ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ
|
1. | ಕರ್ನಾಟಕ ರಾಜ್ಯೋತ್ಸವವನ್ನು ಯಾವ ದಿನದಂದು ಆಚರಿಸುತ್ತಾರೆ. |
|
| (ಎ) | ನವೆಂಬರ್ 1 |
| (ಬಿ) | ಅಕ್ಟೋಬರ್ 1 |
| (ಸಿ) | ಅಕ್ಟೋಬರ್ 2 |
| (ಡಿ) | ಅಕ್ಟೋಬರ್ 3 |
CORRECT ANSWER
(ಎ) ನವೆಂಬರ್ 1
|
2. | 2018ರ FIFAವಿಶ್ವಕಪ್ ನ್ನು ಯಾವ ದೇಶವು ಗೆದ್ದಿತ್ತು? |
|
| (ಎ) | ಬೆಲ್ಜಿಯಮ್ |
| (ಬಿ) | ಫ್ರಾನ್ಸ್ |
| (ಸಿ) | ಕ್ರೋಶಿಯಾ |
| (ಡಿ) | ಇಂಗ್ಲೆಂಡ್ |
CORRECT ANSWER
(ಬಿ) ಫ್ರಾನ್ಸ್
|
3. | G-20 ಸಮಿತ್ ಗೆ ಭಾರತವು ಯಾವ ವರ್ಷದಲ್ಲಿ ಆತಿಥ್ಯವನ್ನು ನೀಡಲಿದೆ ಎಂದು ಇತ್ತೀಚೆಗೆ ಘೋಷಿಸಲಾಗಿದೆ? |
|
| (ಎ) | 2022 |
| (ಬಿ) | 2020 |
| (ಸಿ) | 2021 |
| (ಡಿ) | 2023 |
CORRECT ANSWER
(ಎ) 2022
|
4. | ಏಕೈಕ ತುರ್ತು ಸಂಖ್ಯೆ ‘‘112’’ ಇದನ್ನು ಮೊದಲ ಬಾರಿಗೆ ಪ್ರಾರಂಭಿಸಿದ ಭಾರತದ ರಾಜ್ಯ ಯಾವುದು? |
|
| (ಎ) | ಕರ್ನಾಟಕ |
| (ಬಿ) | ಸಿಕ್ಕಿಂ |
| (ಸಿ) | ಅಸ್ಸಾಂ |
| (ಡಿ) | ಹಿಮಾಚಲ ಪ್ರದೇಶ |
CORRECT ANSWER
(ಡಿ) ಹಿಮಾಚಲ ಪ್ರದೇಶ
|
5. | ಭಾರತದ ಈ ಕೆಳಗಿನ ಪ್ರದೇಶಗಳಲ್ಲಿ ಈಗ ಯಾವುದು ಪಾರಿಸರಿಕ (ಇಕೋಲಾಜಿಕಲ್ ಹಾಟ್ ಸ್ಪಾಟ್) ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲ್ಪಟ್ಟಿರುತ್ತದೆ? |
|
| (ಎ) | ಪೂರ್ವ ಹಿಮಾಲಯ |
| (ಬಿ) | ಪಶ್ಚಿಮ ಹಿಮಾಲಯ |
| (ಸಿ) | ಪಶ್ಚಿಮ ಘಟ್ಟಗಳು |
| (ಡಿ) | ಪೂರ್ವ ಘಟ್ಟಗಳು |
CORRECT ANSWER
(ಸಿ) ಪಶ್ಚಿಮ ಘಟ್ಟಗಳು
|
6. | ಕೆಳಗಿನವುಗಳಲ್ಲಿ ಯಾವುದು ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣ ಎಂದು ಪರಿಗಣಿಸಲ್ಪಟ್ಟಿರುತ್ತದೆ? |
|
| (ಎ) | ಹಸಿರು ಮನೆ ಪರಿಣಾಮ |
| (ಬಿ) | ಮಳೆ ಕೊರತೆ |
| (ಸಿ) | ಜನಸಂಖ್ಯೆ ಹೆಚ್ಚಳ |
| (ಡಿ) | ಕಲ್ಲಿದ್ದಲು ಗಣಿಗಳಲ್ಲಿ ಬೆಂಕಿ |
CORRECT ANSWER
(ಎ) ಹಸಿರು ಮನೆ ಪರಿಣಾಮ
|
7. | ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ ಸರಿಯಾಗಿವೆ? |
| 1. | ಲೋಕಸಭೆಯಲ್ಲಿ ಬಾಕಿ ಇರುವ ಒಂದು ಬಿಲ್ ಅಧಿವೇಶನದ ಅವಧಿಯ ಮುಕ್ತಾಯದ ನಂತರ ರದ್ದಾಗುತ್ತದೆ. |
| 2. | ಲೋಕಸಭೆಯಲ್ಲಿ ಅಂಗೀಕೃತಗೊಳ್ಳದೆ, ರಾಜ್ಯಸಭೆಯಲ್ಲಿ ಬಾಕಿ ಇರುವ ಬಿಲ್ಲೊಂದು ಲೋಕಸಭೆಯ ವಿಸರ್ಜನೆಯ ನಂತರ ರದ್ದಾಗುವುದಿಲ್ಲ |
| | ಕೆಳಗೆ ನೀಡಲಾದ ಸಂಕೇತವನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ |
|
| (ಎ) | 1 ಮತ್ತು 2 ಎರಡೂ ಹೌದು |
| (ಬಿ) | 1 ಮಾತ್ರ |
| (ಸಿ) | 2 ಮಾತ್ರ |
| (ಡಿ) | 1 ಮತ್ತು 2 ಇವುಗಳಲ್ಲಿ ಯಾವುದೂ ಆಲ್ಲ |
CORRECT ANSWER
(ಸಿ) 2 ಮಾತ್ರ
|
8. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ. |
| 1. | ರಾಜ್ಯವೊಂದರಲ್ಲಿ ಮುಖ್ಯ ಕಾರ್ಯದರ್ಶಿಯವರು ಆ ರಾಜ್ಯದ ರಾಜ್ಯಪಾಲರಿಂದ ನೇಮಿಸಲ್ಪಡುತ್ತಾರೆ. |
| 2. | ರಾಜ್ಯವೊಂದರಲ್ಲಿ ಮುಖ್ಯ ಕಾರ್ಯದರ್ಶಿಯವರು ಒಂದು ನಿಗದಿತ ಸೇವಾವಧಿಯನ್ನು ಹೊಂದಿರುತ್ತಾರೆ. |
| | ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ ಸರಿಯಾಗಿವೆ? |
|
| (ಎ) | 1 ಮತ್ತು 2 ಎರಡೂ ಸರಿಯಾಗಿವೆ |
| (ಬಿ) | 1 ಮಾತ್ರ |
| (ಸಿ) | 2 ಮಾತ್ರ |
| (ಡಿ) | 1 ಮತ್ತು 2 ಇವುಗಳಲ್ಲಿ ಯಾವೊಂದು ಸರಿಯಾಗಿಲ್ಲ |
CORRECT ANSWER
(ಡಿ) 1 ಮತ್ತು 2 ಇವುಗಳಲ್ಲಿ ಯಾವೊಂದು ಸರಿಯಾಗಿಲ್ಲ
|
9. | ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರಾಗಿದ್ದರು? |
|
| (ಎ) | ವೀರೇಂದ್ರ ಪಾಟೀಲ್ |
| (ಬಿ) | ಕೆ.ಹನುಮಂತಯ್ಯ |
| (ಸಿ) | ಎಸ್.ನಿಜಲಿಂಗಪ್ಪ |
| (ಡಿ) | ಕೆ.ಚೆಂಗಲರಾಯ ರೆಡ್ಡಿ |
CORRECT ANSWER
(ಡಿ) ಕೆ.ಚೆಂಗಲರಾಯ ರೆಡ್ಡಿ
|
10. | ಆರಂಭಿಕ ಚಾಲುಕ್ಯರ ಎರಡನೆಯ ರಾಜಧಾನಿಯಾಗಿದ್ದ ಬಾದಾಮಿಯನ್ನು ಹಿಂದಿನ ದಿನಗಳಲ್ಲಿ ಏನೆಂದು ಕರೆಯುತ್ತಿದ್ದರು? |
|
| (ಎ) | ಬೇಲೂರು |
| (ಬಿ) | ವಾತಾಪಿ |
| (ಸಿ) | ಐಹೊಳೆ |
| (ಡಿ) | ಹಳೆಬೀಡು |
CORRECT ANSWER
(ಬಿ) ವಾತಾಪಿ
|
11. | ಜೋಗ ಜಲಪಾತವು ಯಾವ ನದಿಯ ಮೇಲಿದೆ? |
|
| (ಎ) | ಕೃಷ್ಣಾ |
| (ಬಿ) | ಶರಾವತಿ |
| (ಸಿ) | ಕಾವೇರಿ |
| (ಡಿ) | ಗೋದಾವರಿ |
CORRECT ANSWER
(ಬಿ) ಶರಾವತಿ
|
12. | ಕರ್ನಾಟಕದಲ್ಲಿರುವ ಅತಿ ಎತ್ತರದ ಶಿಖರ ಯಾವುದು? |
|
| (ಎ) | ಮುಳ್ಳಯ್ಯನಗಿರಿ ಬೆಟ್ಟ |
| (ಬಿ) | ನಂದಿ ಬೆಟ್ಟ |
| (ಸಿ) | ಚಾಮುಂಡಿ ಬೆಟ್ಟ |
| (ಡಿ) | ಪುಷ್ಪಗಿರಿಬೆಟ್ಟ |
CORRECT ANSWER
(ಎ) ಮುಳ್ಳಯ್ಯನಗಿರಿ ಬೆಟ್ಟ
|
13. | ಕೆಳಗೆ ಹೆಸರಿಸಿದ ಗುಪ್ತ ರಾಜರ ಕಾಲಾನುಕ್ರಮಿಕ ಕ್ರಮವನ್ನು ನೀಡಿರಿ: |
| 1. | ಸ್ಕಂದ ಗುಪ್ತ |
| 2. | ಸಮುದ್ರ ಗುಪ್ತ |
| 3. | ಚಂದ್ರ ಗುಪ್ತ-I |
| 4. | ಚಂದ್ರ ಗುಪ್ತ-II |
| 5. | ಕುಮಾರ ಗುಪ್ತ-I |
|
| (ಎ) | 3, 2, 4, 5, 1 |
| (ಬಿ) | 1, 2, 3, 4, 5 |
| (ಸಿ) | 2, 3, 4, 1, 5 |
| (ಡಿ) | 4, 3, 5, 2, 1 |
CORRECT ANSWER
(ಎ) 3, 2, 4, 5, 1
|
14. | ಆಲಮಟ್ಟಿ ಅಣೆಕಟ್ಟನ್ನು ____________ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. |
|
| (ಎ) | ಮಹಾನದಿ |
| (ಬಿ) | ಗೋದಾವರಿ |
| (ಸಿ) | ಕಾವೇರಿ |
| (ಡಿ) | ಕೃಷ್ಣಾ |
CORRECT ANSWER
(ಡಿ) ಕೃಷ್ಣಾ
|
15. | ವಿಟಮಿನ್ ‘ಎ’ ಯ ಕೊರತೆಯು ____________ಕಾಯಿಲೆಗೆ ಕಾರಣವಾಗುತ್ತದೆ. |
|
| (ಎ) | ರಾತ್ರಿ ಅಂಧತ್ವ |
| (ಬಿ) | ಸ್ಕರ್ವಿ (ರಕ್ತಪಿತ್ತ ವ್ಯಾಧಿ) |
| (ಸಿ) | ರಿಕೆಟ್ಸ್ (ಕುಟಿಲ ವಾತ) |
| (ಡಿ) | ಕ್ಯಾನ್ಸರ್ |
CORRECT ANSWER
(ಎ) ರಾತ್ರಿ ಅಂಧತ್ವ
|
16. | ರಾಜ್ಯವೊಂದರ ವಿಧಾನಪರಿಷತ್ತು. |
|
| (ಎ) | ಆ ರಾಜ್ಯದ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯ ½ ಕ್ಕಿಂತ ಹೆಚ್ಚಾಗಿರದ ಸಂಖ್ಯೆಯ ಸದಸ್ಯರನ್ನು ಒಳಗೊಂಡಿರುತ್ತದೆ |
| (ಬಿ) | ಆ ರಾಜ್ಯದ ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆಯ ⅓ ಕ್ಕಿಂತ ಹೆಚ್ಚಾಗಿರದ ಮತ್ತು ಯಾವುದೇ ಸನ್ನಿವೇಶದಲ್ಲೂ 40ಕ್ಕಿಂತ ಕಡಿಮೆಯಲ್ಲದ ಸಂಖ್ಯೆಯ ಸದಸ್ಯರನ್ನು ಒಳಗೊಂಡಿರುತ್ತದೆ. |
| (ಸಿ) | ಆ ರಾಜ್ಯದ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯ ¼ ಕ್ಕಿಂತ ಹೆಚ್ಚಾಗಿರದ ಮತ್ತು ಯಾವುದೇ ಸನ್ನಿವೇಶದಲ್ಲೂ 40 ಕ್ಕಿಂತ ಕಡಿಮೆಯಲ್ಲದ ಸಂಖ್ಯೆಯ ಸದಸ್ಯರನ್ನು ಒಳಗೊಂಡಿರುತ್ತದೆ. |
| (ಡಿ) | ಮೇಲಿನವುಗಳಲ್ಲಿ ಯಾವುದೂ ಅಲ್ಲ. |
CORRECT ANSWER
(ಬಿ) ಆ ರಾಜ್ಯದ ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆಯ ⅓ ಕ್ಕಿಂತ ಹೆಚ್ಚಾಗಿರದ ಮತ್ತು ಯಾವುದೇ ಸನ್ನಿವೇಶದಲ್ಲೂ 40ಕ್ಕಿಂತ ಕಡಿಮೆಯಲ್ಲದ ಸಂಖ್ಯೆಯ ಸದಸ್ಯರನ್ನು ಒಳಗೊಂಡಿರುತ್ತದೆ.
|
17. | ‘ಈಡನ್ ಗಾರ್ಡನ್ಸ್’ ಯಾವ ನಗರದಲ್ಲಿರುವ ಪ್ರಸಿದ್ಧ ಕ್ರೀಡಾಂಗಣದ ಹೆಸರಾಗಿದೆ? |
|
| (ಎ) | ಕೋಲ್ಕತ್ತಾ |
| (ಬಿ) | ಮುಂಬಯಿ |
| (ಸಿ) | ಫರೀದಾಬಾದ್ |
| (ಡಿ) | ಬೆಂಗಳೂರು |
CORRECT ANSWER
(ಎ) ಕೋಲ್ಕತ್ತಾ
|
18. | ಈ ಕೆಳಗಿನವುಗಳಲ್ಲಿ ಯಾವ ನೃತ್ಯ ಶೈಲಿಯು ಅದಕ್ಕೆ ಸಂಬಂಧಿಸಿದ ರಾಜ್ಯದೊಂದಿಗೆ ಸರಿಯಾಗಿ ಹೊಂದಿಕೆಯಾಗಿಲ್ಲ? |
|
| (ಎ) | ಮೋಹಿನಿಯಾಟ್ಟಮ್ – ಆಂಧ್ರಪ್ರದೇಶ |
| (ಬಿ) | ಕಥಕ್ – ಉತ್ತರ ಪ್ರದೇಶ |
| (ಸಿ) | ಬಿಹು – ಅಸ್ಸಾಮ್ |
| (ಡಿ) | ಯಕ್ಷಗಾನ – ಕರ್ನಾಟಕ |
CORRECT ANSWER
(ಎ) ಮೋಹಿನಿಯಾಟ್ಟಮ್ – ಆಂಧ್ರಪ್ರದೇಶ
|
19. | ‘ಡೊಳ್ಳು ಕುಣಿತ’ ಎಲ್ಲಿಯ ಜಾನಪದ ಶೈಲಿಯ ನೃತ್ಯವಾಗಿದೆ? |
|
| (ಎ) | ಬಿಹಾರ |
| (ಬಿ) | ಕರ್ನಾಟಕ |
| (ಸಿ) | ಕೇರಳ |
| (ಡಿ) | ತಮಿಳುನಾಡು |
CORRECT ANSWER
(ಬಿ) ಕರ್ನಾಟಕ
|
20. | ದೋಣಿ ಸ್ಪರ್ಧೆಯು ಈ ಕೆಳಗಿನ ಯಾವ ಹಬ್ಬದ ವಿಶಿಷ್ಟ ಗುಣಲಕ್ಷಣವಾಗಿದೆ? |
|
| (ಎ) | ಪೊಂಗಲ್ |
| (ಬಿ) | ರಂಗೋಲಿ ಬಿಹು |
| (ಸಿ) | ಓಣಂ |
| (ಡಿ) | ನವರಾತ್ರಿ |
CORRECT ANSWER
(ಸಿ) ಓಣಂ
|
21. | ಪೆನ್ಸಿಲಿನ್ ಕಂಡುಹಿಡಿದವರು |
|
| (ಎ) | ಎಡ್ವರ್ಡ್ ಜೆನ್ನರ್ |
| (ಬಿ) | ಥಾಮ್ಸನ್ |
| (ಸಿ) | ಅಲೆಕ್ಸಾಂಡರ್ ಫ್ಲೆಮಿಂಗ್ |
| (ಡಿ) | ರಾಬರ್ಟ್ ಹುಕ್ |
CORRECT ANSWER
(ಸಿ) ಅಲೆಕ್ಸಾಂಡರ್ ಫ್ಲೆಮಿಂಗ್
|
22. | ಕೆಳಗಿನವುಗಳಲ್ಲಿ ಯಾವುದು ಬಾರಕ್ ಕಣಿವೆಯ ಒಂದು ಪ್ರಮುಖ ಬೆಳೆಯಾಗಿರುತ್ತದೆ? |
|
| (ಎ) | ಕಬ್ಬು |
| (ಬಿ) | ಸೆಣಬು |
| (ಸಿ) | ಚಹಾ |
| (ಡಿ) | ಹತ್ತಿ |
CORRECT ANSWER
(ಬಿ) ಸೆಣಬು
|
23. | ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿ ಯಾರಾಗಿದ್ದರು? |
|
| (ಎ) | ರುದ್ರದಮನ |
| (ಬಿ) | ಕೌಟಿಲ್ಯ |
| (ಸಿ) | ವಿಷ್ಣುಗೋಪ |
| (ಡಿ) | ಮೆಗಸ್ತನೀಸ್ |
CORRECT ANSWER
(ಬಿ) ಕೌಟಿಲ್ಯ
|
24. | ಬುದ್ದನ ಆಕೃತಿಯನ್ನು ಹೊಂದಿದ ನಾಣ್ಯಗಳನ್ನು ಚಲಾವಣೆಗೆ ತಂದ (ಪರಿಚಯಿಸಿದ) ರಾಜನು ಯಾರಾಗಿದ್ದ? |
|
| (ಎ) | ಕನಿಷ್ಕ |
| (ಬಿ) | ಹರ್ಷ |
| (ಸಿ) | ಅಶೋಕ |
| (ಡಿ) | ಚಂದ್ರಗುಪ್ತ |
CORRECT ANSWER
(ಎ) ಕನಿಷ್ಕ
|
25. | ಭಾರತದ ಕೃಷಿ ಸಂಶೋಧನಾ ಸಂಸ್ಥೆ ಎಲ್ಲಿದೆ? |
|
| (ಎ) | ಕಟಕ್ |
| (ಬಿ) | ಕಾನ್ಪುರ |
| (ಸಿ) | ನವದೆಹಲಿ |
| (ಡಿ) | ಮುಂಬಯಿ |
CORRECT ANSWER
(ಸಿ) ನವದೆಹಲಿ
|
26. | ಭಾರತದ ಗ್ರ್ಯಾಂಡ್ ಓಲ್ಡ್ ಮ್ಯಾನ್ ಎಂದು ಪ್ರಸಿದ್ಧಿ ಪಡೆದವರು ಯಾರು? |
|
| (ಎ) | ರಬೀಂದ್ರನಾಥ್ ಠಾಗೋರ್ |
| (ಬಿ) | ಸಿ.ರಾಜಗೋಪಾಲಾಚಾರಿ |
| (ಸಿ) | ಜಯಪ್ರಕಾಶ್ ನಾರಾಯಣ್ |
| (ಡಿ) | ದಾದಾಭಾಯಿ ನವರೋಜಿ |
CORRECT ANSWER
(ಡಿ) ದಾದಾಭಾಯಿ ನವರೋಜಿ
|
27. | ಭಾರತದ ಕರೆನ್ಸಿ ನೋಟುಗಳ ಮುದ್ರಣಾಲಯದ ಕ್ಷೇತ್ರವು ಈ ಕೆಳಗಿನವುಗಳಲ್ಲಿ ಯಾವುದು ಆಗಿಲ್ಲ? |
|
| (ಎ) | ಸಾಲ್ಬೋನಿ |
| (ಬಿ) | ನಾಸಿಕ್ |
| (ಸಿ) | ಮೈಸೂರು |
| (ಡಿ) | ಝಾನ್ಸಿ |
CORRECT ANSWER
(ಡಿ) ಝಾನ್ಸಿ
|
28. | ಯುನೈಟೆಡ್ ನೇಷನ್ ಗಳ ಭದ್ರತಾ ಮಂಡಳಿಯಲ್ಲಿ ‘ವೀಟೋ ಪವರ್’ನ್ನು ಎಷ್ಟು ದೇಶಗಳು ಪ್ರಯೋಗಿಸುತ್ತವೆ? |
|
| (ಎ) | 4 |
| (ಬಿ) | 5 |
| (ಸಿ) | 6 |
| (ಡಿ) | 3 |
CORRECT ANSWER
(ಬಿ) 5
|
29. | ಭಾರತೀಯ ಸಂವಿಧಾನದ ಯಾವ ಕಲಂ ಪಕ್ಷಾಂತರ ವಿರೋಧಿ ವಿಧಿಯನ್ನು ಒಳಗೊಂಡಿರುತ್ತದೆ? |
|
| (ಎ) | ಎಂಟನೆಯ ಕಲಂ |
| (ಬಿ) | ಎರಡನೆಯ ಕಲಂ |
| (ಸಿ) | ಐದನೆಯ ಕಲಂ |
| (ಡಿ) | ಹತ್ತನೆಯ ಕಲಂ |
CORRECT ANSWER
(ಡಿ) ಹತ್ತನೆಯ ಕಲಂ
|
30. | ‘‘ನೆಫ್ರಾಲಜಿ’’ ಯು ಇದಕ್ಕೆ ಸಂಬಂಧಿಸಿರುತ್ತದೆ. |
|
| (ಎ) | ಮಿದುಳು |
| (ಬಿ) | ಮೂತ್ರಕೋಶ |
| (ಸಿ) | ಯಕೃತ್ತು |
| (ಡಿ) | ಹೃದಯ |
CORRECT ANSWER
(ಬಿ) ಮೂತ್ರಕೋಶ
|
31. | ಕೆಳಗಿನವುಗಳಲ್ಲಿ ಯಾವುದು ಪೆನ್ಸಿಲುಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ? |
|
| (ಎ) | ಗ್ರಾಫೈಟ್ |
| (ಬಿ) | ಸಿಲಿಕಾನ್ |
| (ಸಿ) | ಕಲ್ಲಿದ್ದಲು |
| (ಡಿ) | ಕ್ಯಾಲ್ಸಿಯಂ |
CORRECT ANSWER
(ಎ) ಗ್ರಾಫೈಟ್
|
32. | ಕ್ವಾರ್ಟ್ಲೈಟ್_________ರಿಂದ ರೂಪಾಂತರಗೊಳಿಸಲ್ಲಟ್ಟಿದೆ. |
|
| (ಎ) | ಮರಳುಗಲ್ಲು |
| (ಬಿ) | ಸುಣ್ಣಕಲ್ಲು |
| (ಸಿ) | ಕಾಚಶಿಲೆ (ಅಬ್ ಸಿಡಿಯನ್) |
| (ಡಿ) | ಜೇಡಿ ಪದರಗಲ್ಲು |
CORRECT ANSWER
(ಎ) ಮರಳುಗಲ್ಲು
|
33. | ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಭಾರತದ ಮೊದಲ ಮಹಿಳೆ ಯಾರು? |
|
| (ಎ) | ಸಂತೋಷ್ ಯಾದವ್ |
| (ಬಿ) | ಆರತಿ ಸಹ |
| (ಸಿ) | ಬಚೇಂದ್ರಿ ಪಾಲ್ |
| (ಡಿ) | ಶ್ರೀಮತಿ ಒಮಾನ ಕುಂಜಮ್ಮ |
CORRECT ANSWER
(ಸಿ) ಬಚೇಂದ್ರಿ ಪಾಲ್
|
34. | ಶಾಂತಿವನ ಯಾರ ವಿಶ್ರಾಂತಿ ಸ್ಥಳ (ಸ್ಮಾರಕ) ವಾಗಿದೆ? |
|
| (ಎ) | ಜಗ್‌ಜೀವನ ರಾಮ್ |
| (ಬಿ) | ಜವಾಹರಲಾಲ್ ನೆಹರು |
| (ಸಿ) | ರಾಜೀವ್ ಗಾಂಧಿ |
| (ಡಿ) | ಲಾಲ್ ಬಹದ್ದೂರ್ ಶಾಸ್ತ್ರಿ |
CORRECT ANSWER
(ಬಿ) ಜವಾಹರಲಾಲ್ ನೆಹರು
|
35. | ಯಾವ ದೇಶದ ರಾಷ್ಟ್ರೀಯ ಶಾಸಕಾಂಗವನ್ನು ‘ಡೂಮ’ ಎಂದು ಕರೆಯುತ್ತಾರೆ? |
|
| (ಎ) | ಇರಾನ್ |
| (ಬಿ) | ಯುಎಸ್ಎ |
| (ಸಿ) | ರಷ್ಯಾ |
| (ಡಿ) | ನೇಪಾಳ |
CORRECT ANSWER
(ಸಿ) ರಷ್ಯಾ
|
36. | ಪೀಸಾದ ಬಾಗಿದ ಗೋಪುರ (ಲೀನಿಂಗ್ ಟವರ್ ಆಫ್ ಪೀಸಾ) ಯಾವ ದೇಶದಲ್ಲಿದೆ? |
|
| (ಎ) | ಸ್ಪೇನ್ |
| (ಬಿ) | ಇಟಲಿ |
| (ಸಿ) | ಫ್ರಾನ್ಸ್ |
| (ಡಿ) | ಪೋರ್ಚುಗಲ್ |
CORRECT ANSWER
(ಬಿ) ಇಟಲಿ
|
37. | ಪಲ್ಲವರ ಆಳ್ವಿಕೆಯಲ್ಲಿ ಸುಪ್ರಸಿದ್ಧವಾದ ವಿದ್ಯಾಕೇಂದ್ರ ಯಾವುದಾಗಿತ್ತು? |
|
| (ಎ) | ಮಹಾಬಲಿಪುರಂ |
| (ಬಿ) | ಮಧುರೈ |
| (ಸಿ) | ಕಾಂಚಿ |
| (ಡಿ) | ತಂಜಾವೂರು |
CORRECT ANSWER
(ಸಿ) ಕಾಂಚಿ
|
38. | ಚೋಳರ ಕಾಲದಲ್ಲಿ ‘ತಮಿಳು ರಾಮಾಯಣ’ ವನ್ನು ಬರೆದವರು ಯಾರು? |
|
| (ಎ) | ವಾಲ್ಮೀಕಿ |
| (ಬಿ) | ಕಂಬನ್ |
| (ಸಿ) | ಶಂಕರಾಚಾರ್ಯ |
| (ಡಿ) | ರಾಜೇಂದ್ರ ಚೋಳ |
CORRECT ANSWER
(ಬಿ) ಕಂಬನ್
|
39. | ‘‘ಮೇಕೆ ದಾಟು’’ ಸ್ಥಳವಿರುವ ರಾಜ್ಯ |
|
| (ಎ) | ಕೇರಳ |
| (ಬಿ) | ತಮಿಳುನಾಡು |
| (ಸಿ) | ಆಂಧ್ರಪ್ರದೇಶ |
| (ಡಿ) | ಕರ್ನಾಟಕ |
CORRECT ANSWER
(ಡಿ) ಕರ್ನಾಟಕ
|
40. | ವವಿದ್ಯುತ್‌ಬಲ್ಬ್‌ನಲ್ಲಿರುವ ತಂತು (ಫಿಲಮೆಂಟ್) ಇದರಿಂದ ಮಾಡಲ್ಪಟ್ಟಿದೆ. |
|
| (ಎ) | ನಿಕ್ಕಲ್ |
| (ಬಿ) | ಕ್ರೋಮಿಯಂ |
| (ಸಿ) | ಕಬ್ಬಿಣ |
| (ಡಿ) | ಟಂಗ್‌ಸ್ಟನ್ |
CORRECT ANSWER
(ಡಿ) ಟಂಗ್‌ಸ್ಟನ್
|
41. | ಈ ಕೆಳಗೆ ಹೆಸರಿಸಿದವರಲ್ಲಿ ‘ಭಾರತ ರತ್ನ’ ಪಡೆದಿಲ್ಲದವರು ಯಾರು? |
|
| (ಎ) | ಶ್ರೀಮತಿ ಇಂದಿರಾ ಗಾಂಧಿ |
| (ಬಿ) | ಡಾ.ಎಸ್.ರಾಧಾಕೃಷ್ಣನ್ |
| (ಸಿ) | ಸರ್ದಾರ್ ವಲ್ಲಭಭಾಯಿ ಪಟೇಲ್ |
| (ಡಿ) | ಲಾಲ್ ಬಹದ್ದೂರ್ ಶಾಸ್ತ್ರಿ |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
|
42. | ನಮ್ಮ ರಾಷ್ಟ್ರಗೀತೆ ‘ಜನಗಣಮನ’ ವನ್ನು ಯಾರು ರಚಿಸಿದರು? |
|
| (ಎ) | ಬಂಕಿಮ್‌ಚಂದ್ರ ಚಟರ್ಜಿ |
| (ಬಿ) | ರಬೀಂದ್ರನಾಥ ಠಾಗೋರ್ |
| (ಸಿ) | ಆರ್.ಡಿ.ದಿನಕರ್ |
| (ಡಿ) | ಸರೋಜಿನಿ ನಾಯ್ಡು |
CORRECT ANSWER
(ಬಿ) ರಬೀಂದ್ರನಾಥ ಠಾಗೋರ್
|
43. | ‘ರಾಮಚರಿತ ಮಾನಸ’ ಪುಸ್ತಕವನ್ನು ಯಾರು ಬರೆದರು? |
|
| (ಎ) | ಭಕ್ತ ರಾಮದೇವ್ |
| (ಬಿ) | ತುಳಸಿ ದಾಸ |
| (ಸಿ) | ಭಕ್ತ ಕಬೀರ |
| (ಡಿ) | ವಾಲ್ಮೀಕಿ |
CORRECT ANSWER
(ಬಿ) ತುಳಸಿ ದಾಸ
|
44. | ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದದೇ ಇರುವುದು ಯಾವುದು? |
|
| (ಎ) | ಬಿಸ್ಮಿಲ್ಲಾ ಖಾನ್- ಶಹನಾಯಿ |
| (ಬಿ) | ಎಮ್.ಎಸ್.ಸುಬ್ಬಲಕ್ಷ್ಮಿ- ಕರ್ನಾಟಕ ಸಂಗೀತ |
| (ಸಿ) | ಪಂಡಿತ್ ಭೀಮ್‌ಸೇನ್ ಜೋಶಿ- ಹಿಂದೂಸ್ತಾನಿ ಸಂಗೀತ |
| (ಡಿ) | ಪಂಡಿತ್ ರವಿಶಂಕರ್- ತಬಲ |
CORRECT ANSWER
(ಡಿ) ಪಂಡಿತ್ ರವಿಶಂಕರ್- ತಬಲ
|
45. | ಈ ಹೇಳಿಕೆಗಳನ್ನು ಗಮನಿಸಿ: |
| ಭಾರತದ ಅಟಾರ್ನಿ ಜನರಲ್ (ಪ್ರಧಾನ ವಕೀಲರು) ಆದವರು |
| 1. | ಲೋಕಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸಬಹುದು |
| 2. | ಲೋಕಸಭೆಯ ಸಮಿತಿಯೊಂದರ ಸದಸ್ಯರಾಗಬಹುದು |
| 3. | ಲೋಕಸಭೆಯಲ್ಲಿ ಮಾತನಾಡಬಹುದು |
| 4. | ಲೋಕಸಭೆಯಲ್ಲಿ ಮತ ಚಲಾಯಿಸಬಹುದು |
| | ಮೇಲೆ ಕೊಡಲಾದ ಹೇಳಿಕೆಗಳಲ್ಲಿ ಯಾವುದು/ ಯಾವುವು ಸರಿಯಾಗಿವೆ? |
|
| (ಎ) | 1,2 ಮತ್ತು 3 |
| (ಬಿ) | 1 ಮಾತ್ರ |
| (ಸಿ) | 2 ಮತ್ತು 4 ಮಾತ್ರ |
| (ಡಿ) | 1 ಮತ್ತು 3 ಮಾತ್ರ |
CORRECT ANSWER
(ಎ) 1,2 ಮತ್ತು 3
|
46. | ದೆಹಲಿ ಸುಲ್ತಾನರ ಆಡಳಿತಾವಧಿಯಲ್ಲಿ ‘ಜಕಾತಿ’ (ಜಕಾತ್) ಯ ಅರ್ಥ ಇದಾಗಿತ್ತು |
|
| (ಎ) | ಭೂಮಿಯ ಮೇಲಿನ ತೆರಿಗೆ |
| (ಬಿ) | ಹಿಂದುಗಳ ಮೇಲಿನ ತೆರಿಗೆ |
| (ಸಿ) | ನೀರಿನ ಮೇಲಿನ ತೆರಿಗೆ |
| (ಡಿ) | ಮುಸ್ಲಿಂರ ಮೇಲಿನ ತೆರಿಗೆ |
CORRECT ANSWER
(ಡಿ) ಮುಸ್ಲಿಂರ ಮೇಲಿನ ತೆರಿಗೆ
|
47. | ‘ತುಘಲಕ್ ನಾಮಾ’ ಬರೆದವರು? |
|
| (ಎ) | ಅಮೀರ್ ಖುಸ್ರು |
| (ಬಿ) | ನಾಸಿರುದ್ದೀನ್ |
| (ಸಿ) | ಭರನಿ |
| (ಡಿ) | ಇಸಾಮಿ |
CORRECT ANSWER
(ಎ) ಅಮೀರ್ ಖುಸ್ರು
|
48. | ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಯಾವುದು ಪ್ರಮುಖ ಸಂಗೀತ ಸಾಧನವಾಗಿತ್ತು? |
|
| (ಎ) | ವೀಣೆ |
| (ಬಿ) | ಸಿತಾರ್ |
| (ಸಿ) | ಮೃದಂಗ |
| (ಡಿ) | ತಬಲ |
CORRECT ANSWER
(ಎ) ವೀಣೆ
|
49. | ‘ವಿಶ್ವ ಪರಿಸರ ದಿನ’ ಯಾವಾಗ ಆಚರಿಸಲಾಗುತ್ತದೆ? |
|
| (ಎ) | ಆಕ್ಟೋಬರ್ 24 |
| (ಬಿ) | ಜೂನ್ 5 |
| (ಸಿ) | ಏಪ್ರಿಲ್ 7 |
| (ಡಿ) | ಮೇಲಿನವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಬಿ) ಜೂನ್ 5
|
50. | ಮೇರಿ ಕೋಮ್ ಯಾವ ಕ್ರೀಡೆಗೆ ಸಂಬಂಧಿಸಿದವರಾಗಿದ್ದಾರೆ? |
|
| (ಎ) | ಕಬಡ್ಡಿ |
| (ಬಿ) | ಭಾರ ಎತ್ತುವಿಕೆ |
| (ಸಿ) | ಬಾಕ್ಸಿಂಗ್ |
| (ಡಿ) | ಟೆನ್ನಿಸ್ |
CORRECT ANSWER
(ಸಿ) ಬಾಕ್ಸಿಂಗ್
|
51. | ‘ಭಾರತದ ಉಕ್ಕಿನ ಮನುಷ್ಯ’ ಎಂದು ಯಾರನ್ನು ಕರೆಯಲಾಗುತ್ತದೆ? |
|
| (ಎ) | ಜವಾಹರಲಾಲ್ ನೆಹರು |
| (ಬಿ) | ಭಗತ್ ಸಿಂಗ್ |
| (ಸಿ) | ಸರ್ದಾರ್ ವಲ್ಲಭಭಾಯಿ ಪಟೇಲ್ |
| (ಡಿ) | ಮಹಾತ್ಮಾ ಗಾಂಧಿ |
CORRECT ANSWER
(ಸಿ) ಸರ್ದಾರ್ ವಲ್ಲಭಭಾಯಿ ಪಟೇಲ್
|
52. | ಪ್ರತಿ ವರ್ಷ ಸರಸ್ವತಿ ಸಮ್ಮಾನವನ್ನು ಈ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ಕೊಡಲಾಗುತ್ತದೆ. |
|
| (ಎ) | ಕ್ರೀಡೆಗಳು |
| (ಬಿ) | ಸಾಹಿತ್ಯ |
| (ಸಿ) | ಲಲಿತ ಕಲೆಗಳು |
| (ಡಿ) | ಶಾಸ್ತ್ರೀಯ ಸಂಗೀತ |
CORRECT ANSWER
(ಬಿ) ಸಾಹಿತ್ಯ
|
53. | ಕರ್ನಾಟಕ ವಿಧಾನಸಭೆಯ ಈಗಿನ ಸಭಾಪತಿ |
|
| (ಎ) | ಕಿರಣ್ ಕುಮಾರ್ |
| (ಬಿ) | ರವಿ ಕುಮಾರ್ |
| (ಸಿ) | ಅಶೋಕ್ ಕುಮಾರ್ |
| (ಡಿ) | ರಮೇಶ್ ಕುಮಾರ್ |
CORRECT ANSWER
(ಡಿ) ರಮೇಶ್ ಕುಮಾರ್
|
54. | ಶುದ್ಧ ನೀರಿನ ಪಿಎಚ್ (pH) ಮಟ್ಟವೇನು? |
|
| (ಎ) | ಎಂಟು |
| (ಬಿ) | ಆರು |
| (ಸಿ) | ಏಳು |
| (ಡಿ) | ಹತ್ತು |
CORRECT ANSWER
(ಸಿ) ಏಳು
|
55. | ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ (NaHCO3)ನ ಸಾಮಾನ್ಯ ಹೆಸರೇನು? |
|
| (ಎ) | ಬೇಕಿಂಗ್ (ಅಡುಗೆ) ಸೋಡಾ |
| (ಬಿ) | ವಾಷಿಂಗ್ ಸೋಡಾ |
| (ಸಿ) | ಬ್ಲೀಚಿಂಗ್ ಪೌಡರ್ (ಬಿಳುಪುಕಾರಕ ಪುಡಿ) |
| (ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಎ) ಬೇಕಿಂಗ್ (ಅಡುಗೆ) ಸೋಡಾ
|
56. | ಅಕ್ಬರ್ ನು ಭೂ ಕಂದಾಯ ಸುಧಾರಣೆಗಳಿಗೆ ಪ್ರಸಿದ್ಧನಾಗಿದ್ದಾನೆ. ಇದರ ಹಿಂದೆ ಕಾರ್ಯನಿರ್ವಹಿಸಿದ ಮೆದುಳು ಯಾರದಾಗಿತ್ತು? |
|
| (ಎ) | ಇಶ್ಮತ್ ಖಾನ್ |
| (ಬಿ) | ಮುಜಾಫರ್ ಖಾನ್ |
| (ಸಿ) | ತೋದರ್ ಮಲ್ |
| (ಡಿ) | ಬೀರಬಲ್ |
CORRECT ANSWER
(ಸಿ) ತೋದರ್ ಮಲ್
|
57. | ಸಂಕೇತ ಭಾಷೆಯಲ್ಲಿ ‘STRONG’ ಪದವು ‘ROTNSG’ ಎಂದು ಬರೆಯಲ್ಪಟ್ಟರೆ ‘NAGPUR’ ಪದ ಹೇಗೆ ಬರೆಯಲ್ಪಡುತ್ತದೆ? |
|
| (ಎ) | PGAURN |
| (ಬಿ) | GPAUNR |
| (ಸಿ) | PGUARN |
| (ಡಿ) | GPUANR |
CORRECT ANSWER
(ಬಿ) GPAUNR
|
58. | ಒಂದು ದಿನ ರವಿ ಮನೆಯಿಂದ ಹೊರಟು ದಕ್ಷಿಣ ದಿಕ್ಕಿನತ್ತ 10 ಕಿ.ಮೀ. ದೂರ ಸೈಕಲ್ ತುಳಿದು ಕ್ರಮಿಸಿದನು. ನಂತರ ಬಲಕ್ಕೆ ತಿರುಗಿ 5 ಕಿ.ಮೀ. ದೂರಕ್ಕೆ ಸೈಕಲ್ ಓಡಿಸಿದನು. ಅಲ್ಲಿಂದ ಪುನಃ ಬಲಕ್ಕೆ ತಿರುಗಿ 10 ಕಿ.ಮೀ. ದೂರ ಸೈಕಲ್ ಓಡಿಸಿದನು. ಅಲ್ಲಿಂದ ಎಡಕ್ಕೆ ತಿರುಗಿ ಮತ್ತೆ 10 ಕಿ.ಮೀ. ದೂರ ಸೈಕಲ್ ಓಡಿಸಿದನು. ನೇರವಾಗಿ ತನ್ನ ಮನೆ ಸೇರಲು ಇನ್ನೂ ಎಷ್ಟು ಕಿಲೋಮೀಟರ್ ದೂರಕ್ಕೆ ಅವನು ಸೈಕಲ್ ಓಡಿಸಬೇಕು? |
|
| (ಎ) | 20 ಕಿಲೋಮೀಟರ್ |
| (ಬಿ) | 10 ಕಿಲೋಮೀಟರ್ |
| (ಸಿ) | 15 ಕಿಲೋಮೀಟರ್ |
| (ಡಿ) | 25 ಕಿಲೋಮೀಟರ್ |
CORRECT ANSWER
(ಸಿ) 15 ಕಿಲೋಮೀಟರ್
|
59. | P, Q, R ಮತ್ತು T ಹೆಸರಿನ ನಾಲ್ಕು ನಗರಗಳಿವೆ. QPಯೊಂದಿಗಿನ ರೇಖೆಯಲ್ಲಿ Q ನಗರ Pಯ ನೈರುತ್ಯಕ್ಕಿದೆ, R ನಗರ Qನ ಪೂರ್ವಕ್ಕಿದೆ ಮತ್ತು Pಯ ಆಗ್ನೇಯಕ್ಕಿದೆ ಮತ್ತು T ನಗರವು Rನ ಉತ್ತರಕ್ಕಿದೆ. ಹಾಗಾದರೆ T ನಗರವು Pಗೆ ಯಾವ ದಿಕ್ಕಿನಲ್ಲಿದೆ? |
|
| (ಎ) | ಈಶಾನ್ಯ |
| (ಬಿ) | ಆಗ್ನೇಯ |
| (ಸಿ) | ಉತ್ತರ |
| (ಡಿ) | ಪೂರ್ವ |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
|
60. | 49 ವಿದ್ಯಾರ್ಥಿಗಳು ಇರುವ ತರಗತಿಯೊಂದರಲ್ಲಿ ನಿತಿನ್ ಹದಿನೆಂಟನೆಯ ಶ್ರೇಯಾಂಕದಲ್ಲಿದ್ದಾನೆ. ಕೊನೆಯಿಂದ ಲೆಕ್ಕ ಹಾಕಿದಾಗ ಅವನ ಶ್ರೇಯಾಂಕವೆಷ್ಟು? |
|
| (ಎ) | 31ನೆಯ |
| (ಬಿ) | 18ನೆಯ |
| (ಸಿ) | 19ನೆಯ |
| (ಡಿ) | 32ನೆಯ |
CORRECT ANSWER
(ಡಿ) 32ನೆಯ
|
61. | ದೆಹಲಿಯ ‘ಕೆಂಪು ಕೋಟೆ’ ನಿರ್ಮಿಸಿದವರು ಯಾರು? |
|
| (ಎ) | ಷಹಜಹಾನ್ |
| (ಬಿ) | ಬಾಬರ್ |
| (ಸಿ) | ಅಕ್ಬರ್ |
| (ಡಿ) | ಔರಂಗಜೇಬ್ |
CORRECT ANSWER
(ಎ) ಷಹಜಹಾನ್
|
62. | ‘ಜ್ಯೋತಿರ್ವರ್ಷ’ ಪದವು ಇದಕ್ಕೆ ಸಂಬಂಧಿಸಿದೆ |
|
| (ಎ) | ದೂರ |
| (ಬಿ) | ಬೆಳಕು |
| (ಸಿ) | ಬೆಳಕಿನ ಗಾಢತೆ( ತೀವ್ರತೆ) |
| (ಡಿ) | ಸಮಯ |
CORRECT ANSWER
(ಎ) ದೂರ
|
63. | ಚೀನಾ ದೇಶಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ ಮೊದಲ ವಿಜಯನಗರದ ಅರಸು ಯಾರು? |
|
| (ಎ) | ಹರಿಹರ-II |
| (ಬಿ) | ಬುಕ್ಕ-I |
| (ಸಿ) | ಕೃಷ್ಣದೇವರಾಯ |
| (ಡಿ) | ದೇವರಾಯ-I |
CORRECT ANSWER
(ಬಿ) ಬುಕ್ಕ-I
|
64. | ಜಹಾಂಗೀರನ ಆಡಳಿತಾವಧಿಯಲ್ಲಿ ಸಂದರ್ಶಿಸಿದ ಇಂಗ್ಲಿಷ್ ರಾಯಭಾರಿ ಯಾರು? |
|
| (ಎ) | ಸರ್ ಥಾಮಸ್ ರೋ |
| (ಬಿ) | ಕ್ಯಾಪ್ಟನ್ ಹಿಪ್ಟನ್ |
| (ಸಿ) | ಥಾಮಸ್ ಬೆಸ್ಟ್ |
| (ಡಿ) | ಕ್ಯಾಪ್ಟನ್ ಹಾಕಿನ್ಸ್ |
CORRECT ANSWER
(ಎ) ಸರ್ ಥಾಮಸ್ ರೋ
|
65. | ಸಂಖ್ಯೆಯೊಂದಕ್ಕೆ ಅದೇ ಸಂಖ್ಯೆಯ 13 ಪಟ್ಟು ಸಂಖ್ಯೆಯನ್ನು ಕೂಡಿಸಿದಾಗ 112 ಆಗುತ್ತದೆ. ಹಾಗಾದರೆ ಆ ಸಂಖ್ಯೆ ಯಾವುದು? |
|
| (ಎ) | 9 |
| (ಬಿ) | 7 |
| (ಸಿ) | 8 |
| (ಡಿ) | 11 |
CORRECT ANSWER
(ಸಿ) 8
|
66. | ಪ್ರಶ್ನಾರ್ಥಕ ಚಿಹ್ನೆಯಿರುವಲ್ಲಿ ಬೇಕಾದ ಸಂಖ್ಯೆ ಯಾವುದು? |
| |
|
| (ಎ) | 48 |
| (ಬಿ) | 42 |
| (ಸಿ) | 46 |
| (ಡಿ) | 50 |
CORRECT ANSWER
(ಸಿ) 46
|
67. | ಕೊಟ್ಟಿರುವ ಆಕೃತಿಯಲ್ಲಿರುವ ತ್ರಿಭುಜಗಳ ಸಂಖ್ಯೆ ಕಂಡು ಹಿಡಿಯಿರಿ: |
| |
|
| (ಎ) | 9 |
| (ಬಿ) | 16 |
| (ಸಿ) | 13 |
| (ಡಿ) | 7 |
CORRECT ANSWER
(ಬಿ) 16
|
68. | p ಯು Rನ ಸೋದರ, Qಯು Pಯ ಮಗ, Tಯು Sನ ಸೋದರ; S ಇವರು Rಗೆ ಮಗಳು, ಹಾಗಾದರೆ Qನ ಸೋದರ ಸಂಬಂಧಿಗಳು (ಕಸಿನ್ಸ್) ಯಾರು? |
|
| (ಎ) | Q ಮತ್ತು T |
| (ಬಿ) | R ಮತ್ತು P |
| (ಸಿ) | P ಮತ್ತು T |
| (ಡಿ) | S ಮತ್ತು T |
CORRECT ANSWER
(ಡಿ) S ಮತ್ತು T
|
69. | ಮಹಾತ್ಮಾಗಾಂಧಿಯವರು ತಮ್ಮ ಪ್ರಥಮ ‘‘ಸತ್ಯಾಗ್ರಹ’’ ವನ್ನು ಎಲ್ಲಿ ಆರಂಭಿಸಿದರು? |
|
| (ಎ) | ದಂಡಿ |
| (ಬಿ) | ಬಾರ್ಡೋಲಿ |
| (ಸಿ) | ಚಂಪಾರಣ್ಯ |
| (ಡಿ) | ಸಾಬರಮತಿ |
CORRECT ANSWER
(ಸಿ) ಚಂಪಾರಣ್ಯ
|
70. | ಯಾವ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿ-ಇರ್ವಿನ್ ಒಪ್ಪಂದ ಅಂಗೀಕರಿಸಲ್ಪಟ್ಟಿತ್ತು? |
|
| (ಎ) | ಕಲ್ಕತ್ತಾ ಅಧಿವೇಶನ |
| (ಬಿ) | ಕರಾಚಿ ಅಧಿವೇಶನ |
| (ಸಿ) | ಲಾಹೋರ್ ಅಧಿವೇಶನ |
| (ಡಿ) | ತ್ರಿಪುರ ಅಧಿವೇಶನ |
CORRECT ANSWER
(ಬಿ) ಕರಾಚಿ ಅಧಿವೇಶನ
|
71. | ಸೂಕ್ತ ಪರ್ಯಾಯ ಪದ ಆರಿಸಿ: |
| ಆಹಾರ: ಹೊಟ್ಟೆ :: ಇಂಧನ : |
|
| (ಎ) | ಇಂಜಿನ್ (ಯಂತ್ರ) |
| (ಬಿ) | ವಿಮಾನ |
| (ಸಿ) | ಟ್ರಕ್ |
| (ಡಿ) | ಆಟೋಮೊಬೈಲ್ (ವಾಹನ) |
CORRECT ANSWER
(ಎ) ಇಂಜಿನ್ (ಯಂತ್ರ)
|
72. | ಗುಂಪಿನಲ್ಲಿರುವ ಇತರ ಪದಗಳಿಗೆ ಕಡಿಮೆ ಸರಿಹೊಂದುವ ಪದ ಆರಿಸಿ: |
|
| (ಎ) | ಗನ್ |
| (ಬಿ) | ಪಿಸ್ತೂಲ್ |
| (ಸಿ) | ಖಡ್ಗ |
| (ಡಿ) | ರೈಫಲ್ |
CORRECT ANSWER
(ಸಿ) ಖಡ್ಗ
|
73. | ಶಬ್ದದ ತೀವ್ರತೆಯನ್ನು ಅಳೆಯಲು ಇರುವ ಏಕಮಾನ ಯಾವುದು? |
|
| (ಎ) | ಫ್ಯಾರನ್‌ಹೀಟ್ |
| (ಬಿ) | ಸೆಲ್ಸಿಯಸ್ |
| (ಸಿ) | ಡೆಸಿಬಲ್ಸ್ |
| (ಡಿ) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(ಸಿ) ಡೆಸಿಬಲ್ಸ್
|
74. | ಭಾರತದಲ್ಲಿ ಫ್ರೆಂಚರ ಅದೃಷ್ಟ ಪರೀಕ್ಷೆಗೆ ನಿರ್ಣಾಯಕವಾದ ಕದನ ಯಾವುದು? |
|
| (ಎ) | ಪ್ಲಾಸಿ ಕದನ |
| (ಬಿ) | ಬಕ್ಸಾರ್ ಕದನ |
| (ಸಿ) | ಪ್ರಥಮ ಕರ್ನಾಟಕ ಯುದ್ಧ |
| (ಡಿ) | ವಾಂಡೀವಾಶ್ ಕದನ |
CORRECT ANSWER
(ಡಿ) ವಾಂಡೀವಾಶ್ ಕದನ
|
75. | ಯಾವ ಇಸವಿಯಲ್ಲಿ ಕಸ್ತೂರ್ ಬಾ ಗಾಂಧಿಯವರು ಜೈಲಿನಲ್ಲಿ ನಿಧನ ಹೊಂದಿದರು? |
|
| (ಎ) | 1944 |
| (ಬಿ) | 1940 |
| (ಸಿ) | 1942 |
| (ಡಿ) | 1946 |
CORRECT ANSWER
(ಎ) 1944
|
76. | ಇವುಗಳಲ್ಲಿ ಯಾವುದು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ? |
|
| (ಎ) | ಡೈನಮೊ |
| (ಬಿ) | ಜನರೇಟರ್ (ಉತ್ಪಾದಕ ಯಂತ್ರ) |
| (ಸಿ) | ಮೋಟಾರ್ (ಚಾಲಕ ಯಂತ್ರ) |
| (ಡಿ) | ಇನ್ವರ್ಟರ್ (ವಿಪರ್ಯಯಕ) |
CORRECT ANSWER
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
|
77. | 2018ರ G-20 ಸಮಿಟ್ ನ್ನು ಯಾವ ದೇಶವು ನಡೆಸಿಕೊಟ್ಟಿತು? |
|
| (ಎ) | ರಷ್ಯಾ |
| (ಬಿ) | ಅರ್ಜೆಂಟೀನಾ |
| (ಸಿ) | ಯು.ಕೆ |
| (ಡಿ) | ಡೆನ್ಮಾರ್ಕ್ |
CORRECT ANSWER
(ಬಿ) ಅರ್ಜೆಂಟೀನಾ
|
78. | ನವೆಂಬರ್ 28, 2018 ರಂದು ಭಾರತದ ಯಾವ ಎರಡು ರಾಜ್ಯಗಳಲ್ಲಿ ಚುನಾವಣೆ ನಡೆಯಿತು? |
|
| (ಎ) | ಮೇಘಾಲಯ, ಕೇರಳ |
| (ಬಿ) | ರಾಜಸ್ತಾನ, ತ್ರಿಪುರ |
| (ಸಿ) | ಛತ್ತೀಸ್‌ಗಢ್, ತೆಲಂಗಾಣ |
| (ಡಿ) | ಮಧ್ಯಪ್ರದೇಶ, ಮಿಜೋರಾಮ್ |
CORRECT ANSWER
(ಡಿ) ಮಧ್ಯಪ್ರದೇಶ, ಮಿಜೋರಾಮ್
|
79. | ನವೆಂಬರ್ 26, 2018 ರಂದು ಉಪ-ರಾಷ್ಟ್ರಪತಿ ವೆಂಕಯ್ಯ ನಾಯ್ಡುರವರು ದೇರಾ ಬಾಬಾ ನಾನಕ್- ಕರ್ತಾರ್ ಪುರ ಸಾಹೀಬ್ ರಸ್ತೆ ಕಾರಿಡಾರ್ ನಿರ್ಮಾಣದ ಅಡಿಪಾಯವನ್ನು ಪಂಜಾಬಿನ ಯಾವ ಜಿಲ್ಲೆಯಲ್ಲಿ ಸ್ಥಾಪಿಸಿದರು? |
|
| (ಎ) | ಫಿರೋಜ್ ಪುರ |
| (ಬಿ) | ಕರ್ತಾರ್ ಪುರ |
| (ಸಿ) | ಗುರ್ದಾಸ್‌ಪುರ |
| (ಡಿ) | ಆಮೃತ್‌ಸರ್ |
CORRECT ANSWER
(ಸಿ) ಗುರ್ದಾಸ್‌ಪುರ
|
80. | KONKAN ಎಂಬುದು ಯಾವ ಎರಡು ದೇಶಗಳ ನಡುವಿನ ನೌಕಾ ಅಭ್ಯಾಸವಾಗಿದೆ? |
|
| (ಎ) | ಯುನೈಟೆಡ್ ಕಿಂಗ್‌ಡಮ್ ಮತ್ತು ಚೀನಾ |
| (ಬಿ) | ಭಾರತ ಮತ್ತು ಬಾಂಗ್ಲಾದೇಶ |
| (ಸಿ) | ಬಾಂಗ್ಲಾದೇಶ ಮತ್ತು ಮ್ಯಾನ್‌ಮಾರ್ |
| (ಡಿ) | ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ |
CORRECT ANSWER
(ಡಿ) ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್
|
81. | ಲೋಕಸಭೆ ಚುನಾವಣೆಗಾಗಿ, ನಾಮಪತ್ರವು ಇವರಿಂದ ಸಲ್ಲಿಸಲ್ಪಡಬಹುದು |
|
| (ಎ) | ಮತಕ್ಷೇತ್ರವೊಂದರ ಮತದಾರರ ಪಟ್ಟಿಯಲ್ಲಿ ಹೆಸರು ಕಂಡು ಬರುವ ಭಾರತದ ಯಾವುದೇ ಪ್ರಜೆ |
| (ಬಿ) | ಭಾರತದಲ್ಲಿ ವಾಸಿಸುವ ಯಾರಿಂದಲೂ |
| (ಸಿ) | ಯಾವ ಮತಕ್ಷೇತ್ರದಿಂದ ಚುನಾವಣೆಯು ಸ್ಪರ್ಧಿಸಲ್ಪಡುತ್ತದೆಯೋ ಆ ಮತಕ್ಷೇತ್ರದ ಓರ್ವ ನಿವಾಸಿ |
| (ಡಿ) | ಭಾರತದ ಯಾವುದೇ ಪ್ರಜೆ |
CORRECT ANSWER
(ಎ) ಮತಕ್ಷೇತ್ರವೊಂದರ ಮತದಾರರ ಪಟ್ಟಿಯಲ್ಲಿ ಹೆಸರು ಕಂಡು ಬರುವ ಭಾರತದ ಯಾವುದೇ ಪ್ರಜೆ
|
82. | ಸ್ವಲ್ಪ ಸಮಯದವರೆಗೆ ಸುದ್ದಿಯಲ್ಲಿದ್ದ ‘ಡಿಜಿ-ಲಾಕರ್’ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ ಸರಿಯಾಗಿವೆ? |
| A. | ಇದು ಒಂದು ಡಿಜಿಟಲ್ ಭಾರತ ಕಾರ್ಯಕ್ರಮದಡಿಯಲ್ಲಿ ಭಾರತ ಸರ್ಕಾರದಿಂದ ಕೊಡಮಾಡಲ್ಪಟ್ಟ ಡಿಜಿಟಲ್ ಲಾಕರ್ ವ್ಯವಸ್ಥೆಯಾಗಿರುತ್ತದೆ. |
| B. | ಇದು ನೀವು ದೈಹಿಕವಾಗಿ ಎಲ್ಲಿದ್ದೀರಿ ಎಂಬುವುದರ ಪರಿಗಣನೆಯಿಲ್ಲದೆ ನಿಮ್ಮ ಇ-ಡಾಕ್ಯುಮೆಂಟುಗಳಿಗೆ ನಿಮಗೆ ಗಮ್ಯತೆಗೆ (ವೀಕ್ಷಣೆಗೆ, ಹಸ್ತಗತ ಮಾಡಿಕೊಳ್ಳಲು) ಅವಕಾಶ ಕಲ್ಪಿಸಿ ಕೊಡುತ್ತದೆ. |
| | ಕೆಳಗಿನ ಸಂಜ್ಞಾಕ್ಷರಗಳನ್ನು ಬಳಸಿ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿರಿ. |
|
| (ಎ) | 1 ಮತ್ತು 2 ಎರಡೂ ಹೌದು |
| (ಬಿ) | 1 ಮಾತ್ರ |
| (ಸಿ) | 2 ಮಾತ್ರ |
| (ಡಿ) | 1 ಮತ್ತು 2ರಲ್ಲಿ ಯಾವುದೂ ಅಲ್ಲ |
CORRECT ANSWER
(ಎ) 1 ಮತ್ತು 2 ಎರಡೂ ಹೌದು
|
83. | ಕೆಳಗಿನ ಗ್ರಹಗಳಲ್ಲಿ ಯಾವುದು ಸೂರ್ಯನ ಸುತ್ತ ಒಂದು ಬಾರಿ ಸುತ್ತಲು ಗರಿಷ್ಠ ಸಮಯವನ್ನು ತೆಗೆದುಕೊಳ್ಳುತ್ತದೆ? |
|
| (ಎ) | ಶುಕ್ರ |
| (ಬಿ) | ಭೂಮಿ |
| (ಸಿ) | ಮಂಗಳ |
| (ಡಿ) | ಗುರು |
CORRECT ANSWER
(ಡಿ) ಗುರು
|
84. | ಹರಪ್ಪಾ ನಗರವು ಯಾವ ನದಿ ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿತು? |
|
| (ಎ) | ಸಟ್ಲೆಜ್ ನದಿ |
| (ಬಿ) | ಸಿಂಧೂ ನದಿ |
| (ಸಿ) | ರಾವಿ ನದಿ |
| (ಡಿ) | ಬಿಯಾಸ್ ನದಿ |
CORRECT ANSWER
(ಸಿ) ರಾವಿ ನದಿ
|
85. | ಕೇಂದ್ರ ರೈಲ್ವೆ ಮಂತ್ರಿಯೂ (1991-95) ಆಗಿದ್ದು, ಇತ್ತೀಚೆಗೆ ತೀರಿಕೊಂಡ ರಾಜಕಾರಣಿ ಯಾರು? |
|
| (ಎ) | ದಿನೇಶ್ ತ್ರಿವೇದಿ |
| (ಬಿ) | ಸಿ.ಪಿ.ಜೋಶಿ |
| (ಸಿ) | ಮುಕುಲ್ ರಾಯ್ |
| (ಡಿ) | ಸಿ.ಕೆ.ಜಾಫರ್ ಷರೀಫ್ |
CORRECT ANSWER
(ಡಿ) ಸಿ.ಕೆ.ಜಾಫರ್ ಷರೀಫ್
|
86. | ಅಂಚಿನ ಹಿನ್ನೆಲೆಯವರು ಸ್ಪಾರ್ಟ್- ಆಪ್ ಮತ್ತು ಎಂಟರ್ ಪ್ರೀನಿಯರ್ ಗಳಿಗೆ ಸಹಾಯ ಒದಗಿಸಲು ಕರ್ನಾಟಕ ಸರ್ಕಾರವು ಒಂದು ಯೋಜನೆಯನ್ನು ಆರಂಭಿಸಿದೆ. ಅದರ ಹೆಸರೇನು? |
|
| (ಎ) | ಸಹಮತಿ |
| (ಬಿ) | ಉನ್ನತಿ |
| (ಸಿ) | ಪ್ರಗತಿ |
| (ಡಿ) | ಪ್ರಕಾಶ್ |
CORRECT ANSWER
(ಬಿ) ಉನ್ನತಿ
|
87. | ಭಾರತವು ಇತ್ತೀಚೆಗೆ 36 ಫೈಟರ್ ವಿಮಾನಗಳನ್ನು (ರಫೇಲ್ ಡೆಸ್ಸಾಲ್ಟ್) ಖರೀದಿಸಲು ನಿಶ್ಚಯಿಸಿದೆ. ಈ ಕಂಪನಿಯು ಯಾವ ದೇಶದಲ್ಲಿದೆ? |
|
| (ಎ) | ರಷ್ಯಾ |
| (ಬಿ) | ಯು.ಎಸ್.ಎ |
| (ಸಿ) | ಫ್ರಾನ್ಸ್ |
| (ಡಿ) | ಇಟಲಿ |
CORRECT ANSWER
(ಸಿ) ಫ್ರಾನ್ಸ್
|
88. | ಡಿಸೆಂಬರ್ 1, 2018 ರಂದು ಭಾರತದ 23ನೆಯ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡವರು ಯಾರು? |
|
| (ಎ) | ಅಶೋಕ್ ಲಾವಸ |
| (ಬಿ) | ಸುನಿಲ್ ಅರೋರಾ |
| (ಸಿ) | ಒ.ಪಿ.ರಾವತ್ |
| (ಡಿ) | ನಜೀಮ್ ಜೈದಿ |
CORRECT ANSWER
(ಬಿ) ಸುನಿಲ್ ಅರೋರಾ
|
89. | ಸಂಗೀತಕ್ಕೆ ಸಂಬಂಧಿಸಿದಂತೆ ವೇದ ಯಾವುದು? |
|
| (ಎ) | ಅಥರ್ವಣ ವೇದ |
| (ಬಿ) | ಋಗ್ವೇದ |
| (ಸಿ) | ಸಾಮವೇದ |
| (ಡಿ) | ಯಜುರ್ವೇದ |
CORRECT ANSWER
(ಸಿ) ಸಾಮವೇದ
|
90. | ಕೆಳಗಿನ ಜೋಡಿ (ಯುಗಳ)ಗಳನ್ನು ಪರಿಗಣಿಸಿರಿ: |
| | ಯಾತ್ರಾ ಕ್ಷೇತ್ರ | ಸ್ಥಳ |
| 1. | ಶ್ರೀಶೈಲಂ | ನಲ್ಲಮಲ್ಲ ಬೆಟ್ಟಗಳು |
| 2. | ಓಂಕಾರೇಶ್ವರ | ಸತ್ಮಲಾ ಬೆಟ್ಟಗಳು |
| 3. | ಪುಷ್ಕರ | ಮಹಾದೇವ ಬೆಟ್ಟಗಳು |
| ಈ ಮೇಲಿನ ಯಾವ ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತದೆ? |
|
| (ಎ) | 1 ಮತ್ತು 3 ಮಾತ್ರ |
| (ಬಿ) | 1 ಮಾತ್ರ |
| (ಸಿ) | 2 ಮತ್ತು 3 ಮಾತ್ರ |
| (ಡಿ) | 1, 2 ಮತ್ತು 3 |
| |
CORRECT ANSWER
(ಬಿ) 1 ಮಾತ್ರ
|
91. | ಸುದ್ದಿಯಲ್ಲಿರುವ H1N1ವೈರಸ್ (ಸೋಂಕು) ಕೆಳಗಿನವುಗಳಲ್ಲಿ ಯಾವ ರೋಗಕ್ಕೆ ಸಂಬಂಧಿಸಿದ್ದು? |
|
| (ಎ) | ಡೆಂಗ್ಯೂ |
| (ಬಿ) | ಏಡ್ಸ್ |
| (ಸಿ) | ಹಕ್ಕಿ ಜ್ವರ |
| (ಡಿ) | ಹಂದಿ ಜ್ವರ |
CORRECT ANSWER
(ಡಿ) ಹಂದಿ ಜ್ವರ
|
92. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ: |
| 1. | ಲೋಕಸಭೆಯ ಅಥವಾ ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ, ವಿಜಯಿ ಅಭ್ಯರ್ಥಿಯು ಜಯಗಳಿಸಿದ್ದಾರೆಂದು ಘೋಷಿಸಲ್ಪಡಲು ಆತ/ ಆಕೆ ಕೊನೆಯ ಪಕ್ಷ ಒಟ್ಟು ಚಲಾವಣೆಯಾದ ಮತಗಳ 50 ಶೇಕಡ ರಷ್ಟನ್ನಾದರೂ ಪಡೆಯಬೇಕು. |
| 2. | ಭಾರತದ ಸಂವಿಧಾನದಲ್ಲಿ ವಿಧಿಸಲ್ಪಟ್ಟಿರುವಂತೆ ಲೋಕಸಭೆಯಲ್ಲಿ ಸಭಾಧ್ಯಕ್ಷರ (ಸ್ಪೀಕರ್ ರವರ) ಹುದ್ದೆಯು ಬಹುಮತವುಳ್ಳ ಪಕ್ಷ ಮತ್ತು ಉಪಸಭಾಧ್ಯಕ್ಷರ(ಡೆಪ್ಯೂಟಿ ಸ್ಪೀಕರ್) ಸ್ಥಾನ ವಿರೋಧ ಪಕ್ಷಕ್ಕೆ ಹೋಗುತ್ತವೆ.
|
| | ಮೇಲೆ ನೀಡಲಾದ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ ಸರಿಯಾಗಿವೆ? |
|
| (ಎ) | 1 ಮತ್ತು 2 ಎರಡೂ ಹೌದು |
| (ಬಿ) | 1 ಮಾತ್ರ |
| (ಸಿ) | 2 ಮಾತ್ರ |
| (ಡಿ) | 1 ಮತ್ತು 2 ರಲ್ಲಿ ಯಾವುದೂ ಅಲ್ಲ |
CORRECT ANSWER
(ಡಿ) 1 ಮತ್ತು 2 ರಲ್ಲಿ ಯಾವುದೂ ಅಲ್ಲ
|
93. | ಜಾರ್ಜ್ ಎಚ್.ಡಬ್ಲೂ. ಬುಶ್ ರವರು ತಮ್ಮ 94ನೆಯ ವಯಸ್ಸಿನಲ್ಲಿ ತೀರಿಕೊಂಡರು. ಅವರು ಯಾವ ದೇಶದ ಮಾಜಿ ರಾಷ್ಟ್ರಪತಿಯಾಗಿದ್ದರು? |
|
| (ಎ) | ಫ್ರಾನ್ಸ್ |
| (ಬಿ) | ಬ್ರೆಜಿಲ್ |
| (ಸಿ) | ಇರಾಕ್ |
| (ಡಿ) | ಯುಎಸ್ಎ |
CORRECT ANSWER
(ಡಿ) ಯುಎಸ್ಎ
|
94. | ಇತ್ತೀಚೆಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಿಂದ ಗೌರವಿಸಲ್ಪಟ್ಟವರು ಯಾರು? |
|
| (ಎ) | ಲಕ್ಷ್ಮಿ ಮಿತ್ತಲ್ |
| (ಬಿ) | ಅಜೀಮ್ ಪ್ರೇಮ್‌ಜೀ |
| (ಸಿ) | ಚಂದಾ ಕೊಚ್ಚಾರ್ |
| (ಡಿ) | ವಿಶಾಲ್ ಸಿಕ್ಕ |
CORRECT ANSWER
(ಬಿ) ಅಜೀಮ್ ಪ್ರೇಮ್‌ಜೀ
|
95. | ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥರು ಇತ್ತೀಚೆಗೆ ಯಾವ ಜಿಲ್ಲೆಯನ್ನು ‘ಅಯೋಧ್ಯಾ’ ಎಂದು ಮರು ಹೆಸರಿಸಿದರು? |
|
| (ಎ) | ಫೈಜಾಬಾದ್ |
| (ಬಿ) | ಕಾನ್ಪುರ |
| (ಸಿ) | ಅಲಹಾಬಾದ್ |
| (ಡಿ) | ಬರೇಲಿ |
CORRECT ANSWER
(ಎ) ಫೈಜಾಬಾದ್
|
96. | 2011ರ ಜನಗಣತಿಯನುಸಾರ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದಾಗಿತ್ತು? |
|
| (ಎ) | ಮಹಾರಾಷ್ಟ್ರ |
| (ಬಿ) | ಬಿಹಾರ |
| (ಸಿ) | ಉತ್ತರ ಪ್ರದೇಶ |
| (ಡಿ) | ಪಶ್ಚಿಮ ಬಂಗಾಳ |
CORRECT ANSWER
(ಸಿ) ಉತ್ತರ ಪ್ರದೇಶ
|
97. | ಪಾದ ಮತ್ತು ಬಾಯಿ ರೋಗ ಸಾಮಾನ್ಯವಾಗಿ ಕಂಡು ಬರುವುದು |
|
| (ಎ) | ಮನುಷ್ಯರಲ್ಲಿ |
| (ಬಿ) | ನಾಯಿ ಹಾಗೂ ಬೆಕ್ಕುಗಳಲ್ಲಿ |
| (ಸಿ) | ಜಾನುವಾರುಗಳಲ್ಲಿ |
| (ಡಿ) | ಹಂದಿಗಳಲ್ಲಿ |
CORRECT ANSWER
(ಸಿ) ಜಾನುವಾರುಗಳಲ್ಲಿ
|
98. | ಕೆಳಗಿನ ಪರ್ವತ ಶ್ರೇಣಿಗಳಲ್ಲಿ ಯಾವುದು ಭಾರತದಲ್ಲಿನ ಒಂದು ರಾಜ್ಯದ ಮೇಲೆ ಮಾತ್ರ ಹರಡಿರುತ್ತದೆ? |
|
| (ಎ) | ಅಜಂತ |
| (ಬಿ) | ಅರಾವಳಿ |
| (ಸಿ) | ಸಾತ್‌ಪುರ |
| (ಡಿ) | ಸಹ್ಯಾದ್ರಿ |
CORRECT ANSWER
(ಎ) ಅಜಂತ
|
99. | ‘‘ಬಸದಿ’’ ಧಾರ್ಮಿಕ ಶಬ್ದವು ____________ ದೊಂದಿಗೆ ನಂಟನ್ನು ಹೊಂದಿರುತ್ತದೆ. |
|
| (ಎ) | ಜೈನ ಧರ್ಮ |
| (ಬಿ) | ಬೌದ್ಧ ಧರ್ಮ |
| (ಸಿ) | ಹಿಂದೂ ಧರ್ಮ |
| (ಡಿ) | ಪಾರ್ಸಿ ಧರ್ಮ |
CORRECT ANSWER
(ಎ) ಜೈನ ಧರ್ಮ
|
100. | ‘‘ಸಂಘಂ ಕಾಲ’’ ಎಂಬಲ್ಲಿ ಸಂಘಂ ಎಂಬುವುದು ಈ ಅರ್ಥವನ್ನು ಕೊಡುತ್ತದೆ. |
|
| (ಎ) | ಸೇನಾ ಮುಖ್ಯಸ್ಥರ ಸಭೆ |
| (ಬಿ) | ರಾಜರ ಸಭೆ |
| (ಸಿ) | ಅರ್ಚಕರ ಸಭೆ |
| (ಡಿ) | ತಮಿಳು ಲೇಖಕರ ಸಭೆ |
CORRECT ANSWER
(ಡಿ) ತಮಿಳು ಲೇಖಕರ ಸಭೆ