KPSC GROUP ‘C’ (DRUG ANALYST (BOTANY & CHEMISTRY) IN THE DEPT. OF AYUSH) ಪತ್ರಿಕೆ-I ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆ
|
1. | ಕೆಳಗಿನ ಯಾವ ತಿದ್ದುಪಡಿಗಳು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ಎರಡು ಪ್ರತ್ಯೇಕ ಮತ್ತು ಸ್ವತಂತ್ರ ಆಯೋಗಗಳಾಗಿ ವಿಭಜಿಸುತ್ತವೆ? |
|
| (1) | 86 ನೇ ತಿದ್ದುಪಡಿ ಕಾಯಿದೆ |
| (2) | 85 ನೇ ತಿದ್ದುಪಡಿ ಕಾಯಿದೆ |
| (3) | 89 ನೇ ತಿದ್ದುಪಡಿ ಕಾಯಿದೆ |
| (4) | 90 ನೇ ತಿದ್ದುಪಡಿ ಕಾಯಿದೆ |
CORRECT ANSWER
(3) 89 ನೇ ತಿದ್ದುಪಡಿ ಕಾಯಿದೆ
|
2. | ಭಾರತದಲ್ಲಿ ರಾಜ್ಯಶಾಸಕಾಂಗದ ವಿಧಾನ ಪರಿಷತ್ತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ?
|
| (a) | ವಿಧಾನ ಪರಿಷತ್ತಿನ ಒಟ್ಟು ಸದಸ್ಯರಲ್ಲಿ 1/3 ರಷ್ಟು ಮಂದಿಯನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಆರಿಸುತ್ತವೆ |
| (b) | ವಿಧಾನಪರಿಷತ್ತು ಶಾಶ್ವತ ಸದನವಾಗಿದ್ದು ಅದರ 2/3 ರಷ್ಟು ಸದಸ್ಯರು ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ |
| (c) | ವಿಧಾನ ಪರಿಷತ್ತನ್ನು ಸ್ಥಾಪಿಸಲು ಅಥವಾ ರದ್ದುಪಡಿಸಲು ಅಲ್ಲಿನ ವಿಧಾನಸಭೆಯಿಂದ 2/3ರಷ್ಟು ಬಹುಮತದಿಂದ ಒಂದು ಗೊತ್ತುವಳಿಯು ಮೊದಲು ಪಾಸಾಗಬೇಕು |
| | ಕೆಳಗಿನ ಕೋಡುಗಳನ್ನು ಬಳಸಿ ಸರಿಯಾದ ಹೇಳಿಕೆಗಳನ್ನು ಆರಿಸಿ. |
|
| (1) | (a) ಮತ್ತು (b) ಮಾತ್ರ |
| (2) | (a) ಮತ್ತು (c) ಮಾತ್ರ |
| (3) | (b) ಮತ್ತು (c) ಮಾತ್ರ |
| (4) | (a), (b) ಮತ್ತು (c) ಮಾತ್ರ |
CORRECT ANSWER
(2) (a) ಮತ್ತು (c) ಮಾತ್ರ
|
3. | ಪಟ್ಟಿ-I ಅನ್ನು ಪಟ್ಟಿ-II ನೊಂದಿಗೆ ಹೊಂದಿಸಿ ಮತ್ತು ಪಟ್ಟಿಗಳ ಕೆಳಗೆ ನೀಡಿರುವ ಕೋಡ್‌ಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ. |
| | ಪಟ್ಟಿ-I | | ಪಟ್ಟಿ-II |
| (A) | ಕ್ವಾಂಟಮ್ ಮೆರುಯಿಟ್ | (i) | ಎರಡೂ ಪಕ್ಷಗಳ ಒಂದೇ ವಿಷಯವನ್ನು ಒಂದೇ ಅರ್ಥದಲ್ಲಿ ಒಪ್ಪಿಕೊಂಡಿರಬೇಕು |
| (B) | ಕ್ವಲ್ಯಾಟರಲ್ ಟ್ರಾನ್ಸಾಕ್ಷನ್ಸ್ | (ii) | ಮುಖ್ಯ ಒಪ್ಪಂದಕ್ಕೆ ವಹಿವಾಟು ಅಂಗ ಸಂಸ್ಥೆ |
| (C) | ಕಾನ್ಸೆನ್ಸೆಸ್ ಆಡ್[ad] ಐಡೆಮ್ | (iii) | ಮಾಡಿದ ಕೆಲಸಕ್ಕೆ ಅನುಗುಣವಾಗಿ ಪರಿಹಾರ |
| (D) | ವಾಯ್ಡ್ ಅಬ್ಇನಿಷಿಯೋ | (iv) | ಪ್ರಾರಂಭದಿಂದಲೇ ನಿರರ್ಥಕ |
| ಕೋಡುಗಳು : |
| |
|
| | (A) | (B) | (C) | (D) |
| (1) | (iv) | (ii) | (i) | (iii) |
| (2) | (iii) | (i) | (ii) | (iv) |
| (3) | (iv) | (i) | (ii) | (iii) |
| (4) | (iii) | (ii) | (i) | (iv) |
CORRECT ANSWER
(4) (iii), (ii), (i), (iv)
|
4. | ನೀತಿ ಆಯೋಗ ರೂಪು ಗೊಂಡಿದ್ದು |
|
| (1) | ಜನವರಿ 1, 2016 |
| (2) | ಜನವರಿ 1, 2017 |
| (3) | ಜನವರಿ 1, 2015 |
| (4) | ಜನವರಿ 1, 2018 |
CORRECT ANSWER
(3) ಜನವರಿ 1, 2015
|
5. | ‘‘ಸೂಕ್ಷ್ಮ ಹಣಕಾಸಿನ ಪಿತಾಮಹ” ಎಂದು ಬಿರುದು ಪಡೆದ ಅರ್ಥಶಾಸ್ತ್ರಜ್ಞ |
|
| (1) | ಮೊಹಮದ್ ಯುನಸ್ |
| (2) | ಅಮರ್ತ್ಯ ಸೇನ್ |
| (3) | ಜಗದೀಶ್ ಭಗವತಿ |
| (4) | ಬಿ.ಬಿ. ಭಟ್ಟಾಚಾರ್ಯ |
CORRECT ANSWER
(1) ಮೊಹಮದ್ ಯುನಸ್
|
6. | ‘ಸುಸ್ಥಿರ’ ಅಭಿವೃದ್ಧಿಯ ನೀಲಿ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಪಡೆಯು ಭಾರತ ಮತ್ತು ಯಾವ ದೇಶದ ಸಹಯೋಗ ಹೊಂದಿದೆ? |
|
| (1) | ಸ್ವಿಟ್ಜರ್ಲೆಂಡ್ |
| (2) | ನಾರ್ವೆ |
| (3) | ಸ್ವೀಡನ್ |
| (4) | ಫ್ರಾನ್ಸ್ |
CORRECT ANSWER
(2) ನಾರ್ವೆ
|
7. | ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ಯಾವ ಅಂತರಾಷ್ಟ್ರೀಯ ಸಂಸ್ಥೆಯು 500 ದಶಲಕ್ಷ ಡಾಲರ್ ಸಾಲ ನೀಡಲು ಅನುಮೋದಿಸಿದೆ? |
|
| (1) | ದಿ ನ್ಯೂ ಡೆವಲೆಪ್ಮೆಂಟ್ ಬ್ಯಾಂಕ್ |
| (2) | ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ |
| (3) | ಏಷಿಯನ್ ಡೆವಲೆಪಮೆಂಟ್ ಬ್ಯಾಂಕ್ |
| (4) | ಯುನೈಟೆಡ್ ನೇಷನ್ಸ್ ಅರ್ಗನೈಜೇಶನ್ |
CORRECT ANSWER
(3) ಏಷಿಯನ್ ಡೆವಲೆಪಮೆಂಟ್ ಬ್ಯಾಂಕ್
|
8. | ಉತ್ತರಾರ್ಧ ಗೋಳದ ಯಾವ ಅಕ್ಷಾಂಶಗಳ ನಡುವೆ ಅತೀ ಹೆಚ್ಚು ಲವಣತೆಯು ಕಂಡುಬರುತ್ತದೆ? |
|
| (1) | 20°ಉ ದಿಂದ 40° ಉ |
| (2) | 10°ಉ ದಿಂದ 50° ಉ |
| (3) | 40°ಉ ದಿಂದ 50° ಉ |
| (4) | 0°ಉ ದಿಂದ 10° ಉ |
CORRECT ANSWER
(1) 20°ಉ ದಿಂದ 40° ಉ
|
9. | ಈ ಕೆಳಗಿನ ಹೇಳಿಕೆಗಳನ್ನು ಓದಿ ಮತ್ತು ಸರಿ ಅಥವಾ ತಪ್ಪನ್ನು ಕಂಡುಹಿಡಿಯಿರಿ. |
| (a) | ಕರಾವಳಿ ಪ್ರದೇಶವು ಸಮುದ್ರದ ಸಸ್ಯವರ್ಗ ಎಂದು ಕರೆಯಲ್ಪಡುವ ವಿಶಿಷ್ಟವಾದ ನೈಸರ್ಗಿಕ ಸಸ್ಯವರ್ಗಕ್ಕೆ ಹೆಸರುವಾಸಿಯಾಗಿದೆ. |
| (b) | ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗವು 250 ಸೆಂ.ಮೀ. ಗಿಂತ ಹೆಚ್ಚು ಮಳೆ ಪಡೆಯುತ್ತದೆ ಮತ್ತು ಇವು ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿವೆ. |
| (c) | ಬಿದಿರು, ಶ್ರೀಗಂಧ ಮತ್ತು ಹುಣಸೆ ಮರಗಳು ಎಲೆ ಉದುರುವ ಸಸ್ಯವರ್ಗದ ಸಾಮಾನ್ಯ ಮರಗಳಾಗಿವೆ. |
| (d) | ಶೋಲಾ ಕಾಡುಗಳು ಹೊಳೆಗಳ ಎರಡೂ ಬದಿಗಳಲ್ಲಿ ವಿಶೇಷವಾಗಿ ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರುಗಳಲ್ಲಿ ಕಂಡುಬರುತ್ತವೆ. |
|
| (1) | (a) ಮತ್ತು (b) ಸರಿ |
| (2) | (a), (b) ಮತ್ತು (c) ಸರಿ |
| (3) | (b) ಮತ್ತು (d) ಸರಿ |
| (4) | ಎಲ್ಲಾ ಹೇಳಿಕೆಗಳು ಸರಿಯಾಗಿವೆ |
CORRECT ANSWER
(4) ಎಲ್ಲಾ ಹೇಳಿಕೆಗಳು ಸರಿಯಾಗಿವೆ
|
10. | ಬೆಳೆ ತೀವ್ರತೆಯನ್ನು ಹೀಗೆ ಲೆಕ್ಕ ಹಾಕಲಾಗುತ್ತದೆ. |
|
| (1) | ಒಟ್ಟು ಬೆಳೆ ಪ್ರದೇಶ ÷ ನಿವ್ವಳ ಬಿತ್ತಿದ ಪ್ರದೇಶ × 100 |
| (2) | ನಿವ್ವಳ ಬಿತ್ತನೆ ಪ್ರದೇಶ ÷ ಒಟ್ಟಾರೆ ಬೆಳೆ ಪ್ರದೇಶ × 100 |
| (3) | ಒಟ್ಟು ಬೆಳೆಸಿದ ಜನಸಂಖ್ಯೆ ÷ ಬೆಳೆಗಳು × 100 |
| (4) | ಬೆಳೆಗಳು ÷ ಕೃಷಿ ಭೂಮಿ × 100 |
CORRECT ANSWER
(1) ಒಟ್ಟು ಬೆಳೆ ಪ್ರದೇಶ ÷ ನಿವ್ವಳ ಬಿತ್ತಿದ ಪ್ರದೇಶ × 100
|
11. | ಅತೀ ಶೀತ ಮತ್ತು ಅತೀ ಉಷ್ಣ ತಿಂಗಳುಗಳ ಉಷ್ಣಾಂಶದ ವ್ಯತ್ಯಾಸವನ್ನು _______________ ಎಂದು ಕರೆಯಲಾಗುತ್ತದೆ. |
|
| (1) | ಋತು ಮಾನಿಕ ಉಷ್ಣಾಂಶ |
| (2) | ಸರಾಸರಿ ಉಷ್ಣಾಂಶ |
| (3) | ವಾರ್ಷಿಕ ಸರಾಸರಿ ಉಷ್ಣಾಂಶ |
| (4) | ದೈನಂದಿನ ಸರಾಸರಿ ಉಷ್ಣಾಂಶ |
CORRECT ANSWER
(3) ವಾರ್ಷಿಕ ಸರಾಸರಿ ಉಷ್ಣಾಂಶ
|
12. | ಶಿಲೆಗಳನ್ನು ವಿಧಗಳೊಂದಿಗೆ ಹೊಂದಿಸಿರಿ |
| (A) | ಕಣಶಿಲೆ | (i) | ಮರಳು ಶಿಲೆ |
| (B) | ರೂಪಾಂತರ ಶಿಲೆ | (ii) | ಗ್ರಾನೈಟ್ |
| (C) | ಅಗ್ನಿ ಶಿಲೆ | (iii) | ಅಮೃತ ಶಿಲೆ |
| ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ. |
| |
|
| | (A) | (B) | (C) |
| (1) | (i) | (iii) | (ii) |
| (2) | (iii) | (i) | (ii) |
| (3) | (ii) | (iii) | (i) |
| (4) | (i) | (ii) | (iii) |
CORRECT ANSWER
(3) (ii), (iii), (i)
|
13. | ಕೆಳಗಿನ ಹೇಳಿಕೆಗಳನ್ನು ಓದಿರಿ – ಸಮರ್ಥನೆ ಮತ್ತು ಕಾರಣ, ಇದರಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ |
| ಸಮರ್ಥನೆ : ಭಾರತದಲ್ಲಿ 1901-1921 ರ ಅವಧಿಯನ್ನು ಬೆಳವಣಿಗೆಯ ನಿಶ್ಚಲ ಹಂತದ ಅವಧಿ ಎಂದು ಕರೆಯಲಾಗುತ್ತದೆ |
| ಕಾರಣ : ಕಳಪೆ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು, ಹೆಚ್ಚಿನ ಜನರ ಅನಕ್ಷರತೆ ಮತ್ತು ಅಸಮರ್ಥ ಆಹಾರ ವಿತರಣಾ ವ್ಯವಸ್ಥೆ ಹಾಗೂ ಇತರ ಮೂಲಭೂತ ಅವಶ್ಯಕತೆಗಳು ಈ ಅವಧಿಯಲ್ಲಿ ಅಧಿಕ ಜನರ ಜನನ ಮತ್ತು ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. |
|
| (1) | ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ. |
| (2) | ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿಲ್ಲ |
| (3) | ಸಮರ್ಥನೆ ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ |
| (4) | ಸಮರ್ಥನೆ ತಪ್ಪಾಗಿದೆ ಆದರೆ ಕಾರಣವು ಸರಿಯಾಗಿದೆ |
CORRECT ANSWER
(1) ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ.
|
14. | ಗ್ರೀನ್ ವಿಚ್ ಪ್ರಧಾನ ರೇಖಾಂಶದಲ್ಲಿ ಮಧ್ಯಾಹ್ನ 1.00 ಗಂಟೆಯಾದರೆ 90° ಪಶ್ಚಿಮ ರೇಖಾಂಶದಲ್ಲಿನ ಸಮಯವನ್ನು ತಿಳಿಸಿ. |
|
| (1) | 7.00 AM |
| (2) | 8.00 PM |
| (3) | 7.00 PM. |
| (4) | 8.00 AM |
CORRECT ANSWER
(1) 7.00 AM
|
15. | ಪರಿವರ್ತನ ಮಂಡಲವು ಹೊಂದಿರುವ ಸ್ಥಿರ ಗುಣಲಕ್ಷಣ |
|
| (1) | ಊರ್ಧ್ವ ಮುಖ ಉಷ್ಣಾಂಶ ಇಳಿಕೆ |
| (2) | ಊರ್ಧ್ವ ಮುಖ ಉಷ್ಣಾಂಶ ಏರಿಕೆ |
| (3) | ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲ |
| (4) | ಸಮತಲ ಉಷ್ಣಾಂಶದ ಏರಿಕೆ |
CORRECT ANSWER
(1) ಊರ್ಧ್ವ ಮುಖ ಉಷ್ಣಾಂಶ ಇಳಿಕೆ
|
16. | ‘ಕಥೆಗಳ ಕಣಿವೆ’ ಒಂದು ಸಣ್ಣ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. |
| (a) | ವಿಕಾಸ ಬಡಿಗೇರ್ ರವರಿಂದ ಇದು ನಿರ್ದೇಶಿಸಲ್ಪಟ್ಟಿದೆ. |
| (b) | ಆಗಸ್ಟ್, 2022 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಯೋಜಿಸಲಾದ ಭಾರತೀಯ ಚಲನಚಿತ್ರ ಉತ್ಸವದ ಅಂತರಾಷ್ಟ್ರೀಯ ಪ್ರೀಮಿಯರ್‌ನಲ್ಲಿ ತೋರಿಸಲಾಗಿದೆ. |
| (c) | ಇದು ಮಹಿಳೆಯು ಎದುರಿಸಿದ ತಾರತಮ್ಯತೆಯ ಬಗ್ಗೆ ತಿಳಿಸುತ್ತದೆ. |
| | ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? |
|
| (1) | (a) ಮತ್ತು (b) ಮಾತ್ರ |
| (2) | (b) ಮತ್ತು (c) ಮಾತ್ರ |
| (3) | ಮೇಲಿನ ಎಲ್ಲವೂ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(1) (a) ಮತ್ತು (b) ಮಾತ್ರ
|
17. | ಸರಿಯಲ್ಲದ ಹೇಳಿಕೆಯನ್ನು ಗುರುತಿಸಿ, |
|
| (1) | ಅಧಿಕ ಕೃಷಿ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಶಾರೀರಿಕ ಮತ್ತು ಕೃಷಿ ಸಾಂದ್ರತೆಯು ಗಮನಾರ್ಹವಾದ ಉತ್ತಮ ಅಳತೆಯಾಗಿದೆ |
| (2) | ಜನಸಾಂದ್ರತೆಯು ಭೂಮಿಗೆ ಸಂಬಂಧಿಸಿದಂತೆ ಜನಸಂಖ್ಯೆಯ ಪ್ರಾದೇಶಿಕ ಹಂಚಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ |
| (3) | ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ಜನಸಂಖ್ಯೆಯ ಅತೀ ಹೆಚ್ಚು ಸಾಂದ್ರತೆಯನ್ನು ಹೊಂದಿವೆ |
| (4) | ಜನಸಾಂದ್ರತೆಯು 1951 ರಲ್ಲಿ ಪ್ರತಿ ಚ.ಕಿ.ಗೆ 117 ಜನ ಹಂಚಿಕೆಯಾಗಿದ್ದು, 2011 ರಲ್ಲಿ ಪ್ರತಿ ಚ.ಕಿ.ಗೆ 382 ಜನಕ್ಕೆ ಏರಿಕೆಯಾಗಿದೆ |
CORRECT ANSWER
(3) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ಜನಸಂಖ್ಯೆಯ ಅತೀ ಹೆಚ್ಚು ಸಾಂದ್ರತೆಯನ್ನು ಹೊಂದಿವೆ
|
18. | ‘ಎ ವಿಜನ್ ಆಫ್ ಪ್ರಾಸ್ಪರಸ್ ಮೈಸೂರ್’ ಕೃತಿಯ ಕರ್ತೃ |
|
| (1) | ಸಿ. ರಂಗಾಚಾರುಲು |
| (2) | ಶೇಷಾದ್ರಿ ಐಯ್ಯರ್ |
| (3) | ಸರ್. ಎಂ. ವಿಶ್ವೇಶ್ವರಯ್ಯ |
| (4) | ಸರ್. ಮಿರ್ಜಾ ಇಸ್ಮಾಯಿಲ್ |
CORRECT ANSWER
(3) ಸರ್. ಎಂ. ವಿಶ್ವೇಶ್ವರಯ್ಯ
| | ಪಟ್ಟಿ-I | | ಪಟ್ಟಿ-II |
| (A) | ಗಂಗಾಧರರಾವ್ ದೇಶಪಾಂಡೆ | (i) | ಕನ್ನಡದ ಕುಲಪುರೋಹಿತ |
| (B) | ಎಂ. ವೆಂಕಟ ಕೃಷ್ಣಯ್ಯ | (ii) | ಕರ್ನಾಟಕ ಗಾಂಧಿ |
| (C) | ಹರ್ಡೇಕರ್ ಮಂಜಪ್ಪ | (iii) | ಕರ್ನಾಟಕದ ಸಿಂಹ |
| (D) | ಆಲೂರು ವೆಂಕಟರಾಯರು | (iv) | ತಾತಯ್ಯ |
| ಸಂಕೇತಗಳು : |
| |
|
| | (A) | (B) | (C) | (D) |
| (1) | (iii) | (iv) | (ii) | (i) |
| (2) | (i) | (iii) | (ii) | (iv) |
| (3) | (ii) | (i) | (iii) | (iv) |
| (4) | (iv) | (ii) | (i) | (iii) |
CORRECT ANSWER
(1) (iii), (iv), (ii), (i)
|
20. | ಪ್ರಸಿದ್ಧ ಕನ್ನಡ ಮಾಸ ಪತ್ರಿಕೆ ‘ಕರ್ನಾಟಕ ನಂದಿನಿ’ ಯ ಅತ್ಯಂತ ಮುಂಚಿನ ಸಂಪಾದಕಿ |
|
| (1) | ಗೌರಿ ಲಂಕೇಶ |
| (2) | ವಿಜಯ ದಬ್ಬೆ |
| (3) | ತಿರುಮಲಾಂಬ |
| (4) | ಪ್ರೇಮ ಕಾರಂತ |
CORRECT ANSWER
(3) ತಿರುಮಲಾಂಬ
|
21. | ಶ್ರೀಯುತ ವೆಂಕಟಪ್ಪನವರು ____________ ಕಲಾವಿದರಾಗಿದ್ದುರು? |
|
| (1) | ಚಿತ್ರಕಲೆ |
| (2) | ಶಿಲ್ಪಕಲೆ |
| (3) | ವಾದ್ಯಕಲೆ |
| (4) | ಹಾಡುಗಾರಿಕೆ |
CORRECT ANSWER
(1) ಚಿತ್ರಕಲೆ
|
22. | ಗೊಮ್ಮಟೇಶ್ವರ ವಿಗ್ರಹವನ್ನು ಸ್ಥಾಪಿಸಿದವರು |
|
| (1) | ದುರ್ವಿನೀತ |
| (2) | ದಿಡಿಗ |
| (3) | ಚಾವುಂಡರಾಯ |
| (4) | ಶಿವಮಾರ |
CORRECT ANSWER
(3) ಚಾವುಂಡರಾಯ
|
23. | ಸಿಂಧೂ ಮುದ್ರೆಗಳು ಹೆಚ್ಚಿನದಾಗಿ ಯಾವುದರಿಂದ ಮಾಡಲಾಗಿತ್ತು? |
|
| (1) | ತಾಮ್ರದಿಂದ |
| (2) | ಸ್ಟೀಟೈಟ್‌ನಿಂದ |
| (3) | ಟೆರಾಕೋಟದಿಂದ |
| (4) | ಚಿನ್ನದಿಂದ |
CORRECT ANSWER
(2) ಸ್ಟೀಟೈಟ್‌ನಿಂದ
|
24. | ಲೋಥಲ್ ಎಲ್ಲಿದೆ? |
|
| (1) | ಮಧ್ಯಪ್ರದೇಶ |
| (2) | ಹರಿಯಾಣ |
| (3) | ದೆಹಲಿ |
| (4) | ಗುಜರಾತ್ |
CORRECT ANSWER
(4) ಗುಜರಾತ್
|
25. | ಕುರಂ ಚೋಳರ ಆಡಳಿತದ ಯಾವ ಘಟಕವಾಗಿ ಸೂಚಿಸುತ್ತದೆ? |
|
| (1) | ಒಂದು ಜಿಲ್ಲೆ |
| (2) | ಒಂದು ಹಳ್ಳಿ |
| (3) | ಹಳ್ಳಿಗಳ ಗುಂಪು |
| (4) | ಒಂದು ಪ್ರಾಂತ್ಯ |
CORRECT ANSWER
(3) ಹಳ್ಳಿಗಳ ಗುಂಪು
|
26. | ನಾಗಾರ್ಜುನ ಯಾರು? |
|
| (1) | ಜೈನ ಸನ್ಯಾಸಿ |
| (2) | ವೈದಿಕ ಋಷಿ |
| (3) | ಗ್ರೀಕ್ ಅರಸ |
| (4) | ಬೌದ್ಧ ತತ್ವಜ್ಞಾನಿ |
CORRECT ANSWER
(4) ಬೌದ್ಧ ತತ್ವಜ್ಞಾನಿ
|
27. | ಕರ್ನಾಟಕ ಸರ್ಕಾರದಿಂದ ರಾಷ್ಟ್ರೀಯ ಕ್ರೀಡಾ ದಿನದಂದು ನೀಡಲಾದ ಪ್ರಶಸ್ತಿ ಮತ್ತು ಬಹುಮಾನಗಳನ್ನು ಪರಿಗಣಿಸಿರಿ. |
| (a) | ದ್ರೋಣಾಚಾರ್ಯ ಪ್ರಶಸ್ತಿಯ ನೀಡುವಿಕೆ |
| (b) | ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, 2020 |
| (c) | ಕ್ರೀಡಾ ಪೋಷಕ ಪ್ರಶಸ್ತಿ |
| (d) | ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ-2021-22 |
| | ಮೇಲಿನ ಹೇಳಿಕೆಗಳಲ್ಲಿ ಸರಿಯಾದದ್ದು ಯಾವುದು |
|
| (1) | (a) ಮತ್ತು (b) ಮಾತ್ರ |
| (2) | (b) ಮತ್ತು (c) ಮಾತ್ರ |
| (3) | (a), (b) ಮತ್ತು (c) ಮಾತ್ರ |
| (4) | (b), (c) ಮತ್ತು (d) ಮಾತ್ರ |
CORRECT ANSWER
(4) (b), (c) ಮತ್ತು (d) ಮಾತ್ರ
|
28. | ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಪರಿಸರವನ್ನು ಸಂರಕ್ಷಿಸುವುದು ತನ್ನ ಕರ್ತವ್ಯವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಉಪಬಂಧವು ____________ಆಗಿದೆ. |
|
| (1) | ಅನುಚ್ಛೇದ 51ಎ(ಜಿ) |
| (2) | ಅನುಚ್ಛೇದ 48(ಎ) |
| (3) | ಅನುಚ್ಛೇದ 14 |
| (4) | ಅನುಚ್ಛೇದ 21 |
CORRECT ANSWER
(1) ಅನುಚ್ಛೇದ 51ಎ(ಜಿ)
|
29. | ಕೆರೆ ನೀರಿನ ವಿಪರೀತ ಫಲವಂತಿಕೆಯು ___________ನ ಹೆಚ್ಚಳದಿಂದಾಗಿದೆ |
|
| (1) | ನೈಟ್ರೇಟ್‌ಗಳು ಮತ್ತು ಪಾಸ್ಪೇಟ್ಸ್‌ಗಳು |
| (2) | ಕ್ಲೋರೈಡ್‌ಗಳು ಮತ್ತು ಫ್ಲೋರೈಡ್‌ಗಳು |
| (3) | ಸೋಡಿಯಂ ಮತ್ತು ಪೊಟ್ಯಾಷಿಯಂ |
| (4) | ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ |
CORRECT ANSWER
(1) ನೈಟ್ರೇಟ್‌ಗಳು ಮತ್ತು ಪಾಸ್ಪೇಟ್ಸ್‌ಗಳು
|
30. | ಆಳವಿಲ್ಲದ ಸಮುದ್ರದ ಕೆಸರು ಅಥವಾ ನದೀಮುಖಗಳಲ್ಲಿ ಬೆಳೆಯುವ ಉಪ್ಪು-ಸಹಿಷ್ಣು ಮರಗಳನ್ನು __________ ಎಂದು ಕರೆಯಲಾಗುತ್ತದೆ. |
|
| (1) | ಮ್ಯಾಂಗ್ರೋವ್‌ಗಳು |
| (2) | ಜೆರೋಫೈಟ್ಸ್ |
| (3) | ಎಪಿಫೈಟ್ಸ್ |
| (4) | ಹೈಡ್ರೋಫೈಟ್‌ಗಳು |
CORRECT ANSWER
(1) ಮ್ಯಾಂಗ್ರೋವ್‌ಗಳು
|
31. | ಕರ್ನಾಟಕದ ಅತಿ ಎತ್ತರದ ಬೆಟ್ಟ |
|
| (1) | ಮುಳ್ಳಯ್ಯನಗಿರಿ |
| (2) | ಬಿಳಿಗಿರಿ ಬೆಟ್ಟ |
| (3) | ನಂದಿ ಬೆಟ್ಟ |
| (4) | ಚಾಮುಂಡಿ ಬೆಟ್ಟ |
CORRECT ANSWER
(1) ಮುಳ್ಳಯ್ಯನಗಿರಿ
|
32. | ಯಾವ ಉದ್ದೇಶಕ್ಕಾಗಿ ಕರ್ನಾಟಕದಲ್ಲಿ ಗಂಗಾ ಕಲ್ಯಾಣಯೋಜನೆ ಜಾರಿಗೊಳಿಸಲಾಗಿದೆ? |
|
| (1) | ಉಚಿತ ಬೋರ್‌ವೆಲ್ ಕೊರೆಯುವುದು |
| (2) | ಮೇಲ್ಮೈ ನೀರು ಸರಬರಾಜು |
| (3) | ಲಿಫ್ಟ್ ನೀರಾವರಿ ಯೋಜನೆ |
| (4) | ಕೆರೆ ಪುನಶ್ವೇತನ |
CORRECT ANSWER
(1) ಉಚಿತ ಬೋರ್‌ವೆಲ್ ಕೊರೆಯುವುದು
|
33. | ಕಪ್ಪತಗುಡ್ಡ ವನ್ಯಜೀವಿಧಾಮವು ಕರ್ನಾಟಕದ __________ ಜಿಲ್ಲೆಯಲ್ಲಿದೆ. |
|
| (1) | ಹಾವೇರಿ |
| (2) | ರಾಯಚೂರು |
| (3) | ಗದಗ್ |
| (4) | ಬೆಳಗಾವಿ |
CORRECT ANSWER
(3) ಗದಗ್
|
34. | ಕರ್ನಾಟಕ ಸರ್ಕಾರವು ಯಾರನ್ನು ಅವರ ಸಾಧನೆಗಾಗಿ 2022 ರಲ್ಲಿ ಪರಿಸರ ರಾಯಭಾರಿಯಾಗಿ ನೇಮಕಗೊಳಿಸಿದೆ? |
|
| (1) | ಸಾಲುಮರದ ತಿಮ್ಮಕ್ಕ |
| (2) | ತುಳಸಿ ಗೌಡ |
| (3) | ವಂದನಾ ಶಿವ |
| (4) | ಅಲ್ಮಿತ್ರ ಪಟೇಲ್ |
CORRECT ANSWER
(1) ಸಾಲುಮರದ ತಿಮ್ಮಕ್ಕ
|
35. | ರಕ್ತ ಸಂಬಂಧದ, ಸಂಬಂಧದಿಂದ ಆಧಾರಿತವಾದ ಒಂದು ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ? |
|
| (1) | ವರ್ಣ |
| (2) | ಗೋತ್ರ |
| (3) | ಬಂಧುತ್ವ |
| (4) | ಜಾತಿ |
CORRECT ANSWER
(3) ಬಂಧುತ್ವ
|
36. | ಕಾರ್ಟೋಸಾಟ್ ಮತ್ತು ಮೈಕ್ರೋಸಾಟ್ ಯಾವ ಕಾರಣಕ್ಕಾಗಿ ಬಳಕೆಮಾಡಲಾಗುತ್ತದೆ? |
|
| (1) | ಭೂವೀಕ್ಷಣೆ ಮತ್ತು ಪರೀಕ್ಷಣಾತ್ಮಕ |
| (2) | ಭೂವೀಕ್ಷಣೆ ಮತ್ತು ಸಂವಹನ |
| (3) | ಭೂವೀಕ್ಷಣೆ ಮತ್ತು ವಿಶ್ವ |
| (4) | ಸಂವಹನ ಮತ್ತು ಪರೀಕ್ಷಣಾತ್ಮಕ |
CORRECT ANSWER
(1) ಭೂವೀಕ್ಷಣೆ ಮತ್ತು ಪರೀಕ್ಷಣಾತ್ಮಕ
|
37. | ಅಂಗಾಂಶದ ಅಧ್ಯಯನವನ್ನು __________ ಎಂದು ಕರೆಯಲಾಗುತ್ತದೆ. |
|
| (1) | ಜೀವಕೋಶ ಶಾಸ್ತ್ರ |
| (2) | ಭ್ರೂಣ ಶಾಸ್ತ್ರ |
| (3) | ರೋಗ ಶಾಸ್ತ್ರ |
| (4) | ಅಂಗರಚನಾ ಶಾಸ್ತ್ರ |
CORRECT ANSWER
(4) ಅಂಗರಚನಾ ಶಾಸ್ತ್ರ
|
38. | ಬೇರು ರೋಮಗಳು ಸಸ್ಯಕ್ಕೆ ಅತ್ಯಂತ ಮುಖ್ಯವಾದವು, ಏಕೆಂದರೆ ಅವುಗಳು |
|
| (1) | ಹೀರಿಕೊಳ್ಳಲು ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತವೆ |
| (2) | ಸಸ್ಯವನ್ನು ಮಣ್ಣಿನಲ್ಲಿ ಗಟ್ಟಿಯಾಗಿ ಹಿಡಿದಿಡಲ್ಪಡುತ್ತದೆ |
| (3) | ಜೈಲಮ್ ಅಂಗಾಂಶವನ್ನು ಹೊಂದಿರುತ್ತದೆ |
| (4) | ಪಿಷ್ಟಗಳನ್ನು ಸಂಗ್ರಹಿಸುತ್ತವೆ |
CORRECT ANSWER
(1) ಹೀರಿಕೊಳ್ಳಲು ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತವೆ
|
39. | ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಇರುವ ಅಂತರಾಷ್ಟ್ರೀಯ ಒಕ್ಕೂಟವು ಪ್ರಕಟಿಸಿದ ಪುಸ್ತಕ |
|
| (1) | ಗಿನ್ನಿಸ್ ವಿಶ್ವ ದಾಖಲೆ ಪುಸ್ತಕ |
| (2) | ಕೆಂಪು ಡೇಟಾ ಪುಸ್ತಕ |
| (3) | ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್ |
| (4) | ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ |
CORRECT ANSWER
(2) ಕೆಂಪು ಡೇಟಾ ಪುಸ್ತಕ
|
| ಕೆಳಗಿನ ಪೈಚಾರ್ಟ್‌ನ ಆಧಾರದ ಮೇಲೆ ಪ್ರಶ್ನೆಗಳನ್ನು ಉತ್ತರಿಸಿ(40-41) |
| |
| ತಮ್ಮ ಮನೆಯ ಮರು ವಿನ್ಯಾಸಕ್ಕೆ ಒಂದು ಕುಟುಂದ ಅಂದಾಜಿನ ವೆಚ್ಚ |
40. | ಬಣ್ಣ ಹಚ್ಚುವದಕ್ಕೆ ಹಾಗೂ ನೆಲಹಾಸುವಿಗೆ ಸೇರಿ ಕುಟುಂಬವು ಅಂದಾಜಿಸಿದ ವೆಚ್ಚ ಎಷ್ಟು? |
|
| (1) | ₹ 34,500 |
| (2) | ₹ 34,600 |
| (3) | ₹ 34,700 |
| (4) | ₹ 34,800 |
CORRECT ANSWER
(4) ₹ 34,800
|
41. | ಪೀಠೋಪಕರಣಗಳ ಖರೀದಿಗೆ ಕುಟುಂಬವು ಅಂದಾಜು ವೆಚ್ಚದಲ್ಲಿ 12% ರಿಯಾಯಿತಿ ಪಡೆದಿದೆ. ಪೀಠೋಪಕರಣಗಳ ಖರ್ಚಾದ ಮೊತ್ತ ಎಷ್ಟು? |
|
| (1) | ₹ 13,200 |
| (2) | ₹ 13,526 |
| (3) | ₹ 13,728 |
| (4) | ₹ 14,256 |
CORRECT ANSWER
(3) ₹ 13,728
|
42. | ಮಧ್ಯಮ ಓರೆಯಾದ ವಿತರಣೆಗಾಗಿ ಸರಾಸರಿ, ಮಧ್ಯಮ ಮತ್ತು ಮೋಡ್ ನಡುವಿನ ಸಂಬಂಧ |
|
| (1) | ಮೋಡ್ = ಮಧ್ಯಮ – 2 ಸರಾಸರಿ |
| (2) | ಮೋಡ್ = 3 ಮಧ್ಯಮ – 2 ಸರಾಸರಿ |
| (3) | ಮೋಡ್ = 2 ಮಧ್ಯಮ – 3 ಸರಾಸರಿ |
| (4) | ಮೋಡ್ = ಮಧ್ಯಮ – ಸರಾಸರಿ |
CORRECT ANSWER
(2) ಮೋಡ್ = 3 ಮಧ್ಯಮ – 2 ಸರಾಸರಿ
|
43. | ಸುಮನ ಒಂದು ವಸ್ತುವನ್ನು ರೂ. 72,000 ಕ್ಕೆ ಖರೀದಿಸಿದಳು. ಅದನ್ನು ಮಾರಿದಾಗ ಅವಳು 27% ನಷ್ಟ ಅನುಭವಿಸಿದಳು. ಬಂದ ಮೊತ್ತದಿಂದ ಇನ್ನೊಂದು ವಸ್ತುವನ್ನು ಖರೀದಿಸಿ ಅದನ್ನು 30% ಲಾಭಕ್ಕೆ ಮಾರಿದಳು.ಅವಳಿಗಾದ ಒಟ್ಟು ಲಾಭ/ನಷ್ಟ ಎಷ್ಟು? |
|
| (1) | ರೂ. 4,280 ನಷ್ಟ |
| (2) | ರೂ. 3,672 ಲಾಭ |
| (3) | ರೂ. 4,280 ಲಾಭ |
| (4) | ರೂ. 3,672 ನಷ್ಟ |
CORRECT ANSWER
(4) ರೂ. 3,672 ನಷ್ಟ
|
44. | A ಮತ್ತು B ಎಂಬುವರು ಒಟ್ಟಾಗಿ ಒಂದು ಕೆಲಸವನ್ನು 10 ದಿನಗಳಲ್ಲಿ ಪೂರೈಸುತ್ತಾರೆ. A, B ಮತ್ತು C ಒಟ್ಟಾಗಿ ಅದೇ ಕೆಲಸವನ್ನು 5 ದಿನಗಳಲ್ಲಿ ಪೂರೈಸುತ್ತಾರೆ. ಹಾಗಾದರೆ, C ಒಬ್ಬನೇ ಅದೇ ಕೆಲಸವನ್ನು ಪೂರೈಸಲು ತೆಗೆದುಕೊಳ್ಳುವ ಕಾಲ ಎಷ್ಟು? |
|
| (1) | 12 ದಿನಗಳು |
| (2) | 14 ದಿನಗಳು |
| (3) | 10 ದಿನಗಳು |
| (4) | 8 ದಿನಗಳು |
CORRECT ANSWER
(3) 10 ದಿನಗಳು
|
45. | ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಮೇಲಿನ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ. |
| (a) | ಇದೊಂದು 100 ಲಕ್ಷ ಕೋಟಿ ಯೋಜನೆ |
| (b) | ಮೂಲಭೂತ ಸೌಕರ್ಯ, ಯೋಜನೆಗಳ ವೇಗ ಹೆಚ್ಚಿಸುವುದು ಮತ್ತು ವಿಸ್ತರಿಸುವುದನ್ನು ಇದು ಹುಡುಕುತ್ತದೆ |
| (c) | ಒಂದೇ ವೇದಿಕೆಯ ಮೇಲೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸುವ ಗುರಿಯನ್ನು ಇದು ಹೊಂದಿದೆ |
| (d) | ಇದು ಭಾರತದಲ್ಲಿ ಆರಂಭಿಕವಾಗಿ ಕೆಲವು ರಾಜ್ಯಗಳಿಗೆ ಅನ್ವಯವಾಗಲಿದೆ |
| | ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ? |
|
| (1) | (a), (b), (c) ಮಾತ್ರ |
| (2) | (b), (c), (d) ಮಾತ್ರ |
| (3) | (a) ಮತ್ತು (b) ಮಾತ್ರ |
| (4) | (b) ಮತ್ತು (c) ಮಾತ್ರ |
CORRECT ANSWER
(1) (a), (b), (c) ಮಾತ್ರ
|
46. | ಸೈನಿಕ ಶಾಲೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ |
| (a) | ಸೈನಿಕ ಶಾಲೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಯತ್ನವಾಗಿ ಸ್ಥಾಪಿಸಲಾಗಿದೆ |
| (b) | ನಾಗಾಲ್ಯಾಂಡ್ ಸೈನಿಕ ಶಾಲೆ ಮೊದಲಿಗೆ 2018-19 ರಲ್ಲಿ ಹೆಣ್ಣು ವಿದ್ಯಾರ್ಥಿ ಪ್ರವೇಶ |
| (c) | ಸೈನಿಕ ಶಾಲೆಗಳಲ್ಲಿ ಪ್ರವೇಶಾತಿಗಾಗಿ ಶೇಕಡಾ 27 ರಷ್ಟು ಮೀಸಲಾತಿಯನ್ನು ಇತರೆ ಹಿಂದುಳಿದ ವರ್ಗಗಳಿಗೆ (ಕೆನೆಪದರದಲ್ಲದವರು)ಗಾಗಿ 2021-22 ರ ಅಧಿವೇಶನದಿಂದ ರೂಪ ಅನುಮತಿದೊರೆಯಿತು |
| | ಮೇಲಿನ ಹೇಳಿಕೆ/ಗಳಲ್ಲಿ ಯಾವುದು ಸರಿ? |
|
| (1) | (a) ಮಾತ್ರ |
| (2) | (b) ಮಾತ್ರ |
| (3) | (a) ಮತ್ತು (b) ಮಾತ್ರ |
| (4) | (a) ಮತ್ತು (c) ಮಾತ್ರ |
CORRECT ANSWER
(4) (a) ಮತ್ತು (c) ಮಾತ್ರ
|
47. | 2021 ರಲ್ಲಿ ಆಯೋಜಿಸಲಾದ ಇತರ ರಾಷ್ಟ್ರಗಳೊಂದಿಗೆ ಭಾರತದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೆಳಗಿನ ಜೋಡಿಗಳನ್ನು ಪರಿಗಣಿಸಿ. |
| | ಕಾರ್ಯಾಚರಣೆ ಹೆಸರು | | ಭಾರತದೊಂದಿಗೆ ಭಾಗಿಯಾದ ರಾಷ್ಟ್ರ |
| (A) | ಮಿತ್ರ ಶಕ್ತಿ VIII | – | ನೇಪಾಲ |
| (B) | ಖಂಜರ್ V | – | ಖರ್ಗಿಸ್ತಾನ |
| (C) | ಸೂರ್ಯ ಕಿರಣ XV | – | ಶ್ರೀಲಂಕಾ |
| (D) | ಯುದ್ಧ ಅಭ್ಯಾಸ | – | ಅಮೇರಿಕಾ |
| ಮೇಲಿನ ಎಷ್ಟು ಜೋಡಿಗಳು ಸರಿಯಾಗಿವೆ? |
| |
|
| (1) | (a) ಮತ್ತು (b) ಮಾತ್ರ |
| (2) | (b) ಮತ್ತು (c) ಮಾತ್ರ |
| (3) | (a) ಮತ್ತು (c) ಮಾತ್ರ |
| (4) | (b) ಮತ್ತು (d) ಮಾತ್ರ |
CORRECT ANSWER
(4) (b) ಮತ್ತು (d) ಮಾತ್ರ
|
48. | ಭಾರತದ ರಾಷ್ಟ್ರಾಧ್ಯಕ್ಷರಿಗೆ ಲೋಕಪಾಲರ ಹುದ್ದೆಯ ಹೆಸರನ್ನು ಶಿಫಾರಸ್ಸು ಮಾಡುವ ಸಮಿತಿಯು ಇವರನ್ನು ಒಳಗೊಂಡಿದೆ. |
|
| (1) | ಪ್ರಧಾನಮಂತ್ರಿ, ಕೇಂದ್ರ ಕಾನೂನು ಮಂತ್ರಿ ಮತ್ತು ಭಾರತದ ಮುಖ್ಯ ನ್ಯಾಯಾಧೀಶ |
| (2) | ಭಾರತದ ಮುಖ್ಯ ನ್ಯಾಯಾಧೀಶ, ಲೋಕಸಭೆಯ ಸಭಾಧ್ಯಕ್ಷರು ಮತ್ತು ಕೇಂದ್ರ ಕಾನೂನು ಮಂತ್ರಿಗಳು |
| (3) | ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶ ಮತ್ತು ಸಭಾಧ್ಯಕ್ಷರು ಲೋಕಸಭಾ |
| (4) | ಪ್ರಧಾನಮಂತ್ರಿ, ಲೋಕಸಭಾ ಸಭಾಧ್ಯಕ್ಷರು ಮತ್ತು ರಾಜ್ಯಸಭೆಯ ಅಧ್ಯಕ್ಷರು |
CORRECT ANSWER
(3) ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶ ಮತ್ತು ಸಭಾಧ್ಯಕ್ಷರು ಲೋಕಸಭಾ
|
49. | ಮೂಲಧನದ ಸರಕು ಹೆಚ್ಚಿದಂತೆ, ಮೂಲಧನದ ಅಂಚಿನ ಕಾರ್ಯಪಟ್ಟುತ್ವವು (MEC) |
|
| (1) | ಏರಿಕೆಯಾಗುತ್ತದೆ |
| (2) | ಇಳಿಕೆಯಾಗುತ್ತದೆ |
| (3) | ಆರಂಭದಲ್ಲಿ ಏರಿಕೆಯಾಗುತ್ತದೆ ಮತ್ತು ನಂತರದಲ್ಲಿ ಇಳಿಕೆಯಾಗುತ್ತದೆ |
| (4) | ನಿರಂತರವಾಗಿ ಉಳಿಯುತ್ತದೆ |
CORRECT ANSWER
(1) ಏರಿಕೆಯಾಗುತ್ತದೆ
|
50. | ಸಂಗಮ ಸಾಹಿತ್ಯದಲ್ಲಿ ಸೂಚಿಸಲ್ಪಟ್ಟ “ಮರುದನ್ ತಿನಾಯಿ” ಏನನ್ನು ಉಲ್ಲೇಖಿಸುತ್ತದೆ? |
|
| (1) | ಕರಾವಳಿ ಪ್ರಾಂತ್ಯ |
| (2) | ಬೆಟ್ಟಗಾಡು ಪ್ರದೇಶ |
| (3) | ಮರುಭೂಮಿ |
| (4) | ಫಲವತ್ತಾದ ನದಿ ತೀರಗಳು |
CORRECT ANSWER
(4) ಫಲವತ್ತಾದ ನದಿ ತೀರಗಳು
|
51. | ಮೊದಲ ಬಾರಿಗೆ ಪಂಚಾಯ್ತಿರಾಜ್ ಸಂಸ್ಥೆಗಳನ್ನು ರಚಿಸಲು ಶಿಫಾರಸ್ಸು ಮಾಡಿದ ಆಯೋಗ ಯಾವುದು? |
|
| (1) | ಅಶೋಕ್ ಮೆಹತಾ ಸಮಿತಿ |
| (2) | ಎಲ್.ಎಂ. ಸಿಂಘ್ವಿ ಸಮಿತಿ |
| (3) | ಬಲವಂತರಾಯ್ ಮೆಹತಾ ಸಮಿತಿ |
| (4) | ಸ್ವರಣ್ ಸಿಂಗ್ ಸಮಿತಿ |
CORRECT ANSWER
(3) ಬಲವಂತರಾಯ್ ಮೆಹತಾ ಸಮಿತಿ
|
52. | ಈ ಕೆಳಗಿನ ಯಾವ ಪ್ರಕರಣದಲ್ಲಿ ನ್ಯಾಯಾಲಯವು ನೈಸರ್ಗಿಕ ನ್ಯಾಯ ತತ್ವವನ್ನು ಪಾಲಿಸದಿದ್ದರೆ ಸಂವಿಧಾನದ ಅನುಚ್ಛೇದ 14 ನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಲಾಗಿದೆ? |
|
| (1) | ಯೂನಿಯನ್ ಆಫ್ ಇಂಡಿಯಾ ವಿರುದ್ಧ ತುಳಸಿರಾಮ್ ಪಟೇಲ್ |
| (2) | ಸುಧೀರ್ ಚಂದ್ರ ಸರ್ಕಾರ್ ವಿರುದ್ಧ ಟಾಟಾ ಐರನ್ ಮತ್ತು ಸ್ಟೀಲ್ ಕಂ.ಲಿ. |
| (3) | ಡೆಲ್ಲಿ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್ ವಿರುದ್ಧ ಡಿ.ಟಿ.ಸಿ. ಮಜ್‌ದೂರ್ ಕಾಂಗ್ರೆಸ್ |
| (4) | ಬಾಸುದೇವ್ ತಿವಾರಿ ವಿರುದ್ಧ ಸಿಡೊ ಕ್ಯಾರ್‌ಹೂ ಯೂನಿವರ್ಸಿಟಿ |
CORRECT ANSWER
(1) ಯೂನಿಯನ್ ಆಫ್ ಇಂಡಿಯಾ ವಿರುದ್ಧ ತುಳಸಿರಾಮ್ ಪಟೇಲ್
|
53. | 1956 ಮುಂಚೆ ಇಂದಿನ ಕೇಂದ್ರಾಡಳಿತ ಪ್ರದೇಶಗಳನ್ನು ಏನೆಂದು ವರ್ಗೀಕರಿಸಲಾಗಿತ್ತು? |
|
| (1) | ಭಾಗ ‘ಎ’ ರಾಜ್ಯಗಳು |
| (2) | ಭಾಗ ‘ಬಿ’ ರಾಜ್ಯಗಳು |
| (3) | ಭಾಗ ‘ಸಿ’ ರಾಜ್ಯಗಳು |
| (4) | ಭಾಗ ‘ಡಿ’ ರಾಜ್ಯಗಳು |
CORRECT ANSWER
(3) ಭಾಗ ‘ಸಿ’ ರಾಜ್ಯಗಳು
|
54. | ಸಂವಿಧಾನದ ಯಾವ ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಕುರಿತು ವಿವರಣೆ ನೀಡುತ್ತಿವೆ? |
|
| (1) | 12 ರಿಂದ 14 |
| (2) | 36 ರಿಂದ 51 |
| (3) | 39 ರಿಂದ 52 |
| (4) | 41 ರಿಂದ 52 |
CORRECT ANSWER
(2) 36 ರಿಂದ 51
|
55. | ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ? |
|
| (1) | ಧಾರ್ಮಿಕ ಸ್ವಾತಂತ್ರ್ಯದ ಹಕ್ಕು – 25 ರಿಂದ 30 ವಿಧಿಗಳು |
| (2) | ರಾಷ್ಟ್ರಪತಿ ಆಳ್ವಿಕೆ – 365 ನೇ ವಿಧಿ |
| (3) | ಭಾರತದ ಚುನಾವಣಾ ಆಯೋಗ – 324 ರಿಂದ 329 ರವರೆಗಿನ ವಿಧಿಗಳು |
| (4) | ಅಂತರರಾಜ್ಯ ಮಂಡಳಿ – 264ನೇ ವಿಧಿ. |
CORRECT ANSWER
(3) ಭಾರತದ ಚುನಾವಣಾ ಆಯೋಗ – 324 ರಿಂದ 329 ರವರೆಗಿನ ವಿಧಿಗಳು
|
56. | ಪಟ್ಟಿ-Iನ್ನು (ಘಟನೆಗಳು) ಪಟ್ಟಿ-II ರ (ವರ್ಷ) ಜೊತೆ ಹೊಂದಿಸಿ. ಸರಿಯಾದ ಉತ್ತರ ನೀಡಿ |
| | ಪಟ್ಟಿ-I | | ಪಟ್ಟಿ-II |
| (A) | ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದ ವರ್ಷ | (i) | 1935 |
| (B) | ಭಾರತೀಯ ಸ್ವಾತಂತ್ರ್ಯ ಕಾಯಿದೆ | (ii) | 1949 |
| (C) | ಭಾರತದ ಸರ್ಕಾರದ ಕಾಯಿದೆ | (iii) | 1950 |
| (D) | ಭಾರತದ ಸಂವಿಧಾನ ಅಂಗೀಕಾರವಾದ ವರ್ಷ | (iv) | 1947 |
| ಈ ಕೆಳಗೆ ನೀಡಲಾದ ಸಂಕೇತಗಳಲ್ಲಿ ಸರಿಯಾದ ಉತ್ತರ ಗುರುತಿಸಿ. |
| |
|
| | (A) | (B) | (C) | (D) |
| (1) | (iv) | (i) | (iii) | (ii) |
| (2) | (ii) | (iv) | (iii) | (i) |
| (3) | (iii) | (iv) | (i) | (ii) |
| (4) | (i) | (ii) | (iii) | (iv) |
CORRECT ANSWER
(3) (iii), (iv), (i), (ii)
|
57. | ಕೃಷಿ ಗಣತಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ? |
| (a) | ಕೃಷಿ ಗಣತಿಯನ್ನು ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ನಡೆಸುತ್ತದೆ |
| (b) | ಇದನ್ನು ಪ್ರತಿ ಐದು ವರ್ಷಗಳ ಅಂತರದಲ್ಲಿ ನಡೆಸಲಾಗುತ್ತದೆ |
| (c) | ಮೊದಲ ವರ್ಷದ ಗಣತಿಯನ್ನು 1970-71 ರಲ್ಲಿ ನಡೆಸಲಾಯಿತು |
|
| (1) | (a) ಮತ್ತು (b) ಸರಿ ಇದೆ |
| (2) | (b) ಮತ್ತು (c) ಸರಿ ಇದೆ |
| (3) | (a), (b) ಮತ್ತು (c) ಸರಿ ಇದೆ |
| (4) | ಮೇಲಿನ ಯಾವುದೂ ಸರಿ ಇಲ್ಲ |
CORRECT ANSWER
(3) (a), (b) ಮತ್ತು (c) ಸರಿ ಇದೆ
|
58. | ‘ಅರಿವು’ ಎಂಬುದು |
|
| (1) | ಸೂಕ್ಷ್ಮ ಸಾಲ ಯೋಜನೆ |
| (2) | ಮೃದು ಸಾಲ ಯೋಜನೆ |
| (3) | ಶಿಕ್ಷಣ ಸಾಲ ಯೋಜನೆ |
| (4) | ನೀರಾವರಿ ಸಾಲ ಯೋಜನೆ |
CORRECT ANSWER
(3) ಶಿಕ್ಷಣ ಸಾಲ ಯೋಜನೆ
|
59. | ಡಾ. ಎ.ಪಿ.ಜೆ. ಕಲಂ ಅವರ (PURA) ಮಾದರಿಯಲ್ಲಿ ಉಲ್ಲೇಖಿಸಿರುವ ನಾಲ್ಕು ಸಂಪರ್ಕಗಳು |
|
| (1) | ಭೌತಿಕ, ಡಿಜಿಟಲ್, ಜ್ಞಾನ, ಆರ್ಥಿಕ |
| (2) | ಭೌತಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ |
| (3) | ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಭಾವನಾತ್ಮಕ |
| (4) | ಸಾಂಸ್ಕೃತಿಕ, ರಾಜಕೀಯ, ಭೌತಿಕ, ಸಾಮಾಜಿಕ |
CORRECT ANSWER
(1) ಭೌತಿಕ, ಡಿಜಿಟಲ್, ಜ್ಞಾನ, ಆರ್ಥಿಕ
|
60. | ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಯಾರು? |
|
| (1) | ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು |
| (2) | ಗ್ರಾಮ ಪಂಚಾಯಿತಿ ಅಧ್ಯಕ್ಷರು |
| (3) | ಹಿರಿಯ ಸದಸ್ಯರು |
| (4) | PDO |
CORRECT ANSWER
(1) ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು
|
61. | ವಾತಾವರಣದಲ್ಲಿರುವ ಓಜೋನ್ ಸಾಂದ್ರೀಕರಣವನ್ನು __________ ನಿಂದ ಅಳೆಯಲಾಗುವುದು. |
|
| (1) | ಡಾಬ್ಸನ್ |
| (2) | ಪ್ಯಾಸ್ಕಲ್ |
| (3) | ನ್ಯೂಟನ್ |
| (4) | ಜೊಲ್ |
CORRECT ANSWER
(1) ಡಾಬ್ಸನ್
|
62. | ಭಾರತದ ಯಾವ ಋತುವಿನಲ್ಲಿ ಪರಿಸರಣ ಮಳೆಯು ಸಾಮಾನ್ಯವಾಗಿದೆ? |
|
| (1) | ಚಳಿಗಾಲ |
| (2) | ಬೇಸಿಗೆ ಕಾಲ |
| (3) | ಹಿಂದಿರುಗುವ ಮಾನ್ಸೂನ್ ಕಾಲ |
| (4) | ಮಳೆಗಾಲ |
CORRECT ANSWER
(2) ಬೇಸಿಗೆ ಕಾಲ
|
63. | ಈ ಕೆಳಗಿನ ರಾಜ್ಯಗಳನ್ನು ಅವುಗಳ ಭೌಗೋಳಿಕ ಕ್ಷೇತ್ರಕ್ಕನುಗುಣವಾಗಿ ಇಳಿಕೆ ಕ್ರಮದಲ್ಲಿ ಜೋಡಿಸಿ. |
|
| (1) | ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ |
| (2) | ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ |
| (3) | ರಾಜಸ್ಥಾನ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ |
| (4) | ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ |
CORRECT ANSWER
(2) ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ
| | I -ನದಿಗಳು | | II -ಬಲದಂಡೆ ಉಪನದಿ |
| (A) | ಗಂಗಾ | (i) | ಷಾಯೋಕ್ |
| (B) | ಸಿಂಧೂ | (ii) | ಸುಖಿ |
| (C) | ಕಾವೇರಿ | (iii) | ಸುವರ್ಣವತಿ |
| (D) | ತಾಪಿ/ತಪತಿ | (iv) | ಸೋನ್ |
| ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ : |
| |
|
| | (A) | (B) | (C) | (D) |
| (1) | (iv) | (i) | (iii) | (ii) |
| (2) | (ii) | (iv) | (iii) | (i) |
| (3) | (iv) | (ii) | (i) | (iii) |
| (4) | (i) | (ii) | (iii) | (iv) |
CORRECT ANSWER
(1) (iv), (i), (iii), (ii)
|
65. | ಕೆಳಗಿನ ಹೇಳಿಕೆಗಳನ್ನು ಓದಿರಿ – ಸಮರ್ಥನೆ ಮತ್ತು ಕಾರಣ, ಇದರಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ |
| ಸಮರ್ಥನೆ : ಒಂದು ದೊಡ್ಡ ಜನಸಂಖ್ಯೆಯು ತನ್ನ ಸೀಮಿತ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೇರುತ್ತದೆ ಮತ್ತು ಅನೇಕ ಸಾಮಾಜಿಕ – ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಿದೆ. |
| ಕಾರಣ : ಒಟ್ಟು 1210 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಭಾರತವು ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. |
|
| (1) | ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ. |
| (2) | ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿಲ್ಲ |
| (3) | ಸಮರ್ಥನೆ ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ |
| (4) | ಸಮರ್ಥನೆ ತಪ್ಪಾಗಿದೆ ಆದರೆ ಕಾರಣವು ಸರಿಯಾಗಿದೆ |
CORRECT ANSWER
(3) ಸಮರ್ಥನೆ ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ
|
66. | ಸೆಪ್ಟೆಂಬರ್ 2022 ರಲ್ಲಿ ಭಾರತದ ರಾಷ್ಟ್ರಪತಿಯವರು ಕೆಳಗಿನವುಗಳನ್ನು ಉದ್ಘಾಟಿಸಿದರು ಅದಕ್ಕೆ ಸಂಬಂಧಿಸಿದ ಘಟನೆ ಈ ಕೆಳಗಿನಂತಿವೆ. |
| (a) | ಮೈಸೂರು ದಸರಾ |
| (b) | ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಬೆಳಗಾವಿ |
| (c) | ಸೇಂಟ್ ಜೋಸೇಫ್ ವಿಶ್ವವಿದ್ಯಾಲಯ, ಬೆಂಗಳೂರು |
| | ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ? |
|
| (1) | (a) ಮಾತ್ರ |
| (2) | (b) ಮಾತ್ರ |
| (3) | (a) ಮತ್ತು (b) ಮಾತ್ರ |
| (4) | (a) ಮತ್ತು (c) ಮಾತ್ರ |
CORRECT ANSWER
(4) (a) ಮತ್ತು (c) ಮಾತ್ರ
| | I ನದಿಗಳು | | II ಮೂಲಗಳು |
| (A) | ಮಹಾನದಿ | (i) | ಮಹಾಬಲೇಶ್ವರ |
| (B) | ಗೋದಾವರಿ | (ii) | ಅಮನ್‌ಕಂಟಕ್ |
| (C) | ಕೃಷ್ಣ | (iii) | ಶಿಹಾವ |
| (D) | ನರ್ಮದಾ | (iv) | ನಾಸಿಕ್ |
| (E) | ತಾಪಿ | (v) | ಮುಲ್ತಾಯ್ |
| ಸಂಕೇತಗಳು : |
| |
|
| | (A) | (B) | (C) | (D) | (E) |
| (1) | (iii) | (i) | (ii) | (iv) | (v) |
| (2) | (v) | (i) | (iii) | (iv) | (ii) |
| (3) | (iii) | (iv) | (i) | (ii) | (v) |
| (4) | (i) | (iii) | (iv) | (ii) | (v) |
CORRECT ANSWER
(3) (iii), (iv), (i), (ii), (v)
|
68. | ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಸಮೂಹ ಯಾವುದು? |
|
| (1) | ಅಂಡಮಾನ್ ಮತ್ತು ನಿಕೋಬಾರ್ |
| (2) | ಮಲೇಷ್ಯಾ |
| (3) | ಇಂಡೋನೇಷ್ಯಾ |
| (4) | ಮಾಲ್ಡೀವ್ಸ್ |
CORRECT ANSWER
(3) ಇಂಡೋನೇಷ್ಯಾ
|
69. | ‘ದೇವಾಲಯಗಳ ರಾಜ ಎಂದು ಕರೆಯಲ್ಪಡುವ ಕಲ್ಯಾಣಿ ಚಾಲುಕ್ಯ ಕಾಲದ ದೇವಾಲಯ ಯಾವುದು? |
|
| (1) | ಕುರವತ್ತಿಯ ಮಲ್ಲಿಕಾರ್ಜುನ ದೇವಾಲಯ |
| (2) | ನೀಲಗುಂದದ ಭೀಮೇಶ್ವರ ದೇವಾಲಯ |
| (3) | ಇಟಗಿಯ ಮಹಾದೇವ ದೇವಾಲಯ |
| (4) | ಬಾಗುಳಿಯ ಕಲ್ಲೇಶ್ವರ ದೇವಾಲಯ |
CORRECT ANSWER
(3) ಇಟಗಿಯ ಮಹಾದೇವ ದೇವಾಲಯ
|
70. | ‘ಸವತಿ ಗಂಧವಾರಣೆ’ ಎಂಬ ಬಿರುದು ಹೊಂದಿದ್ದ ಹೊಯ್ಸಳ ರಾಣಿ ಯಾರು? |
|
| (1) | ಸುಗ್ಗಲೆ |
| (2) | ಚಂದ್ರಲೆ |
| (3) | ಶಾಕುಂತಲೆ |
| (4) | ಶಾಂತಲೆ |
CORRECT ANSWER
(4) ಶಾಂತಲೆ
| | ಪಟ್ಟಿ-I | | ಪಟ್ಟಿ-II |
| (A) | ಬಿಜಾಪುರ | (i) | ನಿಜಾಂ ಷಾಹಿ |
| (B) | ಗೋಲ್ಗೊಂಡ | (ii) | ಕುತುಬ್ ಷಾಹಿ |
| (C) | ಅಹಮದ್ ನಗರ | (iii) | ಆದಿಲ್ ಷಾಹಿ |
| (D) | ಬೀದರ್ | (iv) | ಬರೀದ್ ಷಾಹಿ |
| ಸಂಕೇತಗಳು : |
| |
|
| | (A) | (B) | (C) | (D) |
| (1) | (iii) | (ii) | (i) | (iv) |
| (2) | (iv) | (i) | (ii) | (iii) |
| (3) | (i) | (ii) | (iii) | (iv) |
| (4) | (ii) | (iv) | (iii) | (i) |
CORRECT ANSWER
(1) (iii), (ii), (i), (iv)
|
72. | ಮೈಸೂರಿನ ದೊರೆ ಚಿಕ್ಕ ದೇವರಾಜ ಒಡೆಯರಿಗೆ ‘ರಾಜಾ ಜಗದೇವ್’ ಎಂಬ ಬಿರುದನ್ನು ನೀಡಿದ ಮೊಘಲ್ ಚಕ್ರವರ್ತಿ ಯಾರು? |
|
| (1) | ಜಹಂಗೀರ್ |
| (2) | ಅಕ್ಬರ್ |
| (3) | ಷಹಜಹಾನ್ |
| (4) | ಔರಂಗಜೇಬ್ |
CORRECT ANSWER
(4) ಔರಂಗಜೇಬ್
|
73. | ಬೆಂಗಳೂರು ಕೆಂಪೇಗೌಡನೆಂದೇ ಪ್ರಸಿದ್ಧರಾದ ಯಲಹಂಕ ನಾಡ ಪ್ರಭು |
|
| (1) | ಹಿರಿಯ ಕೆಂಪೇಗೌಡ |
| (2) | 2ನೇ ಕೆಂಪೇಗೌಡ |
| (3) | ಕೆಂಪ ನಂಜೇಗೌಡ |
| (4) | 3ನೇ ಕೆಂಪೇಗೌಡ |
CORRECT ANSWER
(1) ಹಿರಿಯ ಕೆಂಪೇಗೌಡ
|
74. | ಬೆಂಗಳೂರು-ಜಾಲಾರು ಪೇಟೆಗಳ ನಡುವೆ ರೈಲ್ವೆ ಸಂಪರ್ಕವನ್ನು ಯಾವ ಕಮೀಷನರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು? |
|
| (1) | ಮಾರ್ಕ್ ಕಬ್ಬನ್ |
| (2) | ಎಲ್.ಬಿ. ಬೌರಿಂಗ್ |
| (3) | ಸ್ಯಾಂಡ್ರಸ್ |
| (4) | ಜೆ.ಡಿ. ಗೋರ್ಡನ್ |
CORRECT ANSWER
(1) ಮಾರ್ಕ್ ಕಬ್ಬನ್
|
75. | ಗಾಂಧಾರ ಕಲೆಯ ಪೋಷಕರಾಗಿದ್ದವರು |
|
| (1) | ಕನಿಷ್ಠ |
| (2) | ಅಶೋಕ |
| (3) | ರುದ್ರಧಾಮ |
| (4) | ಸಮುದ್ರಗುಪ್ತ |
CORRECT ANSWER
(1) ಕನಿಷ್ಠ
|
76. | ಕಾಲ್ಚಕ್ರಿಯನ್ ಯಾವ ಧರ್ಮದ ತಂತ್ರ ಶಾಸ್ತ್ರಕ್ಕೆ ಸೇರಿದುದು? |
|
| (1) | ಬೌದ್ಧ ಧರ್ಮ |
| (2) | ಜೈನ ಧರ್ಮ |
| (3) | ಹಿಂದೂ ಧರ್ಮ |
| (4) | ಮೇಲಿನ ಯಾವುದೂ ಅಲ್ಲ |
CORRECT ANSWER
(1) ಬೌದ್ಧ ಧರ್ಮ
|
77. | ಎರಡನೇ ನಾಗಭಟ್ಟರು ಯಾವ ವಂಶಕ್ಕೆ ಸೇರಿದವರು? |
|
| (1) | ಪರಮಾರ ರಾಜವಂಶ |
| (2) | ಗುರ್ಜರ-ಪ್ರತಿಹಾರ ರಾಜವಂಶ |
| (3) | ಚೋಳ ರಾಜವಂಶ |
| (4) | ಕಳಚೂರಿ ರಾಜವಂಶ |
CORRECT ANSWER
(2) ಗುರ್ಜರ-ಪ್ರತಿಹಾರ ರಾಜವಂಶ
|
78. | “ವಿಶ್ವ ಕಾರ್ಮಿಕರೆಲ್ಲ ಸಂಘಟಿತರಾಗಿ ಕಳೆದುಕೊಳ್ಳುವುದು ನಿಮ್ಮ ಸಂಕೋಲೆಗಳೇ ಹೊರತು ಮತ್ತೇನು ಅಲ್ಲ” ಈ ಕರೆ ನೀಡಿದವರು ಯಾರು? |
|
| (1) | ಲೆನಿನ್ |
| (2) | ಕಾರ್ಲ್ ಮಾಕ್ಸ್ |
| (3) | ಮಾವೊ |
| (4) | ಸ್ಟಾಲಿನ್ |
CORRECT ANSWER
(2) ಕಾರ್ಲ್ ಮಾಕ್ಸ್
|
79. | ಭಾರತ ಸರ್ಕಾರದ “ಫಿಟ್ ಇಂಡಿಯಾ” ಕಾರ್ಯಕ್ರಮ ಘೋಷಣೆಯ ಉದ್ದೇಶವೇನು? |
|
| (1) | ಬ್ರಿಟೀಷರನ್ನು ಹೊರಹಾಕುವುದು |
| (2) | ಬಾಂಗ್ಲಾದೇಶೀಯ ಅತಿಕ್ರಮಿಗಳನ್ನು ಹೊರಹಾಕುವುದು |
| (3) | ಭಾರತೀಯ ಯುವಕರ ದೈಹಿಕ ಆರೋಗ್ಯ ಕಾಪಾಡುವುದು |
| (4) | ಸೈಕಲ್ ಜಾಥಾ ಮಾಡುವುದು |
CORRECT ANSWER
(3) ಭಾರತೀಯ ಯುವಕರ ದೈಹಿಕ ಆರೋಗ್ಯ ಕಾಪಾಡುವುದು
|
80. | _____________ರ ಶಿಫಾರಸ್ಸಿನ ಮೇರೆಗೆ ಕೇಂದ್ರ ಜಾಗೃತ ಆಯೋಗವನ್ನು ಸ್ಥಾಪಿಸಲಾಯಿತು. |
|
| (1) | ಭಾರತದ ಆಡಳಿತ ಸುಧಾರಣಾ ಆಯೋಗ |
| (2) | ಗೋರ್‌ವಾಲ ವರದಿ |
| (3) | ಸಂತಾನಮ್ ಸಮಿತಿ |
| (4) | ಕೃಪಾಲನಿ ಸಮಿತಿ |
CORRECT ANSWER
(3) ಸಂತಾನಮ್ ಸಮಿತಿ
|
81. | ಹೇಬಿಯಸ್ ಕಾರ್ಪಸ್ ಭಾರತೀಯ ಸಂವಿಧಾನದ ಯಾವ ಭಾಗಕ್ಕೆ ಸಂಬಂಧಿಸಿದೆ? |
|
| (1) | ಪ್ರಸ್ತಾವನೆ |
| (2) | ಮೂಲಭೂತ ಹಕ್ಕುಗಳು |
| (3) | ರಾಜ್ಯ ನಿರ್ದೇಶಕ ತತ್ವಗಳು |
| (4) | ಮೂಲಭೂತ ಕರ್ತವ್ಯಗಳು |
CORRECT ANSWER
(2) ಮೂಲಭೂತ ಹಕ್ಕುಗಳು
|
82. | ಈ ಕೆಳಗಿನ ಯಾವುದು ಮೈತ್ರಿ ಕೂಟಕ್ಕೆ ಸೇರಿದುದ್ದಲ್ಲ? |
|
| (1) | ನ್ಯಾಟೋ-NATO |
| (2) | ಸೀಟೋ-SEATO |
| (3) | ಸೆಂಟೋ-CENTO |
| (4) | ಡಬ್ಲ್ಯೂಟಿಓ-WTO |
CORRECT ANSWER
(4) ಡಬ್ಲ್ಯೂಟಿಓ-WTO
|
83. | ಕರ್ನಾಟಕ ಭೂ ಸುಧಾರಣಾ ಕಾಯಿದೆ ಯಾವ ಸೆಕ್ಷನ್ಗಳನ್ನು ತೆಗೆದು ಹಾಕುವ ಮೂಲಕ ಕೃಷಿಯೇತರರಿಗೂ ಕೃಷಿ ಭೂಮಿಯನ್ನು ಕೊಳ್ಳುವುದಕ್ಕೆ ಅವಕಾಶ ಮಾಡಿದೆ |
|
| (1) | Sec 79 ಮತ್ತು 79A |
| (2) | Sec 790 ಮತ್ತು 79D |
| (3) | Sec 79A ಮತ್ತು 79B |
| (4) | Sec 79B ಮತ್ತು 79C |
CORRECT ANSWER
(3) Sec 79A ಮತ್ತು 79B
|
84. | ‘ದಿ ಪ್ಯೂಪಿಲ್ ಆಫ್ ಇಂಡಿಯಾ’ ಪುಸ್ತಕ ಬರೆದವರು ಯಾರು? |
|
| (1) | ಸರ್ ಹರ್ಬರ್ಟ್ ರಿಸ್ಲೆ |
| (2) | ನೆಸ್‌ಫೀಲ್ಡ್ |
| (3) | ಜಿ.ಎಸ್. ಘುರ್ಯೆ |
| (4) | ಎಂ.ಎನ್. ಶ್ರೀನಿವಾಸ |
CORRECT ANSWER
(1) ಸರ್ ಹರ್ಬರ್ಟ್ ರಿಸ್ಲೆ
|
85. | ಯಾವ ಗ್ರಹವನ್ನು ಅಧ್ಯಯನ ಮಾಡಲು ನಾಸಾದ ‘ನ್ಯು ಹೊರೈಜನ್’ ವ್ಯೋಮ ನೌಕೆಯನ್ನು ಹಾರಿಸಲಾಯಿತು? |
|
| (1) | ಪ್ಲಟೊ |
| (2) | ಮಂಗಳ |
| (3) | ಬುಧ |
| (4) | ಗುರು |
CORRECT ANSWER
(1) ಪ್ಲಟೊ
|
86. | ಮೊದಲ MRI ಸ್ಕ್ಯಾನರನ್ನು ಕಂಡುಹಿಡಿದವರು |
|
| (1) | ರೇಮಂಡ್ ಡಾಮಡಾನ್ |
| (2) | ವಿಲಿಯಂ ರಿಚರ್ಡ್‌ಸನ್ |
| (3) | ಹೆನ್ರಿಚ್ ರೊಡಾಲ್ಫ್ |
| (4) | ಎನ್‌ರಿಕ್ ಫರ್ಮಿ |
CORRECT ANSWER
(1) ರೇಮಂಡ್ ಡಾಮಡಾನ್
|
87. | ಚಂದ್ರನ ಬಿಂಬಾವಸ್ಥೆಗಳು ಸಂಭವಿಸಲು ಕಾರಣ |
|
| (1) | ಚಂದ್ರನ ವಾತಾವರಣದ ದಟ್ಟತೆಯು ಸ್ಥಿರವಾಗಿಲ್ಲದಿರುವುದು |
| (2) | ಚಂದ್ರ ಮತ್ತು ಭೂಮಿಗಳ ಪರಿಭ್ರಮಣೆಯ ಗತಿ ಒಂದೇಯಾಗಿರುವುದು |
| (3) | ಬೆಳಕನ್ನು ಪ್ರತಿಫಲಿಸುವ ಚಂದ್ರನ ಸ್ವಲ್ಪಭಾಗ ಮಾತ್ರ ನಮಗೆ ಕಾಣುವುದು |
| (4) | ಭೂಮಿ ಮತ್ತು ಚಂದ್ರನ ದೂರವು ನಿರಂತರ ಬದಲಾಗುವುದು |
CORRECT ANSWER
(3) ಬೆಳಕನ್ನು ಪ್ರತಿಫಲಿಸುವ ಚಂದ್ರನ ಸ್ವಲ್ಪಭಾಗ ಮಾತ್ರ ನಮಗೆ ಕಾಣುವುದು
|
88. | ಬೆಳಕು ಹೊರಸೂಸುವ ಡಯೋಡ್‌ಗಳು ಯಾವುದರಿಂದ ಮಾಡಲ್ಪಟ್ಟಿವೆ? |
|
| (1) | ಜರಮೇನಿಯಂ (Ge) |
| (2) | ಸಿಲಿಕಾನ್ (Si) |
| (3) | ಗ್ಯಾಲಿಯಂ ಅರಸನಾಯಡ್ ಫಾಸ್ಪೇಡ್ (GaAsP) |
| (4) | ತಾಮ್ರ (ಕಾಪರ್) |
CORRECT ANSWER
(3) ಗ್ಯಾಲಿಯಂ ಅರಸನಾಯಡ್ ಫಾಸ್ಪೇಡ್ (GaAsP)
|
89. | ಬೆಳಕಿನ ವೇಗ 3 × 10⁸ ಮೀಟರ್/ಸೆಕೆಂಡ್ (ms⁻¹) ನಿಂದ ಮಿಲಿಮೀಟರ್/ಪಿಕೊಸೆಕೆಂಡ್ (mm/ps)ಗೆ ಪರಿವರ್ತಿಸಿದಾಗ ಸಮಾನವಾಗಿರುವ ಮೌಲ್ಯ |
|
| (1) | 3 × 10⁻¹ mm/ps |
| (2) | 3 × 10¹ mm/ps |
| (3) | 3 × 10⁻⁹ mm/ps |
| (4) | 3 × 10⁹ mm/ps |
CORRECT ANSWER
(1) 3 × 10⁻¹ mm/ps
|
90. | ಮಳೆ ಒಂದು ಸಮತಲಕ್ಕೆ 35 ms⁻¹ ಜವದಲ್ಲಿ ಲಂಬವಾಗಿ ಬೀಳುತ್ತದೆ ಎಂದು ಭಾವಿಸಿ. ಅದೇ ಸಮಯಕ್ಕೆ ಸರಿಯಾಗಿ ಗಾಳಿಯು 35 ms⁻¹ ಜವದಲ್ಲಿ ಪಶ್ಚಿಮದಿಂದ ಪೂರ್ವದ ಕಡೆಗೆ ಮಳೆಯ ದಿಕ್ಕಿಗೆ ಲಂಬವಾಗಿ ಬೀಸುತ್ತದೆ. ಹಾಗಾದರೆ ಆ ಸ್ಥಳದಲ್ಲಿರುವ ವ್ಯಕ್ತಿ ಯಾವ ದಿಕ್ಕಿಗೆ ಛತ್ರಿಯನ್ನು ಹಿಡಿಯಬೇಕು? |
|
| (1) | 90° ಪೂರ್ವ ದಿಕ್ಕಿನ ಕಡೆ |
| (2) | 19° ಪೂರ್ವ ದಿಕ್ಕಿನ ಕಡೆ |
| (3) | 45° ಪೂರ್ವ ದಿಕ್ಕಿನ ಕಡೆ |
| (4) | 60° ಪೂರ್ವ ದಿಕ್ಕಿನ ಕಡೆ |
CORRECT ANSWER
(3) 45° ಪೂರ್ವ ದಿಕ್ಕಿನ ಕಡೆ
|
91. | ಒಂಟಿ ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳುವ ಸಮಾನ ಹಕ್ಕನ್ನು ಪಡೆದಿರುವಳೆಂದು ದಿನಾಂಕ 29/09/2022 ರಂದು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನ ಪರಿಗಣಿಸಿ. |
| (a) | ಗರ್ಭನಿರೋಧಕ ಮತ್ತು ಲೈಂಗಿಕ ಆರೋಗ್ಯದ ಕುರಿತು ಶಿಕ್ಷಣ ಮತ್ತು ಮಾಹಿತಿಯನ್ನು ಪಡೆಯುವ ಹಕ್ಕನ್ನು ಒಳಗೊಂಡಂತೆ ಮರು ಉತ್ಪಾದನೆ ಹಕ್ಕು. |
| (b) | ಮಗುವನ್ನು ಯಾವಾಗ ಹೊಂದುವುದು ಅಥವಾ ಬೇಡವೇ ಎಂಬ ಆಯ್ಕೆಯ ಹಕ್ಕು |
| (c) | ಆದರೆ ಎಷ್ಟು ಮಕ್ಕಳನ್ನು ಹೊಂದುವ ಆಯ್ಕೆಯ ಸ್ವಾತಂತ್ರವನ್ನು ಹೊರತುಪಡಿಸಿ. |
| (d) | 2021ರಲ್ಲಿನ ಎಮ್‌ಟಿಪಿ (ತಿದ್ದುಪಡಿ / ಕಾಯ್ದೆಯು ‘ಸಂಗಾತಿ’ ಎಂಬ ಪದವನ್ನು ಒಳಗೊಂಡಿರುವುದು ಸೂಚಿಸುವುದೇನೆಂದರೆ, ಮದುವೆಯಾದ ಮಹಿಳೆಯನ್ನು ಕುರಿತು ಮಾತ್ರವೇ ಕಾನೂನು ಒಪ್ಪಿಗೆ ನೀಡಿರುವುದಿಲ್ಲ. |
| | ಮೇಲಿನ ಹೇಳಿಕೆ/ಗಳಲ್ಲಿ ಸರಿಯಾದದ್ದು ಯಾವುದು |
|
| (1) | (a), (b) ಮತ್ತು (c) ಮಾತ್ರ |
| (2) | (b), (c) ಮತ್ತು (d) ಮಾತ್ರ |
| (3) | (a), (b) ಮತ್ತು (d) ಮಾತ್ರ |
| (4) | ಮೇಲಿನ ಎಲ್ಲವೂ |
CORRECT ANSWER
(3) (a), (b) ಮತ್ತು (d) ಮಾತ್ರ
|
92. | ಬೀಟಾಟ್ರಾನ್ ಕೆಳಗಿನ ಯಾವ ಕಣಗಳನ್ನು ವೇಗೋತ್ಕರ್ಷಿಸಲು ಬಳಸುವ ಸಾಧನವಾಗಿದೆ? |
|
| (1) | ಫೋಟಾನ್ |
| (2) | ನ್ಯೂಟ್ರಾನ್ |
| (3) | ಎಲೆಕ್ಟ್ರಾನ್ |
| (4) | ನ್ಯೂಟ್ರಿನೊ |
CORRECT ANSWER
(3) ಎಲೆಕ್ಟ್ರಾನ್
|
93. | ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಗಂಡು ನೌಕರರ ವೇತನ ರೂ. 520 ಮತ್ತು ಹೆಣ್ಣು ನೌಕರರ ವೇತನ ರೂ. 420 ಆಗಿರುತ್ತದೆ. ಹಾಗೂ ಒಟ್ಟು ಸರಾಸರಿ ವೇತನ ರೂ. 500 . ಆದರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣು ನೌಕರರ ಪ್ರತಿಶತ ಎಷ್ಟು? |
|
| (1) | (20, 80) |
| (2) | (60, 40) |
| (3) | (80, 20) |
| (4) | (40, 60) |
CORRECT ANSWER
(2) (60, 40)
|
94. | ಹತ್ತು ವರ್ಷಗಳ ಹಿಂದೆ ತಂದೆಯ ವಯಸ್ಸು ಅವನ ಮಗನ ವಯಸ್ಸಿಗಿಂತ ಹನ್ನೆರಡು ಪಟ್ಟು ಇತ್ತು ಮತ್ತು 10 ವರ್ಷಗಳ ನಂತರ ಅವನ ವಯಸ್ಸು ಮಗನ ವಯಸ್ಸಿಗಿಂತ ಎರಡು ಪಟ್ಟು ಇದ್ದರೆ, ಈ ಇಬ್ಬರ ಈಗಿನ ವಯಸ್ಸು ಎಷ್ಟು? |
|
| (1) | ತಂದೆಯ ವಯಸ್ಸು 34 ವರ್ಷ ಮತ್ತು ಮಗನ ವಯಸ್ಸು 12 ವರ್ಷ |
| (2) | ತಂದೆಯ ವಯಸ್ಸು 30 ವರ್ಷ ಮತ್ತು ಮಗನ ವಯಸ್ಸು 10 ವರ್ಷ |
| (3) | ತಂದೆಯ ವಯಸ್ಸು 32 ವರ್ಷ, ಮತ್ತು ಮಗನ ವಯಸ್ಸು 12 ವರ್ಷ |
| (4) | ತಂದೆಯ ವಯಸ್ಸು 34 ವರ್ಷ ಮತ್ತು ಮಗನ ವಯಸ್ಸು 14 ವರ್ಷ |
CORRECT ANSWER
(1) ತಂದೆಯ ವಯಸ್ಸು 34 ವರ್ಷ ಮತ್ತು ಮಗನ ವಯಸ್ಸು 12 ವರ್ಷ
|
95. | ²⁵Cₙ₊₇ = ²⁵C₄ₙ₋₂- ಆದರೆ ‘n’ ಎಲ್ಲಾ ಬೆಲೆಗಳು ಎಷ್ಟು? |
|
| (1) | 3 ಮತ್ತು 4 |
| (2) | 4 ಮತ್ತು 5 |
| (3) | 3 |
| (4) | 4 |
CORRECT ANSWER
(1) 3 ಮತ್ತು 4
|
96. | ಒಬ್ಬ ವ್ಯಕ್ತಿಯು ತನ್ನ ಪ್ರಯಾಣವನ್ನು 15 ಗಂಟೆಗಳಲ್ಲಿ ಪೂರೈಸುತ್ತಾನೆ. ತನ್ನ ಪ್ರಯಾಣದ ಅರ್ಧದಷ್ಟು ದೂರವನ್ನು 12 ಕಿ.ಮೀ./ಗಂ ಹಾಗೂ ಉಳಿದ ಅರ್ಧ ದೂರವನನ್ನು 18 ಕಿ.ಮೀ./ಗಂ ವೇಗದಲ್ಲಿ ಚಲಿಸಿ ಪೂರೈಸುತ್ತಾನೆ ಹಾಗಾದರೆ ಅವನು ಕ್ರಮಿಸಿದ ದೂರವು ಎಷ್ಟು ಆಗಿರುತ್ತದೆ? ಕಿ.ಮೀ. ಗಳಲ್ಲಿ |
|
| (1) | 210 |
| (2) | 216 |
| (3) | 220 |
| (4) | 225 |
CORRECT ANSWER
(2) 216
|
97. | P ಮತ್ತು Q ರವರ ಪ್ರತಿ ತಿಂಗಳ ಸರಾಸರಿ ಆದಾಯವು 6,200 ರೂಪಾಯಿಗಳು, Q ಮತ್ತು R ರವರ ಪ್ರತಿ ತಿಂಗಳ ಸರಾಸರಿ ಆದಾಯವು 7,000 ರೂಪಾಯಿಗಳು, P ಮತ್ತು R ರವರ ಪ್ರತಿ ತಿಂಗಳ ಆದಾಯವು 8,300 ರೂಪಾಯಿಗಳು ಆಗಿರುತ್ತದೆ. ಹಾಗಾದರೆ P ನ ಪ್ರತಿ ತಿಂಗಳ ಆದಾಯವು ಎಷ್ಟಾಗಿರುತ್ತದೆ? |
|
| (1) | 7000 |
| (2) | 7500 |
| (3) | 8000 |
| (4) | 8500 |
CORRECT ANSWER
(2) 7500
|
98. | x² – x – 2 ಎಂಬ ಬಹುಪದೋಕ್ತಿಯ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧಗಳು |
|
| (1) | -1 ಮತ್ತು -2 |
| (2) | -1 ಮತ್ತು 2 |
| (3) | 1 ಮತ್ತು -2 |
| (4) | 1 ಮತ್ತು 2 |
CORRECT ANSWER
(3) 1 ಮತ್ತು -2
|
99. | ಒಂದು ಏಕಮಾನ ತ್ರಿಜ್ಯವುಳ್ಳ ವೃತ್ತದ ತ್ರಿಜ್ಯವನ್ನು ಅದರ ಎರಡು ಪಟ್ಟು ತ್ರಿಜ್ಯಕ್ಕೆ ವೃದ್ಧಿಸಿದರೆ ಮೊದಲನೆ ವೃತ್ತದ ಮತ್ತು ಎರಡನೆಯ ವೃತ್ತದ ವಿಸ್ತೀರ್ಣಗಳ ಅನುಪಾತವು |
|
| (1) | 1 : 4 |
| (2) | 1 : 5 |
| (3) | 1 : 2 |
| (4) | 1 : 1 |
CORRECT ANSWER
(1) 1 : 4
|
100. | ಸುಮೇಶ್ ತನ್ನ ಮನೆಯಿಂದ ದಕ್ಷಿಣಕ್ಕೆ 15 ಕಿ.ಮೀ. ನಂತರ ಪೂರ್ವಕ್ಕೆ ತಿರುಗಿ 10 ಕಿ.ಮೀ. ನಂತರ ಉತ್ತರಕ್ಕೆ ತಿರುಗಿ 5 ಕಿ.ಮೀ. ಅಂತಿಮವಾಗಿ ಅವರು ಪಶ್ಚಿಮಕ್ಕೆ ತಿರುಗಿ 10 ಕಿ.ಮೀ. ಅವನು ತನ್ನ ಮನೆಯಿಂದ ಯಾವ ದಿಕ್ಕಿನಲ್ಲಿದ್ದಾನೆ? |
|
| (1) | ದಕ್ಷಿಣ |
| (2) | ಪೂರ್ವ |
| (3) | ಉತ್ತರ |
| (4) | ಪಶ್ಚಿಮ |
CORRECT ANSWER
(1) ದಕ್ಷಿಣ