ದರ
 (3)ಬ್ಯಾಂಕ್ ದರ
 (4)ಎರವಲು ದರ
CORRECT ANSWER

(2) ರೆಪೊ ದರ


17.ಷೇರುದಾರರ ಗಳಿಕೆಯನ್ನು ಹೆಚ್ಚಿಸಲು ಬಳಸುವ ಹೆಚ್ಚುವರಿ ಋಣ ಬಂಡವಾಳವು
 (1)ಟ್ರೇಡಿಂಗ್ ಆನ್ ಈಕ್ವಿಟಿ
 (2)ಆಪರೇಟಿಂಗ್ ಲೆವರೇಜ್
 (3)ಕಂಬೈನ್ಡ್‌ ಲೆವರೇಜ್
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ಟ್ರೇಡಿಂಗ್ ಆನ್ ಈಕ್ವಿಟಿ


18.ಕೆಳಗಿನ ಯಾವ ಸಾಂಪ್ರದಾಯಿಕ ಪದ್ಧತಿಯನ್ನು ಹೂಡಿಕೆ ಪ್ರಸ್ತಾಪದ ಮೌಲ್ಯಮಾಪನಕ್ಕೆ ಬಳಸಲಾಗುವುದು ?
 (1)ನೆಟ್ ಪ್ರೆಸೆಂಟ್ ವ್ಯಾಲ್ಯೂ ಪದ್ಧತಿ
 (2)ಇಂಟರ್ನಲ್ ರೇಟ್ ಆಫ್ ರಿಟರ್ನ್ ಪದ್ಧತಿ
 (3)ಪ್ರಾಫಿಟೆಬಿಲಿಟಿ ಇಂಡೆಕ್ಸ್ ಪದ್ಧತಿ
 (4)ಅಕೌಂಟಿಂಗ್ ರೇಟ್ ಆಫ್ ರಿಟರ್ನ್ ಪದ್ಧತಿ
CORRECT ANSWER

(4) ಅಕೌಂಟಿಂಗ್ ರೇಟ್ ಆಫ್ ರಿಟರ್ನ್ ಪದ್ಧತಿ


19.ದರ ಬದಲಾವಣೆಯು ಬೇಡಿಕೆಯ ಪ್ರಮಾಣದಲ್ಲಿ ಬದಲಾವಣೆ ತರದಿದ್ದರೆ, ಅಂತಹ ಸ್ಥಿತಿಯು
 (1)ಸರ್ವಥಾ ಸ್ಥಿತಿಸ್ಥಾಪಕವಲ್ಲದ ಬೇಡಿಕೆ
 (2)ಏಕ ಸ್ಥಿತಿಸ್ಥಾಪಕ ಬೇಡಿಕೆ
 (3)ಸರ್ವಥಾ ಸ್ಥಿತಿಸ್ಥಾಪಕ ಬೇಡಿಕೆ
 (4)ಏಕ ಸ್ಥಿತಿಸ್ಥಾಪಕ ಬೇಡಿಕೆಗಿಂತ ಹೆಚ್ಚು
CORRECT ANSWER

(1) ಸರ್ವಥಾ ಸ್ಥಿತಿಸ್ಥಾಪಕವಲ್ಲದ ಬೇಡಿಕೆ


20.ಪಂಥ (wagering) ಒಪ್ಪಂದವು
 (1)ಮಾನ್ಯ
 (2)ಶೂನ್ಯ
 (3)ನಿರರ್ಥಕ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(2) ಶೂನ್ಯ


21.ವಚನ ಪತ್ರದೊಳಗಿನ ಒಟ್ಟು ವ್ಯಕ್ತಿಗಳು
 (1)ನಾಲ್ಕು
 (2)ಮೂರು
 (3)ಎರಡು
 (4)ಐದು
CORRECT ANSWER

(3) ಎರಡು


22.ಯೋಗ್ಯ ಮತ್ತು ಉಪಕೃತವು (ಹಕ್ಕು ಮತ್ತು ಆಭಾರಗಳು) ವ್ಯಕ್ತಿಗಳ ನಡುವಿನ ಒಪ್ಪಂದದಿಂದಾಗುವುದಲ್ಲ, ಅದು ಕಾನೂನಿನ ಕ್ರಿಯೆಯಿಂದ, ಅಂತಹ ಒಪ್ಪಂದವನ್ನು ___________ ಎಂದು ಕರೆಯುತ್ತಾರೆ.
 (1)ವ್ಯಕ್ತ ಒಪ್ಪಂದ
 (2)ಇ.ಕಾಮ್ ಒಪ್ಪಂದ
 (3)ಮೇಲ್ನೋಟಕ್ಕೆ (Quasi) ಒಪ್ಪಂದ
 (4)ಪರೋಕ್ಷ (Implied) ಒಪ್ಪಂದ
CORRECT ANSWER

(3) ಮೇಲ್ನೋಟಕ್ಕೆ (Quasi) ಒಪ್ಪಂದ


23.ಭರವಸೆ ನೀಡಲೋಸುಗ ಕೈಗೊಳ್ಳುವ, ಒಟ್ಟು ಯೋಜನಾ ಕಾರ್ಯ ನಿರ್ವಹಣೆಯ ಮೌಲ್ಯಮಾಪನದ ಪ್ರಕ್ರಿಯೆಯನ್ನು ___________ ಎಂದು ಕರೆಯುತ್ತಾರೆ.
 (1)ಗುಣಮಟ್ಟ ವಾಗ್ದಾನ
 (2)ಗುಣಮಟ್ಟ ಯೋಜನೆ
 (3)ಗುಣಮಟ್ಟ ಹತೋಟಿ
 (4)ಗುಣಮಟ್ಟ ಲೆಕ್ಕ ಪರಿಶೋಧನೆ
CORRECT ANSWER

(1) ಗುಣಮಟ್ಟ ವಾಗ್ದಾನ


24.ಆದರ್ಶ ತ್ವರಿತ (ಪ್ರವಹಿಸುವ) ಅನುಪಾತವು
 (1)2 : 1
 (2)1 : 1
 (3)3 : 1
 (4)5 : 1
CORRECT ANSWER

(2) 1 : 1


25.ಯಾವ ರೀತಿಯ ಇ-ವಾಣಿಜ್ಯವು ಪರಸ್ಪರ ಗ್ರಾಹಕ ವ್ಯವಹಾರವನ್ನು ಅಭಿವ್ಯಕ್ತಿಸುತ್ತದೆ?
 (1)B2B
 (2)B2C
 (3)C2C
 (4)C2B
CORRECT ANSWER

(3) C2C


26.ಬಹುಸ್ಪರ್ಧಾತ್ಮಕ ಸಂಸ್ಥೆಗಳ ಸಣ್ಣ ಸ್ಥಿತಿಯು
 (1)ಏಕಸ್ವಾಮ್ಯ
 (2)ದ್ವಿಸ್ವಾಮ್ಯ
 (3)ಪರಿಪೂರ್ಣ ಸ್ಪರ್ಧೆ
 (4)ಅಲ್ಪಸಂಖ್ಯಾಸ್ವಾಮ್ಯ
CORRECT ANSWER

(4) ಅಲ್ಪಸಂಖ್ಯಾಸ್ವಾಮ್ಯ


27.ಶ್ರೀ ಎಕ್ಸ್ ರವರು ನಗದಿನಲ್ಲಿ ವ್ಯವಹಾರ ಶುರು ಮಾಡಿದರೆ ಯಾವುದನ್ನು ಡೆಬಿಟ್ ಮಾಡಲಾಗುತ್ತದೆ ?
 (1)ಬಂಡವಾಳ ಖಾತೆ
 (2)ನಗದು ಖಾತೆ
 (3)ಸೆಳೆತ ಖಾತೆ
 (4)ಮಾಲೀಕನ ಖಾತೆ
CORRECT ANSWER

(2) ನಗದು ಖಾತೆ


28.ಲೆಕ್ಕ ವರ್ಷದಲ್ಲಿ ಕಟ್ಟಿದ ಮುಂಗಡ ಬಾಡಿಗೆಯು
 (1)ಖರ್ಚು
 (2)ಆದಾಯ
 (3)ಆಸ್ತಿ
 (4)ಹೊಣೆ
CORRECT ANSWER

(3) ಆಸ್ತಿ


29.ಸಂಸ್ಥೆಯ ಒಡೆತನವನ್ನು ಪ್ರಕಟಪಡಿಸುವ ಹಣಕಾಸಿನ ಪಟ್ಟಿ ಯಾವುದು ?
 (1)ಆದಾಯ ಪಟ್ಟಿ
 (2)ಆಢಾವೆ ಪಟ್ಟಿ (Balance sheet)
 (3)ಗಳಿಸಿದ ಆದಾಯ ಪಟ್ಟಿ
 (4)ನಗದು ಹರಿವು ಪಟ್ಟಿ
CORRECT ANSWER

(2) ಆಢಾವೆ ಪಟ್ಟಿ (Balance sheet)


30.ಕೆಳಗಿನ ಯಾವುದು ಅಮೂರ್ತ ಆಸ್ತಿ ಅಲ್ಲ ?
 (1)ಪೇಟೆಂಟ್
 (2)ಭೂಮಿ
 (3)ಟ್ರೇಡ್ ಮಾರ್ಕ್
 (4)ಕಾಪಿರೈಟ್
CORRECT ANSWER

(2) ಭೂಮಿ


31.ಸವಕಳಿ ಎಂದರೆ
 (1)ಆಸ್ತಿ ನಷ್ಟ
 (2)ಬಳಕೆ (ಕಡಿತ ಮತ್ತು ಸವೆತ) ನಷ್ಟ
 (3)ವ್ಯವಹಾರದ ವೆಚ್ಚ
 (4)ಆಸ್ತಿ ಮೌಲ್ಯದಲ್ಲಿನ ಇಳಿಕೆ
CORRECT ANSWER

(4) ಆಸ್ತಿ ಮೌಲ್ಯದಲ್ಲಿನ ಇಳಿಕೆ


32.ಈ ಕೆಳಗಿನ ಯಾವ ಅಂಶ ಪರೋಕ್ಷ ತೆರಿಗೆಯ ಗುಣಲಕ್ಷಣವಾಗಿಲ್ಲ ?
 (1)ಅನುಕೂಲ
 (2)ತೆರಿಗೆ ತಪ್ಪಿಸುವಿಕೆ ಕಷ್ಟ
 (3)ಬಡವರಿಗೆ ಹಿತ
 (4)ಅರ್ಥನೀತಿಗೆ ಪರಿಣಾಮಕಾರಿ ಸಾಧನ
CORRECT ANSWER

(3) ಬಡವರಿಗೆ ಹಿತ


33.ಹೂಡು ಕರ್ನಾಟಕ 2016 ರ ಒಟ್ಟು ಜಾಗತಿಕ ಪಾಲುದಾರರ ಸಂಖ್ಯೆಯು
 (1)ಐದು
 (2)ಆರು
 (3)ಏಳು
 (4)ಎಂಟು
CORRECT ANSWER

(3) ಏಳು


34.‘ಶಿಶು’ ‘ಕಿಶೋರ್’ ಮತ್ತು ‘ತರುಣ್’ ಯಾವುದರ ಉತ್ಪನ್ನಗಳು ?
 (1)ಎಲ್‌.ಐ.ಸಿ.
 (2)ಯು.ಟಿ.ಐ.
 (3)ನಬಾರ್ಡ್
 (4)ಮುದ್ರಾ
CORRECT ANSWER

(4) ಮುದ್ರಾ


35.ವ್ಯಾಪಾರಿ ಸಂಸ್ಥೆಯು ಬಹುಕಾಲ ಬಾಳುತ್ತದೆ ಎಂಬ ಕಲ್ಪನೆಯಿಂದ ವ್ಯವಹಾರಗಳನ್ನು ದಾಖಲಿಸಲಾಗಿದೆ. ಈ ಪರಿಕಲ್ಪನೆಯನ್ನು ಏನೆಂದು ಕರೆಯುತ್ತಾರೆ ?
 (1)ಹಣದ ಅಳತೆ ಪರಿಕಲ್ಪನೆ
 (2)ವ್ಯವಹಾರ ಅಸ್ತಿತ್ವ ಪರಿಕಲ್ಪನೆ
 (3)ಪ್ರಗತಿಪರ ಸಂಸ್ಥೆ ಪರಿಕಲ್ಪನೆ
 (4)ಐತಿಹಾಸಿಕ ವೆಚ್ಚ ಪರಿಕಲ್ಪನೆ
CORRECT ANSWER

(3) ಪ್ರಗತಿಪರ ಸಂಸ್ಥೆ ಪರಿಕಲ್ಪನೆ


36.ಭೂಮಿ ಮತ್ತು ಕಟ್ಟಡದ ಖರೀದಿ ವೆಚ್ಚವನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು.
 (1)ರೆವೆನ್ಯೂ ವೆಚ್ಚ
 (2)ಬಂಡವಾಳ ವೆಚ್ಚ
 (3)ರೆವೆನ್ಯೂ ನಷ್ಟ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(2) ಬಂಡವಾಳ ವೆಚ್ಚ


37.ಈ ಕೆಳಕಂಡ ಯಾವ ಅಂಶವನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿ ನಮೂದಿಸಲಾಗುವುದಿಲ್ಲ ?
 (1)ವೇತನಗಳು
 (2)ಸವಕಳಿ
 (3)ಮುದ್ರಣ ಮತ್ತು ಲೇಖನ ಸಾಮಗ್ರಿ
 (4)ಅಂತಿಮ ದಾಸ್ತಾನು
CORRECT ANSWER

(4) ಅಂತಿಮ ದಾಸ್ತಾನು


38.ವ್ಯತಿರಿಕ್ತ ನಮೂದನ್ನು ಈ ಕೆಳಕಂಡ ಯಾವ ರೀತಿಯ ನಗದು ಪುಸ್ತಕದಲ್ಲಿ ದಾಖಲಿಸಲಾಗುತ್ತದೆ ?
 (1)ಏಕ ಅಂಕಣದ ನಗದು ಪುಸ್ತಕ
 (2)ಮೂರು ಅಂಕಣದ ನಗದು ಪುಸ್ತಕ
 (3)ಎರಡು ಅಂಕಣದ ನಗದು ಪುಸ್ತಕ
 (4)ಚಿಲ್ಲರೆ ನಗದು ಪುಸ್ತಕ
CORRECT ANSWER

(2) ಮೂರು ಅಂಕಣದ ನಗದು ಪುಸ್ತಕ


39.ಯಾವ ಭಾರತೀಯ ಲೆಕ್ಕ ಮಾನಕವು ಆಸ್ತಿಯ ಸವಕಳಿಗೆ ಮಾನಕ ನೀಡುತ್ತದೆ ?
 (1)IAS-4
 (2)IAS-6
 (3)IAS-8
 (4)IAS-1
CORRECT ANSWER

(2) IAS-6


40.ಪಾಲುದಾರಿಕಾ ಸಂಸ್ಥೆಯಲ್ಲಿ, ಹೊಸ ಪಾಲುದಾರನ ಸೇರ್ಪಡೆಯಾಗುವಾಗ ಯಾವ ಅನುಪಾತವನ್ನು ಕಂಡುಹಿಡಿಯ ಲಾಗುತ್ತದೆ ?
 (1)ತ್ಯಾಗದ ಅನುಪಾತ
 (2)ಗಳಿಕೆಯ ಅನುಪಾತ
 (3)ಬಂಡವಾಳ ಅನುಪಾತ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ತ್ಯಾಗದ ಅನುಪಾತ


