WhatsApp Group Join Now
Telegram Group Join Now

kpsc group c GK paper 1 previous question paper 30.11.2022

KPSC GROUP ‘C’ (DRUG ANALYST (BOTANY & CHEMISTRY) IN THE DEPT. OF AYUSH) ಪತ್ರಿಕೆ-I ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆ

1.ಕೆಳಗಿನ ಯಾವ ತಿದ್ದುಪಡಿಗಳು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ಎರಡು ಪ್ರತ್ಯೇಕ ಮತ್ತು ಸ್ವತಂತ್ರ ಆಯೋಗಗಳಾಗಿ ವಿಭಜಿಸುತ್ತವೆ?
 (1)86 ನೇ ತಿದ್ದುಪಡಿ ಕಾಯಿದೆ
 (2)85 ನೇ ತಿದ್ದುಪಡಿ ಕಾಯಿದೆ
 (3)89 ನೇ ತಿದ್ದುಪಡಿ ಕಾಯಿದೆ
 (4)90 ನೇ ತಿದ್ದುಪಡಿ ಕಾಯಿದೆ

CORRECT ANSWER

(3) 89 ನೇ ತಿದ್ದುಪಡಿ ಕಾಯಿದೆ


2.ಭಾರತದಲ್ಲಿ ರಾಜ್ಯಶಾಸಕಾಂಗದ ವಿಧಾನ ಪರಿಷತ್ತಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಿದೆ?
 (a)ವಿಧಾನ ಪರಿಷತ್ತಿನ ಒಟ್ಟು ಸದಸ್ಯರಲ್ಲಿ 1/3 ರಷ್ಟು ಮಂದಿಯನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಆರಿಸುತ್ತವೆ
 (b)ವಿಧಾನಪರಿಷತ್ತು ಶಾಶ್ವತ ಸದನವಾಗಿದ್ದು ಅದರ 2/3 ರಷ್ಟು ಸದಸ್ಯರು ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುತ್ತಾರೆ
 (c)ವಿಧಾನ ಪರಿಷತ್ತನ್ನು ಸ್ಥಾಪಿಸಲು ಅಥವಾ ರದ್ದುಪಡಿಸಲು ಅಲ್ಲಿನ ವಿಧಾನಸಭೆಯಿಂದ 2/3ರಷ್ಟು ಬಹುಮತದಿಂದ ಒಂದು ಗೊತ್ತುವಳಿಯು ಮೊದಲು ಪಾಸಾಗಬೇಕು
 ಕೆಳಗಿನ ಕೋಡುಗಳನ್ನು ಬಳಸಿ ಸರಿಯಾದ ಹೇಳಿಕೆಗಳನ್ನು ಆರಿಸಿ.
 (1)(a) ಮತ್ತು (b) ಮಾತ್ರ
 (2)(a) ಮತ್ತು (c) ಮಾತ್ರ
 (3)(b) ಮತ್ತು (c) ಮಾತ್ರ
 (4)(a), (b) ಮತ್ತು (c) ಮಾತ್ರ
CORRECT ANSWER

(2) (a) ಮತ್ತು (c) ಮಾತ್ರ


3.ಪಟ್ಟಿ-I ಅನ್ನು ಪಟ್ಟಿ-II ನೊಂದಿಗೆ ಹೊಂದಿಸಿ ಮತ್ತು ಪಟ್ಟಿಗಳ ಕೆಳಗೆ ನೀಡಿರುವ ಕೋಡ್‌ಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  ಪಟ್ಟಿ-I ಪಟ್ಟಿ-II
 (A)ಕ್ವಾಂಟಮ್ ಮೆರುಯಿಟ್(i)ಎರಡೂ ಪಕ್ಷಗಳ ಒಂದೇ ವಿಷಯವನ್ನು ಒಂದೇ ಅರ್ಥದಲ್ಲಿ ಒಪ್ಪಿಕೊಂಡಿರಬೇಕು
 (B)ಕ್ವಲ್ಯಾಟರಲ್ ಟ್ರಾನ್ಸಾಕ್ಷನ್ಸ್(ii)ಮುಖ್ಯ ಒಪ್ಪಂದಕ್ಕೆ ವಹಿವಾಟು ಅಂಗ ಸಂಸ್ಥೆ
 (C)ಕಾನ್ಸೆನ್ಸೆಸ್ ಆಡ್‌[ad] ಐಡೆಮ್ (iii)ಮಾಡಿದ ಕೆಲಸಕ್ಕೆ ಅನುಗುಣವಾಗಿ ಪರಿಹಾರ
 (D)ವಾಯ್ಡ್‌ ಅಬ್ಇನಿಷಿಯೋ(iv)ಪ್ರಾರಂಭದಿಂದಲೇ ನಿರರ್ಥಕ
ಕೋಡುಗಳು :
  (A)(B)(C)(D)
 (1)(iv)(ii)(i)(iii)
 (2)(iii)(i)(ii)(iv)
 (3)(iv)(i)(ii)(iii)
 (4)(iii)(ii)(i)(iv)
CORRECT ANSWER

(4) (iii), (ii), (i), (iv)


4.ನೀತಿ ಆಯೋಗ ರೂಪು ಗೊಂಡಿದ್ದು
 (1)ಜನವರಿ 1, 2016
 (2)ಜನವರಿ 1, 2017
 (3)ಜನವರಿ 1, 2015
 (4)ಜನವರಿ 1, 2018
CORRECT ANSWER

(3) ಜನವರಿ 1, 2015


5.‘‘ಸೂಕ್ಷ್ಮ ಹಣಕಾಸಿನ ಪಿತಾಮಹ” ಎಂದು ಬಿರುದು ಪಡೆದ ಅರ್ಥಶಾಸ್ತ್ರಜ್ಞ
 (1)ಮೊಹಮದ್ ಯುನಸ್
 (2)ಅಮರ್ತ್ಯ ಸೇನ್
 (3)ಜಗದೀಶ್ ಭಗವತಿ
 (4)ಬಿ.ಬಿ. ಭಟ್ಟಾಚಾರ್ಯ
CORRECT ANSWER

(1) ಮೊಹಮದ್ ಯುನಸ್


6.‘ಸುಸ್ಥಿರ’ ಅಭಿವೃದ್ಧಿಯ ನೀಲಿ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಪಡೆಯು ಭಾರತ ಮತ್ತು ಯಾವ ದೇಶದ ಸಹಯೋಗ ಹೊಂದಿದೆ?
 (1)ಸ್ವಿಟ್ಜರ್ಲೆಂಡ್
 (2)ನಾರ್ವೆ
 (3)ಸ್ವೀಡನ್
 (4)ಫ್ರಾನ್ಸ್
CORRECT ANSWER

(2) ನಾರ್ವೆ


7.ಭಾರತದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ಯಾವ ಅಂತರಾಷ್ಟ್ರೀಯ ಸಂಸ್ಥೆಯು 500 ದಶಲಕ್ಷ ಡಾಲರ್ ಸಾಲ ನೀಡಲು ಅನುಮೋದಿಸಿದೆ?
 (1)ದಿ ನ್ಯೂ ಡೆವಲೆಪ್ಮೆಂಟ್ ಬ್ಯಾಂಕ್
 (2)ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್
 (3)ಏಷಿಯನ್ ಡೆವಲೆಪಮೆಂಟ್ ಬ್ಯಾಂಕ್
 (4)ಯುನೈಟೆಡ್ ನೇಷನ್ಸ್ ಅರ್ಗನೈಜೇಶನ್
CORRECT ANSWER

(3) ಏಷಿಯನ್ ಡೆವಲೆಪಮೆಂಟ್ ಬ್ಯಾಂಕ್


8.ಉತ್ತರಾರ್ಧ ಗೋಳದ ಯಾವ ಅಕ್ಷಾಂಶಗಳ ನಡುವೆ ಅತೀ ಹೆಚ್ಚು ಲವಣತೆಯು ಕಂಡುಬರುತ್ತದೆ?
 (1)20°ಉ ದಿಂದ 40° ಉ
 (2)10°ಉ ದಿಂದ 50° ಉ
 (3)40°ಉ ದಿಂದ 50° ಉ
 (4)0°ಉ ದಿಂದ 10° ಉ
CORRECT ANSWER

(1) 20°ಉ ದಿಂದ 40° ಉ


9.ಈ ಕೆಳಗಿನ ಹೇಳಿಕೆಗಳನ್ನು ಓದಿ ಮತ್ತು ಸರಿ ಅಥವಾ ತಪ್ಪನ್ನು ಕಂಡುಹಿಡಿಯಿರಿ.
 (a)ಕರಾವಳಿ ಪ್ರದೇಶವು ಸಮುದ್ರದ ಸಸ್ಯವರ್ಗ ಎಂದು ಕರೆಯಲ್ಪಡುವ ವಿಶಿಷ್ಟವಾದ ನೈಸರ್ಗಿಕ ಸಸ್ಯವರ್ಗಕ್ಕೆ ಹೆಸರುವಾಸಿಯಾಗಿದೆ.
 (b)ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗವು 250 ಸೆಂ.ಮೀ. ಗಿಂತ ಹೆಚ್ಚು ಮಳೆ ಪಡೆಯುತ್ತದೆ ಮತ್ತು ಇವು ದಟ್ಟವಾದ ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿವೆ.
 (c)ಬಿದಿರು, ಶ್ರೀಗಂಧ ಮತ್ತು ಹುಣಸೆ ಮರಗಳು ಎಲೆ ಉದುರುವ ಸಸ್ಯವರ್ಗದ ಸಾಮಾನ್ಯ ಮರಗಳಾಗಿವೆ.
 (d)ಶೋಲಾ ಕಾಡುಗಳು ಹೊಳೆಗಳ ಎರಡೂ ಬದಿಗಳಲ್ಲಿ ವಿಶೇಷವಾಗಿ ಪಶ್ಚಿಮ ಘಟ್ಟಗಳ ಪೂರ್ವ ಇಳಿಜಾರುಗಳಲ್ಲಿ ಕಂಡುಬರುತ್ತವೆ.
 (1)(a) ಮತ್ತು (b) ಸರಿ
 (2)(a), (b) ಮತ್ತು (c) ಸರಿ
 (3)(b) ಮತ್ತು (d) ಸರಿ
 (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ
CORRECT ANSWER

(4) ಎಲ್ಲಾ ಹೇಳಿಕೆಗಳು ಸರಿಯಾಗಿವೆ


10.ಬೆಳೆ ತೀವ್ರತೆಯನ್ನು ಹೀಗೆ ಲೆಕ್ಕ ಹಾಕಲಾಗುತ್ತದೆ.
 (1)ಒಟ್ಟು ಬೆಳೆ ಪ್ರದೇಶ ÷ ನಿವ್ವಳ ಬಿತ್ತಿದ ಪ್ರದೇಶ × 100
 (2)ನಿವ್ವಳ ಬಿತ್ತನೆ ಪ್ರದೇಶ ÷ ಒಟ್ಟಾರೆ ಬೆಳೆ ಪ್ರದೇಶ × 100
 (3)ಒಟ್ಟು ಬೆಳೆಸಿದ ಜನಸಂಖ್ಯೆ ÷ ಬೆಳೆಗಳು × 100
 (4)ಬೆಳೆಗಳು ÷ ಕೃಷಿ ಭೂಮಿ × 100
CORRECT ANSWER

(1) ಒಟ್ಟು ಬೆಳೆ ಪ್ರದೇಶ ÷ ನಿವ್ವಳ ಬಿತ್ತಿದ ಪ್ರದೇಶ × 100


11.ಅತೀ ಶೀತ ಮತ್ತು ಅತೀ ಉಷ್ಣ ತಿಂಗಳುಗಳ ಉಷ್ಣಾಂಶದ ವ್ಯತ್ಯಾಸವನ್ನು _______________ ಎಂದು ಕರೆಯಲಾಗುತ್ತದೆ.
 (1)ಋತು ಮಾನಿಕ ಉಷ್ಣಾಂಶ
 (2)ಸರಾಸರಿ ಉಷ್ಣಾಂಶ
 (3)ವಾರ್ಷಿಕ ಸರಾಸರಿ ಉಷ್ಣಾಂಶ
 (4)ದೈನಂದಿನ ಸರಾಸರಿ ಉಷ್ಣಾಂಶ
CORRECT ANSWER

(3) ವಾರ್ಷಿಕ ಸರಾಸರಿ ಉಷ್ಣಾಂಶ


12.ಶಿಲೆಗಳನ್ನು ವಿಧಗಳೊಂದಿಗೆ ಹೊಂದಿಸಿರಿ
 (A)ಕಣಶಿಲೆ(i)ಮರಳು ಶಿಲೆ
 (B)ರೂಪಾಂತರ ಶಿಲೆ(ii)ಗ್ರಾನೈಟ್
 (C)ಅಗ್ನಿ ಶಿಲೆ(iii)ಅಮೃತ ಶಿಲೆ
ಈ ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
  (A)(B)(C)
 (1)(i)(iii)(ii)
 (2)(iii)(i)(ii)
 (3)(ii)(iii)(i)
 (4)(i)(ii)(iii)
CORRECT ANSWER

(3) (ii), (iii), (i)


13.ಕೆಳಗಿನ ಹೇಳಿಕೆಗಳನ್ನು ಓದಿರಿ – ಸಮರ್ಥನೆ ಮತ್ತು ಕಾರಣ, ಇದರಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ
ಸಮರ್ಥನೆ : ಭಾರತದಲ್ಲಿ 1901-1921 ರ ಅವಧಿಯನ್ನು ಬೆಳವಣಿಗೆಯ ನಿಶ್ಚಲ ಹಂತದ ಅವಧಿ ಎಂದು ಕರೆಯಲಾಗುತ್ತದೆ
ಕಾರಣ : ಕಳಪೆ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು, ಹೆಚ್ಚಿನ ಜನರ ಅನಕ್ಷರತೆ ಮತ್ತು ಅಸಮರ್ಥ ಆಹಾರ ವಿತರಣಾ ವ್ಯವಸ್ಥೆ ಹಾಗೂ ಇತರ ಮೂಲಭೂತ ಅವಶ್ಯಕತೆಗಳು ಈ ಅವಧಿಯಲ್ಲಿ ಅಧಿಕ ಜನರ ಜನನ ಮತ್ತು ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.
 (1)ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ.
 (2)ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿಲ್ಲ
 (3)ಸಮರ್ಥನೆ ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ
 (4)ಸಮರ್ಥನೆ ತಪ್ಪಾಗಿದೆ ಆದರೆ ಕಾರಣವು ಸರಿಯಾಗಿದೆ
CORRECT ANSWER

(1) ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ.


14.ಗ್ರೀನ್ ವಿಚ್ ಪ್ರಧಾನ ರೇಖಾಂಶದಲ್ಲಿ ಮಧ್ಯಾಹ್ನ 1.00 ಗಂಟೆಯಾದರೆ 90° ಪಶ್ಚಿಮ ರೇಖಾಂಶದಲ್ಲಿನ ಸಮಯವನ್ನು ತಿಳಿಸಿ.
 (1)7.00 AM
 (2)8.00 PM
 (3)7.00 PM.
 (4)8.00 AM
CORRECT ANSWER

(1) 7.00 AM


15.ಪರಿವರ್ತನ ಮಂಡಲವು ಹೊಂದಿರುವ ಸ್ಥಿರ ಗುಣಲಕ್ಷಣ
 (1)ಊರ್ಧ್ವ ಮುಖ ಉಷ್ಣಾಂಶ ಇಳಿಕೆ
 (2)ಊರ್ಧ್ವ ಮುಖ ಉಷ್ಣಾಂಶ ಏರಿಕೆ
 (3)ಉಷ್ಣಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲ
 (4)ಸಮತಲ ಉಷ್ಣಾಂಶದ ಏರಿಕೆ
CORRECT ANSWER

(1) ಊರ್ಧ್ವ ಮುಖ ಉಷ್ಣಾಂಶ ಇಳಿಕೆ


16.‘ಕಥೆಗಳ ಕಣಿವೆ’ ಒಂದು ಸಣ್ಣ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
 (a)ವಿಕಾಸ ಬಡಿಗೇರ್ ರವರಿಂದ ಇದು ನಿರ್ದೇಶಿಸಲ್ಪಟ್ಟಿದೆ.
 (b)ಆಗಸ್ಟ್, 2022 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಯೋಜಿಸಲಾದ ಭಾರತೀಯ ಚಲನಚಿತ್ರ ಉತ್ಸವದ ಅಂತರಾಷ್ಟ್ರೀಯ ಪ್ರೀಮಿಯರ್‌ನಲ್ಲಿ ತೋರಿಸಲಾಗಿದೆ.
 (c)ಇದು ಮಹಿಳೆಯು ಎದುರಿಸಿದ ತಾರತಮ್ಯತೆಯ ಬಗ್ಗೆ ತಿಳಿಸುತ್ತದೆ.
 ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
 (1)(a) ಮತ್ತು (b) ಮಾತ್ರ
 (2)(b) ಮತ್ತು (c) ಮಾತ್ರ
 (3)ಮೇಲಿನ ಎಲ್ಲವೂ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) (a) ಮತ್ತು (b) ಮಾತ್ರ


17.ಸರಿಯಲ್ಲದ ಹೇಳಿಕೆಯನ್ನು ಗುರುತಿಸಿ,
 (1)ಅಧಿಕ ಕೃಷಿ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ಶಾರೀರಿಕ ಮತ್ತು ಕೃಷಿ ಸಾಂದ್ರತೆಯು ಗಮನಾರ್ಹವಾದ ಉತ್ತಮ ಅಳತೆಯಾಗಿದೆ
 (2)ಜನಸಾಂದ್ರತೆಯು ಭೂಮಿಗೆ ಸಂಬಂಧಿಸಿದಂತೆ ಜನಸಂಖ್ಯೆಯ ಪ್ರಾದೇಶಿಕ ಹಂಚಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ
 (3)ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ಜನಸಂಖ್ಯೆಯ ಅತೀ ಹೆಚ್ಚು ಸಾಂದ್ರತೆಯನ್ನು ಹೊಂದಿವೆ
 (4)ಜನಸಾಂದ್ರತೆಯು 1951 ರಲ್ಲಿ ಪ್ರತಿ ಚ.ಕಿ.ಗೆ 117 ಜನ ಹಂಚಿಕೆಯಾಗಿದ್ದು, 2011 ರಲ್ಲಿ ಪ್ರತಿ ಚ.ಕಿ.ಗೆ 382 ಜನಕ್ಕೆ ಏರಿಕೆಯಾಗಿದೆ
CORRECT ANSWER

(3) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳು ಜನಸಂಖ್ಯೆಯ ಅತೀ ಹೆಚ್ಚು ಸಾಂದ್ರತೆಯನ್ನು ಹೊಂದಿವೆ


18.‘ಎ ವಿಜನ್ ಆಫ್ ಪ್ರಾಸ್ಪರಸ್ ಮೈಸೂರ್‌’ ಕೃತಿಯ ಕರ್ತೃ
 (1)ಸಿ. ರಂಗಾಚಾರುಲು
 (2)ಶೇಷಾದ್ರಿ ಐಯ್ಯರ್
 (3)ಸರ್. ಎಂ. ವಿಶ್ವೇಶ್ವರಯ್ಯ
 (4)ಸರ್. ಮಿರ್ಜಾ ಇಸ್ಮಾಯಿಲ್
CORRECT ANSWER

(3) ಸರ್. ಎಂ. ವಿಶ್ವೇಶ್ವರಯ್ಯ


19.ಹೊಂದಿಸಿ ಬರೆಯಿರಿ :
  ಪಟ್ಟಿ-I ಪಟ್ಟಿ-II
 (A)ಗಂಗಾಧರರಾವ್ ದೇಶಪಾಂಡೆ(i)ಕನ್ನಡದ ಕುಲಪುರೋಹಿತ
 (B)ಎಂ. ವೆಂಕಟ ಕೃಷ್ಣಯ್ಯ(ii)ಕರ್ನಾಟಕ ಗಾಂಧಿ
 (C)ಹರ್ಡೇಕರ್ ಮಂಜಪ್ಪ(iii)ಕರ್ನಾಟಕದ ಸಿಂಹ
 (D)ಆಲೂರು ವೆಂಕಟರಾಯರು(iv)ತಾತಯ್ಯ
ಸಂಕೇತಗಳು :
  (A)(B)(C)(D)
 (1)(iii)(iv)(ii)(i)
 (2)(i)(iii)(ii)(iv)
 (3)(ii)(i)(iii)(iv)
 (4)(iv)(ii)(i)(iii)
CORRECT ANSWER

(1) (iii), (iv), (ii), (i)


20.ಪ್ರಸಿದ್ಧ ಕನ್ನಡ ಮಾಸ ಪತ್ರಿಕೆ ‘ಕರ್ನಾಟಕ ನಂದಿನಿ’ ಯ ಅತ್ಯಂತ ಮುಂಚಿನ ಸಂಪಾದಕಿ
 (1)ಗೌರಿ ಲಂಕೇಶ
 (2)ವಿಜಯ ದಬ್ಬೆ
 (3)ತಿರುಮಲಾಂಬ
 (4)ಪ್ರೇಮ ಕಾರಂತ
CORRECT ANSWER

(3) ತಿರುಮಲಾಂಬ


21.ಶ್ರೀಯುತ ವೆಂಕಟಪ್ಪನವರು ____________ ಕಲಾವಿದರಾಗಿದ್ದುರು?
 (1)ಚಿತ್ರಕಲೆ
 (2)ಶಿಲ್ಪಕಲೆ
 (3)ವಾದ್ಯಕಲೆ
 (4)ಹಾಡುಗಾರಿಕೆ
CORRECT ANSWER

(1) ಚಿತ್ರಕಲೆ


22.ಗೊಮ್ಮಟೇಶ್ವರ ವಿಗ್ರಹವನ್ನು ಸ್ಥಾಪಿಸಿದವರು
 (1)ದುರ್ವಿನೀತ
 (2)ದಿಡಿಗ
 (3)ಚಾವುಂಡರಾಯ
 (4)ಶಿವಮಾರ
CORRECT ANSWER

(3) ಚಾವುಂಡರಾಯ


23.ಸಿಂಧೂ ಮುದ್ರೆಗಳು ಹೆಚ್ಚಿನದಾಗಿ ಯಾವುದರಿಂದ ಮಾಡಲಾಗಿತ್ತು?
 (1)ತಾಮ್ರದಿಂದ
 (2)ಸ್ಟೀಟೈಟ್‌ನಿಂದ
 (3)ಟೆರಾಕೋಟದಿಂದ
 (4)ಚಿನ್ನದಿಂದ
CORRECT ANSWER

(2) ಸ್ಟೀಟೈಟ್‌ನಿಂದ


24.ಲೋಥಲ್ ಎಲ್ಲಿದೆ?
 (1)ಮಧ್ಯಪ್ರದೇಶ
 (2)ಹರಿಯಾಣ
 (3)ದೆಹಲಿ
 (4)ಗುಜರಾತ್
CORRECT ANSWER

(4) ಗುಜರಾತ್


25.ಕುರಂ ಚೋಳರ ಆಡಳಿತದ ಯಾವ ಘಟಕವಾಗಿ ಸೂಚಿಸುತ್ತದೆ?
 (1)ಒಂದು ಜಿಲ್ಲೆ
 (2)ಒಂದು ಹಳ್ಳಿ
 (3)ಹಳ್ಳಿಗಳ ಗುಂಪು
 (4)ಒಂದು ಪ್ರಾಂತ್ಯ
CORRECT ANSWER

(3) ಹಳ್ಳಿಗಳ ಗುಂಪು


26.ನಾಗಾರ್ಜುನ ಯಾರು?
 (1)ಜೈನ ಸನ್ಯಾಸಿ
 (2)ವೈದಿಕ ಋಷಿ
 (3)ಗ್ರೀಕ್ ಅರಸ
 (4)ಬೌದ್ಧ ತತ್ವಜ್ಞಾನಿ
CORRECT ANSWER

(4) ಬೌದ್ಧ ತತ್ವಜ್ಞಾನಿ


27.ಕರ್ನಾಟಕ ಸರ್ಕಾರದಿಂದ ರಾಷ್ಟ್ರೀಯ ಕ್ರೀಡಾ ದಿನದಂದು ನೀಡಲಾದ ಪ್ರಶಸ್ತಿ ಮತ್ತು ಬಹುಮಾನಗಳನ್ನು ಪರಿಗಣಿಸಿರಿ.
 (a)ದ್ರೋಣಾಚಾರ್ಯ ಪ್ರಶಸ್ತಿಯ ನೀಡುವಿಕೆ
 (b)ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, 2020
 (c)ಕ್ರೀಡಾ ಪೋಷಕ ಪ್ರಶಸ್ತಿ
 (d)ಸಹಸ್ರ ಕ್ರೀಡಾ ಪ್ರತಿಭಾ ಯೋಜನೆ-2021-22
 ಮೇಲಿನ ಹೇಳಿಕೆಗಳಲ್ಲಿ ಸರಿಯಾದದ್ದು ಯಾವುದು
 (1)(a) ಮತ್ತು (b) ಮಾತ್ರ
 (2)(b) ಮತ್ತು (c) ಮಾತ್ರ
 (3)(a), (b) ಮತ್ತು (c) ಮಾತ್ರ
 (4)(b), (c) ಮತ್ತು (d) ಮಾತ್ರ
CORRECT ANSWER

(4) (b), (c) ಮತ್ತು (d) ಮಾತ್ರ


28.ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಪರಿಸರವನ್ನು ಸಂರಕ್ಷಿಸುವುದು ತನ್ನ ಕರ್ತವ್ಯವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಉಪಬಂಧವು ____________ಆಗಿದೆ.
 (1)ಅನುಚ್ಛೇದ 51ಎ(ಜಿ)
 (2)ಅನುಚ್ಛೇದ 48(ಎ)
 (3)ಅನುಚ್ಛೇದ 14
 (4)ಅನುಚ್ಛೇದ 21
CORRECT ANSWER

(1) ಅನುಚ್ಛೇದ 51ಎ(ಜಿ)


29.ಕೆರೆ ನೀರಿನ ವಿಪರೀತ ಫಲವಂತಿಕೆಯು ___________ನ ಹೆಚ್ಚಳದಿಂದಾಗಿದೆ
 (1)ನೈಟ್ರೇಟ್‌ಗಳು ಮತ್ತು ಪಾಸ್ಪೇಟ್ಸ್‌ಗಳು
 (2)ಕ್ಲೋರೈಡ್‌ಗಳು ಮತ್ತು ಫ್ಲೋರೈಡ್‌ಗಳು
 (3)ಸೋಡಿಯಂ ಮತ್ತು ಪೊಟ್ಯಾಷಿಯಂ
 (4)ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ
CORRECT ANSWER

(1) ನೈಟ್ರೇಟ್‌ಗಳು ಮತ್ತು ಪಾಸ್ಪೇಟ್ಸ್‌ಗಳು


30.ಆಳವಿಲ್ಲದ ಸಮುದ್ರದ ಕೆಸರು ಅಥವಾ ನದೀಮುಖಗಳಲ್ಲಿ ಬೆಳೆಯುವ ಉಪ್ಪು-ಸಹಿಷ್ಣು ಮರಗಳನ್ನು __________ ಎಂದು ಕರೆಯಲಾಗುತ್ತದೆ.
 (1)ಮ್ಯಾಂಗ್ರೋವ್‌ಗಳು
 (2)ಜೆರೋಫೈಟ್ಸ್
 (3)ಎಪಿಫೈಟ್ಸ್
 (4)ಹೈಡ್ರೋಫೈಟ್‌ಗಳು
CORRECT ANSWER

(1) ಮ್ಯಾಂಗ್ರೋವ್‌ಗಳು


31.ಕರ್ನಾಟಕದ ಅತಿ ಎತ್ತರದ ಬೆಟ್ಟ
 (1)ಮುಳ್ಳಯ್ಯನಗಿರಿ
 (2)ಬಿಳಿಗಿರಿ ಬೆಟ್ಟ
 (3)ನಂದಿ ಬೆಟ್ಟ
 (4)ಚಾಮುಂಡಿ ಬೆಟ್ಟ
CORRECT ANSWER

(1) ಮುಳ್ಳಯ್ಯನಗಿರಿ


32.ಯಾವ ಉದ್ದೇಶಕ್ಕಾಗಿ ಕರ್ನಾಟಕದಲ್ಲಿ ಗಂಗಾ ಕಲ್ಯಾಣಯೋಜನೆ ಜಾರಿಗೊಳಿಸಲಾಗಿದೆ?
 (1)ಉಚಿತ ಬೋರ್‌ವೆಲ್‌ ಕೊರೆಯುವುದು
 (2)ಮೇಲ್ಮೈ ನೀರು ಸರಬರಾಜು
 (3)ಲಿಫ್ಟ್ ನೀರಾವರಿ ಯೋಜನೆ
 (4)ಕೆರೆ ಪುನಶ್ವೇತನ
CORRECT ANSWER

(1) ಉಚಿತ ಬೋರ್‌ವೆಲ್‌ ಕೊರೆಯುವುದು


33.ಕಪ್ಪತಗುಡ್ಡ ವನ್ಯಜೀವಿಧಾಮವು ಕರ್ನಾಟಕದ __________ ಜಿಲ್ಲೆಯಲ್ಲಿದೆ.
 (1)ಹಾವೇರಿ
 (2)ರಾಯಚೂರು
 (3)ಗದಗ್
 (4)ಬೆಳಗಾವಿ
CORRECT ANSWER

(3) ಗದಗ್


34.ಕರ್ನಾಟಕ ಸರ್ಕಾರವು ಯಾರನ್ನು ಅವರ ಸಾಧನೆಗಾಗಿ 2022 ರಲ್ಲಿ ಪರಿಸರ ರಾಯಭಾರಿಯಾಗಿ ನೇಮಕಗೊಳಿಸಿದೆ?
 (1)ಸಾಲುಮರದ ತಿಮ್ಮಕ್ಕ
 (2)ತುಳಸಿ ಗೌಡ
 (3)ವಂದನಾ ಶಿವ
 (4)ಅಲ್ಮಿತ್ರ ಪಟೇಲ್
CORRECT ANSWER

(1) ಸಾಲುಮರದ ತಿಮ್ಮಕ್ಕ


35.ರಕ್ತ ಸಂಬಂಧದ, ಸಂಬಂಧದಿಂದ ಆಧಾರಿತವಾದ ಒಂದು ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ?
 (1)ವರ್ಣ
 (2)ಗೋತ್ರ
 (3)ಬಂಧುತ್ವ
 (4)ಜಾತಿ
CORRECT ANSWER

(3) ಬಂಧುತ್ವ


36.ಕಾರ್ಟೋಸಾಟ್ ಮತ್ತು ಮೈಕ್ರೋಸಾಟ್ ಯಾವ ಕಾರಣಕ್ಕಾಗಿ ಬಳಕೆಮಾಡಲಾಗುತ್ತದೆ?
 (1)ಭೂವೀಕ್ಷಣೆ ಮತ್ತು ಪರೀಕ್ಷಣಾತ್ಮಕ
 (2)ಭೂವೀಕ್ಷಣೆ ಮತ್ತು ಸಂವಹನ
 (3)ಭೂವೀಕ್ಷಣೆ ಮತ್ತು ವಿಶ್ವ
 (4)ಸಂವಹನ ಮತ್ತು ಪರೀಕ್ಷಣಾತ್ಮಕ
CORRECT ANSWER

(1) ಭೂವೀಕ್ಷಣೆ ಮತ್ತು ಪರೀಕ್ಷಣಾತ್ಮಕ


37.ಅಂಗಾಂಶದ ಅಧ್ಯಯನವನ್ನು __________ ಎಂದು ಕರೆಯಲಾಗುತ್ತದೆ.
 (1)ಜೀವಕೋಶ ಶಾಸ್ತ್ರ
 (2)ಭ್ರೂಣ ಶಾಸ್ತ್ರ
 (3)ರೋಗ ಶಾಸ್ತ್ರ
 (4)ಅಂಗರಚನಾ ಶಾಸ್ತ್ರ
CORRECT ANSWER

(4) ಅಂಗರಚನಾ ಶಾಸ್ತ್ರ


38.ಬೇರು ರೋಮಗಳು ಸಸ್ಯಕ್ಕೆ ಅತ್ಯಂತ ಮುಖ್ಯವಾದವು, ಏಕೆಂದರೆ ಅವುಗಳು
 (1)ಹೀರಿಕೊಳ್ಳಲು ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತವೆ
 (2)ಸಸ್ಯವನ್ನು ಮಣ್ಣಿನಲ್ಲಿ ಗಟ್ಟಿಯಾಗಿ ಹಿಡಿದಿಡಲ್ಪಡುತ್ತದೆ
 (3)ಜೈಲಮ್ ಅಂಗಾಂಶವನ್ನು ಹೊಂದಿರುತ್ತದೆ
 (4)ಪಿಷ್ಟಗಳನ್ನು ಸಂಗ್ರಹಿಸುತ್ತವೆ
CORRECT ANSWER

(1) ಹೀರಿಕೊಳ್ಳಲು ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತವೆ


39.ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ಇರುವ ಅಂತರಾಷ್ಟ್ರೀಯ ಒಕ್ಕೂಟವು ಪ್ರಕಟಿಸಿದ ಪುಸ್ತಕ
 (1)ಗಿನ್ನಿಸ್ ವಿಶ್ವ ದಾಖಲೆ ಪುಸ್ತಕ
 (2)ಕೆಂಪು ಡೇಟಾ ಪುಸ್ತಕ
 (3)ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್
 (4)ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್
CORRECT ANSWER

(2) ಕೆಂಪು ಡೇಟಾ ಪುಸ್ತಕ


ಕೆಳಗಿನ ಪೈಚಾರ್ಟ್‌ನ ಆಧಾರದ ಮೇಲೆ ಪ್ರಶ್ನೆಗಳನ್ನು ಉತ್ತರಿಸಿ(40-41)
ತಮ್ಮ ಮನೆಯ ಮರು ವಿನ್ಯಾಸಕ್ಕೆ ಒಂದು ಕುಟುಂದ ಅಂದಾಜಿನ ವೆಚ್ಚ
40.ಬಣ್ಣ ಹಚ್ಚುವದಕ್ಕೆ ಹಾಗೂ ನೆಲಹಾಸುವಿಗೆ ಸೇರಿ ಕುಟುಂಬವು ಅಂದಾಜಿಸಿದ ವೆಚ್ಚ ಎಷ್ಟು?
 (1)₹ 34,500
 (2)₹ 34,600
 (3)₹ 34,700
 (4)₹ 34,800
CORRECT ANSWER

(4) ₹ 34,800


41.ಪೀಠೋಪಕರಣಗಳ ಖರೀದಿಗೆ ಕುಟುಂಬವು ಅಂದಾಜು ವೆಚ್ಚದಲ್ಲಿ 12% ರಿಯಾಯಿತಿ ಪಡೆದಿದೆ. ಪೀಠೋಪಕರಣಗಳ ಖರ್ಚಾದ ಮೊತ್ತ ಎಷ್ಟು?
 (1)₹ 13,200
 (2)₹ 13,526
 (3)₹ 13,728
 (4)₹ 14,256
CORRECT ANSWER

(3) ₹ 13,728


42.ಮಧ್ಯಮ ಓರೆಯಾದ ವಿತರಣೆಗಾಗಿ ಸರಾಸರಿ, ಮಧ್ಯಮ ಮತ್ತು ಮೋಡ್ ನಡುವಿನ ಸಂಬಂಧ
 (1)ಮೋಡ್ = ಮಧ್ಯಮ – 2 ಸರಾಸರಿ
 (2)ಮೋಡ್ = 3 ಮಧ್ಯಮ – 2 ಸರಾಸರಿ
 (3)ಮೋಡ್ = 2 ಮಧ್ಯಮ – 3 ಸರಾಸರಿ
 (4)ಮೋಡ್ = ಮಧ್ಯಮ – ಸರಾಸರಿ
CORRECT ANSWER

(2) ಮೋಡ್ = 3 ಮಧ್ಯಮ – 2 ಸರಾಸರಿ


43.ಸುಮನ ಒಂದು ವಸ್ತುವನ್ನು ರೂ. 72,000 ಕ್ಕೆ ಖರೀದಿಸಿದಳು. ಅದನ್ನು ಮಾರಿದಾಗ ಅವಳು 27% ನಷ್ಟ ಅನುಭವಿಸಿದಳು. ಬಂದ ಮೊತ್ತದಿಂದ ಇನ್ನೊಂದು ವಸ್ತುವನ್ನು ಖರೀದಿಸಿ ಅದನ್ನು 30% ಲಾಭಕ್ಕೆ ಮಾರಿದಳು.ಅವಳಿಗಾದ ಒಟ್ಟು ಲಾಭ/ನಷ್ಟ ಎಷ್ಟು?
 (1)ರೂ. 4,280 ನಷ್ಟ
 (2)ರೂ. 3,672 ಲಾಭ
 (3)ರೂ. 4,280 ಲಾಭ
 (4)ರೂ. 3,672 ನಷ್ಟ
CORRECT ANSWER

(4) ರೂ. 3,672 ನಷ್ಟ


44.A ಮತ್ತು B ಎಂಬುವರು ಒಟ್ಟಾಗಿ ಒಂದು ಕೆಲಸವನ್ನು 10 ದಿನಗಳಲ್ಲಿ ಪೂರೈಸುತ್ತಾರೆ. A, B ಮತ್ತು C ಒಟ್ಟಾಗಿ ಅದೇ ಕೆಲಸವನ್ನು 5 ದಿನಗಳಲ್ಲಿ ಪೂರೈಸುತ್ತಾರೆ. ಹಾಗಾದರೆ, C ಒಬ್ಬನೇ ಅದೇ ಕೆಲಸವನ್ನು ಪೂರೈಸಲು ತೆಗೆದುಕೊಳ್ಳುವ ಕಾಲ ಎಷ್ಟು?
 (1)12 ದಿನಗಳು
 (2)14 ದಿನಗಳು
 (3)10 ದಿನಗಳು
 (4)8 ದಿನಗಳು
CORRECT ANSWER

(3) 10 ದಿನಗಳು


45.ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಮೇಲಿನ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
 (a)ಇದೊಂದು 100 ಲಕ್ಷ ಕೋಟಿ ಯೋಜನೆ
 (b)ಮೂಲಭೂತ ಸೌಕರ್ಯ, ಯೋಜನೆಗಳ ವೇಗ ಹೆಚ್ಚಿಸುವುದು ಮತ್ತು ವಿಸ್ತರಿಸುವುದನ್ನು ಇದು ಹುಡುಕುತ್ತದೆ
 (c)ಒಂದೇ ವೇದಿಕೆಯ ಮೇಲೆ ಎಲ್ಲಾ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸುವ ಗುರಿಯನ್ನು ಇದು ಹೊಂದಿದೆ
 (d)ಇದು ಭಾರತದಲ್ಲಿ ಆರಂಭಿಕವಾಗಿ ಕೆಲವು ರಾಜ್ಯಗಳಿಗೆ ಅನ್ವಯವಾಗಲಿದೆ
 ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
 (1)(a), (b), (c) ಮಾತ್ರ
 (2)(b), (c), (d) ಮಾತ್ರ
 (3)(a) ಮತ್ತು (b) ಮಾತ್ರ
 (4)(b) ಮತ್ತು (c) ಮಾತ್ರ
CORRECT ANSWER

(1) (a), (b), (c) ಮಾತ್ರ


46.ಸೈನಿಕ ಶಾಲೆಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
 (a)ಸೈನಿಕ ಶಾಲೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಪ್ರಯತ್ನವಾಗಿ ಸ್ಥಾಪಿಸಲಾಗಿದೆ
 (b)ನಾಗಾಲ್ಯಾಂಡ್ ಸೈನಿಕ ಶಾಲೆ ಮೊದಲಿಗೆ 2018-19 ರಲ್ಲಿ ಹೆಣ್ಣು ವಿದ್ಯಾರ್ಥಿ ಪ್ರವೇಶ
 (c)ಸೈನಿಕ ಶಾಲೆಗಳಲ್ಲಿ ಪ್ರವೇಶಾತಿಗಾಗಿ ಶೇಕಡಾ 27 ರಷ್ಟು ಮೀಸಲಾತಿಯನ್ನು ಇತರೆ ಹಿಂದುಳಿದ ವರ್ಗಗಳಿಗೆ (ಕೆನೆಪದರದಲ್ಲದವರು)ಗಾಗಿ 2021-22 ರ ಅಧಿವೇಶನದಿಂದ ರೂಪ ಅನುಮತಿದೊರೆಯಿತು
 ಮೇಲಿನ ಹೇಳಿಕೆ/ಗಳಲ್ಲಿ ಯಾವುದು ಸರಿ?
 (1)(a) ಮಾತ್ರ
 (2)(b) ಮಾತ್ರ
 (3)(a) ಮತ್ತು (b) ಮಾತ್ರ
 (4)(a) ಮತ್ತು (c) ಮಾತ್ರ
CORRECT ANSWER

(4) (a) ಮತ್ತು (c) ಮಾತ್ರ


47.2021 ರಲ್ಲಿ ಆಯೋಜಿಸಲಾದ ಇತರ ರಾಷ್ಟ್ರಗಳೊಂದಿಗೆ ಭಾರತದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೆಳಗಿನ ಜೋಡಿಗಳನ್ನು ಪರಿಗಣಿಸಿ.
  ಕಾರ್ಯಾಚರಣೆ ಹೆಸರು ಭಾರತದೊಂದಿಗೆ ಭಾಗಿಯಾದ ರಾಷ್ಟ್ರ
 (A)ಮಿತ್ರ ಶಕ್ತಿ VIIIನೇಪಾಲ
 (B)ಖಂಜರ್‌ Vಖರ್ಗಿಸ್ತಾನ
 (C)ಸೂರ್ಯ ಕಿರಣ XVಶ್ರೀಲಂಕಾ
 (D)ಯುದ್ಧ ಅಭ್ಯಾಸ ಅಮೇರಿಕಾ
ಮೇಲಿನ ಎಷ್ಟು ಜೋಡಿಗಳು ಸರಿಯಾಗಿವೆ?
 (1)(a) ಮತ್ತು (b) ಮಾತ್ರ
 (2)(b) ಮತ್ತು (c) ಮಾತ್ರ
 (3)(a) ಮತ್ತು (c) ಮಾತ್ರ
 (4)(b) ಮತ್ತು (d) ಮಾತ್ರ
CORRECT ANSWER

(4) (b) ಮತ್ತು (d) ಮಾತ್ರ


48.ಭಾರತದ ರಾಷ್ಟ್ರಾಧ್ಯಕ್ಷರಿಗೆ ಲೋಕಪಾಲರ ಹುದ್ದೆಯ ಹೆಸರನ್ನು ಶಿಫಾರಸ್ಸು ಮಾಡುವ ಸಮಿತಿಯು ಇವರನ್ನು ಒಳಗೊಂಡಿದೆ.
 (1)ಪ್ರಧಾನಮಂತ್ರಿ, ಕೇಂದ್ರ ಕಾನೂನು ಮಂತ್ರಿ ಮತ್ತು ಭಾರತದ ಮುಖ್ಯ ನ್ಯಾಯಾಧೀಶ
 (2)ಭಾರತದ ಮುಖ್ಯ ನ್ಯಾಯಾಧೀಶ, ಲೋಕಸಭೆಯ ಸಭಾಧ್ಯಕ್ಷರು ಮತ್ತು ಕೇಂದ್ರ ಕಾನೂನು ಮಂತ್ರಿಗಳು
 (3)ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶ ಮತ್ತು ಸಭಾಧ್ಯಕ್ಷರು ಲೋಕಸಭಾ
 (4)ಪ್ರಧಾನಮಂತ್ರಿ, ಲೋಕಸಭಾ ಸಭಾಧ್ಯಕ್ಷರು ಮತ್ತು ರಾಜ್ಯಸಭೆಯ ಅಧ್ಯಕ್ಷರು
CORRECT ANSWER

(3) ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶ ಮತ್ತು ಸಭಾಧ್ಯಕ್ಷರು ಲೋಕಸಭಾ


49.ಮೂಲಧನದ ಸರಕು ಹೆಚ್ಚಿದಂತೆ, ಮೂಲಧನದ ಅಂಚಿನ ಕಾರ್ಯಪಟ್ಟುತ್ವವು (MEC)
 (1)ಏರಿಕೆಯಾಗುತ್ತದೆ
 (2)ಇಳಿಕೆಯಾಗುತ್ತದೆ
 (3)ಆರಂಭದಲ್ಲಿ ಏರಿಕೆಯಾಗುತ್ತದೆ ಮತ್ತು ನಂತರದಲ್ಲಿ ಇಳಿಕೆಯಾಗುತ್ತದೆ
 (4)ನಿರಂತರವಾಗಿ ಉಳಿಯುತ್ತದೆ
CORRECT ANSWER

(1) ಏರಿಕೆಯಾಗುತ್ತದೆ


50.ಸಂಗಮ ಸಾಹಿತ್ಯದಲ್ಲಿ ಸೂಚಿಸಲ್ಪಟ್ಟ “ಮರುದನ್ ತಿನಾಯಿ” ಏನನ್ನು ಉಲ್ಲೇಖಿಸುತ್ತದೆ?
 (1)ಕರಾವಳಿ ಪ್ರಾಂತ್ಯ
 (2)ಬೆಟ್ಟಗಾಡು ಪ್ರದೇಶ
 (3)ಮರುಭೂಮಿ
 (4)ಫಲವತ್ತಾದ ನದಿ ತೀರಗಳು
CORRECT ANSWER

(4) ಫಲವತ್ತಾದ ನದಿ ತೀರಗಳು


51.ಮೊದಲ ಬಾರಿಗೆ ಪಂಚಾಯ್ತಿರಾಜ್ ಸಂಸ್ಥೆಗಳನ್ನು ರಚಿಸಲು ಶಿಫಾರಸ್ಸು ಮಾಡಿದ ಆಯೋಗ ಯಾವುದು?
 (1)ಅಶೋಕ್ ಮೆಹತಾ ಸಮಿತಿ
 (2)ಎಲ್.ಎಂ. ಸಿಂಘ್ವಿ ಸಮಿತಿ
 (3)ಬಲವಂತರಾಯ್ ಮೆಹತಾ ಸಮಿತಿ
 (4)ಸ್ವರಣ್ ಸಿಂಗ್ ಸಮಿತಿ
CORRECT ANSWER

(3) ಬಲವಂತರಾಯ್ ಮೆಹತಾ ಸಮಿತಿ


52.ಈ ಕೆಳಗಿನ ಯಾವ ಪ್ರಕರಣದಲ್ಲಿ ನ್ಯಾಯಾಲಯವು ನೈಸರ್ಗಿಕ ನ್ಯಾಯ ತತ್ವವನ್ನು ಪಾಲಿಸದಿದ್ದರೆ ಸಂವಿಧಾನದ ಅನುಚ್ಛೇದ 14 ನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಲಾಗಿದೆ?
 (1)ಯೂನಿಯನ್ ಆಫ್ ಇಂಡಿಯಾ ವಿರುದ್ಧ ತುಳಸಿರಾಮ್ ಪಟೇಲ್
 (2)ಸುಧೀರ್ ಚಂದ್ರ ಸರ್ಕಾರ್ ವಿರುದ್ಧ ಟಾಟಾ ಐರನ್ ಮತ್ತು ಸ್ಟೀಲ್ ಕಂ.ಲಿ.
 (3)ಡೆಲ್ಲಿ ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನ್ ವಿರುದ್ಧ ಡಿ.ಟಿ.ಸಿ. ಮಜ್‌ದೂರ್ ಕಾಂಗ್ರೆಸ್
 (4)ಬಾಸುದೇವ್ ತಿವಾರಿ ವಿರುದ್ಧ ಸಿಡೊ ಕ್ಯಾರ್‌ಹೂ ಯೂನಿವರ್ಸಿಟಿ
CORRECT ANSWER

(1) ಯೂನಿಯನ್ ಆಫ್ ಇಂಡಿಯಾ ವಿರುದ್ಧ ತುಳಸಿರಾಮ್ ಪಟೇಲ್


53.1956 ಮುಂಚೆ ಇಂದಿನ ಕೇಂದ್ರಾಡಳಿತ ಪ್ರದೇಶಗಳನ್ನು ಏನೆಂದು ವರ್ಗೀಕರಿಸಲಾಗಿತ್ತು?
 (1)ಭಾಗ ‘ಎ’ ರಾಜ್ಯಗಳು
 (2)ಭಾಗ ‘ಬಿ’ ರಾಜ್ಯಗಳು
 (3)ಭಾಗ ‘ಸಿ’ ರಾಜ್ಯಗಳು
 (4)ಭಾಗ ‘ಡಿ’ ರಾಜ್ಯಗಳು
CORRECT ANSWER

(3) ಭಾಗ ‘ಸಿ’ ರಾಜ್ಯಗಳು


54.ಸಂವಿಧಾನದ ಯಾವ ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಕುರಿತು ವಿವರಣೆ ನೀಡುತ್ತಿವೆ?
 (1)12 ರಿಂದ 14
 (2)36 ರಿಂದ 51
 (3)39 ರಿಂದ 52
 (4)41 ರಿಂದ 52
CORRECT ANSWER

(2) 36 ರಿಂದ 51


55.ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
 (1)ಧಾರ್ಮಿಕ ಸ್ವಾತಂತ್ರ್ಯದ ಹಕ್ಕು – 25 ರಿಂದ 30 ವಿಧಿಗಳು
 (2)ರಾಷ್ಟ್ರಪತಿ ಆಳ್ವಿಕೆ – 365 ನೇ ವಿಧಿ
 (3)ಭಾರತದ ಚುನಾವಣಾ ಆಯೋಗ – 324 ರಿಂದ 329 ರವರೆಗಿನ ವಿಧಿಗಳು
 (4)ಅಂತರರಾಜ್ಯ ಮಂಡಳಿ – 264ನೇ ವಿಧಿ.
CORRECT ANSWER

(3) ಭಾರತದ ಚುನಾವಣಾ ಆಯೋಗ – 324 ರಿಂದ 329 ರವರೆಗಿನ ವಿಧಿಗಳು


56.ಪಟ್ಟಿ-Iನ್ನು (ಘಟನೆಗಳು) ಪಟ್ಟಿ-II ರ (ವರ್ಷ) ಜೊತೆ ಹೊಂದಿಸಿ. ಸರಿಯಾದ ಉತ್ತರ ನೀಡಿ
  ಪಟ್ಟಿ-I ಪಟ್ಟಿ-II
 (A)ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದ ವರ್ಷ(i)1935
 (B)ಭಾರತೀಯ ಸ್ವಾತಂತ್ರ್ಯ ಕಾಯಿದೆ(ii)1949
 (C)ಭಾರತದ ಸರ್ಕಾರದ ಕಾಯಿದೆ(iii)1950
 (D)ಭಾರತದ ಸಂವಿಧಾನ ಅಂಗೀಕಾರವಾದ ವರ್ಷ(iv)1947
ಈ ಕೆಳಗೆ ನೀಡಲಾದ ಸಂಕೇತಗಳಲ್ಲಿ ಸರಿಯಾದ ಉತ್ತರ ಗುರುತಿಸಿ.
  (A)(B)(C)(D)
 (1)(iv)(i)(iii)(ii)
 (2)(ii)(iv)(iii)(i)
 (3)(iii)(iv)(i)(ii)
 (4)(i)(ii)(iii)(iv)
CORRECT ANSWER

(3) (iii), (iv), (i), (ii)


57.ಕೃಷಿ ಗಣತಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
 (a)ಕೃಷಿ ಗಣತಿಯನ್ನು ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ನಡೆಸುತ್ತದೆ
 (b)ಇದನ್ನು ಪ್ರತಿ ಐದು ವರ್ಷಗಳ ಅಂತರದಲ್ಲಿ ನಡೆಸಲಾಗುತ್ತದೆ
 (c)ಮೊದಲ ವರ್ಷದ ಗಣತಿಯನ್ನು 1970-71 ರಲ್ಲಿ ನಡೆಸಲಾಯಿತು
 (1)(a) ಮತ್ತು (b) ಸರಿ ಇದೆ
 (2)(b) ಮತ್ತು (c) ಸರಿ ಇದೆ
 (3)(a), (b) ಮತ್ತು (c) ಸರಿ ಇದೆ
 (4)ಮೇಲಿನ ಯಾವುದೂ ಸರಿ ಇಲ್ಲ
CORRECT ANSWER

(3) (a), (b) ಮತ್ತು (c) ಸರಿ ಇದೆ


58.‘ಅರಿವು’ ಎಂಬುದು
 (1)ಸೂಕ್ಷ್ಮ ಸಾಲ ಯೋಜನೆ
 (2)ಮೃದು ಸಾಲ ಯೋಜನೆ
 (3)ಶಿಕ್ಷಣ ಸಾಲ ಯೋಜನೆ
 (4)ನೀರಾವರಿ ಸಾಲ ಯೋಜನೆ
CORRECT ANSWER

(3) ಶಿಕ್ಷಣ ಸಾಲ ಯೋಜನೆ


59.ಡಾ. ಎ.ಪಿ.ಜೆ. ಕಲಂ ಅವರ (PURA) ಮಾದರಿಯಲ್ಲಿ ಉಲ್ಲೇಖಿಸಿರುವ ನಾಲ್ಕು ಸಂಪರ್ಕಗಳು
 (1)ಭೌತಿಕ, ಡಿಜಿಟಲ್, ಜ್ಞಾನ, ಆರ್ಥಿಕ
 (2)ಭೌತಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ
 (3)ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ, ಭಾವನಾತ್ಮಕ
 (4)ಸಾಂಸ್ಕೃತಿಕ, ರಾಜಕೀಯ, ಭೌತಿಕ, ಸಾಮಾಜಿಕ
CORRECT ANSWER

(1) ಭೌತಿಕ, ಡಿಜಿಟಲ್, ಜ್ಞಾನ, ಆರ್ಥಿಕ


60.ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಯಾರು?
 (1)ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು
 (2)ಗ್ರಾಮ ಪಂಚಾಯಿತಿ ಅಧ್ಯಕ್ಷರು
 (3)ಹಿರಿಯ ಸದಸ್ಯರು
 (4)PDO
CORRECT ANSWER

(1) ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು


61.ವಾತಾವರಣದಲ್ಲಿರುವ ಓಜೋನ್ ಸಾಂದ್ರೀಕರಣವನ್ನು __________ ನಿಂದ ಅಳೆಯಲಾಗುವುದು.
 (1)ಡಾಬ್ಸನ್
 (2)ಪ್ಯಾಸ್ಕಲ್
 (3)ನ್ಯೂಟನ್
 (4)ಜೊಲ್
CORRECT ANSWER

(1) ಡಾಬ್ಸನ್


62.ಭಾರತದ ಯಾವ ಋತುವಿನಲ್ಲಿ ಪರಿಸರಣ ಮಳೆಯು ಸಾಮಾನ್ಯವಾಗಿದೆ?
 (1)ಚಳಿಗಾಲ
 (2)ಬೇಸಿಗೆ ಕಾಲ
 (3)ಹಿಂದಿರುಗುವ ಮಾನ್ಸೂನ್ ಕಾಲ
 (4)ಮಳೆಗಾಲ
CORRECT ANSWER

(2) ಬೇಸಿಗೆ ಕಾಲ


63.ಈ ಕೆಳಗಿನ ರಾಜ್ಯಗಳನ್ನು ಅವುಗಳ ಭೌಗೋಳಿಕ ಕ್ಷೇತ್ರಕ್ಕನುಗುಣವಾಗಿ ಇಳಿಕೆ ಕ್ರಮದಲ್ಲಿ ಜೋಡಿಸಿ.
 (1)ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ
 (2)ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ
 (3)ರಾಜಸ್ಥಾನ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ
 (4)ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ
CORRECT ANSWER

(2) ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ


64.ಹೊಂದಿಸಿ ಬರೆಯಿರಿ.
  I -ನದಿಗಳು II -ಬಲದಂಡೆ ಉಪನದಿ
 (A)ಗಂಗಾ(i)ಷಾಯೋಕ್
 (B)ಸಿಂಧೂ(ii)ಸುಖಿ
 (C)ಕಾವೇರಿ(iii)ಸುವರ್ಣವತಿ
 (D)ತಾಪಿ/ತಪತಿ(iv)ಸೋನ್
ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
  (A)(B)(C)(D)
 (1)(iv)(i)(iii)(ii)
 (2)(ii)(iv)(iii)(i)
 (3)(iv)(ii)(i)(iii)
 (4)(i)(ii)(iii)(iv)
CORRECT ANSWER

(1) (iv), (i), (iii), (ii)


65.ಕೆಳಗಿನ ಹೇಳಿಕೆಗಳನ್ನು ಓದಿರಿ – ಸಮರ್ಥನೆ ಮತ್ತು ಕಾರಣ, ಇದರಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ
ಸಮರ್ಥನೆ : ಒಂದು ದೊಡ್ಡ ಜನಸಂಖ್ಯೆಯು ತನ್ನ ಸೀಮಿತ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೇರುತ್ತದೆ ಮತ್ತು ಅನೇಕ ಸಾಮಾಜಿಕ – ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಿದೆ.
ಕಾರಣ : ಒಟ್ಟು 1210 ದಶಲಕ್ಷ ಜನಸಂಖ್ಯೆಯನ್ನು ಹೊಂದಿರುವ ಭಾರತವು ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
 (1)ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿದೆ.
 (2)ಸಮರ್ಥನೆ ಮತ್ತು ಕಾರಣ ಎರಡೂ ಸರಿ ಮತ್ತು ಕಾರಣವು ಸಮರ್ಥನೆಯ ಸರಿಯಾದ ವಿವರಣೆಯಾಗಿಲ್ಲ
 (3)ಸಮರ್ಥನೆ ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ
 (4)ಸಮರ್ಥನೆ ತಪ್ಪಾಗಿದೆ ಆದರೆ ಕಾರಣವು ಸರಿಯಾಗಿದೆ
CORRECT ANSWER

(3) ಸಮರ್ಥನೆ ಸರಿಯಾಗಿದೆ ಆದರೆ ಕಾರಣವು ತಪ್ಪಾಗಿದೆ


66.ಸೆಪ್ಟೆಂಬರ್ 2022 ರಲ್ಲಿ ಭಾರತದ ರಾಷ್ಟ್ರಪತಿಯವರು ಕೆಳಗಿನವುಗಳನ್ನು ಉದ್ಘಾಟಿಸಿದರು ಅದಕ್ಕೆ ಸಂಬಂಧಿಸಿದ ಘಟನೆ ಈ ಕೆಳಗಿನಂತಿವೆ.
 (a)ಮೈಸೂರು ದಸರಾ
 (b)ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಬೆಳಗಾವಿ
 (c)ಸೇಂಟ್ ಜೋಸೇಫ್ ವಿಶ್ವವಿದ್ಯಾಲಯ, ಬೆಂಗಳೂರು
 ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ?
 (1)(a) ಮಾತ್ರ
 (2)(b) ಮಾತ್ರ
 (3)(a) ಮತ್ತು (b) ಮಾತ್ರ
 (4)(a) ಮತ್ತು (c) ಮಾತ್ರ
CORRECT ANSWER

(4) (a) ಮತ್ತು (c) ಮಾತ್ರ


67.ಹೊಂದಿಸಿ ಬರೆಯಿರಿ.
  I ನದಿಗಳು II ಮೂಲಗಳು
 (A)ಮಹಾನದಿ(i)ಮಹಾಬಲೇಶ್ವರ
 (B)ಗೋದಾವರಿ(ii)ಅಮನ್‌ಕಂಟಕ್
 (C)ಕೃಷ್ಣ(iii)ಶಿಹಾವ
 (D)ನರ್ಮದಾ(iv)ನಾಸಿಕ್
 (E)ತಾಪಿ(v)ಮುಲ್ತಾಯ್
ಸಂಕೇತಗಳು :
  (A)(B)(C)(D)(E)
 (1)(iii)(i)(ii)(iv)(v)
 (2)(v)(i)(iii)(iv)(ii)
 (3)(iii)(iv)(i)(ii)(v)
 (4)(i)(iii)(iv)(ii)(v)
CORRECT ANSWER

(3) (iii), (iv), (i), (ii), (v)


68.ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಸಮೂಹ ಯಾವುದು?
 (1)ಅಂಡಮಾನ್ ಮತ್ತು ನಿಕೋಬಾರ್
 (2)ಮಲೇಷ್ಯಾ
 (3)ಇಂಡೋನೇಷ್ಯಾ
 (4)ಮಾಲ್ಡೀವ್ಸ್‌
CORRECT ANSWER

(3) ಇಂಡೋನೇಷ್ಯಾ


69.‘ದೇವಾಲಯಗಳ ರಾಜ ಎಂದು ಕರೆಯಲ್ಪಡುವ ಕಲ್ಯಾಣಿ ಚಾಲುಕ್ಯ ಕಾಲದ ದೇವಾಲಯ ಯಾವುದು?
 (1)ಕುರವತ್ತಿಯ ಮಲ್ಲಿಕಾರ್ಜುನ ದೇವಾಲಯ
 (2)ನೀಲಗುಂದದ ಭೀಮೇಶ್ವರ ದೇವಾಲಯ
 (3)ಇಟಗಿಯ ಮಹಾದೇವ ದೇವಾಲಯ
 (4)ಬಾಗುಳಿಯ ಕಲ್ಲೇಶ್ವರ ದೇವಾಲಯ
CORRECT ANSWER

(3) ಇಟಗಿಯ ಮಹಾದೇವ ದೇವಾಲಯ


70.‘ಸವತಿ ಗಂಧವಾರಣೆ’ ಎಂಬ ಬಿರುದು ಹೊಂದಿದ್ದ ಹೊಯ್ಸಳ ರಾಣಿ ಯಾರು?
 (1)ಸುಗ್ಗಲೆ
 (2)ಚಂದ್ರಲೆ
 (3)ಶಾಕುಂತಲೆ
 (4)ಶಾಂತಲೆ
CORRECT ANSWER

(4) ಶಾಂತಲೆ


71.ಹೊಂದಿಸಿ ಬರೆಯಿರಿ.
  ಪಟ್ಟಿ-I ಪಟ್ಟಿ-II
 (A)ಬಿಜಾಪುರ(i)ನಿಜಾಂ ಷಾಹಿ
 (B)ಗೋಲ್ಗೊಂಡ(ii)ಕುತುಬ್ ಷಾಹಿ
 (C)ಅಹಮದ್ ನಗರ(iii)ಆದಿಲ್ ಷಾಹಿ
 (D)ಬೀದರ್(iv)ಬರೀದ್ ಷಾಹಿ
ಸಂಕೇತಗಳು :
  (A)(B)(C)(D)
 (1)(iii)(ii)(i)(iv)
 (2)(iv)(i)(ii)(iii)
 (3)(i)(ii)(iii)(iv)
 (4)(ii)(iv)(iii)(i)
CORRECT ANSWER

(1) (iii), (ii), (i), (iv)


72.ಮೈಸೂರಿನ ದೊರೆ ಚಿಕ್ಕ ದೇವರಾಜ ಒಡೆಯರಿಗೆ ‘ರಾಜಾ ಜಗದೇವ್’ ಎಂಬ ಬಿರುದನ್ನು ನೀಡಿದ ಮೊಘಲ್ ಚಕ್ರವರ್ತಿ ಯಾರು?
 (1)ಜಹಂಗೀರ್
 (2)ಅಕ್ಬರ್‌
 (3)ಷಹಜಹಾನ್
 (4)ಔರಂಗಜೇಬ್
CORRECT ANSWER

(4) ಔರಂಗಜೇಬ್


73.ಬೆಂಗಳೂರು ಕೆಂಪೇಗೌಡನೆಂದೇ ಪ್ರಸಿದ್ಧರಾದ ಯಲಹಂಕ ನಾಡ ಪ್ರಭು
 (1)ಹಿರಿಯ ಕೆಂಪೇಗೌಡ
 (2)2ನೇ ಕೆಂಪೇಗೌಡ
 (3)ಕೆಂಪ ನಂಜೇಗೌಡ
 (4)3ನೇ ಕೆಂಪೇಗೌಡ
CORRECT ANSWER

(1) ಹಿರಿಯ ಕೆಂಪೇಗೌಡ


74.ಬೆಂಗಳೂರು-ಜಾಲಾರು ಪೇಟೆಗಳ ನಡುವೆ ರೈಲ್ವೆ ಸಂಪರ್ಕವನ್ನು ಯಾವ ಕಮೀಷನರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು?
 (1)ಮಾರ್ಕ್ ಕಬ್ಬನ್
 (2)ಎಲ್.ಬಿ. ಬೌರಿಂಗ್
 (3)ಸ್ಯಾಂಡ್ರಸ್
 (4)ಜೆ.ಡಿ. ಗೋರ್ಡನ್
CORRECT ANSWER

(1) ಮಾರ್ಕ್ ಕಬ್ಬನ್


75.ಗಾಂಧಾರ ಕಲೆಯ ಪೋಷಕರಾಗಿದ್ದವರು
 (1)ಕನಿಷ್ಠ
 (2)ಅಶೋಕ
 (3)ರುದ್ರಧಾಮ
 (4)ಸಮುದ್ರಗುಪ್ತ
CORRECT ANSWER

(1) ಕನಿಷ್ಠ


76.ಕಾಲ್ಚಕ್ರಿಯನ್ ಯಾವ ಧರ್ಮದ ತಂತ್ರ ಶಾಸ್ತ್ರಕ್ಕೆ ಸೇರಿದುದು?
 (1)ಬೌದ್ಧ ಧರ್ಮ
 (2)ಜೈನ ಧರ್ಮ
 (3)ಹಿಂದೂ ಧರ್ಮ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಬೌದ್ಧ ಧರ್ಮ


77.ಎರಡನೇ ನಾಗಭಟ್ಟರು ಯಾವ ವಂಶಕ್ಕೆ ಸೇರಿದವರು?
 (1)ಪರಮಾರ ರಾಜವಂಶ
 (2)ಗುರ್ಜರ-ಪ್ರತಿಹಾರ ರಾಜವಂಶ
 (3)ಚೋಳ ರಾಜವಂಶ
 (4)ಕಳಚೂರಿ ರಾಜವಂಶ
CORRECT ANSWER

(2) ಗುರ್ಜರ-ಪ್ರತಿಹಾರ ರಾಜವಂಶ


78.“ವಿಶ್ವ ಕಾರ್ಮಿಕರೆಲ್ಲ ಸಂಘಟಿತರಾಗಿ ಕಳೆದುಕೊಳ್ಳುವುದು ನಿಮ್ಮ ಸಂಕೋಲೆಗಳೇ ಹೊರತು ಮತ್ತೇನು ಅಲ್ಲ” ಈ ಕರೆ ನೀಡಿದವರು ಯಾರು?
 (1)ಲೆನಿನ್
 (2)ಕಾರ್ಲ್ ಮಾಕ್ಸ್
 (3)ಮಾವೊ
 (4)ಸ್ಟಾಲಿನ್
CORRECT ANSWER

(2) ಕಾರ್ಲ್ ಮಾಕ್ಸ್


79.ಭಾರತ ಸರ್ಕಾರದ “ಫಿಟ್‌ ಇಂಡಿಯಾ” ಕಾರ್ಯಕ್ರಮ ಘೋಷಣೆಯ ಉದ್ದೇಶವೇನು?
 (1)ಬ್ರಿಟೀಷರನ್ನು ಹೊರಹಾಕುವುದು
 (2)ಬಾಂಗ್ಲಾದೇಶೀಯ ಅತಿಕ್ರಮಿಗಳನ್ನು ಹೊರಹಾಕುವುದು
 (3)ಭಾರತೀಯ ಯುವಕರ ದೈಹಿಕ ಆರೋಗ್ಯ ಕಾಪಾಡುವುದು
 (4)ಸೈಕಲ್ ಜಾಥಾ ಮಾಡುವುದು
CORRECT ANSWER

(3) ಭಾರತೀಯ ಯುವಕರ ದೈಹಿಕ ಆರೋಗ್ಯ ಕಾಪಾಡುವುದು


80._____________ರ ಶಿಫಾರಸ್ಸಿನ ಮೇರೆಗೆ ಕೇಂದ್ರ ಜಾಗೃತ ಆಯೋಗವನ್ನು ಸ್ಥಾಪಿಸಲಾಯಿತು.
 (1)ಭಾರತದ ಆಡಳಿತ ಸುಧಾರಣಾ ಆಯೋಗ
 (2)ಗೋರ್‌ವಾಲ ವರದಿ
 (3)ಸಂತಾನಮ್ ಸಮಿತಿ
 (4)ಕೃಪಾಲನಿ ಸಮಿತಿ
CORRECT ANSWER

(3) ಸಂತಾನಮ್ ಸಮಿತಿ


81.ಹೇಬಿಯಸ್ ಕಾರ್ಪಸ್ ಭಾರತೀಯ ಸಂವಿಧಾನದ ಯಾವ ಭಾಗಕ್ಕೆ ಸಂಬಂಧಿಸಿದೆ?
 (1)ಪ್ರಸ್ತಾವನೆ
 (2)ಮೂಲಭೂತ ಹಕ್ಕುಗಳು
 (3)ರಾಜ್ಯ ನಿರ್ದೇಶಕ ತತ್ವಗಳು
 (4)ಮೂಲಭೂತ ಕರ್ತವ್ಯಗಳು
CORRECT ANSWER

(2) ಮೂಲಭೂತ ಹಕ್ಕುಗಳು


82.ಈ ಕೆಳಗಿನ ಯಾವುದು ಮೈತ್ರಿ ಕೂಟಕ್ಕೆ ಸೇರಿದುದ್ದಲ್ಲ?
 (1)ನ್ಯಾಟೋ-NATO
 (2)ಸೀಟೋ-SEATO
 (3)ಸೆಂಟೋ-CENTO
 (4)ಡಬ್ಲ್ಯೂಟಿಓ-WTO
CORRECT ANSWER

(4) ಡಬ್ಲ್ಯೂಟಿಓ-WTO


83.ಕರ್ನಾಟಕ ಭೂ ಸುಧಾರಣಾ ಕಾಯಿದೆ ಯಾವ ಸೆಕ್ಷನ್ಗಳನ್ನು ತೆಗೆದು ಹಾಕುವ ಮೂಲಕ ಕೃಷಿಯೇತರರಿಗೂ ಕೃಷಿ ಭೂಮಿಯನ್ನು ಕೊಳ್ಳುವುದಕ್ಕೆ ಅವಕಾಶ ಮಾಡಿದೆ
 (1)Sec 79 ಮತ್ತು 79A
 (2)Sec 790 ಮತ್ತು 79D
 (3)Sec 79A ಮತ್ತು 79B
 (4)Sec 79B ಮತ್ತು 79C
CORRECT ANSWER

(3) Sec 79A ಮತ್ತು 79B


84.‘ದಿ ಪ್ಯೂಪಿಲ್ ಆಫ್ ಇಂಡಿಯಾ’ ಪುಸ್ತಕ ಬರೆದವರು ಯಾರು?
 (1)ಸರ್ ಹರ್ಬರ್ಟ್‌ ರಿಸ್ಲೆ
 (2)ನೆಸ್‌ಫೀಲ್ಡ್‌
 (3)ಜಿ.ಎಸ್. ಘುರ್ಯೆ
 (4)ಎಂ.ಎನ್. ಶ್ರೀನಿವಾಸ
CORRECT ANSWER

(1) ಸರ್ ಹರ್ಬರ್ಟ್‌ ರಿಸ್ಲೆ


85.ಯಾವ ಗ್ರಹವನ್ನು ಅಧ್ಯಯನ ಮಾಡಲು ನಾಸಾದ ‘ನ್ಯು ಹೊರೈಜನ್’ ವ್ಯೋಮ ನೌಕೆಯನ್ನು ಹಾರಿಸಲಾಯಿತು?
 (1)ಪ್ಲಟೊ
 (2)ಮಂಗಳ
 (3)ಬುಧ
 (4)ಗುರು
CORRECT ANSWER

(1) ಪ್ಲಟೊ


86.ಮೊದಲ MRI ಸ್ಕ್ಯಾನರನ್ನು ಕಂಡುಹಿಡಿದವರು
 (1)ರೇಮಂಡ್ ಡಾಮಡಾನ್
 (2)ವಿಲಿಯಂ ರಿಚರ್ಡ್‌ಸನ್‌
 (3)ಹೆನ್ರಿಚ್ ರೊಡಾಲ್ಫ್
 (4)ಎನ್‌ರಿಕ್‌ ಫರ್ಮಿ
CORRECT ANSWER

(1) ರೇಮಂಡ್ ಡಾಮಡಾನ್


87.ಚಂದ್ರನ ಬಿಂಬಾವಸ್ಥೆಗಳು ಸಂಭವಿಸಲು ಕಾರಣ
 (1)ಚಂದ್ರನ ವಾತಾವರಣದ ದಟ್ಟತೆಯು ಸ್ಥಿರವಾಗಿಲ್ಲದಿರುವುದು
 (2)ಚಂದ್ರ ಮತ್ತು ಭೂಮಿಗಳ ಪರಿಭ್ರಮಣೆಯ ಗತಿ ಒಂದೇಯಾಗಿರುವುದು
 (3)ಬೆಳಕನ್ನು ಪ್ರತಿಫಲಿಸುವ ಚಂದ್ರನ ಸ್ವಲ್ಪಭಾಗ ಮಾತ್ರ ನಮಗೆ ಕಾಣುವುದು
 (4)ಭೂಮಿ ಮತ್ತು ಚಂದ್ರನ ದೂರವು ನಿರಂತರ ಬದಲಾಗುವುದು
CORRECT ANSWER

(3) ಬೆಳಕನ್ನು ಪ್ರತಿಫಲಿಸುವ ಚಂದ್ರನ ಸ್ವಲ್ಪಭಾಗ ಮಾತ್ರ ನಮಗೆ ಕಾಣುವುದು


88.ಬೆಳಕು ಹೊರಸೂಸುವ ಡಯೋಡ್‌ಗಳು ಯಾವುದರಿಂದ ಮಾಡಲ್ಪಟ್ಟಿವೆ?
 (1)ಜರಮೇನಿಯಂ (Ge)
 (2)ಸಿಲಿಕಾನ್ (Si)
 (3)ಗ್ಯಾಲಿಯಂ ಅರಸನಾಯಡ್ ಫಾಸ್ಪೇಡ್ (GaAsP)
 (4)ತಾಮ್ರ (ಕಾಪರ್)
CORRECT ANSWER

(3) ಗ್ಯಾಲಿಯಂ ಅರಸನಾಯಡ್ ಫಾಸ್ಪೇಡ್ (GaAsP)


89.ಬೆಳಕಿನ ವೇಗ 3 × 10⁸ ಮೀಟರ್/ಸೆಕೆಂಡ್ (ms⁻¹) ನಿಂದ ಮಿಲಿಮೀಟರ್/ಪಿಕೊಸೆಕೆಂಡ್ (mm/ps)ಗೆ ಪರಿವರ್ತಿಸಿದಾಗ ಸಮಾನವಾಗಿರುವ ಮೌಲ್ಯ
 (1)3 × 10⁻¹ mm/ps
 (2)3 × 10¹ mm/ps
 (3)3 × 10⁻⁹ mm/ps
 (4)3 × 10⁹ mm/ps
CORRECT ANSWER

(1) 3 × 10⁻¹ mm/ps


90.ಮಳೆ ಒಂದು ಸಮತಲಕ್ಕೆ 35 ms⁻¹ ಜವದಲ್ಲಿ ಲಂಬವಾಗಿ ಬೀಳುತ್ತದೆ ಎಂದು ಭಾವಿಸಿ. ಅದೇ ಸಮಯಕ್ಕೆ ಸರಿಯಾಗಿ ಗಾಳಿಯು 35 ms⁻¹ ಜವದಲ್ಲಿ ಪಶ್ಚಿಮದಿಂದ ಪೂರ್ವದ ಕಡೆಗೆ ಮಳೆಯ ದಿಕ್ಕಿಗೆ ಲಂಬವಾಗಿ ಬೀಸುತ್ತದೆ. ಹಾಗಾದರೆ ಆ ಸ್ಥಳದಲ್ಲಿರುವ ವ್ಯಕ್ತಿ ಯಾವ ದಿಕ್ಕಿಗೆ ಛತ್ರಿಯನ್ನು ಹಿಡಿಯಬೇಕು?
 (1)90° ಪೂರ್ವ ದಿಕ್ಕಿನ ಕಡೆ
 (2)19° ಪೂರ್ವ ದಿಕ್ಕಿನ ಕಡೆ
 (3)45° ಪೂರ್ವ ದಿಕ್ಕಿನ ಕಡೆ
 (4)60° ಪೂರ್ವ ದಿಕ್ಕಿನ ಕಡೆ
CORRECT ANSWER

(3) 45° ಪೂರ್ವ ದಿಕ್ಕಿನ ಕಡೆ


91.ಒಂಟಿ ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳುವ ಸಮಾನ ಹಕ್ಕನ್ನು ಪಡೆದಿರುವಳೆಂದು ದಿನಾಂಕ 29/09/2022 ರಂದು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನ ಪರಿಗಣಿಸಿ.
 (a)ಗರ್ಭನಿರೋಧಕ ಮತ್ತು ಲೈಂಗಿಕ ಆರೋಗ್ಯದ ಕುರಿತು ಶಿಕ್ಷಣ ಮತ್ತು ಮಾಹಿತಿಯನ್ನು ಪಡೆಯುವ ಹಕ್ಕನ್ನು ಒಳಗೊಂಡಂತೆ ಮರು ಉತ್ಪಾದನೆ ಹಕ್ಕು.
 (b)ಮಗುವನ್ನು ಯಾವಾಗ ಹೊಂದುವುದು ಅಥವಾ ಬೇಡವೇ ಎಂಬ ಆಯ್ಕೆಯ ಹಕ್ಕು
 (c)ಆದರೆ ಎಷ್ಟು ಮಕ್ಕಳನ್ನು ಹೊಂದುವ ಆಯ್ಕೆಯ ಸ್ವಾತಂತ್ರವನ್ನು ಹೊರತುಪಡಿಸಿ.
 (d)2021ರಲ್ಲಿನ ಎಮ್‌ಟಿಪಿ (ತಿದ್ದುಪಡಿ / ಕಾಯ್ದೆಯು ‘ಸಂಗಾತಿ’ ಎಂಬ ಪದವನ್ನು ಒಳಗೊಂಡಿರುವುದು ಸೂಚಿಸುವುದೇನೆಂದರೆ, ಮದುವೆಯಾದ ಮಹಿಳೆಯನ್ನು ಕುರಿತು ಮಾತ್ರವೇ ಕಾನೂನು ಒಪ್ಪಿಗೆ ನೀಡಿರುವುದಿಲ್ಲ.
 ಮೇಲಿನ ಹೇಳಿಕೆ/ಗಳಲ್ಲಿ ಸರಿಯಾದದ್ದು ಯಾವುದು
 (1)(a), (b) ಮತ್ತು (c) ಮಾತ್ರ
 (2)(b), (c) ಮತ್ತು (d) ಮಾತ್ರ
 (3)(a), (b) ಮತ್ತು (d) ಮಾತ್ರ
 (4)ಮೇಲಿನ ಎಲ್ಲವೂ
CORRECT ANSWER

(3) (a), (b) ಮತ್ತು (d) ಮಾತ್ರ


92.ಬೀಟಾಟ್ರಾನ್ ಕೆಳಗಿನ ಯಾವ ಕಣಗಳನ್ನು ವೇಗೋತ್ಕರ್ಷಿಸಲು ಬಳಸುವ ಸಾಧನವಾಗಿದೆ?
 (1)ಫೋಟಾನ್
 (2)ನ್ಯೂಟ್ರಾನ್
 (3)ಎಲೆಕ್ಟ್ರಾನ್
 (4)ನ್ಯೂಟ್ರಿನೊ
CORRECT ANSWER

(3) ಎಲೆಕ್ಟ್ರಾನ್


93.ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಗಂಡು ನೌಕರರ ವೇತನ ರೂ. 520 ಮತ್ತು ಹೆಣ್ಣು ನೌಕರರ ವೇತನ ರೂ. 420 ಆಗಿರುತ್ತದೆ. ಹಾಗೂ ಒಟ್ಟು ಸರಾಸರಿ ವೇತನ ರೂ. 500 . ಆದರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣು ನೌಕರರ ಪ್ರತಿಶತ ಎಷ್ಟು?
 (1)(20, 80)
 (2)(60, 40)
 (3)(80, 20)
 (4)(40, 60)
CORRECT ANSWER

(2) (60, 40)


94.ಹತ್ತು ವರ್ಷಗಳ ಹಿಂದೆ ತಂದೆಯ ವಯಸ್ಸು ಅವನ ಮಗನ ವಯಸ್ಸಿಗಿಂತ ಹನ್ನೆರಡು ಪಟ್ಟು ಇತ್ತು ಮತ್ತು 10 ವರ್ಷಗಳ ನಂತರ ಅವನ ವಯಸ್ಸು ಮಗನ ವಯಸ್ಸಿಗಿಂತ ಎರಡು ಪಟ್ಟು ಇದ್ದರೆ, ಈ ಇಬ್ಬರ ಈಗಿನ ವಯಸ್ಸು ಎಷ್ಟು?
 (1)ತಂದೆಯ ವಯಸ್ಸು 34 ವರ್ಷ ಮತ್ತು ಮಗನ ವಯಸ್ಸು 12 ವರ್ಷ
 (2)ತಂದೆಯ ವಯಸ್ಸು 30 ವರ್ಷ ಮತ್ತು ಮಗನ ವಯಸ್ಸು 10 ವರ್ಷ
 (3)ತಂದೆಯ ವಯಸ್ಸು 32 ವರ್ಷ, ಮತ್ತು ಮಗನ ವಯಸ್ಸು 12 ವರ್ಷ
 (4)ತಂದೆಯ ವಯಸ್ಸು 34 ವರ್ಷ ಮತ್ತು ಮಗನ ವಯಸ್ಸು 14 ವರ್ಷ
CORRECT ANSWER

(1) ತಂದೆಯ ವಯಸ್ಸು 34 ವರ್ಷ ಮತ್ತು ಮಗನ ವಯಸ್ಸು 12 ವರ್ಷ


95.²⁵Cₙ₊₇ = ²⁵C₄ₙ₋₂- ಆದರೆ ‘n’ ಎಲ್ಲಾ ಬೆಲೆಗಳು ಎಷ್ಟು?
 (1)3 ಮತ್ತು 4
 (2)4 ಮತ್ತು 5
 (3)3
 (4)4
CORRECT ANSWER

(1) 3 ಮತ್ತು 4


96.ಒಬ್ಬ ವ್ಯಕ್ತಿಯು ತನ್ನ ಪ್ರಯಾಣವನ್ನು 15 ಗಂಟೆಗಳಲ್ಲಿ ಪೂರೈಸುತ್ತಾನೆ. ತನ್ನ ಪ್ರಯಾಣದ ಅರ್ಧದಷ್ಟು ದೂರವನ್ನು 12 ಕಿ.ಮೀ./ಗಂ ಹಾಗೂ ಉಳಿದ ಅರ್ಧ ದೂರವನನ್ನು 18 ಕಿ.ಮೀ./ಗಂ ವೇಗದಲ್ಲಿ ಚಲಿಸಿ ಪೂರೈಸುತ್ತಾನೆ ಹಾಗಾದರೆ ಅವನು ಕ್ರಮಿಸಿದ ದೂರವು ಎಷ್ಟು ಆಗಿರುತ್ತದೆ? ಕಿ.ಮೀ. ಗಳಲ್ಲಿ
 (1)210
 (2)216
 (3)220
 (4)225
CORRECT ANSWER

(2) 216


97.P ಮತ್ತು Q ರವರ ಪ್ರತಿ ತಿಂಗಳ ಸರಾಸರಿ ಆದಾಯವು 6,200 ರೂಪಾಯಿಗಳು, Q ಮತ್ತು R ರವರ ಪ್ರತಿ ತಿಂಗಳ ಸರಾಸರಿ ಆದಾಯವು 7,000 ರೂಪಾಯಿಗಳು, P ಮತ್ತು R ರವರ ಪ್ರತಿ ತಿಂಗಳ ಆದಾಯವು 8,300 ರೂಪಾಯಿಗಳು ಆಗಿರುತ್ತದೆ. ಹಾಗಾದರೆ P ನ ಪ್ರತಿ ತಿಂಗಳ ಆದಾಯವು ಎಷ್ಟಾಗಿರುತ್ತದೆ?
 (1)7000
 (2)7500
 (3)8000
 (4)8500
CORRECT ANSWER

(2) 7500


98.x² – x – 2 ಎಂಬ ಬಹುಪದೋಕ್ತಿಯ ಶೂನ್ಯತೆಗಳ ಮೊತ್ತ ಹಾಗೂ ಗುಣಲಬ್ಧಗಳು
 (1)-1 ಮತ್ತು -2
 (2)-1 ಮತ್ತು 2
 (3)1 ಮತ್ತು -2
 (4)1 ಮತ್ತು 2
CORRECT ANSWER

(3) 1 ಮತ್ತು -2


99.ಒಂದು ಏಕಮಾನ ತ್ರಿಜ್ಯವುಳ್ಳ ವೃತ್ತದ ತ್ರಿಜ್ಯವನ್ನು ಅದರ ಎರಡು ಪಟ್ಟು ತ್ರಿಜ್ಯಕ್ಕೆ ವೃದ್ಧಿಸಿದರೆ ಮೊದಲನೆ ವೃತ್ತದ ಮತ್ತು ಎರಡನೆಯ ವೃತ್ತದ ವಿಸ್ತೀರ್ಣಗಳ ಅನುಪಾತವು
 (1)1 : 4
 (2)1 : 5
 (3)1 : 2
 (4)1 : 1
CORRECT ANSWER

(1) 1 : 4


100.ಸುಮೇಶ್ ತನ್ನ ಮನೆಯಿಂದ ದಕ್ಷಿಣಕ್ಕೆ 15 ಕಿ.ಮೀ. ನಂತರ ಪೂರ್ವಕ್ಕೆ ತಿರುಗಿ 10 ಕಿ.ಮೀ. ನಂತರ ಉತ್ತರಕ್ಕೆ ತಿರುಗಿ 5 ಕಿ.ಮೀ. ಅಂತಿಮವಾಗಿ ಅವರು ಪಶ್ಚಿಮಕ್ಕೆ ತಿರುಗಿ 10 ಕಿ.ಮೀ. ಅವನು ತನ್ನ ಮನೆಯಿಂದ ಯಾವ ದಿಕ್ಕಿನಲ್ಲಿದ್ದಾನೆ?
 (1)ದಕ್ಷಿಣ
 (2)ಪೂರ್ವ
 (3)ಉತ್ತರ
 (4)ಪಶ್ಚಿಮ
CORRECT ANSWER

(1) ದಕ್ಷಿಣ


   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment