WhatsApp Group Join Now
Telegram Group Join Now

KPSC GROUP C Technical & Non Technical Paper-1 Question Paper 23-09-2018

KPSC GROUP C Technical & Non Technical General Knowledge Paper-1 (Exam held on 23-09-2018) Questions with answers

KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ (Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 23-09-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

1.ಪಟ್ಟಿ I (ರಾಸಾಯನಿಕಗಳು) ಮತ್ತು ಪಟ್ಟಿ II (ಬಳಕೆ) ಗಳನ್ನು ಹೊಂದಿಸಿ :

  ಪಟ್ಟಿ I (ರಾಸಾಯನಿಕಗಳು) ಪಟ್ಟಿ II (ಬಳಕೆ)
 A.ಪೊಟ್ಯಾಸಿಯಂ ಬ್ರೊಮೈಡ್I.ರಸಗೊಬ್ಬರ
 B.ಪೊಟ್ಯಾಸಿಯಂ ನೈಟ್ರೇಟ್II.ಫೋಟೋಗ್ರಫಿ
 C.ಪೊಟ್ಯಾಸಿಯಂ ಸಲ್ಫೇಟ್III.ಬೇಕರಿ
 D.ಮಾನೋ ಪೊಟಾಸಿಯಂ ಟಾರ್ಟರೇಟ್IV.ಗನ್ ಪುಡಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIVIIII
 (2)IIIVIIII
 (3)IVIIIIII
 (4)IVIIIIII
ಸರಿ ಉತ್ತರ

(1) II IV I III


2.ಈ ಮೊದಲು ಸೊಳ್ಳೆಗಳನ್ನು ಕೊಲ್ಲಲು ಡಿ.ಡಿ.ಟಿ.ಯನ್ನು ಬಳಸಲಾಗುತ್ತಿತ್ತು, ಇತ್ತೀಚಿನ ವರ್ಷಗಳಲ್ಲಿ ಡಿ.ಡಿ.ಟಿ.ಯನ್ನು ಬಳಸಿ ಸೊಳ್ಳೆಗಳನ್ನು ಕೊಲ್ಲುವುದು ಕಠಿಣವಾಗುತ್ತಿದೆ, ಡಿ.ಡಿ.ಟಿ.ಯಿಂದ ಸೊಳ್ಳೆಗಳ ಪ್ರತಿರಕ್ಷಾ ಗುಣವನ್ನು ಯಾವ ತತ್ವವು ವಿವರಿಸುತ್ತದೆ ?
 (1)ನಿಸರ್ಗದ ಮಧ್ಯಸ್ಥಿಕೆ ಸಿದ್ಧಾಂತ
 (2)ಪ್ರತಿರಕ್ಷೆ (ರೋಧಕತೆ) ಸಿದ್ಧಾಂತ
 (3)ಪರಭಕ್ಷಕ ಶಿಕಾರಿ ಸಿದ್ಧಾಂತ
 (4)ನಿಸರ್ಗದ ಆಯ್ಕೆ ಸಿದ್ಧಾಂತ
ಸರಿ ಉತ್ತರ

(4) ನಿಸರ್ಗದ ಆಯ್ಕೆ ಸಿದ್ಧಾಂತ


3.ದೈತ್ಯ ಪಾಂಡಾ ಐಲುರೋಪೊಡಾ ಮೆಲನೋಲ್ಯುಕಾ, ಇದರ ಸಂಕೇತವಾಗಿದೆ
 (1)ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ
 (2)ವಿಶ್ವವ್ಯಾಪಿ ಮಾಲಿನ್ಯ ಪರೀಕ್ಷಣಾ ಫೆಡರೇಷನ್
 (3)ಪ್ರಸರಿಸಲ್ಪಡುವ ರೋಗಗಳ ಪರ ವಿಶ್ವವ್ಯಾಪಿ ನಿಧಿ
 (4)ನಿಸರ್ಗಕ್ಕಾಗಿ ವಿಶ್ವ ವನ್ಯಜೀವಿ ನಿಧಿ
ಸರಿ ಉತ್ತರ

(4) ನಿಸರ್ಗಕ್ಕಾಗಿ ವಿಶ್ವ ವನ್ಯಜೀವಿ ನಿಧಿ


4.ಆದರ್ಶ ಕೃಷ್ಣಕಾಯವನ್ನು ಸಾಮಾನ್ಯ ತಾಪದಲ್ಲಿ ಕುಲುಮೆಗೆ ಹಾಕಲಾಯಿತು ಆಗ ಗಮನಿಸಲಾದುದು
 (1)ಪ್ರಾರಂಭದಲ್ಲಿ ಕಪ್ಪಾಗಿದ್ದದ್ದು ಮತ್ತು ಅನಂತರದ ಸಮಯದಲ್ಲಿ ಹೊಳಪಾಗುವುದು
 (2)ಅದು ಎಲ್ಲಾ ಸಮಯಗಳಲ್ಲೂ ಮತ್ತಷ್ಟು ಕಪ್ಪಾಗುವುದು
 (3)ಅದನ್ನು ಪ್ರತ್ಯೇಕವಾಗಿ ಎಲ್ಲಾ ಸಮಯಗಳಲ್ಲೂ ಗುರ್ತಿಸಲಾಗದು
 (4)ಪ್ರಾರಂಭದಲ್ಲಿ ಕಪ್ಪಾಗಿದ್ದು ಮತ್ತು ಅನಂತರದ ಸಮಯದಲ್ಲಿ ಇದನ್ನು ಪ್ರತ್ಯೇಕವಾಗಿ ಗುರುತಿಸಲಾಗದು
ಸರಿ ಉತ್ತರ

(1) ಪ್ರಾರಂಭದಲ್ಲಿ ಕಪ್ಪಾಗಿದ್ದದ್ದು ಮತ್ತು ಅನಂತರದ ಸಮಯದಲ್ಲಿ ಹೊಳಪಾಗುವುದು


5.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಕೊಳಗಳು ಸಾಮಾನ್ಯವಾಗಿ ನೀರಿನ ಸ್ಥಾಯಿ ಕಾಯಗಳು.
 B.ಕೊಳಗಳು ಸುತ್ತಲೂ ಭೂಮಿಯಿಂದ ಆವರಿಸಲ್ಪಟ್ಟಿವೆ.
 C.ಕ್ಯಾಸ್ಪಿಯನ್ ಸಮುದ್ರವು ಮೇಲ್ಮೈ ವಿಸ್ತೀರ್ಣದಿಂದ ಜಗತ್ತಿನ ಅತಿದೊಡ್ಡ ಕೊಳವಾಗಿದೆ.
 D.ಚಿಲ್ಕಾವು ಮೇಲ್ಮೈ ವಿಸ್ತೀರ್ಣದಿಂದ ಭಾರತದ ಅತಿದೊಡ್ಡ ಕೊಳ.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A, B ಮತ್ತು C ಗಳು ಸರಿಯಾಗಿವೆ
 (2)A, B ಮತ್ತು D ಗಳು ಸರಿಯಾಗಿವೆ
 (3)A, C ಮತ್ತು D ಗಳು ಸರಿಯಾಗಿವೆ
 (4)A, B, C ಮತ್ತು D ಗಳು ಸರಿಯಾಗಿವೆ
ಸರಿ ಉತ್ತರ

(4) A, B, C ಮತ್ತು D ಗಳು ಸರಿಯಾಗಿವೆ


6.ಬೆಂಗಳೂರು ನಗರ ಸ್ಥಾಪಕನು
 (1)ಯಲಹಂಕದ ಪಾಳೆಯಗಾರನಾಗಿದ್ದನು
 (2)ಮಧುಗಿರಿಯ ಪಾಳೆಯಗಾರನಾಗಿದ್ದನು
 (3)ರಾಮನಗರದ ಪಾಳೆಯಗಾರನಾಗಿದ್ದನು
 (4)ಚಿಕ್ಕನಾಯಕನಹಳ್ಳಿಯ ಪಾಳೆಯಗಾರನಾಗಿದ್ದನು
ಸರಿ ಉತ್ತರ

(1) ಯಲಹಂಕದ ಪಾಳೆಯಗಾರನಾಗಿದ್ದನು


7.ಕೆಳಗಿನವುಗಳಲ್ಲಿ ಯಾವುದು UN SDSN ನ ವಿಶ್ವ ಸಂತೋಷ ಸೂಚ್ಯಂಕದ ಸೂಚಕವಲ್ಲ ?
 (1)ನೈರ್ಮಲ್ಯ
 (2)ಜೀವನದ ಆಯ್ಕೆಗಳನ್ನು ಮಾಡುವ ಸ್ವಾತಂತ್ರ್ಯ
 (3)ಉದಾರತೆ / ಔದಾರ್ಯ
 (4)ಭ್ರಷ್ಟಾಚಾರದ ಗ್ರಹಿಕೆಗಳು
ಸರಿ ಉತ್ತರ

(1) ನೈರ್ಮಲ್ಯ


8.ಈ ಕೆಳಗಿನವುರಲ್ಲಿ ಯಾರು ಭಾರತದ ಸಂವಿಧಾನದ ಕರಡು ಸಮಿತಿಯ ಸದಸ್ಯರಾಗಿರಲಿಲ್ಲ ?
 (1)ಡಾ. ಕೆ.ಎಂ. ಮುನ್ಷಿ
 (2)ಪಂಡಿತ್ ಜವಾಹರ್ ಲಾಲ್ ನೆಹರೂ
 (3)ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್
 (4)ಎನ್. ಗೋಪಾಲಸ್ವಾಮಿ ಅಯ್ಯಂಗಾರ್
ಸರಿ ಉತ್ತರ

(2) ಪಂಡಿತ್ ಜವಾಹರ್ ಲಾಲ್ ನೆಹರೂ


9.ರಾಜ್ಯದ ಸಾರ್ವಜನಿಕ ಸೇವೆಯಲ್ಲಿ ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವ ನಿರ್ದೇಶನ ಈ ಕೆಳಗಿನ ಯಾವ ವಿಧಿ ಯಲ್ಲಿದೆ ?
 (1)47 ನೇ ವಿಧಿ
 (2)48 ನೇ ವಿಧಿ
 (3)49 ನೇ ವಿಧಿ
 (4)50 ನೇ ವಿಧಿ
ಸರಿ ಉತ್ತರ

(4) 50 ನೇ ವಿಧಿ


10.ಪಟ್ಟಿ I (ರಾಜ್ಯ) ಮತ್ತು ಪಟ್ಟಿ II (ಪರಮಾಣು ಶಕ್ತಿ ಕೇಂದ್ರ) ಗಳನ್ನು ಹೊಂದಿಸಿ :

  ಪಟ್ಟಿ I (ರಾಜ್ಯ) ಪಟ್ಟಿ II (ಪರಮಾಣು ಶಕ್ತಿ ಕೇಂದ್ರಗಳು)
 A.ಉತ್ತರ ಪ್ರದೇಶI.ರಾವತ್ ಬಾಟ
 B.ರಾಜಸ್ಥಾನII.ನರೋರ
 C.ಮಹಾರಾಷ್ಟ್ರIII.ಕಕ್ರಪಾರ
 D.ಗುಜರಾತ್IV.ತಾರಾಪುರ
  ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIIIIV
 (3)IVIIIIII
 (4)IIIIVIII
ಸರಿ ಉತ್ತರ

(4) II I IV III


11.ಕರ್ನಾಟಕದಲ್ಲಿ ಅತಿ ಹೆಚ್ಚು ಜಲವಿದ್ಯುತ್ತನ್ನು ಉತ್ಪಾದಿಸುವುದು ಇಲ್ಲಿ
 (1)ಕಾವೇರಿ ನದಿ ಜಲಾನಯನ
 (2)ಕೃಷ್ಣಾ ನದಿ ಜಲಾನಯನ
 (3)ಕಾಳಿ ನದಿ ಜಲಾನಯನ
 (4)ಶರಾವತಿ ಜಲಾನಯನ
ಸರಿ ಉತ್ತರ

(4) ಶರಾವತಿ ಜಲಾನಯನ


12.ಮೃತ್ಯು ಸಮುದ್ರದ ಕರಾವಳಿಯನ್ನು ಹಂಚಿಕೊಂಡಿರುವ ದೇಶಗಳು
 (1)ಜೋರ್ಡಾನ್ ಮತ್ತು ಇಸ್ರೇಲ್
 (2)ಲೆಬನಾನ್ ಮತ್ತು ಸಿರಿಯಾ
 (3)ಟರ್ಕಿ ಮತ್ತು ಇಸ್ರೇಲ್
 (4)ಜೋರ್ಡಾನ್ ಮತ್ತು ಲೆಬನಾನ್
ಸರಿ ಉತ್ತರ

(1) ಜೋರ್ಡಾನ್ ಮತ್ತು ಇಸ್ರೇಲ್


13.ಪಟ್ಟಿ I (ವಾಯುಗುಣ) ಮತ್ತು ಪಟ್ಟಿ II (ನಗರ) ಗಳನ್ನು ಹೊಂದಿಸಿ:
  ಪಟ್ಟಿ I (ವಾಯುಗುಣ) ಪಟ್ಟಿ II (ನಗರ)
 A.ಸಮಭಾಜಕ ವೃತ್ತದ ವಾಯುಗುಣI.ಸ್ಯಾಂಟಿಯಾಗೋ :
 B.ಉಷ್ಣವಲಯದ ಮಾನ್ಸೂನ್ ವಾಯುಗುಣII.ಸಿಂಗಪೂರ್
 C.ಮೆಡಿಟರೇನಿಯನ್ ವಾಯುಗುಣIII.ವಿಂಡ್ ಹೋಯೆಕ್
 D.ಮರುಭೂಮಿ ವಾಯುಗುಣIV.ಮುಂಬೈ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIVIIII
 (3)IVIIIIII
 (4)IIIIIIIV
ಸರಿ ಉತ್ತರ

(2) II IV I III


14.ಈ ಕೆಳಗಿನವುಗಳಲ್ಲಿ ಯಾವ ನದಿ ಭಾರತದಲ್ಲಿ ಉಗಮವಾಗುವುದಿಲ್ಲ?
 (1)ಬಿಯಾಸ್
 (2)ಚೀನಾಬ್
 (3)ರಾವಿ
 (4)ಸಟ್ಲೆಜ್
ಸರಿ ಉತ್ತರ

(4) ಸಟ್ಲೆಜ್


15.ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಅನುದಾನ ನೀಡುವ ಪದ್ಧತಿಯನ್ನು ಶಿಫಾರಸ್ಸು ಮಾಡಿದ ಆಯೋಗ ಯಾವುದು ?
 (1)ಸರ್ ಚಾರ್ಲ್ಸ್ ವುಡ್ಸ್ ಶಿಕ್ಷಣ ಆಯೋಗ
 (2)ಹಂಟರ್ ಶಿಕ್ಷಣ ಆಯೋಗ
 (3)ಸ್ಯಾಡ್ಲರ್ ವಿಶ್ವವಿದ್ಯಾಲಯ ಆಯೋಗ
 (4)ಕೊಠಾರಿ ಶಿಕ್ಷಣ ಆಯೋಗ
ಸರಿ ಉತ್ತರ

(1) ಸರ್ ಚಾರ್ಲ್ಸ್ ವುಡ್ಸ್ ಶಿಕ್ಷಣ ಆಯೋಗ


16.ಪಟ್ಟಿ I (ಭೂ ಹಿಡುವಳಿ ಪದ್ಧತಿ) ಮತ್ತು ಪಟ್ಟಿ II (ವಿವರಣೆಗಳು) ಗಳನ್ನು ಹೊಂದಿಸಿ :
  ಪಟ್ಟಿ I (ಭೂ ಹಿಡುವಳಿ ಪದ್ಧತಿ) ಪಟ್ಟಿ II (ವಿವರಣೆಗಳು)
 A.ಜಾಗೀರ್ದಾರಿ ಪದ್ಧತಿI.ಸರ್ಕಾರ ಭೂಮಿಯನ್ನು ದೊಡ್ಡ ಊಳಿಗಮಾನ್ಯ ಭೂ ಒಡೆಯರಿಗೆ ಹಂಚಿಕೆ ಮಾಡಿದೆ
 B.ರೈತವಾರಿ ಪದ್ಧತಿII.ಸರ್ಕಾರ ಕಂದಾಯ ನೀಡುವ ರೈತರಿಗೆ ಭೂಮಿಯನ್ನು ನೀಡಿ ಬಾಡಿಗೆ ಸಂಗ್ರಹವನ್ನು (ಕಲೆಕ್ಟರ್ ಗಳ) ಸಂಗ್ರಾಹಕರಮೂಲಕ ಪಡೆಯುತ್ತಿತ್ತು
 C.ಮಹಲ್ವಾರಿ ಪದ್ಧತಿIII.ಸರ್ಕಾರ ಪ್ರತಿಯೊಬ್ಬ ರೈತನಿಗೆ ಭೂಮಿಯನ್ನು ಹಂಚಿ, ಅದರೊಂದಿಗೆ ಅದನ್ನು ರೈತನು ಬೇರೆಯವರಿಗೆ ಉಪ-ಬಾಡಿಗೆ, ಅಡಮಾನ ವರ್ಗಾವಣೆ, ಕೊಡುಗೆ ಅಥವಾ ಮಾರಾಟ ಮಾಡುವ ಹಕ್ಕನ್ನು ನೀಡಿತು
 D.ಜಮೀನ್ದಾರಿ ಪದ್ಧತಿIV.ಗ್ರಾಮ ಮಟ್ಟದಲ್ಲಿ ಕಂದಾಯವನ್ನು ನಿರ್ಧರಿಸಲಾಗುತ್ತಿತ್ತು
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
  ABCD
 (1)IIIIIIIV
 (2)IIIIIIIV
 (3)IIIIIIVI
 (4)IIVIIIII
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


17.‘ಮಿತ್ರಾವಿಂದ ಗೋವಿಂದ’ ಎಂಬ ಪ್ರಥಮ ಕನ್ನಡ ನಾಟಕ ಬರೆದವನು ಯಾರು ?
 (1)ಲಕ್ಷ್ಮೀಶ
 (2)ಮಹಾಲಿಂಗರಂಗ
 (3)ಸಿಂಗರಾರ್ಯ
 (4)ತಿರುಮಲರಾಯ
ಸರಿ ಉತ್ತರ

(3) ಸಿಂಗರಾರ್ಯ


18.ಪರಮಾಣು ನಾಭಿ ಕೇಂದ್ರವು ಬೀಟಾಕಣವನ್ನು ಉತ್ಸರ್ಜಿಸಿದಾಗ ಆದರ ಪರಮಾಣು ಸಂಖ್ಯೆ
 (1)ಸ್ಥಿರ ಆದರೆ ಅದರ ರಾಶಿ ಸಂಖ್ಯೆ ಬದಲಾಗುತ್ತದೆ
 (2)ಸ್ಥಿರ ಹಾಗೂ ಹಾಗೆಯೇ ಅದರ ರಾಶಿ ಸಂಖ್ಯೆಯೂ ಸ್ಥಿರವಾಗಿರುತ್ತದೆ
 (3)ಬದಲಾಗುತ್ತದೆ ಆದರೆ ಅದರ ರಾಶಿ ಸಂಖ್ಯೆ ಸ್ಥಿರ
 (4)ಬದಲಾಗುತ್ತದೆ ಮತ್ತು ಹಾಗೆಯೇ ಅದರ ರಾಶಿ ಸಂಖ್ಯೆಯೂ ಬದಲಾಗುತ್ತದೆ
ಸರಿ ಉತ್ತರ

(3) ಬದಲಾಗುತ್ತದೆ ಆದರೆ ಅದರ ರಾಶಿ ಸಂಖ್ಯೆ ಸ್ಥಿರ


19.ಪರಿಸರದ ಸಂದರ್ಭದಲ್ಲಿ ‘‘ಡರ್ಟಿ ಡಜನ್’’ ಪದವು (ಕೊಳಕು ಹನ್ನೆರಡು) ಇದಕ್ಕೆ ಸಂಬಂಧಿಸಿದೆ
 (1)12 ಹಾನಿಕಾರಕ ಹಸಿರುಮನೆ ಅನಿಲಗಳು
 (2)12 ಓಜೋನ್ ಕ್ಷೀಣಕ ವಸ್ತುಗಳು
 (3)12 ಸತತವಾದ ಸಾವಯವ ಮಾಲಿನ್ಯಕಾರಿಗಳು
 (4)12 ಭಾರ ಲೋಹಗಳು
ಸರಿ ಉತ್ತರ

(3) 12 ಸತತವಾದ ಸಾವಯವ ಮಾಲಿನ್ಯಕಾರಿಗಳು


20.ಸಿಹಿನೀರು ಸರೋವರ ಉದ್ಯಾನವನ್ನು ಸ್ಥಾಪಿಸಲು ಪ್ರಸ್ತಾವಿಸಿರುವ ಸ್ಥಳ
 (1)ಹೊನ್ನಾವರ
 (2)ಬಂಟ್ವಾಳ
 (3)ಅಪ್ಸರಕೊಂಡ
 (4)ತಡದಿ
ಸರಿ ಉತ್ತರ

(4) ತಡದಿ


21.ಹೇರಳವಾಗಿ ದೊರೆಯುವ ತಿಳಿದಿರುವ ಒಂದು ಪೊದೆ ಲಂಟಾನ ಒಂದು
 A.ನಂಜುಕಳೆಯಾಗಿದ್ದು ಮತ್ತು ರಾಜ್ಯದ ಪರ್ವತ ವೈವಿಧ್ಯದ ಮೇಲೆ ಪ್ರಭಾವ ಬೀರಿದೆ.
 B.ಅದರ ಹೂಗಳಿಗಾಗಿ ಅದನ್ನು ವ್ಯಾಪಕವಾಗಿ ಬೆಳೆಯುತ್ತಾರೆ.
 C.ಭಾರತಕ್ಕೆ ಸ್ಥಳೀಯ / ದೇಶೀಯವಾದುದು.
 D.ಅದನ್ನು ಗುಪ್ತ ಬೆಂಕಿಯ ಅಪಾಯಕಾರಿಕ ಎಂದು ಪರಿಗಣಿಸಿದ್ದು ಮತ್ತು ಹಸಿರಾಗಿದ್ದರೂ ಇದು ಹೊತ್ತುರಿಯುತ್ತದೆ.
ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A, B ಮತ್ತು D ಮಾತ್ರ
 (2)B ಮತ್ತು D ಮಾತ್ರ
 (3)A ಮತ್ತು C ಮಾತ್ರ
 (4)A, B, C ಮತ್ತು D
ಸರಿ ಉತ್ತರ

(1) A, B ಮತ್ತು D ಮಾತ್ರ


22.ಕರ್ನಾಟಕದಲ್ಲಿನ ಎತ್ತಿನಹೊಳೆ ಯೋಜನೆ ಈ ಕುರಿತದ್ದು
 (1)ಸಮಗ್ರ ಕುಡಿವ ನೀರಿನ ಯೋಜನೆ
 (2)ಸಮಗ್ರ ಬಂಜರು ನೆಲ ಸುಧಾರಣಾ ಯೋಜನೆ
 (3)ಸಮಗ್ರ ಒದ್ದೆ ನೆಲ ಸುಧಾರಣಾ ಯೋಜನೆ
 (4)ಸಮಗ್ರ ಚರಂಡಿ ವ್ಯವಸ್ಥೆ ಯೋಜನೆ
ಸರಿ ಉತ್ತರ

(1) ಸಮಗ್ರ ಕುಡಿವ ನೀರಿನ ಯೋಜನೆ


23.ಕರ್ನಾಟಕದ ‘ಹಕ್ಕಿ ಹಬ್ಬ’ ದ (ಪಕ್ಷಿ ಉತ್ಸವ) ಮೂರನೆ ಆವೃತ್ತಿಯು ಆದದ್ದು ಇಲ್ಲಿ
 (1)ದಾರೋಜಿ ಕರಡಿ ಧಾಮ, ಬಳ್ಳಾರಿ
 (2)ಬ್ರಹ್ಮಗಿರಿ ವನ್ಯಜೀವಿ ಅಭಯ ಧಾಮ, ಕೊಡಗು
 (3)ದಾಂಡೇಲಿ ವನ್ಯಜೀವಿ ಅಭಯ ಧಾಮ, ಉತ್ತರ ಕನ್ನಡ
 (4)ರಾಣಿಬೆನ್ನೂರು ಕೃಷ್ಣ ಪಕ್ಷಿ ಧಾಮ, ಹಾವೇರಿ
ಸರಿ ಉತ್ತರ

(1) ದಾರೋಜಿ ಕರಡಿ ಧಾಮ, ಬಳ್ಳಾರಿ


24.ಈ ಹೇಳಿಕೆಗಳನ್ನು ಪರಿಗಣಿಸಿ :
 A.ಭಾರತದಲ್ಲಿ, ಕೆಂಪು ಪಾಂಡಾ ಸ್ವಾಭಾವಿಕವಾಗಿ ದೊರೆಯುವುದು ಪಶ್ಚಿಮ ಹಿಮಾಲಯದಲ್ಲಿ ಮಾತ್ರ.
 B.ಭಾರತದಲ್ಲಿ ಸ್ಲೋ ಲೋರಿಸ್ (ಕಾಡು ಪಾಪದಂತಹ ಪ್ರಾಣಿ) ವಾಸವಾಗಿರುವುದು ಈಶಾನ್ಯದ ದಟ್ಟ ಅರಣ್ಯಗಳಲ್ಲಿ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(2) B ಮಾತ್ರ


25.ಪಟ್ಟಿ I (ಸಂಸ್ಥೆ) ಮತ್ತು ಪಟ್ಟಿ II (ನಗರ) ಗಳನ್ನು ಹೊಂದಿಸಿ :
  ಪಟ್ಟಿ I (ಸಂಸ್ಥೆ) ಪಟ್ಟಿ II (ನಗರ)
 A.ಸೆಂಟ್ರಲ್ ಆರಿಡ್ ಜೋನ್ ರಿಸರ್ಚ್ ಇನ್ಸ್ಟಿಟ್ಯೂಟ್I.ಬೆಂಗಳೂರು
 B.ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿII.ಅಲಹಾಬಾದ್
 C.ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಪ್ರೊಡಕ್ಟಿವಿಟಿIII.ಜೋಧಪುರ
 D.ಸೆಂಟರ್ ಫಾರ್ ಸೋಷಿಯಲ್ ಫಾರೆಸ್ಟ್ರಿ ಅಂಡ್ ಎಕೊ ರಿಹ್ಯಾಬಿಲಿಟೇಶನ್ (CSFER)IV.ರಾಂಚಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIIVII
 (3)IVIIIIII
 (4)IVIIIIII
ಸರಿ ಉತ್ತರ

(2) III I IV II


26.ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-3, ಇವುಗಳನ್ನು ಜೋಡಿಸುತ್ತದೆ
 (1)ದೆಹಲಿಯನ್ನು ಅಹಮದಾಬಾದ್ ನೊಂದಿಗೆ
 (2)ದೆಹಲಿಯನ್ನು ಮುಂಬೈನೊಂದಿಗೆ
 (3)ಆಗ್ರಾವನ್ನು ಕೋಲ್ಕತ್ತಾದೊಂದಿಗೆ
 (4)ಆಗ್ರಾವನ್ನು ಮುಂಬೈನೊಂದಿಗೆ
ಸರಿ ಉತ್ತರ

(4) ಆಗ್ರಾವನ್ನು ಮುಂಬೈನೊಂದಿಗೆ


27.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಟೊಮ್ಯಾಟೋವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.
 B.21°C ನಿಂದ 23°C ನ ವರೆಗಿನ ಸರಾಸರಿ ಮಾಸಿಕ ತಾಪಮಾನವು ಈ ಬೆಳೆಗೆ ಸರಿ ಹೊಂದುತ್ತದೆ.
 C.ಈ ಹಣ್ಣಿನ ಬಣ್ಣ ಮತ್ತು ಪೌಷ್ಠಿಕ ಮೌಲ್ಯವು ಬೆಳಕು ಮತ್ತು ಅದರ ತೀಕ್ಷಣತೆಯಿಂದ ನಿರ್ಧರಿಸಲ್ಪಡುತ್ತದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮತ್ತು B ಮಾತ್ರ
 (2)A, B ಮತ್ತು C
 (3)B ಮತ್ತು C ಮಾತ್ರ
 (4)A ಮತ್ತು C ಮಾತ್ರ
ಸರಿ ಉತ್ತರ

(2) A, B ಮತ್ತು C


28.ಈ ಕೆಳಗಿನ ನಕ್ಷೆಯಲ್ಲಿ ವೃತ್ತವು ಗಾಯಕರನ್ನು, ತ್ರಿಭುಜವು ಅಧ್ಯಾಪಕರನ್ನು ಮತ್ತು ಆಯತವು ಲೇಖಕರನ್ನು ಪ್ರತಿನಿಧಿಸುತ್ತದೆ.
 ಈ ಮೇಲಿನ ನಕ್ಷೆಯ ರೀತ್ಯಾ ಎಷ್ಟು ಅಧ್ಯಾಪಕರು, ಲೇಖಕರೂ ಅಲ್ಲ ಅಥವಾ ಗಾಯಕರೂ ಅಲ್ಲ ?
 (1)1
 (2)8
 (3)2
 (4)3
ಸರಿ ಉತ್ತರ

(1) 1


29.ಅಜಿತ “A’ ಬಿಂದುವಿನಿಂದ ಪ್ರಾರಂಭಿಸಿ, ಪೂರ್ವಕ್ಕೆ 7 km ನೇರವಾಗಿ ಸಾಗಿ, ಎಡಕ್ಕೆ ತಿರುಗಿ ಮತ್ತು ನೇರವಾಗಿ 10 km ಸಾಗುತ್ತಾನೆ ಅನಂತರ ಮತ್ತೆ ಎಡಕ್ಕೆ ತಿರುಗಿ, ನೇರವಾಗಿ 6 km ಸಾಗಿ ಮತ್ತೆ ಎಡಕ್ಕೆ ತಿರುಗಿ ನೇರವಾಗಿ 10 km ಸಾಗುತ್ತಾನೆ. ಪುನಃ ಎಡಕ್ಕೆ ತಿರುಗಿ ಪುನಃ ನೇರವಾಗಿ 10 km ಸಾಗುತ್ತಾನೆ. ಪ್ರಾರಂಭ ಬಿಂದುವಿನಿಂದ ಯಾವ ದಿಕ್ಕಿನಲ್ಲಿ ಅಜಿತ ಇರುತ್ತಾನೆ ?
 (1)ಪೂರ್ವ
 (2)ಪಶ್ಚಿಮ
 (3)ಉತ್ತರ
 (4)ದಕ್ಷಿಣ
ಸರಿ ಉತ್ತರ

(1) ಪೂರ್ವ


30.5 ಬಾಲಕರು ಅಮಿತ್, ಭಾನು, ಚಂದ್ರು, ದೇವ್ ಮತ್ತು ಎಡ್ವಿನ್ ಮೆಟ್ಟಿಲ ಮೇಲೆ ಈ ರೀತಿಕುಳಿತಿದ್ದಾರೆ :
 A.ಎಡ್ವಿನ್, ಅಮಿತ್ಗಿಂತ ಮೇಲಿದ್ದಾನೆ.
 B.ದೇವ್, ಭಾನುವಿಗಿಂತ ಕೆಳಗಿದ್ದಾನೆ.
 C.ಭಾನು, ಅಮಿತ್ ಗಿಂತ ಕೆಳಗಿದ್ದಾನೆ.
 D.ದೇವ್, ಭಾನು ಮತ್ತು ಚಂದ್ರುವಿನ ನಡುವೆ ಇದ್ದಾನೆ.
 ಮೆಟ್ಟಿಲಿನ ಅತಿ ಕೆಳಗಿನ ಬಿಂದುವಿನಲ್ಲಿ ಕುಳಿತವರಾರು ?
 (1)ಅಮಿತ್
 (2)ಭಾನು
 (3)ಚಂದ್ರು
 (4)ಎಡ್ವಿನ್
ಸರಿ ಉತ್ತರ

(3) ಚಂದ್ರು


31.ತರಗತಿಯಲ್ಲಿ ಎಷ್ಟು ಮಂದಿ ವಿದ್ಯಾರ್ಥಿಗಳಿದ್ದಾರೆ ?
 A.ತರಗತಿಯಲ್ಲಿ 20ಕ್ಕೂ ಮೀರಿದ ಆದರೆ 27 ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ.
 B.ಪ್ರತಿಗುಂಪಿನಲ್ಲೂ ಐದು ವಿದ್ಯಾರ್ಥಿಗಳಿರುವಂತೆ ತರಗತಿಯ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಭಾಗಿಸಬೇಕು. ಪ್ರಶ್ನೆಗೆ ಉತ್ತರಿಸಲು
 ಮೇಲಿನ ಹೇಳಿಕೆಗಳಲ್ಲಿ ಯಾವುದು ಸಾಕಷ್ಟು ದತ್ತಾಂಶವನ್ನು ಹೊಂದಿದೆ ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)ಪ್ರಶ್ನೆಗೆ ಉತ್ತರಿಸಲು ಕೇವಲ A ಹೇಳಿಕೆಯಲ್ಲಿನ ದತ್ತಾಂಶವೊಂದೇ ಸಾಕು.
 (2)ಹೇಳಿಕೆ B ನಲ್ಲಿರುವ ಮಾಹಿತಿಯೊಂದೇ ಪ್ರಶ್ನೆಗೆ ಉತ್ತರಿಸಲು ಸಾಕಾಗುತ್ತದೆ.
 (3)ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡರಲ್ಲಿ ನೀಡಲಾದ ಒಟ್ಟು ಮಾಹಿತಿಯು ಸಾಕಾಗುವುದಿಲ್ಲ.
 (4)ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡರಲ್ಲಿನ ಒಟ್ಟು ಮಾಹಿತಿಯು ಅವಶ್ಯಕವಾಗಿದೆ.
ಸರಿ ಉತ್ತರ

(4) ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡರಲ್ಲಿನ ಒಟ್ಟು ಮಾಹಿತಿಯು ಅವಶ್ಯಕವಾಗಿದೆ.


32.ಪ್ರಸ್ತುತ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕಕ್ಕೆ (ಐ.ಐ.ಪಿ.) ಆಧಾರಭೂತ ವರ್ಷ ಯಾವುದು ?
 (1)2004 – 05
 (2)2011 – 12
 (3)2015 – 16
 (4)2001 – 02
ಸರಿ ಉತ್ತರ

(2) 2011 – 12


33.ಈ ಕೆಳಗಿನ ಸಮಸ್ಯೆಯ ಚಿತ್ರದಲ್ಲಿ ಪ್ರಶ್ನಾರ್ಥಕ ಚಿಹ್ನೆಯುಳ್ಳ (?) ಸ್ಥಳಕ್ಕೆ ಹೊಂದಿಕೆಯಾಗಬಲ್ಲ ಸರಿ ಚಿತ್ರವನ್ನು ಉತ್ತರದ ಚಿತ್ರಗಳಿಂದ ಆರಿಸಿ.
 ಪ್ರಶ್ನೆ ಚಿತ್ರ :
 ಸರಿಯಾದ ಆಯ್ಕೆಯನ್ನು ಆರಿಸಿ :
 (1)
 (2)
 (3)
 (4)
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


34.ಈ ಕೆಳಗಿನ ಚಿತ್ರದಲ್ಲಿರುವ ತ್ರಿಭುಜಗಳೆಷ್ಟು ?
 (1)5
 (2)2
 (3)9
 (4)10
ಸರಿ ಉತ್ತರ

(4) 10


35.ಒಂದು ಘನದ ಆರು ಮುಖಗಳಿಗೆ ಹಸಿರು, ಹಳದಿ, ನೀಲಿ, ಕಪ್ಪು, ಗುಲಾಬಿ ಮತ್ತು ಬಿಳಿ ಬಣ್ಣ ಬಳಿಯಲಾಗಿದೆ. ಘನದ ಎರಡು ಸ್ಥಿತಿಗಳನ್ನು ಕೆಳಗೆ ನೀಡಲಾಗಿದೆ.
 ಗುಲಾಬಿ ಮುಖವು ಅತ್ಯಂತ ಮೇಲೆಬರುವಂತೆ ಘನವನ್ನು ಇರಿಸಿದರೆ ಆಗ ತಳದಲ್ಲಿ ಇರುವುದು ಯಾವ ಬಣ್ಣ ?
 (1)ಹಸಿರು
 (2)ಹಳದಿ
 (3)ನೀಲಿ
 (4)ಕಪ್ಪು
ಸರಿ ಉತ್ತರ

(3) ನೀಲಿ


36.ಈ ನಕಾಶೆಯ ಪೈಕಿ ಯಾವುದು ವಿವಾಹಿತರು, ಮಹಿಳೆಯರು ಮತ್ತು ಅಧ್ಯಾಪಕರ ಸಂಬಂಧವನ್ನು ಉತ್ತಮವಾಗಿ ಧ್ವನಿಸುತ್ತದೆ ?
 (1)
 (2)
 (3)
 (4)
ಸರಿ ಉತ್ತರ

(3)


37.ಈ ಕೆಳಗಿನ ಪ್ರಶ್ನೆಯಲ್ಲಿ, ಒಂದು ಹೇಳಿಕೆಯನ್ನು, A ಮತ್ತು B ಎಂಬ ಎರಡು ಊಹನೆಗಳು ಅನುಸರಿಸುತ್ತವೆ. ನೀವು ಹೇಳಿಕೆಯನ್ನು ಮತ್ತು ಅದನ್ನು ಅನುಸರಿಸುವ ಊಹನೆಗಳನ್ನು ಪರಿಗಣಿಸಬೇಕು ಮತ್ತು ಯಾವ ಊಹನೆಯು/ಗಳು ಹೇಳಿಕೆಯಲ್ಲಿ ಧ್ವನಿಸುತ್ತದೆ/ವೆ ಎಂಬುದನ್ನು ನಿರ್ಧರಿಸಿ.
 ಹೇಳಿಕೆ : ಸಂಚಾರಿ ಪೊಲೀಸು ಇಲಾಖೆಯ ಅತಿದೊಡ್ಡ ಸೂಚನಾ ಫಲಕಗಳನ್ನು ನಗರದ ಪ್ರಮುಖ ಭಾಗಗಳಲ್ಲಿ ಹಾಕಿದ್ದು, ಜನರು ಸೆಲ್ ಫೋನ್ ಬಳಕೆಯನ್ನು ಚಾಲನೆಮಾಡುವಾಗ ಬಳಕೆ ಮಾಡಬಾರದು ಇಲ್ಲವಾದರೆ ಅವರ ಲೈಸೆನ್ಸ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
 ಊಹನೆ A : ವಾಹನ ಚಾಲಕರು ಈ ಎಚ್ಚರಿಕೆಯನ್ನು ಉಪೇಕ್ಷೆ ಮಾಡಬಹುದು ಮತ್ತು ಚಾಲನೆಯಲ್ಲಿರುವಾಗ ಸೆಲ್ ಫೋನ್ ಗಳ ಬಳಕೆ ಮಾಡುವುದನ್ನು ಮುಂದುವರಿಸಬಹುದು.
 ಊಹನೆ B : ಸಂಚಾರಿ ಪೋಲೀಸ್ ಇಲಾಖೆಯು ಹೆಚ್ಚಿನ ಅಪರಾಧಿಗಳನ್ನು ಹಿಡಿದು ಹೆಚ್ಚಿನವರ ಲೈಸೆನ್ಸ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು.
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಊಹನೆ ಮಾತ್ರ ಧ್ವನಿಸುತ್ತದೆ
 (2)B ಊಹನೆ ಮಾತ್ರ ಧ್ವನಿಸುತ್ತದೆ
 (3)A ಊಹನೆ ಮತ್ತು B ಊಹನೆಗಳೆರಡೂ ಧ್ವನಿಸುತ್ತವೆ
 (4)A ಊಹನೆ ಆಗಲೀ ಅಥವಾ B ಊಹನೆ ಆಗಲೀ ಧ್ವನಿಸುವುದಿಲ್ಲ.
ಸರಿ ಉತ್ತರ

(4) A ಊಹನೆ ಆಗಲೀ ಅಥವಾ B ಊಹನೆ ಆಗಲೀ ಧ್ವನಿಸುವುದಿಲ್ಲ.


38.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :
 I.ನನಗೆ ಬೇಸರವಾದಾಗ ಮಾತ್ರ ನಾನು ಕ್ರಿಕೆಟ್ ಆಡುತ್ತೇನೆ.
 II.ನನಗೆ ಗೆಳೆಯರ ಸಹವಾಸ ಇದ್ದಾಗ, ಎಂದೂ ಬೇಸರ ಆಗದು.
 III.ನಾನು ಪಂದ್ಯ ನೋಡಲು ಸ್ಟೇಡಿಯಮ್ ಗೆ ಹೋದಾಗಲೆಲ್ಲಾ, ನನ್ನ ಸಹೋದರನನ್ನು ನನ್ನ ಜೊತೆಗೆ ಕರೆದೊಯ್ಯುತ್ತೇನೆ.
 ಮೇಲಿನ ಹೇಳಿಕೆಗಳ ಆಧಾರದಿಂದ ಈ ಕೆಳಗಿನ ತೀರ್ಮಾನಗಳಲ್ಲಿ ಯಾವುದು ಸರಿ ?
 (1)ನನಗೆ ಬೇಸರವಾದಾಗ, ನಾನು ಕ್ರಿಕೆಟ್ ಆಡುತ್ತೇನೆ.
 (2)ನನಗೆ ಬೇಸರವಾದಾಗ, ನಾನು ಸ್ನೇಹಿತರ ಸಹವಾಸ ಬಯಸುತ್ತೇನೆ.
 (3)ನನ್ನ ಗೆಳೆಯರಿಲ್ಲದಿದ್ದರೆ, ಆಗ ನಾನು ಕ್ರಿಕೆಟ್ ಆಡುತ್ತೇನೆ.
 (4)ನನಗೆ ಬೇಸರ ಆಗದಿದ್ದರೆ, ನಾನು ಕ್ರಿಕೆಟ್ ಆಡುವುದಿಲ್ಲ.
ಸರಿ ಉತ್ತರ

(4) ನನಗೆ ಬೇಸರ ಆಗದಿದ್ದರೆ, ನಾನು ಕ್ರಿಕೆಟ್ ಆಡುವುದಿಲ್ಲ.


39.ಈ ಕೆಳಗಿನ ಚೌಕದಲ್ಲಿ (?) ಚಿಹ್ನೆ ಇರುವೆಡೆ ಯಾವ ಸಂಖ್ಯೆಯನ್ನು ಬರೆದರೆ ವಿನ್ಯಾಸವು ಪೂರ್ಣ ಆಗುವುದು ?
 (1)16
 (2)14
 (3)26
 (4)21
ಸರಿ ಉತ್ತರ

(2) 14


40.ಕೆಳಗಿನ ಪೈ ಚಿತ್ರಪಟವು, ಒಂದು ದೇಶವು ಒಂದು ನಿರ್ದಿಷ್ಟ ವರ್ಷದಲ್ಲಿ ವಿವಿಧ ಕ್ರೀಡೆಗಳಿಗಾಗಿ ಮಾಡಿರುವ ವೆಚ್ಚವನ್ನು ತೋರಿಸಿದೆ. ಚಾರ್ಟ್ (ಚಿತ್ರಪಟದಲ್ಲಿ) ವಿವಿಧ ಘಟಕಗಳ ಡಿಗ್ರಿ (ಕೋನ) ಮೌಲ್ಯಗಳನ್ನು ನೀಡಲಾಗಿದೆ.
 ಟೆನಿಸ್ ಕ್ರೀಡೆಯ ಸಲುವಾಗಿ ಒಟ್ಟು ವೆಚ್ಚದಲ್ಲಿ ಎಷ್ಟು ಶೇಕಡಾವಾರು ವೆಚ್ಚವನ್ನು ಮಾಡಲಾಗಿದೆ ?
 (1)121212 %
 (2)22 1212%
 (3)25%
 (4)45%
ಸರಿ ಉತ್ತರ

(1) 121212 %


41.1 kg ಬಣ್ಣದ ಬೆಲೆ ₹36.50/kg ಮತ್ತು1 kg ಬಣ್ಣವನ್ನು 16 ಚದರಡಿಗೆ ಲೇಪಿಸಬಹುದಾದರೆ, ಉದ್ದ 8 ಅಡಿಯ ಬದಿ ಇರುವ ಘನದ ಪೂರ್ಣ ಹೊರಗಿನ ಮೇಲ್ಮೆ ಲೇಪನಕ್ಕೆ ತಗಲುವ ವೆಚ್ಚವೇನು?
 (1)₹ 692
 (2)₹ 768
 (3)₹ 876
 (4)₹ 972
ಸರಿ ಉತ್ತರ

(3) ₹ 876


42.ಫಾಕ್ ಲ್ಯಾಂಡ ದ್ವೀಪವು, ಅರ್ಜೆಂಟೀನಾ ಮತ್ತು ಯುನೈಟೆಡ್ ಕಿಂಗ್ ಡಂ ನಡುವಣ ವಿವಾದದ ಬಿಂದುವಾಗಿದ್ದು ಇದು ಕೆಳಗಿನ ಯಾವ ಸಾಗರದಲ್ಲಿದೆ ?
 (1)ಉತ್ತರ ಅಟ್ಲಾಂಟಿಕ್ ಸಾಗರ
 (2)ದಕ್ಷಿಣ ಅಟ್ಲಾಂಟಿಕ ಸಾಗರ
 (3)ದಕ್ಷಿಣ ಹಿಂದೂ ಮಹಾಸಾಗರ
 (4)ದಕ್ಷಿಣ ಪೆಸಿಫಿಕ್ ಸಾಗರ
ಸರಿ ಉತ್ತರ

(2) ದಕ್ಷಿಣ ಅಟ್ಲಾಂಟಿಕ ಸಾಗರ


43.ದೋಣಿಯೊಂದು ಮೇಲ್ಮುಖವಾಗಿ (ಪ್ರವಾಹದ ವಿರುದ್ಧ ದಿಕ್ಕು) ಹರಿಯುವ ಹೊಳೆಯಲ್ಲಿ ಸಾಗುವಾಗ ಒಂದು ನಿರ್ದಿಷ್ಟ ದೂರ ಕ್ರಮಿಸಲು 8 ಗಂಟೆ 48 ನಿಮಿಷ ತೆಗೆದು ಕೊಳ್ಳುತ್ತದೆ ಆದರೆ ಹೊಳೆಯು ಕೆಳಮುಖವಾಗಿ (ಪ್ರವಾಹದ ಅದೇ ದಿಕ್ಕು) ಹರಿಯುವಾಗ ಅದೇ ದೂರವನ್ನು ಕ್ರಮಿಸಲು 4 ಗಂಟೆ ತೆಗೆದು ಕೊಳ್ಳುತ್ತದೆ. ದೋಣಿಯ ವೇಗ ಹಾಗೂ ನೀರಿನ ಪ್ರಸ್ತುತ ವೇಗದ ನಡುವಣ ಅನುಪಾತ ಎಷ್ಟು ?
 (1)2 : 1
 (2)3 : 2
 (3)8 : 5
 (4)3 : 8
ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


44.ಒಂದು ವಸ್ತುವನ್ನು ಎರಡು ಸಮಾಂತರ ಸಮತಲ ದರ್ಪಣಗಳ ಮಧ್ಯೆ ಇಟ್ಟಾಗ, ದೊರೆಯುವ ಪ್ರತಿಬಿಂಬಗಳ ಸಂಖ್ಯೆಯು
 (1)ಒಂದು
 (2)ನಾಲ್ಕು
 (3)ಸೊನ್ನೆ
 (4)ಅನಂತ
ಸರಿ ಉತ್ತರ

(4) ಅನಂತ


45.ಪಟ್ಟಿ I (ಪರ್ಯಾಯ / ವರ್ಗಾವಣೆ ಕೃಷಿ) ಮತ್ತು ಪಟ್ಟಿ II (ರಾಜ್ಯಗಳು) ಗಳನ್ನು ಹೊಂದಿಸಿ:
  ಪಟ್ಟಿ I (ವರ್ಗಾವಣೆ ಕೃಷಿ) ಪಟ್ಟಿ II (ರಾಜ್ಯಗಳ)
 A.ಝೂಮ್I.ಆಂಧ್ರ ಪ್ರದೇಶ
 B.ಪೊನಮ್II.ಅಸ್ಸಾಮ್
 C.ಪೊಡುIII.ಮಧ್ಯ ಪ್ರದೇಶ
 D.ಬೇವಾರ್IV.ಕೇರಳ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIVIIII
 (3)IIIIIIVI
 (4)IIIVIIII
ಸರಿ ಉತ್ತರ

(4) II IV I III


46.ಯಾವ ರಾಜ ಒಡೆಯರ ಆಳ್ವಿಕೆಯಡಿ ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದರು ?
 (1)ಚಾಮರಾಜ ಒಡೆಯರ್
 (2)ಜಯ ಚಾಮರಾಜ ಒಡೆಯರ್
 (3)ಮುಮ್ಮಡಿ ಕೃಷ್ಣರಾಜ ಒಡೆಯರ್
 (4)ನಾಲ್ವಡಿ ಕೃಷ್ಣರಾಜ ಒಡೆಯರ್
ಸರಿ ಉತ್ತರ

(4) ನಾಲ್ವಡಿ ಕೃಷ್ಣರಾಜ ಒಡೆಯರ್


47.ಕಾಂಗ್ರೆಸ್ ಲಾಹೋರ್ ಅಧಿವೇಶನವನ್ನು ಕುರಿತಂತೆ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
 A.ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಠರಾವನ್ನು ಅಂಗೀಕರಿಸಲಾಯಿತು.
 B.ತೀಕ್ಷ್ಣಗಾಮಿಗಳು ಮತ್ತು ಸೌಮ್ಯವಾದಿಗಳ ನಡುವಣ ಒಡಕು ಆ ಅಧಿವೇಶನದಲ್ಲಿ ಬಗೆಹರಿಸಲ್ಪಟ್ಟಿತು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(1) A ಮಾತ್ರ


48.ಪಟ್ಟಿ I (ಕಬ್ಬಿಣದ ಅದಿರು) ಮತ್ತು ಪಟ್ಟಿ II (ಕಬ್ಬಿಣದ ಶೇಕಡಾವಾರು ಅಂಶ) ಗಳನ್ನು ಹೊಂದಿಸಿ :
  ಪಟ್ಟಿ I (ಕಬ್ಬಿಣದ ಅದಿರು) ಪಟ್ಟಿ II (ಕಬ್ಬಿಣದ ಶೇಕಡಾವಾರು ಅಂಶ)
 A.ಮ್ಯಾಗ್ನಟೈಟ್I.ಶೇ. 55 ರವರೆಗೆ
 B.ಹೆಮಟೈಟ್II.ಶೇ. 48.2 ರವರೆಗೆ
 C.ಲಿಮೋನೈಟ್III.ಶೇ. 72.4 ರವರೆಗೆ
 D.ಸಿಡರೈಟ್IV.ಶೇ. 69.9 ರವರೆಗೆ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIIVIII
 (3)IIIIIIIV
 (4)IIIVIIII
ಸರಿ ಉತ್ತರ

(2) III IV I II


49.ಗಡಿಯಾರದಲ್ಲಿ 3:30 ಘಂಟೆ ಇದ್ದಾಗ, ಅದರ ಮುಳ್ಳುಗಳ ನಡುವೆ ಉಂಟಾಗುವ ಕೋನವು ಎಷ್ಟಾಗಿರುತ್ತದೆ ?
 (1)95°
 (2)65°
 (3)86°
 (4)75°
ಸರಿ ಉತ್ತರ

(4) 75°


50.ಪಟ್ಟಿ I (ಪುಸ್ತಕಗಳು) ಮತ್ತು ಪಟ್ಟಿ II (ಲೇಖಕರು) ಗಳನ್ನು ಹೊಂದಿಸಿ :
  ಪಟ್ಟಿ I (ಪುಸ್ತಕಗಳು) ಪಟ್ಟಿ II (ಲೇಖಕರು)
 A.ಎ ಭೀಫ್ ಹಿಸ್ಟರಿ ಆಫ್ ಟೈಂI.ಶಶಿ ತರೂರ್
 B.ಬುಕ್ ಲೆಸ್ ಇನ್ ಬಾಗ್ದಾದ್II.ಸ್ಟೀಫನ್ ಹಾಕಿಂಗ್
 C.ಲಾಂಗ್ ವಾಕ್ ಟು ಫ್ರೀಡಂIII.ಖುಷ್ವಂತ್ ಸಿಂಗ್
 D.ಟ್ರೂತ್, ಲವ್ ಅಂಡ್ ಎ ಲಿಟಲ್ ಮಲೀಸ್IV.ನೆಲ್ಸನ್ ಮಂಡೇಲಾ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
  ABCD
 (1)IIIIVIII
 (2)IIIIIIIV
 (3)IIIIVIII
 (4)IIIIIIIV
ಸರಿ ಉತ್ತರ

(3) II I IV III


51.ಪಟ್ಟಿ I (ರಾಷ್ಟ್ರೀಯ ಉದ್ಯಾನ) ಮತ್ತು ಪಟ್ಟಿ II (ರಾಜ್ಯಗಳನ್ನು)ಗಳನ್ನು ಹೊಂದಿಸಿ :
  ಪಟ್ಟಿ I (ರಾಷ್ಟ್ರೀಯ ಉದ್ಯಾನಗಳು) ಪಟ್ಟಿ II(ರಾಜ್ಯಗಳು)
 A.ಸೈಲೆಂಟ್ ವ್ಯಾಲಿI.ಮೇಘಾಲಯ
 B.ನೋಕ್ರೆಕ್II.ಕೇರಳ
 C.ನಾಗರಹೊಳೆIII.ಕರ್ನಾಟಕ
 D.ಪನ್ನಾIV.ಮಧ್ಯ ಪ್ರದೇಶ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIIVIII
 (3)IIIIIIIV
 (4)IIIIIIIV
ಸರಿ ಉತ್ತರ

(4) II I III IV


52.ಭಾರತದ 18 ವಿಜ್ಞಾನಿಗಳೂ ಸೇರಿದಂತೆ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ಮೊಟ್ಟಮೊದಲಿಗೆ ಬಹಿರಂಗ ಪಡಿಸಿದ ವಂಶವಾಹಿ ಸಂಕೇತವು ಈ ಕೆಳಗಿನ ವ್ಯಾಪಕವಾಗಿ ಬೆಳೆಯುವ ಯಾವ ಬೆಳೆಯನ್ನು ಕುರಿತದ್ದು ?
 (1)ಗೋಧಿ
 (2)ಅಕ್ಕಿ
 (3)ಮೆಕ್ಕೆ ಜೋಳ
 (4)ಜೋಳ
ಸರಿ ಉತ್ತರ

(1) ಗೋಧಿ


53.ಮೊಹಿಂದರ್ ಸಿಂಗ್ ಗಿಲ್ ಮೂರು ಜಿಗಿತ ಕ್ರೀಡೆಯಲ್ಲಿ 1970 ರಲ್ಲಿ ಚಿನ್ನದ ಪದಕವನ್ನು ಬ್ಯಾಂಕಾಕ್ ಏಷಿಯನ್ ಕ್ರೀಡೆಯಲ್ಲಿ ಪಡೆದರು. 2018 ರಲ್ಲಿ ಜಕಾರ್ತಾ ಏಷಿಯನ್ ಕ್ರೀಡೆಗಳಲ್ಲಿ ಪುರುಷರ ತ್ರಿಜಿಗಿತದ ಕ್ರೀಡೆಯಲ್ಲಿ ಮೈಲುಗಲ್ಲು ಸಾಧನೆಮಾಡಿದ ಎರಡನೇ ಭಾರತೀಯ ಕ್ರೀಡಾಪಟು ಯಾರು ?
 (1)ಸರ್ತೆಜ್ ಸಿಂಗ್
 (2)ಗುರು ಹೆಚ್.ಎಸ್.
 (3)ಮಿಕಾ ಸಿಂಗ್
 (4)ಅರ್ಪಿಂದರ್ ಸಿಂಗ್
ಸರಿ ಉತ್ತರ

(4) ಅರ್ಪಿಂದರ್ ಸಿಂಗ್


54.‘‘KAKADU 2018’’ ನ್ನು ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಅದು ಬಹುಮುಖ ಪ್ರಾದೇಶಿಕ ಸಾಗರ ಒಪ್ಪಂದದ ತಾಲೀಮಿನ 14 ನೇ ಆವೃತ್ತಿಯಾಗಿದ್ದು, ಇದು ಆಸ್ಟ್ರೇಲಿಯಾದ ಡಾರ್ವಿನ್ ನಲ್ಲಿ ನಡೆಯತು.
 B.ಭಾರತೀಯ ನೌಕಾದಳ ನೌಕೆ ‘‘ಐ.ಎನ್.ಎಸ್. ಸಹ್ಯಾದ್ರಿ’’ಯು ಈ ತಾಲೀಮಿನಲ್ಲಿ ಭಾಗವಹಿಸಿತು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಇವೆರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಇವೆರಡೂ


55.ಈಚಿನ ದಿನಗಳಲ್ಲಿ ಗುಂಪು ಗೊಂದಲ ಘಟನೆಗಳ ಹೆಚ್ಚಳದ ಜಾಗೃತಿಯಂದಾಗಿ ಘನ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಅಂತಹ ಘಟನೆಗಳನ್ನು ‘‘ಗೂಂಡಾವರ್ತನೆಯ ಹೀನ ಕಾರ್ಯ’’ ಎಂದು ತಿಳಿಸಿತು. ಈ ಕೆಳಗಿನ ಸಮಿತಿಗಳ ಪೈಕಿ ಯಾವ ಸಮಿತಿಯು ಗುಂಪು ಗೂಂಡಾಗಿರಿ ಮತ್ತು ಹಿಂಸೆಯ ವಿರುದ್ಧವಾಗಿ ನಿಯಮಗಳನ್ನು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ರಚಿತವಾಗಿದ್ದು ?
 (1)ರಾಜೀವ್ ಗೌಬಾ ಸಮಿತಿ
 (2)ತಾರಕನಾಥ್ ಸಮಿತಿ
 (3)ಒ.ಪಿ. ನೀಲ್ ಸಮಿತಿ
 (4)ಇಂದರ್ಜೀತ್ ಸಿಂಗ್ ಸಮಿತಿ
ಸರಿ ಉತ್ತರ

(1) ರಾಜೀವ್ ಗೌಬಾ ಸಮಿತಿ


56.ರಕ್ಷಣಾ ಸಚಿವಾಲಯದ ಸಮಗ್ರ ರಕ್ಷಣಾ ಸಿಬ್ಬಂದಿಯು ಒಡಂಬಡಿಕೆಯೊಂದನ್ನು ಸಹಿಮಾಡಿ ಈ ಕೆಳಗಿನ ಯಾವ ಸಂಸ್ಥೆಯೊಂದಿಗೆ, ಉಪಗ್ರಹಾಧಾರಿತವಾಗಿ ಟೆಲಿ ಮೆಡಿಸಿನ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತುರ್ತು ವೈದ್ಯಕೀಯ ಬೆಂಬಲವನ್ನು ಸುಧಾರಿಸಿ ಉನ್ನತ ಎತ್ತರದ ಸ್ಥಳಗಳಲ್ಲಿ ಮುಖ್ಯವಾಗಿ ಸಿಯಾಚಿನ್ನಲ್ಲಿನ ಭಾರತೀಯ ಸೈನಿಕರಿಗೆ ಒದಗಿಸುವ ವ್ಯವಸ್ಥೆ ಮಾಡಿತು ?
 (1)VSSC
 (2)ISRO
 (3)BARC
 (4)DRDO
ಸರಿ ಉತ್ತರ

(2) ISRO


57.ಕೆಳಗಿನ ಯಾವ ದೇಶದಲ್ಲಿ ನಾಲ್ಕನೆಯ ಅಂತರರಾಷ್ಟ್ರೀಯ ಆಯುರ್ವೇದ ಅಧಿವೇಶನವನ್ನು ಸಂಘಟಿಸಲಾಯಿತು ?
 (1)ಫಿನ್ಲೆಂಡ್
 (2)ನೆದರ್ಲೆಂಡ್ಸ್
 (3)ರಷ್ಯಾ
 (4)ಅಮೆರಿಕಾ ಸಂಯುಕ್ತ ಸಂಸ್ಥಾನ
ಸರಿ ಉತ್ತರ

(2) ನೆದರ್ಲೆಂಡ್ಸ್


58.ಇತ್ತೀಚೆಗೆ ಡಿ.ಆರ್.ಡಿ.ಓ. ದ ಹೊಸ ಚೇರಮನ್ ಆಗಿ ಎರಡು ವರ್ಷ ಅವಧಿಗೆ ನೇಮಕ ಗೊಂಡವರು ಯಾರು ?
 (1)ಅತುಲ್ ಕಪೂರ್
 (2)ವಿನಯ ಡಿ.ಕೆ.
 (3)ಜಿ. ಸತೀಶ್ ರೆಡ್ಡಿ
 (4)ಸಂಜಯ ಮಿತ್ರ
ಸರಿ ಉತ್ತರ

(3) ಜಿ. ಸತೀಶ್ ರೆಡ್ಡಿ


59.ಈ ಕೆಳಗಿನ ಯಾವ ಸಂಸ್ಥೆಯು ಜಗತ್ತಿನ ಮೊದಲ ಬ್ಲಾಕ್ ಚೈನ್ ಬಾಂಡ್ ‘‘ಬಾಂಡ್-ಐ’’ ಯನ್ನು ರೂಪಿಸಿ, ವಿನಿಯೋಗಿಸಿ, ವರ್ಗಾವಣೆ ಮಾಡಿ ಮತ್ತು ವಿತರಿತ ಲೆಡ್ಜರ್ ತಂತ್ರಜ್ಞಾನ ಬಳಕೆ ಮಾಡುವುದರಿಂದ ಅದರ ಜೀವಿತ ಚಕ್ರದ ಮೂಲಕ ನಿರ್ವಹಣೆಯನ್ನು ಜಾರಿಗೆ ತಂದಿತು ?
 (1)ವಿಶ್ವ ಬ್ಯಾಂಕು
 (2)ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)
 (3)ಅಂತರರಾಷ್ಟ್ರೀಯ ವಿತ್ತ ನಿಧಿ (IMF)
 (4)ಅಂತರರಾಷ್ಟ್ರೀಯ ದೂರ ಸಂವಹನ (ITU) ಒಕ್ಕೂಟ
ಸರಿ ಉತ್ತರ

(1) ವಿಶ್ವ ಬ್ಯಾಂಕು


60.ಭಯೋತ್ಪಾದಕರ ಧಾಳಿಗೆ ಬಲಿಯಾದವರ ಸ್ಮರಣಾರ್ಥ ವಾಗಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸ್ಮರಣಾ ದಿನವನ್ನು ಇತ್ತೀಚೆಗೆ ವಿಶ್ವ ಸಂಸ್ಥೆ ಆಚರಿಸಿತು. ಈ ಕೆಳಗಿನವುಗಳಲ್ಲಿ ಆ ದಿನಾಂಕ ಯಾವುದು?
 (1)20 ಆಗಸ್ಟ್
 (2)21 ಆಗಸ್ಟ್
 (3)22 ಆಗಸ್ಟ್
 (4)23 ಆಗಸ್ಟ್
ಸರಿ ಉತ್ತರ

(2) 21 ಆಗಸ್ಟ್


61.ಕನ್ನಡ ಚಿತ್ರ ನಿರ್ಮಾಪಕರು, ಭಾರತೀಯ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾಗಿದ್ದ ಏಕೈಕ ಕನ್ನಡಿಗರು ಇತ್ತೀಚೆಗೆ ವಿಧಿ ವಶರಾದರು ಅವರ ಹೆಸರು ?
 (1)ಆನಂದ ಮೂರ್ತಿ
 (2)ವಿ. ಹರಿಕೃಷ್ಣ
 (3)ಎಮ್. ಭಕ್ತವತ್ಸಲ
 (4)ಸಿ. ರಾಮಾಚಾರಿ
ಸರಿ ಉತ್ತರ

(3) ಎಮ್. ಭಕ್ತವತ್ಸಲ


62.ಪುರುಷರ ಹಾಕಿಯಲ್ಲಿ ಭಾರತೀಯ ಪುರುಷರ ರಾಷ್ಟ್ರೀಯ ಹಾಕಿ ತಂಡವು 2018 ರಲ್ಲಿ ಜಕಾರ್ತ ಏಷಿಯನ್ ಕ್ರೀಡೆಯಲ್ಲಿ ಕಂಚುಗಳಿಸಿತು, ಕಂಚುಗೆಲ್ಲಲು ಭಾರತದಿಂದ ಈ ಕೆಳಗಿನ ಯಾವ ದೇಶವು ಸೋಲಿಸಲ್ಪಟ್ಟಿತು ?
 (1)ದಕ್ಷಿಣ ಕೊರಿಯಾ
 (2)ಪಾಕಿಸ್ತಾನ
 (3)ಜಪಾನ್
 (4)ವಿಯಟ್ನಾಂ
ಸರಿ ಉತ್ತರ

(2) ಪಾಕಿಸ್ತಾನ


63.ಭಾರತೀಯ ರಿಸರ್ವ ಬ್ಯಾಂಕ್ ನ ಮೇರೆಗೆ, ಅದರ ಇತ್ತೀಚಿನ ವಾರ್ಷಿಕ ಮಾಹಿತಿಯಲ್ಲಿ, ಹಣಕಾಸಿನ ವರ್ಷ 2017- 18 ರಲ್ಲಿ ಭಾರತಕ್ಕೆ ಒಂದ ವಿದೇಶೀ ನೇರ ಹೂಡಿಕೆಯ ಅಧಿಕ ಆಕರದ ಮೂಲವಾಗಿ ಯಾವ ದೇಶವನ್ನು ಲೆಕ್ಕಿಸಿದೆ ?
 (1)ಸಿಂಗಾಪುರ
 (2)ಫ್ರಾನ್ಸ್
 (3)ಜರ್ಮನಿ
 (4)ಮಾರಿಷಸ್
ಸರಿ ಉತ್ತರ

(4) ಮಾರಿಷಸ್


64.ವಿಶ್ವ ಸಂಸ್ಥೆಯು ಅಂತರರಾಷ್ಟ್ರೀಯ ದಶಕಗಳನ್ನು ಒಂದು ನಡೆವಳಿಯೊಂದಿಗೆ ಆಚರಿಸುತ್ತಿದ್ದು, ವಿಶ್ವ ಸಂಸ್ಥೆಯು 2016- 2025 ನ್ನು ಹೀಗೆಂದು ಘೋಷಿಸಿದೆ
 (1)ವಿಶ್ವ ಸಂಸ್ಥೆ, ಕುಟುಂಬ ರಚನೆಯ ದಶಕ
 (2)ವಿಶ್ವ ಸಂಸ್ಥೆ, ಪೌಷ್ಠಿಕಾಂಶವನ್ನು ಕುರಿತ ಕ್ರಿಯೆ/ಕ್ರಮದ ದಶಕ
 (3)ಆಫ್ರಿಕಾ ಮರುಭೂಮಿಯ ಜನರಿಗಾಗಿ ಅಂತರರಾಷ್ಟ್ರೀಯ ದಶಕ
 (4)ವಸಾಹತುಶಾಹಿ ನಿರ್ಮೂಲನಕ್ಕಾಗಿ ಅಂತರರಾಷ್ಟ್ರೀಯ ದಶಕ
ಸರಿ ಉತ್ತರ

(2) ವಿಶ್ವ ಸಂಸ್ಥೆ, ಪೌಷ್ಠಿಕಾಂಶವನ್ನು ಕುರಿತ ಕ್ರಿಯೆ/ಕ್ರಮದ ದಶಕ


65.ಶಿವಾಜಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವ ಬದಲಿಗೆ, ಮಿರ್ಜಾ ರಾಜಾ ಜಯಸಿಂಹನು ಅವನೊಂದಿಗೆ ಪುರಂದರ ಒಪ್ಪಂದವನ್ನು ಮಾಡಿ ಕೊಳ್ಳುವುದರ ಮೂಲಕ ಮುಕ್ತಾಯ ಗೊಳಿಸಿದನು ಏಕೆಂದರೆ ?
 (1)ಮರಾಠರ ಸಂಪೂರ್ಣ ನಿರ್ಮೂಲನ ಅಸಾಧ್ಯ.
 (2)ಮರಾಠರ ಬಗ್ಗೆ ರಾಜಾ ಜಯಸಿಂಹನು ಸಹಾನುಭೂತಿಯನ್ನು ಹೊಂದಿದ್ದನು.
 (3)ಶಿವಾಜಿಯ ಸಹಾಯದೊಂದಿಗೆ ಬಿಜಾಪುರದ ಅದಿಲ್ ಶಾಹಿ ಸುಲ್ತಾನನನ್ನು ಕಿತ್ತೊಗೆಯಲು ರಾಜಾ ಜಯಸಿಂಹನು ಬಯಸಿದ್ದನು.
 (4)ಬಿಜಾಪುರ ಮತ್ತು ಗೊಲ್ಕೊಂಡಾಗಳ ವಿಜಯಕ್ಕಾಗಿ ಮೊಘಲರ ಸೈನ್ಯವನ್ನು ಸಜ್ಜುಗೊಳಿಸಬೇಕಿತ್ತು.
ಸರಿ ಉತ್ತರ

(3) ಶಿವಾಜಿಯ ಸಹಾಯದೊಂದಿಗೆ ಬಿಜಾಪುರದ ಅದಿಲ್ ಶಾಹಿ ಸುಲ್ತಾನನನ್ನು ಕಿತ್ತೊಗೆಯಲು ರಾಜಾ ಜಯಸಿಂಹನು ಬಯಸಿದ್ದನು.


66.ಕೆಳಗಿನ ಯಾವ ಪ್ರಶಸ್ತಿಯು ಭಾರತ ಸರ್ಕಾರದ ಅಗ್ರತೆಯ ಕ್ರಮದಲ್ಲಿ ಪಟ್ಟಿಯ 7 ನೇ ಕ್ರಮಾಂಕದಲ್ಲಿ ಹಾಜರಾಗುವ ಸ್ಥಾನಮಾನವನ್ನು ಸ್ವೀಕೃತನಿಗೆ ನೀಡುವುದು ?
 (1)ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
 (2)ಪರಮ ವೀರ್ ಚಕ್ರ
 (3)ಪದ್ಮ ವಿಭೂಷಣ್
 (4)ಭಾರತ ರತ್ನ
ಸರಿ ಉತ್ತರ

(4) ಭಾರತ ರತ್ನ


67.ಪಟ್ಟಿ I (ಪಂಗಡಗಳು) ರಲ್ಲಿನ ಪಟ್ಟಿ II (ರಾಜ್ಯಗಳು) ರಲ್ಲಿರುವ ಹೊಂದಿಸಿ :
  ಪಟ್ಟಿ I (ಪಂಗಡಗಳು) ಪಟ್ಟಿ II (ರಾಜ್ಯಗಳು)
 A.ಕಟ್ಕರಿI.ಹಿಮಾಚಲ್ ಪ್ರದೇಶ್
 B.ರಭಾII.ಮಧ್ಯ ಪ್ರದೇಶ್
 C.ಭಿಲ್III.ಮಹಾರಾಷ್ಟ್ರ
 D.ಗಡ್ಡಿIV.ಮೇಘಾಲಯ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IVIIIIII
 (3)IIVIIIII
 (4)IIIIIIIV
ಸರಿ ಉತ್ತರ

(1) III IV II I


68.1946 ನೇ ವರ್ಷದಲ್ಲಿ ಈ ಕೆಳಗಿನವುಗಳಲ್ಲಿ ಯಾವ ಘಟನೆಯು ಸಂಭವಿಸಲಿಲ್ಲ ?
 (1)ಭಾರತಕ್ಕೆ ಕ್ಯಾಬಿನೆಟ್ ನಿಯೋಗದ ಪ್ರಕಟನೆ
 (2)ಮುಸ್ಲಿಂ ಲೀಗ್ ನಿಂದ ನೀಡಲ್ಪಟ್ಟ ‘‘ಪ್ರತ್ಯಕ್ಷ /ನೇರ ಕೃತ್ಯ’’ ಕರೆ
 (3)ಮಧ್ಯಂತರ ಸರ್ಕಾರದ ರಚನೆ
 (4)ಲಾರ್ಡ್ ಮೌಂಟ್ ಬ್ಯಾಟನ್ ರನ್ನು ಭಾರತದ ವೈಸರಾಯಿಯಾಗಿ ನೇಮಕಾತಿ
ಸರಿ ಉತ್ತರ

(4) ಲಾರ್ಡ್ ಮೌಂಟ್ ಬ್ಯಾಟನ್ ರನ್ನು ಭಾರತದ ವೈಸರಾಯಿಯಾಗಿ ನೇಮಕಾತಿ


69.ಭಾರತದ ಸಮುದ್ರಬಂದರುಗಳನ್ನು ಪರಿಗಣಿಸಿ :
 A.ಚೆನ್ನೈ
 B.ಟುಟಿಕೊರಿನ್
 C.ವಿಶಾಖಪಟ್ಟಣಂ
 D.ಪರದೀಪ್
 ಮೇಲಿನ ಬಂದರುಗಳ ಉತ್ತರದಿಂದ ದಕ್ಷಿಣದೆಡೆಗಿನ ಸರಿಯಾದ ಕ್ರಮಾನುಗತಿಯೇನು ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A, B, C, D
 (2)D, A, C, B
 (3)C, D, A, B
 (4)D, C, A, B
ಸರಿ ಉತ್ತರ

(4) D, C, A, B


70.‘‘ಕಾಂಗ್ರೆಸ್ ಚಳುವಳಿಯು ಜನರಿಂದ ಸ್ಫೂರ್ತಿಗೊಂಡಿಲ್ಲ ಅಥವಾ ಕಲ್ಪಿತವಾಗಿಲ್ಲ ಅಥವಾ ಯೋಜಿತವಾಗಿಲ್ಲ’’ ಎಂಬುದಾಗಿ ಯಾರು ಹೇಳಿದರು ?
 (1)ಲಾರ್ಡ್ ಡಫರಿನ್
 (2)ಸರ್ ಸೈಯದ್ ಅಹ್ಮದ್ ಖಾನ್
 (3)ಲಾರ್ಡ್ ಕರ್ಜನ್
 (4)ಲಾಲಾ ಲಜಪತ್ ರಾಯ್
ಸರಿ ಉತ್ತರ

(4) ಲಾಲಾ ಲಜಪತ್ ರಾಯ್


71.ಈ ಹೇಳಿಕೆಗಳನ್ನು ಪರಿಗಣಿಸಿ :
 A.ಉಬ್ಬರ ಭರತಗಳು ನೌಕಾಯಾನ ಮತ್ತು ಮೀನು ಗಾರಿಕೆಗೆ ವಿಶೇಷ ಸಹಾಯ ಮಾಡುತ್ತವೆ.
 B.ಅತಿಯಾದ ಭರತಗಳು ದೊಡ್ಡ ಹಡಗುಗಳು ಬಂದರನ್ನು ಸುರಕ್ಷಿತವಾಗಿ ಪ್ರವೇಶಿಸಲು ಅಥವಾ ತೆರಳುವಂತೆ ಮಾಡಲು ಸಾಧ್ಯವಾಗಿಸುತ್ತದೆ.
 C.ಬಂದರಿನಲ್ಲಿ ಹೂಳುತುಂಬುವುದನ್ನು ಭರತವು ತಡೆಗಟ್ಟುತ್ತದೆ.
 D.ಕಾಂಡ್ಲ ಮತ್ತು ಡೈಮಂಡ್ ಬಂದರುಗಳು ಭರತದ ರೇವುಗಳಾಗಿವೆ.
 ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು D ಮಾತ್ರ
 (2)B, C ಮತ್ತು D ಮಾತ್ರ
 (3)A, B ಮತ್ತು C ಮಾತ್ರ
 (4)A, B, C ಮತ್ತು D
ಸರಿ ಉತ್ತರ

(4) A, B, C ಮತ್ತು D


72.ಕೆಳಗಿನ ಕರ್ನಾಟಕದ ಸ್ಥಳಗಳಲ್ಲಿ, ಮದ್ರಾಸ್ ಪ್ರಾಂತ್ಯದಿಂದ ವರ್ತಮಾನದ ಕರ್ನಾಟಕಕ್ಕೆ ಭಾಷಾವಾರು ಉದ್ದೇಶಾಧಾರಿತ ರಾಜ್ಯಗಳ ಪುನರ್ರಚನೆಯ ವೇಳೆ ಅಲ್ಲಿಯ ಜನರು ಆಡುತ್ತಿದ್ದ ಭಾಷಾಧಾರಿತವಾಗಿ ಸೇರ್ಪಡೆಯಾದಂತಹವು ಯಾವುವು ?
 (1)ಕೊಡಗು ಮತ್ತು ದಕ್ಷಿಣ ಕನ್ನಡ
 (2)ದಕ್ಷಿಣ ಕನ್ನಡ ಮತ್ತು ಕೊಳ್ಳೆಗಾಲ
 (3)ಬಳ್ಳಾರಿ ಮತ್ತು ರಾಯಚೂರು
 (4)ಬೆಂಗಳೂರು ಮತ್ತು ಮಂಡ್ಯ
ಸರಿ ಉತ್ತರ

(2) ದಕ್ಷಿಣ ಕನ್ನಡ ಮತ್ತು ಕೊಳ್ಳೆಗಾಲ


73.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ದ್ರವದ ಒತ್ತಡವು ದ್ರವದ ಸಾಂದ್ರತೆಗೆ ವಿಲೋಮಾನುಪಾತ ದಲ್ಲಿರುತ್ತದೆ.
 B.ದ್ರವದ ಮೇಲೆ ಪ್ರಯೋಗಿಸಲಾದ ಒತ್ತಡವು ಧಾರಕದ ಗಾತ್ರ ಅಥವಾ ಆಕೃತಿಯನ್ನು ಅವಲಂಬಿಸಿಲ್ಲ.
 ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(2) B ಮಾತ್ರ


74.ಕೆಳಗೆ ನೀಡಿರುವ ನಾಲ್ಕು ಜೋಡಿಗಳಲ್ಲಿ, ಯಾವ ಪ್ರತಿಷ್ಠಿತರ ಸರಿಯಾದ ಸಂಯೋಜನೆಯು ಭಾರತದಲ್ಲಿ ಉಪ-ರಾಷ್ಟ್ರಪತಿಗಳಾಗಿದ್ದ ಹಾಗೂ ಅದಕ್ಕೆ ಪೂರ್ವದಲ್ಲಿ ರಾಜತಾಂತ್ರಿಕ ಹುದ್ದೆಗಳಾದ ರಾಯಭಾರಿಗಳು ಮತ್ತು ಹೈ ಕಮಿಷನರ್ ಗಳ ಹುದ್ದೆಯನ್ನು ಧಾರಣ ಮಾಡಿರು ವಂತವರನ್ನುಳ್ಳದ್ದಾಗಿದೆ ?
 (1)ಡಾ. ಎಸ್. ರಾಧಾಕೃಷ್ಣನ್ ಮತ್ತು ಜಿ.ಎಸ್. ಪಾಠಕ್
 (2)ಡಾ. ಎಸ್. ರಾಧಾಕೃಷ್ಣನ್ ಮತ್ತು ವಿ.ವಿ. ಗಿರಿ
 (3)ಡಾ. ಝಾಕಿರ್ ಹುಸೇನ್ ಮತ್ತು ಕೆ.ಆರ್. ನಾರಾಯಣನ್
 (4)ಬಿ.ಡಿ. ಜತ್ತಿ ಮತ್ತು ಕೆ.ಆರ್. ನಾರಾಯಣನ್
ಸರಿ ಉತ್ತರ

(3) ಡಾ. ಝಾಕಿರ್ ಹುಸೇನ್ ಮತ್ತು ಕೆ.ಆರ್. ನಾರಾಯಣನ್


75.ಸುರೇಶನು 45 ನಿಮಿಷಗಳಲ್ಲಿ 6 ಕಿ.ಮೀ. ದೂರವನ್ನು ಕ್ರಮಿಸಬಲ್ಲನು. ಅದರ ಅರ್ಧದಷ್ಟನ್ನು (ಆ ವೇಳೆಯ) 2/3 ರಷ್ಟು ಸಮಯದಲ್ಲಿ ಕ್ರಮಿಸಿದಲ್ಲಿ, ಉಳಿದ ಸಮಯದಲ್ಲಿ ಉಳಿದ ದೂರವನ್ನು ಕ್ರಮಿಸಲು ಅವನು ಎಷ್ಟು ವೇಗದಿಂದರ
ಬೇಕಾಗುತ್ತದೆ?
 (1)12 ಕಿ.ಮೀ. / ಘಂ
 (2)10 ಕಿ.ಮೀ. / ಘಂ
 (3)8 ಕಿ.ಮೀ. / ಘಂ
 (4)6 ಕಿ.ಮೀ. / ಘಂ
ಸರಿ ಉತ್ತರ

(1) 12 ಕಿ.ಮೀ. / ಘಂ


76.ಪಟ್ಟಿ I ರಲ್ಲಿನ (ಉಪನಾಮ) ಪಟ್ಟಿ II ರಲ್ಲಿರುವ (ಸ್ಥಳಗಳು) ಪಟ್ಟಿಗಳೊಂದಿಗೆ ಹೊಂದಿಸಿ :
  ಪಟ್ಟಿ I (ಉಪನಾಮ) ಪಟ್ಟಿ II (ಸ್ಥಳಗಳು)
 A.ನೈಲ್ ನ ಕೊಡುಗೆI.ಕೆನಡಾ
 B.ಮೇಪಲ್ ಎಲೆಯ ಭೂಮಿII.ಈಜಿಪ್ಟ್
 C.ಸಾವಿರ ಸರೋವರಗಳ ಭೂಮಿIII.ಆಸ್ಟ್ರೇಲಿಯಾ
 D.ಚಿನ್ನದ ತುಪ್ಪಳದ ಭೂಮಿIV.ಫಿನ್ ಲ್ಯಾಂಡ್
 V.ಸ್ವಿಟ್ಜರ್ ಲ್ಯಾಂಡ್
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIVIVIII
 (2)IIIIIIIV
 (3)IIIIVIII
 (4)IIIVIII
ಸರಿ ಉತ್ತರ

(3) II I IV III


77.ಕೆಳಗಿನವುಗಳಲ್ಲಿ ಯಾವುದು ಭಾರತದ ರಾಷ್ಟ್ರಪತಿಗಳ ಚುನಾಯಕ ಭಾಗವಾಗಿರುತ್ತದೆ ಆದರೆ ಅವರ ಖಂಡನೆಗಾಗಿ ಫೋರಂನ ಭಾಗವಾಗಿರುವುದಿಲ್ಲ ?
 (1)ಲೋಕ ಸಭೆ
 (2)ರಾಜ್ಯ ಸಭೆ
 (3)ರಾಜ್ಯ ವಿಧಾನ ಪರಿಷತ್ತುಗಳು
 (4)ರಾಜ್ಯ ವಿಧಾನ ಮಂಡಲಗಳು
ಸರಿ ಉತ್ತರ

(4) ರಾಜ್ಯ ವಿಧಾನ ಮಂಡಲಗಳು


78.ವಿಶ್ವ ಸಂಸ್ಥೆಯನ್ನು ಕುರಿತ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.II ನೇ ಪ್ರಪಂಚ ಮಹಾಯುದ್ಧದ ನಂತರ 1945 ರ 24 ನೇ ಅಕ್ಟೋಬರ್ ನಲ್ಲಿ ಸ್ಥಾಪನೆ ಯಾಯಿತು.
 B.UN ನ ಕೇಂದ್ರಕಾರ್ಯ ಸ್ಥಾನವು, ನ್ಯೂಯಾರ್ಕ್ ನಗರದ ಮನಹಾಟ್ಟನ್ ನಲ್ಲಿದೆ.
 C.UN ವು 2001 ರಲ್ಲಿ ನೊಬೆಲ್ ಶಾಂತಿ ಪಾರಿತೋಷಕವನ್ನು ಗೆದ್ದಿದೆ.
 ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)A ಮತ್ತು B ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


79.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಸಂಸತ್ತಿನ ಅಧಿವೇಶನ ಸಭೆ ಇಲ್ಲದಿದ್ದಾಗ ಅಧ್ಯಕ್ಷರು ಸುಗ್ರೀವಾಜ್ಞೆಯನ್ನು ಘೋಷಿಸಬಹುದು. ಈ ಘೋಷಣೆಗಳು ಸಂಸತ್ತಿನಿಂದ ನ್ಯಾಯ ಸಮ್ಮತವಾಗಿ ಅದರ ಪುನರ್ ಅಧಿವೇಶನದ ಆರು ತಿಂಗಳೊಳಗಾಗಿ ಅನುಮೋದಿತವಾಗಬೇಕು.
 B.ರಾಷ್ಟ್ರಪತಿಗಳು ಲೋಕಸಭೆಗೆ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಗಳಲ್ಲಿ ವಿಶೇಷವಾಗಿ ಕಾರ್ಯಶೀಲ ಅನುಭವದ ಜ್ಞಾನವನ್ನು ಹೊಂದಿರುವ 12 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ.
 ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ?
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(4) A ಆಗಲೀ ಅಥವಾ B ಆಗಲೀ ಅಲ್ಲ


80.‘ದೇವಾನಾಂ ಪಿಯದಸಿ’ ಮತ್ತು ‘ಅಶೋಕ ಮೌರ್ಯ’ ಎಂಬುದು ಒಂದೇ ಮತ್ತು ಅದೇ ಆಗಿವೆ. ಈ ಕೆಳಗಿನ ಯಾವ ಸ್ಥಳದಲ್ಲಿಯ ಕೆತ್ತನೆಯ ಆಧಾರದ ಮೇಲೆ ಇದನ್ನು ಒಪ್ಪಲಾಗಿದೆ ?
 (1)ಜಟಿಂಗ
 (2)ಗವಿಮಠ್
 (3)ಮಾಸ್ಕಿ
 (4)ಸಿದ್ಧಾಪುರ
ಸರಿ ಉತ್ತರ

(3) ಮಾಸ್ಕಿ


81.ಪಟ್ಟಿ I ರಲ್ಲಿನ (ಕೇಂದ್ರಾಡಳಿತ ಪ್ರದೇಶಗಳು) ಪಟ್ಟಿ II ರಲ್ಲಿರುವ (ಅವು ಯಾವ ಉಚ್ಛ ನ್ಯಾಯಾಲಯದ ವ್ಯಾಪ್ತಿಯಡಿ ಬರುವುದೋ) ಪಟ್ಟಿಗಳೊಂದಿಗೆ ಹೊಂದಿಸಿ :
  ಪಟ್ಟಿ I (ಕೇಂದ್ರಾಡಳಿತ ಪ್ರದೇಶಗಳು) ಪಟ್ಟಿ II (ಉಚ್ಛ ನ್ಯಾಯಾಲಯ)
 A.ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುI.ಕಲ್ಕತ್ತಾ ಉಚ್ಛ ನ್ಯಾಯಾಲಯ
 B.ದಮನ್ ಮತ್ತು ಡಿಯುII.ಮುಂಬಯಿ ಉಚ್ಛ ನ್ಯಾಯಾಲಯ
 C.ಲಕ್ಷದ್ವೀಪ್III.ಮದ್ರಾಸ್ ಉಚ್ಛ ನ್ಯಾಯಾಲಯ
 D.ಪುದುಚೆರಿIV.ಕೇರಳ ಉಚ್ಛ ನ್ಯಾಯಾಲಯ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIVIIII
 (2)IIIIIIIV
 (3)IIIIVIII
 (4)IIIIVIII
ಸರಿ ಉತ್ತರ

(4) I II IV III


82.ಅಸಹಕಾರ ಚಳುವಳಿಯ ಅವಧಿಯಲ್ಲಿ ವಿದೇಶೀ ಬಟ್ಟೆಗಳ ಸುಡುವಿಕೆಯನ್ನು ಅವು ‘‘ಜಡ ತ್ಯಾಜ್ಯ’’ ಎಂಬುದಾಗಿ ಪರಿಗಣಿಸಿ ಕರೆ ನೀಡಿದವರು ಯಾರು ?
 (1)ರವೀಂದ್ರನಾಥ ಟ್ಯಾಗೋರ್
 (2)ಮೊಹಮದ್ ಅಲಿ ಜಿನ್ನ್ಹಾ
 (3)ಲಾರ್ಡ್ ರೀಡಿಂಗ್
 (4)ಮೋತಿಲಾಲ್ ನೆಹರೂ
ಸರಿ ಉತ್ತರ

(1) ರವೀಂದ್ರನಾಥ ಟ್ಯಾಗೋರ್


83.ಈ ಕೆಳಗಿನವುಗಳಲ್ಲಿ ಯಾವುದು ‘‘ಹತ್ತಿರದ ಹಣ’’ ಕ್ಕೆ ಉದಾಹರಣೆಯಾಗಿದೆ ?
 A.ಖಜಾನೆ ಬಿಲ್ಲುಗಳು
 B.ಉಳಿತಾಯ ಖಾತೆಗಳು
 C.ಯುನೈಟೆಡ್ ಸ್ಟೇಟ್ಸ್ ಡಾಲರ್
 D.ರಿಯಲ್ ಎಸ್ಟೇಟ್
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)A, B ಮತ್ತು C ಮಾತ್ರ
 (3)C ಮತ್ತು D ಮಾತ್ರ
 (4)A ಮತ್ತು D ಮಾತ್ರ
ಸರಿ ಉತ್ತರ

(2) A, B ಮತ್ತು C ಮಾತ್ರ


84.ಅಲ್ಯೂಮಿನಿಯಮ್ ಗೋಳವನ್ನು 10°C ನಲ್ಲಿ ನೀರಿನಲ್ಲಿ ಮುಳುಗಿಸಿದೆ, ಗೋಳದ ತಾಪವನ್ನು ಅಧಿಕಗೊಳಿಸಿದರೆ, ಮೇಲ್ಮುಖ ಒತ್ತಡವು
 (1)ಹೆಚ್ಚಾಗುತ್ತದೆ
 (2)ಕಡಿಮೆ ಆಗುತ್ತದೆ
 (3)ಅಷ್ಟೇ ಇರುತ್ತದೆ
 (4)ಗೋಳದ ತ್ರಿಜ್ಯವನ್ನವಲಂಬಿಸಿ ಹೆಚ್ಚಾಗಲೂ ಬಹುದು ಅಥವಾ ಕಡಿಮೆ ಆಗಲೂ ಬಹುದು
ಸರಿ ಉತ್ತರ

(2) ಕಡಿಮೆ ಆಗುತ್ತದೆ


85.ಬಹಮನಿ ಸಾಮ್ರಾಜ್ಯದ ದೊರೆಗಳು ಕಲೆ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿಯನ್ನು ನಗರಗಳು, ಕಟ್ಟಡಗಳು, ಮಸೀದಿಗಳು ಮತ್ತು ಕೋಟೆಗಳ ರೂಪದಲ್ಲಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ ?
 (1)ಹೈದರಾಬಾದ್ ನ ನಗರವು ಬಿಜಾಪುರದ ಇಬ್ರಾಹಿಂ ಆದಿಲ್ ಷಾ ರಿಂದ ನಿರ್ಮಿತವಾಯಿತು.
 (2)ಮೊಹಮದ್ ಆದಿಲ್ ಷಾ ನ ಸಮಾಧಿಯ ಮೇಲಣ ಬಿಜಾಪುರದ ಗೋಲ್ ಗುಂಬಜ್ ಭಾರತದ ಅತಿ ದೊಡ್ಡದಾದ ಗುಮ್ಮಟವಾಗಿದೆ.
 (3)ಹೈದರಾಬಾದ್ ನ ಚಾರ್ ಮಿನಾರ್, ಗೋಲ್ಕೊಂಡಾದ ಖುತ್ಬ್ ಷಾಹಿ ಮನೆತನದ ಮೊಹಮದ್ ಕುಲಿ ಕುತ್ಬ್ ಷಾ ರಿಂದ ನಿರ್ಮಿಸಲ್ಪಟ್ಟಿತು.
 (4)ಮಹಮದ್ ಗವಾನನು ಬೀದರ್ ನಲ್ಲಿ ಕಾಲೇಜೊಂದನ್ನು ನಿರ್ಮಿಸಿದನು.
ಸರಿ ಉತ್ತರ

(1) ಹೈದರಾಬಾದ್ ನ ನಗರವು ಬಿಜಾಪುರದ ಇಬ್ರಾಹಿಂ ಆದಿಲ್ ಷಾ ರಿಂದ ನಿರ್ಮಿತವಾಯಿತು.


86.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಕೃಷ್ಣಾ ಮತ್ತು ತುಂಗಭದ್ರಾ ಪ್ರದೇಶಗಳ ನಡುವಣ ಪ್ರದೇಶ
 B.ಕೃಷ್ಣಾ ಗೋದಾವರಿ ಪ್ರಸ್ಥಭೂಮಿ
 C.ಮರಾಠಾವಾಡಾ ದೇಶ ಮೇಲಿನವುಗಳಲ್ಲಿ ಯಾವುದರ ಕುರಿತಾದ ಘರ್ಷಣೆಯನ್ನು ವಿಜಯನಗರ ಮತ್ತು ಬಹಮನಿ ಸಾಮ್ರಾಜ್ಯದ ನಡುವಣ ಹೋರಾಟದ ಕಾರಣಗಳಿಗಾಗಿ ಪರಿಗಣಿಸಬಹುದು :
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
 (1)A ಮಾತ್ರ
 (2)A ಮತ್ತು B ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


87.ಭಾರತದ ರಾಜ್ಯಗಳಲ್ಲಿ ಕೆಳಗಿನ ಯಾವ ರಾಜ್ಯಗಳು ಮೊಗಲರ ಅವಧಿಯಲ್ಲಿ ಮತ್ತು ಸುಲ್ತಾನರಲ್ಲಿ ಅಹೊಂ ಮನೆತನದವರ ಆಳ್ವಿಕೆ ಗೊಳಪಟ್ಟಿದ್ದವು ?
 (1)ಕೇರಳ
 (2)ಕಾಶ್ಮೀರ್
 (3)ದಕ್ಷಿಣ ಕರ್ನಾಟಕ
 (4)ಅಸ್ಸಾಂ
ಸರಿ ಉತ್ತರ

(4) ಅಸ್ಸಾಂ


88.ಇಬ್ರಾಹಿಂ ಲೋದಿಯ ವಿರುದ್ಧ ಸಂಚು ಮಾಡಿದ ಮತ್ತು ದೆಹಲಿಯನ್ನು ಆಕ್ರಮಣ ಮಾಡಲು ಬಾಬರ್ ನನ್ನು ಆಹ್ವಾನಿಸಿದ್ದು ಕೆಳಗಿನವರಲ್ಲಿ ಯಾರು ?
 (1)ಬಹ್ಲೋಲ್ ಲೋದಿ
 (2)ದೌಲತ್ ಖಾನ್ ಲೋದಿ
 (3)ಸಿಕಂದರ್ ಲೋದಿ
 (4)ಮೇಲಿನ ಯಾರೂ ಅಲ್ಲ
ಸರಿ ಉತ್ತರ

(2) ದೌಲತ್ ಖಾನ್ ಲೋದಿ


89.ಇಸ್ರೋದ ಮೊದಲ ಮಾನವ ಬಾಹ್ಯಾಕಾಶ ನೌಕೆ ‘ಗಗನ್ ಯಾನ’ ದ ಕಾರ್ಯಕ್ರಮದ ಸಹಯೋಗಕ್ಕಾಗಿ ಭಾರತದೊಂದಿಗೆ ಯಾವ ದೇಶವು ಒಪ್ಪಂದ ಮಾಡಿಕೊಂಡಿತು ?
 (1)ಜರ್ಮನಿ
 (2)ಫ್ರಾನ್ಸ್
 (3)ಜಪಾನ್
 (4)ಯುನೈಟೆಡ್ ಸ್ಟೇಟ್ಸ್
ಸರಿ ಉತ್ತರ

(2) ಫ್ರಾನ್ಸ್


90.2018 ರ ಅಕ್ಟೋಬರ್ 2 ರಂದು ಭಾರತದ ಈಗಿನ ಮುಖ್ಯ ನ್ಯಾಯಾಧೀಶರಾದ ಶ್ರೀ ದೀಪಕ್ ಮಿಶ್ರಾರ ನಿವೃತ್ತಿಯ ನಂತರ ಯಾರು ಭಾರತದ 46 ನೇ ಮುಖ್ಯ ನ್ಯಾಯಾಧೀಶರಾಗುವರು ?
 (1)ಶ್ರೀ ರಂಜನ್ ಗೋಗೋಯ್
 (2)ಶ್ರೀ ಮದನ್ ಲೊಕುರ್
 (3)ಶ್ರೀ ಕುರಿಯನ್ ಜೊಸೆಫ್
 (4)ಶ್ರೀ ಅರಜೆನ್ ಕುಮಾರ್ ಸಿಬ್ರಿ
ಸರಿ ಉತ್ತರ

(1) ಶ್ರೀ ರಂಜನ್ ಗೋಗೋಯ್


91.ದೆಹಲಿಯಲ್ಲಿನ ಅವರ ಆಳ್ವಿಕೆಯಲ್ಲಿ ಕೆಳಗಿನವರುಗಳನ್ನು ಕಾಲಾನುಕ್ರಮಣಿಕೆಯ ಅನುಸಾರವಾಗಿ ಜೋಡಿಸಿ :
 A.ರಝಿಯಾ
 B.ಬಲ್ಬನ್
 C.ಇಲ್ತುತಮಿಷ್
 D.ನಾಸಿರುದ್ದೀನ್
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)D, A, C, B
 (2)A, C, D, B
 (3)A, B, C, D
 (4)C, A, D, B
ಸರಿ ಉತ್ತರ

(4) C, A, D, B


92.ಷೇಕ್-ಇ-ಬೇಖಬರ್ ಎಂಬುದಾಗಿ ಕೆಳಗಿನ ಯಾವ ಮೊಘಲ್ ಸಾಮ್ರಾಟ ಖ್ಯಾತನಾಗಿದ್ದಾನೆ?
 (1)ಷಾ ಅಲಂ
 (2)ಜಹಾಂಗೀರ್
 (3)ಷಹಜಹಾನ್
 (4)ಬಹಾದ್ದೂರ್ ಷಾ I
ಸರಿ ಉತ್ತರ

(4) ಬಹಾದ್ದೂರ್ ಷಾ I


93.ಈ ಕೆಳಗಿನ ಯಾವ ಸಾರ್ವಜನಿಕ ಸಾಮಾನ್ಯ ವಿಮಾ ಕಂಪನಿಗಳನ್ನು ವಿಲೀನಗೊಳಿಸಿ ಒಂದೇ ವಿಮಾ ಕಂಪೆನಿಯಾಗಿ 2018-19 ರ ಆಯವ್ಯಯದಲ್ಲಿ ರೂಪಿಸಲಾಯಿತು ?
 (1)ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ , ಓರಿಯಂಟಲ್ ಇನ್ಷೊರೆನ್ಸ್ ಮತ್ತು ನ್ಯಾಷನಲ್ ಇನ್ಷೂರೆನ್ಸ್
 (2)LIC, ಭಾರ್ತಿ AXA ಮತ್ತು ಯುನೈಟೆಡ್ ಇನ್ಷೂರೆನ್ಸ್
 (3)ಜನರಲ್ ಇನ್ಷೂರೆನ್ಸ್, ಮ್ಯಾಕ್ಸ್ ಬುಪಾ ಮತ್ತು UTI
 (4)ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್, ಭಾರ್ತಿ AXA ಮತ್ತು ಯುನೈಟೆಡ್ ಇನ್ಷೂರೆನ್ಸ್
ಸರಿ ಉತ್ತರ

(1) ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ , ಓರಿಯಂಟಲ್ ಇನ್ಷೊರೆನ್ಸ್ ಮತ್ತು ನ್ಯಾಷನಲ್ ಇನ್ಷೂರೆನ್ಸ್


94.ಭಾರತದಲ್ಲಿ ಪ್ರಸ್ತುತ ಕೊರತೆ ಖಾತೆಗೆ ಕಾರಣವಾಗುವ ಬಹುತೇಕ ಸಾಧ್ಯತೆಯು ಕೆಳಗಿನವುಗಳಲ್ಲಿ ಯಾವುದು ?
 A.ಕ್ರೀಡಾ ಉಪಯುಕತೆಯ ವಾಹನಗಳ ಮೇಲಿನ ಕಡಿತಗೊಳಿಸಿದ ಸುಂಕ ತೆರಿಗೆಗಳು
 B.ಚಿನ್ನದ ಮೇಲಿನ ಸುಂಕ ಕಡಿತ
 C.ಈರುಳ್ಳಿಯ ರಫ್ತು ಮೇಲಿನ ನಿಷೇಧ
 ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
 (1)A ಮತ್ತು B ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


95.ಶೇವಿಂಗ್ ಬ್ರಷ್ ನ್ನು ಮುಳುಗಿಸಿ ನಂತರ ನೀರಿನಿಂದ ಹೊರತೆಗೆದಾಗ, ಅದರ ಕೂದಲುಗಳು (ಎಳೆಗಳು) ಈ ಕೆಳಗಿನ ಯಾವ ಗುಣ ಲಕ್ಷಣದ ಕಾರಣದಿಂದ ಒಟ್ಟಿಗೇ ಅಂಟಿಕೊಳ್ಳುತ್ತವೆ ?
 (1)ಘರ್ಷಣೆ
 (2)ಸ್ಥಿತಿಸ್ಥಾಪಕತ್ವ
 (3)ಸ್ನಿಗ್ಧತೆ
 (4)ಮೇಲ್ಮೈ ಕರ್ಷಣ
ಸರಿ ಉತ್ತರ

(4) ಮೇಲ್ಮೈ ಕರ್ಷಣ


96.ಹೊಸ ಕಂಪ್ಯೂಟರುಗಳನ್ನು ಒಂದು ಕಂಪನಿಯು ಸ್ಥಾಪಿಸಿ ಮತ್ತು ಉದ್ಯೋಗಿಗಳನ್ನು ಅವರಿಗೆ ಆ ಕಂಪ್ಯೂಟರ್ ಜ್ಞಾನವಿಲ್ಲವೆಂದು ವಜಾ ಮಾಡಿದರೆ ಅಂತಹ ನಿರುದ್ಯೋಗವನ್ನು ಯಾವ ರೀತಿಯ ನಿರುದ್ಯೋಗ ಎಂದು ಕರೆಯುತ್ತಾರೆ ?
 (1)ಮುಸುಕಿನ ನಿರುದ್ಯೋಗ
 (2)ರಾಚನಿಕ ನಿರುದ್ಯೋಗ
 (3)ಮುಚ್ಚಿಟ್ಟ ನಿರುದ್ಯೋಗ
 (4)ಘರ್ಷಣಾತ್ಮಕ ನಿರುದ್ಯೋಗ
ಸರಿ ಉತ್ತರ

(4) ಘರ್ಷಣಾತ್ಮಕ ನಿರುದ್ಯೋಗ


97.ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ 2018 ಆಶಯ ವಿಷಯವೇನು ?
 (1)ಕಾರ್ಮಿಕ ಸಾಮರ್ಥ್ಯದ ಆಚರಣೆ
 (2)ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಗಾಗಿ ಶ್ರಮಿಕರನ್ನು ಸಂಘಟನೆ ಸಂಘಟಿಸುವುದು
 (3)ಉದ್ಯೋಗಕ್ಕಾಗಿ ನಾವೀನ್ಯತೆ ಹಾಗೂ ಉದ್ಯಮಶೀಲತೆ
 (4)ಅಂತರರಾಷ್ಟ್ರೀಯ ಕಾರ್ಮಿಕ ಚಳುವಳಿಯ ಆಚರಣೆ
ಸರಿ ಉತ್ತರ

(2) ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಗಾಗಿ ಶ್ರಮಿಕರನ್ನು ಸಂಘಟನೆ ಸಂಘಟಿಸುವುದು


98.ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಇತ್ತೀಚಿನ ಅಧ್ಯಕ್ಷರು ಯಾರು ?
 (1)ಡಾ. ಸಿ. ರಂಗರಾಜನ್
 (2)ಡಾ. ಸುಬ್ರಮಣ್ಯಮ್ ಸ್ವಾಮಿ
 (3)ಡಾ. ಸುಮಿತ್ರಾ ಚೌಧರಿ
 (4)ಶ್ರೀ ಬಿಬೇಕ ದೆಬ್ರಾಯ್
ಸರಿ ಉತ್ತರ

(4) ಶ್ರೀ ಬಿಬೇಕ ದೆಬ್ರಾಯ್


99.ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮಗಳಿಗಾಗಿ ಉಪ ಮಹಾ ನಿರ್ದೇಶಕರಾಗಿ ಇತ್ತೀಚೆಗೆ ನೇಮಕ ಹೊಂದಿದ ಭಾರತೀಯ ಮಹಿಳೆ ಯಾರು ?
 (1)ಡಾ. ಸೊಮಯ ಸ್ವಾಮಿನಾಥನ್
 (2)ಡಾ. ಸರೋಜಾ ವೈದ್ಯನಾಥನ್
 (3)ಡಾ. ಸೊಮದುರ್ಗ್ ರಾಜನಾಥನ್
 (4)ಡಾ. ಸುಕಯಾ ಬಾಲಾ
ಸರಿ ಉತ್ತರ

(1) ಡಾ. ಸೊಮಯ ಸ್ವಾಮಿನಾಥನ್


100.ಇತ್ತೀಚೆಗೆ ಪರಿಸರ, ಅರಣ್ಯಗಳು ಮತ್ತು ವಾಯುಗುಣ ಬದಲಾವಣೆಯ ಸಚಿವಾಲಯದಿಂದ ಬಿಡುಗಡೆಯಾದ ಕೈಗಾರಿಕೆಗಳ ಪುನರ್ ವಿಂಗಡಣೆಯಲ್ಲಿ ಯಾವ ವರ್ಗದ ಕೈಗಾರಿಕೆಗಳಿಗೆ ಅವು ಮಾಲಿನ್ಯಕಾರಕವಲ್ಲವೆಂದೂ) ಅವುಗಳಿಗೆ ಪರಿಸರಾತ್ಮಕ ಒಪ್ಪಿಗೆ ಮತ್ತು ಪ್ರಾಯೋಗಿಕವಾಗಿ ತೀರುವಳಿ ಬೇಕಿಲ್ಲವೆನ್ನಲಾಗಿದೆ ?
 (1)ಕೆಂಪು
 (2)ಬಿಳಿ
 (3)ಹಸಿರು
 (4)ಕಿತ್ತಳೆ
ಸರಿ ಉತ್ತರ

(2) ಬಿಳಿ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment