WhatsApp Group Join Now
Telegram Group Join Now

kpsc group c GK previous question paper 02.04.2023

KPSC GROUP ‘C’ (ASSISTANT STATISTICAL OFFICER AND STATISTICAL INSPECTOR IN THE DIRECTORATE OF ECONOMICS & STATISTICS AND LABOUR INSPECTOR IN THE DEPT. OF LABOUR) ಪತ್ರಿಕೆ-1 ಸಾಮಾನ್ಯ ಜ್ಞಾನ ಪ್ರಶ್ನೆಪತ್ರಿಕೆ

1.ಪರಿಸರ ಮತ್ತು ಪರಿಸರ ವಿಜ್ಞಾನ ಅಂತರರಾಷ್ಟ್ರೀಯ ಫೌಂಡೇಶನ್ ಈ ಸ್ಥಳದಲ್ಲಿದೆ.
 (1)ಪಶ್ಚಿಮ ಬಂಗಾಳ
 (2)ನವದೆಹಲಿ
 (3)ಮಣಿಪುರ
 (4)ಗುಜರಾತ್

CORRECT ANSWER

(1) ಪಶ್ಚಿಮ ಬಂಗಾಳ


2.ವನ್ಯಜೀವಿ ಸಂರಕ್ಷಣಾ ಅಧಿನಿಯಮವು ಯಾವ ವರ್ಷದಲ್ಲಿ ಅಂಗೀಕೃತಗೊಂಡಿತು?
 (1)1972
 (2)1930
 (3)1929
 (4)1960
CORRECT ANSWER

(1) 1972


3.ಕೆಳಗಿನ ಬೆಳೆಗಳನ್ನು ಪರಿಗಣಿಸಿ:
 (1)ಶಿರಸಿ ಸುಪಾರಿ
 (2)ಗುಲ್ಬರ್ಗಾ ತೊಗರಿಬೇಳೆ
 (3)ಬ್ಯಾಡಗಿಯ ಮೆಣಸಿನಕಾಯಿ
 (4)ಕೂರ್ಗ ಕಿತ್ತಳೆ
 ಮೇಲಿನ ಯಾವುದು GI ಟ್ಯಾಗ್ ಗಳನ್ನು ಹೊಂದಿರುತ್ತವೆ?
 (1)1 ಮತ್ತು 2 ಮಾತ್ರ
 (2)2, 3 ಮತ್ತು 4 ಮಾತ್ರ
 (3)3 ಮತ್ತು 4 ಮಾತ್ರ
 (4)1, 2, 3 ಮತ್ತು 4
CORRECT ANSWER

(4) 1, 2, 3 ಮತ್ತು 4


4.ಕರಗಿದ ಆಕ್ಸಿಜನ್ ಸಾರತೆಯು ಕೆಳಗಿರುವಲ್ಲಿ ಜಲ ಪರಿಣಾಮದಲ್ಲಿ ಅದರೊಳಗಿರುವ ಜೈವಿಕ ದ್ರವ್ಯ ಅಥವಾ ಪಾಸ್ಟೇಟ್ ಮತ್ತು ನೈಟ್ರೇಟ್ ದೊಡ್ಡ ಮೊತ್ತಗಳಲ್ಲಿ ಬಿಡುಗಡೆಯಾಗುವುದನ್ನು ಹೀಗೆ ಕರೆಯಲಾಗುತ್ತದೆ.
 (1)ಎಂಥ್ರೋಫಿಕೇಶನ್ / ಎಂಥ್ರೋಪಿಕರಣ
 (2)ಲಘುಕರಣ
 (3)ಆವೀ ಬಾಷ್ಪ ವಿಸರ್ಜನೆ
 (4)ವಿಭಜನೆ
CORRECT ANSWER

(1) ಎಂಥ್ರೋಫಿಕೇಶನ್ / ಎಂಥ್ರೋಪಿಕರಣ


5.ಕೆಳಗಿನ ಯಾವ ಅನಿಲಗಳು ಜಾಗತಿಕ ತಾಪಮಾನಕ್ಕೆ ಹೆಚ್ಚು ಕೊಡುಗೆ ನೀಡಿವೆ?
 (1)ಕಾರ್ಬನ್ ಡೈ ಆಕ್ಸೈಡ್
 (2)ಮಿಥೇನ್
 (3)ನೈಟ್ರಸ್ ಆಕ್ಸೈಡ್
 (4)ಪೂರಿನೀಕರಿಸಿದ ಅನಿಲಗಳು
CORRECT ANSWER

(1) ಕಾರ್ಬನ್ ಡೈ ಆಕ್ಸೈಡ್


6.ಮೋನೋಟ್ರೀಲ್ ಪ್ರೋಟೋಕಾಲ್ ಇದನ್ನು ಸಂರಕ್ಷಿಸುವ ಅಂತರರಾಷ್ಟ್ರೀಯ ಸಂಧಿ/ ಕೌಲು (Treaty) ಆಗಿದೆ.
 (1)ಓಜೋನ್ ಪದರ
 (2)ಜೀವ ವೈವಿಧ್ಯತೆ
 (3)ಅರಣ್ಯ
 (4)ಪರಿಸರ ವ್ಯವಸ್ಥೆ / ಪರಿಸರ ವ್ಯೂಹ
CORRECT ANSWER

(1) ಓಜೋನ್ ಪದರ


7.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
 (1)ಕೀಟ ನಾಶಕಗಳ ಬಳಕೆ ಅವಶ್ಯಕತೆ ಆಧಾರಿತ ಮಾತ್ರ
 (2)ಸೂಕ್ತ ಜಲ ನಿರ್ವಹಣೆ
 (3)ಮರು ಅರಣ್ಯೀಕರಣ
 (4)ಮಾಲಿನ್ಯವನ್ನು ಕಡಿಮೆ ಮಾಡುವುದು
 ಪರಿಸರದ ಅಪಾಯಗಳನ್ನು ತಡೆಯುವುದಕ್ಕೆ ಸಂಬಂಧಿಸಿದ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
 (1)1 ಮತ್ತು 2 ಮಾತ್ರ
 (2)1 ಮತ್ತು 4 ಮಾತ್ರ
 (3)3 ಮತ್ತು 4 ಮಾತ್ರ
 (4)1, 2, 3 ಮತ್ತು 4
CORRECT ANSWER

(4) 1, 2, 3 ಮತ್ತು 4


8.ಹವಮಾನದ ಅಧ್ಯಯನವನ್ನು ಹೀಗೆ ಕರೆಯಲಾಗುತ್ತದೆ.
 (1)ಪವನ ಶಾಸ್ತ್ರ
 (2)ವಾಯುಗುಣ ವಿಜ್ಞಾನ
 (3)ಏರೋನಮಿ
 (4)ವಾಯು ವಿಜ್ಞಾನ
CORRECT ANSWER

(1) ಪವನ ಶಾಸ್ತ್ರ


9.ಯಾವ ಸಾಧನವನ್ನು ಮಾರುತ ವೇಗವನ್ನು ಅಳೆಯುವುದಕ್ಕೆ ಬಳಸಲಾಗುತ್ತದೆ?
 (1)ಬಾರೋ ಮೀಟರ್
 (2)ಸ್ಪಿಡೋ ಮೀಟರ್
 (3)ಏನೋಮೋ ಮೀಟರ್
 (4)ಹೈಗ್ರೋಮೀಟರ್
CORRECT ANSWER

(3) ಏನೋಮೋ ಮೀಟರ್


10.IUCNನಿಂದ ನಿರ್ವಹಿಸಲಾದ ವಿಲೋಪದ ಅಪಾಯದೊಂದಿಗೆ ದಾಖಲೆಗಳು ಅಥವಾ ಪ್ರಭೇಧಗಳ ದತ್ತಾಂಶವನ್ನು ಸಂಗ್ರಹಿಸುವುದಕ್ಕೆ ಹೀಗೆ ಕರೆಯಲಾಗುತ್ತದೆ.
 (1)ರೆಡ್ ಡೇಟಾ ಬುಕ್
 (2)ವೈಟ್ ಡೇಟಾ ಬುಕ್
 (3)ಗ್ರೀನ್ ಡೇಟಾ ಬುಕ್
 (4)ಬ್ಲಾಕ್ ಡೇಟಾ ಬುಕ್
CORRECT ANSWER

(1) ರೆಡ್ ಡೇಟಾ ಬುಕ್


11.ಜೀವ ವೈವಿಧ್ಯತೆಯ ನಷ್ಟದ ಪ್ರಮುಖ ಪ್ರವೃತ್ತಿಗಳು
 (1)ಆವಾಸ ಬದಲಾವಣೆ
 (2)ಅತಿಯಾದ ಶೋಷಣೆ
 (3)ಮಾಲಿನ್ಯ
 (4)ಇನ್ವ್ಯಾಸಿವ್ ಆಲಿಯನ್ ಪ್ರಭೇಧಗಳು ಮತ್ತು ವಾಯುಗುಣ ಬದಲಾವಣೆ
 (1)1 ಮತ್ತು 2ಮಾತ್ರ
 (2)1 ಮತ್ತು 4 ಮಾತ್ರ
 (3)3 ಮತ್ತು 4 ಮಾತ್ರ
 (4)1, 2, 3 ಮತ್ತು 4
CORRECT ANSWER

(4) 1, 2, 3 ಮತ್ತು 4


12.ಯಾವ ಹೇಳಿಕೆ (ಗಳು) ಸ್ಪಾಟ್ ಬಿಲ್ಡ್ ಪೆಲಿಕಾನ್ (ಪೆಲಿಕಾನಸ್ ಫಿಲಿಫೈನ್ಸ್) ಜಾಗತಿಕವಾಗಿ ಪರಿಗಣಿಸುವ ಪಕ್ಷಿ ಪ್ರಬೇಧವನ್ನು ಸಂಬಂಧಿಸಿದಂತೆ ಸರಿಯಾಗಿವೆ
 (1)ಕರ್ನಾಟಕವು ಭಾರತದಲ್ಲಿರುವ ತಳಿ ಸ್ಥಳಗಳಲ್ಲಿ ಒಂದಾಗಿದೆ.
 (2)ಕೊಕ್ಕರೆ ಬೆಳ್ಳೂರು ಭಾರತದಲ್ಲಿರುವ ಒಂದೇ ತಳಿ ಅಭಿವೃದ್ಧಿ ಸ್ಥಳ
 (3)ಶಿವಮೊಗ್ಗವು ಸಹ ತಳಿ ಅಭಿವೃದ್ಧಿಸ್ಥಳವಾಗಿದೆ.
 (4)ಪಕ್ಷಿಗಳ ಹಿಕ್ಕೆ ಬೀಳುವುದು ಜನರಿಗೆ ಅತ್ಯಂತ ನಷ್ಟವುಂಟು ಮಾಡುತ್ತದೆ.
 (1)1 ಮತ್ತು 2 ಮಾತ್ರ
 (2)1 ಮತ್ತು 4 ಮಾತ್ರ
 (3)3 ಮತ್ತು 4 ಮಾತ್ರ
 (4)1, 2, 3 ಮತ್ತು4
CORRECT ANSWER

(1) 1 ಮತ್ತು 2 ಮಾತ್ರ


13.ಜೀವ ವೈವಿಧ್ಯತೆಯ ಅಪಾಯ ಸ್ಥಳಗಳು(hotspots)
 (1)ಕೆಲವು ಪ್ರಬೇಧಗಳಿರುವಲ್ಲಿ ಪ್ರದೇಶಗಳು ಮಾತ್ರ
 (2)ವಿರಳ ಅನುಪಾತ ಮತ್ತು ಮೌಲ್ಯಯುತ ಜೈವ ವೈವಿದ್ಯತೆಯನ್ನು ಅಧಿಕವಾಗಿ ಒಳಗೊಂಡಿರುವ ಪ್ರದೇಶಗಳು.
 (3)ಪಶ್ಚಿಮ ಘಟ್ಟಗಳು ಮತ್ತು ಪೂರ್ವ ದಿಕ್ಕಿನಲ್ಲಿರುವ ಹಿಮಾಲಯಗಳು ಭಾರತದಲ್ಲಿರುವ ಅಪಾಯದ ಸ್ಥಳಗಳು
 (4)ಬಂಡೀಪುರ ಅಪಾಯದ ಸ್ಥಳವಾಗಿದೆ
 (1)1 ಮತ್ತು 2 ಮಾತ್ರ
 (2)2 ಮತ್ತು 3 ಮಾತ್ರ
 (3)3 ಮತ್ತು 4 ಮಾತ್ರ
 (4)1, 2, 3 ಮತ್ತು 4
CORRECT ANSWER

(2) 2 ಮತ್ತು 3 ಮಾತ್ರ


14.ವಾಯುಗುಣ ಬದಲಾವಣೆಯು
 (1)ಮಾನವರಿಗೆ ಅವಶ್ಯಕ / ಉಪಯೋಗ
 (2)ಮಾನವರಿಗೆ ನಷ್ಟ/ ಕೇಡು
 (3)1 ಮಾತ್ರ
 (4)1 ಮತ್ತು 2, ಎರಡೂ ಸರಿಯಾಗಿವೆ
CORRECT ANSWER

(4) 1 ಮತ್ತು 2, ಎರಡೂ ಸರಿಯಾಗಿವೆ


15.ಜೈವಿಕ ಸ್ಮಾರಕ ಸ್ಥಳಕ್ಕೆ ಸಂಬಂಧಿಸಿದಂತೆ ಯಾವ ಒಂದು ಸರಿಯಾಗಿದೆ?
 (1)ಕರ್ನಾಟಕ, ದೇವನಹಳ್ಳಿಯಲ್ಲಿರುವ ನಲ್ಲೂರು ತಮರಿಂಡ್ ತೋಪು ಕರ್ನಾಟಕದಲ್ಲಿರುವ ಪಾರಂಪರಿಕ ಸ್ಥಳವಾಗಿದೆ.
 (2)ಶಿವಮೊಗ್ಗದಲ್ಲಿರುವ ಅಂಬರಗುಡ್ಡವು ಸಹ ಒಂದು ಪಾರಂಪರಿಕ ಸ್ಥಳವಾಗಿದೆ.
 (3)ಕರ್ನಾಟಕವು 10 ಜೈವಿಕ ಪಾರಂಪರಿಕ ಸ್ಥಳಗಳನ್ನು ಹೊಂದಿದೆ.
 (4)ಭಾರತವು 1 ಜೈವಿಕ ಪಾರಂಪರಿಕ ಸ್ಥಳವನ್ನು ಮಾತ್ರ ಹೊಂದಿದೆ
 (1)1 ಮತ್ತು 2ಮಾತ್ರ
 (2)2 ಮತ್ತು 3 ಮಾತ್ರ
 (3)3 ಮತ್ತು 4 ಮಾತ್ರ
 (4)1, 2, 3 ಮತ್ತು 4
CORRECT ANSWER

(1) 1 ಮತ್ತು 2ಮಾತ್ರ


16.‘ಒಬ್ಬ ವಿದ್ಯಾರ್ಥಿಯು ತನ್ನ ವಿದ್ಯಾರ್ಥಿವೇತನದ ಹಣವನ್ನು ಒಂದು ಬ್ಯಾಂಕಿನಲ್ಲಿ ಠೇವಣಿಯಾಗಿ ಇಡುತ್ತಾನೆ. ಆ ಹಣವು 6 ವರ್ಷಗಳಲ್ಲಿ ರೂ. 860 ಹಾಗೂ 8 ವರ್ಷಗಳಲ್ಲಿ ರೂ. 980 ಆದರೆ, ವಿದ್ಯಾರ್ಥಿ ವೇತನದ ಮೊತ್ತವನ್ನು ಕಂಡುಹಿಡಿಯಿರಿ.
 (1)450
 (2)500
 (3)600
 (4)650
CORRECT ANSWER

(2) 500


17.ಕೆಳಗಿನ ಯಾವ ಜಾಗತಿಕ ತಾಪಮಾನದ ಕಾರಣಗಳು ವಾಯುಗುಣ ಬಿಕ್ಕಟ್ಟಿನ ಕೊಡುಗೆಗಳಾಗಿವೆ?
 (1)ಹಿತರಕ್ಷಣೆ
 (2)ತೈಲ ಕೊರೆಯುವುದು
 (3)ವಿದ್ಯುತ್ ಸ್ಥಾವರಗಳು
 (4)ಅರಣ್ಯನಾಶ
 (1)1 ಮತ್ತು 2 ಮಾತ್ರ
 (2)2 ಮತ್ತು 3 ಮಾತ್ರ
 (3)3 ಮತ್ತು 4 ಮಾತ್ರ
 (4)1, 2, 3 ಮತ್ತು 4
CORRECT ANSWER

(4) 1, 2, 3 ಮತ್ತು 4


18.ಸರಿಯಾದ ಹೇಳಿಕೆ ಗುರುತಿಸಿ.
 (A)ಬಾದಾಮಿ ಚಾಲುಕ್ಯರ ಗಳಗನಾಥ ದೇವಾಲಯ ನಾಗರ ಶೈಲಿಯಲ್ಲಿದೆ.
 (B)ವಿರೂಪಾಕ್ಷ ಮಂದಿರವು ದ್ರಾವಿಡ ಶೈಲಿಯಲ್ಲಿದೆ.
 (1)A ಮತ್ತು B ಸರಿ
 (2)A ಮಾತ್ರ ಸರಿ
 (3)B ಮಾತ್ರ ಸರಿ
 (4)A ಮತ್ತು B ಎರಡೂ ತಪ್ಪು
CORRECT ANSWER

(1) A ಮತ್ತು B ಸರಿ


19.ಬೇಲೂರು ಚೆನ್ನಕೇಶವ ದೇವಾಲಯದ ಲಕ್ಷಣಗಳನ್ನು ಗುರುತಿಸಿ.
 (A)ಗೋಪುರವನ್ನು ಹೊಂದಿದ ದೇವಾಲಯ
 (B)ದೇವಾಲಯಕ್ಕೆ ಪಿರಮಿಡ್ ಆಕೃತಿಯ ವಿಮಾನ
 (C)ಜಗಲಿಯ ಮೇಲಿನ ದೇವಾಲಯ.
 (1)A ಸರಿ
 (2)A ಮತ್ತು B ಸರಿ
 (3)A, B ಮತ್ತು C ಸರಿ
 (4)A, B ಮತ್ತು C ತಪ್ಪು
CORRECT ANSWER

(3) A, B ಮತ್ತು C ಸರಿ


20.ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರತಿನಿಧಿ ಸಭೆಯನ್ನು ಜಾರಿಗೊಳಿಸಿದವರು.
 (1)ಸಿ. ರಂಗಾಚಾರ್ಲು
 (2)ಕೆ. ಶೇಷಾದ್ರಿ ಅಯ್ಯರ್
 (3)ವಿ. ಪಿ. ಮಾಧವ ರಾವ್
 (4)ಆಲ್ಬಿಯನ್ ಬ್ಯಾನರ್ಜಿ
CORRECT ANSWER

(1) ಸಿ. ರಂಗಾಚಾರ್ಲು


21.ಬೆಂಗಳೂರಿನಲ್ಲಿ ‘ಪೀಪಲ್ಸ್ ಎಜುಕೇಷನ್ ಸೊಸೈಟಿ’ ಗೆ ಭೂಮಿ ದಾನ ನೀಡಿದ ಮಹಾರಾಜರು
 (1)ಕೃಷ್ಣರಾಜ ಒಡೆಯರ್ III
 (2)ಚಾಮರಾಜ ಒಡೆಯರ್ X
 (3)ಕೃಷ್ಣರಾಜ ಒಡೆಯರ್ IV
 (4)ಜಯಚಾಮರಾಜೇಂದ್ರ ಒಡೆಯರ್
CORRECT ANSWER

(4) ಜಯಚಾಮರಾಜೇಂದ್ರ ಒಡೆಯರ್


22.1898 ರಲ್ಲಿ ಬೆಂಗಳೂರಿಗೆ ಪ್ಲೇಗ್ ಅಂಟು ಜಾಡ್ಯ ಎಲ್ಲಿಂದ ಬಂದಿತು?
 (1)ಮದ್ರಾಸ್
 (2)ಬಾಂಬೆ
 (3)ಕಲ್ಕತ್ತಾ
 (4)ದೆಹಲಿ
CORRECT ANSWER

(2) ಬಾಂಬೆ


23.ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ:
 (A)ಸಿ ಒ ಪಿ-27 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಇತ್ತೀಚೆಗೆ ಶಾರ್ಮ ಎಲ್ -ಶೈಕ್ ನಲ್ಲಿ ಜರುಗಿತು.
 (B)ಹಿಂದಿನ ಸಿ ಒ ಪಿ- 26 ಯು.ಎನ್. ಹವಾಮಾನ ಬದಲಾವಣೆ ಸಮ್ಮೇಳನವು ಗ್ಲಸ್ಗೋವ್ನಲ್ಇಲ ಜರುಗಿತು.
 (C)ಸಿ ಒ ಪಿ ಯ ವಿಸ್ತೃತ ರೂಪ – ಪಕ್ಷಗಳ ಸಮ್ಮೇಳನ (Conference of Parties)
 (D)ಸಿ ಒ ಪಿ ಯ ವಿಸ್ತೃತ ರೂಪ – ಪ್ಯಾರಿಸ್ ಒಪ್ಪಂದದ ಸಮ್ಮೇಳನ (Conference on Paris Agreement)
 ಈ ಮೇಲೆ ನೀಡಲಾದ ಹೇಳಿಕೆಗಳಲ್ಲಿ / ವಿವರಣೆಗಳಲ್ಲಿ ಯಾವುದು ಸರಿಯಾಗಿದೆ?
 (1)A ಮತ್ತು B ಮಾತ್ರ
 (2)A, B ಮತ್ತು C ಮಾತ್ರ
 (3)A, B ಮತ್ತು D ಮಾತ್ರ
 (4)A ಮತ್ತು C ಮಾತ್ರ
CORRECT ANSWER

(2) A, B ಮತ್ತು C ಮಾತ್ರ


24.‘‘ರಾಷ್ಟ್ರೀಯ ನಿಶ್ಚಿತ ನೆರವು’’ ಗೆ ಸಂಬಂಧಿಸಿದಂತೆ, ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ:
 (A)ಎನ್.ಡಿ.ಸಿ. ಗಳು ಪ್ಯಾರಿಸ್ ಒಪ್ಪಂದದ ಹೃದಯ ಭಾಗವಾಗಿದೆ
 (B)ಪ್ರತಿ ಐದು ವರ್ಷಗಳಿಗೊಮ್ಮೆ ಎನ್.ಡಿ.ಸಿ. ಗಳನ್ನು ಯು ಎನ್ ಎಫ್ ಸಿ ಸಿ ಸಿ ಸಚಿವಾಲಯಕ್ಕೆ ಸಲ್ಲಿಸಲಾಗುವುದು.
 ಈ ಮೇಲೆ ನೀಡಲಾದ ಯಾವ ವಿವರಣೆ / ಗಳು ಸರಿಯಾಗಿದೆ?
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಅಥವಾ B ಎರಡೂ ಅಲ್ಲ
CORRECT ANSWER

(3) A ಮತ್ತು B ಎರಡೂ


25.ಈ ಕೆಳಗಿನ ಜಿ-20 ಬಗೆಗಿನ ವಿವರಣೆ/ಗಳು ಅಲ್ಲಿ ಯಾವುದು ಸರಿ?
 (A)ಭಾರತವು 17 ನೇ ಜಿ 20 ಆತಿಥ್ಯವನ್ನು ರಾಜ್ಯದ ಮುಖ್ಯಸ್ಥರಿಗೆ ಮತ್ತು ರಾಜ್ಯ ಶೃಂಗಕ್ಕೆ ನೀಡುತ್ತದೆ.
 (B)ಜೊತೆಯಾಗಿ, ಜಿ 20 ಸದಸ್ಯರುಗಳು ವಿಶ್ವದ ಜಿ.ಡಿ.ಪಿ. ಯ ಶೇಕಡಾ 80 ಕ್ಕಿಂತ ಹೆಚ್ಚನ್ನು ಪ್ರತಿನಿಧಿಸುತ್ತಾರೆ.
 (C)ಇದು ಶೇಕಡಾ 75 ರಷ್ಟು ಅಂತಾರಾಷ್ಟ್ರೀಯ ವ್ಯಾಪಾರವನ್ನು ಪ್ರತಿನಿಧಿಸುತ್ತದೆ.
 (D)ವಿಶ್ವದ ಜನಸಂಖ್ಯೆಯ ಶೇಕಡಾ 60 ರಷ್ಟು ಜನರು ಜಿ-20 ದೇಶಗಳಲ್ಲಿ ನೆಲೆಸಿದ್ದಾರೆ.
 (1)A ಮತ್ತು C ಮಾತ್ರ
 (2)B, C ಮತ್ತು D ಮಾತ್ರ
 (3)A, C ಮತ್ತು D ಮಾತ್ರ
 (4)A ಮತ್ತು D ಮಾತ್ರ
CORRECT ANSWER

(2) B, C ಮತ್ತು D ಮಾತ್ರ


26.ಅರ್ಥಶಾಸ್ತದ ನೋಬಲ್ ಪ್ರಶಸ್ತಿ, 2022 ಅನ್ನು ಜಂಟಿಯಾಗಿ ಬೆನ್. ಎಸ್.ಬೆರ್ನೆನೇಕ್, ಡೌಗ್ಲೋಸ ಡಬ್ಲೂ.ಡೈಮಂಡ್ ಮತ್ತು ಪಿಲಿಪ್ ಎಚ್. ಡೈಬ್ವಿಗ್ವರಿಗೆ ಅವರ ಯಾವ ಸಂಶೋಧನೆಗಾಗಿ ನೀಡಲಾಯಿತು?
 (1)ಆರ್ಥಿಕ ಒಳಗೂಡಿಸುವಿಕೆ
 (2)ಬ್ಯಾಂಕ್ಗಳು ಮತ್ತು ಆರ್ಥಿಕ ಮುಗ್ಗಟ್ಟು
 (3)ಷೇರು ಮಾರುಕಟ್ಟೆ
 (4)ಅಂತರಾಷ್ಟ್ರೀಯ ವ್ಯಾಪಾರ
CORRECT ANSWER

(2) ಬ್ಯಾಂಕ್ಗಳು ಮತ್ತು ಆರ್ಥಿಕ ಮುಗ್ಗಟ್ಟು


27.2022 ಐ ಸಿ ಸಿ ಮಹಿಳಾ ವಿಶ್ವಕಪ್ನಲ್ಲಿ ಯಾವ ದೇಶ ಎರಡನೇ ರನರ್ ಅಪ್ ಆಗಿತ್ತು?
 (1)ಭಾರತ
 (2)ಇಂಗ್ಲೆಂಡ್
 (3)ಆಸ್ಟ್ರೇಲಿಯ
 (4)ಶ್ರೀಲಂಕ
CORRECT ANSWER

(2) ಇಂಗ್ಲೆಂಡ್


28.ರಷ್ಯದೊಂದಿಗಿನ ಯುದ್ಧದಲ್ಲಿ, ಈ ಮುಂದಿನ ಯಾವ ಉದ್ದೇಶ/ಗಳಿಗಾಗಿ ಉಕ್ರೇನ್ `X’ ಸ್ಪೇಸ್ ಸ್ಟಾರ್ ಲಿಂಕ್ ಟರ್ಮಿನಲ್ ಗಳನ್ನು ಬಳಸಿತ್ತು?
 (A)ಯುದ್ಧದಿಂದ ಬಾಧಿತವಾದ ಪ್ರದೇಶಗಳಲ್ಲಿ ಇಂಟರ್ ನೆಟ್ ಸಂಪರ್ಕವನ್ನು ಪುನರ್ವಶ ಪಡಿಸಿಕೊಳ್ಳಲು
 (B)ರಷ್ಯ ದಳಗಳ ವಿರುದ್ಧದ ಡ್ರೋನ್ ಆಕ್ರಮಣದ ಕಾರ್ಯಾಚರಣೆಯಲ್ಲಿ ಉಕ್ರೇನಿನ ಸಶಸ್ತ್ರದಳಗಳಿಗೆ ನೆರವು ನೀಡಲು
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(3) A ಮತ್ತು B ಎರಡೂ


29.ಗ್ಲೋಬಲ್ ಕಾರ್ಬನ್ ಬಜೆಟ್, 2022 ರ ವರದಿಯ ಅನುಸಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ, 2022 ರಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಬನ್ ಎಮಿಷನ್ ಗೆ ಸಾಕ್ಷಿಯಾಗುವ ದೇಶ ಯಾವುದೆಂದು ನಿರೀಕ್ಷಿಸಲಾಗಿದೆ?
 (1)ಭಾರತ
 (2)ಚೈನ
 (3)ಯು ಎಸ್ ಎ
 (4)ಬ್ರೆಜಿಲ್
CORRECT ANSWER

(1) ಭಾರತ


30.ಇತ್ತೀಚೆಗೆ, ಓಕ್ಟ್ಸ್ಸಕ್ (Okhotsk) ಸಮುದ್ರವು, ಈ ಕೆಳಗಿನ ಯಾವ ಕಾರಣಗಳಿಗಾಗಿ ಸುದ್ದಿಯಾಗಿತ್ತು.
 (1)ರಷ್ಯ ಮತ್ತು ಚೈನದ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ.
 (2)ಭಾರತ ಮತ್ತು ಜಪಾನಿನ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ.
 (3)ಸಮುದ್ರದಲ್ಲಿ ಕ್ವಾಡ್ ಸದಸ್ಯರ ನೌಕಾಭ್ಯಾಸವಿರುತ್ತದೆ.
 (4)ಮೇಲಿನ ಎಲ್ಲವೂ
CORRECT ANSWER

(1) ರಷ್ಯ ಮತ್ತು ಚೈನದ ನೌಕಪಡೆಗಳು ಈ ಸಮುದ್ರ ತೀರದಲ್ಲಿ ಮತ್ತು ನೀರಿನಲ್ಲಿ ಕಾರ್ಯಾಚರಣೆಗಳ ಅಭ್ಯಾಸ ಮಾಡುತ್ತಾರೆ.


31.ಹೈದರಾಬಾದ್ನಲ್ಲಿ ಇತ್ತೀಚೆಗೆ ನಡೆದ 2 ನೇ ಯುನೈಟೆಡ್ ನೇಷನ್ ವರ್ಲ್ಡ್ ಜಿಯೋಸ್ಪೆಶಿಯಲ್ ಇನ್ಫಾರ್ಮೇಷನ್ ಕಾಂಗ್ರೆಸ್ನ ನಿಖರ ಉದ್ದೇಶವೇನು?
 (1)‘‘ಜಾಗತಿಕ ಗ್ರಾಮದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯ ಬಾರದು’’
 (2)‘‘ವಿಶ್ವದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯಬಾರದು’’
 (3)‘‘ಗೋಳದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯಬಾರದು’’
 (4)‘‘ಜಾಗತಿಕ ಸಮುದಾಯದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯಬಾರದು’’
CORRECT ANSWER

(1) ‘‘ಜಾಗತಿಕ ಗ್ರಾಮದ ಭೂ ಸಮರ್ಥ ಗೊಳಿಸುವಿಕೆ – ಯಾರೊಬ್ಬರೂ ಹಿಂದುಳಿಯ ಬಾರದು’’


32.ಇತ್ತೀಚೆಗೆ ಸುದ್ದಿಯಾಗಿದ್ದ ಟಿಮಾರ್-ಲೆಸ್ಟಿ (Timor-Leste) ಬಗೆಗಿನ ಈ ಕೆಳಗಿನ ವಿವರಣೆಗಳನ್ನು ಪರಿಗಣಿಸಿ:
 (A)ಇದನ್ನು 11 ನೇ ಎ. ಎಸ್. ಇ. ಎ. ಎನ್. (ASEAN) ಸದಸ್ಯವನ್ನಾಗಿ ಅಂಗೀಕರಿಸಲಾಗಿದೆ
 (B)ಈ ದೇಶವು 20 ಚದರ ಕಿಲೋ ಮೀಟರ್ ಪ್ರದೇಶವನ್ನು ಹೊಂದಿದೆ.
 (C)‘ದಿಲಿ’ ಈ ದೇಶದ ರಾಜಧಾನಿ
 (D)ಅಮೇರಿಕನ್ ಡಾಲರ್ (USD) ಈ ದೇಶದ ಕರೆನ್ಸಿಯಾಗಿದೆ.
 
ಈ ಮೇಲಿನ ವಿವರಣೆಗಳಲ್ಲಿ ಯಾವುದು ಸರಿಯಾಗಿದೆ ?
 (1)C ಮಾತ್ರ
 (2)A ಮತ್ತು C ಮಾತ್ರ
 (3)A, C ಮತ್ತು D ಮಾತ್ರ
 (4)ಮೇಲಿನ ಎಲ್ಲವೂ
CORRECT ANSWER

(3) A, C ಮತ್ತು D ಮಾತ್ರ


33.ಈ ಕೆಳಗಿನವುಗಳಲ್ಲಿ ಯಾವ ದೇಶವು, ನವೆಂಬರ್ 08, 2022 ರಂದು ಪ್ರಾರಂಭವಾದ ಮ್ಯಾನ್ಗ್ರೊೊವ್ ಅಲಿಯನ್ಸ್ ಫಾರ್ ಕ್ರೈಮೆಟ್ (MAC) ನ ಸದಸ್ಯತ್ವ ಹೊಂದಿಲ್ಲ?
 (1)ಬಾಂಗ್ಲ ದೇಶ
 (2)ಭಾರತ
 (3)ಶ್ರೀಲಂಕ
 (4)ಸ್ಪೈನ್
CORRECT ANSWER

(1) ಬಾಂಗ್ಲ ದೇಶ


34.ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಿಸಿರುವ ಜೋಡಿಗಳು ಯಾವುದು?
  ಜೋಡಿ I ಜೋಡಿ II
 (A)ಒರಿಯಾನ್ಮಂಗಳಗ್ರಹದ ನಿಯೋಗಕ್ಕಾಗಿ ನಾಸ ಉಡಾಯಿಸಿದ ವಾಯುಯಾನ
 (B)ಅರ್ಥೈಮಿಸ್ Iಈ ಚಂದ್ರನಿಂದ ಮಂಗಳ ಗ್ರಹಕ್ಕೆ ಅನ್ವೇಷಣಾ ಸಮೀಪಿಸುವಿಕೆಗೆ ನಾಸಾದ ನಿಯೋಗದ ಅಪಾಯ ಸಂಭವವಿರುವ ವಾಯುಯಾನದ ಭಾಗ
 (C)ಅರ್ಥೈಮಿಸ್ IIಚಂದ್ರ ಗ್ರಹಕ್ಕೆ ಗಗನ ಯಾತ್ರಿಯನ್ನು ಕಳುಹಿಸಲು ನಾಸಾದ ಯೋಜಿತ ಗುರಿ
 (D)ಸ್ಪೇಸ್ ಲಾಂಚ್ ಸಿಸ್ಟಂ (SLS)ವಿಶ್ವದ ಅತ್ಯಂತ ಶಕ್ತಿಶಾಲಿ ಆಕಾಶ ಬಾಣ
 (1)A ಮಾತ್ರ
 (2)B ಮಾತ್ರ
 (3)B ಮತ್ತು D ಮಾತ್ರ
 (4)B, C ಮತ್ತು D ಮಾತ್ರ
CORRECT ANSWER

(4) B, C ಮತ್ತು D ಮಾತ್ರ


35.ಸಸ್ಯ ಕೋಶಗಳನ್ನು ಜೀವಂತ ಮತ್ತು ಕಠಿಣವಾದ ಕೋಟ್ ಎಂದು ಕರೆಯಲಾಗುತ್ತದೆ.
 (1)ಪ್ಲಾಸ್ಮಾಮೆಂಬರೇನ್
 (2)ಕೋಶ ಗೋಡೆ
 (3)ಲಾಮೆಲ್ಲಾ
 (4)ಪ್ಲಾಸ್ಮಾಲೆಮ್ಮ
CORRECT ANSWER

(2) ಕೋಶ ಗೋಡೆ


36.ಮೊದಲ ಲಸಿಕೆಯನ್ನು ಯಾರು ಅಭಿವೃದ್ಧಿ ಪಡಿಸಿದ್ದಾರೆ?
 (1)ಲೂಯಿಸ್ ಪಾಸ್ಟರ್
 (2)ರಾಬರ್ಟ್ ಕೋಚ್
 (3)ಕಾರ್ಲ್ ಲ್ಯಾಂಡ್ ಸ್ಟೈನರ್
 (4)ಜೋಸೆಫ್ ಮಿಸ್ಟರ್
CORRECT ANSWER

(1) ಲೂಯಿಸ್ ಪಾಸ್ಟರ್


37.ವೈರಸ್ಗಳನ್ನು ಹೀಗೆ ಪರಿಗಣಿಸಲಾಗುತ್ತದೆ.
 (1)ಪ್ರೊಕಾರ್ಯೋಟಿಕ್
 (2)ಯೂಕ್ಯಾರಿಯೋಟಿಕ್
 (3)ಸೆಲ್ಯುಲಾರ್
 (4)ಅಸೆಲ್ಯುಲಾರ್
CORRECT ANSWER

(4) ಅಸೆಲ್ಯುಲಾರ್


38.ಏಡ್ಸ್ ಸ್ಕ್ರೀನಿಂಗ್ ಪರೀಕ್ಷೆ
 (1)ಇಲಿಸಾ
 (2)ಪಿ ಸಿ ಆರ್
 (3)ವೆಸ್ಟರ್ನ್ ಬ್ಲಾಟ್
 (4)ಸದರನ್ ಬ್ಲಾಟ್
CORRECT ANSWER

(1) ಇಲಿಸಾ OR (3) ವೆಸ್ಟರ್ನ್ ಬ್ಲಾಟ್


39.ಜನಸಂಖ್ಯೆಯಲ್ಲಿ, ಅನಿಯಂತ್ರಿತ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಏನು ಎಂದು ಕರೆಯಲಾಗುತ್ತದೆ?
 (1)ಸಾಗಿಸುವ ಸಾಮರ್ಥ್ಯ
 (2)ಬಯೊಟಿಕ್ ಸಾಮರ್ಥ್ಯ
 (3)ಜನನ ದರ
 (4)ಫಲವತ್ತತೆ ದರ
CORRECT ANSWER

(2) ಬಯೊಟಿಕ್ ಸಾಮರ್ಥ್ಯ


40.ಆಂಟಿ ವೈರಸ್ ವಸ್ತು ಯಾವುದು?
 (1)ಆಂಟಿಜೆನ್
 (2)ಆಂಟಿಬಾಡಿ
 (3)ಇಂಟರ್ಫೆರಾನ್
 (4)ಆಂಟಿಬಯೋಟಿಕ್
CORRECT ANSWER

(3) ಇಂಟರ್ಫೆರಾನ್


41.ಸೂಕ್ಷ್ಮ ಜೀವಿಗಳ ಚಯಾಪಚಯ ಕ್ರಿಯೆಯ ಬಳಕೆಯು ಜಲಮೂಲಗಳಲ್ಲಿನ ಮಾಲಿನ್ಯಕಾರಕಗಳನ್ನು ತೆಗೆದುಹಾಕುವುದು ಏನು ಎಂದು ಕರೆಯಲಾಗುತ್ತದೆ?
 (1)ಬಯೋಮ್ಯಾಗ್ನಿಫಿಕೇಶನ್
 (2)ಬಯೋರೆಮಿಡಿಯೇಶನ್
 (3)ಬಯೋಮೇಥನೇಶನ್
 (4)ಬಯೋರೆಡಕ್ಷನ್
CORRECT ANSWER

(2) ಬಯೋರೆಮಿಡಿಯೇಶನ್


42.ಧ್ವನಿ ನಿರೋಧಕ ಕಟ್ಟಡಗಳ ಸಂವಿಧಾನಕ್ಕಾಗಿ ಬಳಸುವ ಪಾಚಿಗಳು ಯಾವುದು?
 (1)ಕ್ಯಾರ
 (2)ಡಯಾಟಮ್
 (3)ಲ್ಯಾಮಿನೇರಿಯಾ
 (4)ಯುಲೋಥ್ರಿಕ್ಸ್
CORRECT ANSWER

(2) ಡಯಾಟಮ್


43.ವರ್ಣತಂತುಗಳನ್ನು ಮೊದಲು ಯಾರು ವಿವರಿಸಿದ್ದಾರೆ __________
 (1)ಡಾರ್ವಿನ್
 (2)ಮೆಂಡಲ್
 (3)ಸ್ಟ್ರಾಸ್ಬರ್ಗರ್
 (4)ಟಾಟಮ್
CORRECT ANSWER

(3) ಸ್ಟ್ರಾಸ್ಬರ್ಗರ್


44.ಮಣ್ಣಿನಲ್ಲಿ, ಬೇರುಗಳಿಗೆ ಲಭ್ಯವಿರುವ ನೀರು ಯಾವ ಕಾರಣಕ್ಕಾಗಿ?
 (1)ಕ್ಯಾಪಿಲ್ಲರಿ ನೀರು
 (2)ಹೈಗ್ರೋಸ್ಕೋಪಿಕ್ ನೀರು
 (3)ಗ್ರಾವಿಟೆಷನಲ್ ನೀರು
 (4)ರಾಸಾಯನಿಕವಾಗಿ ಬಂಧಿತ ನೀರು
CORRECT ANSWER

(1) ಕ್ಯಾಪಿಲ್ಲರಿ ನೀರು


45.ಆಮ್ಲ ಮಳೆಯು ಈ pH ನ್ನು ಹೊಂದಿರುತ್ತದೆ.
 (1)4.5 ಗಿಂತ ಕಡಿಮೆ
 (2)4.5 ಗಿಂತ ಹೆಚ್ಚು
 (3)5 ಕ್ಕಿಂತ ಹೆಚ್ಚು
 (4)6 ಮತ್ತು 7 ನಡುವೆ
CORRECT ANSWER

(1) 4.5 ಗಿಂತ ಕಡಿಮೆ


46.ಕವಚ ಹೂತು (Blanket bog) ಹೋಗುವುದು ಕೆಳಗಿರುವ ಮಳೆ ಪ್ರಮಾಣವನ್ನು ಪಡೆಯುವುದರಿಂದ.
 (1)ವರ್ಷಕ್ಕೆ 1000 mm / ಗಿಂತ ಹೆಚ್ಚು
 (2)ವರ್ಷಕ್ಕೆ 1500 mm / ಗಿಂತ ಹೆಚ್ಚು
 (3)ವರ್ಷಕ್ಕೆ 500 – 800 mm / ಗಿಂತ ಹೆಚ್ಚು
 (4)ವರ್ಷಕ್ಕೆ 2000 mm / ಗಿಂತ ಹೆಚ್ಚು
CORRECT ANSWER

(1) ವರ್ಷಕ್ಕೆ 1000 mm / ಗಿಂತ ಹೆಚ್ಚು


47.‘ಕೇಂದ್ರೀಯ ಕೀಟನಾಶಕ ಅಧಿನಿಯಮ’ ಯಾವ ವರ್ಷದಲ್ಲಿ ಮಂಜೂರಾಯಿತು/ ಅಂಗೀಕೃತವಾಯಿತು?
 (1)1962
 (2)1961
 (3)1972
 (4)1998
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


48.ಭಾರತದಲ್ಲಿ ಮಾನ್ಸೂನ್ ಉಗಮಕ್ಕೆ ಸಂಬಂದಿಸಿದಂತೆ ಕೆಳಗಿನ ಯಾವ ಪರಿಕಲ್ಪನೆಯು ಸರಿಯಾಗಿರುವುದಿಲ್ಲ.
 (1)ಉಷ್ಣಾಂಶದ ಪರಿಕಲ್ಪನೆ – ಸರ್ ಎಡ್ಮಂಡ ಹ್ಯಾಲಿ
 (2)ಏರೋಲಾಜಿಕಲ್ ಪರಿಕಲ್ಪನೆ – ಆರ್. ಶೆರ್ಹಾಗ್
 (3)ಚಲನಾತ್ಮಕ ಪರಿಕಲ್ಪನೆ – ಎಚ್. ಪ್ಲೊಹ್ನ
 (4)ಸಾಂಪ್ರದಾಯಿಕ ಪರಿಕಲ್ಪನೆ – ಈ. ಪಾಲೆಮೆನ್
CORRECT ANSWER

(4) ಸಾಂಪ್ರದಾಯಿಕ ಪರಿಕಲ್ಪನೆ – ಈ. ಪಾಲೆಮೆನ್


49.ಪಟ್ಟಿ I ಅನ್ನು ಪಟ್ಟಿ II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾದ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ:
  ಪಟ್ಟಿ – I ಪಟ್ಟಿ II
  ಭೂಗೋಳ ಶಾಸ್ತ್ರಜ್ಞರು ಸಿದ್ಧಾಂತಗಳು / ಮಾದರಿ / ಪರಿಕಲ್ಪನೆ
 (a)J. ಗೋಟ್ಮನ್(A)ಕಾನ್ಸೆಂಟ್ರಿಕ್ ಜೋನ್ ಥಿಯರಿ
 (b)E. ಬರ್ಗೇಸ್(B)ಪ್ರೈಮೇಟ್ ಸಿಟಿ
 (c)M. ಜೆಫರ್ಸನ್(C)ಮಲ್ಟಿಪಲ್ ನ್ಯೂಕ್ಲಿಮಾಡೆಲ್
 (d)C. ಹ್ಯಾರಿಸ್ ಮತ್ತು E. ಉಲ್ಮನ್(D)ಮೆಗಲೋಪೋಲಿಸ್
  abcd
 (1)ADCB
 (2)BADC
 (3)CBAD
 (4)DABC
CORRECT ANSWER

(4) D, A, B, C


50.ಭೂಮಿಯ ಹೊರಪದರದಲ್ಲಿಯ ಸಮೃದ್ಧಿಯಲ್ಲಿರುವ, ಈ ಅಂಶಗಳನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಿ
 (1)ಸಿಲಿಕಾನ್
 (2)ಕಬ್ಬಿಣ
 (3)ಮ್ಯಾಗ್ನೇಶಿಯಂ
 ಸರಿಯಾದ ಉತ್ತರವನ್ನು ಕೆಳಗಿನ ಸಂಕೇತಗಳಿಂದ ಆರಿಸಿ:
 (1)1, 2 & 3
 (2)1, 3 & 2
 (3)2, 1 & 3
 (4)2, 3 & 1
CORRECT ANSWER

(1) 1, 2 & 3


51.ಈ ಕೆಳಗಿನವುಗಳಲ್ಲಿ ಯಾವುದು ನಿರಂತರ ಮಾರುತವಲ್ಲ?
 (1)ಮಾನ್ಸೂನ್ ಮಾರುತ
 (2)ಪಶ್ಚಿಮ ಮಾರುತ
 (3)ದ್ರವೀಯ ಮಾರುತ
 (4)ವಾಣಿಜ್ಯ ಮಾರುತ
CORRECT ANSWER

(1) ಮಾನ್ಸೂನ್ ಮಾರುತ


52.ಈ ಕೆಳಗಿನವುಗಳಲ್ಲಿ ಯಾವುದು ಕಿರಿಯ ವಯಸ್ಸಿನಿಂದ ಹಿರಿಯ ವಯಸ್ಸಿನ ವರೆಗೆ ನೀಡಿರುವ ಪರ್ವತ ಶ್ರೇಣಿಗಳ ರಚನೆಯ ವಯಸ್ಸಿನ ಸರಿಯಾದ ಅನುಕ್ರಮವಾಗಿದೆ?
 (1)ಹಿಮಾಲಯ – ವಿಂಧ್ಯ – ಪಶ್ಚಿಮ ಘಟ್ಟಗಳು – ಡೆಕ್ಕನ್ ಟ್ರಾಪ್
 (2)ಡೆಕ್ಕನ್ ಟ್ರಾಪ್ – ಪಶ್ಚಿಮ ಘಟ್ಟಗಳು- ವಿಂಧ್ಯ – ಹಿಮಾಲಯ
 (3)ಹಿಮಾಲಯ – ಪಶ್ಚಿಮ ಘಟ್ಟಗಳು- ವಿಂಧ್ಯ – ಡೆಕ್ಕನ್ ಟ್ರಾಪ್
 (4)ವಿಂಧ್ಯ – ಹಿಮಾಲಯ – ಡೆಕ್ಕನ್ ಟ್ರಾಪ್ – ಪಶ್ಚಿಮ ಘಟ್ಟಗಳು
CORRECT ANSWER

(1) ಹಿಮಾಲಯ – ವಿಂಧ್ಯ – ಪಶ್ಚಿಮ ಘಟ್ಟಗಳು – ಡೆಕ್ಕನ್ ಟ್ರಾಪ್


53.ಕೊಪೆನ್ನರ ವಾಯುಗುಣದ ವರ್ಗೀಕರಣದಲ್ಲಿ ‘f’ ಎಂಬುದು
 (1)ಬೇಸಿಗೆ ಕಾಲದಲ್ಲಿ ಶುಷ್ಕತೆ
 (2)ಚಳಿಗಾಲದಲ್ಲಿ ಶುಷ್ಕತೆ
 (3)ಶುಷ್ಕತೆ ರಹಿತ ಋತುಮಾನ
 (4)ಅಲ್ಪ ಕಾಲೀಕ ಶುಷ್ಕ ಋತು
CORRECT ANSWER

(3) ಶುಷ್ಕತೆ ರಹಿತ ಋತುಮಾನ


54.ಸಾಂದ್ರತೆ, ನಿರೀಕ್ಷಿತ ಜೀವಿತಾವದಿ ಮತ್ತು ಸಾಕ್ಷರತೆಯು __________ ತೋರಿಸುತ್ತದೆ.
 (1)ಸ್ತ್ರೀ ಮತ್ತು ಪುರುಷ ಅನುಪಾತ, ಮಾನವನ ಜೀವನದ ಗುಣಮಟ್ಟ ಮತ್ತು ಅಭಿವೃದ್ಧಿಯ ಸೂಚ್ಯಾಂಕ
 (2)ದೇಶದ ಭೂ ಸಂಪನ್ಮೂಲದ ಮೇಲೆ ಒತ್ತಡ, ಅಭಿವೃದ್ಧಿಯ ಮತ್ತು ಮಾನವನ ಜೀವನದ ಗುಣಮಟ್ಟ
 (3)ಸ್ತ್ರೀ ಮತ್ತು ಪುರುಷ ಅನುಪಾತ, ಅಭಿವೃದ್ಧಿಯ ಸೂಚ್ಯಂಕ ಮತ್ತು ಜನಸಂಖ್ಯೆಯ ಅನುಪಾತ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(2) ದೇಶದ ಭೂ ಸಂಪನ್ಮೂಲದ ಮೇಲೆ ಒತ್ತಡ, ಅಭಿವೃದ್ಧಿಯ ಮತ್ತು ಮಾನವನ ಜೀವನದ ಗುಣಮಟ್ಟ


55.ಸ್ಕೈಮೆಟ್ ಎಂಬುದು ಯಾವುದಕ್ಕೆ ಸಂಬಂಧಿಸಿದೆ?
 (1)ಹವಾಮಾನ ಮುನ್ಸೂಚನೆಯ ಸೌಲಭ್ಯವನ್ನು ನೀಡುವ ಖಾಸಗಿ ಕಂಪೆನಿ
 (2)ವಾಯು ಸಾರಿಗೆ ಸೌಲಭ್ಯವನ್ನು ಪೂರೈಸುವ ಖಾಸಗಿ ಕಂಪೆನಿ
 (3)ಭಾರತ ಸರ್ಕಾರದ ಸಾಫ್ಟ್ವೇರ್ ಕಂಪೆನಿ
 (4)ಅಂತರರಾಷ್ಟ್ರೀಯ ವಿಮಾನ ಸೌಲಭ್ಯವನ್ನು ಪೂರೈಸುವ ಬಹುರಾಷ್ಟ್ರೀಯ ಕಂಪೆನಿ
CORRECT ANSWER

(1) ಹವಾಮಾನ ಮುನ್ಸೂಚನೆಯ ಸೌಲಭ್ಯವನ್ನು ನೀಡುವ ಖಾಸಗಿ ಕಂಪೆನಿ


56.ಸಮಭಾಜಕ ವೃತ್ತದ ಸಮೀಪದ ಸಾಗರಗಳಲ್ಲಿ ಕಡಿಮೆ ಲವಣತೆಗೆ ಪ್ರಮುಖ ಕಾರಣವೆಂದರೆ
 (1)ಅತ್ಯಧಿಕ ಮಳೆ
 (2)ಅಧಿಕ ಆವಿಯಾಗುವಿಕೆ
 (3)ವಿಶಾಲವಾದ ಸಾಗರ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಅತ್ಯಧಿಕ ಮಳೆ


57.X ನ್ನು ಗುರುತಿಸಿ :
 (1)ನಿವ್ವಳ ಕೃಷಿ ಯೋಗ್ಯ ಪ್ರದೇಶ
 (2)ನಿವ್ವಳ ಕೃಷಿ ಪ್ರದೇಶ
 (3)ಒಟ್ಟು ಕೃಷಿ ಜನಸಂಖ್ಯೆ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ನಿವ್ವಳ ಕೃಷಿ ಯೋಗ್ಯ ಪ್ರದೇಶ


58.‘‘ಹಕ್ಕುಗಳು ಕಾನೂನುಗಳಿಂದ ರಕ್ಷಿತವಾಗಿಲ್ಲ, ಬದಲಾಗಿ ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯ ಮೂಲಕ ರಕ್ಷಿತವಾಗುತ್ತದೆ’’ ಈ ಹೇಳಿಕೆಯನ್ನು ನೀಡಿದವರು ಯಾರು?
 (1)ಡಾ . ಬಿ. ಆರ್. ಅಂಬೇಡ್ಕರ್
 (2)ಕಾರ್ಲ್ ಮಾರ್ಕ್ಸ್
 (3)ಜಯಪ್ರಕಾಶ್ ನಾರಾಯಣ
 (4)ಜವಾಹರಲಾಲ್ ನೆಹರು
CORRECT ANSWER

(1) ಡಾ . ಬಿ. ಆರ್. ಅಂಬೇಡ್ಕರ್


59.ಸಂವಿಧಾನದ ಯಾವ ಭಾಗದಲ್ಲಿ ಪೌರತ್ವದ ಬಗ್ಗೆ ವಿವರಿಸಲಾಗಿದೆ?
 (1)ಭಾಗ-12
 (2)ಭಾಗ-2
 (3)ಭಾಗ-23
 (4)ಭಾಗ-20
CORRECT ANSWER

(2) ಭಾಗ-2


60.ಸಂವಿಧಾನದ ಯಾವ ತಿದ್ದುಪಡಿಯು ರಾಜ್ಯಗಳಿಗೆ ತಮ್ಮದೇ ಆದ OBC ಪಟ್ಟಿ ಮಾಡಿಕೊಳ್ಳಲು ಅವಕಾಶ ನೀಡಿದೆ?
 (1)127
 (2)117
 (3)107
 (4)97
CORRECT ANSWER

(1) 127


61.ಭಾರತದ ಸಂಯುಕ್ತ ಮಾದರಿ ಸರ್ಕಾರದ ಪ್ರಮುಖ ಲಕ್ಷಣಗಳೆಂದರೆ
 (1)ಸಂವಿಧಾನದ ಪಾರಮ್ಯತೆ
 (2)ನ್ಯಾಯಾಂಗದ ಉತ್ಕೃಷ್ಟತೆ
 (3)ಕೇಂದ್ರ ಮತ್ತು ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆ
 (4)ಮೇಲಿನ ಎಲ್ಲವು
CORRECT ANSWER

(4) ಮೇಲಿನ ಎಲ್ಲವು


62.ಲೋಕಸಭೆಯ ಅಂಗೀಕಾರಗೊಂಡ ಹಣಕಾಸು ಮಸೂದೆಯನ್ನು ರಾಜ್ಯಸಭೆ ಎಷ್ಟು ಕಾಲಗಳ ವರೆಗೆ ಅನ್ವಯವಾಗದಂತೆ ತಡೆ ಹಿಡಿಯಬಹುದು?
 (1)ಒಂದು ತಿಂಗಳು
 (2)ಎರಡು ತಿಂಗಳುಗಳು
 (3)ಹದಿನಾಲ್ಕು ದಿವಸಗಳು
 (4)ಇಪ್ಪತ್ತನಾಲ್ಕು ದಿವಸಗಳು
CORRECT ANSWER

(3) ಹದಿನಾಲ್ಕು ದಿವಸಗಳು


63.ಭಾರತ ಸಂವಿಧಾನದ ಯಾವ ವಿಧಿ ರಾಷ್ಟ್ರಪತಿಯವರಿಗೆ ಸಂಸತ್ತು ಅಧಿವೇಶನದಲ್ಲಿಲ್ಲದಿದ್ದಾಗ ಸುಗ್ರೀವಾಜ್ಞೆಯನ್ನು ಹೊರಡಿಸಲು ಅಧಿಕಾರ ನೀಡಿದೆ?
 (1)ವಿಧಿ 119
 (2)ವಿಧಿ121
 (3)ವಿಧಿ 123
 (4)ವಿಧಿ 124
CORRECT ANSWER

(3) ವಿಧಿ 123


64.ಸಾರ್ವಜನಿಕ ಲೆಕ್ಕ ಸಮಿತಿಯ ಸದಸ್ಯರುಗಳ ಸಂಖ್ಯೆ
 (1)15 ಲೋಕಸಭಾ ಸದಸ್ಯರು ಮತ್ತು 7 ರಾಜ್ಯಸಭೆಯ ಸದಸ್ಯರು
 (2)20 ಲೋಕಸಭಾ ಸದಸ್ಯರು ಮತ್ತು 2 ರಾಜ್ಯಸಭೆಯ ಸದಸ್ಯರು
 (3)ಲೋಕಸಭೆಯ ಎಲ್ಲಾ ಸದಸ್ಯರು
 (4)20 ರಾಜ್ಯಸಭೆಯ ಸದಸ್ಯರು ಮತ್ತು 6 ಲೋಕಸಭೆಯ ಸದಸ್ಯರು
CORRECT ANSWER

(1) 15 ಲೋಕಸಭಾ ಸದಸ್ಯರು ಮತ್ತು 7 ರಾಜ್ಯಸಭೆಯ ಸದಸ್ಯರು


65.ಹೊಂದಿಸಿ ಬರೆಯಿರಿ
  List – I List – II
 (i)ಕೇಶವಾನಂದ ಭಾರತಿ ಪ್ರಕರಣ (a)2009
 (ii)44 ನೇ ತಿದ್ದುಪಡಿಯ ಅಧಿನಿಯಮ(b)1973
 (iii)ಬಲವಂತರಾಯ್ ಮೆಹತಾ ಸಮಿತಿ(c)1978
 (iv)ಶಿಕ್ಷಣ ಹಕ್ಕಿನ ಕಾಯಿದೆ(d)1957
ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ :
  iiiiiiiv
 (1)cdba
 (2)abcd
 (3)dbac
 (4)bcda
CORRECT ANSWER

(4) b, c, d, a


66.ಭಾರತದ ರಾಷ್ಟ್ರಪತಿಯ ಮಹಾಭಿಯೋಗ ಪ್ರಕ್ರಿಯವನ್ನು ಯಾವ ವಿಧಿಯಲ್ಲಿ ವಿವರಿಸಲಾಗಿದೆ?
 (1)ವಿಧಿ 56
 (2)ವಿಧಿ 61
 (3)ವಿಧಿ 54
 (4)ವಿಧಿ 72
CORRECT ANSWER

(2) ವಿಧಿ 61


67.ಈ ಕೆಳಗಿನ ಯಾವ ತತ್ವಗಳು ಸಂವಿಧಾನದ ನಾಲ್ಕನೇ ಭಾಗದಲ್ಲಿ ಸೇರಿಸಲ್ಪಟ್ಟಿಲ್ಲ?
 (a)ಸಮಾನ ಕೆಲಸಕ್ಕೆ ಸಮಾನ ವೇತನ
 (b)ಸಮಾನ ನಾಗರಿಕ ಸಂಹಿತೆ
 (c)ಚಿಕ್ಕ ಕುಟುಂಬದ ನಿಯಮ
 (d)ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ
 (1)a, b ಮತ್ತು c
 (2)a ಮತ್ತು b
 (3)b ಮತ್ತು C
 (4)a, b, c, ಮತ್ತು d
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


68.ಈ ಕೆಳಗಿನವರಲ್ಲಿ ಯಾರು 1857 ರ ದಂಗೆಯ ನಾಯಕರಾಗಿರಲಿಲ್ಲ?
 (1)ರಾಣಿ ಲಕ್ಷ್ಮೀ ಬಾಯಿ
 (2)ತಾಂತ್ಯಾ ಟೋಪೆ
 (3)ಖಾನ್ ಬಹದ್ದೂರ್ ಖಾನ್
 (4)ಮಾನ್ ಸಿಂಗ್
CORRECT ANSWER

(4) ಮಾನ್ ಸಿಂಗ್


69.ಸ್ವದೇಶಿ ಚಳುವಳಿ ಎಂದರೆ
 (1)ಬ್ರಿಟಿಷರ ವಿರುದ್ಧ ಘೋಷಣೆ ಕೂಗುವುದು.
 (2)ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ದೇಶಿವಸ್ತುಗಳನ್ನು ಬಳಸುವುದು.
 (3)ಖಾದಿಯನ್ನು ತೊಡುವುದು.
 (4)ತೆರಿಗೆಯನ್ನು ಕೊಡದಿರುವುದು.
CORRECT ANSWER

(2) ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ದೇಶಿವಸ್ತುಗಳನ್ನು ಬಳಸುವುದು.


70.ಬಂಗಾಳ ವಿಭಜನೆಯನ್ನು ರದ್ದು ಪಡಿಸಿದ್ದು
 (1)1909
 (2)1911
 (3)1915
 (4)1925
CORRECT ANSWER

(2) 1911


71.ಒಬ್ಬಪ್ರಾಮಾಣಿಕ ಅಂಗಡಿ ಮಾಲೀಕ ತನ್ನ ಸರಕಿನ ಮೇಲೆ ಶೇ. 10 ಲಾಭ ತೆಗೆದುಕೊಳ್ಳುತ್ತಾನೆ. ಆಕಸ್ಮಿಕವಾಗಿ ಮಳೆಯ ಕಾರಣದಿಂದ ಶೇ. 20 ರಷ್ಟು ಸರಕುಗಳನ್ನು ಕಳೆದುಕೊಂಡರೆ ಅವನಿಗಾದ ಶೇಕಡ ನಷ್ಟ ಎಷ್ಟು?
 (1)9%
 (2)10%
 (3)11%
 (4)12%
CORRECT ANSWER

(4) 12%


72.ಕರ್ನಾಟಕದ ಜಲಿಯನವಾಲಾ ಬಾಗ್
 (1)ವಿದುರಾಶ್ವತ್ಥ
 (2)ಅಂಕೋಲ
 (3)ನರಗುಂದ
 (4)ಶಿವಪುರ
CORRECT ANSWER

(1) ವಿದುರಾಶ್ವತ್ಥ


73.ಹಿಂದುಸ್ಥಾನಿ ಸೇವಾದಳದ ಸ್ಥಾಪಕರು
 (1)ನಾರಾಯಣ ಸುಬ್ಬರಾವ್ ಹರ್ಡೇಕರ್
 (2)K. B. ಹೆಡ್ಗೆವಾರ್
 (3)R. R. ದಿವಾಕಾರ್
 (4)ಮೇಲಿನ ಯಾವುದು ಅಲ್ಲ
CORRECT ANSWER

(1) ನಾರಾಯಣ ಸುಬ್ಬರಾವ್ ಹರ್ಡೇಕರ್


74.ಹೊಂದಿಸಿ ಬರೆಯಿರಿ
 (A)ದೊಂಡಿವಾಘ(1)ಕಿತ್ತೂರು
 (B)ಭೀಮ್ ರಾವ್(2)ನರಗುಂದ
 (C)ಚನ್ನಮ್ಮ(3)ಬಿದನೂರು
 (D)ಬಾಬಾ ಸಾಹೇಬ(4)ಮುಂಡರಗಿ
 (1)A – 4, B – 3, C – 1, D – 2
 (2)A – 3, B – 1, C – 4, D – 2
 (3)A – 3, B – 4, C – 1, D – 2
 (4)A – 3, B – 4, C – 2, D – 1
CORRECT ANSWER

(3) A – 3, B – 4, C – 1, D – 2


75.ಭಾರತದ ‘‘ಗ್ರ್ಯಾಂಡ್ ಓಲ್ಡ್ ಮ್ಯಾನ್’’ ಎಂದು ಪರಿಚಿತರಾಗಿದ್ದವರು
 (1)ಜಸ್ಟಿಸ್ ರಾನಡೆ
 (2)ಮಹಾತ್ಮ ಗಾಂಧಿ
 (3)ರವೀಂದ್ರನಾಥ ಟಾಗೋರ್
 (4)ದಾದಾಬಾಯಿ ನವರೋಜಿ
CORRECT ANSWER

(4) ದಾದಾಬಾಯಿ ನವರೋಜಿ


76.ಗಾಂಧೀಜಿ ಚಂಪಾರಣ್ ಚಳುವಳಿಯನ್ನು ಆರಂಭಿಸಿದ್ದು
 (1)ಹರಿಜನರ ಹಕ್ಕುಗಳಿಗಾಗಿ
 (2)ನಾಗರಿಕ ಕಾನೂನು ಭಂಗ ಚಳುವಳಿಗಾಗಿ
 (3)ಹಿಂದೂ ಸಮಾಜದಲ್ಲಿ ಏಕತೆಯನ್ನು ಮೂಡಿಸಲು
 (4)ಇಂಡಿಗೋ ಬೆಳೆಗಾರರ ಸಮಸ್ಯೆ ಬಗೆಹರಿಸಲು
CORRECT ANSWER

(4) ಇಂಡಿಗೋ ಬೆಳೆಗಾರರ ಸಮಸ್ಯೆ ಬಗೆಹರಿಸಲು


77.1929 ರ ಲಾಹೋರ್ ಕಾಂಗ್ರೇಸ್ ಅಧಿವೇಶನದ ಪ್ರಮುಖ ಧೈಯ
 (1)ಸ್ವರಾಜ್ಯ ಪಡೆಯುವುದು
 (2)ಸಂಪೂರ್ಣ ಸ್ವಾತಂತ್ರ್ಯ ಪಡೆಯುವುದು
 (3)ಆಡಳಿತಾತ್ಮಕ ಸುಧಾರಣೆಗಳಿಗಾಗಿ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(2) ಸಂಪೂರ್ಣ ಸ್ವಾತಂತ್ರ್ಯ ಪಡೆಯುವುದು


78.ಕರ್ನಾಟಕ ಹವಾಮಾನದ ಬಗ್ಗೆ ತಪ್ಪಾದ ಹೇಳಿಕೆಯನ್ನು ಗುರುತಿಸಿ
 (A)ಕರ್ನಾಟಕ ರಾಜ್ಯವು ವಿಶಿಷ್ಟವಾದ ಉಷ್ಣವಲಯದ ಮಾನ್ಸೂನ್ ಹವಾಮಾನದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ
 (B)ಬೇಸಿಗೆಯ ಸಮಯದಲ್ಲಿ ಪ್ರಚಲನ ಪ್ರವಾಹಗಳು ಗುಡುಗು ಬಿರುಗಾಳಿ, ಮಿಂಚು ಮತ್ತು ಆಲಿಕಲ್ಲುಗಳೊಂದಿಗೆ ಅತಿ ಹೆಚ್ಚು ಮಳೆಯನ್ನು ಉಂಟುಮಾಡುತ್ತದೆ
 (C)ಬೇಸಿಗೆಯಲ್ಲಿ ರಾಜ್ಯವು ವಾರ್ಷಿಕ ಮಳೆಯ ಶೇ. 20 ರಷ್ಟನ್ನು ಪಡೆಯುತ್ತದೆ.
 (D)ರಾಜ್ಯದಲ್ಲಿ ಕಾಫಿ ಹೂವುಗಳು ಮತ್ತು ಮಾವಿಗೆ, ತುಂತುರು ಮಳೆಗೆ ಪೂರ್ವ ಮಾನ್ಸೂನ್ ಕಾರಣವಾಗಿದೆ.
(E) ಚಂಡಮಾರುತ ಮತ್ತು ವಾಯುಭಾರ ಕುಸಿತಗಳು ಬೇಸಿಗೆಯಲ್ಲಿ ಮತ್ತು ಮಾನ್ಸೂನ್ ಮಾರುತಗಳು ಹಿಂದಿರುಗುವ ಕಾಲದಲ್ಲಿ ನಿರಂತರವಾಗಿ ಉಂಟಾಗುತ್ತವೆ.
 ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಉತ್ತರವನ್ನು ಆರಿಸಿರಿ
 (1)A ಮತ್ತು E ಸರಿಯಿಲ್ಲ
 (2)A, B ಮತ್ತು C ಸರಿಯಿಲ್ಲ
 (3)C ಮತ್ತು E ಸರಿಯಿಲ್ಲ
 (4)C ಮಾತ್ರ ಸರಿಯಿಲ್ಲ
CORRECT ANSWER

(4) C ಮಾತ್ರ ಸರಿಯಿಲ್ಲ


79.ಭಾರತದ ಪರ್ಯಾಯ ಪ್ರಸ್ಥಭೂಮಿಯ ಬಗ್ಗೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
 (1)ಇದು ಅತ್ಯಂತ ಇತ್ತೀಚಿನ ಭೂ ಸ್ವರೂಪ ವಿಭಾಗ
 (2)ಇದು ಸಂಪೂರ್ಣವಾಗಿ ಕಣಶಿಲೆಗಳಿಂದ ನಿರ್ಮಿತವಾಗಿದೆ.
 (3)ಇದು ಅವಶೇಷ ಬೆಟ್ಟಗಳಿಗೆ ಹೆಸರಾಗಿದೆ.
 (4)ಇದು ಭಾರತದ ಅತಿ ವಿಸ್ತಾರವಾದ ಭೂ ಸ್ವರೂಪ ವಿಭಾಗ
 (1)1 ಮತ್ತು 2
 (2)2 ಮತ್ತು 3
 (3)3 ಮತ್ತು 4
 (4)1 ಮತ್ತು 4
CORRECT ANSWER

(3) 3 ಮತ್ತು 4


80.ಈ ಕೆಳಗಿನವುಗಳಲ್ಲಿ ಸರಿಯಾದ ಶಿಲೆಗಳು ಮತ್ತು ಅವುಗಳು ಕಂಡು ಬರುವ ರಾಜ್ಯಗಳನ್ನು ಕೆಳಗಿನ ಸಂಕೇತಾಕ್ಷರಗಳಿಂದ ಆಯ್ಕೆ ಮಾಡಿ.
 (A)ಕಡಪ್ಪಾ ಶಿಲೆಗಳು – ಆಂಧ್ರ ಪ್ರದೇಶ ಮತ್ತು ಛತ್ತೀಸ್ಗಡ್ದಲ್ಲಿ
 (B)ವಿಂಧ್ಯಾ ಶಿಲೆಗಳು – ಮಧ್ಯ ಪ್ರದೇಶ ಮತ್ತು ಛತ್ತೀಸ್ಗಡ್
 (C)ಗೊಂಡವಾನಾ ಶಿಲೆಗಳು – ಕೇರಳ ಮತ್ತು ತಮಿಳುನಾಡು
 (D)ಧಾರವಾಡ ಶಿಲೆಗಳು -ಕರ್ನಾಟಕ ಮತ್ತು ರಾಜಸ್ಥಾನ
 ಸಂಕೇತಗಳು
 (1)A, B ಮತ್ತು C ಸರಿಯಾಗಿದೆ
 (2)A, C ಮತ್ತು D ಸರಿಯಾಗಿದೆ
 (3)A, B ಮತ್ತು D ಸರಿಯಾಗಿದೆ
 (4)ಮೇಲಿನ ಎಲ್ಲವೂ ಸರಿಯಾಗಿದೆ
CORRECT ANSWER

(3) A, B ಮತ್ತು D ಸರಿಯಾಗಿದೆ


81.2011 ರ ಜನಗಣತಿಯಂತೆ ಮಹಿಳೆಯರ ಸಾಕ್ಷರತೆಯ ಆಧಾರದ ಮೇಲೆ ಈ ಕೆಳಗಿನ ರಾಜ್ಯಗಳನ್ನು ಇಳಿಕೆ ಕ್ರಮದಲ್ಲಿ ಜೋಡಿಸಿ
 (1)ಕೇರಳ, ಮಿಜೋರಾಂ, ಗೋವಾ, ತ್ರಿಪುರಾ
 (2)ಕೇರಳ, ತ್ರಿಪುರಾ, ಗೋವಾ, ಮಿಜೋರಾಂ
 (3)ಕೇರಳ, ಮಿಜೋರಾಂ, ತ್ರಿಪುರಾ, ಗೋವಾ
 (4)ಕೇರಳ, ಗೋವಾ, ತ್ರಿಪುರಾ, ಮಿಜೋರಾಂ
CORRECT ANSWER

(3) ಕೇರಳ, ಮಿಜೋರಾಂ, ತ್ರಿಪುರಾ, ಗೋವಾ


82.ಪಟ್ಟಿ I ಅನ್ನು ಪಟ್ಟಿ II ರೊಂದಿಗೆ ಹೊಂದಿಸಿ ಮತ್ತು ಕೆಳಗೆ ನೀಡಲಾದ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
  ಪಟ್ಟಿ- I ಪಟ್ಟಿ -II
  ಸಿದ್ಧಾಂತಗಳು ಪ್ರತಿಪಾದಕರು
 (a)ಭೂ ಸ್ವರೂಪ ಚಕ್ರ(A)ವಾಲ್ಟರ್ ಪೆಂಕ್
 (b)ಭೂ ಸ್ವರೂಪ ವ್ಯವಸ್ಥೆ(B)W. M. ಡೇವಿಸ್
 (c)ಡೈನಮಿಕ್ ಇಕ್ವಿಲಿಬ್ರಿಯಂ(C)ಕಾರ್ಲ್ ಗಿಲ್ಬರ್ಟ್
 (d)ಪೆಡಿಪ್ಲೇನೆಷನ್ ಸೈಕಲ್(D)L. C. ಕಿಂಗ್
  abcd
 (1)BACD
 (2)ABCD
 (3)DABC
 (4)CADB
CORRECT ANSWER

(1) B, A, C, D


83.ಕರ್ನಾಟಕ ಆರ್ಥಿಕ ಸಮೀಕ್ಷೆ (Economic Survey) 2021-22 ರ ಪ್ರಕಾರ, ಯಾವ ಜಿಲ್ಲೆಯು, ಜಿಲ್ಲಾವಾರು ತಲಾ ಆದಾಯದಲ್ಲಿ ಬೆಂಗಳೂರು ನಗರ ಜಿಲ್ಲೆಯ ನಂತರದ ಸ್ಥಾನದಲ್ಲಿದೆ?
 (1)ಬೆಂಗಳೂರು ಗ್ರಾಮೀಣ
 (2)ಶಿವಮೊಗ್ಗ
 (3)ಬೆಳಗಾವಿ
 (4)ದಕ್ಷಿಣ ಕನ್ನಡ
CORRECT ANSWER

(4) ದಕ್ಷಿಣ ಕನ್ನಡ


84.2019-20 ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಮೊದಲ ಬಾರಿ ಅಳವಡಿಸಿಕೊಂಡು 2020 -21 ನೇ ಮುಂದುವರಿಸಿರುವ ಹೊಸ ಅಧ್ಯಾಯದ ಹೆಸರೇನು?
 (1)ಸುಸ್ಥಿರ ಅಭಿವೃದ್ಧಿ ಗುರಿಗಳು
 (2)ಮಾನವ ಅಭಿವೃದ್ಧಿ
 (3)ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ
 (4)ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ
CORRECT ANSWER

(1) ಸುಸ್ಥಿರ ಅಭಿವೃದ್ಧಿ ಗುರಿಗಳು


85.ಪ್ರೇಮಾಳ ಮಗ ಆನಂದ್ . ರಾಜೀವ್ ಪ್ರೇಮಾಳ ತಮ್ಮ, ರಶ್ಮಿನೇಹಾಳ ಮಗಳು, ನೇಹಾ ರಾಜೀವನ ತಂಗಿ. ಹಾಗಾದರೆ ಆನಂದ್ ರಶ್ಮಿಗೆ ಏನಾಗುತ್ತಾನೆ?
 (1)ಚಿಕ್ಕಪ್ಪ
 (2)ಸೋದರ ಮಾವ
 (3)ಸೋದರ ಸಂಬಂಧಿ
 (4)ಯಾವುದೂ ಅಲ್ಲ
CORRECT ANSWER

(3) ಸೋದರ ಸಂಬಂಧಿ


86.ತಂದೆಯ ವಯಸ್ಸು ಪ್ರಸ್ತುತ ಮಗನ ವಯಸ್ಸಿನ 4 ರಷ್ಟಿದೆ. 5 ವರ್ಷಗಳ ಹಿಂದೆ ತಂದೆಯ ವಯಸ್ಸು ತನ್ನ ಮಗನ ವಯಸ್ಸಿನ 7 ರಷ್ಟಿತ್ತು. ಹಾಗಾದರೆ ತಂದೆ ಮತ್ತು ಮಗನ ಪ್ರಸ್ತುತ ವಯಸ್ಸುಗಳನ್ನು ಕಂಡುಹಿಡಿಯಿರಿ.
 (1)7 ಮತ್ತು 28
 (2)12 ಮತ್ತು 42
 (3)10 ಮತ್ತು 40
 (4)15 ಮತ್ತು 60
CORRECT ANSWER

(3) 10 ಮತ್ತು 40


87.ರೂ.7500 ಗಳಿಗೆ 4 % ರಂತೆ ವಾರ್ಷಿಕವಾಗಿ 2 ವರ್ಷಗಳಿಗೆ ಚಕ್ರಬಡ್ಡಿಯನ್ನು ಲೆಕ್ಕಾಚಾರ ಮಾಡಿ.
 (1)ರೂ. 615
 (2)ರೂ. 612
 (3)ರೂ. 621
 (4)ರೂ. 600
CORRECT ANSWER

(2) ರೂ. 612


88.ಕ್ರಿಕೆಟ್ ಮ್ಯಾಚಿನ ಮೊದಲ 15 ಓವರುಗಳಲ್ಲಿ ಪ್ರತಿ ಓವರಿಗೆ 4.6 ರನ್ನುಗಳನ್ನು ಗಳಿಸಿದ್ದರೆ, ಉಳಿದ 25 ಓವರುಗಳಲ್ಲಿ 259 ರನ್ನುಗಳ ಗುರಿ ತಲುಪಲು ಗಳಿಸಬೇಕಾದ ರನ್ನುಗಳ ದರ ಎಷ್ಟು?
 (1)5.6
 (2)6.7
 (3)7.6
 (4)8.7
CORRECT ANSWER

(3) 7.6


89.ಎರಡು ಸಂಖ್ಯೆಗಳ ನಡುವಿನ ವ್ಯತ್ಯಾಸ 48 ಆಗಿರುತ್ತದೆ. ಆ ಎರಡು ಸಂಖ್ಯೆಗಳು 7:3ರ ಅನುಪಾತದಲ್ಲಿದ್ದರೆ, ಆ ಸಂಖ್ಯೆಗಳನ್ನು ಕಂಡುಹಿಡಿಯಿರಿ.
 (1)32 ಮತ್ತು 80
 (2)40 ಮತ್ತು 88
 (3)20 ಮತ್ತು 68
 (4)84 ಮತ್ತು 36
CORRECT ANSWER

(4) 84 ಮತ್ತು 36


90.ಸಂಜಯನು ‘X’ ಜಾಗದಿಂದ ದಕ್ಷಿಣಾಭಿಮುಖವಾಗಿ ಒಂದು ಕಿಲೋಮೀಟರ್ ನಡೆದು ನಂತರ ಎಡಕ್ಕೆ ತಿರುಗಿ ಮತ್ತೆ ಒಂದು ಕಿಲೋಮೀಟರ್ ನಡೆಯುತ್ತಾನೆ. ಮತ್ತೆ ಎಡಕ್ಕೆ ತಿರುಗಿ ಒಂದು ಕಿಲೋಮೀಟರ್ ನಡೆಯುತ್ತಾನೆ. ಹಾಗಾದರೆ ಅವನು ಈಗ ಯಾವ ದಿಕ್ಕಿನ ಕಡೆಗೆ ನಡೆಯುತ್ತಿದ್ದಾನೆ ಎಂದು ಕಂಡುಹಿಡಿಯಿರಿ.
 (1)ಪೂರ್ವ
 (2)ಉತ್ತರ
 (3)ಪಶ್ಚಿಮ
 (4)ಈಶಾನ್ಯ
CORRECT ANSWER

(2) ಉತ್ತರ


91.ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಕರಡು ಮಸೂದೆ 2020 ಯು ಕರ್ನಾಟಕ ಭೂ ಸುಧಾರಣೆ ಕಾಯಿದೆ 1961 ರ, ಈ ಕೆಳಗಿನ ಯಾವ ಪರಿಚ್ಛೇದಗಳನ್ನು ಕೈ ಬಿಟ್ಟಿದೆ?
 (1)ಪರಿಚ್ಛೇದ 75A ಮತ್ತು 76B
 (2)ಪರಿಚ್ಛೇದ 79A ಮತ್ತು 79B
 (3)ಪರಿಚ್ಛೇದ 78A ಮತ್ತು 78C
 (4)ಮೇಲಿನ ಎಲ್ಲವೂ
CORRECT ANSWER

(2) ಪರಿಚ್ಛೇದ 79A ಮತ್ತು 79B


92.1831 ರಲ್ಲಿ ಆಗಿನ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷರು ವಹಿಸಿಕೊಳ್ಳುವ ಮುನ್ನಾ ದಿನದಂದು, ಚಾಲ್ತಿಯಲ್ಲಿದ್ದ ಭೂ ವ್ಯವಸ್ಥೆಯು ಈ ಕೆಳಗಿನ ರೀತಿಯ ಹಿಡುವಳಿದಾರರನ್ನು ಒಳಗೊಂಡಿತ್ತು:
 (A)ಪರ್ಡೆಯು ಸ್ಥಿರವಾದ ಹಣದ ಬಾಡಿಗೆಯನ್ನು ಪಾವತಿಸಲು ರೈತರು ನೇರವಾಗಿ ಹೊಂದಿರುವ ಭೂಮಿಯಾಗಿದೆ.
 (B)ಬಂಜಾರ ಜಮೀನುಗಳು ಅಂದರೆ, ಸರಕಾರಕ್ಕೆ ಉತ್ಪನ್ನದ ಪಾಲು ಪಾವತಿಗಾಗಿ ಹೊಂದಿರುವ ಜಮೀನುಗಳು
 (C)ಶ್ರಯಾ ಬಾಡಿಗೆದಾರರ ವ್ಯವಸ್ಥೆಯನ್ನು ಮೂರರಿಂದ ನಾಲ್ಕು ವರ್ಷಗಳ ವರೆಗೆ ಕಂದಾಯ ಪಾವತಿಗಾಗಿ ರೈಟ್ಸನಿಂದ ನಡೆಸಲಾಯಿತು, ನಂತರ ಮೌಲ್ಯ ಮಾಪನವನ್ನು ವಿಧಿಸಲಾಯಿತು.
 (D)ಜೋಡಿ ಜಮೀನುಗಳು ಟಿಪ್ಪು ಸುಲ್ತಾನ್ ನಿಂದ ವಶಪಡಿಸಿಕೊಂಡ ಇನಾಮ್ಗಳು ಆದರೆ ಈಗ ಇನಾಮ್ ದಾರನಿಗೆ ಅನುಕೂಲಕರವಾದ ಬಾಡಿಗೆಯನ್ನು ಪಾವತಿಸಿದ ನಂತರ.
 ಸರಿಯಾದ ಉತ್ತರವನ್ನು ಆರಿಸಿ:
 (1)A, B, C, D
 (2)A, B ಮತು D
 (3)C ಮತ್ತು D
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) A, B, C, D


93.ಭಾರತದಲ್ಲಿ ಸಾಧಿಸಲಾದ ಹಸಿರು ಕ್ರಾಂತಿಯು ಯಾವ ದೇಶಗಳ ಯಶಸ್ಸಿನ ಮಾದರಿಯಾಗಿದೆ
 (1)ಚೈನಾ, ಕ್ಯೂಬಾ
 (2)ಕ್ಯೂಬಾ, ತೈವಾನ್
 (3)ಮೆಕ್ಸಿಕೋ, ಅಮೇರಿಕ
 (4)ಮೆಕ್ಸಿಕೋ, ತೈವಾನ್
CORRECT ANSWER

(3) ಮೆಕ್ಸಿಕೋ, ಅಮೇರಿಕ


94.ಎ, ಬಿ, ಸಿ, ಡಿ, ಇ, ಎಫ್ ಮತ್ತು ಜಿ ಕುಟುಂಬದ ಏಳು ಸದಸ್ಯರು ಎ ಯು ಬಿ ನ ತಾಯಿ, ಅವರು ಡಿ ಅವರ ಪತಿ. ಎಫ್ ರವರು ಸಿ ಅವರ ಪೋಷಕರಲ್ಲಿ ಒಬ್ಬರ ಸಹೋದರ . ಡಿ ಯು ಇ ನ ಸೊಸೆಯಾಗಿದ್ದಾರೆ ಮತ್ತು ಅವರಿಗೆ ಒಡಹುಟ್ಟಿದವರಲ್ಲ, ಎಫ್ ಮತ್ತು ಜಿ ವಿವಾಹಿತ ದಂಪತಿಗಳಾಗಿದ್ದಾರೆ, ಎ ಗೆ ಜಿ ಯು ಹೇಗೆ ಸಂಬಂಧಿಸಿದ್ದಾರೆ?,
 (1)ಸೋದರ ಸಂಬಂಧಿ
 (2)ನಾದಿನಿ
 (3)ಸಹೋದರಿ
 (4)ಸೊಸೆ
CORRECT ANSWER

(4) ಸೊಸೆ


95.ಕರ್ನಾಟಕ ಆರೋಗ್ಯ ಇಲಾಖೆಯು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಅಡಿಯಲ್ಲಿ ಎಲ್ಲಾ ಆರೋಗ್ಯ ವೃತ್ತಿ ಪರರ ಡೇಟಾ ಬೇಸ್ನ್ನು ಕಂಪೈಲ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಆನ್ಲೈನ್ ಡೇಟಾ ಬೇಸ್ ಫೋರ್ಟಲ್ನ್ನು ಅಭಿವೃದ್ಧಿ ಪಡಿಸಿದವರು
 (1)ಬೆಂಗಳೂರು ವೈದ್ಯಕೀಯ ಕಾಲೇಜು
 (2)ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ
 (3)ಆಯುಷ್ ಸಚಿವಾಲಯ
 (4)ಭಾರತೀಯ ವಿಜ್ಞಾನ ಸಂಸ್ಥೆ
CORRECT ANSWER

(2) ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ


96.ಕೆಳಗೆ ಕೊಟ್ಟಿರುವ ಜೋಡಿಗಳಲ್ಲಿ ಯಾವುದು ಸರಿಯಾಗಿದೆ?
 (A)ಜಿ. ಕೆ. ವೀರೇಶ್ ಸಮಿತಿ – ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಕಾರಣವನ್ನು ತಿಳಿಯಲು ತನಿಖೆ ನಡೆಸಿದೆ.
 (B)ಡಾ. ಟಿ. ಎನ್. ಪ್ರಕಾಶ್ ಕಮ್ಮರಡಿ – ಕರ್ನಾಟಕ ಕೃಷಿ ಬೆಲೆ ಆಯೋಗ,
 (C)ಎಸ್. ವಿ. ರಂಗನಾಥ್, I.A.S., – ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನುಷ್ಟಾನದ ಕಾರ್ಯಪಡೆ.
 (D)ಶ್ರೀ . ಪ್ರಮೋದ ಹೆಗ್ಡೆ – ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿ
 ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
 (1)A ಮತ್ತು C ಮಾತ್ರ
 (2)A ಮತ್ತು D ಮಾತ್ರ
 (3)B, C ಮತ್ತು D ಮಾತ್ರ
 (4)ಮೇಲಿನ ಎಲ್ಲವೂ
CORRECT ANSWER

(4) ಮೇಲಿನ ಎಲ್ಲವೂ


97.ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆಯು ಈ ಸಮಸ್ಯೆಯನ್ನು ಉದ್ದೇಶಿಸಿದೆ:
 (1)ಮಹಿಳೆಯರ ಕೌಟುಂಬಿಕ ದೌರ್ಜನ್ಯ ಮತ್ತು ಅವರ ಶಿಕ್ಷಣ
 (2)ಮಕ್ಕಳ ಲಿಂಗಾನುಪಾತದಲ್ಲಿ ಕುಸಿತ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಶಕ್ತಗೊಳಿಸುವುದು.
 (3)ಶಾಲೆ ಮತ್ತು ಕ್ಯಾಂಪಸ್ಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ.
 (4)ಮೇಲಿನವು ಯಾವುದೂ ಅಲ್ಲ
CORRECT ANSWER

(2) ಮಕ್ಕಳ ಲಿಂಗಾನುಪಾತದಲ್ಲಿ ಕುಸಿತ ಮತ್ತು ಹೆಣ್ಣು ಮಗುವಿನ ಶಿಕ್ಷಣವನ್ನು ಶಕ್ತಗೊಳಿಸುವುದು.


98.ಹಣದುಬ್ಬರಕ್ಕೆ ಸಂಬಂಧಿಸಿದ ಈ ಕೆಳಕಂಡ ಹೇಳಿಕೆ ಯಾವುದು ಸರಿ ಎಂಬುದನ್ನು ಸೂಕ್ತವಾದ ಸಂಕೇತ ಬಳಸಿ ಉತ್ತರಿಸಿ.
 (i)ಸಾಮಾನ್ಯ ಬೆಲೆಗಳ ಮಟ್ಟದಲ್ಲಿ ನಿರಂತರ ಏರಿಕೆ
 (ii)ಬೆಲೆ ಮಟ್ಟದಲ್ಲಿನ ಏರಿಕೆಯ ಜೊತೆಗೆ ಹಣದ ಮೌಲ್ಯವೂ ಏರುತ್ತದೆ.
 (iii)ಬೆಲೆ ಮಟ್ಟದಲ್ಲಿನ ಏರಿಕೆಯ ಜೊತೆಗೆ ಹಣದ ಮೌಲ್ಯ ಕುಸಿಯುತ್ತದೆ
 ಸಂಕೇತಗಳು
 (1)i ಮಾತ್ರ ಸರಿ
 (2)i, ii ಮತ್ತು iii ಸರಿ
 (3)i, iii ಮಾತ್ರ ಸರಿ
 (4)ii ಮಾತ್ರ ಸರಿ
CORRECT ANSWER

(3) i, iii ಮಾತ್ರ ಸರಿ


99.ಸತ್ಯ ಶೋಧಕ ಸಮಾಜ ಚಳುವಳಿಯನ್ನು ಆರಂಭಿಸಿದವರು ಯಾರು?
 (1)ಸ್ವಾಮಿ ದಯಾನಂದ ಸರಸ್ವತಿ
 (2)ರಾಜಾರಾಮ್ ಮೋಹನ್ ರಾಯ್
 (3)ಈಶ್ವರ ಚಂದ್ರ ವಿದ್ಯಾಸಾಗರ
 (4)ಜ್ಯೋತಿಬಾ ಫುಲೆ
CORRECT ANSWER

(4) ಜ್ಯೋತಿಬಾ ಫುಲೆ


100.ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ 2022 ರಲ್ಲಿ ಅಮೃತ ನಗರೋತ್ಥಾನ ಯೋಜನೆಯನ್ನು ಯಾವ ಸರಕಾರ ಪೂರ್ಣ ಜವಾಬ್ದಾರಿಯೊಂದಿಗೆ ಜಾರಿಗೊಳಿಸಿದೆ?
 (1)ರಾಜ್ಯ ಮತ್ತು ಕೇಂದ್ರ ಸರಕಾರ
 (2)ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು
 (3)ರಾಜ್ಯ ಸರಕಾರ
 (4)ಕೇಂದ್ರ ಸರಕಾರ
CORRECT ANSWER

(2) ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment