WhatsApp Group Join Now
Telegram Group Join Now

Police Constable Previous Paper 23-07-2017

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ

 

1.ಜನಪ್ರಿಯ ಕಾದಂಬರಿ ‘ಸಂಸ್ಕಾರ’ದ ಕರ್ತೃ
 (ಎ)ಗಿರೀಶ್ ಕಾರ್ನಾಡ್
 (ಬಿ)ಎಸ್.ಎಲ್. ಭೈರಪ್ಪ
 (ಸಿ)ಯು.ಆರ್. ಅನಂತಮೂರ್ತಿ
 (ಡಿ)ಕುವೆಂಪು

CORRECT ANSWER

(ಸಿ) ಯು.ಆರ್. ಅನಂತಮೂರ್ತಿ


2.ತಾಳಿಕೋಟೆ ಕದನದ ಮಹತ್ವವೇನೆಂದರೆ ಅದರಿಂದ
 (ಎ)ಕೃಷ್ಣದೇವರಾಯನಿಗೆ ಜಯ ಲಭಿಸಿತು
 (ಬಿ)ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು
 (ಸಿ)ಪೋರ್ಚುಗೀಸರು ಕರ್ನಾಟಕ ಪ್ರವೇಶಿಸಿದರು
 (ಡಿ) ದಖನ್ನಿನ ಸುಲ್ತಾನರಿಗೆ ಸೋಲಾಯಿತು
CORRECT ANSWER

(ಬಿ) ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾಯಿ


3.ಶರಾವತಿ ನದಿಯು ಯಾವ ಪಟ್ಟಣದ ಮೂಲಕ ಹರಿಯುತ್ತದೆ?
 (ಎ)ಕಾರವಾರ
 (ಬಿ)ದಾಂಡೇಲಿ
 (ಸಿ)ಹೊನ್ನಾವರ
 (ಡಿ)ಹಾವೇರಿ
CORRECT ANSWER

(ಸಿ) ಹೊನ್ನಾವರ


4.2011ನೇ ಸಾಲಿನ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ಲಿಂಗಾನುಪಾತವು
 (ಎ)968
 (ಬಿ)930
 (ಸಿ)943
 (ಡಿ)980
CORRECT ANSWER

(ಎ) 968


5.ರಾಜು ತನ್ನ ಮನೆಯಿಂದ ಹೊರಟು ಉತ್ತರ ದಿಕ್ಕಿಗೆ 5 ಕಿಲೋಮೀಟರ್ ನಡೆದನು. ಅಲ್ಲಿಂದ ದಿಕ್ಕನ್ನು ಬದಲಾಯಿಸಿ ಪೂರ್ವ ದಿಕ್ಕಿಗೆ 7 ಕಿಲೋಮೀಟರ್ ನಡೆದನು. ಅಲ್ಲಿಂದ ದಕ್ಷಿಣ ದಿಕ್ಕಿಗೆ 5 ಕಿಲೋ ಮೀಟರ್ ನಡೆದನು. ಹಾಗಾದರೆ ಅವನು ತನ್ನ ಮನೆಯಿಂದ ಎಷ್ಟು ದೂರದಲ್ಲಿದ್ದಾನೆ?
 (ಎ)5 ಕಿ.ಮೀ.
 (ಬಿ)6 ಕಿ.ಮೀ.
 (ಸಿ)7 ಕಿ.ಮೀ.
 (ಡಿ)8 ಕಿಮೀ.
CORRECT ANSWER

(ಸಿ) 7 ಕಿ.ಮೀ.


6.ಉತ್ತರ ಪ್ರದೇಶದ ರಾಜಧಾನಿ ಯಾವುದು?
 (ಎ)ಅಲಹಾಬಾದ್
 (ಬಿ)ವಾರಾಣಸಿ
 (ಸಿ)ನೋಯಡಾ
 (ಡಿ)ಲಕ್ನೋ
CORRECT ANSWER

(ಡಿ) ಲಕ್ನೋ


7.ಇವುಗಳಲ್ಲಿ ಯಾವುದು ದ್ರಾವಿಡ ಭಾಷೆ ಅಲ್ಲ?
 (ಎ)ತೆಲುಗು
 (ಬಿ)ಮರಾಠಿ
 (ಸಿ)ತುಳು
 (ಡಿ)ಕನ್ನಡ
CORRECT ANSWER

(ಬಿ) ಮರಾಠಿ


8.ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಮುಖ್ಯವಾಗಿ ಬೆಳೆಯಲಾಗುತ್ತದೆ?
 (ಎ)ಕೋಲಾರ
 (ಬಿ)ಉಡುಪಿ
 (ಸಿ)ಚಿಕ್ಕಮಗಳೂರು
 (ಡಿ)ಬೆಳಗಾವಿ
CORRECT ANSWER

(ಸಿ) ಚಿಕ್ಕಮಗಳೂರು


9.‘ಶ್ವೇತ ಕ್ರಾಂತಿ’ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
 (ಎ)ಮೊಟ್ಟೆ ಉತ್ಪಾದನೆ
 (ಬಿ)ಪ್ಲಾಸ್ಟಿಕ್ ಉತ್ಪಾದನೆ
 (ಸಿ)ಆಲೂಗೆಡ್ಡೆ ಉತ್ಪಾದನೆ
 (ಡಿ)ಹಾಲು ಉತ್ಪಾದನೆ
CORRECT ANSWER

(ಡಿ) ಹಾಲು ಉತ್ಪಾದನೆ


10.‘‘ವಿಕ್ರಮಾರ್ಜುನ ವಿಜಯ’’ದ ಕರ್ತೃ
 (ಎ)ರನ್ನ
 (ಬಿ)ಪಂಪ
 (ಸಿ)ದುರ್ಗಸಿಂಹ
 (ಡಿ)ಬಸವಣ್ಣ
CORRECT ANSWER

(ಬಿ) ಪಂಪ


11.ಭಾರತದ ಸುಪ್ರೀಂಕೋರ್ಟ್‌ನ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ
 (ಎ)ನ್ಯಾ. ಜೆ.ಎಸ್. ಖೇಹರ್
 (ಬಿ)ನ್ಯಾ. ಭಾಸ್ಕರ್ ರಾವ್
 (ಸಿ)ನ್ಯಾ. ವಿಶ್ವನಾಥ್ ಶೆಟ್ಟಿ
 (ಡಿ)ಮೇಲಿನ ಯಾರೂ ಅಲ್ಲ
CORRECT ANSWER

(ಎ) ನ್ಯಾ. ಜೆ.ಎಸ್. ಖೇಹರ್


12.2016ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ
 (ಎ)ಶಂಖ ಘೋಷ್
 (ಬಿ)ರಾಮಚಂದ್ರ ಗುಹ
 (ಸಿ)ಎಸ್.ಎಲ್. ಭೈರಪ್ಪ
 (ಡಿ)ಕುಂ.ವೀರಭದ್ರಪ್ಪ
CORRECT ANSWER

(ಎ) ಶಂಖ ಘೋಷ್


13.ಭಾರತದ ಅಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಯಾರು ಭಾಗವಹಿಸುತ್ತಾರೆ?
 (ಎ)ಸಂಸತ್ತಿನ ಸದಸ್ಯರುಗಳು ಮಾತ್ರ
 (ಬಿ)ವಿಧಾನ ಪರಿಷತ್ತಿನ ಮತ್ತು ವಿಧಾನಸಭಾ ಸದಸ್ಯರುಗಳು ಮಾತ್ರ
 (ಸಿ)ರಾಜ್ಯಸಭಾ, ಲೋಕಸಭಾ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳು ಮಾತ್ರ
 (ಡಿ)ರಾಜ್ಯಸಭಾ, ಲೋಕಸಭಾ ಮತ್ತು ವಿಧಾನಸಭಾ ಸದಸ್ಯರುಗಳು

CORRECT ANSWER

(ಡಿ) ರಾಜ್ಯಸಭಾ, ಲೋಕಸಭಾ ಮತ್ತು ವಿಧಾನಸಭಾ ಸದಸ್ಯರುಗಳು


14.‘ಚಿಕ್ಕವೀರ ರಾಜೇಂದ್ರ’ ಕೃತಿಯ ಕರ್ತೃ ಯಾರು?
 (ಎ)ಮಾಸ್ತಿ ವೆಂಕಟೇಶ ಅಯ್ಯಂಗಾರ್
 (ಬಿ)ಕುವೆಂಪು
 (ಸಿ)ದ.ರಾ. ಬೇಂದ್ರೆ
 (ಡಿ)ಅನಂತಮೂರ್ತಿ
CORRECT ANSWER

(ಎ) ಮಾಸ್ತಿ ವೆಂಕಟೇಶ ಅಯ್ಯಂಗಾರ್


15.ನ್ಯೂಜಿಲ್ಯಾಂಡ್ ದೇಶದ ರಾಜಧಾನಿಯ ಹೆಸರು
 (ಎ)ಪೋರ್ಟ್ ಮಾರ್ಸೆಬಿ
 (ಬಿ)ಸಿಡ್ನಿ
 (ಸಿ)ಅಡಿಲೇಡ್
 (ಡಿ)ವೆಲಿಂಗ್‌ಟನ್‌
CORRECT ANSWER

(ಡಿ) ವೆಲಿಂಗ್‌ಟನ್‌


16.ಶ್ರೀಹರಿಕೋಟಾ ಸ್ಥಳವು ಯಾವ ಕಾರಣಕ್ಕಾಗಿ ಪ್ರಸಿದ್ಧವಾಗಿದೆ?
 (ಎ)ಕ್ರಿಕೆಟ್ ಕ್ರೀಡಾಂಗಣ
 (ಬಿ)ಧಾರ್ಮಿಕ ಸ್ಥಳ
 (ಸಿ)ಬಾಹ್ಯಾಕಾಶ ಕೇಂದ್ರ
 (ಡಿ)ರಾಜಕೀಯ ಚಟುವಟಿಕೆಗಳಿಗೆ
CORRECT ANSWER

(ಸಿ) ಬಾಹ್ಯಾಕಾಶ ಕೇಂದ್ರ


17.ಎಫ್ – 16 ಎಂಬುದು
 (ಎ)ಯುದ್ಧ ವಿಮಾನ
 (ಬಿ)ನೌಕಾನೆಲೆ
 (ಸಿ)ಶಿಖರ
 (ಡಿ)ಮೇಲಿನ ಯಾವುದೂ ಅಲ್ಲ
CORRECT ANSWER

(ಎ) ಯುದ್ಧ ವಿಮಾನ


18.GST ಎಂದರೆ
 (ಎ)Good and Services Tax
 (ಬಿ)General Service Tax
 (ಸಿ)Goods Sales Tax
 (ಡಿ)ಮೇಲಿನ ಯಾವುದೂ ಅಲ್ಲ
CORRECT ANSWER

(ಎ) Good and Services Tax


19.‘ಪ್ರಧಾನಮಂತ್ರಿ ಉಜ್ವಲ ಯೋಜನೆ’ಯನ್ನು ಈ ಕೆಳಗಿನ ಯಾವ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗಿದೆ?
 (ಎ)ಬಿ.ಪಿ.ಎಲ್. ಕುಟುಂಬಗಳಿಗೆ ಎಲ್.ಪಿ.ಜಿ. ಸಂಪರ್ಕ ಒದಗಿಸುವುದು
 (ಬಿ)ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವುದು
 (ಸಿ)ಹೆಣ್ಣು ಮಕ್ಕಳನ್ನು ಸೇನೆಗೆ ಸೇರಿಸಿಕೊಳ್ಳುವುದು
 (ಡಿ)ನಗರಗಳ ಸೌಂದರ್ಯೀಕರಣ
CORRECT ANSWER

(ಎ) ಬಿ.ಪಿ.ಎಲ್. ಕುಟುಂಬಗಳಿಗೆ ಎಲ್.ಪಿ.ಜಿ. ಸಂಪರ್ಕ ಒದಗಿಸುವುದು


20.‘ಚಂಪಾರಣ್ಯ ಸತ್ಯಾಗ್ರಹ’ದ ನಾಯಕತ್ವ ವಹಿಸಿದ್ದವರು
 (ಎ)ಸರ್ದಾರ್ ಪಟೇಲ್
 (ಬಿ)ಮಹಾತ್ಮ ಗಾಂಧಿ
 (ಸಿ)ಜವಾಹರ್‌ಲಾಲ್‌ ನೆಹರೂ
 (ಡಿ)ಲಾಲ್ ಬಹಾದ್ದೂರ್ ಶಾಸ್ತ್ರಿ
CORRECT ANSWER

(ಬಿ) ಮಹಾತ್ಮ ಗಾಂಧಿ


21.ಈ ವಾದ್ಯವು ತಾಳ ವಾದ್ಯವಾಗಿದೆ
 (ಎ)ಮೃದಂಗ
 (ಬಿ)ತಂಬೂರಿ
 (ಸಿ)ಪಿಟೀಲು
 (ಡಿ)ವೀಣೆ
CORRECT ANSWER

(ಎ) ಮೃದಂಗ


22.ಭಾರತೀಯ ಸರ್ವೋಚ್ಚ ನ್ಯಾಯಾಲಯದ ಕೇಂದ್ರ ಕಚೇರಿ ಇರುವುದು.
 (ಎ)ನವದೆಹಲಿ
 (ಬಿ)ಬೆಂಗಳೂರು
 (ಸಿ)ಮುಂಬೈ
 (ಡಿ)ಕೋಲ್ಕತಾ
CORRECT ANSWER

(ಎ) ನವದೆಹಲಿ


23.ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರಾವಧಿ
 (ಎ)5 ವರ್ಷಗಳು
 (ಬಿ)6 ವರ್ಷಗಳು
 (ಸಿ)4 ವರ್ಷಗಳು
 (ಡಿ)3 ವರ್ಷಗಳು
CORRECT ANSWER

(ಬಿ) 6 ವರ್ಷಗಳು


24.ಗ್ರಾಮೀಣ ಮಹಿಳೆಯರ ವಿಕಾಸಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ
 (ಎ)ಲೋಕಾಯುಕ್ತ
 (ಬಿ)ಸ್ತ್ರೀಶಕ್ತಿ
 (ಸಿ)ಸಾಕ್ಷರ ಭಾರತ
 (ಡಿ)ಕುಟುಂಬ ಕಲ್ಯಾಣ ಕಾರ್ಯಕ್ರಮ
CORRECT ANSWER

(ಬಿ) ಸ್ತ್ರೀಶಕ್ತಿ


25.‘ಮಾವಿನ ಹೊಯ್ಲು’ ಎಂಬ ಹೆಸರಿನ ಮಳೆ ಯಾವ ತಿಂಗಳಿನಲ್ಲಿ ಬರುತ್ತದೆ?
 (ಎ)ಡಿಸೆಂಬರ್
 (ಬಿ)ಏಪ್ರಿಲ್
 (ಸಿ)ಜೂನ್
 (ಡಿ) ಸೆಪ್ಟೆ ಂಬರ್
CORRECT ANSWER

