Welcome to ALL IN ONE Education portal

Join us on Telegram

Join Now

Join us on Whatsapp

Join Now

Police Constable Previous Paper 16-11-2014

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ

 

1. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
  (a) ಯಂತ್ರಗಳ ಬಳಕೆ
  (b) ನಗರ ಯೋಜನೆ
  (c) ಯುದ್ಧಕಲೆ
  (d) ಇದ್ಯಾವುದೂ ಅಲ್ಲ

CORRECT ANSWER

(b) ನಗರ ಯೋಜನೆ


2. ಜೈನ ಧರ್ಮದ ಮೊತ್ತ ಮೊದಲ ತೀರ್ಥಂಕರ ಯಾರು?
  (a) ಮಹಾವೀರ
  (b) ಪಾರ್ಶ್ವನಾಥ
  (c) ವೃಷಭನಾಥ
  (d) ಮೇಲ್ಕಂಡ ಯಾರೂ ಅಲ್ಲ
CORRECT ANSWER

(c) ವೃಷಭನಾಥ


3. ಬೌದ್ಧಧರ್ಮವನ್ನು ಹರಡಲು ಆಫ್‌ಘಾನಿಸ್ತಾನ, ಬರ್ಮಾ, ಶ್ರೀಲಂಕಾ ಮತ್ತು ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ ದೊರೆ ಯಾರು?
  (a) ಚಂದ್ರಗುಪ್ತ ಮೌರ್ಯ
  (b) ಬಿಂದುಸಾರ
  (c) ಹರ್ಷವರ್ಧನ
  (d) ಅಶೋಕ
CORRECT ANSWER

(d) ಅಶೋಕ


4. ಪ್ರಾಚೀನ ಭಾರತದ ಶ್ರೇಷ್ಠ ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ ಯಾರು?
  (a) ಅಮರಸಿಂಹ
  (b) ಆರ್ಯಭಟ
  (c) ವಿಷ್ಣುಶರ್ಮ
  (d) ಮೇಲ್ಕಂಡ ಯಾರೂ ಅಲ್ಲ
CORRECT ANSWER

(b) ಆರ್ಯಭಟ


5. __________ರವರು ವೃತ್ತಿ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತನಾಮರಾಗಿದ್ದಾರೆ.
  (a) ಮಾಸ್ಟರ್ ಹಿರಣಯ್ಯ
  (b) ಜಟ್ಟಿ ತಾಯಮ್ಮ
  (c) ಕೋಲಾರ ಕಿಟ್ಟಪ್ಪ
  (d) ಶಾಂತರಾವ್
CORRECT ANSWER

(a) ಮಾಸ್ಟರ್ ಹಿರಣಯ್ಯ


6. ಈ ಕೆಳಕಂಡವರಲ್ಲಿ ಯಾರು ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕರಾಗಿರುತ್ತಾರೆ?
  (a) ಸುಬ್ಬರಾವ್
  (b) ನಾಗಾಭರಣ
  (c) ರಾಜಣ್ಣ
  (d) ವೆಂಕಟಪ್ಪ
CORRECT ANSWER

(b) ನಾಗಾಭರಣ


7. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ವ್ಯಕ್ತಿಯು ಕ್ರಾಂತಿಕಾರಿ ಆಗಿರಲಿಲ್ಲ?
  (a) ಭಗತ್‌ಸಿಂಗ್‌
  (b) ರಾಜಗುರು
  (c) ಸುಖದೇವ್
  (d) ದಾದಾಭಾಯ್ ನವರೋಜಿ
CORRECT ANSWER

(d) ದಾದಾಭಾಯ್ ನವರೋಜಿ


8. ಗಾಂಧೀಜಿಯವರ ಪ್ರಸಿದ್ಧ ‘ಉಪ್ಪಿನ ಸತ್ಯಾಗ್ರಹ’ ಅಥವಾ ‘ದಂಡಿ ಸತ್ಯಾಗ್ರಹ’ವು ಯಾವ ವರ್ಷ ಆರಂಭವಾಯಿತು?
  (a) 1930
  (b) 1942
  (c) 1919
  (d) 1940
CORRECT ANSWER

(a) 1930


9. ಸುಭಾಷ್‌ಚಂದ್ರ ಬೋಸ್‌ರವರು ____________ ಎಂದು ಪ್ರಖ್ಯಾತರಾಗಿದ್ದರು.
  (a) ರಾಜಾಜಿ
  (b) ನೇತಾಜಿ
  (c) ಮಹಾತ್ಮ
  (d) ಗುರೂಜಿ
CORRECT ANSWER

(b) ನೇತಾಜಿ


10. ಬಾಂಬೆ ಶಾಸನಸಭೆಗೆ ರಾಜೀನಾಮೆ ನೀಡಿ, ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಒತ್ತಾಯಿಸಿ ಆಮರಣಾಂತ ಉಪವಾಸವನ್ನು ಆರಂಭಿಸಿದವರು ಯಾರು?
  (a) ಎಸ್. ನಿಜಲಿಂಗಪ್ಪ
  (b) ಆಲೂರು ವೆಂಕಟರಾಯರು
  (c) ಅಂದಾನಪ್ಪ ದೊಡ್ಡಮೇಟಿ
  (d) ಡಿ. ದೇವರಾಜ್ ಅರಸು
CORRECT ANSWER

(c) ಅಂದಾನಪ್ಪ ದೊಡ್ಡಮೇಟಿ


11. ಈ ಕೆಳಗಿನವುಗಳಲ್ಲಿ ಯಾವುದು ವಾಣಿಜ್ಯ ಬೆಳೆ?
  (a) ರಾಗಿ
  (b) ಗೋಧಿ
  (c) ರಬ್ಬರ್
  (d) ಅಕ್ಕಿ
CORRECT ANSWER

(c) ರಬ್ಬರ್


12. ಈ ಕೆಳಗಿನವುಗಳಲ್ಲಿ ಯಾವುದು ಅಣು ಖನಿಜ?
  (a) ಅಭ್ರಕ
  (b) ಹೆಮಟೈಟ್
  (c) ಮ್ಯಾಗ್ನಟೈಟ್
  (d) ಯುರೇನಿಯಂ
CORRECT ANSWER

(d) ಯುರೇನಿಯಂ


13. ಮರ್ಮಗೋವಾ ಬಂದರು ಯಾವ ರಾಜ್ಯದಲ್ಲಿದೆ?
  (a) ಗೋವಾ
  (b) ಗುಜರಾತ್
  (c) ಮಹಾರಾಷ್ಟ್ರ
  (d) ಕರ್ನಾಟಕ
CORRECT ANSWER

(a) ಗೋವಾ


14. ಪ್ರಪಂಚದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶ ಯಾವುದು?
  (a) ಚೀನಾ
  (b) ಬ್ರೆಜಿಲ್
  (c) ನೇಪಾಳ
  (d) ಶ್ರೀಲಂಕಾ
CORRECT ANSWER

(b) ಬ್ರೆಜಿಲ್


15. 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ
  (a) 121 ಕೋಟಿ
  (b) 131 ಕೋಟಿ
  (c) 111 ಕೋಟಿ
  (d) 140 ಕೋಟಿ
CORRECT ANSWER

(a) 121 ಕೋಟಿ


16. ನೈರುತ್ಯ ಮಾನ್‌ಸೂನ್‌ ಮಳೆಗಾಲ __________ ಅವಧಿಯಲ್ಲಿ ಬರುತ್ತದೆ.
  (a) ಮಾರ್ಚ್‌ನಿಂದ ಮೇ
  (b) ಡಿಸೆಂಬರ್‌ನಿಂದ ಫೆಬ್ರವರಿ
  (c) ಅಕ್ಟೋಬರ್‌ನಿಂದ ನವೆಂಬರ್
  (d) ಜೂನ್‌ನಿಂದ ಸೆಪ್ಟೆಂಬರ್
CORRECT ANSWER

(d) ಜೂನ್‌ನಿಂದ ಸೆಪ್ಟೆಂಬರ್


17. ಯಾವ ಮಣ್ಣು ಹತ್ತಿ ಬೆಳೆಗೆ ಬಹು ಸೂಕ್ತವಾಗಿರುತ್ತದೆ?
  (a) ಮೆಕ್ಕಲು ಮಣ್ಣು
  (b) ಕಪ್ಪು ಮಣ್ಣು
  (c) ಕೆಂಪು ಮಣ್ಣು
  (d) ಜಂಬಿಟ್ಟಿಗೆ ಮಣ್ಣು
CORRECT ANSWER

(b) ಕಪ್ಪು ಮಣ್ಣು


18. ಕರ್ನಾಟಕದ ಯಾವ ಪ್ರದೇಶವನ್ನು ‘ಯುನೆಸ್ಕೋ’ (UNESCO) ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲಾಗಿದೆ?
  (a) ಬಂಡೀಪುರ ಅಭಯಾರಣ್ಯ
  (b) ನಾಗರಹೊಳೆ ರಾಷ್ಟ್ರೀಯ ಉದ್ಯಾನ
  (c) ಪಶ್ಚಿಮ ಘಟ್ಟಗಳು
  (d) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
CORRECT ANSWER

(c) ಪಶ್ಚಿಮ ಘಟ್ಟಗಳು


19. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
  ಎ. ಕಾಜಿರಂಗ ನ್ಯಾಷನಲ್ ಪಾರ್ಕ್ I. ಪಶ್ಚಿಮ ಬಂಗಾಲ
  ಬಿ. ಸುಂದರ್‌ಬನ್‌ II. ಗುಜರಾತ್
  ಸಿ. ಹಜಾರಿಬಾಗ್ ನ್ಯಾಷನಲ್ ಪಾರ್ಕ್ III. ಅಸ್ಸಾಂ
  ಡಿ. ಗಿರ್ ನ್ಯಾಷನಲ್ ಪಾರ್ಕ್ IV. ಬಿಹಾರ
  (a) ಎ-I, ಬಿ-II, ಸಿ-III, ಡಿ-IV
  (b) ಎ-II, ಬಿ-IV, ಸಿ-I, ಡಿ-III
  (c) ಎ-IV, ಬಿ-III, ಸಿ-II, ಡಿ-I
  (d) ಎ-III, ಬಿ-I, ಸಿ-IV, ಡಿ-II
CORRECT ANSWER

(d) ಎ-III, ಬಿ-I, ಸಿ-IV, ಡಿ-II


20. ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶ
  (a) ನೀರಾವರಿ ಸೌಲಭ್ಯವನ್ನು ಒದಗಿಸುವುದು
  (b) ಜಲ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು
  (c) ನದಿಗಳ ಪ್ರವಾಹವನ್ನು ನಿಯಂತ್ರಿಸುವುದು
  (d) ಮೇಲ್ಕಂಡ ಎಲ್ಲವೂ
CORRECT ANSWER

(d) ಮೇಲ್ಕಂಡ ಎಲ್ಲವೂ


21. __________ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ ಗೋದಾವರಿವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
  (a) ಕಾಳಿದಾಸ
  (b) ಶ್ರೀವಿಜಯ
  (c) ಪಂಪ
  (d) ರನ್ನ
CORRECT ANSWER

(b) ಶ್ರೀವಿಜಯ


22. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೈಜ್ಞಾನಿಕ ಪರೀಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ?
  (a) ಕಾರ್ಬನ್ 14 ಮತ್ತು ಪೊಟ್ಯಾಷಿಯಂ
  (b) ಕಾರ್ಬನ್ 25 ಮತ್ತು ಯುರೇನಿಯಂ
  (c) ನ್ಯೂಕ್ಲಿಯರ್ ಪರೀಕ್ಷಾ ವಿಧಾನ
  (d) ಲೇಸರ್ ಪರೀಕ್ಷಾ ವಿಧಾನ
CORRECT ANSWER

(a) ಕಾರ್ಬನ್ 14 ಮತ್ತು ಪೊಟ್ಯಾಷಿಯಂ


23. ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು?
  (a) ಗಜಲ್
  (b) ಕರ್ನಾಟಕ ಸಂಗೀತ
  (c) ಹಿಂದೂಸ್ಥಾನಿ ಸಂಗೀತ
  (d) ಕವಾಲಿ
CORRECT ANSWER

(c) ಹಿಂದೂಸ್ಥಾನಿ ಸಂಗೀತ


24. ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
  ಎ. ಚಾಂದ್‌ಬರ್ದಾಯಿ I. ವಿಕ್ರಮಾಂಕದೇವಚರಿತ
  ಬಿ. ಬಿಲ್ಹಣ II. ಅರ್ಥಶಾಸ್ತ್ರ
  ಸಿ. ಕಲ್ಹಣ III. ಪೃಥ್ವೀರಾಜರಾಸೋ
  ಡಿ. ಕೌಟಿಲ್ಯ IV. ರಾಜತರಂಗಿಣಿ
  (a) ಎ-I, ಬಿ-II, ಸಿ-III, ಡಿ-IV
  (b) ಎ-II, ಬಿ-IV, ಸಿ-I, ಡಿ-III
  (c) ಎ-IV, ಬಿ-III, ಸಿ-II, ಡಿ-I
  (d) ಎ-III, ಬಿ-I, ಸಿ-IV, ಡಿ-II
CORRECT ANSWER

(d) ಎ-III, ಬಿ-I, ಸಿ-IV, ಡಿ-II


25. ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
  (a) ಬಾದಾಮಿ
  (b) ಮಸ್ಕಿ
  (c) ರಾಯಚೂರು ದೋ-ಆಬ್
  (d) ಬಳ್ಳಾರಿ
CORRECT ANSWER

(a) ಬಾದಾಮಿ


26. ಖಾಲಿ ಜಾಗ ಭರ್ತಿ ಮಾಡಿ :
  (a) 32
  (b) 44
  (c) 24
  (d) 50
CORRECT ANSWER

(c) 24


27. 10 ಜನರು 20 ಮನೆಗಳನ್ನು 30 ದಿನಗಳಲ್ಲಿ ಪೂರೈಸಿದರೆ, 5 ಜನರು 10 ಮನೆಗಳನ್ನು ನಿರ್ಮಿಸಲು ಎಷ್ಟು ದಿನ ಬೇಕಾಗುವುದು?
  (a) 15 ದಿನಗಳು
  (b) 10 ದಿನಗಳು
  (c) 20 ದಿನಗಳು
  (d) 30 ದಿನಗಳು
CORRECT ANSWER

(d) 30 ದಿನಗಳು


28. ‘X’(ಎಕ್ಸ್)ಎಂಬಾತನು ಗಣಿತದಲ್ಲಿ ಪಡೆದ ಅಂಕಗಳ (ಮಾರ್ಕ್ಸ್ ಗಳಲ್ಲಿ) ಮೂರನೇ ಒಂದು ಭಾಗದಷ್ಟು ಅಂಕಗಳನ್ನು ಹಿಂದಿ ಭಾಷೆಯಲ್ಲಿ ಪಡೆದಿರುತ್ತಾನೆ. ಅವನು ಈ ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ ಒಟ್ಟು ಅಂಕಗಳು 120 ಆಗಿದ್ದಲ್ಲಿ, ಆತನು ಹಿಂದಿ ಭಾಷೆಯಲ್ಲಿ ಪಡೆದ ಅಂಕಗಳೆಷ್ಟು?
  (a) 30
  (b) 50
  (c) 40
  (d) 60
CORRECT ANSWER

(a) 30


29. ಬಿಟ್ಟ ಸ್ಥಳ ಭರ್ತಿ ಮಾಡಿ.
3 × 3 = 18, 4 × 4 = 32, 5 × 5 = 50 ಆದರೆ 6 × 6 =
  (a) 36
  (b) 72
  (c) 12
  (d) 24
CORRECT ANSWER

(b) 72


30. ಸಾಂಕೇತಿಕ ಭಾಷೆಯಲ್ಲಿ A ಯು C, C ಯು E ಮತ್ತು D ಯು F ಆದರೆ X ಯು
  (a) Y
  (b) W
  (c) Z
  (d) V
CORRECT ANSWER

(c) Z


31. ಸುನೀತಾ ವಿಲಿಯಮ್ಸ್‌ರವರು ಯಾವ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿದ್ದಾರೆ?
  (a) ಸಾರ್ಕ್
  (b) ಐ.ಐ.ಎಸ್.ಸಿ.
  (c) ನಾಸಾ
  (d) ಟಾಟಾ ಇನ್ಸ್ಟಿಟ್ಯೂಟ್
CORRECT ANSWER

(c) ನಾಸಾ


32. UNESCO ವನ್ನು ಬಿಡಿಸಿ ಬರೆಯಿರಿ.
  (a) ಯುನೈಟೆಡ್ ನೇಷನ್ಸ್ ಎಜುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್
  (b) ಯುನೈಟೆಡ್ ನೇಷನ್ಸ್ ಇಂಜಿನಿಯರಿಂಗ್ ಸ್ಟೂಡೆಂಟ್ಸ್ ಕಲ್ಚರಲ್ ಆರ್ಗನೈಜೇಷನ್
  (c) ಯುನೈಟೆಡ್ ನೇಷನ್ಸ್ ಎಕನಾಮಿಕ್ ಮತ್ತು ಸೈಂಟಿಫಿಕ್ ಕಲ್ಚರಲ್ ಆರ್ಗನೈಜೇಷನ್
  (d) ಇದ್ಯಾವುದೂ ಅಲ್ಲ
CORRECT ANSWER

(a) ಯುನೈಟೆಡ್ ನೇಷನ್ಸ್ ಎಜುಕೇಷನಲ್ ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್


33. ವಿಮಾನಗಳಲ್ಲಿ ಕಂಡುಬರುವ ‘ಬ್ಲಾಕ್‌ಬಾಕ್ಸ್‌’ (Black Box)ನ ನಿಜವಾದ ಬಣ್ಣ ಯಾವುದು?
  (a) ಬಿಳಿ
  (b) ಹಸಿರು
  (c) ಕಿತ್ತಳೆ ಬಣ್ಣ
  (d) ಕಪ್ಪು
CORRECT ANSWER

(c) ಕಿತ್ತಳೆ ಬಣ್ಣ


34. ಚೀನಾ ದೇಶದ ಅಧಿಕೃತ ಭಾಷೆ ಯಾವುದು?
  (a) ಸ್ಪಾನಿಷ್
  (b) ಮಂಡಾರಿನ್
  (c) ಇಂಗ್ಲೀಷ್
  (d) ನೇಪಾಳಿ
CORRECT ANSWER

(b) ಮಂಡಾರಿನ್


35. ರಾಫೆಲ್ ನಡಾಲ್ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
  (a) ಟೆನಿಸ್
  (b) ಕ್ರಿಕೆಟ್
  (c) ಫುಟ್‌ಬಾಲ್‌
  (d) ಹಾಕಿ
CORRECT ANSWER

(a) ಟೆನಿಸ್


36. ಭಾರತದ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?
  (a) 18 ವರ್ಷ
  (b) 16 ವರ್ಷ
  (c) 21 ವರ್ಷ
  (d) 14 ವರ್ಷ
CORRECT ANSWER

(d) 14 ವರ್ಷ


37. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
  (a) 19ನೆಯ ವಿಧಿ
  (b) 20ನೆಯ ವಿಧಿ
  (c) 17ನೆಯ ವಿಧಿ
  (d) 21ನೆಯ ವಿಧಿ
CORRECT ANSWER

(c) 17ನೆಯ ವಿಧಿ


38. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
  (a) ಪಾಕಿಸ್ತಾನ
  (b) ಆಫ್‌ಘಾನಿಸ್ತಾನ
  (c) ನೇಪಾಳ
  (d) ಚೀನಾ
CORRECT ANSWER

(d) ಚೀನಾ


39. ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ ____________ರಿಂದ ಪ್ರಾರಂಭವಾಗುತ್ತದೆ.
  (a) ಮೌಂಟ್ ಎವರೆಸ್ಟ್
  (b) ಪಾಮಿರ್ ಗ್ರಂಥಿ
  (c) ಕಾಂಚನಜುಂಗ
  (d) ಇದ್ಯಾವುದೂ ಅಲ್ಲ
CORRECT ANSWER

(b) ಪಾಮಿರ್ ಗ್ರಂಥಿ


40. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _____________ಇದೆ.
  (a) ಅರಬ್ಬೀ ಸಮುದ್ರ
  (b) ಅಟ್ಲಾಂಟಿಕ್ ಸಾಗರ
  (c) ಬಂಗಾಳ ಕೊಲ್ಲಿ
  (d) ಹಿಂದೂ ಮಹಾಸಾಗರ
CORRECT ANSWER

(a) ಅರಬ್ಬೀ ಸಮುದ್ರ


41. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
  (a) ರಾಷ್ಟ್ರಕೂಟರು
  (b) ಚೋಳರು
  (c) ಪಲ್ಲವರು
  (d) ಚಾಲುಕ್ಯರು
CORRECT ANSWER

(d) ಚಾಲುಕ್ಯರು


42. ಹೊಯ್ಸಳರ ರಾಜಧಾನಿ ಯಾವುದು?
  (a) ಮೈಸೂರು
  (b) ಹಂಪಿ
  (c) ದ್ವಾರಸಮುದ್ರ
  (d) ಬಾದಾಮಿ
CORRECT ANSWER

(c) ದ್ವಾರಸಮುದ್ರ


43. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
  (a) ಮಮ್ತಾಜ್ ಮಹಲ್
  (b) ನೂರ್ ಜಹಾನ್
  (c) ಜಹನಾರ ಬೇಗಂ
  (d) ರಜಿಯಾ ಬೇಗಂ
CORRECT ANSWER

(d) ರಜಿಯಾ ಬೇಗಂ


44. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
  (a) ಜಲಾಲ್-ಉದ್-ದೀನ್ ಮಹಮದ್
  (b) ಹುಮಾಯೂನ್
  (c) ಬೈರಾಂಖಾನ್
  (d) ದಿವಾನ್-ಇ-ಆಲಿ
CORRECT ANSWER

(a) ಜಲಾಲ್-ಉದ್-ದೀನ್ ಮಹಮದ್


45. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
  (a) ಸರ್ ಮಿರ್ಜಾ ಇಸ್ಮಾಯಿಲ್
  (b) ಜೇಮ್ಸ್‌ಗೋರ್ಡನ್‌
  (c) ಸರ್ ಎಂ. ವಿಶ್ವೇಶ್ವರಯ್ಯ
  (d) ದಿವಾನ್ ರಂಗಾಚಾರ್ಲು
CORRECT ANSWER

(c) ಸರ್ ಎಂ. ವಿಶ್ವೇಶ್ವರಯ್ಯ


46. A × B = C ಆಗಿದ್ದು, A = 7 ಮತ್ತು C = 0 ಆದರೆ, B =
  (a) 6
  (b) 7
  (c) 1
  (d) 0
CORRECT ANSWER

(d) 0


47. ಈ ಸರಣಿಯ ಮುಂದಿನ ಸಂಖ್ಯೆಯನ್ನು ಬರೆಯಿರಿ
5, 12, 4, 13, 3, 14, ___
  (a) 15
  (b) 2
  (c) 1
  (d) 6
CORRECT ANSWER

(b) 2


48. ಪೊಕ್ರಾನ್ ಯಾವ ರಾಜ್ಯದಲ್ಲಿದೆ?
  (a) ಮಧ್ಯಪ್ರದೇಶ
  (b) ಹರಿಯಾಣ
  (c) ರಾಜಸ್ಥಾನ
  (d) ಬಿಹಾರ
CORRECT ANSWER

(c) ರಾಜಸ್ಥಾನ


49. ನವೆಂಬರ್ 2013ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್‌ರವರಿಗೆ ಯಾವ ಪ್ರಶಸ್ತಿ ಲಭಿಸಿತು?
  (a) ಖೇಲ್ ರತ್ನ
  (b) ಭಾರತ ರತ್ನ
  (c) ನೊಬೆಲ್
  (d) ಅಶೋಕ ಚಕ್ರ
CORRECT ANSWER

(b) ಭಾರತ ರತ್ನ


50. ಬಯೋಕಾನ್ ಸಂಸ್ಥೆಯ ಸಂಸ್ಥಾಪಕರು ಯಾರು?
  (a) ಕಿರಣ್ ಮಜುಂದಾರ್ ಷಾ
  (b) ಅಜೀಂ ಪ್ರೇಮ್‌ಜಿ
  (c) ನಾರಾಯಣಮೂರ್ತಿ
  (d) ಸುಧಾ ಮೂರ್ತಿ
CORRECT ANSWER

(a) ಕಿರಣ್ ಮಜುಂದಾರ್ ಷಾ


51. ಗಡಿ ಭದ್ರತಾ ಪಡೆ (BSF) ಇದೊಂದು
  (a) ಕೇಂದ್ರೀಯ ಪೊಲೀಸ್ ಪಡೆ
  (b) ವಿದ್ಯಾರ್ಥಿ ಸಂಘಟನೆ
  (c) ಸ್ವಯಂ ಸೇವಾ ಸಂಸ್ಥೆ
  (d) ಇದ್ಯಾವುದೂ ಅಲ್ಲ
CORRECT ANSWER

(a) ಕೇಂದ್ರೀಯ ಪೊಲೀಸ್ ಪಡೆ


52. ಗ್ರಾಮೀಣ ಪ್ರದೇಶಗಳಲ್ಲಿ ____________ ಒಂದು ಸ್ವಚ್ಛ, ಮಾಲಿನ್ಯರಹಿತ ಹಾಗೂ ಅಗ್ಗವಾದ ಶಕ್ತಿಯ ಆಕರವಾಗಿದೆ.
  (a) ಬಯೋಗ್ಯಾಸ್
  (b) ಭಾರತ್ ಗ್ಯಾಸ್
  (c) ಇಂಡೇನ್ ಗ್ಯಾಸ್
  (d) ಇದ್ಯಾವುದೂ ಅಲ್ಲ
CORRECT ANSWER

(a) ಬಯೋಗ್ಯಾಸ್


53. ಶಬ್ದವನ್ನು ಅಳೆಯುವ ಮಾನಕ್ಕೆ ಏನೆಂದು ಕರೆಯುತ್ತಾರೆ?
  (a) ಸೆಲ್ಸಿಯಸ್
  (b) ಫ್ಯಾರನ್‌ಹೀಟ್‌
  (c) ಡೆಸಿಬಲ್
  (d) ಇದ್ಯಾವುದೂ ಅಲ್ಲ
CORRECT ANSWER

(c) ಡೆಸಿಬಲ್


54. ಈ ಕೆಳಗಿನವುಗಳಲ್ಲಿ ಯಾವುದು ಹಸಿರು ಮನೆ ಅನಿಲ ಆಗಿರುವುದಿಲ್ಲ?
  (a) ಕಾರ್ಬನ್ ಡೈಆಕ್ಸೈಡ್
  (b) ಮಿಥೇನ್
  (c) ನೈಟ್ರೋಜನ್ ಆಕ್ಸೈಡ್
  (d) ಆಮ್ಲಜನಕ
CORRECT ANSWER

(d) ಆಮ್ಲಜನಕ


55. ಅತಿ ಹೆಚ್ಚು ಕಾಲ ಬದುಕಬಲ್ಲ ಪ್ರಾಣಿ ಯಾವುದು?
  (a) ಆಮೆ
  (b) ಟುವಟಾರ
  (c) ಕುದುರೆ
  (d) ಆನೆ
CORRECT ANSWER

(a) ಆಮೆ


56. ಹೊಂದಿಸಿ ಬರೆಯಿರಿ :
  ಎ. ಅಲ್ಯುಮಿನಿಯಂ I. ಬಳ್ಳಾರಿ
  ಬಿ. ಕಬ್ಬಿಣ II. ಹಾಸನ
  ಸಿ. ಚಿನ್ನ III. ಬೆಳಗಾವಿ
  ಡಿ. ಕ್ರೋಮಿಯಂ IV. ರಾಯಚೂರು
  (a) ಎ-I, ಬಿ-II, ಸಿ-III, ಡಿ-IV
  (b) ಎ-II, ಬಿ-IV, ಸಿ-I, ಡಿ-III
  (c) ಎ-IV, ಬಿ-III, ಸಿ-II, ಡಿ-I
  (d) ಎ-III, ಬಿ-I, ಸಿ-IV, ಡಿ-II
CORRECT ANSWER

(d) ಎ-III, ಬಿ-I, ಸಿ-IV, ಡಿ-II


57. ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ಸಮಸ್ಯೆ ಉಂಟಾಗುತ್ತದೆ?
  (a) ಬೆನ್ನುನೋವು
  (b) ಸರಳ ಗಾಯಿಟರ್
  (c) ಆಸ್ತಮಾ
  (d) ಹೃದಯ ಸಂಬಂಧಿ ಕಾಯಿಲೆಗಳು
CORRECT ANSWER

(b) ಸರಳ ಗಾಯಿಟರ್


58. ಪಿಟ್ಯೂಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ?
  (a) ತಲೆ
  (b) ಗಂಟಲು
  (c) ಹೊಟ್ಟೆ
  (d) ಎದೆ
CORRECT ANSWER

(a) ತಲೆ


59. ಜೀವ ವಿಕಾಸ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು?
  (a) ಜೇಮ್ಸ್ ವ್ಯಾಟ್ಸನ್
  (b) ಫ್ರಾನ್ಸಿಸ್ ಕ್ರಿಕ್
  (c) ಚಾರ್ಲ್ಸ್ ಡಾರ್ವಿನ್
  (d) ಮೇಲ್ಕಂಡ ಯಾರೂ ಅಲ್ಲ
CORRECT ANSWER

(c) ಚಾರ್ಲ್ಸ್ ಡಾರ್ವಿನ್


60. ಭಾರತೀಯ ರಿಸರ್ವ್ ಬ್ಯಾಂಕ್(RBI)ನ ಈಗಿನ ಮುಖ್ಯಸ್ಥರು (Governor) ಯಾರು?
  (a) ಡಾ॥ ಮನಮೋಹನ್ ಸಿಂಗ್
  (b) ಡಾ॥ ರಘುರಾಮ್ ಜಿ. ರಾಜನ್
  (c) ಡಾ॥ ಸಿ. ರಂಗರಾಜನ್
  (d) ಡಾ॥ ಡಿ. ಸುಬ್ಬರಾವ್
CORRECT ANSWER

(b) ಡಾ॥ ರಘುರಾಮ್ ಜಿ. ರಾಜನ್


61. ಭಾರತದ ಸರ್ವೋಚ್ಛ ನ್ಯಾಯಾಲಯದ ಇಂದಿನ ಮುಖ್ಯ ನ್ಯಾಯಮೂರ್ತಿಗಳು ಯಾರು?
  (a) ಡಾ॥ ಮಂಜುಳಾ ಚೆಲ್ಲೂರ್
  (b) ಕೃಷ್ಣಮೂರ್ತಿ
  (c) ಆನಂದ ಭೈರಾ ರೆಡ್ಡಿ
  (d) ಹೆಚ್.ಎಲ್. ದತ್ತು
CORRECT ANSWER

(d) ಹೆಚ್.ಎಲ್. ದತ್ತು


62. ಭಾರತ ಸರ್ಕಾರದ ಇಂದಿನ ಹಣಕಾಸು ಸಚಿವರು ಯಾರು?
  (a) ಸದಾನಂದ ಗೌಡ
  (b) ಅರುಣ್ ಜೇಟ್ಲಿ
  (c) ರಾಜನಾಥ್ ಸಿಂಗ್
  (d) ನಿತಿನ್ ಗಡ್ಕರಿ
CORRECT ANSWER

(b) ಅರುಣ್ ಜೇಟ್ಲಿ


63. ಈ ಕೆಳಗೆ ಹೆಸರಿಸಿರುವ ಯಾವ ಕ್ರೀಡಾಪಟುವಿಗೆ 2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’ ಬಂದಿರುತ್ತದೆ?
  (a) ಸಿದ್ದಯ್ಯ
  (b) ಮುರಳೀಧರನ್
  (c) ಗಿರೀಶ್ ಹೆಚ್.ಎನ್.
  (d) ಬೋಪಯ್ಯ
CORRECT ANSWER

(c) ಗಿರೀಶ್ ಹೆಚ್.ಎನ್.


64. ‘ಲುಫ್ತಾನ್ಸಾ ಏರ್‌ಲೈನ್ಸ್‌’ ಯಾವ ದೇಶದ ವಿಮಾನಯಾನ ಸಂಸ್ಥೆ?
  (a) ಯುನೈಟೆಡ್ ಕಿಂಗ್‌ಡಮ್‌ (U.K.)
  (b) ಯುನೈಟೆಡ್ ಅರಬ್ ಎಮಿರೇಟ್ಸ್ (U.A.E.)
  (c) ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (U.S.A.)
  (d) ಜರ್ಮನಿ
CORRECT ANSWER

(d) ಜರ್ಮನಿ


65. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದವರು ಯಾರು?
  (a) ಚಾವುಂಡರಾಯ
  (b) ವಿಷ್ಣುವರ್ಧನ
  (c) ನರಸಿಂಹ
  (d) ಇಮ್ಮಡಿ ಪುಲಿಕೇಶಿ
CORRECT ANSWER

(a) ಚಾವುಂಡರಾಯ


66. ದ.ರಾ. ಬೇಂದ್ರೆಯವರ ಯಾವ ಕೃತಿಗೆ ‘ಜ್ಞಾನಪೀಠ ಪ್ರಶಸ್ತಿ’ ಲಭಿಸಿದೆ?
  (a) ತುಘಲಕ್
  (b) ನಾಕುತಂತಿ
  (c) ಮೂರುತಂತಿ
  (d) ಆಯ್ದ ಗೀತೆಗಳು
CORRECT ANSWER

(b) ನಾಕುತಂತಿ


67. 2014ನೇ ಸಾಲಿನ ‘ಏಷಿಯನ್ ಗೇಮ್ಸ್’ ಎಲ್ಲಿ ನಡೆಯಿತು?
  (a) ನವದೆಹಲಿ (ಭಾರತ)
  (b) ಟೋಕಿಯೊ (ಜಪಾನ್)
  (c) ಬೀಜಿಂಗ್ (ಚೀನಾ)
  (d) ಇಂಚಿಯಾನ್ (ದಕ್ಷಿಣ ಕೊರಿಯಾ)
CORRECT ANSWER

(d) ಇಂಚಿಯಾನ್ (ದಕ್ಷಿಣ ಕೊರಿಯಾ)


68. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪರವರ ಕಾವ್ಯನಾಮ ಯಾವುದು?
  (a) ಅಂಬಿಕಾತನಯದತ್ತ
  (b) ಕುವೆಂಪು
  (c) ಕಡಲತೀರದ ಭಾರ್ಗವ
  (d) ಜಾಣ
CORRECT ANSWER

(b) ಕುವೆಂಪು


69. ಈ ಕೆಳಗೆ ಹೆಸರಿಸಿರುವ ಯಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಲಭಿಸಿದೆ?
  (a) ಡಾ॥ ರಾಜ್‌ಕುಮಾರ್‌
  (b) ಲೀಲಾವತಿ
  (c) ನಂದನ್ ನಿಲೇಕಣಿ
  (d) ಮೇಲ್ಕಂಡ ಯಾರೂ ಅಲ್ಲ
CORRECT ANSWER

(a) ಡಾ॥ ರಾಜ್‌ಕುಮಾರ್‌


70. ಈ ಕೆಳಕಂಡ ಯಾವ ದೇಶಗಳಲ್ಲಿ 2015ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ನಡೆಯಲಿದೆ?
  (a) ಭಾರತ ಮತ್ತು ಪಾಕಿಸ್ತಾನ
  (b) ದಕ್ಷಿಣ ಆಫ್ರಿಕ ಮತ್ತು ಜಿಂಬಾಬ್ವೆ
  (c) ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
  (d) ಮೇಲ್ಕಂಡ ಯಾವುದೂ ಅಲ್ಲ
CORRECT ANSWER

(c) ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್


71. ವಿಶ್ವಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
  (a) ಲಂಡನ್ (ಯು.ಕೆ.)
  (b) ನವದೆಹಲಿ (ಭಾರತ)
  (c) ಪ್ಯಾರೀಸ್ (ಫ್ರಾನ್ಸ್)
  (d) ನ್ಯೂಯಾರ್ಕ್ (ಯು.ಎಸ್.ಎ.)
CORRECT ANSWER

(d) ನ್ಯೂಯಾರ್ಕ್ (ಯು.ಎಸ್.ಎ.)


72. ಭಾರತದ ಉಪ ರಾಷ್ಟ್ರಪತಿಯವರು _______________ ರವರಿಂದ ಆರಿಸಲ್ಪಡುತ್ತಾರೆ.
  (a) ಲೋಕಸಭೆ ಸದಸ್ಯರು
  (b) ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು
  (c) ರಾಜ್ಯಸಭೆ ಸದಸ್ಯರು
  (d) ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆ ಸದಸ್ಯರು
CORRECT ANSWER

(b) ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು


73. ಯಾರು ರಾಜ್ಯಸಭೆ ಮುಖ್ಯಸ್ಥರಾಗಿ (Chairman) ಕಾರ್ಯ ನಿರ್ವಹಿಸುತ್ತಾರೆ?
  (a) ರಾಷ್ಟ್ರಪತಿ
  (b) ಸ್ಪೀಕರ್
  (c) ಉಪ ರಾಷ್ಟ್ರಪತಿ
  (d) ಪ್ರಧಾನಮಂತ್ರಿ
CORRECT ANSWER

(c) ಉಪ ರಾಷ್ಟ್ರಪತಿ


74. ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ ವಯೋಮಾನ ____________ವರ್ಷಗಳು.
  (a) 21
  (b) 25
  (c) 18
  (d) 16
CORRECT ANSWER

(b) 25


75. ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
  (a) ಸ್ವಾತಂತ್ರ್ಯದ ಹಕ್ಕು
  (b) ಸಮಾನತೆಯ ಹಕ್ಕು
  (c) ನೌಕರಿಯ ಹಕ್ಕು
  (d) ಶೋಷಣೆಯ ವಿರುದ್ಧದ ಹಕ್ಕು
CORRECT ANSWER

(c) ನೌಕರಿಯ ಹಕ್ಕು


76. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
  (a) ಕೆಂಪೇಗೌಡ
  (b) ಕೃಷ್ಣದೇವರಾಯ
  (c) ಇಮ್ಮಡಿ ಪುಲಿಕೇಶಿ
  (d) ಕೃಷ್ಣರಾಜ ಒಡೆಯರ್
CORRECT ANSWER

(c) ಇಮ್ಮಡಿ ಪುಲಿಕೇಶಿ


77. ‘ರಾಜೀವ್‌ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
  (a) ಮಹಮದ್ ಅಜರುದ್ದೀನ್
  (b) ಸಚಿನ್ ತೆಂಡೂಲ್ಕರ್
  (c) ಲಿಯಾಂಡರ್ ಪೇಸ್
  (d) ವಿಶ್ವನಾಥನ್ ಆನಂದ್
CORRECT ANSWER

(d) ವಿಶ್ವನಾಥನ್ ಆನಂದ್


78. ಟಿಪ್ಪು ಸುಲ್ತಾನನು ಬ್ರಿಟಿಷರೊಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
  (a) 1782
  (b) 1799
  (c) 1800
  (d) 1823
CORRECT ANSWER

(b) 1799


79. ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
  (a) 1973
  (b) 1956
  (c) 1947
  (d) 1948
CORRECT ANSWER

(a) 1973


80. ‘ಗೋಲ್ಡನ್ ಚಾರಿಯೆಟ್’ ಎಂದು ______________ನ್ನು ಹೆಸರಿಸಲಾಗಿದೆ.
  (a) ಬಸ್ಸು
  (b) ಹಡಗು
  (c) ರೈಲು
  (d) ಮೇಲ್ಕಂಡ ಯಾವುದೂ ಅಲ್ಲ
CORRECT ANSWER

(c) ರೈಲು


81. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
  (a) ಎಸ್. ನಿಜಲಿಂಗಪ್ಪ
  (b) ಬಿ.ಡಿ. ಜತ್ತಿ
  (c) ದೇವರಾಜ ಅರಸ್
  (d) ಮೇಲ್ಕಂಡ ಯಾರೂ ಅಲ್ಲ
CORRECT ANSWER

(a) ಎಸ್. ನಿಜಲಿಂಗಪ್ಪ


82. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಏನೆಂದು ಮರು ನಾಮಕರಣ ಮಾಡಲಾಗಿದೆ?
  (a) ಕಂಠೀರವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
  (b) ಡಾ॥ ರಾಜ್‌ಕುಮಾರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
  (c) ಕೃಷ್ಣದೇವರಾಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
  (d) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
CORRECT ANSWER

(d) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ


83. ವಿಶ್ವ ಆರೋಗ್ಯ ಸಂಸ್ಥೆಯ (World Health Organization (WHO)) ಕೇಂದ್ರ ಸ್ಥಾನ ಎಲ್ಲಿದೆ?
  (a) ಜಿನೇವಾ (ಸ್ವಿಡ್ಜರ್‌ಲ್ಯಾಂಡ್‌)
  (b) ಇಸ್ಲಾಮಾಬಾದ್ (ಪಾಕಿಸ್ತಾನ)
  (c) ನ್ಯೂಯಾರ್ಕ್ (ಯು.ಎಸ್.ಎ.)
  (d) ಹೊಸ ದೆಹಲಿ (ಭಾರತ)
CORRECT ANSWER

(a) ಜಿನೇವಾ (ಸ್ವಿಡ್ಜರ್‌ಲ್ಯಾಂಡ್‌)


84. ರಕ್ತದೊತ್ತಡವನ್ನು ಅಳೆಯುವ ಉಪಕರಣ ಯಾವುದು?
  (a) ಸ್ಪೀಡೋಮೀಟರ್
  (b) ನ್ಯಾನೋಮೀಟರ್
  (c) ಆಸಿಲೋಸ್ಕೋಪ್
  (d) ಸ್ಪಿಗ್ಮೊಮಾನೋಮೀಟರ್
CORRECT ANSWER

(d) ಸ್ಪಿಗ್ಮೊಮಾನೋಮೀಟರ್


85. 1843ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಕನ್ನಡ ಪತ್ರಿಕೆ ಯಾವುದು?
  (a) ಸಂಯುಕ್ತ ಕರ್ನಾಟಕ
  (b) ಪ್ರಜಾವಾಣಿ
  (c) ಮಂಗಳೂರು ಸಮಾಚಾರ
  (d) ವಾರ್ತಾ ಭಾರತಿ
CORRECT ANSWER

(c) ಮಂಗಳೂರು ಸಮಾಚಾರ


86. ಇಸ್ರೋ ಸಂಸ್ಥೆಯ ಪ್ರಸಕ್ತ ಮುಖ್ಯಸ್ಥರು ಯಾರು?
  (a) ಕೆ. ರಾಧಾಕೃಷ್ಣನ್
  (b) ಎ.ಪಿ.ಜೆ. ಕಲಾಂ
  (c) ಸಿ.ಎನ್.ಆರ್. ರಾವ್
  (d) ಮಾಧವನ್ ನಾಯರ್
CORRECT ANSWER

(a) ಕೆ. ರಾಧಾಕೃಷ್ಣನ್


87. 2014ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ವಿಭಾಗದ 50 ಮೀ. ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಪಡೆದವರು ಯಾರು?
  (a) ಅಂಜು ಬಾಬಿ ಜಾರ್ಜ್
  (b) ಸೀನ ಪುನಯ್
  (c) ಸೌರವ್ ಘೋಶಾಲ್
  (d) ಜೀತು ರಾಯ್
CORRECT ANSWER

(d) ಜೀತು ರಾಯ್


88. ‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
  (a) ರಾಜೇಂದ್ರ ಪ್ರಸಾದ್
  (b) ಜಾಕಿರ್ ಹುಸೇನ್
  (c) ಸಿ. ರಾಜಗೋಪಾಲಾಚಾರಿ
  (d) ಇಂದಿರಾ ಗಾಂಧಿ
CORRECT ANSWER

(c) ಸಿ. ರಾಜಗೋಪಾಲಾಚಾರಿ


89. ಇತ್ತೀಚೆಗೆ ‘ಜ್ಞಾನಪೀಠ ಪ್ರಶಸ್ತಿ’ ಪಡೆದ ಕನ್ನಡದ ಕವಿ ಯಾರು?
  (a) ಚಂದ್ರಶೇಖರ ಕಂಬಾರ
  (b) ನಿಸಾರ್ ಅಹಮದ್
  (c) ಚಂದ್ರಶೇಖರ ಪಾಟೀಲ
  (d) ಸೀತಾರಾಮ ಭಟ್ಟ
CORRECT ANSWER

(a) ಚಂದ್ರಶೇಖರ ಕಂಬಾರ


90. ‘ಸಂಸ್ಕಾರ’ ಪುಸ್ತಕವನ್ನು ಬರೆದ ಲೇಖಕರು ಯಾರು?
  (a) ಗಿರೀಶ್ ಕಾರ್ನಾಡ್
  (b) ವೀರಭದ್ರಪ್ಪ
  (c) ಯು.ಆರ್. ಅನಂತಮೂರ್ತಿ
  (d) ಚನ್ನವೀರ ಕಣವಿ
CORRECT ANSWER

(c) ಯು.ಆರ್. ಅನಂತಮೂರ್ತಿ


91. ವಾತಾವರಣದ ತಾಪದ ಬದಲಾವಣೆಗೆ ಅನುಗುಣವಾಗಿ ತಮ್ಮ ದೇಹದ ತಾಪವನ್ನು ಬದಲಾಯಿಸಿಕೊಳ್ಳುವ ಶೀತರಕ್ತ ಪ್ರಾಣಿಗಳ ವರ್ಗವನ್ನು ಏನೆಂದು ಕರೆಯುತ್ತಾರೆ?
  (a) ಸಸ್ತನಿಗಳು (Mammals)
  (b) ಪೈಸಿಸ್ (Pisces)
  (c) ಹಕ್ಕಿಗಳು (Aves)
  (d) ಇದ್ಯಾವುದೂ ಅಲ್ಲ
CORRECT ANSWER

(b) ಪೈಸಿಸ್ (Pisces)


92. ಈ ಕೆಳಗಿನವುಗಳಲ್ಲಿ ಯಾವುದು ಹಾರಬಲ್ಲ ಸಸ್ತನಿ ಆಗಿರುತ್ತದೆ?
  (a) ಬಾವಲಿ
  (b) ಹದ್ದು
  (c) ಕಾಗೆ
  (d) ಗಿಳಿ
CORRECT ANSWER

(a) ಬಾವಲಿ


93. ಬಿದಿರು ಅತ್ಯಂತ ಎತ್ತರದ
  (a) ಮರ
  (b) ಹುಲ್ಲು
  (c) ಅಂಗಾಂಶ (Tissue)
  (d) ಇದ್ಯಾವುದೂ ಅಲ್ಲ
CORRECT ANSWER

(b) ಹುಲ್ಲು


94. ಎಬೊಲಾ ಸೋಂಕು ಯಾವುದರಿಂದ ಉಂಟಾಗುತ್ತದೆ?
  (a) ಬ್ಯಾಕ್ಟೀರಿಯಾ
  (b) ಶಿಲೀಂಧ್ರ
  (c) ವೈರಾಣು
  (d) ಇದ್ಯಾವುದೂ ಅಲ್ಲ
CORRECT ANSWER

(c) ವೈರಾಣು


95. ಯಾವುದು ಬಣ್ಣವಿಲ್ಲದ ವಾಸನೆ ಇಲ್ಲದ ವಿಷಕಾರಿ ಅನಿಲ?
  (a) ಕಾರ್ಬನ್ ಡೈ ಆಕ್ಸೈಡ್
  (b) ಮಿಥೇನ್
  (c) ಆಕ್ಸಿಜನ್
  (d) ಕಾರ್ಬನ್ ಮೊನಾಕ್ಸೈಡ್
CORRECT ANSWER

(d) ಕಾರ್ಬನ್ ಮೊನಾಕ್ಸೈಡ್


96. ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?
  (a) ಖುರ್ಷಿದ್ ಆಲಂ ಖಾನ್
  (b) ಡಾ॥ ಹೆಚ್.ಆರ್. ಭಾರದ್ವಾಜ್
  (c) ವಜುಭಾಯ್ ವಾಲ
  (d) ಟಿ.ಎನ್. ಚತುರ್ವೇದಿ
CORRECT ANSWER

(c) ವಜುಭಾಯ್ ವಾಲ


97. ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ಗಂಟೆಗೆ ಸರಾಸರಿ 40 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು, ‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ 60 ಕಿ.ಮೀ. ಆಗಿರುತ್ತದೆ. ಹಾಗಾದರೆ, ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ
  (a) 60 ನಿಮಿಷಗಳು
  (b) 90 ನಿಮಿಷಗಳು
  (c) 120 ನಿಮಿಷಗಳು
  (d) 100 ನಿಮಿಷಗಳು
CORRECT ANSWER

(b) 90 ನಿಮಿಷಗಳು


98. ಈ ಸರಣಿಯ ಮುಂದಿನ ಸರಣಿಯನ್ನು ಬರೆಯಿರಿ ACE, BDF, CEG, ________
  (a) DFH
  (b) IJK
  (c) LMN
  (d) DEF
CORRECT ANSWER

(a) DFH


99. ಪೈಥಾಗೋರಸ್ ಪ್ರಮೇಯದ ವ್ಯಾಖ್ಯಾನ
  (a) ಒಂದು ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ
  (b) ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ
  (c) ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುವುದಿಲ್ಲ
  (d) ಮೇಲ್ಕಂಡ ಯಾವುದೂ ಅಲ್ಲ
CORRECT ANSWER

(b) ಒಂದು ಲಂಬಕೋನ ತ್ರಿಭುಜದಲ್ಲಿ, ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ


100. ಕರ್ನಾಟಕದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು?
  (a) 28
  (b) 31
  (c) 30
  (d) 32
CORRECT ANSWER

(c) 30


Related Posts

Police Constable Previous Paper 20-09-2020

Police Constable Previous Paper 18-10-2020

KSP-Police Constable (Civil) 17-11-2019 question paper

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.