Welcome to ALL IN ONE Education portal

Join us on Telegram

Join Now

Join us on Whatsapp

Join Now

Police Constable Previous Paper 30-09-2018

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ

 

1. ಈ ಕೆಳಗಿನ ಯಾವ ನದಿಯು ಕರ್ನಾಟಕದಲ್ಲಿ ಕಂಡುಬರುವುದಿಲ್ಲ?
  (ಎ) ಕಾವೇರಿ
  (ಬಿ) ನೇತ್ರಾವತಿ
  (ಸಿ) ಕಷ್ಣಾ
  (ಡಿ) ಬ್ರಹ್ಮಪುತ್ರಾ

CORRECT ANSWER

(ಡಿ) ಬ್ರಹ್ಮಪುತ್ರಾ


2. ಯಾವುದಕ್ಕಾಗಿ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯು ಕರ್ನಾಟಕ ಸರ್ಕಾರದಿಂದ ಜಾರಿಗೊಳಿಸಲ್ಪಟ್ಟಿತು?
  (ಎ) ಅಪಘಾತಕ್ಕೆ ಬಲಿಯಾದವರಿಗೆ
  (ಬಿ) ಹದ್ರೋಗಿಗಳಿಗೆ
  (ಸಿ) ಕ್ಯಾನ್ಸರ್
  (ಡಿ) ಮಧುಮೇಹ
CORRECT ANSWER

(ಎ) ಅಪಘಾತಕ್ಕೆ ಬಲಿಯಾದವರಿಗೆ


3. ಕರ್ನಾಟಕ ಉಚ್ಚ ನ್ಯಾಯಾಲಯದ ಮೊದಲ ಮುಖ್ಯನ್ಯಾಯಾಧೀಶರಾಗಿದ್ದವರು ಯಾರು?
  (ಎ) ಆರ್.ವೆಂಕಟರಾಮಯ್ಯ
  (ಬಿ) ಸುಬ್ರೊ ಕಮಲ್ ಮುಖರ್ಜಿ
  (ಸಿ) ಜಯರಾಂ
  (ಡಿ) ಕಷ್ಣಕುಮಾರ್
CORRECT ANSWER

(ಎ) ಆರ್.ವೆಂಕಟರಾಮಯ್ಯ


4. ಪ್ರಸಿದ್ಧ ಕನ್ನಡದ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ ಯಾವುದು?
  (ಎ) ಅಂಬಿಕಾತನಯದತ್ತ
  (ಬಿ) ಶ್ರೀನಿವಾಸ
  (ಸಿ) ರಾಜಶೇಖರ
  (ಡಿ) ತಿರುಮಲಾಂಬ
CORRECT ANSWER

(ಎ) ಅಂಬಿಕಾತನಯದತ್ತ


5. ಸಂವಿಧಾನದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಗಿದೆ?
  (ಎ) 09
  (ಬಿ) 10
  (ಸಿ) 11
  (ಡಿ) 12
CORRECT ANSWER

(ಸಿ) 11


6. ಪಾವತಿ ಬಾಕಿ (ಬಾಲೆನ್ಸ್ ಆಫ್ ಪೇಮೆಂಟ್ಸ್) ಇದನ್ನು ಕುರಿತಾಗಿದೆ.
  (ಎ) ಪ್ರಪಂಚದ ಉಳಿದ ರಾಷ್ಟ್ರಗಳೊಂದಿಗೆ ಬಂಡವಾಳ ವಹಿವಾಟುಗಳು
  (ಬಿ) ಪ್ರಪಂಚದ ಉಳಿದ ರಾಷ್ಟ್ರಗಳೊಂದಿಗೆ ವಾಣಿಜ್ಯ ವಹಿವಾಟುಗಳು
  (ಸಿ) ಪ್ರಪಂಚದ ಉಳಿದ ರಾಷ್ಟ್ರಗಳೊಂದಿಗೆ ಅಪ್ರತ್ಯಕ್ಷ ವಹಿವಾಟುಗಳು
  (ಡಿ) ಭಾರತದಿಂದ ಪ್ರಪಂಚದ ಉಳಿದ ರಾಷ್ಟ್ರಗಳೊಂದಿಗಿನ ಎಲ್ಲಾ ವಹಿವಾಟುಗಳ ದಾಖಲೀಕರಣ
CORRECT ANSWER

(ಡಿ) ಭಾರತದಿಂದ ಪ್ರಪಂಚದ ಉಳಿದ ರಾಷ್ಟ್ರಗಳೊಂದಿಗಿನ ಎಲ್ಲಾ ವಹಿವಾಟುಗಳ ದಾಖಲೀಕರಣ


7. ಕರ್ನಾಟಕ ಸರಕಾರದ ‘ಮಾತ ಪೂರ್ಣ’ ಯೋಜನೆಯು ಇವರ ಪೌಷ್ಟಿಕ ದರ್ಜೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
  (ಎ) ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರು
  (ಬಿ) ಟ್ರಾನ್ಸ್‌ಜೆಂಡರ್
  (ಸಿ) ವದ್ಧ ಮತ್ತು ಹಿರಿಯರು
  (ಡಿ) ಮಕ್ಕಳು
CORRECT ANSWER

(ಎ) ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರು


8. ಒಂದು ವೇಳೆ ಬೇಡಿಕೆಯ ಪ್ರಮಾಣವು ಬೆಲೆಯ ಬದಲಾವಣೆಯಲ್ಲಿ ಪ್ರತಿಕ್ರಿಯಿಸದಿದ್ದಾಗ, ಬೇಡಿಕೆಯು
  (ಎ) ನಿಖರವಾಗಿ ಸ್ಥಿತಿಸ್ಥಾಪಕತ್ವವುಳ್ಳದ್ದು
  (ಬಿ) ಕನಿಷ್ಠ ಪ್ರಮಾಣದಲ್ಲಿ ಸ್ಥಿತಿಸ್ಥಾಪಕತ್ವವುಳ್ಳದ್ದು
  (ಸಿ) ಸ್ಥಿತಿಸ್ಥಾಪಕತ್ವ ಉಳ್ಳದ್ದು
  (ಡಿ) ನಿಖರವಾಗಿ ಸ್ಥಿತಿಸ್ಥಾಪಕತ್ವವುಳ್ಳದ್ದಲ್ಲ
CORRECT ANSWER

(ಡಿ) ನಿಖರವಾಗಿ ಸ್ಥಿತಿಸ್ಥಾಪಕತ್ವವುಳ್ಳದ್ದಲ್ಲ


9. ಕರ್ನಾಟಕ ರಾಜ್ಯ ಬಜೆಟ್ 2018-19ರಲ್ಲಿ ಸೂಚಿತವಾದ ‘ಜಲಧಾರೆ’ ಯೋಜನೆ ಹೊಂದಿರುವ ಗುರಿ
  (ಎ) ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವುದು
  (ಬಿ) ನೀರಾವರಿಗೆ ನೀರು ಒದಗಿಸುವುದು
  (ಸಿ) ಕೈಗಾರಿಕಾ ಉದ್ದೇಶಗಳಿಗೆ ನೀರನ್ನು ಒದಗಿಸುವುದು
  (ಡಿ) ಮೇಲಿನ ಯಾವುದೂ ಅಲ್ಲ
CORRECT ANSWER

(ಎ) ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವುದು


10. ‘ಮುಂಜಾನೆಯ ಬೆಳ್ಳಿ’ ಮತ್ತು ‘ಸಂಜೆಯ ಬೆಳ್ಳಿ’ ಎಂದು ತಿಳಿಯಲ್ಪಡುವ ಗ್ರಹವನ್ನು ಹೆಸರಿಸಿ.
  (ಎ) ಶುಕ್ರ
  (ಬಿ) ಯುರೇನಸ್
  (ಸಿ) ನೆಪ್ಚೂನ್
  (ಡಿ) ಮಂಗಳ
CORRECT ANSWER

(ಎ) ಶುಕ್ರ


11. ಸಾಗರದಲ್ಲಿ ಸಮಾನ ಲವಣಾಂಶವನ್ನು ಹೊಂದಿದ ಸ್ಥಳಗಳು ಇದರಿಂದ ಜೋಡಿಸಲ್ಪಡುತ್ತವೆ.
  (ಎ) ಐಸೋಹೈಟ್ಸ್
  (ಬಿ) ಐಸೋಬಾರ್ಸ್
  (ಸಿ) ಐಸೋಥರ್ಮ್ಸ್
  (ಡಿ) ಐಸೋಹ್ಯಾಲೈನ್ಸ್
CORRECT ANSWER

(ಡಿ) ಐಸೋಹ್ಯಾಲೈನ್ಸ್


12. ಆದ್ರತೆಯನ್ನು ಅಳೆಯುವ ಉಪಕರಣವನ್ನು ಹೆಸರಿಸಿ.
  (ಎ) ಯುಡೋ ಮೀಟರ್
  (ಬಿ) ಹೈಗ್ರೋ ಮೀಟರ್
  (ಸಿ) ಬ್ಯಾರೋ ಮೀಟರ್
  (ಡಿ) ಎನಿಮೋ ಮೀಟರ್
CORRECT ANSWER

(ಬಿ) ಹೈಗ್ರೋ ಮೀಟರ್


13. ಚಾಲುಕ್ಯ ವಂಶದ ಸ್ಥಾಪಕ
  (ಎ) ಸಳ
  (ಬಿ) ದಂತಿವರ್ಮನ್
  (ಸಿ) ಪುಲಕೇಶಿನ್
  (ಡಿ) ಹರಿಹರ

CORRECT ANSWER

(ಸಿ) ಪುಲಕೇಶಿನ್


14. ಎರಡು ಬಿಂದುಗಳನ್ನು ಹೊಂದಿರುವ ಮುಖಕ್ಕೆ ವಿರುದ್ಧವಾಗಿ ಎಷ್ಟು ಬಿಂದುಗಳನ್ನು ಹೊಂದಿದ ಮುಖವಿದೆ?
  (ಎ) 1
  (ಬಿ) 5
  (ಸಿ) 4
  (ಡಿ) 6
CORRECT ANSWER

(ಡಿ) 6


15. ಒಂದು ವೇಳೆ DELHI ಯು 73541 ಎಂದು ಮತ್ತು CALCUTTA ಯು 82589662 ಎಂದು ಸಂಕೇತೀಕರಿಸಲ್ಪಟ್ಟರೆ, CALICUT ಎಂಬುದು ಹೇಗೆ ಸಂಕೇತಿಸಲ್ಪಡುತ್ತದೆ?
  (ಎ) 5279431
  (ಬಿ) 5978213
  (ಸಿ) 8251896
  (ಡಿ) 8543691
CORRECT ANSWER

(ಸಿ) 8251896


16. ಆದರೂ ಆತನು ____________ ಪಾಳಿಮೀರಿ (ಓವರ್ ಟೈಮ್) ಹಾಜರು ಆಗಿರುವನು ಮತ್ತು ಕೆಲವೇ ರಜಾದಿನಗಳನ್ನು ಪಡೆದಿರುವನು, ____________ ಆತನು ಆತನ ಪರಿವಾರವನ್ನು ಬೆಂಬಲಿಸಲು ಆಗುತ್ತಿಲ್ಲ.
  (ಎ) ಯಥೇಚ್ಛ, ಹೊರತಾಗಿಯೂ
  (ಬಿ) ಅಧಿಕ, ಈ ರೀತಿಯಾಗಿ
  (ಸಿ) ಹೇರಳ, ಆದಾಗ್ಯೂ
  (ಡಿ) ಪದೇ ಪದೇಯಾಗಿ, ಇನ್ನೂ
CORRECT ANSWER

(ಸಿ) ಹೇರಳ, ಆದಾಗ್ಯೂ


17. ಅಸ್ಪಷ್ಟ (ಇಲ್ಲೆಜಿಬಲ್) ಎಂದರೆ
  (ಎ) ಸರಿಯಾಗಿರು (ಫಿಟ್)
  (ಬಿ) ಕಾನೂನುಬಾಹಿರ (ಇಲ್ಲೀಗಲ್)
  (ಸಿ) ಓದಲು ಬಾರದ (ನಾಟ್ ರೀಡೇಬಲ್)
  (ಡಿ) ಚುನಾಯಿತವಾದ (ಇಲೆಕ್ಟಿವ್)
CORRECT ANSWER

(ಸಿ) ಓದಲು ಬಾರದ (ನಾಟ್ ರೀಡೇಬಲ್)


18. ಯಾವುದು ಮಾನವ ಬೆಳವಣಿಗೆ ಸೂಚಿಯ ಭಾಗವಲ್ಲ?
  (ಎ) ಜೀವನ ಮಟ್ಟ
  (ಬಿ) ಶಿಕ್ಷಣ
  (ಸಿ) ಆಯುರ್ನಿರೀಕ್ಷೆ
  (ಡಿ) ಉದ್ಯೋಗದ ಪ್ರಮಾಣ
CORRECT ANSWER

(ಡಿ) ಉದ್ಯೋಗದ ಪ್ರಮಾಣ


19. ‘ವ್ಯವಹಾರದ ಸ್ವಾಸ್ಥ್ಯ’ (Ease of Business)ವರದಿಯು ಇವರಿಂದ ಪ್ರಕಟಿಸಲ್ಪಟ್ಟಿತು.
  (ಎ) ಐಎಮ್ಎಫ್
  (ಬಿ) ಆರ್‌ಬಿಐ
  (ಸಿ) ಡಬ್ಲ್ಯೂಟಿಓ
  (ಡಿ) ವಿಶ್ವ ಬ್ಯಾಂಕ್
CORRECT ANSWER

(ಡಿ) ವಿಶ್ವ ಬ್ಯಾಂಕ್


20. ನೀತಿ (NITI)ಆಯೋಗವು ಯಾವು ಸಂಸ್ಥೆಯ ಬದಲಿಯಾಗಿದೆ?
  (ಎ) ಯೋಜನಾ ಆಯೋಗ
  (ಬಿ) ಹಣಕಾಸು ಆಯೋಗ
  (ಸಿ) ರಾಜ್ಯ ಹಣಕಾಸು ಆಯೋಗ
  (ಡಿ) ಕೇಂದ್ರ ಜಾಗತ ಆಯೋಗ
CORRECT ANSWER

(ಎ) ಯೋಜನಾ ಆಯೋಗ


21. ಒಂದು ಸಾಧಾರಣ ಪೂರೈಕೆ ವಕ್ರತೆ (Supply Curve) ಯು
  (ಎ) U-ಆಕಾರವಾಗಿದೆ
  (ಬಿ) ತಲೆಕೆಳಗಾದ (ಇನ್ವರ್ಟೆಡ್) U-ಆಕಾರವಾಗಿದೆ
  (ಸಿ) ಮೇಲ್ಮುಖವಾದ (ಅಪ್‌ವರ್ಡ್‌) ಇಳಿಜಾರು
  (ಡಿ) ಕೆಳಮುಖವಾದ (ಡೌನ್‌ವರ್ಡ್‌) ಇಳಿಜಾರು
CORRECT ANSWER

(ಸಿ) ಮೇಲ್ಮುಖವಾದ (ಅಪ್‌ವರ್ಡ್‌) ಇಳಿಜಾರು


22. GNP ಮತ್ತು GDP ಯ ಮಧ್ಯೆಯ ವ್ಯತ್ಯಾಸವು ಇದರಿಂದ ಅಳೆಯಲ್ಪಡುತ್ತದೆ.
  (ಎ) ಸವಕಳಿ (ಡಿಪ್ರಿಸಿಯೇಶನ್)
  (ಬಿ) ತೆರಿಗೆಗಳು
  (ಸಿ) ನಿವ್ವಳ ರಫ್ತು
  (ಡಿ) ವಿದೇಶದಿಂದ ನಿವ್ವಳ ದಳ್ಳಾಳಿ ಆದಾಯ (ನೆಟ್ ಫ್ಯಾಕ್ಟರ್ ಇನ್‌ಕಮ್‌)
CORRECT ANSWER

(ಡಿ) ವಿದೇಶದಿಂದ ನಿವ್ವಳ ದಳ್ಳಾಳಿ ಆದಾಯ (ನೆಟ್ ಫ್ಯಾಕ್ಟರ್ ಇನ್‌ಕಮ್‌)


23. ಮಳೆ ಸುರಿಯುವಿಕೆಯನ್ನು ಅಳತೆ ಮಾಡುವ ಉಪಕರಣಕ್ಕೆ ಹೀಗೆನ್ನುತ್ತಾರೆ.
  (ಎ) ರೈನ್‌ಗೇಜ್‌
  (ಬಿ) ರೈನ್ ಥರ್ಮೋಮೀಟರ್
  (ಸಿ) ರೈನ್ ವೆಸೆಲ್
  (ಡಿ) ರೈನ್ ಬಕೆಟ್
CORRECT ANSWER

(ಎ) ರೈನ್‌ಗೇಜ್‌


24. ತ್ರಾಸದಾಯಕವಾದ ವ್ಯಾಯಾಮ ಮಾಡುವಾಗ ನಮ್ಮ ಕಾಲಿನಲ್ಲಿ ಸ್ನಾಯು ಸೆಳೆತವು ಇದರ ಶೇಖರಣೆಯಿಂದ ಉಂಟಾಗುತ್ತದೆ.
  (ಎ) ಇಂಗಾಲದ ಡೈಆಕ್ಸೈಡ್
  (ಬಿ) ಲ್ಯಾಕ್ಟಿಕ್ ಆಮ್ಲ
  (ಸಿ) ಆಲ್ಕೋಹಾಲ್
  (ಡಿ) ನೀರು
CORRECT ANSWER

(ಬಿ) ಲ್ಯಾಕ್ಟಿಕ್ ಆಮ್ಲ


25. ಕೆಂಪು ರಕ್ತ ಕಣಗಳು ಹೊಂದಿರುವ ಕೆಂಪು ವರ್ಣದ್ರವ್ಯವನ್ನು ಹೀಗೆಂದು ಕರೆಯುತ್ತಾರೆ.
  (ಎ) ಹಿಮೋಗ್ಲೋಬಿನ್
  (ಬಿ) ಕಬ್ಬಿಣ
  (ಸಿ) ಮ್ಯಾಗ್ನೀಸಿಯಂ
  (ಡಿ) ಕ್ಯಾಲ್ಸಿಯಂ
CORRECT ANSWER

(ಎ) ಹಿಮೋಗ್ಲೋಬಿನ್


26. ಹಕ್ಕಿಗಳ ಹಿಕ್ಕೆಯಲ್ಲಿ ಸಮದ್ಧವಾಗಿರುವುದು
  (ಎ) ಯೂರಿಕ್ ಆಮ್ಲ
  (ಬಿ) ಅಮೋನಿಯಾ
  (ಸಿ) ಕ್ಯಾಲ್ಸಿಯಂ
  (ಡಿ) ಲ್ಯಾಕ್ಟಿಕ್ ಆಮ್ಲ
CORRECT ANSWER

(ಎ) ಯೂರಿಕ್ ಆಮ್ಲ


27. ಗಂಡು ಹಾಗೂ ಹೆಣ್ಣು ಲಿಂಗಾಣುಗಳ ಸಂಯೋಜನೆಯ ಪ್ರಕ್ರಿಯೆಯನ್ನು ಹೀಗೆ ಕರೆಯುತ್ತಾರೆ.
  (ಎ) ಫಲೀಕರಣ (ಫರ್ಟಿಲೈಸೇಷನ್)
  (ಬಿ) ಪರಾಗಸ್ಪರ್ಶ (ಪಾಲಿನೇಷನ್)
  (ಸಿ) ಪುನರುತ್ಪತ್ತಿ (ರಿಪ್ರೊಡಕ್ಷನ್)
  (ಡಿ) ಬೀಜ ರೂಪಣೆ (ಸೀಡ್ ಫಾರ್ಮೇಷನ್)
CORRECT ANSWER

(ಎ) ಫಲೀಕರಣ (ಫರ್ಟಿಲೈಸೇಷನ್)


28. ಇನ್‌ಪುಟ್‌ ಡಿವೈಸ್‌ಗಳು ಇದನ್ನು ಒಳಗೊಂಡಿರುವುದಿಲ್ಲ,
  (ಎ) ಮೌಸ್
  (ಬಿ) ಸ್ಕ್ಯಾನರ್‌ಗಳು
  (ಸಿ) ಜಾಯ್‌ಸ್ಟಿಕ್‌ಗಳು
  (ಡಿ) ಕ್ಯಾಟ್
CORRECT ANSWER

(ಡಿ) ಕ್ಯಾಟ್


29. ವೀಡಿಯೋ ಇನ್‌ಪುಟ್‌ ಡಿವೈಸ್‌ಗಳ ವಿಧಗಳು ಒಳಗೊಂಡಿರದಿರುವುದು
  (ಎ) ಡಿಜಿಟಲ್ ಕ್ಯಾಮರಾ
  (ಬಿ) ಡಿಜಿಟಲ್ ಕ್ಯಾಮ್‌ಕಾರ್ಡರ್‌
  (ಸಿ) ಪೋರ್ಟೇಬಲ್ ಮೀಡಿಯಾ ಪ್ಲೇಯರ್
  (ಡಿ) ಜಾಯ್‌ಸ್ಟಿಕ್‌
CORRECT ANSWER

(ಡಿ) ಜಾಯ್‌ಸ್ಟಿಕ್‌


30. ಕೀಲಿಮಣಿಯನ್ನು (ಕೀಬೋರ್ಡ್) ಕಂಡುಹಿಡಿದವರು
  (ಎ) ಕ್ರಿಸ್ಟೋಫರ್ ಎಲ್.ಶೋಲ್ಸ್
  (ಬಿ) ಡಾರ್ವಿನ್
  (ಸಿ) ಐನ್ಸ್ಟೀನ್
  (ಡಿ) ಹಾರ್ಲೆ
CORRECT ANSWER

(ಎ) ಕ್ರಿಸ್ಟೋಫರ್ ಎಲ್.ಶೋಲ್ಸ್


31. ಇನ್‌ಫೋಸಿಸ್‌ನ ಮುಖ್ಯ ಕಚೇರಿ ಇರುವುದು ಇಲ್ಲಿ
  (ಎ) ಸಂಯುಕ್ತ ಸಂಸ್ಥಾನ
  (ಬಿ) ಲಂಡನ್
  (ಸಿ) ಭಾರತ
  (ಡಿ) ರಷ್ಯಾ
CORRECT ANSWER

(ಸಿ) ಭಾರತ


32. 2G, 3G, 4G ಯಲ್ಲಿ G ಯು
  (ಎ) ಗ್ಯಾಪ್
  (ಬಿ) ಜನರೇಷನ್
  (ಸಿ) ಗೇಟ್
  (ಡಿ) ಗೇಮ್
CORRECT ANSWER

(ಬಿ) ಜನರೇಷನ್


33. ಈ ಕೆಳಗಿನ ಯಾವುದು ಮೊಬೈಲ್ ಪೋನ್‌ನ ತಯಾರಕರಲ್ಲ?
  (ಎ) ಕಾರ್‌ಬೋನ್ಸ್‌
  (ಬಿ) ಸ್ಯಾಮ್‌ಸಂಗ್‌
  (ಸಿ) ನೋಕಿಯಾ
  (ಡಿ) ಟ್ವಿಂಕಲ್
CORRECT ANSWER

(ಡಿ) ಟ್ವಿಂಕಲ್


34. ಥರ್ಮೋಮೀಟರಿನ ಪರಿಮಿತಿಯು
  (ಎ) 30°C ನಿಂದ 35°C
  (ಬಿ) 35°C ನಿಂದ 42°C
  (ಸಿ) 55°Cನಿಂದ 60°C
  (ಡಿ) 45°C ನಿಂದ 50°C
CORRECT ANSWER

(ಬಿ) 35°C ನಿಂದ 42°C


35. ಯಾವ ವಸ್ತುಗಳು ಸುಲಭವಾಗಿ ತಮ್ಮ ಮೂಲಕ ಶಾಖವನ್ನು ವರ್ಗಾಯಿಸಲು ಅವಕಾಶ ಕೊಡುವುದಿಲ್ಲವೋ ಅವುಗಳನ್ನು ಹೀಗೆ ಕರೆಯುತ್ತಾರೆ.
  (ಎ) ವಾಹಕಗಳು(ಕಂಡಕ್ಟರ್ಸ್)
  (ಬಿ) ಚಾಲಕಗಳು (ಡ್ರೈವರ್ಸ್)
  (ಸಿ) ಕ್ಲೀನರ್‌ಗಳು
  (ಡಿ) ನಿರೋಧಕಗಳು (ಇನ್‌ಸುಲೇಟರ್)
CORRECT ANSWER

(ಡಿ) ನಿರೋಧಕಗಳು (ಇನ್‌ಸುಲೇಟರ್)


36. ಸಮಯದ ಮೂಲಘಟಕವು
  (ಎ) ಗಂಟೆ
  (ಬಿ) ನಿಮಿಷ
  (ಸಿ) ವರ್ಷ
  (ಡಿ) ಸೆಕೆಂಡು
CORRECT ANSWER

(ಡಿ) ಸೆಕೆಂಡು


37. ಪರದೆಯ ಮೇಲೆ ಪಡೆಯುವ ಪ್ರತಿಕತಿಗಳನ್ನು / ಆಕಾರಗಳನ್ನು ಹೀಗೆಂದು ಕರೆಯುತ್ತಾರೆ.
  (ಎ) ವಾಸ್ತವ ಪ್ರತಿಕತಿ
  (ಬಿ) ಸಹಜವಾದ ಪ್ರತಿಕತಿ
  (ಸಿ) ದೋಪಪೂರಿತ ಪ್ರತಿಕತಿ
  (ಡಿ) ಅಸಹಜವಾದ ಪ್ರತಿಕತಿ
CORRECT ANSWER

(ಬಿ) ಸಹಜವಾದ ಪ್ರತಿಕತಿ


38. ಬಿಳಿಯ ಬೆಳಕು ______ ಬಣ್ಣಗಳಿಂದ ರಚಿತವಾಗಿದೆ.
  (ಎ) 9
  (ಬಿ) 8
  (ಸಿ) 7
  (ಡಿ) 6
CORRECT ANSWER

(ಸಿ) 7


39. ಪ್ರವಾಸೋದ್ಯಮ ಸಚಿವಾಲಯದ ‘ಪರಂಪರಾಗತ ಪ್ರಾಪ್ತಿಯ ದತ್ತು ಯೋಜನೆ’ (ಅಡಾಪ್ಟ್ ಎ ಹೆರಿಟೇಜ್ ಪ್ರೊಜೆಕ್ಟ್)ಯ ಕೆಳಗೆ ಯಾವ ಸಂಯುಕ್ತ ಸಂಸ್ಥೆಯು ಐತಿಹಾಸಿಕ ‘ಕೆಂಪುಕೋಟೆ’ಯನ್ನು ದತ್ತು ಪಡೆದಿದೆ?
  (ಎ) GMR ಸ್ಟೋರ್ಟ್ಸ್
  (ಬಿ) ಇಂಡಿಗೋ ಏರ್‌ಲೈನ್ಸ್‌
  (ಸಿ) ದಾಲ್ಮಿಯಾ ಭಾರತ್ ಲಿಮಿಟೆಡ್
  (ಡಿ) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
CORRECT ANSWER

(ಸಿ) ದಾಲ್ಮಿಯಾ ಭಾರತ್ ಲಿಮಿಟೆಡ್


40. ಸೂರ್ಯ ಗ್ರಹಣವು ಸಂಭವಿಸುವುದು
  (ಎ) ಸೂರ್ಯನ ನೆರಳು ಚಂದ್ರನ ಮೇಲೆ ಬಿದ್ದಾಗ
  (ಬಿ) ಭೂಮಿಯ ನೆರಳು ಸೂರ್ಯನ ಮೇಲೆ ಬಿದ್ದಾಗ
  (ಸಿ) ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ
  (ಡಿ) ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ
CORRECT ANSWER

(ಸಿ) ಚಂದ್ರನ ನೆರಳು ಭೂಮಿಯ ಮೇಲೆ ಬಿದ್ದಾಗ


41. ಫಿನ್‌ಲ್ಯಾಂಡಿನಲ್ಲಿ ನಡೆದ ವಿಶ್ವ U-20 ಚಾಂಪಿಯನ್ ಶಿಪ್ ಪಂದ್ಯದಲ್ಲಿ ಇತ್ತೀಚೆಗೆ ಚಿನ್ನ ಗೆದ್ದ ಹಿಮಾದಾಸ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದವರು?
  (ಎ) ಕುಸ್ತಿ
  (ಬಿ) ಟ್ರ್ಯಾಕ್ ಅಥ್ಲೀಟ್
  (ಸಿ) ಬಾಕ್ಸಿಂಗ್
  (ಡಿ) ಬ್ಯಾಡ್‌ಮಿಂಟನ್
CORRECT ANSWER

(ಬಿ) ಟ್ರ್ಯಾಕ್ ಅಥ್ಲೀಟ್


42. ಯಾವ ರಾಷ್ಟ್ರದಲ್ಲಿ 2018, ಫೀಫಾ ವಿಶ್ವಕಪ್ ಪಂದ್ಯ ನಡೆಯಿತು?
  (ಎ) ರಷ್ಯಾ
  (ಬಿ) ಬ್ರೆಜಿಲ್
  (ಸಿ) ಅರ್ಜೆಂಟೈನಾ
  (ಡಿ) ಜರ್ಮನಿ
CORRECT ANSWER

(ಎ) ರಷ್ಯಾ


43. ‘’BSF’’ ನ ವಿಸ್ತೃತರೂಪ ಯಾವುದು?
  (ಎ) ಭಾರತ್ ಸ್ಟ್ರಾಟಿಜಿಕ್ ಫೋರ್ಸ್
  (ಬಿ) ಬಾರ್ಡರ್‌ಲ್ಯಾಂಡ್‌ ಸೆಕ್ಯುರಿಟಿ ಫೋರ್ಸ್
  (ಸಿ) ಬಾರ್ಡರ್ ಸೆಕ್ಯುರಿಟಿ ಫೋರ್ಸ್
  (ಡಿ) ಭಾರತ್ ಸ್ಟೇಟ್ ಫೋರ್ಸ್
CORRECT ANSWER

(ಸಿ) ಬಾರ್ಡರ್ ಸೆಕ್ಯುರಿಟಿ ಫೋರ್ಸ್


44. ಬುದ್ಧನಿಂದ ಪ್ರತಿಪಾದಿತವಾದ ‘‘ಆರ್ಯ ಸತ್ಯ’’ ಅಥವಾ ‘‘ಉದಾತ್ತ ಸತ್ಯಗಳು’’
  (ಎ) 3 ಸತ್ಯಗಳು
  (ಬಿ) 4 ಸತ್ಯಗಳು
  (ಸಿ) 5 ಸತ್ಯಗಳು
  (ಡಿ) 6 ಸತ್ಯಗಳು
CORRECT ANSWER

(ಬಿ) 4 ಸತ್ಯಗಳು


45. ಸಿಂಧೂ ಕಣಿವೆ ನಾಗರಿಕತೆಯ ಯಾವ ನಿವೇಶನದಲ್ಲಿ ‘‘ಬಹತ್ತಾದ ಸ್ನಾನದ ತೊಟ್ಟಿ’’ ಯು ಪತ್ತೆಯಾಗಿದೆ?
  (ಎ) ಧೋಲವಿರಾ
  (ಬಿ) ಲೋಥಾಲ್
  (ಸಿ) ಕಾಲಿಬ್ಯಂಗನ್
  (ಡಿ) ಮೊಹೆಂಜೋ-ದಾರೋ
CORRECT ANSWER

(ಡಿ) ಮೊಹೆಂಜೋ-ದಾರೋ


46. ಭಾರತದಲ್ಲಿ ‘ಇಕ್ತದಾರಿ’ ಪದ್ಧತಿಯನ್ನು ಯಾರು ಪರಿಚಯಿಸಿದರು?
  (ಎ) ಅಲ್ಲಾ-ಉದ್-ದಿನ್ ಖಿಲ್ಜ್
  (ಬಿ) ಇಲ್ತುಮಿಶ್
  (ಸಿ) ಮಹಮ್ಮದ್ ಬಿನ್ ತುಘಲಕ್
  (ಡಿ) ಅಕ್ಬರ್
CORRECT ANSWER

(ಬಿ) ಇಲ್ತುಮಿಶ್


47. ‘ಬ್ರಹ್ಮ ಸಮಾಜ’ ಸ್ಥಾಪಿಸಿದವರು
  (ಎ) ಸ್ವಾಮಿ ವಿವೇಕಾನಂದ
  (ಬಿ) ಆದಿ ಶಂಕರಾಚಾರ್ಯ
  (ಸಿ) ರಾಜಾರಾಮ್ ಮೋಹನ್ ರಾಯ್
  (ಡಿ) ಸ್ವಾಮಿ ದಯಾನಂದ ಸರಸ್ವತಿ
CORRECT ANSWER

(ಸಿ) ರಾಜಾರಾಮ್ ಮೋಹನ್ ರಾಯ್


48. ‘‘ವಾಂಡಿವಾಶ್ ಯುದ್ಧ’’ ವು ಇವರ ಮಧ್ಯೆ ನಡೆಯಿತು.
  (ಎ) ಇಂಗ್ಲಿಷರು ಮತ್ತು ಫ್ರೆಂಚರು
  (ಬಿ) ಇಂಗ್ಲಿಷರು ಮತ್ತು ಪೋರ್ಚುಗೀಸರು
  (ಸಿ) ಇಂಗ್ಲಿಷರು ಮತ್ತು ಸಿರಾಜ್-ಉದ್-ದೌಲ್
  (ಡಿ) ಇಂಗ್ಲಿಷರು ಮತ್ತು ಮೊಗಲರು
CORRECT ANSWER

(ಎ) ಇಂಗ್ಲಿಷರು ಮತ್ತು ಫ್ರೆಂಚರು


49. ‘ಜಯ ಭಾರತ ಜನನಿಯ ತನುಜಾತೆ’ ಬರೆದಿರುವುದು ಯಾವ ಪ್ರಸಿದ್ಧ ಕನ್ನಡದ ಕವಿ?
  (ಎ) ಕುವೆಂಪು
  (ಬಿ) ದ.ರಾ.ಬೇಂದ್ರೆ
  (ಸಿ) ಗಿರೀಶ್ ಕಾರ್ನಾಡ್
  (ಡಿ) ಅಲ್ಲಮಪ್ರಭು
CORRECT ANSWER

(ಎ) ಕುವೆಂಪು


50. ಕರ್ನಾಟಕದ ಯಾವ ನಗರವು ಜೈನರ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ?
  (ಎ) ಬೇಲೂರು
  (ಬಿ) ಶ್ರವಣಬೆಳಗೊಳ
  (ಸಿ) ಶೋರಾಪುರ್
  (ಡಿ) ತುಮಕೂರು
CORRECT ANSWER

(ಬಿ) ಶ್ರವಣಬೆಳಗೊಳ


51. ‘ರಂಗನ ಮದುವೆ’ ಕತಿ ಬರೆದವರು
  (ಎ) ಯು.ಆರ್.ಅನಂತಮೂರ್ತಿ
  (ಬಿ) ಎಂ.ವಿ.ಅಯ್ಯಂಗಾರ್
  (ಸಿ) ಡಿ.ವಿ.ಗುಂಡಪ್ಪ
  (ಡಿ) ಗಿರೀಶ್ ಕಾರ್ನಾಡ್
CORRECT ANSWER

(ಬಿ) ಎಂ.ವಿ.ಅಯ್ಯಂಗಾರ್


52. ಐತಿಹಾಸಿಕ ಕಾದಂಬರಿ ‘ಚಿಕವೀರ ರಾಜೇಂದ್ರ’ ಇಲ್ಲಿಯ ಕೊನೆಯ ಅರಸನ ಕುರಿತಾಗಿದೆ
  (ಎ) ಕೊಡಗು
  (ಬಿ) ಮೈಸೂರು
  (ಸಿ) ವಿಜಯನಗರ
  (ಡಿ) ಬಳ್ಳಾರಿ
CORRECT ANSWER

(ಎ) ಕೊಡಗು


53. ‘ಪಂಪ ಭಾರತ’ವು ಹೀಗೂ ಪರಿಚಿತವಾಗಿದೆ
  (ಎ) ವಿಜಯೇಂದ್ರ
  (ಬಿ) ವಿಕ್ರಮಾರ್ಜುನ ವಿಜಯ
  (ಸಿ) ಕೇವಲ ಬೋಧ್
  (ಡಿ) ಪಡುವಾರಳ್ಳಿ ಪಾಂಡವರು
CORRECT ANSWER

(ಬಿ) ವಿಕ್ರಮಾರ್ಜುನ ವಿಜಯ


54. ಯಾವ ITಕಂಪೆನಿಯ ಮುಖ್ಯ ಕಚೇರಿಯು ಬೆಂಗಳೂರಿನಲ್ಲಿ ಇಲ್ಲ?
  (ಎ) ವಿಪ್ರೋ
  (ಬಿ) ಮೈನ್ಡ್ ಟ್ರೀ
  (ಸಿ) TCS
  (ಡಿ) ಇನ್‌ಫೋಸಿಸ್
CORRECT ANSWER

(ಸಿ) TCS


55. ಭಾರತದ ಸಂವಿಧಾನವು ಜಾರಿಗೆ ಬಂದದ್ದು
  (ಎ) 1950
  (ಬಿ) 1955
  (ಸಿ) 1952
  (ಡಿ) 1953
CORRECT ANSWER

(ಎ) 1950


56. ಕರ್ನಾಟಕ ರಚನೆಯಾದದ್ದು
  (ಎ) ಆಗಸ್ಟ್ 1ರಂದು
  (ಬಿ) ಡಿಸೆಂಬರ್ 1ರಂದು
  (ಸಿ) ಜನವರಿ 1ರಂದು
  (ಡಿ) ನವೆಂಬರ್ 1ರಂದು
CORRECT ANSWER

(ಡಿ) ನವೆಂಬರ್ 1ರಂದು


57. ಪಶ್ಚಿಮದಲ್ಲಿ ಕರ್ನಾಟಕವು ಹೊಂದಿರುವ ಗಡಿ ಪ್ರದೇಶ
  (ಎ) ಗೋವಾ
  (ಬಿ) ಅರಬ್ಬೀ ಸಮುದ್ರ
  (ಸಿ) ಆಂಧ್ರ ಪ್ರದೇಶ
  (ಡಿ) ಮಹಾರಾಷ್ಟ್ರ
CORRECT ANSWER

(ಬಿ) ಅರಬ್ಬೀ ಸಮುದ್ರ


58. ಜಸ್ಟೀಸ್ ಎನ್.ವೆಂಕಟಾಚಲ ಲೋಕಾಯುಕ್ತರಾಗಿ ಕರ್ನಾಟಕದಲ್ಲಿ ನೇಮಕವಾದದ್ದು ____________ ರಲ್ಲಿ.
  (ಎ) 2010
  (ಬಿ) 2001
  (ಸಿ) 2002
  (ಡಿ) 2003
CORRECT ANSWER

(ಬಿ) 2001


59. ಸಂವಿಧಾನದ ಯಾವ ಪರಿಚ್ಛೇದದ ಕೆಳಗೆ ಭಾರತ ರಾಷ್ಟ್ರಪತಿಯವರಿಗೆ ಕ್ಷಮಾದಾನದ
ಅಧಿಕಾರವನ್ನು ನೀಡಲಾಗಿದೆ?
  (ಎ) ಪರಿಚ್ಛೇದ 72
  (ಬಿ) ಪರಿಚ್ಛೇದ 161
  (ಸಿ) ಪರಿಚ್ಛೇದ 326
  (ಡಿ) ಪರಿಚ್ಛೇದ 377
CORRECT ANSWER

(ಎ) ಪರಿಚ್ಛೇದ 72


60. ಭಾರತೀಯ ಪಾರ್ಲಿಮೆಂಟಿನ ಪದ್ಧತಿಯಲ್ಲಿ ಕೇಳಲ್ಪಡುವ ಈ ಕೆಳಗಿನ ಪ್ರಶ್ನೆಗಳ ವಿಧಗಳಲ್ಲಿ ಯಾವುದು ಬಾಯ್ದೆರೆ ಉತ್ತರದ ಅಗತ್ಯವನ್ನು ಹೊಂದಿದೆ?
  (ಎ) ಚುಕ್ಕೆ ಅಂಕಿತವಲ್ಲದ (Unstarred)ಪ್ರಶ್ನೆಗಳು
  (ಬಿ) ಚುಕ್ಕೆ ಅಂಕಿತ (Starred)ಪ್ರಶ್ನೆಗಳು
  (ಸಿ) (ಎ) ಮತ್ತು (ಬಿ) ಎರಡೂ
  (ಡಿ) ಮೇಲಿನ ಯಾವುದೂ ಅಲ್ಲ
CORRECT ANSWER

(ಬಿ) ಚುಕ್ಕೆ ಅಂಕಿತ (Starred)ಪ್ರಶ್ನೆಗಳು


61. ಭಾರತದ ಚುನಾವಣಾ ಆಯೋಗವು ಇವುಗಳಿಗೆ ಚುನಾವಣೆಯನ್ನು ಮಾಡುವುದಿಲ್ಲ?
  (ಎ) ನಿಗಮಗಳು, ನಗರ ಸಭೆಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳು
  (ಬಿ) ರಾಷ್ಟ್ರಪತಿಯ ಮತ್ತು ಉಪರಾಷ್ಟ್ರಪತಿಯ ಚುನಾವಣೆಗಳ ಸಭೆ
  (ಸಿ) ಲೋಕಸಭಾ ಚುನಾವಣೆಗಳು
  (ಡಿ) ರಾಜ್ಯ ಶಾಸನಸಭೆಗಳ ಚುನಾವಣೆಗಳು
CORRECT ANSWER

(ಎ) ನಿಗಮಗಳು, ನಗರ ಸಭೆಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳು


62. ಕರ್ನಾಟಕ ರಾಜ್ಯ ವಿಧಾನಸಭೆಯ ಈಗಿನ ಸಭಾಧ್ಯಕ್ಷರು ಯಾರು?
  (ಎ) ಸಿದ್ದರಾಮಯ್ಯ
  (ಬಿ) ಕೆ.ಆರ್.ರಮೇಶ್ ಕುಮಾರ್
  (ಸಿ) ವಿ.ಸುನೀಲ್ ಕುಮಾರ್
  (ಡಿ) ಡಿ.ಕೆ.ಶಿವಕುಮಾರ್
CORRECT ANSWER

(ಬಿ) ಕೆ.ಆರ್.ರಮೇಶ್ ಕುಮಾರ್


63. ಕಾನೂನಿನ ಮುಖ್ಯ ಪ್ರಶ್ನೆಗಳಲ್ಲಿ ಈ ಕೆಳಗಿನ ಯಾರು ಸರ್ವೋಚ್ಚ ನ್ಯಾಯಾಲಯದ ಸಲಹಾತ್ಮಕ ಅಭಿಪ್ರಾಯವನ್ನು ಪಡೆಯುತ್ತಾರೆ?
  (ಎ) ಪ್ರಧಾನ ಮಂತ್ರಿ
  (ಬಿ) ರಾಷ್ಟ್ರಪತಿ
  (ಸಿ) ರಾಜ್ಯಪಾಲ
  (ಡಿ) ಯಾವುದೇ ರಾಜ್ಯದ ಮುಖ್ಯಮಂತ್ರಿ
CORRECT ANSWER

(ಬಿ) ರಾಷ್ಟ್ರಪತಿ


64. ಕೇಂದ್ರಸರ್ಕಾರವು ಎಲ್ಲಾ ಗ್ರಾಮ ಪಂಚಾಯತುಗಳಿಗೆ ಬ್ರಾಡ್‌ಬ್ಯಾಂಡ್‌ ಕನೆಕ್ಟಿವಿಟಿ ಒದಗಿಸುವ ಗುರಿ ಹೊಂದಿದ್ದು, ಇದು ಯಾವ ಕಾರ್ಯ ಯೋಜನೆಯ ಕೆಳಗೆ ಬರುತ್ತದೆ ಎಂದು ಹೆಸರಿಸಿ.
  (ಎ) ಪ್ರಧಾನಮಂತ್ರಿ ಸ್ವಜಲ್ ಯೋಜನಾ
  (ಬಿ) ಪ್ರಧಾನಮಂತ್ರಿ ಜನ್‌ಧನ್‌ ಯೋಜನಾ
  (ಸಿ) ಭಾರತ್ ನೆಟ್
  (ಡಿ) ಭೀಮ್ (BHIM)
CORRECT ANSWER

(ಸಿ) ಭಾರತ್ ನೆಟ್


65. ‘ಮಾಮ್’ ಚಿತ್ರದಲ್ಲಿನ ಪಾತ್ರಕ್ಕಾಗಿ ಇತ್ತೀಚೆಗೆ ಮರಣೋತ್ತರವಾಗಿ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ- ಅತ್ಯುತ್ತಮ ನಟಿ 2017ನ್ನು ಪಡೆದ ನಟಿಯನ್ನು ಹೆಸರಿಸಿ.
  (ಎ) ಶ್ರೀದೇವಿ
  (ಬಿ) ರೀಮಾ ಲಾಗೂ
  (ಸಿ) ಸೋನಿಕಾ ಚೌಹಾನ್
  (ಡಿ) ರೇಖಾ ಸಿಂಧು
CORRECT ANSWER

(ಎ) ಶ್ರೀದೇವಿ


66. ವಿಮೆನ್ಸ್ ಸಿಂಗಲ್ಸ್ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಮೆಂಟ್ 2018, ಪಂದ್ಯವನ್ನು ಗೆದ್ದವರು ಯಾರು?
  (ಎ) ಸಿಮೋನಾ ಹಾಲೆಪ್
  (ಬಿ) ಗಾರ್‌ಬೈನ್‌ ಮುಗುರುಜಾ
  (ಸಿ) ಏಂಜೆಲಿಕ್ ಕೆರ್‌ಬರ್‌
  (ಡಿ) ಸೆರೆನಾ ವಿಲಿಯಮ್ಸ್
CORRECT ANSWER

(ಎ) ಸಿಮೋನಾ ಹಾಲೆಪ್


67. ಇತ್ತೀಚೆಗೆ ಸುದ್ದಿಯಲ್ಲಿರುವ ‘ರಾಣಿ ರಾಸ್‌ಮೋನಿ’ ಯು ಒಂದು
  (ಎ) ಕ್ಷಿಪ್ರ ಕಾವಲು ನೌಕೆ
  (ಬಿ) UAV
  (ಸಿ) ಫಿರಂಗಿದಳದ ತೋಪು
  (ಡಿ) ಚಿಮ್ಮುವ ಕ್ಷಿಪಣಿ
CORRECT ANSWER

(ಎ) ಕ್ಷಿಪ್ರ ಕಾವಲು ನೌಕೆ


68. AB. DEF, HIJK, ?, STUVWX
  (ಎ) MNOPQ
  (ಬಿ) LMNOP
  (ಸಿ) LMNO
  (ಡಿ) QRSTU
CORRECT ANSWER

(ಎ) MNOPQ


69. 4,3,4,9,32, _______
  (ಎ) 125
  (ಬಿ) 135
  (ಸಿ) 145
  (ಡಿ) 155
CORRECT ANSWER

(ಡಿ) 155


70. ಇಂದು ವರುಣನ ಜನ್ಮದಿನ. ಇಂದಿನಿಂದ ಒಂದು ವರ್ಷಕ್ಕೆ ಆತನಿಗೆ 12 ವರ್ಷ. ಹಿಂದೆ ಇದ್ದದ್ದಕ್ಕೆ ಎರಡರಷ್ಟು ಪ್ರಾಯ. ಹಾಗಾದರೆ ಇಂದು ವರುಣನ ಪ್ರಾಯವೆಷ್ಟು?
  (ಎ) 22
  (ಬಿ) 25
  (ಸಿ) 27
  (ಡಿ) 20
CORRECT ANSWER

(ಬಿ) 25


71. ಪ್ರಾಣಿಗಳು
  (ಎ) ಸ್ವಯಂ ಪೋಷಕಗಳು (ಅಟೋಟ್ರೋಪ್ಸ್)
  (ಬಿ) ಪರಪೋಷಕಗಳು (ಹೆಟಿರೋಟ್ರೋಪ್ಸ್)
  (ಸಿ) ಡಿಟಿರೋಟ್ರೋಪ್ಸ್
  (ಡಿ) ಮೆಟೀರಿಯೋ ಟ್ರೋಪ್ಸ್
CORRECT ANSWER

(ಬಿ) ಪರಪೋಷಕಗಳು (ಹೆಟಿರೋಟ್ರೋಪ್ಸ್)


72. ಕೀಟ ಭಕ್ಷಕ ಸಸ್ಯಗಳನ್ನು ಹೀಗೆಂದು ಕರೆಯುತ್ತಾರೆ.
  (ಎ) ಆ್ಯನಿಮಲೋವೋರಸ್ ಸಸ್ಯಗಳು
  (ಬಿ) ಹೆಟಿರೋವೋರಸ್ ಸಸ್ಯಗಳು
  (ಸಿ) ಕೀಟಾಹಾರಿ ಸಸ್ಯಗಳು (ಇನ್‌ಸೆಕ್ಟಿವೋರಸ್)
  (ಡಿ) ಮಾಂಸಾಹಾರಿ ಸಸ್ಯಗಳು (ಕಾರ್ನಿವೋರಸ್)
CORRECT ANSWER

(ಸಿ) ಕೀಟಾಹಾರಿ ಸಸ್ಯಗಳು (ಇನ್‌ಸೆಕ್ಟಿವೋರಸ್)


73. ಯಾವುದು ಯುನೆಸ್ಕೋ (UNESCO) ವಿಶ್ವ ಪರಂಪರಾ ತಾಣ?
  (ಎ) ಇಟಗಿ
  (ಬಿ) ಹಂಪಿ
  (ಸಿ) ಶ್ರವಣಬೆಳಗೊಳ
  (ಡಿ) ಮೈಸೂರು
CORRECT ANSWER

(ಬಿ) ಹಂಪಿ


74. ಕರ್ನಾಟಕದಲ್ಲಿ ಅತ್ಯಂತ ಎತ್ತರದ ಸ್ಥಳ
  (ಎ) ಮುಳ್ಳಯ್ಯನಗಿರಿ ಬೆಟ್ಟಗಳು
  (ಬಿ) ನಂದಿ ಬೆಟ್ಟಗಳು
  (ಸಿ) ಬಿಳಿಗಿರಿ ಬೆಟ್ಟಗಳು
  (ಡಿ) ಯಾಣ
CORRECT ANSWER

(ಎ) ಮುಳ್ಳಯ್ಯನಗಿರಿ ಬೆಟ್ಟಗಳು


75. ಅಬ್ಬೆ ಫಾಲ್ಸ್ ಇರುವುದು ಇಲ್ಲಿ
  (ಎ) ಕೊಡಗು
  (ಬಿ) ಚಿಕ್ಕಮಗಳೂರು
  (ಸಿ) ಬೆಂಗಳೂರು
  (ಡಿ) ಗುಲ್ಬರ್ಗಾ
CORRECT ANSWER

(ಎ) ಕೊಡಗು


76. ಕರ್ನಾಟಕದಲ್ಲಿ ಮುಂಗಾರುವಿನ ಕಾಲ
  (ಎ) ಜನವರಿಯಿಂದ ಫೆಬ್ರವರಿ
  (ಬಿ) ಜೂನ್‌ನಿಂದ ಸೆಪ್ಟೆಂಬರ್
  (ಸಿ) ಮಾರ್ಚ್‌ನಿಂದ ಮೇ
  (ಡಿ) ಅಕ್ಟೋಬರ್‌ನಿಂದ ಡಿಸೆಂಬರ್
CORRECT ANSWER

(ಬಿ) ಜೂನ್‌ನಿಂದ ಸೆಪ್ಟೆಂಬರ್


77. ಕಾವೇರಿ ನದಿ ಜಲಾನಯನ ರಚನೆಯು ಇದರ ಒಂದು ಪ್ರಮುಖವಾದ ಭಾಗವಾಗಿದೆ.
  (ಎ) ಉತ್ತರ ಕರ್ನಾಟಕ ಪ್ರಸ್ಥಭೂಮಿ
  (ಬಿ) ಕೇಂದ್ರ ಕರ್ನಾಟಕ ಪ್ರಸ್ಥಭೂಮಿ
  (ಸಿ) ಕರ್ನಾಟಕದ ಕರಾವಳಿ ಪ್ರದೇಶ
  (ಡಿ) ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ
CORRECT ANSWER

(ಡಿ) ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ


78. ಭಾರತದಲ್ಲಿ ಮುಸ್ಲಿಮರು, ಸಿಖ್ಖರು, ದಲಿತರೇ ಮುಂತಾದ ಅಲ್ಪ ಸಂಖ್ಯಾತರನ್ನು ಒಳಗೊಂಡ ಪ್ರತ್ಯೇಕ ಮತದಾರ ಸಮುದಾಯಕ್ಕೆ ಮತೀಯ ಕೊಡುಗೆ ಕೊಡಲ್ಪಟ್ಟಿದ್ದು ಇವರಿಂದ
  (ಎ) ರಾಮ್‌ ಸೇ ಮ್ಯಾಕ್ ಡೊನಾಲ್ಡ್
  (ಬಿ) ವಿನ್‌ಸ್ಟನ್‌ ಚರ್ಚಿಲ್
  (ಸಿ) ಸ್ಟ್ಯಾನ್‌ಲೀ ಬಾಲ್ಡ್‌ವಿನ್‌
  (ಡಿ) ಆಸ್ಟೆನ್ ಚೆಂಬರ್ಲೆನ್
CORRECT ANSWER

(ಎ) ರಾಮ್‌ ಸೇ ಮ್ಯಾಕ್ ಡೊನಾಲ್ಡ್


79. ಬ್ರಿಟಿಷ್ ಭಾರತದಲ್ಲಿ ಸತಿಪದ್ಧತಿಯ ನಿರ್ಮೂಲನದ ಖ್ಯಾತಿಯನ್ನು ಪಡೆದ ಭಾರತದ ಗವರ್ನರ್ ಜನರಲ್ ಅನ್ನು ಹೆಸರಿಸಿ.
  (ಎ) ವಾರನ್ ಹೇಸ್ಟಿಂಗ್ಸ್
  (ಬಿ) ಲಾರ್ಡ್ ಡಾಲ್‌ಹೌಸಿ
  (ಸಿ) ಲಾರ್ಡ್ ವಿಲಿಯಂ ಬೆಂಟಿಂಕ್
  (ಡಿ) ಹೆನ್ರಿ ಹಾರ್ಡಿಂಗ್
CORRECT ANSWER

(ಸಿ) ಲಾರ್ಡ್ ವಿಲಿಯಂ ಬೆಂಟಿಂಕ್


80. ಈ ಕೆಳಗಿನ ಯಾರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದರು?
  (ಎ) ಡಾ.ರಾಜೇಂದ್ರ ಪ್ರಸಾದ್
  (ಬಿ) ಜೆ.ಬಿ.ಕಪಲಾನಿ
  (ಸಿ) ಬಿ.ಆರ್.ಅಂಬೇಡ್ಕರ್
  (ಡಿ) ಗೋಪಿನಾಥ್ ಬಾರ್ಡೋಲಿ
CORRECT ANSWER

(ಎ) ಡಾ.ರಾಜೇಂದ್ರ ಪ್ರಸಾದ್


81. ಕಾಲೇಶ್ವರಂ ಲಿಫ್ಟ್ ಇರಿಗೇಷನ್ ಪ್ರೊಜೆಕ್ಟ್ (KLIP)ಅನ್ನು ಯಾವ ನದಿಯ ಮೇಲೆ ನಿರ್ಮಿಸಲಾಗಿದೆ?
  (ಎ) ಗೋದಾವರಿ ನದಿ
  (ಬಿ) ಕಾವೇರಿ ನದಿ
  (ಸಿ) ನರ್ಮದಾ ನದಿ
  (ಡಿ) ಕಷ್ಣಾ ನದಿ
CORRECT ANSWER

(ಎ) ಗೋದಾವರಿ ನದಿ


82. ‘‘ಸೂರ್ಯ-ಕಿರಣ್’’ ಸೇನಾ ಕವಾಯತು ನಡೆದದ್ದು ಭಾರತ ಮತ್ತು ____________ ಮಧ್ಯೆ.
  (ಎ) ಬಾಂಗ್ಲಾದೇಶ
  (ಬಿ) ನೇಪಾಳ
  (ಸಿ) ಇಂಡೋನೇಷಿಯಾ
  (ಡಿ) ಶ್ರೀಲಂಕಾ
CORRECT ANSWER

(ಬಿ) ನೇಪಾಳ


83. ಭಾರತದ ಮೊದಲ ಹೆಲಿಕಾಪ್ಟರ್ ನಿಯತಕಾಲಿಕ ಸಂಚಾರ ಸೇವೆ (ಹೆಲಿಟ್ಯಾಕ್ಸಿ) ಯನ್ನು ಕರ್ನಾಟಕದ ಯಾವ ನಗರದಲ್ಲಿ ಪ್ರಾರಂಭಿಸಲಾಯಿತು?
  (ಎ) ಹುಬ್ಬಳ್ಳಿ-ಧಾರವಾಡ
  (ಬಿ) ಬೆಳಗಾಂ
  (ಸಿ) ಬೆಂಗಳೂರು
  (ಡಿ) ಮೈಸೂರು
CORRECT ANSWER

(ಸಿ) ಬೆಂಗಳೂರು


84. ಸಂಸತ್ತಿನ ಪಬ್ಲಿಕ್ ಅಕೌಂಟ್ಸ್ ಕಮಿಟಿ (PAC)ಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗಿದೆ?
  (ಎ) ಗುಲಾಂ ನಬಿ ಆಜಾದ್
  (ಬಿ) ಮಲ್ಲಿಕಾರ್ಜುನ ಖರ್ಗೆ
  (ಸಿ) ಜ್ಯೋತಿರಾದಿತ್ಯ ಸಿಂಧ್ಯಾ
  (ಡಿ) ಕಮಲ್‌ನಾಥ್‌
CORRECT ANSWER

(ಬಿ) ಮಲ್ಲಿಕಾರ್ಜುನ ಖರ್ಗೆ


85. ವ್ಯಕ್ತಿಯ ಕಾನೂನುಬಾಹಿರವಾದ ಸೆರೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಈ ಕೆಳಗಿನ ಯಾವ ಆಜ್ಞಾಪತ್ರ/ ರಿಟ್ ಅನ್ನು ಜಾರಿಗೊಳಿಸಿದೆ?
  (ಎ) ಸರ್ಷಿಯೋರರಿ
  (ಬಿ) ಕೋ ವಾರಂಟೋ
  (ಸಿ) ಹೇಬಿಯಸ್ ಕಾರ್ಪಸ್
  (ಡಿ) ಮೇಲಿನ ಯಾವುದೂ ಅಲ್ಲ
CORRECT ANSWER

(ಸಿ) ಹೇಬಿಯಸ್ ಕಾರ್ಪಸ್


86. ಯಾರ ವರದಿಯನ್ನು ಸ್ವೀಕರಿಸಿದ ನಂತರ ರಾಷ್ಟ್ರಾಧ್ಯಕ್ಷರು ಪರಿಚ್ಛೇದ 356ರ ಅಡಿಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಘೋಷಿಸುತ್ತಾರೆ?
  (ಎ) ಪ್ರಧಾನಮಂತ್ರಿ
  (ಬಿ) ಕೇಂದ್ರ ಗೃಹಮಂತ್ರಿ
  (ಸಿ) ಮುಖ್ಯಮಂತ್ರಿ
  (ಡಿ) ರಾಜ್ಯಪಾಲ
CORRECT ANSWER

(ಡಿ) ರಾಜ್ಯಪಾಲ


87. ಈ ಕೆಳಗಿನ ಯಾವ ರಾಜ್ಯವು ಜಿಎಸ್‌ಟಿಯ ಕೆಳಗೆ ಅತ್ಯಂತ ಹೆಚ್ಚು ಪರೋಕ್ಷ ತೆರಿಗೆಯ ಆಧಾರವನ್ನು ಹೊಂದಿದೆ?
  (ಎ) ಮಹಾರಾಷ್ಟ್ರ
  (ಬಿ) ಮಧ್ಯಪ್ರದೇಶ
  (ಸಿ) ಉತ್ತರ ಪ್ರದೇಶ
  (ಡಿ) ತಮಿಳುನಾಡು
CORRECT ANSWER

(ಎ) ಮಹಾರಾಷ್ಟ್ರ


88. ‘‘ದ ಇಕನಾಮಿಕ್ ಸರ್ವೆ 2017-18’’ ಯು ‘‘ಗುಲಾಬಿ’’ ಬಣ್ಣದಲ್ಲಿ ಇದಕ್ಕಾಗಿ ಮುದ್ರಿಸಲ್ಪಟ್ಟಿದೆ.
  (ಎ) ಮುಖ್ಯಾಂಶಗಳನ್ನು ಎತ್ತಿ ತೋರಿಸಲು
  (ಬಿ) ವಿವಿಧ ಲಿಂಗಸಂಬಂಧಿ ವಿವಾದಾಂಶಗಳನ್ನು ಎತ್ತಿ ತೋರಿಸಲು
  (ಸಿ) ಆರ್ಥಿಕತೆಯ ಸ್ಥಿತಿಯನ್ನು ಎತ್ತಿ ತೋರಿಸಲು
  (ಡಿ) ಯಾವುದೇ ನಿರ್ದಿಷ್ಟ ಕಾರಣವಿಲ್ಲ
CORRECT ANSWER

(ಬಿ) ವಿವಿಧ ಲಿಂಗಸಂಬಂಧಿ ವಿವಾದಾಂಶಗಳನ್ನು ಎತ್ತಿ ತೋರಿಸಲು


89. ದಕ್ಷಿಣ ಭಾರತದ ಮೊದಲ ಭೂಗತ ಮೆಟ್ರೋ ಸೇವೆ ಪ್ರಾರಂಭವಾದದ್ದು ಯಾವ ನಗರದಲ್ಲಿ?
  (ಎ) ಹೈದರಾಬಾದ್
  (ಬಿ) ಕೊಚ್ಚಿ
  (ಸಿ) ಬೆಂಗಳೂರು
  (ಡಿ) ಚೆನ್ನೈ
CORRECT ANSWER

(ಸಿ) ಬೆಂಗಳೂರು


90. ಋಗ್ವೇದದ ಅತಿ ಪವಿತ್ರ ಮಂತ್ರವಾದ ‘‘ಗಾಯತ್ರಿ ಮಂತ್ರ’’ವು ಯಾವ ದೇವತೆಗೆ ನಿವೇದಿತವಾಗಿದೆ?
  (ಎ) ರುದ್ರ
  (ಬಿ) ವರುಣ
  (ಸಿ) ಇಂದ್ರ
  (ಡಿ) ಸೂರ್ಯ
CORRECT ANSWER

(ಡಿ) ಸೂರ್ಯ


91. ಇದರಲ್ಲಿ ನೀರಿನ ಇರುವಿಕೆ ಇಲ್ಲ.
  (ಎ) ದ್ರವ
  (ಬಿ) ಆವಿ
  (ಸಿ) ಅರೆಘನರೂಪದ ದ್ರಾವಣ
  (ಡಿ) ಘನ
CORRECT ANSWER

(ಸಿ) ಅರೆಘನರೂಪದ ದ್ರಾವಣ


92. ಈ ಕೆಳಗಿನ ಯಾವುದು ಅರಣ್ಯಜನ್ಯ ಉತ್ಪತ್ತಿ ಅಲ್ಲ?
  (ಎ) ಅಂಟು
  (ಬಿ) ಫ್ಲೈವುಡ್
  (ಸಿ) ಮುದ್ರೆಯ ಅರಗು
  (ಡಿ) ಸೀಮೆಎಣ್ಣೆ
CORRECT ANSWER

(ಡಿ) ಸೀಮೆಎಣ್ಣೆ


93. ವಿಟಮಿನ್ ಡಿ ಯ ಕೊರತೆಯಿಂದ ಉಂಟಾಗುವುದು
  (ಎ) ರಿಕೆಟ್ಸ್
  (ಬಿ) ಅಂಧತ್ವ
  (ಸಿ) ಸ್ಕರ್ವಿ
  (ಡಿ) ರಕ್ತಹೀನತೆ
CORRECT ANSWER

(ಎ) ರಿಕೆಟ್ಸ್


94. ನೀರು ನೀರಿನ ಆವಿಯಾಗಿ ಪರಿವರ್ತಿತವಾಗುವ ಪ್ರಕ್ರಿಯೆಯನ್ನು ಹೀಗೆ ಕರೆಯುತ್ತಾರೆ.
  (ಎ) ಘನೀಕರಣ (ಕಂಡೆನ್ಸೇಷನ್)
  (ಬಿ) ಪರಿವರ್ತನೆ (ಕನ್ವರ್ಷನ್)
  (ಸಿ) ಶೀತಲೀಕರಣ (ಕೂಲಿಂಗ್)
  (ಡಿ) ಹಬೆಯಾಗುವುದು (ಇವಾಪೊರೇಷನ್)
CORRECT ANSWER

(ಡಿ) ಹಬೆಯಾಗುವುದು (ಇವಾಪೊರೇಷನ್)


95. ಭೂಮಿಯ ಮೇಲೆ ವಾಸಿಸುವ ಸಸ್ಯಗಳು ಮತ್ತು ಪ್ರಾಣಿಗಳನ್ನು ಹೀಗೆ ಹೇಳಬಹುದು.
  (ಎ) ಭೂಮಿಯ ಮೇಲೆ ವಾಸಿಸುವ ಜೀವಿಗಳು (ಟೆರೆಸ್ಟ್ರಿಯಲ್)
  (ಬಿ) ಜಲಚರಗಳು
  (ಸಿ) ಜೈವಿಕ ಜೀವಿಗಳು
  (ಡಿ) ಅಜೀವಕ ಜೀವಿಗಳು
CORRECT ANSWER

(ಎ) ಭೂಮಿಯ ಮೇಲೆ ವಾಸಿಸುವ ಜೀವಿಗಳು (ಟೆರೆಸ್ಟ್ರಿಯಲ್)


96. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಬಸವ ಸಾಗರ ಅಣೆಕಟ್ಟು ಇದೆ?
  (ಎ) ಮೈಸೂರು
  (ಬಿ) ವಿಜಯಪುರ
  (ಸಿ) ಕೊಡಗು
  (ಡಿ) ಚಾಮರಾಜನಗರ
CORRECT ANSWER

(ಬಿ) ವಿಜಯಪುರ


97. ಕೊಡಗು ಜಿಲ್ಲೆಯಲ್ಲಿರುವ ‘‘ಇರುಪ್ಟು’’ ಜಲಪಾತ ಯಾವ ನದಿಯ ಮೇಲಿದೆ?
  (ಎ) ಲಕ್ಷಣ ತೀರ್ಥನದಿ
  (ಬಿ) ಶರಾವತಿ ನದಿ
  (ಸಿ) ಮಹದಾಯಿ ನದಿ
  (ಡಿ) ಭದ್ರಾನದಿ
CORRECT ANSWER

(ಎ) ಲಕ್ಷಣ ತೀರ್ಥನದಿ


98. ಈ ಕೆಳಗಿನ ಯಾವ ಒಂದು ಕಾಲ್ಪನಿಕ ರೇಖೆಯು ನಮ್ಮ ದೇಶವನ್ನು ಹಾದು ಹೋಗುತ್ತದೆ?
  (ಎ) ಭೂಮಧ್ಯರೇಖೆ
  (ಬಿ) ಮಕರ ಸಂಕ್ರಾಂತಿ ವತ್ತ
  (ಸಿ) ಕರ್ಕಾಟಕ ಸಂಕ್ರಾತಿ ವತ್ತ
  (ಡಿ) ಉತ್ತರ ಧ್ರುವ
CORRECT ANSWER

(ಸಿ) ಕರ್ಕಾಟಕ ಸಂಕ್ರಾತಿ ವತ್ತ


99. ಬಿರುಸಾಗಿ ಪ್ರವಹಿಸುವ ಮತ್ತು ಕಿರಿದಾದ ವಾಯುವಿನ ಗತಿಯನ್ನು ಹೀಗೆಂದು ಕರೆಯುತ್ತಾರೆ.
  (ಎ) ಮುಂಗಾರು ಮಾರುತ
  (ಬಿ) ಜೆಟ್ ಸ್ಟ್ರೀಮ್‌ಗಳು
  (ಸಿ) ಚಂಡ ಮಾರುತಗಳು
  (ಡಿ) ಪ್ರತಿಚಕ್ರವಾತ (ಆ್ಯಂಟಿ ಸೈಕ್ಲೋನ್)
CORRECT ANSWER

(ಬಿ) ಜೆಟ್ ಸ್ಟ್ರೀಮ್‌ಗಳು


100. ಪಶ್ಚಿಮದ ತಡೆಗಳು ಚಳಿಗಾಲದ ಮಳೆಗೆ ಕಾರಣವಾಗುತ್ತವೆ ಮತ್ತು ಇದಕ್ಕೆ ಪ್ರಯೋಜನಕಾರಿಯಾಗಿದೆ.
  (ಎ) ಖಾರೀಫ್
  (ಬಿ) ಝೈದ್
  (ಸಿ) ರಬಿ
  (ಡಿ) ಮೇಲಿನ ಯಾವುದೂ ಅಲ್ಲ
CORRECT ANSWER

(ಸಿ) ರಬಿ

Related Posts

Police Constable Previous Paper 20-09-2020

Police Constable Previous Paper 18-10-2020

KSP-Police Constable (Civil) 17-11-2019 question paper

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.