Welcome to ALL IN ONE Education portal

Join us on Telegram

Join Now

Join us on Whatsapp

Join Now

Police Constable Previous Paper (K) 16-07-2017

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ

 

1. PAPERನ್ನು QCSIW ಎಂದು ಸಂಕೇತಿಸಿದರೆ EXAMPLEನ್ನು ಹೀಗೆ ಬರೆಯಬಹುದು.
  (ಎ) FZDUQRL
  (ಬಿ) FZQDURL
  (ಸಿ) FZDQURL
  (ಡಿ) FZQUDRL

CORRECT ANSWER

(ಸಿ) FZDQURL


2. ಯಾವುದು ಸ್ಥಳೀಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ?
  (ಎ) ಸಾರ್ವಜನಿಕ ಆರೋಗ್ಯ
  (ಬಿ) ಸ್ವಚ್ಛತೆ/ ನಿರ್ಮಲೀಕರಣ
  (ಸಿ) ಕಾನೂನು ಮತ್ತು ವ್ಯವಸ್ಥೆ
  (ಡಿ) ಸಾರ್ವಜನಿಕ ಉಪಯುಕ್ತತಾ ಸೇವೆಗಳು
CORRECT ANSWER

(ಸಿ) ಕಾನೂನು ಮತ್ತು ವ್ಯವಸ್ಥೆ


3. ಈ ಕೆಳಗಿನ ಯಾವ ಹೇಳಿಕೆಯು 1857ರ ದಂಗೆಯ ಬಗ್ಗೆ ಸರಿಯಾದ ವಿವರಣೆಯಾಗಿದೆ?
  (ಎ) ಅಧಿಕಾರವನ್ನು ಹಿಂಪಡೆಯಲು ಹಳೆಯ ರಾಜಕೀಯ ಆದೇಶದ ಕೊನೆಯ ಪ್ರಯತ್ನ
  (ಬಿ) ಕಂಪನಿಯ ಸೈನ್ಯದೊಳಗೆ ಭಾರತೀಯ ಸೈನಿಕರ ಉತ್ಸಾಹಪೂರ್ಣ ಬಂಡಾಯ
  (ಸಿ) ಭಾರತೀಯ ರಾಷ್ಟ್ರದ ಸ್ಥಾಪನೆಗೆ ಒಂದು ಪ್ರಯತ್ನ
  (ಡಿ) ಈ ಮೇಲಿನ ಯಾವುದೂ ಅಲ್ಲ
CORRECT ANSWER

(ಎ) ಅಧಿಕಾರವನ್ನು ಹಿಂಪಡೆಯಲು ಹಳೆಯ ರಾಜಕೀಯ ಆದೇಶದ ಕೊನೆಯ ಪ್ರಯತ್ನ


4. 19ನೇ ಶತಮಾನದಲ್ಲಿ ಪದೇಪದೇ ಸಂಭವಿಸಿದ ಕ್ಷಾಮದಲ್ಲಿ ಮಿಲಿಯಗಟ್ಟಲೆ ಭಾರತೀಯರ ಮರಣಕ್ಕೆ ಮುಖ್ಯ ಕಾರಣವಾಗಿದ್ದು.
  (ಎ) ಒಟ್ಟಾರೆಯಾಗಿ ಆಹಾರದ ಕೊರತೆ ಮತ್ತು ಇದರ ಅಸಮರ್ಪಕ ವಿತರಣೆ
  (ಬಿ) ಕೃಷಿಯ ವಾಣಿಜ್ಯೀಕರಣ
  (ಸಿ) ಪ್ರತಿಫಲದಾಯಕವಿಲ್ಲದ ಕೃಷಿ ಮತ್ತು ಕೃಷಿ ಉತ್ಪನ್ನಗಳ ಇಳಿಕೆ
  (ಡಿ) ಅತಿಯಾದ ಬಡತನ ಮತ್ತು ಬೆಲೆಯೇರಿಕೆಯಿಂದಾಗಿ ದುರ್ಬಲವಾದ ಜನರು ಕೊಳ್ಳುವಿಕೆಯ ಶಕ್ತಿಯಿಂದ
CORRECT ANSWER

(ಎ) ಒಟ್ಟಾರೆಯಾಗಿ ಆಹಾರದ ಕೊರತೆ ಮತ್ತು ಇದರ ಅಸಮರ್ಪಕ ವಿತರಣೆ


5. ಇದನ್ನು ಪ್ರತಿರೋಧಿಸಿ 1919ರಲ್ಲಿ ಗಾಂಧೀಜಿಯವರು ಸತ್ಯಾಗ್ರಹ ಚಳವಳಿಯನ್ನು ಪ್ರಾರಂಭಿಸಿದರು.
  (ಎ) ಸೈಮನ್ ಕಮೀಷನ್
  (ಬಿ) ಚಂಪಾರಣ್ ಅನ್ಯಾಯ
  (ಸಿ) ರೌಲತ್ ಕಾಯಿದೆಯ ಜಾರಿ
  (ಡಿ) ಭಾರತದ ಮೇಲೆ ವಸಾಹತುಗಳ ದೌರ್ಜನ್ಯ
CORRECT ANSWER

(ಸಿ) ರೌಲತ್ ಕಾಯಿದೆಯ ಜಾರಿ


6. ‘ಮೈಸೂರು ಪ್ರತಿನಿಧಿ ಸಭೆ’ಯನ್ನು ಪ್ರಾರಂಭಿಸಿದವರು ಯಾರು?
  (ಎ) ದಿವಾನ್ ರಂಗಾಚಾರ್ಲು
  (ಬಿ) ದಿವಾನ್ ಶೇಷಾದ್ರಿ ಅಯ್ಯರ್
  (ಸಿ) ದಿವಾನ್ ಪೂರ್ಣಯ್ಯ
  (ಡಿ) ಸರ್. ಎಂ. ವಿಶ್ವೇಶ್ವರಯ್ಯ
CORRECT ANSWER

(ಎ) ದಿವಾನ್ ರಂಗಾಚಾರ್ಲು


7. ಹೈದರಾಬಾದ್ ನಿಜಾಮರ ಅಧೀನದಲ್ಲಿದ್ದ ಹೈದರಾಬಾದ್- ಕರ್ನಾಟಕ ಪ್ರಾಂತ್ಯವು ಭಾರತೀಯ ಒಕ್ಕೂಟಕ್ಕೆ ಸೇರಿದ್ದು
  (ಎ) 15 ಆಗಸ್ಟ್ 1947ರಲ್ಲಿ
  (ಬಿ) ಸೆಪ್ಟೆಂಬರ್, 1947ರಲ್ಲಿ
  (ಸಿ) ಆಗಸ್ಟ್, 1948ರಲ್ಲಿ
  (ಡಿ) ಸೆಪ್ಟೆಂಬರ್, 1948ರಲ್ಲಿ
CORRECT ANSWER

(ಡಿ) ಸೆಪ್ಟೆಂಬರ್, 1948ರಲ್ಲಿ


8. ವಾಯುಮಂಡಲದ ಒತ್ತಡವನ್ನು ಇದರಿಂದ ಅಳೆಯಬಹುದು
  (ಎ) ದ್ರವಮಾಪಕ
  (ಬಿ) ವಾಯುಭಾರ ಮಾಪಕ
  (ಸಿ) ತೇವಾಂಶ ಮಾಪಕ
  (ಡಿ) ಅಲ್ಟಿಮೀಟರ್
CORRECT ANSWER

(ಬಿ) ವಾಯುಭಾರ ಮಾಪಕ


9. ಮೋಡಗಳಿಂದ ಮಳೆಯನ್ನು ಪ್ರಚೋದಿಸುವ ತಂತ್ರವನ್ನು ಹೀಗೆಂದು ಕರೆಯುತ್ತಾರೆ?
  (ಎ) ಮೋಡ ಗಣತಿ
  (ಬಿ) ಮೋಡ ಹತೋಟಿ
  (ಸಿ) ಮೋಡ ಇಂಜಿನೀಯರಿಂಗ್
  (ಡಿ) ಮೋಡ ಬಿತ್ತನೆ
CORRECT ANSWER

(ಡಿ) ಮೋಡ ಬಿತ್ತನೆ


10. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
  A. ಉತ್ತಮ ಉಷ್ಣವಾಹಕ 1. ಚಿನ್ನ
  B. ಬಹಳ ಸಮೃದ್ಧವಾದ ಲೋಹ 2. ಸೀಸ
  C. ಬಹಳ ಸುನಮ್ಯ ಲೋಹ 3. ಅಲ್ಯೂಮಿನಿಯಂ
  D. ದುರ್ಬಲ ಉಷ್ಣವಾಹಕ 4. ಬೆಳ್ಳಿ
    A B C D
  (ಎ) 4 3 1 2
  (ಬಿ) 1 2 3 4
  (ಸಿ) 3 2 1 4
  (ಡಿ) 4 2 1 3
CORRECT ANSWER

(ಎ) 4 3 1 2


11. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು
  (ಎ) ಸಂಸತ್ತಿನ ಕಾನೂನಿನಡಿಯಲ್ಲಿ ಜನರಿಗೆ ಲಭ್ಯವಿದೆ
  (ಬಿ) ಸಂವಿಧಾನದಲ್ಲಿ ವಿಶೇಷವಾಗಿ ಒದಗಿಸಲ್ಪಟ್ಟಿದೆ
  (ಸಿ) ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಸೂಚಿಸಲ್ಪಟ್ಟಿದೆ
  (ಡಿ) ಶಾಸಕಾಂಗದ ಆದೇಶದ ಅಡಿಯಲ್ಲಿ ದೊರೆಯುತ್ತದೆ
CORRECT ANSWER

(ಸಿ) ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಸೂಚಿಸಲ್ಪಟ್ಟಿದೆ


12. ಸಂವಿಧಾನದ ಯಾವ ವಿಭಾಗದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆಯು ಸಂಬಂಧಿಸಿದೆ?
  (ಎ) ಪ್ರಸ್ತಾವನೆ
  (ಬಿ) ಮೂಲಭೂತ ಹಕ್ಕುಗಳು
  (ಸಿ) ಮೂಲಭೂತ ಕರ್ತವ್ಯಗಳು
  (ಡಿ) ನಿರ್ದೇಶಕ ಸೂತ್ರಗಳು
CORRECT ANSWER

(ಡಿ) ನಿರ್ದೇಶಕ ಸೂತ್ರಗಳು


13. ಈ ಕೆಳಗಿನ ಯಾವ ಕಲಮಿನಲ್ಲಿ ಸಂವಿಧಾನದ ತಿದ್ದುಪಡಿಯ ಕಾರ್ಯವಿಧಾನಗಳನ್ನು ಇಡಲಾಗಿದೆ?
  (ಎ) 361ನೇ ಕಲಮು
  (ಬಿ) 368ನೇ ಕಲಮು
  (ಸಿ) 108ನೇ ಕಲಮು
  (ಡಿ) 280ನೇ ಕಲಮು
CORRECT ANSWER

(ಬಿ) 368ನೇ ಕಲಮು


14. ಗಾಂಧಾರ ಶಿಲ್ಪಕಲೆಯು ಇದರಿಂದ ಆಳವಾಗಿ ಪ್ರಭಾವಿತವಾಗಿದೆ.
  (ಎ) ಚೀನೀ
  (ಬಿ) ಯೂರೋಪಿಯನ್
  (ಸಿ) ಹೆಲೆನಿಕ್
  (ಡಿ) ರೋಮನ್
CORRECT ANSWER

(ಸಿ) ಹೆಲೆನಿಕ್


15. ಕರ್ನಾಟಕದ ಈ ಕೆಳಗಿನ ಯಾವ ಸ್ಥಳಗಳಲ್ಲಿ ಬಾಹುಬಲಿಯ ಮೂರ್ತಿಯನ್ನು ಕಾಣಲಾಗುವುದಿಲ್ಲ?
  (ಎ) ಧರ್ಮಸ್ಥಳ
  (ಬಿ) ಶ್ರವಣಬೆಳಗೊಳ
  (ಸಿ) ಕಾರ್ಕಳ
  (ಡಿ) ಉಡುಪಿ
CORRECT ANSWER

(ಡಿ) ಉಡುಪಿ


16. ಒಂದು ವೇಳೆ A + B ಎಂದರೆ A ಯು Bಯ ಮಗಳು A × B ಎಂದರೆ A ಯು Bಯ ಮಗ A – Bಎಂದರೆ A ಯು Bಯ ಹೆಂಡತಿ ಆದರೆ, P × Q – S ಎಂದರೆ
  (ಎ) S ನು Pಯ ತಂದೆ
  (ಬಿ) Q ಳು S ನ ಮಗಳು
  (ಸಿ) Qನು P ಯ ತಂದೆ
  (ಡಿ) ಮೇಲಿನ ಯಾವುದೂ ಅಲ್ಲ
CORRECT ANSWER

(ಎ) S ನು Pಯ ತಂದೆ


17. ಒಂದು ಪರೀಕ್ಷೆಯಲ್ಲಿ ಶೇಕಡಾ 30ರಷ್ಟು ವಿದ್ಯಾರ್ಥಿಗಳು ಗಣಿತದಲ್ಲಿ ನಾಪಾಸಾಗಿದ್ದಾರೆ. ಶೇಕಡಾ 25ರಷ್ಟು ಇಂಗ್ಲಿಷ್ ನಲ್ಲಿ ಮತ್ತು ಶೇಕಡಾ 15ರಷ್ಟು ಎರಡೂ ವಿಷಯಗಳಲ್ಲಿ ನಾಪಾಸು ಆಗಿದ್ದಾರೆ ಪಾಸಾದವರ ಶೇಕಡಾವಾರು ಸಂಖ್ಯೆ ಎಷ್ಟು?
  (ಎ) 45%
  (ಬಿ) 55%
  (ಸಿ) 40%
  (ಡಿ) 60%
CORRECT ANSWER

(ಡಿ) 60%


18. ಒಂದು ವೇಳೆ X, Y, Z ನವರು ಕ್ರಮವಾಗಿ 10, 12, 15 ದಿನಗಳಲ್ಲಿ ಕೆಲಸ ಮುಗಿಸಬಲ್ಲರು. ನಂತರ X, Y, Z ನವರು ಒಟ್ಟಿಗೆ ಒಂದೇ ಕೆಲಸವನ್ನು ಮುಗಿಸಬಹುದಾದದ್ದು
  (ಎ) 3 ದಿನಗಳಲ್ಲಿ
  (ಬಿ) 4 ದಿನಗಳಲ್ಲಿ
  (ಸಿ) 5 ದಿನಗಳಲ್ಲಿ
  (ಡಿ) 6 ದಿನಗಳಲ್ಲಿ
CORRECT ANSWER

(ಬಿ) 4 ದಿನಗಳಲ್ಲಿ


19. ಯಾವ ನದಿಗೆ ಅಡ್ಡಲಾಗಿ ‘‘ಗೊರೂರು ಅಣೆಕಟ್ಟನ್ನು’’ ನಿರ್ಮಿಸಲಾಗಿದೆ?
  (ಎ) ಶರಾವತಿ
  (ಬಿ) ನೇತ್ರಾವತಿ
  (ಸಿ) ಹೇಮಾವತಿ
  (ಡಿ) ವೇದಾವತಿ
CORRECT ANSWER

(ಸಿ) ಹೇಮಾವತಿ


20. ಒಂದು ಅರ್ಥವ್ಯವಸ್ಥೆಯಲ್ಲಿ ‘‘ಟೇಕ್ ಆಫ್ ಹಂತ’’ವೆಂದರೆ
  (ಎ) ಸ್ಥಿರ ಬೆಳವಣಿಗೆಯ ಪ್ರಾರಂಭ
  (ಬಿ) ಅರ್ಥ ವ್ಯವಸ್ಥೆ ಜಡವಾಗಿರುವುದು
  (ಸಿ) ಅರ್ಥವ್ಯವಸ್ಥೆ ಕುಸಿಯುವುದರಲ್ಲಿರುವುದು
  (ಡಿ) ಎಲ್ಲಾ ನಿಯಂತ್ರಣಗಳೂ ತೊಡೆದು ಹಾಕಲ್ಪಟ್ಟಿರುವುದು
CORRECT ANSWER

(ಎ) ಸ್ಥಿರ ಬೆಳವಣಿಗೆಯ ಪ್ರಾರಂಭ


21. ಹಣದುಬ್ಬರವೆಂದರೆ
  (ಎ) ಆಯವ್ಯಯ ಕೊರತೆಯಲ್ಲಿ ಹೆಚ್ಚಳ
  (ಬಿ) ಹಣ ಸರಬರಾಜಿನಲ್ಲಿ ಹೆಚ್ಚಳ
  (ಸಿ) ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ
  (ಡಿ) ಅನುಭೋಗಿ ಪದಾರ್ಥಗಳ ಬೆಲೆಗಳಲ್ಲಿ ಏರಿಕೆ
CORRECT ANSWER

(ಸಿ) ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ


22. ಆರ್ಥಿಕ ಸರ್ವೇಕ್ಷಣವು ಇವರಿಂದ ಪ್ರಕಟಿಸಲ್ಪಡುತ್ತದೆ.
  (ಎ) ಆರ್ಥಿಕ ಸಚಿವಾಲಯ
  (ಬಿ) ಯೋಜನಾ ಆಯೋಗ
  (ಸಿ) ಭಾರತ ಸರ್ಕಾರ
  (ಡಿ) ಭಾರತದ ಅಂಕಿ ಸಂಖ್ಯೆ ಸಂಸ್ಥೆ
CORRECT ANSWER

(ಎ) ಆರ್ಥಿಕ ಸಚಿವಾಲಯ


23. ಪ್ರಧಾನಿ ನರೇಂದ್ರಮೋದಿಯವರಿಂದ ಉದ್ಘಾಟಿಸಲ್ಪಟ್ಟ ‘‘ಇಂಟಿಗ್ರೇಟೆಡ್ ಫುಡ್ ಪಾರ್ಕ್’’ ಇಲ್ಲಿದೆ.
  (ಎ) ತುಮಕೂರು
  (ಬಿ) ಹಾಸನ
  (ಸಿ) ದಾವಣಗೆರೆ
  (ಡಿ) ಧಾರವಾಡ
CORRECT ANSWER

(ಎ) ತುಮಕೂರು


24. ಭಾರತದಲ್ಲಿ ಕೇಸರಿಯನ್ನು ಬೆಳೆಯುವ ಏಕಮಾತ್ರ ರಾಜ್ಯ ಇದಾಗಿದೆ.
  (ಎ) ಅಸ್ಸಾಂ
  (ಬಿ) ಹಿಮಾಚಲ ಪ್ರದೇಶ
  (ಸಿ) ಜಮ್ಮು ಮತ್ತು ಕಾಶ್ಮೀರ
  (ಡಿ) ಮೇಘಾಲಯ
CORRECT ANSWER

(ಸಿ) ಜಮ್ಮು ಮತ್ತು ಕಾಶ್ಮೀರ


25. ಭಾರತದ ಸಂವಿಧಾನದಲ್ಲಿ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಉತ್ತೇಜನವು ಇದರಲ್ಲಿ ಒಳಗೊಂಡಿದೆ.
  (ಎ) ಸಂವಿಧಾನಕ್ಕೆ ಪೀಠಿಕೆ (ಪ್ರಸ್ತಾವನೆ)
  (ಬಿ) ರಾಷ್ಟ್ರ ಧೋರಣೆ/ಕಾರ್ಯಸೂತ್ರಗಳ ನಿರ್ದೇಶಕ ಸೂತ್ರಗಳು
  (ಸಿ) ಮೂಲಭೂತ ಹಕ್ಕುಗಳು
  (ಡಿ) ಒಂಬತ್ತನೆ ಷೆಡ್ಯೂಲ್
CORRECT ANSWER

(ಬಿ) ರಾಷ್ಟ್ರ ಧೋರಣೆ/ಕಾರ್ಯಸೂತ್ರಗಳ ನಿರ್ದೇಶಕ ಸೂತ್ರಗಳು


26. ಕೆಳಗಿವುಗಳಲ್ಲಿ ಯಾವ ರೋಗವನ್ನು ಭಾರತದಲ್ಲಿ ನಿರ್ಮೂಲನಗೊಳಿಸಲಾಗಿದೆ?
ಈ ರೋಗಗಳನ್ನು ಪರಿಗಣಿಸಿ.
  1. ಗಂಟಲುಮಾರಿ
  2. ಸೀತಾಳೆ-ಸಿಡುಬು
  3. ಸ್ಮಾಲ್ ಪಾಕ್ಸ್
  (ಎ) 1 ಮತ್ತು 2 ಮಾತ್ರ
  (ಬಿ) 3 ಮಾತ್ರ
  (ಸಿ) 1, 2 ಮತ್ತು 3
  (ಡಿ) ಯಾವುದನ್ನೂ ಇಲ್ಲ
CORRECT ANSWER

(ಬಿ) 3 ಮಾತ್ರ


27. ಕೆಳಗಿನವುಗಳಲ್ಲಿ ಯಾವುದು ಮಾನವ ದೇಹದ ಉಷ್ಣತಾಸ್ಥಾಪಿ ಹೊಂದಿರುತ್ತದೆ?
  (ಎ) ಪಿನಿಯಲ್
  (ಬಿ) ಪಿಟ್ಯೂಟರಿ
  (ಸಿ) ಥೈರಾಯ್ಡ್
  (ಡಿ) ಹೈಪೊಥಲಾಮಸ್
CORRECT ANSWER

(ಡಿ) ಹೈಪೊಥಲಾಮಸ್


28. ಈ ಕೆಳಗಿನವುಗಳಲ್ಲಿ ಯಾವ ಕಾಯಿಲೆಯು ಪ್ರೊೊಟೀನ್ ಕೊರತೆಯಿಂದ ಉಂಟಾಗುತ್ತದೆ?
  (ಎ) ಕ್ವಾರ್ಷಿಯಾರ್ಕರ್
  (ಬಿ) ರಿಕೆಟ್ಸ್
  (ಸಿ) ಬೆರಿಬೆರಿ
  (ಡಿ) ಸ್ಕರ್ವಿ
CORRECT ANSWER

(ಎ) ಕ್ವಾರ್ಷಿಯಾರ್ಕರ್


29. ಈ ಕೆಳಗಿನವುಗಳಲ್ಲಿ ಯಾವುದು ಮಹಿಳೆಯರಿಗೆ ಮತದಾನ ಹಕ್ಕನ್ನು ನೀಡಿದ ಪ್ರಪ್ರಥಮ ದೇಶವಾಗಿದೆ.
  (ಎ) ಐಸ್‌ಲ್ಯಾಂಡ್‌
  (ಬಿ) ಭಾರತ
  (ಸಿ) ನ್ಯೂಜಿಲ್ಯಾಂಡ್
  (ಡಿ) ಅಮೇರಿಕಾ
CORRECT ANSWER

(ಸಿ) ನ್ಯೂಜಿಲ್ಯಾಂಡ್


30. ವಿಶ್ವದ ಅತ್ಯಂತ ಪ್ರಾಚೀನ ಏಕಾಧಿಪತ್ಯ ಇದರದ್ದಾಗಿದೆ.
  (ಎ) ನೇಪಾಳ
  (ಬಿ) ಸೌದಿ ಅರೇಬಿಯಾ
  (ಸಿ) ಜಪಾನ್
  (ಡಿ) ಇಂಗ್ಲೆಂಡ್
CORRECT ANSWER

(ಸಿ) ಜಪಾನ್


31. ಸಾಲಾರ್ ಜಂಗ್ ಮ್ಯೂಸಿಯಂ ಇಲ್ಲಿದೆ.
  (ಎ) ಪುಣೆ
  (ಬಿ) ಪಾಟ್ನಾ
  (ಸಿ) ಹೈದರಾಬಾದ್
  (ಡಿ) ಕೊಚ್ಚಿ
CORRECT ANSWER

(ಸಿ) ಹೈದರಾಬಾದ್


32. ಹೊಂದಿಸಿರಿ ಬರೆಯಿರಿ.
  A. ಅಲಿವರ್ ಟ್ವಿಸ್ಟ್ 1. ಚಾರ್ಲ್ಸ್ ಡಿಕನ್ಸ್
  B. ಗ್ಯಾದರಿಂಗ್ ಸ್ಟಾರ್ಮ್ 2. ಥಾಮಸ್ ಮ್ಯಾನ್
  C. ಡೆತ್ ಇನ್ ವೆನಿಸ್ 3. ವಿನ್‌ಸ್ಟನ್‌ ಚರ್ಚಿಲ್
  D. ಕನ್‌ಫೆಶನ್ಸ್‌ 4. ಜೆ.ಜೆ. ರೂಸೋ
    A B C D
  (ಎ) 1 3 2 4
  (ಬಿ) 4 3 2 1
  (ಸಿ) 1 2 3 4
  (ಡಿ) 4 2 3 1
CORRECT ANSWER

(ಎ) 1 3 2 4


33. ‘‘ಕರ್ನಾಟಕ ಸಂಗೀತದ ಪಿತಾಮಹ’’ ಎಂದು ಯಾರನ್ನು ಗುರುತಿಸಲಾಗಿದೆ?
  (ಎ) ಕನಕದಾಸರು
  (ಬಿ) ಪುರಂದರದಾಸರು
  (ಸಿ) ರಾಘವಾಂಕ
  (ಡಿ) ಸರ್ವಜ್ಞ
CORRECT ANSWER

(ಬಿ) ಪುರಂದರದಾಸರು


34. ಜಾಗತಿಕ ಪರಿಸರ ದಿನ 2017ರ ವಿಷಯ ಯಾವುದು?
  (ಎ) ಹಸಿರು ಅರ್ಥವ್ಯವಸ್ಥೆ : ಇದು ನಿಮ್ಮನ್ನು ಒಳಗೊಳ್ಳುತ್ತದೆಯೇ?
  (ಬಿ) ನಿಮ್ಮ ಧ್ವನಿಯನ್ನು ಎತ್ತರಿಸಿರಿ, ಸಮುದ್ರ ಮಟ್ಟವನ್ನಲ್ಲ
  (ಸಿ) ಜನರನ್ನು ನಿಸರ್ಗಕ್ಕೆ ಜೋಡಿಸುವುದು
  (ಡಿ) ಯೋಚಿಸಿರಿ – ತಿನ್ನಿರಿ – ಉಳಿಸಿರಿ
CORRECT ANSWER

(ಸಿ) ಜನರನ್ನು ನಿಸರ್ಗಕ್ಕೆ ಜೋಡಿಸುವುದು


35. ಭಾರತದ ಹೊಸ ಸಾಲಿಸಿಟರ್ ಜನರಲ್ ಯಾರಾಗಿದ್ದಾರೆ?
  (ಎ) ತುಷಾರ್ ಮೆಹ್ತಾ
  (ಬಿ) ಪಿಂಕಿ ಆನಂದ್
  (ಸಿ) ರಂಜಿತ್ ಕುಮಾರ್
  (ಡಿ) ಪಿ.ಎಸ್. ನರಸಿಂಹ
CORRECT ANSWER

(ಸಿ) ರಂಜಿತ್ ಕುಮಾರ್


36. ಅಂತರರಾಷ್ಟ್ರೀಯ ಯೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
  (ಎ) ಜೂನ್ 21
  (ಬಿ) ಜನವರಿ 21
  (ಸಿ) ಜುಲೈ 21
  (ಡಿ) ಮೇ 21
CORRECT ANSWER

(ಎ) ಜೂನ್ 21


37. ಗೂಳಿಯನ್ನು ಪಳಗಿಸುವ ಕ್ರೀಡೆ ಜಲ್ಲಿಕಟ್ಟನ್ನು ಪ್ರಾತಿನಿಧಿಕವಾಗಿ ಈ ರಾಜ್ಯದಲ್ಲಿ ನಡೆಸಲಾಗುತ್ತದೆ.
  (ಎ) ಕರ್ನಾಟಕ
  (ಬಿ) ಆಂಧ್ರ ಪ್ರದೇಶ
  (ಸಿ) ಕೇರಳ
  (ಡಿ) ತಮಿಳುನಾಡು
CORRECT ANSWER

(ಡಿ) ತಮಿಳುನಾಡು


38. ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರವನ್ನು ಘೋಷಿಸಲಾಗಿದೆ?
  (ಎ) ಶಿಮ್ಲಾ
  (ಬಿ) ಮನಾಲಿ
  (ಸಿ) ಧರ್ಮಶಾಲಾ
  (ಡಿ) ಕಸೌಲಿ
CORRECT ANSWER

(ಸಿ) ಧರ್ಮಶಾಲಾ


39. 2017ರ ಆಸ್ಟ್ರೇಲಿಯನ್ ಪುರುಷರ ಓಪನ್ ಟೆನ್ನಿಸ್ ಸಿಂಗಲ್ ಪ್ರಶಸ್ತಿಯನ್ನು ಗೆದ್ದವರು ಯಾರು?
  (ಎ) ನೊವಾಕ್ ಜೋಕೋವಿಕ್
  (ಬಿ) ರಾಫೆಲ್ ನಡಾಲ್
  (ಸಿ) ರೋಜರ್ ಫೆಡರರ್
  (ಡಿ) ಆ್ಯಂಡಿ ಮುರೆ
CORRECT ANSWER

(ಸಿ) ರೋಜರ್ ಫೆಡರರ್


40. 2017ರ ಆಸ್ಕರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಯಾವ ಚಲನಚಿತ್ರ ಗೆದ್ದಿದೆ?
  (ಎ) ಅರೈವಲ್
  (ಬಿ) ಲಾ ಲಾ ಲ್ಯಾಂಡ್
  (ಸಿ) ಮೂನ್‌ಲೈಟ್‌
  (ಡಿ) ಲಯನ್
CORRECT ANSWER

(ಸಿ) ಮೂನ್‌ಲೈಟ್‌


41. ಭಾರತದ ಅತ್ಯಂತ ಉದ್ದದ ಕಾಲುವೆ ‘ಚೆನಾನಿ – ನಾಶ್ರಿ ಕಾಲುವೆ’ ಇಲ್ಲಿದೆ.
  (ಎ) ಹಿಮಾಚಲ ಪ್ರದೇಶ
  (ಬಿ) ತಮಿಳುನಾಡು
  (ಸಿ) ಜಮ್ಮು ಮತ್ತು ಕಾಶ್ಮೀರ
  (ಡಿ) ಕರ್ನಾಟಕ
CORRECT ANSWER

(ಸಿ) ಜಮ್ಮು ಮತ್ತು ಕಾಶ್ಮೀರ


42. ಕರ್ನಾಟಕದ ಯಾವ ಪ್ರದೇಶದಲ್ಲಿ ಅಶೋಕನ ಕಿರಿಯ ಶಿಲಾಶಾಸನ ಶೋಧಿಸಲ್ಪಟ್ಟಿತು?
  (ಎ) ಹಲ್ಮಿಡಿ, ಹಾಸನ
  (ಬಿ) ಮಸ್ಕಿ, ರಾಯಚೂರು
  (ಸಿ) ಮುಳಬಾಗಿಲು, ಕೋಲಾರ
  (ಡಿ) ಹೊಸಕೋಟೆ, ಬೆಂಗಳೂರು
CORRECT ANSWER

(ಬಿ) ಮಸ್ಕಿ, ರಾಯಚೂರು


43. ಭಾರತದಲ್ಲಿ ಆರ್ಥಿಕ ವರ್ಷವನ್ನು ಜನವರಿ – ಡಿಸೆಂಬರ್ ಆಧಿಕಾರಕ್ಕೆ ಬದಲಿಸಿದ ಪ್ರಥಮ ರಾಜ್ಯ ಯಾವುದು?
  (ಎ) ಪಶ್ಚಿಮ ಬಂಗಾಳ
  (ಬಿ) ಬಿಹಾರ
  (ಸಿ) ಮಧ್ಯಪ್ರದೇಶ
  (ಡಿ) ಕರ್ನಾಟಕ
CORRECT ANSWER

(ಸಿ) ಮಧ್ಯಪ್ರದೇಶ


44. ಪಶ್ಚಿಮ ಭಾರತದಲ್ಲಿ ಚಾಲುಕ್ಯರ ಉತ್ತರಾಧಿಕಾರಿಯಾಗಿ ಬಂದ ರಾಜವಂಶವು
  (ಎ) ಚೋಳರು
  (ಬಿ) ಕಾಕತೀಯರು
  (ಸಿ) ಪಲ್ಲವರು
  (ಡಿ) ರಾಷ್ಟ್ರಕೂಟರು
CORRECT ANSWER

(ಡಿ) ರಾಷ್ಟ್ರಕೂಟರು


45. ಅಲ್ಲಾವುದ್ದೀನ್ ಖಿಲ್ಜಿಯು ಮಾರುಕಟ್ಟೆ ಸುಧಾರಣೆಯನ್ನು ಪರಿಚಯಿಸಿದ್ದು
  (ಎ) ಬೃಹತ್ ಸೈನ್ಯದ ನಿರ್ವಹಣೆಗಾಗಿ
  (ಬಿ) ಅವನ ಪ್ರಜೆಗಳಿಗೆ ಉತ್ತಮ ಆಡಳಿತ ನೀಡಲು
  (ಸಿ) ಕೃಷಿಕರ ಜೀವನ ನಿರಾತಂಕಗೊಳಿಸಲು
  (ಡಿ) ಮಧ್ಯವರ್ತಿಗಳನ್ನು ನಿವಾರಿಸಲು
CORRECT ANSWER

(ಎ) ಬೃಹತ್ ಸೈನ್ಯದ ನಿರ್ವಹಣೆಗಾಗಿ


46. ‘ಸೂಫಿ’ ಎಂಬ ಶಬ್ದದ ಮೂಲ ಇಲ್ಲಿಂದ
  (ಎ) ಒಂದು ವಿಧದ ಉಡುಪು
  (ಬಿ) ಒಂದು ವಿಧದ ಕವಿತೆ
  (ಸಿ) ಒಂದು ಭಾಷೆ
  (ಡಿ) ಒಂದು ಸ್ಥಳದ ಹೆಸರು
CORRECT ANSWER

(ಎ) ಒಂದು ವಿಧದ ಉಡುಪು


47. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ
  A. ಮೀರಾಬಾಯಿ 1. ಬಂಗಾಳಿ
  B. ತ್ಯಾಗರಾಜ 2. ಹಿಂದಿ
  C. ಚಂಡಿದಾಸ 3. ತೆಲುಗು
  D. ಪುರಂದರದಾಸ 4. ಕನ್ನಡ
    A B C D
  (ಎ) 2 3 1 4
  (ಬಿ) 1 2 3 4
  (ಸಿ) 3 4 1 2
  (ಡಿ) 4 1 3 2
CORRECT ANSWER

(ಎ) 2 3 1 4


48. ‘ಮನ್ಸಬ್’ ಎಂಬ ಶಬ್ದ ಪ್ರತಿನಿಧಿಸುವುದು
  (ಎ) ಒಂದು ಪದವಿ
  (ಬಿ) ಒಂದು ಕಚೇರಿ
  (ಸಿ) ಒಂದು ತುಂಡು ಭೂಮಿ
  (ಡಿ) ಪಾವತಿಯ ಒಂದು ಶ್ರೇಣಿ
CORRECT ANSWER

(ಎ) ಒಂದು ಪದವಿ


49. 60 ವಿದ್ಯಾರ್ಥಿಗಳ ಒಂದು ವಿದಾಯ ಕೂಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೆ ಪರಸ್ಪರ ಕೈ ಕುಲುಕುತ್ತಾನೆ. ಹಾಗಾದರೆ ಕೈಕುಲುಕುಗಳ ಒಟ್ಟು ಸಂಖ್ಯೆ ಎಷ್ಟು?
  (ಎ) 3540
  (ಬಿ) 1770
  (ಸಿ) 3600
  (ಡಿ) 3000
CORRECT ANSWER

(ಬಿ) 1770


50. ಒಂದು ವೇಳೆ INDIAವನ್ನು 95491 ಎಂದು ಬರೆದರೆ, DELHI ಯನ್ನು ಹೀಗೆ ಬರೆಯಬಹುದು.
  (ಎ) 45389
  (ಬಿ) 45489
  (ಸಿ) 45498
  (ಡಿ) 45398
CORRECT ANSWER

(ಎ) 45389


51. ಹೇಳಿಕೆ 1 : ಎಲ್ಲಾ ಹೂಗಳು ಮುಳ್ಳುಗಳು.
ಹೇಳಿಕೆ 2 : ಎಲ್ಲಾ ಮುಳ್ಳುಗಳು ಎಲೆಗಳು
ಒಂದು ವೇಳೆ ಈ ಮೇಲಿನ ಹೇಳಿಕೆಗಳು ಸತ್ಯವಾಗಿದ್ದಲ್ಲಿ .
  (ಎ) ಎಲ್ಲಾ ಹೂಗಳು ಎಲೆಗಳು
  (ಬಿ) ಎಲ್ಲಾ ಎಲೆಗಳು ಮುಳ್ಳುಗಳು
  (ಸಿ) ಎಲ್ಲಾ ಎಲೆಗಳು ಹೂಗಳು
  (ಡಿ) ಎಲ್ಲಾ ಮುಳ್ಳುಗಳು ಹೂಗಳು
CORRECT ANSWER

(ಎ) ಎಲ್ಲಾ ಹೂಗಳು ಎಲೆಗಳು


52. ರಾಮನಿಗಿಂತ ಹರೀಶನು ದೊಡ್ಡವನು, ಅಶೋಕನು ರಾಮನಿಗಿಂತ ಸಣ್ಣವನು, ಅಶೋಕನಿಗಿಂತ ಸುರೇಶನು ದೊಡ್ಡವನಲ್ಲ, ಹಾಗಾದರೆ ಯಾವುದು ಸತ್ಯ?
  (ಎ) ಹರೀಶ್ ಮತ್ತು ಅಶೋಕ ಒಂದೇ ಪ್ರಾಯದವರು
  (ಬಿ) ಸುರೇಶ್ ಮತ್ತು ರಾಮ ಒಂದೇ ಪ್ರಾಯದವರು
  (ಸಿ) ಸುರೇಶನು ಸಣ್ಣವನು
  (ಡಿ) ಅಶೋಕನು ಹರೀಶನಿಗಿಂತ ದೊಡ್ಡವನು
CORRECT ANSWER

(ಸಿ) ಸುರೇಶನು ಸಣ್ಣವನು


53. ಕೆಳಗೆ ಕೊಟ್ಟಿರುವ ಅಕ್ಷರಗಳ ವ್ಯವಸ್ಥಾಕ್ರಮದಲ್ಲಿ ಬರತಕ್ಕ ಮುಂದಿನ ಶಬ್ದ …
YEB, WFD, UHG, SKI._____
  (ಎ) QGL
  (ಬಿ) QOL
  (ಸಿ) TOL
  (ಡಿ) QNL
CORRECT ANSWER

(ಬಿ) QOL


54. ಡಾಲ್ ಹೌಸಿಯ ಕೆಲವೊಂದು ಕ್ರಮಗಳು ಭಾರತದಲ್ಲಿ ತೀವ್ರವಾದ ಅಸಮಾಧಾನವನ್ನು ಸೃಷ್ಟಿಸಿದ್ದಲ್ಲದೇ ಅವು 1857ರ ದಂಗೆಗೂ ಕಾರಣವಾಯಿತು. ಈ ಕೆಳಗಿವುಗಳಲ್ಲಿ ಯಾವುದು ಒಂದು ಅವುಗಳಲ್ಲಿ ಅಲ್ಲ?
  (ಎ) ದತ್ತು ಮಕ್ಕಳಿಗೆ ಹಕ್ಕಿಲ್ಲ ಸಿದ್ಧಾಂತ
  (ಬಿ) ರೈಲ್ವೆ ಮತ್ತು ಟೆಲಿಗ್ರಾಫ್‌ಗಳ ಪರಿಚಯ
  (ಸಿ) ಕೆಲವು ಅರಸರ ಪದವಿ ಮತ್ತು ಪಿಂಚಣಿಯ ರದ್ಧತಿ
  (ಡಿ) ಶೈಕ್ಷಣಿಕ ಸುಧಾರಣೆಗಳು
CORRECT ANSWER

(ಬಿ) ರೈಲ್ವೆ ಮತ್ತು ಟೆಲಿಗ್ರಾಫ್‌ಗಳ ಪರಿಚಯ


55. ಈ ಕೆಳಗಿನವರಲ್ಲಿ ಯಾರು ಆತನ ಹೊಸ ಪಂಚಾಂಗ ಪಟ್ಟಿಗೆ, ಹೊಸ ನಾಣ್ಯ ಪದ್ಧತಿಗೆ ಮತ್ತು ಹೊಸ ಭಾರ ಮತ್ತು ಅಳತೆಯ ಮಾಪನಕ್ಕಾಗಿ ಗುರುತಿಸಲ್ಪಟ್ಟವರು?
  (ಎ) ಮುರ್ಷಿದ್ ಖುಲಿಖಾನ್
  (ಬಿ) ಟಿಪ್ಪುು ಸುಲ್ತಾನ್
  (ಸಿ) ನಿಜಾಮ್ – ಉಲ್ – ಮುಲ್ಕ್
  (ಡಿ) ಸಾದತ್ ಖಾನ್
CORRECT ANSWER

(ಬಿ) ಟಿಪ್ಪುು ಸುಲ್ತಾನ್


56. ಮೊಗಲ್ ಅರಸ ಬಹದ್ದೂರ್ ಷಾ II ನು ಬ್ರಿಟಿಷರಿಂದ ಪದಚ್ಯುತಗೊಳಿಸಲ್ಪಟ್ಟು ಕಳಿಸಲ್ಪಟ್ಟಿದ್ದು ಇಲ್ಲಿಗೆ .
  (ಎ) ಪುಣೆ
  (ಬಿ) ಅಂಡಮಾನ್ ಮತ್ತು ನಿಕೋಬಾರ್
  (ಸಿ) ಮಾಂಡಲೆ
  (ಡಿ) ಹೈದರಾಬಾದ್
CORRECT ANSWER

(ಸಿ) ಮಾಂಡಲೆ


57. ಈ ಕೆಳಗಿನ ಯಾರು ಒಬ್ಬ ಕ್ರಾಂತಿಕಾರಿಯಾಗಿದ್ದು ನಂತರದಲ್ಲಿ ಯೋಗಿ ಮತ್ತು ತತ್ವಜ್ಞಾನಿಯಾಗಿ ಬದಲಾದವರು?
  (ಎ) ಬಾಲಗಂಗಾಧರ್ ತಿಲಕ್
  (ಬಿ) ಅರಬಿಂದೋ ಘೋಷ್
  (ಸಿ) ಲಾಲಾ ಲಜಪತ್ ರಾಯ್
  (ಡಿ) ಅಗರ್‌ಕರ್‌
CORRECT ANSWER

(ಬಿ) ಅರಬಿಂದೋ ಘೋಷ್


58. ಬಾರ್ಡೋಲಿ ಸತ್ಯಾಗ್ರಹವನ್ನು ಮುನ್ನಡೆಸಿದವರು
  (ಎ) ರಾಜೇಂದ್ರ ಪ್ರಸಾದ್
  (ಬಿ) ವಲ್ಲಭಭಾಯಿ ಪಟೇಲ್
  (ಸಿ) ಮೊರಾರ್ಜಿ ದೇಸಾಯಿ
  (ಡಿ) ಮಹಾತ್ಮ ಗಾಂಧಿ
CORRECT ANSWER

(ಬಿ) ವಲ್ಲಭಭಾಯಿ ಪಟೇಲ್


59. ಮನುಷ್ಯನ ದೇಹದ ಭಾರವು
  (ಎ) ಭೂಮಿಯ ಎಲ್ಲಾ ಪ್ರದೇಶದಲ್ಲೂ ಒಂದೇ ಆಗಿರುತ್ತದೆ.
  (ಬಿ) ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ.
  (ಸಿ) ಸಮಭಾಜಕದಲ್ಲಿ ಗರಿಷ್ಠವಾಗಿರುತ್ತದೆ
  (ಡಿ) ಬಯಲಿಗಿಂತ ಪರ್ವತಗಳ ಮೇಲೆ ಜಾಸ್ತಿಯಾಗಿರುತ್ತದೆ.
CORRECT ANSWER

(ಬಿ) ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ.


60. ಈ ಕೆಳಗಿನ ಯಾವುದು ರೇಡಿಯೋ ಆ್ಯಕ್ಟಿವ್ ಮೂಲದ ಕ್ರಿಯೆಗಳ ಮಾಪಕವಾಗಿದೆ?
  (ಎ) LUX
  (ಬಿ) ಬೀಕ್ವೆರಲ್
  (ಸಿ) ಟೆಸ್ಲ
  (ಡಿ) ಸೈಮೆನ್ಸ್
CORRECT ANSWER

(ಬಿ) ಬೀಕ್ವೆರಲ್


61. ವಾತಾವರಣ ಮಾಲಿನ್ಯದಿಂದಾಗುವ ಆಮ್ಲಮಳೆಗೆ ಕಾರಣ
  (ಎ) ಇಂಗಾಲದ ಡೈ ಆಕ್ಸೈಡ್ ಮತ್ತು ಸಾರಜನಕ
  (ಬಿ) ಇಂಗಾಲದ ಮೋನಾಕ್ಸೈಡ್ ಮತ್ತು ಇಂಗಾಲದ ಡೈ ಆಕ್ಸೈಡ್
  (ಸಿ) ಓರೆನ್ ಮತ್ತು ಇಂಗಾಲದ ಡೈ ಆಕ್ಸೈಡ್
  (ಡಿ) ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್
CORRECT ANSWER

(ಡಿ) ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್


62. ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲಧಾತು
  (ಎ) ಸಾರಜನಕ
  (ಬಿ) ಆಮ್ಲಜನಕ
  (ಸಿ) ಇಂಗಾಲ
  (ಡಿ) ಗಂಧಕ
CORRECT ANSWER

(ಸಿ) ಇಂಗಾಲ


63. ಇಂಗಾಲದ ಡೈ ಆಕ್ಸೈಡ್‌ನ್ನು‘ಹಸಿರುಮನೆ ಅನಿಲ’ ಎಂದು ಕರೆಯಬಹುದು.
  (ಎ) ಇದರ ಸಾಂದ್ರತೆಯು ಯಾವಾಗಲೂ ಇತರ ಅನಿಲಗಳಿಗಿಂತ ಹೆಚ್ಚಾಗಿ ಉಳಿದುಕೊಳ್ಳುತ್ತದೆ.
  (ಬಿ) ಇದು ದ್ಯುತಿಸಂಶ್ಲೇಷಣೆಯಲ್ಲಿ ಉಪಯೋಗಿಸಲ್ಪಡುತ್ತದೆ.
  (ಸಿ) ಇದು ಇನ್‌ಫ್ರಾರೆಡ್‌ ವಿಕಿರಣವನ್ನು ಹೀರಿಕೊಳ್ಳುತ್ತದೆ.
  (ಡಿ) ಇದು ಕಣ್ಣಿಗೆ ಕಾಣತಕ್ಕಂತಹ ವಿಕಿರಣಗಳನ್ನು ಹೊರಸೂಸುತ್ತದೆ.
CORRECT ANSWER

(ಸಿ) ಇದು ಇನ್‌ಫ್ರಾರೆಡ್‌ ವಿಕಿರಣವನ್ನು ಹೀರಿಕೊಳ್ಳುತ್ತದೆ.


64. ಈ ಕೆಳಗಿನ ಯಾವ ಸಂಯೋಜನೆಯು ತಪ್ಪಾಗಿದೆ?
  (ಎ) ಕುವೆಂಪು – ರಾಮಾಯಣಂ ದರ್ಶನಂ
  (ಬಿ) ಗಿರೀಶ್ ಕಾರ್ನಾಡ್ – ತುಘಲಕ್
  (ಸಿ) ಶಿವರಾಮ ಕಾರಂತ – ಯಯಾತಿ
  (ಡಿ) ದ.ರಾ.ಬೇಂದ್ರೆ – ನಾಕುತಂತಿ
CORRECT ANSWER

(ಸಿ) ಶಿವರಾಮ ಕಾರಂತ – ಯಯಾತಿ


65. ಪ್ರಸಿದ್ಧ ಬೌದ್ಧ ಅವಶೇಷಗಳು ಕರ್ನಾಟಕದಲ್ಲಿ ಇಲ್ಲಿ ಕಾಣಸಿಗುತ್ತದೆ.
  (ಎ) ಮಂಜಿರಾಬಾದ್
  (ಬಿ) ಹಳೇಬೀಡು
  (ಸಿ) ಸನ್ನತಿ
  (ಡಿ) ಹಂಪಿ
CORRECT ANSWER

(ಸಿ) ಸನ್ನತಿ


66. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
  A. ಮೃಚ್ಛಕಟಿಕ 1. ಶೂದ್ರಕ
  B. ಗೀತ ಗೋವಿಂದ 2. ಜಯದೇವ
  C. ಮುದ್ರಾರಾಕ್ಷಸ 3. ವಿಶಾಖದತ್ತ
  D. ರಾಜತರಂಗಿಣಿ 4. ಕಲ್ಹಣ
    A B C D
  (ಎ) 1 2 3 4
  (ಬಿ) 3 1 2 4
  (ಸಿ) 4 1 2 3
  (ಡಿ) 1 4 3 2
CORRECT ANSWER

(ಎ) 1 2 3 4


67. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
  A. ರಾಜಸ್ಥಾನ 1. ಥೋರ
  B. ಕರ್ನಾಟಕ 2. ಸೂಸಿನಿ
  C. ಉತ್ತರ ಪ್ರದೇಶ 3. ರಾಫ್
  D. ಜಮ್ಮು ಮತ್ತು ಕಾಶ್ಮೀರ 4. ಯಕ್ಷಗಾನ
    A B C D
  (ಎ) 4 3 2 1
  (ಬಿ) 2 4 1 3
  (ಸಿ) 3 4 1 2
  (ಡಿ) 1 2 3 4
CORRECT ANSWER

(ಬಿ) 2 4 1 3


68. ಕೆಳಗಿನವುಗಳಲ್ಲಿ ಯಾವುದನ್ನು ಉಲ್ಕೆ ಅಥವಾ ಬೀಳುತ್ತಿರುವ ನಕ್ಷತ್ರ ಎಂದು ಕರೆಯಲಾಗುತ್ತದೆ?
  (ಎ) ಮೀಟಿಯೋರಾಯಿಡ್ಸ್
  (ಬಿ) ಆ್ಯಸ್ಟರಾಯಿಡ್ಸ್
  (ಸಿ) ಪ್ಲಾನಿಟೋಯಿಡ್ಸ್
  (ಡಿ) ಧೂಮಕೇತು
CORRECT ANSWER

(ಎ) ಮೀಟಿಯೋರಾಯಿಡ್ಸ್


69. ಕರ್ಕಾಟಕ ಸಂಕ್ರಾಂತಿ ವೃತ್ತ ಇವುಗಳ ಮೂಲಕ ಹಾದು ಹೋಗುತ್ತದೆ
  (ಎ) ಭಾರತ ಮತ್ತು ಇರಾನ್
  (ಬಿ) ಇರಾನ್ ಮತ್ತು ಪಾಕಿಸ್ತಾನ
  (ಸಿ) ಭಾರತ ಮತ್ತು ಸೌದಿ ಅರೇಬಿಯಾ
  (ಡಿ) ಇರಾನ್ ಮತ್ತು ಇರಾಕ್
CORRECT ANSWER

(ಸಿ) ಭಾರತ ಮತ್ತು ಸೌದಿ ಅರೇಬಿಯಾ


70. ಯೂರೋಪಿನ ಯಾವ ದೇಶವು ‘ಸರೋವರಗಳ ದೇಶ’ ಎಂದು ತಿಳಿಯಲ್ಪಟ್ಟಿದೆ?
  (ಎ) ಫಿನ್‌ಲ್ಯಾಂಡ್‌
  (ಬಿ) ಇಟಲಿ
  (ಸಿ) ಫ್ರಾನ್ಸ್
  (ಡಿ) ಸ್ಪೇನ್
CORRECT ANSWER

(ಎ) ಫಿನ್‌ಲ್ಯಾಂಡ್‌


71. ಲಕ್ಷದ್ವೀಪ ದ್ವೀಪಗಳು ಇದರ ಉತ್ಪನ್ನವಾಗಿದೆ.
  (ಎ) ಜ್ವಾಲಾಮುಖಿ ಕ್ರಿಯೆ
  (ಬಿ) ತರಂಗ ಕ್ರಿಯೆ
  (ಸಿ) ಸಮುದ್ರ ತಳ ವಿಸ್ತರಣೆ
  (ಡಿ) ಬಂಡೆ ನಿರ್ಮಾಣ
CORRECT ANSWER

(ಡಿ) ಬಂಡೆ ನಿರ್ಮಾಣ


72. ಭಾರತದಲ್ಲಿ ಅತ್ಯಂತ ಎತ್ತರದ ಮಾರಿ ಅಲೆ ಉಳ್ಳ ನದಿ ಇದಾಗಿದೆ
  (ಎ) ಕಾವೇರಿ
  (ಬಿ) ಮಹಾನದಿ
  (ಸಿ) ಹೂಗ್ಲಿ
  (ಡಿ) ಕೃಷ್ಣ
CORRECT ANSWER

(ಸಿ) ಹೂಗ್ಲಿ


73. ‘ಮಲಗಿರುವ ಬುದ್ಧ ಪರ್ವತ’ ಈ ಜಿಲ್ಲೆಯಲ್ಲಿದೆ.
  (ಎ) ಕಲಬುರಗಿ
  (ಬಿ) ಯಾದಗಿರಿ
  (ಸಿ) ಮೈಸೂರು
  (ಡಿ) ರಾಮನಗರ
CORRECT ANSWER

(ಬಿ) ಯಾದಗಿರಿ


74. ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಇಲ್ಲಿದೆ.
  (ಎ) ಬೆಂಗಳೂರು
  (ಬಿ) ಮೈಸೂರು
  (ಸಿ) ಮಂಗಳೂರು
  (ಡಿ) ತುಮಕೂರು
CORRECT ANSWER

(ಬಿ) ಮೈಸೂರು


75. ಅಮೇರಿಕಾದ ನ್ಯೂಯಾರ್ಕ್‌ನಲ್ಲಿರುವ ವಾಲ್‌ಸ್ಟ್ರೀಟ್‌ ಯಾವ ಚಟುವಟಿಕೆಯೊಂದಿಗೆ ಸಂಸರ್ಗ ಹೊಂದಿದೆ?
  (ಎ) ಬ್ಯಾಂಕಿಂಗ್ ಮತ್ತು ಹಣಕಾಸು
  (ಬಿ) ಸಾಹಿತ್ಯಕ ಕಲೆ
  (ಸಿ) ರಕ್ಷಣೆ
  (ಡಿ) ಚಲನಚಿತ್ರಗಳು
CORRECT ANSWER

(ಎ) ಬ್ಯಾಂಕಿಂಗ್ ಮತ್ತು ಹಣಕಾಸು


76. ಕೇಂದ್ರ ಮತ್ತು ರಾಜ್ಯಗಳ ನಡುವಿನ ವಿವಾದಗಳನ್ನು ನಿರ್ಧರಿಸುವ ಭಾರತದ ಸರ್ವೋಚ್ಚ ನ್ಯಾಯಾಲಯದ ಅಧಿಕಾರವು ಇದರಡಿ ಬರುತ್ತದೆ.
  (ಎ) ಸಲಹಾತ್ಮಕ ನ್ಯಾಯಾಧಿಕಾರ
  (ಬಿ) ಅಪಲೆಟ್ ನ್ಯಾಯಾಧಿಕಾರ
  (ಸಿ) ಮೂಲ ನ್ಯಾಯಾಧಿಕಾರ
  (ಡಿ) ರಿಟ್ ನ್ಯಾಯಾಧಿಕಾರ
CORRECT ANSWER

(ಸಿ) ಮೂಲ ನ್ಯಾಯಾಧಿಕಾರ


77. ‘ಗೋಲ್ಡನ್ ಫೈಬರ್’ ಎಂದು ಇದಕ್ಕೆ ಹೇಳುತ್ತಾರೆ.
  (ಎ) ಸೆಣಬು
  (ಬಿ) ಹತ್ತಿ
  (ಸಿ) ಗೋಣಿನಾರು
  (ಡಿ) ನೈಲಾನ್
CORRECT ANSWER

(ಸಿ) ಗೋಣಿನಾರು


78. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
  1. ಚಿಕ್ಕಮಗಳೂರು ಸಕ್ಕರೆ ಕೃಷಿಗೆ ಪ್ರಸಿದ್ಧ.
  2. ಮಂಡ್ಯವು ಕಾಫಿ ತಯಾರಿಕೆಗೆ ಪ್ರದೇಶವೆಂದು ಪ್ರಸಿದ್ಧ
  ಮೇಲೆ ನೀಡಲ್ಪಟ್ಟ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ/ಆಗಿವೆ?
  (ಎ) 1 ಮಾತ್ರ
  (ಬಿ) 2 ಮಾತ್ರ
  (ಸಿ) 1 ಮತ್ತು 2 ಎರಡೂ
  (ಡಿ) 1 ಆಗಲಿ 2 ಆಗಲಿ ಅಲ್ಲ
CORRECT ANSWER

(ಡಿ) 1 ಆಗಲಿ 2 ಆಗಲಿ ಅಲ್ಲ


79. ಸಸ್ಯವೊಂದರ ಈ ಅಂಗವಿನ್ಯಾಸಗಳಲ್ಲಿ ಯಾವುದು ವಿಸರ್ಜನೆಗೆ ಕಾರಣವಾಗಿರುತ್ತದೆ?
  (ಎ) ಝೈಲಮ್
  (ಬಿ) ಬೇರು
  (ಸಿ) ಸ್ಪೋಮಟೊ
  (ಡಿ) ತೊಗಟೆ
CORRECT ANSWER

(ಸಿ) ಸ್ಪೋಮಟೊ


80. ಕಣ್ಣಿನ ಅಕ್ಷಿಪಟಲವನ್ನು ಸಾಂಪ್ರದಾಯಿಕ ಕ್ಯಾಮೆರಾವೊಂದರ ಈ ಕೆಳಗಿನ ಭಾಗಗಳಲ್ಲಿ ಯಾವುದಕ್ಕೆ ತುಲನೆ ಮಾಡಬಹುದು?
  (ಎ) ಫಿಲ್ಮ್
  (ಬಿ) ಲೆನ್ಸ್
  (ಸಿ) ಷಟರ್
  (ಡಿ) ಕವರ್
CORRECT ANSWER

(ಬಿ) ಲೆನ್ಸ್


81. ಈ ಕಾರಣದಿಂದಾಗಿ ಭೂಖಂಡಗಳು ಬೇರೆ ಬೇರೆಯಾಗಿವೆ.
  (ಎ) ಜ್ವಾಲಾಮುಖಿ ವಿಸ್ಫೋಟ
  (ಬಿ) ರಾಚನಿಕ ಕ್ರಿಯೆಗಳು
  (ಸಿ) ಕಲ್ಲುಬಂಡೆಗಳ ಮಡಚುವಿಕೆ ಮತ್ತು ತಪ್ಪುುವಿಕೆ
  (ಡಿ) ಮೇಲಿನ ಎಲ್ಲವುಗಳು
CORRECT ANSWER

(ಬಿ) ರಾಚನಿಕ ಕ್ರಿಯೆಗಳು


82. ಕೆಳಗಿನವರಲ್ಲಿ ಯಾರು ‘Half A Life’ ಪುಸ್ತಕದ ಕರ್ತೃ?
  (ಎ) ವಿ.ಎಸ್. ನೈಪಾಲ್
  (ಬಿ) ಮಾರ್ಕ್ ಟುಲಿ
  (ಸಿ) ದೀಪಕ್ ಚೋಪ್ರ
  (ಡಿ) ಚೇತನ್ ಭಗತ್
CORRECT ANSWER

(ಎ) ವಿ.ಎಸ್. ನೈಪಾಲ್


83. ಯಾರನ್ನು ‘ಲೇಡಿ ವಿತ್ ಲ್ಯಾಂಪ್’ ಎಂದು ಕರೆಯುತ್ತಾರೆ?
  (ಎ) ಸರೋಜಿನಿ ನಾಯ್ಡು
  (ಬಿ) ಜಾನ್ ಆಫ್ ಆರ್ಕ್
  (ಸಿ) ಮದರ್ ತೆರೆಸಾ
  (ಡಿ) ಫ್ಲಾರೆನ್ಸ್ ನೈಟಿಂಗೇಲ್
CORRECT ANSWER

(ಡಿ) ಫ್ಲಾರೆನ್ಸ್ ನೈಟಿಂಗೇಲ್


84. 2017ರ ಪುರುಷರ ಸಿಂಗಲ್ಸ್ ಇಂಡೋನೇಶ್ಯ ಓಪನ್ ಸೂಪರ್ ಸೀರೀಸ್ ಬ್ಯಾಡ್‌ಮಿಂಟನ್‌ ಟೂರ್ನಮೆಂಟ್‌ನ್ನು ಗೆದ್ದವರು ಯಾರು?
  (ಎ) ಪಾರುಪಳ್ಳಿ ಕಶ್ಯಪ್
  (ಬಿ) ಪ್ರಣಯ್ ಕುಮಾರ್
  (ಸಿ) ಕಿದಂಬಿ ಶ್ರೀಕಾಂತ್
  (ಡಿ) ಚೇತನ್ ಆನಂದ್
CORRECT ANSWER

(ಸಿ) ಕಿದಂಬಿ ಶ್ರೀಕಾಂತ್


85. ಫ್ರಾನ್ಸ್ ನ ಹೊಸ ಪ್ರಧಾನ ಮಂತ್ರಿಯನ್ನಾಗಿ ಯಾರನ್ನು ನೇಮಿಸಲಾಗಿದೆ?
  (ಎ) ಎಡೋರ್ಡ್ ಫಿಲಿಪ್
  (ಬಿ) ಬರ್ನಾಡ್ ಕ್ಯಾಜೆನ್ಯೂವ್
  (ಸಿ) ಮ್ಯಾನ್ಯುವೆಲ್ ವಾಲ್ಸ್
  (ಡಿ) ಮೈಕೆಲ್ ಡೆಬ್ರೆ
CORRECT ANSWER

(ಎ) ಎಡೋರ್ಡ್ ಫಿಲಿಪ್


86. ಯಾವ ನಗರದಿಂದ 14ನೆಯ ಪ್ರವಾಸಿ ಭಾರತೀಯ ದಿವಸ ಆಚರಿಸಲ್ಪಟ್ಟಿತು?
  (ಎ) ದೆಹಲಿ
  (ಬಿ) ಕೋಲ್ಕತಾ
  (ಸಿ) ಬೆಂಗಳೂರು
  (ಡಿ) ಗಾಂಧಿನಗರ
CORRECT ANSWER

(ಸಿ) ಬೆಂಗಳೂರು


87. ಈ ವರ್ಷ ರಣಜಿ ಟ್ರೋಫಿಯನ್ನು ಗೆದ್ದವರು ಯಾರು?
  (ಎ) ಗುಜರಾತ್
  (ಬಿ) ರೈಲ್ವೇಸ್
  (ಸಿ) ಮುಂಬಯಿ
  (ಡಿ) ದೆಹಲಿ
CORRECT ANSWER

(ಎ) ಗುಜರಾತ್


88. 2017ರ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅಧಿಕೃತ ಮುಖ್ಯ ಅತಿಥಿ ಯಾರಾಗಿದ್ದರು?
  (ಎ) ಚೀನಾದ ರಾಷ್ಟ್ರಾಧ್ಯಕ್ಷರು
  (ಬಿ) ಫ್ರಾನ್ಸಿನ ರಾಷ್ಟ್ರಾಧ್ಯಕ್ಷರು
  (ಸಿ) ಕತಾರ್‌ನ ರಾಜ
  (ಡಿ) ಅಬುದಾಬಿಯ ಯುವರಾಜ
CORRECT ANSWER

(ಡಿ) ಅಬುದಾಬಿಯ ಯುವರಾಜ


89. ಭಾರತದ ಯಾವ ಟೆನ್ನಿಸ್ ಆಟಗಾರ ಡಬ್ರೋಸ್ಕಿ ಜತೆಯಲ್ಲಿ 2017ರ ಫ್ರೆಂಚ್ ಓಪನ್ ಮಿಕ್ಸ್‌ಡ್‌ ಡಬಲ್ಸ್ ಗೆದ್ದರು?
  (ಎ) ಲಿಯಾಂಡರ್ ಪೇಸ್
  (ಬಿ) ರೋಹನ್ ಬೋಪಣ್ಣ
  (ಸಿ) ಮಹೇಶ್ ಭೂಪತಿ
  (ಡಿ) ಸೋಮ್‌ದೇವ್‌ ದೇವ್ ವರ್ಮನ್
CORRECT ANSWER

(ಬಿ) ರೋಹನ್ ಬೋಪಣ್ಣ


90. ಜೂನ್ 2017ರಲ್ಲಿ ಯಾವ ದೇಶದೊಂದಿಗೆ ಆರು ಅರಬ್ ದೇಶಗಳು ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡವು?
  (ಎ) ಯೆಮನ್
  (ಬಿ) ಈಜಿಪ್ಟ್
  (ಸಿ) ಲಿಬಿಯ
  (ಡಿ) ಕತಾರ್
CORRECT ANSWER

(ಡಿ) ಕತಾರ್


91. 2016ರ FIFAಕ್ಕೆ ಅತ್ಯುತ್ತಮ ಆಟಗಾರ ಎಂದು ಯಾರನ್ನು ಹೆಸರಿಸಲಾಯಿತು?
  (ಎ) ನೇಮರ್
  (ಬಿ) ಲಿಯೊನೆಲ್ ಮೆಸ್ಸಿ
  (ಸಿ) ಕ್ರಿಸ್ಟಿಯಾನೋ ರೊನಾಲ್ಡೋ
  (ಡಿ) ಲೂಯಿಸ್ ಸ್ವಾರೆಜ್
CORRECT ANSWER

(ಸಿ) ಕ್ರಿಸ್ಟಿಯಾನೋ ರೊನಾಲ್ಡೋ


92. ಕೇಂದ್ರ ಸರ್ಕಾರವು ಬ್ಯಾಂಕ್ ಖಾತೆಗಳನ್ನು ತೆರೆಯಲು ಹಾಗೂ ರೂ. _______ ಮತ್ತು ಅದಕ್ಕೂ ಅಧಿಕ ಹಣಕಾಸು ವ್ಯವಹಾರಗಳಿಗೆ ಆಧಾರನ್ನು ಕಡ್ಡಾಯಗೊಳಿಸಿದೆ.
  (ಎ) 50,000
  (ಬಿ) 75,000
  (ಸಿ) 1,00,000
  (ಡಿ) 1,50,000
CORRECT ANSWER

(ಎ) 50,000


93. ಯಾವ ಭಾರತೀಯ ವ್ಯಕ್ತಿಯನ್ನು ಫ್ರಾನ್ಸಿನ ಅತ್ಯುನ್ನತ ನಾಗರಿಕ ‘ಲೀಜನ್ ಆಫ್ ಆನರ್’ ಪ್ರಶಸ್ತಿಗೆ ಇತ್ತೀಚೆಗೆ ಆಯ್ಕೆ ಮಾಡಲಾಯಿತು?
  (ಎ) ಅಮಿತಾಬ್ ಬಚ್ಚನ್
  (ಬಿ) ಸಲ್ಮಾನ್ ಖಾನ್
  (ಸಿ) ಸೌಮಿತ್ರ ಚಟರ್ಜಿ
  (ಡಿ) ರಜನಿಕಾಂತ್
CORRECT ANSWER

(ಸಿ) ಸೌಮಿತ್ರ ಚಟರ್ಜಿ


94. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
  A. ಪೆಲಿಯೋಲಿಥಿಕ್ 1. ನೂತನ ಶಿಲಾಯುಗ
  B. ನಿಯೋಲಿಥಿಕ್ 2. ಹಳೆಯ ಶಿಲಾಯುಗ
  C. ಮೆಸೋಲಿಥಿಕ್ 3. ತಾಮ್ರ ಶಿಲಾಯುಗ
  D. ಚಾಲ್ಕೋಲಿಥಿಕ್ 4. ಮಧ್ಯ ಶಿಲಾಯುಗ
    A B C D
  (ಎ) 2 1 4 3
  (ಬಿ) 1 2 3 4
  (ಸಿ) 4 3 2 1
  (ಡಿ) 3 2 1 4
CORRECT ANSWER

(ಎ) 2 1 4 3


95. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
  A. ಮನುಸ್ಮೃತಿ 1. ಲೌಕಿಕ ವಿಷಯಗಳು
  B. ಸೂತ್ರಗಳು 2. ವೇದ ಮಂತ್ರಗಳ ಮೇಲೆ ವಿವರವಾದ ಟಿಪ್ಪಣಿಗಳು
  C. ಉಪವೇದಗಳು 3. ಸಂಪ್ರದಾಯಗಳು ಮತ್ತು ಶಾಸ್ತ್ರವಿಧಿಗಳು
  D. ಬ್ರಾಹ್ಮಣಗಳು 4. ಕಾನೂನು ಸಂಹಿತೆ
    A B C D
  (ಎ) 1 2 3 4
  (ಬಿ) 4 3 1 2
  (ಸಿ) 2 1 3 4
  (ಡಿ) 3 2 1 4
CORRECT ANSWER

(ಬಿ) 4 3 1 2


96. ‘ಮಹಾಯಾನ ಬೌದ್ಧ ಪಂಥ’ದ ಧರ್ಮ ಬೋಧನೆಗೆ ಆಯ್ದುಕೊಂಡ ಭಾಷೆ
  (ಎ) ಸಂಸ್ಕೃತ
  (ಬಿ) ಪಾಲಿ
  (ಸಿ) ಬ್ರಾಹ್ಮಿ
  (ಡಿ) ಪ್ರಾಕೃತ
CORRECT ANSWER

(ಎ) ಸಂಸ್ಕೃತ


97. ‘ವಾತಾಪಿ’ ಇವರ ರಾಜಧಾನಿಯಾಗಿತ್ತು.
  (ಎ) ಪಲ್ಲವರು
  (ಬಿ) ರಾಷ್ಟ್ರಕೂಟರು
  (ಸಿ) ಚಾಲುಕ್ಯರು
  (ಡಿ) ಶೇಣರು
CORRECT ANSWER

(ಸಿ) ಚಾಲುಕ್ಯರು


98. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
  A. ಬ್ರಹ್ಮ ಸಮಾಜ 1. ಸ್ವಾಮಿ ವಿವೇಕಾನಂದ
  B. ರಾಮಕೃಷ್ಣ ಮಿಷನ್ 2. ದಯಾನಂದ ಸರಸ್ವತಿ
  C. ಆರ್ಯ ಸಮಾಜ 3. ರಾಜಾರಾಮ್ ಮೋಹನ್ ರಾಯ್
  D. ಸತ್ಯಶೋಧಕ ಸಮಾಜ 4. ಜ್ಯೋತಿ ಬಾ ಫುಲೆ
    A B C D
  (ಎ) 1 2 3 4
  (ಬಿ) 2 1 3 4
  (ಸಿ) 3 1 2 4
  (ಡಿ) 4 1 3 2
CORRECT ANSWER

(ಸಿ) 3 1 2 4


99. ಒಂದು ವೇಳೆ ಬುಧನಿಗಿಂತ ಶುಕ್ರನು ಪ್ರಕಾಶಮಾನವಾಗಿದ್ದು, ಗುರುವಿಗಿಂತ ಬುಧನು ಪ್ರಕಾಶಮಾನವಾಗಿಲ್ಲ. ಶುಕ್ರನಿಗಿಂತ ಗುರುವು ಪ್ರಕಾಶಮಾನವಾಗಿದ್ದಾನೆ. ಆದರೆ ಪ್ಲೂೂಟೋನಿಗಿಂತ ಪ್ರಕಾಶಮಾನವಲ್ಲ. ಇವುಗಳಲ್ಲಿ ಯಾವುದು ಅತೀ ಹೆಚ್ಚು ಪ್ರಕಾಶಮಾನವಾಗಿದೆ?
  (ಎ) ಗುರು
  (ಬಿ) ಬುಧ
  (ಸಿ) ಶುಕ್ರ
  (ಡಿ) ಪ್ಲೂಟೋ
CORRECT ANSWER

(ಡಿ) ಪ್ಲೂಟೋ


100. ಗ್ರಾಮದ ಒಟ್ಟು ಜನಸಂಖ್ಯೆ 5000ದಲ್ಲಿ ಗಂಡಸರು 10 ಶೇಕಡಾದಷ್ಟು ಜಾಸ್ತಿಯಾಗಿದ್ದು, 15 ಶೇಕಡಾದಷ್ಟು ಮಹಿಳೆಯರು ಮತ್ತು ಹೀಗಾಗಿ ಒಂದು ವರ್ಷದಲ್ಲಿ ಒಟ್ಟು ಜನಸಂಖ್ಯೆ 5600 ಆಗಿದೆ. ಹಾಗಾದರೆ ಗಂಡಸರ ಸಂಖ್ಯೆ ಎಷ್ಟು?
  (ಎ) 2000
  (ಬಿ) 3000
  (ಸಿ) 4000
  (ಡಿ) 2500
CORRECT ANSWER

(ಬಿ) 3000

Related Posts

Police Constable Previous Paper 20-09-2020

Police Constable Previous Paper 18-10-2020

KSP-Police Constable (Civil) 17-11-2019 question paper

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.