(ಬಿ) ಏಪ್ರಿಲ್


26.ವೈದ್ಯರೊಬ್ಬರು ಸರಿಯಾದ ಬೆಳವಣಿಗೆಯಾಗದ ಮೂಳೆಗಳುಳ್ಳ ಮಗುವನ್ನು ಬೆಳಗಿನ ಬಿಸಿಲಿನಲ್ಲಿ ಓಡಾಡಿಸಲು ಸಲಹೆ ಮಾಡುತ್ತಾರೆ. ಇದಕ್ಕೆ ಸಹಾಯಕವಾಗುವ ವಿಕಿರಣ.
 (ಎ)ಕ್ಷ – ಕಿರಣ
 (ಬಿ)ಅವಕೆಂಪು ಕಿರಣ
 (ಸಿ)ನೇರಳಾತೀತ ಕಿರಣ
 (ಡಿ)ಗಾಮಾ ಕಿರಣ
CORRECT ANSWER

(ಸಿ) ನೇರಳಾತೀತ ಕಿರಣ


27.ಇಂಧನ ಉಳಿತಾಯಕ್ಕೆ ಈ ಕೆಳಗಿನ ಯಾವ ಅಭ್ಯಾಸ ಸೂಕ್ತವಲ್ಲ?
 (ಎ)ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವುದು
 (ಬಿ)ಸಣ್ಣ ದೂರವನ್ನು ಕ್ರಮಿಸಲು ಮೋಟಾರ್ ಸೈಕಲ್ ಅನ್ನು ಬಳಸುವುದು
 (ಸಿ)ಸಣ್ಣ ದೂರವನ್ನು ಕ್ರಮಿಸಲು ಸೈಕಲ್ ಅನ್ನು ಬಳಸುವುದು
 (ಡಿ)ಸಣ್ಣ ದೂರವನ್ನು ನಡೆದುಕೊಂಡು ಕ್ರಮಿಸುವುದು
CORRECT ANSWER

(ಬಿ) ಸಣ್ಣ ದೂರವನ್ನು ಕ್ರಮಿಸಲು ಮೋಟಾರ್ ಸೈಕಲ್ ಅನ್ನು ಬಳಸುವುದು


28.ಕಾರ್ಬುರೇಟರ್‌ನ ಕಾರ್ಯವೆಂದರೆ
 (ಎ)ಪೆಟ್ರೋಲನ್ನು ಮಾತ್ರ ಇಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ.
 (ಬಿ)ಗಾಳಿಯನ್ನು ಮಾತ್ರ ಇಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ.
 (ಸಿ)ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ.
 (ಡಿ)ಡೀಸೆಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ.
CORRECT ANSWER

(ಸಿ) ಪೆಟ್ರೋಲ್ ಮತ್ತು ಗಾಳಿಯ ಮಿಶ್ರಣವನ್ನು ಇಂಜಿನ್‌ಗೆ ಪ್ರವೇಶಿಸುವಂತೆ ಮಾಡುತ್ತದೆ.


29.ಕರ್ಕಾಟಕ ಸಂಕ್ರಾಂತಿ ವೃತ್ತವು ಈ ರಾಜ್ಯದ ಮೂಲಕ ಹಾದು ಹೋಗುತ್ತದೆ.
 (ಎ)ಬಿಹಾರ
 (ಬಿ)ಮಹಾರಾಷ್ಟ್ರ
 (ಸಿ)ಅಸ್ಸಾಂ
 (ಡಿ)ಮಿಜೋರಾಂ
CORRECT ANSWER

(ಡಿ) ಮಿಜೋರಾಂ


30.ಕಂಪ್ಯೂಟರ್‌ನ ಮುಖ್ಯ ಸಂಸ್ಕಾರಕ
 (ಎ)ಕೇಸ್
 (ಬಿ) ಮದರ್‌ಬೋರ್ಡ್‌
 (ಸಿ)ಮಾನಿಟರ್
 (ಡಿ)ಸಿ.ಪಿ.ಯು.
CORRECT ANSWER

(ಡಿ) ಸಿ.ಪಿ.ಯು.


31.ಈ ಕೆಳಗಿನವುಗಳಲ್ಲಿ ಯಾವುದು ಇನ್ಪುಟ್ ಸಾಧನವಾಗಿದೆ?
 (ಎ)ಸ್ಪೀಕರ್
 (ಬಿ)ಮೌಸ್
 (ಸಿ)ಮಾನಿಟರ್
 (ಡಿ)ಪ್ರಿಂಟರ್
CORRECT ANSWER

(ಬಿ) ಮೌಸ್


32.‘ದಂಗಲ್’ ಎಂಬ ಹಿಂದಿ ಚಿತ್ರವನ್ನು ಯಾವ ಕ್ರೀಡಾಪಟುವಿನ ಜೀವನದ ಮೇಲೆ ನಿರ್ಮಿಸಲಾಗಿದೆ?
 (ಎ)ಸಾಕ್ಷಿಮಲ್ಲಿಕ್
 (ಬಿ)ಕೃಷ್ಣ ಪೂನಿಯಾ
 (ಸಿ)ಜೆ.ಸಿ. ಮೇರಿಕೋಮ್
 (ಡಿ) ಗೀತಾ ಪೊಗಟ್
CORRECT ANSWER

(ಡಿ) ಗೀತಾ ಪೊಗಟ್


33.ಅಮಾನವೀಯ ‘‘ನಿರ್ಭಯಾ ಪ್ರಕರಣ’’ವು ಎಲ್ಲಿ ನಡೆಯಿತು?
 (ಎ)ಬೆಂಗಳೂರು
 (ಬಿ)ದೆಹಲಿ
 (ಸಿ)ಮುಂಬಯಿ
 (ಡಿ)ಕೋಲ್ಕತಾ
CORRECT ANSWER

(ಬಿ) ದೆಹಲಿ


34.ಕೋಲ್ಕತಾ ನಗರ ಯಾವ ನದಿಯ ದಂಡೆಯ ಮೇಲಿದೆ?
 (ಎ)ಹೂಗ್ಲಿ
 (ಬಿ) ಬ್ರಹ್ಮಪುತ್ರ
 (ಸಿ)ನರ್ಮದಾ
 (ಡಿ)ಸಟ್ಲೇಜ್
CORRECT ANSWER

(ಎ) ಹೂಗ್ಲಿ


35.ಶಾತವಾಹನರ ರಾಜಧಾನಿ
 (ಎ)ಪ್ರತಿಷ್ಠಾನಪುರ
 (ಬಿ)ಪಾಟಲೀಪುತ್ರ
 (ಸಿ)ಬನವಾಸಿ
 (ಡಿ)ಬಾದಾಮಿ
CORRECT ANSWER

(ಎ) ಪ್ರತಿಷ್ಠಾನಪುರ


36.ಭಾರತದಲ್ಲಿ ಅತೀ ಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯ
 (ಎ)ಕರ್ನಾಟಕ
 (ಬಿ)ಕೇರಳ
 (ಸಿ)ಒರಿಸ್ಸಾ
 (ಡಿ)ಪಶ್ಚಿಮ ಬಂಗಾಳ
CORRECT ANSWER

(ಎ) ಕರ್ನಾಟಕ


37.ವಿಶ್ವದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ದೇಶ
 (ಎ)ಚೈನಾ
 (ಬಿ)ಅಮೆರಿಕ
 (ಸಿ)ಬ್ರೆಜಿಲ್
 (ಡಿ)ಭಾರತ
CORRECT ANSWER

(ಡಿ) ಭಾರತ


38.ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತಿದೆ?
 (ಎ)ಏಪ್ರಿಲ್ 22
 (ಬಿ)ಫೆಬ್ರವರಿ 28
 (ಸಿ)ಜೂನ್ 5
 (ಡಿ)ಸೆಪ್ಟೆಂಬರ್ 12
CORRECT ANSWER

(ಬಿ) ಫೆಬ್ರವರಿ 28


39.‘ಫ್ರೆಂಚ್ ಓಪನ್ – 2017’ರ ಪುರುಷರ ಸಿಂಗಲ್ಸ್‌ನಲ್ಲಿ ಗೆದ್ದವರು
 (ಎ)ರಫೇಲ್ ನಡಾಲ್
 (ಬಿ)ವಾವ್ರಿಂಕಾ
 (ಸಿ)ರೋಜರ್ ಫೆಡರರ್
 (ಡಿ) ಆ್ಯಂಡಿ ಮುರ್ರೆ
CORRECT ANSWER

(ಎ) ರಫೇಲ್ ನಡಾಲ್


40.‘ಮಾವಿನ ಹಣ್ಣು’ ಹಾಗೂ ‘ಕ್ಯಾರೆಟ್’ ಈ ಕೆಳಗಿನ ಯಾವ ಅಂಶಗಳನ್ನು ಹೆಚ್ಚಾಗಿ ಹೊಂದಿದೆ?
 (ಎ)ವಿಟಮಿನ್ ಸಿ
 (ಬಿ)ವಿಟಮಿನ್ ಎ
 (ಸಿ)ಕ್ಯಾಲ್ಸಿಯಂ
 (ಡಿ)ಕಬ್ಬಿಣದ ಅಂಶ
CORRECT ANSWER

(ಬಿ) ವಿಟಮಿನ್ ಎ


41.ವಾತಾವರಣದ ಮೇಲುಭಾಗದಲ್ಲಿರುವ ಓರೆನ್ ಪದರವು ನಮ್ಮನ್ನು ರಕ್ಷಿಸುವುದು ಯಾವ ಕಿರಣಗಳಿಂದ?
 (ಎ)ಇನ್‌ಫ್ರಾರೆಡ್‌ ಕಿರಣ
 (ಬಿ)ಅಲ್ಟ್ರಾ ವೈಲಟ್ ಕಿರಣ
 (ಸಿ)ಕಾಸ್ಮಿಕ್ ಕಿರಣ
 (ಡಿ)ಆಲ್ಟ್ರಾಸೋನಿಕ್ ಕಿರಣ
CORRECT ANSWER

(ಬಿ) ಅಲ್ಟ್ರಾ ವೈಲಟ್ ಕಿರಣ


42.ಈ ಕೆಳಗಿನವುಗಳಲ್ಲಿ ಯಾವುದರ ಹೊರಸೂಸುವಿಕೆಯು ಜಾಗತಿಕ ತಾಪಮಾನವು ಹೆಚ್ಚಲು ಮುಖ್ಯ ಕಾರಣವೆಂದು ಹೇಳಲಾಗುತ್ತದೆ?
 (ಎ)ಸಿ.ಎಫ್.ಸಿ.ಗಳು
 (ಬಿ)ಜಲಜನಕ
 (ಸಿ)ಸಾರಜನಕ
 (ಡಿ)ಅಮೋನಿಯ
CORRECT ANSWER

(ಎ) ಸಿ.ಎಫ್.ಸಿ.ಗಳು


43.ಮಾನವ ಶರೀರದ ಪ್ರತಿ ಜೀವಕೋಶಕ್ಕೂ ಆಮ್ಲಜನಕವನ್ನು ಸಾಗಿಸಿ ತಲುಪಿಸುವುದು.
 (ಎ)ಕೆಂಪು ರಕ್ತಕಣಗಳು
 (ಬಿ)ಬಿಳಿ ರಕ್ತಕಣಗಳು
 (ಸಿ)ಹಾರ್ಮೋನುಗಳು
 (ಡಿ)ಕಿಣ್ವಗಳು
CORRECT ANSWER

(ಎ) ಕೆಂಪು ರಕ್ತಕಣಗಳು


44.‘ಹುಳುಕಡ್ಡಿ’ (ಟೀನಿಯಾ ಕಾರ್ಪೋರಿಸ್) ಯಾವುದರಿಂದ ಉಂಟಾಗುತ್ತದೆ?
 (ಎ)ಬ್ಯಾಕ್ಟೀರಿಯಾ
 (ಬಿ)ವೈರಸ್
 (ಸಿ)ಹುಳು
 (ಡಿ)ಶಿಲೀಂಧ್ರ
CORRECT ANSWER

(ಡಿ) ಶಿಲೀಂಧ್ರ


45.ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶದ ನಡುವಿನ ಭಿನ್ನತೆಯನ್ನು ಕೆಳಕಂಡದ್ದರ ಇರುವಿಕೆಯಿಂದ ಗುರುತಿಸಲಾಗುತ್ತದೆ.
 (ಎ)ಕೋಶಭಿತ್ತಿ
 (ಬಿ)ಕ್ಲೋರೋಪ್ಲಾಸ್ಟ್‌ಗಳು
 (ಸಿ)ಕೋಶಪೊರೆ
 (ಡಿ)ನ್ಯೂಕ್ಲಿಯಸ್
CORRECT ANSWER

(ಎ) ಕೋಶಭಿತ್ತಿ & (ಬಿ) ಕ್ಲೋರೋಪ್ಲಾಸ್ಟ್‌ಗಳು


46.‘ಪೊಲೀಸ್ ಧ್ವಜ ದಿನಾಚರಣೆ’ಯನ್ನು ಯಾವಾಗ ಆಚರಿಸುತ್ತಾರೆ?
 (ಎ)ಜೂನ್ 5
 (ಬಿ)ಏಪ್ರಿಲ್ 2
 (ಸಿ)ಆಗಸ್ಟ್ 15
 (ಡಿ)ಜನವರಿ 26
CORRECT ANSWER

(ಬಿ) ಏಪ್ರಿಲ್ 2


47.‘ಕವಿರಾಜಮಾರ್ಗ’ವನ್ನು ರಚಿಸಿದವರು?
 (ಎ)ವಿದ್ಯಾನಂದಿ
 (ಬಿ)ಜಿನಸೇನ
 (ಸಿ)ಶ್ರೀ ವಿಜಯ
 (ಡಿ)ಅಮೋಘವರ್ಷ ನೃಪತುಂಗ
CORRECT ANSWER

(ಸಿ) ಶ್ರೀ ವಿಜಯ & (ಡಿ) ಅಮೋಘವರ್ಷ ನೃಪತುಂಗ


48.ಗೊಮ್ಮಟೇಶ್ವರ ಮೂರ್ತಿ ಈ ಕೆಳಗಿನ ಯಾವ ಸ್ಥಳದಲ್ಲಿದೆ?
 (ಎ)ಕುಂದಾಪುರ
 (ಬಿ)ಬಾದಾಮಿ
 (ಸಿ)ಬೇಲೂರು
 (ಡಿ)ಕಾರ್ಕಳ
CORRECT ANSWER

(ಡಿ) ಕಾರ್ಕಳ


49.‘ನಕ್ಸಲೀಯ ಚಳವಳಿ’ಯು ಈ ಕೆಳಕಂಡ ರಾಜ್ಯದ ‘ನಕ್ಸಲ್ ಬಾರಿ’ ಜಿಲ್ಲೆಯಲ್ಲಿ ಪ್ರಾರಂಭವಾಯಿತು.
 (ಎ)ಆಂಧ್ರ ಪ್ರದೇಶ
 (ಬಿ)ಕೇರಳ
 (ಸಿ)ಜಾರ್ಖಂಡ್
 (ಡಿ)ಪಶ್ಚಿಮ ಬಂಗಾಳ
CORRECT ANSWER

(ಡಿ) ಪಶ್ಚಿಮ ಬಂಗಾಳ


50.‘ಪ್ಯಾನ್’ (PAN) ಎಂಬ ಸಂಕ್ಷೇಪಾಕ್ಷರಗಳ ವಿಸ್ತೃತ ರೂಪ
 (ಎ)Public Account Number
 (ಬಿ)Personal Account Number
 (ಸಿ)Permanent Account Number
 (ಡಿ)Postal Account Number
CORRECT ANSWER

(ಸಿ) Permanent Account Number


51.ಮನುಷ್ಯನ ಶರೀರದಲ್ಲಿರುವ ಅತೀ ದೊಡ್ಡ ಗ್ರಂಥಿ ಯಾವುದು?
 (ಎ)ಥೈರಾಯಿಡ್
 (ಬಿ)ಪಿಟ್ಯುಟರಿ
 (ಸಿ)ಪೀನಿಯಲ್
 (ಡಿ)ಲಿವರ್
CORRECT ANSWER

(ಡಿ) ಲಿವರ್


52.ಭೂಕಂಪನದ ತೀವ್ರತೆಯ ವ್ಯಾಪ್ತಿಯನ್ನು ಈ ಕೆಳಕಂಡ ಅಳತೆಪಟ್ಟಿಯಿಂದ ಮಾಪನ ಮಾಡಲಾಗುತ್ತದೆ.
 (ಎ)ರಿಕ್ಟರ್
 (ಬಿ)ಕೆಲ್ವಿನ್
 (ಸಿ)ಪಾಸ್ಕಲ್
 (ಡಿ) ನ್ಯೂಟನ್
CORRECT ANSWER

(ಎ) ರಿಕ್ಟರ್


53.ಕರ್ನಾಟಕದಲ್ಲಿ ಪೊಲೀಸ್ ರ್ಯಾಂಕ್‌ಗಳ ಸರಿಯಾದ ಕ್ರಮ :
ಕಿರಿಯ ಶ್ರೇಣಿಯಿಂದ ಹಿರಿಯ ಶ್ರೇಣಿಯವರೆಗೆ
 (ಎ)ಎಸ್‌ಪಿ→ಐಜಿ→ಡಿಐಜಿ→ಎಡಿಜಿ
 (ಬಿ)ಎಸ್‌ಪಿ→ಡಿಐಜಿ→ಐಜಿ→ಎಡಿಜಿ
 (ಸಿ)ಡಿಐಜಿ→ಎಸ್‌ಪಿ→ಐಜಿ→ಎಡಿಜಿ
 (ಡಿ)ಎಸ್‌ಪಿ→ಡಿಐಜಿ→ಎಡಿಜಿ→ಐಜಿ
CORRECT ANSWER

(ಬಿ) ಎಸ್‌ಪಿ→ಡಿಐಜಿ→ಐಜಿ→ಎಡಿಜಿ


54.‘ಫೆನ್ನಿ’ ಎಂಬ ಮದ್ಯವನ್ನು ಯಾವುದರಿಂದ ತಯಾರಿಸಲಾಗುತ್ತದೆ?
 (ಎ)ದ್ರಾಕ್ಷಿ
 (ಬಿ)ಸೇಬುಹಣ್ಣು
 (ಸಿ)ಗೇರುಹಣ್ಣು
 (ಡಿ)ಖರ್ಜೂರ
CORRECT ANSWER

(ಸಿ) ಗೇರುಹಣ್ಣು


55.ಈ ಕೆಳಗಿನ ಯಾವ ರೈಲ್ವೆ ನಿಲ್ದಾಣವು ‘ಕೊಂಕಣ ರೈಲ್ವೆ’ ಗೆ ಒಳಪಟ್ಟಿದೆ?
 (ಎ)ಮಂಗಳೂರು
 (ಬಿ)ಹುಬ್ಬಳ್ಳಿ
 (ಸಿ)ಮೈಸೂರು
 (ಡಿ)ಬೀದರ್
CORRECT ANSWER

(ಎ) ಮಂಗಳೂರು


56.ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿಯಲ್ಲ?
 (ಎ)ಕೊಯ್ನಾ
 (ಬಿ)ಹೇಮಾವತಿ
 (ಸಿ)ಕಬಿನಿ
 (ಡಿ)ಅರ್ಕಾವತಿ
CORRECT ANSWER

(ಎ) ಕೊಯ್ನಾ


57.ದೇವಿ ಪ್ರಸಾದ್ ಶೆಟ್ಟಿ ಇವರು ಪ್ರಸಿದ್ಧ
 (ಎ)ಹೃದ್ರೋಗ ತಜ್ಞ
 (ಬಿ)ಅಥ್ಲೀಟ್
 (ಸಿ)ಕವಿ
 (ಡಿ)ಹಾಕಿ ಆಟಗಾರ
CORRECT ANSWER

(ಎ) ಹೃದ್ರೋಗ ತಜ್ಞ


58.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ?
 (ಎ)ಅಹ್ಮದಾಬಾದ್
 (ಬಿ)ರಾಜ್‌ಕೋಟ್‌
 (ಸಿ)ಲಕ್ನೋ
 (ಡಿ)ವಾರಾಣಸಿ
CORRECT ANSWER

(ಡಿ) ವಾರಾಣಸಿ


59.2020ರ ಒಲಿಂಪಿಕ್ ಕ್ರೀಡೆಯು ಎಲ್ಲಿ ನಡೆಯಲಿದೆ?
 (ಎ)ಟೋಕಿಯೋ
 (ಬಿ)ಮೆಕ್ಸಿಕೋ
 (ಸಿ)ಲಂಡನ್
 (ಡಿ)ಅಟ್ಲಾಂಟಾ
CORRECT ANSWER

(ಎ) ಟೋಕಿಯೋ


60.64ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದವರು
 (ಎ)ಮನೋಜ್ ಬಾಜ್‌ಪಾಯ್‌
 (ಬಿ)ಅಕ್ಷಯ್‌ಕುಮಾರ್‌
 (ಸಿ)ಅಮಿತಾಬ್ ಬಚ್ಚನ್
 (ಡಿ)ರಣಬೀರ್ ಕಪೂರ್
CORRECT ANSWER

(ಬಿ) ಅಕ್ಷಯ್‌ಕುಮಾರ್‌


61.ಈಶಾನ್ಯ ಮಾನ್ಯೂನ್‌ನಿಂದ ತಮಿಳುನಾಡಿಗೆ ಸಾಮಾನ್ಯವಾಗಿ ಮಳೆಯಾಗುವುದು ಯಾವ ತಿಂಗಳಿನಲ್ಲಿ?
 (ಎ)ಜೂನ್ – ಆಗಸ್ಟ್
 (ಬಿ)ಅಕ್ಟೋಬರ್ – ಡಿಸೆಂಬರ್
 (ಸಿ)ಜನವರಿ – ಮಾರ್ಚ್
 (ಡಿ)ಯಾವುದೂ ಅಲ್ಲ
CORRECT ANSWER

(ಬಿ) ಅಕ್ಟೋಬರ್ – ಡಿಸೆಂಬರ್


62.‘ಗೋಲ್ ಗುಂಬಜ್’ ಎಂಬುದು ಯಾರ ಸಮಾಧಿ?
 (ಎ)ಮಹಮ್ಮದ್ ಆದಿಲ್ ಷಾ
 (ಬಿ)ಯೂಸುಫ್ ಆದಿಲ್ ಷಾ
 (ಸಿ)ಕೃಷ್ಣದೇವರಾಯ
 (ಡಿ)ಸಿಕಂದರ್ ಆದಿಲ್ ಷಾ
CORRECT ANSWER

(ಎ) ಮಹಮ್ಮದ್ ಆದಿಲ್ ಷಾ


63.ಈ ಕೆಳಗಿನ ಯಾವ ಸ್ಥಳದಲ್ಲಿ 1925ರಲ್ಲಿ ಸಿಂಡಿಕೇಟ್ ಬ್ಯಾಂಕ್ಅನ್ನು ಸ್ಥಾಪಿಸಲಾಯಿತು?
 (ಎ)ನವದೆಹಲಿ
 (ಬಿ)ಮುಂಬಯಿ
 (ಸಿ)ಉಡುಪಿ
 (ಡಿ)ಚೆನ್ನೈ
CORRECT ANSWER

(ಸಿ) ಉಡುಪಿ


64.ಪ್ರಶಸ್ತಿ ವಿಜೇತ ಚಿತ್ರಗಳಾದ ‘ತಬರನ ಕಥೆ’, ‘ದ್ವೀಪ’ ಹಾಗೂ ‘ಗುಲಾಬಿ ಟಾಕೀಸ್’ ಚಿತ್ರಗಳ ನಿರ್ದೇಶಕರು.
 (ಎ)ನಾಗತಿಹಳ್ಳಿ ಚಂದ್ರಶೇಖರ್
 (ಬಿ)ಗಿರೀಶ್ ಕಾಸರವಳ್ಳಿ
 (ಸಿ)ಸುನೀಲ್ ಕುಮಾರ್ ದೇಸಾಯಿ
 (ಡಿ)ಪುಟ್ಟಣ್ಣ ಕಣಗಾಲ್
CORRECT ANSWER

(ಬಿ) ಗಿರೀಶ್ ಕಾಸರವಳ್ಳಿ


65.ದೀಪಾ ಕರ್ಮಾಕರ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
 (ಎ)ಅಥ್ಲೆಟಿಕ್ಸ್
 (ಬಿ)ಜಿಮ್ನಾಸ್ಟಿಕ್ಸ್
 (ಸಿ)ಬಾಕ್ಸಿಂಗ್
 (ಡಿ)ಕ್ರಿಕೆಟ್
CORRECT ANSWER

(ಬಿ) ಜಿಮ್ನಾಸ್ಟಿಕ್ಸ್


66.ಮ್ಯಾರಥಾನ್ ಓಟದಲ್ಲಿ ಕ್ರಮಿಸಬೇಕಾದ ದೂರವೆಷ್ಟು?
 (ಎ)26.385 ಕಿ.ಮೀ.
 (ಬಿ)42.195ಕಿ.ಮೀ.
 (ಸಿ)15.600 ಕಿ.ಮೀ.
 (ಡಿ)30 ಕಿ.ಮೀ.
CORRECT ANSWER

(ಬಿ) 42.195ಕಿ.ಮೀ.


67.ಕರ್ನಾಟಕದಲ್ಲಿರುವ ಜಿಲ್ಲೆಗಳ ಸಂಖ್ಯೆ
 (ಎ)29
 (ಬಿ)30
 (ಸಿ)31
 (ಡಿ)28
CORRECT ANSWER

(ಬಿ) 30


68.ಮೂಲಭೂತ ಕರ್ತವ್ಯಗಳನ್ನು ಭಾರತದ ಸಂವಿಧಾನಕ್ಕೆ ಸೇರ್ಪಡೆ ಮಾಡಲಾದ ವರ್ಷ
 (ಎ)1976
 (ಬಿ)1978
 (ಸಿ)1980
 (ಡಿ)1991
CORRECT ANSWER

(ಎ) 1976


69.‘ಸಿಪಾಯಿ ದಂಗೆ’ ಎಂದು ಕರೆಯಲಾಗುವ ‘ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ’ ಯಾವಾಗ ನಡೆಯಿತು?
 (ಎ)1857
 (ಬಿ)1919
 (ಸಿ)1942
 (ಡಿ)1905
CORRECT ANSWER

(ಎ) 1857


70.ಶಿಕ್ಷಣವು ಮೂಲಭೂತ ಹಕ್ಕು ಎಂದು ತಿಳಿಸಿದ ಸಂವಿಧಾನದ ತಿದ್ದುಪಡಿ
 (ಎ)42ನೆಯ
 (ಬಿ)86ನೆಯ
 (ಸಿ)73ನೆಯ
 (ಡಿ)74ನೆಯ
CORRECT ANSWER

(ಬಿ) 86ನೆಯ


71.ಭಾರತವು ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿತು. ಇದರ ಅರ್ಥವೇನೆಂದರೆ ಭಾರತವು
 (ಎ)ಅಮೇರಿಕಾದ ಬಣವನ್ನು ಸೇರಿತು
 (ಬಿ)ಅಮೇರಿಕಾ ಮತ್ತು ರಷ್ಯಾಗಳ ಬಣಗಳಿಂದ ಸಮಾನ ಅಂತರದಲ್ಲಿ ಉಳಿಯಿತು.
 (ಸಿ)ರಷ್ಯಾದ ಬಣವನ್ನು ಸೇರಿತು
 (ಡಿ)ವಿಸ್ತರಣಾವಾದಿ ನೀತಿಯನ್ನು ಅನುಸರಿಸಿತು
CORRECT ANSWER

(ಬಿ) ಅಮೇರಿಕಾ ಮತ್ತು ರಷ್ಯಾಗಳ ಬಣಗಳಿಂದ ಸಮಾನ ಅಂತರದಲ್ಲಿ ಉಳಿಯಿತು.


72.ವ್ಯಕ್ತಿಯೊಬ್ಬನು ಭವಿಷ್ಯತ್ತಿನಲ್ಲಿ ಕಾರು ಖರೀದಿಸಲು ಪ್ರತೀ ತಿಂಗಳು ನಿಯಮಿತವಾಗಿ ಉಳಿತಾಯ ಮಾಡಲು ಈ ಬ್ಯಾಂಕ್ ಖಾತೆಯನ್ನು ತೆರೆಯಬೇಕು.
 (ಎ)ಚಾಲ್ತಿ ಖಾತೆ
 (ಬಿ)ಉಳಿತಾಯ ಖಾತೆ
 (ಸಿ)ಆವರ್ತ ಠೇವಣಿ ಖಾತೆ
 (ಡಿ)ನಿಶ್ಚಿತ ಠೇವಣಿ ಖಾತೆ
CORRECT ANSWER

(ಸಿ) ಆವರ್ತ ಠೇವಣಿ ಖಾತೆ


73.1935ರ ಭಾರತ ಸರ್ಕಾರದ ಕಾಯ್ದೆಯು ಒಂದು ಮುಖ್ಯ ದಾಖಲೆಯಾಗಿದೆ. ಏಕೆಂದರೆ ಅದು
 (ಎ)ಪ್ರಾಂತ್ಯಗಳಲ್ಲಿ ದ್ವಿ-ದಳ ಸರ್ಕಾರವನ್ನು ಜಾರಿಗೆ ತಂದಿತು
 (ಬಿ)ನಿಯಂತ್ರಣ ಮಂಡಳಿಯನ್ನು ನೇಮಿಸಿತು
 (ಸಿ)ಮತೀಯ ಆಧಾರದ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಸ್ಥಾಪಿಸಿತು
 (ಡಿ)ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು
CORRECT ANSWER

(ಡಿ) ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿತು


74.ಗೋವಾ ಪೋರ್ಚುಗೀಸರಿಂದ ವಿಮೋಚನೆಗೊಂಡ ವರ್ಷ
 (ಎ)1954
 (ಬಿ)1963
 (ಸಿ)1961
 (ಡಿ)1971
CORRECT ANSWER

(ಸಿ) 1961


75.ಒಂದನೆಯ ಪಂಚವಾರ್ಷಿಕ ಯೋಜನೆ ಕೃಷಿ ಯೋಜನೆಯಾದರೆ ಎರಡನೆಯ ಪಂಚವಾರ್ಷಿಕ ಯೋಜನೆ
 (ಎ)ಗಾಂಧಿ ಯೋಜನೆ
 (ಬಿ)ಮುಂಬೈ ಯೋಜನೆ
 (ಸಿ)ಮಹಾಲನೋಬಿಸ್ ಯೋಜನೆ
 (ಡಿ)ಜನರ ಯೋಜನೆ
CORRECT ANSWER

(ಸಿ) ಮಹಾಲನೋಬಿಸ್ ಯೋಜನೆ


76.‘ಕರ್ನಾಟಕ ಪೊಲೀಸ್ ಅಕಾಡೆಮಿ’ಯು ಎಲ್ಲಿದೆ?
 (ಎ)ಬೆಂಗಳೂರು
 (ಬಿ)ಚನ್ನಪಟ್ಟಣ
 (ಸಿ)ಕಲಬುರ್ಗಿ
 (ಡಿ)ಮೈಸೂರು
CORRECT ANSWER

(ಡಿ) ಮೈಸೂರು


77.ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆ (SAARC)ಯ ಆಡಳಿತ ಕಚೇರಿ ಎಲ್ಲಿದೆ?
 (ಎ)ಬ್ಯಾಂಕಾಕ್
 (ಬಿ)ಕಠ್ಮಂಡು
 (ಸಿ)ಕೊಲಂಬೋ
 (ಡಿ)ದೆಹಲಿ
CORRECT ANSWER

(ಬಿ) ಕಠ್ಮಂಡು


78.‘ಬೋನ್‌ಸಾಯ್‌’ ಎಂಬ ಶಬ್ದ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
 (ಎ)ಭತ್ತದ ಕೃಷಿ
 (ಬಿ)ತೋಟಗಾರಿಕೆ
 (ಸಿ)ಜಾಗತಿಕ ತಾಪಮಾನ ಏರಿಕೆ
 (ಡಿ)ಮಣ್ಣಿನ ಸವಕಳಿ
CORRECT ANSWER

(ಬಿ) ತೋಟಗಾರಿಕೆ


79.ಪ್ರಸಿದ್ಧ ನಾಟಕ ‘ತುಘಲಕ್’ ಇದರ ಕರ್ತೃ
 (ಎ)ಗಿರೀಶ್ ಕಾರ್ನಾಡ್
 (ಬಿ)ಯು.ಆರ್. ಅನಂತಮೂರ್ತಿ
 (ಸಿ)ಎಸ್.ಎಲ್. ಭೈರಪ್ಪ
 (ಡಿ)ಪೂರ್ಣಚಂದ್ರ ತೇಜಸ್ವಿ
CORRECT ANSWER

(ಎ) ಗಿರೀಶ್ ಕಾರ್ನಾಡ್


80.ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?
 (ಎ)ತಬಲ
 (ಬಿ)ಭರತನಾಟ್ಯ
 (ಸಿ)ಶಾಸ್ತ್ರೀಯ ಗಾಯನ
 (ಡಿ)ಯಕ್ಷಗಾನ
CORRECT ANSWER

(ಡಿ) ಯಕ್ಷಗಾನ


81.ವಿಕಾಸ ಗೌಡರವರಿಗೆ ಈ ಕೆಳಗಿನ ಯಾವ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು?
 (ಎ)ಕುಸ್ತಿ
 (ಬಿ)ಜಾವೆಲಿನ್ ಎಸೆತ
 (ಸಿ)ಡಿಸ್ಕಸ್ ಎಸೆತ
 (ಡಿ)ಉದ್ದ ಜಿಗಿತ
CORRECT ANSWER

(ಸಿ) ಡಿಸ್ಕಸ್ ಎಸೆತ


82.ರಿಯೋ – ಡಿ- ಜೆನಿರೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ – 2016ರಲ್ಲಿ ಪುರುಷರ ಎತ್ತರ ಜಿಗಿತ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದವರು
 (ಎ)ರಾಕೇಶ್ ಕುಮಾರ್
 (ಬಿ)ಗಿರೀಶ್ ನಾಗರಾಜೆಗೌಡ
 (ಸಿ)ಮರಿಯಪ್ಪನ್ ತಂಗವೇಲು
 (ಡಿ)ಅರುಣ್ ಪೂಣಚ್ಚ
CORRECT ANSWER

(ಸಿ) ಮರಿಯಪ್ಪನ್ ತಂಗವೇಲು


83.ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?
 (ಎ)ಜುಲೈ 21
 (ಬಿ)ಸೆಪ್ಟೆಂಬರ್ 5
 (ಸಿ)ಜೂನ್ 21
 (ಡಿ)ಏಪ್ರಿಲ್ 5
CORRECT ANSWER

(ಸಿ) ಜೂನ್ 21


84.ಈ ಕೆಳಗಿನ ಯಾವ ಆಟಗಾರ್ತಿಯು ವನಿತೆಯರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ?
 (ಎ)ರುಮೇಲಿ ಧರ್
 (ಬಿ)ಎಂ.ಎಂ. ಲ್ಯಾನಿಂಗ್
 (ಸಿ)ಮಿಥಾಲಿ ರಾಜ್
 (ಡಿ)ಎ.ಜೆ. ಬ್ಲ್ಯಾಕ್‌ವೆಲ್‌
CORRECT ANSWER

(ಸಿ) ಮಿಥಾಲಿ ರಾಜ್


85.ಗೌತಮ ಬುದ್ಧನು ಮರಣ ಹೊಂದಿದ ಸ್ಥಳ
 (ಎ)ಲುಂಬಿನಿವನ
 (ಬಿ)ರಾಜಗಿರ್
 (ಸಿ)ಕುಶಿನಗರ
 (ಡಿ)ಸಾರನಾಥ
CORRECT ANSWER

(ಸಿ) ಕುಶಿನಗರ


86.‘ಚಿಪ್ಕೋ ಚಳವಳಿ’ಯ ಉದ್ದೇಶವು
 (ಎ)ಅಣೆಕಟ್ಟುಗಳ ನಿರ್ಮಾಣವನ್ನು ತಡೆಗಟ್ಟುವುದು
 (ಬಿ) ಜಲ ಸಂರಕ್ಷಣೆ
 (ಸಿ)ಅರಣ್ಯ ನಾಶವನ್ನು ತಡೆಗಟ್ಟುವುದು
 (ಡಿ)ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯವನ್ನು ತಡೆಗಟ್ಟುವುದು
CORRECT ANSWER

(ಸಿ) ಅರಣ್ಯ ನಾಶವನ್ನು ತಡೆಗಟ್ಟುವುದು


87.ಜಗತ್ತಿನಲ್ಲೇ ಅತೀ ಚಿಕ್ಕದೆನಿಸಿದ ಸಾಗರ
 (ಎ)ಪೆಸಿಫಿಕ್
 (ಬಿ)ಅಟ್ಲಾಂಟಿಕ್
 (ಸಿ)ಹಿಂದೂ ಮಹಾಸಾಗರ
 (ಡಿ)ಆರ್ಕ್‌ಟಿಕ್‌
CORRECT ANSWER

(ಡಿ) ಆರ್ಕ್‌ಟಿಕ್‌


88.ನೀಲಗಿರಿ ಬೆಟ್ಟಗಳ ಅತೀ ಉನ್ನತ ಶೃಂಗದ ಹೆಸರೇನು?
 (ಎ)ಆನೈಮುಡಿ
 (ಬಿ)ಕೊನ್ನೂರ್ ಬೆಟ್ಟ
 (ಸಿ)ದೊಡ್ಡ ಬೆಟ್ಟ
 (ಡಿ)ವೆಲ್ಲಾಂಗೀರ್
CORRECT ANSWER

(ಸಿ) ದೊಡ್ಡ ಬೆಟ್ಟ


89.ಕೆಳಕಂಡವರಲ್ಲಿ ಯಾರು ಭಾರತದ ರಾಷ್ಟ್ರಪತಿಯವರಿಂದ ನೇಮಕಗೊಳ್ಳುವುದಿಲ್ಲ?
 (ಎ)ಉಪರಾಷ್ಟ್ರಪತಿ
 (ಬಿ)ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು
 (ಸಿ)ರಾಜ್ಯಗಳ ರಾಜ್ಯಪಾಲರು
 (ಡಿ)ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಾಧೀಶರು
CORRECT ANSWER

(ಎ) ಉಪರಾಷ್ಟ್ರಪತಿ


90.ಭಾರತದ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ ಯಾವ ಭಾಗದಲ್ಲಿ ತಿಳಿಸಲಾಗಿದೆ?
 (ಎ)ಸಂವಿಧಾನದ Iನೇ ಭಾಗದಲ್ಲಿ
 (ಬಿ)ಸಂವಿಧಾನದ IVನೇ ಭಾಗದಲ್ಲಿ
 (ಸಿ)ಸಂವಿಧಾನದ VIIನೇ ಅನುಸೂಚಿಯಲ್ಲಿ
 (ಡಿ)ಸಂವಿಧಾನದ IV ಎ ಭಾಗದಲ್ಲಿ
CORRECT ANSWER

(ಡಿ) ಸಂವಿಧಾನದ IV ಎ ಭಾಗದಲ್ಲಿ


91.ಈ ಕೆಳಗಿನವುಗಳಲ್ಲಿ ಯಾವುದು ಮಿಶ್ರ ಲೋಹವಲ್ಲ?
 (ಎ)ಸತು
 (ಬಿ)ಹಿತ್ತಾಳೆ
 (ಸಿ)ಉಕ್ಕು
 (ಡಿ)ಕಂಚು
CORRECT ANSWER

(ಎ) ಸತು


92.ಹಾಲು ಮೊಸರಾಗುವುದು ಯಾವುದಕ್ಕೆ ಉದಾಹರಣೆ?
 (ಎ)ಪ್ರತಿಲೋಮನ
 (ಬಿ)ಹೈಡ್ರಾಲಿಸಿಸ್
 (ಸಿ)ವಿಕೃತಗೊಳ್ಳುವಿಕೆ
 (ಡಿ)ಗರಣೆಕಟ್ಟುವಿಕೆ
CORRECT ANSWER

(ಸಿ) ವಿಕೃತಗೊಳ್ಳುವಿಕೆ


93.ಭಾರತೀಯ ಸಂವಿಧಾನದ ಪ್ರಕಾರ ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
 (ಎ)ಸಮಾನತೆಯ ಹಕ್ಕು
 (ಬಿ)ವಾಕ್ ಸ್ವಾತಂತ್ರ್ಯದ ಹಕ್ಕು
 (ಸಿ)ಧರ್ಮವನ್ನು ಬದಲಾಯಿಸಿಕೊಳ್ಳುವ ಹಕ್ಕು
 (ಡಿ)ಕೆಲಸ ಮಾಡುವ ಹಕ್ಕು
CORRECT ANSWER

(ಡಿ) ಕೆಲಸ ಮಾಡುವ ಹಕ್ಕು


94.‘ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಘೋಷಿಸಿದವರು.
 (ಎ)ಲಾಲಾ ಲಜಪತ್ ರಾಯ್
 (ಬಿ)ಮಹಾತ್ಮ ಗಾಂಧಿ
 (ಸಿ)ಬಾಲಗಂಗಾಧರ ತಿಲಕ್
 (ಡಿ)ಸರ್ದಾರ್ ವಲ್ಲಭಭಾಯಿ ಪಟೇಲ್
CORRECT ANSWER

(ಸಿ) ಬಾಲಗಂಗಾಧರ ತಿಲಕ್


95.ಮೈಸೂರು ರಾಜ್ಯವು ಯಾವಾಗ ‘ಕರ್ನಾಟಕ’ ಎಂದು ಪುನರ್ ನಾಮಕರಣಗೊಂಡಿತು?
 (ಎ)ನವೆಂಬರ್ 1, 1973
 (ಬಿ)ನವೆಂಬರ್ 1, 1956
 (ಸಿ)ಆಗಸ್ಟ್ 15, 1947
 (ಡಿ)ನವೆಂಬರ್ 1, 1950
CORRECT ANSWER

(ಎ) ನವೆಂಬರ್ 1, 1973


96.‘ಎಫ್.ಐ.ಆರ್’ (FIR) ಇದರ ವಿಸ್ತೃತ ರೂಪ ದಂಡ ಪ್ರಕ್ರಿಯಾ ಸಂಹಿತೆ, 1973ರಲ್ಲಿ ನೀಡಿರುವಂತೆ
 (ಎ)First Information Report
 (ಬಿ)First Investigation Report
 (ಸಿ)First Intimation Report
 (ಡಿ)First Interrogation Register
CORRECT ANSWER

(ಎ) First Information Report


97.ಕರ್ನಾಟಕ ರಾಜ್ಯದಲ್ಲಿ ಎಷ್ಟು ಪೊಲೀಸ್ ವಲಯಗಳಿವೆ?
 (ಎ)5
 (ಬಿ)6
 (ಸಿ)7
 (ಡಿ)8
CORRECT ANSWER

(ಸಿ) 7


98.ಐಪಿಸಿ (ಭಾರತೀಯ ದಂಡ ಸಂಹಿತೆ) ಕಲಂ 376, ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
 (ಎ)ಲೈಂಗಿಕ ಕಿರುಕುಳ
 (ಬಿ)ಕೊಲೆ
 (ಸಿ)ಅತ್ಯಾಚಾರ
 (ಡಿ)ಅಪಹರಣ
CORRECT ANSWER

(ಸಿ) ಅತ್ಯಾಚಾರ


99.ಒಂದು ನಿರ್ದಿಷ್ಟ ಸಮಯದಲ್ಲಿ ಸರಕು ಮತ್ತು ಸೇವೆಗಳ ಸಾಮಾನ್ಯ ಬೆಲೆ ಮಟ್ಟದಲ್ಲಿ ಆದ ಹೆಚ್ಚಳವನ್ನು ____________ ಎಂದು ಕರೆಯುತ್ತಾರೆ.
 (ಎ)ಪಾವತಿಗಳ ಸಮತೋಲನ
 (ಬಿ)ಸವಕಳಿ
 (ಸಿ)ಜಿ.ಡಿ.ಪಿ.
 (ಡಿ)ಹಣದುಬ್ಬರ
CORRECT ANSWER

(ಡಿ) ಹಣದುಬ್ಬರ


100.ಪ್ರಸಿದ್ಧ ಬೀಚ್ ಎನಿಸಿರುವ ‘ಓಂ ಬೀಚ್’ ಎಲ್ಲಿದೆ?
 (ಎ)ಮಂಗಳೂರು
 (ಬಿ)ಉಡುಪಿ
 (ಸಿ)ಮುರ್ಡೇಶ್ವರ
 (ಡಿ)ಗೋಕರ್ಣ
CORRECT ANSWER

(ಡಿ) ಗೋಕರ್ಣ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment