Welcome to ALL IN ONE Education portal

Join us on Telegram

Join Now

Join us on Whatsapp

Join Now

Police Constable Previous Paper 01-12-2019

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ

 

1. ಮಾನವ ಶರೀರದಲ್ಲಿ ಅತಿ ದೊಡ್ಡ ಮೂಳೆ ಯಾವುದು?
  (ಎ) ಎಲುಬು
  (ಬಿ) ದವಡೆ ಮೂಳೆ
  (ಸಿ) ಹೆಗಲ ಮೂಳೆ
  (ಡಿ) ಕಾಲರ್ ಮೂಳೆ

CORRECT ANSWER

(ಎ) ಎಲುಬು


2. ನಮ್ಮ ಗ್ಯಾಲಕ್ಸಿ ಹೆಸರೇನು?
  (ಎ) ಮಿಲ್ಕಿ ವರ್ಲ್ಡ್
  (ಬಿ) ಮಿಲ್ಕಿ ಗ್ಯಾಲಕ್ಸಿ
  (ಸಿ) ಮಿಲ್ಕಿ ವೇ
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಸಿ) ಮಿಲ್ಕಿ ವೇ


3. ಕಂಪ್ಯೂಟರ್ ಲ್ಯಾನ್ (ಲೋಕಲ್ ಏರಿಯಾ ನೆಟ್ವರ್ಕ್) ಗೆ ಸಂಪರ್ಕಗೊಳಿಸಿದರೆ?
  (ಎ) ವೇಗವಾಗಿ ಚಲಿಸುತ್ತದೆ
  (ಬಿ) ಅಂತರ್ಜಾಲ ಸಂಪರ್ಕಕ್ಕೆ ಹೋಗುವುದು
  (ಸಿ) ಮಾಹಿತಿ ಮತ್ತು ಉಪಕರಣಗಳನ್ನು ಹಂಚಿಕೊಳ್ಳುವುದು
  (ಡಿ) ಇವುಗಳಲ್ಲಿ ಯಾವುದು ಅಲ್ಲ
CORRECT ANSWER

(ಸಿ) ಮಾಹಿತಿ ಮತ್ತು ಉಪಕರಣಗಳನ್ನು ಹಂಚಿಕೊಳ್ಳುವುದು


4. ಯಾವುದರ ಕೊರತೆಯಿಂದಾಗಿ ಗಂಟಲುವಾಳ ಉಂಟಾಗುತ್ತದೆ?
  (ಎ) ಐಯೋಡಿನ್
  (ಬಿ) ಬೇಟಾಡಿನ್
  (ಸಿ) ಕ್ಯಾಲ್ಸಿಯಂ
  (ಡಿ) ಪೊಟ್ಯಾಸಿಯಂ
CORRECT ANSWER

(ಎ) ಐಯೋಡಿನ್


5. ದೂರವಾಣಿಯನ್ನು ಯಾರು ಕಂಡುಹಿಡಿದರು?
  (ಎ) ಥಾಮಸ್ ಅಲ್ವಾ ಎಡಿಸನ್
  (ಬಿ) ಅಲೆಕ್ಸಾಂಡರ್ ವಿಲ್ಲಿಯಂ
  (ಸಿ) ಅಕೆರ್‌ಮನ್‌
  (ಡಿ) ಗ್ರಾಹಂ ಬೆಲ್
CORRECT ANSWER

(ಡಿ) ಗ್ರಾಹಂ ಬೆಲ್


6. ಹಗುರವಾದ ಅನಿಲ ಯಾವುದು?
  (ಎ) ಆಮ್ಲಜನಕ
  (ಬಿ) ಇಂಗಾಲ
  (ಸಿ) ಹೈಡ್ರೋಜನ್
  (ಡಿ) ಸಾರಜನಕ
CORRECT ANSWER

(ಸಿ) ಹೈಡ್ರೋಜನ್


7. ________ಗೆ ಪರಿವರ್ತಿಸಲಾದ ಡಾಕ್ಯುಮೆಂಟ್‌ಗಳನ್ನು ವೆಬ್‌ಗೆ ಪ್ರಕಟಿಸಬಹುದು.
  (ಎ) .ಎಚ್‌ಟಿಎಮ್‌ಎಲ್‌
  (ಬಿ) .ಡಿಓಸಿ
  (ಸಿ) .ಎಚ್‌ಟಿಟಿಪಿ
  (ಡಿ) .ಡಬ್ಲೂಡಬ್ಲೂಡಬ್ಲೂ
CORRECT ANSWER

(ಎ) .ಎಚ್‌ಟಿಎಮ್‌ಎಲ್‌


8. ಎವೆರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ ಯಾರು?
  (ಎ) ಸುನೀತಾ ವಿಲ್ಲಿಯಂಸ್
  (ಬಿ) ಬಚೇಂದ್ರಿ ಪಾಲ್
  (ಸಿ) ರಾಣಿ ಕುಮಾರಿ
  (ಡಿ) ಪಿ.ಟಿ. ಉಷಾ
CORRECT ANSWER

(ಬಿ) ಬಚೇಂದ್ರಿ ಪಾಲ್


9. 1024 ಕಿಲೋಬೈಟ್‌ಗಳು ಇದಕ್ಕೆ ಸಮಾನವಾಗಿರುತ್ತವೆ?
  (ಎ) 1 ಮೆಗಾಬೈಟ್ (ಎಂಬಿ)
  (ಬಿ) 1 ಕಿಲೋಬೈಟ್ (ಕೆಬಿ)
  (ಸಿ) 1 ಟೆರಾಬೈಟ್ (ಟಿಬಿ)
  (ಡಿ) 1 ಗೀಗಾಬೈಟ್ (ಜಿಬಿ)
CORRECT ANSWER

(ಎ) 1 ಮೆಗಾಬೈಟ್ (ಎಂಬಿ)


10. ಯಾವ ಸಸ್ಯಗಳು ಮರುಭೂಮಿಯಲ್ಲಿ ಬೆಳೆಯುತ್ತವೆ?
  (ಎ) ಅಲ್ಪೈನ್
  (ಬಿ) ಕಳ್ಳಿ
  (ಸಿ) ಸಿಲ್ವರ್‌ವುಡ್‌
  (ಡಿ) ತೇಗ
CORRECT ANSWER

(ಬಿ) ಕಳ್ಳಿ


11. ಐತಿಹಾಸಿಕ ಸ್ಮಾರಕ ಗೋಲ್ ಗುಂಬಜ್ ಯಾವ ಸ್ಥಳದಲ್ಲಿದೆ?
  (ಎ) ವಿಜಯನಗರ
  (ಬಿ) ಹೈದರಾಬಾದ್
  (ಸಿ) ವೆಲ್ಲೋರ್
  (ಡಿ) ವಿಜಯಪುರ
CORRECT ANSWER

(ಡಿ) ವಿಜಯಪುರ


12. ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಚನ್ನಪಟ್ಟಣವು ಯಾವುದಕ್ಕೆ ಪ್ರಸಿದ್ಧವಾಗಿದೆ
  (ಎ) ರೇಷ್ಮೆ
  (ಬಿ) ಶ್ರೀಗಂಧ
  (ಸಿ) ಆಟಿಕೆಗಳು
  (ಡಿ) ಅಗರಬತ್ತಿ
CORRECT ANSWER

(ಸಿ) ಆಟಿಕೆಗಳು


13. ಅಧಿಕ ವರ್ಷದಲ್ಲಿ ಎಷ್ಟು ದಿನಗಳಿರುತ್ತವೆ?
  (ಎ) 364
  (ಬಿ) 365
  (ಸಿ) 366
  (ಡಿ) 367

CORRECT ANSWER

(ಸಿ) 366


14. ಜೇನುನೊಣಗಳನ್ನು ಇಡುವ ಸ್ಥಳವನ್ನು ಏನೆಂದು ಕರೆಯಲಾಗುತ್ತದೆ?
  (ಎ) ಮೋರಿ (ಕೆನ್ನೆಲ್)
  (ಬಿ) ಪಂಜರ (ಎವಿಯರಿ)
  (ಸಿ) ಜೇನುನೊಣ (ಅಪಿಯರಿ)
  (ಡಿ) ಬಿಲ (ಬರೊವ್)
CORRECT ANSWER

(ಸಿ) ಜೇನುನೊಣ (ಅಪಿಯರಿ)


15. ವಿಂಡೋಸ್ 95, ವಿಂಡೋಸ್ 98 ಮತ್ತು ವಿಂಡೋಸ್ ಎನ್.ಟಿ ಯನ್ನು ಕರೆಯುವರು?
  (ಎ) ಪ್ರೋಸೆಸರ್
  (ಬಿ) ಆಪರೇಟರ್ಸ್
  (ಸಿ) ಡೊಮೈನ್ ಹೆಸರು
  (ಡಿ) ಅಪರೇಟಿಂಗ್ ಸಿಸ್ಟಮ್
CORRECT ANSWER

(ಡಿ) ಅಪರೇಟಿಂಗ್ ಸಿಸ್ಟಮ್


16. ನೀವು ಕೆಲವು ಪಠ್ಯವನ್ನು ಒಂದು ಪುಟದಿಂದ ಬೇರೆ ಪುಟಕ್ಕೆ ಸರಿಸಲು ಬಯಸಿದಾಗ ಉತ್ತಮ ವಿಧಾನ ________
  (ಎ) ಕಾಪಿ, ಪೇಸ್ಟ್ ಮತ್ತು ಡಿಲೀಟ್
  (ಬಿ) ಕಟ್ ಮತ್ತು ಪೇಸ್ಟ್
  (ಸಿ) ಫೈಂಡ್ ಮತ್ತು ರಿಪ್ಲೇಸ್
  (ಡಿ) ಡಿಲಿಟ್ ಮತ್ತು ರಿಟೈಪ್
CORRECT ANSWER

(ಬಿ) ಕಟ್ ಮತ್ತು ಪೇಸ್ಟ್


17. ಹಂಗಾರಕಟ್ಟ ಬಂದರು – ಈ ಕೆಳಗಿನವುಗಳಲ್ಲಿ ಯಾವುದು ಅದರ ಬಗ್ಗೆ ನಿಜವಾಗಿದೆ?
  (ಎ) ಇದು ಉಡುಪಿ ಜಿಲ್ಲೆಯಲ್ಲಿದೆ.
  (ಬಿ) ಇದನ್ನು ಪ್ರಮುಖವಾಗಿ ಮೀನುಗಾರಿಕೆ ದೋಣಿಗಳು ಬಳಸುತ್ತವೆ.
  (ಸಿ) ಈ ಬಂದರು ಸ್ವರ್ಣ ಮತ್ತು ಸೀತಾ ನದಿಯ ದಡದಲ್ಲಿದೆ.
  (ಡಿ) ಇವುಗಳಲ್ಲಿ ಎಲ್ಲವೂ.
CORRECT ANSWER

(ಡಿ) ಇವುಗಳಲ್ಲಿ ಎಲ್ಲವೂ.


18. ಈ ಕೆಳಗಿನ ಯಾವ ಅಭಯಾರಣ್ಯವು ವಿರಳ ಗ್ಯಾಂಗೆಟಿಕ್ ಡಾಲ್ಫಿನ್ ಮತ್ತು ಮೊಸಳೆ ಮತ್ತು ಘರಿಯಲ್‌ಗೆ ಹೆಸರುವಾಸಿಯಾಗಿದೆ?
  (ಎ) ಗಲ್ಫ್ ಆಫ್ ಕಚ್ ಮರೈನ್ ರಾಷ್ಟ್ರೀಯ ಉದ್ಯಾನ.
  (ಬಿ) ಮಹಾತ್ಮಾ ಗಾಂಧಿ ಮರೈನ್ ರಾಷ್ಟ್ರೀಯ ಉದ್ಯಾನ
  (ಸಿ) ಘೋಹಿರ್‌ಮಾತಾ ಮರೈನ್ ರಾಷ್ಟ್ರೀಯ ಉದ್ಯಾನ
  (ಡಿ) ರಾಷ್ಟ್ರೀಯ ಚಂಬಲ್ ಅಭಯಾರಣ್ಯ.
CORRECT ANSWER

(ಡಿ) ರಾಷ್ಟ್ರೀಯ ಚಂಬಲ್ ಅಭಯಾರಣ್ಯ.


19. ಆಗ್ರಾ ಯಾವ ನದಿಯ ದಡದಲ್ಲಿದೆ?
  (ಎ) ಯಮುನ
  (ಬಿ) ಗಂಗೋತ್ರಿ
  (ಸಿ) ಗಂದಕ್
  (ಡಿ) ಚಂಬಲ್
CORRECT ANSWER

(ಎ) ಯಮುನ


20. ಸುವರ್ಣ ವಿಧಾನ ಸೌಧ ಯಾವ ಸ್ಥಳದಲ್ಲಿದೆ?
  (ಎ) ಧಾರವಾಡ
  (ಬಿ) ಬೆಳಗಾವಿ
  (ಸಿ) ಬೆಂಗಳೂರು
  (ಡಿ) ಮೈಸೂರು
CORRECT ANSWER

(ಬಿ) ಬೆಳಗಾವಿ


21. ಈ ಕೆಳಗಿನ ಯಾವ ದೇಶವು ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವುದಿಲ್ಲ?
  (ಎ) ಬಾಂಗ್ಲಾದೇಶ
  (ಬಿ) ಭೂತಾನ್
  (ಸಿ) ತಜಕಿಸ್ತಾನ್
  (ಡಿ) ನೇಪಾಲ್
CORRECT ANSWER

(ಸಿ) ತಜಕಿಸ್ತಾನ್


22. ಸೈಹ್ಯಾದ್ರಿಯ ಇನ್ನೊಂದು ಹೆಸರು ಏನು?
  (ಎ) ಅರಾವಳಿ
  (ಬಿ) ಪಶ್ಚಿಮ ಘಟ್ಟ
  (ಸಿ) ಶಿವಾಲಿಕ
  (ಡಿ) ಹಿಮಾದ್ರಿ
CORRECT ANSWER

(ಬಿ) ಪಶ್ಚಿಮ ಘಟ್ಟ


23. ಕೆಳಗಿನ ಯಾವ ವನ್ಯಜೀವಿ ಅಭಯಾರಣ್ಯಗಳು ಕರ್ನಾಟಕದಲ್ಲಿ ಇಲ್ಲ?
  (ಎ) ಕಾವೇರಿ ವನ್ಯಜೀವಿ ಅಭಯಾರಣ್ಯ
  (ಬಿ) ದಾಂಡೇಲಿ ವನ್ಯಜೀವಿ ಅಭಯಾರಣ್ಯ
  (ಸಿ) ಭದ್ರಾ ವನ್ಯಜೀವಿ ಅಭಯಾರಣ್ಯ
  (ಡಿ) ಮುದುಮಲೈ ವನ್ಯಜೀವಿ ಅಭಯಾರಣ್ಯ
CORRECT ANSWER

(ಡಿ) ಮುದುಮಲೈ ವನ್ಯಜೀವಿ ಅಭಯಾರಣ್ಯ


24. ಬೆಳಕಿನ ವರ್ಷ ಎಂದರೇನು?
  (ಎ) ಸಮಯದ ಘಟಕ
  (ಬಿ) ಅಂತರದ ಘಟಕ
  (ಸಿ) ವೇಗದ ಘಟಕ
  (ಡಿ) ಇವುಗಳಲ್ಲಿ ಯಾವುದು ಅಲ್ಲ
CORRECT ANSWER

(ಬಿ) ಅಂತರದ ಘಟಕ


25. ಈ ಕೆಳಗಿನ ಯಾವ ಪಟ್ಟಣವು ನದಿಯ ದಂಡೆಯಲ್ಲಿಲ್ಲ
  (ಎ) ಅಹಮದಾಬಾದ್
  (ಬಿ) ಮುಂಬೈ
  (ಸಿ) ಕಲ್ಕತ್ತಾ
  (ಡಿ) ಪಟ್ನಾ
CORRECT ANSWER

(ಬಿ) ಮುಂಬೈ


26. ಶ್ರವಣಬೆಳಗೊಳ ಪಟ್ಟಣವು ಕೆಳಗಿನ ಯಾವ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿದೆ?
  (ಎ) ಹಿಂದುಗಳ
  (ಬಿ) ಜೈನರ
  (ಸಿ) ಸಿಖ್ಖರ
  (ಡಿ) ಮುಸ್ಲಿಂರ
CORRECT ANSWER

(ಬಿ) ಜೈನರ


27. ಈ ಕೆಳಗಿನ ಯಾವ ನದಿಯು ಭಾರತದಲ್ಲಿ ಹುಟ್ಟುವುದಿಲ್ಲ?
  (ಎ) ಗಂಗಾ
  (ಬಿ) ಯಮುನಾ
  (ಸಿ) ಕೋಸಿ
  (ಡಿ) ಸಿಂಧು
CORRECT ANSWER

(ಸಿ) ಕೋಸಿ
or
(ಡಿ) ಸಿಂಧು


28. ಡಾಲ್ ಸರೋವರ (ಲೇಕ್) ಎಲ್ಲಿದೆ?
  (ಎ) ಜೈಪುರ್
  (ಬಿ) ಶಿಮ್ಲಾ
  (ಸಿ) ಶ್ರೀನಗರ
  (ಡಿ) ಕಾಶ್ಮೀರ್
CORRECT ANSWER

(ಸಿ) ಶ್ರೀನಗರ


29. ವಿಶ್ವದ ಅತಿ ದೊಡ್ಡ ಸಾಗರ ಯಾವುದು?
  (ಎ) ಪೆಸಿಫಿಕ್
  (ಬಿ) ಇಂಡಿಯನ್
  (ಸಿ) ಅಟ್ಲಾಂಟಿಕ್
  (ಡಿ) ಉತ್ತರ (ನಾದರ್ನ)
CORRECT ANSWER

(ಎ) ಪೆಸಿಫಿಕ್


30. ಸರಣಿಯಲ್ಲಿ ಮುಂದಿನ ಸಂಖ್ಯೆಯನ್ನು ಹುಡುಕಿ 6, 11, 21, 36, 56    ?   
  (ಎ) 91
  (ಬಿ) 51
  (ಸಿ) 81
  (ಡಿ) 42
CORRECT ANSWER

(ಸಿ) 81


31. ಫೋಟೋವನ್ನು ತೋರಿಸುತ್ತಾ ನಿಶಾಂತ ಹೇಳುವನು. ಅವರ ತಂದೆ ನನ್ನ ತಾಯಿಯ ಏಕೈಕ ಪುತ್ರ ಅದು ಯಾರ ಟೋ?
  (ಎ) ನಿಶಾಂತ
  (ಬಿ) ನಿಶಾಂತನ ಸಹೋದರ
  (ಸಿ) ನಿಶಾಂತನ ತಂದೆ
  (ಡಿ) ನಿಶಾಂತನ ಮಗ
CORRECT ANSWER

(ಡಿ) ನಿಶಾಂತನ ಮಗ


32. ಒಂದು ಪೆಟ್ಟಿಗೆಯಲ್ಲಿ 9 ಹಸಿರು ಮತ್ತು 7 ಹಳದಿ ಚೆಂಡುಗಳಿವೆ, ಯಾದೃಚ್ಛಿಕವಾಗಿ 2 ಚೆಂಡಗಳನ್ನು ಅನುಕ್ರಮವಾಗಿ ತೆಗೆಯಲಾಗುತ್ತದೆ. ಅವುಗಳಲ್ಲಿ ಒಂದು ಹಸಿರು ಮತ್ತು ಇನ್ನೊಂದು ಹಳದಿ ಬಣ್ಣದ್ದಾಗಿರುವ ಸಂಭವನೀಯತೆ ಏನು?
  (ಎ) 21402140
  (ಬಿ) 715715
  (ಸಿ) 21802180
  (ಡಿ) 916916
CORRECT ANSWER

(ಎ) 21402140


33. ಮೂರು ಸಂಖ್ಯೆಗಳ ಮೊತ್ತ 138 ಆಗಿದೆ. ಸಂಖ್ಯೆಗಳು 1:2:3ರ ಅನುಪಾತದಲ್ಲಿದೆ, ಹಾಗಾದರೆ ಸಂಖ್ಯೆಗಳು ಯಾವುವು?
  (ಎ) 23, 46, 69
  (ಬಿ) 21, 42, 63
  (ಸಿ) 20, 40, 68
  (ಡಿ) 33, 66, 99
CORRECT ANSWER

(ಎ) 23, 46, 69


34. ಒಬ್ಬ ಕಾರ್ಮಿಕನ ಸಂಬಳ 4,000 ರೂಪಾಯಿಗಳು, ಅದನ್ನು 10% ಗೆ ಹೆಚ್ಚಿಸಿದರೆ ಮತ್ತು ನಂತರದಲ್ಲಿ 10% ಹೆಚ್ಚಿಸಿದರೆ, ಸಂಬಳದಲ್ಲಿನ ಬದಲಾವಣೆ ಎಷ್ಟು?
  (ಎ) 440
  (ಬಿ) 40
  (ಸಿ) 400
  (ಡಿ) 140
CORRECT ANSWER

(ಎ) 440


35. 1,3,4,5 ಸಂಖ್ಯೆಗಳೊಂದಿಗೆ ಎಷ್ಟು 4 ಅಂಕೆಗಳ ಸಂಖ್ಯೆಯನ್ನು ರಚಿಸಬಹುದು? (ಸಂಖ್ಯೆಗಳ ಪುನರಾವರ್ತನೆಗಳಿಲ್ಲದೆ)
  (ಎ) 256
  (ಬಿ) 64
  (ಸಿ) 12
  (ಡಿ) 24
CORRECT ANSWER

(ಡಿ) 24


ಕಾಲೇಜಿನ 100 ವಿದ್ಯಾರ್ಥಿಗಳ ಸಮೀಕ್ಷೆಯಲ್ಲಿ 49 ಜನ ಫುಟ್ಬಾಲ್ ನೋಡುವುದನ್ನು ಇಷ್ಟ ಪಡುತ್ತಾರೆ ಎಂದು ತಿಳಿದುಬಂದಿದೆ. 53 ಜನ ಹಾಕಿ ನೋಡಲು ಇಷ್ಟಪಡುತ್ತಾರೆ ಮತ್ತು 62 ಜನ ಬಾಸ್ಕೆಟ್‌ಬಾಲ್‌ನೋಡಲು ಇಷ್ಟಪಡುತ್ತಾರೆ. 27 ಜನ ಫುಟ್ಬಾಲ್ ಮತ್ತು ಹಾಕಿ ಎರಡನ್ನೂ ನೋಡಲು ಇಷ್ಟಪಡುತ್ತಾರೆ. 29 ಜನ ಬಾಸ್ಕೆಟ್‌ಬಾಲ್‌ ಮತ್ತು ಹಾಕಿ ಎರಡನ್ನೂ ನೋಡಲು ಇಷ್ಟಪಡುತ್ತಾರೆ. 28 ಜನ ಫುಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್‌ ಎರಡನ್ನೂ ನೋಡಲು ಇಷ್ಟಪಡುತ್ತಾರೆ. 05 ಜನ ಏನನ್ನೂ ನೋಡಲು ಇಷ್ಟಪಡುವುದಿಲ್ಲ.

ಮೇಲಿನ ಮಾಹಿತಿಯ ಆಧಾರದ ಮೇಲೆ ಪ್ರಶ್ನೆ ಸಂಖ್ಯೆ 36-38ಉತ್ತರಿಸಿ :

36. ಎಷ್ಟು ಜನ ವಿದ್ಯಾರ್ಥಿಗಳು ಮೇಲೆ ನೀಡಿರುವ ಆಟಗಳಲ್ಲಿ ಕೇವಲ ಒಂದು ಆಟವನ್ನು ನೋಡಲ ಇಷ್ಟಪಡುತ್ತಾರೆ?
  (ಎ) 41
  (ಬಿ) 21
  (ಸಿ) 20
  (ಡಿ) 12
CORRECT ANSWER

(ಎ) 41


37. ಎಷ್ಟು ಜನ ವಿದ್ಯಾರ್ಥಿಗಳು ಕೇವಲ ಫುಟ್ಬಾಲ್ ಆಟವನ್ನು ನೋಡಲು ಇಷ್ಟಪಡುತ್ತಾರೆ?
  (ಎ) 49
  (ಬಿ) 9
  (ಸಿ) 15
  (ಡಿ) 27
CORRECT ANSWER

(ಬಿ) 9


38. ಎಷ್ಟು ಜನ ವಿದ್ಯಾರ್ಥಿಗಳು ಎಲ್ಲಾ ಆಟಗಳನ್ನು ನೋಡಲು ಇಷ್ಟಪಡುತ್ತಾರೆ?
  (ಎ) 95
  (ಬಿ) 15
  (ಸಿ) 5
  (ಡಿ) 80
CORRECT ANSWER

(ಬಿ) 15


39. ಅಮಿತ್, ಅಜಯ್ ಮತ್ತು ಆಕಾಶ್ ಇವರ ವಯಸ್ಸಿನ ಮೊತ್ತವು 80 ವರ್ಷಗಳು, 3 ವರ್ಷಗಳ ಹಿಂದೆ ಅವರ ವಯಸ್ಸಿನ ಒಟ್ಟು ಮೊತ್ತ?
  (ಎ) 71
  (ಬಿ) 77
  (ಸಿ) 74
  (ಡಿ) 72
CORRECT ANSWER

(ಎ) 71


40. ಕೌಟಿಲ್ಯನ ಅರ್ಥಶಾಸ್ತ್ರವು ಯಾವುದನ್ನು ವ್ಯವಹರಿಸುತ್ತದೆ?
  (ಎ) ಜ್ಯೋತಿಷ್ಯ
  (ಬಿ) ಆಯುರ್ವೇದ
  (ಸಿ) ಖಗೋಳ ವಿಜ್ಞಾನ
  (ಡಿ) ಸಾರ್ವಜನಿಕ ಆಡಳಿತ
CORRECT ANSWER

(ಡಿ) ಸಾರ್ವಜನಿಕ ಆಡಳಿತ


41. ಅಶೋಕ ರಾಜನನ್ನು ವಿವಿಧ ಶಾಸನಗಳಲ್ಲಿ ಉಲ್ಲೇಖಿಸಿರುವ ಹೆಸರು ಯಾವುದು?
  (ಎ) ಚಕ್ರವರ್ತಿ
  (ಬಿ) ಧರ್ಮಕೀರ್ತಿ
  (ಸಿ) ದೇವರಾಜ
  (ಡಿ) ದೇವನಾಂಪ್ರಿಯ ಪ್ರಿಯದರ್ಶಿ
CORRECT ANSWER

(ಡಿ) ದೇವನಾಂಪ್ರಿಯ ಪ್ರಿಯದರ್ಶಿ


42. ಗೌತಮ ಬುದ್ಧನ ಜೀವನದ ಬಗ್ಗೆ ರಚಿತ ಬುದ್ಧಚರಿತ ದ ಲೇಖಕರು ಯಾರು?
  (ಎ) ಅಶ್ವಘೋಷ
  (ಬಿ) ನಾಗಾರ್ಜುನ
  (ಸಿ) ನಗರ್‌ಸೇನ್‌
  (ಡಿ) ವರಾಹಮಿಹಿರ
CORRECT ANSWER

(ಎ) ಅಶ್ವಘೋಷ


43. ಬ್ರಿಟಿಷರ ವಿರುದ್ಧ ಯಾವ ಭಾರತೀಯ ಬೃಹತ್ ಆಂದೋಲನವು ಮಹಾತ್ಮ ಗಾಂಧಿ ನೇತೃತ್ವದಲ್ಲಿ ದಾಂಡಿ ಮಾರ್ಚ್‌ನಿಂದ ಪ್ರಾರಂಭವಾಗಿತ್ತು?
  (ಎ) ಖಿಲಾಫತ್ ಚಳುವಳಿ
  (ಬಿ) ಅಸಹಕಾರ ಚಳುವಳಿ
  (ಸಿ) ಭಾರತ ಬಿಟ್ಟು ತೊಲಗಿರಿ ಚಳುವಳಿ
  (ಡಿ) ಕಾನೂನು ಅಸಹಕಾರ ಚಳುವಳಿ
CORRECT ANSWER

(ಡಿ) ಕಾನೂನು ಅಸಹಕಾರ ಚಳುವಳಿ


44. ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಯಾವಾಗ ಸ್ಥಳಾಂತರಿಸಲಾಯಿತು?
  (ಎ) 1910
  (ಬಿ) 1911
  (ಸಿ) 1912
  (ಡಿ) 1913
CORRECT ANSWER

(ಬಿ) 1911


45. ಹಂಪಿಯ ಪ್ರಾಚೀನ ಅವಶೇಷಗಳು ಯಾವ ನದಿಯ ದಂಡೆಯಲ್ಲಿವೆ?
  (ಎ) ಮಲಪ್ರಭಾ ನದಿ
  (ಬಿ) ತುಂಗಭದ್ರ ನದಿ
  (ಸಿ) ಕಾವೇರಿ ನದಿ
  (ಡಿ) ಕಬಿನಿ ನದಿ
CORRECT ANSWER

(ಬಿ) ತುಂಗಭದ್ರ ನದಿ


46. ಬುದ್ದರ, ಹಿಂದುಗಳ ಮತ್ತು ಜೈನರ ಬಂಡೆಗಳನ್ನು ಕತ್ತರಿಸಿ ಮಾಡಿದ ಗುಹೆಗಳು ಈ ಕೆಳಗಿನ ಯಾವ ಸ್ಥಳದಲ್ಲಿ ಒಟ್ಟಿಗೆ ಇವೆ?
  (ಎ) ಅಜಂತಾ
  (ಬಿ) ಎಲ್ಲೋರಾ
  (ಸಿ) ಎಡಕ್ಕಲ್
  (ಡಿ) ಕಾರ್ಲೆ
CORRECT ANSWER

(ಬಿ) ಎಲ್ಲೋರಾ


47. ಭಾರತೀಯ ಕಾಂಗ್ರೆಸ್ಸಿನ ಮಧ್ಯಮ (ಸೌಮ್ಯ) ಬಣವು ಬ್ರಿಟಿಷರೊಂದಿಗೆ ವ್ಯವಹರಿಸಲು 3ಪಿ ಅನ್ನು ನಂಬುತ್ತದೆ. 3ಪಿ ನ ಸಂಕ್ಷೇಪಣ ರೂಪ?
  (ಎ) ಪ್ರೇೇಯರ್, ಪೆಟಿಷನ್ ಮತ್ತು ಪಾವರ್
  (ಬಿ) ಪ್ರೇೇಯರ್, ಪೆಟಿಷನ್ ಮತ್ತು ಪೇಶನ್ಸ್
  (ಸಿ) ಪ್ರೇೇಯರ್, ಪೆಟಿಷನ್ ಮತ್ತು ಪ್ರೊಟೆಸ್ಟ್
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಸಿ) ಪ್ರೇೇಯರ್, ಪೆಟಿಷನ್ ಮತ್ತು ಪ್ರೊಟೆಸ್ಟ್


48. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧಿವೇಶನವನ್ನು ಯಾರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು?
  (ಎ) ಎ.ಓ. ಹ್ಯೂಮ್
  (ಬಿ) ಬದ್ರುದ್ದೀನ್ ತಯಬ್ಜೀ
  (ಸಿ) ಜೆ.ಬಿ. ಕ್ರಿಪಲಾನಿ
  (ಡಿ) ಡಬ್ಲು.ಸಿ. ಬ್ಯಾನೆರ್ಜಿ
CORRECT ANSWER

(ಡಿ) ಡಬ್ಲು.ಸಿ. ಬ್ಯಾನೆರ್ಜಿ


49. ಮೊಘಲ್ ಸಿಂಹಾಸನದ ಉತ್ತರಾಧಿಕಾರಿ ‘‘ದಾರಾ ಶಿಕೋಹ್’’ ಅವರನ್ನು ಯಾರು ಸೋಲಿಸಿದರು?
  (ಎ) ಔರಂಗಜೇಬ್
  (ಬಿ) ಶಹ ಜಹಾನ್
  (ಸಿ) ಜಹಾಂಗೀರ್
  (ಡಿ) ಅಕ್ಬರ್
CORRECT ANSWER

(ಎ) ಔರಂಗಜೇಬ್


50. ಪ್ರಾಚೀನ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಮಹಾಜನಪದಗಳು ಎಷ್ಟು ಸಂಖ್ಯೆಯಲ್ಲಿವೆ?
  (ಎ) 15
  (ಬಿ) 16
  (ಸಿ) 17
  (ಡಿ) 18
CORRECT ANSWER

(ಬಿ) 16


51. ವಿಜಯನಗರದ ಯಾವ ದೊರೆಯು ಗಜಬೇಟೆಗಾರ (elephant hunter) ಎಂಬ ಬಿರುದು ಸ್ವೀಕರಿಸಿದರು?
  (ಎ) ಹರಿಹರ
  (ಬಿ) ಬುಕ್ಕ
  (ಸಿ) ದೇವರಾಯ – I
  (ಡಿ) ದೇವರಾಯ-II
CORRECT ANSWER

(ಡಿ) ದೇವರಾಯ-II


52. ಬಹಮನಿ ರಾಜವಂಶವನ್ನು ಸ್ಥಾಪಿಸಿದವರು ಯಾರು?
  (ಎ) ಅಲ್ಲಾವುದ್ದೀನ್ ಬಹಮನ್ ಶಾ
  (ಬಿ) ಅಲಾದ್ದೀನ್ ಮುಜಾಹಿದ್ ಶಾ
  (ಸಿ) ದೌಡ್ ಶಾ
  (ಡಿ) ಮೊಹಮ್ಮದ್ ಶಾ – I
CORRECT ANSWER

(ಎ) ಅಲ್ಲಾವುದ್ದೀನ್ ಬಹಮನ್ ಶಾ


53. ಈ ಕೆಳಗಿನವರಲ್ಲಿ ಮಹಾತ್ಮ ಗಾಂಧಿಯವರು ಯಾರನ್ನು 1940 ರ ವೈಯಕ್ತಿಕ ಸತ್ಯಾಗ್ರಹಕ್ಕಾಗಿ ಆಯ್ಕೆ ಮಾಡಿದರು?
  (ಎ) ವಿನೋಬಾ ಭಾವೆ
  (ಬಿ) ಲೋಕಮಾನ್ಯ ತಿಲಕ್
  (ಸಿ) ಲಾಲ್ ಬಹಾದ್ದೂರ್ ಶಾಸ್ತ್ರೀ
  (ಡಿ) ಜವಾಹರ್‌ಲಾಲ್‌ ನೆಹರು
CORRECT ANSWER

(ಎ) ವಿನೋಬಾ ಭಾವೆ


54. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಯಾವ ಅಧಿವೇಶನದಲ್ಲಿ ‘‘ವಂದೇ ಮಾತರಂ’’ ಅನ್ನು ಮೊದಲ ಬಾರಿಗೆ ಹಾಡಲಾಯಿತು?
  (ಎ) ಮದ್ರಾಸ್ ಅಧಿವೇಶನ, 1887
  (ಬಿ) ಅಲಹಾಬಾದ್ ಅಧಿವೇಶನ, 1888
  (ಸಿ) ಸೂರತ್ ಅಧಿವೇಶನ, 1907
  (ಡಿ) ಕಲ್ಕತ್ತಾ ಅಧಿವೇಶನ, 1896
CORRECT ANSWER

(ಡಿ) ಕಲ್ಕತ್ತಾ ಅಧಿವೇಶನ, 1896


55. ಸಿಂಧೂ ಕಣಿವೆ ನಾಗರಿಕತೆಯ ಜನರು ಯಾರನ್ನು ಪೂಜಿಸುತ್ತಾರೆ?
  (ಎ) ಪಶುಪತಿ
  (ಬಿ) ಅಯ್ಯಪ್ಪ
  (ಸಿ) ಹನುಮಾನ
  (ಡಿ) ಮೇಲಿನ ಯಾವುದೂ ಅಲ್ಲ
CORRECT ANSWER

(ಎ) ಪಶುಪತಿ


56. ಕಾಂಬೋಡಿಯದಲ್ಲಿರುವ ಅಂಗಕೋರ್‌ವಟ್‌ ದೇವಾಲಯವು ಯಾವುದಕ್ಕೆ ಸಮರ್ಪಿಸಲಾಗಿದೆ?
  (ಎ) ಕಾಳಿ
  (ಬಿ) ಹನುಮಾನ
  (ಸಿ) ವಿಷ್ಣು
  (ಡಿ) ಶಿವ
CORRECT ANSWER

(ಸಿ) ವಿಷ್ಣು


57. ವೇದ ಸಾಹಿತ್ಯದಲ್ಲಿ, ಯಾವ ಪುಸ್ತಕಗಳ ಗುಂಪಿನ ಹೆಸರಿನ ಅರ್ಥ ಎಂದರೆ ‘ಕಾಲುಗಳ ಬಳಿ ಮಲಗುವುದು’?
  (ಎ) ವೇದಾಂಗಗಳು
  (ಬಿ) ಉಪನಿಷದ್‌ಗಳು
  (ಸಿ) ಅರಣ್ಯಕಗಳು
  (ಡಿ) ಬ್ರಾಹ್ಮಣಗಳು
CORRECT ANSWER

(ಬಿ) ಉಪನಿಷದ್‌ಗಳು


58. ಭೌತಶಾಸ್ತ್ರದಲ್ಲಿ 2019ರ ನೊಬೆಲ್ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ಕಂಡುಹಿಡಿದಿದ್ದಕ್ಕಾಗಿ ನೀಡಲಾಗಿದೆ?
  (ಎ) ಲೇಸರ್
  (ಬಿ) ಗುರುತ್ವಾಕರ್ಷಣ ಅಲೆಗಳು
  (ಸಿ) ವಿಶ್ವವಿಜ್ಞಾನ
  (ಡಿ) ನ್ಯೂಟ್ರಿನೋ ಆಂದೋಲನಗಳು (oscillations)
CORRECT ANSWER

(ಸಿ) ವಿಶ್ವವಿಜ್ಞಾನ


59. ನೋಮಾಡಿಕ್ ಎಲಿಫೆಂಟ್ 2019 ಭಾರತ ಮತ್ತು ಯಾವ ದೇಶದ ನಡುವಿನ ಜಂಟಿ ಅಭ್ಯಾಸವಾಗಿದೆ?
  (ಎ) ಈಥಿಯೋಪಿಯಾ
  (ಬಿ) ಮೆಕ್ಸಿಕೋ
  (ಸಿ) ಜಪಾನ್
  (ಡಿ) ಮಂಗೋಲಿಯಾ
CORRECT ANSWER

(ಡಿ) ಮಂಗೋಲಿಯಾ


60. ವಿಶ್ವ ಪೋಸ್ಟ್ ದಿನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವ ದಿನ ಆಚರಿಸಲಾಗುತ್ತದೆ
  (ಎ) ಅಕ್ಟೋಬರ್ 18
  (ಬಿ) ಅಕ್ಟೋಬರ್ 9
  (ಸಿ) ಅಕ್ಟೋಬರ್ 10
  (ಡಿ) ಅಕ್ಟೋಬರ್ 11
CORRECT ANSWER

(ಬಿ) ಅಕ್ಟೋಬರ್ 9


61. ಯಾವ ಬ್ರಿಟನ್ ಗವರ್ನರ್ ಭಾರತದಲ್ಲಿ ಗುಲಾಮಗಿರಿಯಲ್ಲಿ ರದ್ದುಪಡಿಸಿದರು?
  (ಎ) ಲಾರ್ಡ್ ಔಕ್‌ಲ್ಯಾಂಡ್‌
  (ಬಿ) ಲಾರ್ಡ್ ಅಮ್ಹೇರ್ಟ್ಸ್
  (ಸಿ) ಲಾರ್ಡ್ ಎಲ್ಲೆನ್ ಬೊರೋಹ್
  (ಡಿ) ಲಾರ್ಡ್ ಡಾಲ್‌ಹೌಸಿ
CORRECT ANSWER

(ಸಿ) ಲಾರ್ಡ್ ಎಲ್ಲೆನ್ ಬೊರೋಹ್


62. ‘ಸ್ವದೇಶಿ’ ಮತ್ತು ‘ಬಹಿಷ್ಕಾರ’ ಘೋಷಣೆಗಳನ್ನು ಮೊದಲ ಬಾರಿಗೆ ಅಂಗೀಕರಿಸಲಾಗಿದ್ದು
  (ಎ) ಬಂಗಾಳದ ವಿಭಜನೆಯ ವಿರುದ್ಧ ಆಂದೋಲನ
  (ಬಿ) ಹೋಮ್ ರೂಲ್ ಚಳುವಳಿ
  (ಸಿ) ಅಸಹಕಾರ ಚಳುವಳಿ
  (ಡಿ) ಸೈಮನ್ ಆಯೋಗದ ಭಾರತ ಭೇಟಿ
CORRECT ANSWER

(ಎ) ಬಂಗಾಳದ ವಿಭಜನೆಯ ವಿರುದ್ಧ ಆಂದೋಲನ


63. ಯು.ಎನ್.ಎಚ್.ಸಿ.ಆರ್ ನ ಪೂರ್ಣ ರೂಪ
  (ಎ) ಯುನೈಟೆಡ್ ನೇಷನ್ಸ್ ಹೈ ಕಮೀಶನರ್ ಫಾರ್ ರೆಫ್ಯೂಜಿಸ್
  (ಬಿ) ಯುನೈಟೆಡ್ ನೇಷನ್ಸ್ ಹ್ಯೂಮನ್ ಕಮೀಶನರ್ ಫಾರ್ ರೆಫ್ಯೂಜಿಸ್
  (ಸಿ) ಯುನೈಟೆಡ್ ನೇಷನ್ಸ್ ಹ್ಯೂಮನ್ ಕಮೀಶನರ್ ರಿಸೋರ್ಸೇಸ್
  (ಡಿ) ಮೇಲಿನ ಯಾವುದೂ ಅಲ್ಲ
CORRECT ANSWER

(ಎ) ಯುನೈಟೆಡ್ ನೇಷನ್ಸ್ ಹೈ ಕಮೀಶನರ್ ಫಾರ್ ರೆಫ್ಯೂಜಿಸ್


64. ಕೆಳಗಿನ ಯಾವ ಬ್ಯಾಂಕುಗಳು ಒಂದೇ ಘಟಕಕ್ಕೆ ವಿಲೀನಗೊಳ್ಳುವುದರಿಂದ ಭಾರತದ ಎರಡನೇ ಅತಿ ದೊಡ್ಡ ಬ್ಯಾಂಕ್ ಆಗುತ್ತದೆ?
  (ಎ) ಪಿಎನ್‌ಬಿ, ಓಬಿಸಿ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
  (ಬಿ) ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್
  (ಸಿ) ಅಲಹಾಬಾದ್ ಮತ್ತು ಇಂಡಿಯನ್ ಬ್ಯಾಂಕ್
  (ಡಿ) ಯುನಿಯನ್ ಬ್ಯಾಂಕ್, ಆಂಧ್ರ ಬ್ಯಾಂಕ್ ಮತ್ತು ಕಾರ್ಪೋರೇಷನ್ ಬ್ಯಾಂಕ್
CORRECT ANSWER

(ಎ) ಪಿಎನ್‌ಬಿ, ಓಬಿಸಿ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ


65. ನೀತಿ ಆಯೋಗ ಪ್ರಕಟಿಸಿದ ಭಾರತ ನಾವೀನ್ಯತೆ ಸೂಚ್ಯಂಕ 2019ರಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
  (ಎ) ತಮಿಳುನಾಡು
  (ಬಿ) ಮಹಾರಾಷ್ಟ್ರ
  (ಸಿ) ಕರ್ನಾಟಕ
  (ಡಿ) ಕೇರಳ
CORRECT ANSWER

(ಸಿ) ಕರ್ನಾಟಕ


66. ‘ಒಂದಲ್ಲ ಎರಡಲ್ಲ’ ಸಾಮಾಜಿಕ ಹಾಸ್ಯ ಚಲನಚಿತ್ರವನ್ನು ಯಾರು ಬರೆದು ನಿರ್ದೇಶಿಸಿದ್ದಾರೆ?
  (ಎ) ಡಿ. ಸತ್ಯ ಪ್ರಕಾಶ್
  (ಬಿ) ಅನುಪ್ ಭಂಡಾರಿ
  (ಸಿ) ಪವನ ಕುಮಾರ್
  (ಡಿ) ರಕ್ಷಿತ್ ಶೆಟ್ಟಿ
CORRECT ANSWER

(ಎ) ಡಿ. ಸತ್ಯ ಪ್ರಕಾಶ್


67. 2019ರ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
  (ಎ) ಅಮಿತಾಬ್ ಬಚ್ಚನ್
  (ಬಿ) ಸಂಜಯ ಲೀಲಾ ಬನ್ಸಾಲಿ
  (ಸಿ) ಅಮೀರ್ ಖಾನ್
  (ಡಿ) ಪ್ರಕಾಶ ರೈ
CORRECT ANSWER

(ಎ) ಅಮಿತಾಬ್ ಬಚ್ಚನ್


68. ಮೊದಲ ಕನ್ನಡ ಚಲನಚಿತ್ರ
  (ಎ) ಗುಬ್ಬಿ ವೀರಣ್ಣ
  (ಬಿ) ಭಕ್ತ ಧ್ರುವ
  (ಸಿ) ಸತಿ ಸುಲೋಚನ
  (ಡಿ) ಪಂಡರಿಭಾಯಿ
CORRECT ANSWER

(ಸಿ) ಸತಿ ಸುಲೋಚನ


69. ಕೇಂದ್ರ ಸರ್ಕಾರ ಆರಂಭಿಸಿದ ‘ಸುಮನ್’ ಯೋಜನೆಯು ಏನನ್ನು ಒದಗಿಸುವ ಗುರಿಯನ್ನು ಹೊಂದಿದೆ?
  (ಎ) ವೃದ್ಧಾಪ್ಯಕ್ಕೆ ಆರೋಗ್ಯ ರಕ್ಷಣೆ
  (ಬಿ) ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ರಕ್ಷಣೆ
  (ಸಿ) ಮಹಿಳೆಯರಿಗೆ ಶಿಕ್ಷಣ
  (ಡಿ) ನಿರುದ್ಯೋಗಿಗಳಿಗೆ ಕೌಶಲ್ಯಗಳು
CORRECT ANSWER

(ಬಿ) ಗರ್ಭಿಣಿ ಮಹಿಳೆಯರಿಗೆ ಆರೋಗ್ಯ ರಕ್ಷಣೆ


70. ಮಿಥಾಲಿ ರಾಜ್ ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದಾರೆ?
  (ಎ) ಜಾವೆಲಿನ್ ಎಸೆತ
  (ಬಿ) ಕುಸ್ತಿ
  (ಸಿ) ಬಾಕ್ಸಿಂಗ್
  (ಡಿ) ಕ್ರಿಕೆಟ್
CORRECT ANSWER

(ಡಿ) ಕ್ರಿಕೆಟ್


71. ಕಾದಂಬರಿಗಾಗಿ 2019ರ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪು ಮಹಿಳೆ ಯಾರು?
  (ಎ) ಎಲೆನಾರ್ ಕಟ್ಟೋನ್
  (ಬಿ) ಮಾರ್ಗರೇಟ್ ಅಟ್‌ವುಡ್‌
  (ಸಿ) ಆನ್ನೆ ಎನ್ರೈಟ್
  (ಡಿ) ಬೆರ್ನರೆಡೈನ್ ಎವರಿಸ್ವಾ
CORRECT ANSWER

(ಡಿ) ಬೆರ್ನರೆಡೈನ್ ಎವರಿಸ್ವಾ


72. ಅಂತರರಾಷ್ಟ್ರೀಯ ಹಣಕಾಸು ನಿಧಿ 2019-20ರ ಭಾರತದ ಜಿಡಿಪಿ ಮುನ್ಸೂಚನೆಯನ್ನು 7% ರಿಂದ ಯಾವ ಶೇಕಡಕ್ಕೆ ಇಳಿಸಿದೆ?
  (ಎ) 6.1
  (ಬಿ) 6.9
  (ಸಿ) 6.8
  (ಡಿ) 6.5
CORRECT ANSWER

(ಎ) 6.1


73. ಆಂಡ್ರಾಯ್ಡ್‌ನ ಇತ್ತೀಚಿನ ಯಾವ ಆವೃತ್ತಿಯು 2019ರಲ್ಲಿ ಪ್ರಾರಂಭವಾಯಿತು?
  (ಎ) ಆಂಡ್ರಾಯ್ಡ್ 10
  (ಬಿ) ಪೈ
  (ಸಿ) ಓರಿಯೋ
  (ಡಿ) ನೌಗಾಟ್
CORRECT ANSWER

(ಎ) ಆಂಡ್ರಾಯ್ಡ್ 10


74. ಭಾರತದ ಮೊದಲ ಮಹಿಳಾ ಮಿಲಿಟರಿ ರಾಜತಾಂತ್ರಿಕರಾದವರು ಯಾರು?
  (ಎ) ನಿಕಿತಾ ಸಿಂಘ್
  (ಬಿ) ಅಭಾ ದವೇಸಾಸ್
  (ಸಿ) ಮೃದುಲಾ ಕೊಶೈ
  (ಡಿ) ಅಂಜಲಿ ಸಿಂಘ್
CORRECT ANSWER

(ಡಿ) ಅಂಜಲಿ ಸಿಂಘ್


75. ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಫನಿ’ ಇದು ಒಂದು
  (ಎ) ವೈರಸ್
  (ಬಿ) ಕಂಪ್ಯೂಟರ್ ವೈರಸ್
  (ಸಿ) ಚಂಡಮಾರುತ
  (ಡಿ) ಕ್ಷಿಪಣಿ
CORRECT ANSWER

(ಸಿ) ಚಂಡಮಾರುತ


76. ಮೊದಲ ಭಾರತ-ಚೀನಾ ಅನೌಪಚಾರಿಕ ಶೃಂಗಸಭೆಯು 2018ರಲ್ಲಿ ಎಲ್ಲಿ ನಡೆಯಿತು?
  (ಎ) ಬೀಜಿಂಗ್
  (ಬಿ) ವುಹಾನ್
  (ಸಿ) ಮಹಾಬಲಿಪುರಂ
  (ಡಿ) ಚೆನ್ನೈ
CORRECT ANSWER

(ಬಿ) ವುಹಾನ್


77. ಯಾವ ಅಂತರಾಷ್ಟ್ರೀಯ ಸಂಘಟನೆಯ ಪ್ರಧಾನ ಕಚೇರಿಯಲ್ಲಿ ನರೇಂದ್ರ ಮೋದಿ ಅವರು ಗಾಂಧಿ ಸೌರ ಉದ್ಯಾನವನ್ನು ಉದ್ಘಾಟಿಸಿದ್ದರು?
  (ಎ) ಐ.ಎಂ.ಎಫ್
  (ಬಿ) ಯುರೋಪಿಯನ್ ಯೂನಿಯನ್
  (ಸಿ) ಯುನೈಟೆಡ್ ನೇಷನ್ಸ್
  (ಡಿ) ಡಬ್ಲೂಎಚ್ಓ
CORRECT ANSWER

(ಸಿ) ಯುನೈಟೆಡ್ ನೇಷನ್ಸ್


78. ಮಹಾಬಲಿಪುರಂನಲ್ಲಿ ಏಳು ಪಗೋಡಗಳು ಅಥವಾ ಏಳು ರಥಗಳನ್ನು ನಿರ್ಮಿಸಿದವರು ಯಾರು?
  (ಎ) ಮಹೇಂದ್ರ ವರ್ಮ
  (ಬಿ) ನರಸಿಂಹ ವರ್ಮ-II
  (ಸಿ) ಪರಮೇಶ್ವರ ವರ್ಮ
  (ಡಿ) ಅಪರಾಜಿತ ವರ್ಮ
CORRECT ANSWER

(ಬಿ) ನರಸಿಂಹ ವರ್ಮ-II


79. ಯಾವ ದೇವಾಲಯದ ಪಂಚಾಮೃತಂಗೆ ಇತ್ತೀಚೆಗೆ ಜಿ.ಐ ಸ್ಥಾನಮಾನ ಸಿಕ್ಕಿತು?
  (ಎ) ಪಳನಿ, ತಮಿಳುನಾಡು
  (ಬಿ) ಶಬರಿಮಲ ದೇವಸ್ಥಾನ, ಕೇರಳ
  (ಸಿ) ಭೋಗ ನಂದೀಶ್ವರ ದೇವಸ್ಥಾನ, ಕರ್ನಾಟಕ
  (ಡಿ) ಮೂಕಾಂಬಿಕ ದೇವಸ್ಥಾನ, ಕರ್ನಾಟಕ
CORRECT ANSWER

(ಎ) ಪಳನಿ, ತಮಿಳುನಾಡು


80. ಈ ಕೆಳಗಿನ ಯಾವ ಸ್ಥಳಗಳಲ್ಲಿ ಕರ್ನಾಟಕದ ಹೈಕೋರ್ಟ್ ಶಾಖೆಗಳಿವೆ?
  (ಎ) ಬಳ್ಳಾರಿ
  (ಬಿ) ಧಾರವಾಡ
  (ಸಿ) ಮೈಸೂರು
  (ಡಿ) ಇವುಗಳಲ್ಲಿ ಎಲ್ಲವೂ
CORRECT ANSWER

(ಬಿ) ಧಾರವಾಡ


81. ರಾಷ್ಟ್ರೀಯ ಧ್ವಜದಲ್ಲಿನ ಚಕ್ರದಲ್ಲಿ ಯಾವ ಬಣ್ಣವನ್ನು ಬಳಸಲಾಗುತ್ತದೆ?
  (ಎ) ಬಿಳಿ
  (ಬಿ) ಕೇಸರಿ
  (ಸಿ) ಹಸಿರು
  (ಡಿ) ನೇವಿ ನೀಲಿ
CORRECT ANSWER

(ಡಿ) ನೇವಿ ನೀಲಿ


82. ಯಾರು ಭಾರತದ ಮೊದಲ ಕಾರ್ಯಾನ್ವಿತ ಅಧ್ಯಕ್ಷರಾಗಿದ್ದರು?
  (ಎ) ಬಿ.ಎನ್.ರಾವ್
  (ಬಿ) ಡಾ.ವಿಜಯ ಕೆಲ್ಕರ್
  (ಸಿ) ವಿ.ವಿ.ಗಿರಿ
  (ಡಿ) ಇವುಗಳಲ್ಲಿ ಯಾವುದು ಅಲ್ಲ
CORRECT ANSWER

(ಸಿ) ವಿ.ವಿ.ಗಿರಿ


83. ಭಾರತೀಯ ಸಂವಿಧಾನದಲ್ಲಿ, ರಾಜ್ಯ ನೀತಿಯ ನಿರ್ದೇಶನ ತತ್ವಗಳನ್ನು ಯಾವ ಆರ್ಟಿಕಲ್ನಲ್ಲಿ ನೀಡಲಾಗಿದೆ?
  (ಎ) ಆರ್ಟಿಕಲ್ 36 ರಿಂದ 51
  (ಬಿ) ಆರ್ಟಿಕಲ್ 51 A
  (ಸಿ) ಆರ್ಟಿಕಲ್ 12 ರಿಂದ 35
  (ಡಿ) ಆರ್ಟಿಕಲ್ 32
CORRECT ANSWER

(ಎ) ಆರ್ಟಿಕಲ್ 36 ರಿಂದ 51


84. ನಮ್ಮ ರಾಷ್ಟ್ರೀಯ ಧ್ವಜದಲ್ಲಿ ಎಷ್ಟು ಕಡ್ಡಿಗಳಿವೆ?
  (ಎ) 20
  (ಬಿ) 24
  (ಸಿ) 22
  (ಡಿ) 30
CORRECT ANSWER

(ಬಿ) 24


85. ಭಾರತದ ಮೊದಲ ಗವರ್ನರ್ ಜನರಲ್ ಯಾರು?
  (ಎ) ಲಾರ್ಡ್ ಮೌಂಟ್ ಬ್ಯಾಟೆನ್
  (ಬಿ) ಲಾರ್ಡ್ ವಿಲ್ಲಿಯಂ ಬೆಂಟಿಂಕ್
  (ಸಿ) ಲಾರ್ಡ್ ಕನ್ನಿಂಗ್
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ಲಾರ್ಡ್ ವಿಲ್ಲಿಯಂ ಬೆಂಟಿಂಕ್


86. ಕರ್ನಾಟಕ ರಾಜ್ಯದ ರಾಜ್ಯಪಕ್ಷಿ ಯಾವುದು?
  (ಎ) ಭಾರತೀಯ ರೋಲರ್
  (ಬಿ) ಭಾರತೀಯ ಕೋಸ್ಟರ್
  (ಸಿ) ನವಿಲು
  (ಡಿ) ಗಿಳಿ
CORRECT ANSWER

(ಎ) ಭಾರತೀಯ ರೋಲರ್


87. ಮೈಸೂರು ದಸರಾ 2019 ಅನ್ನು ಯಾರು ಉದ್ಘಾಟಿಸಿದರು?
  (ಎ) ಅನಿಲ್ ಕುಂಬ್ಳೆ
  (ಬಿ) ಸುಧಾ ಮೂರ್ತಿ
  (ಸಿ) ಎಸ್.ಎಲ್. ಭೈರಪ್ಪ
  (ಡಿ) ಗಿರೀಶ್ ಕಾರ್ನಾಡ್
CORRECT ANSWER

(ಸಿ) ಎಸ್.ಎಲ್. ಭೈರಪ್ಪ


88. ರಾಷ್ಟ್ರಪತಿಯು ತಮ್ಮ ರಾಜೀನಾಮೆ ಪತ್ರವನ್ನು ಯಾರನ್ನು ಉದ್ದೇಶಿಸುವರು
  (ಎ) ಭಾರತದ ಮುಖ್ಯ ನ್ಯಾಯಮೂರ್ತಿ
  (ಬಿ) ಸ್ಪೀಕರ್
  (ಸಿ) ಉಪ ರಾಷ್ಟ್ರಪತಿ
  (ಡಿ) ಭಾರತದ ಪ್ರಧಾನಮಂತ್ರಿ
CORRECT ANSWER

(ಸಿ) ಉಪ ರಾಷ್ಟ್ರಪತಿ


89. ಈ ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಕರ್ತವ್ಯವಲ್ಲ?
  (ಎ) ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು
  (ಬಿ) ಜನರಲ್ಲಿ ಸಹೋದರತ್ವವನ್ನು ಹರಡುವುದು
  (ಸಿ) ಪೋಷಕರಿಗೆ ವಿಧೇಯರಾಗಿರುವುದು
  (ಡಿ) ನೈಸರ್ಗಿಕ ಪರಿಸರವನ್ನು ರಕ್ಷಿಸಲು ಮತ್ತು ಸುಧಾರಿಸಲು
CORRECT ANSWER

(ಸಿ) ಪೋಷಕರಿಗೆ ವಿಧೇಯರಾಗಿರುವುದು


90. ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ರನ್ನು ಕೆಳಗಿನ ಯಾರ ಸ್ನೇಹಿತ, ದಾರ್ಶನಿಕ ಮತ್ತು ಮಾರ್ಗದರ್ಶಿ ಎಂದು ವಿವರಿಸಲಾಗಿದೆ?
  (ಎ) ದ ಎಸ್ಟಿಮೇಟ್ ಸಮಿತಿ
  (ಬಿ) ಸಾರ್ವಜನಿಕ ಖಾತೆಗಳ ಸಮಿತಿ
  (ಸಿ) ಸಾರ್ವಜನಿಕ ಕಾರ್ಯ (ವಾಗ್ದಾನ) ಸಮಿತಿ
  (ಡಿ) ಎಲ್ಲಾ ಸಂಸದೀಯ ಸಮಿತಿ
CORRECT ANSWER

(ಬಿ) ಸಾರ್ವಜನಿಕ ಖಾತೆಗಳ ಸಮಿತಿ


91. ಹೈಕೋರ್ಟಿನ ಮುಖ್ಯ ನ್ಯಾಯಾಮೂರ್ತಿಯನ್ನು ಕೆಳಗಿನವರಲ್ಲಿ ಯಾರು ತೆಗೆದು ಹಾಕಬಹುದು?
  (ಎ) ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ
  (ಬಿ) ಸರ್ವೋಚ್ಛ ನ್ಯಾಯಾಲದಯ ನ್ಯಾಯಾಧೀಶರಂತೆಯೇ
  (ಸಿ) ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರು
  (ಡಿ) ಕೇಂದ್ರ ಗೃಹ ಸಚಿವಾಲಯ
CORRECT ANSWER

(ಬಿ) ಸರ್ವೋಚ್ಛ ನ್ಯಾಯಾಲದಯ ನ್ಯಾಯಾಧೀಶರಂತೆಯೇ


92. ಯಾರು ಉಪ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ?
  (ಎ) ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಅದೇ ಚುನಾವಣಾ ಕಾಲೇಜು
  (ಬಿ) ಮೇಲ್ಮನೆಯ ಸದಸ್ಯರು (ರಾಜ್ಯಸಭೆ)
  (ಸಿ) ಸಂಸತ್ತಿನ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜು
  (ಡಿ) ಸಂಸತ್ತು ಮತ್ತು ರಾಜ್ಯ ವಿಧಾನಸಭೆಯ ಸದಸ್ಯರು
CORRECT ANSWER

(ಸಿ) ಸಂಸತ್ತಿನ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜು


93. ಕರ್ನಾಟಕ ಲೋಕಾಯುಕ್ತ ಕಾಯ್ದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ?
  (ಎ) 1987
  (ಬಿ) 1986
  (ಸಿ) 1984
  (ಡಿ) 1988
CORRECT ANSWER

(ಸಿ) 1984


94. ರಾಜ್ಯದ ಕಾರ್ಯನಿರ್ವಾಹಕ ಅಧಿಕಾರವನ್ನು ಯಾರಿಗೆ ವಹಿಸಲಾಗಿದೆ?
  (ಎ) ರಾಜ್ಯದ ರಾಜ್ಯಪಾಲರು
  (ಬಿ) ರಾಜ್ಯದ ಮುಖ್ಯಮಂತ್ರಿ
  (ಸಿ) ರಾಜ್ಯದ ಸಚಿವರ ಪರಿಷತ್ತು
  (ಡಿ) ಭಾರತದ ರಾಷ್ಟ್ರಪತಿ
CORRECT ANSWER

(ಎ) ರಾಜ್ಯದ ರಾಜ್ಯಪಾಲರು


95. ಅಬ್ದುಲ್ ಕಲಾಂ ರವರು ಭಾರತದ ________ ರಾಷ್ಟ್ರಪತಿಯಾಗಿದ್ದರು?
  (ಎ) 11ನೇ
  (ಬಿ) 12ನೇ
  (ಸಿ) 9ನೇ
  (ಡಿ) 10ನೇ
CORRECT ANSWER

(ಎ) 11ನೇ


96. ಭಾರತದ ಮೊದಲ ಮಹಿಳಾ ಗಗನಯಾತ್ರಿ ಯಾರು?
  (ಎ) ಸುನೀತಾ ವಿಲ್ಲಿಯಮ್ಸ್
  (ಬಿ) ಕಲ್ಪನಾ ಚಾವ್ಲಾ
  (ಸಿ) ಸುನೀತಾ ಚಾವ್ಲಾ
  (ಡಿ) ಮೇರಿ ಕಾಂ
CORRECT ANSWER

(ಬಿ) ಕಲ್ಪನಾ ಚಾವ್ಲಾ


97. ಸಚಿವರಿಗೆ ಯಾರಿಂದ ಮಂತ್ರಿಮಂಡಲಗಳನ್ನು ನೀಡಲಾಗುತ್ತದೆ?
  (ಎ) ಭಾರತದ ರಾಷ್ಟ್ರಪತಿ
  (ಬಿ) ಭಾರತದ ಮುಖ್ಯನ್ಯಾಯಮೂರ್ತಿ
  (ಸಿ) ಮಂಡಳಿಯ ಮಂತ್ರಿಗಳ ಸಾಮೂಹಿಕ ನಿರ್ಧಾರಗಳು
  (ಡಿ) ಭಾರತದ ಪ್ರಧಾನಮಂತ್ರಿ
CORRECT ANSWER

(ಎ) ಭಾರತದ ರಾಷ್ಟ್ರಪತಿ


98. ಭಾರತದ ಸಂವಿಧಾನವನ್ನು ಯಾವಾಗ ಅಂಗೀಕರಿಸಲಾಯಿತು?
  (ಎ) 26 ಜನವರಿ 1950
  (ಬಿ) 26 ನವೆಂಬರ್ 1950
  (ಸಿ) 26 ನವೆಂಬರ್ 1949
  (ಡಿ) 26 ಜನವರಿ 1949
CORRECT ANSWER

(ಸಿ) 26 ನವೆಂಬರ್ 1949


99. ಭಾರತದ ಮೊದಲ ಮಹಾನಗರ ಪಾಲಿಕೆ (ಮುನ್ಸಿಪಲ್ ಕಾರ್ಪೊರೇಷನ್) ಅನ್ನು ಎಲ್ಲಿ ಸ್ಥಾಪಿಸಲಾಯಿತು?
  (ಎ) ಕಲ್ಕತ್ತಾ
  (ಬಿ) ದೆಹಲಿ
  (ಸಿ) ಬಾಂಬೆ
  (ಡಿ) ಮದ್ರಾಸ್
CORRECT ANSWER

(ಡಿ) ಮದ್ರಾಸ್


100. ಒಂದು ರಾಜ್ಯದ ಸರ್ಕಾರವು ಆಯೋಜಿಸುವ ಲಾಟರಿಗಳು ಇದರ ಅಡಿಯಲ್ಲಿ ಬರುತ್ತವೆ.
  (ಎ) ಕೇಂದ್ರ ಪಟ್ಟಿ
  (ಬಿ) ರಾಜ್ಯ ಪಟ್ಟಿ
  (ಸಿ) ಕಾನ್ಕರೆಂಟ್ (ಏಕಕಾಲೀನ) ಪಟ್ಟಿ
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಎ) ಕೇಂದ್ರ ಪಟ್ಟಿ

Related Posts

Police Constable Previous Paper 20-09-2020

Police Constable Previous Paper 18-10-2020

KSP-Police Constable (Civil) 17-11-2019 question paper

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.