Welcome to ALL IN ONE Education portal

Join us on Telegram

Join Now

Join us on Whatsapp

Join Now

Police Constable Previous Paper 08-04-2018

ಪೊಲೀಸ್ ಕಾನ್‌ಸ್ಟೆಬಲ್ (ಕೆಎಸ್‌ಆರ್‌ಪಿಸಿ-ಎಸ್‌ಆರ್‌ಪಿಸಿ) ಪ್ರಶ್ನೆಪತ್ರಿಕೆ

 

1. ಕೆಳಗಿನ ಚಲನಚಿತ್ರಗಳಲ್ಲಿ ಯಾವುದು ರಾಜ್ ಕುಮಾರ್ ರವರನ್ನು ಪ್ರಮುಖ ನಟನನ್ನಾಗಿ ಹೊಂದಿದೆ?
  (ಎ) ಬಬ್ರುವಾಹನ
  (ಬಿ) ವಂಶವೃಕ್ಷ
  (ಸಿ) ಆ ದಿನಗಳು
  (ಡಿ) ನಾ ನಿನ್ನ ಬಿಡಲಾರೆ

CORRECT ANSWER

(ಎ) ಬಬ್ರುವಾಹನ


2. 1975ರಲ್ಲಿ ಪ್ರಕಟಗೊಂಡ ‘‘ದಾಟು’’ ಕಾದಂಬರಿ ಯಾವ ಕನ್ನಡ ಲೇಖಕನಿಂದ ಬರೆಲ್ಪಟ್ಟಿತು?
  (ಎ) ಯು.ಆರ್.ಅನಂತಮೂರ್ತಿ
  (ಬಿ) ಎಸ್.ಎಲ್.ಭೈರಪ್ಪ
  (ಸಿ) ಜಿ.ಎಸ್.ಶಿವರುದ್ರಪ್ಪ
  (ಡಿ) ವಿ.ಕೆ.ಗೋಕಾಕ್
CORRECT ANSWER

(ಬಿ) ಎಸ್.ಎಲ್.ಭೈರಪ್ಪ


3. ರಾಜ್ ಕುಮಾರ್ ಪಾತ್ರವರ್ಗದಲ್ಲಿದ್ದ ‘‘ಭಕ್ತ ಕುಂಬಾರ’’ ಚಲನಚಿತ್ರದಲ್ಲಿ ಇತ್ತೀಚೆಗೆ ನಿಧನರಾದ ಯಾವ ಪ್ರಸಿದ್ಧ ತಾರೆ ಚಿಕ್ಕ ಪಾತ್ರವನ್ನು ಹೊಂದಿದ್ದರು?
  (ಎ) ಶ್ರೀದೇವಿ
  (ಬಿ) ಪರ್ವಿನ್ ಬಾಬಿ
  (ಸಿ) ರೋಹಿಣಿ ಹಟ್ಟಂಗಡಿ
  (ಡಿ) ದಿವ್ಯಭಾರತಿ
CORRECT ANSWER

(ಎ) ಶ್ರೀದೇವಿ


4. ಅಮೆರಿಕ ಸಂಯುಕ್ತ ಸಂಸ್ಥಾನದ ಈಗಿನ ಅಧ್ಯಕ್ಷರು ಯಾರು?
  (ಎ) ಬರಾಕ್ ಒಬಾಮ
  (ಬಿ) ಡೊನಾಲ್ಡ್ ಟ್ರಂಪ್
  (ಸಿ) ಹಿಲರಿ ಕ್ಲಿಂಟನ್
  (ಡಿ) ಜಾರ್ಜ್ ಬುಷ್
CORRECT ANSWER

(ಬಿ) ಡೊನಾಲ್ಡ್ ಟ್ರಂಪ್


5. ಭಾರತದ ಈಗಿನ ವಿದೇಶಾಂಗ ವ್ಯವಹಾರಗಳ ಮಂತ್ರಿ?
  (ಎ) ರಾಜನಾಥ್ ಸಿಂಗ್
  (ಬಿ) ಸುಷ್ಮಾ ಸ್ವರಾಜ್
  (ಸಿ) ಎಸ್.ಎಂ.ಕೃಷ್ಣ
  (ಡಿ) ನಿರ್ಮಲಾ ಸೀತಾರಾಮನ್
CORRECT ANSWER

(ಬಿ) ಸುಷ್ಮಾ ಸ್ವರಾಜ್


6. ಚಾರಿತ್ರಿಕ ದೇವನಹಳ್ಳಿ ಕೋಟೆಯು ಕರ್ನಾಟಕದ ಯಾವ ಪ್ರಸಿದ್ಧ ರಾಜನ ಜನ್ಮಸ್ಥಳವಾಗಿದೆ?
  (ಎ) ಹೈದರ್ ಆಲಿ
  (ಬಿ) ಟಿಪ್ಪು ಸುಲ್ತಾನ್
  (ಸಿ) ಶ್ರೀಕೃಷ್ಣದೇವರಾಯ
  (ಡಿ) ಕೆಂಪೇಗೌಡ
CORRECT ANSWER

(ಬಿ) ಟಿಪ್ಪು ಸುಲ್ತಾನ್


7. ಕೃಷ್ಣರಾಜ ಸಾಗರ ಅಣೆಕಟ್ಟು ಯಾವ ಪ್ರಸಿದ್ಧ ಮೈಸೂರಿನ ದಿವಾನರಿಂದ ವಿನ್ಯಾಸಗೊಳಿಸಲ್ಪಟ್ಟಿತು ಮತ್ತು ನಿರ್ಮಿಸಲ್ಪಟ್ಟಿತು?
  (ಎ) ಎಂ.ವಿಶ್ವೇಶ್ವರಯ್ಯ
  (ಬಿ) ಟಿ.ಆನಂದರಾವ್
  (ಸಿ) ಕೆ.ಶೇಷಾದ್ರಿ ಅಯ್ಯರ್
  (ಡಿ) ಕಾಂತರಾಜೇ ಅರಸ್
CORRECT ANSWER

(ಎ) ಎಂ.ವಿಶ್ವೇಶ್ವರಯ್ಯ


8. ಬೆಂಗಳೂರಿನ ದೊಮ್ಲೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಯಾವ ಕಂಪನಿಯು 1940ರಲ್ಲಿ ವಾಲ್ ಚಂದ್ ಹೀರಾ ಚಂದ್ರಿಂದ ಸ್ಥಾಪಿಸಲ್ಪಟ್ಟಿತು?
  (ಎ) ಮೈಸೂರು ಸೋಪ್ಸ್ ಆ್ಯಂಡ್ ಡಿಟರಜೆಂಟ್ಸ್ ಲಿಮಿಟೆಡ್
  (ಬಿ) ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿ
  (ಸಿ) ಹಿಂದೂಸ್ಥಾನ್ ಏರ್ ಕ್ರ್ಯಾಫ್ಟ್ ಲಿಮಿಟೆಡ್ (ಎಚ್.ಎ.ಎಲ್.)
  (ಡಿ) ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿ.ಎಚ್.ಇ.ಎಲ್.)
CORRECT ANSWER

(ಸಿ) ಹಿಂದೂಸ್ಥಾನ್ ಏರ್ ಕ್ರ್ಯಾಫ್ಟ್ ಲಿಮಿಟೆಡ್ (ಎಚ್.ಎ.ಎಲ್.)


9. ಕರ್ನಾಟಕದ ಯಾವ ಪುರಾತನ ನಗರವು ಕದಂಬ ರಾಜವಂಶದಿಂದ ಆಳಲ್ಪಟ್ಟಿತು?
  (ಎ) ಹೊನ್ನಾವರ
  (ಬಿ) ಬನವಾಸಿ
  (ಸಿ) ಶಿರಸಿ
  (ಡಿ) ಭಟ್ಕಳ
CORRECT ANSWER

(ಬಿ) ಬನವಾಸಿ


10. ಯಾವ ಪ್ರಸಿದ್ಧ ಕನ್ನಡ ಲೇಖಕನಿಂದ ‘‘ವಿಕ್ರಮಾರ್ಜುನ ವಿಜಯ’’ ಪುಸ್ತಕವು ಬರೆಯಲ್ಪಟ್ಟಿತು?
  (ಎ) ಬಸವಣ್ಣ
  (ಬಿ) ಆದಿಕವಿ ಪಂಪ
  (ಸಿ) ರನ್ನ
  (ಡಿ) ಶ್ರೀ ಪೊನ್ನ
CORRECT ANSWER

(ಬಿ) ಆದಿಕವಿ ಪಂಪ


11. ಕಾರ್ಗಿಲ್ ಸಮರವು ಭಾರತ ಮತ್ತು ಪಾಕಿಸ್ಥಾನ ನಡುವೆ ಈ ವರ್ಷ ನಡೆಯಿತು?
  (ಎ) 1948
  (ಬಿ) 1999
  (ಸಿ) 1965
  (ಡಿ) 1971
CORRECT ANSWER

(ಬಿ) 1999


12. CRPFನ ಪೂರ್ಣ ರೂಪ?
  (ಎ) ಕ್ರೌನ್ ರಿಸರ್ವ್ ಪೊಲೀಸ್ ಫೋರ್ಸ್
  (ಬಿ) ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್
  (ಸಿ) ಸೆಂಟ್ರಲ್ ರೆಗ್ಯುಲರ್ ಪೊಲೀಸ್ ಫೋರ್ಸ್
  (ಡಿ) ಕಲ್ಕತ್ತ ರೈಲ್ವೆ ಪೊಲೀಸ್ ಫೋರ್ಸ್
CORRECT ANSWER

(ಬಿ) ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್


13. ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧವು ___________ ವರ್ಷದಲ್ಲಿ ಟಿಪ್ಪು ಸುಲ್ತಾನನ ಮರಣದೊಂದಿಗೆ ಕೊನೆಗೊಂಡಿತು?
  (ಎ) 1764
  (ಬಿ) 1786
  (ಸಿ) 1792
  (ಡಿ) 1799

CORRECT ANSWER

(ಡಿ) 1799


14. ಆ್ಯಂಪಿಯರ್ಸ್ ಎಂಬುದು ಇದರ ಘಟಕವಾಗಿದೆ?
  (ಎ) ವಿದ್ಯುತ್ ಪ್ರವಾಹ
  (ಬಿ) ವಿದ್ಯುತ್ ಧಾರಣ ಸಾಮರ್ಥ್ಯ
  (ಸಿ) ವಿದ್ಯುತ್ ವಿಭವತ
  (ಡಿ) ಅಯಸ್ಕಾಂತೀಯ ಕ್ಷೇತ್ರ
CORRECT ANSWER

(ಎ) ವಿದ್ಯುತ್ ಪ್ರವಾಹ


15. E = MC^ 2 ಎಂಬುದು ಯಾವ ಸಿದ್ಧಾಂತದಿಂದ ವ್ಯುತ್ಪತ್ತಿಗೊಂಡ ಜನಪ್ರಿಯ ಸಮೀಕರಣವಾಗಿದೆ?
  (ಎ) ಅಣು ಸಿದ್ಧಾಂತ
  (ಬಿ) ಘಟ ಸ್ಫೋಟ ಸಿದ್ಧಾಂತ
  (ಸಿ) ಸಾಪೇಕ್ಷತಾ ಸಿದ್ಧಾಂತ
  (ಡಿ) ಸ್ಥಿರ ಸ್ಥಿತಿ ಸಿದ್ಧಾಂತ
CORRECT ANSWER

(ಸಿ) ಸಾಪೇಕ್ಷತಾ ಸಿದ್ಧಾಂತ


16. ___________ ಡಿಗ್ರಿ ಸೆಂಟಿಗ್ರೇಡ್ ನಲ್ಲಿ ನೀರು ಕುದಿಯುತ್ತದೆ ?
  (ಎ) 0
  (ಬಿ) 100
  (ಸಿ) 4
  (ಡಿ) 160
CORRECT ANSWER

(ಬಿ) 100


17. ಅರೆವಾಹಕ ಚಿಪ್ ಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಧಾತು ಯಾವುದು?
  (ಎ) ಸಿಲಿಕಾನ್
  (ಬಿ) ಬಿಸ್ಮತ್
  (ಸಿ) ಕ್ರೋಮಿಯಂ
  (ಡಿ) ನಿಕ್ಕಲ್
CORRECT ANSWER

(ಎ) ಸಿಲಿಕಾನ್


18. ಪ್ರಥಮ ಪ್ರತಿಜೀವಕ ಪೆನಿಸಿಲಿನ್ ಅಭಿವೃದ್ಧಿಪಡಿಸಿದವರು?
  (ಎ) ಹಾರ್ವೆ
  (ಬಿ) ಅಲೆಕ್ಸಾಂಡರ್ ಫ್ಲೆಮಿಂಗ್
  (ಸಿ) ಲೂಯಿ ಪ್ಯಾಶ್ಚರ್
  (ಡಿ) ಪಾವ್ ಲೋವ್
CORRECT ANSWER

(ಬಿ) ಅಲೆಕ್ಸಾಂಡರ್ ಫ್ಲೆಮಿಂಗ್


19. ಮೇದೋಜೀರಕ ಗ್ರಂಥಿಯ ಕ್ರಮಬದ್ಧವಲ್ಲದ ಕ್ರಿಯೆಯು ರಕ್ತದ ಯಾವ ಪ್ರಮುಖ ದ್ರವ್ಯದ ಮೇಲೆ ಪರಿಣಾಮ ಬೀರುತ್ತದೆ?
  (ಎ) ಕ್ರಿಯಾಟಿನಿನ್
  (ಬಿ) ಯೂರಿಕ್ ಆಮ್ಲ
  (ಸಿ) ಇನ್ಸುಲಿನ್
  (ಡಿ) ಹಿಮೋಗ್ಲೋಬಿನ್
CORRECT ANSWER

(ಸಿ) ಇನ್ಸುಲಿನ್


20. ನಾಯಿ ಕಡಿತದಿಂದ ಹರಡುವ ಗುಣವಾಗದ ಕಾಯಿಲೆ ಯಾವುದು?
  (ಎ) ಮಲೇರಿಯಾ
  (ಬಿ) ಏಡ್ಸ್
  (ಸಿ) ರೇಬಿಸ್
  (ಡಿ) ಸಿಡುಬು
CORRECT ANSWER

(ಸಿ) ರೇಬಿಸ್


21. ಕೆಲಸವೊಂದನ್ನು ‘‘ಎ’’ಯು 15 ದಿನಗಳಲ್ಲಿ ಮತ್ತು ‘‘ಬಿ’’ಯು 20 ದಿನಗಳಲ್ಲಿ ಮಾಡಬಲ್ಲವರಾಗಿದ್ದಾರೆ. ಇವರಿಬ್ಬರೂ ಸೇರಿ 4 ದಿನಗಳು ಕೆಲಸಮಾಡಿದ್ದಲ್ಲಿ, ಉಳಿಯುವ ಕೆಲಸದ ಅಪೂರ್ಣಾಂಕವು?
  (ಎ) 1/4
  (ಬಿ) 1/10
  (ಸಿ) 8/15
  (ಡಿ) 7/15
CORRECT ANSWER

(ಸಿ) 8/15


22. 12 ರಿಂದ ಗುಣಿಸಲ್ಪಟ್ಟಾಗ ಮತ್ತು ಸಂಖ್ಯೆಯ ಘನದಿಂದ ಹೆಚ್ಚಿಸಲ್ಪಟ್ಟಾಗ 35ರ ಮೊತ್ತಕ್ಕೆ ಮತ್ತು ಸಂಖ್ಯೆಯ ವರ್ಗದ 6 ಪಟ್ಟುಗಳಿಗೆ ಸಮನಾಗುವ ಸಂಖ್ಯೆಯನ್ನು ಕಂಡುಹಿಡಿಯಿರಿ?
  (ಎ) 2
  (ಬಿ) 3
  (ಸಿ) 5
  (ಡಿ) 7
CORRECT ANSWER

(ಸಿ) 5


23. 9 ಮೀಟರು ಎತ್ತರದ ಕಂಬವೊಂದರಲ್ಲಿ ನವಿಲೊಂದು ವಿಶ್ರಮಿಸುತ್ತಿದೆ. 27 ಮೀಟರುಗಳ ಅಂತರದಲ್ಲಿ ಹಾವೊಂದು ಕಂಬದ ಬುಡದಲ್ಲಿರುವ ಅದರ ಪೊಟರೆಯೊಂದರತ್ತ ಬರುತ್ತಿದೆ. ಹಾವನ್ನು ನೋಡಿದ ನವಿಲು ಅದರ ಮೇಲೆ ಎರಗುತ್ತದೆ. ಅವುಗಳ ವೇಗಗಳು ಸಮಾನವಾಗಿದ್ದಲ್ಲಿ, ಪೊಟರೆಯ ಎಷ್ಟು ದೂರದಲ್ಲಿ ಹಾವು ಹಿಡಿಯಲ್ಪಡುತ್ತದೆ?
  (ಎ) 10 ಮೀಟರುಗಳು
  (ಬಿ) 12 ಮೀಟರುಗಳು
  (ಸಿ) 16 ಮೀಟರುಗಳು
  (ಡಿ) 24 ಮೀಟರುಗಳು
CORRECT ANSWER

(ಬಿ) 12 ಮೀಟರುಗಳು


24. ಮರವೊಂದರ ಮೇಲೆ ಕುಳಿತ ಎರಡು ಮಂಗಗಳು ಮರದ ಬುಡದಿಂದ 200 ಅಡಿಗಳ ಅಂತರದಲ್ಲಿ ನೆಲದ ಮೇಲಿರುವ ಯಾವುದೋ ಹಣ್ಣನ್ನು ನೋಡುತ್ತವೆ. ಮರದ ಎತ್ತರವು 100 ಅಡಿಗಳಾಗಿರುತ್ತದೆ. ಒಂದು ಮಂಗವು ಮರದಿಂದ ಕೆಳಗಿಳಿದು ಹಣ್ಣಿನತ್ತ ಹೆಜ್ಜೆ ಹಾಕುತ್ತದೆ. ಇನ್ನೊಂದು ಮಂಗವು ಮರದ ಮೇಲೆ ಇನ್ನಷ್ಟು ಮೇಲಿನ ಬಿಂದುವಿಗೆ ಹೋಗಿ ಅಲ್ಲಿಂದ ಬಾಗಿದ ನೇರ ರೇಖೆ ಹಾದಿಯನ್ನು ಹಿಡಿಯುತ್ತದೆ. ಎರಡೂ ಮಂಗಗಳು ಎಲ್ಲ ಸಮಯದಲ್ಲೂ ಒಂದೇ ವೇಗದಿಂದ ಚಲಿಸುತ್ತವೆ ಮತ್ತು ಏಕಕಾಲದಲ್ಲಿ ಹಣ್ಣಿನತ್ತ ಬರುತ್ತವೆ. ಎರಡನೆಯ ಮಂಗವು ತಾನು ಕೆಳಗಿಳಿಯುವ ಮೊದಲು ಎಷ್ಟು ಮೀಟರುಗಳು ಹತ್ತುತ್ತವೆ?
  (ಎ) 50 ಮೀಟರುಗಳು
  (ಬಿ) 75 ಮೀಟರುಗಳು
  (ಸಿ) 100 ಮೀಟರುಗಳು
  (ಡಿ) 200 ಮೀಟರುಗಳು
CORRECT ANSWER

(ಎ) 50 ಮೀಟರುಗಳು


25. ಈ ಕಾರಣದಿಂದ ‘‘ರಕ್ತ ಚಂದ್ರ’’ ಸಂಭವಿಸುತ್ತದೆ ?
  (ಎ) ಬಾಹ್ಯಾಕಾಶದಲ್ಲಿ ಧೂಳು
  (ಬಿ) ಭೂ ವಾಯುಮಂಡಲದಲ್ಲಿ ಧೂಳು
  (ಸಿ) ಚಂದ್ರನ ವಾಯುಮಂಡಲದಲ್ಲಿ ಧೂಳು
  (ಡಿ) ಮೇಲಿನವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ಭೂ ವಾಯುಮಂಡಲದಲ್ಲಿ ಧೂಳು


26. ರಾಸಾಯನಿಕ ಸಂಯೋಜನೆಯನ್ನಾಧರಿಸಿ ವಾತಾವರಣವು ಎರಡು ಪದರಗಳಾಗಿ ವಿಂಗಡಿಸಲ್ಪಡುತ್ತದೆ. ಅವುಗಳು ಯಾವುವು?
  (ಎ) ಗೋಳಾರ್ಧ ಮತ್ತು ಭಿನ್ನಗೋಳ
  (ಬಿ) ಹವಾಗೋಳ ಮತ್ತು ವಾಯುಮಂಡಲ ಸ್ತರ
  (ಸಿ) ಹವಾಗೋಳ ಮತ್ತು ಬಾಹ್ಯಗೋಳ
  (ಡಿ) ವಾಯಮಂಡಲ ಮತ್ತು ಮಧ್ಯಗೋಳ
CORRECT ANSWER

(ಎ) ಗೋಳಾರ್ಧ ಮತ್ತು ಭಿನ್ನಗೋಳ


27. ಕರ್ನಾಟಕದ ರಾಜ್ಯ ಹಕ್ಕಿಯನ್ನು ಹೆಸರಿಸಿರಿ ?
  (ಎ) ಮಹತ್ತಾದ ಕೊಂಬುಕೊಕ್ಕಿನ ಹಕ್ಕಿ
  (ಬಿ) ಬಿಳಿ ಎದೆಯ ಮಿಂಚುಳ್ಳಿ
  (ಸಿ) ಏಷಿಯಾದ ಕೋಗಿಲೆ
  (ಡಿ) ಭಾರತೀಯ ರೋಲರ್
CORRECT ANSWER

(ಡಿ) ಭಾರತೀಯ ರೋಲರ್


28. ಕರ್ನಾಟಕದಲ್ಲಿ ಅತಿ ಹೆಚ್ಚು ಸಾಕ್ಷರತಾ ಪ್ರಮಾಣವನ್ನು ಹೊಂದಿರುವ ಜಿಲ್ಲೆ ಯಾವುದು ?
  (ಎ) ಉಡುಪಿ
  (ಬಿ) ಮೈಸೂರು
  (ಸಿ) ದಕ್ಷಿಣ ಕನ್ನಡ
  (ಡಿ) ಕೊಡಗು
CORRECT ANSWER

(ಸಿ) ದಕ್ಷಿಣ ಕನ್ನಡ


29. ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2017ರ ಮೇರೆಗೆ ಅರಣ್ಯ ಹೊದಿಕೆ ಅಡಿಯಲ್ಲಿ ಅತಿ ಹೆಚ್ಚು ಪ್ರದೇಶ ಹೊಂದಿರುವ ರಾಜ್ಯ ಯಾವುದು?
  (ಎ) ಮೇಘಾಲಯ
  (ಬಿ) ಮಧ್ಯಪ್ರದೇಶ
  (ಸಿ) ಅರುಣಚಾಲ ಪ್ರದೇಶ
  (ಡಿ) ಛತ್ತೀಸ್ ಗಢ
CORRECT ANSWER

(ಬಿ) ಮಧ್ಯಪ್ರದೇಶ


30. ಸುಪ್ರೀಂಕೋರ್ಟಿನ ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ ಮತ್ತು ತಪ್ಪು ಹೇಳಿಕೆಯನ್ನು ಬೊಟ್ಟುಮಾಡಿರಿ.
  (ಎ) ಸುಪ್ರೀಂಕೋರ್ಟಿನ ನ್ಯಾಯಾಧೀಶರು ನ್ಯಾಯಮಂಡಲಿ ಪದ್ಧತಿ ಮೂಲಕ ಆಯ್ಕೆಗೊಳ್ಳುತ್ತಾರೆ.
  (ಬಿ) ಅಸಾಮರ್ಥ್ಯ ಅಥವಾ ಸಾಬೀತಾದ ದುರ್ವರ್ತನೆ ಅಥವಾ ಸಂವಿಧಾನದ ಉಲ್ಲಂಘನೆಯ ಕಾರಣದ ಮೇಲೆ ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನು ವಜಾಗೊಳಿಸಬಹುದು.
  (ಸಿ) ಭಾರತೀಯ ಸಂವಿಧಾನದ 124ನೇ ವಿಧಿಯು ಸುಪ್ರೀಂಕೋರ್ಟಿನ ಸ್ಥಾಪನೆ ಮತ್ತು ಸಂಯೋಜನೆಯನ್ನು ಕುರಿತು ವ್ಯವಹರಿಸುತ್ತದೆ.
  (ಡಿ) ಮೇಲಿನ ಎಲ್ಲಾ ಹೇಳಿಕೆಗಳೂ ಸರಿಯಾಗಿವೆ.
CORRECT ANSWER

(ಬಿ) ಅಸಾಮರ್ಥ್ಯ ಅಥವಾ ಸಾಬೀತಾದ ದುರ್ವರ್ತನೆ ಅಥವಾ ಸಂವಿಧಾನದ ಉಲ್ಲಂಘನೆಯ ಕಾರಣದ ಮೇಲೆ ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನು ವಜಾಗೊಳಿಸಬಹುದು.


31. ಕರ್ನಾಟಕ ಉಚ್ಚ ನ್ಯಾಯಾಲಯದ ಈಗಿನ ಮುಖ್ಯ ನ್ಯಾಯಮೂರ್ತಿ ಯಾರು?
  (ಎ) ಜಸ್ಟೀಸ್ ದಿನೇಶ್ ಮಹೇಶ್ವರಿ
  (ಬಿ) ಜಸ್ಟೀಸ್ ಎಚ್.ಜಿ.ರಮೇಶ್
  (ಸಿ) ಜಸ್ಟೀಸ್ ಕುರಿಯನ್ ಜೋಸೆಫ್
  (ಡಿ) ಜಸ್ಟೀಸ್ ದೀಪಕ್ ಮಿಶ್ರ
CORRECT ANSWER

(ಎ) ಜಸ್ಟೀಸ್ ದಿನೇಶ್ ಮಹೇಶ್ವರಿ


32. ಭಾರತ ಸಂವಿಧಾನದ 73ನೆಯ ತಿದ್ದುಪಡಿಯು ಕೆಳಗಿನ ಸಂಸ್ಥೆಗಳಲ್ಲಿ ಯಾವುದನ್ನು ಸ್ಥಾಪಿಸಿತು?
  (ಎ) ನಗರ ಪ್ರದೇಶಗಳು
  (ಬಿ) ಪಂಚಾಯತುಗಳು
  (ಸಿ) ನಗರಸಭೆಗಳು
  (ಡಿ) ಜಿಲ್ಲಾ ಮಂಡಲಿಗಳು
CORRECT ANSWER

(ಬಿ) ಪಂಚಾಯತುಗಳು


33. 15ನೆಯ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
  (ಎ) ವೈ.ವಿ.ರೆಡ್ಡಿ
  (ಬಿ) ಎನ್.ಕೆ.ಸಿಂಗ್
  (ಸಿ) ರಾಜೀವ್ ಕುಮಾರ್
  (ಡಿ) ಅರವಿಂದ್ ಪಿ.
CORRECT ANSWER

(ಬಿ) ಎನ್.ಕೆ.ಸಿಂಗ್


34. ಕೆಳಗಿನ ರಾಜರುಗಳಲ್ಲಿ ಯಾರ ಆಳ್ವಿಕೆಯಲ್ಲಿ ಮಲಿಕ್ ಮುಹಮ್ಮದ್ ಜೈಸಿ ತನ್ನ ಮಹಾಕೃತಿ ‘‘ಪದ್ಮಾವತ್’’ನ್ನು ಮುಕ್ತಾಯಗೊಳಿಸಿದ?
  (ಎ) ಶೇರ್ ಷಾ
  (ಬಿ) ಅಕ್ಬರ್
  (ಸಿ) ಜಹಾಂಗೀರ್
  (ಡಿ) ಷಾಜಹನ್
CORRECT ANSWER

(ಎ) ಶೇರ್ ಷಾ


35. ಕರ್ನಾಟಕದಲ್ಲಿ ಪುಷ್ಪಗಿರಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿ ಸ್ಥಾಪಿತವಾಗಿದೆ?
  (ಎ) ಕೊಡಗು
  (ಬಿ) ಹಾಸನ
  (ಸಿ) ಮೈಸೂರು
  (ಡಿ) ಉಡುಪಿ
CORRECT ANSWER

(ಎ) ಕೊಡಗು


36. ಸತ್ಯಶೋಧಕ ಸಮಾಜ ಯಾರಿಂದ ಸ್ಥಾಪಿಸಲ್ಪಟ್ಟಿತು?
  (ಎ) ರಾಜಾರಾಂ ಮೋಹನ್ ರಾಯ್
  (ಬಿ) ನಾರಾಯಣ ಗುರು
  (ಸಿ) ಜ್ಯೋತಿರಾವ್ ಫುಲೆ
  (ಡಿ) ಲಾಹುಜಿ ರಾಘೋಜಿ ಸಾಳ್ವೆ
CORRECT ANSWER

(ಸಿ) ಜ್ಯೋತಿರಾವ್ ಫುಲೆ


37. ಭಾರತ ಸರಕಾರ ಕಾಯಿದೆ 1919 ಕೆಳಗಿನವುಗಳಲ್ಲಿ ಯಾವುದನ್ನು ಜಾರಿಗೆ ತಂದಿತು?
  (ಎ) ಸ್ವಯಂ ಆಡಳಿತ
  (ಬಿ) ದ್ವಿಪ್ರಭುತ್ವ
  (ಸಿ) ಭಾರತೀಯ ಆಡಳಿತಾತ್ಮಕ ಸೇವೆಗಳು
  (ಡಿ) ಭಾರತೀಯ ಆರಕ್ಷಕ ಸೇವೆಗಳು
CORRECT ANSWER

(ಬಿ) ದ್ವಿಪ್ರಭುತ್ವ


38. ಉದ್ಯೋಗಗಳ ನಡುವೆ ಸಂಕ್ರಮಿಸುತ್ತಿರುವ, ಹೊಸ ಕೆಲಸಕ್ಕಾಗಿ ಹುಡುಕುತ್ತಿರುವ ವ್ಯಕ್ತಿಯೋರ್ವನ/ಳ ನಿರುದ್ಯೋಗವು ಕೆಳಗಿನ ವರ್ಗೀಕರಣಗಳಲ್ಲಿ ಯಾವುದರ ಅಡಿಯಲ್ಲಿ ಬರುತ್ತದೆ?
  (ಎ) ಚಕ್ರೀಯ
  (ಬಿ) ಸ್ವಯಂಪ್ರೇರಿತ
  (ಸಿ) ಘರ್ಷಣೆಯ
  (ಡಿ) ಕಾಲಿಕ
CORRECT ANSWER

(ಸಿ) ಘರ್ಷಣೆಯ


39. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚೆಗಿನ ಗಣತಿಯ ಪ್ರಕಾರ ಆರ್ಥಿಕ ವರ್ಷ 2017ರಲ್ಲಿ ಭಾರತದಲ್ಲಿ ವಿದೇಶಿ ಪ್ರತ್ಯಕ್ಷ ಹೂಡಿಕೆಯ ಅತಿ ದೊಡ್ಡ ಮೂಲವು ಇಲ್ಲಿಂದ
  (ಎ) ಸಿಂಗಾಪುರ
  (ಬಿ) ಜಪಾನ್
  (ಸಿ) ಮಾರಿಷಸ್
  (ಡಿ) ನೆದರ್ ಲ್ಯಾಂಡ್ಸ್
CORRECT ANSWER

(ಸಿ) ಮಾರಿಷಸ್


40. ಭಾರತದ ಔದ್ಯಮಿಕ ಉತ್ಪಾದನಾ ಸೂಚಿಕೆಯಲ್ಲಿ ಎಷ್ಟು ಸಂಖ್ಯೆಯ ಪ್ರಮುಖ ಮೂಲಭೂತ ಸೌಕರ್ಯ ವಲಯಗಳು ಕೋರ್ ಸೆಕ್ಟರ್ ಅನ್ನು ರೂಪಿಸುತ್ತವೆ?
  (ಎ) 5
  (ಬಿ) 6
  (ಸಿ) 7
  (ಡಿ) 8
CORRECT ANSWER

(ಡಿ) 8


41. ಈ ಕೆಳಗಿನ ಸದಸ್ಯ ರಾಷ್ಟ್ರಗಳಿಂದ ‘‘ನ್ಯೂ ಡೆವಲಪ್ಮೆಂಟ್ ಬ್ಯಾಂಕ್’’ ಸ್ಥಾಪಿಸಲ್ಪಟ್ಟಿದೆ ?
  (ಎ) SAARC
  (ಬಿ) E.U.
  (ಸಿ) BRICS
  (ಡಿ) UNASUR
CORRECT ANSWER

(ಸಿ) BRICS


42. ಕೆಳಗಿನವರಲ್ಲಿ ಯಾರು ಪ್ರತಿಷ್ಠಿತ ‘‘ಕರ್ನಾಟಕ ರತ್ನ’’ ಪ್ರಶಸ್ತಿಯನ್ನು ಪಡೆದಿರುವುದಿಲ್ಲ?
  (ಎ) ಕುವೆಂಪು
  (ಬಿ) ಸಿ.ಎನ್.ಆರ್. ರಾವ್
  (ಸಿ) ದೇವಿ ಶೆಟ್ಟಿ
  (ಡಿ) ಇವರೆಲ್ಲರೂ ಪ್ರಶಸ್ತಿ ಸ್ವೀಕರಿಸಿದವರೇ
CORRECT ANSWER

(ಡಿ) ಇವರೆಲ್ಲರೂ ಪ್ರಶಸ್ತಿ ಸ್ವೀಕರಿಸಿದವರೇ


43. ಅವಿಚ್ಛಿನ್ನ ಸಂಕ್ರಾಂತಿ ವೃತ್ತ (ಉಷ್ಣವಲಯ) ಮಟ್ಟಗಳಲ್ಲಿ ಕೇಂದ್ರೀಕರಣಗೊಳ್ಳುವ ಮಲಿನಕಾರಕಗಳ ಪ್ರವೃತ್ತಿಯನ್ನು ಹೀಗೆನ್ನುತ್ತಾರೆ?
  (ಎ) ಬಯೋಪೈರಸಿ
  (ಬಿ) ಬಯೋರಿದಮ್
  (ಸಿ) ಬಯೋಮ್ಯಾಗ್ನಿಫಿಕೇಶನ್
  (ಡಿ) ಬಯೋರೆಮಿಡಿಯೇಶನ್
CORRECT ANSWER

(ಸಿ) ಬಯೋಮ್ಯಾಗ್ನಿಫಿಕೇಶನ್


44. ಪಕ್ಷಿಗಳ ಅಭಯದಾಣವಾಗಿರುವ ‘‘ಪಿಟ್ಟಿದ್ವೀಪ’’ವು ಇದರ ಭಾಗವಾಗಿದೆ ?
  (ಎ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
  (ಬಿ) ಲಕ್ಷದ್ವೀಪ ದ್ವೀಪಗಳು
  (ಸಿ) ದಮನ್ ಮತ್ತು ದಿಯು
  (ಡಿ) ಪುದುಚೇರಿ
CORRECT ANSWER

(ಬಿ) ಲಕ್ಷದ್ವೀಪ ದ್ವೀಪಗಳು


45. ಕೆಳಗಿನವುಗಳಲ್ಲಿ ಯಾವುದು ಭೂಮಿಯ ವಾಯುಮಂಡಲದಲ್ಲಿ ಅತ್ಯಂತ ವಿಪುಲವಾಗಿರುವ ಹಸಿರು ಮನೆ ಅನಿಲ ಆಗಿದೆ ?
  (ಎ) ಕಾರ್ಬನ್ ಡೈಆಕ್ಸೈಡ್
  (ಬಿ) ನೀರಿನ ಆವಿ
  (ಸಿ) ಸಲ್ಫರ್ ಡೈಆಕ್ಸೈಡ್
  (ಡಿ) ಟ್ರೋಪೋಸ್ಫೆರಿಕ್ ಓಜೋನ್
CORRECT ANSWER

(ಬಿ) ನೀರಿನ ಆವಿ


46. ನ್ಯಾಷನಲ್ ಕೌನ್ಸಿಲ್ ಫಾರ್ ರಿವರ್ ಗಂಗಾ (ರಿಜುವಿನೇಶನ್, ಪ್ರೊಟೆಕ್ಷನ್ ಮತ್ತು ಮ್ಯಾನೇಜ್ಮೆಂಟ್) ಪ್ರಾಧಿಕಾರದ ಅಧ್ಯಕ್ಷರು
  (ಎ) ಪ್ರಧಾನಮಂತ್ರಿ
  (ಬಿ) ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಮಂತ್ರಿ
  (ಸಿ) ಗಂಗಾ ನದಿ ಹರಿಯುವ ರಾಜ್ಯಗಳ ಮುಖ್ಯಮಂತ್ರಿಗಳು
  (ಡಿ) ಓರ್ವ ಐ.ಎ.ಎಸ್ ಅಧಿಕಾರಿ
CORRECT ANSWER

(ಎ) ಪ್ರಧಾನಮಂತ್ರಿ


47. ಭಾರತದಲ್ಲಿ ತಯಾರಾದ ಪ್ರಥಮ ದೇಶೀಯ ಜೆಟ್ ಕಾದಾಟ ವಿಮಾನದ ಹೆಸರೇನು?
  (ಎ) ಎಲ್.ಸಿ.ಎ. ತೇಜಾಸ್
  (ಬಿ) ಎಚ್ಎಫ್ – 24 ಮಾರುತ್
  (ಸಿ) ಮಿಗ್ 21
  (ಡಿ) ಸುಖೋಯ್ – 30
CORRECT ANSWER

(ಬಿ) ಎಚ್ಎಫ್ – 24 ಮಾರುತ್


48. ದೇಶೀಯವಾಗಿ ತಯಾರಿಸಲ್ಪಟ್ಟ ಭಾರತದ ಪ್ರಥಮ ಹೆಲಿಕಾಪ್ಟರ್ ನ ಹೆಸರು?
  (ಎ) ಧ್ರುವ್
  (ಬಿ) ರೋಹಿಣಿ
  (ಸಿ) ಚೀತಾ
  (ಡಿ) ಚೇತಕ್
CORRECT ANSWER

(ಎ) ಧ್ರುವ್


49. ‘‘ದಂಗಲ್’’ ಚಲನಚಿತ್ರವು ಯಾವ ಭಾರತೀಯ ಕುಸ್ತಿಪಟುವಿನ ಸ್ವರ್ಣಪದಕ ವಿಜಯದ ನಿಜ ಜೀವನವನ್ನು ಆಧರಿಸಿದೆ?
  (ಎ) ಗೀತಾ ಫೋಗಾಟ್
  (ಬಿ) ಸಾಕ್ಷಿ ಮಲಿಕ್
  (ಸಿ) ಸುನಿಲ್ ಕುಮಾರ್
  (ಡಿ) ಯೋಗೇಶ್ವರ್ ದತ್ತ್
CORRECT ANSWER

(ಎ) ಗೀತಾ ಫೋಗಾಟ್


50. ‘‘ಭಾಗ್ ಮಿಲ್ಕಾ ಭಾಗ್’’ ಚಲನಚಿತ್ರವು ಮಿಲ್ಕಾಸಿಂಗ್ ನ ಮೇಲೆ ಆಧರಿಸಿದೆ. ಆತನಿಗೆ ನೀಡಲ್ಪಟ್ಟ ಜನಪ್ರಿಯ ಉಪನಾಮ ಏನು?
  (ಎ) ಜಿಗಿಯುವ ಜಾಟ್
  (ಬಿ) ಹಾರಾಡುವ ಸಿಖ್
  (ಸಿ) ಧುಮ್ಮುಕ್ಕುವ ಭಾರತೀಯ
  (ಡಿ) ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
CORRECT ANSWER

(ಬಿ) ಹಾರಾಡುವ ಸಿಖ್


51. ‘‘ಬೋಲಕ್-ಆಟ್’’ ಮತ್ತು ‘’ಉಮ್ಮಟ್ಟ್-ಆಟ್’’ ಈ ಎರಡು ಸಾಂಪ್ರದಾಯಿಕ ನೃತ್ಯಗಳು ಕರ್ನಾಟಕದ ಯಾವ ಜಿಲ್ಲೆಯವುಗಳಾಗಿವೆ?
  (ಎ) ಕೊಡಗು
  (ಬಿ) ಬಳ್ಳಾರಿ
  (ಸಿ) ವಿಜಯಪುರ
  (ಡಿ) ಕಲಬುರಗಿ
CORRECT ANSWER

(ಎ) ಕೊಡಗು


52. ತಾಲಿಬಾನ್ ಸಮರಾಸಕ್ತ ದಂಗೆಗೋರ ತಂಡವು ಕೆಳಗಿನವುಗಳಲ್ಲಿ ಯಾವ ದೇಶದ್ದು?
  (ಎ) ಆಫಘಾನಿಸ್ಥಾನ್
  (ಬಿ) ಇರಾನ್
  (ಸಿ) ಇರಾಕ್
  (ಡಿ) ಸಿರಿಯಾ
CORRECT ANSWER

(ಎ) ಆಫಘಾನಿಸ್ಥಾನ್


53. ‘‘ಡೋಕ್ಲಮ್’’ ಪ್ರಕರಣವು ಯಾವ ಎರಡು ದೇಶಗಳ ನಡುವಣ ಗಡಿ ವಿವಾದವಾಗಿತ್ತು?
  (ಎ) ಭಾರತ ಮತ್ತು ಪಾಕಿಸ್ತಾನ
  (ಬಿ) ಭಾರತ ಮತ್ತು ನೇಪಾಳ
  (ಸಿ) ಭಾರತ ಮತ್ತು ಚೀನಾ
  (ಡಿ) ಭಾರತ ಮತ್ತು ಮ್ಯಾನ್ಮರ್
CORRECT ANSWER

(ಸಿ) ಭಾರತ ಮತ್ತು ಚೀನಾ


54. ನೈರೋಬಿ ನಗರವು ಯಾವ ದೇಶದ ರಾಜಧಾನಿಯಾಗಿದೆ ?
  (ಎ) ಕೀನ್ಯಾ
  (ಬಿ) ನೈಜೀರಿಯಾ
  (ಸಿ) ಚಡ್
  (ಡಿ) ಜಿಂಬಾಬ್ವೆ
CORRECT ANSWER

(ಎ) ಕೀನ್ಯಾ


55. ಯಾವ ಕರಕಶಲ ಕಲೆಗೆ ಕರ್ನಾಟಕದ ಬೀದರ್ ಜಿಲ್ಲೆ ತವರು?
  (ಎ) ಬಿದ್ರಿ ಲೋಹ ಕರಕುಶಲ ಕೆಲಸ
  (ಬಿ) ಫಾರುಕ್ಖಾಬಾದ್ ಗಾಜು ಕೆಲಸ
  (ಸಿ) ಸರಿಗೆ ಅಲಂಕಾರ ಕೆಲಸ
  (ಡಿ) ಸೀರೆಗಳಲ್ಲಿ ಗೋಟ ಕೆಲಸ
CORRECT ANSWER

(ಎ) ಬಿದ್ರಿ ಲೋಹ ಕರಕುಶಲ ಕೆಲಸ


56. ಕರ್ನಾಟಕದ ಯಾವ ನಗರದಲ್ಲಿ ಸುಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನವಿದೆ?
  (ಎ) ಮೈಸೂರು
  (ಬಿ) ಹಾಸನ
  (ಸಿ) ಮಂಗಳೂರು
  (ಡಿ) ಬೆಳಗಾವಿ
CORRECT ANSWER

(ಎ) ಮೈಸೂರು


57. ಯಾವ ನಗರವು ಬೋಳಾರದ ಮಂಗಳಾ ದೇವಿಯ ಸೂಚಕವಾಗಿ ಹೆಸರಿಸಲ್ಪಟ್ಟಿದೆ?
  (ಎ) ಮಂತ್ರಾಲಯ
  (ಬಿ) ಉಡುಪಿ
  (ಸಿ) ಮಂಗಳೂರು
  (ಡಿ) ಬೆಂಗಳೂರು
CORRECT ANSWER

(ಸಿ) ಮಂಗಳೂರು


58. ಮೊದಲು ವಾತಾಪಿ ಎಂದು ಕರೆಯಲ್ಪಡುತ್ತಿದ್ದ ಯಾವ ನಗರವು ಚಾಲುಕ್ಯ ರಾಜವಂಶದಿಂದ ನಿರ್ಮಿಸಲ್ಪಟ್ಟ ಒಂದು ಗುಹೆ ದೇವಾಲಯ ಸಂಕೀರ್ಣಕ್ಕೆ ತವರಾಗಿದೆ?
  (ಎ) ಪಟ್ಟದಕಲ್ಲು
  (ಬಿ) ಐಹೊಳೆ
  (ಸಿ) ಬಾದಾಮಿ
  (ಡಿ) ಜಮಖಂಡಿ
CORRECT ANSWER

(ಸಿ) ಬಾದಾಮಿ


59. ಕರ್ನಾಟಕದ ಯಾವ ದೇವಾಲಯ ನಗರಿಯಲ್ಲಿ ಪ್ರಸಿದ್ಧ ವೈರಮುಡಿ ಬ್ರಹ್ಮೋತ್ಸವವು ಪ್ರತಿ ವರ್ಷವೂ ನಡೆಸಲ್ಪಡುತ್ತದೆ ?
  (ಎ) ಶ್ರೀರಂಗಪಟ್ಟಣ
  (ಬಿ) ಶೃಂಗೇರಿ
  (ಸಿ) ಮೇಲುಕೋಟೆ
  (ಡಿ) ಧರ್ಮಸ್ಥಳ
CORRECT ANSWER

(ಸಿ) ಮೇಲುಕೋಟೆ


60. ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದಲ್ಲಿರುವ ಚಿನ್ನದ ಗಣಿಯಾಗಿದೆ?
  (ಎ) ಪನ್ನಾ
  (ಬಿ) ಗೋಲ್ಕೊಂಡ
  (ಸಿ) ಹಟ್ಟಿ
  (ಡಿ) ದೇವಘಡ
CORRECT ANSWER

(ಸಿ) ಹಟ್ಟಿ


61. ಕಳೆದ ಬಾರಿಯ ಒಲಿಂಪಿಕ್ಸ್, 2016 ಯಾವ ನಗರದಲ್ಲಿ ನಡೆಸಲ್ಪಟ್ಟಿತು?
  (ಎ) ದೆಹಲಿ
  (ಬಿ) ಲಂಡನ್
  (ಸಿ) ಬೀಜಿಂಗ್
  (ಡಿ) ರಿಯೋ ಡಿ ಜನೇರೊ
CORRECT ANSWER

(ಡಿ) ರಿಯೋ ಡಿ ಜನೇರೊ


62. ಈ ಅವಧಿಯ ನಡುವೆ ಎರಡನೆ ಜಾಗತಿಕ ಯುದ್ಧ ನಡೆಯಿತು ?
  (ಎ) 1914-1918
  (ಬಿ) 1923-1928
  (ಸಿ) 1939-1945
  (ಡಿ) 1945-1991
CORRECT ANSWER

(ಸಿ) 1939-1945


63. ಪ್ರಥಮ ಭಾರತೀಯ ಉಪಗ್ರಹವು ಯಾವ ಪ್ರವರ್ತಕ ಭಾರತೀಯ ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞ ಮತ್ತು ಭೌತವಿಜ್ಞಾನಿಯ ಸೂಚಕವಾಗಿ ಹೆಸರಿಸಲ್ಪಟ್ಟಿದೆ?
  (ಎ) ಭಾಸ್ಕರಾಚಾರ್ಯ
  (ಬಿ) ಆರ್ಯಭಟ
  (ಸಿ) ಬುದ್ಧಾಯಣ
  (ಡಿ) ಪಾಣಿನಿ
CORRECT ANSWER

(ಬಿ) ಆರ್ಯಭಟ


64. ವಿಶ್ವದ ಪ್ರಥಮ ನ್ಯೂಕ್ಲಿಯರ್ ಬಾಂಬು ಅಣು ಭೌತವಿಜ್ಞಾನದ ಯಾವ ಸಂಗತಿಯನ್ನು ಆಧರಿಸಲ್ಪಟ್ಟಿತ್ತು ?
  (ಎ) ಭಾರ ಲೋಹಗಳ ನ್ಯೂಕ್ಲಿಯರ್ ವಿದಳನ
  (ಬಿ) ಲಘು ಧಾತುಗಳ ನ್ಯೂಕ್ಲಿಯರ್ ದ್ರಾವಣ
  (ಸಿ) ಅಣು ಧಾತುಗಳಲ್ಲಿ ಪ್ಲಾಸ್ಮಸೃಷ್ಟಿ
  (ಡಿ) ಹೈಡ್ರೋಕಾರ್ಬನ್ ದಹನ
CORRECT ANSWER

(ಎ) ಭಾರ ಲೋಹಗಳ ನ್ಯೂಕ್ಲಿಯರ್ ವಿದಳನ


65. ಕೆಳಗಿನವುಗಳಲ್ಲಿ ಯಾವುದು ಭೂಮಿಯ ವಾಯುಮಂಡಲದ ಭಾಗವಾಗಿರುವುದಿಲ್ಲ?
  (ಎ) ಹವಾಗೋಳ
  (ಬಿ) ವಾಯುಮಂಡಲದ ಸ್ತರ
  (ಸಿ) ಮಧ್ಯಗೋಳ
  (ಡಿ) ಭೂವಲಯ
CORRECT ANSWER

(ಡಿ) ಭೂವಲಯ


66. ಸ್ಟೀಲ್ ಈ ಧಾತುವನ್ನು ಹೊಂದಿರುವುದಿಲ್ಲ?
  (ಎ) ಉಕ್ಕು
  (ಬಿ) ಮ್ಯಾಂಗನೀಸ್
  (ಸಿ) ಕಾರ್ಬನ್
  (ಡಿ) ಯುರೇನಿಯಂ
CORRECT ANSWER

(ಡಿ) ಯುರೇನಿಯಂ


67. ಕೆಳಗಿನವುಗಳಲ್ಲಿ ಯಾವುದು ಒಂದು ವಿಕರಣಶೀಲ ಘಟಕವಾಗಿದೆ?
  (ಎ) ಸತು
  (ಬಿ) ಕ್ರೋಮಿಯಂ
  (ಸಿ) ವನೇಡಿಯಂ
  (ಡಿ) ಪ್ಲುಟೋನಿಯಂ
CORRECT ANSWER

(ಡಿ) ಪ್ಲುಟೋನಿಯಂ


68. ತಂದೆಗೆ ಮಗ ರೋನಿತ್ ಗಿಂತ ಮೂರು ಪಟ್ಟು ವಯಸ್ಸಾಗಿದೆ. 8 ವರ್ಷಗಳ ನಂತರ ಆತ ರೋನಿತ್ ಗಿಂತ ಎರಡೂವರೆ ಪಟ್ಟು ವಯಸ್ಸಿನವನಾಗುತ್ತಾನೆ ಮತ್ತು 8 ವರ್ಷಗಳ ನಂತರ, ಆತ ರೋನಿತ್ ಗಿಂತ ಎಷ್ಟು ಪಟ್ಟು ವಯಸ್ಸಿನವನಾಗುತ್ತಾನೆ?
  (ಎ) 3 ಪಟ್ಟು
  (ಬಿ) 2 ಪಟ್ಟು
  (ಸಿ) 4 ಪಟ್ಟು
  (ಡಿ) 1.5 ಪಟ್ಟು
CORRECT ANSWER

(ಬಿ) 2 ಪಟ್ಟು


69. ಸಂಖ್ಯೆಯೊಂದರ ನಾಲ್ಕೆನೆಯ ಒಂದು ಭಾಗದ ಮೂರನೆಯ ಒಂದು ಭಾಗ 15 ಆದರಲ್ಲಿ ಆ ಸಂಖ್ಯೆಯ ಹತ್ತನೆಯ ನಾಲ್ಕು ಭಾಗ ಎಷ್ಟಾಗುತ್ತದೆ?
  (ಎ) 54
  (ಬಿ) 68
  (ಸಿ) 72
  (ಡಿ) 90
CORRECT ANSWER

(ಸಿ) 72


70. ‘‘ಎ’’ ಮತ್ತು ‘‘ಬಿ’’ ಪೈಪುಗಳು ಟ್ಯಾಂಕೊಂದನ್ನು ಅನುಕ್ರಮವಾಗಿ 5 ಮತ್ತು 6 ಗಂಟೆಗಳಲ್ಲಿ ಭರ್ತಿ ಮಾಡಬಲ್ಲವು. ಪೈಪು ‘‘ಸಿ’’ ಇದನ್ನು 12 ಗಂಟೆಗಳಲ್ಲಿ ಖಾಲಿ ಮಾಡಬಲ್ಲದು. ಈ ಎಲ್ಲಾ 3 ಪೈಪುಗಳನ್ನು ಒಟ್ಟಾಗಿ ತೆರೆದರೆ, ಟ್ಯಾಂಕ್ ಭರ್ತಿಗೊಳ್ಳಲು ಬೇಕಾಗುವ ಸಮಯ?
  (ಎ) 50/19 ಗಂಟೆಗಳು
  (ಬಿ) 60/17 ಗಂಟೆಗಳು
  (ಸಿ) 70/13 ಗಂಟೆಗಳು
  (ಡಿ) 80/29 ಗಂಟೆಗಳು
CORRECT ANSWER

(ಬಿ) 60/17 ಗಂಟೆಗಳು


71. ಹಣವೊಂದರ ಮೊತ್ತವು ಸರಳ ಬಡ್ಡಿ ದರದಲ್ಲಿ 3 ವರ್ಷಗಳಲ್ಲಿ ರೂ. 815 ಮತ್ತು 4 ವರ್ಷಗಳಲ್ಲಿ ರೂ. 854 ಆಗುತ್ತದೆ. ಹಣದ ಮೊತ್ತವು?
  (ಎ) ರೂ. 650
  (ಬಿ) ರೂ. 690
  (ಸಿ) ರೂ. 698
  (ಡಿ) ರೂ. 700
CORRECT ANSWER

(ಸಿ) ರೂ. 698


72. 66 ಘನ ಸೆಂಟಿಮೀಟರುಗಳ ಬೆಳ್ಳಿ 1 ಮಿಲಿಮೀಟರ್ ವ್ಯಾಸವಿರುವ ಒಂದು ವಯರ್ ಆಗಿ ಎಳೆಯಲ್ಪಡುತ್ತದೆ. ವಯರ್ನ ಉದ್ದ ಮೀಟರುಗಳಲ್ಲಿ?
  (ಎ) 84 ಮೀಟರುಗಳು
  (ಬಿ) 90 ಮೀಟರುಗಳು
  (ಸಿ) 136 ಮೀಟರುಗಳು
  (ಡಿ) 336 ಮೀಟರುಗಳು
CORRECT ANSWER

(ಎ) 84 ಮೀಟರುಗಳು


73. ಅತ್ತಿವೇರಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
  (ಎ) ಚಾಮರಾಜನಗರ
  (ಬಿ) ಉತ್ತರಕನ್ನಡ
  (ಸಿ) ಮೈಸೂರು
  (ಡಿ) ಶಿವಮೊಗ್ಗ
CORRECT ANSWER

(ಬಿ) ಉತ್ತರಕನ್ನಡ


74. ‘‘ಓಖಿ’’ ಚಂಡಮಾರುತದ ಬಗ್ಗೆ ಈ ಸಂಗತಿಗಳನ್ನು ಪರಿಗಣಿಸಿರಿ.
  1. ‘‘ಓಖಿ’’ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಉತ್ಪತ್ತಿಗೊಂಡು ಬಂಗಾಳಕೊಲ್ಲಿಗೆ ಚಲಿಸಿತು.
  2. ಅರಬ್ಬಿ ಸಮುದ್ರವು ಬಂಗಾಳಕೊಲ್ಲಿಗಿಂತ ಚಂಡಮಾರುಗಳಿಗೆ ಹೆಚ್ಚು ಪ್ರವೃತ್ತಿ ಹೊಂದಿದೆ.
  ಈ ಹೇಳಿಕೆಗಳಲ್ಲಿ ಯಾವುದು ಸರಿ?
  (ಎ) 1 ಮಾತ್ರ
  (ಬಿ) 2 ಮಾತ್ರ
  (ಸಿ) 1 ಮತ್ತು 2 ಎರಡೂ
  (ಡಿ) 1 ಸಹ ಅಲ್ಲ, 2 ಸಹ ಅಲ್ಲ
CORRECT ANSWER

(ಡಿ) 1 ಸಹ ಅಲ್ಲ, 2 ಸಹ ಅಲ್ಲ


75. ಮಾರಿ ಕಣಿವೆ ಎಂದು ಜನಪ್ರಿಯವಾಗಿ ಪ್ರಸಿದ್ಧವಾಗಿರುವ ವಾಣಿ ವಿಲಾಸ ಸಾಗರ ಅಣೆಕಟ್ಟು ಯಾವ ನದಿಯ ಮೇಲಿದೆ ?
  (ಎ) ನೇತ್ರಾವತಿ
  (ಬಿ) ವೇದಾವತಿ
  (ಸಿ) ಕಾಳಿ
  (ಡಿ) ಶರಾವತಿ
CORRECT ANSWER

(ಬಿ) ವೇದಾವತಿ


76. ಕೆಳಗಿನ ಪ್ರದೇಶಗಳಲ್ಲಿ ಯಾವುದು ‘ಅಶ್ವ ಪ್ರದೇಶಗಳು’’ ಎಂದು ಪರಿಚಿತವಾಗಿದೆ?
  (ಎ) ಇಕ್ವೆಟೋರಿಯಲ್ ಕಡಿಮೆ ಒತ್ತಡದ ವಲಯ
  (ಬಿ) ಸಬ್ ಟ್ರಾಪಿಕಲ್ ಏರು ಒತ್ತಡದ ವಲಯ
  (ಸಿ) ಸಬ್ ಪೋಲಾರ್ (ಧ್ರುವೀಯ) ಕಡಿಮೆ ಒತ್ತಡ ವಲಯ
  (ಡಿ) ಧ್ರುವೀಯ ವಲಯಗಳು
CORRECT ANSWER

(ಬಿ) ಸಬ್ ಟ್ರಾಪಿಕಲ್ ಏರು ಒತ್ತಡದ ವಲಯ


77. ತುಬಾಚಿ-ಬಬ್ಲೇಶ್ವರ್ ಏತ ನೀರಾವರಿ ಯೋಜನೆ ಯಾವ ನದಿ ದಂಡೆಯ ಮೇಲಿದೆ?
  (ಎ) ಮಹಾದಾಯಿ
  (ಬಿ) ಕಾವೇರಿ
  (ಸಿ) ಕೃಷ್ಣಾ
  (ಡಿ) ತುಂಗಭದ್ರಾ ನದಿ
CORRECT ANSWER

(ಸಿ) ಕೃಷ್ಣಾ


78. ಕೆಳಗಿನ ರಿಟ್ ಗಳಲ್ಲಿ ಯಾವುದು ಅಕ್ಷರಶಃ ‘‘ನಿನ್ನ ಅಧಿಕಾರ ಏನು?’’ ಎಂಬ ಅರ್ಥ ನೀಡುತ್ತದೆ?
  (ಎ) ಹೇಬಿಯಸ್ ಕಾರ್ಪಸ್
  (ಬಿ) ಮ್ಯಾಂಡಮಸ್
  (ಸಿ) ಕ್ವೋವಾರಂಟೋ
  (ಡಿ) ಸರ್ಷಿಯೋರರಿ
CORRECT ANSWER

(ಸಿ) ಕ್ವೋವಾರಂಟೋ


79. ಭಾರತದ ಸಂವಿಧಾನದ 123ನೆಯ ವಿಧಿಯು ಇದಕ್ಕೆ ಅನುವು ಮಾಡಿಕೊಡುತ್ತದೆ?
  (ಎ) ರಾಷ್ಟ್ರಾಧ್ಯಕ್ಷರಿಗೆ ಅಧಿಕಾರ ನೀಡುವ ಸುಗ್ರೀವಾಜ್ಞೆ
  (ಬಿ) ಸರ್ವೋಚ್ಚ ನ್ಯಾಯಾಲಯದ ಸಲಹಾತ್ಮಕ ನ್ಯಾಯವ್ಯಾಪ್ತಿ
  (ಸಿ) ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ
  (ಡಿ) ದೇಶದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ನಡೆಸಲು ಒಂದು ಚುನಾವಣಾ ಆಯೋಗ
CORRECT ANSWER

(ಎ) ರಾಷ್ಟ್ರಾಧ್ಯಕ್ಷರಿಗೆ ಅಧಿಕಾರ ನೀಡುವ ಸುಗ್ರೀವಾಜ್ಞೆ


80. ಭಾರತದ ಪ್ರಥಮ ಚುನಾವಣಾ ಆಯುಕ್ತರು ಯಾರಾಗಿದ್ದರು?
  (ಎ) ಕೆ.ವಿ.ಕೆ. ಸುಂದರಮ್
  (ಬಿ) ಎಸ್.ಪಿ. ಸೆನ್ವರ್ಮ
  (ಸಿ) ಸುಕುಮಾರ್ ಸೇನ್
  (ಡಿ) ರಾಜಮನ್ನಾರ್
CORRECT ANSWER

(ಸಿ) ಸುಕುಮಾರ್ ಸೇನ್


81. ಕೆಳಗಿನವುಗಳಲ್ಲಿ ಯಾವುದು ಸಂವಿಧಾನೀಯ ಸಂಸ್ಥೆ ಆಗಿರುವುದಿಲ್ಲ?
  (ಎ) ಚುನಾವಣಾ ಆಯೋಗ
  (ಬಿ) ಕೇಂದ್ರ ಸಾರ್ವಜನಿಕ ಸೇವಾ ಆಯೋಗ
  (ಸಿ) ನೀತಿ ಆಯೋಗ
  (ಡಿ) ಹಣಕಾಸು ಆಯೋಗ
CORRECT ANSWER

(ಸಿ) ನೀತಿ ಆಯೋಗ


82. ಸಂವಿಧಾನದ 5ನೆಯ ಮತ್ತು 6ನೆಯ ಪರಿಚ್ಛೇದಗಳು ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿವೆ ?
  (ಎ) ಪರಿಶಿಷ್ಟ ಪಂಗಡ ಪ್ರಾಬಲ್ಯವಿರುವ ಪ್ರದೇಶಗಳ ಆಡಳಿತ
  (ಬಿ) ರಾಜ್ಯಗಳ ಗಡಿಗಳು
  (ಸಿ) ವಿಷಯಗಳ ಕೇಂದ್ರಪಟ್ಟಿ
  (ಡಿ) ಅಧಿಕೃತ ಭಾಷೆಗಳು
CORRECT ANSWER

(ಎ) ಪರಿಶಿಷ್ಟ ಪಂಗಡ ಪ್ರಾಬಲ್ಯವಿರುವ ಪ್ರದೇಶಗಳ ಆಡಳಿತ


83. ಭಾರತದ ಚುನಾವಣಾ ಆಯೋಗದ ಮಾದರಿ ನೀತಿಸಂಹಿತೆಯನುಸಾರ ಮತದಾನ ನಡೆಸುವುದಕ್ಕೆ ಎಷ್ಟು ಗಂಟೆಗಳ ಮೊದಲು ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆ ನಡೆಸುವಂತಿಲ್ಲ?
  (ಎ) 12
  (ಬಿ) 24
  (ಸಿ) 36
  (ಡಿ) 48
CORRECT ANSWER

(ಡಿ) 48


84. ಕೆಳಗಿನ ತಾಣಗಳಲ್ಲಿ ಯಾವುದು ಸಿಂಧೂ ಕಣಿವೆ ನಾಗರೀಕತೆಯ ಜನರಿಗೆ ಉಬ್ಬರವಿಳಿತಗಳ (ಋತುಗಳ) ಬಗ್ಗೆ ತಿಳಿದಿತ್ತು ಎಂಬುದಕ್ಕೆ ಪುರಾವೆ ಒದಗಿಸುತ್ತದೆ?
  (ಎ) ಸುಕ್ತಗೆಂಡೊರ್
  (ಬಿ) ಸುರ್ಕೋಟ್ಡ
  (ಸಿ) ಲೋಥಾಲ್
  (ಡಿ) ಕಾಲಿಬಂಗನ್
CORRECT ANSWER

(ಸಿ) ಲೋಥಾಲ್


85. ‘‘ಗುಪ್ತ ಸಾಹಿತ್ಯಿಕ ಪುನರುಜ್ಜೀವನ’’ದ ಸ್ವರ್ಣಯುಗ ಯಾವ ರಾಜನ ಆಡಳಿತಾವಧಿಯಲ್ಲಿ ಇತ್ತು ಎನ್ನಲಾಗಿದೆ?
  (ಎ) ಕುಮಾರಗುಪ್ತ
  (ಬಿ) ಚಂದ್ರಗುಪ್ತ – I
  (ಸಿ) ಚಂದ್ರಗುಪ್ತ – II
  (ಡಿ) ಸ್ಕಂದಗುಪ್ತ
CORRECT ANSWER

(ಸಿ) ಚಂದ್ರಗುಪ್ತ – II


86. ಯಾವ ಸುಲ್ತಾನನು ಆಗ್ರಾ ನಗರಕ್ಕೆ ಅಡಿಪಾಯ ಹಾಕಿದನೆಂದು ನಂಬಲಾಗಿದೆ?
  (ಎ) ಬಹ್ಲೋಲ್ ಲೋದಿ
  (ಬಿ) ಸಿಕಂದರ್ ಲೋದಿ
  (ಸಿ) ಇಬ್ರಾಹಿಂ ಲೋದಿ
  (ಡಿ) ಶೇರ್ ಷಾ ಸೂರಿ
CORRECT ANSWER

(ಬಿ) ಸಿಕಂದರ್ ಲೋದಿ


87. 1931ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕರಾಚಿ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದರ ಮೇಲೆ ಗೊತ್ತುವಳಿಯನ್ನು ಅಂಗೀಕರಿಸಿತು
  (ಎ) ಪೂರ್ಣ ಸ್ವರಾಜ್ಯ
  (ಬಿ) ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ಧೋರಣೆ
  (ಸಿ) ಸ್ವದೇಶಿ
  (ಡಿ) ಭಾರತ ಬಿಟ್ಟು ತೊಲಗಿ ಚಳವಳಿ
CORRECT ANSWER

(ಬಿ) ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ಧೋರಣೆ


88. ಯಾವ ವಕ್ರರೇಖೆಯು ತೆರಿಗೆ ದರಗಳು ಮತ್ತು ಸರಕಾರದಿಂದ ಸಂಗ್ರಹಿಸಲ್ಪಟ್ಟ ತೆರಿಗೆ ಆದಾಯ ನಡುವಿನ ಸಂಬಂಧವನ್ನು ತೋರಿಸುತ್ತದೆ ?
  (ಎ) ಲ್ಯಾಫರ್ ಕರ್ವ್
  (ಬಿ) ಲಾರೆಂಝ್ಸ್ ಕರ್ವ್
  (ಸಿ) ಎಂಜೆಲ್ ಕರ್ವ್
  (ಡಿ) ಕುಝ್ ನೆಟ್ಸ್ ಕರ್ವ್
CORRECT ANSWER

(ಎ) ಲ್ಯಾಫರ್ ಕರ್ವ್


89. ವ್ಯಕ್ತಿಯೋರ್ವನಲ್ಲಿ ಮನೆಮಾಡಿರುವ (ಸಾಕಾರಗೊಂಡ) ಕೌಶಲಗಳನ್ನು ಹೀಗೆನ್ನುತ್ತಾರೆ?
  (ಎ) ಮಾನವ ಬಂಡವಾಳ
  (ಬಿ) ಗರ್ಭೀಕೃತ ಕೌಶಲಗಳು
  (ಸಿ) ಶಾರೀರಿಕ ಬಂಡವಾಳ
  (ಡಿ) ಅನುಭವ ಕೌಶಲಗಳು
CORRECT ANSWER

(ಎ) ಮಾನವ ಬಂಡವಾಳ


90. ವರ್ಷವೊಂದರಲ್ಲಿ ಬಾಹ್ಯ ಜಗತ್ತಿನೊಂದಿಗೆ ಭಾರತದ ಎಲ್ಲಾ ಆರ್ಥಿಕ ವ್ಯವಹಾರಗಳು ಹೀಗೆಂದು ಕರೆಯಲ್ಪಡುತ್ತವೆ?
  (ಎ) ವ್ಯಾಪಾರ ಶಿಲ್ಕು
  (ಬಿ) ಪಾವತಿ ಶಿಲ್ಕು
  (ಸಿ) ವಿದೇಶಿ ವ್ಯಾಪಾರ ಖಾತೆ
  (ಡಿ) ವಿದೇಶಿ ಖಾತೆ
CORRECT ANSWER

(ಬಿ) ಪಾವತಿ ಶಿಲ್ಕು


91. ಯಾವ ದೇಶವು ಪ್ರಪ್ರಥಮ ಅಂತರರಾಷ್ಟ್ರೀಯ ಸೋಲಾರ್ ಅಲಾಯನ್ಸ್ (ISA) ಶೃಂಗಸಭೆಯನ್ನು 2018ರಲ್ಲಿ ನಡೆಸಿಕೊಟ್ಟಿತು?
  (ಎ) ಬಾಂಗ್ಲಾದೇಶ
  (ಬಿ) ಜರ್ಮನಿ
  (ಸಿ) ಭಾರತ
  (ಡಿ) ಫ್ರಾನ್ಸ್
CORRECT ANSWER

(ಸಿ) ಭಾರತ


92. ‘‘ಆಪರೇಷನ್ ಸೇವ್ ಕುರ್ಮ ಮತ್ತು ಆಪರೇಶನ್ ಥಂಡರ್ ಬರ್ಡ್’’ ಇವುಗಳು ಸರಕಾರದಿಂದ ಈ ಉದ್ದೇಶಕ್ಕಾಗಿ ನಡೆಸಲ್ಪಡುವ ಕಾರ್ಯಾಚರಣೆಗಳು
  (ಎ) ವನ್ಯ ಪ್ರಾಣಿಗಳ ವ್ಯಾಪಾರವನ್ನು ನಿಗ್ರಹಿಸುವುದು
  (ಬಿ) ಭಯೋತ್ಪಾದಕರನ್ನು ಗುರಿಯಾಗಿಸುವುದು
  (ಸಿ) ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸುವುದು
  (ಡಿ) ಜನಸಂಖ್ಯೆಯನ್ನು ಕಡಿಮೆಗೊಳಿಸುವುದು
CORRECT ANSWER

(ಎ) ವನ್ಯ ಪ್ರಾಣಿಗಳ ವ್ಯಾಪಾರವನ್ನು ನಿಗ್ರಹಿಸುವುದು


93. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದಿಂದ ಪ್ರಾರಂಭಿಸಲ್ಪಟ್ಟ ಸಮುದಾಯ ಸ್ವಾಮಿತ್ವದ ಸಂರಕ್ಷಿತ ಕುಡಿಯುವ ನೀರು ಸರಬರಾಜು ಕಾರ್ಯಕ್ರಮವನ್ನು ಹೆಸರಿಸಿ.
  (ಎ) ಶುದ್ಧ ಜಲ ಯೋಜನೆ
  (ಬಿ) ಅಟಲ್ ಭುಜಲ್ ಯೋಜನೆ
  (ಸಿ) ನೀರು ಸ್ಕೀಮ್
  (ಡಿ) ಸ್ವಜಲ ಯೋಜನೆ
CORRECT ANSWER

(ಡಿ) ಸ್ವಜಲ ಯೋಜನೆ


94. ಕರ್ನಾಟಕ ಸರಕಾರ ಈ ಉದ್ದೇಶಕ್ಕಾಗಿ ಮಾತೃಪೂರ್ಣ ಯೋಜನೆಯನ್ನು ಅನುಷ್ಠಾನಿಸಿದೆ
  (ಎ) ಗರ್ಭಿಣಿ ಮತ್ತು ಮೊಲೆಯುಣಿಸುತ್ತಿರುವ ಮಹಿಳೆಯರ ಪೌಷ್ಟಿಕತೆ ಮಟ್ಟವನ್ನು ಸುಧಾರಿಸಲು
  (ಬಿ) ಸಾಂಸ್ಥಿಕ ಹೆರಿಗೆಯನ್ನು ಹೆಚ್ಚಿಸಲು
  (ಸಿ) ಮಕ್ಕಳ ಆರೋಗ್ಯವನ್ನು ಸುಧಾರಿಸಲು
  (ಡಿ) ಗರ್ಭನಿರೋಧಕಗಳ ಬಳಕೆಯನ್ನು ಪ್ರೋತ್ಸಾಹಿಸಲು
CORRECT ANSWER

(ಎ) ಗರ್ಭಿಣಿ ಮತ್ತು ಮೊಲೆಯುಣಿಸುತ್ತಿರುವ ಮಹಿಳೆಯರ ಪೌಷ್ಟಿಕತೆ ಮಟ್ಟವನ್ನು ಸುಧಾರಿಸಲು


95. ಗಾಂಧಾರ ಕಲೆಯು ಈ ಕೆಳಗಿನ ಯಾವ ರಾಜವಂಶಕ್ಕೆ ಸಂಬಂಧಿಸಿದೆ?
  (ಎ) ಶಕರು
  (ಬಿ) ಕುಶಾನರು
  (ಸಿ) ಗುಪ್ತರು
  (ಡಿ) ಗ್ರೀಕರು
CORRECT ANSWER

(ಬಿ) ಕುಶಾನರು


96. 2018ರ ಕೇಂದ್ರ ಆಯವ್ಯಯ ಅಂದಾಜು ಪತ್ರದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯು ___________ ಕ್ಕೆ ನಿಗದಿಪಡಿಸಲಾಗುವುದೆಂದು ಘೋಷಿಸಲಾಗಿತ್ತು?
  (ಎ) ಅಸಲು ಬೆಲೆ
  (ಬಿ) 1.5* ಅಸಲು ಬೆಲೆ
  (ಸಿ) ಅಸಲು ಬೆಲೆಯ 50%
  (ಡಿ) ಬೆಳೆಯ ಮಾರುಕಟ್ಟೆ ಬೆಲೆ
CORRECT ANSWER

(ಬಿ) 1.5* ಅಸಲು ಬೆಲೆ


97. ಮೈಸೂರಿನಲ್ಲಿ ನಡೆದ 83ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
  (ಎ) ಲತಾ ರಾಜಶೇಖರ್
  (ಬಿ) ಎನ್.ಆರ್. ನಾಯಕ್
  (ಸಿ) ವೀಣಾ ಶಾಂತೇಶ್ವರ
  (ಡಿ) ಚಂದ್ರಶೇಖರ ಪಾಟೀಲ
CORRECT ANSWER

(ಡಿ) ಚಂದ್ರಶೇಖರ ಪಾಟೀಲ


98. ಕೊಡವ ಭಾಷೆಯ ಪ್ರಥಮ ನಾಟಕಕಾರ ಎಂದು ಯಾರನ್ನು ಗುರುತಿಸಲಾಗಿದೆ?
  (ಎ) ಅಪ್ಪಚ್ಚ ಕವಿ
  (ಬಿ) ಕುವೆಂಪು
  (ಸಿ) ಎನ್. ಚಿನಪ್ಪ
  (ಡಿ) ಬಿ.ಡಿ.ಗಣಪತಿ
CORRECT ANSWER

(ಎ) ಅಪ್ಪಚ್ಚ ಕವಿ


99. ‘‘ಭಾರತ ಸಿಂಧು ರಶ್ಮಿ’’ ಇವರು ಬರೆದ ಮಹಾಕಾವ್ಯ?
  (ಎ) ವಿ.ಕೆ. ಗೋಕಾಕ್
  (ಬಿ) ಶಿವರಾಮ ಕಾರಂತ
  (ಸಿ) ಮಾಸ್ತಿ ವೆಂಕಟೇಶ ಅಯ್ಯಾಂಗಾರ್
  (ಡಿ) ಗಿರೀಶ್ ಕಾರ್ನಾಡ್
CORRECT ANSWER

(ಎ) ವಿ.ಕೆ. ಗೋಕಾಕ್


100. 2017ರ ಪ್ರತಿಷ್ಠಿತ ಪಂಪ ಪ್ರಶಸ್ತಿಗಾಗಿ ಕರ್ನಾಟಕ ಸರಕಾರದಿಂದ ಯಾರು ಆಯ್ಕೆಗೊಂಡಿದ್ದಾರೆ?
  (ಎ) ಕೆ.ಗೋಕುಲನಾಥ
  (ಬಿ) ಕೆ.ಎಸ್.ನಿಸಾರ್ ಅಹಮದ್
  (ಸಿ) ವೀಣಾ ಶಾಂತೇಶ್ವರ
  (ಡಿ) ಜಿ. ಮಾದೇಗೌಡ
CORRECT ANSWER

(ಬಿ) ಕೆ.ಎಸ್.ನಿಸಾರ್ ಅಹಮದ್

Related Posts

Police Constable Previous Paper 20-09-2020

Police Constable Previous Paper 18-10-2020

KSP-Police Constable (Civil) 17-11-2019 question paper

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.