KPSC GROUP C Technical & Non Technical General Knowledge Paper-1 (Exam held on 23-09-2018) Questions with answers
KPSC GROUP C ಪತ್ರಿಕೆ -1 ಸಾಮಾನ್ಯ ಅಧ್ಯಯನ (Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 23-09-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು
|
1. | ಪಟ್ಟಿ I (ರಾಸಾಯನಿಕಗಳು) ಮತ್ತು ಪಟ್ಟಿ II (ಬಳಕೆ) ಗಳನ್ನು ಹೊಂದಿಸಿ : |
| | ಪಟ್ಟಿ I (ರಾಸಾಯನಿಕಗಳು) | | ಪಟ್ಟಿ II (ಬಳಕೆ) |
| A. | ಪೊಟ್ಯಾಸಿಯಂ ಬ್ರೊಮೈಡ್ | I. | ರಸಗೊಬ್ಬರ |
| B. | ಪೊಟ್ಯಾಸಿಯಂ ನೈಟ್ರೇಟ್ | II. | ಫೋಟೋಗ್ರಫಿ |
| C. | ಪೊಟ್ಯಾಸಿಯಂ ಸಲ್ಫೇಟ್ | III. | ಬೇಕರಿ |
| D. | ಮಾನೋ ಪೊಟಾಸಿಯಂ ಟಾರ್ಟರೇಟ್ | IV. | ಗನ್ ಪುಡಿ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | II | IV | I | III |
| (2) | II | IV | III | I |
| (3) | IV | II | III | I |
| (4) | IV | II | I | III |
ಸರಿ ಉತ್ತರ
(1) II IV I III
|
2. | ಈ ಮೊದಲು ಸೊಳ್ಳೆಗಳನ್ನು ಕೊಲ್ಲಲು ಡಿ.ಡಿ.ಟಿ.ಯನ್ನು ಬಳಸಲಾಗುತ್ತಿತ್ತು, ಇತ್ತೀಚಿನ ವರ್ಷಗಳಲ್ಲಿ ಡಿ.ಡಿ.ಟಿ.ಯನ್ನು ಬಳಸಿ ಸೊಳ್ಳೆಗಳನ್ನು ಕೊಲ್ಲುವುದು ಕಠಿಣವಾಗುತ್ತಿದೆ, ಡಿ.ಡಿ.ಟಿ.ಯಿಂದ ಸೊಳ್ಳೆಗಳ ಪ್ರತಿರಕ್ಷಾ ಗುಣವನ್ನು ಯಾವ ತತ್ವವು ವಿವರಿಸುತ್ತದೆ ? |
|
| (1) | ನಿಸರ್ಗದ ಮಧ್ಯಸ್ಥಿಕೆ ಸಿದ್ಧಾಂತ |
| (2) | ಪ್ರತಿರಕ್ಷೆ (ರೋಧಕತೆ) ಸಿದ್ಧಾಂತ |
| (3) | ಪರಭಕ್ಷಕ ಶಿಕಾರಿ ಸಿದ್ಧಾಂತ |
| (4) | ನಿಸರ್ಗದ ಆಯ್ಕೆ ಸಿದ್ಧಾಂತ |
ಸರಿ ಉತ್ತರ
(4) ನಿಸರ್ಗದ ಆಯ್ಕೆ ಸಿದ್ಧಾಂತ
|
3. | ದೈತ್ಯ ಪಾಂಡಾ ಐಲುರೋಪೊಡಾ ಮೆಲನೋಲ್ಯುಕಾ, ಇದರ ಸಂಕೇತವಾಗಿದೆ |
|
| (1) | ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಒಕ್ಕೂಟ |
| (2) | ವಿಶ್ವವ್ಯಾಪಿ ಮಾಲಿನ್ಯ ಪರೀಕ್ಷಣಾ ಫೆಡರೇಷನ್ |
| (3) | ಪ್ರಸರಿಸಲ್ಪಡುವ ರೋಗಗಳ ಪರ ವಿಶ್ವವ್ಯಾಪಿ ನಿಧಿ |
| (4) | ನಿಸರ್ಗಕ್ಕಾಗಿ ವಿಶ್ವ ವನ್ಯಜೀವಿ ನಿಧಿ |
ಸರಿ ಉತ್ತರ
(4) ನಿಸರ್ಗಕ್ಕಾಗಿ ವಿಶ್ವ ವನ್ಯಜೀವಿ ನಿಧಿ
|
4. | ಆದರ್ಶ ಕೃಷ್ಣಕಾಯವನ್ನು ಸಾಮಾನ್ಯ ತಾಪದಲ್ಲಿ ಕುಲುಮೆಗೆ ಹಾಕಲಾಯಿತು ಆಗ ಗಮನಿಸಲಾದುದು |
|
| (1) | ಪ್ರಾರಂಭದಲ್ಲಿ ಕಪ್ಪಾಗಿದ್ದದ್ದು ಮತ್ತು ಅನಂತರದ ಸಮಯದಲ್ಲಿ ಹೊಳಪಾಗುವುದು |
| (2) | ಅದು ಎಲ್ಲಾ ಸಮಯಗಳಲ್ಲೂ ಮತ್ತಷ್ಟು ಕಪ್ಪಾಗುವುದು |
| (3) | ಅದನ್ನು ಪ್ರತ್ಯೇಕವಾಗಿ ಎಲ್ಲಾ ಸಮಯಗಳಲ್ಲೂ ಗುರ್ತಿಸಲಾಗದು |
| (4) | ಪ್ರಾರಂಭದಲ್ಲಿ ಕಪ್ಪಾಗಿದ್ದು ಮತ್ತು ಅನಂತರದ ಸಮಯದಲ್ಲಿ ಇದನ್ನು ಪ್ರತ್ಯೇಕವಾಗಿ ಗುರುತಿಸಲಾಗದು |
ಸರಿ ಉತ್ತರ
(1) ಪ್ರಾರಂಭದಲ್ಲಿ ಕಪ್ಪಾಗಿದ್ದದ್ದು ಮತ್ತು ಅನಂತರದ ಸಮಯದಲ್ಲಿ ಹೊಳಪಾಗುವುದು
|
5. | ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : |
| A. | ಕೊಳಗಳು ಸಾಮಾನ್ಯವಾಗಿ ನೀರಿನ ಸ್ಥಾಯಿ ಕಾಯಗಳು. |
| B. | ಕೊಳಗಳು ಸುತ್ತಲೂ ಭೂಮಿಯಿಂದ ಆವರಿಸಲ್ಪಟ್ಟಿವೆ. |
| C. | ಕ್ಯಾಸ್ಪಿಯನ್ ಸಮುದ್ರವು ಮೇಲ್ಮೈ ವಿಸ್ತೀರ್ಣದಿಂದ ಜಗತ್ತಿನ ಅತಿದೊಡ್ಡ ಕೊಳವಾಗಿದೆ. |
| D. | ಚಿಲ್ಕಾವು ಮೇಲ್ಮೈ ವಿಸ್ತೀರ್ಣದಿಂದ ಭಾರತದ ಅತಿದೊಡ್ಡ ಕೊಳ. |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: |
|
| (1) | A, B ಮತ್ತು C ಗಳು ಸರಿಯಾಗಿವೆ |
| (2) | A, B ಮತ್ತು D ಗಳು ಸರಿಯಾಗಿವೆ |
| (3) | A, C ಮತ್ತು D ಗಳು ಸರಿಯಾಗಿವೆ |
| (4) | A, B, C ಮತ್ತು D ಗಳು ಸರಿಯಾಗಿವೆ |
ಸರಿ ಉತ್ತರ
(4) A, B, C ಮತ್ತು D ಗಳು ಸರಿಯಾಗಿವೆ
|
6. | ಬೆಂಗಳೂರು ನಗರ ಸ್ಥಾಪಕನು |
|
| (1) | ಯಲಹಂಕದ ಪಾಳೆಯಗಾರನಾಗಿದ್ದನು |
| (2) | ಮಧುಗಿರಿಯ ಪಾಳೆಯಗಾರನಾಗಿದ್ದನು |
| (3) | ರಾಮನಗರದ ಪಾಳೆಯಗಾರನಾಗಿದ್ದನು |
| (4) | ಚಿಕ್ಕನಾಯಕನಹಳ್ಳಿಯ ಪಾಳೆಯಗಾರನಾಗಿದ್ದನು |
ಸರಿ ಉತ್ತರ
(1) ಯಲಹಂಕದ ಪಾಳೆಯಗಾರನಾಗಿದ್ದನು
|
7. | ಕೆಳಗಿನವುಗಳಲ್ಲಿ ಯಾವುದು UN SDSN ನ ವಿಶ್ವ ಸಂತೋಷ ಸೂಚ್ಯಂಕದ ಸೂಚಕವಲ್ಲ ? |
|
| (1) | ನೈರ್ಮಲ್ಯ |
| (2) | ಜೀವನದ ಆಯ್ಕೆಗಳನ್ನು ಮಾಡುವ ಸ್ವಾತಂತ್ರ್ಯ |
| (3) | ಉದಾರತೆ / ಔದಾರ್ಯ |
| (4) | ಭ್ರಷ್ಟಾಚಾರದ ಗ್ರಹಿಕೆಗಳು |
ಸರಿ ಉತ್ತರ
(1) ನೈರ್ಮಲ್ಯ
|
8. | ಈ ಕೆಳಗಿನವುರಲ್ಲಿ ಯಾರು ಭಾರತದ ಸಂವಿಧಾನದ ಕರಡು ಸಮಿತಿಯ ಸದಸ್ಯರಾಗಿರಲಿಲ್ಲ ? |
|
| (1) | ಡಾ. ಕೆ.ಎಂ. ಮುನ್ಷಿ |
| (2) | ಪಂಡಿತ್ ಜವಾಹರ್ ಲಾಲ್ ನೆಹರೂ |
| (3) | ಅಲ್ಲಾದಿ ಕೃಷ್ಣಸ್ವಾಮಿ ಅಯ್ಯರ್ |
| (4) | ಎನ್. ಗೋಪಾಲಸ್ವಾಮಿ ಅಯ್ಯಂಗಾರ್ |
ಸರಿ ಉತ್ತರ
(2) ಪಂಡಿತ್ ಜವಾಹರ್ ಲಾಲ್ ನೆಹರೂ
|
9. | ರಾಜ್ಯದ ಸಾರ್ವಜನಿಕ ಸೇವೆಯಲ್ಲಿ ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವ ನಿರ್ದೇಶನ ಈ ಕೆಳಗಿನ ಯಾವ ವಿಧಿ ಯಲ್ಲಿದೆ ? |
|
| (1) | 47 ನೇ ವಿಧಿ |
| (2) | 48 ನೇ ವಿಧಿ |
| (3) | 49 ನೇ ವಿಧಿ |
| (4) | 50 ನೇ ವಿಧಿ |
ಸರಿ ಉತ್ತರ
(4) 50 ನೇ ವಿಧಿ
|
10. | ಪಟ್ಟಿ I (ರಾಜ್ಯ) ಮತ್ತು ಪಟ್ಟಿ II (ಪರಮಾಣು ಶಕ್ತಿ ಕೇಂದ್ರ) ಗಳನ್ನು ಹೊಂದಿಸಿ : |
| | ಪಟ್ಟಿ I (ರಾಜ್ಯ) | | ಪಟ್ಟಿ II (ಪರಮಾಣು ಶಕ್ತಿ ಕೇಂದ್ರಗಳು) |
| A. | ಉತ್ತರ ಪ್ರದೇಶ | I. | ರಾವತ್ ಬಾಟ |
| B. | ರಾಜಸ್ಥಾನ | II. | ನರೋರ |
| C. | ಮಹಾರಾಷ್ಟ್ರ | III. | ಕಕ್ರಪಾರ |
| D. | ಗುಜರಾತ್ | IV. | ತಾರಾಪುರ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | III | I | II | IV |
| (2) | I | II | III | IV |
| (3) | IV | I | III | II |
| (4) | II | I | IV | III |
ಸರಿ ಉತ್ತರ
(4) II I IV III
|
11. | ಕರ್ನಾಟಕದಲ್ಲಿ ಅತಿ ಹೆಚ್ಚು ಜಲವಿದ್ಯುತ್ತನ್ನು ಉತ್ಪಾದಿಸುವುದು ಇಲ್ಲಿ |
|
| (1) | ಕಾವೇರಿ ನದಿ ಜಲಾನಯನ |
| (2) | ಕೃಷ್ಣಾ ನದಿ ಜಲಾನಯನ |
| (3) | ಕಾಳಿ ನದಿ ಜಲಾನಯನ |
| (4) | ಶರಾವತಿ ಜಲಾನಯನ |
ಸರಿ ಉತ್ತರ
(4) ಶರಾವತಿ ಜಲಾನಯನ
|
12. | ಮೃತ್ಯು ಸಮುದ್ರದ ಕರಾವಳಿಯನ್ನು ಹಂಚಿಕೊಂಡಿರುವ ದೇಶಗಳು |
|
| (1) | ಜೋರ್ಡಾನ್ ಮತ್ತು ಇಸ್ರೇಲ್ |
| (2) | ಲೆಬನಾನ್ ಮತ್ತು ಸಿರಿಯಾ |
| (3) | ಟರ್ಕಿ ಮತ್ತು ಇಸ್ರೇಲ್ |
| (4) | ಜೋರ್ಡಾನ್ ಮತ್ತು ಲೆಬನಾನ್ |
ಸರಿ ಉತ್ತರ
(1) ಜೋರ್ಡಾನ್ ಮತ್ತು ಇಸ್ರೇಲ್
|
13. | ಪಟ್ಟಿ I (ವಾಯುಗುಣ) ಮತ್ತು ಪಟ್ಟಿ II (ನಗರ) ಗಳನ್ನು ಹೊಂದಿಸಿ: |
| | ಪಟ್ಟಿ I (ವಾಯುಗುಣ) | | ಪಟ್ಟಿ II (ನಗರ) |
| A. | ಸಮಭಾಜಕ ವೃತ್ತದ ವಾಯುಗುಣ | I. | ಸ್ಯಾಂಟಿಯಾಗೋ : |
| B. | ಉಷ್ಣವಲಯದ ಮಾನ್ಸೂನ್ ವಾಯುಗುಣ | II. | ಸಿಂಗಪೂರ್ |
| C. | ಮೆಡಿಟರೇನಿಯನ್ ವಾಯುಗುಣ | III. | ವಿಂಡ್ ಹೋಯೆಕ್ |
| D. | ಮರುಭೂಮಿ ವಾಯುಗುಣ | IV. | ಮುಂಬೈ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | II | I | IV | III |
| (2) | II | IV | I | III |
| (3) | IV | III | II | I |
| (4) | I | III | II | IV |
ಸರಿ ಉತ್ತರ
(2) II IV I III
|
14. | ಈ ಕೆಳಗಿನವುಗಳಲ್ಲಿ ಯಾವ ನದಿ ಭಾರತದಲ್ಲಿ ಉಗಮವಾಗುವುದಿಲ್ಲ? |
|
| (1) | ಬಿಯಾಸ್ |
| (2) | ಚೀನಾಬ್ |
| (3) | ರಾವಿ |
| (4) | ಸಟ್ಲೆಜ್ |
ಸರಿ ಉತ್ತರ
(4) ಸಟ್ಲೆಜ್
|
15. | ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಅನುದಾನ ನೀಡುವ ಪದ್ಧತಿಯನ್ನು ಶಿಫಾರಸ್ಸು ಮಾಡಿದ ಆಯೋಗ ಯಾವುದು ? |
|
| (1) | ಸರ್ ಚಾರ್ಲ್ಸ್ ವುಡ್ಸ್ ಶಿಕ್ಷಣ ಆಯೋಗ |
| (2) | ಹಂಟರ್ ಶಿಕ್ಷಣ ಆಯೋಗ |
| (3) | ಸ್ಯಾಡ್ಲರ್ ವಿಶ್ವವಿದ್ಯಾಲಯ ಆಯೋಗ |
| (4) | ಕೊಠಾರಿ ಶಿಕ್ಷಣ ಆಯೋಗ |
ಸರಿ ಉತ್ತರ
(1) ಸರ್ ಚಾರ್ಲ್ಸ್ ವುಡ್ಸ್ ಶಿಕ್ಷಣ ಆಯೋಗ
|
16. | ಪಟ್ಟಿ I (ಭೂ ಹಿಡುವಳಿ ಪದ್ಧತಿ) ಮತ್ತು ಪಟ್ಟಿ II (ವಿವರಣೆಗಳು) ಗಳನ್ನು ಹೊಂದಿಸಿ : |
| | ಪಟ್ಟಿ I (ಭೂ ಹಿಡುವಳಿ ಪದ್ಧತಿ) | | ಪಟ್ಟಿ II (ವಿವರಣೆಗಳು) |
| A. | ಜಾಗೀರ್ದಾರಿ ಪದ್ಧತಿ | I. | ಸರ್ಕಾರ ಭೂಮಿಯನ್ನು ದೊಡ್ಡ ಊಳಿಗಮಾನ್ಯ ಭೂ ಒಡೆಯರಿಗೆ ಹಂಚಿಕೆ ಮಾಡಿದೆ |
| B. | ರೈತವಾರಿ ಪದ್ಧತಿ | II. | ಸರ್ಕಾರ ಕಂದಾಯ ನೀಡುವ ರೈತರಿಗೆ ಭೂಮಿಯನ್ನು ನೀಡಿ ಬಾಡಿಗೆ ಸಂಗ್ರಹವನ್ನು (ಕಲೆಕ್ಟರ್ ಗಳ) ಸಂಗ್ರಾಹಕರಮೂಲಕ ಪಡೆಯುತ್ತಿತ್ತು |
| C. | ಮಹಲ್ವಾರಿ ಪದ್ಧತಿ | III. | ಸರ್ಕಾರ ಪ್ರತಿಯೊಬ್ಬ ರೈತನಿಗೆ ಭೂಮಿಯನ್ನು ಹಂಚಿ, ಅದರೊಂದಿಗೆ ಅದನ್ನು ರೈತನು ಬೇರೆಯವರಿಗೆ ಉಪ-ಬಾಡಿಗೆ, ಅಡಮಾನ ವರ್ಗಾವಣೆ, ಕೊಡುಗೆ ಅಥವಾ ಮಾರಾಟ ಮಾಡುವ ಹಕ್ಕನ್ನು ನೀಡಿತು |
| D. | ಜಮೀನ್ದಾರಿ ಪದ್ಧತಿ | IV. | ಗ್ರಾಮ ಮಟ್ಟದಲ್ಲಿ ಕಂದಾಯವನ್ನು ನಿರ್ಧರಿಸಲಾಗುತ್ತಿತ್ತು |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ |
|
| | A | B | C | D |
| (1) | I | III | II | IV |
| (2) | II | I | III | IV |
| (3) | II | III | IV | I |
| (4) | I | IV | II | III |
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
|
17. | ‘ಮಿತ್ರಾವಿಂದ ಗೋವಿಂದ’ ಎಂಬ ಪ್ರಥಮ ಕನ್ನಡ ನಾಟಕ ಬರೆದವನು ಯಾರು ? |
|
| (1) | ಲಕ್ಷ್ಮೀಶ |
| (2) | ಮಹಾಲಿಂಗರಂಗ |
| (3) | ಸಿಂಗರಾರ್ಯ |
| (4) | ತಿರುಮಲರಾಯ |
ಸರಿ ಉತ್ತರ
(3) ಸಿಂಗರಾರ್ಯ
|
18. | ಪರಮಾಣು ನಾಭಿ ಕೇಂದ್ರವು ಬೀಟಾಕಣವನ್ನು ಉತ್ಸರ್ಜಿಸಿದಾಗ ಆದರ ಪರಮಾಣು ಸಂಖ್ಯೆ |
|
| (1) | ಸ್ಥಿರ ಆದರೆ ಅದರ ರಾಶಿ ಸಂಖ್ಯೆ ಬದಲಾಗುತ್ತದೆ |
| (2) | ಸ್ಥಿರ ಹಾಗೂ ಹಾಗೆಯೇ ಅದರ ರಾಶಿ ಸಂಖ್ಯೆಯೂ ಸ್ಥಿರವಾಗಿರುತ್ತದೆ |
| (3) | ಬದಲಾಗುತ್ತದೆ ಆದರೆ ಅದರ ರಾಶಿ ಸಂಖ್ಯೆ ಸ್ಥಿರ |
| (4) | ಬದಲಾಗುತ್ತದೆ ಮತ್ತು ಹಾಗೆಯೇ ಅದರ ರಾಶಿ ಸಂಖ್ಯೆಯೂ ಬದಲಾಗುತ್ತದೆ |
ಸರಿ ಉತ್ತರ
(3) ಬದಲಾಗುತ್ತದೆ ಆದರೆ ಅದರ ರಾಶಿ ಸಂಖ್ಯೆ ಸ್ಥಿರ
|
19. | ಪರಿಸರದ ಸಂದರ್ಭದಲ್ಲಿ ‘‘ಡರ್ಟಿ ಡಜನ್’’ ಪದವು (ಕೊಳಕು ಹನ್ನೆರಡು) ಇದಕ್ಕೆ ಸಂಬಂಧಿಸಿದೆ |
|
| (1) | 12 ಹಾನಿಕಾರಕ ಹಸಿರುಮನೆ ಅನಿಲಗಳು |
| (2) | 12 ಓಜೋನ್ ಕ್ಷೀಣಕ ವಸ್ತುಗಳು |
| (3) | 12 ಸತತವಾದ ಸಾವಯವ ಮಾಲಿನ್ಯಕಾರಿಗಳು |
| (4) | 12 ಭಾರ ಲೋಹಗಳು |
ಸರಿ ಉತ್ತರ
(3) 12 ಸತತವಾದ ಸಾವಯವ ಮಾಲಿನ್ಯಕಾರಿಗಳು
|
20. | ಸಿಹಿನೀರು ಸರೋವರ ಉದ್ಯಾನವನ್ನು ಸ್ಥಾಪಿಸಲು ಪ್ರಸ್ತಾವಿಸಿರುವ ಸ್ಥಳ |
|
| (1) | ಹೊನ್ನಾವರ |
| (2) | ಬಂಟ್ವಾಳ |
| (3) | ಅಪ್ಸರಕೊಂಡ |
| (4) | ತಡದಿ |
ಸರಿ ಉತ್ತರ
(4) ತಡದಿ
|
21. | ಹೇರಳವಾಗಿ ದೊರೆಯುವ ತಿಳಿದಿರುವ ಒಂದು ಪೊದೆ ಲಂಟಾನ ಒಂದು |
| A. | ನಂಜುಕಳೆಯಾಗಿದ್ದು ಮತ್ತು ರಾಜ್ಯದ ಪರ್ವತ ವೈವಿಧ್ಯದ ಮೇಲೆ ಪ್ರಭಾವ ಬೀರಿದೆ. |
| B. | ಅದರ ಹೂಗಳಿಗಾಗಿ ಅದನ್ನು ವ್ಯಾಪಕವಾಗಿ ಬೆಳೆಯುತ್ತಾರೆ. |
| C. | ಭಾರತಕ್ಕೆ ಸ್ಥಳೀಯ / ದೇಶೀಯವಾದುದು. |
| D. | ಅದನ್ನು ಗುಪ್ತ ಬೆಂಕಿಯ ಅಪಾಯಕಾರಿಕ ಎಂದು ಪರಿಗಣಿಸಿದ್ದು ಮತ್ತು ಹಸಿರಾಗಿದ್ದರೂ ಇದು ಹೊತ್ತುರಿಯುತ್ತದೆ.
ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ? |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: |
|
| (1) | A, B ಮತ್ತು D ಮಾತ್ರ |
| (2) | B ಮತ್ತು D ಮಾತ್ರ |
| (3) | A ಮತ್ತು C ಮಾತ್ರ |
| (4) | A, B, C ಮತ್ತು D |
ಸರಿ ಉತ್ತರ
(1) A, B ಮತ್ತು D ಮಾತ್ರ
|
22. | ಕರ್ನಾಟಕದಲ್ಲಿನ ಎತ್ತಿನಹೊಳೆ ಯೋಜನೆ ಈ ಕುರಿತದ್ದು |
|
| (1) | ಸಮಗ್ರ ಕುಡಿವ ನೀರಿನ ಯೋಜನೆ |
| (2) | ಸಮಗ್ರ ಬಂಜರು ನೆಲ ಸುಧಾರಣಾ ಯೋಜನೆ |
| (3) | ಸಮಗ್ರ ಒದ್ದೆ ನೆಲ ಸುಧಾರಣಾ ಯೋಜನೆ |
| (4) | ಸಮಗ್ರ ಚರಂಡಿ ವ್ಯವಸ್ಥೆ ಯೋಜನೆ |
ಸರಿ ಉತ್ತರ
(1) ಸಮಗ್ರ ಕುಡಿವ ನೀರಿನ ಯೋಜನೆ
|
23. | ಕರ್ನಾಟಕದ ‘ಹಕ್ಕಿ ಹಬ್ಬ’ ದ (ಪಕ್ಷಿ ಉತ್ಸವ) ಮೂರನೆ ಆವೃತ್ತಿಯು ಆದದ್ದು ಇಲ್ಲಿ |
|
| (1) | ದಾರೋಜಿ ಕರಡಿ ಧಾಮ, ಬಳ್ಳಾರಿ |
| (2) | ಬ್ರಹ್ಮಗಿರಿ ವನ್ಯಜೀವಿ ಅಭಯ ಧಾಮ, ಕೊಡಗು |
| (3) | ದಾಂಡೇಲಿ ವನ್ಯಜೀವಿ ಅಭಯ ಧಾಮ, ಉತ್ತರ ಕನ್ನಡ |
| (4) | ರಾಣಿಬೆನ್ನೂರು ಕೃಷ್ಣ ಪಕ್ಷಿ ಧಾಮ, ಹಾವೇರಿ |
ಸರಿ ಉತ್ತರ
(1) ದಾರೋಜಿ ಕರಡಿ ಧಾಮ, ಬಳ್ಳಾರಿ
|
24. | ಈ ಹೇಳಿಕೆಗಳನ್ನು ಪರಿಗಣಿಸಿ : |
| A. | ಭಾರತದಲ್ಲಿ, ಕೆಂಪು ಪಾಂಡಾ ಸ್ವಾಭಾವಿಕವಾಗಿ ದೊರೆಯುವುದು ಪಶ್ಚಿಮ ಹಿಮಾಲಯದಲ್ಲಿ ಮಾತ್ರ. |
| B. | ಭಾರತದಲ್ಲಿ ಸ್ಲೋ ಲೋರಿಸ್ (ಕಾಡು ಪಾಪದಂತಹ ಪ್ರಾಣಿ) ವಾಸವಾಗಿರುವುದು ಈಶಾನ್ಯದ ದಟ್ಟ ಅರಣ್ಯಗಳಲ್ಲಿ. |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: |
|
| (1) | A ಮಾತ್ರ |
| (2) | B ಮಾತ್ರ |
| (3) | A ಮತ್ತು B ಇವೆರಡೂ |
| (4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(2) B ಮಾತ್ರ
|
25. | ಪಟ್ಟಿ I (ಸಂಸ್ಥೆ) ಮತ್ತು ಪಟ್ಟಿ II (ನಗರ) ಗಳನ್ನು ಹೊಂದಿಸಿ : |
| | ಪಟ್ಟಿ I (ಸಂಸ್ಥೆ) | | ಪಟ್ಟಿ II (ನಗರ) |
| A. | ಸೆಂಟ್ರಲ್ ಆರಿಡ್ ಜೋನ್ ರಿಸರ್ಚ್ ಇನ್ಸ್ಟಿಟ್ಯೂಟ್ | I. | ಬೆಂಗಳೂರು |
| B. | ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ | II. | ಅಲಹಾಬಾದ್ |
| C. | ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಪ್ರೊಡಕ್ಟಿವಿಟಿ | III. | ಜೋಧಪುರ |
| D. | ಸೆಂಟರ್ ಫಾರ್ ಸೋಷಿಯಲ್ ಫಾರೆಸ್ಟ್ರಿ ಅಂಡ್ ಎಕೊ ರಿಹ್ಯಾಬಿಲಿಟೇಶನ್ (CSFER) | IV. | ರಾಂಚಿ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | III | I | II | IV |
| (2) | III | I | IV | II |
| (3) | IV | III | II | I |
| (4) | IV | III | I | II |
ಸರಿ ಉತ್ತರ
(2) III I IV II
|
26. | ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-3, ಇವುಗಳನ್ನು ಜೋಡಿಸುತ್ತದೆ |
|
| (1) | ದೆಹಲಿಯನ್ನು ಅಹಮದಾಬಾದ್ ನೊಂದಿಗೆ |
| (2) | ದೆಹಲಿಯನ್ನು ಮುಂಬೈನೊಂದಿಗೆ |
| (3) | ಆಗ್ರಾವನ್ನು ಕೋಲ್ಕತ್ತಾದೊಂದಿಗೆ |
| (4) | ಆಗ್ರಾವನ್ನು ಮುಂಬೈನೊಂದಿಗೆ |
ಸರಿ ಉತ್ತರ
(4) ಆಗ್ರಾವನ್ನು ಮುಂಬೈನೊಂದಿಗೆ
|
27. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : |
| A. | ಟೊಮ್ಯಾಟೋವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. |
| B. | 21°C ನಿಂದ 23°C ನ ವರೆಗಿನ ಸರಾಸರಿ ಮಾಸಿಕ ತಾಪಮಾನವು ಈ ಬೆಳೆಗೆ ಸರಿ ಹೊಂದುತ್ತದೆ. |
| C. | ಈ ಹಣ್ಣಿನ ಬಣ್ಣ ಮತ್ತು ಪೌಷ್ಠಿಕ ಮೌಲ್ಯವು ಬೆಳಕು ಮತ್ತು ಅದರ ತೀಕ್ಷಣತೆಯಿಂದ ನಿರ್ಧರಿಸಲ್ಪಡುತ್ತದೆ. |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ? |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: |
|
| (1) | A ಮತ್ತು B ಮಾತ್ರ |
| (2) | A, B ಮತ್ತು C |
| (3) | B ಮತ್ತು C ಮಾತ್ರ |
| (4) | A ಮತ್ತು C ಮಾತ್ರ |
ಸರಿ ಉತ್ತರ
(2) A, B ಮತ್ತು C
|
28. | ಈ ಕೆಳಗಿನ ನಕ್ಷೆಯಲ್ಲಿ ವೃತ್ತವು ಗಾಯಕರನ್ನು, ತ್ರಿಭುಜವು ಅಧ್ಯಾಪಕರನ್ನು ಮತ್ತು ಆಯತವು ಲೇಖಕರನ್ನು ಪ್ರತಿನಿಧಿಸುತ್ತದೆ. |
| ಈ ಮೇಲಿನ ನಕ್ಷೆಯ ರೀತ್ಯಾ ಎಷ್ಟು ಅಧ್ಯಾಪಕರು, ಲೇಖಕರೂ ಅಲ್ಲ ಅಥವಾ ಗಾಯಕರೂ ಅಲ್ಲ ? |
|
| (1) | 1 |
| (2) | 8 |
| (3) | 2 |
| (4) | 3 |
ಸರಿ ಉತ್ತರ
(1) 1
|
29. | ಅಜಿತ “A’ ಬಿಂದುವಿನಿಂದ ಪ್ರಾರಂಭಿಸಿ, ಪೂರ್ವಕ್ಕೆ 7 km ನೇರವಾಗಿ ಸಾಗಿ, ಎಡಕ್ಕೆ ತಿರುಗಿ ಮತ್ತು ನೇರವಾಗಿ 10 km ಸಾಗುತ್ತಾನೆ ಅನಂತರ ಮತ್ತೆ ಎಡಕ್ಕೆ ತಿರುಗಿ, ನೇರವಾಗಿ 6 km ಸಾಗಿ ಮತ್ತೆ ಎಡಕ್ಕೆ ತಿರುಗಿ ನೇರವಾಗಿ 10 km ಸಾಗುತ್ತಾನೆ. ಪುನಃ ಎಡಕ್ಕೆ ತಿರುಗಿ ಪುನಃ ನೇರವಾಗಿ 10 km ಸಾಗುತ್ತಾನೆ. ಪ್ರಾರಂಭ ಬಿಂದುವಿನಿಂದ ಯಾವ ದಿಕ್ಕಿನಲ್ಲಿ ಅಜಿತ ಇರುತ್ತಾನೆ ? |
|
| (1) | ಪೂರ್ವ |
| (2) | ಪಶ್ಚಿಮ |
| (3) | ಉತ್ತರ |
| (4) | ದಕ್ಷಿಣ |
ಸರಿ ಉತ್ತರ
(1) ಪೂರ್ವ
|
30. | 5 ಬಾಲಕರು ಅಮಿತ್, ಭಾನು, ಚಂದ್ರು, ದೇವ್ ಮತ್ತು ಎಡ್ವಿನ್ ಮೆಟ್ಟಿಲ ಮೇಲೆ ಈ ರೀತಿಕುಳಿತಿದ್ದಾರೆ : |
| A. | ಎಡ್ವಿನ್, ಅಮಿತ್ಗಿಂತ ಮೇಲಿದ್ದಾನೆ. |
| B. | ದೇವ್, ಭಾನುವಿಗಿಂತ ಕೆಳಗಿದ್ದಾನೆ. |
| C. | ಭಾನು, ಅಮಿತ್ ಗಿಂತ ಕೆಳಗಿದ್ದಾನೆ. |
| D. | ದೇವ್, ಭಾನು ಮತ್ತು ಚಂದ್ರುವಿನ ನಡುವೆ ಇದ್ದಾನೆ. |
| ಮೆಟ್ಟಿಲಿನ ಅತಿ ಕೆಳಗಿನ ಬಿಂದುವಿನಲ್ಲಿ ಕುಳಿತವರಾರು ? |
|
| (1) | ಅಮಿತ್ |
| (2) | ಭಾನು |
| (3) | ಚಂದ್ರು |
| (4) | ಎಡ್ವಿನ್ |
ಸರಿ ಉತ್ತರ
(3) ಚಂದ್ರು
|
31. | ತರಗತಿಯಲ್ಲಿ ಎಷ್ಟು ಮಂದಿ ವಿದ್ಯಾರ್ಥಿಗಳಿದ್ದಾರೆ ? |
| A. | ತರಗತಿಯಲ್ಲಿ 20ಕ್ಕೂ ಮೀರಿದ ಆದರೆ 27 ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. |
| B. | ಪ್ರತಿಗುಂಪಿನಲ್ಲೂ ಐದು ವಿದ್ಯಾರ್ಥಿಗಳಿರುವಂತೆ ತರಗತಿಯ ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಭಾಗಿಸಬೇಕು. ಪ್ರಶ್ನೆಗೆ ಉತ್ತರಿಸಲು |
| ಮೇಲಿನ ಹೇಳಿಕೆಗಳಲ್ಲಿ ಯಾವುದು ಸಾಕಷ್ಟು ದತ್ತಾಂಶವನ್ನು ಹೊಂದಿದೆ ? |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | ಪ್ರಶ್ನೆಗೆ ಉತ್ತರಿಸಲು ಕೇವಲ A ಹೇಳಿಕೆಯಲ್ಲಿನ ದತ್ತಾಂಶವೊಂದೇ ಸಾಕು. |
| (2) | ಹೇಳಿಕೆ B ನಲ್ಲಿರುವ ಮಾಹಿತಿಯೊಂದೇ ಪ್ರಶ್ನೆಗೆ ಉತ್ತರಿಸಲು ಸಾಕಾಗುತ್ತದೆ. |
| (3) | ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡರಲ್ಲಿ ನೀಡಲಾದ ಒಟ್ಟು ಮಾಹಿತಿಯು ಸಾಕಾಗುವುದಿಲ್ಲ. |
| (4) | ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡರಲ್ಲಿನ ಒಟ್ಟು ಮಾಹಿತಿಯು ಅವಶ್ಯಕವಾಗಿದೆ. |
ಸರಿ ಉತ್ತರ
(4) ಪ್ರಶ್ನೆಗಳಿಗೆ ಉತ್ತರಿಸಲು ಹೇಳಿಕೆಗಳಾದ A ಮತ್ತು B ಗಳೆರಡರಲ್ಲಿನ ಒಟ್ಟು ಮಾಹಿತಿಯು ಅವಶ್ಯಕವಾಗಿದೆ.
|
32. | ಪ್ರಸ್ತುತ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕಕ್ಕೆ (ಐ.ಐ.ಪಿ.) ಆಧಾರಭೂತ ವರ್ಷ ಯಾವುದು ? |
|
| (1) | 2004 – 05 |
| (2) | 2011 – 12 |
| (3) | 2015 – 16 |
| (4) | 2001 – 02 |
ಸರಿ ಉತ್ತರ
(2) 2011 – 12
|
33. | ಈ ಕೆಳಗಿನ ಸಮಸ್ಯೆಯ ಚಿತ್ರದಲ್ಲಿ ಪ್ರಶ್ನಾರ್ಥಕ ಚಿಹ್ನೆಯುಳ್ಳ (?) ಸ್ಥಳಕ್ಕೆ ಹೊಂದಿಕೆಯಾಗಬಲ್ಲ ಸರಿ ಚಿತ್ರವನ್ನು ಉತ್ತರದ ಚಿತ್ರಗಳಿಂದ ಆರಿಸಿ. |
| ಪ್ರಶ್ನೆ ಚಿತ್ರ : |
| ಸರಿಯಾದ ಆಯ್ಕೆಯನ್ನು ಆರಿಸಿ : |
|
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
|
34. | ಈ ಕೆಳಗಿನ ಚಿತ್ರದಲ್ಲಿರುವ ತ್ರಿಭುಜಗಳೆಷ್ಟು ? |
|
| (1) | 5 |
| (2) | 2 |
| (3) | 9 |
| (4) | 10 |
ಸರಿ ಉತ್ತರ
(4) 10
|
35. | ಒಂದು ಘನದ ಆರು ಮುಖಗಳಿಗೆ ಹಸಿರು, ಹಳದಿ, ನೀಲಿ, ಕಪ್ಪು, ಗುಲಾಬಿ ಮತ್ತು ಬಿಳಿ ಬಣ್ಣ ಬಳಿಯಲಾಗಿದೆ. ಘನದ ಎರಡು ಸ್ಥಿತಿಗಳನ್ನು ಕೆಳಗೆ ನೀಡಲಾಗಿದೆ. |
| ಗುಲಾಬಿ ಮುಖವು ಅತ್ಯಂತ ಮೇಲೆಬರುವಂತೆ ಘನವನ್ನು ಇರಿಸಿದರೆ ಆಗ ತಳದಲ್ಲಿ ಇರುವುದು ಯಾವ ಬಣ್ಣ ? |
|
| (1) | ಹಸಿರು |
| (2) | ಹಳದಿ |
| (3) | ನೀಲಿ |
| (4) | ಕಪ್ಪು |
ಸರಿ ಉತ್ತರ
(3) ನೀಲಿ
|
36. | ಈ ನಕಾಶೆಯ ಪೈಕಿ ಯಾವುದು ವಿವಾಹಿತರು, ಮಹಿಳೆಯರು ಮತ್ತು ಅಧ್ಯಾಪಕರ ಸಂಬಂಧವನ್ನು ಉತ್ತಮವಾಗಿ ಧ್ವನಿಸುತ್ತದೆ ? |
|
ಸರಿ ಉತ್ತರ
|
37. | ಈ ಕೆಳಗಿನ ಪ್ರಶ್ನೆಯಲ್ಲಿ, ಒಂದು ಹೇಳಿಕೆಯನ್ನು, A ಮತ್ತು B ಎಂಬ ಎರಡು ಊಹನೆಗಳು ಅನುಸರಿಸುತ್ತವೆ. ನೀವು ಹೇಳಿಕೆಯನ್ನು ಮತ್ತು ಅದನ್ನು ಅನುಸರಿಸುವ ಊಹನೆಗಳನ್ನು ಪರಿಗಣಿಸಬೇಕು ಮತ್ತು ಯಾವ ಊಹನೆಯು/ಗಳು ಹೇಳಿಕೆಯಲ್ಲಿ ಧ್ವನಿಸುತ್ತದೆ/ವೆ ಎಂಬುದನ್ನು ನಿರ್ಧರಿಸಿ. |
| ಹೇಳಿಕೆ : ಸಂಚಾರಿ ಪೊಲೀಸು ಇಲಾಖೆಯ ಅತಿದೊಡ್ಡ ಸೂಚನಾ ಫಲಕಗಳನ್ನು ನಗರದ ಪ್ರಮುಖ ಭಾಗಗಳಲ್ಲಿ ಹಾಕಿದ್ದು, ಜನರು ಸೆಲ್ ಫೋನ್ ಬಳಕೆಯನ್ನು ಚಾಲನೆಮಾಡುವಾಗ ಬಳಕೆ ಮಾಡಬಾರದು ಇಲ್ಲವಾದರೆ ಅವರ ಲೈಸೆನ್ಸ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. |
| ಊಹನೆ A : ವಾಹನ ಚಾಲಕರು ಈ ಎಚ್ಚರಿಕೆಯನ್ನು ಉಪೇಕ್ಷೆ ಮಾಡಬಹುದು ಮತ್ತು ಚಾಲನೆಯಲ್ಲಿರುವಾಗ ಸೆಲ್ ಫೋನ್ ಗಳ ಬಳಕೆ ಮಾಡುವುದನ್ನು ಮುಂದುವರಿಸಬಹುದು. |
| ಊಹನೆ B : ಸಂಚಾರಿ ಪೋಲೀಸ್ ಇಲಾಖೆಯು ಹೆಚ್ಚಿನ ಅಪರಾಧಿಗಳನ್ನು ಹಿಡಿದು ಹೆಚ್ಚಿನವರ ಲೈಸೆನ್ಸ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: |
|
| (1) | A ಊಹನೆ ಮಾತ್ರ ಧ್ವನಿಸುತ್ತದೆ |
| (2) | B ಊಹನೆ ಮಾತ್ರ ಧ್ವನಿಸುತ್ತದೆ |
| (3) | A ಊಹನೆ ಮತ್ತು B ಊಹನೆಗಳೆರಡೂ ಧ್ವನಿಸುತ್ತವೆ |
| (4) | A ಊಹನೆ ಆಗಲೀ ಅಥವಾ B ಊಹನೆ ಆಗಲೀ ಧ್ವನಿಸುವುದಿಲ್ಲ. |
ಸರಿ ಉತ್ತರ
(4) A ಊಹನೆ ಆಗಲೀ ಅಥವಾ B ಊಹನೆ ಆಗಲೀ ಧ್ವನಿಸುವುದಿಲ್ಲ.
|
38. | ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ : |
| I. | ನನಗೆ ಬೇಸರವಾದಾಗ ಮಾತ್ರ ನಾನು ಕ್ರಿಕೆಟ್ ಆಡುತ್ತೇನೆ. |
| II. | ನನಗೆ ಗೆಳೆಯರ ಸಹವಾಸ ಇದ್ದಾಗ, ಎಂದೂ ಬೇಸರ ಆಗದು. |
| III. | ನಾನು ಪಂದ್ಯ ನೋಡಲು ಸ್ಟೇಡಿಯಮ್ ಗೆ ಹೋದಾಗಲೆಲ್ಲಾ, ನನ್ನ ಸಹೋದರನನ್ನು ನನ್ನ ಜೊತೆಗೆ ಕರೆದೊಯ್ಯುತ್ತೇನೆ. |
| ಮೇಲಿನ ಹೇಳಿಕೆಗಳ ಆಧಾರದಿಂದ ಈ ಕೆಳಗಿನ ತೀರ್ಮಾನಗಳಲ್ಲಿ ಯಾವುದು ಸರಿ ? |
|
| (1) | ನನಗೆ ಬೇಸರವಾದಾಗ, ನಾನು ಕ್ರಿಕೆಟ್ ಆಡುತ್ತೇನೆ. |
| (2) | ನನಗೆ ಬೇಸರವಾದಾಗ, ನಾನು ಸ್ನೇಹಿತರ ಸಹವಾಸ ಬಯಸುತ್ತೇನೆ. |
| (3) | ನನ್ನ ಗೆಳೆಯರಿಲ್ಲದಿದ್ದರೆ, ಆಗ ನಾನು ಕ್ರಿಕೆಟ್ ಆಡುತ್ತೇನೆ. |
| (4) | ನನಗೆ ಬೇಸರ ಆಗದಿದ್ದರೆ, ನಾನು ಕ್ರಿಕೆಟ್ ಆಡುವುದಿಲ್ಲ. |
ಸರಿ ಉತ್ತರ
(4) ನನಗೆ ಬೇಸರ ಆಗದಿದ್ದರೆ, ನಾನು ಕ್ರಿಕೆಟ್ ಆಡುವುದಿಲ್ಲ.
|
39. | ಈ ಕೆಳಗಿನ ಚೌಕದಲ್ಲಿ (?) ಚಿಹ್ನೆ ಇರುವೆಡೆ ಯಾವ ಸಂಖ್ಯೆಯನ್ನು ಬರೆದರೆ ವಿನ್ಯಾಸವು ಪೂರ್ಣ ಆಗುವುದು ? |
|
| (1) | 16 |
| (2) | 14 |
| (3) | 26 |
| (4) | 21 |
ಸರಿ ಉತ್ತರ
(2) 14
|
40. | ಕೆಳಗಿನ ಪೈ ಚಿತ್ರಪಟವು, ಒಂದು ದೇಶವು ಒಂದು ನಿರ್ದಿಷ್ಟ ವರ್ಷದಲ್ಲಿ ವಿವಿಧ ಕ್ರೀಡೆಗಳಿಗಾಗಿ ಮಾಡಿರುವ ವೆಚ್ಚವನ್ನು ತೋರಿಸಿದೆ. ಚಾರ್ಟ್ (ಚಿತ್ರಪಟದಲ್ಲಿ) ವಿವಿಧ ಘಟಕಗಳ ಡಿಗ್ರಿ (ಕೋನ) ಮೌಲ್ಯಗಳನ್ನು ನೀಡಲಾಗಿದೆ. |
| ಟೆನಿಸ್ ಕ್ರೀಡೆಯ ಸಲುವಾಗಿ ಒಟ್ಟು ವೆಚ್ಚದಲ್ಲಿ ಎಷ್ಟು ಶೇಕಡಾವಾರು ವೆಚ್ಚವನ್ನು ಮಾಡಲಾಗಿದೆ ? |
|
| (1) | 1212 % |
| (2) | 22 12% |
| (3) | 25% |
| (4) | 45% |
ಸರಿ ಉತ್ತರ
(1) 1212 %
|
41. | 1 kg ಬಣ್ಣದ ಬೆಲೆ ₹36.50/kg ಮತ್ತು1 kg ಬಣ್ಣವನ್ನು 16 ಚದರಡಿಗೆ ಲೇಪಿಸಬಹುದಾದರೆ, ಉದ್ದ 8 ಅಡಿಯ ಬದಿ ಇರುವ ಘನದ ಪೂರ್ಣ ಹೊರಗಿನ ಮೇಲ್ಮೆ ಲೇಪನಕ್ಕೆ ತಗಲುವ ವೆಚ್ಚವೇನು? |
|
| (1) | ₹ 692 |
| (2) | ₹ 768 |
| (3) | ₹ 876 |
| (4) | ₹ 972 |
ಸರಿ ಉತ್ತರ
(3) ₹ 876
|
42. | ಫಾಕ್ ಲ್ಯಾಂಡ ದ್ವೀಪವು, ಅರ್ಜೆಂಟೀನಾ ಮತ್ತು ಯುನೈಟೆಡ್ ಕಿಂಗ್ ಡಂ ನಡುವಣ ವಿವಾದದ ಬಿಂದುವಾಗಿದ್ದು ಇದು ಕೆಳಗಿನ ಯಾವ ಸಾಗರದಲ್ಲಿದೆ ? |
|
| (1) | ಉತ್ತರ ಅಟ್ಲಾಂಟಿಕ್ ಸಾಗರ |
| (2) | ದಕ್ಷಿಣ ಅಟ್ಲಾಂಟಿಕ ಸಾಗರ |
| (3) | ದಕ್ಷಿಣ ಹಿಂದೂ ಮಹಾಸಾಗರ |
| (4) | ದಕ್ಷಿಣ ಪೆಸಿಫಿಕ್ ಸಾಗರ |
ಸರಿ ಉತ್ತರ
(2) ದಕ್ಷಿಣ ಅಟ್ಲಾಂಟಿಕ ಸಾಗರ
|
43. | ದೋಣಿಯೊಂದು ಮೇಲ್ಮುಖವಾಗಿ (ಪ್ರವಾಹದ ವಿರುದ್ಧ ದಿಕ್ಕು) ಹರಿಯುವ ಹೊಳೆಯಲ್ಲಿ ಸಾಗುವಾಗ ಒಂದು ನಿರ್ದಿಷ್ಟ ದೂರ ಕ್ರಮಿಸಲು 8 ಗಂಟೆ 48 ನಿಮಿಷ ತೆಗೆದು ಕೊಳ್ಳುತ್ತದೆ ಆದರೆ ಹೊಳೆಯು ಕೆಳಮುಖವಾಗಿ (ಪ್ರವಾಹದ ಅದೇ ದಿಕ್ಕು) ಹರಿಯುವಾಗ ಅದೇ ದೂರವನ್ನು ಕ್ರಮಿಸಲು 4 ಗಂಟೆ ತೆಗೆದು ಕೊಳ್ಳುತ್ತದೆ. ದೋಣಿಯ ವೇಗ ಹಾಗೂ ನೀರಿನ ಪ್ರಸ್ತುತ ವೇಗದ ನಡುವಣ ಅನುಪಾತ ಎಷ್ಟು ? |
|
| (1) | 2 : 1 |
| (2) | 3 : 2 |
| (3) | 8 : 5 |
| (4) | 3 : 8 |
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
|
44. | ಒಂದು ವಸ್ತುವನ್ನು ಎರಡು ಸಮಾಂತರ ಸಮತಲ ದರ್ಪಣಗಳ ಮಧ್ಯೆ ಇಟ್ಟಾಗ, ದೊರೆಯುವ ಪ್ರತಿಬಿಂಬಗಳ ಸಂಖ್ಯೆಯು |
|
| (1) | ಒಂದು |
| (2) | ನಾಲ್ಕು |
| (3) | ಸೊನ್ನೆ |
| (4) | ಅನಂತ |
ಸರಿ ಉತ್ತರ
(4) ಅನಂತ
|
45. | ಪಟ್ಟಿ I (ಪರ್ಯಾಯ / ವರ್ಗಾವಣೆ ಕೃಷಿ) ಮತ್ತು ಪಟ್ಟಿ II (ರಾಜ್ಯಗಳು) ಗಳನ್ನು ಹೊಂದಿಸಿ: |
| | ಪಟ್ಟಿ I (ವರ್ಗಾವಣೆ ಕೃಷಿ) | | ಪಟ್ಟಿ II (ರಾಜ್ಯಗಳ) |
| A. | ಝೂಮ್ | I. | ಆಂಧ್ರ ಪ್ರದೇಶ |
| B. | ಪೊನಮ್ | II. | ಅಸ್ಸಾಮ್ |
| C. | ಪೊಡು | III. | ಮಧ್ಯ ಪ್ರದೇಶ |
| D. | ಬೇವಾರ್ | IV. | ಕೇರಳ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | II | I | IV | III |
| (2) | II | IV | III | I |
| (3) | III | II | IV | I |
| (4) | II | IV | I | III |
ಸರಿ ಉತ್ತರ
(4) II IV I III
|
46. | ಯಾವ ರಾಜ ಒಡೆಯರ ಆಳ್ವಿಕೆಯಡಿ ಎಂ. ವಿಶ್ವೇಶ್ವರಯ್ಯನವರು ದಿವಾನರಾಗಿದ್ದರು ? |
|
| (1) | ಚಾಮರಾಜ ಒಡೆಯರ್ |
| (2) | ಜಯ ಚಾಮರಾಜ ಒಡೆಯರ್ |
| (3) | ಮುಮ್ಮಡಿ ಕೃಷ್ಣರಾಜ ಒಡೆಯರ್ |
| (4) | ನಾಲ್ವಡಿ ಕೃಷ್ಣರಾಜ ಒಡೆಯರ್ |
ಸರಿ ಉತ್ತರ
(4) ನಾಲ್ವಡಿ ಕೃಷ್ಣರಾಜ ಒಡೆಯರ್
|
47. | ಕಾಂಗ್ರೆಸ್ ಲಾಹೋರ್ ಅಧಿವೇಶನವನ್ನು ಕುರಿತಂತೆ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ? |
| A. | ಬ್ರಿಟಿಷರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಠರಾವನ್ನು ಅಂಗೀಕರಿಸಲಾಯಿತು. |
| B. | ತೀಕ್ಷ್ಣಗಾಮಿಗಳು ಮತ್ತು ಸೌಮ್ಯವಾದಿಗಳ ನಡುವಣ ಒಡಕು ಆ ಅಧಿವೇಶನದಲ್ಲಿ ಬಗೆಹರಿಸಲ್ಪಟ್ಟಿತು. |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: |
|
| (1) | A ಮಾತ್ರ |
| (2) | B ಮಾತ್ರ |
| (3) | A ಮತ್ತು B ಎರಡೂ |
| (4) | ಮೇಲಿನ ಯಾವುದೂ ಅಲ್ಲ |
ಸರಿ ಉತ್ತರ
(1) A ಮಾತ್ರ
|
48. | ಪಟ್ಟಿ I (ಕಬ್ಬಿಣದ ಅದಿರು) ಮತ್ತು ಪಟ್ಟಿ II (ಕಬ್ಬಿಣದ ಶೇಕಡಾವಾರು ಅಂಶ) ಗಳನ್ನು ಹೊಂದಿಸಿ : |
| | ಪಟ್ಟಿ I (ಕಬ್ಬಿಣದ ಅದಿರು) | | ಪಟ್ಟಿ II (ಕಬ್ಬಿಣದ ಶೇಕಡಾವಾರು ಅಂಶ) |
| A. | ಮ್ಯಾಗ್ನಟೈಟ್ | I. | ಶೇ. 55 ರವರೆಗೆ |
| B. | ಹೆಮಟೈಟ್ | II. | ಶೇ. 48.2 ರವರೆಗೆ |
| C. | ಲಿಮೋನೈಟ್ | III. | ಶೇ. 72.4 ರವರೆಗೆ |
| D. | ಸಿಡರೈಟ್ | IV. | ಶೇ. 69.9 ರವರೆಗೆ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | III | IV | II | I |
| (2) | III | IV | I | II |
| (3) | II | I | III | IV |
| (4) | II | IV | III | I |
ಸರಿ ಉತ್ತರ
(2) III IV I II
|
49. | ಗಡಿಯಾರದಲ್ಲಿ 3:30 ಘಂಟೆ ಇದ್ದಾಗ, ಅದರ ಮುಳ್ಳುಗಳ ನಡುವೆ ಉಂಟಾಗುವ ಕೋನವು ಎಷ್ಟಾಗಿರುತ್ತದೆ ? |
|
| (1) | 95° |
| (2) | 65° |
| (3) | 86° |
| (4) | 75° |
ಸರಿ ಉತ್ತರ
(4) 75°
|
50. | ಪಟ್ಟಿ I (ಪುಸ್ತಕಗಳು) ಮತ್ತು ಪಟ್ಟಿ II (ಲೇಖಕರು) ಗಳನ್ನು ಹೊಂದಿಸಿ : |
| | ಪಟ್ಟಿ I (ಪುಸ್ತಕಗಳು) | | ಪಟ್ಟಿ II (ಲೇಖಕರು) |
| A. | ಎ ಭೀಫ್ ಹಿಸ್ಟರಿ ಆಫ್ ಟೈಂ | I. | ಶಶಿ ತರೂರ್ |
| B. | ಬುಕ್ ಲೆಸ್ ಇನ್ ಬಾಗ್ದಾದ್ | II. | ಸ್ಟೀಫನ್ ಹಾಕಿಂಗ್ |
| C. | ಲಾಂಗ್ ವಾಕ್ ಟು ಫ್ರೀಡಂ | III. | ಖುಷ್ವಂತ್ ಸಿಂಗ್ |
| D. | ಟ್ರೂತ್, ಲವ್ ಅಂಡ್ ಎ ಲಿಟಲ್ ಮಲೀಸ್ | IV. | ನೆಲ್ಸನ್ ಮಂಡೇಲಾ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ |
|
| | A | B | C | D |
| (1) | I | II | IV | III |
| (2) | I | II | III | IV |
| (3) | II | I | IV | III |
| (4) | II | I | III | IV |
ಸರಿ ಉತ್ತರ
(3) II I IV III
|
51. | ಪಟ್ಟಿ I (ರಾಷ್ಟ್ರೀಯ ಉದ್ಯಾನ) ಮತ್ತು ಪಟ್ಟಿ II (ರಾಜ್ಯಗಳನ್ನು)ಗಳನ್ನು ಹೊಂದಿಸಿ : |
| | ಪಟ್ಟಿ I (ರಾಷ್ಟ್ರೀಯ ಉದ್ಯಾನಗಳು) | | ಪಟ್ಟಿ II(ರಾಜ್ಯಗಳು) |
| A. | ಸೈಲೆಂಟ್ ವ್ಯಾಲಿ | I. | ಮೇಘಾಲಯ |
| B. | ನೋಕ್ರೆಕ್ | II. | ಕೇರಳ |
| C. | ನಾಗರಹೊಳೆ | III. | ಕರ್ನಾಟಕ |
| D. | ಪನ್ನಾ | IV. | ಮಧ್ಯ ಪ್ರದೇಶ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | I | II | IV | III |
| (2) | II | I | IV | III |
| (3) | I | II | III | IV |
| (4) | II | I | III | IV |
ಸರಿ ಉತ್ತರ
(4) II I III IV
|
52. | ಭಾರತದ 18 ವಿಜ್ಞಾನಿಗಳೂ ಸೇರಿದಂತೆ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡ ಮೊಟ್ಟಮೊದಲಿಗೆ ಬಹಿರಂಗ ಪಡಿಸಿದ ವಂಶವಾಹಿ ಸಂಕೇತವು ಈ ಕೆಳಗಿನ ವ್ಯಾಪಕವಾಗಿ ಬೆಳೆಯುವ ಯಾವ ಬೆಳೆಯನ್ನು ಕುರಿತದ್ದು ? |
|
| (1) | ಗೋಧಿ |
| (2) | ಅಕ್ಕಿ |
| (3) | ಮೆಕ್ಕೆ ಜೋಳ |
| (4) | ಜೋಳ |
ಸರಿ ಉತ್ತರ
(1) ಗೋಧಿ
|
53. | ಮೊಹಿಂದರ್ ಸಿಂಗ್ ಗಿಲ್ ಮೂರು ಜಿಗಿತ ಕ್ರೀಡೆಯಲ್ಲಿ 1970 ರಲ್ಲಿ ಚಿನ್ನದ ಪದಕವನ್ನು ಬ್ಯಾಂಕಾಕ್ ಏಷಿಯನ್ ಕ್ರೀಡೆಯಲ್ಲಿ ಪಡೆದರು. 2018 ರಲ್ಲಿ ಜಕಾರ್ತಾ ಏಷಿಯನ್ ಕ್ರೀಡೆಗಳಲ್ಲಿ ಪುರುಷರ ತ್ರಿಜಿಗಿತದ ಕ್ರೀಡೆಯಲ್ಲಿ ಮೈಲುಗಲ್ಲು ಸಾಧನೆಮಾಡಿದ ಎರಡನೇ ಭಾರತೀಯ ಕ್ರೀಡಾಪಟು ಯಾರು ? |
|
| (1) | ಸರ್ತೆಜ್ ಸಿಂಗ್ |
| (2) | ಗುರು ಹೆಚ್.ಎಸ್. |
| (3) | ಮಿಕಾ ಸಿಂಗ್ |
| (4) | ಅರ್ಪಿಂದರ್ ಸಿಂಗ್ |
ಸರಿ ಉತ್ತರ
(4) ಅರ್ಪಿಂದರ್ ಸಿಂಗ್
|
54. | ‘‘KAKADU 2018’’ ನ್ನು ಕುರಿತು ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : |
| A. | ಅದು ಬಹುಮುಖ ಪ್ರಾದೇಶಿಕ ಸಾಗರ ಒಪ್ಪಂದದ ತಾಲೀಮಿನ 14 ನೇ ಆವೃತ್ತಿಯಾಗಿದ್ದು, ಇದು ಆಸ್ಟ್ರೇಲಿಯಾದ ಡಾರ್ವಿನ್ ನಲ್ಲಿ ನಡೆಯತು. |
| B. | ಭಾರತೀಯ ನೌಕಾದಳ ನೌಕೆ ‘‘ಐ.ಎನ್.ಎಸ್. ಸಹ್ಯಾದ್ರಿ’’ಯು ಈ ತಾಲೀಮಿನಲ್ಲಿ ಭಾಗವಹಿಸಿತು. |
| ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ? |
| ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ: |
|
| (1) | A ಮಾತ್ರ |
| (2) | B ಮಾತ್ರ |
| (3) | A ಮತ್ತು B ಇವೆರಡೂ |
| (4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(3) A ಮತ್ತು B ಇವೆರಡೂ
|
55. | ಈಚಿನ ದಿನಗಳಲ್ಲಿ ಗುಂಪು ಗೊಂದಲ ಘಟನೆಗಳ ಹೆಚ್ಚಳದ ಜಾಗೃತಿಯಂದಾಗಿ ಘನ ಸರ್ವೋಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಅಂತಹ ಘಟನೆಗಳನ್ನು ‘‘ಗೂಂಡಾವರ್ತನೆಯ ಹೀನ ಕಾರ್ಯ’’ ಎಂದು ತಿಳಿಸಿತು. ಈ ಕೆಳಗಿನ ಸಮಿತಿಗಳ ಪೈಕಿ ಯಾವ ಸಮಿತಿಯು ಗುಂಪು ಗೂಂಡಾಗಿರಿ ಮತ್ತು ಹಿಂಸೆಯ ವಿರುದ್ಧವಾಗಿ ನಿಯಮಗಳನ್ನು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಲು ರಚಿತವಾಗಿದ್ದು ? |
|
| (1) | ರಾಜೀವ್ ಗೌಬಾ ಸಮಿತಿ |
| (2) | ತಾರಕನಾಥ್ ಸಮಿತಿ |
| (3) | ಒ.ಪಿ. ನೀಲ್ ಸಮಿತಿ |
| (4) | ಇಂದರ್ಜೀತ್ ಸಿಂಗ್ ಸಮಿತಿ |
ಸರಿ ಉತ್ತರ
(1) ರಾಜೀವ್ ಗೌಬಾ ಸಮಿತಿ
|
56. | ರಕ್ಷಣಾ ಸಚಿವಾಲಯದ ಸಮಗ್ರ ರಕ್ಷಣಾ ಸಿಬ್ಬಂದಿಯು ಒಡಂಬಡಿಕೆಯೊಂದನ್ನು ಸಹಿಮಾಡಿ ಈ ಕೆಳಗಿನ ಯಾವ ಸಂಸ್ಥೆಯೊಂದಿಗೆ, ಉಪಗ್ರಹಾಧಾರಿತವಾಗಿ ಟೆಲಿ ಮೆಡಿಸಿನ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತುರ್ತು ವೈದ್ಯಕೀಯ ಬೆಂಬಲವನ್ನು ಸುಧಾರಿಸಿ ಉನ್ನತ ಎತ್ತರದ ಸ್ಥಳಗಳಲ್ಲಿ ಮುಖ್ಯವಾಗಿ ಸಿಯಾಚಿನ್ನಲ್ಲಿನ ಭಾರತೀಯ ಸೈನಿಕರಿಗೆ ಒದಗಿಸುವ ವ್ಯವಸ್ಥೆ ಮಾಡಿತು ? |
|
| (1) | VSSC |
| (2) | ISRO |
| (3) | BARC |
| (4) | DRDO |
ಸರಿ ಉತ್ತರ
(2) ISRO
|
57. | ಕೆಳಗಿನ ಯಾವ ದೇಶದಲ್ಲಿ ನಾಲ್ಕನೆಯ ಅಂತರರಾಷ್ಟ್ರೀಯ ಆಯುರ್ವೇದ ಅಧಿವೇಶನವನ್ನು ಸಂಘಟಿಸಲಾಯಿತು ? |
|
| (1) | ಫಿನ್ಲೆಂಡ್ |
| (2) | ನೆದರ್ಲೆಂಡ್ಸ್ |
| (3) | ರಷ್ಯಾ |
| (4) | ಅಮೆರಿಕಾ ಸಂಯುಕ್ತ ಸಂಸ್ಥಾನ |
ಸರಿ ಉತ್ತರ
(2) ನೆದರ್ಲೆಂಡ್ಸ್
|
58. | ಇತ್ತೀಚೆಗೆ ಡಿ.ಆರ್.ಡಿ.ಓ. ದ ಹೊಸ ಚೇರಮನ್ ಆಗಿ ಎರಡು ವರ್ಷ ಅವಧಿಗೆ ನೇಮಕ ಗೊಂಡವರು ಯಾರು ? |
|
| (1) | ಅತುಲ್ ಕಪೂರ್ |
| (2) | ವಿನಯ ಡಿ.ಕೆ. |
| (3) | ಜಿ. ಸತೀಶ್ ರೆಡ್ಡಿ |
| (4) | ಸಂಜಯ ಮಿತ್ರ |
ಸರಿ ಉತ್ತರ
(3) ಜಿ. ಸತೀಶ್ ರೆಡ್ಡಿ
|
59. | ಈ ಕೆಳಗಿನ ಯಾವ ಸಂಸ್ಥೆಯು ಜಗತ್ತಿನ ಮೊದಲ ಬ್ಲಾಕ್ ಚೈನ್ ಬಾಂಡ್ ‘‘ಬಾಂಡ್-ಐ’’ ಯನ್ನು ರೂಪಿಸಿ, ವಿನಿಯೋಗಿಸಿ, ವರ್ಗಾವಣೆ ಮಾಡಿ ಮತ್ತು ವಿತರಿತ ಲೆಡ್ಜರ್ ತಂತ್ರಜ್ಞಾನ ಬಳಕೆ ಮಾಡುವುದರಿಂದ ಅದರ ಜೀವಿತ ಚಕ್ರದ ಮೂಲಕ ನಿರ್ವಹಣೆಯನ್ನು ಜಾರಿಗೆ ತಂದಿತು ? |
|
| (1) | ವಿಶ್ವ ಬ್ಯಾಂಕು |
| (2) | ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) |
| (3) | ಅಂತರರಾಷ್ಟ್ರೀಯ ವಿತ್ತ ನಿಧಿ (IMF) |
| (4) | ಅಂತರರಾಷ್ಟ್ರೀಯ ದೂರ ಸಂವಹನ (ITU) ಒಕ್ಕೂಟ |
ಸರಿ ಉತ್ತರ
(1) ವಿಶ್ವ ಬ್ಯಾಂಕು
|
60. | ಭಯೋತ್ಪಾದಕರ ಧಾಳಿಗೆ ಬಲಿಯಾದವರ ಸ್ಮರಣಾರ್ಥ ವಾಗಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಸ್ಮರಣಾ ದಿನವನ್ನು ಇತ್ತೀಚೆಗೆ ವಿಶ್ವ ಸಂಸ್ಥೆ ಆಚರಿಸಿತು. ಈ ಕೆಳಗಿನವುಗಳಲ್ಲಿ ಆ ದಿನಾಂಕ ಯಾವುದು? |
|
| (1) | 20 ಆಗಸ್ಟ್ |
| (2) | 21 ಆಗಸ್ಟ್ |
| (3) | 22 ಆಗಸ್ಟ್ |
| (4) | 23 ಆಗಸ್ಟ್ |
ಸರಿ ಉತ್ತರ
(2) 21 ಆಗಸ್ಟ್
|
61. | ಕನ್ನಡ ಚಿತ್ರ ನಿರ್ಮಾಪಕರು, ಭಾರತೀಯ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾಗಿದ್ದ ಏಕೈಕ ಕನ್ನಡಿಗರು ಇತ್ತೀಚೆಗೆ ವಿಧಿ ವಶರಾದರು ಅವರ ಹೆಸರು ? |
|
| (1) | ಆನಂದ ಮೂರ್ತಿ |
| (2) | ವಿ. ಹರಿಕೃಷ್ಣ |
| (3) | ಎಮ್. ಭಕ್ತವತ್ಸಲ |
| (4) | ಸಿ. ರಾಮಾಚಾರಿ |
ಸರಿ ಉತ್ತರ
(3) ಎಮ್. ಭಕ್ತವತ್ಸಲ
|
62. | ಪುರುಷರ ಹಾಕಿಯಲ್ಲಿ ಭಾರತೀಯ ಪುರುಷರ ರಾಷ್ಟ್ರೀಯ ಹಾಕಿ ತಂಡವು 2018 ರಲ್ಲಿ ಜಕಾರ್ತ ಏಷಿಯನ್ ಕ್ರೀಡೆಯಲ್ಲಿ ಕಂಚುಗಳಿಸಿತು, ಕಂಚುಗೆಲ್ಲಲು ಭಾರತದಿಂದ ಈ ಕೆಳಗಿನ ಯಾವ ದೇಶವು ಸೋಲಿಸಲ್ಪಟ್ಟಿತು ? |
|
| (1) | ದಕ್ಷಿಣ ಕೊರಿಯಾ |
| (2) | ಪಾಕಿಸ್ತಾನ |
| (3) | ಜಪಾನ್ |
| (4) | ವಿಯಟ್ನಾಂ |
ಸರಿ ಉತ್ತರ
(2) ಪಾಕಿಸ್ತಾನ
|
63. | ಭಾರತೀಯ ರಿಸರ್ವ ಬ್ಯಾಂಕ್ ನ ಮೇರೆಗೆ, ಅದರ ಇತ್ತೀಚಿನ ವಾರ್ಷಿಕ ಮಾಹಿತಿಯಲ್ಲಿ, ಹಣಕಾಸಿನ ವರ್ಷ 2017- 18 ರಲ್ಲಿ ಭಾರತಕ್ಕೆ ಒಂದ ವಿದೇಶೀ ನೇರ ಹೂಡಿಕೆಯ ಅಧಿಕ ಆಕರದ ಮೂಲವಾಗಿ ಯಾವ ದೇಶವನ್ನು ಲೆಕ್ಕಿಸಿದೆ ? |
|
| (1) | ಸಿಂಗಾಪುರ |
| (2) | ಫ್ರಾನ್ಸ್ |
| (3) | ಜರ್ಮನಿ |
| (4) | ಮಾರಿಷಸ್ |
ಸರಿ ಉತ್ತರ
(4) ಮಾರಿಷಸ್
|
64. | ವಿಶ್ವ ಸಂಸ್ಥೆಯು ಅಂತರರಾಷ್ಟ್ರೀಯ ದಶಕಗಳನ್ನು ಒಂದು ನಡೆವಳಿಯೊಂದಿಗೆ ಆಚರಿಸುತ್ತಿದ್ದು, ವಿಶ್ವ ಸಂಸ್ಥೆಯು 2016- 2025 ನ್ನು ಹೀಗೆಂದು ಘೋಷಿಸಿದೆ |
|
| (1) | ವಿಶ್ವ ಸಂಸ್ಥೆ, ಕುಟುಂಬ ರಚನೆಯ ದಶಕ |
| (2) | ವಿಶ್ವ ಸಂಸ್ಥೆ, ಪೌಷ್ಠಿಕಾಂಶವನ್ನು ಕುರಿತ ಕ್ರಿಯೆ/ಕ್ರಮದ ದಶಕ |
| (3) | ಆಫ್ರಿಕಾ ಮರುಭೂಮಿಯ ಜನರಿಗಾಗಿ ಅಂತರರಾಷ್ಟ್ರೀಯ ದಶಕ |
| (4) | ವಸಾಹತುಶಾಹಿ ನಿರ್ಮೂಲನಕ್ಕಾಗಿ ಅಂತರರಾಷ್ಟ್ರೀಯ ದಶಕ |
ಸರಿ ಉತ್ತರ
(2) ವಿಶ್ವ ಸಂಸ್ಥೆ, ಪೌಷ್ಠಿಕಾಂಶವನ್ನು ಕುರಿತ ಕ್ರಿಯೆ/ಕ್ರಮದ ದಶಕ
|
65. | ಶಿವಾಜಿಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವ ಬದಲಿಗೆ, ಮಿರ್ಜಾ ರಾಜಾ ಜಯಸಿಂಹನು ಅವನೊಂದಿಗೆ ಪುರಂದರ ಒಪ್ಪಂದವನ್ನು ಮಾಡಿ ಕೊಳ್ಳುವುದರ ಮೂಲಕ ಮುಕ್ತಾಯ ಗೊಳಿಸಿದನು ಏಕೆಂದರೆ ? |
|
| (1) | ಮರಾಠರ ಸಂಪೂರ್ಣ ನಿರ್ಮೂಲನ ಅಸಾಧ್ಯ. |
| (2) | ಮರಾಠರ ಬಗ್ಗೆ ರಾಜಾ ಜಯಸಿಂಹನು ಸಹಾನುಭೂತಿಯನ್ನು ಹೊಂದಿದ್ದನು. |
| (3) | ಶಿವಾಜಿಯ ಸಹಾಯದೊಂದಿಗೆ ಬಿಜಾಪುರದ ಅದಿಲ್ ಶಾಹಿ ಸುಲ್ತಾನನನ್ನು ಕಿತ್ತೊಗೆಯಲು ರಾಜಾ ಜಯಸಿಂಹನು ಬಯಸಿದ್ದನು. |
| (4) | ಬಿಜಾಪುರ ಮತ್ತು ಗೊಲ್ಕೊಂಡಾಗಳ ವಿಜಯಕ್ಕಾಗಿ ಮೊಘಲರ ಸೈನ್ಯವನ್ನು ಸಜ್ಜುಗೊಳಿಸಬೇಕಿತ್ತು. |
ಸರಿ ಉತ್ತರ
(3) ಶಿವಾಜಿಯ ಸಹಾಯದೊಂದಿಗೆ ಬಿಜಾಪುರದ ಅದಿಲ್ ಶಾಹಿ ಸುಲ್ತಾನನನ್ನು ಕಿತ್ತೊಗೆಯಲು ರಾಜಾ ಜಯಸಿಂಹನು ಬಯಸಿದ್ದನು.
|
66. | ಕೆಳಗಿನ ಯಾವ ಪ್ರಶಸ್ತಿಯು ಭಾರತ ಸರ್ಕಾರದ ಅಗ್ರತೆಯ ಕ್ರಮದಲ್ಲಿ ಪಟ್ಟಿಯ 7 ನೇ ಕ್ರಮಾಂಕದಲ್ಲಿ ಹಾಜರಾಗುವ ಸ್ಥಾನಮಾನವನ್ನು ಸ್ವೀಕೃತನಿಗೆ ನೀಡುವುದು ? |
|
| (1) | ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ |
| (2) | ಪರಮ ವೀರ್ ಚಕ್ರ |
| (3) | ಪದ್ಮ ವಿಭೂಷಣ್ |
| (4) | ಭಾರತ ರತ್ನ |
ಸರಿ ಉತ್ತರ
(4) ಭಾರತ ರತ್ನ
|
67. | ಪಟ್ಟಿ I (ಪಂಗಡಗಳು) ರಲ್ಲಿನ ಪಟ್ಟಿ II (ರಾಜ್ಯಗಳು) ರಲ್ಲಿರುವ ಹೊಂದಿಸಿ : |
| | ಪಟ್ಟಿ I (ಪಂಗಡಗಳು) | | ಪಟ್ಟಿ II (ರಾಜ್ಯಗಳು) |
| A. | ಕಟ್ಕರಿ | I. | ಹಿಮಾಚಲ್ ಪ್ರದೇಶ್ |
| B. | ರಭಾ | II. | ಮಧ್ಯ ಪ್ರದೇಶ್ |
| C. | ಭಿಲ್ | III. | ಮಹಾರಾಷ್ಟ್ರ |
| D. | ಗಡ್ಡಿ | IV. | ಮೇಘಾಲಯ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | III | IV | II | I |
| (2) | IV | III | II | I |
| (3) | I | IV | II | III |
| (4) | III | I | II | IV |
ಸರಿ ಉತ್ತರ
(1) III IV II I
|
68. | 1946 ನೇ ವರ್ಷದಲ್ಲಿ ಈ ಕೆಳಗಿನವುಗಳಲ್ಲಿ ಯಾವ ಘಟನೆಯು ಸಂಭವಿಸಲಿಲ್ಲ ? |
|
| (1) | ಭಾರತಕ್ಕೆ ಕ್ಯಾಬಿನೆಟ್ ನಿಯೋಗದ ಪ್ರಕಟನೆ |
| (2) | ಮುಸ್ಲಿಂ ಲೀಗ್ ನಿಂದ ನೀಡಲ್ಪಟ್ಟ ‘‘ಪ್ರತ್ಯಕ್ಷ /ನೇರ ಕೃತ್ಯ’’ ಕರೆ |
| (3) | ಮಧ್ಯಂತರ ಸರ್ಕಾರದ ರಚನೆ |
| (4) | ಲಾರ್ಡ್ ಮೌಂಟ್ ಬ್ಯಾಟನ್ ರನ್ನು ಭಾರತದ ವೈಸರಾಯಿಯಾಗಿ ನೇಮಕಾತಿ |
ಸರಿ ಉತ್ತರ
(4) ಲಾರ್ಡ್ ಮೌಂಟ್ ಬ್ಯಾಟನ್ ರನ್ನು ಭಾರತದ ವೈಸರಾಯಿಯಾಗಿ ನೇಮಕಾತಿ
|
69. | ಭಾರತದ ಸಮುದ್ರಬಂದರುಗಳನ್ನು ಪರಿಗಣಿಸಿ : |
| A. | ಚೆನ್ನೈ |
| B. | ಟುಟಿಕೊರಿನ್ |
| C. | ವಿಶಾಖಪಟ್ಟಣಂ |
| D. | ಪರದೀಪ್ |
| ಮೇಲಿನ ಬಂದರುಗಳ ಉತ್ತರದಿಂದ ದಕ್ಷಿಣದೆಡೆಗಿನ ಸರಿಯಾದ ಕ್ರಮಾನುಗತಿಯೇನು ? |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A, B, C, D |
| (2) | D, A, C, B |
| (3) | C, D, A, B |
| (4) | D, C, A, B |
ಸರಿ ಉತ್ತರ
(4) D, C, A, B
|
70. | ‘‘ಕಾಂಗ್ರೆಸ್ ಚಳುವಳಿಯು ಜನರಿಂದ ಸ್ಫೂರ್ತಿಗೊಂಡಿಲ್ಲ ಅಥವಾ ಕಲ್ಪಿತವಾಗಿಲ್ಲ ಅಥವಾ ಯೋಜಿತವಾಗಿಲ್ಲ’’ ಎಂಬುದಾಗಿ ಯಾರು ಹೇಳಿದರು ? |
|
| (1) | ಲಾರ್ಡ್ ಡಫರಿನ್ |
| (2) | ಸರ್ ಸೈಯದ್ ಅಹ್ಮದ್ ಖಾನ್ |
| (3) | ಲಾರ್ಡ್ ಕರ್ಜನ್ |
| (4) | ಲಾಲಾ ಲಜಪತ್ ರಾಯ್ |
ಸರಿ ಉತ್ತರ
(4) ಲಾಲಾ ಲಜಪತ್ ರಾಯ್
|
71. | ಈ ಹೇಳಿಕೆಗಳನ್ನು ಪರಿಗಣಿಸಿ : |
| A. | ಉಬ್ಬರ ಭರತಗಳು ನೌಕಾಯಾನ ಮತ್ತು ಮೀನು ಗಾರಿಕೆಗೆ ವಿಶೇಷ ಸಹಾಯ ಮಾಡುತ್ತವೆ. |
| B. | ಅತಿಯಾದ ಭರತಗಳು ದೊಡ್ಡ ಹಡಗುಗಳು ಬಂದರನ್ನು ಸುರಕ್ಷಿತವಾಗಿ ಪ್ರವೇಶಿಸಲು ಅಥವಾ ತೆರಳುವಂತೆ ಮಾಡಲು ಸಾಧ್ಯವಾಗಿಸುತ್ತದೆ. |
| C. | ಬಂದರಿನಲ್ಲಿ ಹೂಳುತುಂಬುವುದನ್ನು ಭರತವು ತಡೆಗಟ್ಟುತ್ತದೆ. |
| D. | ಕಾಂಡ್ಲ ಮತ್ತು ಡೈಮಂಡ್ ಬಂದರುಗಳು ಭರತದ ರೇವುಗಳಾಗಿವೆ. |
| ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ? |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು D ಮಾತ್ರ |
| (2) | B, C ಮತ್ತು D ಮಾತ್ರ |
| (3) | A, B ಮತ್ತು C ಮಾತ್ರ |
| (4) | A, B, C ಮತ್ತು D |
ಸರಿ ಉತ್ತರ
(4) A, B, C ಮತ್ತು D
|
72. | ಕೆಳಗಿನ ಕರ್ನಾಟಕದ ಸ್ಥಳಗಳಲ್ಲಿ, ಮದ್ರಾಸ್ ಪ್ರಾಂತ್ಯದಿಂದ ವರ್ತಮಾನದ ಕರ್ನಾಟಕಕ್ಕೆ ಭಾಷಾವಾರು ಉದ್ದೇಶಾಧಾರಿತ ರಾಜ್ಯಗಳ ಪುನರ್ರಚನೆಯ ವೇಳೆ ಅಲ್ಲಿಯ ಜನರು ಆಡುತ್ತಿದ್ದ ಭಾಷಾಧಾರಿತವಾಗಿ ಸೇರ್ಪಡೆಯಾದಂತಹವು ಯಾವುವು ? |
|
| (1) | ಕೊಡಗು ಮತ್ತು ದಕ್ಷಿಣ ಕನ್ನಡ |
| (2) | ದಕ್ಷಿಣ ಕನ್ನಡ ಮತ್ತು ಕೊಳ್ಳೆಗಾಲ |
| (3) | ಬಳ್ಳಾರಿ ಮತ್ತು ರಾಯಚೂರು |
| (4) | ಬೆಂಗಳೂರು ಮತ್ತು ಮಂಡ್ಯ |
ಸರಿ ಉತ್ತರ
(2) ದಕ್ಷಿಣ ಕನ್ನಡ ಮತ್ತು ಕೊಳ್ಳೆಗಾಲ
|
73. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : |
| A. | ದ್ರವದ ಒತ್ತಡವು ದ್ರವದ ಸಾಂದ್ರತೆಗೆ ವಿಲೋಮಾನುಪಾತ ದಲ್ಲಿರುತ್ತದೆ. |
| B. | ದ್ರವದ ಮೇಲೆ ಪ್ರಯೋಗಿಸಲಾದ ಒತ್ತಡವು ಧಾರಕದ ಗಾತ್ರ ಅಥವಾ ಆಕೃತಿಯನ್ನು ಅವಲಂಬಿಸಿಲ್ಲ. |
| ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ? |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | B ಮಾತ್ರ |
| (3) | A ಮತ್ತು B ಎರಡೂ |
| (4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(2) B ಮಾತ್ರ
|
74. | ಕೆಳಗೆ ನೀಡಿರುವ ನಾಲ್ಕು ಜೋಡಿಗಳಲ್ಲಿ, ಯಾವ ಪ್ರತಿಷ್ಠಿತರ ಸರಿಯಾದ ಸಂಯೋಜನೆಯು ಭಾರತದಲ್ಲಿ ಉಪ-ರಾಷ್ಟ್ರಪತಿಗಳಾಗಿದ್ದ ಹಾಗೂ ಅದಕ್ಕೆ ಪೂರ್ವದಲ್ಲಿ ರಾಜತಾಂತ್ರಿಕ ಹುದ್ದೆಗಳಾದ ರಾಯಭಾರಿಗಳು ಮತ್ತು ಹೈ ಕಮಿಷನರ್ ಗಳ ಹುದ್ದೆಯನ್ನು ಧಾರಣ ಮಾಡಿರು ವಂತವರನ್ನುಳ್ಳದ್ದಾಗಿದೆ ? |
|
| (1) | ಡಾ. ಎಸ್. ರಾಧಾಕೃಷ್ಣನ್ ಮತ್ತು ಜಿ.ಎಸ್. ಪಾಠಕ್ |
| (2) | ಡಾ. ಎಸ್. ರಾಧಾಕೃಷ್ಣನ್ ಮತ್ತು ವಿ.ವಿ. ಗಿರಿ |
| (3) | ಡಾ. ಝಾಕಿರ್ ಹುಸೇನ್ ಮತ್ತು ಕೆ.ಆರ್. ನಾರಾಯಣನ್ |
| (4) | ಬಿ.ಡಿ. ಜತ್ತಿ ಮತ್ತು ಕೆ.ಆರ್. ನಾರಾಯಣನ್ |
ಸರಿ ಉತ್ತರ
(3) ಡಾ. ಝಾಕಿರ್ ಹುಸೇನ್ ಮತ್ತು ಕೆ.ಆರ್. ನಾರಾಯಣನ್
|
75. | ಸುರೇಶನು 45 ನಿಮಿಷಗಳಲ್ಲಿ 6 ಕಿ.ಮೀ. ದೂರವನ್ನು ಕ್ರಮಿಸಬಲ್ಲನು. ಅದರ ಅರ್ಧದಷ್ಟನ್ನು (ಆ ವೇಳೆಯ) 2/3 ರಷ್ಟು ಸಮಯದಲ್ಲಿ ಕ್ರಮಿಸಿದಲ್ಲಿ, ಉಳಿದ ಸಮಯದಲ್ಲಿ ಉಳಿದ ದೂರವನ್ನು ಕ್ರಮಿಸಲು ಅವನು ಎಷ್ಟು ವೇಗದಿಂದರ
ಬೇಕಾಗುತ್ತದೆ? |
|
| (1) | 12 ಕಿ.ಮೀ. / ಘಂ |
| (2) | 10 ಕಿ.ಮೀ. / ಘಂ |
| (3) | 8 ಕಿ.ಮೀ. / ಘಂ |
| (4) | 6 ಕಿ.ಮೀ. / ಘಂ |
ಸರಿ ಉತ್ತರ
(1) 12 ಕಿ.ಮೀ. / ಘಂ
|
76. | ಪಟ್ಟಿ I ರಲ್ಲಿನ (ಉಪನಾಮ) ಪಟ್ಟಿ II ರಲ್ಲಿರುವ (ಸ್ಥಳಗಳು) ಪಟ್ಟಿಗಳೊಂದಿಗೆ ಹೊಂದಿಸಿ : |
| | ಪಟ್ಟಿ I (ಉಪನಾಮ) | | ಪಟ್ಟಿ II (ಸ್ಥಳಗಳು) |
| A. | ನೈಲ್ ನ ಕೊಡುಗೆ | I. | ಕೆನಡಾ |
| B. | ಮೇಪಲ್ ಎಲೆಯ ಭೂಮಿ | II. | ಈಜಿಪ್ಟ್ |
| C. | ಸಾವಿರ ಸರೋವರಗಳ ಭೂಮಿ | III. | ಆಸ್ಟ್ರೇಲಿಯಾ |
| D. | ಚಿನ್ನದ ತುಪ್ಪಳದ ಭೂಮಿ | IV. | ಫಿನ್ ಲ್ಯಾಂಡ್ |
| | | V. | ಸ್ವಿಟ್ಜರ್ ಲ್ಯಾಂಡ್ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | II | V | IV | III |
| (2) | II | I | III | IV |
| (3) | II | I | IV | III |
| (4) | II | I | V | III |
ಸರಿ ಉತ್ತರ
(3) II I IV III
|
77. | ಕೆಳಗಿನವುಗಳಲ್ಲಿ ಯಾವುದು ಭಾರತದ ರಾಷ್ಟ್ರಪತಿಗಳ ಚುನಾಯಕ ಭಾಗವಾಗಿರುತ್ತದೆ ಆದರೆ ಅವರ ಖಂಡನೆಗಾಗಿ ಫೋರಂನ ಭಾಗವಾಗಿರುವುದಿಲ್ಲ ? |
|
| (1) | ಲೋಕ ಸಭೆ |
| (2) | ರಾಜ್ಯ ಸಭೆ |
| (3) | ರಾಜ್ಯ ವಿಧಾನ ಪರಿಷತ್ತುಗಳು |
| (4) | ರಾಜ್ಯ ವಿಧಾನ ಮಂಡಲಗಳು |
ಸರಿ ಉತ್ತರ
(4) ರಾಜ್ಯ ವಿಧಾನ ಮಂಡಲಗಳು
|
78. | ವಿಶ್ವ ಸಂಸ್ಥೆಯನ್ನು ಕುರಿತ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : |
| A. | II ನೇ ಪ್ರಪಂಚ ಮಹಾಯುದ್ಧದ ನಂತರ 1945 ರ 24 ನೇ ಅಕ್ಟೋಬರ್ ನಲ್ಲಿ ಸ್ಥಾಪನೆ ಯಾಯಿತು. |
| B. | UN ನ ಕೇಂದ್ರಕಾರ್ಯ ಸ್ಥಾನವು, ನ್ಯೂಯಾರ್ಕ್ ನಗರದ ಮನಹಾಟ್ಟನ್ ನಲ್ಲಿದೆ. |
| C. | UN ವು 2001 ರಲ್ಲಿ ನೊಬೆಲ್ ಶಾಂತಿ ಪಾರಿತೋಷಕವನ್ನು ಗೆದ್ದಿದೆ. |
| ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ? |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | A ಮತ್ತು B ಮಾತ್ರ |
| (3) | B ಮತ್ತು C ಮಾತ್ರ |
| (4) | A, B ಮತ್ತು C |
ಸರಿ ಉತ್ತರ
(4) A, B ಮತ್ತು C
|
79. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : |
| A. | ಸಂಸತ್ತಿನ ಅಧಿವೇಶನ ಸಭೆ ಇಲ್ಲದಿದ್ದಾಗ ಅಧ್ಯಕ್ಷರು ಸುಗ್ರೀವಾಜ್ಞೆಯನ್ನು ಘೋಷಿಸಬಹುದು. ಈ ಘೋಷಣೆಗಳು ಸಂಸತ್ತಿನಿಂದ ನ್ಯಾಯ ಸಮ್ಮತವಾಗಿ ಅದರ ಪುನರ್ ಅಧಿವೇಶನದ ಆರು ತಿಂಗಳೊಳಗಾಗಿ ಅನುಮೋದಿತವಾಗಬೇಕು. |
| B. | ರಾಷ್ಟ್ರಪತಿಗಳು ಲೋಕಸಭೆಗೆ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಗಳಲ್ಲಿ ವಿಶೇಷವಾಗಿ ಕಾರ್ಯಶೀಲ ಅನುಭವದ ಜ್ಞಾನವನ್ನು ಹೊಂದಿರುವ 12 ಮಂದಿ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ. |
| ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ ? |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮಾತ್ರ |
| (2) | B ಮಾತ್ರ |
| (3) | A ಮತ್ತು B ಎರಡೂ |
| (4) | A ಆಗಲೀ ಅಥವಾ B ಆಗಲೀ ಅಲ್ಲ |
ಸರಿ ಉತ್ತರ
(4) A ಆಗಲೀ ಅಥವಾ B ಆಗಲೀ ಅಲ್ಲ
|
80. | ‘ದೇವಾನಾಂ ಪಿಯದಸಿ’ ಮತ್ತು ‘ಅಶೋಕ ಮೌರ್ಯ’ ಎಂಬುದು ಒಂದೇ ಮತ್ತು ಅದೇ ಆಗಿವೆ. ಈ ಕೆಳಗಿನ ಯಾವ ಸ್ಥಳದಲ್ಲಿಯ ಕೆತ್ತನೆಯ ಆಧಾರದ ಮೇಲೆ ಇದನ್ನು ಒಪ್ಪಲಾಗಿದೆ ? |
|
| (1) | ಜಟಿಂಗ |
| (2) | ಗವಿಮಠ್ |
| (3) | ಮಾಸ್ಕಿ |
| (4) | ಸಿದ್ಧಾಪುರ |
ಸರಿ ಉತ್ತರ
(3) ಮಾಸ್ಕಿ
|
81. | ಪಟ್ಟಿ I ರಲ್ಲಿನ (ಕೇಂದ್ರಾಡಳಿತ ಪ್ರದೇಶಗಳು) ಪಟ್ಟಿ II ರಲ್ಲಿರುವ (ಅವು ಯಾವ ಉಚ್ಛ ನ್ಯಾಯಾಲಯದ ವ್ಯಾಪ್ತಿಯಡಿ ಬರುವುದೋ) ಪಟ್ಟಿಗಳೊಂದಿಗೆ ಹೊಂದಿಸಿ : |
| | ಪಟ್ಟಿ I (ಕೇಂದ್ರಾಡಳಿತ ಪ್ರದೇಶಗಳು) | | ಪಟ್ಟಿ II (ಉಚ್ಛ ನ್ಯಾಯಾಲಯ) |
| A. | ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | I. | ಕಲ್ಕತ್ತಾ ಉಚ್ಛ ನ್ಯಾಯಾಲಯ |
| B. | ದಮನ್ ಮತ್ತು ಡಿಯು | II. | ಮುಂಬಯಿ ಉಚ್ಛ ನ್ಯಾಯಾಲಯ |
| C. | ಲಕ್ಷದ್ವೀಪ್ | III. | ಮದ್ರಾಸ್ ಉಚ್ಛ ನ್ಯಾಯಾಲಯ |
| D. | ಪುದುಚೆರಿ | IV. | ಕೇರಳ ಉಚ್ಛ ನ್ಯಾಯಾಲಯ |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| | A | B | C | D |
| (1) | II | IV | III | I |
| (2) | II | I | III | IV |
| (3) | II | I | IV | III |
| (4) | I | II | IV | III |
ಸರಿ ಉತ್ತರ
(4) I II IV III
|
82. | ಅಸಹಕಾರ ಚಳುವಳಿಯ ಅವಧಿಯಲ್ಲಿ ವಿದೇಶೀ ಬಟ್ಟೆಗಳ ಸುಡುವಿಕೆಯನ್ನು ಅವು ‘‘ಜಡ ತ್ಯಾಜ್ಯ’’ ಎಂಬುದಾಗಿ ಪರಿಗಣಿಸಿ ಕರೆ ನೀಡಿದವರು ಯಾರು ? |
|
| (1) | ರವೀಂದ್ರನಾಥ ಟ್ಯಾಗೋರ್ |
| (2) | ಮೊಹಮದ್ ಅಲಿ ಜಿನ್ನ್ಹಾ |
| (3) | ಲಾರ್ಡ್ ರೀಡಿಂಗ್ |
| (4) | ಮೋತಿಲಾಲ್ ನೆಹರೂ |
ಸರಿ ಉತ್ತರ
(1) ರವೀಂದ್ರನಾಥ ಟ್ಯಾಗೋರ್
|
83. | ಈ ಕೆಳಗಿನವುಗಳಲ್ಲಿ ಯಾವುದು ‘‘ಹತ್ತಿರದ ಹಣ’’ ಕ್ಕೆ ಉದಾಹರಣೆಯಾಗಿದೆ ? |
| A. | ಖಜಾನೆ ಬಿಲ್ಲುಗಳು |
| B. | ಉಳಿತಾಯ ಖಾತೆಗಳು |
| C. | ಯುನೈಟೆಡ್ ಸ್ಟೇಟ್ಸ್ ಡಾಲರ್ |
| D. | ರಿಯಲ್ ಎಸ್ಟೇಟ್ |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು B ಮಾತ್ರ |
| (2) | A, B ಮತ್ತು C ಮಾತ್ರ |
| (3) | C ಮತ್ತು D ಮಾತ್ರ |
| (4) | A ಮತ್ತು D ಮಾತ್ರ |
ಸರಿ ಉತ್ತರ
(2) A, B ಮತ್ತು C ಮಾತ್ರ
|
84. | ಅಲ್ಯೂಮಿನಿಯಮ್ ಗೋಳವನ್ನು 10°C ನಲ್ಲಿ ನೀರಿನಲ್ಲಿ ಮುಳುಗಿಸಿದೆ, ಗೋಳದ ತಾಪವನ್ನು ಅಧಿಕಗೊಳಿಸಿದರೆ, ಮೇಲ್ಮುಖ ಒತ್ತಡವು |
|
| (1) | ಹೆಚ್ಚಾಗುತ್ತದೆ |
| (2) | ಕಡಿಮೆ ಆಗುತ್ತದೆ |
| (3) | ಅಷ್ಟೇ ಇರುತ್ತದೆ |
| (4) | ಗೋಳದ ತ್ರಿಜ್ಯವನ್ನವಲಂಬಿಸಿ ಹೆಚ್ಚಾಗಲೂ ಬಹುದು ಅಥವಾ ಕಡಿಮೆ ಆಗಲೂ ಬಹುದು |
ಸರಿ ಉತ್ತರ
(2) ಕಡಿಮೆ ಆಗುತ್ತದೆ
|
85. | ಬಹಮನಿ ಸಾಮ್ರಾಜ್ಯದ ದೊರೆಗಳು ಕಲೆ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿಯನ್ನು ನಗರಗಳು, ಕಟ್ಟಡಗಳು, ಮಸೀದಿಗಳು ಮತ್ತು ಕೋಟೆಗಳ ರೂಪದಲ್ಲಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ ? |
|
| (1) | ಹೈದರಾಬಾದ್ ನ ನಗರವು ಬಿಜಾಪುರದ ಇಬ್ರಾಹಿಂ ಆದಿಲ್ ಷಾ ರಿಂದ ನಿರ್ಮಿತವಾಯಿತು. |
| (2) | ಮೊಹಮದ್ ಆದಿಲ್ ಷಾ ನ ಸಮಾಧಿಯ ಮೇಲಣ ಬಿಜಾಪುರದ ಗೋಲ್ ಗುಂಬಜ್ ಭಾರತದ ಅತಿ ದೊಡ್ಡದಾದ ಗುಮ್ಮಟವಾಗಿದೆ. |
| (3) | ಹೈದರಾಬಾದ್ ನ ಚಾರ್ ಮಿನಾರ್, ಗೋಲ್ಕೊಂಡಾದ ಖುತ್ಬ್ ಷಾಹಿ ಮನೆತನದ ಮೊಹಮದ್ ಕುಲಿ ಕುತ್ಬ್ ಷಾ ರಿಂದ ನಿರ್ಮಿಸಲ್ಪಟ್ಟಿತು. |
| (4) | ಮಹಮದ್ ಗವಾನನು ಬೀದರ್ ನಲ್ಲಿ ಕಾಲೇಜೊಂದನ್ನು ನಿರ್ಮಿಸಿದನು. |
ಸರಿ ಉತ್ತರ
(1) ಹೈದರಾಬಾದ್ ನ ನಗರವು ಬಿಜಾಪುರದ ಇಬ್ರಾಹಿಂ ಆದಿಲ್ ಷಾ ರಿಂದ ನಿರ್ಮಿತವಾಯಿತು.
|
86. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ : |
| A. | ಕೃಷ್ಣಾ ಮತ್ತು ತುಂಗಭದ್ರಾ ಪ್ರದೇಶಗಳ ನಡುವಣ ಪ್ರದೇಶ |
| B. | ಕೃಷ್ಣಾ ಗೋದಾವರಿ ಪ್ರಸ್ಥಭೂಮಿ |
| C. | ಮರಾಠಾವಾಡಾ ದೇಶ ಮೇಲಿನವುಗಳಲ್ಲಿ ಯಾವುದರ ಕುರಿತಾದ ಘರ್ಷಣೆಯನ್ನು ವಿಜಯನಗರ ಮತ್ತು ಬಹಮನಿ ಸಾಮ್ರಾಜ್ಯದ ನಡುವಣ ಹೋರಾಟದ ಕಾರಣಗಳಿಗಾಗಿ ಪರಿಗಣಿಸಬಹುದು : |
| ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ : |
|
| (1) | A ಮಾತ್ರ |
| (2) | A ಮತ್ತು B ಮಾತ್ರ |
| (3) | B ಮತ್ತು C ಮಾತ್ರ |
| (4) | A, B ಮತ್ತು C |
ಸರಿ ಉತ್ತರ
(4) A, B ಮತ್ತು C
|
87. | ಭಾರತದ ರಾಜ್ಯಗಳಲ್ಲಿ ಕೆಳಗಿನ ಯಾವ ರಾಜ್ಯಗಳು ಮೊಗಲರ ಅವಧಿಯಲ್ಲಿ ಮತ್ತು ಸುಲ್ತಾನರಲ್ಲಿ ಅಹೊಂ ಮನೆತನದವರ ಆಳ್ವಿಕೆ ಗೊಳಪಟ್ಟಿದ್ದವು ? |
|
| (1) | ಕೇರಳ |
| (2) | ಕಾಶ್ಮೀರ್ |
| (3) | ದಕ್ಷಿಣ ಕರ್ನಾಟಕ |
| (4) | ಅಸ್ಸಾಂ |
ಸರಿ ಉತ್ತರ
(4) ಅಸ್ಸಾಂ
|
88. | ಇಬ್ರಾಹಿಂ ಲೋದಿಯ ವಿರುದ್ಧ ಸಂಚು ಮಾಡಿದ ಮತ್ತು ದೆಹಲಿಯನ್ನು ಆಕ್ರಮಣ ಮಾಡಲು ಬಾಬರ್ ನನ್ನು ಆಹ್ವಾನಿಸಿದ್ದು ಕೆಳಗಿನವರಲ್ಲಿ ಯಾರು ? |
|
| (1) | ಬಹ್ಲೋಲ್ ಲೋದಿ |
| (2) | ದೌಲತ್ ಖಾನ್ ಲೋದಿ |
| (3) | ಸಿಕಂದರ್ ಲೋದಿ |
| (4) | ಮೇಲಿನ ಯಾರೂ ಅಲ್ಲ |
ಸರಿ ಉತ್ತರ
(2) ದೌಲತ್ ಖಾನ್ ಲೋದಿ
|
89. | ಇಸ್ರೋದ ಮೊದಲ ಮಾನವ ಬಾಹ್ಯಾಕಾಶ ನೌಕೆ ‘ಗಗನ್ ಯಾನ’ ದ ಕಾರ್ಯಕ್ರಮದ ಸಹಯೋಗಕ್ಕಾಗಿ ಭಾರತದೊಂದಿಗೆ ಯಾವ ದೇಶವು ಒಪ್ಪಂದ ಮಾಡಿಕೊಂಡಿತು ? |
|
| (1) | ಜರ್ಮನಿ |
| (2) | ಫ್ರಾನ್ಸ್ |
| (3) | ಜಪಾನ್ |
| (4) | ಯುನೈಟೆಡ್ ಸ್ಟೇಟ್ಸ್ |
ಸರಿ ಉತ್ತರ
(2) ಫ್ರಾನ್ಸ್
|
90. | 2018 ರ ಅಕ್ಟೋಬರ್ 2 ರಂದು ಭಾರತದ ಈಗಿನ ಮುಖ್ಯ ನ್ಯಾಯಾಧೀಶರಾದ ಶ್ರೀ ದೀಪಕ್ ಮಿಶ್ರಾರ ನಿವೃತ್ತಿಯ ನಂತರ ಯಾರು ಭಾರತದ 46 ನೇ ಮುಖ್ಯ ನ್ಯಾಯಾಧೀಶರಾಗುವರು ? |
|
| (1) | ಶ್ರೀ ರಂಜನ್ ಗೋಗೋಯ್ |
| (2) | ಶ್ರೀ ಮದನ್ ಲೊಕುರ್ |
| (3) | ಶ್ರೀ ಕುರಿಯನ್ ಜೊಸೆಫ್ |
| (4) | ಶ್ರೀ ಅರಜೆನ್ ಕುಮಾರ್ ಸಿಬ್ರಿ |
ಸರಿ ಉತ್ತರ
(1) ಶ್ರೀ ರಂಜನ್ ಗೋಗೋಯ್
|
91. | ದೆಹಲಿಯಲ್ಲಿನ ಅವರ ಆಳ್ವಿಕೆಯಲ್ಲಿ ಕೆಳಗಿನವರುಗಳನ್ನು ಕಾಲಾನುಕ್ರಮಣಿಕೆಯ ಅನುಸಾರವಾಗಿ ಜೋಡಿಸಿ : |
| A. | ರಝಿಯಾ |
| B. | ಬಲ್ಬನ್ |
| C. | ಇಲ್ತುತಮಿಷ್ |
| D. | ನಾಸಿರುದ್ದೀನ್ |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | D, A, C, B |
| (2) | A, C, D, B |
| (3) | A, B, C, D |
| (4) | C, A, D, B |
ಸರಿ ಉತ್ತರ
(4) C, A, D, B
|
92. | ಷೇಕ್-ಇ-ಬೇಖಬರ್ ಎಂಬುದಾಗಿ ಕೆಳಗಿನ ಯಾವ ಮೊಘಲ್ ಸಾಮ್ರಾಟ ಖ್ಯಾತನಾಗಿದ್ದಾನೆ? |
|
| (1) | ಷಾ ಅಲಂ |
| (2) | ಜಹಾಂಗೀರ್ |
| (3) | ಷಹಜಹಾನ್ |
| (4) | ಬಹಾದ್ದೂರ್ ಷಾ I |
ಸರಿ ಉತ್ತರ
(4) ಬಹಾದ್ದೂರ್ ಷಾ I
|
93. | ಈ ಕೆಳಗಿನ ಯಾವ ಸಾರ್ವಜನಿಕ ಸಾಮಾನ್ಯ ವಿಮಾ ಕಂಪನಿಗಳನ್ನು ವಿಲೀನಗೊಳಿಸಿ ಒಂದೇ ವಿಮಾ ಕಂಪೆನಿಯಾಗಿ 2018-19 ರ ಆಯವ್ಯಯದಲ್ಲಿ ರೂಪಿಸಲಾಯಿತು ? |
|
| (1) | ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ , ಓರಿಯಂಟಲ್ ಇನ್ಷೊರೆನ್ಸ್ ಮತ್ತು ನ್ಯಾಷನಲ್ ಇನ್ಷೂರೆನ್ಸ್ |
| (2) | LIC, ಭಾರ್ತಿ AXA ಮತ್ತು ಯುನೈಟೆಡ್ ಇನ್ಷೂರೆನ್ಸ್ |
| (3) | ಜನರಲ್ ಇನ್ಷೂರೆನ್ಸ್, ಮ್ಯಾಕ್ಸ್ ಬುಪಾ ಮತ್ತು UTI |
| (4) | ಅಗ್ರಿಕಲ್ಚರಲ್ ಇನ್ಷೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್, ಭಾರ್ತಿ AXA ಮತ್ತು ಯುನೈಟೆಡ್ ಇನ್ಷೂರೆನ್ಸ್ |
ಸರಿ ಉತ್ತರ
(1) ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ , ಓರಿಯಂಟಲ್ ಇನ್ಷೊರೆನ್ಸ್ ಮತ್ತು ನ್ಯಾಷನಲ್ ಇನ್ಷೂರೆನ್ಸ್
|
94. | ಭಾರತದಲ್ಲಿ ಪ್ರಸ್ತುತ ಕೊರತೆ ಖಾತೆಗೆ ಕಾರಣವಾಗುವ ಬಹುತೇಕ ಸಾಧ್ಯತೆಯು ಕೆಳಗಿನವುಗಳಲ್ಲಿ ಯಾವುದು ? |
| A. | ಕ್ರೀಡಾ ಉಪಯುಕತೆಯ ವಾಹನಗಳ ಮೇಲಿನ ಕಡಿತಗೊಳಿಸಿದ ಸುಂಕ ತೆರಿಗೆಗಳು |
| B. | ಚಿನ್ನದ ಮೇಲಿನ ಸುಂಕ ಕಡಿತ |
| C. | ಈರುಳ್ಳಿಯ ರಫ್ತು ಮೇಲಿನ ನಿಷೇಧ |
| ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ : |
|
| (1) | A ಮತ್ತು B ಮಾತ್ರ |
| (2) | B ಮತ್ತು C ಮಾತ್ರ |
| (3) | A ಮತ್ತು C ಮಾತ್ರ |
| (4) | A, B ಮತ್ತು C |
ಸರಿ ಉತ್ತರ
(4) A, B ಮತ್ತು C
|
95. | ಶೇವಿಂಗ್ ಬ್ರಷ್ ನ್ನು ಮುಳುಗಿಸಿ ನಂತರ ನೀರಿನಿಂದ ಹೊರತೆಗೆದಾಗ, ಅದರ ಕೂದಲುಗಳು (ಎಳೆಗಳು) ಈ ಕೆಳಗಿನ ಯಾವ ಗುಣ ಲಕ್ಷಣದ ಕಾರಣದಿಂದ ಒಟ್ಟಿಗೇ ಅಂಟಿಕೊಳ್ಳುತ್ತವೆ ? |
|
| (1) | ಘರ್ಷಣೆ |
| (2) | ಸ್ಥಿತಿಸ್ಥಾಪಕತ್ವ |
| (3) | ಸ್ನಿಗ್ಧತೆ |
| (4) | ಮೇಲ್ಮೈ ಕರ್ಷಣ |
ಸರಿ ಉತ್ತರ
(4) ಮೇಲ್ಮೈ ಕರ್ಷಣ
|
96. | ಹೊಸ ಕಂಪ್ಯೂಟರುಗಳನ್ನು ಒಂದು ಕಂಪನಿಯು ಸ್ಥಾಪಿಸಿ ಮತ್ತು ಉದ್ಯೋಗಿಗಳನ್ನು ಅವರಿಗೆ ಆ ಕಂಪ್ಯೂಟರ್ ಜ್ಞಾನವಿಲ್ಲವೆಂದು ವಜಾ ಮಾಡಿದರೆ ಅಂತಹ ನಿರುದ್ಯೋಗವನ್ನು ಯಾವ ರೀತಿಯ ನಿರುದ್ಯೋಗ ಎಂದು ಕರೆಯುತ್ತಾರೆ ? |
|
| (1) | ಮುಸುಕಿನ ನಿರುದ್ಯೋಗ |
| (2) | ರಾಚನಿಕ ನಿರುದ್ಯೋಗ |
| (3) | ಮುಚ್ಚಿಟ್ಟ ನಿರುದ್ಯೋಗ |
| (4) | ಘರ್ಷಣಾತ್ಮಕ ನಿರುದ್ಯೋಗ |
ಸರಿ ಉತ್ತರ
(4) ಘರ್ಷಣಾತ್ಮಕ ನಿರುದ್ಯೋಗ
|
97. | ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ 2018 ಆಶಯ ವಿಷಯವೇನು ? |
|
| (1) | ಕಾರ್ಮಿಕ ಸಾಮರ್ಥ್ಯದ ಆಚರಣೆ |
| (2) | ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಗಾಗಿ ಶ್ರಮಿಕರನ್ನು ಸಂಘಟನೆ ಸಂಘಟಿಸುವುದು |
| (3) | ಉದ್ಯೋಗಕ್ಕಾಗಿ ನಾವೀನ್ಯತೆ ಹಾಗೂ ಉದ್ಯಮಶೀಲತೆ |
| (4) | ಅಂತರರಾಷ್ಟ್ರೀಯ ಕಾರ್ಮಿಕ ಚಳುವಳಿಯ ಆಚರಣೆ |
ಸರಿ ಉತ್ತರ
(2) ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಗಾಗಿ ಶ್ರಮಿಕರನ್ನು ಸಂಘಟನೆ ಸಂಘಟಿಸುವುದು
|
98. | ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಇತ್ತೀಚಿನ ಅಧ್ಯಕ್ಷರು ಯಾರು ? |
|
| (1) | ಡಾ. ಸಿ. ರಂಗರಾಜನ್ |
| (2) | ಡಾ. ಸುಬ್ರಮಣ್ಯಮ್ ಸ್ವಾಮಿ |
| (3) | ಡಾ. ಸುಮಿತ್ರಾ ಚೌಧರಿ |
| (4) | ಶ್ರೀ ಬಿಬೇಕ ದೆಬ್ರಾಯ್ |
ಸರಿ ಉತ್ತರ
(4) ಶ್ರೀ ಬಿಬೇಕ ದೆಬ್ರಾಯ್
|
99. | ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮಗಳಿಗಾಗಿ ಉಪ ಮಹಾ ನಿರ್ದೇಶಕರಾಗಿ ಇತ್ತೀಚೆಗೆ ನೇಮಕ ಹೊಂದಿದ ಭಾರತೀಯ ಮಹಿಳೆ ಯಾರು ? |
|
| (1) | ಡಾ. ಸೊಮಯ ಸ್ವಾಮಿನಾಥನ್ |
| (2) | ಡಾ. ಸರೋಜಾ ವೈದ್ಯನಾಥನ್ |
| (3) | ಡಾ. ಸೊಮದುರ್ಗ್ ರಾಜನಾಥನ್ |
| (4) | ಡಾ. ಸುಕಯಾ ಬಾಲಾ |
ಸರಿ ಉತ್ತರ
(1) ಡಾ. ಸೊಮಯ ಸ್ವಾಮಿನಾಥನ್
|
100. | ಇತ್ತೀಚೆಗೆ ಪರಿಸರ, ಅರಣ್ಯಗಳು ಮತ್ತು ವಾಯುಗುಣ ಬದಲಾವಣೆಯ ಸಚಿವಾಲಯದಿಂದ ಬಿಡುಗಡೆಯಾದ ಕೈಗಾರಿಕೆಗಳ ಪುನರ್ ವಿಂಗಡಣೆಯಲ್ಲಿ ಯಾವ ವರ್ಗದ ಕೈಗಾರಿಕೆಗಳಿಗೆ ಅವು ಮಾಲಿನ್ಯಕಾರಕವಲ್ಲವೆಂದೂ) ಅವುಗಳಿಗೆ ಪರಿಸರಾತ್ಮಕ ಒಪ್ಪಿಗೆ ಮತ್ತು ಪ್ರಾಯೋಗಿಕವಾಗಿ ತೀರುವಳಿ ಬೇಕಿಲ್ಲವೆನ್ನಲಾಗಿದೆ ? |
|
| (1) | ಕೆಂಪು |
| (2) | ಬಿಳಿ |
| (3) | ಹಸಿರು |
| (4) | ಕಿತ್ತಳೆ |
ಸರಿ ಉತ್ತರ
(2) ಬಿಳಿ
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