ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ
1. | ‘ಲಿಥೋಸ್ಪಿಯರ್’ ಎಂದರೆ | |
(ಎ) | ಸಸ್ಯಗಳು ಮತ್ತು ಪ್ರಾಣಿಗಳು | |
(ಬಿ) | ಭೂಮಿಯ ಹೊರಗಿನ ಮೇಲ್ಮೈ | |
(ಸಿ) | ಭೂಮಿಯ ಹೊರಪದರ | |
(ಡಿ) | ಯಾವುದೂ ಅಲ್ಲ |
CORRECT ANSWER
(ಸಿ) ಭೂಮಿಯ ಹೊರಪದರ
2. | ರಿಕ್ಟರ್ ಮಾಪನವನ್ನು ಈ ಕೆಳಗಿನ ಯಾವುದನ್ನು ಅಳೆಯಲು ಉಪಯೋಗಿಸುತ್ತಾರೆ ? | |
(ಎ) | ಗಾಳಿಯ ವೇಗ | |
(ಬಿ) | ಭೂಕಂಪನ | |
(ಸಿ) | ಆಳ | |
(ಡಿ) | ಶಾಖ |
CORRECT ANSWER
(ಬಿ) ಭೂಕಂಪನ
3. | ಸಮುದ್ರದಲ್ಲಿ ಭಾರತದ ಸಾರ್ವಭೌಮತೆಯು ಎಷ್ಟು ದೂರದವರೆಗೆ ಇರುತ್ತದೆ ? | |
(ಎ) | 6 ನಾಟಿಕಲ್ ಮೈಲುಗಳು | |
(ಬಿ) | 15 ನಾಟಿಕಲ್ ಮೈಲುಗಳು | |
(ಸಿ) | 10 ನಾಟಿಕಲ್ ಮೈಲುಗಳು | |
(ಡಿ) | 12 ನಾಟಿಕಲ್ ಮೈಲುಗಳು |
CORRECT ANSWER
(ಡಿ) 12 ನಾಟಿಕಲ್ ಮೈಲುಗಳು
4. | ಈ ಕೆಳಗಿನವುಗಳಲ್ಲಿ ಯಾವ ಬೆಳೆಯು ನೀರಿನ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತದೆ ? | |
(ಎ) | ಟೀ | |
(ಬಿ) | ಕಾಫಿ | |
(ಸಿ) | ಭತ್ತ | |
(ಡಿ) | ಸಾಸಿವೆ |
CORRECT ANSWER
(ಸಿ) ಭತ್ತ
5. | ಈ ಕೆಳಗಿನವುಗಳಲ್ಲಿ ಯಾವ ಗ್ರಹವು ಸೂರ್ಯನಿಗೆ ಸಮೀಪವಾಗಿದೆ? | |
(ಎ) | ಭೂಮಿ | |
(ಬಿ) | ಪ್ಲೂಟೋ | |
(ಸಿ) | ಗುರು | |
(ಡಿ) | ಬುಧ |
CORRECT ANSWER
(ಡಿ) ಬುಧ
6. | ಮೂರನೇ ದುಂಡುಮೇಜಿನ ಪರಿಷತ್ತು ನಡೆದ ವರ್ಷ | |
(ಎ) | 1931 | |
(ಬಿ) | 1933 | |
(ಸಿ) | 1932 | |
(ಡಿ) | 1934 |
CORRECT ANSWER
(ಸಿ) 1932
7. | ‘ನನಗೆ ರಕ್ತ ಕೊಡಿ; ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ’ ಹೀಗೆ ಹೇಳಿದವರು ಯಾರು ? | |
(ಎ) | ಮಹಾತ್ಮ ಗಾಂಧೀಜಿ | |
(ಬಿ) | ಜವಾಹರಲಾಲ್ ನೆಹರೂ | |
(ಸಿ) | ಆ್ಯನಿಬೆಸೆಂಟ್ | |
(ಡಿ) | ಸುಭಾಷ್‌ಚಂದ್ರ ಬೋಸ್ |
CORRECT ANSWER
(ಡಿ) ಸುಭಾಷ್‌ಚಂದ್ರ ಬೋಸ್
8. | ಕೆಂಪು ಅಂಗಿ ಚಳವಳಿಯನ್ನು ಪ್ರಾರಂಭಿಸಿದವರು | |
(ಎ) | ಮಹಮ್ಮದ್ ಆಲಿ ಜಿನ್ನಾ | |
(ಬಿ) | ಖಾನ್ ಅಬ್ದುಲ್ ಗಾಫಾರ್ ಖಾನ್ | |
(ಸಿ) | ಸರ್ ಮಹಮ್ಮದ್ ಇಕ್ಬಾಲ್ | |
(ಡಿ) | ಸರ್ ಮನ್ಸೂರ್ ಅಹಮ್ಮದ್ |
CORRECT ANSWER
(ಬಿ) ಖಾನ್ ಅಬ್ದುಲ್ ಗಾಫಾರ್ ಖಾನ್
9. | ಸರ್ ಸ್ಟಾಫರ್ಡ್ ಕ್ರಿಪ್ಸ್‌ರವರ ಆಯೋಗವು ಭಾರತಕ್ಕೆ ಬಂದ ವರ್ಷ | |
(ಎ) | 1940 | |
(ಬಿ) | 1941 | |
(ಸಿ) | 1942 | |
(ಡಿ) | 1943 |
CORRECT ANSWER
(ಸಿ) 1942
10. | 1937ರ ಚುನಾವಣೆಯಲ್ಲಿ ಈ ಕೆಳಗಿನ ಯಾವ ಎರಡು ಪ್ರಾಂತ್ಯಗಳಲ್ಲಿ ಕಾಂಗ್ರೆಸ್‌ನ ಸರಕಾರವು ಇರಲಿಲ್ಲ ? | |
(ಎ) | ಬಂಗಾಳ ಮತ್ತು ಪಂಜಾಬ್ | |
(ಬಿ) | ಮಹಾರಾಷ್ಟ್ರ ಮತ್ತು ಕರ್ನಾಟಕ | |
(ಸಿ) | ಕೇರಳ ಮತ್ತು ಆಂಧ್ರಪ್ರದೇಶ | |
(ಡಿ) | ಪಂಜಾಬ್ ಮತ್ತು ಹರಿಯಾಣ |
CORRECT ANSWER
(ಎ) ಬಂಗಾಳ ಮತ್ತು ಪಂಜಾಬ್
11. | ನೀವು ಒಂದರಿಂದ ನೂರರವರೆಗೆ ಎಲ್ಲಾ ಸಂಖ್ಯೆಗಳನ್ನು ಬರೆದರೆ, 3 ಅನ್ನು ಎಷ್ಟು ಸಲ ಬರೆದಿರುತ್ತೀರಾ ? | |
(ಎ) | 11 | |
(ಬಿ) | 18 | |
(ಸಿ) | 20 | |
(ಡಿ) | 21 |
CORRECT ANSWER
(ಸಿ) 20
12. | ‘ಎ’ ಯು ‘ಬಿ’ನ ಸಹೋದರಿ, ‘ಸಿ’ಯು ‘ಬಿ’ನ ತಾಯಿ, ‘ಡಿ’ ಯು ‘ಸಿ’ನ ತಂದೆ, ‘ಇ’ಯು ‘ಡಿ’ಯ ತಾಯಿ, ಹಾಗಿದ್ದಲ್ಲಿ ‘ಎ’ಯು ‘ಡಿ’ಗೆ ಏನಾಗಬೇಕು ? | |
(ಎ) | ಅಜ್ಜ | |
(ಬಿ) | ಅಜ್ಜಿ | |
(ಸಿ) | ಮಗಳು | |
(ಡಿ) | ಮೊಮ್ಮಗಳು |
CORRECT ANSWER
(ಡಿ) ಮೊಮ್ಮಗಳು
13. | ‘ಈ ಹುಡುಗಿಯು, ನನ್ನ ತಾಯಿಯ ಮೊಮ್ಮಗನ ಪತ್ನಿಯಾಗಬೇಕು’ ಎಂದು ಅರುಣ್ ಹೇಳಿದರೆ, ಅರುಣ್ ಹುಡುಗಿಗೆ ಏನಾಗಬೇಕು? | |
(ಎ) | ತಂದೆ | |
(ಬಿ) | ಅಜ್ಜ | |
(ಸಿ) | ಪತಿ | |
(ಡಿ) | ಮಾವ |
CORRECT ANSWER
(ಡಿ) ಮಾವ
14. | ಒಂದು ತರಗತಿಯ ಎಲ್ಲಾ ಹುಡುಗರನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿದಾಗ, ಒಬ್ಬ ಹುಡುಗನು, ಆ ಸಾಲಿನ ಎರಡೂ ಬದಿಯಿಂದ 19ನೆಯವನಾದರೆ, ಒಟ್ಟು ಆ ತರಗತಿಯಲ್ಲಿ ಎಷ್ಟು ಹುಡುಗರಿದ್ದಾರೆ? | |
(ಎ) | 37 | |
(ಬಿ) | 38 | |
(ಸಿ) | 39 | |
(ಡಿ) | 27 |
CORRECT ANSWER
(ಎ) 37
15. | 2003ನೇ ಇಸವಿಯ ಜನವರಿ 30ನೇ ದಿವಸವು ಗುರುವಾರವಾದರೆ, 2003ನೇ ಇಸವಿಯ ಮಾರ್ಚ್ 2ನೇ ದಿವಸವು ಯಾವ ವಾರ ? | |
(ಎ) | ಭಾನುವಾರ | |
(ಬಿ) | ಗುರುವಾರ | |
(ಸಿ) | ಮಂಗಳವಾರ | |
(ಡಿ) | ಶನಿವಾರ |
CORRECT ANSWER
(ಎ) ಭಾನುವಾರ
16. | ಜೋಗ್ ಫಾಲ್ಸ್ ಯಾವ ನದಿಯಲ್ಲಿದೆ ? | |
(ಎ) | ಕೃಷ್ಣಾ | |
(ಬಿ) | ಕಾವೇರಿ | |
(ಸಿ) | ಶರಾವತಿ | |
(ಡಿ) | ಭೀಮಾ |
CORRECT ANSWER
(ಸಿ) ಶರಾವತಿ
17. | ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು ? | |
(ಎ) | ನದಿಯ ಡಾಲ್ಫಿನ್ | |
(ಬಿ) | ಮೊಸಳೆ | |
(ಸಿ) | ಕತಾ ಮೀನು | |
(ಡಿ) | ಹಸಿರು ಕಪ್ಪೆ |
CORRECT ANSWER
(ಎ) ನದಿಯ ಡಾಲ್ಫಿನ್
18. | ಪಂಪ, ರನ್ನ, ಪೊನ್ನರೆಂದರೆ | |
(ಎ) | ಕನ್ನಡ ಭಾಷೆಯ ಕವಿಗಳು | |
(ಬಿ) | ವಾಸ್ತುಶಿಲ್ಪಿಗಳು | |
(ಸಿ) | ರಾಜಕಾರಣಿಗಳು | |
(ಡಿ) | ರಾಜರು |
CORRECT ANSWER
(ಎ) ಕನ್ನಡ ಭಾಷೆಯ ಕವಿಗಳು
19. | ದ್ವಾರಸಮುದ್ರವೆಂದು ಯಾವ ಸ್ಥಳವನ್ನು ಕರೆಯುತ್ತಾರೆ ? | |
(ಎ) | ಹಾಸನದ ಹಳೇಬೀಡು | |
(ಬಿ) | ಕೊಡಗು | |
(ಸಿ) | ಕಲಬುರ್ಗಿ | |
(ಡಿ) | ಬೆಂಗಳೂರು |
CORRECT ANSWER
(ಎ) ಹಾಸನದ ಹಳೇಬೀಡು
20. | ‘ಡೆಮೋಗ್ರಫಿ’ ಎಂದರೆ | |
(ಎ) | ಪ್ರಾಣಿಗಳ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು | |
(ಬಿ) | ಮಾನವ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು | |
(ಸಿ) | ಆನೆಗಳ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು | |
(ಡಿ) | ಇವುಗಳು ಯಾವುವೂ ಅಲ್ಲ |
CORRECT ANSWER
(ಬಿ) ಮಾನವ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು
21. | ಜಲಿಯನ್ ವಾಲಾಭಾಗ್‌ನ ಸಭೆಯಲ್ಲಿ, ಜನರ ಮೇಲೆ ಗುಂಡು ಹಾರಿಸಲು ಆಜ್ಞೆ ನೀಡಿದ ವ್ಯಕ್ತಿ | |
(ಎ) | ಬೆನ್ | |
(ಬಿ) | ಇರ್ವಿನ್ | |
(ಸಿ) | ಡಯರ್ | |
(ಡಿ) | ಮಾಂಟೆಗ್ಯೂ |
CORRECT ANSWER
(ಸಿ) ಡಯರ್
22. | ಬಂಗಾಳದ ವಿಭಜನೆಯು ಯಾವ ವರ್ಷದಲ್ಲಿ ನಡೆಯಿತು ? | |
(ಎ) | 1905 | |
(ಬಿ) | 1904 | |
(ಸಿ) | 1906 | |
(ಡಿ) | 1907 |
CORRECT ANSWER
(ಎ) 1905
23. | ಮಹಾತ್ಮಾಗಾಂಧೀಜಿಯವರು 1942ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯನ್ನು ಆರಂಭಿಸಿದರು. ಆಗ ಭಾರತದಲ್ಲಿ ಗವರ್ನರ್ ಜನರಲ್ ಆಗಿದ್ದವರು | |
(ಎ) | ಲಾರ್ಡ್ ಮೌಂಟ್ ಬ್ಯಾಟನ್ | |
(ಬಿ) | ಲಾರ್ಡ್ ಲಿನ್‌ಲಿಥ್‌ಗೋ | |
(ಸಿ) | ಲಾರ್ಡ್ ಕಜರ್ನ್ | |
(ಡಿ) | ಲಾರ್ಡ್ ಮೇಯೋ |
CORRECT ANSWER
(ಬಿ) ಲಾರ್ಡ್ ಲಿನ್‌ಲಿಥ್‌ಗೋ
24. | ಸೈಮನ್ ಆಯೋಗದ ವಿರುದ್ಧದ ಚಳವಳಿಯಲ್ಲಿ ಪೊಲೀಸ್ ಲಾಠಿ ಚಾರ್ಜಿಗೆ ಬಲಿಯಾದ ವ್ಯಕ್ತಿ ಯಾರು ? | |
(ಎ) | ಗೋಪಾಲ ಕೃಷ್ಣ ಗೋಖಲೆ | |
(ಬಿ) | ಬಾಲಗಂಗಾಧರ್ ತಿಲಕ್ | |
(ಸಿ) | ಲಾಲಾ ಲಜಪತ್ ರಾಯ್ | |
(ಡಿ) | ಇವರಲ್ಲಿ ಯಾರು ಅಲ್ಲ |
CORRECT ANSWER
(ಸಿ) ಲಾಲಾ ಲಜಪತ್ ರಾಯ್
25. | ಮಹಾತ್ಮಗಾಂಧೀಜಿಯವರು ದಂಡಿಯಾತ್ರೆಯನ್ನು ಪ್ರಾರಂಭಿಸಿದ ವರ್ಷ | |
(ಎ) | 1929 | |
(ಬಿ) | 1930 | |
(ಸಿ) | 1931 | |
(ಡಿ) | 1932 |
CORRECT ANSWER
(ಬಿ) 1930
26. | ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ, ಅವರ ಸ್ಥಾನವನ್ನು ತಕ್ಷಣವೇ ಯಾರು ನಿರ್ವಹಿಸುತ್ತಾರೆ ? | |
(ಎ) | ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು | |
(ಬಿ) | ರಾಜ್ಯದ ಮುಖ್ಯಮಂತ್ರಿಗಳು | |
(ಸಿ) | ರಾಷ್ಟ್ರಪತಿಗಳು ನಿಯುಕ್ತಿಗೊಳಿಸುವ ಯಾರಾದರೂ | |
(ಡಿ) | ನೆರೆಯ ರಾಜ್ಯದ ರಾಜ್ಯಪಾಲರು |
CORRECT ANSWER
(ಎ) ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
27. | ಲೋಕಸಭೆಯು ವಿಸರ್ಜನೆಗೊಂಡಾಗ, ಯಾವ ವ್ಯಕ್ತಿಯು, ಮುಂದಿನ ಲೋಕಸಭೆಯ ಪ್ರಥಮ ಸಭೆಗಿಂತ ಮೊದಲು ತನ್ನ ಸ್ಥಾನವನ್ನು ತ್ಯಜಿಸುವುದಿಲ್ಲ? | |
(ಎ) | ಪ್ರಧಾನ ಮಂತ್ರಿ | |
(ಬಿ) | ಹಣಕಾಸು ಮಂತ್ರಿ | |
(ಸಿ) | ರಕ್ಷಣಾ ಮಂತ್ರಿ | |
(ಡಿ) | ಲೋಕಸಭೆಯ ಅಧ್ಯಕ್ಷ |
CORRECT ANSWER
(ಡಿ) ಲೋಕಸಭೆಯ ಅಧ್ಯಕ್ಷ
28. | ಭಾರತದ ಸಂವಿಧಾನದಲ್ಲಿ ಉಪ -ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೇ ? | |
(ಎ) | ಹೌದು | |
(ಬಿ) | ಇಲ್ಲ | |
(ಸಿ) | ತುರ್ತು ಪರಿಸ್ಥಿತಿಯಲ್ಲಿ ಇದೆ. | |
(ಡಿ) | ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಇದೆ. |
CORRECT ANSWER
(ಬಿ) ಇಲ್ಲ
29. | ರಾಷ್ಟ್ರೀಯ ಸಮಗ್ರತಾ ಮಂಡಳಿಯ ಅಧ್ಯಕ್ಷರು | |
(ಎ) | ಭಾರತದ ರಾಷ್ಟ್ರಪತಿಗಳು | |
(ಬಿ) | ಭಾರತದ ಉಪ-ರಾಷ್ಟ್ರಪತಿಗಳು | |
(ಸಿ) | ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು | |
(ಡಿ) | ಭಾರತದ ಪ್ರಧಾನಮಂತ್ರಿಗಳು |
CORRECT ANSWER
(ಡಿ) ಭಾರತದ ಪ್ರಧಾನಮಂತ್ರಿಗಳು
30. | ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎಷ್ಟು ವರ್ಷಗಳವರೆಗೆ ಅಧಿಕಾರದಲ್ಲಿ ಇರುತ್ತಾರೆ ? | |
(ಎ) | 2 ವರ್ಷ | |
(ಬಿ) | 3 ವರ್ಷ | |
(ಸಿ) | 1 ವರ್ಷ | |
(ಡಿ) | 2½ ವರ್ಷ |
CORRECT ANSWER
(ಎ) 2 ವರ್ಷ
31. | ಭಾರತದ ರಾಷ್ಟ್ರಪತಿಯವರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುವವರು | |
(ಎ) | ಲೋಕಸಭೆಯ ಅಧ್ಯಕ್ಷರು | |
(ಬಿ) | ಭಾರತದ ಪ್ರಧಾನ ಮಂತ್ರಿಗಳು | |
(ಸಿ) | ಭಾರತದ ಉಪ-ರಾಷ್ಟ್ರಪತಿಗಳು | |
(ಡಿ) | ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು |
CORRECT ANSWER
(ಡಿ) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
32. | ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಚುನಾವಣಾ ಆಯೋಗದ ಕರ್ತವ್ಯ ಅಲ್ಲ ? | |
(ಎ) | ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು | |
(ಬಿ) | ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಹಣಕಾಸನ್ನು ನೀಡುವುದು | |
(ಸಿ) | ಚುನಾವಣೆಗೆ ನಿಯಮಗಳು ಮತ್ತು ನಿರ್ದೇಶನಗಳನ್ನು ನೀಡುವುದು | |
(ಡಿ) | ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸುವುದು ಮತ್ತು ಮತದಾರರ ಪಟ್ಟಿ ಸಿದ್ಧಪಡಿಸುವುದು. |
CORRECT ANSWER
(ಬಿ) ಅಭ್ಯರ್ಥಿಗಳಿಗೆ ಪ್ರಚಾರ ಮಾಡಲು ಹಣಕಾಸನ್ನು ನೀಡುವುದು
33. | ಭಾರತದ ಉಪ-ರಾಷ್ಟ್ರಪತಿಗಳು ಒಂದು ಬಾರಿ ಎಷ್ಟು ವರ್ಷದವರೆಗೆ ಅಧಿಕಾರದಲ್ಲಿರುತ್ತಾರೆ? | |
(ಎ) | 3 | |
(ಬಿ) | 4 | |
(ಸಿ) | 5 | |
(ಡಿ) | 6 |
CORRECT ANSWER
(ಸಿ) 5
34. | ಸಂಸತ್ತಿನ ಸದಸ್ಯನಲ್ಲದ ವ್ಯಕ್ತಿಯು, ಮಂತ್ರಿಯಾಗಿ ನೇಮಕವಾದಲ್ಲಿ, ಎಷ್ಟು ಸಮಯದ ಒಳಗೆ ಸಂಸತ್ತಿನ ಯಾವುದಾದರೂ ಸಭೆಗೆ ಸದಸ್ಯನಾಗಿ ಆಯ್ಕೆಯಾಗಬೇಕು ? | |
(ಎ) | 2 ತಿಂಗಳು | |
(ಬಿ) | 6 ತಿಂಗಳು | |
(ಸಿ) | 9 ತಿಂಗಳು | |
(ಡಿ) | 1 ವರ್ಷ |
CORRECT ANSWER
(ಬಿ) 6 ತಿಂಗಳು
35. | ಭಾರತದ ಯಾವ ಪ್ರಧಾನಮಂತ್ರಿಯು ಸಂಸತ್ತನ್ನು ಎದುರಿಸಲಿಲ್ಲ? | |
(ಎ) | ಮೊರಾರ್ಜಿ ದೇಸಾಯಿ | |
(ಬಿ) | ಲಾಲ್‌ಬಹಾದ್ದೂರ್ ಶಾಸ್ತ್ರಿ | |
(ಸಿ) | ಐ.ಕೆ. ಗುಜ್ರಾಲ್ | |
(ಡಿ) | ಚರಣ್‌ಸಿಂಗ್ |
CORRECT ANSWER
(ಡಿ) ಚರಣ್‌ಸಿಂಗ್
36. | 2014ರ ಕಾಮನ್‌ವೆ್ತ್ ಗೇಮ್ಸ್ ನಡೆದ ಸ್ಥಳ | |
(ಎ) | ಯುನೈಟೆಡ್ ಕಿಂಗ್‌ಡಮ್‌ನ ಗ್ಲಾಸ್ಗೋ | |
(ಬಿ) | ಆಸ್ಟ್ರೇಲಿಯಾದ ಸಿಡ್ನಿ | |
(ಸಿ) | ಭಾರತದ ನವದೆಹಲಿ | |
(ಡಿ) | ಚೀನಾದ ಬೀಜಿಂಗ್ |
CORRECT ANSWER
(ಎ) ಯುನೈಟೆಡ್ ಕಿಂಗ್‌ಡಮ್‌ನ ಗ್ಲಾಸ್ಗೋ
37. | ಕರ್ನಾಟಕದ ಹೆಸರಾಂತ ವ್ಯಕ್ತಿ ಗಿರೀಶ್ ಕಾರ್ನಾಡ್‌ರವರು ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧರು ? | |
(ಎ) | ರಂಗಭೂಮಿ ಮತ್ತು ಸಾಹಿತ್ಯ | |
(ಬಿ) | ಕೈಗಾರಿಕೆ | |
(ಸಿ) | ವೈಮಾನಿಕ | |
(ಡಿ) | ಆರೋಗ್ಯ ಸೇವೆ |
CORRECT ANSWER
(ಎ) ರಂಗಭೂಮಿ ಮತ್ತು ಸಾಹಿತ್ಯ
38. | ಹೊಸದಾಗಿ ಜಾರಿಗೆ ಬಂದಿರುವ ‘ಪೋಕ್ಸೊ’ ಕಾಯ್ದೆಯು, ಯಾರ ಹಿತ ಕಾಯುತ್ತದೆ ? | |
(ಎ) | ಮಹಿಳೆಯರು | |
(ಬಿ) | ಮಕ್ಕಳು | |
(ಸಿ) | ಪರಿಸರ | |
(ಡಿ) | ಪ್ರಾಣಿಗಳ ಕಲ್ಯಾಣ |
CORRECT ANSWER
(ಬಿ) ಮಕ್ಕಳು
39. | ಜಾಗತಿಕ ಮಾನವ ಹಕ್ಕುಗಳ ದಿನವನ್ನು ಎಂದು ಆಚರಿಸಲಾಗುತ್ತದೆ? | |
(ಎ) | ಡಿಸೆಂಬರ್ 10 | |
(ಬಿ) | ಅಕ್ಟೋಬರ್ 2 | |
(ಸಿ) | ಜೂನ್ 5 | |
(ಡಿ) | ಜನವರಿ 31 |
CORRECT ANSWER
(ಎ) ಡಿಸೆಂಬರ್ 10
40. | ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ, ಕರ್ನಾಟಕಕ್ಕೆ ಎಷ್ಟು ಸ್ಥಾನಗಳಿವೆ? | |
(ಎ) | 12, 10 | |
(ಬಿ) | 28, 12 | |
(ಸಿ) | 20, 15 | |
(ಡಿ) | 25, 20 |
CORRECT ANSWER
(ಬಿ) 28, 12
41. | ‘ವರ್ಲ್ಡ್‌ವೈಡ್ ವೆಬ್’ಅನ್ನು ಕಂಡುಹಿಡಿದವರು | |
(ಎ) | ಟಿಮ್ ಬರ್ನರ್ಸ್ ಲೀ | |
(ಬಿ) | ಅಲೆಕ್ಸಾಂಡರ್ ಬೆನ್ | |
(ಸಿ) | ಜೆ.ಸಿ.ಆರ್. ಲಿಕ್‌ಲಿಡರ್ | |
(ಡಿ) | ಅಲೆಕ್ಸಾಂಡರ್ ಗ್ರಹಾಂಬೆಲ್ |
CORRECT ANSWER
(ಎ) ಟಿಮ್ ಬರ್ನರ್ಸ್ ಲೀ
42. | ಸೋನಾಲಿಕಾ ಮತ್ತು ಕಲ್ಯಾಣಸೋನೆ ಇವುಗಳು ಯಾವುದರ ತಳಿಗಳು ? | |
(ಎ) | ಗೋಧಿ | |
(ಬಿ) | ಭತ್ತ | |
(ಸಿ) | ನವಣೆ | |
(ಡಿ) | ಕೋಡುಕಾಯಿ |
CORRECT ANSWER
(ಎ) ಗೋಧಿ
43. | ಜೀವಶಾಸ್ತ್ರಜ್ಞರಾದ ಡುಯೊ ಜೇಮ್ಸ್ ಡಿ. ವ್ಯಾಟ್‌ಸನ್ (ಅಮೆರಿಕ) ಮತ್ತು ಫ್ರಾನ್ಸಿಸ್ ಕ್ರಿಕ್ (ಯು.ಕೆ.)ರವರು 1953ರಲ್ಲಿ ಏನನ್ನು ಕಂಡುಹಿಡಿದರು? | |
(ಎ) | ಪೆನ್ಸಿಲಿನ್ | |
(ಬಿ) | ಡಿ.ಎನ್.ಎ. ಸಂರಚನೆ | |
(ಸಿ) | ಸಿಂಥೆಟಿಕ್ ಆ್ಯಂಟಿಜೆನ್ | |
(ಡಿ) | ಮಲೇರಿಯಾ ಜೆರ್ಮ್ಸ್ |
CORRECT ANSWER
(ಬಿ) ಡಿ.ಎನ್.ಎ. ಸಂರಚನೆ
44. | ಆಪ್ಟಿಕಲ್ ಪೈಬರ್ ಈ ತತ್ವದ ಮೇಲೆ ಕೆಲಸ ಮಾಡುತ್ತದೆ | |
(ಎ) | ವಕ್ರೀಭವನ | |
(ಬಿ) | ಒಟ್ಟು ಆಂತರಿಕ ಪ್ರತಿಬಿಂಬ | |
(ಸಿ) | ಹರಡುವಿಕೆ | |
(ಡಿ) | ವ್ಯತಿಕರಣ |
CORRECT ANSWER
(ಬಿ) ಒಟ್ಟು ಆಂತರಿಕ ಪ್ರತಿಬಿಂಬ
45. | ಎಲೆಕ್ಟ್ರಿಕ್ ಬಲ್ಬ್‌ಗಳಲ್ಲಿ ತುಂಬಿಸಿರುವ ಅನಿಲವು | |
(ಎ) | ನೈಟ್ರೋಜನ್ | |
(ಬಿ) | ಹೈಡ್ರೋಜನ್ | |
(ಸಿ) | ಕಾರ್ಬನ್ ಡೈ ಆಕ್ಸೈಡ್ | |
(ಡಿ) | ಆಕ್ಸಿಜನ್ |
CORRECT ANSWER
(ಎ) ನೈಟ್ರೋಜನ್
46. | ಕ್ಲೋರೋಫಿಲ್‌ನ ಮಧ್ಯದಲ್ಲಿರುವ ಭಾಗ | |
(ಎ) | ಕಾಪರ್ | |
(ಬಿ) | ಮ್ಯಾಗ್ನೀಷಿಯಂ | |
(ಸಿ) | ಫಾಸ್ಫರಸ್ | |
(ಡಿ) | ಕ್ಯಾಲ್ಸಿಯಂ |
CORRECT ANSWER
(ಬಿ) ಮ್ಯಾಗ್ನೀಷಿಯಂ
47. | ‘ವಾಷಿಂಗ್ ಸೋಡಾ’ – ಇದು ಯಾವುದರ ಸಾಮಾನ್ಯ ಹೆಸರು ? | |
(ಎ) | ಸೋಡಿಯಂ ಕಾರ್ಬೋನೇಟ್ | |
(ಬಿ) | ಕ್ಯಾಲ್ಸಿಯಂ ಬೈಕಾರ್ಬೋನೇಟ್ | |
(ಸಿ) | ಸೋಡಿಯಂ ಬೈಕಾರ್ಬೋನೇಟ್ | |
(ಡಿ) | ಕ್ಯಾಲ್ಸಿಯಂ ಕಾರ್ಬೋನೇಟ್ |
CORRECT ANSWER
(ಎ) ಸೋಡಿಯಂ ಕಾರ್ಬೋನೇಟ್
48. | ಪೆನ್ಸಿಲ್‌ನಲ್ಲಿ ಉಪಯೋಗಿಸುವ ವಸ್ತು | |
(ಎ) | ಗ್ರಾಫೈಟ್ | |
(ಬಿ) | ಸಿಲಿಕಾನ್ | |
(ಸಿ) | ಚಾರ್‌ಕೋಲ್ | |
(ಡಿ) | ಫಾಸ್ಪರಸ್ |
CORRECT ANSWER
(ಎ) ಗ್ರಾಫೈಟ್
49. | ಸಿಲಿಕಾನ್ ಕಾರ್ಬೈಡ್ ಅನ್ನು ಈ ಕೆಳಗಿನ ಯಾವುದರಲ್ಲಿ ಉಪಯೋಗಿಸುತ್ತಾರೆ ? | |
(ಎ) | ಸಿಮೆಂಟ್ ಮತ್ತು ಗ್ಲಾಸ್‌ನ ತಯಾರಿಕೆಯಲ್ಲಿ | |
(ಬಿ) | ಕೊಳದಲ್ಲಿನ ನೀರಿನ ಶುದ್ಧೀಕರಣದಲ್ಲಿ | |
(ಸಿ) | ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡುಮಾಡುವಲ್ಲಿ | |
(ಡಿ) | ವಿಗ್ರಹಗಳ ತಯಾರಿಕೆಯಲ್ಲಿ |
CORRECT ANSWER
(ಸಿ) ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡುಮಾಡುವಲ್ಲಿ
50. | ಬಲೂನ್‌ಗಳಲ್ಲಿ ಯಾವುದನ್ನು ತುಂಬಿರುತ್ತಾರೆ ? | |
(ಎ) | ನೈಟ್ರೋಜನ್ | |
(ಬಿ) | ಹೀಲಿಯಂ | |
(ಸಿ) | ಆಕ್ಸಿಜನ್ | |
(ಡಿ) | ಆರ್ಗಾನ್ |
CORRECT ANSWER
(ಬಿ) ಹೀಲಿಯಂ
51. | ‘ಪೆಟ್ರೋಲಿಯಂ’ ಎಂಬ ಪದವು ‘ಪೆಟ್ರಾ’ ಮತ್ತು ‘ಓಲಿಯಂ’ ಎಂಬ ಎರಡು ಪದಗಳಿಂದ ಆಗಿರುವುದಾಗಿದೆ. ಈ ಪದಗಳು | |
(ಎ) | ಗ್ರೀಕ್ ಪದಗಳು | |
(ಬಿ) | ಫ್ರೆಂಚ್ ಪದಗಳು | |
(ಸಿ) | ಲ್ಯಾಟಿನ್ ಪದಗಳು | |
(ಡಿ) | ರಷ್ಯನ್ ಪದಗಳು |
CORRECT ANSWER
(ಸಿ) ಲ್ಯಾಟಿನ್ ಪದಗಳು
52. | ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು-ಮೂರು ಬೆಳೆಗಳನ್ನು ಬೆಳೆಯುವುದನ್ನು ಏನೆಂದು ಕರೆಯುತ್ತಾರೆ ? | |
(ಎ) | ಜೀವನಾಧಾರ ಬೆಳೆಗಾರಿಕೆ | |
(ಬಿ) | ನೆಲದ ಉಪಯೋಗದ ಬೆಳೆಗಾರಿಕೆ | |
(ಸಿ) | ವಾಣಿಜ್ಯ ಬೆಳೆಗಾರಿಕೆ | |
(ಡಿ) | ಪರಿಶ್ರಮಪೂರ್ಣ ಬೆಳೆಗಾರಿಕೆ |
CORRECT ANSWER
(ಡಿ) ಪರಿಶ್ರಮಪೂರ್ಣ ಬೆಳೆಗಾರಿಕೆ
53. | 2011ರ ಜನಗಣತಿಯ ಪ್ರಕಾರ, ಭಾರತದ ಜನಸಂಖ್ಯೆಯು ಸರಿಸುಮಾರು | |
(ಎ) | ಸುಮಾರು 125 ಕೋಟಿ | |
(ಬಿ) | ಸುಮಾರು 121 ಕೋಟಿ | |
(ಸಿ) | ಸುಮಾರು 124 ಕೋಟಿ | |
(ಡಿ) | ಸುಮಾರು 126 ಕೋಟಿ |
CORRECT ANSWER
(ಬಿ) ಸುಮಾರು 121 ಕೋಟಿ
54. | ಈ ಕೆಳಗಿನವುಗಳಲ್ಲಿ ಯಾವುದನ್ನು ವಾಣಿಜ್ಯ ಬೆಳೆ ಎಂದು ಕರೆಯುತ್ತಾರೆ? | |
(ಎ) | ಗೋಧಿ | |
(ಬಿ) | ರಾಗಿ | |
(ಸಿ) | ಜೋಳ | |
(ಡಿ) | ಕಬ್ಬು |
CORRECT ANSWER
(ಡಿ) ಕಬ್ಬು
55. | ವಾತಾವರಣದಲ್ಲಿ ‘ಓರೆನ್’ನ ಮಹತ್ವವೇನು ? | |
(ಎ) | ಭೂಮಿಯ ಮೇಲೆ ಅದು ಹಸಿರು ಮನೆ ಪರಿಣಾಮ ಉಂಟುಮಾಡುತ್ತದೆ. | |
(ಬಿ) | ನ್ಯೂಕ್ಲಿಯಸ್‌ಗಳನ್ನು ಘನೀಕರಿಸುತ್ತದೆ. | |
(ಸಿ) | ಅಲ್ಟ್ರಾ ವೈಲೆಟ್ ಕಿರಣಗಳಿಂದ ಅದು ರಕ್ಷಣೆ ನೀಡುತ್ತದೆ. | |
(ಡಿ) | ನೀಲಿ ಬೆಳಕನ್ನು ಚದುರಿಸಲು ಸಹಾಯ ಮಾಡುತ್ತದೆ. |
CORRECT ANSWER
(ಸಿ) ಅಲ್ಟ್ರಾ ವೈಲೆಟ್ ಕಿರಣಗಳಿಂದ ಅದು ರಕ್ಷಣೆ ನೀಡುತ್ತದೆ.
56. | 2014ರ ನೋಬೆಲ್ ಶಾಂತಿ ಪ್ರಶಸ್ತಿಯು ಯಾರಿಗೆ ದೊರಕಿತು ? | |
(ಎ) | ಎ.ಪಿ.ಜೆ. ಅಬ್ದುಲ್ ಕಲಾಂ | |
(ಬಿ) | ಅಟಲ್ ಬಿಹಾರಿ ವಾಜಪೇಯಿ | |
(ಸಿ) | ಸಿ.ಎನ್.ಆರ್. ರಾವ್ | |
(ಡಿ) | ಕೈಲಾಸ್ ಸತ್ಯಾರ್ಥಿ |
CORRECT ANSWER
(ಡಿ) ಕೈಲಾಸ್ ಸತ್ಯಾರ್ಥಿ
57. | ‘ಸೈಬರ್ ಕ್ರೈಂ’ ಎಂದರೆ, ನೀವು ಏನೆಂದು ಅರ್ಥ ಮಾಡಿಕೊಂಡಿದ್ದೀರಾ? | |
(ಎ) | ಸೈಬರ್ ಕೆಫೆಯಲ್ಲಿ ಕೊಲೆ | |
(ಬಿ) | ಕಂಪ್ಯೂೂಟರ್ ಅಥವಾ ಮೊಬೈಲ್ ಮೂಲಕ ಅಪರಾಧ ಮಾಡುವುದು | |
(ಸಿ) | ಸರಗಳ್ಳತನ | |
(ಡಿ) | ವಾಹನ ಕಳ್ಳತನ |
CORRECT ANSWER
(ಬಿ) ಕಂಪ್ಯೂೂಟರ್ ಅಥವಾ ಮೊಬೈಲ್ ಮೂಲಕ ಅಪರಾಧ ಮಾಡುವುದು
58. | ಹುತ್ತರಿ ನೃತ್ಯ ಮತ್ತು ಬೋಲಕ್ ಆಟ ನೃತ್ಯ ಇವುಗಳು ಕರ್ನಾಟಕದ ಯಾವ ಭಾಗದ ಪ್ರಸಿದ್ಧ ನೃತ್ಯಗಳು ? | |
(ಎ) | ಕೊಡಗು | |
(ಬಿ) | ಮೈಸೂರು | |
(ಸಿ) | ಕಲಬುರ್ಗಿ | |
(ಡಿ) | ಹಾವೇರಿ |
CORRECT ANSWER
(ಎ) ಕೊಡಗು
59. | ನಾಗಾಲ್ಯಾಂಡ್‌ನ ರಾಜಧಾನಿಯು | |
(ಎ) | ಕೋಹಿಮಾ | |
(ಬಿ) | ಅಗರ್ತಲ | |
(ಸಿ) | ಇಫಾಂಲ | |
(ಡಿ) | ಡಿಸ್‌ಪುರ |
CORRECT ANSWER
(ಎ) ಕೋಹಿಮಾ
60. | ‘ಕರ್ನಾಟಕ ಪೊಲೀಸ್ ಅಕಾಡೆಮಿ’ಯು ಯಾವ ಊರಿನಲ್ಲಿದೆ ? | |
(ಎ) | ಮೈಸೂರು | |
(ಬಿ) | ಬೆಂಗಳೂರು | |
(ಸಿ) | ಕಲಬುರ್ಗಿ | |
(ಡಿ) | ಬೆಳಗಾವಿ |
CORRECT ANSWER
(ಎ) ಮೈಸೂರು
61. | ಈ ಕೆಳಗಿನ ಚಿತ್ರಗಳಲ್ಲಿ ಯಾವುದು ಟೆನ್ನಿಸ್ ಅಭಿಮಾನಿಯ, ಕ್ರಿಕೆಟ್ ಆಟಗಾರರ ಮತ್ತು ವಿದ್ಯಾರ್ಥಿಗಳ ಗುಂಪುಗಳ ಸಂಬಂಧವನ್ನು ಸೂಚಿಸುತ್ತದೆ? | |
(ಎ) | ||
(ಬಿ) | ||
(ಸಿ) | ||
(ಡಿ) |
CORRECT ANSWER
(ಎ)
62. | ಈ ಚಿತ್ರಗಳಲ್ಲಿ ಯಾವುದು ಕ್ಯಾರೆಟ್, ಆಹಾರ ಮತ್ತು ತರಕಾರಿಗಳ ನಡುವಿನ ಸಂಬಂಧವನ್ನು ಸೂಚಿಸುತ್ತದೆ ? | |
(ಎ) | ||
(ಬಿ) | ||
(ಸಿ) | ||
(ಡಿ) |
CORRECT ANSWER
(ಎ)
63. | ಈ ಶೃಂಖಲೆಯಲ್ಲಿ ತಪ್ಪಾಗಿರುವ ಸಂಖ್ಯೆಯನ್ನು ತಿಳಿಸಿರಿ. | |
2, 5, 10, 50, 500, 5000 | ||
(ಎ) | 5000 | |
(ಬಿ) | 500 | |
(ಸಿ) | 10 | |
(ಡಿ) | 50 |
CORRECT ANSWER
(ಎ) 5000
64. | ಒಂದು ಚಿನ್ನದ ಬ್ರೇಸ್‌ಲೆಟ್ ಅನ್ನು 14,500 ರೂಪಾಯಿಗಳಿಗೆ ಮಾರಿದಾಗ, ಶೇ.20ರಷ್ಟು ನಷ್ಟ ಉಂಟಾಗುತ್ತದೆ. ಹಾಗಿದ್ದಲ್ಲಿ ಬ್ರೇಸ್‌ಲೆಟ್‌ನ ಮೂಲಬೆಲೆ ಏನು ? | |
(ಎ) | ರೂ. 18,125 | |
(ಬಿ) | ರೂ. 17,400 | |
(ಸಿ) | ರೂ. 15,225 | |
(ಡಿ) | ರೂ. 16,800 |
CORRECT ANSWER
(ಎ) ರೂ. 18,125
65. | ಸೈನಾ ನೆಹವಾಲ್‌ರವರು ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಹೊಂದಿರುತ್ತಾರೆ? | |
(ಎ) | ಟೆನ್ನಿಸ್ | |
(ಬಿ) | ಬ್ಯಾಡ್ಮಿಂಟನ್ | |
(ಸಿ) | ಟೇಬಲ್ ಟೆನ್ನಿಸ್ | |
(ಡಿ) | ಸ್ಕ್ವಾಷ್ |
CORRECT ANSWER
(ಬಿ) ಬ್ಯಾಡ್ಮಿಂಟನ್
66. | ಜಾಗತಿಕ ಜನಸಂಖ್ಯಾ ದಿವಸವನ್ನು ಯಾವತ್ತು ಆಚರಿಸುತ್ತಾರೆ ? | |
(ಎ) | ಪ್ರತಿ ವರ್ಷದ 14ನೇ ಜುಲೈ | |
(ಬಿ) | ಪ್ರತಿ ವರ್ಷದ 18ನೇ ಜುಲೈ | |
(ಸಿ) | ಪ್ರತಿ ವರ್ಷದ 11ನೇ ಜುಲೈ | |
(ಡಿ) | ಪ್ರತಿ ವರ್ಷದ 24ನೇ ಜುಲೈ |
CORRECT ANSWER
(ಸಿ) ಪ್ರತಿ ವರ್ಷದ 11ನೇ ಜುಲೈ
67. | ಸೆಕ್ಸ್ ರೇಷಿಯೋ (ಲಿಂಗಾನುಪಾತ) ಎಂದರೆ | |
(ಎ) | ಜಗತ್ತಿನ ಒಟ್ಟು ಜನಸಂಖ್ಯೆ ಮತ್ತು ದೇಶದ ಒಟ್ಟು ಜನಸಂಖ್ಯೆಯ ನಡುವಿನ ಅನುಪಾತ | |
(ಬಿ) | ದೇಶದ ಒಟ್ಟು ಜನಸಂಖ್ಯೆ ಮತ್ತು ರಾಜ್ಯದ ಒಟ್ಟು ಜನಸಂಖ್ಯೆಯ ನಡುವಿನ ಅನುಪಾತ | |
(ಸಿ) | ವಯಸ್ಸಾದವರ ಮತ್ತು ಯುವಕರ ನಡುವಿನ ಅನುಪಾತ | |
(ಡಿ) | ಪುರುಷ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ |
CORRECT ANSWER
(ಡಿ) ಪುರುಷ ಮತ್ತು ಮಹಿಳೆಯರ ಜನಸಂಖ್ಯೆಯ ನಡುವಿನ ಅನುಪಾತ
68. | ‘ಜೀವ ನಿರೀಕ್ಷಿಸುವಿಕೆ’ ಎಂದರೆ | |
(ಎ) | ಆನೆಯ ಸರಾಸರಿ ಬದುಕುವಿಕೆಯ ಕಾಲ | |
(ಬಿ) | ಸಿಂಹದ ಸರಾಸರಿ ಬದುಕುವಿಕೆಯ ಕಾಲ | |
(ಸಿ) | ಮನುಷ್ಯನ ಸರಾಸರಿ ಬದುಕುವಿಕೆಯ ಕಾಲ | |
(ಡಿ) | ಒಂದು ಉಪಗ್ರಹವು ಕ್ರಿಯಾಶೀಲವಾಗಿರಬಹುದಾದ ಸರಾಸರಿ ಕಾಲ |
CORRECT ANSWER
(ಸಿ) ಮನುಷ್ಯನ ಸರಾಸರಿ ಬದುಕುವಿಕೆಯ ಕಾಲ
69. | ‘ಮೆಗಲೋಪೋಲಿಸ್’ ಎಂಬುದು ಒಂದು ಗ್ರೀಕ್ ಭಾಷೆಯ ಪದ. ಹಾಗೆಂದರೆ | |
(ಎ) | ಮಹಾನ್ ಪೋಲಿಸ್ | |
(ಬಿ) | ಮಹಾನಗರ | |
(ಸಿ) | ಮಹಾರಾಜಕಾರಣಿ | |
(ಡಿ) | ಇವು ಯಾವುದೂ ಅಲ್ಲ |
CORRECT ANSWER
(ಬಿ) ಮಹಾನಗರ
70. | ಹೆಚ್‌ಡಿಐ (HDI) ಎಂದರೆ | |
(ಎ) | ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್ | |
(ಬಿ) | ಹ್ಯೂಮನ್ ಡೆವಲಪ್‌ಮೆಂಟ್ ಇನ್ ಇಂಡಿಯಾ | |
(ಸಿ) | ಹೆಲ್ತ್ ಡೆವಲಪ್‌ಮೆಂಟ್ ಇಂಡೆಕ್ಸ್ | |
(ಡಿ) | ಹೆಲ್ತ್ ಡೆವಲಪ್‌ಮೆಂಟ್ ಇನ್ ಇಂಡಿಯಾ |
CORRECT ANSWER
(ಎ) ಹ್ಯೂಮನ್ ಡೆವಲಪ್‌ಮೆಂಟ್ ಇಂಡೆಕ್ಸ್
71. | ‘ಧರ್ಮ ಚಕ್ರ’ – ಇದು ಯಾರ ಸಂಕೇತವಾಗಿತ್ತು ? | |
(ಎ) | ಜೈನಧರ್ಮ | |
(ಬಿ) | ವರ್ಧನರ | |
(ಸಿ) | ಬೌದ್ಧಧರ್ಮ | |
(ಡಿ) | ಇವು ಯಾವುವೂ ಅಲ್ಲ |
CORRECT ANSWER
(ಸಿ) ಬೌದ್ಧಧರ್ಮ
72. | ‘ದೇವನಾಂಪ್ರಿಯ’ ಇದು ಯಾರ ಹೆಸರಿಗೆ ಸಂಬಂಧಿಸಿದ್ದು ? | |
(ಎ) | ಅಶೋಕ | |
(ಬಿ) | ಚಂದ್ರಗುಪ್ತ ಮೌರ್ಯ | |
(ಸಿ) | ಬಿಂದುಸಾರ | |
(ಡಿ) | ಗೌತಮಿಪುತ್ರ |
CORRECT ANSWER
(ಎ) ಅಶೋಕ
73. | ಚೀನಾ ದೇಶದ ಪ್ರವಾಸಿಗನಾದ ಫಾಹಿಯಾನ್ ಯಾರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದನು? | |
(ಎ) | ಸಮುದ್ರಗುಪ್ತ | |
(ಬಿ) | ಚಂದ್ರಗುಪ್ತ – II | |
(ಸಿ) | ಶ್ರೀ ಗುಪ್ತ | |
(ಡಿ) | ಚಂದ್ರಗುಪ್ತ – I |
CORRECT ANSWER
(ಬಿ) ಚಂದ್ರಗುಪ್ತ – II
74. | ಅಶ್ವಗಳನ್ನು ವರ್ಗೀಕರಿಸುವ (ದಾಗ್) ಪದ್ಧತಿಯನ್ನು ಜಾರಿಗೆ ತಂದವರು ಯಾರು ? | |
(ಎ) | ಮಹಮ್ಮದ್-ಬಿನ್-ತುಘಲಕ್ | |
(ಬಿ) | ಮಲಿಕ್ ಕಾಫರ್ | |
(ಸಿ) | ಜಲಾಲ್-ಉದ್-ದಿನ್-ಖಿಲ್ಜಿ | |
(ಡಿ) | ಅಲ್ಲಾ-ಉದ್-ದಿನ್-ಖಿಲ್ಜಿ |
CORRECT ANSWER
(ಡಿ) ಅಲ್ಲಾ-ಉದ್-ದಿನ್-ಖಿಲ್ಜಿ
75. | ರಾಜಾ ತೋದರಮಲ್ಲನು | |
(ಎ) | ಅಕ್ಬರನ ಹಣಕಾಸಿನ ಮಂತ್ರಿ | |
(ಬಿ) | ಅಕ್ಬರನ ಕಂದಾಯ ಮಂತ್ರಿ | |
(ಸಿ) | ಅಕ್ಬರನ ಕಾನೂನು ಮಂತ್ರಿ | |
(ಡಿ) | ಅಕ್ಬರನ ಅರಣ್ಯ ಮಂತ್ರಿ |
CORRECT ANSWER
(ಬಿ) ಅಕ್ಬರನ ಕಂದಾಯ ಮಂತ್ರಿ
76. | ಭಾರತ ಎಂಬ ಪದವು ಈ ಕೆಳಗಿನ ಯಾವುದರಿಂದ ರೂಪಿಸಲ್ಪಟ್ಟಿದೆ? | |
(ಎ) | ‘ಇಂಡೋಸ್’ ಎಂಬ ಪರ್ಶಿಯನ್ ಪದ | |
(ಬಿ) | ‘ಇಂಡೋಸ್’ ಎಂಬ ಗ್ರೀಕ್ ಪದ | |
(ಸಿ) | ‘ಇಂಡಿಗೋ’ ಎಂಬ ಸ್ಪಾನಿಷ್ ಪದ | |
(ಡಿ) | ‘ಇಂಡಸ್’ ಎಂಬ ರಷ್ಯನ್ ಪದ |
CORRECT ANSWER
(ಎ) ‘ಇಂಡೋಸ್’ ಎಂಬ ಪರ್ಶಿಯನ್ ಪದ
77. | ‘ಬುದ್ಧಚರಿತ’ವನ್ನು ಬರೆದವರು | |
(ಎ) | ಬಾಣಭಟ್ಟ | |
(ಬಿ) | ಚಾಂದ್‌ಬರ್ದಾಯಿ | |
(ಸಿ) | ಬಿಲ್ಹಣ | |
(ಡಿ) | ಅಶ್ವಘೋಷ |
CORRECT ANSWER
(ಡಿ) ಅಶ್ವಘೋಷ
78. | ಪ್ರಾಚೀನ ಶಿಲಾಯುಗದ ಮಾನವ ಬಳಸುತ್ತಿದ್ದ ಕಠಿಣವಾದ ಕಲ್ಲು | |
(ಎ) | ಗ್ರಾನೈಟ್ | |
(ಬಿ) | ಕ್ವಾರ್ಟ್‌ಜೈಟ್ | |
(ಸಿ) | ನೀಸೆಸ್ | |
(ಡಿ) | ಕೆತ್ತಿದ ಕಲ್ಲುಗಳು |
CORRECT ANSWER
(ಬಿ) ಕ್ವಾರ್ಟ್‌ಜೈಟ್
79. | ನಾಲ್ಕು ವೇದಗಳಲ್ಲಿ ಯಾವ ವೇದವು ಮೊದಲು ಬರೆಯಲ್ಪಟ್ಟಿತು? | |
(ಎ) | ಅಥರ್ವಣವೇದ | |
(ಬಿ) | ಸಾಮವೇದ | |
(ಸಿ) | ಋಗ್ವೇದ | |
(ಡಿ) | ಯಜುರ್ವೇದ |
CORRECT ANSWER
(ಸಿ) ಋಗ್ವೇದ
80. | ಜೈನರು ಒಟ್ಟು 24 ಜನ ತೀರ್ಥಂಕರರು ಇದ್ದರೆಂದು ನಂಬುತ್ತಾರೆ. 23ನೇ ತೀರ್ಥಂಕರರು ಯಾರು ? | |
(ಎ) | ವರ್ಧಮಾನ ಮಹಾವೀರ | |
(ಬಿ) | ರಿಷಭನಾಥ | |
(ಸಿ) | ಆದಿನಾಥ | |
(ಡಿ) | ಪಾರ್ಶ್ವನಾಥ |
CORRECT ANSWER
(ಡಿ) ಪಾರ್ಶ್ವನಾಥ
81. | 330 ಸೆಂಟಿಮೀಟರ್ ಉದ್ದವಿರುವ ಹಗ್ಗದಿಂದ, 13.2 ಸೆಂಟಿಮೀಟರ್‌ನ ಉದ್ದದ ಎಷ್ಟು ತುಂಡುಗಳನ್ನು ಕತ್ತರಿಸಬಹುದು? | |
(ಎ) | 25 | |
(ಬಿ) | 28 | |
(ಸಿ) | 21 | |
(ಡಿ) | 35 |
CORRECT ANSWER
(ಎ) 25
82. | ಒಂದು ಬಸ್ಸಿನ ವೇಗವು ಗಂಟೆಗೆ 72 ಕಿ.ಮೀ. ಆದರೆ, ಆ ಬಸ್ಸು 5 ಸೆಕೆಂಡಿನಲ್ಲಿ ಎಷ್ಟು ದೂರ ಕ್ರಮಿಸುತ್ತದೆ ? | |
(ಎ) | 50 ಮೀಟರ್ | |
(ಬಿ) | 74.5 ಮೀಟರ್ | |
(ಸಿ) | 100 ಮೀಟರ್ | |
(ಡಿ) | 60 ಮೀಟರ್ |
CORRECT ANSWER
(ಸಿ) 100 ಮೀಟರ್
83. | ಈ ಸಂಖ್ಯೆಗಳನ್ನು ಗಮನಿಸಿ 7, 10, 8, 11, 9, 12. ಇದರ ಮುಂದಿನ ಸಂಖ್ಯೆ ಯಾವುದು ? | |
(ಎ) | 7 | |
(ಬಿ) | 10 | |
(ಸಿ) | 12 | |
(ಡಿ) | 13 |
CORRECT ANSWER
(ಬಿ) 10
84. | ಈ ಶೃಂಖಲೆಯಲ್ಲಿ ಮುಂದಿನ ಸಂಖ್ಯೆ ಯಾವುದು ? | |
2, 6, 18, 54, ___ | ||
(ಎ) | 108 | |
(ಬಿ) | 148 | |
(ಸಿ) | 162 | |
(ಡಿ) | 216 |
CORRECT ANSWER
(ಸಿ) 162
85. | ಈ ದಿನ ವರುಣನ ಹುಟ್ಟಿದ ಹಬ್ಬ. ಇವತ್ತಿನಿಂದ 1 ವರ್ಷದ ನಂತರ, ಈತನ ವಯಸ್ಸು 12 ವರ್ಷದ ಹಿಂದೆ ಎಷ್ಟಿತ್ತೋ, ಅದರ ಎರಡರಷ್ಟು ಆಗುತ್ತದೆ. ಹಾಗಿದ್ದಲ್ಲಿ ಈ ದಿವಸ ವರುಣನ ವಯಸ್ಸು ಎಷ್ಟು ? | |
(ಎ) | 20 | |
(ಬಿ) | 22 | |
(ಸಿ) | 25 | |
(ಡಿ) | 27 |
CORRECT ANSWER
(ಸಿ) 25
86. | ಇಳಕಲ್ ಸೀರೆಗಳಿಗೆ ಪ್ರಸಿದ್ಧಿಯಾಗಿರುವ ಇಳಕಲ್ ಪಟ್ಟಣವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? | |
(ಎ) | ವಿಜಾಪುರ | |
(ಬಿ) | ಬಾಗಲಕೋಟೆ | |
(ಸಿ) | ಕಲಬುರಗಿ | |
(ಡಿ) | ದಾವಣಗೆರೆ |
CORRECT ANSWER
(ಬಿ) ಬಾಗಲಕೋಟೆ
87. | ಕರ್ನಾಟಕವು ತನ್ನ ಈಗಿನ ಹೆಸರನ್ನು ಯಾವಾಗಿನಿಂದ ಪಡೆಯಿತು? | |
(ಎ) | ಜನವರಿ 1, 1951 | |
(ಬಿ) | ಜೂನ್ 15, 1971 | |
(ಸಿ) | ಆಗಸ್ಟ್ 21, 1991 | |
(ಡಿ) | ನವೆಂಬರ್ 1, 1973 |
CORRECT ANSWER
(ಡಿ) ನವೆಂಬರ್ 1, 1973
88. | ಭಾರತದ ರಾಷ್ಟ್ರಗೀತೆಯಾದ ‘ಜನಗಣಮನ’ವನ್ನು ಬರೆದವರು ? | |
(ಎ) | ರವೀಂದ್ರನಾಥ ಟ್ಯಾಗೋರ್ | |
(ಬಿ) | ಬಂಕಿಮಚಂದ್ರ ಚಟ್ಟೋಪಾಧ್ಯಾಯ | |
(ಸಿ) | ಇಕ್ಬಾಲ್ | |
(ಡಿ) | ಅರಬಿಂದೋ ದಾಸ್ |
CORRECT ANSWER
(ಎ) ರವೀಂದ್ರನಾಥ ಟ್ಯಾಗೋರ್
89. | ಕೈಗಾ ಅಣುಶಕ್ತಿ ಸ್ಥಾವರವು ಯಾವ ಜಿಲ್ಲೆಯಲ್ಲಿದೆ ? | |
(ಎ) | ಉತ್ತರ ಕನ್ನಡ ಜಿಲ್ಲೆ | |
(ಬಿ) | ರಾಯಚೂರು ಜಿಲ್ಲೆ | |
(ಸಿ) | ಶಿವಮೊಗ್ಗ ಜಿಲ್ಲೆ | |
(ಡಿ) | ಉಡುಪಿ ಜಿಲ್ಲೆ |
CORRECT ANSWER
(ಎ) ಉತ್ತರ ಕನ್ನಡ ಜಿಲ್ಲೆ
90. | 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು, 2014ರಲ್ಲಿ ಯಾವ ಜಿಲ್ಲೆಯಲ್ಲಿ ನಡೆಯಿತು ? | |
(ಎ) | ಕೊಡಗು | |
(ಬಿ) | ವಿಜಾಪುರ | |
(ಸಿ) | ಗಂಗಾವತಿ | |
(ಡಿ) | ಹಾವೇರಿ |
CORRECT ANSWER
(ಎ) ಕೊಡಗು
91. | ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಹೊಸದಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು | |
(ಎ) | ಮುರಳಿ ಮನೋಹರ್ ಜೋಷಿ | |
(ಬಿ) | ದೇವೇಂದ್ರ ಫಡ್ನೀಸ್ | |
(ಸಿ) | ಏಕನಾಥ ಖಡ್ಸೆ | |
(ಡಿ) | ಶರದ್ ಪವಾರ್ |
CORRECT ANSWER
(ಬಿ) ದೇವೇಂದ್ರ ಫಡ್ನೀಸ್
92. | 2014ನೇ ಇಸವಿಯಲ್ಲಿ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳ ಕರಾವಳಿಯನ್ನು ನಾಶಮಾಡಿದ ಚಂಡಮಾರುತ | |
(ಎ) | ಕತ್ರಿನಾ | |
(ಬಿ) | ನೀಲೋಫರ್ | |
(ಸಿ) | ಹುಡ್‌ಹುಡ್ | |
(ಡಿ) | ಕೋಮನ್ |
CORRECT ANSWER
(ಸಿ) ಹುಡ್‌ಹುಡ್
93. | ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ‘ಸ್ವಚ್ಛ ಭಾರತ ಅಭಿಯಾನ’ವನ್ನು ಎಂದು ಪ್ರಾರಂಭಿಸಿದರು ? | |
(ಎ) | ಅಕ್ಟೋಬರ್ 2, 2014 | |
(ಬಿ) | ಅಕ್ಟೋಬರ್ 17, 2014 | |
(ಸಿ) | ಸೆಪ್ಟ್ಟೆಂಬರ್ 5, 2014 | |
(ಡಿ) | ಅಕ್ಟೋಬರ್ 14, 2014 |
CORRECT ANSWER
(ಎ) ಅಕ್ಟೋಬರ್ 2, 2014
94. | ಆಂಧ್ರಪ್ರದೇಶದಲ್ಲಿರುವ ನಾಗಾರ್ಜುನ ಸಾಗರ ಜಲಾಶಯವು ಯಾವ ನದಿಗೆ ಕಟ್ಟಲ್ಪಟ್ಟಿದೆ ? | |
(ಎ) | ಕೃಷ್ಣಾ | |
(ಬಿ) | ಕಾವೇರಿ | |
(ಸಿ) | ಮಹಾನದಿ | |
(ಡಿ) | ಗೋದಾವರಿ |
CORRECT ANSWER
(ಎ) ಕೃಷ್ಣಾ
95. | ಈ ಕೆಳಗಿನವುಗಳಲ್ಲಿ ಯಾವುದರಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ ? | |
(ಎ) | ಅನಿಮೋಮೀಟರ್ | |
(ಬಿ) | ಹೈಗ್ರೋಮೀಟರ್ | |
(ಸಿ) | ಗ್ಯಾಲ್ವನೋಮೀಟರ್ | |
(ಡಿ) | ಸ್ಪೆಕ್ಟ್ರೋಮೀಟರ್ |
CORRECT ANSWER
(ಎ) ಅನಿಮೋಮೀಟರ್
96. | ರೋಗಗ್ರಸ್ಥ ಪ್ರಾಣಿಯು ಮನುಷ್ಯನನ್ನು ಕಚ್ಚುವುದರಿಂದ ಮನುಷ್ಯನಿಗೆ ಬರುವ ರೋಗವನ್ನು ಏನೆಂದು ಕರೆಯುತ್ತಾರೆ ? | |
(ಎ) | ನ್ಯುಮೋನಿಯಾ | |
(ಬಿ) | ಮೀಸಲ್ಸ್ | |
(ಸಿ) | ರೇಬೀಸ್ | |
(ಡಿ) | ಅಥೆರೋಸ್ಕ್ಲಿರೋಸಿಸ್ |
CORRECT ANSWER
(ಸಿ) ರೇಬೀಸ್
97. | ಜೀವಕೋಶದಲ್ಲಿ ಪ್ರೊಟೀನ್ ಸಂಯೋಜನೆ ನಡೆಯುವುದು | |
(ಎ) | ಸ್ರಾವಕ ಕಣಗಳು | |
(ಬಿ) | ಮೇದಸ್ಸಿನ ಬಿಂದುಗಳು | |
(ಸಿ) | ರೈಬೋಸೋಮ್ | |
(ಡಿ) | ಮೈಟೋಕಾಂಡ್ರಿಯ |
CORRECT ANSWER
(ಸಿ) ರೈಬೋಸೋಮ್
98. | ಮಸಿ ಹೀರುವ ಕಾಗದದಲ್ಲಿ, ಮಸಿಯನ್ನು ಹೀರುವ ಕ್ರಿಯೆಯು | |
(ಎ) | ಮಸಿಯ ಸ್ನಿಗ್ಧತೆಯನ್ನು ಒಳಗೊಂಡಿರುತ್ತದೆ. | |
(ಬಿ) | ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ. | |
(ಸಿ) | ಮಸಿಹೀರುವ ಕಾಗದದಲ್ಲಿ ಮಸಿಯ ಹರಡುವಿಕೆಯಿಂದ ಆಗುತ್ತದೆ. | |
(ಡಿ) | ಸೈಫನ್ ಪೇಪರ್ |
CORRECT ANSWER
(ಬಿ) ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ.
99. | ಕಾಮನಬಿಲ್ಲು ಉಂಟಾಗಲು ಕಾರಣ | |
(ಎ) | ಪ್ರತಿಬಿಂಬದಿಂದ | |
(ಬಿ) | ವಕ್ರೀಭವನದಿಂದ | |
(ಸಿ) | ಹರಡುವಿಕೆಯಿಂದ | |
(ಡಿ) | ಮೇಲಿನ ಎಲ್ಲದರಿಂದ |
CORRECT ANSWER
(ಡಿ) ಮೇಲಿನ ಎಲ್ಲದರಿಂದ
100. | ಸೂರ್ಯನ ಕಿರಣಗಳು ಸೂರ್ಯನಿಂದ ಭೂಮಿಯನ್ನು ತಲುಪಲು ಎಷ್ಟು ಸಮಯ ತೆಗೆದುಕೊಳ್ಳುತ್ತವೆ ? | |
(ಎ) | 8 ನಿಮಿಷ | |
(ಬಿ) | 2 ನಿಮಿಷ | |
(ಸಿ) | 10 ನಿಮಿಷ | |
(ಡಿ) | 20 ನಿಮಿಷ |
CORRECT ANSWER
(ಎ) 8 ನಿಮಿಷ