41.ಉಚಿತ ನಮೂನೆ (samples) ವಸ್ತುಗಳ ಹಂಚಿಕೆಯನ್ನು ಈ ಕೆಳಕಂಡ ಯಾವ ಖಾತೆಯಲ್ಲಿ ನಮೂದಿಸಲಾಗುತ್ತದೆ ?
 (1)ವ್ಯಾಪಾರ ಖಾತೆ
 (2)ಲಾಭ ಮತ್ತು ನಷ್ಟದ ಹಂಚಿಕೆ ಖಾತೆ
 (3)ಲಾಭ ಮತ್ತು ನಷ್ಟದ ಖಾತೆ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(3) ಲಾಭ ಮತ್ತು ನಷ್ಟದ ಖಾತೆ


42.ಬೆಂಕಿಯ ಅಪಘಾತದಲ್ಲಿ ಕಂಪನಿಯು ತನ್ನ ಹಣಕಾಸು ದಾಖಲೆಗಳನ್ನು ಕಳೆದು ಕೊಂಡಾಗ ಅಂತಿಮ ದಾಸ್ತಾನು ಶಿಲ್ಕನ್ನು ಕಂಡು ಹಿಡಿಯಲು ಈ ಕೆಳಕಂಡ ಖಾತೆಗಳಲ್ಲಿ ಯಾವ ಖಾತೆಯನ್ನು ತೆರೆಯಲಾಗುತ್ತದೆ ?
 (1)ಜ್ಞಾಪನ ವ್ಯಾಪಾರ ಖಾತೆ
 (2)ವ್ಯಾಪಾರ ಖಾತೆ
 (3)ಲಾಭ ಮತ್ತು ನಷ್ಟದ ಖಾತೆ
 (4)ಲಾಭ ಮತ್ತು ನಷ್ಟದ ಹಂಚಿಕೆ ಖಾತೆ
CORRECT ANSWER

(1) ಜ್ಞಾಪನ ವ್ಯಾಪಾರ ಖಾತೆ


43.ಯಾವ ಸಂಸ್ಥೆಯು, ತನ್ನ ಅಂತಿಮ ಲೆಕ್ಕ ಪತ್ರಗಳನ್ನು ತಯಾರಿಸುವಾಗ ಲಾಭ ಮತ್ತು ನಷ್ಟದ ಖಾತೆಯ ಬದಲಾಗಿ ಆದಾಯ ಮತ್ತು ವೆಚ್ಚದ ಖಾತೆಯನ್ನು ತಯಾರಿಸುತ್ತದೆ ?
 (1)ಏಕಸ್ವಾಮ್ಯ ವ್ಯಾಪಾರಿ ಸಂಸ್ಥೆ
 (2)ಪಾಲುದಾರಿಕಾ ಸಂಸ್ಥೆ
 (3)ಜಾಯಿಂಟ್ ಸ್ಟಾಕ್ ಕಂಪನಿ (ಕೂಡು ಬಂಡವಾಳ ಸಂಸ್ಥೆ)
 (4)ವ್ಯಾಪಾರೇತರ ಸಂಸ್ಥೆ
CORRECT ANSWER

(4) ವ್ಯಾಪಾರೇತರ ಸಂಸ್ಥೆ


44.ಪಾಲುದಾರಿಕಾ ಸಂಸ್ಥೆಯು, ಪಾಲುದಾರಿಕಾ ಕಾಯಿದೆ 1936 ರ ಪ್ರಕಾರ ನೋಂದಣಿ ಯಾಗಿದ್ದಲ್ಲಿ ಪಾಲುದಾರನ ಹೊಣೆಗಾರಿಕೆಯು ಈ ರೀತಿ ಇರುತ್ತದೆ.
 (1)ಅನಿಯಮಿತ ಹೊಣೆಗಾರಿಕೆ
 (2)ಹೊಣೆಗಾರಿಕೆಯೇ ಇಲ್ಲ
 (3)ಪರಿಮಿತ ಹೊಣೆಗಾರಿಕೆ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ಅನಿಯಮಿತ ಹೊಣೆಗಾರಿಕೆ


45.ಹಣಕಾಸು ನಿರ್ವಹಣಾ ಕಾರ್ಯಗಳು ಈ ಕೆಳಕಂಡ ನಿರ್ಧಾರಗಳನ್ನು ಕೈಗೊಳ್ಳುವುದಾಗಿರುತ್ತದೆ.
 (1)ಹೂಡಿಕೆ ನಿರ್ಧಾರ
 (2)ಹಣಕಾಸು ಹೊಂದಿಸುವ ನಿರ್ಧಾರ
 (3)ಲಾಭಾಂಶ ನೀತಿಗಳ ನಿರ್ಧಾರ
 (4)ಇವುಗಳಲ್ಲಿ ಎಲ್ಲವೂ
CORRECT ANSWER

(4) ಇವುಗಳಲ್ಲಿ ಎಲ್ಲವೂ


46.ಆದ್ಯತಾ ಷೇರುಗಳು ಮತ್ತು ಸಾಲಪತ್ರಗಳ ಮುಖಾಂತರ ಪರಿಯೋಜನೆಗೆ ಹಣಕಾಸು ಒದಗಿಸುವುದನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು.
 (1)ಅಲ್ಪಾವಧಿ ಹಣಕಾಸು ಯೋಜನೆ
 (2)ದೀರ್ಘಾವಧಿ ಹಣಕಾಸು ಯೋಜನೆ
 (3)ಆಯವ್ಯಯ
 (4)ಸರ್ಕಾರಿ ಯೋಜನೆ
CORRECT ANSWER

(2) ದೀರ್ಘಾವಧಿ ಹಣಕಾಸು ಯೋಜನೆ


47.₹ 25,000 ವನ್ನು ಶೇ. 11 ರಂತೆ 3 ವರ್ಷಗಳ ಕಾಲ ಹೂಡಿಕೆ ಮಾಡಿದಲ್ಲಿ 3 ವರ್ಷದ ನಂತರದ ಭವಿಷ್ಯದಲ್ಲಿ ಒಟ್ಟು ಎಷ್ಟು ಮೊತ್ತವಾಗುತ್ತದೆ ?
 (1)35,000
 (2)34,190
 (3)34,500
 (4)38,000
CORRECT ANSWER

(2) 34,190


48.ಸಾಮಾನ್ಯ ಷೇರುದಾರರಿಗೆ ಗರಿಷ್ಠ ವರಮಾನ ಬರುವಂತೆ, ಹಣಕಾಸು ಮ್ಯಾನೇಜರ್ ಗೆ ಮಾರ್ಗದರ್ಶನ ನೀಡುವ ಲೆವರೇಜ್ ಯಾವುದು ?
 (1)ಮಿಶ್ರ ಲೆವರೇಜ್
 (2)ಕಾರ್ಯಾಚರಣೆ ಲೆವರೇಜ್
 (3)ಹಣಕಾಸು ಲೆವರೇಜ್
 (4)ಇವುಗಳಲ್ಲಿ ಯಾವುದೂ ಇಲ್ಲ
CORRECT ANSWER

(3) ಹಣಕಾಸು ಲೆವರೇಜ್


49.ಕಾರ್ಯಾಚರಣೆ ಲೆವರೇಜ್ ಕಂಡುಹಿಡಿಯಲು ಈ ಕೆಳಕಂಡ ಯಾವ ಸೂತ್ರವನ್ನು ಬಳಸಲಾಗುತ್ತದೆ ?
 (1)EBITEBTEBITEBT
 (2)CEBITCEBIT
 (3)FL × OL
 (4)CA – CL
CORRECT ANSWER

(2) CEBITCEBIT


50.ಪರಿಯೋಜನೆಯ ಹೂಡಿಕೆಯು ₹ 10,00,000 ವಾಗಿದ್ದು, ಪರಿಯೋಜನೆಯ ಜೀವಿತಾವಧಿಯು 10 ವರ್ಷಗಳಿದ್ದು, ವಾರ್ಷಿಕ ನಗದು ಒಳಹರಿವು ₹ 2,50,000 ಆದಲ್ಲಿ ಮರುಪಾವತಿ ಅವಧಿಯು ಎಷ್ಟಾಗುತ್ತದೆ ?
 (1)5 ವರ್ಷಗಳು
 (2)4 ವರ್ಷಗಳು
 (3)10 ವರ್ಷಗಳು
 (4)8 ವರ್ಷಗಳು
CORRECT ANSWER

(2) 4 ವರ್ಷಗಳು


51.ಯೋಜಿತ ಬಂಡವಾಳ ವ್ಯಯ ಹಾಗೂ ಅದರ ಹಣಕಾಸು ಸರಿ ಹೊಂದಿಸುವಿಕೆ ದೀರ್ಘಾವಧಿ ಯೋಜನೆಯ ತಂತ್ರವನ್ನು ಹೀಗೆನ್ನಬಹುದು.
 (1)ಹಣಕಾಸು ಯೋಜನೆ
 (2)ಕಾರ್ಯನಿರತ ಬಂಡವಾಳ ಆಯವ್ಯಯ
 (3)ಬಂಡವಾಳ ಆಯ-ವ್ಯಯ
 (4)ಇವುಗಳಲ್ಲಿ ಯಾವುದೂ ಇಲ್ಲ
CORRECT ANSWER

(3) ಬಂಡವಾಳ ಆಯ-ವ್ಯಯ


52.ಪ್ರಾರಂಭದಲ್ಲಿ ವಿನಿಯೋಜಿಸಿದ ಹಣವನ್ನು ನಗದು ಒಳಹರಿವನ್ನಾಗಿ ಪರಿವರ್ತಿಸಲು ಬೇಕಾದ ಅವಧಿಯನ್ನು ಹೀಗೆನ್ನುತ್ತಾರೆ.
 (1)ಲಾಭಾಂಶ
 (2)ಪ್ರತಿ ಷೇರಿನ ಗಳಿಕೆ
 (3)ಪರಿಯೋಜನೆಯ ಜೀವಿತಾವಧಿ
 (4)ಮರುಪಾವತಿ ಅವಧಿ
CORRECT ANSWER

(4) ಮರುಪಾವತಿ ಅವಧಿ


53.ಬೋನಸ್ ಷೇರುಗಳು ಅಥವಾ ಸ್ಟಾಕ್ ಲಾಭಾಂಶವನ್ನು ಪ್ರಸ್ತುತ ಈಕ್ವಿಟಿ ಷೇರುದಾರರಿಗೆ ನೀಡುವ ಉದ್ದೇಶವೇನೆಂದರೆ,
 (1)ಸಂಸ್ಥೆಯ ನಗದನ್ನು ಸಂರಕ್ಷಿಸಿ ಕೊಳ್ಳಲು
 (2)ಸಂಸ್ಥೆಯ ಆಸ್ತಿಯನ್ನು ಹೆಚ್ಚಿಸುವುದಕ್ಕೆ
 (3)ಪ್ರಸ್ತುತ ಈಕ್ವಿಟಿ ಷೇರುದಾರರನ್ನು ಅತೃಪ್ತಿಗೊಳಿಸುವುದಕ್ಕೆ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ಸಂಸ್ಥೆಯ ನಗದನ್ನು ಸಂರಕ್ಷಿಸಿ ಕೊಳ್ಳಲು


54.ಯಾವ ಅನುಪಾತವು ಲಾಭಾಂಶ ಪಾಲಿಸಿಯ ಮೇಲೆ ಪ್ರಭಾವ ಬೀರುತ್ತದೆ ?
 (1)ಷೇರುದಾರರ ನಿಧಿ ಅನುಪಾತ
 (2)ಚಾಲ್ತಿ (current) ಅನುಪಾತ
 (3)ಲಾಭಾಂಶ ಪಾವತಿ ಅನುಪಾತ
 (4)ಸ್ಥಿರಾಸ್ತಿಯ ಅನುಪಾತ
CORRECT ANSWER

(3) ಲಾಭಾಂಶ ಪಾವತಿ ಅನುಪಾತ


55.ನಿರ್ವಹಣಾ ಲೆಕ್ಕಶಾಸ್ತ್ರವನ್ನು ಹೀಗೆಂದೂ ಕರೆಯಬಹುದು
 (1)ವೆಚ್ಚದ ಲೆಕ್ಕಶಾಸ್ತ್ರ
 (2)ಐತಿಹಾಸಿಕ ವೆಚ್ಚದ ಲೆಕ್ಕಶಾಸ್ತ್ರ
 (3)ನಿರ್ಧಾರ ಲೆಕ್ಕಶಾಸ್ತ್ರ
 (4)ಸಮನ್ವಯ ಲೆಕ್ಕಶಾಸ್ತ್ರ
CORRECT ANSWER

(3) ನಿರ್ಧಾರ ಲೆಕ್ಕಶಾಸ್ತ್ರ


56.ನಿರ್ವಹಣಾ ಲೆಕ್ಕಶಾಸ್ತ್ರವು ಈ ಕೆಳಕಂಡ ಯಾವುದರ ಸಹಾಯದಿಂದ ಲೆಕ್ಕಶಾಸ್ತ್ರದ ದತ್ತಾಂಶವನ್ನು ವಿಶ್ಲೇಷಿಸುತ್ತದೆ ?
 (1)ಲೆಕ್ಕ ಪರಿಶೋಧಕರು
 (2)ಗುಮಾಸ್ತರು
 (3)ಸಾಧನಗಳು ಮತ್ತು ತಂತ್ರಗಳು
 (4)ಶಾಸನಬದ್ಧ ನಮೂನೆಗಳು
CORRECT ANSWER

(3) ಸಾಧನಗಳು ಮತ್ತು ತಂತ್ರಗಳು


57.ಈ ಕೆಳಕಂಡ ಯಾವ ಆಯವ್ಯಯವನ್ನು ತಯಾರಿಸುವಾಗ, ಸ್ಥಿರ ಮತ್ತು ಬದಲಾಗುವ ವೆಚ್ಚದ ವರ್ಗೀಕರಣವು ವಿಶೇಷ ಮಹತ್ವ ಹೊಂದಿರುತ್ತದೆ?
 (1)ಬದಲಾಗುವ ಆಯವ್ಯಯ
 (2)ಪ್ರಧಾನ ಆಯವ್ಯಯ
 (3)ನಗದು ಆಯವ್ಯಯ
 (4)ಮಾರಾಟ ಆಯವ್ಯಯ
CORRECT ANSWER

(1) ಬದಲಾಗುವ ಆಯವ್ಯಯ


58.ಕಡಿಮೆ ದಾಸ್ತಾನು ಆವರ್ತನವು ಏನನ್ನು ಸೂಚಿಸುತ್ತದೆ ?
 (1)ಸಾಲ ಪಡೆಯುವ ವಿಶ್ವಾಸಾರ್ಹತೆ
 (2)ಏಕಸ್ವಾಮ್ಯದ ಪರಿಸ್ಥಿತಿ
 (3)ದಾಸ್ತಾನಿನಲ್ಲಿ ಅತಿಹೆಚ್ಚು ಹೂಡಿಕೆ
 (4)ದಾಸ್ತಾನಿನಲ್ಲಿ ಕಡಿಮೆ ಹೂಡಿಕೆ
CORRECT ANSWER

(3) ದಾಸ್ತಾನಿನಲ್ಲಿ ಅತಿಹೆಚ್ಚು ಹೂಡಿಕೆ


59.ಮಾರಾಟ 3 25,000, ಬದಲಾದ ವೆಚ್ಚ ₹ 8,000 ಮತ್ತು ಸ್ಥಿರ ವೆಚ್ಚ ₹ 5,000 ಆಗಿದ್ದಲ್ಲಿ ಬ್ರೇಕ್ ಈವನ್ ಮಾರಾಟ ಬೆಲೆಯು ರೂ.ಗಳಲ್ಲಿ ಎಷ್ಟಾಗುತ್ತದೆ ?
 (1)₹ 7,936
 (2)₹ 7,353
 (3)₹ 8,333
 (4)₹ 9,090
CORRECT ANSWER

(2) ₹ 7,353


60.ಚಾಲ್ತಿ ಅನುಪಾತವು 2.7 : 1, ದ್ರವ ಅನುಪಾತವು 1.8:1 ಚಾಲ್ತಿ ಹೊಣೆಗಾರಿಕೆಯು ₹ 6,00,000 ಹಾಗೂ ದಾಸ್ತಾನು ಆವರ್ತನವು ನಾಲ್ಕರಷ್ಟು ಆದಲ್ಲಿ ಮಾರಾಟದ ವೆಚ್ಚವು
 (1)₹ 21,60,000
 (2)₹ 16,50,000
 (3)₹ 21,00,000
 (4)₹ 34,00,000
CORRECT ANSWER

(1) ₹ 21,60,000


61.ಸಾಮಾನ್ಯವಾಗಿ ಈ ಕೆಳಕಂಡ ಯಾವುದನ್ನು ಕಾರ್ಯನಿರತ ಬಂಡವಾಳದಿಂದ ಪಾವತಿಸುವುದಿಲ್ಲ ?
 (1)ಕೂಲಿ ಪಾವತಿಸುವುದು
 (2)ಋಣ ಪಾವತಿಸುವುದು
 (3)ಸಾಲಪತ್ರದ ಮರುಪಾವತಿ
 (4)ಕಚ್ಚಾ ಸಾಮಗ್ರಿಯ ಖರೀದಿ
CORRECT ANSWER

(3) ಸಾಲಪತ್ರದ ಮರುಪಾವತಿ


62.ಈ ಕೆಳಕಂಡವುಗಳಲ್ಲಿ ಯಾವುದು ನಗದು ಒಳ ಹರಿವು ಆಗಿರುವುದಿಲ್ಲ ?
 (1)ಆಸ್ತಿಗಳ ಖರೀದಿ
 (2)ಕಾರ್ಯಾಚರಣೆಯಿಂದ ಬಂದ ನಿಧಿಗಳು
 (3)ನಗದು ಸಾಲಪತ್ರ ನೀಡುವುದು
 (4)ಸ್ಥಿರಾಸ್ತಿಯ ಮಾರಾಟ
CORRECT ANSWER

(1) ಆಸ್ತಿಗಳ ಖರೀದಿ


63.ಒಟ್ಟು ಮಾರಾಟಗಳು ₹ 3,00,000, ಸಾಲದ ಮಾರಾಟ ₹ 75,000 ಒಟ್ಟು ಖರೀದಿಗಳು 11,38,000 ಸಾಲದ ಖರೀದಿ ₹ 26,000 ನಗದು ಕಾರ್ಯಾಚರಣೆಯ ವೆಚ್ಚ ₹ 32,000 ಆದಲ್ಲಿ ಕಾರ್ಯಾಚರಣೆ ಯಿಂದ ಬಂದ ನಗದು ಏಷ್ಟು ?
 (1)₹ 1,30,000
 (2)₹ 81,000
 (3)₹ 1,62,000
 (4)₹ 1,90,000
CORRECT ANSWER

(2) ₹ 81,000


64.ಲಾಭವೂ ಇಲ್ಲದ ನಷ್ಟವೂ ಇಲ್ಲದ ಸ್ಥಿತಿ ಯಾವಾಗ ಸಂಭವಿಸುತ್ತದೆ ಎಂದರೆ ಈ ಕೆಳಗಿನ ಸಂದರ್ಭದಲ್ಲಿ
 (1)C > F
 (2)C < F
 (3) C = F
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(3) C = F


65.ಕರೆದ ಬಂಡವಾಳ ಮತ್ತು ವಂತಿಕೆ ಬಂಡವಾಳದ ನಡುವಿನ ವ್ಯತ್ಯಾಸವನ್ನು ಹೀಗೆ ಕರೆಯುತ್ತಾರೆ
 (1)ಸಂದಾಯಿತ ಬಂಡವಾಳ
 (2)ಮುಂಗಡ ಕರೆ ಹಣ
 (3)ಕರೆಯದ ಬಂಡವಾಳ
 (4)ಬಾಕಿ ಕರೆ ಹಣ
CORRECT ANSWER

(3) ಕರೆಯದ ಬಂಡವಾಳ


66.ನಿವ್ವಳ ಆಸ್ತಿಗಿಂತ ಹೆಚ್ಚಾದ ಖರೀದಿ ಮೌಲ್ಯವನ್ನು ಹೀಗೆಂದು ಕರೆಯುತ್ತಾರೆ
 (1)ಬಂಡವಾಳ ಮೀಸಲು
 (2)ಸೆಕ್ಯೂರಿಟೀಸ್ ಪ್ರೀಮಿಯಂ
 (3)ಸುನಾಮ
 (4)ಪೂರ್ವಭಾವಿ ವೆಚ್ಚಗಳು
CORRECT ANSWER

(3) ಸುನಾಮ


67.ಸ್ಕೂಲ ಲಾಭವನ್ನು ನಿಗಮಗೊಳಿಸುವ ಪೂರ್ವದ ಹಾಗೂ ನಂತರದ ಅವಧಿಗೆ ಯಾವ ಅನುಪಾತದಲ್ಲಿ ಹಂಚಲಾಗುತ್ತದೆ ?
 (1)ಅವಧಿ ಅನುಪಾತ
 (2)ಮಾರಾಟ ಅನುಪಾತ
 (3)ಹೊಂದಾಣಿಸಿದ ಅವಧಿ ಅನುಪಾತ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(2) ಮಾರಾಟ ಅನುಪಾತ


68.ಆಸ್ತಿ ಮತ್ತು ಹೊಣೆಗಾರಿಕಾ ತಃಖೆಯಲ್ಲಿ ಕ್ಷೇಮು ಮಾಡದ ಲಾಭಾಂಶವನ್ನು ಯಾವ ಶೀರ್ಷಿಕೆಯಲ್ಲಿ ತೋರಿಸಲಾಗುತ್ತದೆ ?
 (1)ಮೀಸಲು ಮತ್ತು ಹೆಚ್ಚುವರಿ
 (2)ಅಭದ್ರತಾ ಸಾಲ
 (3)ಪ್ರಾವಿಷನ್ ಗಳು
 (4)ಚಾಲ್ತಿ ಹೊಣೆ
CORRECT ANSWER

(4) ಚಾಲ್ತಿ ಹೊಣೆ


69.ಒಂದು ವ್ಯಾಪಾರದ ಸೂಪರ್ ಲಾಭವು ₹ 6,000 ಹಾಗೂ ಸಾಮಾನ್ಯ ಲಾಭಾಂಶದ ದರವು ಶೇ.10 ಆಗಿದ್ದಲ್ಲಿ, ಬಂಡವಾಳೀಕರಣ ಪದ್ಧತಿಯಲ್ಲಿ ಸುನಾಮದ ಮೌಲ್ಯವು ಎಷ್ಟಾಗುತ್ತದೆ ?
 (1)₹ 60,000
 (2)₹ 12,000
 (3)₹ 600
 (4)₹ 6,000
CORRECT ANSWER

(1) ₹ 60,000


70.ಎಲ್ಲಾ ಇತರೆ ನಷ್ಟ ಹಾಗೂ ಶೇಖರಿಸಿದ ನಷ್ಟವನ್ನು ಬಂಡವಾಳ ಇಳಿಕೆ ಖಾತೆಗೆ ದಾಖಲಿಸಿದ ನಂತರ ಇರುವ ಶಿಲ್ಕನ್ನು ಈ ಕೆಳಕಂಡ ಯಾವ ವರ್ಗಾಯಿಸಲಾಗುತ್ತದೆ ?
 (1)ಸುನಾಮ ಖಾತೆ
 (2)ಬಂಡವಾಳ ಮೀಸಲು ಖಾತೆ
 (3)ಸಾಮಾನ್ಯ ಮೀಸಲು ಖಾತೆ
 (4)ಷೇರು ಬಂಡವಾಳ ಖಾತೆ ಖಾತೆಗೆ
CORRECT ANSWER

(2) ಬಂಡವಾಳ ಮೀಸಲು ಖಾತೆ


71.ಈಕ್ವಿಟಿ ಷೇರುಗಳ ಮೌಲ್ಯವನ್ನು ವಾಸ್ತವಿಕ ಮೌಲ್ಯ ಪದ್ಧತಿಯಲ್ಲಿ ಕಂಡುಹಿಡಿಯಲು ಈ ಕೆಳಕಂಡ ಯಾವುದನ್ನು ಅಂದಾಜಿಸಲಾಗುತ್ತದೆ
 (1)ಸಾಮಾನ್ಯ ಪ್ರತಿಫಲ ದರ
 (2)ನಿವ್ವಳ ಆಸ್ತಿಗಳು
 (3)ನಿರೀಕ್ಷಿತ ಪ್ರತಿಫಲ ದರ
 (4)ಸೂಪರ್ ಲಾಭ
CORRECT ANSWER

(2) ನಿವ್ವಳ ಆಸ್ತಿಗಳು


72.ಮಧ್ಯಂತರ ಲಾಭಾಂಶ ನೀಡಿದ್ದನ್ನು ಯಾವಾಗಲೂ ಎಲ್ಲಿ ತೋರಿಸಲಾಗುತ್ತದೆ ?
 (1)ಲಾಭ ಮತ್ತು ನಷ್ಟದ ಖಾತೆ
 (2)ವ್ಯಾಪಾರ ಖಾತೆ
 (3)ಲಾಭ ಮತ್ತು ನಷ್ಟದ ಹಂಚಿಕೆ ಖಾತೆ
 (4)ಅಢಾವೆ ಪಟ್ಟಿ
CORRECT ANSWER

(3) ಲಾಭ ಮತ್ತು ನಷ್ಟದ ಹಂಚಿಕೆ ಖಾತೆ


73.ಅಲ್ಪಮತ ಹಿತಾಸಕ್ತಿಯನ್ನು ಲೆಕ್ಕ ಹಾಕುವುದು ಮತ್ತು ತೋರಿಸುವ ಸಂದರ್ಭ ಯಾವಾಗ ಒದಗಿ ಬರುತ್ತದೆ ಎಂದರೆ
 (1)ಸಂಯೋಜಿತ ಆಸ್ತಿ ಮತ್ತು ಹೊಣೆ ತಃಖ್ತೆ ತಯಾರಿಸುವಾಗ
 (2)ಕ್ರೋಢೀಕೃತ ಆಸ್ತಿ ಮತ್ತು ಹೊಣೆ ತಃಖ್ತೆ ತಯಾರಿಸುವಾಗ
 (3)ಸಮಾಪನದಾರನ ವಿವರಣಾ ಪಟ್ಟಿ ತಯಾರಿಸುವಾಗ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(2) ಕ್ರೋಢೀಕೃತ ಆಸ್ತಿ ಮತ್ತು ಹೊಣೆ ತಃಖ್ತೆ ತಯಾರಿಸುವಾಗ


74.ಈ ಕೆಳಕಂಡ ಯಾವುದರ ಮೇಲೆ ಭರವಸೆ ವಂತಿಗೆದಾರರ ಕಮಿಷನ್ ನ್ನು ಲೆಕ್ಕ ಹಾಕಲಾಗುತ್ತದೆ ?
 (1)ಷೇರಿನ ಮೌಲ್ಯದ ನಿವ್ವಳ ಹೊಣೆಯ ಮೇಲೆ
 (2)ಷೇರು ಮೌಲ್ಯದ ನಿರ್ದಿಷ್ಟ ಭರವಸೆ ವಂತಿಗೆಯ ಮೇಲೆ
 (3)ಗುರುತು ಹಾಕಿದ ಅರ್ಜಿಗಳ ಷೇರು ಮೌಲ್ಯದ ಮೇಲೆ
 (4)ಷೇರು ಭರವಸೆ ವಂತಿಕೆ ನೀಡಿಕೆ ಬೆಲೆಯ ಮೇಲೆ
CORRECT ANSWER

(4) ಷೇರು ಭರವಸೆ ವಂತಿಕೆ ನೀಡಿಕೆ ಬೆಲೆಯ ಮೇಲೆ


75.ಗರಿಷ್ಠ ಲಾಭವನ್ನು ಗಳಿಸುವುದಕ್ಕೆ ಏಕಸ್ವಾಮ್ಯ ವ್ಯಾಪಾರಿಯು ಯಾವ ಉತ್ಪಾದನೆ ಪರಿಮಾಣಕ್ಕೆ ಸರಿಹೊಂದುವ ಸೂತ್ರವನ್ನು ಬಳಸುತ್ತಾನೆ?
 (1)MR = MC
 (2)P = MC
 (3)P = MR
 (4)P = AR = MR = MC
CORRECT ANSWER

(1) MR = MC


76.ಬದಲೀ ವಸ್ತುವನ್ನು ತಯಾರಿಸುವ ಸಂಸ್ಥೆಯು ಯಾವ ದರ ತಂತ್ರವನ್ನು ಅಳವಡಿಸಬಹುದು ?
 (1)ವರ್ಗಾವಣೆ ದರ ಪದ್ಧತಿ
 (2)ಚಾಲ್ತಿ ದರ ಪದ್ಧತಿ
 (3)ದರ ಬದಲಾಗುವ ಪದ್ಧತಿ
 (4)ಮೌಲ್ಯ ದರ ಪದ್ಧತಿ
CORRECT ANSWER

(2) ಚಾಲ್ತಿ ದರ ಪದ್ಧತಿ


77.ಈ ಕೆಳಕಂಡವುಗಳಲ್ಲಿ ಅಲ್ಪಾವಧಿ ಸರಾಸರಿ ವೆಚ್ಚವು ಈ ಯಾವುದರ ಒಟ್ಟು ಮೊತ್ತವಾಗಿರುತ್ತದೆ ?
 (1)AFC + AVC
 (2)AVC – AFC
 (3)AFC – AVC
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) AFC + AVC


78.ಬೇಡಿಕೆಯ ಸ್ಥಿತಿಸ್ಥಾಪಕತ್ವವು ಈ ಕೆಳಕಂಡ ಯಾವ ಅಂಶವನ್ನು ಹೊರತುಪಡಿಸಿ ನಿರ್ಧರಿತವಾಗುತ್ತದೆ ?
 (1)ವಸ್ತುವಿನ ಸ್ವಭಾವ
 (2)ಸಮಯ
 (3)ಸ್ಥಳ
 (4)ಸರ್ಕಾರದ ನೀತಿಗಳು
CORRECT ANSWER

(4) ಸರ್ಕಾರದ ನೀತಿಗಳು


79.ಒಟ್ಟು ಆದಾಯ ರೇಖೆ ಹಾಗೂ ಒಟ್ಟು ವೆಚ್ಚ ರೇಖೆ ಸಂಧಿಸುವ ಬಿಂದುವನ್ನು ಹೀಗೆಂದು ಕರೆಯುತ್ತಾರೆ.
 (1)ಆದಾಯ-ವೆಚ್ಚ ಸಮಸ್ಥಿತಿ ಬಿಂದು (ಬ್ರೇಕ್ ಇವನ್ ಪಾಯಿಂಟ್)
 (2) ಸಮತೋಲನ ಬಿಂದು
 (3)ವಿಭಾಗೀಯ ಬಿಂದು
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ಆದಾಯ-ವೆಚ್ಚ ಸಮಸ್ಥಿತಿ ಬಿಂದು (ಬ್ರೇಕ್ ಇವನ್ ಪಾಯಿಂಟ್)


80.ಈ ಕೆಳಗಿನವುಗಳಲ್ಲಿ ಯಾವುದು ನಿರ್ವಹಣೆಯ ಕಾರ್ಯವಲ್ಲ ?
 (1)ಯೋಜಿಸುವಿಕೆ
 (2)ಮುಂಗಡ ಪತ್ರ ರಚಿಸುವಿಕೆ (Budgeting)
 (3)ಮಾರಾಟ ಮಾಡುವುದು
 (4)ಸಂಘಟಿಸುವಿಕೆ
CORRECT ANSWER

(3) ಮಾರಾಟ ಮಾಡುವುದು


81.ಆಧುನಿಕ ವಿಧಾನಗಳಲ್ಲಿ, ನೇಮಕಾತಿಯ ಬಾಹ್ಯ ಮೂಲಗಳಲ್ಲಿ, ಈ ಕೆಳಗೆ ಸೂಚಿಸಿದ ಮೂಲವೂ ಒಂದು,
 (1)ಕ್ಯಾಂಪಸ್ ನೇಮಕಾತಿ
 (2)ಹೊರಗುತ್ತಿಗೆ (out-sourcing)
 (3)ಉದ್ಯೋಗ ವಿನಿಮಯ ಕಛೇರಿ
 (4)ಕಾರ್ಮಿಕ ಸಂಘಗಳು
CORRECT ANSWER

(2) ಹೊರಗುತ್ತಿಗೆ (out-sourcing)


82.ಈ ಕೆಳಗಿನವುಗಳಲ್ಲಿ ಹೆನ್ರಿ ಪೆಯೋಲ್ ರವರು ಪ್ರತಿಪಾದಿಸಿದ ನಿರ್ವಹಣೆಯ ತತ್ವ ಯಾವುದು ?
 (1)ವೈಜ್ಞಾನಿಕ ನಿರ್ವಹಣೆ ತತ್ವ
 (2)ಸಡಿಲಿಕೆಯ ತತ್ವ
 (3)ಸರಳತೆಯ ತತ್ವ
 (4)ಸಂಘ ಭಾವನೆಯ ತತ್ವ
CORRECT ANSWER

(4) ಸಂಘ ಭಾವನೆಯ ತತ್ವ


83.ನಿರ್ದೇಶನ ತಂತ್ರಗಳಲ್ಲೊಂದಾದ ತಂತ್ರ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?
 (1)ಪರಿಣಾಮಕಾರಿ ನಾಯಕತ್ವ
 (2)ನೇರ ಮೇಲುಸ್ತುವಾರಿ
 (3)ನಿರಂತರ ನಿರ್ದೇಶನ
 (4)ಸರ್ವಾಧಿಕಾರಿ ನಿರ್ದೇಶನ
CORRECT ANSWER

(4) ಸರ್ವಾಧಿಕಾರಿ ನಿರ್ದೇಶನ


84.ಕೆಳಗಿನವುಗಳಲ್ಲಿ ಯಾವುದು ನಿಯಂತ್ರಣದ ತಂತ್ರಗಳಲ್ಲಿ ಒಂದಾಗಿದೆ ?
 (1)ಎಮ್. ಬಿ. ಓ. (ಗುರಿಗಳ ಮೂಲಕ ನಿರ್ವಹಣೆ)
 (2)ಎಮ್.ಬಿ.ಇ. (ಹೊರತುಪಡಿಸುವಿಕೆ ಯಿಂದ ನಿರ್ವಹಣೆ)
 (3)ನಾಯಕತ್ವ ಚಲಾಯಿಸುವುದು
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ಎಮ್. ಬಿ. ಓ. (ಗುರಿಗಳ ಮೂಲಕ ನಿರ್ವಹಣೆ)


85.ಎಲ್ಲಾ ಒಪ್ಪಂದಗಳು ಒಡಂಬಡಿಕೆ (Agreements) ಗಳಾಗಿವೆ ಆದರೆ ಎಲ್ಲಾ ಒಡಂಬಡಿಕೆಗಳು ಒಪ್ಪಂದಗಳಲ್ಲ. ಹಾಗಾದರೆ ಒಡಂಬಡಿಕೆಗಳಲ್ಲಿ ಏನು ಕೊರತೆ ಇದೆ?
 (1)ಪ್ರತಿಫಲ ಇಲ್ಲದಿರುವುದು
 (2)ಕಾನೂನಿನ ಬೆಂಬಲ ಇಲ್ಲದಿರುವುದು
 (3)ಕಾನೂನುಬದ್ಧ ಆಹ್ವಾನ ಇಲ್ಲದಿರುವುದು
 (4)ಕಾನೂನುಬದ್ಧ ಒಪ್ಪಿಗೆ ಇಲ್ಲದಿರುವುದು
CORRECT ANSWER

(2) ಕಾನೂನಿನ ಬೆಂಬಲ ಇಲ್ಲದಿರುವುದು


86.ಕೇವಿಯಟ್ ಡಿ ಎಂಪ್ಟರ್ ಇದರ ಅರ್ಥ
 (1)ಮಾರಾಟಗಾರ ಜಾಗರೂಕನಾಗು
 (2)ಸಾರ್ವಜನಿಕರು ಜಾಗರೂಕರಾಗುವುದು
 (3)ವಿಕ್ರಯ ಕಲೆಗಾರ ಚಾಗರೂಕನಾಗು
 (4)ಖರೀದಿದಾರ ಎಚ್ಚರಿಕೆ ವಹಿಸುವುದು
CORRECT ANSWER

(4) ಖರೀದಿದಾರ ಎಚ್ಚರಿಕೆ ವಹಿಸುವುದು


87.ಎಂಟರ್ ಪ್ರಿನರ್ ಈ ಪದವು ಫ್ರೆಂಚ್ ಭಾಷೆಯ ಯಾವ ಪದದಿಂದ ಬಂದಿದೆ ?
 (1)ಎಂಟರ್ ಪ್ರೈಜ್
 (2)ಎಂಟ್ರೆ ಪೊಂಡ್ರೆ
 (3)ಎಂಟ್ರೆ ಫ್ರೆಂಡ್ರೆ
 (4)ಎಕ್ಸ್ ಪೆಡಿಷನ್
CORRECT ANSWER

(3) ಎಂಟ್ರೆ ಫ್ರೆಂಡ್ರೆ


88.ಸರಕುಗಳ ವಿನಿಮಯದ ಪ್ರದೇಶವೇ ಮಾರುಕಟ್ಟೆ ಈ ಮಾರುಕಟ್ಟೆ ವ್ಯಾಖ್ಯಾನವನ್ನು ನೀಡಿದವರು
 (1)ಪೈಲ್
 (2)ಫಿಲಿಪ್ ಕೋಟ್ಲರ್
 (3)ಕ್ಲಾರ್ಕ್ ಮತ್ತು ಕ್ಲಾರ್ಕ್
 (4)ಮಿಚೆಲ್
CORRECT ANSWER

(2) ಫಿಲಿಪ್ ಕೋಟ್ಲರ್


89.ಒಂದೇ ಕಡೆ ಎಲ್ಲಾ ಸರಕುಗಳನ್ನು ಖರೀದಿ ಮಾಡುವ ಸ್ಥಳ
 (1)ಹೈಪರ್ ಮಾರ್ಕೆಟ್
 (2)ಡಿಪಾರ್ಟ್ ಮೆಂಟಲ್ ಸ್ಟೋರ್
 (3)ಸೂಪರ್ ಮಾರ್ಕೆಟ್
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ಹೈಪರ್ ಮಾರ್ಕೆಟ್


90.ಮಾರಾಟದ ವಿನಿಮಯ ಕಾರ್ಯಗಳನ್ನು ಈ ಕೆಳಗಿನ ಯಾವುದು ಸೂಚಿಸುತ್ತದೆ ?
 (1)ಖರೀದಿ ಮತ್ತು ಮಾರಾಟ
 (2)ಮಾರಾಟ ಮತ್ತು ಸಾಗಾಟ
 (3)ಖರೀದಿ ಮತ್ತು ಉಗ್ರಾಣ
 (4)ಜಾಹೀರಾತು ಮತ್ತು ವಿಕ್ರಯಕಲೆ
CORRECT ANSWER

(1) ಖರೀದಿ ಮತ್ತು ಮಾರಾಟ


91.ಕೆಳಗಿನ ಯಾವುದು ಇತ್ತೀಚಿನ ತರಬೇತಿಯ ವಿಧಾನವಾಗಿದೆ ?
 (1)ಆನ್ ಲೈನ್ ತರಬೇತಿ
 (2)ವೆಸ್ಟಿಬೂಲ್ ತರಬೇತಿ
 (3)ಉಪನ್ಯಾಸ ವಿಧಾನ ತರಬೇತಿ
 (4)ಸಿಮುಲೇಷನ್
CORRECT ANSWER

(1) ಆನ್ ಲೈನ್ ತರಬೇತಿ


92.ಈ ಕೆಳಗಿನ ಯಾವುದು ತರಬೇತಿಯ ಪ್ರಯೋಜನಗಳಲ್ಲಿ ಒಂದಾಗಿದೆ?
 (1)ಕೆಲಸದ ಅವಧಿಯಲ್ಲಿ ಕಡಿತ
 (2)ಸಂಬಳದ ಏರಿಕೆ
 (3)ಕೆಲಸಗಾರರೊಂದಿಗೆ ಉನ್ನತ ಕಾರ್ಯಸ್ಥೈರ್ಯ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(3) ಕೆಲಸಗಾರರೊಂದಿಗೆ ಉನ್ನತ ಕಾರ್ಯಸ್ಥೈರ್ಯ


93.ಮಾಸ್ಕೋ ಅವರ ಅವಶ್ಯಕತೆಗಳ ಏಣಿ (Hierarchy of needs) ಯಲ್ಲಿ ಸಾಮಾಜಿಕ ಅವಶ್ಯಕತೆ ಯಾವ (ಏರಿಕೆಯ ಕ್ರಮದಲ್ಲಿ) ಸ್ಥಾನದಲ್ಲಿವೆ ?
 (1)ಮೊದಲನೇ ಸ್ಥಾನ
 (2)ಎರಡನೇ ಸ್ಥಾನ
 (3)ಮೂರನೇ ಸ್ಥಾನ
 (4)ನಾಲ್ಕನೇ ಸ್ಥಾನ
CORRECT ANSWER

(3) ಮೂರನೇ ಸ್ಥಾನ


94.ಕಾರ್ಯಾತ್ಮಕ ಫೋರಮನ್ ಷಿಪ್ ಸಂಘಟನೆಯನ್ನು ರೂಪಿಸಿದವರು ಯಾರು ?
 (1)ಹೆನ್ರಿ ಫಯೋಲ್
 (2)ಫ್ರೆಡ್ರಿಕ್ ವಿನ್ ಸ್ಲೊ ಟೇಲರ್
 (3)ಎಲ್ಟನ್ ಮೇಯೊ
 (4)ಮೇರಿ ಪಾರ್ಕರ್ ಫಾಲೆಟ್
CORRECT ANSWER

(2) ಫ್ರೆಡ್ರಿಕ್ ವಿನ್ ಸ್ಲೊ ಟೇಲರ್


95.ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (FEMA 1999) ಇದರ ಒಂದು ಉದ್ದೇಶ ಈ ಕೆಳಗಿನ ಯಾವುದಾಗಿದೆ ?
 (1)ಭಾರತದ ರೂಪಾಯಿಯನ್ನು ಅಪಮೌಲ್ಯ ಗೊಳಿಸುವುದು
 (2)ಆಮದುಗಳನ್ನು ಪ್ರೋತ್ಸಾಹಿಸಲು
 (3)ರಫ್ತುಗಳ ಮೇಲೆ ನಿಷೇಧ ಹೇರಲು
 (4)ವಿದೇಶಿ ವ್ಯಾಪಾರ ಸುಗಮಗೊಳಿಸಲು
CORRECT ANSWER

(4) ವಿದೇಶಿ ವ್ಯಾಪಾರ ಸುಗಮಗೊಳಿಸಲು


96.ಫ್ರಿಂಜ್ ಬೆನಿಫಿಟ್ ಎಂದರೇನು ?
 (1)ಸಂಸ್ಥೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ ಕಾರ್ಮಿಕರಿಗೆ ನೀಡುವ ಹೆಚ್ಚುವರಿ ಹಣ
 (2)ಉದ್ಯೋಗದಾತರು ಕಾರ್ಮಿಕರಿಗೆ ಕಾಲಕಾಲಕ್ಕೆ ಪಾವತಿಸುವ ಮೊತ್ತ
 (3)ಸಂಬಳದ ಜೊತೆ ಹಣದ ರೂಪದಲ್ಲಿ ನೀಡುವ ಹೆಚ್ಚುವರಿ ಭತ್ಯೆಗಳು
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(3) ಸಂಬಳದ ಜೊತೆ ಹಣದ ರೂಪದಲ್ಲಿ ನೀಡುವ ಹೆಚ್ಚುವರಿ ಭತ್ಯೆಗಳು


97.ಹಣಕಾಸಿನ ವ್ಯವಸ್ಥಾಪಕರ ಕಾರ್ಯಗಳಲ್ಲಿ ಒಂದಾಗಿರುವ ಕಾರ್ಯವು
 (1)ನಿಧಿಗಳ (ಹಣದ) ಹಂಚಿಕೆ
 (2)ಅಂತಿಮ ಲೆಕ್ಕಪತ್ರಗಳ ರಚನೆ
 (3)ಆಂತರಿಕ ಲೆಕ್ಕ ಮಾಡುವುದು ಪರಿಶೋಧನೆ
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(1) ನಿಧಿಗಳ (ಹಣದ) ಹಂಚಿಕೆ


98.ಮೌಲ್ಯವರ್ಧಿತ ತೆರಿಗೆ ಈ ಕೆಳಗಿನ ಯಾವ ತೆರಿಗೆಗೆ ಬದಲಿ ತೆರಿಗೆಯಾಗಿದೆ ?
 (1)ಆದಾಯ ತೆರಿಗೆ
 (2)ಮಾರಾಟ ತೆರಿಗೆ
 (3)ಗಿಫ್ಟ್ ಟ್ಯಾಕ್ಸ್
 (4)ಸಂಪತ್ತು ತೆರಿಗೆ
CORRECT ANSWER

(2) ಮಾರಾಟ ತೆರಿಗೆ


99.ಕೆಳಗಿನವುಗಳಲ್ಲಿ ಯಾವುದು ಆಯಾಸಕ್ಕೆ ಕಾರಣವಾಗಿದೆ ?
 (1)ಕಾರ್ಯಭಾರದ ಕೊರತೆ
 (2)ವಿಶ್ರಾಂತಿ ಇಲ್ಲದೇ ದೀರ್ಘ ನಿರಂತರವಾದ ಕೆಲಸ
 (3)ಕಾರ್ಯಕ್ಷೇತ್ರದಲ್ಲಿನ ಸಾಮಾನ್ಯವಾದ ಸೌಲಭ್ಯಗಳು
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(2) ವಿಶ್ರಾಂತಿ ಇಲ್ಲದೇ ದೀರ್ಘ ನಿರಂತರವಾದ ಕೆಲಸ


100.ಕೆಳಗಿನ ಯಾವುದು ಬೇಡಿಕೆಯ ನಿಯಮಕ್ಕೆ ಹೊರತಾಗಿದೆ ?
 (1)ಆಡಂಬರದ ಸರಕುಗಳು
 (2)ಅವಶ್ಯಕ ಸರಕುಗಳು
 (3)ವ್ಯಾಪಾರಿ ಸರಕುಗಳು
 (4)ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(2) ಅವಶ್ಯಕ ಸರಕುಗಳು


   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment