WhatsApp Group Join Now
Telegram Group Join Now

kpsc group c GS previous question paper 05.12.2021

KPSC GROUP ‘C’ NON TECHNICAL ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆ

1.ಇವೆರಡರಲ್ಲಿ ಯಾವುದು ಹೆಚ್ಚು 53005300 ಅಥವಾ 34003400
 (1)34003400
 (2)53005300
 (3)ಎರಡೂ (1) ಮತ್ತು (2)
 (4)ಮೇಲಿನ ಯಾವುದೂ ಅಲ್ಲ

CORRECT ANSWER

(2) 53005300


2.ಕ್ರಮಾನುಸಾರ ವರ್ಗ ಮೂರು ಬೆಸ ಸಂಖ್ಯೆಗಳ ಮೊತ್ತವು 2531 ಆಗಿರುತ್ತದೆ. ಹಾಗಾದಲ್ಲಿ ಸರಿಯಾದ ಆ ಮೂರು ಬೆಸ ಸಂಖ್ಯೆಗಳನ್ನು ಕಂಡುಹಿಡಿಯಿರಿ
 (1)27, 28, 31
 (2)26, 28, 29
 (3)25, 27, 29
 (4)27, 29, 31
CORRECT ANSWER

(4) 27, 29, 31


3.ಕೆಳಗಿನ ಯಾವ ಸಂಖ್ಯೆಯು ಖಾಲಿ ಬಿಟ್ಟ ಜಾಗವನ್ನು ತುಂಬುತ್ತದೆ?
 (1)40
 (2)4
 (3)6
 (4)32
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


4.1-100ರ ತನಕ ನೀವು ಅಂಕಿಗಳನ್ನು ಬರೆದಾಗ, ಸಂಖ್ಯೆ 3ನ್ನು ಎಷ್ಟು ಬಾರಿ ಬರೆದಂತಾಗುತ್ತದೆ?
 (1)11
 (2)20
 (3)18
 (4)21
CORRECT ANSWER

(2) 20


5.ಒಂದು ಕುಟುಂಬದಲ್ಲಿ ತಂದೆಯು ಪ್ರತಿಯೊಬ್ಬರಿಗಿಂತ ಕೇಕ್‌ನ ¼ ಭಾಗವನ್ನು ಮೂರು ಬಾರಿ ಸ್ವೀಕರಿಸುತ್ತಾನೆ. ಹಾಗಾದರೆ ಆ ಕುಟುಂಬದ ಒಟ್ಟು ಸದಸ್ಯರ ಸಂಖ್ಯೆಯನ್ನು ಕಂಡುಹಿಡಿಯಿರಿ.
 (1)12
 (2)10
 (3)3
 (4)7
CORRECT ANSWER

(2) 10


6.ಒಬ್ಬ ಹುಡುಗನು ತನ್ನ ಹಳ್ಳಿಯಿಂದ ಶಾಲೆಗೆ 3 km/hr ವೇಗದಲ್ಲಿ ಚಲಿಸಿ ನಂತರ ಶಾಲೆಯಿಂದ ಹಳ್ಳಿಗೆ 2 km/hr ವೇಗದಲ್ಲಿ ಬರುತ್ತಾನೆ. ಒಟ್ಟಾರೆಯಾಗಿ ಅವನು ತೆಗೆದುಕಂಡ ಕಾಲವು 5 ಗಂಟೆ ಆದರೆ ಶಾಲೆಯಂದ ಹಳ್ಳಿಗೆ ಇರುವ ದೂರವನ್ನು ಕಂಡುಹಿಡಿಯಿರಿ
 (1)5 km
 (2)10 km
 (3)6 km
 (4)30 km
CORRECT ANSWER

(3) 6 km


7.503535 ಈ ಸಂಖ್ಯೆಯಲ್ಲಿನ 3ರ ಸ್ಥಾನ ಬೆಲೆಯ ಮೊತ್ತವು
 (1)6
 (2)60
 (3)3030
 (4)3300
CORRECT ANSWER

(3) 3030


8.Aನ ಆದಾಯವು B ಗಿಂತ 50% ಕಡಿಮೆ ಇದ್ದರೆ, Bನ ಆದಾಯವು A ಗಿಂತ ಶೇಕಡಾ ಎಷ್ಟು ಹೆಚ್ಚಾಗಿದೆ?
 (1)50%
 (2)75%
 (3)100%
 (4)125%
CORRECT ANSWER

(3) 100%


9.ಬಿಟ್ಟುಹೋದ ಸಂಖ್ಯೆಯನ್ನು ಕಂಡುಹಿಡಿಯಿರಿ :
 (1)74
 (2)63
 (3)60
 (4)65
CORRECT ANSWER

(3) 60


10.ಈ ಕೆಳಗಿನವುಗಳಲ್ಲಿ ಯಾವ ತೆರಿಗೆಯನ್ನು ಪಂಚಾಯತಿಯು ಸಂಗ್ರಹಿಸುತ್ತದೆ?
 (1)ಮಾರಾಟದ ತೆರಿಗೆಗಳು
 (2)ಆಮದು ರಫ್ತು ಸುಂಕಗಳು
 (3)ಭೂ ಕಂದಾಯ
 (4)ಸ್ಥಳೀಯ ಸಂತೆ (ಜಾತ್ರೆ)ಯಲ್ಲಿನ ಮಾರಾಟಗಾರರ ಸ್ಥಳದ ಮೇಲಿನ ತೆರಿಗೆ
CORRECT ANSWER

(4) ಸ್ಥಳೀಯ ಸಂತೆ (ಜಾತ್ರೆ)ಯಲ್ಲಿನ ಮಾರಾಟಗಾರರ ಸ್ಥಳದ ಮೇಲಿನ ತೆರಿಗೆ


11.ಈ ಕೆಳಗಿನವುಗಳಲ್ಲಿ ಒಂದು ಗ್ರಾಮೀಣ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮವಲ್ಲ
 (1)ಟಿಆರ್‌ವೈಎಸ್ಇಎಂ
 (2)ಜೆಆರ್‌ವೈ
 (3)ಐಆರ್‌ಡಿಪಿ
 (4)ಸಿಆರ್‌ವೈ
CORRECT ANSWER

(4) ಸಿಆರ್‌ವೈ


12.ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನ ಒಟ್ಟು ಬಂಡವಾಳದಲ್ಲಿ ಪ್ರಾಯೋಜಕ ಬ್ಯಾಂಕಿನ ಪ್ರತಿಶತ ಪ್ರಮಾಣ ಎಷ್ಟು?
 (1)ಶೇಕಡಾ 55
 (2)ಶೇಕಡಾ 45
 (3)ಶೇಕಡಾ 35
 (4)ಶೇಕಡಾ 20
CORRECT ANSWER

(3) ಶೇಕಡಾ 35


13.ಯಾವ ರಾಜ್ಯವು ಮೊದಲಿಗೆ ‘ಗ್ರಾಮೀಣ ಉದ್ಯೋಗ ಭರವಸೆ’ ಕಾರ್ಯಕ್ರಮವನ್ನು ಜಾರಿಗೆ ತಂದಿತು?
 (1)ಗುಜರಾತ್
 (2)ಕೇರಳ
 (3)ಮಹಾರಾಷ್ಟ್ರ
 (4)ಆಂಧ್ರಪ್ರದೇಶ

CORRECT ANSWER

(3) ಮಹಾರಾಷ್ಟ್ರ


14.ಯಾವ ಸಮಿತಿಯು ‘ನಬಾರ್ಡ್’ ಸ್ಥಾಪಿಸಲು ಶಿಫಾರಸು ಮಾಡಿತು?
 (1)ಶಿವರಾಮನ್ ಸಮಿತಿ
 (2)ಚಲ್ಲಯ್ಯ ಸಮಿತಿ
 (3)ದಂತವಾಲಾ ಸಮಿತಿ
 (4)ರಂಗರಾಜನ್ ಸಮಿತಿ
CORRECT ANSWER

(1) ಶಿವರಾಮನ್ ಸಮಿತಿ


15.ಸಹಕಾರಿ ಸಂಘವು ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಪ್ರಾರಂಭವಾಗಿದ್ದು, ಅದು
 (1)ಕರ್ನಾಟಕ ರಾಜ್ಯದಲ್ಲಿಯೇ ಮೊದಲು
 (2)ಭಾರತದಲ್ಲಿಯೇ ಮೊದಲು
 (3)ಏಷ್ಯಾ ಖಂಡದಲ್ಲಿಯೇ ಮೊದಲು
 (4)ಜಗತ್ತಿನಲ್ಲಿಯೇ ಮೊದಲು
CORRECT ANSWER

(3) ಏಷ್ಯಾ ಖಂಡದಲ್ಲಿಯೇ ಮೊದಲು


16.ಭಾರತದಲ್ಲಿ ಮೊದಲ ಬಾರಿಗೆ ರಾಜಸ್ಥಾನದ ಯಾವ ಜಿಲ್ಲೆಯು ಪಂಚಾಯತ್ ರಾಜ್ ವ್ಯವಸ್ಥೆ ಅಳವಡಿಸಿಕೊಂಡಿತ್ತು?
 (1)ಉದಯಪುರ
 (2)ಡುಂಗರಪುರ
 (3)ನಾಗೌರ್
 (4)ಬಿಕಾನೇರ್
CORRECT ANSWER

(3) ನಾಗೌರ್


17.ಭಾರತೀಯ ಸಹಕಾರ ಚಳುವಳಿಯ ಅತ್ಯುನ್ನತ ಸಂಸ್ಥೆಯಾಗಿದೆ
 (1)ಎನ್‌ಸಿಸಿಎಫ್‌ಐ (NCCFI)
 (2)ಐಎಫ್‌ಎಫ್‌ಸಿಒ(IFFCO)
 (3)ಐಸಿಎಂ (ICM)
 (4)ಎನ್‌ಸಿಯುಐ (NCUI)
CORRECT ANSWER

(4) ಎನ್‌ಸಿಯುಐ(NCUI)


18.ಕರ್ನಾಟಕದಲ್ಲಿ ಜಿಲ್ಲಾ ಪರಿಷತ್ ಅಸ್ತಿತ್ವಕ್ಕೆ ಬಂದ ವರ್ಷ
 (1)ಏಪ್ರಿಲ್ 1987
 (2)ಜೂನ್ 1987
 (3)ಏಪ್ರಿಲ್ 1993
 (4)ಜೂನ್ 1993
CORRECT ANSWER

(1) ಏಪ್ರಿಲ್ 1987


19.ತೆರಿಗೆಗಳನ್ನು, ಸುಂಕಗಳನ್ನು ಮತ್ತು ಶುಲ್ಕಗಳನ್ನು ವಿಧಿಸಲು, ಸಂಗ್ರಹಿಸಲು ಮತ್ತು ಹಂಚಿಕೆ ಮಾಡಲು ಪಂಚಾಯಿತಿಗಳಿಗೆ ಪ್ರಾಧಿಕಾರ ನೀಡಿದ ಸಂವಿಧಾನದ ಕಲಮು
 (1)ಕಲಮು 243 H
 (2)ಕಲಮು 243 I
 (3)ಕಲಮು 243 J
 (4)ಕಲಮು 243 G
CORRECT ANSWER

(1) ಕಲಮು 243 ಏ


20.ಭಾರತ ಸರ್ಕಾರದ ಆತ್ಮನಿರ್ಭರ ಭಾರತ್ ಯೋಜನೆಯ ಭಾಗವಾಗಿ ಮೇ 2020 ರಲ್ಲಿ ಜಾರಿಗೆ ತಂದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ (ಪಿ.ಎಂ.ಎಂ.ಎಸ್.ವೈ.) ಗುರಿ
 (1)2024-25 ನೇ ಅವಧಿಯಲ್ಲಿ ಮೀನಿನ ಉತ್ಪಾದನೆಯನ್ನು 19 ಮಿಲಿಯನ್ ಟನ್ ಹೆಚ್ಚು ಮಾಡುವುದು ಮತ್ತು ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಶೇಕಡ 10.5ರಷ್ಟು ಹೆಚ್ಚುಮಾಡುವುದಾಗಿದೆ.
 (2)2024-25 ನೇ ಅವಧಿಯಲ್ಲಿ ಮೀನಿನ ಉತ್ಪಾದನೆಯನ್ನು 20 ಮಿಲಿಯನ್ ಟನ್ ಹೆಚ್ಚು ಮಾಡುವುದು ಮತ್ತು ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಶೇಕಡ 8ರಷ್ಟು ಹೆಚ್ಚು ಮಾಡುವುದಾಗಿದೆ.
 (3)2024-25 ನೇ ಅವಧಿಯಲ್ಲಿ ಮೀನಿನ ಉತ್ಪಾದನೆಯನ್ನು 22 ಮಿಲಿಯನ್ ಟನ್ ಹೆಚ್ಚು ಮಾಡುವುದು ಮತ್ತು ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಶೇಕಡ 9ರಷ್ಟು ಹೆಚ್ಚು ಮಾಡುವುದಾಗಿದೆ.
 (4)2024-25 ನೇ ಅವಧಿಯಲ್ಲಿ ಮೀನಿನ ಉತ್ಪಾದನೆಯನ್ನು 17 ಮಿಲಿಯನ್ ಟನ್ ಹೆಚ್ಚು ಮಾಡುವುದು ಮತ್ತು ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಶೇಕಡ 11ರಷ್ಟು ಹೆಚ್ಚು ಮಾಡುವುದಾಗಿದೆ.
CORRECT ANSWER

(3) 2024-25 ನೇ ಅವಧಿಯಲ್ಲಿ ಮೀನಿನ ಉತ್ಪಾದನೆಯನ್ನು 22 ಮಿಲಿಯನ್ ಟನ್ ಹೆಚ್ಚು ಮಾಡುವುದು ಮತ್ತು ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಶೇಕಡ 9ರಷ್ಟು ಹೆಚ್ಚು ಮಾಡುವುದಾಗಿದೆ.


21.ಆರ್ಥರ್ ಲೂಯಿಸ್ ಅವರ ಕೊಡುಗೆ ಪ್ರಸಿದ್ದಿಯಾಗಲು ಅವರು ನೀಡಿರುವ
 (1)ಮರೆಮಾಚುವ ನಿರುದ್ಯೋಗಕ್ಕೆ ಪರಿಹಾರವಾಗಿದೆ.
 (2)ಋತುಮಾನ ನಿರುದ್ಯೋಗ ಪರಿಹರಿಸುವುದಾಗಿದೆ.
 (3)ಗ್ರಾಮೀಣ ಭಾಗದ ಅಧಿಕ ಮಾನವ ಸಂಪನ್ಮೂಲವನ್ನು ನಗರ ಪ್ರದೇಶದಲ್ಲಿ ಉಪುಗಿಸುವುದು.
 (4)ಮೇಲಿನ ಯಾವುದೂ ಅಲ್ಲ
CORRECT ANSWER

(3) ಗ್ರಾಮೀಣ ಭಾಗದ ಅಧಿಕ ಮಾನವ ಸಂಪನ್ಮೂಲವನ್ನು ನಗರ ಪ್ರದೇಶದಲ್ಲಿ ಉಪುಗಿಸುವುದು.


22.1992ರ ಸಂವಿಧಾನ ಕಾಯ್ದೆ – ಎಲ್ಲಾ ರಾಜ್ಯಗಳ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಪದ್ಧತಿಗೆ ಅವಕಾಶ ಮಾಡಿಕೊಡಲು ಬೇಕಾದ ಜನಸಂಖ್ಯೆ ಕನಿಷ್ಟಕ್ಕಿಂತ ಅಧಿಕವಾಗಿರಬೇಕು
 (1)20 ಲಕ್ಷಗಳು
 (2)30 ಲಕ್ಷಗಳು
 (3)25 ಲಕ್ಷಗಳು
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) 20 ಲಕ್ಷಗಳು


23.ರಾಷ್ಟ್ರೀಯ ಕುಟುಂಬ ಹಿತ ಕಾಯುವ ಯೋಜನೆಯು ಕೆಳಗಿನ ಯೋಜನೆಯಲ್ಲಿದೆ
 (1)ಜವಾಹರ್ ರೋಜ್‌ಗಾರ್‌ ಯೋಜನೆ
 (2)ಉದ್ಯೋಗ ಖಾತರಿ ಯೋಜನೆ
 (3)ಗ್ರಾಮೀಣ ಭೂ ರಹಿತ ಉದ್ಯೋಗ ಖಾತರಿ ಯೋಜನೆ
 (4)ರಾಷ್ಟ್ರೀಯ ಸಾಮಾಜಿಕ ಸಹಾಯದ ಯೋಜನೆ
CORRECT ANSWER

(4) ರಾಷ್ಟ್ರೀಯ ಸಾಮಾಜಿಕ ಸಹಾಯದ ಯೋಜನೆ


24.ಒಂದು ಸಾದಾ ಕನ್ನಡಿಯ ಮುಂದೆ ನಿಂತಿರುವಿರೆಂದು ಕಲ್ಪಿಸಿಕೊಳ್ಳಿ ಹಾಗೂ 10° ನಷ್ಟು ತಿರುಗಿಕೊಳ್ಳಿ. ತಿರುಗಿದಾಗ ಗೋಚರಿಸುವ ಬಿಂಬ ಎಷ್ಟಾಗಿರುತ್ತದೆ?
 (1)
 (2)10°
 (3)15°
 (4)20°
CORRECT ANSWER

(4) 20°


25.ಭೂಮಿಯನ್ನು ಸಮೀಪಿಸುವ ಅಧಿಕ ಶಕ್ತಿಯ ವಿದ್ಯುದಾವೇಶವುಳ್ಳ ಕಣಗಳಲ್ಲಿ ಹೆಚ್ಚಿನವುಗಳನ್ನು ಹಿಡಿದಿಟ್ಟುಕೊಳ್ಳುವುದು
 (1)ವಾತಾವರಣ
 (2)ವಾನ್ ಆಲೆನ್ ರೇಡಿಯೇಶನ್ ಬೆಲ್ಟ್
 (3)ಆಸ್ಟರಾಯ್ಡ್ ಬೆಲ್ಟ್
 (4)ಕ್ಯೂಪರ್ ಬೆಲ್ಟ್
CORRECT ANSWER

(2) ವಾನ್ ಆಲೆನ್ ರೇಡಿಯೇಶನ್ ಬೆಲ್ಟ್


26.ತುಂತುರು ನೀರಿನ ಹನಿಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಕಾಮನಬಿಲ್ಲು ಕಾಣಸಿಗುತ್ತದೆ. ಈ ಕೆಳಗಿನವುಗಳಲ್ಲಿ ಯಾವ ಭೌತಿಕ ವಿದ್ಯಾಮಾನಗಳು ಸರಿಯಾಗಿದೆ?
 I.ವಿಸರಣ
 II.ವಕ್ರೀಭವನ
 III.ಒಟ್ಟು ಆಂತರಿಕ ಪ್ರತಿಫಲನ
 (1)I ಮತ್ತು II
 (2)I
 (3)II ಮತ್ತು III
 (4)I, II ಮತ್ತು III
CORRECT ANSWER

(3) II ಮತ್ತು III


27.ಸೂರ್ಯನ ಮೇಲ್ಮೈ ಮೇಲಿನ ಸೌರ ಕಲೆಗಳು __________
 (1)ಕಡಿಮೆ ಕಾಂತಕ್ಷೇತ್ರಗಳ ವಲಯ
 (2)ಹೆಚ್ಚು ಕಾಂತಕ್ಷೇತ್ರಗಳ ವಲಯ
 (3)ಕಪ್ಪು ಕುಳಿಯ ವಲಯ
 (4)ಕಾಲ್ಪನಿಕ ಸ್ಥಳಗಳು
CORRECT ANSWER

(2) ಹೆಚ್ಚು ಕಾಂತಕ್ಷೇತ್ರಗಳ ವಲಯ


28.ಚಂದ್ರಗ್ರಹಣಗಳು ಸೂರ್ಯಗ್ರಹಣಕ್ಕಿಂತ ಹಚ್ಚು ಸಾಮಾನ್ಯವಾಗಿ ಕಾಣಸಿಗಲು ಕಾರಣ
 (1)ಸಾಪೇಕ್ಷವಾಗಿ ಚಿಕ್ಕ ಗಾತ್ರದ ಚಂದ್ರನ ನೆರಳು ದೊಡ್ಡ ಗಾತ್ರದ ಭೂಮಿಯ ಮೇಲೆ ಬೀಳುವುದು
 (2)ಸಾಪೇಕ್ಷವಾಗಿ ಚಿಕ್ಕ ಗಾತ್ರದ ಭೂಮಿಯ ನೆರಳು ದೊಡ್ಡ ಗಾತ್ರದ ಸೂರ್ಯನ ಮೇಲೆ ಬೀಳುವುದು
 (3)ಸಾಪೇಕ್ಷವಾಗಿ ಚಿಕ್ಕ ಗಾತ್ರದ ಚಂದ್ರನ ನೆರಳು ದೊಡ್ಡ ಗಾತ್ರದ ಸೂರ್ಯನ ಮೇಲೆ ಬೀಳುವುದು
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಸಾಪೇಕ್ಷವಾಗಿ ಚಿಕ್ಕ ಗಾತ್ರದ ಚಂದ್ರನ ನೆರಳು ದೊಡ್ಡ ಗಾತ್ರದ ಭೂಮಿಯ ಮೇಲೆ ಬೀಳುವುದು


29.ಶುಷ್ಕ ಮಂಜುಗಡ್ಡೆಯು
 (1)ಘನ ಇಂಗಾಲದ ಡೈಆಕ್ಸೈಡ್
 (2)ಘನ ಸಲ್ಫರ್ ಡೈಆಕ್ಸೈಡ್
 (3)ಘನ ಬೆಂಜೀನ್ ಓಂ
 (4)ಮೇಲ್ಮೈ ಒಣದಾದ ಮಂಜುಗಡ್ಡೆ
CORRECT ANSWER

(1) ಘನ ಇಂಗಾಲದ ಡೈಆಕ್ಸೈಡ್


30.ಡಾಂಬರ ಗುಳಿಗೆಗಳಲ್ಲಿರುವ ರಾಸಾಯನಿಕ ವಸ್ತು
 (1)ಕರ್ಪೂರ
 (2)ಬೆಂಜೋಯಿಕ್ ಆಮ್ಲ
 (3)ನ್ಯಾಫ್ತಲೀನ್
 (4)ಸಿನ್ನಾಮಿಕ್ ಆಮ್ಲ
CORRECT ANSWER

(3) ನ್ಯಾಫ್ತಲೀನ್


31.ಮೂರು ಬಲ್ಬ್‌ಗಳನ್ನು ಒಂದು ವೋಲ್ಟೇಜ್ ಮೂಲಕ್ಕೆ ಸಾಲಾಗಿ ಸೇರಿಸಿದೆ. ಅವುಗಳಲ್ಲೊಂದು ಬಲ್ಬ್ ಸುಟ್ಟು ಹೋದರೆ
 (1)ಉಳಿದೆರಡು ಬಲ್ಬ್‌ಗಳು ಹೆಚ್ಚು ಪ್ರಕಾಶ ಬೀರುತ್ತವೆ.
 (2)ಎಲ್ಲಾ ಬಲ್ಬ್‌ಗಳೂ ನಂದಿಹೋಗುತ್ತವೆ.
 (3)ಉಳಿದೆರಡು ಬಲ್ಬ್‌ಗಳು ಕಡಿಮೆ ಪ್ರಕಾಶ ಬೀರುತ್ತವೆ.
 (4)ಉಳಿದೆರಡು ಬಲ್ಬ್‌ಗಳಲ್ಲಿ ಏನೂ ಬದಲಾಗುವುದಿಲ್ಲ.
CORRECT ANSWER

(2) ಎಲ್ಲಾ ಬಲ್ಬ್‌ಗಳೂ ನಂದಿಹೋಗುತ್ತವೆ.


32.ಅತೀ ಹೆಚ್ಚು ವೇಗವಾಗಿ ಬೆಳೆಯುವ ಸಸ್ಯ
 (1)ಬಿದಿರು
 (2)ಮಾವು
 (3)ತೆಂಗಿನಕಾಯಿ
 (4)ನೀಲಗಿರಿ
CORRECT ANSWER

(1) ಬಿದಿರು


33.ಹಸಿರು ಗೊಬ್ಬರಕ್ಕಾಗಿ ಈ ಕೆಳಗಿನ ಯಾವ ಸಸ್ಯವನ್ನು ಬಳಸಲಾಗುತ್ತದೆ?
 (1)ಸೆಣಬು
 (2)ಹತ್ತಿ
 (3)ಗೋಧಿ
 (4)ಅಕ್ಕಿಯನ್ನು
CORRECT ANSWER

(1) ಸೆಣಬು
ಅಥವಾ
(2) ಹತ್ತಿ
ಅಥವಾ
(3) ಗೋಧಿ


34.ಈ ಕೆಳಗಿನವುಗಳಲ್ಲಿ ಮಾರ್ಪಡಿಸಿದ ಕಾಂಡ ಯಾವುದು?
 (1)ಈರುಳ್ಳಿ
 (2)ಬೆಳ್ಳುಳ್ಳಿ
 (3)ಆಲೂಗೆಡ್ಡೆ
 (4)ಟೊಮ್ಯಾಟೋ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


35.ಈ ಕೆಳಗಿನವುಗಳಲ್ಲಿ ಪರಾವಲಂಬಿ ಸಸ್ಯ ಯಾವುದು?
 (1)ಇಬ್ಬನಿ ಗಿಡ
 (2)ಆಲದ ಮರ
 (3)ತುಳಸಿ
 (4)ಮೆಂತ್ಯ
CORRECT ANSWER

(1) ಇಬ್ಬನಿ ಗಿಡ


36.2020ರಲ್ಲಿ ‘ಹಕ್ಕಿ ಹಬ್ಬ’ ಎಂದು ಪ್ರಸಿದ್ಧವಾಗಿರುವ ಕರ್ನಾಟಕ ಹಕ್ಕಿ ಹಬ್ಬವನ್ನು _________ ನಲ್ಲಿ ನಡೆಸಲಾಯಿತು.
 (1)ಮೈಸೂರು
 (2)ಹಂಪಿ
 (3)ನಂದಿ ಬೆಟ್ಟ
 (4)ಬಂಡೀಪುರ
CORRECT ANSWER

(3) ನಂದಿ ಬೆಟ್ಟ


37.ಪಟ್ಟಿ I ಮತ್ತು IIನ್ನು ಸರಿಹೊಂದಿಸಿ ಹಾಗೂ ಈ ಕೆಳಗೆ ನೀಡಲಾದ ಸಂಕೇತವನ್ನು ಉಪಯೋಗಿಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
  ಪಟ್ಟಿ -I ಪಟ್ಟಿ -II
 (a)ಮರ್ಕ್ಯುರಿಯ ಕಲುಷಿತತೆ(i)ಪಾರ್ಕಿನ್‌ಸನ್‌ ಕಾಯಿಲೆ
 (b)ಆರ್ಸೆನಿಕ್‌ನ ಕಲುಷಿತತೆ(ii)ಇಟಾಯ್-ಇಟಾಯ್ ಕಾಯಿಲೆ
 (c)ಸೀಸದ ಕಲುಷಿತತೆ(iii)ಮಿನಾಮಟ ಕಾಯಿಲೆ
 (d)ಕ್ಯಾಡ್ಮಿಯಂ ಕಲುಷಿತತೆ(iv)ಕ್ಯಾನ್ಸರ್ ಮತ್ತು ಚರ್ಮದ ಗಾಯ
Codes:
  (a)(b)(c)(d)
 (1)(i)(ii)(iii)(iv)
 (2)(iv)(iii)(i)(ii)
 (3)(iii)(iv)(i)(ii)
 (4)(iv)(iii)(ii)(i)
CORRECT ANSWER

(3) (iii), (iv), (i), (ii)


38.ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯು _________ನಿಂದ ತ್ಯಾಜ್ಯ ನೀರು ಸಂಸ್ಕರಣೆ ಗೊಳಿಸುವುದರೊಂದಿಗೆ ಬರಪೀಡಿತ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಗುರಿಯನ್ನು ಹೊಂದಿದೆ.
 (1)ಹೆಬ್ಬಾಳ ವ್ಯಾಲಿ
 (2)ಅರ್ಕಾವತಿ ವ್ಯಾಲಿ
 (3)ವೃಷಭಾವತಿ ವ್ಯಾಲಿ
 (4)ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ
CORRECT ANSWER

(4) ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ


39.ಭಾರತದಲ್ಲಿ ತೇವಾಂಶವುಳ್ಳ ಆಲ್ಫೈನ್ ಸ್ಕ್ರಬ್ ಅರಣ್ಯವು _________ನಲ್ಲಿ ಕಂಡುಬರುತ್ತದೆ.
 (1)ಮಧ್ಯಪ್ರದೇಶ
 (2)ಉತ್ತರ ಪ್ರದೇಶ
 (3)ಆಂಧ್ರ ಪ್ರದೇಶ
 (4)ಕರ್ನಾಟಕ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


40.ಪರಿಸರ ವಿಜ್ಞಾನದ ಹೆಜ್ಜೆ ಗುರುತುಗಳನ್ನು _________ಅಳೆಯಲಾಗುತ್ತದೆ.
 (1)ಸುಸ್ಥಿರವಲ್ಲದ ಜೀವನ ಶೈಲಿಯಿಂದ
 (2)ಇಂಗಾಲದ ಅಂಶದಿಂದ
 (3)ಭೂಮಿಯ ಪರಿಸರ ವ್ಯವಸ್ಥೆಯ ಮೇಲೆ ಮಾನವನ ಬೇಡಿಕೆಯಿಂದ
 (4)ಸಾಮರ್ಥ್ಯದ ಒಯ್ಯುವಿಕೆಯಿಂದ
CORRECT ANSWER

(3) ಭೂಮಿಯ ಪರಿಸರ ವ್ಯವಸ್ಥೆಯ ಮೇಲೆ ಮಾನವನ ಬೇಡಿಕೆಯಿಂದ


41. ಸಮಾವೇಶದ ಹೆಸರು ಸಮಾವೇಶದ ಉದ್ದೇಶ
 (a)ರಾಮಸರ್(i)ವಲಸೆ ಪಕ್ಷಿಗಳ ಸಂರಕ್ಷಣೆ
 (b)ಸ್ಟಾಕ್‌ಹೋಮ್‌(ii)ನಿರಂತರ ಜೈವಿಕ ಮಾಲಿನ್ಯಕಾರಕಗಳಿಂದ (ಪಿಓಪಿ) ಮಾನವ ಆರೋಗ್ಯ ಮತ್ತು ಪರಿಸರದ ರಕ್ಷಣೆ
 (c)ವಿಯೆನ್ನಾ(iii)ಓಜೋನ್ ಪದರದ ರಕ್ಷಣೆ
 (d)ಬಾನ್(iv)ತೇವ ಭೂಮಿಗಳು ರಕ್ಷಣೆ
ಮೇಲಿನ ಯಾವ ಜೋಡಿಗಳು ಸರಿಯಾಗಿ ಹೊಂದಿಕೆಯಾಗುತ್ತವೆ?
 (1)(a) ಮತ್ತು (b) ಮಾತ್ರ
 (2)(a) ಮತ್ತು (c) ಮಾತ್ರ
 (3)(b) ಮತ್ತು (c) ಮಾತ್ರ
 (4)(a), (b), (c) ಮತ್ತು (d)
CORRECT ANSWER

(3) (b) ಮತ್ತು (c) ಮಾತ್ರ


42.ಭಾರತದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ (CPCB)ಯ ಅನುಸಾರ, ದೊಡ್ಡ ನಗರಗಳಲ್ಲಿ ಘನತ್ಯಾಜ್ಯವು ಪ್ರತಿದಿನ ತಲಾವಾರು ___________ರಷ್ಟು ಉತ್ಪತ್ತಿಯಾಗುತ್ತದೆ.
 (1)1.5 ಕೆ.ಜಿ.
 (2)2.5 ಕೆ.ಜಿ.
 (3)0.5 ಕೆ.ಜಿ.
 (4)1.2 ಕೆ.ಜಿ.
CORRECT ANSWER

(3) 0.5 ಕೆ.ಜಿ.


43.ಕೆಳಗಿನ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನು ಆಯ್ಕೆ ಮಾಡಿ :
ಹೇಳಿಕೆ (A) ಮತ್ತು ಕಾರಣ (R)
ಹೇಳಿಕೆ (A): ಪಶ್ಚಿಮ ಘಟ್ಟ ಪ್ರದೇಶವು ಅತೀ ಹೆಚ್ಚು ಸ್ಥಾನಿಕ ಪ್ರಭೇದ ಶ್ರೀಮಂತಿಕೆಯನ್ನು ಹೊಂದಿದೆ.
ಕಾರಣ (R): ಸ್ಥಾನಿಕ ಪ್ರಭೇದಗಳ ವಿತರಣೆಯು ಪಶ್ಚಿಮ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತಗೊಂಡಿದೆ.
 (1)(A) ಮತ್ತು (R) ಎರಡೂ ಸರಿ ಮತ್ತು (A) ಕುರಿತಾಗಿ (R) ನೀಡಿದ ವಿವರಣೆ ಸರಿಯಾಗಿದೆ.
 (2)(A) ಮತ್ತು (R) ಎರಡೂ ಸರಿ ಆದರೆ (A) ಕುರಿತಾಗಿ (R) ನೀಡಿದ ವಿವರಣೆ ಸರಿಯಾಗಿಲ್ಲ.
 (3)(A) ಸರಿ, ಆದರೆ (R) ತಪ್ಪು
 (4)(A) ತಪ್ಪು, ಆದರೆ (R) ಸರಿ
CORRECT ANSWER

(2) (A) ಮತ್ತು (R) ಎರಡೂ ಸರಿ ಆದರೆ (A) ಕುರಿತಾಗಿ (R) ನೀಡಿದ ವಿವರಣೆ ಸರಿಯಾಗಿಲ್ಲ.


44.ಕೆಳಗಿನವುಗಳಲ್ಲಿ ಯಾವ ದೇಶವು 2021ರ ವಿಶ್ವ ಪರಿಸರ ದಿನವನ್ನು ಆಯೋಜಿಸಿತ್ತು?
 (1)ಚೀನಾ
 (2)ಪಾಕಿಸ್ತಾನ
 (3)ಯುನೈಟೆಡ್ ಸ್ಟೇಟ್ಸ್
 (4)ಭಾರತ
CORRECT ANSWER

(2) ಪಾಕಿಸ್ತಾನ


45.ವಿಶ್ವ ಜೌಗು ಪ್ರದೇಶ ದಿನವನ್ನು ಎಂದು ಆಚರಿಸಲಾಗುತ್ತದೆ?
 (1)5ನೇ ಜೂನ್
 (2)2ನೇ ಫೆಬ್ರವರಿ
 (3)22ನೇ ಏಪ್ರಿಲ್
 (4)22ನೇ ಮಾರ್ಚ್
CORRECT ANSWER

(2) 2ನೇ ಫೆಬ್ರವರಿ


46.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾದ ವರ್ಷ _________
 (1)1986
 (2)1981
 (3)1974
 (4)1972
CORRECT ANSWER

(3) 1974


47.ಜಾಗತಿಕ ತಾಪಮಾನ ಸಮಾವೇಶಕ್ಕೆ ಸಂಬಂಧಿಸಿದಂತೆ ಯುಎನ್‌ಎಫ್‌ಸಿಸಿಯ ಪೂರ್ಣರೂಪ ಯಾವುದು?
 (1)ಯುನೈಟೆಡ್ ನೇಷನ್ಸ್ ಪ್ರೆಮ್‌ವರ್ಕ್‌ ಕನ್ವೆನ್ಷ್‌ನ್‌ ಆನ್ ಕ್ಲೈಮೇಟ್ ಚೇಂಜ್
 (2)ಯುನೈಟೆಡ್ ನೇಷನ್ಸ್ ಫೆಡರೇಷನ್ ಕನ್ವೆನ್ಷ್‌ನ್‌ ಆನ್ ಕ್ಲೈಮೇಟ್ ಚೇಂಜ್
 (3)ಯುನೈಟೆಡ್ ನೇಷನ್ಸ್ ಫ್ರೆಮ್‌ವರ್ಕ್‌ ಸೆಂಟರ್ ಆನ್ ಕ್ಲೈಮೇಟ್ ಚೇಂಜ್
 (4)ಯುನೈಟೆಡ್ ನೇಷನ್ಸ್ ಫೆಡರೇಷನ್ ಸೆಂಟರ್ ಆನ್ ಕ್ಲೈಮೇಟ್ ಚೇಂಜ್
CORRECT ANSWER

(1) ಯುನೈಟೆಡ್ ನೇಷನ್ಸ್ ಫ್ರೆಮ್‌ವರ್ಕ್‌ ಕನ್ವೆನ್ಷ್‌ನ್‌ ಆನ್ ಕ್ಲೈಮೇಟ್ ಚೇಂಜ್


48.ಕೆಳಗಿನವುಗಳನ್ನು ಪರಿಗಣಿಸಿ :
 (A)ಆಸ್ಮಾನ್ ಯೋಜನೆ
 (B)ಮೌಸಮ್ ಯೋಜನೆ
 (C)ಮೇಘರಾಜ್ ಯೋಜನೆ
 ಮೇಲಿನವುಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮೂಲಕ ಯಾವುದು ಇ-ಆಡಳಿತವನ್ನು ಒಳಗೊಂಡಿದೆ?
 (1)(A) ಮತ್ತು (B) ಮಾತ್ರ
 (2)(B) ಮತ್ತು (C) ಮಾತ್ರ
 (3)(C) ಮಾತ್ರ
 (4)(A), (B) ಮತ್ತು (C)
CORRECT ANSWER

(3) (C) ಮಾತ್ರ


49.ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪೀಟರ್ಸ್‌ಬರ್ಗ್‌ ಸಂಭಾಷಣೆ ಯಾವ ಕ್ಷೇತ್ರದೊಂದಿಗೆ ಸಂಬಂಧಿಸಿದೆ?
 (1)ವಿಶ್ವ ವ್ಯಾಪಾರ
 (2)ವಾಯುಗುಣ ಕ್ರಿಯೆ
 (3)ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಆರ್ಥಿಕತೆ
 (4)ಆರೋಗ್ಯ ತುರ್ತು
CORRECT ANSWER

(2) ವಾಯುಗುಣ ಕ್ರಿಯೆ


50.ಬೀಜ್ ಬಚಾವೋ ಆಂದೋಳನದ ಗುರಿ ಏನು?
 (1)ರಾಸಾಯನಿಕ ಬಳಸದೆ ಬೆಳೆ ರಕ್ಷಣೆ
 (2)ರಾಸಾಯನಿಕ ಬಳಸಿ ಬೆಳೆ ರಕ್ಷಣೆ
 (3)ಬೆಳೆ ರಕ್ಷಣೆ
 (4)ಅತಿಯಾದ ನೀರಿನ ಬಳಕೆಯಿಂದ ಬೆಳೆ ರಕ್ಷಣೆ
CORRECT ANSWER

(1) ರಾಸಾಯನಿಕ ಬಳಸದೆ ಬೆಳೆ ರಕ್ಷಣೆ


51.ಪಟ್ಟಿ I ನ್ನು ಪಟ್ಟಿ IIರೊಂದಿಗೆ ಹೊಂದಿಸಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಉಪಯೋಗಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :
  ಪಟ್ಟಿ I ಜಾನುವಾರುಗಳ ಪಟ್ಟಿ II ತಾಯ್ನಾಡು ತಳಿಗಳು
 (a)ಹೋಲ್‌ಸ್ಟೈನ್‌ ಫ್ರೈಷಿಯನ್(i)ಸ್ಕಾಟ್‌ಲ್ಯಾಂಡ್‌
 (b)ಜೆರ್ಸಿ(ii)ಸ್ವಿಟ್ಜರ್‌‌ಲ್ಯಾಂಡ್‌
 (c)ಐರ್‌ಶೈರ್‌(iii)ಚಾನಲ್ ಐಲ್ಯಾಂಡ್
 (d)ಬ್ರೌನ್ ಸ್ವಿಸ್(iv)ನೆದರ್‌‌ಲ್ಯಾಂಡ್‌
Codes :
  (a)(b)(c)(d)
 (1)(i)(iii)(iv)(ii)
 (2)(ii)(iii)(i)(iv)
 (3)(iv)(iii)(i)(ii)
 (4)(iii)(iv)(ii)(i)
CORRECT ANSWER

(3) (iv), (iii), (i), (ii)


52.ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಯಾವ ಸಂಘಟನೆಯೊಂದಿಗೆ VAIBHAV ಶೃಂಗಸಭೆಯನ್ನು ಆಯೋಜಿಸುವುದು?
 (1)ಇಸ್ರೋ
 (2)ಡಿಆರ್‌ಡಿಓ
 (3)ಬಿಹೆಚ್ಇಎಲ್
 (4)ಬಾರ್ಕ್
CORRECT ANSWER

(2) ಡಿಆರ್‌ಡಿಓ


53.ಭಾರತದಲ್ಲಿ ರ್ಯಾಲಿ ಫಾರ್ ವ್ಯಾಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಈ ಸಮಸ್ಯೆಯನ್ನು ಎತ್ತಿ ಹಿಡಿಯಲು
 (1)ಪರಿಸರದ ಅವನತಿ
 (2)ಜೀವ ವೈವಿಧ್ಯತೆ
 (3)ಸ್ಥಳಾಂತರಗೊಂಡ ಜನರ ಪುನರ್ವಸತಿ
 (4)ಕೃಷಿ ಭೂಮಿಯ ನಷ್ಟ
CORRECT ANSWER

(1) ಪರಿಸರದ ಅವನತಿ


54.ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗುತ್ತದೆ?
  ವಾಯುಗುಣ ಪ್ರದೇಶ (ತ್ರಿವಾರ್ಥ) ವಾಯುಗುಣ ಸಂಕೇತ
 (a)ಉಷ್ಟವಲಯದ ಮಳೆಕಾಡು(i)Aw
 (b)ಉಷ್ಟವಲಯ ಮತ್ತು ಉಪ ಉಷ್ಣವಲಯದ ಸ್ಟೆಪಿ (ii)Bsh
 (c)ಸಮಶೀತೋಷ್ಣ ಬೋರಿಯಲ್ ಶೀತ ಮರುಭೂಮಿ(iii)Bwk
 (d)ಶುಷ್ಕ ಚಳಿಗಾಲದೊಂದಿಗೆ ಆದರ್ರ್ ಉಪೋಷ್ಣವಲಯ(iv)Cwe-
 (1)(b) ಮತ್ತು (d)
 (2)(b) ಮತ್ತು (c)
 (3)(a) ಮತ್ತು (c)
 (4)(a) ಮತ್ತು (d)
CORRECT ANSWER

(2) (b) ಮತ್ತು (c)


55.ಅರಣ್ಯವನ್ನು ಕಡಿದು ಮತ್ತು ಬೆಂಕಿಯಿಂದ ಸುಟ್ಟು ಆ ಪ್ರದೇಶದಲ್ಲಿ ವ್ಯವಸಾಯ ಮಾಡುವುದಕ್ಕೆ
 (1)ಸ್ಥಳಾಂತರ ವ್ಯವಸಾಯ
 (2)ಸಾಂದ್ರ ವ್ಯವಸಾಯ
 (3)ವಾಣಿಜ್ಯ ವ್ಯವಸಾಯ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಸ್ಥಳಾಂತರ ವ್ಯವಸಾಯ


56.ಕಬ್ಬಿಣದ ಅದಿರಿನ ಉತ್ಪಾದನೆಯ ಹಂಚಿಕೆಯಲ್ಲಿ ಯಾವ ರಾಜ್ಯ ಮೊದಲನೇ ಸ್ಥಾನದಲ್ಲಿದೆ?
 (1)ಛತ್ತೀಸಗಢ
 (2)ಜಾರ್ಖಂಡ್
 (3)ಕರ್ನಾಟಕ
 (4)ಮಧ್ಯಪ್ರದೇಶ
CORRECT ANSWER

(1) ಛತ್ತೀಸಗಢ


57.ಈ ಕೆಳಗಿನವುಗಳಲ್ಲಿ ತನ್ನದೇ ಆದ ಹೈಕೋರ್ಟನ್ನು (ಉನ್ನತ ನ್ಯಾಯಾಲಯ) ಹೊಂದಿರುವ ರಾಜ್ಯ
 (1)ಸಿಕ್ಕಿಮ್
 (2)ಬಿಹಾರ
 (3)ಹಿಮಾಚಲ ಪ್ರದೇಶ
 (4)ಮಣಿಪುರ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


58.21ನೆಯ ತಿದ್ದುಪಡಿಯನ್ವಯ ನಮ್ಮ ಪ್ರಾದೇಶಿಕ ಭಾಷೆಗಳ ಪಟ್ಟಿಗೆ ಸೇರಿಸಲ್ಪಟ್ಟ ಭಾಷೆಯು
 (1)ಒರಿಯಾ
 (2)ಕಾಶ್ಮೀರಿ
 (3)ಸಿಂಧಿ
 (4)ಅಸ್ಸಾಮೀಸ್
CORRECT ANSWER

(3) ಸಿಂಧಿ


59.ಸಂವಿಧಾನ ರಚನಾ ಸಭೆಯನ್ನು ಯಾವ ಪ್ರಸ್ತಾವನೆಯ ಅನುಗುಣವಾಗಿ ರಚಿಸಲಾಯಿತು?
 (1)ಕ್ರಿಪ್ಸ್ ಆಯೋಗ
 (2)ಕ್ಯಾಬಿನೆಟ್ ಆಯೋಗ
 (3)ಮೌಂಟ್‌ಬ್ಯಾಟನ್‌ ಯೋಜನೆ
 (4)ರಾಜಗೋಪಾಲಾಚಾರಿ ಯೋಜನೆ
CORRECT ANSWER

(2) ಕ್ಯಾಬಿನೆಟ್ ಆಯೋಗ


60.ಮೊಟ್ಟ ಮೊದಲ ಬಾರಿಗೆ ‘ಅಭಿವೃದ್ಧಿ ಆಡಳಿತ’ ಎಂಬ ಪದವನ್ನು ಬಳಸಿದವರು ಯಾರು?
 (1)ಎಫ್. ಡಬ್ಲ್ಯೂ. ರಿಗ್ಸ್
 (2)ಎಡ್ವರ್ಡ್. ಡಬ್ಲ್ಯೂ. ವೀಡ್ನರ್
 (3)ಯು. ಎಲ್. ಗೋಸ್ವಾಮಿ
 (4)ಆಲ್ಬರ್ಟ್ ವಾಟರ್‌ಸನ್‌
CORRECT ANSWER

(3) ಯು. ಎಲ್. ಗೋಸ್ವಾಮಿ


61.ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಧಾನ ಸಲಹಾ ವರ್ಗವಾಗಿದೆ?
 (1)ರೈಲ್ವೆ ಮಂಡಳಿ
 (2)ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ
 (3)ನೀತಿ ಆಯೋಗ
 (4)ನೇರ ತೆರಿಗೆಗಳ ಕೇಂದ್ರ ಮಂಡಳಿ
CORRECT ANSWER

(3) ನೀತಿ ಆಯೋಗ


62.ಭಾರತ ಸಂವಿಧಾನದ ಈ ಕೆಳಗಿನ ಯಾವ ವಿಧಿಯು ಭಾರತದ ರಾಜ್ಯವನ್ನು ದಾವೆಗೆ ಗುರಿ ಮಾಡುವುದಕ್ಕೆ ಸಂಬಂಧಿಸಿದೆ?
 (1)100 ನೇ ವಿಧಿ
 (2)200 ನೇ ವಿಧಿ
 (3)300 ನೇ ವಿಧಿ
 (4)330 ನೇ ವಿಧಿ
CORRECT ANSWER

(3) 300 ನೇ ವಿಧಿ


63.ಭಾರತ ಸಂವಿಧಾನದ ಎಷ್ಟನೆಯ ತಿದ್ದುಪಡಿಯು ಆಡಳಿತಾತ್ಮಕ ನ್ಯಾಯಾಲಯಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ?
 (1)40 ನೇ ತಿದ್ದುಪಡಿ
 (2)44 ನೇ ತಿದ್ದುಪಡಿ
 (3)42 ನೇ ತಿದ್ದುಪಡಿ
 (4)48 ನೇ ತಿದ್ದುಪಡಿ
CORRECT ANSWER

(3) 42 ನೇ ತಿದ್ದುಪಡಿ


64.ಭಾರತ ಸಂವಿಧಾನದ ಅನುಚ್ಛೇದ 215 ಉಚ್ಛ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಏನನ್ನು ಉಪಬಂಧಿಸುತ್ತದೆ?
 (1)ನ್ಯಾಯಾಂಗ ನಿಂದನೆ
 (2)ಅಭಿಲೇಖ ನ್ಯಾಯಾಲಯ
 (3)ಹಕ್ಕುಗಳ ರಕ್ಷಣೆ
 (4)ರಿಟ್ ಹೊರಡಿಸುವ ಅಧಿಕಾರ
CORRECT ANSWER

(2) ಅಭಿಲೇಖ ನ್ಯಾಯಾಲಯ


65.ಸಂತಾನಂ ಕಮಿಟಿಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
 (1)ಭ್ರಷ್ಟಾಚಾರ ನಿಯಂತ್ರಣ
 (2)ಚುನಾವಣಾ ಸುಧಾರಣೆ
 (3)ಕೇಂದ್ರ ಮತ್ತು ರಾಜ್ಯ ಸಂಬಂಧಗಳು
 (4)ನದಿ ನೀರಿನ ಹಂಚಿಕೆ
CORRECT ANSWER

(1) ಭ್ರಷ್ಟಾಚಾರ ನಿಯಂತ್ರಣ


66.ಪ್ರಸ್ತುತ ಸಾರ್ಕಿನ (SAARC) ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
 (1)5
 (2)6
 (3)12
 (4)8
CORRECT ANSWER

(4) 8


67.‘ಮಿಷನ್ ಕರ್ಮಯೋಗಿ’ ಕಾರ್ಯಕ್ರಮದ ಉದ್ದೇಶ
 (1)ನಾಗರಿಕ ಸೇವೆಯ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ
 (2)ಸಾಮಾನ್ಯ ಜನರ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ
 (3)ರೈತರ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ
 (4)ಕಾರ್ಮಿಕರ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ
CORRECT ANSWER

(1) ನಾಗರಿಕ ಸೇವೆಯ ಸಾಮರ್ಥ್ಯ ವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮ


68.ಇತ್ತೀಚೆಗೆ ಕೇಶವಾನಂದ ಭಾರತಿ ನಿಧನರಾದರು. ಇವರು ಸುಪ್ರೀಂ ಕೋರ್ಟಿನ ಈ ಕೆಳಗಿನ ಯಾವ ನಿರ್ಧಾರಗಳಿಗೆ ಅರ್ಜಿದಾರರಾಗಿದ್ದರು?
 (1)ಮೂಲಭೂತ ಹಕ್ಕುಗಳು ಸ್ವತಂತ್ರವಾಗಿವೆ
 (2)ಸಂವಿಧಾನದ ಮೂಲ ಸಂರಚನೆಯನ್ನು ತಿದ್ದುಪಡಿ ಮಾಡಲಾಗದು
 (3)ಮಾಹಿತಿ ಹಕ್ಕು
 (4)ಸಂಸತ್ತು ಶ್ರೇಷ್ಠವಾದುದು
CORRECT ANSWER

(2) ಸಂವಿಧಾನದ ಮೂಲ ಸಂರಚನೆಯನ್ನು ತಿದ್ದುಪಡಿ ಮಾಡಲಾಗದು


69.ಉತ್ತರ ವೇದದ ಸಾಹಿತ್ಯದ ಬರವಣಿಗೆ ಇರುವುದು
 (1)ಅರಣ್ಯಕಗಳಲ್ಲಿ ಮತ್ತು ಉಪನಿಷತ್‌ಗಳಲ್ಲಿ
 (2)ಬ್ರಾಹ್ಮಣಗಳಲ್ಲಿ ಮತ್ತು ಸೂತ್ರಗಳಲ್ಲಿ
 (3)ಸೂತ್ರಗಳಲ್ಲಿ ಮತ್ತು ಸ್ಮೃತಿಗಳಲ್ಲಿ
 (4)ಮೇಲಿನ ಎಲ್ಲವೂ
CORRECT ANSWER

(4) ಮೇಲಿನ ಎಲ್ಲವೂ


70.ಮೌರ್ಯರ ಕಾಲದಲ್ಲಿದ್ದ ಆಡಳಿತ ಭಾಷೆ ಯಾವುದು?
 (1)ಪ್ರಾಕೃತ್
 (2)ಸಂಸ್ಕೃತ
 (3)ಅರ್ಧಮಾಗಡಿ
 (4)ಖರೋಷ್ಠಿ
CORRECT ANSWER

(1) ಪ್ರಾಕೃತ್


71.ನೀತಿಸಾರ ಗ್ರಂಥ ಬರೆದವರು ಯಾರು?
 (1)ಕಮಂಡಕ
 (2)ರಾಜ ಭೋಜ
 (3)ಭವಭೂತಿ
 (4)ವಾಕ್ಪತಿ
CORRECT ANSWER

(1) ಕಮಂಡಕ


72.ಕನ್ನಡದ ಪಂಚತಂತ್ರ ಕೃತಿಯ ಕರ್ತೃ
 (1)ರಣರಾಜ
 (2)ಎರಡನೇ ವಿಕ್ರಮಾದಿತ್ಯ
 (3)ದುರ್ಗಸಿಂಹ
 (4)ವಿನಯಾದಿತ್ಯ
CORRECT ANSWER

(3) ದುರ್ಗಸಿಂಹ


73.ಶ್ರೀಕೃಷ್ಣದೇವರಾಯನು ರಾಜನೀತಿ ಬಗ್ಗೆ ರಚಿಸಿದ ಗ್ರಂಥ ಯಾವುದು?
 (1)ಜಾಂಬವನ ಕಲ್ಯಾಣ
 (2)ಅಮುಕ್ತ ಮೌಲ್ಯ
 (3)ಮೊದಲಸ ಚರಿತ
 (4)ನೀತಿಸಾರ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


74.ಕೀರ್ತಿನಾರಾಯಣ ದೇವಾಲಯ ಎಲ್ಲಿದೆ?
 (1)ಹಳೇಬೀಡು
 (2)ತಲಕಾಡು
 (3)ಸೋಮನಾಥಪುರ
 (4)ಜಾವಗಲ್ಲು
CORRECT ANSWER

(2) ತಲಕಾಡು


75.ಬಿಜಾಪುರದ ಗೋಳಗುಮ್ಮಟದ ನಿರ್ಮಾಪಕರು ಯಾರು?
 (1)ಮೊಹಮ್ಮದ್ ಘೋರಿ
 (2)ಯೂಸ್ಫ್ ಆರಿಫ್
 (3)ಇಬ್ರಾಹಿಂ ಆದಿಲ್ ಷಾ
 (4)ಮೊಹಮ್ಮದ್ ಆದಿಲ್ ಷಾ
CORRECT ANSWER

(4) ಮೊಹಮ್ಮದ್ ಆದಿಲ್ ಷಾ


76.‘ಮೈಸೂರು ಸಿವಿಲ್ ಸರ್ವಿಸ್’ ಪರೀಕ್ಷೆಯನ್ನು ಪರಿಚಯಿಸಿದವರು
 (1)ಸಿ. ರಂಗಾಚಾರ್ಲು
 (2)ಟಿ. ಆನಂದರಾವ್
 (3)ಕೆ. ಶೇಷಾದ್ರಿ ಅಯ್ಯರ್
 (4)ಸರ್. ಎಂ. ವಿಶ್ವೇಶ್ವರಯ್ಯ
CORRECT ANSWER

(3) ಕೆ. ಶೇಷಾದ್ರಿ ಅಯ್ಯರ್


77.ಎರಡನೇ ತರೈನ್ ಕದನ ನಡೆದ ವರ್ಷ
 (1)1192
 (2)1191
 (3)1193
 (4)1194
CORRECT ANSWER

(1) 1192


78.ಸರ್ ಥಾಮಸ್ ರೋ ಕೆಳಕಂಡ ಯಾವ ಮೊಘಲ್ ದೊರೆಯ ಆಸ್ಥಾನಕ್ಕೆ ಭೇಟಿ ನೀಡಿದ್ದನು?
 (1)ಹುಮಾಯೂನ್
 (2)ಅಕ್ಬರ್
 (3)ಜಹಾಂಗೀರ್
 (4)ಷಾ ಜಹಾನ್
CORRECT ANSWER

(3) ಜಹಾಂಗೀರ್


79.ಮೈಸೂರು ಚಲೋ ಚಳುವಳಿಯ ಸಂದರ್ಭದಲ್ಲಿ ಮೈಸೂರು ರಾಜ್ಯದ ದಿವಾನರಾಗಿದ್ದವರು
 (1)ಸರ್ ಮಿರ್ಜಾ ಇಸ್ಮಾಯಿಲ್
 (2)ಕಾಂತರಾಜೇ ಅರಸ್
 (3)ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್
 (4)ಸರ್ ಆಲ್ಬಿಯನ್ ಬ್ಯಾನರ್ಜಿ
CORRECT ANSWER

(3) ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್


80.ಈ ಕೆಳಗಿನ ಕದಂಬ ಅರಸರನ್ನು ಕಾಲಾನುಕ್ರಮದಲ್ಲಿ ಬರೆಯಿರಿ :
 I.ಮಯೂರಶರ್ಮ
 II.ಭಗೀರಥ
 III.ಕಾಕುಸ್ಥವರ್ಮ
 IV.ಶಾಂತಿವರ್ಮ
 ಕೆಳಗೆ ಕೊಟ್ಟಿರುವ ಸಂಕೇತಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿರಿ :
 (1)I, II, III, IV
 (2)I, III, II, IV
 (3)I, II, IV, III
 (4)I, IV, III, II
CORRECT ANSWER

(1) I, II, III, IV


81.‘ಗಜಬೇಂಟೆಕಾರ’ ಬಿರುದನ್ನು ಹೊಂದಿದ್ದ ಅರಸ
 (1)ಒಂದನೇ ದೇವರಾಯ
 (2)ಹಕ್ಕ
 (3)ಎರಡನೇ ದೇವರಾಯ
 (4)ಶ್ರೀಕೃಷ್ಣದೇವರಾಯ
CORRECT ANSWER

(3) ಎರಡನೇ ದೇವರಾಯ


82.ಮೈಸೂರ್ ರಾಜ್ಯ ಕಬ್ಬಿಣದ ಕಾರ್ಖಾನೆ ಭದ್ರಾವತಿಯಲ್ಲಿ ಅಸ್ತಿತ್ವಕ್ಕೆ ಬಂದ ವರ್ಷ
 (1)1913
 (2)1923
 (3)1919
 (4)1909
CORRECT ANSWER

(2) 1923


83.ಜಪಾನಿನಲ್ಲಿ ಭಾರತೀಯ ಸ್ವತಂತ್ರ ಲೀಗ್ಅನ್ನು 1924ರಲ್ಲಿ ಸ್ಥಾಪಿಸಿದವರು
 (1)ಚಿತ್ತರಂಜನ್ ದಾಸ್
 (2)ರಾಶ್‌ಬಿಹಾರಿ ಬೋಸ್
 (3)ಸುಭಾಷ್ ಚಂದ್ರ ಬೋಸ್
 (4)ಡಬ್ಲ್ಯೂ.ಸಿ. ಬ್ಯಾನರ್ಜಿ
CORRECT ANSWER

(2) ರಾಶ್‌ಬಿಹಾರಿ ಬೋಸ್


84.ಯಾವ ರಾಜ್ಯದ ‘ಇ-ಕ್ರಾಪ್ ಸಮೀಕ್ಷೆ’ 15 ಆಗಸ್ಟ್, 2021ರಂದು ಜಾರಿಗೆ ಬಂದಿತು?
 (1)ಕರ್ನಾಟಕ
 (2)ಕೇರಳ
 (3)ತಮಿಳುನಾಡು
 (4)ಮಹಾರಾಷ್ಟ್ರ
CORRECT ANSWER

(4) ಮಹಾರಾಷ್ಟ್ರ


85.ಕೋವಿಡ್-19ರ ರೋಗಿಗಳಿಗೆ ಸಹಾಯ ಮಾಡಲು ಭಾರತೀಯ ರೈಲಿನ ‘ದೂರ ನಿಯಂತ್ರಿತ ವೈದ್ಯಕೀಯ ಟ್ರಾಲಿ’ಯ ಹೆಸರೇನು?
 (1)MEDBOT
 (2)RAILMED
 (3)ROBMED
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) MEDBOT


86.‘‘ವಿಶ್ವ ಸಂತೋಷ ವರದಿ 2021’ ಪ್ರಕಾರ ಜಗತ್ತಿನ ಅತ್ಯಂತ ಸಂತೋಷದ ರಾಷ್ಟ್ರ ಯಾವುದು?
 (1)ಐಸ್‌ಲ್ಯಾಂಡ್‌
 (2)ಜರ್ಮನಿ
 (3)ನಾರ್ವೆ
 (4)ಭಾರತ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


87.ಯಾವ ರಾಷ್ಟ್ರವು ಮೂರು ಮಕ್ಕಳ ನೀತಿಯನ್ನು ತನ್ನ ಕುಟುಂಬ ಯೋಜನೆಯಲ್ಲಿ ಜಾರಿಗೆ ತಂದಿದೆ?
 (1)ಚೀನ
 (2)ಪಾಕಿಸ್ತಾನ
 (3)ಬಂಗ್ಲಾದೇಶ
 (4)ಭಾರತ
CORRECT ANSWER

(1) ಚೀನ


88.ಕರ್ನಾಟಕದಲ್ಲಿ ಎಷ್ಟು ರಾಷ್ಟ್ರೀಯ ಉದ್ಯಾನಗಳಿವೆ?
 (1)20
 (2)15
 (3)10
 (4)5
CORRECT ANSWER

(4) 5


89.ಆಲಮಟ್ಟಿ ಅಣೆಕಟ್ಟಿನ ಹೆಸರೇನು?
 (1)ಮಹಾತ್ಮ ಗಾಂಧಿ ಅಣೆಕಟ್ಟು
 (2)ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು
 (3)ಜವಾಹರಲಾಲ್ ನೆಹರು ಅಣೆಕಟ್ಟು
 (4)ಕುವೆಂಪು ಅಣೆಕಟ್ಟು
CORRECT ANSWER

(2) ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟು


90.ಕೇಂದ್ರ ಬಜೆಟ್ 2020-21ರಲ್ಲಿ ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಆದಾಯದ ಮೂಲ ಯಾವುದು?
 (1)ಸರಕು ಮತ್ತು ಸೇವಾ ತೆರಿಗೆ
 (2)ಕಂಪನಿ ತೆರಿಗೆ
 (3)ಆದಾಯ ತೆರಿಗೆ
 (4)ಸಾಲ ಮತ್ತು ಇತರ ಹೊಣೆಗಾರಿಕೆಗಳು
CORRECT ANSWER

(4) ಸಾಲ ಮತ್ತು ಇತರ ಹೊಣೆಗಾರಿಕೆಗಳು


91.ಕೆಳಗಿನ ಯಾವ ಸಂಸ್ಥೆ ಕೆಳಗಿನ ಮತ್ತು ಮೇಲಿನ ಸಂಸ್ಥೆಗೆ ಲಿಂಕ್ ಆಗಿ ಸೇವೆ ಸಲ್ಲಿಸುತ್ತಿದೆ?
 (1)ಗ್ರಾಮ ಪಂಚಾಯಿತಿ
 (2)ಜಿಲ್ಲಾ ಪರಿಷತ್
 (3)ಪಂಚಾಯಿತಿ ಸಮಿತಿ
 (4)ಮೇಲಿನ ಎಲ್ಲಾ ಸಂಸ್ಥೆಗಳು
CORRECT ANSWER

(3) ಪಂಚಾಯಿತಿ ಸಮಿತಿ


92. ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿಲ್ಲ?
 (1)IMF ಮತ್ತು IBRD ಎರಡೂ ವಾಷಿಂಗ್ಟನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿವೆ.
 (2)IMF ಮತ್ತು IBRD ಎರಡೂ ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್‌ನ ಘಟಕ ಸಂಸ್ಥೆಗಳಾಗಿವೆ.
 (3)IBRD ಅನ್ನು ವಿಶ್ವ ಬ್ಯಾಂಕ್ ಎಂದೂ ಕರೆಯುತ್ತಾರೆ.
 (4)ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಮತ ಪಾಲು 10 %.
CORRECT ANSWER

(4) ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಮತ ಪಾಲು 10 %.


93.ದೇಶೀಯ ಕರೆನ್ಸಿಯ ಮೆಚ್ಚುಗೆ ಎಂದರೆ ದೇಶೀಯ ಕರೆನ್ಸಿಯ ಮೌಲ್ಯವು
 (1)ಹೆಚ್ಚಾಗುತ್ತದೆ
 (2)ಕಡಿಮೆಯಾಗುತ್ತದೆ
 (3)ಮೊದಲು ಹೆಚ್ಚಳ ನಂತರ ಕಡಿಮೆಯಾಗುತ್ತದೆ
 (4)ಮೊದಲು ಇಳಿಕೆ ನಂತರ ಹೆಚ್ಚಾಗುತ್ತದೆ
CORRECT ANSWER

(1) ಹೆಚ್ಚಾಗುತ್ತದೆ


94.ಮಾರ್ಚ್ 31, 2021ರಂತೆ, ಭಾರತದಲ್ಲಿನ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿಗಳ (NPA) ಮೌಲ್ಯ ಎಷ್ಟು?
 (1)12.50 ಲಕ್ಷ ಕೋಟಿ ರೂ.
 (2)10.46 ಲಕ್ಷ ಕೋಟಿ ರೂ.
 (3)8.34 ಲಕ್ಷ ಕೋಟಿ ರೂ.
 (4)6.54 ಲಕ್ಷ ಕೋಟಿ ರೂ.
CORRECT ANSWER

(3) 8.34 ಲಕ್ಷ ಕೋಟಿ ರೂ.


95.ಯೂರೋಪಿಯನ್ ಒಕ್ಕೂಟದ ನಂತರ ಯಾವ ಮತ್ತೊಂದು ಗುಂಪಿನ ದೇಶಗಳು ಸಾಮಾನ್ಯ ಕರೆನ್ಸಿಯನ್ನು ಅಳವಡಿಸಿಕೊಳ್ಳಲು ಮುಂದೆ ಬಂದಿವೆ?
 (1)ಓಪೆಕ್
 (2)ಕೊಲ್ಲಿ ರಾಷ್ಟ್ರಗಳು
 (3)ಸಾರ್ಕ್
 (4)ಏಷಿಯನ್
CORRECT ANSWER

(2) ಕೊಲ್ಲಿ ರಾಷ್ಟ್ರಗಳು


96.ಬೇಡಿಕೆ ರೇಖೆ ಯಾವಾಗಲೂ
 (1)ಮಟ್ಟ
 (2)ಅನಿಯಮಿತ
 (3)ಮೇಲ್ಮುಖವಾಗಿ ಇಳಿಜಾರು
 (4)ಕೆಳಕ್ಕೆ ಇಳಿಜಾರು
CORRECT ANSWER

(4) ಕೆಳಕ್ಕೆ ಇಳಿಜಾರು


97.ಭಾರತದಲ್ಲಿ ಮೊದಲು ಯಾವಾಗ ರೂಪಾಯಿಯ ಅನಾಣ್ಯೀಕರಣ ಮಾಡಲಾಯಿತು?
 (1)1945
 (2)1946
 (3)1948
 (4)1947
CORRECT ANSWER

(2) 1946


98.40 ಹುಡುಗಿಯರಿರುವ ತರಗತಿಯಲ್ಲಿ, 30 ಹುಡುಗಿಯರ ಸರಾಸರಿ ಎತ್ತರ 160 cm ಮತ್ತು ಉಳಿದ ಹುಡುಗಿಯರ ಸರಾಸರಿ ಎತ್ತರ 150 cm. ಒಟ್ಟು ತರಗತಿಯ ಸರಾಸರಿ ಎತ್ತರ
 (1)168 cm
 (2)159 cm
 (3)78 cm
 (4)143 cm
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


99.40% ಅನ್ನು ಯಂತ್ರ ಸಾಧನಗಳ ಮೇಲೆ, 25% ಅನ್ನು ಕಟ್ಟಡದ ಮೇಲೆ, 15% ಅನ್ನು ಕಚ್ಚಾ ಸಾಮಗ್ರಿಗಳ ಮೇಲೆ ಮತ್ತು 5% ಅನ್ನು ಪೀಠೋಪಕರಣಗಳ ಮೇಲೆ ವ್ಯಯಿಸಿದ ನಂತರ ಮೋನಿಕಾ ಬಳಿ ಉಳಿದಿರುವ ಹಣ ರೂ. 1,305. ಅವಳ ಬಳಿಯಿದ್ದ ಹಣ
 (1)ರೂ. 9,500
 (2)ರೂ. 8,300
 (3)ರೂ. 8,700
 (4)ರೂ. 9,200
CORRECT ANSWER

(3) ರೂ. 8,700


100.ಕಾಣೆಯಾದ ಸಂಖ್ಯೆಯನ್ನು ಗುರುತಿಸಿರಿ :
 (1)56
 (2)46
 (3)43
 (4)49
CORRECT ANSWER

(4) 49


   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment