ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ
1. | ‘ಯೋನೆಕ್ಸ್ ಕಪ್’ ಯಾವ ಕ್ರೀಡೆಯೊಂದಿಗೆ ಸಂಬಂಧಿಸಿದೆ ? | |
(ಎ) | ಫುಟ್‌ಬಾಲ್ | |
(ಬಿ) | ಕ್ರಿಕೆಟ್ | |
(ಸಿ) | ಬ್ಯಾಡ್‌ಮಿಂಟನ್ | |
(ಡಿ) | ವಾಲಿಬಾಲ್ |
CORRECT ANSWER
(ಸಿ) ಬ್ಯಾಡ್‌ಮಿಂಟನ್
2. | ಈ ಕೆಳಗಿನ ಯಾವ ದಿನವನ್ನು ಕರ್ನಾಟಕದಲ್ಲಿ ‘‘ಪೋಲಿಸ್ ಧ್ವಜ ದಿನ’’ ವೆಂದು ಆಚರಿಸಲಾಗುತ್ತದೆ ? | |
(ಎ) | 31 ನೇ ಜನವರಿ | |
(ಬಿ) | 2 ನೇ ಏಪ್ರಿಲ್ | |
(ಸಿ) | 1 ನೇ ಮೇ | |
(ಡಿ) | 22 ನೇ ಅಕ್ಟೋಬರ್ |
CORRECT ANSWER
(ಬಿ) 2 ನೇ ಏಪ್ರಿಲ್
3. | ಈ ಕೆಳಗಿನ ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ನೈಸರ್ಗಿಕ ರಬ್ಬರ್ ಉತ್ಪತ್ತಿಯಾಗುತ್ತದೆ? | |
(ಎ) | ತಮಿಳುನಾಡು | |
(ಬಿ) | ಕರ್ನಾಟಕ | |
(ಸಿ) | ಅಸ್ಸಾಂ | |
(ಡಿ) | ಕೇರಳ |
CORRECT ANSWER
(ಡಿ) ಕೇರಳ
4. | ‘‘ಇಂದಿರಾ ಪಾಯಿಂಟ್’ ಎಲ್ಲಿದೆ ? | |
(ಎ) | ಕೇರಳ | |
(ಬಿ) | ನಿಕೋಬಾರ್ | |
(ಸಿ) | ತಮಿಳುನಾಡು | |
(ಡಿ) | ಲಡಾಖ್ |
CORRECT ANSWER
(ಬಿ) ನಿಕೋಬಾರ್
5. | ಮಾನವ ದೇಹದ ಸಾಮಾನ್ಯ ಉಷ್ಣತೆ ಎಷ್ಟು ? ‘‘ | |
(ಎ) | 212°F | |
(ಬಿ) | 180°F | |
(ಸಿ) | 98.4°F | |
(ಡಿ) | 32°F |
CORRECT ANSWER
(ಸಿ) 98.4°F
6. | ಈ ಕೆಳಗಿನವುಗಳಲ್ಲಿ, ಭಾರತದ ಯಾವ ನಗರವನ್ನು ‘‘ಗೋಲ್ಡನ್ ಸಿಟಿ’ ಎಂದು ಕರೆಯಲಾಗುತ್ತದೆ? | |
(ಎ) | ಬೆಂಗಳೂರು | |
(ಬಿ) | ಬಿಕಾನೇರ್ | |
(ಸಿ) | ಜೈಪುರ್ | |
(ಡಿ) | ಜೈಸಲ್ಮೇರ್ |
CORRECT ANSWER
(ಡಿ) ಜೈಸಲ್ಮೇರ್
7. | ಬ್ಯಾಟರಿಗಳಲ್ಲಿ ಈ ಕೆಳಗಿನ ಯಾವ ಆಮ್ಲ (ಆ್ಯಸಿಡ್) ವನ್ನು ಬಳಸುತ್ತಾರೆ ? | |
(ಎ) | H2CO3 | |
(ಬಿ) | H2SO4 | |
(ಸಿ) | C6H8O7 | |
(ಡಿ) | HNO3 |
CORRECT ANSWER
(ಬಿ) H2SO4
8. | ಇವುಗಳಲ್ಲಿ ಅಸ್ಸಾಂ ರಾಜ್ಯದ ರಾಜಧಾನಿ ಯಾವುದು ? | |
(ಎ) | ಇಫಾಂಲ್ | |
(ಬಿ) | ದಿಸ್ಪುರ್ | |
(ಸಿ) | ಕೋಹಿಮಾ | |
(ಡಿ) | ಐಜ್ವಾಲ್ |
CORRECT ANSWER
(ಬಿ) ದಿಸ್ಪುರ್
9. | ‘ಮೋಹಿನಿಯಾಟ್ಟಂ’ ನೃತ್ಯವು ಯಾವ ರಾಜ್ಯದೊಂದಿಗೆ ಸಂಬಂಧ ಹೊಂದಿದೆ ? | |
(ಎ) | ಒಡಿಸಾ | |
(ಬಿ) | ಕರ್ನಾಟಕ | |
(ಸಿ) | ಕೇರಳ | |
(ಡಿ) | ತಮಿಳುನಾಡು |
CORRECT ANSWER
(ಸಿ) ಕೇರಳ
10. | ಶ್ರೀಲಂಕಾ ದೇಶವು ಸ್ವಾತಂತ್ರ್ಯ ಪಡೆದ ವರ್ಷ | |
(ಎ) | 1946 | |
(ಬಿ) | 1947 | |
(ಸಿ) | 1948 | |
(ಡಿ) | 1950 |
CORRECT ANSWER
(ಸಿ) 1948
11. | ‘‘ವೋಲ್ಗಾ’ ನದಿಯು ಯಾವ ದೇಶದಲ್ಲಿದೆ? | |
(ಎ) | ಮೆಕ್ಸಿಕೋ | |
(ಬಿ) | ಬ್ರೆಜಿಲ್ | |
(ಸಿ) | ರಷ್ಯಾ | |
(ಡಿ) | ಚೀನಾ |
CORRECT ANSWER
(ಸಿ) ರಷ್ಯಾ
12. | ನಿಂಬೆಯಲ್ಲಿರುವ ವಿಟಮಿನ್ ಯಾವುದು ? | |
(ಎ) | ವಿಟಮಿನ್ A | |
(ಬಿ) | ವಿಟಮಿನ್ B | |
(ಸಿ) | ವಿಟಮಿನ್ C | |
(ಡಿ) | ವಿಟಮಿನ್ D |
CORRECT ANSWER
(ಸಿ) ವಿಟಮಿನ್ C
13. | ಇವುಗಳಲ್ಲಿ ಯಾವುದು ಎಸ್.ಎಲ್. ಭೈರಪ್ಪನವರ ಕಾದಂಬರಿಯಲ್ಲ? | |
(ಎ) | ನಾಯಿ ನೆರಳು | |
(ಬಿ) | ಭಿತ್ತಿ | |
(ಸಿ) | ಮರಳಿ ಮಣ್ಣಿಗೆ | |
(ಡಿ) | ಮತದಾನ |
CORRECT ANSWER
(ಸಿ) ಮರಳಿ ಮಣ್ಣಿಗೆ
14. | ಈ ಕೆಳಗಿನವುಗಳಲ್ಲಿ ಹಿಮಾಲಯ ಶ್ರೇಣಿಯ ಯಾವ ಪರ್ವತಗಳು ಭಾರತದಲ್ಲಿವೆ ? | |
(ಎ) | ಮೌಂಟ್ ಎವರೆಸ್ಟ್. | |
(ಬಿ) | ಧೌಲಗಿರಿ | |
(ಸಿ) | ಅನ್ನಪೂರ್ಣ | |
(ಡಿ) | ನಂದಾದೇವಿ |
CORRECT ANSWER
(ಡಿ) ನಂದಾದೇವಿ
15. | ಈ ಕೆಳಗಿನವುಗಳಲ್ಲಿ ಯಾವುದು ಕೃಷ್ಣಾ ನದಿಯ ಉಪನದಿಯಲ್ಲ ? | |
(ಎ) | ಭೀಮಾ | |
(ಬಿ) | ಭದ್ರಾ | |
(ಸಿ) | ಮಲಪ್ರಭಾ | |
(ಡಿ) | ಘಟಪ್ರಭಾ |
CORRECT ANSWER
(ಬಿ) ಭದ್ರಾ
16. | ಈ ಕೆಳಗಿನ ಯಾವ ದೇಶದಲ್ಲಿ ಅತಿಹೆಚ್ಚು ಸೌರಶಕ್ತಿ ಉತ್ಪಾದಿಸಲಾಗುತ್ತದೆ ? | |
(ಎ) | ಯು.ಎಸ್.ಎ. | |
(ಬಿ) | ಭಾರತ | |
(ಸಿ) | ಚೀನಾ | |
(ಡಿ) | ಜಪಾನ್ |
CORRECT ANSWER
(ಸಿ) ಚೀನಾ
17. | ಈ ಕೆಳಗಿನವುಗಳಲ್ಲಿ, ವಸತಿ ಪ್ರದೇಶಗಳಿಗೆ ಕೇಂದ್ರ ಮಾಲಿನ್ಯ ಮಂಡಳಿಯ ಸಲಹೆಯ ಪ್ರಕಾರ ಧ್ವನಿ ಮಿತಿಯು | |
(ಎ) | 55 ಡೆಸಿಬೆಲ್ಸ್ | |
(ಬಿ) | 60 ಡೆಸಿಬೆಲ್ಸ್ | |
(ಸಿ) | 75 ಡೆಸಿಬೆಲ್ಸ್ | |
(ಡಿ) | 90 ಡೆಸಿಬೆಲ್ಸ್ |
CORRECT ANSWER
(ಎ) 55 ಡೆಸಿಬೆಲ್ಸ್
18. | ವಿಶ್ವದ ಮೊದಲ ಹಸಿರುಮನೆ ಅನಿಲ ಮಾನಿಟರಿಂಗ್ ಉಪಗ್ರಹದ ಹೆಸರೇನು ? | |
(ಎ) | ಐಸಿಇಸ್ಯಾಟ್ (ICESat) | |
(ಬಿ) | ಜಾಸನ್-1 | |
(ಸಿ) | ಇಬುಕಿ | |
(ಡಿ) | ಎನ್ಪಿಒಇಎಸ್ಎಸ್ (NPOESS) |
CORRECT ANSWER
(ಸಿ) ಇಬುಕಿ
19. | ಇಂದಿನ ಜಾಗತಿಕ ಅನಿಲ ಪರಿಶೋಧನಾ ಮಾರುಕಟ್ಟೆಯಲ್ಲಿ ಶೇಲ್ ಗ್ಯಾಸ್ ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದು ಈ ಕೆಳಗಿನ ಯಾವ ಗುಣಗಳಿಂದ ? | |
(ಎ) | ಅದರ ವಿಶಿಷ್ಟ ರಾಸಾಯನಿಕ ಗುಣವು ಕಡಿಮೆ ಮಾಲಿನ್ಯವನ್ನುಂಟು ಮಾಡುತ್ತದೆ. | |
(ಬಿ) | ಅದರ ವಿಶಿಷ್ಟ ಭೌತಿಕ ಗುಣ ಇದು ಸಂಗ್ರಹಿಸಲು ಮತ್ತು ನಿರ್ವಹಿಸಲು ಸುಲಭವಾಗಿರುತ್ತದೆ. | |
(ಸಿ) | ಇದರ ಪರಿಣಾಮಕಾರಿ ಉತ್ಪಾದನೆ. | |
(ಡಿ) | ಅತೀ ಹೇರಳವಾದ ನಿಕ್ಷೇಪಗಳಲ್ಲಿ ಇದರ ಲಭ್ಯತೆಯಿಂದ. |
CORRECT ANSWER
(ಡಿ) ಅತೀ ಹೇರಳವಾದ ನಿಕ್ಷೇಪಗಳಲ್ಲಿ ಇದರ ಲಭ್ಯತೆಯಿಂದ.
20. | ಓಜೋನ್ ವಲಯವು ಎಲ್ಲಿದೆ ? | |
(ಎ) | ಉಷ್ಣವಲಯ (ಟ್ರೊಪೊಸ್ಪಿಯರ್) | |
(ಬಿ) | ಟ್ರೋಪೋಪಾಸ್ | |
(ಸಿ) | ವಾಯುಮಂಡಲ (ಸ್ಟಾಟೊಸ್ಪಿಯರ್) | |
(ಡಿ) | ಫೋಟೋಸ್ಪಿಯರ್ |
CORRECT ANSWER
(ಸಿ) ವಾಯುಮಂಡಲ (ಸ್ಟಾಟೊಸ್ಪಿಯರ್)
21. | ಈ ಕೆಳಕಂಡವುಗಳಲ್ಲಿ ಯಾವ ಬೆಳೆಯು ಮಣ್ಣಿನಲ್ಲಿರುವ ಸಸಾರಜನಕ ಅಂಶವನ್ನು ಹೆಚ್ಚಿಸುತ್ತದೆ? | |
(ಎ) | ಆಲೂಗೆಡ್ಡೆ | |
(ಬಿ) | ಸೋರ್ಗಮ್ | |
(ಸಿ) | ಸೂರ್ಯಕಾಂತಿ | |
(ಡಿ) | ಬಟಾಣಿ |
CORRECT ANSWER
(ಡಿ) ಬಟಾಣಿ
22. | ‘‘ಶಹತೂಶ್ ಶಾಲು’’ ಗಳ ಗುಣಮಟ್ಟ ಮತ್ತು ಬೇಡಿಕೆಯು ಈ ಕೆಳಗಿನ ಯಾವ ಜಾತಿಯ ಚಿಗರೆ/ಹುಲ್ಲೆಗಳಿಗೆ ಅಪಾಯವನ್ನುಂಟು ಮಾಡಿದೆ? | |
(ಎ) | ಬ್ಲಾಕ್ ಬಕ್ | |
(ಬಿ) | ಚಿರು (ಟಿಬೇಟಿಯನ್ ಹುಲ್ಲೆ) | |
(ಸಿ) | ಗೋವಾ ಹುಲ್ಲೆ | |
(ಡಿ) | ಗೋಟ್ ಹುಲ್ಲೆ |
CORRECT ANSWER
(ಬಿ) ಚಿರು (ಟಿಬೇಟಿಯನ್ ಹುಲ್ಲೆ)
23. | ಈ ಕೆಳಗಿನವುಗಳಲ್ಲಿನ ಯಾವುದು ಭಾರತದಲ್ಲಿ ಮ್ಯೂಚುಯಲ್ ಫಂಡ್ ಗಳನ್ನು ನಿಯಂತ್ರಿಸುತ್ತದೆ ? | |
(ಎ) | ಆರ್‌ಬಿಐ (RBI) | |
(ಬಿ) | ಸೆಬಿ (SEBI) | |
(ಸಿ) | ನಬಾರ್ಡ್ (NABARD) | |
(ಡಿ) | ಆಮ್ಫಿ(AMFI) |
CORRECT ANSWER
(ಬಿ) ಸೆಬಿ (SEBI)
24. | ಈ ಕೆಳಗಿನ ದೇಶಗಳಲ್ಲಿ ಯಾವುದು ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ ? | |
(ಎ) | ಯು.ಎಸ್.ಎ. (USA) | |
(ಬಿ) | ಇಯು (EU) | |
(ಸಿ) | ಚೀನಾ | |
(ಡಿ) | ಜಪಾನ್ |
CORRECT ANSWER
(ಬಿ) ಇಯು (EU)
25. | ಈ ಕೆಳಗಿನವುಗಳಲ್ಲಿ ಯಾವುದು ಸಾಂಸ್ಥಿಕ ಆಡಳಿತದ (corporate governance) ಅಡಿಯಲ್ಲಿ ಬರುವುದಿಲ್ಲ ? | |
(ಎ) | ಷೇರುದಾರರ ಹಕ್ಕುಗಳ ನಿರ್ವಹಣೆ | |
(ಬಿ) | ಟ್ರಸ್ಟೀಶಿಪ್ | |
(ಸಿ) | ನೈತಿಕ ವ್ಯಾಪಾರ ನಡವಳಿಕೆ | |
(ಡಿ) | ಲಾಭ ಗರಿಷ್ಠೀಕರಣ |
CORRECT ANSWER
(ಡಿ) ಲಾಭ ಗರಿಷ್ಠೀಕರಣ
26. | ಭಾರತದ ಬ್ಯಾಂಕಿಂಗ್ ರಚನೆಯಲ್ಲಿ ಕೊನೆಯ ರೆಸಾರ್ಟ್‌ನ ಸಾಲಗಾರ ಯಾರು ? | |
(ಎ) | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
(ಬಿ) | ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ | |
(ಸಿ) | ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾ | |
(ಡಿ) | ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ |
CORRECT ANSWER
(ಬಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
27. | ನಗರ ಸಹಕಾರಿ ಬ್ಯಾಂಕುಗಳ ಆಡಳಿತ ನಡೆಸುವುದು | |
(ಎ) | ರಾಜ್ಯ ಸರ್ಕಾರಗಳು | |
(ಬಿ) | ಆರ್‌ಬಿಐ | |
(ಸಿ) | (ಎ) ಮತ್ತು (ಬಿ) ಎರಡೂ | |
(ಡಿ) | ಕೇಂದ್ರ ಸರ್ಕಾರ |
CORRECT ANSWER
(ಸಿ) (ಎ) ಮತ್ತು (ಬಿ) ಎರಡೂ
28. | ಯುಡಿವೈಎಎಂಐ (UDYAMI) ಸಹಾಯವಾಣಿ ಇದಕ್ಕಾಗಿ | |
(ಎ) | ದೊಡ್ಡ ಬಂಡವಾಳ ಕೈಗಾರಿಕೆಗಳಿಗೆ | |
(ಬಿ) | ಮಹಿಳಾ ಉದ್ಯಮಿಗಳಿಗೆ | |
(ಸಿ) | ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸುವುದಕ್ಕೆ | |
(ಡಿ) | ಸೂಕ್ಷ್ಮ ಅಥವಾ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಉದ್ಯಮಗಳಿಗೆ |
CORRECT ANSWER
(ಡಿ) ಸೂಕ್ಷ್ಮ ಅಥವಾ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಶ್ರೇಣಿಯ ಉದ್ಯಮಗಳಿಗೆ
29. | ಭಾರತದಲ್ಲಿ RTGS ವಹಿವಾಟಿನ ಮೇಲು ಮಿತಿ ಏನು ? | |
(ಎ) | ₹ 5 ಲಕ್ಷ | |
(ಬಿ) | ₹ 10 ಲಕ್ಷ | |
(ಸಿ) | ₹ 15 ಲಕ್ಷ | |
(ಡಿ) | ಯಾವುದೇ ಮೇಲು ಮಿತಿ ಇಲ್ಲ |
CORRECT ANSWER
(ಡಿ) ಯಾವುದೇ ಮೇಲು ಮಿತಿ ಇಲ್ಲ
30. | ಈ ಕೆಳಗಿನವುಗಳಲ್ಲಿ ಯಾವ ಕ್ಷಾರವು (alkane) ಮನೆ ಬಳಕೆಯಲ್ಲಿರುವ ರೆಫ್ರಿಜರೇಟರ್ ಮತ್ತು ಫ್ರೀಜರ್ಗಳಲ್ಲಿ ಹ್ಯಾಲೊಮೆಥೇನ್ ಗಳನ್ನು ಕ್ಷೀಣಿಸುವ ಓಜೋನ್ ಪದರವನ್ನು ಹೆಚ್ಚಾಗಿ ಬದಲಾಯಿಸಲಾಗಿದೆ ? | |
(ಎ) | ಮಿಥೇನ್ | |
(ಬಿ) | ಪ್ರೊಪೇನ್ | |
(ಸಿ) | ಬ್ಯುಟೇನ್ | |
(ಡಿ) | ಈಥೇನ್ |
CORRECT ANSWER
(ಸಿ) ಬ್ಯುಟೇನ್
31. | ಮೊಬೈಲ್ ಫೋನ್ ಗಳಿಂದ ಉತ್ಪತ್ತಿಯಾಗುವ ಇ-ತ್ಯಾಜ್ಯಗಳಲ್ಲಿ ಈ ಕೆಳಗಿನ ಯಾವ ಲೋಹ ಹೇರಳವಾಗಿದೆ ? | |
(ಎ) | ತಾಮ್ರ | |
(ಬಿ) | ಬೆಳ್ಳಿ | |
(ಸಿ) | ಪಲ್ಲಾಡಿಯಮ್ | |
(ಡಿ) | ಚಿನ್ನ |
CORRECT ANSWER
(ಎ) ತಾಮ್ರ
32. | ಈ ಕೆಳಗಿನವರುಗಳಲ್ಲಿ ಅಂಕಣಕಾರ ಮತ್ತು ಸ್ಪೀಕರ್ ಆಗಿ ಬದಲಾಗುವ ಮುನ್ನ ಹೂಡಿಕೆದಾರ ಬ್ಯಾಂಕರ್ ಆಗಿದ್ದ ಪ್ರಸಿದ್ಧ ಲೇಖಕರಾರು ? | |
(ಎ) | ಅರವಿಂದ್ ಅಡಿಗ | |
(ಬಿ) | ಚೇತನ್ ಭಗತ್ | |
(ಸಿ) | ಜುಂಪಾ ಲಹರಿ | |
(ಡಿ) | ಕಿರಣ್ ದೇಸಾಯಿ |
CORRECT ANSWER
(ಬಿ) ಚೇತನ್ ಭಗತ್
33. | ಸೌರಕೋಶಗಳ / ಫಲಕಗಳ ಬಗ್ಗೆ ತಪ್ಪಾದ ಹೇಳಿಕೆಯನ್ನು ಸೂಚಿಸಿ/ಆರಿಸಿ, | |
(ಎ) | ಅವುಗಳನ್ನು ಕೃತಕ ಉಪಗ್ರಹಗಳಲ್ಲಿ ಬಳಸಲಾಗುತ್ತದೆ. | |
(ಬಿ) | ಒಳಗೆ ಚಲಿಸುವ ಭಾಗಗಳಿಂದಾಗಿ ಅವುಗಳಿಗೆ ನಿಯಮಿತ ನಿರ್ವಹಣೆ ಅಗತ್ಯ. | |
(ಸಿ) | ಕೋಶಗಳ ಪರಸ್ಪರ ಸಂಪರ್ಕಕ್ಕಾಗಿ ಬೆಳ್ಳಿಯನ್ನು ಬಳಸಲಾಗುತ್ತದೆ. | |
(ಡಿ) | ಅದರ ದೇಶೀಯ ಬಳಕೆ ವೆಚ್ಚದ ಅಂಶಕ್ಕೆ ಸೀಮಿತವಾಗಿದೆ. |
CORRECT ANSWER
(ಬಿ) ಒಳಗೆ ಚಲಿಸುವ ಭಾಗಗಳಿಂದಾಗಿ ಅವುಗಳಿಗೆ ನಿಯಮಿತ ನಿರ್ವಹಣೆ ಅಗತ್ಯ.
34. | ಈ ಕೆಳಗಿನವುಗಳಲ್ಲಿ ಸಂಪೂರ್ಣವಾಗಿ ಭಾರತೀಯರು ನಿರ್ವಹಿಸಿದ ಮೊದಲ ಬ್ಯಾಂಕ್ ಯಾವುದು ? | |
(ಎ) | ಔದ್ (Oudh) ವಾಣಿಜ್ಯ ಬ್ಯಾಂಕ್ | |
(ಬಿ) | ಪಂಜಾಬ್ ನ್ಯಾಷನಲ್ ಬ್ಯಾಂಕ್ | |
(ಸಿ) | ಬ್ಯಾಂಕ್ ಆಫ್ ಇಂಡಿಯಾ | |
(ಡಿ) | ಅಲಹಾಬಾದ್ ಬ್ಯಾಂಕ್ |
CORRECT ANSWER
(ಬಿ) ಪಂಜಾಬ್ ನ್ಯಾಷನಲ್ ಬ್ಯಾಂಕ್
35. | ತೀವ್ರವಾದ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಸರ್ಕಾರವು ಗುರುತಿಸಿರುವ ಭಾರತದ ನಾಲ್ಕು ಹವಳದ ಬಂಡೆಗಳ ಪ್ರದೇಶದ ಪೈಕಿ ಈ ಕೆಳಗಿನವುಗಳಲ್ಲಿ ಯಾವುದು ಅಲ್ಲ? | |
(ಎ) | ಮನ್ನಾರ್ ಕೊಲ್ಲಿ | |
(ಬಿ) | ಖಂಬಾತ್ ಕೊಲ್ಲಿ | |
(ಸಿ) | ಲಕ್ಷದ್ವೀಪಗಳು | |
(ಡಿ) | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು |
CORRECT ANSWER
(ಬಿ) ಖಂಬಾತ್ ಕೊಲ್ಲಿ
36. | ಈ ಕೆಳಗಿನವುಗಳಲ್ಲಿ ಯಾವ ಪ್ರೋಗ್ರಾಮಿಂಗ್ ಭಾಷೆಯನ್ನು ಪ್ರತ್ಯೇಕವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಗಾಗಿ ಬಳಸಲಾಗುತ್ತದೆ ? | |
(ಎ) | ಸಿ (C) | |
(ಬಿ) | ಜಾವಾ (Java) | |
(ಸಿ) | ಜೆಟುಇಇ (J2EE) | |
(ಡಿ) | ಪ್ರೊಲಾಗ್ (Prolog) |
CORRECT ANSWER
(ಡಿ) ಪ್ರೋಲಾಗ್ (Prolog)
37. | ಕಂಪ್ಯೂಟರ್ ನಲ್ಲಿ ಫೈರ್ವಾಲ್ ಅನ್ನು ಯಾವುದಕ್ಕೆ ಬಳಸಲಾಗುತ್ತದೆ? | |
(ಎ) | ಭದ್ರತೆ | |
(ಬಿ) | ಡೇಟಾ ಪ್ರಸರಣ/ಸಂಚಾರಣೆ | |
(ಸಿ) | ದೃಢೀಕರಣ | |
(ಡಿ) | ಮೇಲ್ವಿಚಾರಣೆ |
CORRECT ANSWER
(ಎ) ಭದ್ರತೆ
38. | ಕಂಪ್ಯೂಟರ್ ಪ್ರಪಂಚದಲ್ಲಿ, ಟ್ರೋಜನ್ ಏನನ್ನು ಸೂಚಿಸುತ್ತದೆ? | |
(ಎ) | ವೈರಸ್ | |
(ಬಿ) | ಮಾಲ್‌ವೇರ್ | |
(ಸಿ) | ವರ್ಮ್ | |
(ಡಿ) | ಸ್ಪಯ್‌ವೇರ್ |
CORRECT ANSWER
(ಬಿ) ಮಾಲ್‌ವೇರ್
39. | ಈ ಕೆಳಗಿನ ಯಾವ ರಾಜ್ಯಗಳಲ್ಲಿ ಹುಲಿ ಸಂರಕ್ಷಣಾ ಪ್ರದೇಶವಿದ್ದು, ಇದು ವಿಶ್ವ ಪರಂಪರೆಯ ತಾಣವೂ ಸಹ ಆಗಿದೆ ? | |
(ಎ) | ರಾಜಸ್ಥಾನ | |
(ಬಿ) | ಅಸ್ಸಾಂ | |
(ಸಿ) | ಮಧ್ಯಪ್ರದೇಶ | |
(ಡಿ) | ಉತ್ತರಪ್ರದೇಶ |
CORRECT ANSWER
(ಬಿ) ಅಸ್ಸಾಂ
40. | ಈ ಕೆಳಗಿನವುಗಳಲ್ಲಿ ಯಾವುದು ಓಜೋನ್ ಸವಕಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ? | |
(ಎ) | ಹೈಡ್ರೋಜನ್ | |
(ಬಿ) | ಕಾರ್ಬನ್ | |
(ಸಿ) | ಕ್ಲೋರಿನ್ | |
(ಡಿ) | ಫ್ಲೋರಿನ್ |
CORRECT ANSWER
(ಸಿ) ಕ್ಲೋರಿನ್
41. | ಅಂತರ್ಜಾಲದಲ್ಲಿ ಮೊದಲು ಹುಡುಕುವ ಇಂಜಿನ್ (first search engine) ಯಾವುದು ? | |
(ಎ) | ಗೂಗಲ್ | |
(ಬಿ) | ಆರ್ಕಿ | |
(ಸಿ) | ಆಲ್ಟವಿಸ್ತಾ | |
(ಡಿ) | ಡಬ್ಲ್ಯೂಎಐಎಸ್ |
CORRECT ANSWER
(ಬಿ) ಆರ್ಕಿ
42. | 1990 ರಲ್ಲಿ ಆವಿಷ್ಕರಿಸಿದ ಮೊದಲ ವೆಬ್‌ಬ್ರೌಸರ್ ಯಾವುದು ? | |
(ಎ) | ಇಂಟರ್‌ನೆಟ್ ಎಕ್ಸ್‌ಪ್ಲೋರರ್ | |
(ಬಿ) | ಮೊಸಾಯಿಕ್ | |
(ಸಿ) | ಮೊಜಿಲ್ಲಾ | |
(ಡಿ) | ನೆಕ್ಸಸ್ |
CORRECT ANSWER
(ಡಿ) ನೆಕ್ಸಸ್
43. | ಕುಗ್ಗುವ ಮತ್ತು ವರ್ಚುಯಲ್ ಚಿತ್ರವನ್ನು ಪಡೆಯಲು ವಸ್ತುವನ್ನು ಇದರ ಮುಂದೆ ಇಡಬಹುದು ? | |
(ಎ) | ನಿಮ್ನ ದರ್ಪಣ | |
(ಬಿ) | ಸಾಮಾನ್ಯ ದರ್ಪಣ | |
(ಸಿ) | ಪೀನ (ಬಾಹ್ಯಗೋಳ) ದರ್ಪಣ | |
(ಡಿ) | ಈ ಎಲ್ಲಾ ದರ್ಪಣಗಳು |
CORRECT ANSWER
(ಸಿ) ಪೀನ (ಬಾಹ್ಯಗೋಳ) ದರ್ಪಣ
44. | ಯಾವಾಗ ಬೆಳಕಿನ ಕಿರಣಗಳು ಸಾಂಧ್ರ ಮಾಧ್ಯಮದಿಂದ ಅಪರೂಪದ ಮಾಧ್ಯಮಕ್ಕೆ ಹಾದು ಹೋಗುತ್ತದೋ ಆಗ ? | |
(ಎ) | ಅದು ಅಪವೌಲ್ಯಗೊಳ್ಳುತ್ತದೆ | |
(ಬಿ) | ಅದು ಸಾಮಾನ್ಯದ ಕಡೆ ಬಾಗುತ್ತದೆ | |
(ಸಿ) | ಅದು ಸಾಮಾನ್ಯದಿಂದ ದೂರ ಬಾಗುತ್ತದೆ | |
(ಡಿ) | ಅದು 90 ಡಿಗ್ರಿಗೆ ಬಾಗುತ್ತದೆ |
CORRECT ANSWER
(ಸಿ) ಅದು ಸಾಮಾನ್ಯದಿಂದ ದೂರ ಬಾಗುತ್ತದೆ
45. | ಮಾನವ ದೇಹದಲ್ಲಿರುವ ಅತಿ ಚಿಕ್ಕ ಗ್ರಂಥಿ ಯಾವುದು ? | |
(ಎ) | ಪಿಟ್ಯುಟರಿ ಗ್ರಂಥಿ | |
(ಬಿ) | ಮೂತ್ರಜನಕಾಂಗದ (Adrenal) ಗ್ರಂಥಿ | |
(ಸಿ) | ಪೀನಲ್ ಗ್ರಂಥಿ | |
(ಡಿ) | ಮೆದೋಜೀರಕ ಗ್ರಂಥಿ (Pancreas) |
CORRECT ANSWER
(ಸಿ) ಪೀನಲ್ ಗ್ರಂಥಿ
46. | ನಾವು ಡೇಟಾವನ್ನು ಎಕ್ಸಲ್ ಸ್ಪ್ರೆಡ್ ಶೀಟ್ ನ ಮೂಲ ಘಟಕಗಳಲ್ಲಿ ನಮೂದಿಸುವುದನ್ನು ಏನೆಂದು ಕರೆಯಲಾಗುತ್ತದೆ ? | |
(ಎ) | ಟ್ಯಾಬ್ | |
(ಬಿ) | ಬಾಕ್ಸ್ | |
(ಸಿ) | ಸೆಲ್ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಸಿ) ಸೆಲ್
47. | ಸಂವಹನ ಪ್ರಕ್ರಿಯೆಯಲ್ಲಿ ಯಾವುದು ಮೊದಲ ಹಂತವಾಗಿದೆ ? | |
(ಎ) | ಎನ್ಕೋಡಿಂಗ್ | |
(ಬಿ) | ಸಂದೇಶ | |
(ಸಿ) | ಡಿಕೋಡಿಂಗ್ | |
(ಡಿ) | ರಿಸೀವಿಂಗ್ |
CORRECT ANSWER
(ಎ) ಎನ್ಕೋಡಿಂಗ್
48. | ಅಸೆಸ್ಸರೀಸ್ (accessories)/ ಬಿಡಿಭಾಗಗಳನ್ನು ಕಂಪ್ಯೂಟರ್ ನಲ್ಲಿ ಸಂಪರ್ಕಿಸುವ /ಜೋಡಿಸುವ ಸ್ಥಳವನ್ನು ಏನೆನ್ನುತ್ತಾರೆ ? | |
(ಎ) | ರಿಂಗ್ | |
(ಬಿ) | ಪೊರ್ಟ್ | |
(ಸಿ) | ಬಸ್ | |
(ಡಿ) | ಜಿಪ್ |
CORRECT ANSWER
(ಬಿ) ಪೊರ್ಟ್
49. | ಯಾವುದರ ಮೂಲಕ ಇಂಟರ್‌ನೆಟ್‌ನಲ್ಲಿ, ಕಂಪ್ಯೂಟರ್ ಅನ್ನು ಅನನ್ಯವಾಗಿ ಗುರುತಿಸಲಾಗುವುದು ? | |
(ಎ) | ಮೆಮೊರಿ ಅಡ್ರೆಸ್ | |
(ಬಿ) | ಇಮೇಲ್ ಅಡ್ರೆಸ್ | |
(ಸಿ) | ಐಪಿ ಅಡ್ರೆಸ್ | |
(ಡಿ) | ವರ್ಚುಯಲ್ ಅಡ್ರೆಸ್ |
CORRECT ANSWER
(ಸಿ) ಐಪಿ ಅಡ್ರೆಸ್
50. | ಇತ್ತೀಚೆಗೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೂತಾನ್ ನಲ್ಲಿ ಕೆಳಗಿನ ಯಾವ ಕಾರ್ಡ್ ಬಿಡುಗಡೆಗೊಳಿಸಿದರು ? | |
(ಎ) | ಡಿಸ್ಕವರ್ | |
(ಬಿ) | ರೂಪೇ | |
(ಸಿ) | ಚೇಸ್ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಬಿ) ರೂಪೇ
51. | ಭಾರತೀಯ ರೈಲ್ವೆಯ ಉದಯ್ ಎಕ್ಸ್‌ಪ್ರೆಸ್ (ಡಬಲ್ ಡೆಕ್ಕರ್ ಏರ್ ಕಂಡೀಷನ್ಡ್ ಯಾತ್ರಿ) ಈ ಕೆಳಗಿನವುಗಳ ನಡುವೆ ಚಲಿಸುತ್ತದೆ? | |
(ಎ) | ವಿಶಾಖಪಟ್ಟಣ ಮತ್ತು ವಿಜಯವಾಡ | |
(ಬಿ) | ಬೆಂಗಳೂರು ಮತ್ತು ಕೊಯಂಬತ್ತೂರು | |
(ಸಿ) | (ಎ) ಮತ್ತು (ಬಿ) ಎರಡೂ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಸಿ) (ಎ) ಮತ್ತು (ಬಿ) ಎರಡೂ
52. | ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2019 ರಲ್ಲಿ, ‘‘ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ ಪ್ರಶಸ್ತಿ’’ ಯನ್ನು ನೀಡಲಾಗಿದ್ದು | |
(ಎ) | ಕೇರಳ | |
(ಬಿ) | ಅಸ್ಸಾಂ | |
(ಸಿ) | ಉತ್ತರಾಖಂಡ್ | |
(ಡಿ) | ಛತ್ತೀಸ್ಗಡ |
CORRECT ANSWER
(ಸಿ) ಉತ್ತರಾಖಂಡ್
53. | ಜೀವಕೋಶಗಳು ಜೀವನದ ಮೂಲಭೂತ ಘಟಕಗಳಾಗಿವೆ. ಈ ಕೆಳಗಿನವುಗಳಲ್ಲಿ ಯಾವುದು ಜೀವಕೋಶದಲ್ಲಿದೆ ? | |
(ಎ) | ರೈಬೋಸೋಮ್ | |
(ಬಿ) | ಗೊಲ್ಗಿ ಅಪೆರೆಟಸ್ | |
(ಸಿ) | ಲೈಸೋಸೋಮ್ | |
(ಡಿ) | ಇವುಗಳಲ್ಲಿ ಎಲ್ಲವೂ |
CORRECT ANSWER
(ಡಿ) ಇವುಗಳಲ್ಲಿ ಎಲ್ಲವೂ
54. | ಈ ಕೆಳಗಿನವುಗಳಲ್ಲಿ ಯಾವುದು ವೈರಲ್ ರೋಗವಲ್ಲ ? | |
(ಎ) | ಏಡ್ಸ್ | |
(ಬಿ) | ಎಬೊಲಾ | |
(ಸಿ) | ಸಾರ್ಸ್ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಡಿ) ಇವುಗಳಲ್ಲಿ ಯಾವುದೂ ಅಲ್ಲ
55. | ಮನುಷ್ಯನ ದೇಹದಲ್ಲಿರುವ ಅತ್ಯಂತ ಉದ್ದದ ಮೂಳೆ ಯಾವುದು? | |
(ಎ) | ಎಲುಬು (femur) | |
(ಬಿ) | ಕಾಲರ್ ಮೂಳೆ | |
(ಸಿ) | ಎದೆ ಮೂಳೆ | |
(ಡಿ) | ತಲೆಬುರುಡೆ |
CORRECT ANSWER
(ಎ) ಎಲುಬು (femur)
56. | ವೈರಾಯ್ಡುಗಳು ಈ ಕೆಳಗಿನ ಯಾವುದರಲ್ಲಿ ರೋಗವನ್ನುಂಟು ಮಾಡುತ್ತದೆ? | |
(ಎ) | ಸಸ್ಯಗಳು | |
(ಬಿ) | ಪ್ರಾಣಿಗಳು | |
(ಸಿ) | ಮಾನವರು | |
(ಡಿ) | (ಎ) ಮತ್ತು (ಬಿ) ಎರಡೂ |
CORRECT ANSWER
(ಎ) ಸಸ್ಯಗಳು
57. | ಮಾನವ ಕಣ್ಣಿನ ರೆಟಿನಾ ದಿಂದ ರೂಪುಗೊಳ್ಳುವ ಚಿತ್ರ | |
(ಎ) | ವಾಸ್ತವ ಮತ್ತು ನೆಟ್ಟಗೆ | |
(ಬಿ) | ನೈಜ ಮತ್ತು ತಲೆಕೆಳಗಾದ | |
(ಸಿ) | ವಾಸ್ತವ ಮತ್ತು ತಲೆಕೆಳಗಾದ | |
(ಡಿ) | ನೈಜ ಮತ್ತು ನೆಟ್ಟಗೆ |
CORRECT ANSWER
(ಬಿ) ನೈಜ ಮತ್ತು ತಲೆಕೆಳಗಾದ
58. | ಮಂಜು, ಹೊಗೆಯ ಧೂಳಿನಿಂದ ಕೆಳಗಿನ ಯಾವ ಬಣ್ಣಗಳು ಕನಿಷ್ಠ ಚದುರುತ್ತವೆ ? | |
(ಎ) | ನೇರಳೆ | |
(ಬಿ) | ನೀಲಿ | |
(ಸಿ) | ಕೆಂಪು | |
(ಡಿ) | ಹಳದಿ |
CORRECT ANSWER
(ಸಿ) ಕೆಂಪು
59. | ಮಾನವನ ಕಣ್ಣಿಗೆ ಪ್ರವೇಶಿಸುವ ಬೆಳಕಿನ ಪ್ರಮಾಣವು ಯಾವುದರಿಂದ ನಿಯಂತ್ರಿಸಲ್ಪಡುತ್ತದೆ? | |
(ಎ) | ಸಿಲಿಯರಿ ಸ್ನಾಯುಗಳು | |
(ಬಿ) | ಪ್ಯೂಪಿಲ್ | |
(ಸಿ) | ಕಾರ್ನಿಯಾ | |
(ಡಿ) | ಐರಿಸ್ |
CORRECT ANSWER
(ಬಿ) ಪ್ಯೂಪಿಲ್
60. | ಫ್ಯೂಸ್ ತಂತಿಯನ್ನು ಯಾವ ತಂತಿಯಲ್ಲಿ ಸೇರಿಸಲಾಗುವುದು ? | |
(ಎ) | ಲೈವ್ ತಂತಿ | |
(ಬಿ) | ನ್ಯೂಟ್ರಲ್ ತಂತಿಯಲ್ಲಿ | |
(ಸಿ) | ಅರ್ಥ್ ತಂತಿಯಲ್ಲಿ | |
(ಡಿ) | ಯಾವುದೇ ಲೈನ್ ನಲ್ಲಿ ಸಂಪರ್ಕಿಸಬಹುದು |
CORRECT ANSWER
(ಎ) ಲೈವ್ ತಂತಿ
61. | ರಿಯೋಸ್ಟಾಟ್ ನ ಉದ್ದೇಶವೇನು ? | |
(ಎ) | ಕೇವಲ ಪ್ರವಾಹದ ಪ್ರಮಾಣವನ್ನು ಹೆಚ್ಚಿಸುತ್ತದೆ. | |
(ಬಿ) | ಕೇವಲ ಪ್ರವಾಹದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. | |
(ಸಿ) | ಪ್ರವಾಹದ ಪ್ರಮಾಣವನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆಗೊಳಿಸುತ್ತದೆ. | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಸಿ) ಪ್ರವಾಹದ ಪ್ರಮಾಣವನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆಗೊಳಿಸುತ್ತದೆ.
62. | ಯಾವ ಶಕ್ತಿಯ ಮೂಲವನ್ನು ಭಾರತದಲ್ಲಿ ಅತೀ ಹೆಚ್ಚು ಬಳಸಲಾಗುತ್ತದೆ ? | |
(ಎ) | ಸಿಎನ್‌ಜಿ | |
(ಬಿ) | ಎಲ್‌ಪಿಜಿ | |
(ಸಿ) | ಕಲ್ಲಿದ್ದಲು | |
(ಡಿ) | ಜೈವಿಕ ಅನಿಲ |
CORRECT ANSWER
(ಸಿ) ಕಲ್ಲಿದ್ದಲು
63. | ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದಿಸಲು ಯಾವ ವಿಧಾನವನ್ನು ಬಳಸಲಾಗುತ್ತದೆ? | |
(ಎ) | ಚಾರ್ಜ್ ಮಾಡಬಹುದಾದ ಕೋಶಗಳನ್ನು ಬಿಸಿ ಮಾಡುವ ಮೂಲಕ | |
(ಬಿ) | ಕುದಿಯುವ ನೀರಿನ ಮೂಲಕ | |
(ಸಿ) | ಶಾಖ ಶಕ್ತಿಯಿಂದ ಪಿಸ್ಟನ್‌ಗಳನ್ನು ತಳ್ಳುವ ಮೂಲಕ | |
(ಡಿ) | ಇವುಗಳಲ್ಲಿ ಯಾವುದಾದರೂ |
CORRECT ANSWER
(ಬಿ) ಕುದಿಯುವ ನೀರಿನ ಮೂಲಕ
64. | ಭಾರತದ ಸಂವಿಧಾನದ ಪ್ರಕಾರ ಮತದಾನದ ಕನಿಷ್ಠ ವಯಸ್ಸು ಎಷ್ಟು ? | |
(ಎ) | 16 ವರ್ಷಗಳು | |
(ಬಿ) | 18 ವರ್ಷಗಳು | |
(ಸಿ) | 21 ವರ್ಷಗಳು | |
(ಡಿ) | 25 ವರ್ಷಗಳು |
CORRECT ANSWER
(ಬಿ) 18 ವರ್ಷಗಳು
65. | ಕರ್ನಾಟಕ ವಿಧಾನಸಭೆಯಲ್ಲಿ ಎಷ್ಟು ನಾಮನಿರ್ದೇಶಿತ ಸದಸ್ಯರುಗಳಿದ್ದಾರೆ ? | |
(ಎ) | 1 | |
(ಬಿ) | 2 | |
(ಸಿ) | 3 | |
(ಡಿ) | 4 |
CORRECT ANSWER
(ಎ) 1
66. | ಭಾರತೀಯ ಸಂವಿಧಾನವು ಯಾವಾಗ ಜಾರಿಗೊಂಡಿತು ? | |
(ಎ) | 26 ಜನವರಿ, 1950 | |
(ಬಿ) | 26 ಜನವರಿ, 1947 | |
(ಸಿ) | 15 ಆಗಸ್ಟ್, 1947 | |
(ಡಿ) | 1 ಮೇ 1946 |
CORRECT ANSWER
(ಎ) 26 ಜನವರಿ, 1950
67. | ಜಪಾನ್ ಶಾಸಕಾಂಗವು ಈ ಕೆಳಗಿನ ಯಾವ ಹೆಸರಿನಿಂದ ಕರೆಯಲ್ಪಡುತ್ತದೆ ? | |
(ಎ) | ಲೋಕ ಸಭೆ | |
(ಬಿ) | ಡಯಟ್ | |
(ಸಿ) | ಕಾಂಗ್ರೆಸ್ | |
(ಡಿ) | ಸಂಸತ್ತು |
CORRECT ANSWER
(ಬಿ) ಡಯಟ್
68. | ಯಾವ ಉಪಕರಣವು ಸರ್ಕ್ಯುಟ್ ನಲ್ಲಿ ವಿದ್ಯುತ್ ಪ್ರವಾಹದ ಉಪಸ್ಥಿತಿಯನ್ನು ಪತ್ತೆ ಮಾಡುತ್ತದೆ ? | |
(ಎ) | ಗ್ಯಾಲ್ವನೋಮೀಟರ್ | |
(ಬಿ) | ಮೋಟಾರ್ | |
(ಸಿ) | ಜನರೇಟರ್ | |
(ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಎ) ಗ್ಯಾಲ್ವನೋಮೀಟರ್
69. | ಬೆಳಕಿನ ವಿದ್ಯಮಾನದಲ್ಲಿ (optical phenomena), ನಕ್ಷತ್ರಗಳು ಮಿನುಗಲು ಕಾರಣವೇನು ? | |
(ಎ) | ವಾತಾವರಣದ ಪ್ರತಿಫಲನ | |
(ಬಿ) | ಒಟ್ಟು ಪ್ರತಿಫಲನ | |
(ಸಿ) | ವಾತಾವರಣದ ವಕ್ರೀಭವನ | |
(ಡಿ) | ಒಟ್ಟು ವಕ್ರೀಭವನ |
CORRECT ANSWER
(ಸಿ) ವಾತಾವರಣದ ವಕ್ರೀಭವನ
70. | ರಕ್ತವು ಯಾವ ದ್ರವ ಮಾಧ್ಯಮವನ್ನು ಹೊಂದಿರುತ್ತದೆ ? | |
(ಎ) | ದುಗ್ದರಸ (Lymph) | |
(ಬಿ) | ಪ್ಲೇಟ್‌ಲೇಟ್‌ಗಳು(Platelets) | |
(ಸಿ) | ಪ್ಲಾಸ್ಮಾ | |
(ಡಿ) | ಇವುಗಳಲ್ಲಿ ಎಲ್ಲವೂ |
CORRECT ANSWER
(ಸಿ) ಪ್ಲಾಸ್ಮಾ
71. | ಇವರುಗಳಲ್ಲಿ ಯಾರು ರಾಜ್ಯದ ರಾಜ್ಯಪಾಲರುಗಳನ್ನು ನೇಮಿಸುತ್ತಾರೆ ? | |
(ಎ) | ಪ್ರಧಾನಮಂತ್ರಿಗಳು | |
(ಬಿ) | ರಾಷ್ಟ್ರಪತಿ | |
(ಸಿ) | ಗೃಹ ಸಚಿವರು | |
(ಡಿ) | ಭಾರತದ ಮುಖ್ಯ ನ್ಯಾಯಮೂರ್ತಿ |
CORRECT ANSWER
(ಬಿ) ರಾಷ್ಟ್ರಪತಿ
72. | ಯಾವ ಆರ್ಟಿಕಲ್ ಮೇರೆಗೆ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಅಗತ್ಯವಿರುವ ರಿಟ್ಸ್ ನ್ನು ವಿತರಿಸಲು ಉಚ್ಛ ನ್ಯಾಯಾಲಯಗಳಿಗೆ ಅಧಿಕಾರವನ್ನು ನೀಡಲಾಗಿದೆ ? | |
(ಎ) | ಆರ್ಟಿಕಲ್ 225 | |
(ಬಿ) | ಆರ್ಟಿಕಲ್ 226 | |
(ಸಿ) | ಆರ್ಟಿಕಲ್ 236 | |
(ಡಿ) | ಆರ್ಟಿಕಲ್ 296 |
CORRECT ANSWER
(ಬಿ) ಆರ್ಟಿಕಲ್ 226
73. | ಬಿಟ್ಟು ಹೋಗಿರುವ ಸಂಖ್ಯೆಯನ್ನು ತುಂಬಿರಿ. | |
1, 4, 9, 16, 25, 36, 49, ____________ | ||
(ಎ) | 54 | |
(ಬಿ) | 56 | |
(ಸಿ) | 64 | |
(ಡಿ) | 81 |
CORRECT ANSWER
(ಸಿ) 64
74. | CMW ಯು DNX ಆದರೆ, AKUಏನಾಗುತ್ತದೆ _____?______ | |
(ಎ) | BGL | |
(ಬಿ) | BGQ | |
(ಸಿ) | BLV | |
(ಡಿ) | BLQ |
CORRECT ANSWER
(ಸಿ) BLV
75. | ಭಾರತದ ಸಂವಿಧಾನದ 8 ನೇ ಶೆಡ್ಯೂಲ್ ನಲ್ಲಿ ಎಷ್ಟು ಭಾಷೆಗಳನ್ನು ಸೇರಿಸಲಾಗಿದೆ ? | |
(ಎ) | 15 | |
(ಬಿ) | 16 | |
(ಸಿ) | 18 | |
(ಡಿ) | 22 |
CORRECT ANSWER
(ಡಿ) 22
76. | ಭಾರತದ ರಾಷ್ಟ್ರಪತಿಗಳಾಗಲು ಕನಿಷ್ಠ ಅರ್ಹ ವಯಸ್ಸೆಷ್ಟು ? | |
(ಎ) | 25 ವರ್ಷಗಳು | |
(ಬಿ) | 30 ವರ್ಷಗಳು | |
(ಸಿ) | 35 ವರ್ಷಗಳು | |
(ಡಿ) | 50 ವರ್ಷಗಳು |
CORRECT ANSWER
(ಸಿ) 35 ವರ್ಷಗಳು
77. | ಈ ಕೆಳಗಿನವರುಗಳಲ್ಲಿ ಯಾರು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ? | |
(ಎ) | ರಾಷ್ಟ್ರಪತಿ | |
(ಬಿ) | ಉಪ ರಾಷ್ಟ್ರಪತಿ | |
(ಸಿ) | ಪ್ರಧಾನಮಂತ್ರಿ | |
(ಡಿ) | ಭಾರತದ ಮುಖ್ಯ ನ್ಯಾಯಮೂರ್ತಿ |
CORRECT ANSWER
(ಎ) ರಾಷ್ಟ್ರಪತಿ
78. | ರಾಷ್ಟ್ರಪತಿಗಳಿಗಿರುವ ಕ್ಷಮಾದಾನ ನೀಡುವ ಅಧಿಕಾರವನ್ನು, ಭಾರತದ ಸಂವಿಧಾನದ ಯಾವ ಆರ್ಟಿಕಲ್ ನಲ್ಲಿ ವ್ಯಾಖ್ಯಾನಿಸಲಾಗಿದೆ ? | |
(ಎ) | ಆರ್ಟಿಕಲ್ 72 | |
(ಬಿ) | ಆರ್ಟಿಕಲ್ 73 | |
(ಸಿ) | ಆರ್ಟಿಕಲ್ 74 | |
(ಡಿ) | ಆರ್ಟಿಕಲ್ 75 |
CORRECT ANSWER
(ಎ) ಆರ್ಟಿಕಲ್ 72
79. | D > C, C > B ಮತ್ತು B > A ಆದರೆ ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ ? | |
(ಎ) | D > A | |
(ಬಿ) | C > A | |
(ಸಿ) | A > C | |
(ಡಿ) | D > B |
CORRECT ANSWER
(ಸಿ) A > C
80. | ಮಣಿಪುರದ ಅಧಿಕೃತ ಭಾಷೆ ಯಾವುದು ? | |
(ಎ) | ಆಂಗ್ಲಭಾಷೆ | |
(ಬಿ) | ಹಿಂದಿ ಭಾಷೆ | |
(ಸಿ) | ಬೆಂಗಾಲಿ ಭಾಷೆ | |
(ಡಿ) | ಮೇಟಿಲಾನ್ (ಮಣಿಪುರಿ) |
CORRECT ANSWER
(ಡಿ) ಮೇಟಿಲಾನ್ (ಮಣಿಪುರಿ)
81. | 57 ಅಡಿ ಉದ್ದದ ಗೊಮ್ಮಟೇಶ್ವರ ಪ್ರತಿಮೆ ಎಲ್ಲಿದೆ ? | |
(ಎ) | ಬಾದಾಮಿ | |
(ಬಿ) | ಕೊಡಗು | |
(ಸಿ) | ಹಂಪಿ | |
(ಡಿ) | ಶ್ರವಣಬೆಳಗೊಳ |
CORRECT ANSWER
(ಡಿ) ಶ್ರವಣಬೆಳಗೊಳ
82. | 81 : 9:: 144 : ? | |
(ಎ) | 14 | |
(ಬಿ) | 12 | |
(ಸಿ) | 10 | |
(ಡಿ) | 16 |
CORRECT ANSWER
(ಬಿ) 12
83. | ಒಬ್ಬ ವ್ಯಾಪಾರಿ ₹ 400 ಕ್ಕೆ ಕುರ್ಚಿಯನ್ನು ಖರೀದಿಸಿ ಮತ್ತು ಅದನ್ನು ₹ 500 ಕ್ಕೆ ಮಾರಾಟ ಮಾರಿದರೆ ಅವನು ಗಳಿಸುವ ಪ್ರತಿಶತ (%) ಲಾಭಾಂಶ ಎಷ್ಟು ? | |
(ಎ) | 20% | |
(ಬಿ) | 25% | |
(ಸಿ) | 30% | |
(ಡಿ) | 50% |
CORRECT ANSWER
(ಬಿ) 25%
84. | ಒಬ್ಬ ಹುಡುಗ ಪಶ್ಚಿಮಕ್ಕೆ 10 km ನಡೆದು, ಬಲಕ್ಕೆ ತಿರುಗಿ 5 kmನಡೆದು, ಮತ್ತೆ ಬಲಕ್ಕೆ ತಿರುಗಿ 10 km ನಡೆದರೆ, ನಂತರ ಆರಂಭ ಬಿಂದುವಿನಿಂದ ಎಷ್ಟು ದೂರದಲ್ಲಿದ್ದಾನೆ ? | |
(ಎ) | 5 km | |
(ಬಿ) | 10 km | |
(ಸಿ) | 20 km | |
(ಡಿ) | 0 km |
CORRECT ANSWER
(ಎ) 5 km
85. | A ಮತ್ತು B, ಒಂದು ಕೆಲಸವನ್ನು 15 ದಿನಗಳಲ್ಲಿ ಪೂರ್ಣಗೊಳಿಸಿದರೆ, B ಒಬ್ಬನೇ ಆ ಕೆಲಸವನ್ನು ಪೂರ್ಣಗೊಳಿಸಲು 20 ದಿನಗಳನ್ನು ತೆಗೆದುಕೊಳ್ಳುವನು. ಹಾಗಾದರೆ, A ಯು ಆ ಕೆಲಸವನ್ನು ಪೂರ್ಣಗೊಳಿಸಲು ಎಷ್ಟು ದಿನಗಳನ್ನು ತೆಗೆದುಕೊಳ್ಳುವನು ? | |
(ಎ) | 30 ದಿನಗಳು | |
(ಬಿ) | 40 ದಿನಗಳು | |
(ಸಿ) | 50 ದಿನಗಳು | |
(ಡಿ) | 60 ದಿನಗಳು |
CORRECT ANSWER
(ಡಿ) 60 ದಿನಗಳು
86. | ‘‘ಕನ್ನಡ ಕುಲಪುರೋಹಿತ’’ ಎಂದು ಯಾರನ್ನು ಕರೆಯಲಾಗುತ್ತದೆ? | |
(ಎ) | ಗೋವಿಂದ ಪೈ | |
(ಬಿ) | ಉತ್ತರಂಗಿ ಚನ್ನಪ್ಪ | |
(ಸಿ) | ಆಲೂರು ಎ. ವೆಂಕಟರಾವ್ | |
(ಡಿ) | ಮುಡುವಿಡು ಕೃಷ್ಣರಾಯ |
CORRECT ANSWER
(ಸಿ) ಆಲೂರು ಎ. ವೆಂಕಟರಾವ್
87. | ಯಾವ ವರ್ಷದಲ್ಲಿ SEBI ಯು ಪ್ರಾರಂಭವಾಯಿತು ? | |
(ಎ) | 1991 | |
(ಬಿ) | 1992 | |
(ಸಿ) | 1996 | |
(ಡಿ) | 2002 |
CORRECT ANSWER
(ಬಿ) 1992
88. | ಗ್ರ್ಯಾಮಿ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ ? | |
(ಎ) | ಸಾಹಿತ್ಯ | |
(ಬಿ) | ಸಂಗೀತ | |
(ಸಿ) | ವಿಜ್ಞಾನ | |
(ಡಿ) | ಕ್ರೀಡೆ |
CORRECT ANSWER
(ಬಿ) ಸಂಗೀತ
89. | ‘‘ಇಂಡಿಯಾ ಹೌಸ್’’, (ಭಾರತದ ಮನೆ) 1905 ರಲ್ಲಿ ಲಂಡನ್ನಲ್ಲಿ ಯಾರು ಪ್ರಾರಂಭಿಸಿದರು? | |
(ಎ) | ಶ್ಯಾಮ್‌ಜೀ ಕೃಷ್ಣವರ್ಮ | |
(ಬಿ) | ಮೇಡಂ ಬಿಕಾಜಿ ಕಾಮಾ | |
(ಸಿ) | ಮೋತಿಲಾಲ್ ನೆಹರು | |
(ಡಿ) | ಮಹಾತ್ಮಗಾಂಧಿ |
CORRECT ANSWER
(ಎ) ಶ್ಯಾಮ್ ಜೀ ಕೃಷ್ಣವರ್ಮ
90. | ಕುವೆಂಪು ವಿಶ್ವವಿದ್ಯಾಲಯವು ಎಲ್ಲಿದೆ ? | |
(ಎ) | ತುಮಕೂರು | |
(ಬಿ) | ಶಿವಮೊಗ್ಗ | |
(ಸಿ) | ಕಲಬುರ್ಗಿ | |
(ಡಿ) | ಬಳ್ಳಾರಿ |
CORRECT ANSWER
(ಬಿ) ಶಿವಮೊಗ್ಗ
91. | ‘’ಮಾಡು ಇಲ್ಲವೆ ಮಡಿ’’ ಎಂಬ ಘೋಷ ವ್ಯಾಖ್ಯೆ ನೀಡಿದವರು ಯಾರು ? | |
(ಎ) | ಭಗತ್ ಸಿಂಗ್ | |
(ಬಿ) | ಮಹಾತ್ಮಗಾಂಧಿ | |
(ಸಿ) | ಚಂದ್ರಶೇಖರ ಆಜಾದ್ | |
(ಡಿ) | ಸುಭಾಷ್ ಚಂದ್ರ ಬೋಸ್ |
CORRECT ANSWER
(ಬಿ) ಮಹಾತ್ಮಗಾಂಧಿ
92. | ತಾಳಿಕೋಟೆ ಯುದ್ಧವು ಯಾವ ವರ್ಷದಲ್ಲಿ ನಡೆಯಿತು ? | |
(ಎ) | ಕ್ರಿ.ಶ. 1555 | |
(ಬಿ) | ಕ್ರಿ.ಶ. 1560 | |
(ಸಿ) | ಕ್ರಿ.ಶ. 1565 | |
(ಡಿ) | ಕ್ರಿ.ಶ. 1570 |
CORRECT ANSWER
(ಸಿ) ಕ್ರಿ.ಶ. 1565
93. | ‘ಬಾಂಬೆ ಗೆಜೆಟಿಯರ್’ ಅನ್ನು ಮೊದಲ ಬಾರಿಗೆ ಯಾವ ವರ್ಷದಲ್ಲಿ ಪ್ರಕಟಿಸಲಾಯಿತು ? | |
(ಎ) | 1894 | |
(ಬಿ) | 1885 | |
(ಸಿ) | 1856 | |
(ಡಿ) | 1906 |
CORRECT ANSWER
(ಎ) 1894
94. | ‘‘ಕೆಂಪು ಭಾರತೀಯರು’’ (Red Indians) ಯಾವ ಖಂಡದ ಸ್ಥಳೀಯ ನಿವಾಸಿಗಳಾಗಿದ್ದಾರೆ ? | |
(ಎ) | ಏಷ್ಯಾ | |
(ಬಿ) | ಉತ್ತರ ಅಮೆರಿಕಾ | |
(ಸಿ) | ಯೂರೋಪ್ | |
(ಡಿ) | ಆಫ್ರಿಕಾ |
CORRECT ANSWER
(ಬಿ) ಉತ್ತರ ಅಮೆರಿಕಾ
95. | ಈ ಕೆಳಗಿನವುಗಳಲ್ಲಿ ಯಾವುದು ವಿಶ್ವದ ಅತಿದೊಡ್ಡ ದ್ವೀಪವಾಗಿದೆ? | |
(ಎ) | ಗ್ರೇಟ್ ಬ್ರಿಟನ್ | |
(ಬಿ) | ಶ್ರೀಲಂಕಾ | |
(ಸಿ) | ಗ್ರೀನ್ ಲ್ಯಾಂಡ್ | |
(ಡಿ) | ಆಸ್ಟ್ರಿಯಾ |
CORRECT ANSWER
(ಸಿ) ಗ್ರೀನ್ ಲ್ಯಾಂಡ್
96. | ‘ಗೋಬಿ’ ಮರುಭೂಮಿ ಎಲ್ಲಿದೆ ? | |
(ಎ) | ಚಿಲಿ | |
(ಬಿ) | ಚೀನಾ | |
(ಸಿ) | ಉತ್ತರ ಅಮೇರಿಕ | |
(ಡಿ) | ಆಸ್ಟ್ರೇಲಿಯಾ |
CORRECT ANSWER
(ಬಿ) ಚೀನಾ
97. | ಉಪವಾಸ ಮುಷ್ಕರ (ಹಂಗರ್ ಸ್ಟ್ರೈಕ್) ಸಮಯದಲ್ಲಿ ಈ ಕೆಳಗಿನ ಯಾವ ಭಾರತೀಯ ಕ್ರಾಂತಿಕಾರಿಗಳು ಜೈಲಿನಲ್ಲಿ ನಿಧನರಾದರು ? | |
(ಎ) | ಭಗತ್ ಸಿಂಗ್ | |
(ಬಿ) | ಜತಿನ್ ದಾಸ್ | |
(ಸಿ) | ಚಂದ್ರಶೇಖರ್ ಆಜಾದ್ | |
(ಡಿ) | ಸುಖ್ ಬೀರ್ ಸಿಂಗ್ |
CORRECT ANSWER
(ಬಿ) ಜತಿನ್ ದಾಸ್
98. | ರಂಗನತಿಟ್ಟು ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ ? | |
(ಎ) | ಮಂಡ್ಯ | |
(ಬಿ) | ಮೈಸೂರು | |
(ಸಿ) | ರಾಮನಗರ | |
(ಡಿ) | ಚಿಕ್ಕಬಳ್ಳಾಪುರ |
CORRECT ANSWER
(ಎ) ಮಂಡ್ಯ
99. | ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಅತಿಹೆಚ್ಚು ಕಾಫಿಯನ್ನು ಉತ್ಪಾದಿಸಲಾಗುತ್ತದೆ ? | |
(ಎ) | ಕರ್ನಾಟಕ | |
(ಬಿ) | ಕೇರಳ | |
(ಸಿ) | ಅಸ್ಸಾಂ | |
(ಡಿ) | ಪಶ್ಚಿಮ ಬಂಗಾಳ |
CORRECT ANSWER
(ಎ) ಕರ್ನಾಟಕ
100. | ರೋಮ್ ನಗರವು ಯಾವ ನದಿಯ ದಡದಲ್ಲಿದೆ ? | |
(ಎ) | ಡ್ಯಾನ್ಯೂಬೆ (Danube) | |
(ಬಿ) | ಟಿಬರ್ (Tiber) | |
(ಸಿ) | ರೈನ್ (Rhine) | |
(ಡಿ) | ನೈಲ್ (Nile) |
CORRECT ANSWER
(ಬಿ) ಟಿಬರ್ (Tiber)