WhatsApp Group Join Now
Telegram Group Join Now

KPSC GROUP C Technical & Non Technical COMMUNICATION Paper-2 Question Paper 22-09-2018

KPSC GROUP C Technical & Non Technical COMMUNICATION Paper-2 (Exam held on 22-09-2018) Questions with answers

KPSC GROUP C ಪತ್ರಿಕೆ -2 ಸಂವಹನ (Below Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 22-09-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

GENERAL KANNADA / ಸಾಮಾನ್ಯ ಕನ್ನಡ

1.ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
 (1)ಉಪಮಾಲಂಕಾರ
 (2)ಅರ್ಥಾಂತರನ್ಯಾಸಾಲಂಕಾರ
 (3)ದೃಷ್ಟಾಂತಾಲಂಕಾರ
 (4)ಯಮಕಾಲಂಕಾರ
ಸರಿ ಉತ್ತರ

(4) ಯಮಕಾಲಂಕಾರ


2.ಇವುಗಳಲ್ಲಿ ಯಾವುದು ‘ಸೂರ್ಯ’ ಸೂಚಕ ಪದವಲ್ಲ.
 (1)ಇನ
 (2)ರವಿ
 (3)ತೇಜ
 (4)ಬಾನು

ಸರಿ ಉತ್ತರ

(4) ಬಾನು


3.ನೆನಪು ಎಂಬ ಪದ ಗ್ರಾಮ್ಯ ಉಚ್ಛಾರಣೆಯಲ್ಲಿ ‘ನೆಪ್ಪು’ ಎಂದಾಗುತ್ತದೆ. ಹೀಗೆಯೇ ಜ್ಞಾಪಕ ಎಂಬುದು
 (1)ಜ್ಞಾಪ್ತಿ
 (2)ಜೆಪ್ತಿ
 (3)ಜಾಪ್ತಿ
 (4)ಗೆಪ್ತಿ

ಸರಿ ಉತ್ತರ

(4) ಗೆಪ್ತಿ


4.‘ತಿರುಕನ ಕನಸು’ ಕವಿತೆಯನ್ನು ಬರೆದ ಕವಿ?
 (1)ನಿಜಗುಣ ಶಿವಯೋಗಿ
 (2)ದ.ರಾ. ಬೇಂದ್ರೆ
 (3)ಬಿ.ಎಂ.ಶ್ರೀ
 (4)ಮುಪ್ಪಿನ ಷಡಕ್ಷರಿ
ಸರಿ ಉತ್ತರ

(4) ಮುಪ್ಪಿನ ಷಡಕ್ಷರಿ


5.ಕನ್ನಡದ ಮೊದಲ ರಾಷ್ಟ್ರಕವಿ ಯಾರು?
 (1)ಪಂಪ
 (2)ಕುಮಾರವ್ಯಾಸ
 (3)ಕುವೆಂಪು
 (4)ಎಂ. ಗೋವಿಂದ ಪೈ
ಸರಿ ಉತ್ತರ

(4) ಎಂ. ಗೋವಿಂದ ಪೈ


6.‘‘ಕನ್ನಡ ಗಾದೆಗಳು’’ ಗ್ರಂಥದ ಲೇಖಕ
 (1)ಬಿ.ಬಿ. ಹೆಂಡಿ
 (2)ಚನ್ನಮಲ್ಲಿಕಾರ್ಜುನ
 (3)ಹರ್ಮನ್ ಮೋಗ್ಲಿಂಗ್
 (4)ಬಿ.ಎಸ್.ಗದ್ದಗಿಮಠ
ಸರಿ ಉತ್ತರ

(3) ಹರ್ಮನ್ ಮೋಗ್ಲಿಂಗ್


7.‘‘ಇದು ಪಾತಾಳಬಿಲಕ್ಕೆ ಬಾಗಿಲ್ ಇದು ಘೋರಾಂಧಕಾರಕ್ಕೆ ಮಾಡಿದ ಕೂಪಂ’’ ಇದು ಯಾವ ಅಲಂಕಾರಕ್ಕೆ ಸೇರಿದೆ?
 (1)ರೂಪಕಾಲಂಕಾರ
 (2)ಉತ್ಪ್ರೇಕ್ಷಾಲಂಕಾರ
 (3)ದೃಷ್ಟಂತಾಲಂಕಾರ
 (4)ಶ್ಲೇಷಾಲಂಕಾರ
ಸರಿ ಉತ್ತರ

(2) ಉತ್ಪ್ರೇಕ್ಷಾಲಂಕಾರ


8.ಇವುಗಳಲ್ಲಿ ‘ಪ್ರತಿಧ್ವನಿ’ ಪದ (echo word) ಯಾವುದು?
 (1)ಮರಗಿಡ
 (2)ಹಸಿಬಿಸಿ
 (3)ರಾಮಭೀಮ
 (4)ಎತ್ತುಗಿತ್ತು
ಸರಿ ಉತ್ತರ

(4) ಎತ್ತುಗಿತ್ತು


9.‘‘ಗಾಣಿಗ’’ ಎಂಬುದು
 (1)ಅಂಕಿತನಾಮ
 (2)ರೂಢನಾಮ
 (3)ಅನ್ವರ್ಥನಾಮ
 (4)ಪದನಾಮ
ಸರಿ ಉತ್ತರ

(3) ಅನ್ವರ್ಥನಾಮ


10.‘ಪೆಟ್ಟಿಗೆಯಲ್ಲಿನ ಹಣ್ಣನ್ನು ತಿನ್ನಲಾಗದು’ ಎಂಬುದು________ ವಾಕ್ಯವಾಗಿದೆ.
 (1)ಕ್ರಿಯಾತ್ಮಕ
 (2)ವೈಷಯಿಕ
 (3)ಪ್ರಸ್ತಾವನಾ
 (4)ನಿಷೇಧಾರ್ಥಕ
ಸರಿ ಉತ್ತರ

(4) ನಿಷೇಧಾರ್ಥಕ


11.ಈ ಕೆಳಗಿನವುಗಳಲ್ಲಿ ಶುದ್ಧ ರೂಪ ಗುರುತಿಸಿರಿ.
 (1)ಛಪ್ಪನ್ನೈವತ್ತಾರು ದೇಶಗಳು
 (2)ಚಪನ್ನೆತ್ತಾರು ದೇಷಗಳು
 (3)ಛಪನೈವತಾರು ದೇಸಗಳು
 (4)ಛಪ್ಪನ್ನಾರು ದೇಸಗಳು
ಸರಿ ಉತ್ತರ

(1) ಛಪ್ಪನ್ನೈವತ್ತಾರು ದೇಶಗಳು


12.‘‘ಭಾಷೆಯೆಂಬ ಬೆಳಕು ಜೀವನದಲ್ಲಿ ಬೆಳಗದಿದ್ದರೆ ಲೋಕವೆಲ್ಲ ಕತ್ತಲೆಯಿಂದ ತುಂಬಿ ಹೋಗುತ್ತಿತ್ತು’’ ಈ ಉಕ್ತಿಯ ವಿದ್ವಾಂಸ.
 (1)1ನೇ ನಾಗವರ್ಮ
 (2)ಭಟ್ಟಾಕಳಂಕ
 (3)ಭಾಮಹ
 (4)ದಂಡಿ
ಸರಿ ಉತ್ತರ

(4) ದಂಡಿ


13.ಙ, ಞ, ಣ, ನ, ಮ ಈ ವರ್ಣಗಳು ಜನಿಸುವ ಸ್ಥಳ
 (1)ಕಂಠ್ಯೋಷ್ಟ್ಯ
 (2)ಮೂರ್ಧನ್ಯ
 (3)ದಂತೋಷ್ಟ್ಯ
 (4)ನಾಸಿಕ
ಸರಿ ಉತ್ತರ

(4) ನಾಸಿಕ


14.ಸೂರ್ಯತ, ಸುಗ್ಗಿ, ವಸ್ತ್ರ, ಅಕ್ಕರ, ಶಸ್ತ್ರ, ಹಬ್ಬ ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರಗಳನ್ನು ಬೇರ್ಪಡಿಸಿ ಕ್ರಮವಾಗಿ ಬರೆಯಿರಿ.
 (1)ಶಸ್ತ್ರ, ಸುಗ್ಗಿ, ಸೂರ್ಯಾ
 (2)ವಸ್ತ್ರ, ಶೂರ್ಯಿ, ಶಸ್ತ್ರ
 (3)ಸುಗ್ಗಿ, ಅಕ್ಕರ, ಹಬ್ಬ
 (4)ಅಕ್ಕರ, ಸುಗ್ಗಿ, ವಸ್ತ್ರ
ಸರಿ ಉತ್ತರ

(3) ಸುಗ್ಗಿ, ಅಕ್ಕರ, ಹಬ್ಬ


15.‘ಲೆಕ್ಕಿಗ’ ಪದದಲ್ಲಿರುವ ಪ್ರತ್ಯಯ ಯಾವ ಬಗೆಯ ಪ್ರತ್ಯಯ?
 (1)ನಾಮ ವಿಭಕ್ತಿ
 (2)ಆಖ್ಯಾತ
 (3)ತದ್ಧಿತ
 (4)ಕೃದಂತ
ಸರಿ ಉತ್ತರ

(3) ತದ್ಧಿತ


16.‘ಹಾ ರಾಮಾ’ ಎಂಬುದು _________ ಕ್ಕೆ ಉದಾಹರಣೆ.
 (1)ಹ್ರಸ್ವ
 (2)ದೀರ್ಘ
 (3)ಫ್ಲುತ
 (4)ವ್ಯಂಜನ
ಸರಿ ಉತ್ತರ

(3) ಫ್ಲುತ


17.ಕೆಳಗಿನ – I ಮತ್ತು – II ಪಟ್ಟಿಗಳನ್ನು ಹೋಲಿಸಿ ಸರಿ ಹೊಂದಾಣಿಕೆಯ ಉತ್ತರವನ್ನು ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ.
  ಪಟ್ಟಿ – I ಪಟ್ಟಿ – II
 A.ಎ.ಕೆ. ರಾಮಾನುಜನ್I.ಕುಸುಮ ಬಾಲೆ
 B.ಸಿದ್ಧಲಿಂಗಯ್ಯII.ಅವ್ವ
 C.ಪಿ. ಲಂಕೇಶ್III.ಸಾವಿರಾರು ನದಿಗಳು
 D.ದೇವನೂರು ಮಹಾದೇವIV.ಹೊಕ್ಕಳಲ್ಲಿ ಹೂವಿಲ್ಲ
 ಸಂಕೇತಗಳು :

  ABCD
 (1)IIIIIVII
 (2)IVIIIIII
 (3)IIIIIIVI
 (4)IIIVIIII
ಸರಿ ಉತ್ತರ

(2) IV III II I


18.ನವೋದಯ ಕಾಲದ ಪ್ರಮುಖ ಅಭಿವ್ಯಕ್ತಿ ಪ್ರಕಾರ
 (1)ಭಾವಗೀತೆ
 (2)ಯುಗಳ ಗೀತೆ
 (3)ಚುಟುಕು
 (4)ರಗಳೆ
ಸರಿ ಉತ್ತರ

(1) ಭಾವಗೀತೆ


19.‘ಕೀಲಕ’ ಎಂಬುದು _______ಆಗಿದೆ.
 (1)ಮಾಸ
 (2)ಸಂವತ್ಸರ
 (3)ಶತಮಾನ
 (4)ದಶಕ
ಸರಿ ಉತ್ತರ

(2) ಸಂವತ್ಸರ


20.‘ಓ ದೇವರೇ ಕಾಪಾಡು’ ಇಲ್ಲಿರುವ ಸಂಧಿ _______.
 (1)ಲೋಪಸಂಧಿ
 (2)ಆಗಮ ಸಂಧಿ
 (3)ಪ್ರಕೃತಿ ಭಾವ
 (4)ಆದೇಶ ಸಂಧಿ
ಸರಿ ಉತ್ತರ

(3) ಪ್ರಕೃತಿ ಭಾವ


21.‘ಆರ್ಯ ’ ಪದದ ತತ್ಸಮ ರೂಪ _______.
 (1)ಅಜಾರ್ಯ
 (2)ಅಜ್ಜ
 (3)ತಾತ
 (4)ಅಜ
ಸರಿ ಉತ್ತರ

(2) ಅಜ್ಜ


22.ಮುಸುರೆಯ ಪಾತ್ರೆಯನ್ನು ಹುಡಿಮಣ್ಣಿನಲ್ಲಿ ತಿಕ್ಕಿದರೆ ಮಸಿ ಹೋಗುತ್ತದೆ. ಇಲ್ಲಿ ‘ಹುಡಿಮಣ್ಣು’ ಎಂಬುದು _______ಸಮಾಸವಾಗಿದೆ.
 (1)ತತ್ಪುರುಷ
 (2)ಕರ್ಮಧಾರಯ
 (3)ಕ್ರಿಯಾ
 (4)ದ್ವಿಗು
ಸರಿ ಉತ್ತರ

(2) ಕರ್ಮಧಾರಯ


23.ಬಲರಾಮನೂ ಕೃಷ್ಣನೂ ಕಂಸನ ಪಟ್ಟಣಕ್ಕೆ ಹೊರಟರು. ಇಲ್ಲಿರುವ ‘ಊ’ ಎಂಬುದು _______ಅವ್ಯಯವಾಗಿದೆ.
 (1)ಅನುಕರಣ
 (2)ಭಾವಸೂಚಕ
 (3)ಅನುಸರ್ಗ
 (4)ಸಂಬಂಧ ಸೂಚಕ
ಸರಿ ಉತ್ತರ

(4) ಸಂಬಂಧ ಸೂಚಕ


24.‘ಬಳೆ’ ಎಂಬ ಧಾತುವಿನ ಭಾವವಾಚಕ
 (1)ಬಳೆಸು
 (2)ಬೆಳೆಸು
 (3)ಬಳವಿ
 (4)ಬಳಸು
ಸರಿ ಉತ್ತರ

(3) ಬಳವಿ


25.‘ಜನಜನಿತ’ ಎಂಬ ಪದದ ವಿರುದ್ಧಾರ್ಥಕ ಪದ
 (1)ಪ್ರಚಲಿತ
 (2)ಪ್ರಸ್ತುತ
 (3)ಅಪ್ರಚಲಿತ
 (4)ಜೀವಿತ
ಸರಿ ಉತ್ತರ

(3) ಅಪ್ರಚಲಿತ


26.ಡಾ. ಎಸ್.ಎಲ್. ಬೈರಪ್ಪನವರ ಇತ್ತೀಚಿನ ಕಾದಂಬರಿ
 (1)ಸೀತಾಯಣ
 (2)ರಾಮಾಯಣ
 (3)ಉತ್ತರಾಯಣ
 (4)ಗ್ರಾಮಾಯಣ
ಸರಿ ಉತ್ತರ

(3) ಉತ್ತರಾಯಣ


27.ಪಟ್ಟಿ-I ರೊಡನೆ ಪಟ್ಟಿ-II ನ್ನು ಹೊಂದಿಸಿ ಬರೆಯಿರಿ.
  ಪಟ್ಟಿ- I ಪಟ್ಟಿ- II
 A.ಎದೆ ತುಂಬಿ ಹಾಡಿದೆನುI.ಹುಯಿಲಗೋಳ ನಾರಾಯಣರಾಯರು
 B.ಯಾವ ಮೋಹನ ಮುರಳಿ ಕರೆಯಿತೊII.ಬೇಂದ್ರೆ
 C.ನಾನು ಬಡವಿ ಆತ ಬಡವIII.ಗೋಪಾಲಕೃಷ್ಣ ಅಡಿಗ
 D.ಉದಯವಾಗಲಿ ನಮ್ಮ ಚೆಲುವ ಕನ್ನಡನಾಡುIV.ಶಿವರುದ್ರಪ್ಪ
 ಕೆಳಗಿನ ಸಂಕೇತಗಳನ್ನು ಉಪಯೋಗಿಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ :
  ABCD
 (1)IIIIIIIV
 (2)IIVIIIII
 (3)IIIIVIII
 (4)IVIIIIII
ಸರಿ ಉತ್ತರ

(4) IV III II I


28.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ
 (1)ಡಾ. ಕಮಲಾ ಹಂಪನ
 (2)ಕೊಡಗಿನ ಗೌರಮ್ಮ
 (3)ಎಚ್.ವಿ. ಸಾವಿತ್ರಮ್ಮ
 (4)ಜಯದೇವಿ ತಾಯಿ ಲಿಗಾಡೆ
ಸರಿ ಉತ್ತರ

(4) ಜಯದೇವಿ ತಾಯಿ ಲಿಗಾಡೆ


29.ಶ್ರೀ ಎಸ್.ಆರ್. ಕಂಠಿ ಯವರು ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ_______.
 (1)ರಾಜ್ಯದ ಕವಿಗಳು
 (2)ರಾಜ್ಯದ ರಾಜ್ಯಪಾಲರು
 (3)ರಾಜ್ಯದ ಮುಖ್ಯಮಂತ್ರಿಗಳು
 (4)ಈ ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(3) ರಾಜ್ಯದ ಮುಖ್ಯಮಂತ್ರಿಗಳು


30.‘ಪಗಾರ’ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
 (1)ಮರಾಠಿ
 (2)ಉರ್ದು
 (3)ಪೋರ್ಚುಗೀಸ್
 (4)ಹಿಂದಿ
ಸರಿ ಉತ್ತರ

(3) ಪೋರ್ಚುಗೀಸ್


31.ಪಟ್ಟಿ-I ರೊಡನೆ ಪಟ್ಟಿ-II ನ್ನು ಹೊಂದಿಸಿ ಬರೆಯಿರಿ.
  ಪಟ್ಟಿ- I ಪಟ್ಟಿ- II
 A.ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ಹರಿಯುವುದೀ ಮನ…..I.ಕುವೆಂಪು
 B.ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ…..II.ಕೆ.ಎಸ್.ನ.
 C.ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆIII.ಗೋಪಾಲಕೃಷ್ಣ ಅಡಿಗ
 D.ದೀಪವು ನಿನ್ನದೆ ಗಾಳಿಯೂ ನಿನ್ನದೆ ಆರದಿರಲಿ ಬೆಳಕು…..IV.ಬೇಂದ್ರೆ
 ಕೆಳಗಿನ ಸಂಕೇತಗಳನ್ನು ಉಪಯೋಗಿಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ :
  ABCD
 (1)IVIIIIII
 (2)IIIIIIIV
 (3)IIIIIIVI
 (4)IIIIVIII
ಸರಿ ಉತ್ತರ

(4) III IV I II


32.ಪಟ್ಟಿ-I ರೊಡನೆ ಪಟ್ಟಿ-II ನ್ನು ಹೊಂದಿಸಿ ಬರೆಯಿರಿ.
  ಪಟ್ಟಿ- I (ಕಾವ್ಯನಾಮ) ಪಟ್ಟಿ- II (ಮೂಲಹೆಸರು)
 A.ಭಾರತೀ ಸುತI.ಶ್ರೀರಂಗ
 B.ಮಧುರ ಚೆನ್ನII.ಬೆಟಗೇರಿ ಕೃಷ್ಣಶರ್ಮ
 C.ಆನಂದ ಕಂದIII.ಚೆನ್ನಮಲ್ಲಪ್ಪ ಗಲಗಲಿ
 D.ಆದ್ಯ ರಂಗಾಚಾರ್ಯ.IV.ಎಸ್.ಆರ್. ನಾರಾಯಣರಾವ್
 ಕೆಳಗಿನ ಸಂಕೇತಗಳನ್ನು ಉಪಯೋಗಿಸಿಕೊಂಡು ಸರಿಯಾದ ಉತ್ತರವನ್ನು ಆರಿಸಿ :
  ABCD
 (1)IIIIVIII
 (2)IIIIVIII
 (3)IIIIIIIV
 (4)IVIIIIII
ಸರಿ ಉತ್ತರ

(4) IV III II I


33.‘ಬಿಂ.ಎಂ.ಶ್ರೀ’ ಇದನ್ನು ವಿಸ್ತರಿಸಿ ಬರೆಯಿರಿ.
 (1)ಬೆಳ್ಳೂರು ಮೈಲಾರಪ್ಪ ಶ್ರೀಕಂಠಯ್ಯ
 (2)ಬೆಳವಾಡಿ ಮೈಲಾರಪ್ಪ ಶ್ರೀಕಂಠಯ್ಯ
 (3)ಬೇಲೂರು ಮಹಾದೇವಯ್ಯ ಶ್ರೀಕಂಠಯ್ಯ
 (4)ಬೇಲೂರು ಮಲ್ಲಪ್ಪ ಶ್ರೀಕಂಠಯ್ಯ
ಸರಿ ಉತ್ತರ

(1) ಬೆಳ್ಳೂರು ಮೈಲಾರಪ್ಪ ಶ್ರೀಕಂಠಯ್ಯ


34.ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ಆಚರಿಸುವ ‘‘ರಾಷ್ಟ್ರೀಯ ಯುವ ದಿನ’’ ಆಚರಣೆ ದಿನಾಂಕ_______.
 (1)ಜನವರಿ – 12
 (2)ಜನವರಿ – 26
 (3)ಜೂನ್ – 12
 (4)ನವಂಬರ್ – 14
ಸರಿ ಉತ್ತರ

(1) ಜನವರಿ – 12


35.ಕನ್ನಡ ಅಂಕಣ ಪ್ರಕಾರಕ್ಕೆ ಘನತೆ, ಗೌರವ, ಕೀರ್ತಿ ಮತ್ತು ಸಾಹಿತ್ಯದ ಮೌಲ್ಯ ತಂದು ಕೊಟ್ಟ ಪ್ರಸಿದ್ಧ ಸಾಹಿತಿ.
 (1)ಕೆ. ಗೋಪಾಲ ಕೃಷ್ಣ
 (2)ನಾಯ್ಡು ಆರ್.ಎಸ್.
 (3)ಹಾ.ಮಾ. ನಾಯಕ
 (4)ಎಂ.ಎನ್. ಕಾಮತ್

ಸರಿ ಉತ್ತರ

(3) ಹಾ.ಮಾ. ನಾಯಕ


GENERAL ENGLISH / ಸಾಮಾನ್ಯ ಇಂಗ್ಲಿಷ್

Directions : For Questions no. 36 to 39, an idiom or phrase has been used in the sentence. You have to choose the sentence which explains the correct meaning of that and shade/darken the correct answer in your answer sheet.

Example :
Tejas attends Karate classes once in a blue moon.
 (1)Tejas attends Karate classes regularly.
 (2)Tejas attends Karate classes rarely.
 (3)Tejas attends Karate classes fortnightly.
 (4)Tejas attends Karate classes frequently but not regularly.

Explanation :
The answer is Option (2) as the underlined part means ‘rare occurrence of something’. So you have to choose Option(2)and shade/darken the corresponding answer in your answer sheet for this example.
36.It is the Assistant Manager who rules the roost.
 (1)It is the Assistant Manager who is handsomely paid.
 (2)It is the Assistant Manager who exercises the authority here.
 (3)It is the Assistant Manager who has created a good impression.
 (4)It is the Assistant Manager who rushes through the work.
ಸರಿ ಉತ್ತರ

(2) It is the Assistant Manager who exercises the authority here.


37.His investments helped him make a killing in the stock market.
 (1)His investments helped him in making money quickly in the stock market.
 (2)His investments helped him in losing money quickly in the stock market.
 (3)His investments helped him in doing a scam in the stock market.
 (4)His investments did not get any returns in the stock market.
ಸರಿ ಉತ್ತರ

(1) His investments helped him in making money quickly in the stock market.


38.Alex tried to feel Ishika’s pulse on the issue, but in vain.
 (1)Alex tried to find Ishika’s views on the issue, but in vain.
 (2)Alex tried to argue with Ishika on the issue, but his efforts were of no use.
 (3)Alex tried to guide Ishika on the issue, but his efforts went in vain.
 (4)Alex tried to enlighten Ishika regarding the issue, but in vain.
ಸರಿ ಉತ್ತರ

(1) Alex tried to find Ishika’s views on the issue, but in vain.


39.He may be taken to task by the authorities.
 (1)He may be rewarded by the authorities.
 (2)He may tender his resignation to the authorities.
 (3)He may be entrusted with an official job by the authorities.
 (4)He may get an official reprimand from the authorities.
ಸರಿ ಉತ್ತರ

(4) He may get an official reprimand from the authorities.


Directions : In Questions no. 40 to 43, there are sentences which are divided and numbered into three parts, and one of the parts may contain an error. Identify the error by (1),(2) or (3) given under the parts of the sentence. If there are no errors, mark (4) No error. Shade/blacken the corresponding circle in your answer sheet.

Example :
Neither he
(1)
nor his team
(2)
were present that day.
(3)
No error.
(4)

Explanation :
The correct answer in this case is Option (3). It should be “was present that day”. So you must shade/blacken Option (3) for this question in your answer sheet.
40.Candidates must
(1)
have access to
(2)
good reference books.
(3)
No error.
(4)
ಸರಿ ಉತ್ತರ

(4)


41.He spent all
(1)
which he had in trying
(2)
to perfect his invention.
(3)
No error.
(4)
ಸರಿ ಉತ್ತರ

(1)


42.He would not have
(1)
made that mistake
(2)
if he would have consulted the reference book.
(3)
No error.
(4)
ಸರಿ ಉತ್ತರ

(3)


43.Did you come
(1)
by train
(2)
or bus ?
(3)
No error.
(4)
ಸರಿ ಉತ್ತರ

(3)


Directions : In question no. 44, four words have been given and one of those words is correctly spelt. You have to identify the word with the correct spelling and mark the correct answer in your answer sheet.

Example :
 (1)Relevent
 (2)Relevant
 (3)Relivent
 (4)Rilivent

Explanation :
From the above given words the 2nd Option is correctly spelt as the correct spelling is ‘‘relevant’’. You have to mark the answer (2) in your answer sheet.
44.Find the correctly spelt word.
 (1)Indigenous
 (2)Indigenaous
 (3)Indiginious
 (4)Indigeneous
ಸರಿ ಉತ್ತರ

(1) Indigenous


Directions : Question no. 45 has an expression which can be replaced by a single word. Choose the most appropriate one word from among the alternatives and shade/blacken the corresponding circle in your answer sheet.

Example :
A person who is able to think clearly, sensibly and logically.
 (1)Rationalist
 (2)Optimist
 (3)Pessimist
 (4)Choreographe
Explanation :
Since ‘‘Rationalist’’ is the most appropriate one word for the given expression, you have to shade/blacken the Option (1) in your answer sheet for this example.
45.Substance easily evaporated at normal temperatures.
 (1)Volatile
 (2)Steadfast
 (3)Enduring
 (4)Definite
ಸರಿ ಉತ್ತರ

(1) Volatile


Directions : In Question no. 46, a sentence has been given in Active or Passive voice. Out of the four alternatives suggested, select the one which best expresses the same sentence in Passive (if given sentence is Active) or Active (if given sentence is Passive) voice and shade/blacken the corresponding circle in your answer sheet.

46.I promised my husband that I will cook food for him.
 (1)A promise was made by me to my husband that food will be cooked by me.
 (2)Food will be cooked by me was a promise I made to my husband.
 (3)I promised my husband that food will be cooked by me.
 (4)My husband wanted a promise from me that I will cook the food.
ಸರಿ ಉತ್ತರ

(1) A promise was made by me to my husband that food will be cooked by me.


Directions : In Question no. 47, a sentence has been given in Direct/Indirect speech. Out of the four alternatives suggested, select the one which best expresses the same sentence in Indirect (if given sentence is Direct) or Direct (if given sentence is Indirect) speech and shade/blacken the corresponding circle in your answer sheet.

47.The teacher said, “Akbar was born in India.”
 (1)The teacher said that Akbar have been born in India.
 (2)The teacher says that Akbar was born in India.
 (3)The teacher said that Akbar was born in India.
 (4)The teacher will say the Akbar was born in India.
ಸರಿ ಉತ್ತರ

(3) The teacher said that Akbar was born in India.


Directions : To answer Question no. 48, choose the word or phrase which is a synonym or nearest in meaning to the word or phrase underlined and shade/blacken the corresponding circle in your answer sheet.

Example :
If you are in dilemma, you do not know what to do.
 (1)Darkness
 (2)Trap
 (3)Freedom
 (4)Confusion
Explanation :
In the answers, the word ‘‘Confusion’’ that is Option (4) is nearest in meaning to the underlined word in the given sentence. So you have to shade/blacken the Option (4) in your answer sheet for this example.
48.The performance was superlative.
 (1)Controlled
 (2)Excess
 (3)Greatest
 (4)Reserved
ಸರಿ ಉತ್ತರ

(3) Greatest


Directions : To answer Question no. 49, choose the word or phrase which is most nearly the opposite in the meaning to the word or phrase underlined and shade/blacken the corresponding circle in your answer sheet.

Example :
The glass was transparent.
 (1)Opaque
 (2)Misty
 (3)Covered
 (4)Clear
Explanation :
In the answers, the word ‘‘Opaque’’ that is Option (1) is the opposite of the underlined word ‘‘transparent’’. So you have to shade/blacken the Option (1) in your answer sheet for this example.
49.He amalgamated music and dance in a perfect way.
 (1)Separated
 (2)Combined
 (3)Assimilated
 (4)Joined
ಸರಿ ಉತ್ತರ

(1) Separated


50.Add a suitable question tag to the sentence given below :
She wasn’t in the parade, __________ ?
 (1)is she
 (2)wasn’t he
 (3)was she
 (4)does she
ಸರಿ ಉತ್ತರ

(3) was she


Directions : In Questions no. 51 to 54, each question contains a paragraph of 6 sentences. The first and the sixth sentences are given in the beginning and end and numbered 1 and 6 respectively. The four sentences in the middle are jumbled and labelled P, Q, R and S. You must identify the proper order of these four sentences and shade/blacken the option that correctly identifies this sequence.

Example :
 1.Once upon a time there lived a king.
 P.One day while hunting he was attacked by a tiger.
 Q.He had three ferocious hunting dogs.
 R.The dogs pounced on the tiger and saved the king’s life.
 S.The king used to take them with him while going out.
 6.He loved them till the end of his life.
 The correct sequence is
 (1)PQSR
 (2)RQSP
 (3)QSPR
 (4)SRQP
Explanation :
The correct sequence or order in this example is QSPR. So you have to shade/blacken Option (3) in your answer sheet.
51.1.    Companies are a powerful force for good.
 P.Voluntary measures such as codes of conduct have failed to address these issues and deliver change.
 Q.However, they can also cause serious problems with their irresponsible behaviour.
 R.There are several instances of companies undermining workers’ rights and damaging the environment.
 S.They provide jobs, boost economies and aid social and environmental development.
 6.The Companies Bill 2009 is thus a means to address issues of corporate governance and ensure that companies are accountable for their financial performance and social impact.
 The correct sequence is
 (1)SQPR
 (2)RQSP
 (3)SQRP
 (4)PRSQ
ಸರಿ ಉತ್ತರ

(3) SQRP


52.1.    Employees need to follow a meaningful set of guidelines designed to minimize risks while encouraging creativity.
 P.They must establish a meaningful corporate culture that encourages a sense of entrepreneurship.
 Q.Senior managers have a large role to play in this balancing act.
 R.They have to find ways of encouraging mass experiments while limiting possible threats to the company’s existence.
 S.They need to make sure the workers they hire have the skills necessary to drive the company forward.
 6.If all goes well, then natural leaders will emerge to move the nation forward.
  The correct sequence is
 (1)QSRP
 (2)RSQP
 (3)QRPS
 (4)QPRS
ಸರಿ ಉತ್ತರ

(1) QSRP


53.1.    A franchising agreement includes two parties.
 P.In turn, the buyer is called the franchisee.
 Q.These two parties are called the franchisor and the franchisee.
 E.This means that it gives permission for the buyer to use its name and sell its products.
 S.The franchisor is the business houe/entity which grants the franchisee license.
 6.He pays money to the franchisor and agrees to obey the rules the franchisor makes.
 The correct sequence is
 (1)QRSP
 (2)QSPR
 (3)QSRP
 (4)RPSQ
ಸರಿ ಉತ್ತರ

(2) QSPR


54.1.    In earlier days, people learnt by reading out loud.
 P.However, while reading, they would not know when to pause and what to emphasise.
 Q.But not everybody used the same punctuations for the same thing.
 R.To address this problem, various signs depicting various punctuations were introduced.
 S.Thus, firmer guidelines regarding punctuations were framed so that everyone used them in a similar way.
 6.Since then, their use has been regularized and the punctuation rules have been followed by all.
 The correct sequence is
 (1)PQRS
 (2)PRQS
 (3)RPQS
 (4)QRPS
ಸರಿ ಉತ್ತರ

(2) PRQS


Directions : For Questions no. 55 to 57, a passage has been given. In the passage, some of the words have been left out. You have to read the passage and try to understand what it is about. Then fill in the blanks with the help of the options given below it and shade/darken the appropriate circle in your answer sheet.

Literature is a   55   through which a person conveys his ideas towards or protest   56   different norms of society. The words that deal with a moral issue are of particular importance in literature. They are written with a particular purpose in   57  .

55.What is the correct answer for the blank (55) ? Select from the options given below :
 (1)base
 (2)medium
 (3)source
 (4)subject
ಸರಿ ಉತ್ತರ

(2) medium


56.What is the correct answer for the blank (56) ? Select from the options given below :
 (1)against
 (2)for
 (3)in
 (4)off
ಸರಿ ಉತ್ತರ

(1) against


57.What is the correct answer for the blank (57) ? Select from the options given below :
 (1)all
 (2)hand
 (3)mind
 (4)total
ಸರಿ ಉತ್ತರ

(3) mind


58.Match the following sentences with the figures of speech used in them :
  Sentences : Figures of speech :
 A.He is as innocent as a lamb.I.Metaphor
 B.America is a melting pot.II.Simile
 C.Your suitcase weighs a ton.III.Oxymoron
 D.It is an original copy.IV.Hyperbole
 Select the code for the correct answer from the options given below :
  ABCD
 (1)IIIIVIII
 (2)IIIIIIIV
 (3)IIIIVIII
 (4)IIIIIIIV
ಸರಿ ಉತ್ತರ

(3) II I IV III


Directions : Read the following passages carefully and answer the questions that follow (Questions no. 59 to 64). Your answers to these questions should be based on the passage only.

Passage 1

We must be very clear in ourselves what we want, clear what a human being must be, the total human being, not just the technological human being. If we concentrate very much on examinations, just on making the child clever, proficient in acquiring knowledge, while we neglect the other side, then the child will grow up into a one-sided human being. When we talk about a total human being, it is about inward and outward growth. The two must go together. That is the real issue in education to see that when the child leaves the school, he is well established in goodness, both outwardly and inwardly.

If we concentrate only on knowledge and proficiency, he grows differently. He is jealous, angry, frustrated, in despair, ambitious. So you will create a society in which there is always disorder, because you are emphasizing technology and proficiency in one field and neglecting the other field. Such societies are always at loggerheads with each other. They fight wars. There is unrest both within and outside.

So technology cannot produce a perfect or a good society. It may produce a great society, where there is no poverty, where there is material equality and so on. A great society is not necessarily a good society. A good society implies order. Order does not mean trains running on time, mail delivered regularly. It means something else. For a human being, order means order within himself. And such order will inevitably bring about a good society.

59.According to the passage, who is a one-sided human being ?
 (1)One who concentrates on examination
 (2)One who concentrates on technology and becomes clever
 (3)One who neglects the ‘other side’ of human beings
 (4)All of the above
ಸರಿ ಉತ್ತರ

(4) All of the above


60.According to the passage, if our education focuses only on knowledge and proficiency, the result is
 (1)Disorder in the society
 (2)Anger and frustration
 (3)Trains run on time and mail is delivered regularly
 (4)Achieve material equality and poverty removal
ಸರಿ ಉತ್ತರ

(1) Disorder in the society


61.According to the passage, ‘A great society is not necessarily a good society’ means
 (1)A great society cannot become a good society
 (2)A good society cannot become a great society
 (3)A good society is necessarily a great society
 (4)None of the above
ಸರಿ ಉತ್ತರ

(4) None of the above


Passage 2

World Health Organization defines hygiene as ‘conditions and practices that help to maintain health and prevent the spread of diseases’. In a common man’s language, hygiene is often viewed as ‘cleanliness’. Today hygiene is related to an environment and set of practices which are necessary for leading a healthy and disease-free life. It is applicable to domains like personal life, the field of medicine and community health, occupations, kitchen and food, places of community commingling, etc. In medicine, home and everyday life settings, practices for hygiene are employed to prevent incidence or spreading of diseases. In case of personal hygiene, it is not only for personal health and well-being but it also relates to social acceptance and image.

Though people often use ‘cleanliness’ and ‘hygiene’ interchangeably, they are dissimilar. Hygiene mostly means practices that prevent spread of disease-causing organisms, whereas cleanliness is a state of being clean or kept clean.

Personal hygiene is believed to elevate the status of a person in terms of acceptance by fellow human beings. People often alienate themselves from someone who has bad personal hygiene. Poor personal hygiene can affect social life, even to the extent of rendering a person an utter failure. They can be denied a job, a promotion or even an appointment.

It is estimated that a majority of the diseases and illnesses are caused by microbes which spread through touch. Hand washing and sanitizing the hands at appropriate times is very crucial for personal and community health. Hygiene as a culture and movement has become all the more important among communities in the wake of epidemics, endemic diseases and infections like bird-flu, chikungunya, etc.

62.Hygiene is necessary for communities
 (1)To maintain cleanliness
 (2)To lead a healthy and disease free life
 (3)Conditions and practice for communities
 (4)To lead a happy personal life
ಸರಿ ಉತ್ತರ

(2) To lead a healthy and disease free life


63.How should we spread awareness on hygiene to prevent endemic and epidemic diseases according to the passage ?
 (1)It should become a cultural movement.
 (2)It should become a culture.
 (3)It should be both our culture and movement.
 (4)It should be restricted to endemic and epidemic diseases.
ಸರಿ ಉತ್ತರ

(3) It should be both our culture and movement.


64.According to the passage, the word ‘microbes’ refers to
 (1)Endemic and epidemic diseases
 (2)Disease-causing micro-organisms
 (3)Sanitizing
 (4)Chikungunya, bird-flu and other diseases
ಸರಿ ಉತ್ತರ

(2) Disease-causing micro-organisms


Directions : In Questions no. 65 to 67, a sentence is given with a blank. You have to select the correct form of the phrasal verb for the blank given in the sentence and mark the correct answer in your answer sheet.

Example :
He ________ the orders given by his boss.
 (1)carried out
 (2)carried away
 (3)carried on
 (4)carried off
Explanation :
Here the Option (1) ‘carried out’ is correct. You have to mark Option (1) as the answer in your answer sheet for this example.
65.I __________ with this idea for a TV show about a woman living with her best friend and daughter.
 (1)came up
 (2)came in
 (3)came on
 (4)came of
ಸರಿ ಉತ್ತರ

(1) came up


66.Ben’s mother _________ and let him stay out late with his friends.
 (1)gave out
 (2)gave off
 (3)gave in
 (4)gave at
ಸರಿ ಉತ್ತರ

(3) gave in


67.I will ________ my professor this evening to discuss the topic.
 (1)call on
 (2)call in
 (3)call for
 (4)call out
ಸರಿ ಉತ್ತರ

(1) call on


Directions : For Questions no. 68 to 70, you have to choose the word from the options given below which has the same meaning and can be used in the same context as the underlined word(s) in both the sentences and mark the correct answer in your answer sheet.

Example :
 A.This rule does not hold good in his case.
 B.They failed to put themselves to the work with dedication and spirit.
 (1)accede
 (2)secede
 (3)apply
 (4)approach
Explanation :
Here the correct word is apply which can replace the underlined word(s) in both the sentences in the best way and the meaning of both sentences will remain the same. So for this question, you have to select the Option (3) and mark the same in your answer sheet.
68.
 A.The police was able to arrest a large number of anti-social elements following directions from headquarters.
 B.I fear you won’t be able to finish the work on time.
 (1)apprehend
 (2)round up
 (3)suspect
 (4)presume
ಸರಿ ಉತ್ತರ

(1) apprehend


69.
 A.We are in concurrence of opinion with your proposal.
 B.The agreement was signed between two countries.
 (1)accord
 (2)agree
 (3)treat
 (4)similar
ಸರಿ ಉತ್ತರ

(1) accord


70.
 A.We should not waste time in petty things.
 B.He is not of a legal age and hence not eligible to vote in the elections.
 (1)tiny
 (2)minor
 (3)insignificant
 (4)pendant
ಸರಿ ಉತ್ತರ

(2) minor


COMPUTER KNOWLEDGE/ಕಂಪ್ಯೂಟರ್ ಜ್ಞಾನ

71.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಎಂ.ಎಸ್. ಎಕ್ಸೆಲ್ ನಲ್ಲಿ ಪ್ರತಿಯೊಂದು ವರ್ಕ್ ಬುಕ್, ತಪ್ಪಿನಿಂದಾಗಿ 3 ಸಂಖ್ಯೆಯ –ವರ್ಕ್ ಶೀಟ್ ಗಳನ್ನು ಹೊಂದಿವೆ.
 B.ಎಂ.ಎಸ್. ಎಕ್ಸೆಲ್ ನಲ್ಲಿ “=” ಚಿಹ್ನೆಯೊಂದಿಗೆ ಸೂತ್ರವು ಪ್ರಾರಂಭವಾಗುತ್ತದೆ.
 ಮೇಲಿನವುಗಳಲ್ಲಿ ಯಾವುದು/ವು ಸರಿ?
 ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರವನ್ನು ಆರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಎರಡೂ


72.ಯಂತ್ರ ಭಾಷೆಯು
 (1)ಪ್ರೋಗ್ರಾಂಗಳನ್ನು ಮೊದಲಿಗೆ ಬರೆಯಲಾದ ಭಾಷೆ
 (2)ಕಂಪ್ಯೂಟರ್ ನಿಂದ ಮಾತ್ರವೇ ಅರ್ಥ ಮಾಡಿಕೊಳ್ಳಲಾಗುವ ಭಾಷೆ
 (3)ಒಂದು ಕಂಪ್ಯೂಟರ್ ನಿಂದ ಮತ್ತೊಂದು ಕಂಪ್ಯೂಟರ್ ಗೆ ವಿಭಿನ್ನವಾಗುತ್ತದೆ
 (4)ಮೇಲಿನ ಎಲ್ಲವೂ
ಸರಿ ಉತ್ತರ

(4) ಮೇಲಿನ ಎಲ್ಲವೂ


73.ಕೆಳಗಿನವುಗಳಲ್ಲಿ ಯಾವುದು ಬೈನರಿ ಸಂಖ್ಯೆಯಲ್ಲ ?
 (1)0011
 (2)1011
 (3)2021
 (4)1101
ಸರಿ ಉತ್ತರ

(3) 2021


74.ಪ್ರತಿಯೊಂದೂ ಕ್ಯಾರೆಕ್ಟರ್ ಅನ್ನು ವಿಶಿಷ್ಟ 8-bit ಸಂಕೇತವಾಗಿ ಪ್ರತಿನಿಧಿಸಲು ಅತಿ ವ್ಯಾಪಕವಾಗಿ ಬಳಸುವ ಕೋಡ್ ಎಂದರೆ
 (1)ASCII
 (2)UNICODE
 (3)BCD
 (4)EBCDIC
ಸರಿ ಉತ್ತರ

(1) ASCII


75.ಕಂಪೈಲರ್ ಎಂದರೇನು ?
 (1)ಇದು ಒಬ್ಬ ಕಂಪ್ಯೂಟರ್ ಆಪರೇಟರ್ ಗೆ ನೀಡಲಾದ ಒಂದು ಹೆಸರು
 (2)ಮಾಹಿತಿ ಸಂಗ್ರಹಣೆಗೆ ಇರುವ ಡಿಜಿಟಲ್ ಯಂತ್ರದ ಒಂದು ಭಾಗ
 (3)ಇದು ಬೂಲಿಯನ್ ಆಲ್ಜೀಬ್ರಾದ (ಬೀಜಗಣಿತ) ಒಂದು ಆಪರೇಟರ್ ಆಗಿದೆ
 (4)ಕೆಲವು ಪ್ರೋಗ್ರಾಂನ್ನು (ಆಬ್ಜೆಕ್ಟ್) ವಸ್ತು ವಿಷಯ ಸಂಕೇತವಾಗಿ ಭಾಷಾಂತರಿಸುವ ಒಂದು ಭಾಷಾಂತರಕಾರ
ಸರಿ ಉತ್ತರ

(4) ಕೆಲವು ಪ್ರೋಗ್ರಾಂನ್ನು (ಆಬ್ಜೆಕ್ಟ್) ವಸ್ತು ವಿಷಯ ಸಂಕೇತವಾಗಿ ಭಾಷಾಂತರಿಸುವ ಒಂದು ಭಾಷಾಂತರಕಾರ


76.ಕೆಳಗಿನ ಪ್ರಥಮಾಕ್ಷರಿಗಳನ್ನು ಮತ್ತು ಅವುಗಳ ವಿಸ್ತರಣೆಯನ್ನು ಪರಿಗಣಿಸಿ :
 A.BIOS → ಬೇಸಿಕ್ ಇನ್ ಪುಟ್ ಔಟ್ ಪುಟ್ ಸಿಸ್ಟಂ
 B.DLL → ಡೈನಮಿಕ್ ಲಿಂಕ್ ಲೈಬ್ರರಿ
 C.BCD → ಬೈನರಿ ಕೋಡೆಡ್ ಡೆಸಿಮಲ್
 ಮೇಲಿನವುಗಳಲ್ಲಿ ಯಾವುದು / ವು ಸರಿ ?
 ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರವನ್ನು ಆರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


77.ಕೆಳಗಿನ ಯಾವ ವಾಣಿಜ್ಯಾತ್ಮಕ ಸಾಫ್ಟ್ ವೇರ್ (ತಂತ್ರಾಂಶ) ಉತ್ಪಾದನೆಗಳು ಕ್ರಮವಾಗಿ ಆಪರೇಟಿಂಗ್ ಸಿಸ್ಟಂ ಸಾಫ್ಟ್ ವೇರ್ ಮತ್ತು ಅಪ್ಲಿಕೇಷನ್ ಸಾಫ್ಟ್ ವೇರ್ ಗಳಿಗೆ ಉದಾಹರಣೆಗಳಾಗಿವೆ ?
 (1)ಮೈಕ್ರೋಸಾಫ್ಟ್ ವಿಂಡೋಸ್ XP ಮತ್ತು MS ಆಫೀಸ್ XP
 (2)ಎಂ.ಎಸ್. ಡಾಸ್ ಮತ್ತು ಮೈಕ್ರೋಸಾಫ್ಟ್ ವಿಂಡೋಸ್ 10 ಹೋಂ
 (3)ಎಂ.ಎಸ್. ಆಫೀಸ್ XP ಮತ್ತು ಜಾವಾ
 (4)ಯೂನಿಕ್ಸ್ ಮತ್ತು ಲೈನಕ್ಸ್
ಸರಿ ಉತ್ತರ

(1) ಮೈಕ್ರೋಸಾಫ್ಟ್ ವಿಂಡೋಸ್ XP ಮತ್ತು MS ಆಫೀಸ್ XP


78.ಪಾಸ್ಕಲ್ ಪ್ರೋಗ್ರಾಮಿಂಗ್ ಭಾಷೆಯನ್ನು ಕಂಡುಹಿಡಿದವನಾರು ?
 (1)ಗ್ರೇಸ್ ಹಾಪ್ಪರ್
 (2)ನಿಕ್ಲೌಸ್ ವರ್ತ್
 (3)ಥಾಮಸ್ ಇ. ಕುರ್ಟ್ಜ್
 (4)ಮೈಕೆಲ್ ಜೆ. ಕೇರೆ
ಸರಿ ಉತ್ತರ

(2) ನಿಕ್ಲೌಸ್ ವರ್ತ್


79.ಕೆಳಗಿನ ಯಾವ ಟೋಪಾಲಜಿಯಲ್ಲಿ ನೆಟ್ವರ್ಕ್ ಕಂಪ್ಯೂಟರ್ ಗಳನ್ನು ಅದೇ ಕೇಬಲ್ ಗೆ ಸಂಪರ್ಕಿಸಲಾಗುತ್ತದೆ ?
 (1)ಸ್ಟಾರ್
 (2)ರಿಂಗ್
 (3)ಬಸ್
 (4)ಮೆಷ್
ಸರಿ ಉತ್ತರ

(3) ಬಸ್


80.ಬ್ಯಾಂಡ್ ವಿಡ್ತ್ ಎಂಬುದು ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
 (1)ಒಂದು ಸಮಾನದರ್ಜೆ ನೆಟ್ವರ್ಕ್ ಸಂಗ್ರಹಿಸಬಹುದಾದ ಮಾಹಿತಿಯ ಮೊತ್ತ.
 (2)ಒಂದು ನೀಡಿರುವ ಸಮಯದಲ್ಲಿ ಒಂದು ಸಂವಹನ ಮಾಧ್ಯಮವು ವರ್ಗಾಯಿಸಬಹುದಾದ ಮಾಹಿತಿಯ ಮೊತ್ತ.
 (3)ಅನಲಾಗ್ ಸಂಜ್ಞೆ / ಸಂಕೇತಗಳನ್ನು ಡಿಜಿಟಲ್ ಸಂಜ್ಞೆ / ಸಂಕೇತಗಳಾಗಿಯೂ ಮತ್ತು ಡಿಜಿಟಲ್ ಸಂಜ್ಞೆ / ಸಂಕೇತಗಳನ್ನು ಅನಲಾಗ್ ಸಂಜ್ಞೆ / ಸಂಕೇತಗಳಾಗಿಯೂ ಪರಿವರ್ತಿಸುವ ದರ.
 (4)ಒಂದು ಕ್ಷೇತ್ರದಲ್ಲಿ LAN ಅಥವಾ WAN ನ್ನು ಅನುಷ್ಠಾನಗೊಳಿಸಲು ಅಗತ್ಯವಾದ ಕೇಬಲ್ ನ ವೆಚ್ಚ.
ಸರಿ ಉತ್ತರ

(2) ಒಂದು ನೀಡಿರುವ ಸಮಯದಲ್ಲಿ ಒಂದು ಸಂವಹನ ಮಾಧ್ಯಮವು ವರ್ಗಾಯಿಸಬಹುದಾದ ಮಾಹಿತಿಯ ಮೊತ್ತ.


81.ಈ ಕೆಳಗಿನವುಗಳಲ್ಲಿ ಯಾವುದು e-ಅಂಚೆ ವಿಳಾಸದ ಒಂದು ಭಾಗವಾಗಿಲ್ಲ ?
 (1)Period ( • )
 (2)At sign ( @ )
 (3)Space ( )
 (4)Underscore ( _ )
ಸರಿ ಉತ್ತರ

(3) Space ( )


82.ಒಂದು ಎಲೆಕ್ಟ್ರಾನಿಕ್ ಸಂವಹನದಲ್ಲಿ ಒಬ್ಬ ನಂಬಿಕಾರ್ಹ ವ್ಯಕ್ತಿ ಅಥವಾ ಒಂದು ವಹಿವಾಟಿನ ಸೋಗಿನಿಂದ (ಛದ್ಮವೇಷದಿಂದ) ಪಾಸ್ವರ್ಡ್ ಗಳು, ಕ್ರೆಡಿಟ್ ಕಾರ್ಡ್ ಗಳು, ಡೆಬಿಟ್ ಕಾರ್ಡ್ ಗಳಂತಹ ಸೂಕ್ಷ್ಮ ಮಾಹಿತಿಯನ್ನು ಗಳಿಸಲು ಪ್ರಯತ್ನಿಸುವ ನಿರ್ಣಾಯಕವು ಕೆಳಗಿನವುಗಳಲ್ಲಿ ಯಾವುದಾಗಿದೆ ?
 (1)ಸ್ಪೂಫಿಂಗ್
 (2)ಫಿಶಿಂಗ್
 (3)ಸ್ಟಾಲ್ಕಿಂಗ್
 (4)ಹ್ಯಾಕಿಂಗ್
ಸರಿ ಉತ್ತರ

(2) ಫಿಶಿಂಗ್


83.ಮೈಕ್ರೋಸಾಫ್ಟ್ ಆಫೀಸ್ 2007 ರಲ್ಲಿ ಪವರ್ ಪಾಯಿಂಟ್ ನ ವಿಸ್ತರಣೆಯೇನು ?
 (1).ppt
 (2).pptx
 (3).ppx
 (4).ptx
ಸರಿ ಉತ್ತರ

(2) .pptx


84.ಎಂ.ಎಸ್. ಪವರ್ ಪಾಯಿಂಟ್ ನಲ್ಲಿ ಕೀ ಬೋರ್ಡ್ ನ ಯಾವ ಕೀಲಿಯನ್ನು ವ್ಯೂ ಸ್ಲೈಡ್ ಶೋಗೆ ಬಳಸಲಾಗುತ್ತದೆ ?
 (1)F1
 (2)F2
 (3)F5
 (4)F10
ಸರಿ ಉತ್ತರ

(3) F5


85.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.C ಭಾಷೆಯು ಡೆನ್ನಿಸ್ ರಿಚಿರಿಂದ ಅಭಿವೃದ್ಧಿಗೊಳಿಸಲ್ಪಟ್ಟಿತು.
 B.C++ ಭಾಷೆಯು ಬಿಜೋರ್ನ್ ಸ್ಟ್ರೌಸ್ಟ್ರಪ್ ರಿಂದ ಅಭಿವೃದ್ಧಿಗೊಳಿಸಲ್ಪಟ್ಟಿತು.
 ಮೇಲಿನವುಗಳಲ್ಲಿ ಯಾವುದು / ವು ಸರಿ ?
ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರವನ್ನು ಆರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಎರಡೂ


86.ಯಾವ ವಿಧದ ಕಡತಗಳಿಗೆ ಸಾಮಾನ್ಯವಾಗಿ .tmp ಎಕ್ಸ್ ಟೆನ್ ಷನ್ ನ್ನು ಉಲ್ಲೇಖಿಸುತ್ತಾರೆ ?
 (1)ಕಂಪ್ರೆಸ್ಡ ಆರ್ಚೀವ್ ಕಡತಗಳು
 (2)ಇಮೇಜ್ ಕಡತಗಳು
 (3)ತಾತ್ಕಾಲಿಕ ಕಡತಗಳು
 (4)ಆಡಿಯೋ (ಶ್ರವ್ಯ) ಕಡತಗಳು
ಸರಿ ಉತ್ತರ

(3) ತಾತ್ಕಾಲಿಕ ಕಡತಗಳು


87.‘ವೈಟ್ ಹ್ಯಾಟ್’ ಎಂದರೆ ಯಾರು ?
 (1)ಕೊನೆಯ ಪಕ್ಷ ದುರುದ್ದೇಶ ರಹಿತ ಕಾರಣಗಳಿಗಾಗಿ ಅಥವಾ ಅಧಿಕೃತತೆಗಾಗಿ ಭದ್ರತೆಯನ್ನು ಭೇದಿಸುವ ಹ್ಯಾಕರ್.
 (2)ಅಸ್ಪಷ್ಟ ನೀತಿಗಳ ಅಥವಾ ಗಡಿಯಂಚಿನ ನಿಷ್ಠೆಯ, ಆಗಾಗ್ಗೆ ನೇರವಾಗಿ ಸೇರಿಕೆಯಾದ ಹ್ಯಾಕರ್.
 (3)ಒಂದು ವ್ಯವಸ್ಥೆಯನ್ನು ಅದು ಜಾರಿಗೆ ಬರುವ ಮುನ್ನ, ಆದರ ಬಗ್ ಪರೀಕ್ಷೆಯನ್ನು ಕೈಗೊಳ್ಳುವ, ಅದರ ಶೋಷಣೆಯನ್ನು ಪರಿಶೀಲಿಸಿ ಅವನ್ನು ಮುಕ್ತಾಯ ಗೊಳಿಸುವ ಇತರೆ ಹೊರಗಣ ಕಂಪ್ಯೂಟರ್ ಭದ್ರತಾ ಸಮಾಲೋಚಕ ಸಂಸ್ಥೆಗಳು.
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(1) ಕೊನೆಯ ಪಕ್ಷ ದುರುದ್ದೇಶ ರಹಿತ ಕಾರಣಗಳಿಗಾಗಿ ಅಥವಾ ಅ ಕೃತತೆಗಾಗಿ ಭದ್ರತೆಯನ್ನು ಭೇದಿಸುವ ಹ್ಯಾಕರ್.


88.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಎರಡನೇ ತಲೆಮಾರಿನ ಕಂಪ್ಯೂಟರ್ ಗಳ ಮುಖ್ಯ ಘಟಕಗಳು ನಿರ್ವಾತ ನಳಿಕೆಗಳು.
 B.ಮೂರನೇ ತಲೆಮಾರಿನ ಕಂಪ್ಯೂಟರ್ ಗಳಲ್ಲಿ ಬಳಕೆಯಾಗುವ ಮುಖ್ಯ ವಿದ್ಯುನ್ಮಾನ ಘಟಕಗಳು ಸಮಗ್ರ ಸರ್ಕ್ಯೂಟ್ ಗಳಾಗಿವೆ.
 ಮೇಲಿನವುಗಳಲ್ಲಿ ಯಾವುದು / ವು ಸರಿ?
 ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರವನ್ನು ಆರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(2) B ಮಾತ್ರ


89.MS ವರ್ಡ್ ನ್ನು ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.MS ವರ್ಡ್ ನಲ್ಲಿ ಬಳಸುವ ಡಿಫಾಲ್ಟ್ ಫಾಂಟ್ ಏರಿಯಲ್ ಆಗಿದೆ.
 B.MS ವರ್ಡ್ ನಲ್ಲಿನ ಡಿಫಾಲ್ಟ್ ಎಡ ಮಾರ್ಜಿನ್ 1•0ʹʹಆಗಿದೆ.
 ಮೇಲಿನ ಹೇಳಿಕೆಗಳಲ್ಲಿ ಯಾವುದು / ವು ಸರಿ ?
 ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರವನ್ನು ಆರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(2) B ಮಾತ್ರ


90.ಕೆಳಗಿನ ದ್ವಾರಕ್ಕೆ ಹೊಂದಿಕೆಯಾಗುವ ಸರಿಯಾದ ಟ್ರೂತ್ ಟೇಬಲ್ ಯಾವುದು
 (1)
 (2)
 (3)
 (4)
ಸರಿ ಉತ್ತರ

(2)


91.ಎಂ.ಎಸ್. ವರ್ಡ್ ನಲ್ಲಿ ಬುಲ್ಲೆಟ್ಸ್ ನ್ನು ಸೇರಿಸಲು ಬಳಸುವ ಸಮೀಪದಾರಿ (ಶಾರ್ಟ್ ಕಟ್) ಈ ಕೆಳಗಿನವುಗಳಲ್ಲಿ ಯಾವುದು ?
 (1)Ctrl + Shift + L
 (2)Ctrl + L
 (3)Ctrl + Shift + I
 (4)Ctrl + Shift + S
ಸರಿ ಉತ್ತರ

(1) Ctrl + Shift + L


92.ಎಂ.ಎಸ್. ವರ್ಡ್ ನಲ್ಲಿ ಇನ್ಸರ್ಟ್ ಎಂಡ್ ನೋಟ್ ಎಂಬುದು ಎಲ್ಲಿರುತ್ತದೆ ?
 (1)ಫೈಲ್ ಮೆನು
 (2)ರೆಫರೆನ್ಸ್ ಮೆನು
 (3)ಮೆಯ್ಲಿಂಗ್ಸ್ ಮೆನು
 (4)ಡಿಸೈನ್ ಮೆನು
ಸರಿ ಉತ್ತರ

(2) ರೆಫರೆನ್ಸ್ ಮೆನು


93.ಎಂ.ಎಸ್. ಎಕ್ಸೆಲ್ ನಲ್ಲಿ, ಈ ಕೆಳಗಿನವುಗಳಲ್ಲಿ ಯಾವುದು ಹೋಲಿಕೆ (ಕಂಪ್ಯಾರಿಜನ್) ಆಪರೇಟರ್ ಅಲ್ಲ ?
 (1)=
 (2)^
 (3)>
 (4) < >
ಸರಿ ಉತ್ತರ

(2) ^


94.ಸೆಲ್ ರೇಂಜ್ (ವ್ಯಾಪ್ತಿ) F2 ನಿಂದ L12 ರವರೆಗಿನ ಸೆಲ್ ರೆಫರೆನ್ಸ್ ನ್ನು ಕೆಳಗಿನವುಗಳಲ್ಲಿನ ಯಾವುದು ನೀಡುತ್ತದೆ ?
 (1)F2•L12
 (2)F2;L12
 (3)F2:L12
 (4)F2-L12
ಸರಿ ಉತ್ತರ

(3) F2:L12


95.ಪಟ್ಟಿ I ರಲ್ಲಿನ ಎಂ.ಎಸ್. ಫಕ್ಷನ್ ಕೀ ಶಾರ್ಟ್ ಕಟ್ ಗಳನ್ನು ಪಟ್ಟಿ II ರಲ್ಲಿನ ಅವುಗಳಿಗೆ ಸಂಬಂಧಿಸಿದ ಕ್ರಿಯೆಗಳೊಂದಿಗೆ ಹೊಂದಿಸಿ:
  ಪಟ್ಟಿ I (ಫಕ್ಷನ್ ಕೀ ಶಾರ್ಟ್ ಕಟ್) ಪಟ್ಟಿ II (ಕ್ರಿಯೆಗಳು)
 A.F1I.ಆಯ್ಕೆಯಾದ ಸೆಲ್ಅನ್ನು ಎಡಿಟಿಂಗ್ ಗಾಗಿ ಆಕ್ಟಿವೇಟ್ ಗೊಳಿಸುತ್ತದೆ
 B.F2II.ಹೆಲ್ಪ್ ಮೆನುವನ್ನು ತೆರೆಯುತ್ತದೆ
 C.F4III.ಆಯ್ಕೆಯ ವಾಪ್ತಿಯಲ್ಲಿನ ಕಾಗುಣಿತ ಪರೀಕ್ಷೆಯನ್ನು ನಿರ್ವಹಿಸುತ್ತದೆ
 D.F7IV.ಕೊನೆಯ ಕ್ರಿಯೆಯನ್ನು ಪುನರಾವರ್ತಿಸುತ್ತದೆ
 V.ವರ್ಕ್ ಬುಕ್ ನ್ನು ರಿಫ್ರೆಶ್ ಗೊಳಿಸುತ್ತದೆ ಸೂತ್ರದ ಮೇಲೆ ಲೆಕ್ಕಾಚಾರಗಳನ್ನು ಕೈಗೊಳ್ಳುತ್ತದೆ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
  ABCD
 (1)IIIIVIII
 (2)IIIIVIV
 (3)VIVIIIII
 (4)IIIIIIV
ಸರಿ ಉತ್ತರ

(1) II I IV III


96.ಈ ಕೆಳಗಿನವುಗಳಲ್ಲಿ ಯಾವುದು ಔಟ್ ಪುಟ್ ಡಿವೈಸ್ ಅಲ್ಲ ?
 (1)ಸ್ಕ್ಯಾನರ್
 (2)LCD
 (3)ಪ್ರಿಂಟರ್
 (4)ಪ್ಲಾಟರ್
ಸರಿ ಉತ್ತರ

(1) ಸ್ಕ್ಯಾನರ್


97.ENIAC ಯನ್ನು ಕುರಿತು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?
 (1)ಇದು ಚಾರ್ಲ್ಸ್ ಬ್ಯಾಬೇಜ್ ರಿಂದ ಬೆಳವಣಿಗೆಯಾಗಿದೆ
 (2)ಇದು ಮೊದಲ ಸ್ಟೋರ್ಡ್ (ಸಂಗ್ರಹಿತ) ಪ್ರೋಗ್ರಾಂ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್
 (3)ಇದು ಒಂದು ಎಲೆಕ್ಟ್ರೋ ಮೆಕ್ಯಾನಿಕಲ್ ಕಂಪ್ಯೂಟರ್
 (4)ಇದು ನಿರ್ವಾತ ನಳಿಕೆಗಳನ್ನು (ವ್ಯಾಕ್ಯೂಂ ಟ್ಯೂಬ್ಸ್ ) ಬಳಸುತ್ತದೆ

ಸರಿ ಉತ್ತರ

(4) ಇದು ನಿರ್ವಾತ ನಳಿಕೆಗಳನ್ನು ವ್ಯಾಕ್ಯೂಂ ಟ್ಯೂಬ್ಸ್ ) ಬಳಸುತ್ತದೆ


98.ಪೆಟಾ ಬೈಟ್ (PB) ಎಂಬ ಪದವು ಇದಕ್ಕೆ ಸಂಬಂಧಿಸಿದೆ
 (1)1024 ಟೆರಾ ಬೈಟ್ಸ್ (TB)
 (2)1024 ಗಿಗಾ ಬೈಟ್ಸ್ (MB)
 (3)1024 ಮೆಗಾ ಬೈಟ್ಸ್ (GB)
 (4)1024 ಎಕ್ಸಾ ಬೈಟ್ಸ್ (EB)
ಸರಿ ಉತ್ತರ

(1) 1024 ಟೆರಾ ಬೈಟ್ಸ್ (TB)


99.MS ಎಕ್ಸೆಲ್ ನಲ್ಲಿ =ROUND(2.31,0)+CEILING(1.32.1)
ಸೂತ್ರದ ಲೆಕ್ಕಿಸಲಾದ ಮೌಲ್ಯವು
 (1)3
 (2)4
 (3)3.63
 (4)1.32
ಸರಿ ಉತ್ತರ

(2) 4


100.ಫ್ಲೋ ಚಾರ್ಟ್ ನಲ್ಲಿ ನಿರ್ಧಾರದ ಬಿಂದುವನ್ನು ಪ್ರತಿನಿ ಸಲು ಈ ಕೆಳಗಿನ ಯಾವ ಚಿಹ್ನೆಯನ್ನು ಬಳಸಲಾಗುತ್ತದೆ ?
 (1)
 (2)
 (3)
 (4)
ಸರಿ ಉತ್ತರ

(1)


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment